IND vs SA: ನಾಯಕನಾಗಿ ಮೊದಲ ಪಂದ್ಯದಲ್ಲೇ ಎಡವಿದ ವೈಭವ್ ಸೂರ್ಯವಂಶಿ – Kannada News | Vaibhav Suryavanshi: India U19’s Youngest Captain at 14, Struggles on Debut

ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ವೈಭವ್ ಮಾತ್ರವಲ್ಲದೆ, ಟೀಂ ಇಂಡಿಯಾದ ಅಗ್ರ ಕ್ರಮಾಂಕವೂ ಸಂಪೂರ್ಣವಾಗಿ ವಿಫಲವಾಯಿತು. ಜಾರ್ಜ್ ಮತ್ತು ವೈಭವ್ ನಂತರ, ವಿಕೆಟ್ ಕೀಪರ್ ಅಭಿಗ್ಯಾನ್ ಕುಂಡು ಮತ್ತು ವೇದಾಂತ್ ತ್ರಿವೇದಿ ಕೂಡ ಪರಿಣಾಮಕಾರಿ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿ ಪೆವಿಲಿಯನ್‌ ಸೇರಿಕೊಂಡರು.

Source link

ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ವಿಡಿಯೋ ತೋರಿಸಿ ಆರೋಪ ಮಾಡಿದ ಜನಾರ್ದನ ರೆಡ್ಡಿ – Kannada News | Janardhana Reddy Accuses Congress MLA Bharat Reddy of Links With Ganja Peddler, Cites Video Evidence

ಬಳ್ಳಾರಿ, ಜನವರಿ 3: ಗಾಂಜಾ ಪೆಡ್ಲರ್ ಜೊತೆಗೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಇದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಬಳ್ಳಾರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿಡಿಯೋ ಪ್ರದರ್ಶಿಸಿ ಈ ಆರೋಪ ಮಾಡಿದ್ದಾರೆ. ಬಳ್ಳಾರಿಯಲ್ಲಿ ತಮ್ಮ ಮನೆ ಮುಂದೆ ಫೈರಿಂಗ್ ಘಟನೆ ವಿಚಾರವಾಗಿ ಭರತ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಜನಾರ್ದನ ರೆಡ್ಡಿ, ಭರತ್ ರೆಡ್ಡಿ ಗಾಂಜಾ ಪೆಡ್ಲರ್ ದೌಲಾ ಎಂಬಾತನ ಜೊತೆ ಇದ್ದ ಎಂದು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ವಿಡಿಯೋದಲ್ಲಿ, ಶಾಸಕ ನಾರಾ ಭರತ್ ರೆಡ್ಡಿ ಗಾಂಜಾ ಪೆಡ್ಲರ್ ದೌಲಾ ಜೊತೆಗೆ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುವ ದೃಶ್ಯಗಳು ಇವೆ. ಇದನ್ನು ಆಧಾರವಾಗಿಟ್ಟುಕೊಂಡು ಜನಾರ್ದನ ರೆಡ್ಡಿ ಕಾಂಗ್ರೆಸ್ ಶಾಸಕನ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ದೌಲಾ ಮೇಲೆ 50 ಕೆಜಿ ಗಾಂಜಾ ಪೆಡ್ಲಿಂಗ್ ಸೇರಿದಂತೆ 18 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.

ಬಳ್ಳಾರಿ ಫೈರಿಂಗ್ ವಿಚಾರದಲ್ಲಿ ಮೃತ ಕಾಂಗ್ರೆಸ್ ಕಾರ್ಯಕರ್ತರನಿಗೆ ನ್ಯಾಯ ಸಿಗಬೇಕಾದರೆ ತಪ್ಪಿತಸ್ಥರಾದ ಸತೀಶ್ ರೆಡ್ಡಿ ಮತ್ತು ಅವರ ಅಂಗರಕ್ಷಕರನ್ನು ತಕ್ಷಣ ಬಂಧಿಸಬೇಕು ಎಂದು ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ ಸೇರಿದಂತೆ ಇತರರು ಆಗ್ರಹಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸರ್ಕಾರವನ್ನು ಒತ್ತಾಯಿಸಿ, ಇಲ್ಲವಾದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ನಾಯಕ ಶ್ರೀರಾಮುಲು ಕೂಡ ಭರತ್ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಗಲಭೆಗೆ ತಲೆದಂಡ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್ ನೆಜ್ಜೂರು? – Kannada News | Ballari Riot Fallout: Suspended SP Pavan Nejjuru Attempts to end his life? Reports Trigger Concern

ಬೆಂಗಳೂರು, ಜನವರಿ 3: ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ನಡೆದ ಹಿಂಸಾಚಾರದ ಬೆನ್ನಲ್ಲೇ ಅಮಾನತುಗೊಂಡಿದ್ದ ಎಸ್‌ಪಿ ಪವನ್ ನಜ್ಜೂರ್ ತುಮಕೂರಿನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿಗಳು ಹರಿದಾಡುತ್ತಿವೆ. ಸ್ನೇಹಿತನ ಫಾರ್ಮ್‌ಹೌಸ್‌ನಲ್ಲಿ ಮಾತ್ರೆ ಸೇವಿಸಿದ್ದ ನಜ್ಜೂರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ಸುದ್ದಿಯನ್ನು ಅಧಿಕೃತ ಮೂಲಗಳು ಖಚಿತಪಡಿಸಿಲ್ಲ.

ಬಳ್ಳಾರಿಯಲ್ಲಿ ಡ್ಯೂಟಿಗೆ ಸೇರಿಕೊಂಡ ಕೆಲವೇ ಗಂಟೆಗಳಲ್ಲಿ ಕರ್ತವ್ಯ ಲೋಪದ ಆರೋಪದಡಿ ಪವನ್ ನಜ್ಜೂರ್ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು. 11 ವರ್ಷಗಳ ನಂತರ ಅವರಿಗೆ ಈ ಎಕ್ಸಿಕ್ಯೂಟಿವ್ ಹುದ್ದೆ ಸಿಕ್ಕಿತ್ತು. ಈ ಅಮಾನತು ಆದೇಶದಿಂದ ಮನನೊಂದು ಅವರು ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಊಹಿಸಲಾಗಿದೆ. ಆದಾಗ್ಯೂ, ಈ ಬಗ್ಗೆ ಇನ್ನಷ್ಟೇ ಅಧಿಕೃತ ಸ್ಪಷ್ಟನೆ ಲಭ್ಯವಾಗಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮಾನವೀಯ ಕೃತ್ಯ: ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿ; 10 ದಿನದಿಂದ ನರಳಾಟ – Kannada News | Bagalkot: Relatives Abandon Critically Ill Man at Hospital; Public Outrage

ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿ

ಬಾಗಲಕೋಟೆ, ಜನವರಿ 03: ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು  ಬಂದು ಬಳಿಕ ಬಿಟ್ಟು ಪರಾರಿ ಆಗಿರುವಂತಹ ಘಟನೆಯೊಂದು ಬಾಗಲಕೋಟೆ (Bagalkote) ಜಿಲ್ಲೆಯ ರಬಕವಿ-ಬನಹಟ್ಟಿ (Rabkavi Banhatti) ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಸಂಬಂಧಿಕರಿಂದಲೇ ಅಮಾನವೀಯ ಕೃತ್ಯ ಎಸಗಲಾಗಿದ್ದು, ಸುಮಾರು ಹತ್ತು ದಿನಗಳಿಂದ ಸೂಕ್ತ ಆರೈಕೆ ಇಲ್ಲದೆ ವ್ಯಕ್ತಿ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಸದ್ಯ ಸಂಬಂಧಿಕರ ಈ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ನಡೆದದ್ದೇನು?

ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿಯ ಹೆಸರು ವಿಠ್ಠಲ ರಾವಳ್ (22) ಎಂದು ತಿಳಿದುಬಂದಿದ್ದು, ಮೂಲತಃ ಬನಹಟ್ಟಿ ನಿವಾಸಿಯಾಗಿದ್ದಾರೆ. ಆಧಾರ ಕಾರ್ಡ ಪರಿಶೀಲನೆ ಮಾಡಿದ ಬಳಿಕ ಬನಹಟ್ಟಿ ನಿವಾಸಿ ಎಂದು ತಿಳಿದು ಬಂದಿದೆ. ವಾಸಿಯಾಗದ ರೋಗಕ್ಕೆ ತುತ್ತಾಗಿರುವ ಕಾರಣಕ್ಕೆ ವಿಠ್ಠಲ ರಾವಳ್​​ರನ್ನು ಸಂಬಂಧಿಕರು ಆಸ್ಪತ್ರೆಗೆ ಕರೆತಂದು ಬಿಟ್ಟು ಹೋಗಿದ್ದಾರೆ. ಸುಮಾರು ಹತ್ತು ದಿನಗಳಿಂದ ಸೂಕ್ತ ಆರೈಕೆ ಇಲ್ಲದೆ ನರಳಾಡಿದ್ದಾರೆ. ಸ್ನಾನ ಹಾಗೂ ಸ್ವಚ್ಚತೆ ಇಲ್ಲದಿರುವುದರಿಂದ ಗಬ್ಬೆದ್ದು ನಾರುತ್ತಿದ್ದು, ಇದರಿಂದ ಇತರೆ ರೋಗಿಗಳೂ ಪರದಾಡುವಂತಾಗಿದೆ.

ಇದನ್ನೂ ಓದಿ: ಬಾಗಲಕೋಟೆ: ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ತಾಯಿ, ಮಗು ರಕ್ಷಣೆ

ಸದ್ಯ ಸ್ಥಳೀಯರು ಶಾಸಕರು ಹಾಗೂ ಪೊಲೀಸ್​ರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಸಂಬಂಧಿಕರ ಬಗ್ಗೆ ಪರಿಶೀಲನೆ ಮಾಡಲಾಗಿದ್ದು, ಎಂಟು ದಿನಗಳ ಹಿಂದೆಯೇ ಮೊಬೈಲ್ ಸ್ವಿಚ್ ಆಫ್​​ ಆಗಿದೆ. ಇನ್ನು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.

ಚಿಕಿತ್ಸೆ ಕೂಡಿಸಲು ಮುಂದಾದ ಶಾಸಕ ಸಿದ್ದು ಸವದಿ

ಸ್ಥಳೀಯರ ಮಾಹಿತಿ ಬೆನ್ನಲ್ಲೇ ಇದೀಗ ಖಾಸಗಿ ಆಸ್ಪತ್ರೆಯಲ್ಲಿ ವಿಠ್ಠಲ ರಾವಳ್​​​ಗೆ ಚಿಕಿತ್ಸೆ ಕೂಡಿಸಲು ಶಾಸಕ ಸಿದ್ದು ಸವದಿ ಮುಂದಾಗಿದ್ದಾರೆ. ಅಲ್ಲದೇ ಒಂದು ವಾರದಿಂದ ಡಾ. ನದಾಪ್​ ಚಿಕಿತ್ಸೆ ನೀಡುವುದರ ಜೊತೆಗೆ ಅವರ ಊಟೋಪಚಾರ ಹಾಗೂ ಹೆಚ್ಚಿನ ಚಿಕಿತ್ಸೆಗೆ ಹಣ ನೀಡಲು ಮುಂದಾಗಿದ್ದಾರೆ. ಇನ್ನು ಸಂಬಂಧಿಕರಾಗಲಿ ಅಥವಾ ಸಮಾಜದ ಮುಖಂಡರಾಗಲಿ ವಿಠ್ಠಲ ರಾವಳ್ ಹತ್ತಿರ ಸುಳಿಯುತ್ತಿಲ್ಲ. ಸದ್ಯ ಸಂಬಂಧಿಕರ ನೀಚ ಕೃತ್ಯ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On – 3:24 pm, Sat, 3 January 26

Source link

NALCO Recruitment 2025: GATE ಪಾಸಾದವರಿಗೆ ಗುಡ್​ ನ್ಯೂಸ್​; ನ್ಯಾಷನಲ್ ಅಲ್ಯೂಮಿನಿಯಂ ಕಂಪನಿಯಲ್ಲಿ ಭರ್ಜರಿ ನೇಮಕಾತಿ – Kannada News | NALCO GET Recruitment 2025: 115 Engineering Jobs via GATE 2025 Apply Now!

ಗೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಗುಡ್​ ನ್ಯೂಸ್​ ಇಲ್ಲಿದೆ. ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ (NALCO), ಗ್ರಾಜುಯೇಟ್ ಎಂಜಿನಿಯರ್ ಟ್ರೈನಿ (GET) ಹುದ್ದೆಗೆ ಖಾಲಿ ಹುದ್ದೆಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಕಂಪನಿಯ ಅಧಿಕೃತ ವೆಬ್‌ಸೈಟ್ nalcoindia.com ಮೂಲಕ ಜನವರಿ 22 ರವರೆಗೆ ಅರ್ಜಿ ಸಲ್ಲಿಸಬಹುದು. ಕಂಪನಿಯು ಒಟ್ಟು ಸುಮಾರು 115 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹತಾ ಮಾನದಂಡಗಳು:

ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪೂರ್ಣಾವಧಿಯ, ನಿಯಮಿತ ಪದವಿಯನ್ನು ಹೊಂದಿರಬೇಕು. ಅಭ್ಯರ್ಥಿಗಳು ಗೇಟ್ 2025 ಪರೀಕ್ಷೆಯಲ್ಲಿ ಕನಿಷ್ಠ ಶೇ. 65 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯಸ್ಸಿನ ಮಿತಿ 30 ವರ್ಷಗಳು. ಅರ್ಹತೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಖಾಲಿ ಹುದ್ದೆಯ ಅಧಿಸೂಚನೆಯನ್ನು ಪರಿಶೀಲಿಸಿ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 500 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಆದರೆ ಇತರ ವರ್ಗಗಳ ಅರ್ಜಿದಾರರು 100 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಶುಲ್ಕವನ್ನು ಪಾವತಿಸಬಹುದು.

ಇದನ್ನೂ ಓದಿ: ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ; ಪಿಯುಸಿ ಪಾಸಾಗಿದ್ರೆ ಕೂಡಲೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವುದು ಹೇಗೆ?

  • nalcoindia.com ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ನೀಡಲಾದ ವೃತ್ತಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ಈಗ ಆಯಾ ಹುದ್ದೆಗೆ ಅರ್ಜಿ ಸಲ್ಲಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ.
  • ವಿವರಗಳನ್ನು ನಮೂದಿಸಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಶುಲ್ಕವನ್ನು ಪಾವತಿಸಿ ಮತ್ತು ಸಲ್ಲಿಸಿ.

NALCO ಹುದ್ದೆಯ ನೇಮಕಾತಿ ಅಧಿಸೂಚನೆಯನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ ಏನು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಅವರ ಗೇಟ್ ಅಂಕಗಳು ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಲಸ್ಯವನ್ನು ಹೋಗಲಾಡಿಸಿ ದಿನವಿಡೀ ಆಕ್ಟಿವ್‌ ಆಗಿರಲು ಈ ಅಹಾರಗಳನ್ನು ಸೇವನೆ ಮಾಡಿ – Kannada News | Eat these foods to get rid of laziness and stay active throughout the day

ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಆಯಾಸ (fatigue) ಕಾಣಿಸಿಕೊಳ್ಳುವುದು ಸಹಜ.  ಆದರೆ ಕೆಲವರು ಆರೋಗ್ಯವಾಗಿದ್ದರೂ ಸಹ ಲವಲವಿಕೆಯೇ ಇಲ್ಲದೆ ಸುಸ್ತಾಗಿರುತ್ತಾರೆ. ಯಾವುದೇ ತೀರಾ ಸಣ್ಣ ಕೆಲಸ ಮಾಡಿದರೂ ಸಹ ಆಯಾಸವನ್ನು ಅನುಭವಿಸುತ್ತಾರೆ. ಇದಕ್ಕೆಲ್ಲಾ ಅಗತ್ಯ ಪೋಷಕಾಂಶಗಳ ಕೊರತೆಯೇ ಮುಖ್ಯ ಕಾರಣ.  ನಮ್ಮ ಪ್ರಸ್ತುತ ಜೀವನಶೈಲಿ ಮತ್ತು ಜಂಕ್ ಫುಡ್ ಸೇವನೆ ಅಭ್ಯಾಸಗಳು ನಮ್ಮ ದೇಹವನ್ನು ಒಳಗಿನಿಂದ ದುರ್ಬಲಗೊಳಿಸುತ್ತಿವೆ, ಇದರಿಂದಾಗಿ ದೇಹದಲ್ಲಿ ಸುಸ್ತು ಆವರಿಸಿದಂತಾಗುತ್ತದೆ. ಹೀಗಿರುವಾಗ ಆಲಸ್ಯವನ್ನು ಹೋಗಲಾಡಿಸಿ ದೇಹವನ್ನು ಪುನರುಜ್ಜೀವನಗೊಳಿಸಲು ಪ್ರತಿನಿತ್ಯ ಈ ಕೆಲವು ಪೋಷಕಾಂಶಯುಕ್ತ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಆಯಾಸವನ್ನು ಕಡಿಮೆ ಮಾಡಲು ನೀವು ಸೇವಿಸಬೇಕಾದ ಆಹಾರಗಳಿವು:

ಚಿಯಾ ಬೀಜಗಳು: ಚಿಯಾ ಬೀಜಗಳು ಶಕ್ತಿಯ ಶಕ್ತಿಕೇಂದ್ರವಾಗಿದೆ. ಅವು ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಈ ಪೋಷಕಾಂಶಗಳು ದೇಹಕ್ಕೆ ದೀರ್ಘಕಾಲೀನ ಶಕ್ತಿಯನ್ನು ಒದಗಿಸುತ್ತವೆ ಮತ್ತು ಸ್ನಾಯುಗಳ ಚೇತರಿಕೆಗೆ ಸಹಾಯ ಮಾಡುತ್ತವೆ. ಅಲ್ಲದೆ ಚಿಯಾ ಬೀಜಗಳಲ್ಲಿರುವ ಕಬ್ಬಿಣ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ದೌರ್ಬಲ್ಯ ಮತ್ತು ಆಲಸ್ಯವನ್ನು ಕಡಿಮೆ ಮಾಡುತ್ತದೆ. ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಕುಡಿಯುವುದರಿಂದ ದೇಹಕ್ಕೆ ಜಲಸಂಚಯನ ದೊರೆಯುತ್ತದೆ, ಇದು ಆಯಾಸವನ್ನು ತ್ವರಿತವಾಗಿ ನಿವಾರಿಸಲು ಸಹಾಯ ಮಾಡುತ್ತದೆ.

ಬಾಳೆಹಣ್ಣು: ಬಾಳೆಹಣ್ಣುಗಳು ನೈಸರ್ಗಿಕ ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್ ಅಂಶವನ್ನು ಹೊಂದಿರುವುದರಿಂದ ಇದು ಆಯಾಸವನ್ನು ನಿವಾರಿಸಿ ದೇಹಕ್ಕೆ  ತ್ವರಿತ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಅಂಶವು ಸ್ನಾಯು ದೌರ್ಬಲ್ಯ ಮತ್ತು ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಬಾಳೆಹಣ್ಣಿನಲ್ಲಿ ವಿಟಮಿನ್ ಬಿ 6  ಸಮೃದ್ಧವಾಗಿದ್ದು, ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಮತ್ತು ಆಯಾಸವನ್ನು ಹೋಗಲಾಡಿಸಿ ದೇಹವನ್ನು ಹೆಚ್ಚು ಸಮಯ ಸಕ್ರಿಯವಾಗಿರಿಸುತ್ತದೆ.

ಬಾದಾಮಿ: ಬಾದಾಮಿಯಲ್ಲಿ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಫೈಬರ್ ಹೇರಳವಾಗಿದ್ದು, ಇದನ್ನು ಸೇವನೆ ಮಾಡುವುದರಿಂದ ಆಯಾಸವನ್ನು ಹೋಗಲಾಡಿಸಬಹುದು.  ಬಾದಾಮಿಯಲ್ಲಿರುವ ಮೆಗ್ನೀಸಿಯಮ್ ಅಂಶವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ. ಬಾದಾಮಿಗಳು ವಿಟಮಿನ್ ಇ ಮತ್ತು ಬಿ-ಕಾಂಪ್ಲೆಕ್ಸ್‌ನಲ್ಲಿ ಸಮೃದ್ಧವಾಗಿವೆ, ಇದು ಜೀವಕೋಶದ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಅವುಗಳ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದೇಹವನ್ನು ಸಕ್ರಿಯವಾಗಿರಿಸುತ್ತದೆ.

ಇದನ್ನೂ ಓದಿ: ಪಾರ್ಟಿ ಹ್ಯಾಂಗೋವರ್‌ನಿಂದ ಹೊರ ಬರೋಕೆ ಸರಳ ಮನೆಮದ್ದುಗಳನ್ನು ಟ್ರೈ ಮಾಡಿ

ವಾಲ್ನಟ್ಸ್: ವಾಲ್ನಟ್ಸ್ ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿರುವುದರಿಂದ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಅವುಗಳ ಮೆಗ್ನೀಸಿಯಮ್ ಮತ್ತು ಕಬ್ಬಿಣಾಶವು ಸ್ನಾಯು ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ವಾಲ್ನಟ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು ಮಾನಸಿಕ ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರ ನಿಯಮಿತ, ಸರಿಯಾದ ಸೇವನೆಯು ದೇಹವನ್ನು ಆಕ್ಟಿವ್‌ ಆಗಿರಿಸಲು ಸಹಾಯ ಮಾಡುತ್ತದೆ.

ಓಟ್ಸ್:  ಓಟ್ಸ್ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿರುವುದರಿಂದ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ, ದೇಹವನ್ನು ದೀರ್ಘಕಾಲದವರೆಗೆ ಸಕ್ರಿಯವಾಗಿರಿಸುತ್ತದೆ. ಇದರಲ್ಲಿರುವ ಫೈಬರ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ, ಅಲ್ಲದೆ ಓಟ್ಸ್ ಕಬ್ಬಿಣ, ಮೆಗ್ನೀಸಿಯಮ್ ಮತ್ತು ಬಿ ಜೀವಸತ್ವಗಳನ್ನು ಹೊಂದಿರುತ್ತದೆ, ಇದು ಸ್ನಾಯುಗಳು ಮತ್ತು ನರಮಂಡಲವನ್ನು ಬಲಪಡಿಸುತ್ತದೆ, ಮಾನಸಿಕ ಮತ್ತು ದೈಹಿಕ ಆಯಾಸವನ್ನು ಕಡಿಮೆ ಮಾಡುತ್ತದೆ.

ಗ್ರೀನ್ ಟೀ: ಅತಿಯಾದ ಕೆಲಸವು ಆಯಾಸ ಮತ್ತು ಒತ್ತಡ ಎರಡನ್ನೂ ಉಂಟುಮಾಡಬಹುದು. ನಿಮಗೂ ಕೂಡ ಈ ರೀತಿಯ ಆಯಾಸ ಉಂಟಾದರೆ ಈ ಸಮಯದಲ್ಲಿ ನೀವು ಗ್ರೀನ್ ಟೀ ಕುಡಿಯಬೇಕು. ಇದು ತ್ವರಿತ ಶಕ್ತಿಯನ್ನು ಒದಗಿಸುವುದಲ್ಲದೆ, ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ವಿರುದ್ಧ ನೆಗೆಟಿವ್ ಪಿಆರ್ ಮಾಡ್ತಿರೋದು ಯಾರು? ದೊಡ್ಡ ಸಾಕ್ಷಿ ತಂದ ಫ್ಯಾನ್ಸ್ – Kannada News | Gilli Negative PR: Vinay Gowda’s Shocking Revelation, Fans Find Proof

ವಿನಯ್ ಗೌಡ ಅವರು ಇತ್ತೀಚೆಗೆ ಟಿವಿ9 ಕನ್ನಡಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಒಂದು ಶಾಕಿಂಗ್ ವಿಷಯ ಹೇಳಿದ್ದರು. ‘ಕೆಲವು ಪಿಆರ್​​ಗಳು ಗಿಲ್ಲಿ  ನಟ (Gilli Nata) ವಿರುದ್ಧ ನೆಗೆಟಿವ್ ಪ್ರಚಾರ ಮಾಡುತ್ತದ್ದಾರೆ’ ಎಂದಿದ್ದರು. ಇದು ನಿಜವಾಗಿದೆ. ಇದನ್ನು ಫ್ಯಾನ್ಸ್ ಸಾಕ್ಷಿ ಸಮೇತ ಹಿಡಿದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.

ಗಿಲ್ಲಿ ನಟ ಅವರದ್ದು ಎಲ್ಲರಿಗೂ ಇಷ್ಟ ಆಗೋ ವ್ಯಕ್ತಿತ್ವ. ಡೈಲಾಗ್ ಮೂಲಕ ತಮ್ಮ ಮಾತಿನ ಮೂಲಕ ಅವರು ಎಲ್ಲರ ಮನಸ್ಸು ಗೆದ್ದಿದ್ದಾರೆ. ಅವರು ಮಾಡೋ ಕಾಮಿಡಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅದರಲ್ಲೂ ಸಿನಿಮಾ ದೃಶ್ಯಗಳನ್ನು ಮನೆಯಲ್ಲಿ ನಡೆಯುವ ಘಟನೆಗಳಿಗೆ ಹೋಲಿಸಿ ಮಾಡುವ ಕಾಮಿಡಿಗಳು ಅದ್ಭುತವಾಗಿ ಇರುತ್ತವೆ. ಇಷ್ಟೆಲ್ಲ ಜನಪ್ರಿಯತೆ ಪಡೆದರೂ ಅವರ ವಿರುದ್ಧ ಕೆಲವರು ದ್ಷೇಷ ಹುಟ್ಟುವಂತೆ ಮಾಡುತ್ತಿದ್ದಾರೆ.

ಇದನ್ನೂ ಓದಿ:  ಕ್ಯಾಪ್ಟನ್ಸಿ ನಂಗೇ ಕೊಡಿ ಎಂದು ಬಿಗ್ ಬಾಸ್ ಬಳಿ ಹಠ ಹಿಡಿದ ಅಶ್ವಿನಿ; ಇದೆಂಥಾ ಲಾಜಿಕ್?

ರಿಯಾಲಿಟಿ ಶೋ ಎಂದಾಗ ಎಲ್ಲಾ ವೀಕ್ಷಕರು ಓರ್ವ ಸ್ಪರ್ಧಿಗೆ ಅಭಿಮಾನಿಯಾಗಬೇಕು ಎಂಬ ನಿಯಮ ಏನು ಇಲ್ಲ. ಕೆಲವರಿಗೆ ಗಿಲ್ಲಿ ಹಾಗೂ ಅವನ ಮಾತು ಇಷ್ಟ ಆದರೆ, ಇನ್ನೂ ಕೆಲವರಿಗೆ ಅದು ಸರಿಯಾದ ಮಾತಲ್ಲ ಎನಿಸಬಹುದು. ಹೀಗಾಗಿ, ಫ್ಯಾನ್ಸ್ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಟ ನಡೆಯೋದು ಸಾಮಾನ್ಯ. ಉಳಿದ ಸ್ಪರ್ಧಿಗಳ ಫ್ಯಾನ್ಸ್ ಗಿಲ್ಲಿ ವಿರುದ್ಧ ಪೋಸ್ಟ್ ಕೂಡ ಹಾಕಬಹುದು. ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಗಿಲ್ಲಿ ವಿರುದ್ಧ ನೆಗೆಟಿವ್ ಪೋಸ್ಟ್ ಹಾಕುತ್ತಿರುವುದನ್ನು ಅವರ ಅಭಿಮಾನಿಗಳು ಕಂಡು ಹಿಡಿದಿದ್ದಾರೆ.

‘ಕಾವ್ಯಾ, ಅಶ್ವಿನಿ, ಧ್ರುವಂತ್ ಇಲ್ಲದೆ ಗಿಲ್ಲಿ ಏನೂ ಅಲ್ಲ. ಅವರಿಗೆ ರಿಯಾಕ್ಟ್ ಮಾಡಿದರೆ ಇವನಿಗೆ ಕಂಟೆಂಟ್. ಟಾಸ್ಕ್​​ನಲ್ಲಿ ಸೊನ್ನೆ, ಮನೆ ಕೆಲಸದಲ್ಲಿ ಸೊನ್ನೆ, ಬರೀ ಟ್ರಿಗರ್ ಮಾಡಿ ಕಂಟೆಂಟ್ ತೆಗೆದುಕೊಳ್ಳೋದು. ಈ ರೀತಿ ವಿನ್ ಆಗೋದ್ರಲ್ಲಿ ಏನರ್ಥವಿದೆ’ ಎಂಬ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಒಂದು ಪೋಸ್ಟರ್​ನ ಮೂರು ಖಾತೆಗಳ ಮೂಲಕ ಒಂದಕ್ಷರವೂ ಬದಲಾಗದಂತೆ ಹಂಚಿಕೊಳ್ಳಲಾಗಿದೆ. ಇದು ಯಾರೋ ಉದ್​ದೇಶಪೂರ್ವಕವಾಗಿ ಮಾಡುತ್ತಿರುವ ಕಿತಾಪತಿ ಎಂದು ಫ್ಯಾನ್ಸ್ ಕಂಡು ಹಿಡಿದಿದ್ದಾರೆ. ಈ ಕೆಲಸ ಮಾಡುತ್ತಿರುವವರು ಯಾರು ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅದು ಕಸದ ತೊಟ್ಟಿಯಾಗಿತ್ತು; ಬೆಂಗಳೂರಿನ ಕೋಗಿಲು ಲೇಔಟ್ ನೆಲಸಮಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಸಮರ್ಥನೆ – Kannada News | Shashi Tharoor defends Bengalurus Kogilu Layout demolition drive says It was a garbage dump

ಬೆಂಗಳೂರು, ಜನವರಿ 3: ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರ ನಡೆಸುತ್ತಿರುವ ಕೋಗಿಲು ಲೇಔಟ್​​ನ ಕಟ್ಟಡ ಧ್ವಂಸ ಕಾರ್ಯಾಚರಣೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವ ಮೊದಲು ಅವರ ನಿವಾಸಕ್ಕೆ ನೋಟಿಸ್ ನೀಡಲಾಗಿದೆ ಮತ್ತು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕೇರಳದ ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿ ತರೂರ್, ಕರ್ನಾಟಕ ಸರ್ಕಾರ ಕೋಗಿಲು ಲೇಔಟ್​​ನಲ್ಲಿ ಧ್ವಂಸ ಕಾರ್ಯಾಚರಣೆಯನ್ನು ಮುಂದುವರಿಸಲು ಎರಡು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. “ಮೊದಲನೆಯದಾಗಿ, ಆ ಭೂಮಿ ಸರ್ಕಾರಕ್ಕೆ ಸೇರಿದ್ದು, ಜನರು ಅಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು. ಎರಡನೆಯದಾಗಿ, ಅದು ಕಸದ ತೊಟ್ಟಿಯಾಗಿತ್ತು ಮತ್ತು ವಿಷಕಾರಿ ತ್ಯಾಜ್ಯವು ನೀರನ್ನು ಕಲುಷಿತಗೊಳಿಸಿತ್ತು. ಆದ್ದರಿಂದ ಅದು ಜನರು ವಾಸಿಸಲು ಯೋಗ್ಯವಾದ ಸ್ಥಳವಾಗಿರಲಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೋಗಿಲು ಲೇಔಟ್:​ ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ

ಕೋಗಿಲು ಬಡಾವಣೆಯ ನಿವಾಸಿಗಳಿಗೆ ಸರಿಯಾದ ಸಮಯಕ್ಕೆ ನೋಟಿಸ್‌ಗಳನ್ನು ನೀಡಲಾಗಿದೆ. ಅಲ್ಲಿನ ಜನರು ಬಡವರು ಎಂಬ ಒಂದೇ ಕಾರಣಕ್ಕೆ ಈ ಸಮಸ್ಯೆಯನ್ನು ರಾಜಕೀಯವಾಗಿ ಬಿಂಬಿಸುವುದರಲ್ಲಿ ಅರ್ಥವಿಲ್ಲ ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ. ಕೋಗಿಲು ಲೇಔಟ್ ನಿವಾಸಿಗಳಿಗೆ ಸರ್ಕಾರ ತಾತ್ಕಾಲಿಕ ವಸತಿ ಒದಗಿಸುವ ನಿರ್ಧಾರ ತೆಗೆದುಕೊಂಡಿದೆ. 5ರಿಂದ 6 ತಿಂಗಳೊಳಗೆ ಶಾಶ್ವತ ವಸತಿ ಭರವಸೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:57 pm, Sat, 3 January 26

Source link

‘ಟಾಕ್ಸಿಕ್’ನಲ್ಲಿ ರೆಬೆಲ್ ‘ರೆಬೆಕಾ’: ಯಾರು ಈ ಸುಂದರಿ? – Kannada News | Tara Sutaria poster from Yash starrer Toxic movie released

ಯಶ್ (Yash) ನಟನೆಯ ‘ಟಾಕ್ಸಿಕ್’ ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಯಶ್ ನಟಿಸಿ, ಕತೆ ರಚಿಸಿ, ಸಹ ನಿರ್ಮಾಣವೂ ಮಾಡಿರುವ ‘ಟಾಕ್ಸಿಕ್’ ಸಿನಿಮಾ ಹಾಲಿವುಡ್ ಸಿನಿಮಾಗಳಿಗೆ ಸೆಡ್ಡು ನೀಡುವ ಗುಣಮಟ್ಟದಲ್ಲಿ ನಿರ್ಮಾಣ ಆಗುತ್ತಿದೆ. ದೊಡ್ಡ ಕಲಾವಿದರ ದಂಡನ್ನೇ ಯಶ್ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಒಟ್ಟು ಮಾಡಿದ್ದಾರೆ. ಅದರಲ್ಲೂ ‘ಟಾಕ್ಸಿಕ್’ನಲ್ಲಿ ಸುಂದರಿಯರ ದಂಡೇ ಇದೆ. ಈಗಾಗಲೇ ನಯನತಾರಾ, ಹುಮಾ ಖುರೇಷಿ ಮತ್ತು ಕಿಯಾರಾ ಅಡ್ವಾಣಿ ಅವರುಗಳ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದ್ದು, ಇದೀಗ ಮತ್ತೊಬ್ಬ ಸುಂದರಿಯ ಪೋಸ್ಟರ್ ಹಂಚಿಕೊಂಡಿದೆ.

ಯಶ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ, ‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಪ್ರಮುಖ ಲೇಡಿ ಪಾತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ. ಕೈಯಲ್ಲಿ ಬಂದೂಕು ಹಿಡಿದು ಸಖತ್ ರೆಬೆಲ್ ಆಗಿ ಕಾಣುತ್ತಿದೆ ಈ ಪಾತ್ರ. ಪಾತ್ರದ ಹೆಸರು ರೆಬೆಕಾ. ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿ ತಾರಾ ಸುತಾರಿಯಾ ರೆಬೆಕಾ ಪಾತ್ರದಲ್ಲಿ ಮಿಂಚಿದ್ದಾರೆ. ಈಗ ಅವರ ಪೋಸ್ಟರ್​​ನಲ್ಲಿ ಅವರ ಹೇರ್​ ಸ್ಟೈಲ್ ಸಖತ್ ಗಮನ ಸೆಳೆಯುತ್ತಿದೆ. ಹಾಲಿವುಡ್ ನಟಿಯ ರೀತಿ ತಾರಾ ಸುತಾರಿಯಾ ಕಾಣುತ್ತಿದ್ದಾರೆ.

ಅಂದಹಾಗೆ ತಾರಾ ಸುತಾರಿಯಾ ಬಾಲಿವುಡ್ ನಟಿ. ಹಿಂದಿ ಸಿನಿಮಾಗಳನ್ನು ಬಿಟ್ಟರೆ ಪರ ಭಾಷೆ ಸಿನಿಮಾಗಳಲ್ಲಿ ನಟಿಸಿದ್ದಿಲ್ಲ. ‘ಟಾಕ್ಸಿಕ್’ ಅವರ ಮೊಟ್ಟ ಮೊದಲ ಪರಭಾಷೆ ಸಿನಿಮಾ. ಕರಣ್ ಜೋಹರ್ ನಿರ್ಮಾಣ ಮಾಡಿರುವ ‘ಸ್ಟುಡೆಂಟ್ ಆಫ್ ದಿ ಇಯರ್ 2’ ಮೂಲಕ ನಟನೆಗೆ ಎಂಟ್ರಿ ಕೊಟ್ಟ ತಾರಾ ಸುತಾರಿಯಾ ‘ತಡಪ್’, ಟೈಗರ್​ ಶ್ರಾಫ್ ಜೊತೆಗೆ ‘ಹೀರೊಪಂತಿ 2’, ಅರ್ಜುನ್ ಕಪೂರ್ ಜೊತೆಗೆ ‘ಏಕ್ ವಿಲನ್ ರಿಟರ್ನ್ಸ್’ ಹಾಗೂ ‘ಅಪೂರ್ವ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಟಾಕ್ಸಿಕ್’ ತಾರಾ ಸುತಾರಿಯಾ ಅವರ ಏಳನೇ ಸಿನಿಮಾ.

ಇದನ್ನೂ ಓದಿ:ನನ್ನ ಬರವಣಿಗೆಯನ್ನೂ ಮೆಚ್ಚಬೇಕು; ಸಿಲ್ಲಿ ಲಲ್ಲಿಯಲ್ಲಿ ಹೇಳಿದ್ದ ಯಶ್

‘ಟಾಕ್ಸಿಕ್’ ಸಿನಿಮಾನಲ್ಲಿ ಒಟ್ಟು ಐದು ಮಂದಿ ನಾಯಕಿಯರಿದ್ದಾರೆ. ಲೇಡಿ ಸೂಪರ್​​ಸ್ಟಾರ್ ನಯನತಾರಾ ಅವರು ‘ಗಂಗ’ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟಿ ಹುಮಾ ಖುರೇಷಿ ಎಲಿಜೆಬೆತ್ ಪಾತ್ರದಲ್ಲಿ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ ನಾದಿಯಾ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೊಬ್ಬ ನಾಯಕಿ ರುಕ್ಮಿಣಿ ವಸಂತ್. ಆದರೆ ಅವರ ಪಾತ್ರದ ಪರಿಚಯವನ್ನು ಚಿತ್ರತಂಡ ಇನ್ನಷ್ಟೆ ಮಾಡಿಕೊಡಬೇಕಿದೆ.

‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್​​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ನಾಯಕನಾಗಿ ಯಶ್ ನಟಿಸಿರುವುದು ಮಾತ್ರವಲ್ಲದೆ ಸಿನಿಮಾದ ಕತೆ ಸಹ ರಚಿಸಿದ್ದಾರೆ. ಕೆವಿಎನ್ ಮತ್ತು ಯಶ್ ಅವರ ಮಾನ್ಸ್​ಸ್ಟರ್ ಮೈಂಡ್ ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸಿನಿಮಾ ಕನ್ನಡ ಮಾತ್ರವಲ್ಲದೆ ಭಾರತದ ಇತರೆ ಭಾಷೆಗಳ ಜೊತೆಗೆ ಇಂಗ್ಲೀಷ್​​ನಲ್ಲಿಯೂ ಏಕಕಾಲಕ್ಕೆ ನಿರ್ಮಾಣ ಆಗುತ್ತಿದೆ. ಕೆಲವು ಹಾಲಿವುಡ್ ತಂತ್ರಜ್ಞರು ಸಹ ಈ ಸಿನಿಮಾನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಓವರ್​ನಲ್ಲಿ 34 ರನ್… ಸ್ಫೋಟಕ ಸೆಂಚುರಿ ಸಿಡಿಸಿದ ಹಾರ್ದಿಕ್ ಪಾಂಡ್ಯ – Kannada News | Hardik Pandya score hundred in 68 balls

ವಿಜಯ ಹಝಾರೆ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಸೆಂಚುರಿ ಸಿಡಿಸಿದ್ದಾರೆ. ಅದು ಕೂಡ ಕೇವಲ 68 ಎಸೆತಗಳಲ್ಲಿ ಎಂಬುದು ವಿಶೇಷ. ರಾಜ್​ಕೋಟ್​ನ ನಿರಂಜನ್ ಶಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವಿದರ್ಭ ಹಾಗೂ ಬರೋಡಾ ತಂಡಗಳು ಮುಖಾಮುಖಿಯಾಗಿದ್ದವು.

ಟಾಸ್ ಗೆದ್ದ ಬೌಲಿಂಗ್ ಆಯ್ದುಕೊಂಡಿದ್ದ ನಾಯಕ ಹರ್ಷ್ ದುಬೆ ನಿರ್ಧಾರವನ್ನು ಸಮರ್ಥಿಸುವಂತೆ ವಿದರ್ಭ ತಂಡದ ಬೌಲರ್​ಗಳು ದಾಳಿ ಸಂಘಟಿಸಿದ್ದರು. ಪರಿಣಾಮ ಬರೋಡಾ ತಂಡವು 71 ರನ್​ಗಳಿಸುವಷ್ಟರಲ್ಲಿ 5 ಪ್ರಮುಖ ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲಿಗೆ 62 ಎಸೆತಗಳಲ್ಲಿ 66 ರನ್ ಬಾರಿಸಿದ್ದ ಪಾಂಡ್ಯ ಒಂದೇ ಓವರ್​ನಲ್ಲಿ 34 ರನ್​ ಚಚ್ಚಿದರು.

ಪಾರ್ಥ್ ರೇಖಾಡೆ ಎಸೆತದ ಈ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ 5 ಸಿಕ್ಸ್ ಸಿಡಿಸಿದ ಹಾರ್ದಿಕ್ ಪಾಂಡ್ಯ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದರು. ಈ ಮೂಲಕ ಕೇವಲ 68 ಎಸೆತಗಳಲ್ಲಿ ಶತಕ ಪೂರೈಸಿದರು.

ಶತಕದ ಬಳಿಕ ಕೂಡ ಸ್ಫೋಟಕ ಇನಿಂಗ್ಸ್ ಮುಂದುವರೆಸಿದ ಪಾಂಡ್ಯ 92 ಎಸೆತಗಳಲ್ಲಿ 11 ಭರ್ಜರಿ ಸಿಕ್ಸರ್ ಹಾಗೂ 8 ಫೋರ್​ಗಳೊಂದಿಗೆ 133 ರನ್ ಬಾರಿಸಿದರು.

ಹಾರ್ದಿಕ್ ಪಾಂಡ್ಯ ಅವರ ಈ ವಿಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಬರೋಡಾ ತಂಡವು 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 293 ರನ್ ಕಲೆಹಾಕಿದೆ. ಈ ಮೂಲಕ ವಿದರ್ಭ ತಂಡಕ್ಕೆ 294 ರನ್​ಗಳ ಗುರಿ ನೀಡಿದೆ.

ವಿಶೇಷ ಎಂದರೆ ಇದು ಹಾರ್ದಿಕ್ ಪಾಂಡ್ಯ ಅವರ ಚೊಚ್ಚಲ ಲಿಸ್ಟ್​ ಎ ಶತಕವಾಗಿದೆ. ಇದಕ್ಕೂ ಮುನ್ನ ಅವರು 92 ರನ್​ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ಇದೀಗ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಪಾಂಡ್ಯ ಏಕದಿನ ಕ್ರಿಕೆಟ್​ನಲ್ಲಿ ಶತಕದ ಖಾತೆ ತೆರೆದಿದ್ದಾರೆ.

ಬರೋಡಾ ಪ್ಲೇಯಿಂಗ್ 11: ನಿತ್ಯ ಪಾಂಡ್ಯ , ಅಮಿತ್ ಪಾಸಿ , ಜಿತೇಶ್ ಶರ್ಮಾ (ವಿಕೆಟ್ ಕೀಪರ್) ಹಾರ್ದಿಕ್ ಪಾಂಡ್ಯ , ಕೃನಾಲ್ ಪಾಂಡ್ಯ (ನಾಯಕ) , ವಿಷ್ಣು ಸೋಲಂಕಿ , ಪ್ರಿಯಾಂಶು ಮೋಲಿಯಾ , ಅತಿತ್ ಶೇಠ್ , ರಾಜ್ ಲಿಂಬಾನಿ , ಕರಣ್ ಉಮಟ್ , ಮಹೇಶ್ ಪಿಥಿಯಾ.

ಇದನ್ನೂ ಓದಿ: IPL 2026: ಐಪಿಎಲ್​ನಿಂದ ಬಾಂಗ್ಲಾದೇಶ್ ಆಟಗಾರನಿಗೆ ಗೇಟ್ ಪಾಸ್..!

ವಿದರ್ಭ ಪ್ಲೇಯಿಂಗ್ 11: ಅಥರ್ವ ತೈಡೆ , ಅಮನ್ ಮೊಖಡೆ , ಧ್ರುವ್ ಶೋರೆ , ನಚಿಕೇತ್ ಭೂತೆ , ಯಶ್ ರಾಥೋಡ್ , ರವಿಕುಮಾರ್ ಸಮರ್ಥ್ , ಅಕ್ಷಯ್ ವಾಡ್ಕರ್ (ವಿಕೆಟ್ ಕೀಪರ್ ), ಹರ್ಷ್ ದುಬೆ (ನಾಯಕ) , ಪಾರ್ಥ್ ರೇಖಾಡೆ , ಯಶ್ ಠಾಕೂರ್ , ಪ್ರಫುಲ್ ಹಿಂಜ್.

Source link

Exit mobile version