JET Programme: ಜಪಾನ್‌ನಲ್ಲಿ ಕೆಲಸ ಪಡೆಯುವ ಕನಸೇ? ಪದವೀಧರರಿಗೆ ಇಲ್ಲಿದೆ ಮೂಲಕ ಸುವರ್ಣಾವಕಾಶ; ಜಪಾನೀಸ್ ಭಾಷೆ ಕಡ್ಡಾಯವಲ್ಲ! – Kannada News | JET Programme for Indian Graduates: Career Opportunities in Japan

ಜಪಾನ್‌ನಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವ ಭಾರತೀಯ ಪದವೀಧರರಿಗೆ ಜಪಾನ್ ಸರ್ಕಾರದ Japan Exchange and Teaching (JET) ಕಾರ್ಯಕ್ರಮ ಉತ್ತಮ ಅವಕಾಶವನ್ನು ಒದಗಿಸುತ್ತಿದೆ. 1987ರಿಂದ ಜಾರಿಯಲ್ಲಿರುವ ಈ ಪ್ರತಿಷ್ಠಿತ ಕಾರ್ಯಕ್ರಮದ ಮೂಲಕ ಆಯ್ಕೆಯಾದ ಅಭ್ಯರ್ಥಿಗಳು ಜಪಾನ್‌ನ ಶಾಲೆಗಳಲ್ಲಿ ಸಹಾಯಕ ಭಾಷಾ ಶಿಕ್ಷಕರಾಗಿ (ALT) ಆಗಿ ಅಥವಾ ಸ್ಥಳೀಯ ಸರ್ಕಾರಿ ಕಚೇರಿಗಳಲ್ಲಿ Coordinator for International Relations (CIR) ಆಗಿ ಕೆಲಸ ಮಾಡುವ ಅವಕಾಶ ಪಡೆಯುತ್ತಾರೆ. ಈ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ.

JET Programme ಎಂದರೇನು?

JET ಕಾರ್ಯಕ್ರಮ ಜಪಾನ್ ಸರ್ಕಾರದ ಅಧಿಕೃತ ಕಾರ್ಯಕ್ರಮವಾಗಿದ್ದು, ಜಪಾನ್‌ನಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಉತ್ತೇಜಿಸುವುದು ಹಾಗೂ ವಿವಿಧ ದೇಶಗಳೊಂದಿಗೆ ಸಾಂಸ್ಕೃತಿಕ ವಿನಿಮಯವನ್ನು ಬಲಪಡಿಸುವ ಉದ್ದೇಶದಿಂದ ಆರಂಭಿಸಲಾಗಿದೆ. ಈ ಯೋಜನೆಯಡಿ ಆಯ್ಕೆಯಾಗುವವರು ಜಪಾನ್‌ನಲ್ಲಿ ವಾಸಿಸಿ, ಕೆಲಸ ಮಾಡುವುದರ ಜೊತೆಗೆ ಜಪಾನಿನ ಸಮಾಜದೊಂದಿಗೆ ನಿಕಟವಾಗಿ ಬೆರೆಯುವ ಅವಕಾಶ ಪಡೆಯುತ್ತಾರೆ.

ಭಾರತೀಯರಿಗೆ ಯಾವ ಅವಕಾಶಗಳು?

ಪ್ರಸ್ತುತ ಜಪಾನ್‌ನ 46 ಪ್ರಿಫೆಕ್ಚರ್‌ಗಳು ಮತ್ತು 18 ನಗರಗಳಲ್ಲಿನ 1,000ಕ್ಕೂ ಹೆಚ್ಚು ಸ್ಥಳೀಯ ಸಾರ್ವಜನಿಕ ಸಂಸ್ಥೆಗಳು JET Programme ಅಡಿಯಲ್ಲಿ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುತ್ತಿವೆ. ಇತ್ತೀಚೆಗೆ ಭಾರತದಲ್ಲಿನ ಜಪಾನ್ ರಾಯಭಾರ ಕಚೇರಿ 22 ಸಹಾಯಕ ಭಾಷಾ ಶಿಕ್ಷಕರು ಮತ್ತು 4 ಅಂತರರಾಷ್ಟ್ರೀಯ ಸಂಬಂಧಗಳ ಸಂಯೋಜಕರನ್ನು ಜಪಾನ್‌ಗೆ ಕಳುಹಿಸಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು, ಸ್ಥಳೀಯ ಆಡಳಿತ ಕಚೇರಿಗಳು ಅಥವಾ ಅಗತ್ಯವಿದ್ದರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿಯೋಜಿಸಲಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?

  • ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು.
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
  • ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು. ಆದರೆ ಜಪಾನ್‌ಗೆ ತೆರಳುವ ಮೊದಲು ಪದವಿ ಪೂರ್ಣಗೊಳಿಸಿರಬೇಕು.
  • ಉತ್ತಮ ಇಂಗ್ಲಿಷ್ ಸಂವಹನ ಕೌಶಲ್ಯ ಹಾಗೂ ಜಪಾನ್‌ನ ಸಂಸ್ಕೃತಿಯ ಬಗ್ಗೆ ಆಸಕ್ತಿ ಇರಬೇಕು.

ಜಪಾನೀಸ್ ಭಾಷೆ ಕಡ್ಡಾಯವೇ?

ಸಹಾಯಕ ಭಾಷಾ ಶಿಕ್ಷಕರು ಹುದ್ದೆಗೆ ಅರ್ಜಿ ಸಲ್ಲಿಸಲು ಜಪಾನೀಸ್ ಭಾಷೆಯ ಜ್ಞಾನ ಕಡ್ಡಾಯವಲ್ಲ. ಇಂಗ್ಲಿಷ್‌ನಲ್ಲಿ ಉತ್ತಮ ಪ್ರಾವೀಣ್ಯತೆ ಸಾಕು. ಆದರೆ Coordinator for International Relations (CIR) ಹುದ್ದೆಗೆ ಮಾತ್ರ ಜಪಾನೀಸ್ ಭಾಷೆಯಲ್ಲಿ ಉತ್ತಮ ಪ್ರಾವೀಣ್ಯತೆ ಅಗತ್ಯ.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ಸಹಾಯಕ ಭಾಷಾ ಶಿಕ್ಷಕರ ಕೆಲಸವೇನು?

ALT ಆಗಿ ಆಯ್ಕೆಯಾದವರು ಜಪಾನ್‌ನ ಪ್ರಾಥಮಿಕ, ಕಿರಿಯ ಹಾಗೂ ಹಿರಿಯ ಪ್ರೌಢಶಾಲೆಗಳಲ್ಲಿ ಜಪಾನೀಸ್ ಶಿಕ್ಷಕರೊಂದಿಗೆ ಕಾರ್ಯನಿರ್ವಹಿಸುತ್ತಾರೆ. ವಿದ್ಯಾರ್ಥಿಗಳ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಬೆಳೆಸುವುದರ ಜೊತೆಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನಶೈಲಿಯನ್ನು ಪರಿಚಯಿಸುವ ಜವಾಬ್ದಾರಿಯೂ ಇರುತ್ತದೆ.

ಹೆಚ್ಚಿನ ಮಾಹಿತಿ:

JET Programme ಕುರಿತು ಅರ್ಹತೆ, ಅರ್ಜಿ ಪ್ರಕ್ರಿಯೆ ಹಾಗೂ ಇತರ ವಿವರಗಳನ್ನು ಭಾರತದಲ್ಲಿನ ಜಪಾನ್ ರಾಯಭಾರ ಕಚೇರಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ರವಿ-ಆರತಿ ವಿಚ್ಛೇದನ ಪ್ರಕರಣ; ತಿಂಗಳಿಗೆ 40 ಲಕ್ಷ ರೂ. ಜೀವನಾಂಶ ಬೇಡಿಕೆ ನಿರಾಕರಿಸಿದ ಕೋರ್ಟ್ – Kannada News | Ravi Mohan Divorce Case: Court Rejects Ex Wife Aarti Rs 40 Lakh Alimony Plea

ಖ್ಯಾತ ನಟ ರವಿ ಮೋಹನ್ ಹಾಗೂ ಅವರ ಪತ್ನಿ ಆರತಿ ನಡುವಿನ ವಿಚ್ಛೇದನ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಪತ್ನಿ ಬೇಡಿಕೆಯಿಟ್ಟಿದ್ದ ಬೃಹತ್ ಮೊತ್ತದ ಜೀವನಾಂಶವನ್ನು ಕೋರ್ಟ್ ನಿರಾಕರಿಸಿದೆ. ಜೊತೆಗೆ, ತಂದೆಗೆ ತನ್ನ ಮಕ್ಕಳನ್ನು ಭೇಟಿಯಾಗಲು ಮುಕ್ತ ಅವಕಾಶ ನೀಡಿದೆ. ಚಿತ್ರರಂಗದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸ್ಟಾರ್ ದಂಪತಿಯ ಕಾನೂನು ಹೋರಾಟದಲ್ಲಿ ರವಿ ಮೋಹನ್​ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತೆ ಆಗಿದೆ.

ಕೋರ್ಟ್ ನೀಡಿದ ಆದೇಶವೇನು?

ನಟ ರವಿ ಮೋಹನ್ ಅವರಿಂದ ಪ್ರತಿ ತಿಂಗಳು 40 ಲಕ್ಷ ರೂಪಾಯಿ ಜೀವನಾಂಶ ಕೊಡಿಸಬೇಕು ಎಂದು ಪತ್ನಿ ಆರತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಚೆನ್ನೈನ ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿದೆ. ಅಂತಿಮ ತೀರ್ಪು ಬರುವವರೆಗೂ ಪ್ರತಿ ತಿಂಗಳು 3 ಲಕ್ಷ ರೂಪಾಯಿ ನೀಡುವಂತೆ ನಟನಿಗೆ ಕೋರ್ಟ್ ನಿರ್ದೇಶನ ನೀಡಿದೆ.

ಮಕ್ಕಳನ್ನು ಭೇಟಿಯಾಗಲು ಗ್ರೀನ್ ಸಿಗ್ನಲ್

ದುಡ್ಡಿನ ವಿಚಾರದ ಜೊತೆಗೆ ಮಕ್ಕಳ ಭೇಟಿಗೆ ಸಂಬಂಧಿಸಿದಂತೆ ಕೋರ್ಟ್ ಮಹತ್ವದ ಆದೇಶ ನೀಡಿದೆ. ರವಿ ಮೋಹನ್ ತಮ್ಮ ಇಬ್ಬರು ಗಂಡು ಮಕ್ಕಳಾದ ಆರವ್ ಮತ್ತು ಅಯಾನ್ ಅವರನ್ನು ಭೇಟಿ ಮಾಡಲು ಯಾವುದೇ ನಿರ್ಬಂಧ ಇರಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನಟನಿಗೆ ಕಾಡಿದ್ದ ಬೇಸರವೇನು?

ಪತ್ನಿ ಆರತಿ ತನ್ನ ಮಕ್ಕಳನ್ನು ಭೇಟಿ ಮಾಡಲು ಬಿಡುತ್ತಿಲ್ಲ ಎಂದು ರವಿ ಮೋಹನ್ ಈ ಹಿಂದೆ ಸಾರ್ವಜನಿಕವಾಗಿ ಆರೋಪಿಸಿದ್ದರು. ಮಕ್ಕಳಿಗೆ ಭದ್ರತೆ ನೀಡಿ ಶಾಲೆಗೆ ಕಳುಹಿಸಲಾಗುತ್ತಿದೆ ಎಂದು ದೂರಿದ್ದರು. ಅಷ್ಟೇ ಅಲ್ಲ, ಮಕ್ಕಳು ಕಾರು ಅಪಘಾತಕ್ಕೆ ಒಳಗಾಗಿದ್ದಾಗಲೂ ತಮಗೆ ಮಾಹಿತಿ ನೀಡಿರಲಿಲ್ಲ ಎಂದು ತೀವ್ರ ಆತಂಕ ಹಾಗೂ ಬೇಸರ ವ್ಯಕ್ತಪಡಿಸಿದ್ದರು. ಈ ಆದೇಶದ ಮೂಲಕ ನಟನಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.

ಇದನ್ನೂ ಓದಿ: ವಿಚ್ಛೇದನ ಸಿಗೋ ತನಕ ಸಿನಿಮಾ ಮಾಡಲ್ಲ ಅಂತ ಹೇಳಿ ಈಗ ಉಲ್ಟಾ ಹೊಡೆದ ಜಯಂ ರವಿ

ಅಂತ್ಯದತ್ತ 15 ವರ್ಷಗಳ ದಾಂಪತ್ಯ

ರವಿ ಮೋಹನ್ ಹಾಗೂ ಆರತಿ 2009ರ ಜೂನ್ ತಿಂಗಳಲ್ಲಿ ವಿವಾಹವಾಗಿದ್ದರು. ಸುಮಾರು 15 ವರ್ಷಗಳ ಕಾಲ ಒಟ್ಟಿಗೆ ಇದ್ದ ಇವರ ಸಂಸಾರದಲ್ಲಿ ನಂತರ ಭಿನ್ನಾಭಿಪ್ರಾಯಗಳು ಮೂಡಿದವು. ಪರಿಣಾಮ, 2024ರ ಸೆಪ್ಟೆಂಬರ್‌ನಲ್ಲಿ ರವಿ ಮೋಹನ್ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ತಮ್ಮ ಗಮನಕ್ಕೆ ಬಾರದೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರತಿ ಆರೋಪಿಸಿದ್ದರು. ಸದ್ಯ ಮಧ್ಯಂತರ ಆದೇಶ ಹೊರಬಿದ್ದಿದ್ದು, ಮುಖ್ಯ ವಿಚ್ಛೇದನ ಪ್ರಕರಣದ ವಿಚಾರಣೆ ಮುಂದುವರಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:54 pm, Wed, 29 July 26

Source link

‘ಅವರಂತೆ ಇನ್ನೊಬ್ಬರಿಲ್ಲ’: ರಿಷಬ್ ಶೆಟ್ಟಿಯ ಕೊಂಡಾಡಿದ ಹಿರಿಯ ಸ್ಟಾರ್ ನಟ – Kannada News | Actor Jayaram praises Rishab Shetty’s work in Kantara Chapter 1

ಕಾಂತಾರ’ (Kantara) ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಕನ್ನಡ ಚಿತ್ರರಂಗದ ಗಡಿ ದಾಟಿ ಹಲವು ಚಿತ್ರರಂಗಗಳಲ್ಲಿ ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಇದಕ್ಕೆಲ್ಲ ಅವರ ಕ್ರಿಯಾಶೀಲತೆ, ಶ್ರಮ, ಹೊಸತನಕ್ಕೆ ಅಳವಡಿಸಿಕೊಳ್ಳುವ ಗುಣ, ಕಷ್ಟ ಸಹಿಷ್ಣುತೆಗಳೇ ಕಾರಣ. ಇದೀಗ ದಕ್ಷಿಣ ಭಾರತದ ಬಲು ಬೇಡಿಕೆಯ ಹಿರಿಯ ನಟರೊಬ್ಬರು ರಿಷಬ್ ಶೆಟ್ಟಿ ಅವರು ಸೆಟ್​​ನಲ್ಲಿ ಹೇಗಿರುತ್ತಾರೆ? ಅವರ ಈ ಯಶಸ್ಸಿಗೆ ಕಾರಣ ಏನು? ಎಂಬುದನ್ನು ವಿವರಿಸಿದ್ದಾರೆ.

ಮೂಲತಃ ಮಲಯಾಳಂ ನಟರಾದರೂ ಕನ್ನಡ ಸೇರಿದಂತೆ ಹಲವಾರು ಭಾಷೆಗಳ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟ ಜಯರಾಂ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರಮುಖವಾದ ಪಾತ್ರದಲ್ಲಿ ಜಯರಾಂ ನಟಿಸಿದ್ದರು. ಇದೀಗ ಅವರು ತಮಿಳು ಸಿನಿಮಾಕ್ಕೆ ಸಂಬಂಧಿಸಿದಂತೆ ಪಾಲ್ಗೊಂಡಿದ್ದ ಸಂದರ್ಶನದಲ್ಲಿ ಮಾತನಾಡುತ್ತಾ, ನಟ ರಿಷಬ್ ಶೆಟ್ಟಿ ಅವರೊಟ್ಟಿಗೆ ನಟಿಸಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ:ಸೂರ್ಯ ನಟನೆಯ ಹಿಟ್ ಸಿನಿಮಾಕ್ಕೆ ‘ಕಾಂತಾರ’, ‘ಸಪ್ತ ಸಾಗರದಾಚೆ’ ಸ್ಪೂರ್ತಿ

‘ರಿಷಬ್ ಶೆಟ್ಟಿ, ಸಿನಿಮಾ ಸೆಟ್​​ನಲ್ಲಿ ಪಾದರಸದಂತೆ ಇರುತ್ತಿದ್ದರು. ಚಿತ್ರೀಕರಣದ ಯಾವುದೇ ವಿಭಾಗದಲ್ಲಿಯೂ ಸಹ ಅವರೇ ಇರುತ್ತಿದ್ದರು. ಸೆಟ್ ನಿರ್ಮಾಣ, ಮೇಕಪ್, ಕ್ಯಾಮೆರಾ, ಆಕ್ಷನ್ ಎಲ್ಲದರಲ್ಲೂ ಅವರು ಭಾಗವಹಿಸುತ್ತಿದ್ದರು, ಮೇಲುಸ್ತುವಾರಿ ನೋಡುತ್ತಿದ್ದರು, ಸಲಹೆಗಳನ್ನು ನೀಡುತ್ತಿದ್ದರು. ಸೆಟ್​​​ಗೆ ಬಂದಾಗಿನಿಂದ ಹೊರಗೆ ಹೋಗುವವರೆಗೆ, ಹೋದಮೇಲೂ ಅವರು ಸಿನಿಮಾದ ಕೆಲಸಗಳಲ್ಲಿಯೇ ಬಿಡುವಾಗಿರುತ್ತಿದ್ದರು’ ಎಂದಿದ್ದಾರೆ ಜಯರಾಂ.

‘ಸಿನಿಮಾ ಶೂಟಿಂಗ್​​ನ ಎಲ್ಲ ವಿಭಾಗಗಳಲ್ಲಿ ಅವರಷ್ಟು ತೊಡಗಿಕೊಳ್ಳುವ ನಿರ್ದೇಶಕರ ನಾನು ನೋಡಿಲ್ಲ. ನನ್ನ ಶೂಟಿಂಗ್ ಸಮಯದಲ್ಲಿ ಶಾಟ್ ಮುಗಿದರೂ ಸಹ ನಾನು ಅಲ್ಲಿಯೇ ಕೂರುತ್ತಿದ್ದೆ. ಅವರು ಏನು ಮಾಡುತ್ತಾರೋ ನೋಡುತ್ತಾ ಇರುತ್ತಿದ್ದೆ. ಅವರಿಂದ ಕಲಿಯುವುದು ಸಾಕಷ್ಟಿದೆ. ಯುವಕರು ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು’ ಎಂದು ಜಯರಾಂ ಅವರು ಹೇಳಿದ್ದಾರೆ.

ಜಯರಾಂ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್ ಅವರ ತಂದೆಯ ಪಾತ್ರ ಅವರದ್ದು. ಅದಕ್ಕೂ ಮುನ್ನ ಶಿವರಾಜ್ ಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಘೋಸ್ಟ್’ನಲ್ಲಿ ಅವರು ನಟಿಸಿದ್ದಾರೆ. ಮಲಯಾಳಂ ಮೂಲದ ನಟ ಜಯರಾಂ ದಕ್ಷಿಣದ ಎಲ್ಲ ಭಾಷೆಗಳಲ್ಲೂ ನಟಿಸಿದ್ದಾರೆ ಜೊತೆಗೆ ಒಳ್ಳೆಯ ಹಾಡುಗಾರರೂ ಆಗಿರುವ ಜಯರಾಂ, ಹಿಂದೊಮ್ಮೆ ಅಪ್ಪು ಅವರ ಹಾಡು ಹಾಡಿ ಅದು ಸಖತ್ ವೈರಲ್ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ’ ಟ್ರೈಲರ್ ಲೀಕ್, ‘ರಾವಣ’ನಾಗಿ ಯಶ್ ಅಬ್ಬರ ಅಬ್ಬಬ್ಬ – Kannada News | Ramayana movie trailer leaked online, Yash is shining in the trailer

ರಣ್​​ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ಇನ್ನೂ ಕೆಲವು ಪ್ರತಿಭಾವಂತ ನಟ-ನಟಿಯರು ನಟಿಸಿರುವ ‘ರಾಮಾಯಣ’ ಸಿನಿಮಾ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾದ ಟ್ರೈಲರ್ ನಾಳೆ (ಜುಲೈ 30) ರಿಲೀಸ್ ಆಗಲಿದೆ. ಆದರೆ ಸಿನಿಮಾದ ಟ್ರೈಲರ್ ಅನ್ನು ಈಗಾಗಲೇ ಚಿತ್ರತಂಡವು ಸ್ಯಾಂಡಿಯಾಗೋದ ಕಾಮಿಕಾನ್​​ನಲ್ಲಿ ಪ್ರದರ್ಶಿಸಿದ್ದಾರೆ. ಹಾಗಾಗಿ ಟ್ರೈಲರ್ ಈಗಾಗಲೇ ಲೀಕ್ ಆಗಿದ್ದು, ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಟ್ರೈಲರ್​​ನಲ್ಲಿ ಹಲವು ಅಂಶಗಳು ಗಮನ ಸೆಳೆಯುತ್ತಿದ್ದು, ವಿಶೇಷವಾಗಿ ರಾವಣನಾಗಿ ಯಶ್ ಅಬ್ಬರ ಬಲು ಅದ್ಧೂರಿಯಾಗಿರುವುದು ತಿಳಿಯುತ್ತಿದೆ.

ಈಗ ಲೀಕ್ ಆಗಿರುವ ಟ್ರೈಲರ್ ಒಳ್ಳೆಯ ಗುಣಮಟ್ಟದಲ್ಲಿಲ್ಲ, ಅದರಲ್ಲಿಯೂ ಸಹ ಯಶ್ ಅವರ ಎಂಟ್ರಿ ಹಾಗೂ ಇನ್ನೂ ಕೆಲ ಸೀನ್​​ಗಳು ಸಖತ್ ಗಮನ ಸೆಳೆಯುತ್ತಿವೆ. ಲೀಕ್ ಆಗಿರುವ ಟ್ರೈಲರ್​​ನಲ್ಲಿ ಯಶ್, ಘರ್ಜಿಸುವ ಸಿಂಹದ ಎದುರು ಮರು ಘರ್ಜನೆ ಮಾಡುವ ದೃಶ್ಯ ಸಖತ್ ಆಗಿದೆ. ಘರ್ಜಿಸುತ್ತಿರುವ ಸಿಂಹವನ್ನು ತಮ್ಮ ಆವೇಶದಿಂದಲೇ ಯಶ್ (ರಾವಣ) ಸುಮ್ಮನಾಗಿಸುವ ದೃಶ್ಯ ಟ್ರೈಲರ್​​ನಲ್ಲಿದೆ.

ಮಾತ್ರವಲ್ಲದೆ ಯಶ್ (ರಾವಣ) ಬಾಹುಗಳನ್ನು ಚಾಚಿ ಡೈಲಾಗ್ ಹೇಳುತ್ತಿರುವ ದೃಶ್ಯವೂ ಸಖತ್ ಆಗಿದೆ. ಜೊತೆಗೆ ಟ್ರೈಲರ್​​ನಲ್ಲಿ ರಾಮನ (ರಣ್​​ಬೀರ್ ಕಪೂರ್), ಸಾಯಿ ಪಲ್ಲವಿ, (ಸೀತೆ), ಶೂರ್ಪನಖಿ (ರಕುಲ್ ಪ್ರೀತ್ ಸಿಂಗ್) ಇನ್ನೂ ಹಲವರ ದೃಶ್ಯಗಳು ಇವೆ. ರಾಮ ವನವಾಸಕ್ಎ ಹೋಗುವ ದೃಶ್ಯ, ಶೂರ್ಪನಖಿಯ ಮೂಗು ಕತ್ತರಿಸುವ ದೃಶ್ಯ, ಹನುಮಂತನ ದೃಶ್ಯ, ರಾಮ ಹಾಗೂ ದಶರಥನ ನಡುವಿನ ದೃಶ್ಯ, ಸೀತಾ ಕಲ್ಯಾಣ ಹೀಗೆ ಹಲವು ದೃಶ್ಯಗಳು ಸಿನಿಮಾದ ಟ್ರೈಲರ್​​ನಲ್ಲಿವೆ.

ಇದನ್ನೂ ಓದಿ:ರಣ್​​ಬೀರ್ ಕಪೂರ್ ಸಿನಿಮಾ ಸೆಟ್​​ನಲ್ಲಿ ಸಾವು, ನಿರ್ದೇಶಕನ ವಿರುದ್ಧ ಎಫ್​​ಐಆರ್​​ಗೆ ಆಗ್ರಹ

ಈಗ ಲೀಕ್ ಆಗಿರುವ ಟ್ರೈಲರ್​ ಬಹಳ ಕಡಿಮೆ ಗುಣಮಟ್ಟದ್ದಾಗಿದೆ. ಸ್ಕ್ರೀನ್ ಮೇಲೆ ಪ್ರದರ್ಶನ ಆಗುತ್ತಿರುವ ಟ್ರೈಲರ್​ ಅನ್ನು ಮೊಬೈಲ್ ಅಲ್ಲಿ ಸೆರೆ ಹಿಡಿದು ಅದನ್ನು ಲೀಕ್ ಮಾಡಲಾಗಿದೆ. ಆದರೂ ಸಹ ಸಿನಿಮಾ ಅನ್ನು ರಿಚ್ ಆಗಿ ನಿರ್ಮಾಣ ಮಾಡಿರುವುದು ತಿಳಿಯುತ್ತಿದೆ. ‘ರಾಮಾಯಣ’ ಚಿತ್ರತಂಡವು ಅಧಿಕೃತವಾಗಿ ನಾಳೆ ಅಂದರೆ (ಜುಲೈ 30) ಟ್ರೈಲರ್ ಬಿಡುಗಡೆ ಮಾಡಲಿದೆ. ಜುಲೈ 30ರ ಬೆಳಿಗ್ಗೆ 4:15ಕ್ಕೆ ಟ್ರೈಲರ್ ಬಿಡುಗಡೆ ಆಗಲಿದೆ.

‘ರಾಮಾಯಣ’ ಸಿನಿಮಾವು ಭಾರತದ ಈ ವರೆಗೆ ಅತ್ಯಂತ ದುಬಾರಿ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ರಣ್​​ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಇನ್ನೂ ಕೆಲವು ಜನಪ್ರಿಯ ನಟ-ನಟಿಯರು ನಟಿಸಿದ್ದಾರೆ. ರಾಮಾಯಣ ಕತೆ ಆಧರಿಸಿದ ಈ ಸಿನಿಮಾದ ಎರಡು ಭಾಗಗಳ ಮೇಲೆ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆಯಂತೆ. ಸಿನಿಮಾವನ್ನು ‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದಾರೆ. ಯಶ್ ಅವರು ಈ ಸಿನಿಮಾದ ಸಹ ನಿರ್ಮಾಪಕ ಆಗಿದ್ದಾರೆ. ಸಿನಿಮಾ ಇದೇ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಮುಂದಿನ ಭಾಗ ಮುಂದಿನ ವರ್ಷ ನವೆಂಬರ್​​​ಗೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜೀವ್ ಕುಮಾರ್… ಟೀಮ್ ಇಂಡಿಯಾ ಹಿಂದಿದ್ದ ಕಾಣದ ‘ಕೈ’ – Kannada News | The Healing Hands of Indian Cricket: Rajeev Kumar’s Story

ಮೈದಾನದಲ್ಲಿ ವಿರಾಟ್ ಕೊಹ್ಲಿ ಬಾರಿಸುವ ಭರ್ಜರಿ ಸಿಕ್ಸರ್‌ಗಳು, ಜಸ್​ಪ್ರೀತ್ ಬುಮ್ರಾ ಎಸೆಯುವ ಮಾರಕ ಯಾರ್ಕರ್‌ಗಳು ಮತ್ತು ರೋಹಿತ್ ಶರ್ಮಾ ಅವರ ಅದ್ಭುತ ಪುಲ್ ಶಾಟ್​ಗಳ ಹಿಂದೆ ಕೋಟ್ಯಂತರ ಅಭಿಮಾನಿಗಳ ಹರ್ಷೋದ್ಗಾರವಿರುತ್ತದೆ. ಆದರೆ, ಈ ದಿಗ್ಗಜ ಆಟಗಾರರು ಮೈದಾನದಲ್ಲಿ ಅಬ್ಬರಿಸಲು ಅವರ ದೇಹ ಮತ್ತು ಮನಸ್ಸನ್ನು ಸದಾ ಫಿಟ್ ಆಗಿಡುತ್ತಿದ್ದ ಆ ‘ಕಾಣದ ಕೈ’ಗಳ ಕಥೆ ಯಾರಿಗೂ ತಿಳಿದಿಲ್ಲ! ಕೇವಲ 100 ರೂಪಾಯಿ ತಿಂಗಳ ಸಂಬಳಕ್ಕೆ ವೃತ್ತಿ ಆರಂಭಿಸಿ, ಭಾರತ ತಂಡದ ಡ್ರೆಸ್ಸಿಂಗ್ ರೂಮ್ ತಲುಪಿ, 2024ರ ಟಿ20 ವಿಶ್ವಕಪ್ ವಿಜಯದ ಸಂಭ್ರಮದಲ್ಲಿ ಭಾಗಿಯಾದ ಮಸಾಜ್ ಥೆರಪಿಸ್ಟ್ ರಾಜೀವ್ ಕುಮಾರ್ ಅವರ ಸ್ಪೂರ್ತಿಯ ಕಥೆ ಇಲ್ಲಿದೆ.

100 ರೂ.ನಿಂದ ಆರಂಭವಾದ ಕನಸು:

2002ರಲ್ಲಿ ರಾಜೀವ್ ಕುಮಾರ್ ಕೇವಲ ಒಂದು ಮಸಾಜ್ ಥೆರಪಿ ಡಿಪ್ಲೊಮಾ ಪ್ರಮಾಣಪತ್ರ ಹಿಡಿದು ಉದ್ಯೋಗ ಹುಡುಕುತ್ತಾ ದೆಹಲಿ ತಲುಪಿದ್ದರು. ಜೋಧ್‌ಪುರ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದ ಅವರಿಗೆ ಸಿಕ್ಕ ಮೊದಲ ಕೆಲಸದ ತಿಂಗಳ ಸಂಬಳ ಕೇವಲ 100 ರೂಪಾಯಿ. ಕಡು ಬಡತನ ಮತ್ತು ಅನಿಶ್ಚಿತತೆಯ ನಡುವೆಯೂ ಅವರು ತಮ್ಮ ವೃತ್ತಿ ಕೌಶಲ್ಯವನ್ನು ನಂಬಿ ಕಷ್ಟಪಟ್ಟರು.

ಆ ಸಮಯದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಸ್ಪೋರ್ಟ್ಸ್ ಸೈನ್ಸ್ ಇನ್ನೂ ಆರಂಭಿಕ ಹಂತದಲ್ಲಿತ್ತು. ದೇಶೀಯ ಕ್ರಿಕೆಟ್ ಮತ್ತು ವಿವಿಧ ಹಂತಗಳಲ್ಲಿ ಆಟಗಾರರಿಗೆ ಮಸಾಜ್ ಸೇವೆ ನೀಡುತ್ತಾ ತಮ್ಮ ಅದ್ಭುತ ಹಸ್ತಗುಣದಿಂದ ಎಲ್ಲರ ಗಮನ ಸೆಳೆದರು. ಅದರಲ್ಲೂ ವಿಶೇಷವಾಗಿ ವೇಗದ ಬೌಲರ್‌ಗಳು ತೀವ್ರ ದಣಿವು ಮತ್ತು ಸ್ನಾಯು ಸೆಳೆತಕ್ಕೆ ಒಳಗಾದಾಗ ರಾಜೀವ್ ನೀಡುತ್ತಿದ್ದ ಚಿಕಿತ್ಸೆ ಆಟಗಾರರಿಗೆ ತಕ್ಷಣದ ಪರಿಹಾರ ನೀಡುತ್ತಿತ್ತು.

ಟೀಮ್ ಇಂಡಿಯಾ ಎಂಟ್ರಿ:

ದೇಶೀಯ ಕ್ರಿಕೆಟ್​ನಲ್ಲಿ ಆಟಗಾರರನ್ನು ಸದಾ ಫಿಟ್ ಆಗಿಡುವ ಇವರ ಕೌಶಲ್ಯವನ್ನು ಕಂಡು ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಪ್ರಭಾವಿತರಾದರು. ಆಟಗಾರರ ಶಿಫಾರಸು ಮತ್ತು ಬಿಸಿಸಿಐನ ಪೋಷಕ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯ ಮೂಲಕ ರಾಜೀವ್ ಕುಮಾರ್ ಅಧಿಕೃತವಾಗಿ ಭಾರತ ತಂಡದ ಡ್ರೆಸ್ಸಿಂಗ್ ರೂಮ್ ಪ್ರವೇಶಿಸಿದರು.

ತಮ್ಮ ಕಠಿಣ ಪರಿಶ್ರಮದಿಂದಾಗಿ ರಾಜೀವ್, ಭಾರತೀಯ ಕ್ರಿಕೆಟ್‌ನ ದಿಗ್ಗಜ ನಾಯಕರಾದ ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದರು.

ಆಟಗಾರರ ನೆಚ್ಚಿನ ಥೆರಪಿಸ್ಟ್:

ಮೈದಾನದಲ್ಲಿ ಬೌಲರ್‌ಗಳು ತೀವ್ರವಾಗಿ ಶ್ರಮ ಪಟ್ಟು ಬಂದಾಗ ಅವರ ಸ್ನಾಯುಗಳ ಸೆಳೆತ ನಿವಾರಿಸಲು ರಾಜೀವ್ ಮೊದಲ ಆಸರೆಯಾಗುತ್ತಿದ್ದರು. ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರು ರಾಜೀವ್ ಅವರ ಮಸಾಜ್ ಕೌಶಲ್ಯವನ್ನು ಹೆಚ್ಚು ನಂಬುತ್ತಿದ್ದರು.

ಕೇವಲ ಮಸಾಜ್ ಮಾಡುವುದಷ್ಟೇ ಅಲ್ಲದೆ, ಆಟಗಾರರಿಗೆ ಅಗತ್ಯವಿರುವ ಪ್ರೋಟೀನ್ ಶೇಕ್, ಎನರ್ಜಿ ಡ್ರಿಂಕ್ಸ್ ಸಿದ್ಧಪಡಿಸುವುದು ಮತ್ತು ಬೌಂಡರಿ ಲೈನ್‌ ಬಳಿ ನಿಂತು ಆಟಗಾರರನ್ನು ಸದಾ ಸಕ್ರಿಯವಾಗಿಡುವ ಕೆಲಸವನ್ನೂ ಇವರು ಮಾಡುತ್ತಿದ್ದರು. ಹೀಗಾಗಿಯೇ ರಾಜೀವ್ ಕುಮಾರ್ ಟೀಮ್ ಇಂಡಿಯಾದ ಖಾಯಂ ಮಸಾಜ್ ಥೆರೆಪಿಸ್ಟ್​ ಆಗಿ ಮುಂದುವರೆದಿದ್ದರು. ವಿಶೇಷ ಎಂದರೆ ಭಾರತ ತಂಡ 2024ರ ಟಿ20 ವಿಶ್ವಕಪ್ ಗೆದ್ದಾಗ ರಾಜೀವ್ ಕುಮಾರ್ ಆ ಸಂಭ್ರಮದ ಭಾಗವಾಗಿದ್ದರು.

ಇಡೀ ಹಳ್ಳಿಗೇ ಬೆಳಕಾದ ರಾಜೀವ್!

ರಾಜೀವ್ ಕುಮಾರ್ ಕೇವಲ ತಮ್ಮ ಜೀವನವನ್ನು ಮಾತ್ರ ಬದಲಾಯಿಸಿಕೊಳ್ಳಲಿಲ್ಲ, ಬದಲಿಗೆ ತಮ್ಮ ಯಶಸ್ಸಿನ ಮೂಲಕ ಸ್ವಗ್ರಾಮದ ಯುವಕರಿಗೆ ಹೊಸ ದಾರಿ ತೋರಿಸಿದರು.

ಇವರ ಸಾಧನೆಯನ್ನು ನೋಡಿ ಪ್ರೇರಿತರಾದ ಇವರ ಹಳ್ಳಿಯ ಸುಮಾರು 50 ಯುವಕರು ಮಸಾಜ್ ಥೆರಪಿ ವೃತ್ತಿಯನ್ನು ಆಯ್ದುಕೊಂಡಿದ್ದಾರೆ.

ಇಂದು ಈ ಯುವಕರು ವಿವಿಧ ದೇಶೀಯ ಕ್ರಿಕೆಟ್ ತಂಡಗಳು ಹಾಗೂ ಐಪಿಎಲ್ ಫ್ರಾಂಚೈಸಿಗಳಲ್ಲಿ ಅಧಿಕೃತ ಮಸಾಜ್ ಥೆರಪಿಸ್ಟ್‌ಗಳಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿಸಿಸಿಐ ಒಪ್ಪಂದದ ಅಂತ್ಯ!

ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದ ರಾಜೀವ್ ಕುಮಾರ್ ಅವರ ಒಪ್ಪಂದವನ್ನು ಬಿಸಿಸಿಐ ಆಗಸ್ಟ್ 2025 ರಲ್ಲಿ ಕೊನೆಗೊಳಿಸಿತು. ಗೌತಮ್ ಗಂಭೀರ್ ಅವರ ಕೋಚಿಂಗ್ ಅವಧಿಯಲ್ಲಿ ಪೋಷಕ ಸಿಬ್ಬಂದಿ ಬದಲಾವಣೆಯ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೂ, ಭಾರತೀಯ ಕ್ರಿಕೆಟ್‌ಗೆ ಮತ್ತು ತಮ್ಮ ಹಳ್ಳಿಯ ಯುವಕರಿಗೆ ರಾಜೀವ್ ನೀಡಿದ ಕೊಡುಗೆ ಎಂದಿಗೂ ಮರೆಯಲಾಗದ್ದು.

ಇದನ್ನೂ ಓದಿ: ಏಕದಿನ ವಿಶ್ವಕಪ್​ಗೆ ಪ್ಲೇಯಿಂಗ್ 11 ಹೆಸರಿಸಿದ ವಾಸಿಂ ಜಾಫರ್!

ಬಡತನದ ಕತ್ತಲೆಯಿಂದ ಬಂದು ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಕ್ರಿಕೆಟ್ ತಾರೆಗಳ ದಣಿವು ಆರಿಸಿದ ರಾಜೀವ್ ಕುಮಾರ್ ಅವರ ಕೈಗುಣ ಮತ್ತು ಅವರ ‘ಹೀಲಿಂಗ್ ಟಚ್’ ನಿಜಕ್ಕೂ ಭಾರತೀಯ ಕ್ರಿಕೆಟ್‌ನ ಅಪರೂಪದ ಯಶೋಗಾಥೆಯಾಗಿದೆ!

Source link

ಜಂತರ್ ಮಂತರ್ ಪ್ರತಿಭಟನೆಯಲ್ಲಿ ದ್ವೇಷ ಅಥವಾ ಕೋಪವಿರಲಿಲ್ಲ, ಅದು ಯುವಕರ ನೈಜ ಧ್ವನಿ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಪ್ರತಿಪಾದನೆ – Kannada News | Rahul Gandhi: Jantar Mantar Protest Was Youth’s Voice, Not Hate; Demands Exam Leak Action

ನವದೆಹಲಿ, ಜುಲೈ 29: ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆದ ಪ್ರತಿಭಟನೆಯಲ್ಲಿ ದ್ವೇಷ ಅಥವಾ ಕೋಪವಿರಲಿಲ್ಲ, ಅದು ಯುವಕರ ನೈಜ ಧ್ವನಿ ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ. ಲೋಕಸಭೆಯಲ್ಲಿ ಬುಧವಾರ ನಡೆದ ಸಾರ್ವಜನಿಕ ಪರೀಕ್ಷೆಗಳು(ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ಕುರಿತ ಕಾವೇರಿದ ಚರ್ಚೆಯ ವೇಳೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿದ್ಯಾರ್ಥಿಯು ದುರಹಂಕಾರಿಗಳು ಮತ್ತು ಜನರ ಮಾತನ್ನು ಕೇಳದಿರುವವರು ಮೂರ್ಖರು ಎಂದಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಸುದೀರ್ಘ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, “ವಿದ್ಯಾರ್ಥಿಗಳ ಆಂದೋಲನದಲ್ಲಿ ಯಾವುದೇ ದ್ವೇಷ ಅಥವಾ ಕೋಪವಿರಲಿಲ್ಲ. ಅದು ತಮ್ಮ ಭವಿಷ್ಯಕ್ಕಾಗಿ ಕಳವಳಗೊಂಡಿದ್ದ ದೇಶದ ಲಕ್ಷಾಂತರ ಯುವಕರ ನೈಜ ಅಭಿವ್ಯಕ್ತಿಯಾಗಿತ್ತು. ಸರ್ಕಾರ ಅವರ ಧ್ವನಿಯನ್ನು ಹತ್ತಿಕ್ಕುವ ಬದಲು ಗೌರವಿಸಬೇಕಿತ್ತು ಎಂದು ಒತ್ತಾಯಿಸಿದರು.

ಪರೀಕ್ಷಾ ವ್ಯವಸ್ಥೆ ಮತ್ತು ಪತ್ರಿಕೆ ಸೋರಿಕೆ ಕುರಿತು ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನಿರಂತರ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ದೇಶದ ಲಕ್ಷಾವಧಿ ಯುವಕರ ಹಾಗೂ ಅವರ ಪೋಷಕರ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಯುವಕರ ಹಿತಾಸಕ್ತಿ ಕಾಯುವುದು ನಮಗೆ ಮುಖ್ಯ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಮೆಟ್ರೋ, ಇಂಟರ್ನೆಟ್ ಬಂದ್ ಮಾಡಬಹುದು, ಆದರೆ ಪೇಪರ್ ಲೀಕ್ ತಡೆಯಲು ಆಗಲ್ಲ!: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು, ವಿದ್ಯಾರ್ಥಿಗಳ ಸಂಕಟವನ್ನು ಆಲಿಸುವ ಬದಲು ಅವರ ಪ್ರತಿಭಟನೆಯನ್ನು ಪೊಲೀಸರ ಮೂಲಕ ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಸೂದೆಯನ್ನು ಸದನದಲ್ಲಿ ಮಂಡಿಸುತ್ತಾ, “ಸಂಘಟಿತ ಪರೀಕ್ಷಾ ಮಾಫಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮತ್ತು ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಈ ಕಾಯ್ದೆ ತಿದ್ದುಪಡಿ ಅತ್ಯಗತ್ಯ” ಎಂದು ಹೇಳಿದರು.

ರಾಹುಲ್ ವಿಡಿಯೋ

ಈ ತಿದ್ದುಪಡಿ ಮಸೂದೆಯ ಪ್ರಕಾರ, ಪರೀಕ್ಷಾ ವಂಚನೆ ಹಾಗೂ ಪೇಪರ್ ಸೋರಿಕೆಯಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಕನಿಷ್ಠ 5 ರಿಂದ ಗರಿಷ್ಠ10 ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ. ದಂಡ ವಿಧಿಸಲು ಕಾನೂನು ರೂಪಿಸಲಾಗಿದೆ.
ಪೇಪರ್ ಸೋರಿಕೆ ಪ್ರಕರಣಗಳ ತನಿಖೆಯನ್ನು ಕೇವಲ 2 ತಿಂಗಳಲ್ಲಿ ಪೂರ್ಣಗೊಳಿಸಲು ವಿಶೇಷ ಕಾರ್ಯಪಡೆ (STF) ರಚನೆ ಹಾಗೂ 3 ತಿಂಗಳೊಳಗೆ ವಿಚಾರಣೆ ಮುಗಿಸಲು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲು ಮಸೂದೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ದೇಶಾದ್ಯಂತ ನಡೆದ ತೀವ್ರ ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ನಿರಶನದ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು.ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಜುಲೈ 27 ರಂದು ಈ ಹೊಸ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಚರ್ಚೆಗೆ ಕೈಗೆತ್ತಿಕೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿದ್ಯಾರ್ಥಿ ಚಳವಳಿಯಲ್ಲಿದ್ದ ಮೇಲೆ ಬಂಧನ ಎದುರಿಸಲು ಸಿದ್ಧರಿರಬೇಕು: ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮ ಸಮರ್ಥಿಸಿಕೊಂಡ ಜೆಪಿ ನಡ್ಡಾ – Kannada News | JP Nadda Defends Police Action on Student Protesters: Be Ready for Arrests, Says Minister

ನವದೆಹಲಿ, ಜುಲೈ 29: ವಿದ್ಯಾರ್ಥಿ ಚಳವಳಿಯಲ್ಲಿದ್ದ ಮೇಲೆ ಬಂಧನ ಎದುರಿಸಲು ಸಿದ್ಧರಿರಬೇಕು ಎಂದು ಪ್ರತಿಭಟನಾಕಾರರ ಮೇಲೆ ಪೊಲೀಸ್ ಕ್ರಮವನ್ನು ಕೇಂದ್ರ ಸಚಿವ ಜೆಪಿ ನಡ್ಡಾ(JP Nadda) ಸಮರ್ಥಿಸಿಕೊಂಡಿದ್ದಾರೆ. ಸಂಸತ್ತಿನ ರಾಜ್ಯಸಭೆಯಲ್ಲಿ ಬುಧವಾರ ವಿಪಕ್ಷಗಳು ಮತ್ತು ಆಡಳಿತಾರೂಢ ಎನ್‌ಡಿಎ ನಾಯಕರ ನಡುವೆ ತೀವ್ರ ವಾಕ್ಸಮರ ನಡೆಯಿತು. ದೆಹಲಿಯ ಜಂತರ್ ಮಂತರ್ ಮತ್ತು ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಸಿಜೆಪಿ (CJP) ನೇತೃತ್ವದ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಬಲಪ್ರಯೋಗವನ್ನು ಸಮರ್ಥಿಸಿಕೊಂಡ ಜೆಪಿ ನಡ್ಡಾ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸರ ಪ್ರಾಥಮಿಕ ಕರ್ತವ್ಯ. ಪ್ರತಿಭಟನೆ ಹಾಗೂ ಚಳವಳಿಗಳಲ್ಲಿ ಭಾಗವಹಿಸುವವರು ಪೊಲೀಸ್ ಕ್ರಮಗಳನ್ನು ಎದುರಿಸಲು ಸಿದ್ಧರಿರಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ.

ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ವಿಷಯವನ್ನು ಪ್ರಸ್ತಾಪಿಸಿ, ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವವೂ ಸುರಕ್ಷಿತವಾಗಿಲ್ಲ, ಸಾಮಾನ್ಯ ಜನರೂ ಸುರಕ್ಷಿತವಾಗಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಜನರ ಮೇಲೆ ಕ್ರೂರ ಬಲಪ್ರಯೋಗ ನಡೆಸಿದ ಅಧಿಕಾರಿಗಳು ಮತ್ತು ಅಪರಾಧಿಗಳು ನಿರಾತಂಕವಾಗಿ ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.

ಖರ್ಗೆ ಅವರಿಗೆ ಉತ್ತರಿಸಿದ ಜೆ.ಪಿ. ನಡ್ಡಾ, ಸಾರ್ವಜನಿಕ ಆಸ್ತಿಗೆ ಧಕ್ಕೆ ಉಂಟಾಗದಂತೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಡದಂತೆ ತಡೆಯಲು ಪೊಲೀಸರು ಸಾಮಾನ್ಯ ಕ್ರಮ ಕೈಗೊಂಡಿದ್ದಾರೆ. ಪ್ರತಿಯೊಂದು ಪೊಲೀಸ್ ಕ್ರಮವನ್ನೂ ರಾಜಕೀಯಗೊಳಿಸುವುದು ಸರಿಯಲ್ಲ. ನಾನು ಕೂಡ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಕಾಂಗ್ರೆಸ್ ಆಡಳಿತದ ವೇಳೆ ವಿದ್ಯಾರ್ಥಿ ನಾಯಕನಾಗಿದ್ದಾಗ ತರಗತಿಯಿಂದಲೇ ಎರಡು ಬಾರಿ ಬಂಧನಕ್ಕೊಳಗಾಗಿದ್ದೆ ಎಂದು ತಮ್ಮ ವಿದ್ಯಾರ್ಥಿ ಜೀವನದ ಉದಾಹರಣೆ ನೀಡಿದರು.

ಮತ್ತಷ್ಟು ಓದಿ: ಪ್ರತಿಭಟನಾಕಾರರು ಮಾತುಕತೆಗೆ ನನ್ನ ಮನೆ, ಕಚೇರಿಗೆ ಬರಬಹುದು; ಕೇಂದ್ರ ಸಚಿವ ಜೆ.ಪಿ. ನಡ್ಡಾ

ಜಂತರ್ ಮಂತರ್ ಪ್ರತಿಭಟನೆಯ ಪ್ರಮುಖ ಮುಖಗಳಲ್ಲಿ ಒಬ್ಬರಾದ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕಿ ಹಾಗೂ ಎಸ್‌ಎಫ್‌ಐ ನಾಯಕಿ ಐಷೆ ಘೋಷ್ ಅವರನ್ನು ಬಂಧಿಸಲು ದೆಹಲಿ ಪೊಲೀಸರು ದೆಹಲಿಯ ಸಿಪಿಐ(ಎಂ) (CPI-M) ಕೇಂದ್ರ ಕಚೇರಿಗೆ ನಿಯಮ ಮೀರಿ ನುಗ್ಗಿದ್ದಾರೆ ಎಂದು ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷಗಳು ದೆಹಲಿ ಪೊಲೀಸರ ನಡೆ ಮತ್ತು ಪ್ರತಿಭಟನಾಕಾರರ ಮೇಲಿನ ದೌರ್ಜನ್ಯದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಅಧಿಕೃತ ನಿಲುವು ಸ್ಪಷ್ಟಪಡಿಸಬೇಕು ಹಾಗೂ ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದವು. ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ್ದ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್, ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯವು ದೇಶದಲ್ಲಿ 1975 ರ ತುರ್ತು ಪರಿಸ್ಥಿತಿಗಿಂತಲೂ ಭೀಕರವಾಗಿದೆ ಎಂದು ಬಣ್ಣಿಸಿದ್ದರು.

ಜುಲೈ 20 ರಂದು ಸಿಜೆಪಿ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಜಂತರ್ ಮಂತರ್‌ನಿಂದ ಸಂಸತ್ತಿನತ್ತ ಮೆರವಣಿಗೆ ಹೊರಟಾಗ ಪೊಲೀಸರು ತಡೆಗೋಡೆ ನಿರ್ಮಿಸಿ ಲಘು ಲಾಠಿಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದ್ದರು. ಈ ವೇಳೆ ನಡೆದಿರುವ ಘರ್ಷಣೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 118 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಕಠಿಣ ಕಾನೂನು ತರಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

13 ಪಂದ್ಯಗಳಲ್ಲಿ 39 ಕೀಪರ್ ಕ್ಯಾಚ್‌: ಕ್ರಿಕೆಟ್ ಅಂಗಳದ ಮಹಾ ಮೋಸ ಬಯಲು! – Kannada News | The Finger Snap Fraud: How a Club Cricketer Fooled Umpires

ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದ ವಿಚಿತ್ರ ಮತ್ತು ನಾಚಿಕೆಗೇಡಿನ ವಂಚನೆಯೊಂದು ಬ್ರಿಟನ್‌ನ ಹವ್ಯಾಸಿ ಕ್ರಿಕೆಟ್ ಅಂಗಳದಲ್ಲಿ ಬಯಲಾಗಿದೆ. ಫೀಲ್ಡಿಂಗ್ ಮಾಡುವಾಗ ಬ್ಯಾಟರ್‌ಗಳನ್ನು ಔಟ್ ಮಾಡಲು ಬೆರಳುಗಳಿಂದ ‘ಚಿಟಿಕಿ’ ಶಬ್ದ ಮಾಡುತ್ತಾ ಅಂಪೈರ್‌ಗಳನ್ನೇ ದಿಕ್ಕು ತಪ್ಪಿಸುತ್ತಿದ್ದ ಆಟಗಾರನೊಬ್ಬನ ಅಸಲಿ ಮುಖವಾಡ ಕಡೆಗೂ ಕಳಚಿ ಬಿದ್ದಿದೆ.

ಏನಿದು ‘ಕ್ಲಿಕ್ಕಿ ಪಾಂಟಿಂಗ್’ ವಿವಾದ?

ಬ್ರಿಟನ್‌ನ ಸಾಲ್ಟ್‌ಬರ್ನ್ ಕ್ರಿಕೆಟ್ ಕ್ಲಬ್‌ನ 38 ವರ್ಷದ ಹವ್ಯಾಸಿ ಆಟಗಾರ ಬ್ರಿಯಾನ್ ಡೆವೈನ್, ಫೀಲ್ಡಿಂಗ್ ಮಾಡುವಾಗ ಬ್ಯಾಟರ್‌ಗಳನ್ನು ಔಟ್ ಮಾಡಲು ಅಡ್ಡದಾರಿ ಹಿಡಿದಿದ್ದರು. ಇವರು ಫಸ್ಟ್ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುವಾಗ, ಚೆಂಡು ಬ್ಯಾಟ್‌ಗೆ ತಾಗಿ ಹೋದಂತೆ ಭ್ರಮೆ ಮೂಡಿಸಲು ತಮ್ಮ ಬೆರಳುಗಳಿಂದ ಜೋರಾಗಿ ಚಿಟಿಕಿ ಹೊಡೆಯುತ್ತಿದ್ದರು. ಈ ಶಬ್ದವನ್ನು ಕೇಳಿ ಚೆಂಡು ಬ್ಯಾಟ್‌ಗೆ ಎಡ್ಜ್ ಆಗಿದೆ ಎಂದು ಭಾವಿಸುತ್ತಿದ್ದ ಅಂಪೈರ್‌ಗಳು ಔಟ್ ನೀಡುತ್ತಿದ್ದರು.

ಇದು ಕ್ಲಬ್ ಕ್ರಿಕೆಟ್ ಪಂದ್ಯಾವಳಿ ಆಗಿದ್ದರಿಂದ, ಈ ಟೂರ್ನಿಯಲ್ಲಿ ಡಿಆರ್​ಎಸ್​  ವ್ಯವಸ್ಥೆ ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಬ್ರಿಯಾನ್ ಡೆವೈನ್, ಚೆಂಡು ಬ್ಯಾಟ್ ಹತ್ತಿರ ಬರುತ್ತಿದ್ದಂತೆ ಚಿಟಿಕೆ ಹೊಡೆಯುತ್ತಿದ್ದರು. ಇತ್ತ ವಿಕೆಟ್ ಕೀಪರ್ ಕ್ಯಾಚ್ ಹಿಡಿದು ಮನವಿ ಮಾಡುತ್ತಿದ್ದಂತೆ ಅಂಪೈರ್ ಔಟ್ ನೀಡುತ್ತಿದ್ದರು.

ಇದನ್ನು ಗಮನಿಸಿದ ವ್ಯಕ್ತಿಯೋರ್ವ ಬ್ರಿಯಾನ್ ಡೆವೈನ್ ಚಿಟಿಕಿಯ ಕಳ್ಳಾಟದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕಳ್ಳಾಟಕ್ಕೆ ಇದೀಗ ‘ಕ್ಲಿಕ್ಕಿ ಪಾಂಟಿಂಗ್’ ಹೆಸರಿಡಲಾಗಿದೆ.

ಆಸ್ಟ್ರೇಲಿಯಾದ ಆಕ್ರಮಣಕಾರಿ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರನ್ನು ಪ್ರಸ್ತಾಪಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಬ್ರಿಯಾನ್ ಡೆವೈನ್​ನನ್ನು ಈಗ ‘ಕ್ಲಿಕ್ಕಿ ಪಾಂಟಿಂಗ್’ ಎಂದು ಟ್ರೋಲ್ ಮಾಡಲಾಗುತ್ತಿದೆ.

ಅಂಕಿ ಅಂಶ ನೋಡಿ ಶಾಕ್!

ಬ್ರಿಯಾನ್ ಡೆವೈನ್ ಅವರ ಕಳ್ಳಾಟ ಬೆಳಕಿಗೆ ಬರುತ್ತಿದ್ದಂತೆ ಇಂಟರ್ನೆಟ್ ವಿಶ್ಲೇಷಕರು ಈತನ ಹಳೆಯ ಪಂದ್ಯಗಳ ದಾಖಲೆಗಳನ್ನು ಕೆದಕಿದಿದ್ದಾರೆ. ಈ ವೇಳೆ ಆಘಾತಕಾರಿ ಸತ್ಯ ಹೊರಬಿದ್ದಿದೆ…

  • ಬ್ರಿಯಾನ್ ಪಂದ್ಯದಲ್ಲಿದ್ದಾಗ ಸಾಲ್ಟ್‌ಬರ್ನ್ ತಂಡವು 13 ಪಂದ್ಯಗಳಲ್ಲಿ ಬರೋಬ್ಬರಿ 39 ವಿಕೆಟ್‌ಕೀಪರ್ ಕ್ಯಾಚ್‌ಗಳನ್ನು ಪಡೆದಿತ್ತು.
  • ಬ್ರಿಯಾನ್ ಡೆವೈನ್ ಇಲ್ಲದ 7 ಪಂದ್ಯಗಳಲ್ಲಿ ವಿಕೆಟ್ ಕೀಪರ್ ಪಡೆದಿದ್ದು ಕೇವಲ 5 ಕ್ಯಾಚ್‌ಗಳು ಮಾತ್ರ!

ಒಂದು ಪಂದ್ಯದಲ್ಲಂತೂ ವಿಕೆಟ್ ಕೀಪರ್ ಬರೋಬ್ಬರಿ 8 ಕ್ಯಾಚ್‌ಗಳನ್ನು ಹಿಡಿದು ದಾಖಲೆ ಬರೆದಿದ್ದರು. ಇದೆಲ್ಲವೂ ಈ ಚಿಟಿಕಿ ತಂತ್ರದ ಭಾಗವಾಗಿತ್ತು ಎಂಬುದು ಈಗ ಸಾಬೀತಾಗಿದೆ.

ಪ್ರಾಯೋಜಕತ್ವ ವಾಪಸ್!

ಈ ವಂಚನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ಸಾಲ್ಟ್‌ಬರ್ನ್ ತಂಡದ ಪ್ರಾಯೋಜಕರಾದ ‘ಸ್ಪೈಸಸ್’ (Spices) ಹೆಸರಿನ ಸ್ಥಳೀಯ ಭಾರತೀಯ ರೆಸ್ಟೋರೆಂಟ್, ಬ್ರಿಯಾನ್ ಡೆವೈನ್ ಹಾಗೂ ತಂಡಕ್ಕೆ ನೀಡಿದ್ದ ಪ್ರಾಯೋಜಕತ್ವವನ್ನು ತಕ್ಷಣವೇ ಹಿಂಪಡೆದಿದೆ. ಕ್ರೀಡಾ ಸ್ಫೂರ್ತಿಗೆ ಧಕ್ಕೆ ತರುವ ಇಂತಹ ನಡವಳಿಕೆಯನ್ನು ನಾವು ಬೆಂಬಲಿಸುವುದಿಲ್ಲ ಎಂದು ರೆಸ್ಟೋರೆಂಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಹೊಸ ಫೀಲ್ಡಿಂಗ್ ಕೋಚ್ ನೇಮಕ!

ತನಿಖೆ ಮತ್ತು ಜಾಗತಿಕ ಆಕ್ರೋಶ:

ಪ್ರಸ್ತುತ ನಾರ್ತ್ ಯಾರ್ಕ್‌ಶೈರ್ ಮತ್ತು ಸೌತ್ ಡರ್ಹಾಮ್ (NYSD) ಕ್ರಿಕೆಟ್ ಲೀಗ್ ಈ ಬಗ್ಗೆ ಅಧಿಕೃತ ದೂರನ್ನು ಸ್ವೀಕರಿಸಿದ್ದು, ಪೂರ್ಣ ಪ್ರಮಾಣದ ತನಿಖೆ ಆರಂಭಿಸಿದೆ. ನಿಯಮ ಉಲ್ಲಂಘನೆಗಾಗಿ ಬ್ರಿಯಾನ್ ಡೆವೈನ್​ಗೆ ದೀರ್ಘಾವಧಿಯ ನಿಷೇಧ ಹೇರುವ ಸಾಧ್ಯತೆಯಿದೆ.

Published On – 2:13 pm, Wed, 29 July 26

Source link

ಐಷಾರಾಮಿ ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುವುದರ ಹಿಂದಿದೆ ಈ ಕಾರಣ – Kannada News | Why do luxury hotels have glass bathrooms?

ನೀವು ರೆಸಾರ್ಟ್, ಫೈವ್ ಸ್ಟಾರ್ ಹಾಗೂ ಐಷಾರಾಮಿ ಹೋಟೆಲ್‌ಗೆ (Luxury hotel)  ಹೋಗಿದ್ದರೆ ಅಲ್ಲಿ ಗಾಜಿನ ಬಾತ್ ರೂಮ್ ಇರುವುದನ್ನು ನೋಡಿರಬಹುದು. ರೂಮ್‌ನ ಅಂದ ಹೆಚ್ಚಿಸಲು ಸ್ನಾನಗೃಹವನ್ನು ಗಾಜಿನಿಂದ ಮಾಡಿರುತ್ತಾರೆ ಎಂದು ಕೊಳ್ಳುತ್ತೇವೆ. ಆದರೆ ಸ್ಟೈಲಿಶ್ ಲುಕ್‌ಗೆ ಮಾತ್ರವಲ್ಲ ಸ್ನಾನಗೃಹಕ್ಕೆ ಗಾಜನ್ನು ಅಳವಡಿಸಿಕೊಂಡಿರುವುದರ ಹಿಂದೆ ಕೆಲವು ಕಾರಣಗಳು ಇವೆ. ಗಾಜಿನ ಬಳಕೆಯಿಂದ ನೈಸರ್ಗಿಕ ಬೆಳಕು ಕೊಠಡಿಯೊಳಗೆ ಬರಲು ಸಹಕಾರಿಯಾಗಿದೆ.

 ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುವುದು ಏಕೆ?

ಆಧುನಿಕ ಒಳಾಂಗಣ ವಿನ್ಯಾಸದಲ್ಲಿ ಸ್ವಚ್ಛವಾದ ಗಾಜಿನ ವಿಭಾಗಗಳು ಫ್ರೇಮ್‌ಲೆಸ್ ವಿನ್ಯಾಸಗಳು, ಗೌಪ್ಯತೆಗಾಗಿ ಫ್ರಾಸ್ಟೆಡ್ ಅಥವಾ ಟಿಂಟೆಡ್ ಗ್ಲಾಸ್ ಗಳನ್ನು ಬಳಸಲಾಗುತ್ತದೆ. ಐಷಾರಾಮಿ ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುವುದರಿಂದ ರೂಮ್ ದೊಡ್ಡದಾಗಿ ಹಾಗೂ ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ.

ಇದನ್ನೂ ಓದಿ: ಇರುವೆಗಳು ಸಾಲಾಗಿ ಚಲಿಸುವುದರ ಹಿಂದಿದೆ ಈ ಕಾರಣ

ಮಲಗುವ ಕೋಣೆ ಹಾಗೂ ಬಾತ್‌ರೂಮ್ ದೊಡ್ಡದಾಗಿ ಕಾಣಿಸುವುದರ ಜತೆಗೆ ಈ ಕಿಟಕಿಯಿಂದ ಬರುವ ನೈಸರ್ಗಿಕ ಬೆಳಕು ನೇರವಾಗಿ ಬಾತ್‌ರೂಮ್‌ಗೆ ಪ್ರವೇಶಿಸುತ್ತದೆ. ಹೀಗಾಗಿ ವಿದ್ಯುತ್ ಉಳಿತಾಯವಾಗುತ್ತದೆ. ಅದಲ್ಲದೇ ಈ ಸಾಮಾನ್ಯವಾಗಿ ಗೋಡೆಗಳಿಗೆ ಹೋಲಿಸಿದರೆ ಗಾಜುಗಳನ್ನು ಸ್ವಚ್ಛಗೊಳಿಸುವುದು ಸುಲಭ ಹಾಗೂ ಇವುಗಳಲ್ಲಿ ತೇವಾಂಶ ಬೇಗ ಒಣಗುತ್ತವೆ. ಇನ್ನು ಹೈಜೀನ್‌ ಮಟ್ಟವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದಾಗಿರುವುದರಿಂದ  ಫೈವ್‌ ಸ್ಟಾರ್‌ ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ಜಲ ವಿವಾದ: CWRC ಆದೇಶದ ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸಲು ಕರ್ನಾಟಕ ನಿರ್ಧಾರ – Kannada News | Cauvery Row: Karnataka Refuses to Release Water Citing Deficit; To Appeal Against CWRC Order Before CWMA

CWMAಗೆ ಮೇಲ್ಮನವಿ ಸಲ್ಲಿಸಲು ಕರ್ನಾಟಕ ನಿರ್ಧಾರImage Credit source: Tv9 Kannada

ಬೆಂಗಳೂರು, ಜುಲೈ 29: ಕರ್ನಾಟಕದಲ್ಲಿಯೇ ಭೀಕರ ಬರದ ಸ್ಥಿತಿ ಇರುವ ನಡುವೆ ಕೆಆರ್​​ಎಸ್​​ ಜಲಾಶಯದಿಂದ ತಮಿಳುನಾಡಿಗೆ ಮುಂದಿನ‌ 15 ದಿನ 3,500 ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಸೂಚಿಸಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ನೀರು ಬಿಟ್ಟರೆ ತೀವ್ರ ಹೋರಾಟ ಎಚ್ಚರಿಕೆಯನ್ನು ರೈತರು ಸರ್ಕಾರಕ್ಕೆ ನೀಡಿದ್ದಾರೆ. ಹೀಗಾಗಿ ವಿಧಾನಸೌಧದ ಸಚಿವರ ಕೊಠಡಿಯಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ ನಡೆಸಿದ್ದು, ಮೀಟಿಂಗ್​​ನಲ್ಲಿ CWRC ಆದೇಶದ ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ಮಹತ್ವದ ಚರ್ಚೆ

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರ ಸಂಬಂಧ ಒಂದು ಕಡೆ ದೆಹಲಿಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಭೆ ಮಾಡಿದ್ದರೆ, ಇತ್ತ ವಿಧಾನಸೌಧದಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗರೆಡ್ಡಿ ಮೀಟಿಂಗ್​​ ನಡೆಸಿದ್ದರು. ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು, ಕಾವೇರಿ ಜಲಾನಯನದ ಅಧಿಕಾರಿಗಳು ಹಾಗೂ ವಕೀಲರ ಜೊತೆ ಮಹತ್ವದ ಚರ್ಚೆ ನಡೆದಿದ್ದು, KRS ಡ್ಯಾಂನಲ್ಲಿ ಹಾಲಿ ಲಭ್ಯವಿರುವ ನೀರಿನ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ

ಸಭೆ ಮುಕ್ತಾಯದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ರಾಮಲಿಂಗಾರೆಡ್ಡಿ, ಸದ್ಯ 46 ಟಿಎಂಸಿ ನೀರು ಮಾತ್ರ ಲಭ್ಯವಿದೆ, ಇದರಲ್ಲಿ 10 ಜಿಲ್ಲೆಗೆ ಕುಡಿಯೋಕೆ 12 ಟಿಎಂಸಿ ನೀರು ಬೇಕಾಗುತ್ತೆ. ಹೀಗಾಗಿ CWRC ಆದೇಶ ಪಾಲಿಸಲು ಸಾಧ್ಯವಿಲ್ಲದ ಕಾರಣ, ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಿದ್ದೇವೆ. ಇಂದೇ ಅದನ್ನು ಸಲ್ಲಿಸುತ್ತೇವೆ. ಅವರ ಲೆಕ್ಕದ ಪ್ರಕಾರ 39 ಟಿಎಂಸಿ ನೀರು ಬಿಡಬೇಕಿತ್ತು. ಸುಗಮವಾಗಿ ಮಳೆ ಬಂದಿದ್ರೆ ಮಾತ್ರ ಕೇಳಿದಷ್ಟು ಕೊಡಬೇಕಿತ್ತು. ಹೀಗಾಗಿನಮ್ಮ ವಾದವನ್ನ ಶ್ರೀರಾಮಯ್ಯನವರು ಮುಂದುವರಿಸುತ್ತಾರೆ. ನಮ್ಮಲ್ಲೇ ಶೇ. 66ರಷ್ಟು ಮಳೆ ಕಡಿಮೆ ಆಗಿದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version