2025ರಲ್ಲಿ 47 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ದಂಪತಿ – Kannada News | Content Creators’ Annual Spending Goes Viral: Bengaluru Duo’s Rs 47 Lakh Budget

ಬೆಂಗಳೂರು, ಜ.5: ಬೆಂಗಳೂರು ಮೂಲದ ಕಂಟೆಂಟ್ ಕ್ರಿಯೇಟರ್ ದಂಪತಿ (Bengaluru couple expenses) ತಮ್ಮ ವರ್ಷದ ಖರ್ಚಿನ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ವಾರ್ಷಿಕ ಖರ್ಚಿನ ಬಗ್ಗೆ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಪ್ರಕೃತಿ ಅರೋರಾ ಮತ್ತು ಆಶಿಶ್ ಕುಮಾರ್ ಅವರು ಕಳೆದ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬಾಡಿಗೆ ಮತ್ತು ಪ್ರಯಾಣದಿಂದ ಹಿಡಿದು ಫಿಟ್‌ನೆಸ್ ಮತ್ತು ಶಾಪಿಂಗ್‌ವರೆಗೆ ಎಷ್ಟು ಖರ್ಚು ಮಾಡಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಇವರ ವಾರ್ಷಿಕ ಬಾಡಿಗೆ 5 ಲಕ್ಷ ರೂ. ಜತೆಗೆ ಫಿಟ್‌ನೆಸ್‌ ಕೂಡ ಖರ್ಚು ಮಾಡಿದ್ದಾರೆ. ಇದಕ್ಕಾಗಿ ವೈಯಕ್ತಿಕ ಟ್ರೈನರ್​​​ನ್ನು ಕೂಡ ನೇಮಕಾ ಮಾಡಿಕೊಂಡಿದ್ದಾರೆ. ಇದಕ್ಕಾಗಿ ವರ್ಷಕ್ಕೆ ಒಟ್ಟು 1 ಲಕ್ಷ ರೂ. ಖರ್ಚಾಗುತ್ತಿತ್ತು. ದಿನಸಿ, ಸಲಾಡ್‌ಗಳನ್ನು ಆರ್ಡರ್ ಮಾಡಿ ಮತ್ತು ಹೊರಗೆ ತಿನ್ನುವುದರಿಂದ ವಾರ್ಷಿಕ 2.5 ಲಕ್ಷ ರೂ ಖರ್ಚಾಗಿದೆ ಎಂದು ಹೇಳಿದ್ದಾರೆ. ಇದಲ್ಲದೆ, ಮನೆ ಕೆಲಸದವರಿಗೆ, ಅಪ್ಲಿಕೇಶನ್ ಚಂದಾದಾರಿಕೆಗಳು ಒಟ್ಟು 1.5 ಲಕ್ಷ ರೂ ಖರ್ಚು ಮಾಡಲಾಗಿದೆ. ಆರೈಕೆ ಮತ್ತು ಕ್ಯಾಬ್ ಪ್ರಯಾಣದಂತಹ ಇತರ ವೆಚ್ಚಗಳು ಒಟ್ಟು 1.3 ಲಕ್ಷ ಖರ್ಚು ಮಾಡಿದ್ದಾರೆ.

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

ಇನ್ನು ಈ ದಂಪತಿ ಹೆಚ್ಚು ಖರ್ಚು ಮಾಡಿದ್ದು ಪ್ರವಾಸಕ್ಕೆ, ವರ್ಷದಲ್ಲಿ 63 ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ. 2025ರಲ್ಲಿ 13 ದೇಶಗಳಿಗೆ ಭೇಟಿ ನೀಡಿದ್ದಾರೆ. ಹೋಟೆಲ್‌ಗಳು ಮತ್ತು ಏರ್ ಬೆಡ್ ಅಂಡ್ ಬ್ರೇಕ್‌ಫಾಸ್ಟ್ ಗಳಲ್ಲಿ 121 ರಾತ್ರಿ ಕಳೆದಿದ್ದಾರೆ. ಒಟ್ಟು 29 ಲಕ್ಷ ಖರ್ಚು ಮಾಡಿದ್ದಾರೆ. ಕಂಟೆಂಟ್ ಕ್ರಿಯೇಟರ್ ಆಗಿರುವ ಈ ದಂಪತಿ ಇದಕ್ಕಾಗಿ 2.5 ಲಕ್ಷ ರೂ ಖರ್ಚು ಮಾಡಿದ್ದಾರೆ. ಇದರ ಜತೆಗೆ ಇತರ ವಸ್ತುಗಳಿಗಾಗಿ 4.5 ಲಕ್ಷ ರೂ ಖರ್ಚು ಮಾಡಿದ್ದಾರೆ. 2025ರಲ್ಲಿ ಅವರ ವಾರ್ಷಿಕ ಖರ್ಚು ಸುಮಾರು 47 ಲಕ್ಷ ರೂ. ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ಯೋಜನೆಗೆ ಕೇಂದ್ರದ ಅನುಮೋದನೆ ಸಿಕ್ಕರೆ ಬೆಂಗಳೂರಿನಿಂದ ಪುಣೆಗೆ ತಲುಪಲು 7 ಗಂಟೆ ಸಾಕು

ಇನ್ನು ಇವರು ಈ ಪೋಸ್ಟ್​​ನ್ನು ನೋಡಿ ಸೋಶಿಯಲ್​​​ ಮೀಡಿಯಾದಲ್ಲಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಬ್ಬರು ತಿಂಗಳಿಗೆ ಎಷ್ಟು ದುಡಿಯುತ್ತೀರಾ ಎಂದು ಒಬ್ಬರು ಕೇಳಿದ್ದಾರೆ. ಇನ್ನೊಬ್ಬರು ನನಗು ಪ್ರವಾಸ ಮಾಡುವ ಆಸೆ ಇದೆ. ಆದ್ರೆ ಗಳಿಕೆ ಕಡಿಮೆ ಎಂದು ಹೇಳಿದ್ದಾರೆ. ಹಣ ಗಳಿಸಿ ಏನ್​​ ಮಾಡೋದು, ಇರುವಷ್ಟು ದಿನ ಸುಖವಾಗಿರುವ ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಪಿಎಫ್ ಅಕೌಂಟ್​ನಿಂದ ಎಲ್​​ಐಸಿ ಪ್ರೀಮಿಯಮ್ ಕಟ್ಟುವುದು ಹೇಗೆ? ಇಲ್ಲಿದೆ ಡೀಟೇಲ್ಸ್ – Kannada News | Facility to pay LIC policy premium using EPF account

ಇಪಿಎಫ್ ಅಕೌಂಟ್​ನಲ್ಲಿರುವ ಹಣವನ್ನು ಹಿಂಪಡೆಯುವುದು ಈಗ ಸುಲಭ. ಇದೇ ವೇಳೆ, ಇಪಿಎಫ್ ಹಣವನ್ನು ಎಲ್​ಐಸಿ ಪಾಲಿಸಿಯ ಪ್ರೀಮಿಯಮ್ ಕಟ್ಟಲು ಬಳಸುವ ಅವಕಾಶ ಇದೆ. ಇಪಿಎಫ್ ಸ್ಕೀಮ್​ನ ಪ್ಯಾರಾಗ್ರಾಫ್ 68ರ ಅಡಿಯಲ್ಲಿ ಈ ಸೌಲಭ್ಯ ಒದಗಿಸಲಾಗಿದೆ. ಇಪಿಎಫ್ (EPFO) ಮೂಲಕ ಒಂದೇ ಎಲ್​ಐಸಿ ಪ್ರೀಮಿಯಮ್ ಕಟ್ಟಬಹುದು, ಅಥವಾ ಇಡೀ ಪಾಲಿಸಿ ಅವಧಿಗೆ ಇಪಿಎಫ್​ನಿಂದ ಪ್ರೀಮಿಯಮ್ ಹಣ ಕಾಲ ಕಾಲಕ್ಕೆ ಸ್ವಯಂ ಆಗಿ ಸಂದಾಯವಾಗುವಂತೆ ಮಾಡಬಹುದು.

ಎಲ್​ಐಸಿ ಪಾಲಿಸಿ ನಿಮ್ಮ ಹೆಸರಲ್ಲೇ ಇರಬೇಕು…

ಇಪಿಎಫ್ ಅಕೌಂಟ್​ನಿಂದ ಎಲ್​ಐಸಿ ಪ್ರೀಮಿಯಮ್ ಹಣ ಪಾವತಿಸಲು ಕೆಲ ಮಾನದಂಡಗಳು ಮತ್ತು ನಿಯಮಗಳಿವೆ:

  • ನಿಮ್ಮಲ್ಲಿ ಸಕ್ರಿಯವಾದ ಇಪಿಎಫ್ ಅಕೌಂಟ್ ಇರಬೇಕು
  • ಇಪಿಎಫ್ ಅಕೌಂಟ್​ನಲ್ಲಿ ಕನಿಷ್ಠ ಎರಡು ತಿಂಗಳ ವೇತನದಷ್ಟಾದರೂ ಬ್ಯಾಲನ್ಸ್ ಇರಬೇಕು.
  • ಎಲ್​ಐಸಿ ಪಾಲಿಸಿಯು ನಿಮ್ಮ ಹೆಸರಲ್ಲೇ ಇರಬೇಕು.
  • ಇನ್ಷೂರೆನ್ಸ್ ಪಾಲಿಸಿಯು ಎಲ್​ಐಸಿಯದ್ದೇ ಆಗಿರಬೇಕು. ಬೇರೆ ಖಾಸಗಿ ಕಂಪನಿಗಳ ಇನ್ಷೂರೆನ್ಸ್ ಪಾಲಿಸಿಗೆ ಅನ್ವಯ ಆಗಲ್ಲ.

ಇದನ್ನೂ ಓದಿ: ಆಸ್ತಿ ಮಾರಾಟ; ತೆರಿಗೆ ಉಳಿಸಲು ಸೆಕ್ಷನ್ 54 ಮತ್ತು 54ಎಫ್ ಅವಕಾಶ ಬಳಸಿ

ಇಪಿಎಫ್​ನಿಂದ ಎಲ್​ಐಸಿ ಪ್ರೀಮಿಯಮ್ ಕಟ್ಟುವುದು ಹೇಗೆ?

  • ಇಪಿಎಫ್​ಒಗೆ ಫಾರ್ಮ್-14 ಅನ್ನು ಸಲ್ಲಿಸಿದರೆ ಇದರ ಪ್ರಕ್ರಿಯೆ ಆರಂಭವಾಗುತ್ದೆ.
  • ಇಪಿಎಫ್​ಒ ವೆಬ್​ಸೈಟ್​ಗೆ ಹೋಗಿ ಯುಎಎನ್ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಬೇಕು.
  • ನಂತರ ಕೆವೈಸಿ ಸೆಕ್ಷನ್​ಗೆ ಹೋಗಿ ಎಲ್​ಐಸಿ ಪಾಲಿಸಿ ಎಂಬುದನ್ನು ಆಯ್ಕೆ ಮಾಡಿ.
  • ನಿಮ್ಮ ಎಲ್​ಐಸಿ ಪಾಲಿಸಿ ನಂಬರ್ ಮತ್ತಿತರ ವಿವರವನ್ನು ತುಂಬಿಸಿ, ವೆರಿಫಿಕೇಶನ್ ಪಡೆಯಿರಿ.
  • ಇಪಿಎಫ್​ಒದಲ್ಲಿ ನಿಮ್ಮ ಎಲ್​ಐಸಿ ಪಾಲಿಸಿ ಯಶಸ್ವಿಯಾಗಿ ಲಿಂಕ್ ಆದಲ್ಲಿ, ನಿಗದಿತ ದಿನದಂದು ಪಾಲಿಸಿ ಹಣ ತನ್ನಂತಾನೆ ಪಾವತಿಯಾಗುತ್ತದೆ.

ವರ್ಷದಲ್ಲಿ ಹೆಚ್ಚು ಮೊತ್ತದ ಪ್ರೀಮಿಯಮ್ ಕಟ್ಟುವ ಅಗತ್ಯ ಇದ್ದಾಗ ಈ ಸೌಲಭ್ಯ ಬಹಳ ಉಪಯುಕ್ತ ಎನಿಸುತ್ತದೆ. ಅದರಲ್ಲೂ ಹೆಚ್ಚಾಗಿ, ಪ್ರೀಮಿಯಮ್ ಕಟ್ಟಲು ನೀವು ಸಾಲ ಮಾಡಬೇಕಾಗಿ ಬರುವಂತಹ ಸಂದರ್ಭ ಇದ್ದರೆ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕೀಮ್​ಗಳ ಬಡ್ಡಿದರದಲ್ಲಿ ಇಳಿಕೆ ಇಲ್ಲ; ಇಲ್ಲಿದೆ ಜನವರಿ-ಮಾರ್ಚ್ ಕ್ವಾರ್ಟರ್​ನ ಬಡ್ಡಿದರಗಳ ಪಟ್ಟಿ

ಇಪಿಎಫ್ ಎಂಬುದು ರಿಟೈರ್ಮೆಂಟ್ ಅನುಕೂಲಕ್ಕೆಂದು ಇರುವ ಒಂದು ಸ್ಕೀಮ್. ಇದರಲ್ಲಿರುವ ಹಣವನ್ನು ನಿವೃತ್ತಿಯವರೆಗೂ ಉಳಿಸಿಕೊಳ್ಳುವುದು ಬಹಳ ಮುಖ್ಯ. ಉತ್ತಮ ವಾರ್ಷಿಕ ಬಡ್ಡಿ ಸಿಗುತ್ತದೆ. ಅನಿವಾರ್ಯ ಎಂದ ಸಂದರ್ಭದಲ್ಲಿ ಮಾತ್ರ ಇಪಿಎಫ್ ಹಣ ಹಿಂಪಡೆಯುವುದು ಜಾಣತನ. ಹೀಗಾಗಿ, ಎಲ್​ಐಸಿ ಪಾಲಿಸಿ ಪ್ರೀಮಿಯಮ್ ಕಟ್ಟಲೋ ಅಥವಾ ಮತ್ತೊಂದು ಕಾರಣಕ್ಕೋ ಇಪಿಎಫ್ ಹಣ ವಿತ್​ಡ್ರಾ ಮಾಡುವ ಮುನ್ನ ಯೋಚಿಸುವುದು ಉತ್ತಮ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕದಲ್ಲಿ ಭಾರತೀಯ ಯುವತಿಯ ನಿಗೂಢ ಸಾವು; ಕೊಲೆ ಮಾಡಿ ಭಾರತಕ್ಕೆ ಓಡಿಬಂದನಾ ಬಾಯ್​ಫ್ರೆಂಡ್​? – Kannada News | Indian Woman Nikitha Godishala Found Dead In US apartment Ex Boyfriend Fled To India

ನ್ಯೂಯಾರ್ಕ್, ಜನವರಿ 5: ಅಮೆರಿಕದಲ್ಲಿ ವಾಸಿಸುತ್ತಿದ್ದ 27 ವರ್ಷದ ಭಾರತೀಯ ಯುವತಿಯಾದ ನಿಕಿತಾ ರಾವ್ ಗೋಡಿಶಾಲ ಎಂಬಾಕೆಯನ್ನು ಮೇರಿಲ್ಯಾಂಡ್‌ನಲ್ಲಿರುವ ತನ್ನ ಮಾಜಿ ಪ್ರಿಯಕರನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪೊಲೀಸರು ಆಕೆಯ ಮಾಜಿ ಪ್ರೇಮಿಯನ್ನೇ ಪ್ರಮುಖ ಶಂಕಿತ ಎಂದು ಹೆಸರಿಸಿದ್ದಾರೆ. ಆತ ಅಮೆರಿಕ (United States) ಬಿಟ್ಟು ಭಾರತಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ನಿಕಿತಾ ಗೋಡಿಶಾಲ ಜನವರಿ 2ರಂದು ನಾಪತ್ತೆಯಾಗಿದ್ದಳು. ಮರುದಿನ ಆಕೆಯ ಶವ ಪತ್ತೆಯಾಗಿತ್ತು. ಆಕೆಯ ಸಾವಿನ ನಂತರ ಆಕೆಯ ಮಾಜಿ ಪ್ರಿಯಕರನಾದ 27 ವರ್ಷದ ಅರ್ಜುನ್ ಶರ್ಮಾ ಕಾಣೆಯಾಗಿದ್ದಾನೆ. ಮೇರಿಲ್ಯಾಂಡ್‌ನ ಹೊವಾರ್ಡ್ ಕೌಂಟಿಯಲ್ಲಿರುವ ಅರ್ಜುನ್​ನ ಅಪಾರ್ಟ್‌ಮೆಂಟ್‌ನಲ್ಲಿಯೇ ಆಕೆ ಸಾವನ್ನಪ್ಪಿದ್ದಾಳೆ.

ಅರ್ಜುನ್ ಶರ್ಮಾ ಭಾರತಕ್ಕೆ ಮರಳಿದ್ದಾನೆ ಎಂದು ಪೊಲೀಸ್ ವರದಿ ತಿಳಿಸಿದೆ. ಜನವರಿ 3ರಂದು ಹೊವಾರ್ಡ್ ಕೌಂಟಿ ಪೊಲೀಸರು ಅರ್ಜುನ್​ನ ಅಪಾರ್ಟ್​​ಮೆಂಟ್​​ನಿಂದ ನಿಕಿತಾಳ ಶವವನ್ನು ವಶಪಡಿಸಿಕೊಂಡಿದ್ದರು. ನಿಕಿತಾ ಕಾಣೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಅರ್ಜುನ್​ನನ್ನು ವಿಚಾರಣೆ ನಡೆಸಿದ್ದರು. ಆಗ ಆತ ಹೊಸ ವರ್ಷದಂದು ತಾನು ಕೊನೆಯ ಬಾರಿ ಆಕೆಯನ್ನು ತನ್ನದೇ ಫ್ಲಾಟ್​​​ನಲ್ಲಿ ನೋಡಿದ್ದಾಗಿ ಹೇಳಿದ್ದ. ಮತ್ತೆ ಆತನನ್ನು ವಿಚಾರಣೆ ನಡೆಸಬೇಕೆನ್ನುವಷ್ಟರಲ್ಲಿ ಆತ ಭಾರತಕ್ಕೆ ಹಾರಿದ್ದ.

ಇದನ್ನೂ ಓದಿ: ಮದುವೆಗೆ ಒಪ್ಪದಿದ್ದಕ್ಕೆ ಮಹಿಳೆ ಕೊಲೆ ಕೇಸ್​​ಗೆ ಟ್ವಿಸ್ಟ್​​: ಆರೋಪಿ ಕೂಡ ನೇಣಿಗೆ ಶರಣು

ಇದರಿಂದ ಅನುಮಾನಗೊಂಡ ಪೊಲೀಸರು ಆತನ ಫ್ಲಾಟ್​ ಪರಿಶೀಲಿಸಿದಾಗ ಅಲ್ಲಿ ಚಾಕುವಿನಿಂದ ಇರಿತಕ್ಕೊಳಗಾದ ಗಾಯಗಳಿರುವ ನಿಕಿತಾಳ ಶವ ಪತ್ತೆಯಾಗಿತ್ತು. ತಕ್ಷಣ ಪೊಲೀಸರು ಅರ್ಜುನ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ್ದರು. ಅಮೆರಿಕದ ತನಿಖಾಧಿಕಾರಿಗಳು ಅರ್ಜುನ್ ಶರ್ಮಾ ವಾಸಿಸುತ್ತಿದ್ದ ಬಾಡಿಗೆ ಅಪಾರ್ಟ್ಮೆಂಟ್​ನ ಬಾಗಿಲುಗಳನ್ನು ಮುರಿದು ಆ ಯುವತಿಯ ಶವವನ್ನು ವಶಕ್ಕೆ ಪಡೆದರು. ಆಕೆಯನ್ನು ಹಲವಾರು ಬಾರಿ ಇರಿದು ಕೊಲ್ಲಲಾಗಿತ್ತು.

ಇದನ್ನೂ ಓದಿ: ದೆವ್ವ ಹಿಡಿದಿದೆ ಎಂದು ಕಟ್ಟಿಗೆಯಿಂದ ಹೊಡೆದು ಕೊಲೆ: ಕಲಬುರಗಿ ಮೂಲದ ಮಹಿಳೆ ಮಹಾರಾಷ್ಟ್ರದಲ್ಲಿ ಸಾವು

ನಿಕಿತಾ ಗೋಡಿಶಾಲ ಯಾರು?:

ಭಾರತದ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ನಿಕಿತಾ ಫಾರ್ಮಸಿ ಪದವಿಯನ್ನು ಪಡೆದಿದ್ದಾಳೆ. ಆಕೆ ಬಾಲ್ಟಿಮೋರ್ ಕೌಂಟಿಯ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಿಂದ ಆರೋಗ್ಯ ಐಟಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಅಮೆರಿಕಕ್ಕೆ ಹೋಗಿದ್ದಳು. ಆಕೆ ವೇಡಾ ಹೆಲ್ತ್‌ನಲ್ಲಿ ಡೇಟಾ ಮತ್ತು ಸ್ಟ್ರಾಟಜಿ ವಿಶ್ಲೇಷಕಳಾಗಿ ಕೆಲಸ ಮಾಡುತ್ತಿದ್ದಳು. ಆಕೆ ಇಂಗ್ಲಿಷ್, ಹಿಂದಿ ಮತ್ತು ತೆಲುಗು ಭಾಷೆಗಳನ್ನು ಮಾತನಾಡುತ್ತಿದ್ದಳು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 5:22 pm, Mon, 5 January 26

Source link

Bengaluru: ರಸ್ತೆ ಬದಿ ಕಸ ಎಸೆದ ಯುವತಿಗೆ ಸ್ಥಳೀಯರಿಂದ ಸಖತ್​ ಕ್ಲಾಸ್ – Kannada News | Bengaluru Littering: Jayanagar Woman Confronted for Dumping Garbage; Video Viral

ಬೆಂಗಳೂರು, ಜನವರಿ 05: ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಹುಡುಕಿ ಹುಡುಕಿ ದಂಡ ವಿಧಿಸಲಾಗುತ್ತಿದೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತ್ಯಾಜ್ಯ ಎಸೆಯುವವರ ಮನೆ ಮುಂದೆಯೇ ಲೋಡ್​​ಗಟ್ಟಲೆ ಕಸ ಸುರಿದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​​ ಮಾಡಿ ಅವರಿಗೆ ನಾಚಿಕೆ ಉಂಟು ಮಾಡುವ ಕೆಲಸವನ್ನೂ ಮಾಡಿದೆ. ಹೀಗಿದ್ದರೂ ಬೆಂಗಳೂರು ಮಂದಿ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ನೀವೇನಾದ್ರೂ ಮಾಡ್ಕೊಳ್ಳಿ, ನಾವು ಮಾತ್ರ ಹೀಗೆ ಇರೋದು ಎಂಬ ರೀತಿ ಕೆಲವರು ವರ್ತಿಸುತ್ತಿದ್ದಾರೆ. ಈ ನಡುವೆ ಜನವಸತಿ ಪ್ರದೇಶದಲ್ಲಿ ಕಸ ಎಸೆದು ಹೋಗುತ್ತಿದ್ದ ಯುವತಿಗೆ ಸ್ಥಳೀಯರೇ ಕ್ಲಾಸ್​​ ತೆಗೆದುಕೊಂಡ ವಿಡಿಯೋವೊಂದು ವೈರಲ್​​ ಆಗಿದೆ.

ಬುದ್ಧಿ ಹೇಳಿದವರ ಜೊತೆಗೇ ಯುವತಿ ವಾಗ್ವಾದ

ಜಯನಗರದ 8ನೇ ಅಡ್ಡ ರಸ್ತೆಯ ಮಾರುತಿ ಲೇಔಟ್​​ನಲ್ಲಿ ಓರ್ವ ಯುವತಿ ತನ್ನ ಸ್ಕೂಟರ್​​ನಲ್ಲಿ ರಾಶಿ ರಾಶಿ ಕಸ ತೆಗೆದುಕೊಂಡು ಬಂದು ಪಕ್ಕದ ಏರಿಯಾದ ಜನವಸತಿ ಪ್ರದೇಶದ ಬಳಿ ಸುರಿದಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಇಲ್ಲಿ ಕಸ ಹಾಕಬೇಡಿ ಎಂದು ಮನವರಿಕೆ ಮಾಡಿದ್ದಾರೆ. ರೆಸಿಡೆನ್ಸಿಯಲ್ ಏರಿಯಾದಲ್ಲಿ ಈ ರೀತಿ ಕಸ ಹಾಕಿ ಹೋದ್ರೆ ಇಲ್ಲಿನ ನಿವಾಸಿಗಳಿಗೆ ಬಹಳ ಸಮಸ್ಯೆ ಆಗುತ್ತೆ ಎಂದು ಹೇಳಿದರೂ ಯುವತಿ ಮಾತ್ರ ಯಾವುದನ್ನೂ ಲೆಕ್ಕಿಸಿಲ್ಲ. ಬದಲಾಗಿ ತನಗೆ ಬುದ್ಧಿ ಹೇಳಿದವರ ಜೊತೆಗೇ ವಾಗ್ವಾದಕ್ಕೆ ಇಳಿದಿದ್ದಾಳೆ.

ಇದನ್ನೂ ಓದಿ:  ಕಸ ಎಸೆದಿದ್ದಲ್ಲದೆ ನಗರ ಸಭೆ ಸಿಬ್ಬಂದಿಗೇ ಆವಾಜ್​; ಯುವಕನ ದ್ವಿಚಕ್ರ ವಾಹನ ​ವಶಕ್ಕೆ

ಸ್ಥಳೀಯರ ಮಾತಿಗೆ ಕೋಪಗೊಂಡ ಯುವತಿ ನಾನು ಇಲ್ಲೇ ಕಸವನ್ನು ಹಾಕೋದು, ಯಾರು ಏನು ಬೇಕಾದರೂ ಮಾಡಿಕೊಳ್ಲಿ ಎಂದು ಆವಾಜ್​​ ಹಾಕಿದ್ದಾಳೆ. ಈ ವೇಳೆ ನೀವು ಓದಿದ್ದೀರಲ್ವಾ? ನಿಮಗೆ ಇಷ್ಟೂ ಬುದ್ಧಿ ಇಲ್ವಾ ಎಂದು ಸ್ಥಳಿಯರು ಆಕೆಯನ್ನು ಪ್ರಶ್ನಿಸಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತೀವಿ ಅಂತಲೂ ಹೇಳಿದ್ದಾರೆ. ಹೀಗಿದ್ದರೂ ತಲೆ ಕೆಡಿಸಿಕೊಳ್ಳದ ಆಕೆ ಕಸವನ್ನ ರಸ್ತೆ ಮಧ್ಯದಲ್ಲೇ ಚೆಲ್ಲಿ ತೆರಳಿದ್ದಾಳೆ. ಬಳಿಕ ಸ್ಥಳೀಯ ನಿವಾಸಿಗಳು ಮೊದಲೇ ಹೇಳಿದಂತೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​​ ಮಾಡಿದ್ದು, ಯುವತಿಯ ಕೆಲಸಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.​​

Published On – 4:57 pm, Mon, 5 January 26

Source link

ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ – Kannada News | Udupi Shri Krishna Temple Receives Golden Bhagavad Gita as Offering from Delhi Devotee

ಉಡುಪಿ, ಜನವರಿ 05: ಉಡುಪಿ ಶ್ರೀ ಕೃಷ್ಣನಿಗೆ ದೆಹಲಿಯ ಭಕ್ತರೊಬ್ಬರು ಚಿನ್ನದ ಭಗವದ್ಗೀತೆ ಅರ್ಪಣೆಗೆ ಮುಂದಾಗಿದ್ದಾರೆ. ಜನವರಿ 8ರಂದು ನಡೆಯಲಿರುವ ವಿಶ್ವಗೀತಾ ಪರ್ಯಾಯ ಸಮಾರೋಪ ವಿಶೇಷ ಕಾರ್ಯಕ್ರಮದಂದು ಕೃಷ್ಣ ಸನ್ನಿಧಿಯಲ್ಲಿ ಹೊನ್ನಿನ ಭಗವದ್ಗೀತೆ ಲೋಕಾರ್ಪಣೆಗೊಳ್ಳಲಿದೆ. ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಚಿನ್ನದ ಹಾಳೆಯಲ್ಲಿ ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಮುದ್ರಿಸಲಾಗಿದೆ. ಚಿನ್ನದ ರಥದಲ್ಲಿ ಭಗವದ್ಗೀತೆಯ ಮೆರವಣಿಗೆ ಮೂಲಕ ಅರ್ಪಿಸಲಿದ್ದಾರೆ. ಅಯೋಧ್ಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟೆಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬ್ಯಾನರ್ ಗಲಾಟೆ ಪ್ರಕರಣ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು – Kannada News | Bellary violence: bomb Disposal squad Verification In MLA Gali Janardhan Reddy Office

ಬಳ್ಳಾರಿ, (ಜನವರಿ 05): ಬಳ್ಳಾರಿ ಬ್ಯಾನರ್ ಗಲಾಟೆ ಹಾಗೂ ಫೈರಿಂಗ್ ಪ್ರಕರಣದ (bellary violence) ತನಿಖೆ ಚುರುಕುಗೊಂಡಿದೆ. ಬಳ್ಳಾರಿಯ ಅವಂಭಾವಿಯಲ್ಲಿರುವ ರೆಡ್ಡಿ ನಿವಾಸದಲ್ಲಿ ಬಾಂಬ್ ನಿಷ್ಕ್ರಿಯ ದಳ ಇಂಚಿಂಚೂ ಪರಿಶೀಲನೆ ನಡೆಸಿದೆ. ಬುಲೆಟ್ ಪತ್ತೆ ಹಚ್ಚಲು ಬಾಂಬ್ ನಿಷ್ಕ್ರಿಯ ದಳ ಎಂಟ್ರಿ ಕೊಟ್ಟಿದ್ದು, ಬುಲೆಟ್‌ಗಳಿಗಾಗಿ ಹುಡುಕಾಟ ನಡೆಸಿತ್ತು. DSMD ಮಿಷನ್​ಗಳ ಮೂಲಕ ಘಟನಾ ಸ್ಥಳದ ಮೂಲೆ ಮೂಲೆಯನ್ನ ಸರ್ಚ್ ಮಾಡಿದ್ರು. ಬಾಂಬ್ ನಿಷ್ಕ್ರೀಯ ತಂಡಕ್ಕೆ FSL ಟೀಮ್ ಕೂಡಾ ಸಾಥ್ ನೀಡಿದೆ. ಇನ್ನು ಗಲಾಟೆ ವೇಳೆ ಹಾರಿದ್ದ ಗುಂಡು ಗಾಲಿ ಜನಾರ್ದನ ರೆಡ್ಡಿ ನಿವಾಸದಲ್ಲಿರುವ ಕಚೇರಿಯ ಗ್ಲಾಸ್​​​ಗೆ ತಗುಲಿದ್ದು, ಗಾಜು ಪುಡಿ ಪುಡಿಯಾಗಿದೆ. ಇದರಿಂದ ಬಾಂಬ್ ನಿಷ್ಕ್ರಿಯ ದಳ, ಜನಾರ್ದನ ರೆಡ್ಡಿ  ಕಚೇರಿಯೊಳಗೆ ಪರಿಶೀಲನೆ ನಡೆಸಿದೆ.

ಇದನ್ನೂ ನೋಡಿ: ಬಳ್ಳಾರಿ ಗಲಭೆ: ಪೊಲೀಸ್ ವಶದಲ್ಲಿದ್ದ 9 ಗನ್​​ಮ್ಯಾನ್​​ ಪೈಕಿ ಓರ್ವ ಅರೆಸ್ಟ್

Source link

‘ರಾಶಿಕಾಗೆ ಮಲಗೋಕೆ ರಘು ತೊಡೆ ಬೇಕು’; ಅಶ್ವಿನಿ ಹೆಣ್ಣು ಮಕ್ಕಳ ಪರ ನಿಲ್ಲೋದು ಅಂದ್ರೆ ಇದೇನಾ? – Kannada News | Ashwini Gowda’s Controversial Statement on Rashika: Needs Raghu’s Lap Sparks Outrage

ಕೆಲ ವಾರಗಳ ಹಿಂದಿನ ಮಾತು. ಬಿಗ್ ಬಾಸ್ (Bigg Boss)  ಮನೆಯಲ್ಲಿ ಉಂಟಾದ ಗಲಾಟೆಯಲ್ಲಿ ‘ನಾನು ಹೆಣ್ಣುಮಕ್ಕಳ ಪರವಾಗಿ ನಿಲ್ಲುತ್ತಿದ್ದೇನೆ’ ಎಂದು ಅಶ್ವಿನಿ ಗೌಡ ಹೇಳಿಕೊಂಡಿದ್ದರು. ಆದರೆ, ಈಗ ಹೆಣ್ಣು ಮಕ್ಕಳ ಬಗ್ಗೆಯೇ ಕೆಟ್ಟದಾಗಿ ಮಾತನಾಡಿ ಚರ್ಚೆಗೆ ಕಾರಣರಾಗಿದ್ದಾರೆ. ‘ರಾಶಿಕಾಗೆ ಮಲಗೋಕೆ ರಘು ತೊಡೆ ಬೇಕು’ ಎಂಬ ಮಾತು ಚರ್ಚೆಗೆ ಕಾರಣ ಆಗಿದೆ. ಅವರು ಆ ರೀತಿ ಮಾತನಾಡಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ‘ಅಶ್ವಿನಿ ಮಹಿಳೆಯರ ಪರ ನಿಲ್ಲೋದು ಅಂದ್ರೆ ಇದೇನಾ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ವೀಕೆಂಡ್​​ನಲ್ಲಿ ಚಟುವಟಿಕೆ ಒಂದನ್ನು ನೀಡಲಾಯಿತು. ಇದರ ಅನುಸಾರ ಪಂಚಿಂಗ್ ಬ್ಯಾಗ್ ಮೇಲೆ ತಮಗೆ ಇಷ್ಟ ಇಲ್ಲದವರ ಫೋಟೋ ಹಾಕಬೇಕು. ಆ ಬಳಿಕ ಕೈಗೆ ಪಂಚಿಂಗ್ ಬಾಕ್ಸ್ ಹಾಕಿಕೊಂಡು ಗುದ್ದಬೇಕು. ಅಶ್ವಿನಿ ಅವರು ರಾಶಿಕಾ ಹೆಸರು ತೆಗೆದುಕೊಂಡರು. ಅವರು ನೀಡಿದ ಕಾರಣ ಚರ್ಚೆಗೆ ಕಾರಣ ಆಗಿದೆ.

‘ರಾಶಿಕಾ ತನ್ನನ್ನು ತಾನು ಮಿಸ್ ಯೂನಿವರ್ಸ್ ಎಂದುಕೊಂಡಿದ್ದಾರೆ. ನಿನ್ನ ವಯಸ್ಸಿಗೂ ನನ್ನ ವಯಸ್ಸಿಗೂ ತುಂಬಾ ಅಂತರ ಇದೆ. ನೀನೆ ಸ್ಟ್ರಾಂಗ್ ಎಂದು ಹೇಳಿ ಕೊಳ್ಳುತ್ತಾ ಇದ್ದೀಯಾ. ಆದರೆ ನೀನು ಸ್ಟ್ರಾಂಗ್ ಅಲ್ಲ. ಕಳೆದ ವಾರ ನಿಮ್ಮನ್ನು ನಾವು ಸೋಲಿಸಿದ್ದೇವೆ’ ಎಂದು ಅಶ್ವಿನಿ ಗೌಡ ಹೇಳಿದರು.

‘ನಿನ್ನ ರೀತಿ ಬಿಗ್ ಬಾಸ್ ಅಲ್ಲಿ ಮತ್ತೊಂದು ಟ್ರ್ಯಾಕ್​ನ ನಾನು ಶುರು ಮಾಡಿಕೊಂಡಿಲ್ಲ. ನಿನಗೆ ನಿಯತ್ತಿಲ್ಲ ಎಂಬುದಕ್ಕು ಸೂರಜ್ ದೊಡ್ಡ ಉದಾಹರಣೆ. ನಿನಗೆ ಒರಗಿಕೊಳ್ಳೋಕೆ ರಘು ತೊಡೆ ಬೇಕು, ಹೆಗಲು ಬೇಕು. ನನಗೆ ಬೇಡ’ ಎಂದು ಅಶ್ವಿನಿ ಗೌಡ ಹೇಳಿದರು.

ಇದನ್ನೂ ಓದಿ: ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ

ರಾಶಿಕಾ ಬಗ್ಗೆ ಅಶ್ವಿನಿ ಆಡಿದ ಮಾತು ಚರ್ಚೆ ಹುಟ್ಟುಹಾಕಿದೆ. ರಾಶಿಕಾ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ‘ಧನುಷ್ ಆಡಿದ್ದಕ್ಕೆ ಅಶ್ವಿನಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಹೋಗಿದ್ದು. ಧೈರ್ಯ ಇದ್ದರೆ ಅವರು ನನ್ನ ಜೊತೆ ಟಾಸ್ಕ್ ಆಡಿ ಗೆಲ್ಲಲಿ’ ಎಂದು ರಾಶಿಕಾ ಸವಾಲು ಹಾಕಿದ್ದಾರೆ. ‘ಅಶ್ವಿನಿ ಗೌಡ ತುಂಬಾ ಅಸಹ್ಯವಾಗಿ ಯೋಚಿಸ್ತಾರೆ’ ಎಂದು ರಾಶಿಕಾ ಅಭಿಪ್ರಾಯಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಶ್ವಿನಿಗೆ ಅನೇಕರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೀರ್ಘಾವಧಿ ಸಿಎಂ: ದೇವರಾಜ ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು – Kannada News | Siddaramaiah Reacts about Breaks Devaraj urs record of karnatakas long term chief minister

ಮೈಸೂರು, (ಜನವರಿ 05): ಕರ್ನಾಟಕದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ (Siddaramaiah) ಅವರು ಪಾತ್ರರಾಗಲು ಕೇವಲ ಒಂದೇ ದಿನ ಬಾಕಿ ಇದ್ದು, ದೇವರಾಜ ಅರಸು ಅವರ ದಾಖಲೆಯನ್ನು ನಾಳೆ (ಜನವರಿ 06) ಮುರಿಯಲಿದ್ದಾರೆ. 7 ವರ್ಷ 239 ದಿನಗಳ ಕಾಲ ಡಿ. ದೇವರಾಜ ಅರಸು (D Devaraj urs )ಕರ್ನಾಟಕದ ಸಿಎಂ‌ ಆಗಿದ್ದ‌ರು. ಇದೀಗ ಈ ದಾಖಲೆಯನ್ನು ನಾಳೆ ಸಿದ್ದರಾಮಯ್ಯ ಮುರಿಯಲಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಇಂದು (ಜನವರಿ 05) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಜನರ ಅರ್ಶಿವಾದದಿಂದ ನಾಳೆಗೆ ದೇವರಾಜು ಅರಸು ಅವರ ದೀರ್ಘವಾದಿ ಅಡಳಿತ ದಾಖಲೆ ಬ್ರೇಕ್ ಅಗುತ್ತಿದೆ. ನನಗೆ ಖುಷಿ ಏನೆಂದರೆ ದೇವರಾಜ ಅರಸು ಹಾಗೂ ನಾನು ಒಂದೇ ಜಿಲ್ಲೆಯವರು. ನನಗೂ ದೇವರಾಜ ಅರಸ್ ಅವರಿಗೂ ಹೋಲಿಕೆ ಇಲ್ಲ.ಯಾವುದೇ ದಾಖಲೆ ಶಾಶ್ವತವಲ್ಲ. ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವಿರಾಟ್ ಕೋಹ್ಲಿ ಮುರಿದಿಲ್ಲವೇ? ಮುಂದೆ ಯಾರಾದರೂ ನನ್ನ ದಾಖಲೆಯನ್ನು ಮುರಿಯಬಹುದು. ನನಗಿಂತ ಹೆಚ್ಚಿನ ಬಜೆಟ್ ಮಂಡಿಸುವವರು ಕೂಡ ಬರಬಹುದು. ಹೀಗಾಗಿ ನನ್ನ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಎಂದು ನಾನು ಹೇಳುವುದಿಲ್ಲ ಎಂದರು.

ಇದನ್ನೂ ಓದಿ: ರಾಜ್ಯದ ದೀರ್ಘಾವಧಿ ಸಿಎಂ ಆಗಲಿದ್ದಾರೆ ಸಿದ್ದರಾಮಯ್ಯ: ದೇವರಾಜ ಅರಸು​​ ದಾಖಲೆ ನಾಳೆ ಬ್ರೇಕ್​​

Source link

ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ಶಿವರಾಜ್ ತಂಗಡಗಿ – Kannada News | Talk of war Between V Somanna And Shivaraj Tangadagi at Koppal Over violate protocol

ಕೊಪ್ಪಳ, (ಜನವರಿ 05): ಹಿಟ್ನಾಳ ಗ್ರಾಮದ ಬಳಿ ಹಮ್ಮಿಕೊಂಡಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮವು ರಣರಂಗವಾಗಿ ಮಾರ್ಪಟ್ಟಿದೆ. ಹೌದು…ಇಂದು (ಜನವರಿ 05) ಕೊಪ್ಪಳದ (Koppal) ಹಿಟ್ನಾಳ ಗ್ರಾಮದಲ್ಲಿ 27 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೇಂದ್ರ ಸಚಿವ ವಿ ಸೋಮಣ್ಣ ನಡುವೆ ಸಂಘರ್ಷ ಏರ್ಪಟ್ಟಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರ ಹೆಸರು ಹಾಕಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕುರ್ಚಿ ತೂರಾಟ ನಡೆಸಿ, ಸಚಿವರ ಕಾರಿಗೆ ಅಡ್ಡಿಪಡಿಸಿದರು. ಇನ್ನು ಇದೇ ವೇಳೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಅವರು ಟಿವಿ9 ಜತೆ ಮಾತನಾಡುವುದನ್ನು ಅರ್ಧಕ್ಕೆ ಬಿಟ್ಟು ಆಕ್ರೋಶದಿಂದ ಸೋಮಣ್ಣ ಇದ್ದ ವೇದಿಕೆಗೆ ನುಗ್ಗಿರುವ ಪ್ರಸಂಗ ಜರುಗಿದೆ.

ಇದನ್ನೂ ನೋಡಿ: ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ

Source link

ಥಿಯೇಟರ್ ಶೌಚಾಲಯದಲ್ಲಿ ಕ್ಯಾಮರಾ: ಮೊಬೈಲ್​​​ನಲ್ಲಿ ಯುವತಿಯರ ಖಾಸಗಿ ವಿಡಿಯೋಗಳು ಪತ್ತೆ; ಕೇಸ್ ಬುಕ್ – Kannada News | Hidden Camera Found in Sandhya Theatre Women’s Toilet: FIR Filed Against Theatre Management and Staff

ಬೆಂಗಳೂರು, ಜನವರಿ 05: ಸಂಧ್ಯಾ ಥಿಯೇಟರ್‌ನ (Sandhya Theatre) ಬಾತ್‌ ರೂಮ್‌ನಲ್ಲಿ ಕ್ಯಾಮರಾ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಮಹಿಳಾ ಟೆಕ್ಕಿ ದೂರಿನ ಮೇರೆಗೆ ಥಿಯೇಟರ್ ಹಾಗೂ ಸಿಬ್ಬಂದಿ ರಾಜೇಶ್, ಕಮಲ್​​ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದು ಮಡಿವಾಳ ಪೊಲೀಸರಿಂದ ವಿಚಾರಣೆ ನಡೆದಿದೆ.

ನಡೆದದ್ದೇನು?

ರವಿವಾರದಂದು ಮಹಿಳಾ ಟೆಕ್ಕಿಯೊಬ್ಬರು ಸ್ನೇಹಿತರ ಜೊತೆ ಸಿನಿಮಾ ನೋಡಲು ಸಂಧ್ಯಾ ಥಿಯೇಟರ್​​ಗೆ ಹೋಗಿದ್ದರು. ಇಂಟರ್ವೆಲ್ ವೇಳೆ ವಾಶ್ ರೂಂಗೆ ಹೋದಾಗ ಮಹಿಳಾ ಟೆಕ್ಕಿ ಹಾಗೂ ಸ್ನೇಹಿತೆಯರ ಖಾಸಗಿ ವಿಡಿಯೋವನ್ನು ರಾಜೇಶ್ ಎಂಬಾತ ಚಿತ್ರೀಕರಣ ಮಾಡಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಮಡಿವಾಳ ಸಂಧ್ಯಾ ಥಿಯೇಟರ್ ಮಹಿಳಾ ಶೌಚಾಲಯದಲ್ಲಿ ಕ್ಯಾಮರಾ ಇಟ್ಟ ಯುವಕ, ಯುವತಿಯರು ಶಾಕ್

ಮಹಿಳಾ ಟೆಕ್ಕಿ ಆರೋಪಿಯನ್ನ ಹಿಡಿದು ಮಾಲೀಕರ ಬಳಿ ಕರೆದೊಯ್ದಿದ್ದಾರೆ. ಈ ವೇಳೆ ಕಮಲ್ ಎಂಬಾತ ವಿಡಿಯೋ ಮಾಡಲು ಹೇಳಿದ್ದಾಗಿ ಹೇಳಿಕೆ ನೀಡಿದ್ದಾನೆ. ಸದ್ಯ ರಾಜೇಶ್, ಕಮಲ್ ಮತ್ತು ಸಂಧ್ಯಾ ಥಿಯೇಟರ್ ವಿರುದ್ಧ ಕೇಸ್ ದಾಖಲಾಗಿದೆ. ಇನ್ನು ಆತನ ಮೊಬೈಲ್‌ನಲ್ಲಿ ಹಲವು ಯುವತಿಯರ ಖಾಸಗಿ ವಿಡಿಯೋಗಳು ಪತ್ತೆಯಾಗಿದ್ದು, ಹಲವು ದಿನಗಳಿಂದ ಖಾಸಗಿ ವಿಡಿಯೋಗಳ ಚಿತ್ರೀಕರಣ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಎಫ್​ಐಆರ್​​​ನಲ್ಲಿ ಏನಿದೆ? 

ದೂರುದಾರೆ ಮತ್ತು ಅವರ ಸ್ನೇಹಿತೆಯರು ಬೆಂಗಳೂರಿನ ಮಡಿವಾಳಾದ ವಿ.ಪಿ. ರಸ್ತೆಯಲಿರುವ ಸಂಧ್ಯಾ ಥಿಯೇಟರ್‌ಗೆ “ನೂವು ನಾಕು ನಚ್ಚಾವು” ಸಿನಿಮಾವನ್ನು ರಾತ್ರಿ 7 ರಿಂದ 10 ಗಂಟೆಯ ಸಮಯದಲ್ಲಿ ವೀಕ್ಷಿಸಲು ಹೋಗಿದ್ದು, ವಿರಾಮದ ಸಮಯದಲ್ಲಿ ಸುಮಾರು ರಾತ್ರಿ 8:30 ಗಂಟೆಗೆ, ದೂರುದಾರೆ ಮತ್ತು ಅವರ ಸ್ನೇಹಿತೆಯರು ಥಿಯೇಟರ್ ಆವರಣದಲ್ಲಿರುವ ಶೌಚಾಲಯಕ್ಕೆ ಹೋದಾಗ, ಅಲ್ಲಿ ಮಹಿಳಾ ಶೌಚಾಲಯದ ಮಧ್ಯದಲ್ಲಿ, ಒಬ್ಬ ವ್ಯಕ್ತಿ ಮೊಬೈಲ್ ಫೋನ್ ಬಳಸಿ ವಿಡಿಯೋ ತೆಗೆಯುತ್ತಿರುವುದನ್ನು ನೋಡಿ, ತಕ್ಷಣ ತಮ್ಮ ಗಂಡನಿಗೆ ಕರೆ ಮಾಡಿ, ಆ ವ್ಯಕ್ತಿಯನ್ನು ಹಿಡಿದುಕೊಂಡು, ಅವರ ಫೋನ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ದೂರುದಾರೆ ಮತ್ತು ಅವರ ಸ್ನೇಹಿತೆಯರ ಖಾಸಗಿ ವಿಡಿಯೋಗಳು ಇರುವುದು ಕಂಡುಬಂದಿದೆ.

ಇದನ್ನೂ ಓದಿ: ಮದ್ಯದ ನಶೆಯಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ: ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ಯುವಕರು ಜೈಲುಪಾಲು

ಸಂಧ್ಯಾ ಥಿಯೇಟರ್‌ನ ಮ್ಯಾನೆಜ್​ಮೆಂಟ್​ನವರನ್ನು  ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ಆತ ಸುಮಾರು ಒಂದು ತಿಂಗಳಿನಿಂದ ಅಲ್ಲಿ ಕೆಲಸ ಮಾಡುತ್ತಿದ್ದು, ಆತನ ಹೆಸರು ರಾಜೇಶ್ ಎಂದು ತಿಳಿಸಿದ್ದಾರೆ. ನಂತರ  ವಿಡಿಯೋಗಳನ್ನು ತೆಗೆಯಲು ಯಾರು ಸೂಚನೆ ನೀಡಿದರು ಎಂದು ದೂರುದಾರೆ ರಾಜೇಶ್​ನನ್ನು ಕೇಳಿದಾಗ, ಕಮಲ್ ಎಂಬ ವ್ಯಕ್ತಿ ಹೆಸರನ್ನು ಉಲ್ಲೇಖಿಸಿದ್ದಾನೆ. ನಂತರ ದೂರುದಾರೆ 112 ಪೊಲೀಸ್ ಹೆಲ್‌ಪ್‌ಲೈನ್‌ಗೆ ಕರೆ ಮಾಡಿದ್ದು, ನಂತರ ಪೊಲೀಸರು ಬಂದು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ದೂರುದಾರೆಯ ಸುರಕ್ಷತೆಯ ಕಾರಣಕ್ಕಾಗಿ ರಾಜೇಶ್ ಬಳಸಿದ ರೆಡ್ಡಿ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದು, ಜೊತೆಗೆ ರಾಜೇಶ್, ಕಮಲ್ ಮತ್ತು ಸಂಧ್ಯಾ ಥಿಯೇಟರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:16 pm, Mon, 5 January 26

Source link

Exit mobile version