Shani Dev: ಇಂದು ವರ್ಷದ ಮೊದಲ ಶನಿವಾರ: ವರ್ಷ ಪೂರ್ತಿ ಶನಿ ದೇವರ ಆಶೀರ್ವಾದ ಪಡೆಯಲು ಈ ಪರಿಹಾರ ಮಾಡಿ – Kannada News | To get shani dev blessing year 2026 saturday remedies

ಹೊಸ ವರ್ಷ ಪ್ರಾರಂಭವಾಗಿದೆ. ಇಂದು ಹೊಸ ವರ್ಷದ ಮೊದಲ ಶನಿವಾರ. ಶನಿವಾರ ಶನಿ ದೇವರಿಗೆ ಸಮರ್ಪಿತವಾಗಿದೆ. ಶನಿವಾರದಂದು ಪೂಜೆ ಮತ್ತು ಉಪವಾಸ ಮಾಡುವುದರಿಂದ ಶನಿ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಜೊತೆಗೆ ಜೀವನದ ಎಲ್ಲಾ ದುಃಖ ಮತ್ತು ತೊಂದರೆಗಳು ದೂರವಾಗುತ್ತದೆ ಎಂದು ನಂಬಲಾಗಿದೆ.

ಹೊಸ ವರ್ಷದ ಮೊದಲ ಶನಿವಾರದಂದು ಪ್ರಾರ್ಥನೆ ಮತ್ತು ಉಪವಾಸದ ಜೊತೆಗೆ ಕೆಲವು ವಿಶೇಷ ಕಾರ್ಯಗಳನ್ನು ಮಾಡಿದರೆ, ಶನಿ ದೇವರ ಆಶೀರ್ವಾದ ದೊರೆಯುತ್ತದೆ. ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಹಾಗಾದರೆ, ಶನಿ ದೇವರನ್ನು ಮೆಚ್ಚಿಸಲು ವರ್ಷದ ಮೊದಲ ಶನಿವಾರ ಯಾವ ವಿಶೇಷ ಕಾರ್ಯಗಳನ್ನು ಮಾಡಬೇಕೆಂದು ಇಲ್ಲಿ ತಿಳಿದುಕೊಳ್ಳಿ.

ಸಾಸಿವೆ ಎಣ್ಣೆಯ ದೀಪ ಹಚ್ಚಿ:

ಶನಿವಾರ ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ನಂತರ, ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ಕಪ್ಪು ಬತ್ತಿಯಿಂದ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ವರ್ಷದ ಮೊದಲ ಶನಿವಾರ ಇದನ್ನು ಮಾಡುವುದರಿಂದ ವರ್ಷವಿಡೀ ಶನಿ ದೇವರ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.

ದಾನ ಮಾಡಿ:

ವರ್ಷದ ಮೊದಲ ಶನಿವಾರ ದಾನ ಮಾಡಲು ಮರೆಯಬೇಡಿ. ಹಾಗೆ ಮಾಡುವುದು ತುಂಬಾ ಪುಣ್ಯ. ಶನಿವಾರ ಶನಿ ದೇವರನ್ನು ಪೂಜಿಸುವುದರ ಜೊತೆಗೆ, ಬಡವರಿಗೆ ಅಥವಾ ನಿರ್ಗತಿಕರಿಗೆ ಎಳ್ಳು ದಾನ ಮಾಡಿ. ಹಾಗೆ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಶನಿಯು ಬಲಗೊಳ್ಳುತ್ತದೆ ಮತ್ತು ನೀವು ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ.

ಇದನ್ನೂ ಓದಿ: ಪ್ರಪಂಚದ ಏಕೈಕ ಜಲಾಧಿವಾಸ ಗಣಪ; ಗುಡ್ಡಟ್ಟು ವಿನಾಯಕ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ

ಬಡವರಿಗೆ ಸಾಸಿವೆ ಎಣ್ಣೆ ನೀಡಿ:

ವರ್ಷದ ಮೊದಲ ಶನಿವಾರ, ಕಬ್ಬಿಣದ ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ತುಂಬಿಸಿ ಅದರಲ್ಲಿ ನಿಮ್ಮ ಮುಖವನ್ನು ನೋಡಿ. ನಂತರ, ಅದನ್ನು ಬಡವರಿಗೆ ದಾನ ಮಾಡಿ. ಹಾಗೆ ಮಾಡುವುದರಿಂದ ನಿಮ್ಮ ಜೀವನದಿಂದ ನಕಾರಾತ್ಮಕತೆ ದೂರವಾಗುತ್ತದೆ ಮತ್ತು ಯಶಸ್ಸಿಗೆ ಹೊಸ ಮಾರ್ಗಗಳು ತೆರೆಯುತ್ತವೆ.

ತೆಂಗಿನಕಾಯಿಯಿಂದ ಈ ಕೆಲಸ ಮಾಡಿ:

ವರ್ಷದ ಮೊದಲ ಶನಿವಾರ, ತೆಂಗಿನಕಾಯಿಯನ್ನು ತುಂಡರಿಸಿ, ಅದರಲ್ಲಿ ಸಕ್ಕರೆ ಮತ್ತು ಹಿಟ್ಟನ್ನು ತುಂಬಿಸಿ. ನಂತರ, ಸಂಜೆ, ತೆಂಗಿನಕಾಯಿಯನ್ನು ಏಕಾಂತ ಸ್ಥಳದಲ್ಲಿ ಮಣ್ಣಿನಲ್ಲಿ ಹೂತುಹಾಕಿ. ಹೀಗೆ ಮಾಡುವುದರಿಂದ ಜೀವನದ ಕಷ್ಟಗಳಿಂದ ಮುಕ್ತಿ ಸಿಗುತ್ತದೆ.

ಶನಿ ಸ್ತೋತ್ರ ಪಠಿಸಿ:

ಶನಿವಾರ ಬೆಳಿಗ್ಗೆ ಸ್ನಾನ ಮಾಡಿದ ನಂತರ, ಶನಿ ಸ್ತೋತ್ರವನ್ನು 21 ಬಾರಿ ಪಠಿಸಿ. ಹಾಗೆ ಮಾಡುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ. ಇದು ಶನಿಯ ದುಷ್ಪರಿಣಾಮಗಳಿಂದ ಪರಿಹಾರವನ್ನು ನೀಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

International Mind-Body Wellness Day 2026: ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಈ ಸರಳ ಅಭ್ಯಾಸಗಳನ್ನು ಪಾಲಿಸಿ – Kannada News | International Mind Body Wellness Day 2026: Know the history and importance of Mind Body Wellness Day

ಅಂತಾರಾಷ್ಟ್ರೀಯ ಮನಸ್ಸು ದೇಹ ಸ್ವಾಸ್ಥ್ಯ ದಿನImage Credit source: Freepik

ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮತೋಲನವು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವು ಬೇರ್ಪಡಿಸಲಾಗದಂತೆ ಸಂಬಂಧ ಹೊಂದಿದ್ದು, ಈ ಎರಡೂ ಆರೋಗ್ಯವು ಉತ್ತಮವಾಗಿದ್ದಾಗ, ವ್ಯಕ್ತಿಯು ಉತ್ತಮ, ಸಕಾರಾತ್ಮಕ ಜೀವನವನ್ನು ನಡೆಸಲು ಸಾಧ್ಯ. ಅಲ್ಲದೆ, ಮಾನಸಿಕ ಶಾಂತಿ ಮತ್ತು ದೈಹಿಕ ಸದೃಢತೆಯು ಒತ್ತಡವನ್ನು ಕಡಿಮೆ ಮಾಡಲು, ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಈ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲು ಪ್ರತಿ ವರ್ಷ ಜನವರಿ 03 ರಂದು ಅಂತಾರಾಷ್ಟ್ರೀಯ ಮನಸ್ಸು ದೇಹದ ಸ್ವಾಸ್ಥ್ಯ (Mind-Body Wellness) ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಮನಸ್ಸು-ದೇಹ ಸ್ವಾಸ್ಥ್ಯ ದಿನದ ಇತಿಹಾಸವೇನು?

ಜನವರಿ 3 ರಂದು ಅಂತರರಾಷ್ಟ್ರೀಯ ಮನಸ್ಸು-ದೇಹ ಸ್ವಾಸ್ಥ್ಯ ದಿನವನ್ನು ಆಚರಿಸಲಾಗುತ್ತದೆ, ಈ ದಿನವು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಮತ್ತು ಉತ್ತೇಜಿಸಲು ಮೀಸಲಾಗಿದೆ. 2019 ರಲ್ಲಿ ಆರಂಭವಾದ ಈ ದಿನವು ಜನರನ್ನು ಸಮತೋಲಿತ ಜೀವನಶೈಲಿಯತ್ತ ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ.

ಅಂತಾರಾಷ್ಟ್ರೀಯ ಮನಸ್ಸು-ದೇಹ ಸ್ವಾಸ್ಥ್ಯ ದಿನದ ಉದ್ದೇಶವೇನು?

  • ಈ ದಿನದ ಪ್ರಮುಖ ಉದ್ದೇಶ ಮಾನಸಿಕ ಮತ್ತು ದೈಹಿಕ ಆರೋಗ್ಯದ ನಡುವೆ ಸಾಮರಸ್ಯವನ್ನು ಉತ್ತೇಜಿಸುವುದು
  • ಮಾನಸಿಕ ಮತ್ತು ದೈಹಿಕ ಆರೋಗ್ಯದ ಸ್ವಾಸ್ಥ್ಯದ ಬಗ್ಗೆ ಅರಿವು ಮೂಡಿಸುವುದು.
  • ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವುದು.
  • ಈ ದಿನವು ಆರೋಗ್ಯಕರ ಆಹಾರ ಸೇವನೆ ಮತ್ತು ಆರೋಗ್ಯಕ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಜನರಿಗೆ ಪ್ರೇರೇಪಿಸುತ್ತದೆ.

ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಈ ಸರಳ ಅಭ್ಯಾಸಗಳನ್ನು ಪಾಲಿಸಿ:

ಪ್ರತಿದಿನ ವ್ಯಾಯಾಮ ಮಾಡಿ: ವ್ಯಾಯಾಮವು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಪ್ರಯೋಜನಕಾರಿಯಾಗಿದೆ. ನಿಯಮಿತ ವ್ಯಾಯಾಮವು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ, ತೂಕವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಹೃದಯ, ಸ್ನಾಯುಗಳ ಆರೋಗ್ಯವನ್ನು ಸುಧಾರಿಸುತ್ತದೆ. ವಾಸ್ತವವಾಗಿ, ವ್ಯಾಯಾಮವು ದೇಹದಲ್ಲಿ ಎಂಡಾರ್ಫಿನ್‌ಗಳನ್ನು (ಸಂತೋಷದ ಹಾರ್ಮೋನುಗಳು) ಹೆಚ್ಚಿಸುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ಪ್ರತಿದಿನ 30 ನಿಮಿಷಗಳ ವ್ಯಾಯಾಮ ಮಾಡಬೇಕು.ನೃತ್ಯ, ಈಜು, ವಾಕಿಂಗ್‌ ಈ ರೀತಿಯ ಯಾವುದೇ ಚಟುವಟಿಕೆಯಲ್ಲಿ ನಿಮ್ಮನ್ನು ನೀವು ತೊಡಗಿಸಿ.

ಚೆನ್ನಾಗಿ ನಿದ್ದೆ ಮಾಡಿ: ನಿದ್ರೆ ಮಾನಸಿಕ ಶಾಂತಿಯನ್ನು ನೀಡುವುದಲ್ಲದೆ ನಿಮ್ಮ ಹೃದಯದ ಆರೋಗ್ಯವನ್ನೂ ಸುಧಾರಿಸುತ್ತದೆ. ಪ್ರತಿದಿನ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡುವುದರಿಂದ ಬೊಜ್ಜು ಮತ್ತು ಜೀರ್ಣಕಾರಿ ಸಮಸ್ಯೆಗಳಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು. ಅಲ್ಲದೆ ಒತ್ತಡಮುಕ್ತ ಜೀವನವನ್ನು ನಡೆಸಬಹುದು.

ಇದನ್ನೂ ಓದಿ: ವಸುದೈವ ಕುಟುಂಬಕಂ; ಜಾಗತಿಕ ಕುಟುಂಬ ದಿನದ ಆಚರಣೆಯ ಬಗ್ಗೆ ತಿಳಿಯಿರಿ

 ಆರೋಗ್ಯಕರ ಆಹಾರ ಸೇವನೆ: ನೀವು ಏನು ತಿನ್ನುತ್ತೀರೋ ಅದು ನಿಮ್ಮ ಮನಸ್ಸಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಇದರರ್ಥ ನೀವು ಏನು ತಿನ್ನುತ್ತೀರಿ ಎಂಬುದು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚು ಜಂಕ್‌, ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಸರಿಯಾದ ಪೋಷಕಾಂಶ ದೊರೆಯುವುದಿಲ್ಲ. ಈ ಪೋಷಕಾಂಶಗಳ ಕೊರತೆಯು ದಿನವಿಡೀ ಆಯಾಸ ಮತ್ತು ದೌರ್ಬಲ್ಯಕ್ಕೆ ಕಾರಣವಾಗಬಹುದು. ಪ್ರೋಟೀನ್, ಜೀವಸತ್ವಗಳು, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ನಿಮ್ಮ ದೇಹವು ಫಿಟ್ ಆಗಿರುವುದಲ್ಲದೆ ನಿಮ್ಮ ಮನಸ್ಸನ್ನು ಆರೋಗ್ಯಕರವಾಗಿರಿಸುತ್ತದೆ.

ಧ್ಯಾನ ಮಾಡಿ: ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಧ್ಯಾನವು ಒಂದು ಮಾರ್ಗವಾಗಿದೆ.  ಹೌದು ಧ್ಯಾನವು ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯಿಂದ ಪರಿಹಾರವನ್ನು ನೀಡುವುದಲ್ಲದೆ, ಯಾವುದೇ ರೀತಿಯ ವ್ಯಸನಗಳನ್ನು ನಿವಾರಿಸುವಲ್ಲಿಯೂ ಪ್ರಯೋಜನಕಾರಿ. ಹಾಗಾಗಿ ಬೆಳಗ್ಗಿ 10 ರಿಂದ 15 ನಿಮಿಷಗಳ ಕಾಲ ಧ್ಯಾನ ಮಾಡಿ.

ನಿಮಗಾಗಿ ಸಮಯ ಮೀಸಲಿಡಿ: ನಿಮ್ಮ ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯಕರವಾಗಿ ಮತ್ತು ಸಂತೋಷವಾಗಿಡಲು ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಪ್ರಯಾಣ, ನೃತ್ಯ, ಸಂಗೀತ ಅಥವಾ ಯಾವುದೇ ನಿಮ್ಮ ಇಷ್ಟದ ಕೆಲಸಗಳನ್ನು ಮಾಡಿ, ಇದು ಒತ್ತಡವನ್ನು ನಿವಾರಿಸಿ ನಿಮ್ಮ ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ. ಇನ್ನೊಂದೇನೆಂದರೆ ಯಾವಾಗಲೂ ಸಕಾರಾತ್ಮಕವಾಗಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರದ್ಧಾಂಜಲಿಗೂ ಪೋಸ್ಟರ್ ಹಾಕ್ತಾರೆ; ಗಿಲ್ಲಿ ತಿರುಗೇಟಿಗೆ ಮಂಕಾದ ಅಶ್ವಿನಿ ಗೌಡ – Kannada News | Gilli’s Shraddhanjali Poster Counter Silences Ashwini Gowda in Heated Spat

ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಮಧ್ಯೆ ಬಿಗ್ ಬಾಸ್ (Bigg Boss) ಅಲ್ಲಿ ಒಳ್ಳೆಯ ಕಾಂಪಿಟೇಷನ್ ಬೆಳೆದಿದೆ. ಇಬ್ಬರ ಮಧ್ಯೆ ಆಗಾಗ ಕಿರಿಕ್​​ಗಳು ಆಗುತ್ತಲೇ ಇರುತ್ತವೆ. ಜನವರಿ 2ರ ಎಪಿಸೋಡ್​​ನಲ್ಲಿ ಇಬ್ಬರ ಮಧ್ಯೆ ಕಿರಕ್ ಆಗಿದೆ. ಕಳಪೆ ಕೊಡೋ ವಿಷಯದಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ಘನಘೋರ ಜಗಳ ನಡೆದಿದೆ. ಅಶ್ವಿನಿ ಟ್ರಿಗರ್ ಮಾಡಿ, ಅವರಿಗೆ ತಿರುಗೇಟು ನೀಡಿದ್ದಾರೆ ಗಿಲ್ಲಿ.

ಅಶ್ವಿನಿ ಗೌಡ ಅವರು ಮೊದಲು ಗಿಲ್ಲಿಗೆ ಕಳಪೆ ನೀಡಿದರು. ಇದಕ್ಕೆ ಅವರು ಕೊಟ್ಟ ಕಾರಣ ಸೂಕ್ತ ಆಗಿರಲಿಲ್ಲ ಎಂದು ಗಿಲ್ಲಿಗೆ ಅನಿಸಿದೆ. ಇಬ್ಬರ ಮಧ್ಯೆ ಈ ವಿಯಕ್ಕೆ ಚರ್ಚೆಗಳು ನಡೆದವು. ಆ ಬಳಿಕ ಗಿಲ್ಲಿ ನಟ ಅವರು ಕಳಪೆಗೆ ಅಶ್ವಿನಿ ಗೌಡ ಹೆಸರನ್ನು ತೆಗೆದುಕೊಂಡರು. ಈ ವೇಳೆ ಏಟಿನ ಮೇಲೆ ಏಟನ್ನು ಕೊಟ್ಟಿದ್ದಾರೆ.

‘ನೀನು ಜೋಕರ್’ ಎಂದು ಅಶ್ವಿನಿ ಅವರು ಗಿಲ್ಲಿಗೆ ಹೇಳಿದರು. ಇದಕ್ಕೆ ತಿರುಗೇಟು ಕೊಟ್ಟ ಗಿಲ್ಲಿ, ‘ಹೌದು ನಾನು ಜೋಕರ್’ ಎಂಬುದನ್ನು ಒಪ್ಪಿಕೊಂಡರು. ಹಾಸ್ಯ ಶೋಗಳನ್ನು ಮಾಡುತ್ತಾ ಎಲ್ಲರನ್ನೂ ನಗಿಸೋ ಕೆಲಸ ಗಿಲ್ಲಿಯದ್ದು. ಈ ಕಾರಣದಿಂದಲೇ ಅವರು ತಮ್ಮನ್ನು ತಾವು ಜೋಕರ್ ಎಂದು ಕರೆದುಕೊಂಡರು.

ಅಶ್ವಿನಿ ಗೌಡ ಅವರು ಈವರೆಗೆ ಕ್ಯಾಪ್ಟನ್ ಆಗಿಯೇ ಇಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ. ಈ ವಿಷಯ ಇಟ್ಟುಕೊಂಡು ಗಿಲ್ಲಿ ಕೌಂಟರ್ ಕೊಟ್ಟರು. ‘ನಿಮಗೆ ಈವರೆಗೆ ಕ್ಯಾಪ್ಟನ್ ಆಗೋಕೆ ಸಾಧ್ಯವಾಗಿಲ್ಲ’ ಎಂದರು. ಈ ಮಾತು ಅಶ್ವಿನಿಗೆ ಚುಚ್ಚಿದೆ.

ಇದನ್ನೂ ಓದಿ: ಈ ವಾರ ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ

ಫೈನಲ್ ಟಾಸ್ಕ್ ಅಲ್ಲಿ ಅಶ್ವಿನಿ ಹಾಗೂ ಧನುಷ್ ಆಡಬೇಕಿತ್ತು. ಇದಕ್ಕಾಗಿ ಪೋಸ್ಟರ್ ಹಾಕಲಾಗಿತ್ತು. ಇದನ್ನು ಅಶ್ವಿನಿ ಹೈಲೈಟ್ ಮಾಡಿದರು. ‘ನನ್ನ ಫೋಟೋ ಕೊನೆಪಕ್ಷ ಪೋಸ್ಟರ್​ ಅಲ್ಲಾದರೂ ಬಂತು’ ಎಂದು ಹೆಮ್ಮೆಯಿಂದ ಬೀಗಿದರು. ಇದಕ್ಕೆ ಗಿಲ್ಲಿ ನಟ ಕೊಟ್ಟ ಕೌಂಟರ್ ಅವರಿಂದ ಸಹಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ‘ಶ್ರದ್ಧಾಂಜಲಿಗೂ ಪೋಸ್ಟರ್ ಹಾಕ್ತಾರೆ ಅದ್ರಲ್ಲೇನಿದೆ’ ಎಂದರು. ಈ ಡೈಲಾಗ್​​ಗೆ ಅವರಿಂದ ಉತ್ತರ ಹೇಳಲು ಸಾಧ್ಯವಾಗಲೇ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:17 am, Sat, 3 January 26

Source link

ರಾಷ್ಟ್ರಪತಿ, ಪ್ರಧಾನ ಮಂತ್ರಿಯ AI ಡೀಪ್‌ಫೇಕ್ ವಿಡಿಯೋ ಸೃಷ್ಟಿಸಿದ ವ್ಯಕ್ತಿಯ ಬಂಧನ – Kannada News | Deepfake Scandal: Muzaffarpur Arrest Over AI Generated President, PM Video

ಎಐ ಡೀಪ್‌ಫೇಕ್ ವಿಡಿಯೋ ಮಾಡಿದ ಆರೋಪಿ

ಮುಜಫರ್ಪುರ, ಜ.2: ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯ ಹೆಸರು, ಧ್ವನಿಗಳು, ಫೋಟೋವನ್ನು ಬಳಸಿಕೊಂಡು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ನಕಲಿ ವೀಡಿಯೊವನ್ನು ರಚಿಸಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊರ್ವನನ್ನು ಮುಜಫರ್ಪುರ ಪೊಲೀಸರು ಬಂಧಿಸಿದ್ದಾರೆ. ಜನವರಿ 2, 2026 ರಂದು, ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಅವರ AI ವೀಡಿಯೊಗಳನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಈ ಕೃತ್ಯವನ್ನು ಮಾಡಿದ ವ್ಯಕ್ತಿಯನ್ನು ಪ್ರಮೋದ್​​ ಕುಮಾರ್​ ಎಂದು ಗುರುತಿಸಲಾಗಿದೆ. ಭಾರತದ ರಾಷ್ಟ್ರಪತಿ ಹಾಗೂ ಪ್ರಧಾನಿ ಮಂತ್ರಿಯನ್ನು ಹೋಲಿಕೆಯಾಗುವಂತೆ ಧ್ವನಿಯನ್ನು ಬಳಸಿಕೊಂಡು ಎಐ ಮೂಲಕ ಡೀಪ್​​​ಪೇಕ್​​ ಮಾಡಲಾಗಿದೆ.

ಮುಜಫರ್​​​ಪುರ ಪೊಲೀಸ್​​ ವರಿಷ್ಠಾಧಿಕಾರಿ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆ ಪ್ರಕಾರ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ಹಾಗೂ ರಾಷ್ಟ್ರಪತಿ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಸಾರ್ವಜನಿಕರನ್ನು ದಾರಿತಪ್ಪಿಸುವ ಮತ್ತು ದೇಶದ ಅತ್ಯುನ್ನತ ಹುದ್ದೆಯಲ್ಲಿರುವವರ ಘನತೆ, ಪ್ರತಿಷ್ಠೆ, ವಿಶ್ವಾಸಕ್ಕೆ ಹಾನಿ ಮಾಡಿದೆ ಎಂದು ಹೇಳಿದ್ದಾರೆ.

ಈ ಮೂಲಕ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸುವುದು, ಹಾಗೂ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಅಪನಂಬಿಕೆಯನ್ನು ಬರುವಂತೆ ಮಾಡುತ್ತಿದೆ ಎಂದು ಹೇಳಿದ್ದಾರೆ. ರಾಷ್ಟ್ರವಿರೋಧಿ ಭಾವನೆ, ವದಂತಿಗಳನ್ನು, ಸಾಮಾಜಿಕ ಅಶಾಂತಿಯನ್ನು ಸೃಷ್ಟಿಸುವ ಕೆಲಸವನ್ನು ಮಾಡಬಾರದು ಎಂದು ಹೇಳಿದ್ದಾರೆ. ಜತೆಗೆ ಇಂತಹ ಕೃತ್ಯ ಮಾಡಿದವರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು.

ಇದನ್ನೂ ಓದಿ: ನಮ್ಮ ಬೆಂಬಲ ಭಾರತಕ್ಕೆ: ಚೀನಾ-ಪಾಕ್​​ ಸಂಬಂಧ ಬಲಗೊಳ್ಳುತ್ತಿದೆ, ಭಾರತಕ್ಕೆ ಎಚ್ಚರಿಕೆ ನೀಡಿದ ಬಲೂಚಿಸ್ತಾನ

ಇನ್ನು ಇಂತಹ ಪ್ರಕರಣಗಳನ್ನು ತಡೆಯಲು ಹಾಗೂ ಇದರ ತನಿಖೆಯನ್ನು ಮಾಡಲು ವಿಶೇಷ ತನಿಖೆ ತಂಡವನ್ನು ರಚನೆ ಮಾಡುವಂತೆ ಮುಜಪ್​​​ಪುರದ ಎಸ್​ಎಸ್​​​​​ಪಿ ನಿರ್ದೇಶನ ನೀಡಿದೆ. ಇನ್ನು ಪ್ರಧಾನಿ, ರಾಷ್ಟ್ರಪತಿ ಅವರ ಎಐ ವಿಡಿಯೋ ಮಾಡಿರುವ ವ್ಯಕ್ತಿಯಿಂದ ಮೊಬೈಲ್​​ನ್ನು ವಶಪಡಿಸಿಕೊಳ್ಳಲಾಗಿದೆ. 01/26ರಂತೆ ಪ್ರಕರಣ ದಾಖಲಾಗಿದ್ದು, ಪ್ರಮೋದ್​​ ಕುಮಾರ್​​ನ ಕ್ರಿಮಿನಲ್​​​ ಹಿನ್ನಲೆಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್​​ಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಗುಡ್ ನ್ಯೂಸ್ – Kannada News | Josh Hazelwood will be available for T20 World Cup 2026

ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ಕ್ಯಾಮರೂನ್ ಗ್ರೀನ್, ನಾಥನ್ ಎಲ್ಲಿಸ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ.

Source link

ಜೈಲಲ್ಲಿದ್ದ ಉಗ್ರನಿಗೆ ಹಣ, ಮೊಬೈಲ್, ವಾಕಿಟಾಕಿ ಕೊಡ್ತಿದ್ದ ಪೊಲೀಸ್-ಮನೋವೈದ್ಯ: ಎನ್​ಐಎ ಚಾರ್ಜ್​ಶೀಟ್​ನಲ್ಲಿ ಸ್ಫೋಟಕ ಅಂಶ – Kannada News | NIA Chargesheet Exposes Police Psychiatrist Nexus in Parappana Agrahara Jail Terror Funding Case

ಕಾನ್ಸ್​ಟೇಬಲ್ ಚಾನ್ ಪಾಷಾ, ಅನೀಸ್ ಫಾತಿಮಾ (ಸಂಗ್ರಹ ಚಿತ್ರ)

ಬೆಂಗಳೂರು, ಜನವರಿ 3: ಅದು ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣ. ಸಜಾಬಂಧಿ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ (Parappana Agrahara Jail) ಲಷ್ಕರ್ ಎ ತೊಯ್ಬಾ ಉಗ್ರ ಟಿ‌. ನಸೀರ್​​ಗೆ ನೆರವು ನೀಡಿದ್ದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಓರ್ವ ಎಎಸ್ಐ, ಜೈಲಿನ ಮನೋವೈದ್ಯ ಭಾಗಿಯಾಗಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಪ್ರಕರಣದ ತನಿಖೆ ಕೈಗೊಂಡ ಎನ್ಐಎ (NIA) ಅಧಿಕಾರಿಗಳು ಮೂವರು ಆರೋಪಿಗಳ ವಿರುದ್ದ ಎನ್ಐಎ ಸ್ಪೆಷಲ್‌ ಕೋರ್ಟ್​​ಗೆ ಚಾರ್ಜ್​​ಶೀಟ್ ಸಲ್ಲಿಸಿದ್ದಾರೆ.

ಜೈಲಿನಲ್ಲಿದ್ದ ಉಗ್ರನಿಗಾಗಿ ಸಿದ್ಧವಾಗ್ತಿತ್ತು ಹ್ಯಾಂಡ್ ಗ್ರೆನೇಡ್!

ಉಗ್ರನಿಗೆ ನೆರವು ನೀಡಿದ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ಸಿಎಆರ್ ಕಾನ್ಸ್​ಟೇಬಲ್ ಚಾನ್ ಪಾಷಾ, ಜೈಲಿನ ಮನೋವೈದ್ಯ ನಾಗರಾಜ್ ಮತ್ತು ನಾಪತ್ತೆಯಾಗಿರುವ ಶಂಕಿತ ಉಗ್ರ ಜುನೈದ್ ಅಹಮದ್ ತಾಯಿ ಅನೀಸ್ ಫಾತೀಮಾಳನ್ನು ಬಂಧಿಸಿದ್ದರು. ಪ್ರಕರಣದ ತನಿಖೆ ವೇಳೆ, ಮೂವರು ಆರೋಪಿಗಳ‌ ಸಂಚು ಹಾಗೂ ಅಪರಾಧ ಕೃತ್ಯಗಳು ಬೆಳಕಿಗೆ ಬಂದಿವೆ. ಪ್ರಮುಖವಾಗಿ ಆರೋಪಿ ಅನೀಸ್ ಫಾತಿಮಾ, ತಲೆಮರೆಸಿಕೊಂಡಿರುವ ಜುನೈದ್ ಅಹಮದ್ ತಾಯಿಯಾಗಿದ್ದು, ಎಲ್ಇಟಿ ಉಗ್ರ ಟಿ. ನಸೀರ್​​ಗೆ ಹಣಕಾಸಿನ ವ್ಯವಸ್ಥೆ ಮಾಡುತ್ತಿದ್ದಳು. ಮಗನ‌ ಸೂಚನೆಯಂತೆ ಹ್ಯಾಂಡ್ ಗ್ರೆನೇಡ್, ವಾಕಿಟಾಕಿ ವ್ಯವಸ್ಥೆ ಮಾಡಿ ಆರೋಪಿಗಳ ನಡುವೆ ಸಂವಹನಕ್ಕೆ ದಾರಿಯಾಗಿದ್ದಳು ಎಂಬುದು ಗೊತ್ತಾಗಿದೆ.

ಅದೇ ರೀತಿ ಸಿಎಆರ್ ಎಎಸ್ಐ ಆಗಿದ್ದ ಆರೋಪಿ ಚಾನ್ ಪಾಷಾ ಉಗ್ರ ಟಿ. ನಸೀರ್​​​ನ ಮಾಹಿತಿಯನ್ನು ಹೊರಗಡೆಗೆ ರವಾನಿಸುತ್ತಿದ್ದ ಎನ್ನಲಾಗಿದೆ. ನಸೀರ್​​ಗೆ ಒದಗಿಸುವ ಬೆಂಗಾವಲು ಪಡೆ ವಿವರಗಳನ್ನು ಹಣದಾಸೆಗಾಗಿ ಸಲ್ಮಾನ್ ಖಾನ್ ಎಂಬಾತನಿಗೆ ನೀಡುತ್ತಿದ್ದ. ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೋವೈದ್ಯನಾಗಿದ್ದ ಡಾ. ನಾಗರಾಜ್, ಕಾನೂನು ಬಾಹಿರವಾಗಿ ಜೈಲಿಗೆ ಮೊಬೈಲ್ ಫೋನ್​ಗಳ‌ ಸಾಗಾಟ ಮಾಡುತ್ತಿದ್ದ. ಖೈದಿಗಳಿಂದ ಹಣ ಪಡೆದು ಮೊಬೈಲ್ ಮಾರಾಟ ಮಾಡುತ್ತಿದ್ದ. ಅದೇ ರೀತಿ ಟಿ. ನಸೀರ್​ಗೂ ಕೂಡ ಮೊಬೈಲ್ ಮಾರಾಟ ಮಾಡಿದ್ದು, ಇದೇ ಮೊಬೈಲ್ ಮೂಲಕ ನಸೀರ್ ಭಯೋತ್ಪಾದನಾ ಸಂಚು ರೂಪಿಸುತ್ತಿದ್ದ ಎನ್ನಲಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ತನಿಖೆ ನಡೆಸಿದ ಎನ್ಐಎ ತಂಡ ಮೂವರು ಆರೋಪಿಗಳ ವಿರುದ್ದ ಎನ್ಐಎ ಸ್ಪೆಷಲ್‌ ಕೋರ್ಟ್​​ಗೆ ಹೆಚ್ಚುವರಿ ಚಾರ್ಜ್​​ಶೀಟ್ ಸಲ್ಲಿಸಿದೆ.

ಇದನ್ನೂ ಓದಿ: ಉಗ್ರ ನಾಸೀರ್ ಜೈಲಿನಿಂದ ತಪ್ಪಿಸಿಕೊಳ್ಳಲು ನಡೆದಿತ್ತು ಸಿನಿಮೀಯ ರೀತಿ ಸಂಚು! ಎನ್​ಐಎ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು

ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ ಚಾನ್ ಪಾಷಾ ಹಾಗೂ ಶಂಕಿತ ಉಗ್ರನ ತಾಯಿ ಅನೀಸ್ ಫಾತೀಮಾರನ್ನು 2025ರ ಜುಲೈ 8ರ ರಾತ್ರಿ ಎನ್​ಐಎ ಅಧಿಕಾರಿಗಳು ಬಂಧಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Paush Purnima 2026: ಇಂದು ವರ್ಷದ ಮೊದಲ ಹುಣ್ಣಿಮೆ; ಇಷ್ಟಾರ್ಥ ಈಡೇರಲು ಚಂದ್ರೋದಯ ಸಮಯದಲ್ಲಿ ಈ ರೀತಿ ಮಾಡಿ – Kannada News | Purnima Significance: Rituals, Benefits and Full Moon Day Worship Guide

ಹಿಂದೂ ನಂಬಿಕೆಗಳ ಪ್ರಕಾರ, ಒಂದು ವರ್ಷದ ಪ್ರತಿ ಹುಣ್ಣಿಮೆಗೂ ವಿಶೇಷ ಮಹತ್ವವಿದೆ. ಆ ದಿನ ಮಾಡುವ ಪೂಜೆ ಮತ್ತು ದಾನಗಳು ಅಪಾರ ಪುಣ್ಯವನ್ನು ತರುತ್ತವೆ ಮತ್ತು ಜೀವನದಿಂದ ನಕಾರಾತ್ಮಕತೆಯನ್ನು ತೆಗೆದುಹಾಕುತ್ತವೆ ಎಂದು ನಂಬಲಾಗಿದೆ. ಹುಣ್ಣಿಮೆಯ ದಿನದಂದು ಪವಿತ್ರ ಸ್ನಾನ, ಸತ್ಯನಾರಾಯಣ ಸ್ವಾಮಿ ವ್ರತ, ಲಕ್ಷ್ಮಿ ಪೂಜೆ, ಚಂದ್ರನ ಪೂಜೆ ಮತ್ತು ಹುಣ್ಣಿಮೆಯ ದಿನದಂದು ಮಾಡುವ ಉಪವಾಸವನ್ನು ಆಧ್ಯಾತ್ಮಿಕ ಪ್ರಗತಿ ಮತ್ತು ಜೀವನದಲ್ಲಿ ಸಕಾರಾತ್ಮಕ ಪ್ರಯೋಜನಗಳನ್ನು ಸಾಧಿಸುವ ಒಂದು ಮಾರ್ಗವೆಂದು ಪರಿಗಣಿಸಲಾಗಿದೆ.

ಇಂದು ವರ್ಷದ ಮೊದಲ ಹುಣ್ಣಿಮೆ:

ಇಂದು(ಜನವರಿ 03) ವರ್ಷದ ಮೊದಲ ಹುಣ್ಣಿಮೆ. ಅಂದರೆ ಪುಷ್ಯ ಮಾಸ ಶುಕ್ಲ ಪಕ್ಷದ ಹುಣ್ಣಿಮೆ. ಹುಣ್ಣಿಮೆಯಂದು ಚಂದ್ರನನ್ನು ಪೂಜಿಸುವುದರಿಂದ ಸಕಲ ಶುಭಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಹುಣ್ಣಿಮೆಯಂದು, ಹಾಲು, ನೀರು, ಹೂವುಗಳು, ಅಕ್ಷತೆಗಳು ಮತ್ತು ಸ್ವಲ್ಪ ಸಕ್ಕರೆಯನ್ನು ತಾಮ್ರದ ಪಾತ್ರೆಯಲ್ಲಿ ಬೆರೆಸಿ ಚಂದ್ರೋದಯದ ಸಮಯದಲ್ಲಿ ನೈವೇದ್ಯವಾಗಿ ಅರ್ಪಿಸಬೇಕು. ನೈವೇದ್ಯವನ್ನು ಅರ್ಪಿಸುವಾಗ ಓಂ ಚಂದ್ರಾಯ ನಮಃ:, ಓಂ ಸೋಮಾಯ ನಮಃ: ಎಂಬ ಮಂತ್ರಗಳನ್ನು ಪಠಿಸಬೇಕು. ಈ ಮಂತ್ರಗಳನ್ನು 108 ಬಾರಿ ಪಠಿಸುವುದು ಹೆಚ್ಚು ಶುಭವೆಂದು ಪರಿಗಣಿಸಲಾಗುತ್ತದೆ. ಚಂದ್ರನನ್ನು ಪೂರ್ಣ ಹೃದಯದಿಂದ ಪೂಜಿಸುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ ಮತ್ತು ಯಾವುದೇ ದೋಷಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಪ್ರಪಂಚದ ಏಕೈಕ ಜಲಾಧಿವಾಸ ಗಣಪ; ಗುಡ್ಡಟ್ಟು ವಿನಾಯಕ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ

ಹುಣ್ಣಿಮೆಯ ದಿನದಂದು ಶಿವ, ವಿಷ್ಣು, ಲಕ್ಷ್ಮಿ ಮತ್ತು ಸತ್ಯನಾರಾಯಣ ವ್ರತಗಳಿಗೆ ವಿಶೇಷ ಪೂಜೆಗಳು ವಿಶೇಷ ಫಲಿತಾಂಶಗಳನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಹುಣ್ಣಿಮೆಯ ದಿನದಂದು ನದಿಯಲ್ಲಿ ಸ್ನಾನ ಮಾಡುವುದು, ದೀಪಗಳನ್ನು ಪೂಜಿಸುವುದು, ವಿಶೇಷ ಪೂಜೆಗಳನ್ನು ಮಾಡುವುದು ಮತ್ತು ವ್ರತ ಮಾಡುವುದು ಹೆಚ್ಚಿನ ಪುಣ್ಯವನ್ನು ತರುತ್ತದೆ ಮತ್ತು ಪಾಪಗಳನ್ನು ತೆಗೆದುಹಾಕುತ್ತದೆ ಎಂದು ಆಧ್ಯಾತ್ಮಿಕ ವಿದ್ವಾಂಸರು ಹೇಳುತ್ತಾರೆ. ಈ ದಿನದಂದು ನೀವು ದಾನ ಮಾಡಿದರೆ, ನೀವು ಎದುರಿಸುತ್ತಿರುವ ಭಯಗಳು ದೂರವಾಗುತ್ತವೆ ಮತ್ತು ನೀವು ಕೈಗೊಂಡ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:42 am, Sat, 3 January 26

Source link

‘ಮಾರ್ಕ್’ ಚಿತ್ರಕ್ಕೆ ತಮಿಳಿನಲ್ಲಿ ಫುಲ್ ಮಾರ್ಕ್ಸ್; ಹೆಚ್ಚಲಿದೆ ಕಲೆಕ್ಷನ್ – Kannada News | Kiccha Sudeep’s Mark Movie: Tamil Nadu Success and Box Office Collection Soars

ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ (Mark) ಡಿಸೆಂಬರ್ 25ರಂದು ಕನ್ನಡದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಚಿತ್ರದ ತಮಿಳು ವರ್ಷನ್ ಜನವರಿ 1ರಂದು ರಿಲೀಸ್ ಆಗಿದೆ. ಈ ಚಿತ್ರ ನೋಡಿದ ತಮಿಳಿಗರು ಇಷ್ಟಪಟ್ಟಿದ್ದಾರೆ. ಅವರಿಗೆ ಇದು ತಮಿಳು ಸಿನಿಮಾ ರೀತಿಯೇ ಫೀಲ್ ಆಗಿದೆ. ಹೀಗಾಗಿ ಸಿನಿಮಾ ತಮಿಳುನಾಡಿನ ಪ್ರೇಕ್ಷಕರು ಪಾಸಿಟಿವ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ಹೀಗಾಗಿ, ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

‘ಮಾರ್ಕ್’ ಸಿನಿಮಾ ತಮಿಳಿಗರಿಗೆ ಹೆಚ್ಚು ಇಷ್ಟ ಆಗೋಕೆ ಕಾರಣವೂ ಇದೆ. ಅನೇಕ ತಮಿಳು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ನವೀನ್ ಚಂದ್ರ, ಯೋಗಿ ಬಾಬು ಸೇರಿದಂತೆ ಬಹುತೇಕರು ತಮಿಳಿಗರು. ನಿರ್ದೇಶಕ ವಿಜಯ್ ಕಾರ್ತಿಕೇಯ ಕೂಡ ತಮಿಳಿನವರೇ. ಸುದೀಪ್ ಕೂಡ ತಮ್ಮ ಪಾತ್ರ ತಮಿಳಿನಲ್ಲಿ ಡಬ್ ಮಾಡಿದ್ದಾರೆ. ಈ ಎಲ್ಲಾ ಕಾರಣದಿಂದ ಸಿನಿಮಾ ಅಲ್ಲಿನವರಿಗೆ ಇಷ್ಟ ಆಗಿದೆ.

‘ಮಾರ್ಕ್’ ಚಿತ್ರಕ್ಕೆ ತಮಿಳಿನಲ್ಲಿ 60ಕ್ಕೂ ಹೆಚ್ಚು ಶೋಗಳು ಸಿಕ್ಕಿವೆ. ಅಲ್ಲಿನ ವಿಮರ್ಶಕರು ಸಿನಿಮಾಗೆ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆಯೇ ಮುಂದುವರಿದರೆ ಶೋಗಳ ಸಂಖ್ಯೆ ಹೆಚ್ಚಬಹುದು. ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಂಕ್ರಾಂತಿ ಪ್ರಯುಕ್ತ ಜನವರಿ 14ರಂದು ರಿಲೀಸ್ ಆಗಲಿದೆ. ಅಲ್ಲಿವರೆಗೆ ‘ಮಾರ್ಕ್’ ಚಿತ್ರ ಆ ಭಾಗದಲ್ಲಿ ಉತ್ತಮ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.

ಇದನ್ನೂ ಓದಿ: ಹೊಸ ವರ್ಷದಂದು ಬಾಕ್ಸ್ ಆಫೀಸ್​ನಲ್ಲಿ ಕೋಟಿ ಕೋಟಿ ಬಾಚಿದ ‘ಮಾರ್ಕ್’ ಸಿನಿಮಾ

‘ಮ್ಯಾಕ್ಸ್’ ರೀತಿಯೇ ‘ಮಾರ್ಕ್’ ಸಿನಿಮಾ ಕಥೆ ವೇಗವಾಗಿ ಸಾಗುತ್ತದೆ. ಚಿತ್ರ ಕಥೆಯ ವೇಗದ ಕಾರಣದಿಂದ ಸಿನಿಮಾ ಇಷ್ಟ ಆಗುತ್ತದೆ. ಸಿನಿಮಾದ ಹಾಡುಗಳು, ಸುದೀಪ್ ಆ್ಯಕ್ಷನ್ ಜನರಿಗೆ ಇಷ್ಟ ಆಗಿದೆ. ಈ ಚಿತ್ರದ ಕಲೆಕ್ಷನ್ 50 ಕೋಟಿ ರೂಪಾಯಿ ದಾಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಾಲ್ಕು ದಿನಕ್ಕೆ ಸಿನಿಮಾ 35 ಕೋಟಿ ರೂಪಾಯಿ ಗಳಿಸಿದೆ ಎಂದು ತಂಡ ರಿವೀಲ್ ಮಾಡಿತ್ತು. ಸುದೀಪ್ ಅವರು ಇಂದು ಬಿಗ್ ಬಾಸ್ ನಡೆಸಿಕೊಡಲಿದ್ದಾರೆ. ‘ಮಾರ್ಕ್’ ಸಿನಿಮಾ ಕಾರಣಕ್ಕೆ ಅವರಿಗೆ ಕಳೆದ ವಾರ ಶೋ ನಡೆಸಿಕೊಡಲು ಸಾಧ್ಯವಾಗಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತುಮಕೂರು: ಜೋಳದ ಚಿಗುರು ಸೇವಿಸಿ ಕ್ಷಣಾರ್ಧದಲ್ಲಿ 50ಕ್ಕೂ ಹೆಚ್ಚು ಕುರಿಗಳ ಸಾವು! – Kannada News | Tumakuru Sheep Deaths: more than 50 Sheep Die from Sorghum Poisoning in Pavagada

ಜೋಳದ ಚಿಗುರು ಸೇವಿಸಿ ಕ್ಷಣಾರ್ಧದಲ್ಲಿ 50ಕ್ಕೂ ಹೆಚ್ಚು ಕುರಿಗಳ ಸಾವು!

ತುಮಕೂರು, ಜನವರಿ 03: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೆನ್ನೋಬನಹಳ್ಳಿ ಗ್ರಾಮದಲ್ಲಿ ಜೋಳದ ಚಿಗುರು ಸಿಪ್ಪೆ ಸೇವಿಸಿದ ಪರಿಣಾಮ ಕುರಿಗಳು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಗ್ರಾಮದ ಜಂಪಕ್ಕ ಎಂಬುವರಿಗೆ ಸೇರಿದ ಸುಮಾರು 200ಕ್ಕೂ ಅಧಿಕ ಕುರಿಗಳ ಹಿಂಡಿನಲ್ಲಿ 50ಕ್ಕೂ ಹೆಚ್ಚು ಕುರಿ ಮರಿಗಳು ಮೃತಪಟ್ಟಿವೆ.

ಲಕ್ಷಾಂತರ ರೂಪಾಯಿ ನಷ್ಟ

ಪ್ರತಿದಿನದಂತೆ ಮೊನ್ನೆ ಕುರಿಗಳನ್ನು ಮೇವಿಗಾಗಿ ಹೊಲದತ್ತ ಕರೆದೊಯ್ಯಲಾಗಿತ್ತು. ಎಂದಿನಂತೆ ಹುಲ್ಲು ಮೇಯುತ್ತಿದ್ದ ಕುರಿಗಳು, ಏಕಾಏಕಿ ಕುಸಿದು ಬೀಳತೊಡಗಿದ್ದು, ಕೆಲವೇ ಕ್ಷಣಗಳಲ್ಲಿ 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಇದರಿಂದ ಕುರಿಗಾಹಿಗೆ ಭಾರೀ ಆಘಾತವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜೋಳದ ಚಿಗುರು ಸಿಪ್ಪೆಯಲ್ಲಿ ಸೈನೆಡ್ ಅಂಶ

ವಿಷಯ ತಿಳಿಯುತ್ತಿದ್ದಂತೆ ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆಯ ವೇಳೆ ಕುರಿಗಳು ಜೋಳದ ಚಿಗುರು ಸಿಪ್ಪೆಯನ್ನು ಸೇವಿಸಿರುವುದು ಪತ್ತೆಯಾಗಿದೆ. ವೈದ್ಯಾಧಿಕಾರಿ ಅರ್ಕೆರಪ್ಪ ಅವರು, ಜೋಳದ ಚಿಗುರು ಸಿಪ್ಪೆಯಲ್ಲಿ ಸೈನೆಡ್ ಅಂಶ ಇರುವುದರಿಂದ ಅದು ವಿಷವಾಗಿ ಪರಿಣಮಿಸಿ ಕುರಿಗಳ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ ಕುರಿಗಳ ಮಾದರಿ ಸ್ಯಾಂಪಲ್‌ಗಳನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿದ್ದು, ಅಂತಿಮ ವರದಿ ನಿರೀಕ್ಷಿಸಲಾಗಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ರೈತರು ಹಾಗೂ ಕುರಿಗಾಹಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಪಶು ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chandra Dosha: ಜಾತಕದಲ್ಲಿ ಚಂದ್ರ ದೋಷವೇ? ಹುಣ್ಣಿಮೆಯಂದು ಈ ಪರಿಹಾರ ಮಾಡಿ – Kannada News | Chandra Dosha Remedies: Strengthen Your Moon on Purnima

ಜ್ಯೋತಿಷ್ಯದಲ್ಲಿ, ಚಂದ್ರನನ್ನು ಮನಸ್ಸು, ಭಾವನೆಗಳು ಮತ್ತು ಮಾನಸಿಕ ಸಮತೋಲನದ ಅಂಶವೆಂದು ಪರಿಗಣಿಸಲಾಗುತ್ತದೆ. ಚಂದ್ರನು ಕರ್ಕಾಟಕ ರಾಶಿಯನ್ನು ಆಳುತ್ತಾನೆ. ಜಾತಕದಲ್ಲಿ ಚಂದ್ರ ದುರ್ಬಲನಾಗಿದ್ದರೆ ಅಥವಾ ಚಂದ್ರ ದೋಷವಿದ್ದರೆ, ಅದು ಮಾನಸಿಕ ಅಶಾಂತಿ, ನಿರ್ಧಾರ ತೆಗೆದುಕೊಳ್ಳುವಲ್ಲಿ ಆತ್ಮವಿಶ್ವಾಸದ ಕೊರತೆ, ಆರೋಗ್ಯ ಸಮಸ್ಯೆಗಳು ಮತ್ತು ಅನಗತ್ಯ ಖರ್ಚುಗಳಿಗೆ ಕಾರಣವಾಗುತ್ತದೆ. ಚಂದ್ರ ದೋಷವನ್ನು ತೆಗೆದುಹಾಕಲು ವಿದ್ವಾಂಸರು ವಿವಿಧ ಪರಿಹಾರಗಳನ್ನು ಸೂಚಿಸುತ್ತಾರೆ.

ಶಿವನು ತನ್ನ ತಲೆಯ ಮೇಲೆ ಚಂದ್ರನನ್ನು ಕಾಣಬಹುದು. ಅದಕ್ಕಾಗಿಯೇ ಜಾತಕದಲ್ಲಿ ಚಂದ್ರ ದೋಷವನ್ನು ತೆಗೆದುಹಾಕಲು ಮತ್ತು ಚಂದ್ರನನ್ನು ಬಲಪಡಿಸಲು ಶಿವನಿಗೆ ಸಂಬಂಧಿಸಿದ ಪರಿಹಾರಗಳನ್ನು ಮಾಡಲಾಗುತ್ತದೆ. ಪುಷ್ಯ ಮಾಸದ ಹುಣ್ಣಿಮೆಯ ದಿನದಂದು ಚಂದ್ರ ದೋಷವನ್ನು ತೆಗೆದುಹಾಕಲು ಪರಿಹಾರಗಳನ್ನು ಸಹ ಮಾಡಲಾಗುತ್ತದೆ. ಈ ಪರಿಹಾರಗಳ ಬಗ್ಗೆ ಇನ್ನಷ್ಟು ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.

ಹುಣ್ಣಿಮೆ ಯಾವಾಗ?

2026ರ ಮೊದಲ ಹುಣ್ಣಿಮೆ ಜನವರಿ 3 ರಂದು ಅಂದರೆ ಇಂದು ಬಂದಿದೆ. ಈ ದಿನ ಶಿವನನ್ನು ಪೂಜಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ವಿದ್ವಾಂಸರು ಹೇಳುತ್ತಾರೆ.

ಇದನ್ನೂ ಓದಿ: ಪ್ರಪಂಚದ ಏಕೈಕ ಜಲಾಧಿವಾಸ ಗಣಪ; ಗುಡ್ಡಟ್ಟು ವಿನಾಯಕ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ

ಚಂದ್ರ ದೋಷ ತಪ್ಪಿಸಲು ಪರಿಹಾರಗಳು:

ನಿಮ್ಮ ಜಾತಕದಲ್ಲಿರುವ ಚಂದ್ರ ದೋಷವನ್ನು ನಿವಾರಿಸಲು ಮತ್ತು ಚಂದ್ರನನ್ನು ಬಲಪಡಿಸಲು, ಹುಣ್ಣಿಮೆಯ ದಿನದಂದು ಅಕ್ಕಿ, ಹಿಟ್ಟು, ಹಾಲು, ಮೊಸರು ಮುಂತಾದ ಬಿಳಿ ವಸ್ತುಗಳನ್ನು ದಾನ ಮಾಡಿ. ಬಿಳಿ ವಸ್ತುಗಳು ಚಂದ್ರನೊಂದಿಗೆ ಸಂಬಂಧ ಹೊಂದಿವೆ.

ಈ ದಿನ ಬೆಳ್ಳಿ ಉಂಗುರ ಮತ್ತು ಇತರ ಆಭರಣಗಳನ್ನು ಧರಿಸುವುದರಿಂದ ಚಂದ್ರನ ದೋಷಗಳು ನಿವಾರಣೆಯಾಗುತ್ತವೆ ಮತ್ತು ನಿಮ್ಮ ಜಾತಕದಲ್ಲಿ ಚಂದ್ರನನ್ನು ಬಲಪಡಿಸುತ್ತವೆ. ಚಂದ್ರ ಮತ್ತು ಬೆಳ್ಳಿಗೂ ಸಹ ಸಕಾರಾತ್ಮಕ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಇದಲ್ಲದೇ ಹುಣ್ಣಿಮೆಯಿಂದ ನೀವು ನಿಯಮಿತವಾಗಿ ದೇವಿಯನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ನಿಮಗೆ ಚಂದ್ರನ ಆಶೀರ್ವಾದ ಸಿಗುತ್ತದೆ. ನಿಮ್ಮ ಜಾತಕದಲ್ಲಿನ ಚಂದ್ರ ದೋಷವು ಬೇಗನೆ ನಿವಾರಣೆಯಾಗುತ್ತದೆ. ನಿಮ್ಮ ಮನಸ್ಸು ಶಾಂತವಾಗಿರುತ್ತದೆ.

ಹುಣ್ಣಿಮೆಯ ದಿನದಂದು ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜಿಸಬೇಕು. ಅಕ್ಕಿ, ಹಿಟ್ಟು ಮತ್ತು ವಿಶೇಷವಾಗಿ ಪೊರಕೆಯನ್ನು ದಾನ ಮಾಡಬಹುದು. ಇವು ಚಂದ್ರ ದೋಷವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version