Headlines

ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್ – Kannada News | Bhavya Gowda Dance For Kantara Chapter 1 Madana manamohini song

ಭವ್ಯಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿಯಾಗಿದ್ದರು. ಆ ಬಳಿಕ ಅವರು ‘ಕರ್ಣ’ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದರು. ಈ ಬೆನ್ನಲ್ಲೇ ಅವರಿಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಸ್ಪರ್ಧಿಸೋ ಅವಕಾಶ ಸಿಕ್ಕಿದೆ. ‘ಕಾಂತಾರ: ಚಾಪ್ಟರ್ 1’ ಚಿತ್ರದ ‘ಮದನ ಮನ ಮೋಹಿನಿ’ ಹಾಡಿಗೆ ಭವ್ಯಾ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಶೋನ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಇದೇ ವೇಳೆ ನಂದ ಕೂಡ ಅವರಿಗೆ ಸ್ಪರ್ಧಿಯಾಗಿ ಹೆಜ್ಜೆ ಹಾಕಿದ್ದಾರೆ. ಇನ್ನಷ್ಟು ಸಿನಿಮಾ…

Read More

ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಬಿಗ್ ಬಾಸ್ ಬಾಗಿಲು? – Kannada News | Rakshitha Shetty Pushes Rashika Shetty In Bigg Boss Kannada Main door to open For Rakshita Shettty?

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಕ್ಷಿತಾ ಶೆಟ್ಟಿ ಸುದ್ದಿಯಲ್ಲಿ ಇದ್ದಾರೆ. ಕೊನೆಯ ವಾರಗಳಲ್ಲಿ ಅವರು ಜಗಳಕ್ಕೆ ಇಳಿದಿದ್ದಾರೆ. ರಕ್ಷಿತಾ ಶೆಟ್ಟಿ ಅವರು ರಾಶಿಕಾನ ತಳ್ಳಿರೋದು ಪ್ರೋಮೋದಲ್ಲಿ ಕಾಣಿಸಿದೆ. ಇದು ಚರ್ಚೆ ಹುಟ್ಟುಹಾಕಿದೆ. ಈ ಕಾರಣಕ್ಕೆ ರಕ್ಷಿತಾನ ಎಲಿಮಿನೇಟ್ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ತಳ್ಳಾಡಿಕೊಂಡರೆ ಕೆಲವೊಮ್ಮೆ ಬಿಗ್ ಬಾಸ್ ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಈ ಪ್ರಕರಣದಲ್ಲಿ ಬಿಗ್ ಬಾಸ್ ಅದನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​…

Read More

‘ತಿಥಿ’ ನಟ ಗಡ್ಡಪ್ಪ ಸಾವಿನ ಬೆನ್ನಲ್ಲೇ ಸೆಂಚುರಿ ಗೌಡ ನಿಧನ – Kannada News | Century Gowda Alias Singre Gowda Dies After Gaddappa: ‘Thithi’ Stars’ Demise Shocks Sandalwood

‘ತಿಥಿ’ ಸಿನಿಮಾ (Thithi Movie) ಖ್ಯಾತಿ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ ಅವರು 2025r ನವೆಂಬರ್ 12ರಂದು ನಿಧನ ಹೊಂದಿದ್ದರು. ಈ ಸಿನಿಮಾದಲ್ಲಿ ಸೆಂಚುರಿ ಗೌಡ ಪಾತ್ರ ಮಾಡಿದ್ದ ಸಿಂಗ್ರಿಗೌಡ ಕೂಡ ಈಗ ನಿಧನರಾಗಿದ್ದಾರೆ. ಅವರಿಗೆ ನೂರು ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು. ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಜನವರಿ 4ರ ರಾತ್ರಿ ಅವರು ಕೊನೆಯುಸಿರು ಎಳೆದರು. ಸೆಂಚುರಿ ಗೌಡರು ಪಾಂಡವಪುರ ತಾಲೂಕಿನ ಸಿಂಗ್ರೀಗೌಡನಕೊಪ್ಪಲಿನವರು. ‘ತಿಥಿ’ ಸಿನಿಮಾದಲ್ಲಿ ಅವರು ಮಾಡಿದ ಸೆಂಚುರಿ ಗೌಡ ಪಾತ್ರ ಗಮನ ಸೆಳೆದಿತ್ತು. ಈ…

Read More

Video: ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ, 200ಕ್ಕೂ ಅಧಿಕ ವಾಹನಗಳು ಭಸ್ಮ – Kannada News | Large Blaze at Kerala Railway Station Leaves Hundreds of Vehicles Damaged

ತ್ರಿಶೂರ್, ಜನವರಿ 05: ತ್ರಿಶೂರ್ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 200ಕ್ಕೂ ಅಧಿಕ ವಾಹನಗಳು ಸುಟ್ಟು ಭಸ್ಮವಾಗಿವೆ. ಪ್ಲಾಟ್‌ಫಾರ್ಮ್ ಸಂಖ್ಯೆ 2 ರ ಬಳಿ ಇರುವ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕರು ಮತ್ತು ಹತ್ತಿರದ ನಿವಾಸಿಗಳಲ್ಲಿ ಭಯಭೀತರಾಗಿದ್ದಾರೆ. ವರದಿಗಳ ಪ್ರಕಾರ, 6.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಜ್ವಾಲೆ ವೇಗವಾಗಿ ಪಾರ್ಕಿಂಗ್ ಪ್ರದೇಶವನ್ನು ಆವರಿಸಿಕೊಂಡಿತ್ತು. ಪ್ರತಿನಿತ್ಯ ಸುಮಾರು 500ಕ್ಕೂ ಹೆಚ್ಚು ಬೈಕ್​ಗಳನ್ನು ಅಲ್ಲಿ ನಿಲುಗಡೆ ಮಾಡಲಾಗುತ್ತದೆ.  …

Read More

Bengaluru Air Quality: ಕಳೆದ ವರ್ಷಕ್ಕಿಂತ ಈ ವರ್ಷ ಕುಸಿಯಲಿದೆಯೇ ಬೆಂಗಳೂರಿನ ಏರ್ ಕ್ವಾಲಿಟಿ? – Kannada News | Bangalore Air Pollution Crisis: Will Bengaluru’s air quality deteriorate this year compared to last year?

ಕಳೆದ ವರ್ಷಕ್ಕಿಂತ ಈ ವರ್ಷ ಕುಸಿಯಲಿದೆಯೇ ಬೆಂಗಳೂರಿನ ಏರ್ ಕ್ವಾಲಿಟಿ? ಬೆಂಗಳೂರು, ಜನವರಿ 05: ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ (Bengaluru Air Quality) ಇಂದಿನ ಗಾಳಿಯ ಗುಣಮಟ್ಟ 175 ಇದ್ದು, ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಇಂದೂ PM2.5 82 ಇದ್ದರೆ, PM10 108 ಇದೆ. ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಇಂದಿನ ಏರ್ ಕ್ವಾಲಿಟಿ ಸುಧಾರಿಸಿದೆ ಎನಿಸಿದರೂ WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ ಈ…

Read More

ದೊಡ್ಡ ಬೆಲೆ ತೆರಬೇಕಾಗುತ್ತೆ, ವೆನೆಜುವೆಲಾ ಹಂಗಾಮಿ ಅಧ್ಯಕ್ಷರಿಗೂ ಬೆದರಿಕೆ ಹಾಕಿದ ಟ್ರಂಪ್ – Kannada News | Trump Warns Venezuela’s Vice President of Serious Consequences Amid Tensions

ವಾಷಿಂಗ್ಟನ್, ಜನವರಿ 05: ಒಂದೆಡೆ ಯುದ್ಧಕ್ಕೆ ಮುಂದಾಗಿರುವ ದೇಶಗಳಿಗೆ ಶಾಂತಿ ಪಾಠ ಮಾಡುತ್ತಾ, ಮತ್ತೊಂದೆಡೆ ಖುದ್ದು ತಾನೇ ಡಾನ್ ರೀತಿಯ ವರ್ತನೆಯನ್ನು ಟ್ರಂಪ್ ತೋರುತ್ತಿದ್ದಾರೆ. ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊರನ್ನು ಸೆರೆಹಿಡಿದ ಕಾರ್ಯಾಚರಣೆಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಡೆಲ್ಸಿ ರೊಡ್ರಿಗಸ್ ಅವರಿಗೂ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಟ್ರಂಪ್ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋಗೆ ಎಚ್ಚರಿಕೆ ಸಂದೇಶ ರವಾನಿಸಿರುವುದು ಲ್ಯಾಟಿನ್ ಅಮೆರಿಕಾದ್ಯಂತ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ….

Read More

ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್: ಸಿನಿಮೀಯ ರೀತಿಯಲ್ಲಿ ಕಾರು ಚೇಸ್ ಮಾಡಿ ಬೈಕ್ ಸವಾರನ ಕಿರಿಕ್ – Kannada News | Road Rage Near Bengaluru Airport Checking Point: Biker Chases Cab in Filmy Style Car Chase, Video goes viral

ದೇವನಹಳ್ಳಿ, ಜನವರಿ 5: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಬಿ) ಸೆಕ್ಯೂರಿಟಿ ಚೆಕಿಂಗ್ ಪಾಯಿಂಟ್​ ಬಳಿಯೇ ಸಿನಿಮೀಯ ರೋಡ್​ರೇಜ್ ನಡೆದಿದೆ. ಕ್ಯಾಬ್ ಚಾಲಕ ಮತ್ತು ಬೈಕ್ ಸವಾರನ ನಡುವೆ ಉಂಟಾದ ಕಿರಿಕ್ ಏರ್‌ಪೋರ್ಟ್‌ ರಸ್ತೆಯಲ್ಲಿ ಕಾರು–ಬೈಕ್ ಚೇಸ್‌ಗೆ ತಿರುಗಿದ್ದು, ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬೈಕ್ ಸವಾರ ಕ್ಯಾಬ್ ಅನ್ನು ಸಿನಿಮೀಯವಾಗಿ ಹಿಂಬಾಲಿಸಿಕೊಂಡು ಹೋಗಿ, ಏರ್‌ಪೋರ್ಟ್ ಸೆಕ್ಯೂರಿಟಿ ಚೆಕಿಂಗ್ ಪಾಯಿಂಟ್ ಬಳಿ ಅಡ್ಡಗಟ್ಟಿ ಗಲಾಟೆ ನಡೆಸಿದ್ದಾನೆ. ಹಿಂಬದಿ ಬರುತ್ತಿದ್ದ ಮತ್ತೊಂದು ಕಾರಿನ ಚಾಲಕನ ಮೊಬೈಲ್‌…

Read More

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಮುಂದುವರೆದ ಶುಷ್ಕ ವಾತಾವರಣ – Kannada News | Bengaluru temperature: Dry weather all over karnataka

ರಾಜ್ಯದಲ್ಲಿ ಮುಂದುವರೆದ ಶುಷ್ಕ ವಾತಾವರಣ ಬೆಂಗಳೂರು, ಜನವರಿ 05: ಕಳೆದ ಕೆಲ ದಿನಗಳಿಂದ ರಾಜ್ಯದ ಕೆಲವೆಡೆ ತುಂತುರು ಮಳೆ, ಇನ್ನೂ ಕೆಲವೆಡೆ ಒಣಹವೆಯ (Weather Forecast) ವಾತಾವರಣ ಮನೆಮಾಡಿದೆ. ಬೆಂಗಳೂರಿನಲ್ಲಿ ಹಲವು ದಿನಗಳಿಂದ ಮಂಜು ಮುಸುಕಿದ ಹವಾಮಾನ ಕಂಡುಬರುತ್ತಿದೆ. ದಕ್ಷಿಣ ಒಳನಾಡು ಸೇರಿದಂತೆ ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿಯೂ ನಿನ್ನೆಯಂತೆಯೇ ಇಂದೂ ಒಣ ಹವೆ ಮುಂದುವರಿಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಎಲ್ಲೆಲ್ಲಿ ಒಣಹವೆ? ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ,…

Read More

Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು? – Kannada News | Daily Devotional: Who Can Perform This Devotional Practice and Its Benefits

ಬೆಂಗಳೂರು, ಜನವರಿ 05: ಕುಂಕುಮಾರ್ಚನೆಯನ್ನು ಯಾರು ಮಾಡಬಹುದು ಎಂಬ ಪ್ರಶ್ನೆಗೆ ಸ್ಪೀಕರ್‌ ಅವರು, ಈ ಪೂಜಾ ವಿಧಾನವನ್ನು ಎಲ್ಲರೂ ಮಾಡಬಹುದು ಎಂದು ಸ್ಪಷ್ಟಪಡಿಸುತ್ತಾರೆ. ವಿದ್ಯಾರ್ಥಿಗಳು, ವ್ಯಾಪಾರಸ್ಥರು, ರೈತರು, ಉದ್ಯೋಗದಲ್ಲಿರುವವರು ಸೇರಿದಂತೆ ಪ್ರತಿಯೊಬ್ಬರೂ ಇದನ್ನು ಆಚರಿಸಬಹುದು. ಮಕ್ಕಳ ಕೈಯಿಂದ ಕುಂಕುಮಾರ್ಚನೆ ಮಾಡಿಸುವುದರಿಂದ ಸಂಸ್ಕಾರ, ಜ್ಞಾನ ವೃದ್ಧಿ, ತಾಳ್ಮೆ ಮತ್ತು ದುಷ್ಟ ಶಕ್ತಿಗಳ ಕಾಟದಿಂದ ರಕ್ಷಣೆ ದೊರೆಯುತ್ತದೆ. ಗಂಡಸರು ಶುಕ್ರವಾರದಂದು ಕುಂಕುಮಾರ್ಚನೆ ಮಾಡಿದರೆ ವ್ಯಾಪಾರದಲ್ಲಿ ಲಾಭ, ಸಾಲಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗಿದೆ. ಹೆಂಗಸರಿಗೆ ದೀರ್ಘ ಸುಮಂಗಲಿತ್ವ, ಮಕ್ಕಳೊಂದಿಗೆ ಸೌಹಾರ್ದತೆ,…

Read More

ವಿಜಯಪುರ: 56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ! – Kannada News | Devotee Carries 56 Kg Wheat Sack on Foot March to Ayodhya Ram Mandir From Vijayapura, Watch Video

ವಿಜಯಪುರ, ಜನವರಿ 5: ಶ್ರೀರಾಮನ ಭಕ್ತರೊಬ್ಬರು 56 ಕೆಜಿ ತೂಕದ ಗೋಧಿ ಮೂಟೆ ಹೊತ್ತುಕೊಂಡು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ ಕೇದಾರಲಿಂಗ ಕುಂಬಾರ ಎಂಬವರು ಗೋಧಿ ಮೂಟೆ ಹೊತ್ತು ಪಾದಯಾತ್ರೆ ಹೊರಟವರು. ಇದಕ್ಕಾಗಿಯೇ ಕೇದಾರಲಿಂಗ ಕುಂಬಾರ ಪ್ರತಿನಿತ್ಯ ಮೂಟೆ ಹೊತ್ತು 20 ಕಿಮೀ ನಡೆದಾಡಿ ಅಭ್ಯಾಸ ಮಾಡಿದ್ದರು. ಗೋಸಂಕ್ಷಣೆ ಉದ್ದೇಶ, ಪ್ರತಿ ಮನೆಗೆ ಒಂದು ಗೋವು ಸಾಕುವಂತಾಗಲಿ ಎಂದು ರಾಮನಿಗೆ ಹರಕೆ ಹೊತ್ತು ಈ ಕೈಂಕರ್ಯ ಕೈಗೊಂಡಿದ್ದೇನೆ ಎಂದು ಕೇದಾರಲಿಂಗ…

Read More