Video: ಕುಡಿದ ಮತ್ತಿನಲ್ಲಿ ಹಾವನ್ನು ಕೈಗೆ ಸುತ್ತಿಕೊಂಡು ಟ್ರಾಫಿಕ್​ ಪೊಲೀಸ್​​ಗೆ ಆವಾಜ್ ಹಾಕಿದ ಆಟೋ ಡ್ರೈವರ್ – Kannada News | Unusual Standoff in Hyderabad as Auto Driver Intimidates Police During Check

ಹೈದರಾಬಾದ್, ಜನವರಿ 05: ಆಟೋ ಡ್ರೈವರ್ ಕುಡಿದ ಮತ್ತಿನಲ್ಲಿ ಹಾವನ್ನು ಕೈಗೆ ಸುತ್ತಿಕೊಂಡು ಟ್ರಾಫಿಕ್ ಪೊಲೀಸರನ್ನು ಬೆದರಿಸುವ ವಿಡಿಯೋ ವೈರಲ್ ಆಗಿದೆ. ಹೈದರಾಬಾದ್​ನ ಹಳೆಯ ನಗರದ ಚಂದ್ರಾಯನಗುಟ್ಟ ಕ್ರಾಸ್​ರೋಡ್ಸ್​​ನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಡ್ರಂಕ್ ಆಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದಾಗ, ಈ ಚಾಲಕನಿದ್ದ ಆಟೋವನ್ನು ಕೂಡ ನಿಲ್ಲಿಸಿದ್ದಾರೆ. ಆಗ ಕೋಪಗೊಂಡ ಚಾಲಕ ಕೈಯಲ್ಲಿ ಜೀವಂತ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸರನ್ನು ಬೆದರಿಸಿದ್ದಾರೆ.
ಜನನಿಬಿಡ ಜಂಕ್ಷನ್‌ನಲ್ಲಿ ಭೀತಿ ಸೃಷ್ಟಿಸಿದ್ದ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಚಾಲಕ ಆರಂಭದಲ್ಲಿ ಸಂಚಾರ ಪೊಲೀಸರಿಗೆ ಕೈಮುಗಿದು ಕ್ಷಮೆಯಾಚಿಸಿ ತನ್ನ ವಾಹನವನ್ನು ಹಿಂತಿರುಗಿಸುವಂತೆ ವಿನಂತಿಸುತ್ತಿರುವುದನ್ನು ನೋಡಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಬಿಎಲ್​​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ರಿಸ್ ಲಿನ್ – Kannada News | Chris Lynn becomes the FIRST batter to blast 4000 runs

Big Bash 2026: ಬಿಗ್ ಬ್ಯಾಷ್​ ಲೀಗ್​​ನಲ್ಲಿ ಸ್ಪೋಟಕ ದಾಂಡಿಗ ಕ್ರಿಸ್ ಲಿನ್ (Chris Lynn) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಪರ ಕಣಕ್ಕಿಳಿಯುತ್ತಿರುವ ಲಿನ್ ಈವರೆಗೆ ಒಟ್ಟು 111 ರನ್ ಕಲೆಹಾಕಿದ್ದಾರೆ.

Source link

ವರದಕ್ಷಿಣೆಗಾಗಿ ಗರ್ಭಿಣಿಯನ್ನು ಕೊಂದು ರಹಸ್ಯವಾಗಿ ಅತ್ತೆ-ಮಾವನಿಂದ ಅಂತ್ಯ ಸಂಸ್ಕಾರ – Kannada News | Rajasthan: Pregnant Woman Killed for Dowry, In laws Attempt Secret Cremation

ಜೈಪುರ, ಜನವರಿ 05: ದೇಶ ಎಷ್ಟೇ ಮುಂದುವರೆದಿದ್ದರೂ, ಜನರು ಎಷ್ಟೇ ಶಿಕ್ಷಣ ಪಡೆದಿದ್ದರೂ ಸಮಾಜದಲ್ಲಿ ವರದಕ್ಷಿಣೆ(Dowry) ಎಂಬುದು ಪಿಡುಗಾಗಿಯೇ ಉಳಿದಿದೆ. ಇನ್ನೂ ಕೂಡ ವರದಕ್ಷಿಣೆಗಾಗಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಂತಿಲ್ಲ. ರಾಜಸ್ಥಾನದ ಧೋಲ್ಪುರದಲ್ಲಿ ವರದಕ್ಷಿಣೆ ತಂದಿಲ್ಲವೆಂದು ನಾಲ್ಕು ತಿಂಗಳ ಗರ್ಭಿಣಿಯನ್ನೇ ಅತೆತ-ಮಾವ ಕೊಲೆ ಮಾಡಿ ರಹಸ್ಯವಾಗಿ ಅಂತ್ಯ ಸಂಸ್ಕಾರ ನಡೆಸಿರುವ ಘಟನೆ ವರದಿಯಾಗಿದೆ.

ಆರೋಪಿ ಕುಟುಂಬ ಸದಸ್ಯರು ಆಕೆಯ ಪೋಷಕರಿಗೆ ತಿಳಿಸದೆ ಆಕೆಯ ಶವವನ್ನು ಅಂತ್ಯಸಂಸ್ಕಾರ ಮಾಡಿ ಗ್ರಾಮದಿಂದ ಪರಾರಿಯಾಗಿದ್ದಾರೆ. 24 ವರ್ಷದ ಗುಡಿಯಾ ಎಂಬ ಯುವತಿಯನ್ನು ಇಂಚಾಪುರ ಗ್ರಾಮದ ನಿವಾಸಿ ಪಂಕಜ್ ಠಾಕೂರ್ ಎಂಬಾತ ವಿವಾಹವಾಗಿದ್ದಳು.ಶನಿವಾರ ಆಕೆಯ ಅತ್ತೆಯ ಮನೆಯಲ್ಲಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಆಕೆಯ ಅತ್ತೆ-ಮಾವಂದಿರು ಆಕೆಯ ದೇಹವನ್ನು ಸಗಣಿಯಿಂದ ಮಾಡಿದ ಚಿತೆಯ ಮೇಲೆ ಇರಿಸಿ, ಆಕೆಯ ಕುಟುಂಬಕ್ಕೆ ತಿಳಿಸದೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಗುಡಿಯಾಳ ಅಕ್ಕ ಪೋಷಕರಿಗೆ ಮಾಹಿತಿ ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಕುಟುಂಬdವರು ಗ್ರಾಮಕ್ಕೆ ಓಡಿ ಬಂದಾಗ, ಆಕೆಯ ಚಿತೆ ಇನ್ನೂ ಉರಿಯುತ್ತಿರುವುದನ್ನು ಕಂಡು ಕುಸಿದು ಕುಳಿತರು. ಅವರು ನೀರಿನಿಂದ ಬೆಂಕಿಯನ್ನು ನಂದಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.

ಮತ್ತಷ್ಟು ಒದಿ: ನೊಯ್ಡಾ ವರದಕ್ಷಿಣೆ ಕಿರುಕುಳ ಪ್ರಕರಣ; ನಿಕ್ಕಿಯನ್ನು ಸುಟ್ಟು ಕೊಲ್ಲಲು 1 ತಿಂಗಳಿಂದ ರೆಡಿಯಾಗಿತ್ತು ಪ್ಲಾನ್!

ಹಿರಿಯ ಪೊಲೀಸ್ ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದರು. ಚಿತೆಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು ಮತ್ತು ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ತಂಡವು ಸ್ಥಳದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿತು. ಡಿಎನ್‌ಎ ವಿಶ್ಲೇಷಣೆಗಾಗಿ ಮಾದರಿಗಳನ್ನು ಸಹ ತೆಗೆದುಕೊಳ್ಳಲಾಗಿದೆ.

ಮನೆಯೊಳಗೆ ರಕ್ತದ ಕಲೆಗಳು ಪತ್ತೆಯಾಗಿದ್ದು, ಕೊಡಲಿ, ಸನಿಕೆ, ಕೋಲುಗಳು ಮತ್ತು ಇತರ ವಸ್ತುಗಳು ಸೇರಿದಂತೆ ಆಯುಧಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆ ರಾತ್ರಿ ನಂತರ ಸಂತ್ರಸ್ತೆಯ ಪತಿ ಪಂಕಜ್ ಠಾಕೂರ್ ಅವರನ್ನು ಬಂಧಿಸಿದ್ದಾರೆ. ಅತ್ತೆ-ಮಾವನ ಕುಟುಂಬದ ಇತರ ಸದಸ್ಯರು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ನಿವಾಸಿಯಾಗಿರುವ ಸಂತ್ರಸ್ತೆಯ ತಂದೆ ದೇವೇಂದ್ರ ಸಿಂಗ್ ಪರ್ಮಾರ್ ತಮ್ಮ ದೂರಿನಲ್ಲಿ, ತಮ್ಮ ಮಗಳನ್ನು ಪಂಕಜ್ ಠಾಕೂರ್ ಅವರೊಂದಿಗೆ ಮೇ 28, 2025 ರಂದು ವಿವಾಹವಾಗಿದ್ದರು ಎಂದು ಹೇಳಿದ್ದಾರೆ. ಮದುವೆಯ ಸಮಯದಲ್ಲಿ 15 ಲಕ್ಷ ರೂಪಾಯಿ ನಗದು, ಬೈಕ್, ಗೃಹೋಪಯೋಗಿ ವಸ್ತುಗಳು ಮತ್ತು ಆಭರಣಗಳನ್ನು ವರದಕ್ಷಿಣೆಯಾಗಿ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದರ ಹೊರತಾಗಿಯೂ, ಅತ್ತೆ-ಮಾವಂದಿರು ಕಾರು, ಚಿನ್ನದ ಸರ ಮತ್ತು ಎಮ್ಮೆ ಸೇರಿದಂತೆ ಹೆಚ್ಚುವರಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದರು ಮತ್ತು ಗುಡಿಯಾಳಿಗೆ ಮಾನಸಿಕ ಕಿರುಕುಳ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತುಮಕೂರಿನಲ್ಲಿ 11 ಮಂಗಗಳ ನಿಗೂಢ ಸಾವು! ವಿಷಪ್ರಾಶನ ಮಾಡಿಸಿರುವ ಶಂಕೆ – Kannada News | Devarayanadurga: 11 Monkeys Die Mysteriously, Poisoning Suspected

ತುಮಕೂರಿನಲ್ಲಿ 11 ಮಂಗಗಳ ನಿಗೂಢ ಸಾವು!

ತುಮಕೂರು, ಜನವರಿ 05: ಒಂದು ತಿಂಗಳ ಹಿಂದೆಯಷ್ಟೇ ಬೆಳಗಾವಿಯಲ್ಲಿ 30 ಕೃಷ್ಣಮೃಗಗಳು ನಿಗೂಢವಾಗಿ ಸಾವನ್ನಪ್ಪಿರುವುದು ಆತಂಕ ಮೂಡಿಸಿತ್ತು. ಇದೀಗ ತುಮಕೂರಿನಲ್ಲಿಯೂ ಅಂತದ್ದೇ ಪ್ರಕರಣ ಬೆಳಕಿಗೆ ಬಂದಿದೆ. ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಕೇವಲ ಎರಡು ದಿನಗಳಲ್ಲಿ 11 ಮಂಗಗಳು ನಿಗೂಢವಾಗಿ ಮೃತಪಟ್ಟಿದ್ದು, ವಿಷಪ್ರಾಶನವಾಗಿರುವ ಶಂಕೆ ವ್ಯಕ್ತವಾಗಿದೆ.

ಮಂಗಗಳು ಯಾವುದೇ ಸೋಂಕಿನಿಂದ ಮೃತಪಟ್ಟಿಲ್ಲವೆಂಬುದು ದೃಢ

ದೇವರಾಯನದುರ್ಗ ಹಾಗೂ ದುರ್ಗದ ಹಳ್ಳಿ ನಡುವಿನ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಲ್ಲಿ ಮಂಗಗಳ ಮೃತದೇಹಗಳು ಪತ್ತೆಯಾಗಿವೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಒಂದರ ನಂತರ ಮತ್ತೊಂದರಂತೆ ಮಂಗಗಳ ಮೃತದೇಹಗಳು ಪತ್ತೆ ಮಾಡಿದ್ದಾರೆ. ಅರಣ್ಯ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯದ ವೇಳೆ ಮೊದಲ ದಿನ ಏಳು ಮಂಗಗಳು, ಎರಡನೇ ದಿನ ನಾಲ್ಕು ಮಂಗಗಳ ಮೃತದೇಹಗಳು ಪತ್ತೆಯಾಗಿವೆ. ಪತ್ತೆಯಾದ ೧೧ ಮೃತದೇಹಗಳಲ್ಲಿ ಒಂಬತ್ತು ಸಾಮಾನ್ಯ ಮಂಗಗಳು ಹಾಗೂ ಎರಡು ಲಂಗೂರಗಳು ಎನ್ನಲಾಗಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ ಮಂಗಗಳು ಯಾವುದೇ ಸೋಂಕು ಅಥವಾ ಕಾಯಿಲೆಯಿಂದ ಮೃತಪಟ್ಟಿಲ್ಲ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ ಕೃಷ್ಣ ಮೃಗಗಳ ಸರಣಿ ಸಾವು: ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ

ಬೆಂಗಳೂರಿನ ಪಶು ವೈದ್ಯಕೀಯ ವಿದ್ಯಾಲಯಕ್ಕೆ ಸ್ಯಾಂಪಲ್ ರವಾನೆ

ಅರಣ್ಯಾಧಿಕಾರಿಗಳು ಸಾವಿನ ಕಾರಣ ಪತ್ತೆ ಹಚ್ಚಲು ಮುಂದಾಗಿ, ಊರ್ಡಿಗೆರೆಯ ಪಶು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪರೀಕ್ಷೆಯ ವೇಳೆ ಮಂಗಗಳ ಕರುಳಿನಲ್ಲಿ ಅನ್ನ ಪತ್ತೆಯಾಗಿದ್ದು, ವಿಷ ಪ್ರಾಶನದಿಂದ ಸಾವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇದನ್ನು ದೃಢಪಡಿಸಲು ಕೆಲವು ಮಾದರಿಗಳನ್ನು ಬೆಂಗಳೂರಿನ ಪಶು ವೈದ್ಯಕೀಯ ವಿದ್ಯಾಲಯ (IAH, VB)ಕ್ಕೆ ರವಾನೆ ಮಾಡಲಾಗಿದೆ. ಈ ಘಟನೆ ಸಂಬಂಧ ತುಮಕೂರು ಪ್ರಾದೇಶಿಕ ವಲಯದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಮಂಗಗಳ ಸಾವಿನ ಹಿಂದಿರುವ ಕಾರಣ ಹಾಗೂ ದುಷ್ಕೃತ್ಯವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನೋಯ್ಡಾ: ದಕ್ಷಿಣ ಕೊರಿಯಾದ ಗೆಳೆಯನನ್ನು ಬರ್ಬರವಾಗಿ ಹತ್ಯೆಗೈದ ಮಣಿಪುರದ ಗೆಳತಿ – Kannada News | Foreign National Killed in Greater Noida Flat; Police Detain Woman Partner

ನೋಯ್ಡಾ, ಜನವರಿ 05: ಕ್ಷುಲ್ಲಕ ಕಾರಣಕ್ಕೆ ಮಣಿಪುರ(Manipur)ದ ಯುವತಿಯೊಬ್ಬಳು ತನ್ನ ಗೆಳೆಯನನ್ನು ಚಾಕುವಿನಿಂದ ಇರಿದು ಹತ್ಯೆ(Murder) ಮಾಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಆಕೆಯ ಗೆಳೆಯ ದಕ್ಷಿಣ ಕೊರಿಯಾದವರಾಗಿದ್ದಾರೆ. ಇಬ್ಬರ ನಡುವೆ ಯಾವುದೋ ಸಣ್ಣ ವಿಚಾರಕ್ಕೆ ಜಗಳ ನಡೆದಿದೆ. ಅದು ಅತಿರೇಕಕ್ಕೇರಿ ಆಕೆ ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾಳೆ. ನೋಯ್ಡಾದಲ್ಲಿ ತನ್ನ ಫ್ಲಾಟ್​ನಲ್ಲಿ ಗೆಳೆಯನನ್ನು ಹತ್ಯೆ ಮಾಡಿದ್ದಾಳೆ.

ಮೃತ ವ್ಯಕ್ತಿಯನ್ನು ಡಕ್ ಹೀ ಯುಹ್ ಎಂದು ಗುರುತಿಸಲಾಗಿದೆ. ಆತನಿಗೆ ಇರಿದ ಸ್ವಲ್ಪ ಹೊತ್ತಲ್ಲೇ ಆಕೆಯೇ ಡಕ್​ನನ್ನು ಜಿಮ್ಸ್​ ಆಸ್ಪತ್ರೆಗೆ ಕರೆತಂದಿದ್ದಳು. ಕೂಡಲೇ ಆಸ್ಪತ್ರೆ ಸಿಬ್ಬಂದಿ ನಾಲೆಡ್ಜ್​ ಪಾರ್ಕ್​ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಲುಂಜೀನಾ ಪಮೈ ಎಂದು ಗುರುತಿಸಲಾದ ಆರೋಪಿಯು ವಿಚಾರಣೆಯ ಸಮಯದಲ್ಲಿ ತನಿಖಾಧಿಕಾರಿಗಳಿಗೆ ಕೆಲವು ಮಾಹಿತಿ ನೀಡಿದ್ದಾಳೆ. ಡಕ್ ಹೀ ಮದ್ಯ ಸೇವಿಸಿದ ನಂತರ ಆಗಾಗ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದ, ತಾನು ಹತಾಷಳಾಗಿದ್ದೆ ಎಂದು ತಿಳಿಸಿದ್ದಾಳೆ.

ಮತ್ತಷ್ಟು ಓದಿ: ಮದುವೆಗೆ ಒಪ್ಪದಿದ್ದಕ್ಕೆ ಮಹಿಳೆ ಕೊಲೆ ಕೇಸ್​​ಗೆ ಟ್ವಿಸ್ಟ್​​: ಆರೋಪಿ ಕೂಡ ನೇಣಿಗೆ ಶರಣು

ಇಬ್ಬರೂ ಗ್ರೇಟರ್ ನೋಯ್ಡಾದ ಬಹುಮಹಡಿ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಿದ್ದರು. ಡಕ್ ಹೀ ಮೊಬೈಲ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಪೊಲೀಸರ ಪ್ರಕಾರ, ಕೊಲೆಯಾದ ದಿನದಂದು ಮದ್ಯಪಾನ ಮಾಡುತ್ತಿದ್ದಾಗ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಆ ಕ್ಷಣದಲ್ಲಿ ಪಮೈ ಗೆಳಯನ ಎದೆಗೆ ಚಾಕುವಿನಿಂದ ಇರಿದಿದ್ದಾಳೆ. ನಂತರ ಆಕೆಗೆ ತನ್ನ ತಪ್ಪಿನ ಅರಿವಾಗಿ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಳು.

ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕುಡಿದ ನಂತರ ತನ್ನ ಗೆಳೆಯ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದರಿಂದ ಕಪದಲ್ಲಿ ತಾನು ಅವನಿಗೆ ಇರಿದಿದ್ದೇನೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ. ಅವನನ್ನು ಕೊಲ್ಲುವುದು ತನ್ನ ಉದ್ದೇಶವಾಗಿರಲಿಲ್ಲ ಎಂದು ಆಕೆ ಪೊಲೀಸರಿಗೆ ಹೇಳಿಕೊಂಡಿದ್ದಾಳೆ.

ಇರಿತದ ಗಾಯಗಳ ನಿಖರ ಸಂಖ್ಯೆ ಮತ್ತು ಸಾವಿಗೆ ನಿಖರವಾದ ಕಾರಣವನ್ನು ದೃಢೀಕರಿಸಲು ಅಧಿಕಾರಿಗಳು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಭಾನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಡೆವಿಲ್​​ನಲ್ಲಿ ನಾನು ನಟಿಸಬೇಕಿತ್ತು, ಆದರೆ..’; ವಿವರಿಸಿದ ರಾಗಿಣಿ ದ್ವಿವೇದಿ – Kannada News | Ragini Dwivedi Was About To Act In Devil Movie But Plans Change for this reason

ನಟಿ ರಾಗಿಣಿ ದ್ವಿವೇದಿ ಅವರು ಈಗ ಸುದ್ದಿಯಲ್ಲಿ ಇದ್ದಾರೆ. ಅವುರ ‘ವೃಷಭ’ ಹೆಸರಿನ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಮೋಹನ್ ಲಾಲ್ ಹೆಂಡತಿಯ ಪಾತ್ರ ಮಾಡುವ ಅವಕಾಶವು ಅವರಿಗೆ ಸಿಕ್ಕಿದೆ ಎಂದೇ ಹೇಳಬಹುದು. ಈಗ ಅವರು ‘ಡೆವಿಲ್’ ಸಿನಿಮಾದಲ್ಲಿ ನಟಿಸಬೇಕಿತ್ತು ಎಂಬ ವಿಷಯ ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಏಕೆ ನಟಿಸಿಲ್ಲ ಎಂಬ ವಿಷಯವನ್ನು ಅವರು ರಿವೀಲ್ ಮಾಡಿದ್ದಾರೆ.

ರಾಗಿಣಿ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ‘ಕೆಂಪೆಗೌಡ’ ರೀತಿಯ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಬೇರೆ ಭಾಷೆಯವರಾದರೂ ಕನ್ನಡಕ್ಕೆ ಬಂದು ಕನ್ನಡ ಕಲಿತಿದ್ದಾರೆ. ಅವರು ಇತ್ತೀಚೆಗೆ ತೆರೆಗೆ ಬಂದ ‘ಡೆವಿಲ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಒಂದನ್ನು ಮಾಡಬೇಕಿತ್ತು. ಆದರೆ, ಪಾತ್ರ ಇಷ್ಟ ಆಗಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿನಿಮಾ ರಿಲೀಸ್ ಆದ 20 ದಿನಗಳ ಬಳಿಕ ಕೋರ್ಟ್​​ನಿಂದ ಮಹತ್ವದ ಆದೇಶ ತಂದ ‘ಡೆವಿಲ್’ ತಂಡ

‘ನಾನು ಡೆವಿಲ್​​ನ ಭಾಗ ಆಗಬೇಕಿತ್ತು. ಆದರೆ, ನನಗೆ ಪಾತ್ರ ಇಷ್ಟ ಆಗಿಲ್ಲ’ ಎಂದು ನೇರವಾಗಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಅವಕಾಶ ಇದ್ದಿದ್ದು ಶರ್ಮಿಳಾ ಮಾಂಡ್ರೆ ಮಾಡಿದ ಪಾತ್ರ ಮಾತ್ರ. ಈ ಪಾತ್ರವು ಕಿರುಕುಳಕ್ಕೆ ಒಳಗಾಗುವ ರೀತಿಯ ದೃಶ್ಯ ಬರುತ್ತದೆ. ಈ ಕಾರಣದಿಂದಲೂ ಅವರು ಬೇಡ ಎಂದಿರಬಹುದು ಎಂದು ಊಹಿಸಲಾಗಿದೆ.

ರಾಗಿಣಿ ಅವರು ಇತ್ತೀಚೆಗೆ ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅವರು ‘ವೃಷಭ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಮಲಯಾಳಂ ಸಿನಿಮಾ. ಈ ಸಿನಿಮಾ ಮೂಲಕ ಮಲಯಾಳಂ ಪ್ರೇಕ್ಷಕರಿಗೂ ಅವರು ಪರಿಚಯ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka 2nd PUC Exam 2026: ದ್ವಿತೀಯ ಪಿಯುಸಿ ಪರೀಕ್ಷೆ ಯಾವಾಗ? ವೇಳಾಪಟ್ಟಿ, ಕೇಂದ್ರಗಳು, ನಿಯಮಗಳ ಮಾಹಿತಿ ಇಲ್ಲಿದೆ – Kannada News | Karnataka 2nd PUC Exam 2026 Dates Announced? Practical and Main Exam Schedule, Centres and Rules details here

ಬೆಂಗಳೂರು, ಜನವರಿ 5: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) 2026 ರ ದ್ವಿತೀಯ ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆಗಳ (Second PU Exam) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವರ್ಷ ದ್ವಿತೀಯ ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆಗಳು ಜನವರಿ 27 ರಿಂದ ಪ್ರಾರಂಭವಾಗಿ ಫೆಬ್ರವರಿ 2 ರವರೆಗೆ ನಡೆಯುವ ನಿರೀಕ್ಷೆಯಿದೆ. 2026 ರ ದ್ವಿತೀಯ ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆಗಳು ಒಟ್ಟಾರೆಯಾಗಿ ಒಂದು ವಾರದ ಅವಧಿಯಲ್ಲಿ ನಡೆಯಲಿದೆ. ಈ ಬಗ್ಗೆ ಕೆಎಸ್ಇಎಬಿ ಅಧಿಕೃತ ಸುತ್ತೋಲೆ ಹೊರಡಿಸಿದೆ.

ವಿದ್ಯಾರ್ಥಿಗಳು 2026 ರ ಕರ್ನಾಟಕ ದ್ವಿತೀಯ ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆಯ ವೇಳಾಪಟ್ಟಿಯನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್ kseab.karnataka.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚುವರಿಯಾಗಿ, ಪರೀಕ್ಷಾ ಕೇಂದ್ರಗಳು ಮತ್ತು ಸಮಯದ ಬಗ್ಗೆ ವಿದ್ಯಾರ್ಥಿಗಳು ಶಾಲೆಗಳಿಂದ ನೇರವಾಗಿ ವಿವರವಾದ ವೇಳಾಪಟ್ಟಿಯನ್ನು ಪಡೆಯಬಹುದಾಗಿದೆ.

ಕರ್ನಾಟಕ 2ನೇ ಪಿಯುಸಿ ಮುಖ್ಯ ಪರೀಕ್ಷೆಗಳ ವೇಳಾಪಟ್ಟಿ

ಪ್ರಾಕ್ಟಿಕಲ್ ಪರೀಕ್ಷೆಗಳು ಪೂರ್ಣಗೊಂಡ ನಂತರ, ಕರ್ನಾಟಕ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಗಳು 2026 ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆಯಲಿವೆ. ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಈ ಪರೀಕ್ಷೆಗಳನ್ನು ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ನಡೆಸಲಾಗುವುದು ಎಂದು ಕೆಎಸ್ಇಎಬಿ ತಿಳಿಸಿದೆ.

ದ್ವಿತೀಯ ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ಆಯೋಜಿಸಲು, ಕೆಎಸ್ಇಎಬಿ ಕಟ್ಟುನಿಟ್ಟಾದ ಕಾರ್ಯವಿಧಾನ ಅನುಸರಿಸುತ್ತಿದೆ. ಪರೀಕ್ಷೆಗಳ ಮೇಲ್ವಿಚಾರಣೆಗಾಗಿ ಪ್ರತಿ ಜಿಲ್ಲೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗುತ್ತದೆ. ಸಮಿತಿಯು ಆಯಾ ವಿಜ್ಞಾನ ವಿಷಯದ ಒಬ್ಬ ಪ್ರಾಂಶುಪಾಲರನ್ನು ಸಂಯೋಜಕರಾಗಿ ಒಳಗೊಂಡಿರುತ್ತದೆ. ಪ್ರತಿ ಪ್ರಾಯೋಗಿಕ ವಿಷಯಕ್ಕೆ ಗರಿಷ್ಠ ಇಬ್ಬರು ಹಿರಿಯ ವಿಜ್ಞಾನ ಉಪನ್ಯಾಸಕರನ್ನು ಸದಸ್ಯರನ್ನಾಗಿ ನೇಮಿಸಲಾಗುತ್ತದೆ ಎಂದು ಕೆಎಸ್ಇಎಬಿ ಮಾಹಿತಿ ನೀಡಿದೆ.

ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ವೇಳಾಪಟ್ಟಿಯನ್ನು ಸಿದ್ಧಪಡಿಸುವ ಜವಾಬ್ದಾರಿ ಜಿಲ್ಲಾ ಸಮಿತಿಯದ್ದಾಗಿದೆ. ನಿಷ್ಪಕ್ಷಪಾತ ಧೋರಣೆ ಕಾಪಾಡಿಕೊಳ್ಳಲು ಆಂತರಿಕ ಮತ್ತು ಬಾಹ್ಯ ಪರೀಕ್ಷಕರನ್ನು ಪಾರದರ್ಶಕವಾಗಿ ನೇಮಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್​​​ನ್ಯೂಸ್​​: ಪ್ರಾಯೋಗಿಕ ಪರೀಕ್ಷೆಗಳಿಗೆ ಹೊಸ ರೂಲ್ಸ್​​​ ತಂದ ಇಲಾಖೆ

ಪ್ರಾಕ್ಟಿಕಲ್ ಪರೀಕ್ಷೆಗಳ ಸಮಯದಲ್ಲಿ ಯಾವುದೇ ರೀತಿಯ ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಸುಗಮವಾಗಿ ಮತ್ತು ನ್ಯಾಯಯುತವಾಗಿ ಪರೀಕ್ಷೆ ಬರೆಯುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ ಎಂದು ಕೆಎಸ್ಇಎಬಿ ಹೇಳಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್ – Kannada News | Desert Vipers won their maiden ILT20 title

ದುಬೈ ಇಂಟರ್​​​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಟರ್​​ನ್ಯಾಷನಲ್ ಲೀಗ್ ಟಿ20 ಫೈನಲ್ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ತಂಡಕ್ಕೆ ಸೋಲುಣಿಸಿ ಡೆಸರ್ಟ್ ವೈಪರ್ಸ್ ತಂಡವು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ಎಮಿರೇಟ್ಸ್ ತಂಡದ ನಾಯಕ ಕೀರನ್ ಪೊಲಾರ್ಡ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಸರ್ಟ್ ವೈಪರ್ಸ್ ಪರ ನಾಯಕ ಸ್ಯಾಮ್ ಕರನ್ 51 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 74 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಡೆಸರ್ಟ್ ವೈಪರ್ಸ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು.

183 ರನ್​ಗಳ ಗುರಿ ಬೆನ್ನತ್ತಿದ ಎಂಐ ಎಮಿರೇಟ್ಸ್ ತಂಡವು 18.3 ಓವರ್​ಗಳಲ್ಲಿ 136 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಡೆಸರ್ಟ್ ವೈಪರ್ಸ್ ತಂಡವು 46 ರನ್​​ಗಳ ಭರ್ಜರಿ ಜಯ ಸಾಧಿಸಿ ಚೊಚ್ಚಲ ಬಾರಿಗೆ ಇಂಟರ್​​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಎಂಐ ಎಮಿರೇಟ್ಸ್ (ಪ್ಲೇಯಿಂಗ್ XI): ಮುಹಮ್ಮದ್ ವಸೀಮ್, ಆಂಡ್ರೆ ಫ್ಲೆಚರ್, ಟಾಮ್ ಬ್ಯಾಂಟನ್ (ವಿಕೆಟ್ ಕೀಪರ್), ತಜೀಂದರ್ ಧಿಲ್ಲೋನ್, ಕೀರನ್ ಪೊಲಾರ್ಡ್(ನಾಯಕ), ಶಕೀಬ್ ಅಲ್ ಹಸನ್, ರೊಮಾರಿಯೋ ಶೆಫರ್ಡ್, ಅರಬ್ ಗುಲ್ ಮೊಮಂಡ್, ಅಲ್ಲಾ ಘಜನ್ಫರ್, ಮುಹಮ್ಮದ್ ರೋಹಿದ್ ಖಾನ್, ಫಝಲ್ಹಕ್ಫಾರೂಕಿ.

ಡೆಸರ್ಟ್ ವೈಪರ್ಸ್ (ಪ್ಲೇಯಿಂಗ್ XI): ಫಖರ್ ಝಮಾನ್, ಮ್ಯಾಕ್ಸ್ ಹೋಲ್ಡನ್, ಟಾಮ್ ಬ್ರೂಸ್ (ವಿಕೆಟ್ ಕೀಪರ್), ಜೇಸನ್ ರಾಯ್, ಸ್ಯಾಮ್ ಕರನ್ (ನಾಯಕ), ಹಸನ್ ನವಾಝ್, ಡಾನ್ ಲಾರೆನ್ಸ್, ವೃತ್ಯ ಅರವಿಂದ್, ಖುಝೈಮಾ ತನ್ವೀರ್, ನಸೀಮ್ ಶಾ, ಉಸ್ಮಾನ್ ತಾರಿಕ್.

 

Source link

ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್ – Kannada News | Bhavya Gowda Dance For Kantara Chapter 1 Madana manamohini song

ಭವ್ಯಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿಯಾಗಿದ್ದರು. ಆ ಬಳಿಕ ಅವರು ‘ಕರ್ಣ’ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದರು. ಈ ಬೆನ್ನಲ್ಲೇ ಅವರಿಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಸ್ಪರ್ಧಿಸೋ ಅವಕಾಶ ಸಿಕ್ಕಿದೆ. ‘ಕಾಂತಾರ: ಚಾಪ್ಟರ್ 1’ ಚಿತ್ರದ ‘ಮದನ ಮನ ಮೋಹಿನಿ’ ಹಾಡಿಗೆ ಭವ್ಯಾ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಶೋನ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಇದೇ ವೇಳೆ ನಂದ ಕೂಡ ಅವರಿಗೆ ಸ್ಪರ್ಧಿಯಾಗಿ ಹೆಜ್ಜೆ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಬಿಗ್ ಬಾಸ್ ಬಾಗಿಲು? – Kannada News | Rakshitha Shetty Pushes Rashika Shetty In Bigg Boss Kannada Main door to open For Rakshita Shettty?

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಕ್ಷಿತಾ ಶೆಟ್ಟಿ ಸುದ್ದಿಯಲ್ಲಿ ಇದ್ದಾರೆ. ಕೊನೆಯ ವಾರಗಳಲ್ಲಿ ಅವರು ಜಗಳಕ್ಕೆ ಇಳಿದಿದ್ದಾರೆ. ರಕ್ಷಿತಾ ಶೆಟ್ಟಿ ಅವರು ರಾಶಿಕಾನ ತಳ್ಳಿರೋದು ಪ್ರೋಮೋದಲ್ಲಿ ಕಾಣಿಸಿದೆ. ಇದು ಚರ್ಚೆ ಹುಟ್ಟುಹಾಕಿದೆ. ಈ ಕಾರಣಕ್ಕೆ ರಕ್ಷಿತಾನ ಎಲಿಮಿನೇಟ್ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ತಳ್ಳಾಡಿಕೊಂಡರೆ ಕೆಲವೊಮ್ಮೆ ಬಿಗ್ ಬಾಸ್ ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಈ ಪ್ರಕರಣದಲ್ಲಿ ಬಿಗ್ ಬಾಸ್ ಅದನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version