ಆಟಗಾರನಾಗಿ ವಿಫಲರಾದರೂ ನಾಯಕನಾಗಿ ಇತಿಹಾಸ ನಿರ್ಮಿಸಿದ ವೈಭವ್ ಸೂರ್ಯವಂಶಿ
ಕಳೆದೊಂದು ವರ್ಷದಲ್ಲಿ ತನ್ನ ಆಟದ ಮೂಲಕವೇ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿರುವ ವೈಭವ್ ಸೂರ್ಯವಂಶಿ ಕೇವಲ 14 ವರ್ಷಕ್ಕೆ ಐಪಿಎಲ್ಗೆ ಪದಾರ್ಪಣೆ ಮಾಡಿ ದಾಖಲೆ ನಿರ್ಮಿಸಿದ್ದರು. ಇದರ ಜೊತೆಗೆ ಭಾರತ ತಂಡಕ್ಕೂ ಎಂಟ್ರಿಕೊಟ್ಟು ಅಬ್ಬರಿಸಿದ್ದರು. ಇದರ ಫಲವಾಗಿ ವೈಭವ್ಗೆ ಮೊಟ್ಟ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿಯೂ ಸಿಕ್ಕಿದೆ. ವಾಸ್ತವವಾಗಿ ಭಾರತ ಯುವ ತಂಡ ಮೂರು ಪಂದ್ಯಗಳ ಯೂತ್ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದೆ. ಈ ಪ್ರವಾಸದಲ್ಲಿ ವೈಭವ್ಗೆ ಟೀಂ ಇಂಡಿಯಾವನ್ನು ಮುನ್ನಡೆಸುವ…