Bengaluru Air Quality: ಕಳೆದ ನಾಲ್ಕು ವರ್ಷದಲ್ಲೇ ಅತೀ ಕಳಪೆ ಏರ್ ಕ್ವಾಲಿಟಿ! – Kannada News | Bangalore Air Pollution Crisis: Bengaluru and surrounding places face severe Air pollution in last 4 years

ಕಳೆದ ನಾಲ್ಕು ವರ್ಷದಲ್ಲೇ ಅತೀ ಕಳಪೆ ಏರ್ ಕ್ವಾಲಿಟಿ!

ಬೆಂಗಳೂರು, ಜನವರಿ 03: ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ (Bengaluru Air Quality) ಇಂದಿನ ಗಾಳಿಯ ಗುಣಮಟ್ಟ 167 ಇದ್ದು, ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಇಂದೂ PM2.5 79 ಇದ್ದರೆ, PM10 108 ಇದೆ. ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಇಂದಿನ ಏರ್ ಕ್ವಾಲಿಟಿ ಸುಧಾರಿಸಿದೆ ಎನಿಸಿದರೂ WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ.

2025ರಲ್ಲಿ ಗಾಳಿಯ ಗುಣಮಟ್ಟ ಹೇಗಿತ್ತು?

ವಿಶೇಷವಾಗಿ BTM, ಜೆ. ಪಿ. ನಗರ್, ಹೆಬ್ಬಲ್, ಸಿಲ್ಕ್‌ಬೋರ್ಡ್ ಮುಂತಾದ ಪ್ರದೇಶಗಳಲ್ಲಿ PM2.5 ಮಟ್ಟ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಇದು ಸಾಮಾನ್ಯವಾಗಿ ಸಂವೆದನಶೀಲ ಗುಂಪಿನವರ ಮೇಲೆ ಖಾಸಗಿ ಪರಿಣಾಮ ಬೀರಬಹುದು ಮತ್ತು ಹೊರಗಡೆ ದೀರ್ಘ ಕಾಲ ಇದ್ದರೆ ಆರೋಗ್ಯದ ಮೇಲೆ ಹಾನಿ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. 2025 ರಲ್ಲಿ, ಬೆಂಗಳೂರು ನಗರದಲ್ಲಿ ವಾಯು ಗುಣಮಟ್ಟ ಹಂತ ಹಂತವಾಗಿ ಹಾನಿಕರ ದಿಕ್ಕಿನಲ್ಲಿ ಬದಲಾಗಿದೆ.

ವರ್ಷಾಂತ್ಯದ ಅಂಕಿಅಂಶಗಳನ್ನು ನೋಡಿದರೆ 2025 ರಲ್ಲಿ ನಗರವು ಕಳೆದ ಐದು ವರ್ಷಗಳಲ್ಲಿ ಅತ್ಯಂತ ಕೆಟ್ಟ ವಾಯು ಗುಣಮಟ್ಟವನ್ನು ದಾಖಲಿಸಿದೆ . ವರ್ಷದಲ್ಲಿ ಬಹುತೇಕ ದಿನಗಳು ಮಧ್ಯಮದಿಂದ ಅನಾರೋಗ್ಯಕರ ಮಟ್ಟದವರೆಗೆ ತಲುಪಿದ್ದು, 2024 ರೊಂದಿಗೆ ಹೋಲಿಸಿದರೆ ಗುಣಮಟ್ಟದಲ್ಲಿ ಬಹುದೊಡ್ಡ ಕುಸಿತ ಕಂಡಿದೆ. 2025 ರ ಡಿಸೆಂಬರ್‌ನಲ್ಲಿ ಸರಾಸರಿ 143 ಸರಾಸರಿ AQI ರೇಟ್ ಕಂಡು ಬಂದಿದೆ. ನಗರದಲ್ಲಿ ವಾಹನಗಳ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗಿದೆ. ರಸ್ತೆಯಿಂದ ಹೊಮ್ಮುವ ಧೂಳು, ಕಟ್ಟಡ ನಿರ್ಮಾಣದ ಧೂಳು ಮತ್ತು ಚಳಿಗಾಲದ ಮಂಜಿನ ಪರಿಣಾಮಗಳು ಈ ಕಳಪೆ ಗುಣಮಟ್ಟಕ್ಕೆ ಕಾರಣವಾಗಿದೆ ಎಂದು ವಾಯು ಗುಣಮಟ್ಟ ತಜ್ಞರು ಹೇಳುತ್ತಾರೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –167
  • ಮಂಗಳೂರು-155
  • ಮೈಸೂರು – 126
  • ಬೆಳಗಾವಿ – 159
  • ಕಲಬುರ್ಗಿ – 110
  • ಶಿವಮೊಗ್ಗ – 182
  • ಬಳ್ಳಾರಿ – 185
  • ಹುಬ್ಬಳ್ಳಿ- 96
  • ಉಡುಪಿ –110
  • ವಿಜಯಪುರ –117

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಣದ ಹುಣ್ಣಿಮೆ ಜಾತ್ರೆಗೆ ಜನಸಾಗರ: ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ – Kannada News | Belagavi Yellamma Jatre: Bus Shortage Troubles Devotees, KSRTC Chaos

ಬೆಳಗಾವಿ, ಜನವರಿ 03: ಉತ್ತರ ಕರ್ನಾಟಕದ ಶಕ್ತಿದೇವಿ ಯಲ್ಲಮ್ಮ ದೇವಿಯ ಬಣದ ಹುಣ್ಣಿಮೆ ಜಾತ್ರೆ ಹಿನ್ನೆಲೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹರಿದು ಬಂದಿದ್ದು, ಬಸ್ ಪ್ರಯಾಣಿಕರು ಪರದಾಡುವಂತಾಯಿತು. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಕೊರತೆಯಿಂದ ಭಕ್ತರು ಬೆಳಿಗ್ಗೆ 5ರಿಂದ ಪರದಾಟ ಅನುಭವಿಸಿದರೆ, ಅವ್ಯವಸ್ಥೆ ಉಂಟಾಗಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಪೊಲೀಸರು ಜನನಿಯಂತ್ರಣಕ್ಕೆ ಮುಂದಾದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಮ್ಮ ಬೆಂಬಲ ಭಾರತಕ್ಕೆ: ಚೀನಾ-ಪಾಕ್​​ ಸಂಬಂಧ ಬಲಗೊಳ್ಳುತ್ತಿದೆ, ಭಾರತಕ್ಕೆ ಎಚ್ಚರಿಕೆ ನೀಡಿದ ಬಲೂಚಿಸ್ತಾನ – Kannada News | Balochistan Seeks India Support Against China Pak Threat and Military Deployment

ಬಲೂಚಿಸ್ತಾನದ ಪ್ರಮುಖ ನಾಯಕ (Baloch Leader) ಮೀರ್ ಯಾರ್ ಬಲೂಚ್, ಪಾಕಿಸ್ತಾನ ಹಾಗೂ ಚೀನಾದ ನಡುವಿನ  ಸಂಬಂಧ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗ ಮುಕ್ತ ಪತ್ರವೊಂದನ್ನು ಬರೆದಿದ್ದಾರೆ. ಬೀಜಿಂಗ್-ಇಸ್ಲಾಮಾಬಾದ್ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ, ಮುಂದಿನ ಕೆಲವು ತಿಂಗಳುಗಳಲ್ಲಿ ಚೀನಾ ತನ್ನ ಮಿಲಿಟರಿ ಪಡೆಗಳನ್ನು ಪಾಕಿಸ್ತಾನದ ಬಲೂಚಿಸ್ತಾನ್ ಪ್ರದೇಶದಲ್ಲಿ ನಿಯೋಜಿಸಬಹುದು ಎಂದು ಈ ಪತ್ರದಲ್ಲಿ ಹೇಳಿದ್ದಾರೆ. ಬಲೂಚಿಸ್ತಾನ್ ಪಾಕಿಸ್ತಾನದ ನಿಯಂತ್ರಣದಲ್ಲಿ ದಶಕಗಳಿಂದ ದಬ್ಬಾಳಿಕೆಯನ್ನು ಎದುರಿಸಿದೆ. ಹಿಂಸೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪಾಕ್​​ ಮಾಡಿದೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಬಲೂಚಿಸ್ತಾನ್​​ ಮೇ 2025 ರಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯವಾಗಿದೆ ಎಂದು ಘೋಷಣೆ ಮಾಡಿದ್ದರು. 2026 ರ ಮೊದಲ ವಾರದಲ್ಲಿ “ಬಲೂಚಿಸ್ತಾನ್ ಜಾಗತಿಕ ರಾಜತಾಂತ್ರಿಕ ವಾರ” ವನ್ನು ಆಚರಣೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಪಾಕ್​​​ ಹಾಗೂ ಚೀನಾದ ನಡುವಿನ ಸಂಬಂಧದ ಬಗ್ಗೆ ಪತ್ರ ಬರೆಯುವ ಮೂಲಕ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದರ ಜತೆಗೆ ಭಾರತದ ಆಡಳಿತಾತ್ಮಕ ಕೆಲಸವನ್ನು ಹಾಡಿ ಹೊಗಳಿದ್ದಾರೆ. 2025 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ತೆಗೆದುಕೊಂಡ ದಿಟ್ಟ ಕ್ರಮಗಳ ಬಗ್ಗೆ ಶ್ಲಾಘಿಸಿದರು. ಕಳೆದ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಭಯೋತ್ಪಾದನಾ ಕೇಂದ್ರಗಳನ್ನು ನಾಶಮಾಡಲು ಆಪರೇಷನ್ ಸಿಂಧೂರ್ ಮೂಲಕ ತೆಗೆದುಕೊಂಡ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕ್ರಮವನ್ನು ಧೈರ್ಯ ಮತ್ತು ಪ್ರಾದೇಶಿಕ ಭದ್ರತೆ ಮತ್ತು ನ್ಯಾಯ ನೀಡುವ ಮೂಲಕ ದೃಢ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಶಾಂತಿ, ಸಮೃದ್ಧಿ, ಅಭಿವೃದ್ಧಿ, ವ್ಯಾಪಾರ, ರಕ್ಷಣೆ, ಭದ್ರತೆ, ಭವಿಷ್ಯದ ಇಂಧನ ಸವಾಲುಗಳು ಮತ್ತು ಗುಪ್ತ ಬೆದರಿಕೆಗಳನ್ನು ತಗ್ಗಿಸುವಂತಹ ಸ್ನೇಹ, ವಿಶ್ವಾಸ ಮತ್ತು ಪರಸ್ಪರ ಹಿತಾಸಕ್ತಿಗಳನ್ನು ಬೆಳೆಸುವಲ್ಲಿ ಭಾರತ ಮತ್ತು ಸರ್ಕಾರಕ್ಕೆ ನಮ್ಮಬೆಂಬಲ ಇದೆ ಎಂದು ಹೇಳಿದ್ದಾರೆ. ಬಲೂಚಿಸ್ತಾನದ ಜನರು ಕಳೆದ ಎಪ್ಪತ್ತೊಂಬತ್ತು ವರ್ಷಗಳಿಂದ ಪಾಕಿಸ್ತಾನದ ಆಕ್ರಮಣ, ಭಯೋತ್ಪಾದಕ ದಾಳಿಯನ್ನು ಸಹಿಸಿಕೊಂಡು ಬಂದಿದೆ. ಈ ಪಿಡುಗನ್ನು ಬೇರು ಸಮೇತ ತೆಗೆಯುವ ಕೆಲಸ ಆಗಬೇಕಿದೆ. ಅದಕ್ಕಾಗಿ ಭಾರತಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: RSS​​​ನ್ನು ಅರ್ಥಮಾಡಿಕೊಳ್ಳಲು ವಿಕಿಪೀಡಿಯಾದಲ್ಲಿ ಹುಡುಕುವ ಬದಲು ಅದರ ಜತೆಗೆ ಕೆಲಸ ಮಾಡಿ: ಮೋಹನ್ ಭಾಗವತ್

ಪಾಕಿಸ್ತಾನ ಮತ್ತು ಚೀನಾ ನಡುವಿನ ಹೆಚ್ಚುತ್ತಿರುವ ಕಾರ್ಯತಂತ್ರದ ಮೈತ್ರಿಯನ್ನು ಬಲೂಚಿಸ್ತಾನದ ಜನರು ಅತ್ಯಂತ ಅಪಾಯಕಾರಿ ಎಂದು ಹೇಳಿದೆ. ಬೀಜಿಂಗ್, ಇಸ್ಲಾಮಾಬಾದ್ ಸಹಯೋಗದೊಂದಿಗೆ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಅಂತಿಮ ಹಂತಕ್ಕೆ ಬಂದಿದೆ. ಅದಕ್ಕಾಗಿ ಬಲೂಚಿಸ್ತಾನದ ರಕ್ಷಣಾ ಮತ್ತು ಸ್ವಾತಂತ್ರ್ಯ ಪಡೆಗಳ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸದಿದ್ದರೆ ಚೀನಾ ಕೆಲವೇ ತಿಂಗಳುಗಳಲ್ಲಿ ಬಲೂಚಿಸ್ತಾನದಲ್ಲಿ ತನ್ನ ಮಿಲಿಟರಿ ಪಡೆಗಳನ್ನು ನಿಯೋಜಿಸಬಹುದು ಎಂದು ಹೇಳಿದ್ದಾರೆ. ಇದು ಬಲೂಚಿಸ್ತಾನಕ್ಕೆ ಮಾತ್ರವಲ್ಲ, ಭಾರತಕ್ಕೂ ತೊಂದರೆ ಎಂದು ಹೇಳಿದ್ದಾರೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಗಲಭೆ: ಶಾಸಕ ಭರತ್ ರೆಡ್ಡಿ ಸೇರಿ ಹಲವರ ವಿರುದ್ಧ ಎಫ್​​​ಐಆರ್ – Kannada News | FIR Against MLA Bharat Reddy After Ballari Youth Dies in Banner Spat

ಬಳ್ಳಾರಿ, ಜ.3: ಬಳ್ಳಾರಿ (Ballari) ಬ್ಯಾನರ್​ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಯುವಕ ಮೃತಪಟ್ಟಿರುವ ವಿಚಾರ ಸಂಬಂಧಿಸಿದಂತೆ ಶಾಸಕ ಭರತ್ ರೆಡ್ಡಿ ಸೇರಿ ಹಲವರ ವಿರುದ್ಧ ಎಫ್​​​ಐಆರ್​​ ದಾಖಲು ಮಾಡಲಾಗಿದೆ. ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​​​ಐಆರ್ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಯುತ್ತಿದೆ. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ, ಚಾನಾಳ್ ಶೇಖರ್​​, ನಾರಾ ಪ್ರತಾಪ್ ರೆಡ್ಡಿ, ನಾರಾ ಸೂರ್ಯನಾರಾಯಣರೆಡ್ಡಿ ಸೇರಿ ಹಲವರ ಹೆಸರನ್ನು ಎಫ್​​​ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ. ಶಾಸಕ ಜನಾರ್ದನರೆಡ್ಡಿ, ಬಿಜೆಪಿ ಕಾರ್ಯಕರ್ತ ನಾಗರಾಜ್ ನೀಡಿದ್ದ ದೂರಿನ ಆಧಾರದ ಮೇಲೆ ಎಫ್​​​ಐಆರ್​​ ದಾಖಲು ಮಾಡಲಾಗಿದೆ.

ನೆನ್ನೆ ಸಂಜೆ ಶಾಸಕ ಭರತ್ ರೆಡ್ಡಿ ಸೇರಿ ಹಲವರ ವಿರುದ್ಧ ದೂರು ನೀಡಲಾಗಿತ್ತು. ಶಾಸಕ ಜನಾರ್ದನರೆಡ್ಡಿ ಹಲ್ಲೆ, ಕೊಲೆ ಯತ್ನ ಆರೋಪದಡಿ ದೂರು ನೀಡಿದರು. ಮತ್ತೊಂದಡೆ ಅಕ್ರಮ ಪ್ರವೇಶ, ಜಾತಿ ನಿಂದನೆ, ಕೊಲೆ ಯತ್ನ ಹಾಗೂ ಗಲಾಟೆ ಆರೋಪದಡಿ ಬಿಜೆಪಿ ಕಾರ್ಯಕರ್ತ ನಾಗರಾಜ್ ಕೂಡ ನೀಡಿದರು. ಇನ್ನು ಈ ದೂರು ನೀಡುವಾಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಇದ್ದರು. ಎಎಸ್​​​ಪಿ ರವಿಕುಮಾರ್ ದೂರ ಸ್ವೀಕರಿಸಿದ್ದು, ಎಫ್​​​ಐಆರ್​​ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಗಲಭೆಗೆ ಎಸ್ಪಿ ತಲೆದಂಡ: ಅಧಿಕಾರ ಸ್ವೀಕರಿಸಿದ ಒಂದೇ ದಿನಕ್ಕೆ ಪವನ್ ನೆಜ್ಜೂರು ಸಸ್ಪೆಂಡ್!

ಇನ್ನು ಈ ಗಲಾಟೆಯಿಂದ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಮುಂದೂಡಿಕೆ ಆಗಿದೆ. ಇಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹೇಳಿದ್ದಾರೆ. ಇನ್ನು ಇದರ ಜತೆಗೆ ಬಿಜೆಪಿ ನಾಯಕರಿಗೆ ಹೈಕಮಾಂಡ್​​​ನಿಂದ ಮಹತ್ವದ ಸೂಚನೆಯನ್ನು ಕೂಡ ನೀಡಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಹೇಳಿದ್ದಾರೆ. ಇಂದು ಬಳ್ಳಾರಿಗೆ ಬಿಜೆಪಿ ನಾಯಕರ ನಿಯೋಗ ಭೇಟಿ ಸಾಧ್ಯತೆ ಎಂದು ಹೇಳಲಾಗಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:35 am, Sat, 3 January 26

Source link

Ancient Ritual for 2026: ಅನಿರೀಕ್ಷಿತ ಅಪಘಾತ, ಅನಾರೋಗ್ಯ ಮುಂತಾದ ಕಷ್ಟಗಳಿಂದ ಪಾರಾಗಲು ಈ ತಂತ್ರ ಅನುಸರಿಸಿ – Kannada News | Ancient Ritual for 2026: Overcoming Difficulties with Sun Gods Blessings

ಹೊಸ ವರ್ಷ ಪ್ರಾರಂಭವಾಗಿದೆ, ಭವಿಷ್ಯದ ಅನಿಶ್ಚಿತತೆಗಳು, ಗೋಚಾರ ಗ್ರಹಗಳ ಸ್ಥಾನಪಲ್ಲಟಗಳು, ನಕಾರಾತ್ಮಕ ಶಕ್ತಿಗಳ ಪ್ರಭಾವ, ಪೂರ್ವ ಜನ್ಮದ ಪಾಪಗಳು ಮತ್ತು ಕರ್ಮಫಲಗಳಿಂದ ಉಂಟಾಗಬಹುದಾದ ಕಷ್ಟಗಳ ಕುರಿತು ಕಾಳಜಿ ಮೂಡುವುದು ಸಹಜ. ಅನಿರೀಕ್ಷಿತ ಅಪಘಾತಗಳು, ಆರೋಗ್ಯ ಸಮಸ್ಯೆಗಳು, ಆರ್ಥಿಕ ನಷ್ಟ, ಆಸ್ತಿ ಕಲಹಗಳು, ಕಾನೂನು ತೊಂದರೆಗಳು, ಮತ್ತು ಪ್ರೀತಿಪಾತ್ರರನ್ನು ಕಳೆದುಕೊಳ್ಳುವಂತಹ ದುಃಖಕರ ಸನ್ನಿವೇಶಗಳಿಂದ ದೂರವಿರಲು ಪ್ರಾಚೀನ ಕಾಲದಿಂದಲೂ ಅನುಸರಿಸಲಾಗುತ್ತಿರುವ ಒಂದು ವಿಶಿಷ್ಟ ತಂತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಈ ತಂತ್ರವನ್ನು ವರ್ಷದ ಪ್ರಾರಂಭದಲ್ಲಿಯೇ ಅಳವಡಿಸಿಕೊಳ್ಳುವುದರಿಂದ 2026ರ ಉದ್ದಕ್ಕೂ ಶುಭ ಫಲಿತಾಂಶಗಳನ್ನು ನಿರೀಕ್ಷಿಸಬಹುದು.

ಸಂಕಟ ನಿವಾರಣಾ ತಂತ್ರದ ವಿವರಣೆ:

ಈ ವಿಶೇಷ ತಂತ್ರವು ಸೂರ್ಯ ಭಗವಾನ್‌ನ ಆರಾಧನೆಯನ್ನು ಒಳಗೊಂಡಿದೆ. ಸೂರ್ಯನು ಪ್ರತ್ಯಕ್ಷ ದೇವರೆಂದು, ಆರೋಗ್ಯದಾಯಕನೆಂದು ಮತ್ತು ಕಷ್ಟನಿವಾರಕನೆಂದು ನಂಬಲಾಗಿದೆ.

  • 2026ರ ಮೊದಲ ಭಾನುವಾರ ಅಥವಾ ಮುಂದೆ ಬರುವ ಯಾವುದೇ ಭಾನುವಾರದ ದಿನವನ್ನು ಆಯ್ಕೆ ಮಾಡಿಕೊಳ್ಳಿ. ಸೂರ್ಯೋದಯದ ಸಮಯವು ಈ ಆಚರಣೆಗೆ ಅತ್ಯಂತ ಸೂಕ್ತವಾಗಿದೆ.
  • ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ ಶುಚಿರ್ಭೂತರಾಗಿ. ನಂತರ 12 ಕರಿಮೆಣಸು ಕಾಳುಗಳು, 12 ಬೇವಿನ ಎಲೆಗಳು ಮತ್ತು ಸಾಧ್ಯವಾದರೆ 12 ಅಕ್ಕಿ ಕಾಳುಗಳನ್ನು ಸಂಗ್ರಹಿಸಿಕೊಳ್ಳಿ.
  • ಈ ಮೂರು ಸಾಮಗ್ರಿಗಳನ್ನು (ಕರಿಮೆಣಸು, ಬೇವಿನ ಎಲೆ, ಅಕ್ಕಿ) ಚೆನ್ನಾಗಿ ಜಜ್ಜಿ ಅಥವಾ ಕುಟ್ಟಿ ನುಣುಪಾದ ಮಿಶ್ರಣವನ್ನಾಗಿ ಮಾಡಿ. ಇದಕ್ಕೆ ಕೆಲವು ಹನಿ ಗಂಗಾಜಲವನ್ನು ಸೇರಿಸಿ ಸಣ್ಣ ಉಂಡೆಯನ್ನಾಗಿ ರೂಪಿಸಿಕೊಳ್ಳಿ.
  • ತಯಾರಿಸಿದ ಉಂಡೆಯನ್ನು ನಿಮ್ಮ ಎರಡು ಕೈಗಳಲ್ಲಿ ಇಟ್ಟುಕೊಂಡು ಸೂರ್ಯನಿಗೆ ಪ್ರಸಾದ ರೂಪದಲ್ಲಿ ಅರ್ಪಿಸಿ. ಸಾಧ್ಯವಾದರೆ, ಸೂರ್ಯನಿಗೆ ಅರ್ಘ್ಯವನ್ನು (ನೀರಿನ ಅರ್ಪಣೆ) ನೀಡಿ.
  • ಉಂಡೆಯನ್ನು ಅರ್ಪಿಸಿದ ನಂತರ, ಓಂ ನಮೋ ಸೂರ್ಯನಾರಾಯಣಾಯ ನಮಃ ಎಂಬ ಮಂತ್ರವನ್ನು ಭಕ್ತಿಯಿಂದ ಜಪಿಸಿ. ತದನಂತರ, ಸೂರ್ಯನಿಗೆ ಮೂರು ಬಾರಿ ಆತ್ಮಾಪ್ರದಕ್ಷಿಣೆಯನ್ನು (ಸ್ವಯಂ ಪ್ರದಕ್ಷಿಣೆ) ಮಾಡಿ. ನಮಸ್ಕಾರ ಪ್ರಿಯೋ ಭಾನು ಎನ್ನುವಂತೆ, ಸೂರ್ಯನು ನಮಸ್ಕಾರಗಳಿಗೆ ಪ್ರೀತಿದಾಯಕನು.
  • ಈ ವಿಧಾನವನ್ನು ನಿರಂತರವಾಗಿ ನಾಲ್ಕು ದಿನಗಳ ಕಾಲ ಪುನರಾವರ್ತಿಸಿ. ಪ್ರತಿ ದಿನವೂ ಒಂದು ಹೊಸ ಉಂಡೆಯನ್ನು ತಯಾರಿಸಿ ಅರ್ಪಿಸಿ.
  • ನಾಲ್ಕು ದಿನಗಳ ನಂತರ, ತಯಾರಿಸಿದ ನಾಲ್ಕು ಉಂಡೆಗಳನ್ನು ಒಂದೆಡೆ ಸೇರಿಸಿ ಕೆಂಪು ವಸ್ತ್ರದಲ್ಲಿ ಭದ್ರವಾಗಿ ಕಟ್ಟಿ. ಈ ಗಂಟು-ವಸ್ತ್ರವನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಅಥವಾ ಹಾಲ್‌ನ ಯಾವುದೇ ಪ್ರಮುಖ ಸ್ಥಳದಲ್ಲಿ ನೇತುಹಾಕಿ.

ಆಧ್ಯಾತ್ಮಿಕ ಮಹತ್ವ ಮತ್ತು ಫಲಿತಾಂಶಗಳು:

ಈ ತಂತ್ರವು ಆರೋಗ್ಯಂ ಭಾಸ್ಕರಾದಿಚ್ಛೇತ್ (ಆರೋಗ್ಯವನ್ನು ಸೂರ್ಯನಿಂದ ಪಡೆಯಬೇಕು) ಎಂಬ ಪ್ರಾಚೀನ ನಂಬಿಕೆಯನ್ನು ಆಧರಿಸಿದೆ. ಸೂರ್ಯನು ಕಣ್ಣಿಗೆ ಕಾಣುವ ದೇವರು. ಆತನು ಆರೋಗ್ಯ, ಶಕ್ತಿ ಮತ್ತು ಸಕಾರಾತ್ಮಕ ಶಕ್ತಿಯ ಮೂಲ. ಶ್ರೀರಾಮಚಂದ್ರನು ರಾವಣನನ್ನು ಸಂಹರಿಸಲು ಅಗಸ್ತ್ಯ ಋಷಿಗಳ ಬೋಧನೆಯಂತೆ ಆದಿತ್ಯಹೃದಯಂ ಅನ್ನು ಜಪಿಸಿ ಸೂರ್ಯನ ಅನುಗ್ರಹ ಪಡೆದ ಕಥೆಯೂ ಇದೆ. ಇದೇ ರೀತಿ, ನಾವು ನಮ್ಮ ಸಂಕಲ್ಪಗಳು ಈಡೇರಲು ಮತ್ತು ಕಷ್ಟಗಳಿಂದ ಪಾರಾಗಲು ಸೂರ್ಯನ ಅನುಗ್ರಹವನ್ನು ಪಡೆಯಬಹುದು.

ಇದನ್ನೂ ಓದಿ: ಪ್ರಪಂಚದ ಏಕೈಕ ಜಲಾಧಿವಾಸ ಗಣಪ; ಗುಡ್ಡಟ್ಟು ವಿನಾಯಕ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ

ಮುಖ್ಯ ದ್ವಾರದ ಬಳಿ ನೇತುಹಾಕಿದ ಈ ಕೆಂಪು ವಸ್ತ್ರದ ಗಂಟು, ಅದರಲ್ಲಿರುವ ಕರಿಮೆಣಸು, ಬೇವಿನ ಎಲೆ ಮತ್ತು ಅಕ್ಕಿಯ ಸಂಯೋಜನೆಯಿಂದಾಗಿ ವಾತಾವರಣದಲ್ಲಿ ಸಕಾರಾತ್ಮಕ ಶಕ್ತಿಯನ್ನು ಪ್ರಸರಿಸುತ್ತದೆ. ಇದರ ದರ್ಶನ, ಸ್ಪರ್ಶ ಮತ್ತು ಅದರ ಸುತ್ತಲಿನ ವಾತಾವರಣವು ವರ್ಷವಿಡೀ ನಿಮಗೆ ಒದಗಬಹುದಾದ ಎಲ್ಲಾ ಅನಾಹುತಗಳು, ಸಂಕಟಗಳು, ದುರಾದೃಷ್ಟಗಳನ್ನು ದೂರ ಮಾಡಿ, ಮನೆಗೆ ಸಮೃದ್ಧಿ, ಶಾಂತಿ ಮತ್ತು ಸೌಭಾಗ್ಯವನ್ನು ತರುತ್ತದೆ ಎಂದು ನಂಬಲಾಗಿದೆ. ಯಾವುದೇ ಅಶುಚಿತ್ವ ಇದಕ್ಕೆ ಅಡ್ಡಿಯಾಗುವುದಿಲ್ಲ, ಮತ್ತು ಇದು ಸಂಪೂರ್ಣವಾಗಿ ನಂಬಿಕೆಯ ಆಧಾರದ ಮೇಲೆ ಮಾಡುವ ಪೂಜಾ ವಿಧಾನವಾಗಿದೆ. ಈ ಸರಳವಾದ ಆದರೆ ಶಕ್ತಿಶಾಲಿ ತಂತ್ರವನ್ನು ಅನುಸರಿಸುವ ಮೂಲಕ, 2026ರ ವರ್ಷವನ್ನು ಸುರಕ್ಷಿತವಾಗಿ, ಶುಭವಾಗಿ ಮತ್ತು ಸಂತೋಷದಿಂದ ಕಳೆಯಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

AUS vs ENG: ಏನಿದು ಪಿಂಕ್ ಟೆಸ್ಟ್​? – Kannada News | Ashes 2026, Australia vs England: What is the Pink Test?

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia vs England) ನಡುವಣ 5ನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯವಹಿಸಲು ಸಿಡ್ನಿ ಕ್ರಿಕೆಟ್ ಸ್ಟೇಡಿಯಂ ಸಜ್ಜಾಗಿದೆ. ಈ ಪಂದ್ಯವನ್ನು ಪಿಂಕ್ ಟೆಸ್ಟ್ (Pink Test) ಎಂದು ಕರೆಯಲಾಗುತ್ತದೆ. ಆದರೆ ಇದು ಪಿಂಕ್ ಬಾಲ್ ಟೆಸ್ಟ್ ಅಲ್ಲ. ಬದಲಿಗೆ ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಪಿಂಕ್ ಕ್ಯಾಪ್ ಧರಿಸಿ ಕಣಕ್ಕಿಳಿಯಲಿದ್ದಾರೆ.

ಏನಿದು ಪಿಂಕ್ ಟೆಸ್ಟ್?

ಪ್ರತಿ ವರ್ಷ ಸಿಡ್ನಿಯಲ್ಲಿ ಆಡಲಾಗುವ ಮೊದಲ ಟೆಸ್ಟ್ ಅನ್ನು ಪಿಂಕ್ ಟೆಸ್ಟ್ ಎಂದು ಕರೆಯಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಪಂದ್ಯದಲ್ಲಿ ಆಟಗಾರರು ಪಿಂಕ್ ಕ್ಯಾಪ್ ಧರಿಸುವುದು. ಇದರ ಉದ್ದೇಶ ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಅದರ ವಿರುದ್ಧ ಹೋರಾಡುತ್ತಿರುವವರಿಗೆ ಧೈರ್ಯ ತುಂಬುವುದಾಗಿದೆ.

ಇಂತಹದೊಂದು ಅಭಿಯಾನಕ್ಕೆ ನಾಂದಿಯಾಡಿದ್ದು ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಗ್ಲೆನ್ ಮೆಕ್​ಗ್ರಾಥ್ ಎಂಬುದು ವಿಶೇಷ. ಮೆಕ್​ಗ್ರಾಥ್ ಅವರ ಪತ್ನಿ ಜೇನ್ ಮೆಕ್‌ಗ್ರಾತ್ ಅವರು ಸ್ತನ ಕ್ಯಾನ್ಸರ್​ನಿಂದ ಮೃತಪಟ್ಟಿದ್ದರು. ಆ ಬಳಿಕ ಮೆಕ್‌ಗ್ರಾತ್ ಫೌಂಡೇಶನ್ ಸ್ಥಾಪಿಸಿದ ಗ್ಲೆನ್ ಮೆಕ್​ಗ್ರಾಥ್ ಸ್ತನ ಕ್ಯಾನ್ಸರ್ ಜಾಗೃತಿ ಹಾಗೂ ಈ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಚಿಕಿತ್ಸೆಗೆ ನೆರವು ನೀಡುತ್ತಾ ಬರುತ್ತಿದೆ.

ಈ ಅಭಿಯಾನಕ್ಕೆ ಸಿಡ್ನಿ ಕ್ರಿಕೆಟ್ ಕೂಡ ಸಾಥ್ ನೀಡಿದ್ದು, ಈ ಮೂಲಕ ಪ್ರತಿ ವರ್ಷ ಪಿಂಕ್ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿದೆ. ಈ ಮೂಲಕ ಸ್ಟೇಡಿಯಂನ ಗ್ಯಾಲರಿಗಳನ್ನು ಪಿಂಕ್ ಬಣ್ಣಗಳಿಂದ ಅಲಂಕೃತಗೊಳಿಸಲಾಗುತ್ತದೆ. ಹಾಗೆಯೇ ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನದಂದು ಲೇಡೀಸ್ ಸ್ಟ್ಯಾಂಡ್ ಅನ್ನು ತಾತ್ಕಾಲಿಕವಾಗಿ ಜೇನ್ ಮೆಕ್‌ಗ್ರಾತ್ ಸ್ಟ್ಯಾಂಡ್ ಎಂದು ಮರುನಾಮಕರಣ ಮಾಡಲಾಗುತ್ತದೆ. ಇನ್ನು ಈ ಪಂದ್ಯದಲ್ಲಿ ಆಟಗಾರರು ಧರಿಸಿದ ಪಿಂಕ್ ಕ್ಯಾಪ್​ ಅನ್ನು ಕೂಡ ಹರಾಜಾಗಿಡಲಾಗುತ್ತದೆ. ಇದರಿಂದ ಬಂದ ಹಣವನ್ನು ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುತ್ತದೆ.

ಸರಣಿ ಗೆದ್ದಿರುವ ಆಸ್ಟ್ರೇಲಿಯಾ:

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯನ್ನು ಈಗಾಗಲೇ ಆಸ್ಟ್ರೇಲಿಯಾ ತಂಡವು 3-1 ಅಂತರದಿಂದ ವಶಪಡಿಸಿಕೊಂಡಿದೆ. ಆ್ಯಶಸ್ ಸರಣಿಯಲ್ಲಿ ಇನ್ನು ಉಳಿದಿರುವುದು ಒಂದು ಟೆಸ್ಟ್ ಮಾತ್ರ. ನಾಳೆಯಿಂದ (ಜ.4) ಶುರುವಾಗಲಿರುವ ಈ ಸರಣಿಯಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡವು ತನ್ನ ಸೋಲಿನ ಅಂತರವನ್ನು ಕುಗ್ಗಿಸುವ ಇರಾದೆಯಲ್ಲಿದೆ. ಅತ್ತ ಆಸ್ಟ್ರೇಲಿಯಾ ತಂಡವು ಹೊಸ ವರ್ಷದಲ್ಲಿ ಶುಭಾರಂಭ ಮಾಡುವ ಯೋಜನೆಯೊಂದಿಗೆ ಕಣಕ್ಕಿಳಿಯಲಿದೆ. ಹೀಗಾಗಿ ಈ ಪಂದ್ಯದಲ್ಲೂ ಉಭಯ ತಂಡಗಳಿಂದ ರೋಚಕ ಪೈಪೋಟಿ ನಿರೀಕ್ಷಿಸಬಹುದು.

ಆಸ್ಟ್ರೇಲಿಯಾ ಟೆಸ್ಟ್​ ತಂಡ: ಸ್ಟೀವ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ , ಬ್ರೆಂಡನ್ ಡಾಗೆಟ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ , ಮಾರ್ನಸ್ ಲ್ಯಾಬುಶೇನ್, ಟಾಡ್ ಮರ್ಫಿ, ಮೈಕೆಲ್ ನೇಸರ್, ಜ್ಯೆ ರಿಚರ್ಡ್ಸನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್‌ಸ್ಟರ್.

ಇದನ್ನೂ ಓದಿ: ಟಿ20 ವಿಶ್ವಕಪ್​ಗೆ 7 ತಂಡಗಳು ಪ್ರಕಟ

ಇಂಗ್ಲೆಂಡ್ ಟೆಸ್ಟ್​ ತಂಡ: ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸ್​, ಝಾಕ್ ಕ್ರಾಲಿ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮಿ ಸ್ಮಿತ್, ಜೋಶ್ ಟಂಗ್, ಮಾರ್ಕ್ ವುಡ್.

Source link

ಈ ವಾರ ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ – Kannada News | Kichcha Sudeep to discuss This things In Bigg Boss Kannada

ರಾಜೇಶ್ ದುಗ್ಗುಮನೆ |

Updated on:Jan 03, 2026 | 9:04 AM

Share

ಬಿಗ್ ಬಾಸ್ ಕನ್ನಡ ಸೀಸನ್ 12ರ ಕೊನೆಯ ವಾರಗಳು ಚಾಲ್ತಿಯಲ್ಲಿ ಇವೆ. ಈ ವಾರ ಸುದೀಪ್ ಅವರು ಆಗಮಿಸುತ್ತಿದ್ದಾರೆ. ಅವರು ಹಲವು ವಿಷಯಗಳನ್ನು ಚರ್ಚೆ ಮಾಡಲಿದ್ದಾರೆ. ಈ ವಾರ ಅವರು ಚರ್ಚೆ ಮಾಡಬೇಕಿರುವ ವಿಷಯ ಕೂಡ ದೊಡ್ಡದು ಇದೆ. ಆ ಬಗ್ಗೆ ಇಲ್ಲಿದೆ ವಿವರ.

Published on: Jan 03, 2026 09:03 AM

Source link

“ಈ ದೇವೇಗೌಡ ಇನ್ನೂ ಬದುಕಿದ್ದಾನೆ”: ಅಕ್ಟೋಬರ್ 24ದಂದು ಸರ್ಕಾರಕ್ಕೆ ಸೂಕ್ತ ಉತ್ತರ ನೀಡುತ್ತೇನೆ – Kannada News | Karnataka Politics: Devegowda Slams Fund Diversion for Guarantee Schemes, Cabinet Takes Major Decisions

ಬೆಂಗಳೂರು, ಜ.3: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸು ಕೊರತೆ ಎದುರಾಗಿದೆ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಅವರು ಹಾಸನದಲ್ಲಿ ಅಕ್ಟೋಬರ್ 24ರಂದು ಸಮಾವೇಶ ನಡೆಸಿ ಸರ್ಕಾರಕ್ಕೆ ಸೂಕ್ತ ಉತ್ತರ ನೀಡುವುದಾಗಿ ಹೇಳಿದ್ದಾರೆ. ನೈಸ್ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ದೇವೇಗೌಡರು ಸ್ವಾಗತಿಸಿದ್ದಾರೆ. ಕೋಗಿಲು ಲೇಔಟ್‌ನಲ್ಲಿನ ಅಕ್ರಮ ಮನೆಗಳ ತೆರವು ಕುರಿತೂ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಅನಧಿಕೃತ ಕೊಳಚೆ ಪ್ರದೇಶಗಳ ಸಂಖ್ಯೆ ಅಧಿಕವಾಗಿದೆ ಎಂದು ಹೇಳಿರುವ ದೇವೇಗೌಡರು, ವ್ಹೀಲ್ ಚೇರ್‌ನಲ್ಲಿ ಕುಳಿತುಕೊಂಡು ಅಂತಹ ಸ್ಥಳಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಬೆಂಗಳೂರು: ಕುಡಿದ ಮತ್ತಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ, ಪೊಲೀಸರ ಮೇಲೆಯೂ ಹಲ್ಲೆ! – Kannada News | Bengaluru New Year Shocker: Drunk Youths Assault Police After Harassing Girl

ಕುಡಿದ ಮತ್ತಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ

ಬೆಂಗಳೂರು, ಜನವರಿ 03: ಹೊಸವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಕುಡಿದ ಮತ್ತಲ್ಲಿದ್ದ ಯುವಕರು, ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯರೊಂದಿಗೆ ಅನುಚಿತ ವರ್ತನೆ ತೋರಿದ ಘಟನೆ ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜನವರಿ 1ರ ಮುಂಜಾನೆ ಸುಮಾರು 1.40ರ ಸುಮಾರಿಗೆ ಈ ಘಟನೆ ನಡೆದಿದ್ದು, ರಕ್ಷಣೆಗೆಂದು ಬಂದ ಪೊಲೀಸರೊಂದಿಗೆ ಯುವಕರು ಗಲಾಟೆ ಮಾಡಿಕೊಂಡಿದ್ದಾರೆ.

ಪೊಲೀಸರ ಮೇಲೆಯೇ ಹಲ್ಲೆ

ನ್ಯೂ ಇಯರ್ ಆಚರಣೆಯಲ್ಲಿ ಕಂಠ ಪೂರ್ತಿ ಕುಡಿದ ಯುವಕರು, ರಸ್ತೆ ಪಕ್ಕ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯರ ಬಳಿ ಅವಹೇಳನಕಾರಿ ವರ್ತನೆ ತೋರಿದ್ದು, ಇದರಿಂದ ಆತಂಕಗೊಂಡ ಯುವತಿಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೊಸವರ್ಷದ ಸಂಭ್ರಮಾಚರಣೆಯ ವೇಳೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ರವಿ ಸ್ಥಳಕ್ಕೆ ಧಾವಿಸಿ ಯುವಕರನ್ನು ಪ್ರಶ್ನಿಸಿದ್ದರು. ಈ ವೇಳೆ ಯುವಕರು ಪೊಲೀಸರೊಂದಿಗೆ ಕಿರಿಕ್ ನಡೆಸಿ, ಅವರನ್ನು ತಳ್ಳಾಡಿ, ರಿಫ್ಲೆಕ್ಟರ್ ಜಾಕೆಟ್ ಹರಿದು ಪುಂಡಾಟ ನಡೆಸಿದ್ದಾರೆ. ಅಲ್ಲದೆ ಪೊಲೀಸರ ಮೇಲೆ ಹಲ್ಲೆಗೂ ಮುಂದಾದಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಭಾರತ ಮೂಲದ ಆರೋಪಿಗಳು

ಪರಿಸ್ಥಿತಿಯನ್ನು ನಿಯಂತ್ರಿಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಹೊಯ್ಸಳ ವಾಹನದಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ. ಬಂಧಿತರನ್ನು ಅನ್ಶ್ ಮೆಹ್ತಾ ಮತ್ತು ಪರ್ವ್ ರಾಠಿ ಎಂದು ಗುರುತಿಸಲಾಗಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಮತ್ತು ಕರ್ತವ್ಯದಲ್ಲಿರುವ ಪೊಲೀಸರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನಮ್ರತಾ-ಕಾರ್ತಿ ಬೆಸ್ಟ್ ಜೋಡಿ, ಮದುವೆ ಆದ್ರೆ ನಂಗೆ ಖುಷಿ’; ಸಂಗೀತಾ ಶೃಂಗೇರಿ ಅಚ್ಚರಿಯ ಮಾತು – Kannada News | Karthik Mahesh Namratha Gowda Wedding: Sangeetha Sringeri express happy Over this pair

ಅದು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮಾತು. ಕಾರ್ತಿಕ್ ಮಹೇಶ್ ಹಾಗೂ ಸಂಗೀತಾ ಶೃಂಗೇರಿ ಅವರ ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ಇತ್ತು. ಆದರೆ, ಒಂದು ಹಂತದ ಬಳಿಕ ಇಬ್ಬರೂ ಬೇರೆ ಆದರು. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗೋದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಯಿತು. ಶೋ ಅಂತಿಮ ಹಂತಕ್ಕೆ ಬರುವಾಗ ನಮ್ರತಾ (Namratha Gowda) ಜೊತೆ ಕಾರ್ತಿಕ್ ಅವರು ಕ್ಲೋಸ್ ಆದರು. ಇಬ್ಬರೂ ಈಗ ಒಟ್ಟಿಗೆ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಂಗೀತಾ ಶೃಂಗೇರಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್ ಒಟ್ಟಾಗಿ ದೇಶ-ವಿದೇಶ ಸುತ್ತುತ್ತಿದ್ದಾರೆ ಎಂಬ ಅನುಮಾನ ಅನೇಕರಿಗೆ ಇದೆ. ಇತ್ತೀಚೆಗೆ ನಮ್ರತಾ ಹಂಚಿಕೊಂಡ ವಿಡಿಯೋದಲ್ಲಿ ಕಾರ್ತಿಕ್ ಮಹೇಶ್ ಅವರ ಕೈ ಕಾಣಿಸಿದೆ. ಹೀಗಾಗಿ ಸುತ್ತಾಟದಲ್ಲಿ ನಮ್ರತಾಗೆ ಅವರು ಪಾರ್ಟ್ನರ್ ಆಗಿದ್ದಾರೆ ಎನ್ನಲಾಗುತ್ತಿದೆ. ಅವರು ಬದುವೆ ಆಗಲಿ ಎಂಬುದು ಫ್ಯಾನ್ಸ್ ಕೋರಿಕೆ. ಈ ಬಗ್ಗೆ ಸಂಗೀತಾ ರಿಯಾಕ್ಟ್ ಮಾಡಿದ್ದಾರೆ.

ಇದನ್ನೂ ಓದಿ: ‘ನೀವು ತೋರಿದ ದ್ವೇಷ ನೋಡಿ ಬೇಸರವಾಯಿತು’; ನೋವು ಹೊರ ಹಾಕಿದ ನಮ್ರತಾ ಗೌಡ

‘ಕಾರ್ತಿಕ್ ಹಾಗೂ ನಮ್ರತಾ ಲವ್ ವಿಷಯ ಹರಿದಾಡುತ್ತಿದೆ’ ಎಂಬ ಪ್ರಶ್ನೆ ಸಂಗೀತಾಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸಂಗೀತಾ, ‘ಅವರು ಮದುವೆ ಆಗ್ತಾರೆ ಎಂದರೆ ನನ್ನಷ್ಟು ಖುಷಿಪಡುವವರು ಮತ್ತೊಬ್ಬರಿಲ್ಲ. ಕಪಲ್ ಆಗಿ ತುಂಬಾನೇ ಸುಂದರವಾಗಿ ಕಾಣ್ತಾರೆ. ಇಬ್ಬರಲ್ಲೂ ಮಧ್ಯೆ ಹೋಲಿಕೆ ಇದೆ. ಒಂದೇ ರೀತಿಯ ಕರಿಯರ್’ ಎಂದಿದ್ದಾರೆ ಸಂಗೀತಾ. ಅವರ ಮಾತು ಅನೇಕರಿಗೆ ಅಚ್ಚರಿ ತರಿಸಿದೆ.

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮುಗಿದ ಬಳಿಕ ಆ ಸೀಸನ್ ಸ್ಪರ್ಧಿಗಳ ಜೊತೆ ಕಾಣಿಸಿಕೊಂಡಿದ್ದು ಕಡಿಮೆ. ಇತ್ತೀಚೆಗೆ ನಡೆದ ಅವರ ಹಾಡಿನ ಬಿಡುಗಡೆ ಸಮಾರಂಭಕ್ಕೆ ಕಾರ್ತಿಕ್ ಹಾಗೂ ನಮ್ರತಾ ಆಗಮಿಸಿದ್ದರು. ಇದೇ ಮೊದಲ ಬಾರಿಗೆ ಅವರು ವೇದಿಕೆ ಮೇಲೆ ಒಟ್ಟಾಗಿ ಕಾಣಿಸಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version