‘ಸಾರಿ, ಸಾರಿ, ಸಾರಿ’; ಸುದೀಪ್ ಹಾಗೂ ಫ್ಯಾನ್ಸ್ ಬಳಿ ಆರ್ಯವರ್ಧನ್ ಗುರೂಜಿ ಬಹಿರಂಗ ಕ್ಷಮೆ – Kannada News | Aryavardhan Guruji Apologizes to Sudeep: His Statement Triggers Fans

‘ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು’ ಎಂದು ಫೇಮಸ್ ಆದವರು ಆರ್ಯವರ್ಧನ್ ಗುರೂಜಿ (Aryavardhan Guruji). ತಾವು ಸಂಖ್ಯಾ ಶಾಸ್ತ್ರಜ್ಞ ಎಂದು ಅವರು ಘೋಷಿಸಿಕೊಂಡಿದ್ದಾರೆ. ಅವರು ಅನೇಕ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ಮೊದಲು ಬಿಗ್ ಬಾಸ್​​ಗೂ ಬಂದಿದ್ದರು. ಈಗ ಅವರು ಸುದೀಪ್ ಬಳಿ ಕ್ಷಮೆ ಕೇಳಿದ್ದಾರೆ. ಸುದೀಪ್ ವಿರುದ್ಧ ಆಡಿದ ಮಾತಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈಗ ತಪ್ಪನ್ನು ತಿದ್ದುಕೊಳ್ಳಲು ಚಾನ್ಸ್ ಕೇಳಿದ್ದಾರೆ.

ಆರ್ಯವರ್ಧನ್ ಯಾವ ಕ್ಷಣದಲ್ಲಿ ಹೇಗಿರುತ್ತಾರೆ ಎಂದು ಊಹಿಸೋದು ನಿಜಕ್ಕೂ ಕಷ್ಟ. ಬಿಗ್ ಬಾಸ್​ ಅಲ್ಲಿ ಸ್ಪರ್ಧಿ ಆಗಿದ್ದಾಗ ಆ ಶೋ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರು. ‘ಅನುಪಮಾ ಗೌಡ ಅವರನ್ನು ಉಳಿಸಲು ನೀವು ಪ್ರಯತ್ನಿಸುತ್ತಿದ್ದೀರಿ’ ಎಂದು ಸುದೀಪ್ ಎದುರೇ ಹೇಳಿದ್ದರು. ಇದರಿಂದ ಸಿಟ್ಟಾಗಿದ್ದ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು.

ಬಿಗ್ ಬಾಸ್​ನಿಂದ ಹೊರ ಬಂದ ಅವರು ಅನೇಕ ಬಾರಿ ಶೋ ವಿರುದ್ಧ ಹಾಗು ಸುದೀಪ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು ಇದೆ. ಇದಕ್ಕೆ ಸುದೀಪ್ ವೇದಿಕೆ ಮೇಲೆ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದರು. ಈಗ ಆರ್ಯವರ್ಧನ್ ಮಾತು ಮತ್ತೂ ಕೆಳಹಂತಕ್ಕೆ ಹೋಗಿತ್ತು. ‘ದರ್ಶನ್ ಹೋದ್ಮೇಲೆ ಸುದೀಪ್ ಎಗರಾಡುತ್ತಿದ್ದಾರೆ’ ಎಂದು ಹೇಳಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಆರ್ಯವರ್ಧನ್​​ಗೆ ಸುದೀಪ್ ಅಭಿಮಾನಿಗಳಿಗೆ ಸ್ಟ್ರಾಂಗ್ ಆಗಿಯೇ ಎಚ್ಚರಿಕೆ ಬಂದಿತ್ತು. ದುನಿಯಾ ವಿಜಯ್ ಅವರ ವಾರ್ನಿಂಗ್ ವಿಡಿಯೋ ಎಡಿಟ್ ಮಾಡಿ ಹರಿಬಿಡಲಾಗಿತ್ತು.

ಫ್ಯಾನ್ಸ್ ಆಕ್ರೋಶದ ಬಳಿಕ ಆರ್ಯವರ್ಧನ್ ಕ್ಷಮೆ ಕೇಳಿದ್ದಾರೆ. ‘ಸುದೀಪ್ ಅವರಿಗೆ ನಮಸ್ಕಾರ. ಅವರ ಜೊತೆ ಕೆಲಸ ಮಾಡಿದ್ದೇನೆ. ಹೊಸ ವರ್ಷ ಅವರಿಗೆ ಹಾಗೂ ಅಭಿಮಾನಿಗಳಿಗೆ ಒಳ್ಳೆದು ಮಾಡಲಿ’ ಎಂದು ಮಾತು ಆರಂಭಿಸಿದ್ದಾರೆ.

ಇದನ್ನೂ ಓದಿ: ‘ಹೊರಗೆ ಹೋದ್ಮೇಲೆ ನಮಗೆ ಇಡ್ತಾರೆ’; ವೇದಿಕೆ ಮೇಲೆ ಆರ್ಯವರ್ಧನ್​​ಗೆ ಸುದೀಪ್ ತಿರುಗೇಟು

‘ಮಾತನಾಡುವ ಭರದಲ್ಲಿ ಏನೋ ಹೇಳಿದ್ದೇನೆ. ನೋವಾಗಿದ್ದರೆ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ. ಅವರ ಮೇಲೆ ಅಪಾರ ನಂಬಿಕೆ ಇದೆ. ಸಾರಿ ಸಾರಿ ಸಾರಿ.. ದೇವರು ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಚೆನ್ನಾಗಿ ಇಟ್ಟಿರಲಿ. ಅವರ ಅಭಿಮಾನಿಗಳಿಗೂ ಒಳ್ಳೆಯದಾಗಲಿ’ ಎಂದು ಆರ್ಯವರ್ಧನ್ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್

ಸೀಸನ್ ಪೂರ್ಣಗೊಳ್ಳುವಾಗ ಬಿಗ್ ಬಾಸ್ ಮನೆ ಆನಂದ ಸಾಗರ ಆಗುತ್ತದೆ. ಆದರೆ, ಗಿಲ್ಲಿ ನಟ ಹಾಗೂ ಅಶ್ವಿನಿ ವಿಷಯದಲ್ಲಿ ಆ ರೀತಿ ಇಲ್ಲ. ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ವಿಷಯ ಸುದೀಪ್ ಅಸಮಾಧಾನಕ್ಕೆ ಕಾರಣ ಆಗಿದೆ. ವೀಕೆಂಡ್​​​ನಲ್ಲಿ ಈ ವಿಷಯ ಪ್ರಮುಖ ಚರ್ಚೆಯ ವಿಷಯದಂತೆ ತೋರುತ್ತಿದೆ. ಆ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭದ್ರತಾ ಪಡೆ ನಡೆಸಿದ ಬಹುದೊಡ್ಡ ಕಾರ್ಯಚರಣೆ: ಗುಂಡಿನ ಚಕಮಕಿಯಲ್ಲಿ 14 ಮಾವೋವಾದಿಗಳು ಸಾವು – Kannada News | Sukma Bijapur Encounter: 14 Maoists Neutralized by Security Forces in Chhattisgarh

ರಾಯ್‌ಪುರ, ಜ.3: ದಕ್ಷಿಣ ಛತ್ತೀಸ್‌ಗಢದ (Chhattisgarh Maoist) ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗೆ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 14 ಸಶಸ್ತ್ರ ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಇದು 2026 ರ ಮೊದಲ ಪ್ರಮುಖ ಮಾವೋವಾದಿ ವಿರೋಧಿ ಕಾರ್ಯಾಚರಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಜಾಪುರದ ಬಸಗುಡ-ಟಾರೆಮ್ ಅರಣ್ಯ ಪ್ರದೇಶ ಮತ್ತು ಸುಕ್ಮಾದ ಕೊಂಟಾ-ಕಿಸ್ತಾರಾಮ್ ಕಾಡುಗಳಲ್ಲಿ ಮಾವೋವಾದಿಗಳ ಓಡಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಗುಪ್ತಚರ ಮಾಹಿತಿಯ ನಂತರ ರಾಯ್‌ಪುರದ ದಕ್ಷಿಣಕ್ಕೆ 450 ಕಿ.ಮೀ ದೂರದಲ್ಲಿ ಈ ಎನ್‌ಕೌಂಟರ್‌ಗಳು ನಡೆದಿದೆ.

ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ)ನ ಪ್ರತ್ಯೇಕ ತಂಡಗಳು ಆಯಾ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಶನಿವಾರ (ಜ.3) ಬೆಳಿಗ್ಗೆಯಿಂದ ನಿರಂತರ ಗುಂಡಿನ ಚಕಮಕಿ ನಡೆದಿದೆ. ಇದುವರೆಗೆ, ಸುಕ್ಮಾ ಎನ್‌ಕೌಂಟರ್ ಸ್ಥಳದಿಂದ 12 ಮಾವೋವಾದಿಗಳ ಮೃತದೇಹಗಳು ಮತ್ತು ಬಿಜಾಪುರದಿಂದ ಎರಡು ಮೃತದೇಹಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಬಸ್ತಾರ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಿಲಿಂಗಂ ಹೇಳಿದ್ದಾರೆ.ಎನ್‌ಕೌಂಟರ್ ಸ್ಥಳಗಳಿಂದ ಎಕೆ -47, ಐಎನ್‌ಎಸ್‌ಎಎಸ್ ಅಸಾಲ್ಟ್ ರೈಫಲ್, ಸೆಲ್ಫ್-ಲೋಡಿಂಗ್ ರೈಫಲ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ರಾಷ್ಟ್ರಪತಿ, ಪ್ರಧಾನ ಮಂತ್ರಿಯ AI ಡೀಪ್‌ಫೇಕ್ ವಿಡಿಯೋ ಸೃಷ್ಟಿಸಿದ ವ್ಯಕ್ತಿಯ ಬಂಧನ

ಎರಡೂ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ. ಈ ಕಾರ್ಯಚರಣೆಗಳಲ್ಲಿ ಭದ್ರತಾ ಪಡೆಗಳು ತೊಡಗಿಸಿಕೊಂಡಿರುವ ಕಾರಣ ಅವರ ಸುರಕ್ಷತೆಗಾಗಿ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ. ಇನ್ನು ಈ ಗುಂಡಿನ ಚಕಮಕಿಯಲ್ಲಿ ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯಗಳಾದ ಬಗ್ಗೆ ಯಾವುದೇ ವರದಿಯಾಗಿಲ್ಲ. ಬಸ್ತಾರ್ ವಿಭಾಗದಲ್ಲಿ ಸುಕ್ಮಾ ಮತ್ತು ಬಿಜಾಪುರಗಳು ಹೆಚ್ಚು ಮಾವೋವಾದಿ ಪೀಡಿತ ಜಿಲ್ಲೆಗಳಾಗಿವೆ. ಈ ಹಿಂದೆ ದಕ್ಷಿಣ ಛತ್ತೀಸ್‌ಗಢದಲ್ಲಿ ಎಡಪಂಥೀಯ ಉಗ್ರವಾದದ ಕೇಂದ್ರಬಿಂದುಗಳೆಂದು ಪರಿಗಣಿಸಲಾಗಿತ್ತು. ಈಗಾಗಲೇ 256 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಮಾರ್ಚ್ 31, 2026 ರ ವೇಳೆಗೆ ಭಾರತ ಮಾವೋವಾದಿ ಹಿಂಸಾಚಾರದಿಂದ ಮುಕ್ತವಾಗಲಿದೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್ – Kannada News | Devdutt Padikkal Smashed Century in VHT 2026

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯ ಗ್ರೂಪ್-ಎ ಪಂದ್ಯದಲ್ಲಿ ಕರ್ನಾಟಕ ಪರ ದೇವದತ್ ಪಡಿಕ್ಕಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ತ್ರಿಪುರ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಆರಂಭಿಕನಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಮೂಲಕ ಕೇವಲ 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಹಾಫ್ ಸೆಂಚುರಿ ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ದೇವದತ್ ಪಡಿಕ್ಕಲ್ 105 ಎಸೆತಗಳಲ್ಲಿ ಸೆಂಚುರಿ ಪೂರ್ಣಗೊಳಿಸಿದರು.

ವಿಶೇಷ ಎಂದರೆ ಇದು ಈ ಬಾರಿಯ ವಿಜಯ ಹಝಾರೆ ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ಅವರ 4ನೇ ಶತಕ. ಇದಕ್ಕೂ ಮುನ್ನ ಜಾರ್ಖಂಡ್ ವಿರುದ್ಧ 147 ರನ್ ಬಾರಿಸಿದ್ದರು. ಆ ಬಳಿಕ ಕೇರಳ ವಿರುದ್ಧ 124 ರನ್​ ಗಳಿಸಿದ್ದರು. ಇನ್ನು ಪುದುಚೇರಿ ವಿರುದ್ಧ 113 ರನ್​ಗಳ ಇನಿಂಗ್ಸ್ ಆಡಿದ್ದರು. ಇದೀಗ ತ್ರಿಪುರ ವಿರುದ್ಧ 120 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 108 ರನ್ ಬಾರಿಸಿದ್ದಾರೆ.

ದೇವದತ್ ಪಡಿಕ್ಕಲ್ ಅವರ ಈ ಶತಕದ ನೆರವಿನೊಂದಿಗೆ ಕರ್ನಾಟಕ ತಂಡವು 45 ಓವರ್​ಗಳ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 269 ರನ್ ಕಲೆಹಾಕಿದೆ.

Source link

ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಪರಿಶೀಲಿಸಲು ಮನವಿ ಮಾಡಿದ ಹಿಂದೂ ಕಾರ್ಯಕರ್ತರ ಮೇಲೆಯೇ ಎಫ್​ಐಆರ್! – Kannada News | FIR Filed Against Bajrang Dal and VHP Activists Seeking Probe Into Alleged Illegal Bangladeshi Migrants in Chikkamagaluru

ಅಸ್ಸಾಂ ಮೂಲದ ಕಾರ್ಮಿಕರ ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ದಾಖಲೆಗಳನ್ನು ಪರಿಶೀಲಿಸಿದ ಬಜರಂಗದಳ, ವಿಹೆಚ್​ಪಿ ಕಾರ್ಯಕರ್ತರು

ಚಿಕ್ಕಮಗಳೂರು, ಜನವರಿ 3: ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಅಸ್ಸಾಂ ಮೂಲದ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಆಶ್ರಯ ಪಡೆದಿದ್ದಾರೆ ಎಂಬ ಆರೋಪ ಈಗ ಸಂಘರ್ಷಕ್ಕೆ ಕಾರಣವಾಗಿದೆ. ಈ ಸಂಬಂಧ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ (VHP) ಕಾರ್ಯಕರ್ತರು ಏಕಾಏಕಿ ಅಸ್ಸಾಂ ಕಾರ್ಮಿಕರ ಆಧಾರ್ ಕಾರ್ಡ್ ಹಾಗೂ ಇತರೆ ಗುರುತಿನ ಚೀಟಿಗಳನ್ನು ಪರಿಶೀಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಬಜರಂಗದಳ ಮುಖಂಡ ಸುದೇವ್, ಸಂತೋಷ್ ಸೇರಿದಂತೆ ಒಟ್ಟು 9 ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮೂಡಿಗೆರೆ ಪಟ್ಟಣದ ವಾರದ ಸಂತೆಗೆ ಕಾರ್ಯಕರ್ತರು ಏಕಾಏಕಿ ಪ್ರವೇಶಿಸಿ ಅಸ್ಸಾಂ ಮೂಲದ ಕಾರ್ಮಿಕರ ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ದಾಖಲೆಗಳನ್ನು ಪರಿಶೀಲಿಸಿದ್ದು, ಇದರಿಂದ ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟಾಗಿತ್ತು.

ಬಾಂಗ್ಲಾದೇಶದಲ್ಲಿ ದೀಪು ಎಂಬಾತನ ಬರ್ಬರ ಹತ್ಯೆ ನಡೆದ ಹಿನ್ನೆಲೆ, ಕೆಲವು ದಿನಗಳ ಹಿಂದೆ ಬಜರಂಗದಳ ಮತ್ತು ವಿಹೆಚ್‌ಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಇರುವ ಅಸ್ಸಾಂ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು. ಈ ಕುರಿತು ಒಂದು ವಾರದ ಗಡುವನ್ನೂ ನೀಡಲಾಗಿತ್ತು.

ಜಿಲ್ಲಾಡಳಿತ, ಪೊಲೀಸರ ವಿರುದ್ಧ ಬಜರಂಗದಳ, ವಿಹೆಚ್​ಪಿ ಆಕ್ರೋಶ

ಆದರೆ ಗಡುವು ಮುಗಿದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿ, ಬಜರಂಗದಳ ಹಾಗೂ ವಿಹೆಚ್‌ಪಿ ಕಾರ್ಯಕರ್ತರು ತಾವೇ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು.

ಅಸ್ಸಾಂನಿಂದ ಚಿಕ್ಕಮಗಳೂರಿಗೆ ಬಂದಿದ್ದಾರೆ ಸಾವಿರಾರು ಕಾರ್ಮಿಕರು

ಕಾಫಿ ಕೊಯ್ಲು ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಸಾವಿರಾರು ಅಸ್ಸಾಂ ಮೂಲದ ಕಾರ್ಮಿಕರು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದಾರೆ. ಇವರಲ್ಲಿ ಕೆಲವರು ನಕಲಿ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಪಡೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿದ್ದು, ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಾರೆ ಎಂಬ ಶಂಕೆಯನ್ನೂ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ? ಮುಸ್ಲಿಂ ದಂಪತಿ ಆಧಾರ್ ಕಾರ್ಡ್ ನೋಡಿ ಬಿಜೆಪಿ ನಾಯಕರಿಗೆ ಶಾಕ್!

ಈ ಹಿನ್ನೆಲೆಯಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸ್ ಇಲಾಖೆ ತನಿಖೆ ಮುಂದುವರಿಸಿದೆ. ಜಿಲ್ಲೆಯಲ್ಲಿ ಅಕ್ರಮ ವಲಸಿಗರ ವಿಚಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುಡುಕನ ಸ್ಫೂರ್ತಿಯಿಂದ ಹುಟ್ಟಿತು ​​‘ಅಮಲು ಏರಿದೆ’ ಹಾಡು; ಭಟ್ಟರ ಸಾಹಿತ್ಯಕ್ಕೆ ಶರಣ್ ಧ್ವನಿ – Kannada News | Yogaraj Bhat Sharan Amalu Eride Song Hits Big; A Musical Duo’s Success

ಯೋಗರಾಜ್ ಭಟ್ (Yogaraj Bhat) ಹಾಗೂ ಶರಣ್ ಅವರದ್ದು ಹಿಟ್ ಕಾಂಬಿನೇಷನ್. ಈ ಕಾಂಬಿನೇನ್ ಜನಮನ್ನಣೆ ಪಡೆದಿದ್ದು ಹಾಡಿನ ಮೂಲಕ. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿಲ್ಲ. ಆದರೆ, ಯೋಗರಾಜ್ ಭಟ್ ಬರೆದ ಲಿರಿಕ್ಸ್​​ಗೆ ಶರಣ್ ಧ್ವನಿಯಾಗಿದ್ದಾರೆ. ಇವರ ಕಾಂಬಿನೇಷನ್​​ನಲ್ಲಿ ಮೂಡಿ ಬಂದ ‘ಎಣ್ಣೆ’ ಹಾಡು ಸಾಕಷ್ಟು ಗಮನ ಸೆಳೆದಿವೆ. ಈಗ ಇವರ ಕಾಂಬಿನೇಷನ್​​ನಲ್ಲಿ ಹೊಸ ವರ್ಷಕ್ಕೆ ‘ಅಮಲು’ ಹಾಡು ರಿಲೀಸ್ ಆಗಿದೆ.

ಯೋಗರಾಜ್ ಭಟ್ ಅವರು ಬರೆದ, ‘ನಾವ್ ಮನೆಗ್ ಹೊಗೋದಿಲ್ಲ’, ‘ಖಾಲಿ ಕ್ವಾಟರ್’ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಇದಕ್ಕೆ ಧ್ವನಿ ಆಗಿದ್ದು ಶರಣ್. ಈ ಹಾಡು ಎಲ್ಲರಿಗೂ ಇಷ್ಟ ಆಗಿದೆ. ಈಗ ಇವರ ಕಾಂಬಿನೇಷನ್ ಅಲ್ಲಿ ‘ಅಮಲು ಏರಿದೆ’ ಹಾಡು ಬಿಡುಗಡೆ ಕಂಡಿದೆ. ‘ಅಮಲು’ ಆಲ್ಬಮ್​ನ ಮೊದಲ ಸಾಂಗ್ ಇದಾಗಿದೆ. ಈ ಹಾಡಿಗೆ ಯೋಗರಾಜ್ ಭಟ್ ಲಿರಿಕ್ಸ್ ಬರೆದಿದ್ದು, ಶರಣ್ ಹಾಡಿದ್ದಾರೆ. ಚೇತನ್ ದ್ಯಾವಿ ಲಿರಿಕ್ಸ್ ಬರೆದಿದ್ದಾರೆ. ಮಹದೇವ್ ಕನಕಪುರ ಅವರು ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು

‘ನನಗೆ ದಿನ ರಾತ್ರಿ ಓರ್ವ ಕುಡುಕ ಸಿಗುತ್ತಾ ಇದ್ದ. ನಾನು ಕುಡಿದಿದೀನಿ ಅಂದ್ಕೊಬೇಡಿ ಎಂದು ಹೇಳುತ್ತಿದ್ದ. ಶರಬತ್ತು (ಮದ್ಯ) ಗೀತೆಗಳು ಆ ಕುಡುಕನಿಗೆ ಇಷ್ಟ. ಆ ಕುಡುಕ ನನ್ನ ಹಾಗೂ ಶರಣ್ ಅವರ ದೊಡ್ಡ ಅಭಿಮಾನಿ. ಎಲ್ಲಾ ಕುಡುಕರೂ ತಾವು ಡೀಸೆಂಟ್ ಅಂದುಕೊಳ್ಳುತ್ತಾರೆ. ಆತನ ನೋಡಿ ನನಗೆ ಈ ಹಾಡಿನ ಕಲ್ಪನೆ ಮೂಡಿತು’ ಎಂದಿದ್ದಾರೆ ಯೋಗರಾಜ್ ಭಟ್. ಆರಂಭದಲ್ಲಿ ಈ ಹಾಡಿನಿಂದ ತಪ್ಪಿಸಿಕೊಳ್ಳುವ ಆಲೋಚನೆ ಶರಣ್​​ಗೆ ಇತ್ತು. ಕೊನೆಗೆ ಎಲ್ಲರ ಒತ್ತಾಯಕ್ಕೆ ಹಾಡಿದರು. ಅವರಿಗೆ ಈಗ ಖುಷಿ ಇದೆ.

‘ಬಾಯಾರಿಕೆಗೆ ಏನೋ ಕಾರಣ’ ಎಂಬ ಹಾಡು ಇದೇ ಆಲ್ಬಂನಲ್ಲಿ ಮೂಡಿ ಬರಲಿದೆಯಂತೆ. ಇದನ್ನು ವಾಸುಕಿ ವೈಭವ್ ಹಾಡಿದ್ದಾರೆ. ಮೂರನೇ ಹಾಡು ಕೂಡ ಇದರಲ್ಲಿ ರಿಲೀಸ್ ಆಗಲಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು ಗೊಳಿಸಿದ ಪಾಲಿಕೆ ಸಿಬ್ಬಂದಿ: ಶಾಮಿಯಾನದಡಿ ಪಾಠ ಕೇಳ್ತಿರೋ ಮಕ್ಕಳು – Kannada News | Davangere Civic Body Evicts Private School Over Illegal Building, Students Forced to Study Under Temporary Canopy

ದಾವಣಗೆರೆ, ಜನವರಿ 3: ಅಕ್ರಮ ಕಟ್ಟಡದ ಹೆಸರಿನಲ್ಲಿ ದಾವಣಗೆರೆಯ ಎಸ್​​ಓಜಿ‌ ಕಾಲೋನಿಯಲ್ಲಿ ಜಿವಿಎಸ್ ‌ಖಾಸಗಿ ಶಾಲೆ ಕಟ್ಟಡವನ್ನು ಪಾಲಿಕೆ ಸಿಬ್ಬಂದಿ ಏಕಾಏಕಿ ತೆರವುಗೊಳಿಸಿದ್ದಾರೆ. ಈ ವಿವಾದಾತ್ಮಕ ತೆರವು ಕಾರ್ಯಾಚರಣೆಯು ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದೀಗ ಮಕ್ಕಳು ಶಾಮಿಯಾನದಡಿ ತಮ್ಮ ಪಾಠವನ್ನು ಮುಂದುವರಿಸುತ್ತಿದ್ದಾರೆ. ತೆರವು ಕಾರ್ಯಾಚರಣೆಗೆ ಯಾವುದೇ ಪೂರ್ವ ಸೂಚನೆ ಅಥವಾ ಮೌಖಿಕ ಮಾಹಿತಿಯನ್ನು ನೀಡಲಾಗಿಲ್ಲ ಎಂದು ಪೋಷಕರು ಮತ್ತು ಶಾಲಾ ಆಡಳಿತ ಆರೋಪಿಸಿದೆ.

ಸದ್ಯ ಶಿಕ್ಷಕರು ಮಕ್ಕಳ ಭವಿಷ್ಯಕ್ಕಾಗಿ ಶಾಲೆ ತೆರವುಗೊಳಿಸಿದ ಅದೇ ಸ್ಥಳದಲ್ಲಿ ಶಾಮಿಯಾನ ಹಾಕಿ ತರಗತಿಗಳನ್ನು ಮುಂದುವರಿಸಿದ್ದಾರೆ. ಈ ಘಟನೆ ಪಾಲಿಕೆ ಕ್ರಮಗಳ ನ್ಯಾಯಸಮ್ಮತತೆ ಮತ್ತು ಮಕ್ಕಳ ಶಿಕ್ಷಣದ ಹಕ್ಕಿನ ಬಗ್ಗೆ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ. ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡಿದ್ದವರ ತೆರವು ಮಾಡಿದ್ದಕ್ಕೆ ಅವರಿಗೆ ತಕ್ಷಣವೇ ಮನೆ ಹಂಚಿಕೆ ಮಾಡಲು ಮುಂದಾಗಿರುವ ಸರ್ಕಾರ, ಒತ್ತುವರಿ ತೆರವು ಹೆಸರಿನಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಸಿಯುತ್ತಿರುವುದು ವಿಪರ್ಯಾಸ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಾವು ಹೋಗಲು ಬಿಡಲ್ಲ’: ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು – Kannada News | Tears for Teacher: Students Protest Transfer of Favourite Educator in Government School

ಕೊಪ್ಪಳ, ಜ.3: ಕೊಪ್ಪಳ ತಾಲೂಕಿನ ಬಹದ್ದೂರ ಬಂಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲಾ ಗೇಟ್‌ ಬಂದ್‌ ಮಾಡಿ ಭಾವುಕರಾಗಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ನೆಚ್ಚಿನ ಶಿಕ್ಷಕರಾದ ವೀರಪ್ಪ ಅವರನ್ನು ಶಾಲೆಯಿಂದ ಹೊರಗೆ ಹೋಗದಂತೆ ಕಣ್ಣೀರು ಹಾಕಿದ್ದಾರೆ. “ನಾವು ಹೋಗಲ್ಲ, ಸರ್ ಬರಬೇಕು,” ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಈ ಬಗ್ಗೆ ಪೊಷಕರೊಬ್ಬರು ಮಾತನಾಡಿದ್ದಾರೆ. ವೀರಪ್ಪ ಸರ್​​ ಅವರು ನಮ್ಮ ಮಕ್ಕಳನ್ನು ಅವರ ಮನೆಯ ಮಕ್ಕಳಿಗಿಂತ ಹೆಚ್ಚಾಗಿ ನೋಡ್ಕೊಂಡಿದ್ದಾರೆ. ನಮ್ಮ ಮಕ್ಕಳು ಅವರ ಪ್ರೀತಿಗೆ ಸೋತಿದ್ದಾರೆ. ಜತೆಗೆ ನಮ್ಮ ಮಕ್ಕಳು ಉದ್ದಾರ ಆಗಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಮಕ್ಕಳ ಕಣ್ಣೀರು ನೋಡಿ ಶಿಕ್ಷಕರು ನಾಳೆ ಶಾಲೆಗೆ ಬರುವುದಾಗಿ ಭರವಸೆ ನೀಡಿದ್ದಾರೆ. ನಾಳೆ ನೀವು ಶಾಲೆಗೆ ಬರದಿದ್ದರೆ ನಾವು ಕೂಡ ನಾಳೆ ಶಾಲೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ .

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tirupati Security Breach: ತಿರುಪತಿ ದೇಗುಲದಲ್ಲಿ ಭಾರಿ ಭದ್ರತಾ ಲೋಪ, ಗೋಪುರ ಏರಿ ಕುಡುಕನಿಂದ ಅವಾಂತರ – Kannada News | Tirupati Security Breach: Drunk Man Climbs Gopuram at Govindaraja Swamy Temple, Sparks Safety Concerns

ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನ

ತಿರುಪತಿ, ಜನವರಿ 3: ತಿರುಪತಿ ದೇಗುಲದಲ್ಲಿ (Tirupati Temple) ಭಾರಿ ಭದ್ರತಾ ಲೋಪ ಉಂಟಾಗಿದ್ದು, ಕುಡುಕನೊಬ್ಬ ಕಂಪೌಂಡ್ ಹಾರಿ ದೇಗುಲದ ಆವರಣ ಪ್ರವೇಶಿಸಿದ್ದಲ್ಲದೆ ಗೋಪುರ ಏರಿ ಅವಾಂತರ ಸೃಷ್ಟಿಸಿದ್ದಾನೆ. ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ (Govindaraja Swamy Temple) ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದೆ. ದೇಗುಲದಲ್ಲಿ ‘ಏಕಾಂತ ಸೇವೆ’ ಮುಗಿದ ಸಂದರ್ಭದಲ್ಲಿ ಆಗಂತುಕ ಭದ್ರತಾ ಪಡೆಗಳ ಕಣ್ತಪ್ಪಿಸಿ ಕಂಪೌಂಡ್ ಹಾರಿ ಒಳಬಂದು ಏಕಾಏಕಿ ಗೀಪುರ ಏರಿದ್ದಾನೆ. ನಂತರ ಅಲ್ಲಿದ ಕಳಶಗಳನ್ನು ಎಳೆಯಲು ಯತ್ನಿಸಿದ್ದಾನೆ. ಇದು ದೇಗುಲದ ಸಿಬ್ಬಂದಿ ಮತ್ತು ಭಕ್ತರಲ್ಲಿ ಭಯ ಹುಟ್ಟಿಸಿತು. ನಂತರ ಆರೋಪಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದರು.

ಆರೋಪಿಯನ್ನು ನಿಜಾಮಾಬಾದ್ ಜಿಲ್ಲೆಯ ಕೂರ್ಮಾವಾಡಾದ ಪೆದ್ದ ಮಲ್ಲ ರೆಡ್ಡಿ ಕಾಲೋನಿಯ ನಿವಾಸಿ ತಿರುಪತಿ ಎಂದು ಗುರುತಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಶ್ರಮಿಸಿ ಆತನನ್ನು ಗೋಪುರದಿಂದ ಸುರಕ್ಷಿತವಾಗಿ ಕೆಳಗೆ ಇಳಿಸಿದರು.

ಪೊಲೀಸರ ಬಳಿ ಮದ್ಯದ ಬಾಟಲ್ ಕೇಳಿದ ಕುಡುಕ!

ಮದ್ಯದ ಅಮಲಿನಲ್ಲಿ ದೇಗುಲದ ಗೋಪುರವನ್ನು ಏರಿದ ವ್ಯಕ್ತ ಕೆಳಗಿಳಿಯಲು ನಿರಾಕರಿಸಿದ್ದಾನೆ. ಅಲ್ಲದೆ, ಪೊಲೀಸರು ತನಗೆ ಮದ್ಯದ ಬಾಟಲ್ ನೀಡಬೇಕೆಂದು ಒತ್ತಾಯಿಸಿದ್ದಾನೆ. ತಿರುಪತಿ ಪೂರ್ವ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಆತನನ್ನು ಕೆಳಗೆ ಇಳಿಸಲು ಶ್ರಮಿಸಿದರು. ಅಪಾಯಕಾರಿ ಪರಿಸ್ಥಿತಿಯ ಚಾಣಾಕ್ಷತೆಯಿಂದ ಕಾರ್ಯನಿರ್ವಹಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಬ್ಬಿಣದ ಏಣಿಗಳನ್ನು ಬಳಸಿ, ಹಗ್ಗಗಳ ಸಹಾಯದಿಂದ ಆತನನ್ನು ಗೋಪುರದ ಮೇಲಿನಿಂದ ಕೆಳಕ್ಕೆ ಕರೆತಂದರು. ನಂತರ ಆತನನ್ನು ವಶಕ್ಕೆ ಪಡೆಯಲಾಯಿತು.

ಇದನ್ನೂ ಓದಿ: ಹಿಮಾಚಲ ಪ್ರದೇಶದ ಪೊಲೀಸ್ ಸ್ಟೇಷನ್ ಬಳಿ ಭಾರೀ ಸ್ಫೋಟ

ಘಟನೆ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಘಟನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ನೀಡುತ್ತೇವೆ ಎಂದು ಪೂರ್ವ ಡಿಎಸ್ಪಿ ಭಕ್ತವತ್ಸಲಂ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:18 am, Sat, 3 January 26

Source link

ಸಿದ್ದರಾಮಯ್ಯಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ ಲಹರ್ ಸಿಂಗ್! ಸಿರೋಯಾ ಎಕ್ಸ್ ಪೋಸ್ಟ್​ನಲ್ಲೇನಿದೆ? – Kannada News | Lahar Singh Questions Siddaramaiah’s GRAAM Survey Report, X post goes viral

ಸಿಎಂ ಮುಂದೆ ಪ್ರಶ್ನೆಗಳ ಸುರಿಮಳೆ ಸುರಿಸಿದ ಲಹರ್ ಸಿಂಗ್ ಸಿರೋಯಾ!

ಬೆಂಗಳೂರು, ಜನವರಿ 03: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಿ ವರದಿ ಮತ್ತು ಸಮೀಕ್ಷೆ ನಡೆಸುವ ಸಂಸ್ಥೆ GRAAM (ಗ್ಲೋಬಲ್ ರಿಸರ್ಚ್ ಅಂಡ್ ಅಕಾಡೆಮಿಕ್ ಅಸೋಸಿಯೇಷನ್ ಮೆಥೋಡ್ಸ್) ಸಂಶೋಧನೆ ವರದಿಗಳ ಬಗ್ಗೆ ಸಂಸದ, ಹಿರಿಯ ಬಿಜೆಪಿ ನಾಯಕ ಲಹರ್ ಸಿಂಗ್ ಸಿರೋಯಾ ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, 6 ಮಹತ್ವದ ಪ್ರಶ್ನೆಗಳನ್ನು ಸಿಎಂ ಮುಂದಿಟ್ಟಿದ್ದಾರೆ. ಸಿಎಂ, ಡಿಸಿಎಂ ಕುರ್ಚಿ ಕದನದ ಮಧ್ಯ ಸಿರೋಯಾ ಪೋಸ್ಟ್ ಮತ್ತು ಅವರು ಕೇಳಿರುವ ಪ್ರಶ್ನೆಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡಿದೆ.

ಪೋಸ್ಟ್ ಇಲ್ಲಿದೆ

ಇದನ್ನೂ ಓದಿ ಇವಿಎಂ ಬಗ್ಗೆ ಕರ್ನಾಟಕದ ಬಹುಪಾಲು ಜನರಿಗಿದೆ ವಿಶ್ವಾಸ: ಸಿಂ ಸಿದ್ದರಾಮಯ್ಯ, ಖರ್ಗೆ ತವರಲ್ಲೇ ಹೆಚ್ಚು!

ಸಿರೋಯಾ ಕೇಳಿರುವ ಪ್ರಶ್ನೆಗಳಿವು

2025ರ ಆಗಸ್ಟ್‌ನಲ್ಲಿ ಸಿದ್ದರಾಮಯ್ಯ ಸರ್ಕಾರದ ಇವ್ಯಾಲ್ಯುವೇಶನ್ & ಮ್ಯಾನಿಟರಿಂಗ್ ಅಥಾರಿಟಿ (EMA) ನಡೆಸಿದ ಸಮೀಕ್ಷೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

  1.  ನಿಮ್ಮ ಸಮೀಕ್ಷೆಯ ವೆಬ್ಸೈಟ್​ನಲ್ಲಿದ್ದ ವರದಿಯನ್ನು ‘ಮತ ಚೋರಿ’ ಆರೋಪಗಳ ಮೊದಲು ನಡೆಸಲಾಗಿತ್ತು ಎಂದು ಹೇಳಿ ತೆಗೆದುಹಾಕಿದ ಕಾರಣವೇನು?
  2.  GRAAM ಅಧ್ಯಕ್ಷ ಡಾ. ಆರ್. ಬಾಲಸುಬ್ರಹ್ಮಣಿಯನ್ ಹಾರ್ವರ್ಡ್, ಕೊರ್ನೆಲ್ ಶಿಕ್ಷಣ ಹೊಂದಿರುವವರಾಗಿ ಸಮೀಕ್ಷೆ ನಡೆಸಲು ಯೋಗ್ಯರಲ್ಲರಾ?
  3.  ಡಾ. ಬಾಲಸುಬ್ರಹ್ಮಣಿಯನ್ ಪ್ರಧಾನಮಂತ್ರಿ ಮೋದಿಯ ಕುರಿತು ಪುಸ್ತಕ ಬರೆದಿದ್ದರೆ, ಅವರ ವೃತ್ತಿಪರತೆ ಮೇಲೆ ಪ್ರಭಾವವಾಯಿತೆ? ಹಾಗಾದರೆ ನೆಹರು-ಗಾಂಧಿ ರಾಜವಂಶದ ಬಗ್ಗೆ ಪುಸ್ತಕಗಳನ್ನು ಬರೆದವರೆಲ್ಲರೂ ಭ್ರಷ್ಟ ವೃತ್ತಿಪರರೇ? ಅಥವಾ ಹೊಗಳುಭಟ್ಟರೇ
  4. ಡಾ. ಬಾಲಸುಬ್ರಮಣಿಯನ್ (ಅವರು ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ದಶಕಗಳಿಂದ ಕೆಲಸ ಮಾಡಿದ್ದಾರೆ) ಅವರ ಸೈದ್ಧಾಂತಿಕ ಸಂಬಂಧದ ಬಗ್ಗೆ ಸಿದ್ದರಾಮಯ್ಯ ಅವರಿಗೆ ತಿಳಿದಿದ್ದರೆ, ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮತ್ತು ಈಗ, ಲೋಕಸಭಾ ಚುನಾವಣೆಗೆ ಮೊದಲು ಮತ್ತು ನಂತರ ಅವರ ಎರಡನೇ ಅವಧಿಯಲ್ಲಿ ಸರ್ಕಾರದ ಅನೇಕ ಕಾರ್ಯಕ್ರಮಗಳನ್ನು ಅಧ್ಯಯನ ಮಾಡಲು ಮತ್ತು ಮುನ್ಸೂಚನೆ ನೀಡಲು ವಿವಿಧ ಸರ್ಕಾರಿ ಇಲಾಖೆಗಳು GRAAM ಗೆ ಗುತ್ತಿಗೆಗಳನ್ನು ಏಕೆ ನೀಡಿವೆ
  5. 2013-2018 ರ ನಡುವೆ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಡಾ. ಬಾಲಸುಬ್ರಮಣಿಯನ್ ಅವರ ನೇತೃತ್ವದಲ್ಲಿ GRAAM ನಡೆಸಿದ ಸಮೀಕ್ಷೆಗಳು ಮತ್ತು ಅಧ್ಯಯನಗಳ ಪಟ್ಟಿಯನ್ನು ತನಿಖಾ ತಾಣ ದಿ ಫೈಲ್ ಬಿಡುಗಡೆ ಮಾಡಿದೆ. ಆದರೆ ಈಗ ಈ ಯಾವುದೇ ಸಮೀಕ್ಷೆಗಳು ಮತ್ತು ಅಧ್ಯಯನಗಳನ್ನು ಕೇಂದ್ರ ಅಥವಾ ರಾಜ್ಯ ಚುನಾವಣಾ ಆಯೋಗವು ನಡೆಸುತ್ತಿಲ್ಲ ಯಾಕೆ?
  6. ಹಿಂದೆ ಕರ್ನಾಟಕ ಕಾಂಗ್ರೆಸ್ ಸರ್ಕಾರ GRAAM ವರದಿಗಳನ್ನು ಏಕೆ ಸ್ವೀಕರಿಸಿ, ಈಗ ಅದು ಸಮಸ್ಯಾತ್ಮಕವಾಗಿದೆ ಎನ್ನುತ್ತಿರುವಿದೇಕೆ? ಪ್ರಧಾನಿ ಮೋದಿ ಮೇಲಿನ ಕರ್ನಾಟಕ ಕಾಂಗ್ರೆಸ್‌ನ ದ್ವೇಷವೇ ಅವರನ್ನು ಮುನ್ನಡೆಸುತ್ತಿದೆಯೇ ಅಥವಾ ಡಿಕೆ ಶಿವಕುಮಾರ್ ಇಂದ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಉಳಿಸಬೇಕಾದ ರಾಹುಲ್‌ಗಾಂಧಿಯವರ ಮೇಲೆ ಭಯವೇ ?

ಈ 6 ಪ್ರಶ್ನೆಗಳನ್ನು ಹಾಕಿರುವ ಲಹರ್ ಸಿಂಗ್, ಕೊನೆಯ 3 ಪ್ರಶ್ನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಂದೂ ಬರೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version