ದೇಶದ್ರೋಹ ಆರೋಪಿ ಉಮರ್ ಖಾಲೀದ್​ಗೆ ನ್ಯೂಯಾರ್ಕ್ ಮೇಯರ್ ಕಾಳಜಿ ಪತ್ರ; 8 ಅಮೆರಿಕನ್ ಜನಪ್ರತಿನಿಧಿಗಳಿಂದಲೂ ಬೆಂಬಲ – Kannada News | Delhi Riots accused Umar Khalid gets support from 8 US lawmakers and New York Mayor Zohran Mamdani

ನವದೆಹಲಿ, ಜನವರಿ 2: ಐದು ವರ್ಷದ ಹಿಂದೆ ದೆಹಲಿಯಲ್ಲಿ ಸಂಭವಿಸಿದ ದಂಗೆ, ಪ್ರತಿಭಟನೆಯಲ್ಲಿ ಪಿತೂರಿ ಮಾಡಿದ ಆರೋಪದಲ್ಲಿ ಜೈಲಿನಲ್ಲಿರುವ ಉಮರ್ ಖಾಲೀದ್​ಗೆ ಅಮೆರಿಕದಲ್ಲಿ ಈಗ ಒಂದು ಗುಂಪು ಬೆಂಬಲ ಕೊಡಲು ಯತ್ನಿಸುತ್ತಿದೆ. ಅಮೆರಿಕದ ಎಂಟು ಮಂದಿ ಜನಪ್ರತಿನಿಧಿಗಳು ಉಮರ್ ಖಾಲೀದ್ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಜಮ್ಮು ಕಾಶ್ಮೀರದ ವಿದ್ಯಾರ್ಥಿ ಮುಖಂಡರಾಗಿದ್ದ ಉಮರ್ ಖಾಲೀದ್ ಅವರು ಹಾಗೂ ಇತರ ಸಹ-ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಈ ಎಂಟು ಜನರು ಪತ್ರ ಬರೆದಿದ್ದಾರೆ.

ಡಿಸೆಂಬರ್ 30ರಂದು ಬರೆಯಲಾಗಿರುವ ಈ ಪತ್ರವನ್ನು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಮೋಹನ್ ಕ್ವಾತ್ರ ಅವರಿಗೆ ಕೊಡಲಾಗಿದೆ. ಉಮರ್ ಖಾಲೀದ್​ರನ್ನು ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಜಾಮೀನು ನೀಡಿ, ನ್ಯಾಯಯುತವಾಗಿ ವಿಚಾರಣೆ ನಡೆಸಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ:

ನ್ಯೂಯಾರ್ಕ್ ಮೇಯರ್ ಜೋಹ್ರನ್ ಮಮ್ದಾನಿ ಅವರಿಂದಲೂ ಬೆಂಬಲ

ಖ್ಯಾತ ಚಿತ್ರ ತಯಾರಕಿ ಮೀರಾ ನಾಯರ್ ಅವರ ಮಗ, ಹಾಗೂ ನ್ಯೂಯಾರ್ಕ್ ಸಿಟಿಯ ಹೊಸ ಮೇಯರ್ ಜೋಹ್ರನ್ ಮಮ್ದಾನಿ ಅವರು ಉಮರ್ ಖಾಲೀದ್​ಗೆ ವೈಯಕ್ತಿಕವಾಗಿ ಪತ್ರ ಬರೆದಿದ್ದಾರೆ. ‘ನಿಮ್ಮ ಬಗ್ಗೆಯೇ ಚಿಂತಿಸುತ್ತಿದ್ದೇವೆ’ ಎಂದು ಹೇಳಿ ತಮ್ಮ ಕೈಯಿಂದಲೇ ಬರೆದ ಪತ್ರವನ್ನು ಡಿಸೆಂಬರ್ ತಿಂಗಳಲ್ಲಿ ಉಮರ್ ಖಾಲೀದ್ ಅವರ ಪೋಷಕರಿಗೆ ಕೊಟ್ಟಿದ್ದಾರೆ. ಉಮರ್ ಅವರ ಪೋಷಕರು ಅಮೆರಿಕಕ್ಕೆ ಹೋಗಿದ್ದಾಗ ಈ ಪತ್ರ ಕೊಡಲಾಗಿದೆ.

ಉಮರ್ ಖಾಲೀದ್ ಅವರ ಸಹಚರೆಯಾದ ಬನಜ್ಯೋತ್ಸ್ನಾ ಲಾಹಿರಿ ಅವರು ತಮ್ಮ ಎಕ್ಸ್​ನಲ್ಲಿ ಈ ವಿಚಾರವನ್ನು ಟ್ವೀಟ್ ಮಾಡಿದ್ದಾರೆ.

‘ಪ್ರಿಯ ಉಮರ್, ಜೀವನದ ಕಹಿ ಹಾಗೂ ಅದು ಸ್ವನಾಶಕ್ಕೆ ಆಸ್ಪದ ಕೊಡದೇ ತಡೆಯುವುದು ಎಷ್ಟು ಮುಖ್ಯ ಎಂದು ನೀವು ಹೇಳಿದ ಮಾತುಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ. ನಿಮ್ಮ ಪೋಷಕರನ್ನು ಭೇಟಿ ಮಾಡಿದ್ದು ಸಂತಸ ತಂದಿತು. ನಾವೆಲ್ಲರೂ ನಿಮ್ಮದೇ ಯೋಚನೆಯಲ್ಲಿದ್ದೇವೆ’ ಎಂದು ಜೋಹ್ರಾನ್ ಮಮ್ದಾನಿ ಆ ಪತ್ರದಲ್ಲಿ ಬರೆದಿದ್ದಾರೆ.

ದಿಲ್ಲಿ ದಂಗೆ ಪ್ರಕರಣದಲ್ಲಿ ಉಮರ್ ಖಾಲೀದ್ ಆರೋಪಿ

ದೆಹಲಿಯ ಜೆಎನ್​ಯು ಯೂನಿವರ್ಸಿಟಿಯ ವಿದ್ಯಾರ್ಥಿ ಮುಖಂಡರಾಗಿದ್ದ ಉಮರ್ ಖಾಲೀದ್ ಅವರನ್ನು 2020ರ ದೆಹಲಿ ಹಿಂಸಾಚಾರ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಈ ದಂಗೆಗೆ ಪಿತೂರಿ ನಡೆಸಿದ ಆರೋಪ ಉಮರ್ ಖಾಲೀದ್ ಹಾಗೂ ಇತರ ಕೆಲವರ ಮೇಲೆ ಇದೆ. ಐದು ವರ್ಷದಿಂದಲೂ ಅವರನ್ನು ಬಂಧನದಲ್ಲಿಡಲಾಗಿದೆ. ಡಿಸೆಂಬರ್ 16-29ರವರೆಗೆ ಅವರ ಸಹೋದರಿಯ ಮದುವೆ ನಿಮಿತ್ತ ಜಾಮೀನು ಕೊಡಲಾಗಿತ್ತು. ಡಿಸೆಂಬರ್ 29ರಿಂದಲೂ ಮತ್ತೆ ಅವರು ಬಂಧನದಲ್ಲೇ ಮುಂದುವರಿದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್​’ಗೆ ದೊಡ್ಡ ಹೊಡೆತ ಕೊಟ್ಟ ನೆಪೋ ಕಿಡ್ ಚಿತ್ರ – Kannada News | Dhurandhar Shows Cut: Agastya Nanda’s Ikkis Takes Over Screens and Box Office

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ ಬಿಡುಗಡೆಯಾದಾಗಿನಿಂದ ಸಾಕಷ್ಟು ಮೆಚ್ಚುಗೆ ಪಡೆದಿದೆ. ಗಳಿಕೆ ಕೂಡ ಚೆನ್ನಾಗಿಯೇ ಆಗುತ್ತಿದೆ. ಈ ಚಿತ್ರದ ಮುಂದೆ, ‘ಕಿಸ್ ಕಿಸ್ಕೋ ಪ್ಯಾರ್ ಕರೂ 2’, ‘ಅವತಾರ್: ಫೈರ್ ಅಂಡ್ ಆ್ಯಶ್’ ಮತ್ತು ‘ತು ಮೇರಿ ಮೇ ತೇರಾ ಮೇ ತೇರಾ ತು ಮೇರಿ’ ಕೂಡ ಬಾಕ್ಸ್ ಆಫೀಸ್‌ನಲ್ಲಿ ಉಳಿಯಲು ವಿಫಲವಾಯಿತು. ಚಿತ್ರಮಂದಿರಗಳಲ್ಲಿ ಪರದೆ ಹಂಚಿಕೆ ಮತ್ತು ವಿತರಣೆಯ ವಿಷಯದಲ್ಲಿ ‘ಧುರಂಧರ್’ ಚಿತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಆದರೆ ಈಗ ‘ಧುರಂಧರ್’ ಹೊಸ ವರ್ಷದಲ್ಲಿ ದೊಡ್ಡ ಹೊಡೆತ ಬಿದ್ದಿದೆ.

‘ಧುರಂಧರ್’ ಚಿತ್ರಕ್ಕೆ ನೀಡಿದ್ದ ಶೇ. 50 ರಷ್ಟು ಪ್ರದರ್ಶನಗಳನ್ನು ತೆಗೆದು ಹಾಕಲಾಗಿದೆಯಂತೆ, ಅದು ಕೂಡ ಹೊಸ ಸ್ಟಾರ್ ಕಿಡ್‌ನ ಚಿತ್ರದ ಕಾರಣದಿಂದಾಗಿ. ಈ ಸ್ಟಾರ್ ಕಿಡ್‌ನ ಚೊಚ್ಚಲ ಚಿತ್ರ ಜನವರಿ 1, 2026 ರಂದು ಬಿಡುಗಡೆಯಾಯಿತು. ಅದರ ನಂತರ, ‘ಧುರಂಧರ್’ ಚಿತ್ರದ ಪ್ರದರ್ಶನಗಳನ್ನು ಕಡಿಮೆ ಮಾಡಲಾಯಿತು ಎನ್ನಲಾಗಿದೆ.

ಈ ಸ್ಟಾರ್ ಮಗ ಬೇರೆ ಯಾರೂ ಅಲ್ಲ, ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ. ಅಗಸ್ತ್ಯ ಅವರ ‘ಇಕ್ಕಿಸ್’ ಚಿತ್ರ ಹೊಸ ವರ್ಷದ ಮೊದಲ ದಿನದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದು ದಿವಂಗತ ನಟ ಧರ್ಮೇಂದ್ರ ಅವರ ಕೊನೆಯ ಚಿತ್ರ.

‘ಇಕ್ಕಿಸ್’ ಮತ್ತು ‘ಧುರಂಧರ್’ ಚಿತ್ರಗಳ ವಿತರಕರು ಮತ್ತು ನಿರ್ಮಾಪಕರು ಒಂದೇ. ಆದ್ದರಿಂದ, ರಣವೀರ್ ಸಿಂಗ್ ನಟಿಸಿದ ‘ಧುರಂಧರ್’ ಚಿತ್ರದ ಪ್ರದರ್ಶನಗಳನ್ನು ಕಡಿಮೆ ಮಾಡಿದರೂ ಅವರಿಗೆ ಯಾವುದೇ ಅಭ್ಯಂತರವಿರಲಿಲ್ಲ.ಈ ಚಿತ್ರವು ಈಗಾಗಲೇ ಉತ್ತಮ ಹಣ ಗಳಿಸಿದೆ. ‘ಇಕ್ಕಿಸ್’ ಚಿತ್ರಕ್ಕೆ ಆ ಅವಕಾಶ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ‘ಧುರಂಧರ್’ ಬಿಡುಗಡೆಯಾದ ಐದು ವಾರಗಳನ್ನು ಪೂರ್ಣಗೊಳಿಸಿರುವುದರಿಂದ, ಆ ಚಿತ್ರದ ಪ್ರದರ್ಶನ ಏರಿಸಲಾಗಿದೆ.

ಇದನ್ನೂ ಓದಿ: ಕನ್ನಡತಿ ಭೂಮಿ ಶೆಟ್ಟಿ ಸಿನಿಮಾನಲ್ಲಿ ‘ಧುರಂಧರ್’ ಸ್ಟಾರ್ ಅಕ್ಷಯ್ ಖನ್ನಾ

‘ಧುರಂಧರ್’ ಪ್ರದರ್ಶನ ಕಾಣತ್ತಿದ್ದ ಸಿಂಗಲ್ ಸ್ಕ್ರೀನ್‌ಗಳಲ್ಲಿ ಈಗ’ಇಕ್ಕಿಸ್’ ಪ್ರದರ್ಶನ ಕಾಣಲಿದೆ. ಆದ್ದರಿಂದ, ಅಗಸ್ತ್ಯ ಅವರ ಚಿತ್ರಕ್ಕೆ ದೊಡ್ಡ ಅನುಕೂಲ ಸಿಗಲಿದೆ. ಮುಂಬೈನಲ್ಲಿ ಕಾರ್ತಿಕ್ ಆರ್ಯನ್ ಮತ್ತು ಅನನ್ಯ ಪಾಂಡೆ ಅವರ ‘ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ’ಗಿಂತ ‘ಇಕ್ಕಿಸ್’ ಚಿತ್ರಕ್ಕೆ ಹೆಚ್ಚಿನ ಶೋ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕನ್ನಡತಿ ಭೂಮಿ ಶೆಟ್ಟಿ ಸಿನಿಮಾನಲ್ಲಿ ‘ಧುರಂಧರ್’ ಸ್ಟಾರ್ ಅಕ್ಷಯ್ ಖನ್ನಾ – Kannada News | Akshay Khanna acting in Bhoomi Shetty’s movie Mahakali

ಅಕ್ಷಯ್ ಖನ್ನಾ (Akshay Khanna), ದಶಕಗಳಿಂದ ಚಿತ್ರರಂಗದಲ್ಲಿದ್ದರೂ ಸಹ ಆರಕ್ಕೇರಿರಲಿಲ್ಲ, ಮೂರಕ್ಕಿಳಿದಿರಲಿಲ್ಲ. ಆದರೆ ಈಗ ‘ಧುರಂಧರ್’ ಸಿನಿಮಾ ಮೂಲಕ ಏಕಾಏಕಿ ಸ್ಟಾರ್ ಆಗಿದ್ದಾರೆ. ಅದ್ಭುತ ನಟ ಅಕ್ಷಯ್ ಖನ್ನಾ ಅವರ ನಟನಾ ಪ್ರತಿಭೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹಠಾತ್ತನೇ ಅಕ್ಷಯ್ ಖನ್ನಾ ಬೇಡಿಕೆ ಏರಿಕೆ ಆಗಿದೆ. ಅದಕ್ಕೆ ತಕ್ಕಂತೆ ಅವರ ಸಂಭಾವನೆಯೂ ಸಹ ದುಪ್ಪಟ್ಟಾಗಿದೆ. ಹಠಾತ್ತನೇ ಬಂದ ಬೇಡಿಕೆ, ಜನಪ್ರಿಯತೆಯ ಪರಿಣಾಮ ಬಾಲಿವುಡ್​​ನ ಸ್ಟಾರ್ ನಟರ ಸಿನಿಮಾಗಳನ್ನೇ ಕೈಬಿಡುತ್ತಿದ್ದಾರೆ ಅಕ್ಷಯ್ ಖನ್ನಾ, ಆದರೆ ಇದೀಗ ಅವರು ಕನ್ನಡತಿ, ನಟಿ ಭೂಮಿ ಶೆಟ್ಟಿ ನಟಿಸುತ್ತಿರುವ ಹೊಸ ಸಿನಿಮಾನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಕುಂದಾಪುರದ ಭೂಮಿ ಶೆಟ್ಟಿ, ಕನ್ನಡದ ‘ಇಕ್ಕಟ್’ ಸಿನಿಮಾ ಮೂಲಕ ನಟನೆ ಆರಂಭಿಸಿದರು. ಬಳಿಕ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಭೂಮಿ ಶೆಟ್ಟಿ ನಟಿಸುತ್ತಿರುವ ತೆಲುಗು ಸಿನಿಮಾ ‘ಮಹಾಕಾಳಿ’ ಚಿತ್ರೀಕರಣ ಚಾಲ್ತಿಯಲ್ಲಿದ್ದು ಈ ಸಿನಿಮಾನಲ್ಲಿ ಅಕ್ಷಯ್ ಖನ್ನಾ ಸಹ ನಟಿಸಿದ್ದಾರೆ. ಅಕ್ಷಯ್ ಖನ್ನಾ ಈಗಾಗಲೇ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಸಿನಿಮಾ ನಿರ್ದೇಶನ ಮಾಡುತ್ತಿರುವ ಪೂಜಾ ಕೊಲ್ಲೂರು ಅವರು ಅಕ್ಷಯ್ ಖನ್ನಾ ಜೊತೆಗಿನ ಕೆಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಅಕ್ಷಯ್ ಖನ್ನಾ ಬದಲಿಗೆ ‘ಪಾತಾಳ್ ಲೋಕ್’ ನಟನಿಗೆ ‘ದೃಶ್ಯಂ 3’ ಅವಕಾಶ

ಹೆಸರೇ ಸೂಚಿಸುತ್ತಿರುವಂತೆ ‘ಮಹಾಕಾಳಿ’ ಸಿನಿಮಾ ಫಿಕ್ಷನಲ್ ಸಿನಿಮಾ ಆಗಿದ್ದು, ಅಕ್ಷಯ್ ಖನ್ನಾ ಅವರು ವಿಶ್ವಾಮಿತ್ರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶ್ವಾಮಿತ್ರನ ಪಾತ್ರ ಸಿನಿಮಾದ ಬಹು ಮುಖ್ಯ ಪಾತ್ರಗಳಲ್ಲಿ ಒಂದಾಗಿದ್ದು, ಈ ಬಗ್ಗೆ ಮಾತನಾಡಿರುವ ನಿರ್ದೇಶಕಿ ಪೂಜಾ ಕೊಲ್ಲೂರು, ‘ಶುಕ್ರಾಚಾರ್ಯ ಪಾತ್ರ ವಿಲನ್ ಅಥವಾ ಹೀರೋ ಎಂದಲ್ಲ. ಎರಡಕ್ಕಿಂತಲೂ ಭಿನ್ನವಾದ ವ್ಯಕ್ತಿತ್ವ ಆ ಪಾತ್ರದ್ದು. ಹಾಗಾಗಿ ನಾವು ಅಕ್ಷಯ್ ಖನ್ನಾ ಅಂಥಹಾ ಅದ್ಭುತ ನಟರನ್ನು ಆ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇವೆ’ ಎಂದಿದ್ದಾರೆ. ಅಕ್ಷಯ್ ಖನ್ನಾ ಅವರ ದೃಶ್ಯಗಳನ್ನು ಮುಂಬೈನಲ್ಲಿಯೇ ಚಿತ್ರೀಕರಣ ಮಾಡಿದೆ ಚಿತ್ರತಂಡ.

ಈ ಹಿಂದೆ ‘ಹನುಮ್ಯಾನ್’ ಸಿನಿಮಾ ಮೂಲಕ ಭಾರಿ ದೊಡ್ಡ ಹಿಟ್ ನೀಡಿರುವ ಇದೀಗ ರಿಷಬ್ ಶೆಟ್ಟಿ ಜೊತೆಗೆ ‘ಜೈ ಹನುಮಾನ್’ ಸಿನಿಮಾ ನಿರ್ದೇಶನ ಮಾಡುತ್ತಿರುವ ಪ್ರಶಾಂತ್ ವರ್ಮಾ, ‘ಮಹಾಕಾಳಿ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಪೂಜಾ ಕೊಲ್ಲೂರು ಸಹ ಕನ್ನಡದವರೇ ಆಗಿದ್ದು, ಈ ಹಿಂದೆ ತೆಲುಗಿನ ‘ಮಾರ್ಟಿನ್ ಲೂಥರ್ ಕಿಂಗ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆ ಸಿನಿಮಾನಲ್ಲಿ ಸಂಪೂರ್ಣೇಶ್ ಬಾಬು ನಾಯಕನಾಗಿ ನಟಿಸಿದ್ದರು. ತೆಲುಗಿನ ‘ಮಂಡೇಲ’ ಸಿನಿಮಾದ ರೀಮೇಕ್ ಅದಾಗಿತ್ತು. ಇದೀಗ ‘ಮಹಾಕಾಳಿ’ ಪೂಜಾ ಅವರ ಸ್ವಂತ ಸಿನಿಮಾ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ – Kannada News | Sonal Monteiro Tharun Sudhir New Home video And Photos Sharan Wish him Best of Luck

ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೋ (Sonal) ಅವರು ವಿವಾಹ ಆಗಿ ವರ್ಷದ ಬಳಿಕ ಹೊಸ ಮನೆ ಪ್ರವೇಶಿಸಿದ್ದಾರೆ. ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದು, ಅದಕ್ಕೆ ಗೃಹಪ್ರವೇಶ ನಡೆದಿದೆ. ಆ ಸಂದರ್ಭದ ವಿಡಿಯೋನ ಸೋನಲ್ ಹಂಚಿಕೊಂಡಿದ್ದಾರೆ. ಮನೆಯಲ್ಲಿ ಸುಧೀರ್ ಫೋಟೋ ಇಟ್ಟು ಪೂಜೆ ಮಾಡಲಾಗಿದೆ. ಮನೆಗೆ ತರುಣ್ ಗೆಳೆಯ ಶರಣ್, ಶ್ರುತಿ ಮೊದಲಾದವರು ಆಗಮಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಸ ವರ್ಷಕ್ಕೆ ಹೊಸ ರೂಲ್ಸ್​: ಫ್ರಿಡ್ಜ್, ಟಿವಿ ಖರೀದಿಸುವ ಮುನ್ನ ಸ್ಟಾರ್ ಲೇಬಲ್ ಕಡ್ಡಾಯವಾಗಿ​​ ಗಮನಿಸಲೇಬೇಕು – Kannada News | New Energy Star Rules: Appliances Must Have Labeling for Electricity Conservation

ಹೊಸ ವರ್ಷಕ್ಕೆ ಹೊಸ ಹೊಸ ರೂಲ್ಸ್​​​ಗಳನ್ನು ತರಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರು ಪಾಲಿಸಲೇಬೇಕಾದ ಕೆಲವೊಂದು ನಿಯಮಗಳನ್ನು ತರಲು ಮುಂದಾಗಿದೆ. ಇದೀಗ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ಸರ್ಕಾರದ ಪ್ರಯತ್ನದ ಭಾಗವಾಗಿ, ರೆಫ್ರಿಜರೇಟರ್‌ಗಳು, ಟೆಲಿವಿಷನ್‌ಗಳು, ಎಲ್‌ಪಿಜಿ ಗ್ಯಾಸ್ ಸ್ಟೌವ್‌ಗಳು, ಕೂಲಿಂಗ್ ಟವರ್‌ಗಳು ಸೇರಿದಂತೆ ಹೆಚ್ಚು ವಿದ್ಯುತ್​​ ಉಪಯೋಗವಾಗುವ ಉಪಕರಣಗಳಿಗೆ ಜನವರಿ 1 ರಿಂದ ಅಂದರೆ ನೆನ್ನೆಯಿಂದ ಇಂಧನ ದಕ್ಷತೆಯ ಸ್ಟಾರ್-ಲೇಬಲಿಂಗ್ (energy star labeling) ಕಡ್ಡಾಯವಾಗಲಿದೆ.

ಪಿಟಿಐ ವರದಿ ಪ್ರಕಾರ, ಇಂಧನ ದಕ್ಷತೆ ಬ್ಯೂರೋ (ಬಿಇಇ) ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ಕಡ್ಡಾಯವಾಗಿ ಎಲ್ಲ ಎಲೆಕ್ಟ್ರಾನಿಕ್ ಕಂಪನಿಗಳು ತಮ್ಮ ಎಲೆಕ್ಟ್ರಾನಿಕ್ ವಸ್ತುಗಳಿಗೆ ಈ ವರ್ಷದಿಂದ ಇಂಧನ ದಕ್ಷತೆಯ ಸ್ಟಾರ್-ಲೇಬಲಿಂಗ್​​ಗಳನ್ನು ಅಳವಡಿಸಲೇಬೇಕು. ಡೀಪ್ ಫ್ರೀಜರ್‌ಗಳು, ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ಮೇಲೆ ಈ ಸ್ಟಾರ್-ಲೇಬಲಿಂಗ್ ಇರಲೇಬೇಕು. ಇನ್ನು ಇದಕ್ಕೂ ಮೊದಲು, ಫ್ರಾಸ್ಟ್-ಫ್ರೀ ರೆಫ್ರಿಜರೇಟರ್‌ಗಳು, ಡೈರೆಕ್ಟ್ ಕೂಲ್ ರೆಫ್ರಿಜರೇಟರ್‌ಗಳು, ಡೀಪ್ ಫ್ರೀಜರ್‌ಗಳು, ಆರ್‌ಎಸಿ(ಕ್ಯಾಸೆಟ್, ಫ್ಲೋರ್ ಸ್ಟ್ಯಾಂಡಿಂಗ್ ಟವರ್, ಸೀಲಿಂಗ್, ಕಾರ್ನರ್ ಎಸಿ), ಕಲರ್ ಟೆಲಿವಿಷನ್‌ಗಳು ಮತ್ತು ಅಲ್ಟ್ರಾ-ಹೈ ಡೆಫಿನಿಷನ್ ಟೆಲಿವಿಷನ್‌ಗಳಂತಹ ವಸ್ತುಗಳ ಮೇಲೆ ಸ್ಟಾರ್ ರೇಟಿಂಗ್ ಸ್ವಯಂಪ್ರೇರಿತವಾಗಿತ್ತು. ಇದೀಗ ಅದನ್ನು ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್​​​ನ್ಯೂಸ್​​: ಪ್ರಾಯೋಗಿಕ ಪರೀಕ್ಷೆಗಳಿಗೆ ಹೊಸ ರೂಲ್ಸ್​​​ ತಂದ ಇಲಾಖೆ

ಇನ್ನು ಈ ಬಗ್ಗೆ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ, ಈಗಾಗಲೇ ಸ್ಟಾರ್ ಲೇಬಲಿಂಗ್ ಹಾಕಿರುವ ಉಪಕರಣಗಳ ಪಟ್ಟಿಯನ್ನು ಪರಿಶೀಲಿಸಲಾಗುತ್ತದೆ ಮತ್ತು ಅದನ್ನು ಮುಂದಿನ ದಿನಗಳಲ್ಲಿ ನವೀಕರಣ ಮಾಡಲಾಗುತ್ತದೆ. ಇನ್ನು ಹೊಸ ಉಪಕರಣಗಳಿಗೆ ಈಗಾಗಲೇ ಕರಡು ನಿಯಮಗಳನ್ನು ಜುಲೈ 2025ರಲ್ಲಿ ಸಾರ್ವಜನಿಕ ಸಮಾಲೋಚನೆಗಾಗಿ ಬಿಡುಗಡೆ ಮಾಡಲಾಗಿತ್ತು. ಇದೀಗ ಇದಕ್ಕೆ ಅಧಿಕೃತ ಅಧಿಸೂಚನೆ ನೀಡಿದೆ ಎಂದು ಹೇಳಿದ್ದಾರೆ. ಕೊಠಡಿ ಹವಾನಿಯಂತ್ರಣಗಳು (ಸ್ಥಿರ ಮತ್ತು ವೇರಿಯಬಲ್ ವೇಗ), ವಿದ್ಯುತ್ ಸೀಲಿಂಗ್-ಮಾದರಿಯ ಫ್ಯಾನ್‌ಗಳು, ಸ್ಟೇಷನರಿ ಸ್ಟೋರೇಜ್ ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳು, ವಾಷಿಂಗ್ ಮೆಷಿನ್‌ಗಳು, ಟ್ಯೂಬ್ಯುಲರ್ ಫ್ಲೋರೊಸೆಂಟ್ ದೀಪಗಳು ಮತ್ತು ಸ್ವಯಂ-ಬ್ಯಾಲಸ್ಟೆಡ್ ಎಲ್‌ಇಡಿ ದೀಪಗಳು ಮುಂತಾದ ಉಪಕರಣಗಳಿಗೆ ಸ್ಟಾರ್ ಲೇಬಲಿಂಗ್ ಅನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿತ್ತು.ಈ ವರ್ಗಗಳಿಗೆ ಸ್ಟಾರ್ ಲೇಬಲಿಂಗ್ ಈಗಾಗಲೇ ಕಡ್ಡಾಯವಾಗಿದ್ದರೂ, ಇಂಧನ-ಕಾರ್ಯಕ್ಷಮತೆಯ ಮಾನದಂಡಗಳನ್ನು ಮತ್ತಷ್ಟು ಬಿಗಿಗೊಳಿಸಲು ದಕ್ಷತೆಯ ಮಾನದಂಡಗಳನ್ನು ನವೀಕರಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ayyappa Swami: ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಫೋಟೋ ಇಡುವ ಮುನ್ನ ಈ ವಿಷ್ಯ ತಿಳಿದಿರಲಿ – Kannada News | Keeping Ayyappa Swamis Photo at Home: Guidelines and Benefits

“ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದೇ?” ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಹರಿಹರ ಸುತನಾದ ಅಯ್ಯಪ್ಪ ಸ್ವಾಮಿ, ಶಬರಿಮಲೆಯಲ್ಲಿ ಪೂಜಿಸಲ್ಪಡುವ ಪವಿತ್ರ ಹಿಂದೂ ದೇವರು. ಮಾಲಾಧಾರಿಗಳು ಶಬರಿಮಲೆ ಯಾತ್ರೆಗೆ ತೆರಳುವಾಗ ಕಪ್ಪು ವಸ್ತ್ರ ಧರಿಸಿ, ಚಪ್ಪಲಿ ಹಾಕದೆ, ಸಾತ್ವಿಕ ಆಹಾರ ಸೇವಿಸಿ, ನಿರಂತರ ಭಜನೆ ಮತ್ತು ಪ್ರಾರ್ಥನೆಯಲ್ಲಿ ತೊಡಗಿಕೊಂಡು ಕಠಿಣ ವ್ರತಗಳನ್ನು ಆಚರಿಸುತ್ತಾರೆ. ಮಕರ ಸಂಕ್ರಾಂತಿಯಂದು ಜ್ಯೋತಿ ದರ್ಶನದೊಂದಿಗೆ ವ್ರತ ಮುಕ್ತಾಯವಾಗುತ್ತದೆ.

ಆದರೆ, ಮಾಲೆ ಹಾಕದ ಸಾಮಾನ್ಯ ಭಕ್ತರೂ ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿಟ್ಟು ಪೂಜಿಸಬಹುದೇ? ಖಂಡಿತವಾಗಿಯೂ, ಶ್ರದ್ಧಾ ಭಕ್ತಿ ಇರುವ ಯಾರಾದರೂ ಅಯ್ಯಪ್ಪ ಸ್ವಾಮಿಯ ಫೋಟೋವನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಬಹುದು. ಇದು ದೊಡ್ಡ ಗಾತ್ರದ ಫೋಟೋ ಇರಲಿ ಅಥವಾ ಚಿಕ್ಕ ಗಾತ್ರದ ಫೋಟೋ ಇರಲಿ, ಗಾತ್ರ ಮುಖ್ಯವಲ್ಲ. ಚಿನ್ಮುದ್ರೆಯಲ್ಲಿ, 18 ಮೆಟ್ಟಿಲುಗಳೊಂದಿಗೆ ಕುಳಿತಿರುವ ಭಂಗಿಯಲ್ಲಿರುವ ಅಯ್ಯಪ್ಪ ಸ್ವಾಮಿಯ ಫೋಟೋ ಇಡುವುದು ಶುಭ.

ಅಯ್ಯಪ್ಪ ಸ್ವಾಮಿಯ ಫೋಟೋ ಇಡುವ ಸ್ಥಳ ಮತ್ತು ವಿಧಾನದ ಬಗ್ಗೆ ಕೆಲವು ಮಾರ್ಗಸೂಚಿಗಳನ್ನು ಗುರೂಜಿ ತಿಳಿಸಿದ್ದಾರೆ. ಪ್ರಥಮವಾಗಿ, ಮನೆಯ ಸಿಂಹದ್ವಾರದ ಮೇಲೆ ಹೊರಗಿನಿಂದ ಅಯ್ಯಪ್ಪ ಸ್ವಾಮಿಯ ಫೋಟೋ ಇಡುವುದು ಸರಿಯಲ್ಲ. ಹಾಗೆಯೇ, ವಾಹನಗಳಲ್ಲಿ ವರ್ಷಪೂರ್ತಿ ಫೋಟೋ ಕಟ್ಟಿ ಇಡುವುದು ಅಷ್ಟು ಶುಭವಲ್ಲ. ಶಬರಿಮಲೆ ಯಾತ್ರೆಗೆ ತೆರಳುವಾಗ, ರಕ್ಷಣೆಗಾಗಿ ವಾಹನದಲ್ಲಿ ತಾತ್ಕಾಲಿಕವಾಗಿ ಇಡಬಹುದು. ಮನೆಯೊಳಗಡೆ, ದೇವರ ಮನೆ ಅಯ್ಯಪ್ಪ ಸ್ವಾಮಿಯ ಫೋಟೋ ಇಡಲು ಅತ್ಯಂತ ಸೂಕ್ತವಾದ ಸ್ಥಳ. ಹಾಲ್‌ನಲ್ಲಿ ಇಡಲು ಬಯಸಿದರೆ, ಆ ಫೋಟೋಗೆ ತ್ರಿಕಾಲವೂ ಆರತಿ ಮಾಡಬೇಕು, ಏಕೆಂದರೆ ಅಯ್ಯಪ್ಪ ಸ್ವಾಮಿ ಆರತಿ ಪ್ರಿಯ. ಮಲಗುವ ಕೋಣೆಯಲ್ಲಿ ಫೋಟೋ ಇಡಬಾರದು. ಯಾವುದೇ ಅಪವಿತ್ರತೆ ಇರುವ ಸ್ಥಳಗಳಲ್ಲಿ ಅಯ್ಯಪ್ಪ ಸ್ವಾಮಿಯ ಫೋಟೋ ಇಡುವುದು ಶುಭವಲ್ಲ. ಪವಿತ್ರ ಮತ್ತು ಶುದ್ಧವಾದ ಸ್ಥಳಗಳಲ್ಲಿ ಮಾತ್ರ ಫೋಟೋವನ್ನು ಇರಿಸಬೇಕು.

ಇದನ್ನೂ ಓದಿ: ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದು ಕರೆಯುವುದೇಕೆ? ಮಾಹಿತಿ ಇಲ್ಲಿದೆ

ಅಯ್ಯಪ್ಪ ಸ್ವಾಮಿಗೆ ಮಾಡುವ ಪೂಜೆಯಲ್ಲಿ ಶ್ರದ್ಧೆ ಮತ್ತು ಭಕ್ತಿ ಪ್ರಮುಖ. ನಿತ್ಯವೂ ಕರ್ಪೂರದ ಆರತಿಯನ್ನು ಮಾಡುವುದು, ಪ್ರಾರ್ಥನೆ ಸಲ್ಲಿಸುವುದು ಮತ್ತು ವಾರಕ್ಕೊಮ್ಮೆಯಾದರೂ ಬೆಲ್ಲದಿಂದ ಮಾಡಿದ ಸಿಹಿ ನೈವೇದ್ಯವನ್ನು ಅರ್ಪಿಸುವುದು ಶ್ರೇಷ್ಠ. “ಹರಿಹರ ಸುತನೇ ಸ್ವಾಮಿಯೇ ಶರಣಂ ಅಯ್ಯಪ್ಪ” ಅಥವಾ “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂಬ ಘೋಷಗಳನ್ನು ಪ್ರತಿದಿನ ಕೂಗಿ ಅಥವಾ ಪ್ರಾರ್ಥಿಸುವುದರಿಂದ ಫೋಟೋಗೂ ಸಾರ್ಥಕತೆ ದೊರೆತು, ಮನೆಯಲ್ಲೂ ಶುಭವಾಗುತ್ತದೆ.

ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ಹಲವು ಶುಭ ಫಲಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ. ಸಾಡೇಸಾತಿ, ಅಷ್ಟಮ ಶನಿ, ಪಂಚಮ ಶನಿಯಂತಹ ಶನಿಕಾಟಗಳ ತೀವ್ರತೆ ಕಡಿಮೆಯಾಗುತ್ತದೆ. ನವಗ್ರಹ ದೋಷಗಳು ನಿವಾರಣೆಯಾಗುತ್ತವೆ. ಮಾಟ-ಮಂತ್ರದಂತಹ ಯಾವುದೇ ದುಷ್ಟ ದೃಷ್ಟಿ ಮನೆಯನ್ನು ಪ್ರವೇಶಿಸುವುದಿಲ್ಲ. ಮನೆಯಲ್ಲಿನ ಕಲಹಗಳು ಇತ್ಯರ್ಥವಾಗುತ್ತವೆ. ಅಂತಿಮವಾಗಿ, ಮಾನಸಿಕ ತೃಪ್ತಿ ಮತ್ತು ಸಂತೃಪ್ತಿ ಪ್ರಾಪ್ತವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷಕ್ಕೆ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್​​​ನ್ಯೂಸ್​​: ಪ್ರಾಯೋಗಿಕ ಪರೀಕ್ಷೆಗಳಿಗೆ ಹೊಸ ರೂಲ್ಸ್​​​ ತಂದ ಇಲಾಖೆ – Kannada News | 2nd PUC Practical Exams Live Web Streamed by KSEAB for Transparency and Monitoring

ಬೆಂಗಳೂರು, ಜ.2: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಈ ವರ್ಷ ದ್ವಿತೀಯ ಪಿಯು ಕೋರ್ಸ್‌ಗಳ ಪ್ರಾಯೋಗಿಕ ಪರೀಕ್ಷೆಗಳಿಗೆ ವೆಬ್-ಸ್ಟ್ರೀಮಿಂಗ್ ಕಡ್ಡಾಯಗೊಳಿಸಿದೆ. ಪರೀಕ್ಷೆಯಲ್ಲಿ ಪಾರದರ್ಶಕತೆ ತರಲು ಈ ಕ್ರಮವನ್ನು ಕೆಎಸ್‌ಇಎಬಿ ತಂದಿದೆ. ಈ ಹೊಸ ವ್ಯವಸ್ಥೆಯನ್ನು ತರುವ ಮೂಲಕ ವಿದ್ಯಾರ್ಥಿಗಳಿಗೆ ಅಂಕದಲ್ಲಿ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುತ್ತದೆ. ಪರೀಕ್ಷಾ ಕೇಂದ್ರದಲ್ಲಿ ನಡೆಯುವ ಎಲ್ಲಾ ಚಟುವಟಿಕೆಯನ್ನು ರಿಯಲ್​​​ ಟೈಮ್​​ನಲ್ಲಿ ಲೈವ್​​ ಸ್ಟ್ರೀಮ್​​​​ ಮಾಡಲಾಗುತ್ತದೆ. ಕಳೆದ ವರ್ಷ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ್ದರೂ, ಥಿಯರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿ ಉತ್ತೀರ್ಣರಾಗಲು ವಿಫಲರಾಗಿರುವುದರಿಂದ ಪ್ರಾಯೋಗಿಕ ಪರೀಕ್ಷೆಗಳನ್ನು ವೆಬ್‌ಕಾಸ್ಟ್ ಮಾಡಲು ಮಂಡಳಿಯು ಎಲ್ಲಾ ಕೇಂದ್ರಗಳಿಗೆ ಸೂಚನೆ ನೀಡಿದೆ. ಮಂಡಳಿಯು ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಮೇಲ್ವಿಚಾರಣೆ ಮಾಡುತ್ತದೆ. ಸಂಪೂರ್ಣ ಪ್ರಕ್ರಿಯೆಗಾಗಿ ಕೃತಕ ಬುದ್ಧಿಮತ್ತೆಯನ್ನು ಸಕ್ರಿಯಗೊಳಿಸಲಾಗುತ್ತದೆ ಎಂದು ಹೇಳಿದೆ.

ಜನವರಿ 27 ರಿಂದ ಫೆಬ್ರವರಿ 14 ರವರೆಗೆ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಮಂಡಳಿಯು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ. ಈ ವರ್ಷ ಪ್ರಾಯೋಗಿಕ ಪರೀಕ್ಷೆಗಳು 30 ಅಂಕಗಳಿಗೆ ನಡೆಯಲಿದ್ದು, ಥಿಯರಿ 70 ಅಂಕಗಳಿಗೆ ನಡೆಯಲಿದೆ. ಒಬ್ಬ ವಿದ್ಯಾರ್ಥಿಯು ಥಿಯರಿಯಲ್ಲಿ ಕನಿಷ್ಠ 21 ಅಂಕಗಳನ್ನು ಪಡೆದರೆ ಆ ವಿದ್ಯಾರ್ಥಿಯನ್ನು ಉತ್ತೀರ್ಣರೆಂದು ಘೋಷಿಸಲಾಗುತ್ತದೆ. ಆದರೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಈ ಮಿತಿ ಇಲ್ಲದಿರುವ ಕಾರಣ, ಹೆಚ್ಚಿನ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಪೂರ್ಣ ಅಂಕವನ್ನು ನೀಡಲಾಗುತ್ತದೆ.

ಇದನ್ನೂ ಓದಿ: SSLC ಫಲಿತಾಂಶ ಸುಧಾರಣೆ ಮಾಡುವ ಶಿಕ್ಷಕರಿಗೆ ಬಂಪರ್ ಗಿಫ್ಟ್ ಘೋಷಿಸಿದ ಸರ್ಕಾರ

ಆದರೆ ಈ ಹಿಂದಿನ ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ 30 ಅಂಕಗಳನ್ನು ಪಡೆದಿದ್ದರು, ಆದರೆ ಥಿಯರಿ ಪರೀಕ್ಷೆಯಲ್ಲಿ 10 ಅಂಕ ಪಡೆದು ಫೇಲ್​​ ಆಗಿರುವ ಸುಮಾರು ನಿದರ್ಶನಗಳು ಇದೆ. ಅದಕ್ಕಾಗಿ ಪ್ರಾಯೋಗಿಕ ಪರೀಕ್ಷೆಗಳನ್ನು ಮೇಲ್ವಿಚಾರಣೆ ಮಾಡಲು ಒತ್ತಾಯಗಳು ಬಂದಿದೆ ಎಂದು ಕೆಎಸ್‌ಇಎಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಾಯೋಗಿಕ ಪರೀಕ್ಷೆಗಳಲ್ಲಿಯೂ ಸಹ, 10 ಅಂಕಗಳು ಹಾಜರಾತಿ ಆಧಾರಿತವಾಗಿರುತ್ತವೆ ಮತ್ತು ಉಳಿದ 20 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ವರ್ಷದಿಂದ, ಮಂಡಳಿಯು ಕನಿಷ್ಠ ಉತ್ತೀರ್ಣ ಅಂಕಗಳನ್ನು 33% ಕ್ಕೆ ಇಳಿಸಿದೆ. ಥಿಯರಿ ಮತ್ತು ಪ್ರಾಕ್ಟಿಕಲ್ ಎರಡರ ಅಂಕವನ್ನು ಸೇರಿಸಿ 30 ಅಂಕಗಳನ್ನು ಪಡೆದರೆ ಅಂತಹ ವಿದ್ಯಾರ್ಥಿಗಳನ್ನು ಉತ್ತೀರ್ಣರೆಂದು ಘೋಷಿಸಲಾಗುತ್ತದೆ. ಅದಕ್ಕಾಗಿ ಈ ವರ್ಷದಿಂದ ಪ್ರಾಯೋಗಿಕ ಪರೀಕ್ಷೆಗಳು ನಡೆಯುವ ಕೇಂದ್ರಗಳಲ್ಲಿ ವೆಬ್-ಸ್ಟ್ರೀಮಿಂಗ್ ಕಡ್ಡಾಯಗೊಳಿಸಲಾಗಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಉದ್ವಿಗ್ನ: ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ – Kannada News | Ballari Tension Escalates: Video Reveals Severity of Clash Outside Janardhan Reddy’s Residence

ಬಳ್ಳಾರಿ, ಜನವರಿ 2: ಬಳ್ಳಾರಿ ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ಬ್ಯಾನರ್ ಅಳವಡಿಕೆ ವೇಳೆ ಶುರುವಾದ ಘರ್ಷಣೆ ಕಾಂಗ್ರೆಸ್ ಕಾರ್ಯಕರ್ತನ ಬಲಿತೆಗೆದುಕೊಂಡಿದೆ. ಜನವರಿ 3ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟುತ್ತಿದ್ದಾಗ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿದೆ. ಈ ಘರ್ಷಣೆಯು ಕಲ್ಲು ತೂರಾಟ, ದೊಣ್ಣೆಗಳ ಬಳಕೆ ಮತ್ತು ಖಾರದ ಪುಡಿ ಎರಚಾಟ ಸೇರಿದಂತೆ ತೀವ್ರ ಸ್ವರೂಪ ಪಡೆದುಕೊಂಡಿತ್ತು ಎಂಬುದು ಘಟನಾ ಸ್ಥಳದ ವಿಡಿಯೋದಿಂದ ತಿಳಿದುಬಂದಿದೆ.

ಪರಿಸ್ಥಿತಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಶಾಸಕ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಅವರ ಖಾಸಗಿ ಗನ್‌ಮ್ಯಾನ್‌ಗಳು ಏರ್ ಫೈರ್ ಮಾಡಿದ್ದಾರೆ. ಇದೇ ವೇಳೆ ಪೊಲೀಸರೂ ಕೂಡ ಗುಂಪನ್ನು ಚದುರಿಸಲು ಏರ್ ಫೈರ್ ಮಾಡಿದ್ದು, ಒಂದು ಮಿಸ್‌ಫೈರ್ ಆಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬುವವರಿಗೆ ಗುಂಡು ತಗುಲಿದೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ರಾಜಶೇಖರ್ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ರಕ್ತದ ಕಲೆಗಳು ಕಾಣಿಸುತ್ತಿದ್ದು, ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಿಗುವಿನ ವಾತಾವರಣವನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗುತ್ತಿದೆ. ಘಟನಾ ಸ್ಥಳದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಆದೇಶಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇವನಹಳ್ಳಿಯಲ್ಲಿ ಟೋಲ್ ಬೂತ್​ಗೆ ಗುದ್ದಿದ ಬಸ್; ರಕ್ಷಣೆಗೆ ಧಾವಿಸಿದವರು ಮೊಬೈಲ್ ಹೊತ್ತೊಯ್ದರು – Kannada News | Devanahalli Bus Accident: iPhone Theft Amidst Chaos

ದೇವನಹಳ್ಳಿಯಲ್ಲಿ ಟೋಲ್ ಬೂತ್​ಗೆ ಗುದ್ದಿದ ಬಸ್; ರಕ್ಷಣೆಗೆ ಬಂದವರು ಮೊಬೈಲ್ ಹೊತ್ತೊಯ್ದರು

ದೇವನಹಳ್ಳಿ, ಜನವರಿ 02: ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರಲ್ಲಿನ ದೇವನಹಳ್ಳಿ ಹೊರವಲಯದ ಟೋಲ್ ಪ್ಲಾಜಾ ಬಳಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅಪಘಾತ ತಪ್ಪಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ (Bengaluru) ಬರುತ್ತಿದ್ದ ಟ್ರಾನ್ಸ್ ಇಂಡಿಯಾ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಅತಿವೇಗದಿಂದ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಪ್ಲಾಜಾ ಬೂತ್‌ಗೆ ಡಿಕ್ಕಿ ಹೊಡೆದಿದೆ. ಇದೇ ಸಮಯದಲ್ಲಿ ರಕ್ಷಣೆಯ ನೆಪದಲ್ಲಿ ಬಂದ ಕಳ್ಳರು ಪ್ರಯಾಣಿಕರ ಫೋನ್​ಗಳನ್ನಯ ಹೊತ್ತೊಯ್ದಿರುವುದು ಅಮಾನವೀಯತೆಯ ಪರಮಾವಧಿಯಾಗಿದೆ.

ಮೂವರ ಐ ಫೋನ್ ಕದ್ದೊಯ್ದ ಕದೀಮರು

ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಹಳೆ ಟೋಲ್ ಪ್ಲಾಜಾ ಬೂತ್ ಸಂಪೂರ್ಣವಾಗಿ ಧ್ವಂಸವಾಗಿದೆ. ಅಪಘಾತದ ವೇಳೆ ಟೋಲ್ ಪ್ಲಾಜಾ ಬಂದ್ ಆಗಿದ್ದರಿಂದ ಭಾರಿ ಅನಾಹುತ ತಪ್ಪಿದೆ ಎನ್ನಲಾಗಿದೆ. ಬೂತ್ ಬಳಿ ಯಾವುದೇ ವಾಹನಗಳು ಅಥವಾ ಜನರು ಇಲ್ಲದಿದ್ದ ಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಇದೇ ವೇಳೆ ಗಾಯಾಳುಗಳ ರಕ್ಷಣೆಗೆಂದು ಬಂದವರು ಬಸ್ಸಿನಲ್ಲಿದ್ದ ಮೂರು ಜನರ ಐ ಪೋನ್ ಕದ್ದು ಪರಾರಿಯಾದ ಅಮಾನವೀಯ ಘಟನೆ ನಡೆದಿದೆ.

ಅಪಘಾತದಲ್ಲಿ ಬಸ್ ಚಾಲಕ ಹಾಗೂ ಸಹ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಸ್ ಒಳಗಡೆ ಸಿಲುಕಿದ್ದ ಇಬ್ಬರನ್ನೂ ಹೊರತೆಗೆದು ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಘಾತ ಸಂಭವಿಸುತ್ತಿದ್ದಂತೆಯೇ ಪ್ರಯಾಣಿಕರು ಎಕ್ಸಿಟ್ ಡೋರ್ ಮೂಲಕ ಹೊರಬಂದಿದ್ದಾರೆ. ಘಟನಾ ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದ ಬಳಿಕ ಕ್ರೇನ್ ಮೂಲಕ ಬಸ್ ಅನ್ನು ರಸ್ತೆಯ ಬದಿಗೆ ಎಳೆಯುವ ಕಾರ್ಯ ನಡೆಯಿತು. ಈ ಸಂಬಂಧ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ರಸ್ತೆಯಲ್ಲಿವೆ ಎರಡು ಟೋಲ್ ಬೂತ್​​ಗಳು

ಒಂದೇ ರಸ್ತೆಯಲ್ಲಿ ಕೇವಲ 500 ಮೀಟರ್ ಅಂತರದಲ್ಲಿ ಎರಡು ಟೋಲ್ ಪ್ಲಾಜಾಗಳಿರುವುದು ವಾಹನ ಸವಾರರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಎರಡು ಟೋಲ್ ಪ್ಲಾಜಾಗಳಲ್ಲಿ ಒಂದರಲ್ಲಿ ಎರಡು–ಮೂರು ವರ್ಷಗಳ ಹಿಂದೆಯೇ ಟೋಲ್ ವಸೂಲಿ ನಿಲ್ಲಿಸಲಾಗಿದೆ. ಆದರೆ ಟೋಲ್ ವಸೂಲಿ ಸ್ಥಗಿತಗೊಂಡಿದ್ದರೂ ಸಹ, ಹಳೆಯ ಟೋಲ್ ಬೂತ್‌ಗಳನ್ನು ಇನ್ನೂ ತೆರವುಗೊಳಿಸದೆ ಹಾಗೆಯೇ ಬಿಟ್ಟಿರುವುದು ಅಪಘಾತಗಳ ಅಪಾಯವನ್ನು ಹೆಚ್ಚಿಸಿದೆ. ಶಿಥಿಲಾವಸ್ಥೆಗೆ ತಲುಪಿರುವ ಟೋಲ್ ಪ್ಲಾಜಾ ಬೂತ್‌ಗಳ ಗೋಡೆಗಳು ಯಾವಾಗ ಬೇಕಾದರೂ ರಸ್ತೆ ಮೇಲೆ ಅಥವಾ ಸಂಚರಿಸುವ ವಾಹನಗಳ ಮೇಲೆ ಕುಸಿದು ಬೀಳುವ ಸ್ಥಿತಿಯಲ್ಲಿವೆ.

ಟೋಲ್ ಬೂತ್‌ಗಳ ಗೋಡೆಗಳು ಸಂಪೂರ್ಣ ಹಾಳಾಗಿದ್ದರೂ ಟೋಲ್ ಪ್ಲಾಜಾ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಹನ ಸವಾರರು ಆರೋಪಿಸುತ್ತಿದ್ದಾರೆ. ಸುರಕ್ಷತಾ ಕ್ರಮಗಳು, ಸ್ಪೀಡ್ ಬ್ರೇಕರ್‌ಗಳು ಹಾಗೂ ಎಚ್ಚರಿಕಾ ಸೂಚನಾ ಫಲಕಗಳಿಲ್ಲದ ಕಾರಣ ಹೆದ್ದಾರಿಯಲ್ಲಿ ಅತಿವೇಗದಲ್ಲಿ ವಾಹನಗಳು ಸಂಚರಿಸುತ್ತಿದ್ದು, ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುವ ಈ ಪ್ರಮುಖ ಹೆದ್ದಾರಿಯಲ್ಲಿ ಟೋಲ್ ಆಡಳಿತ ಮಂಡಳಿ ಕೇವಲ ಸುಂಕ ವಸೂಲಿಯಲ್ಲೇ ನಿರತರಾಗಿದ್ದು, ಸಾರ್ವಜನಿಕ ಸುರಕ್ಷತೆಯನ್ನು ಕಡೆಗಣಿಸಿದೆ ಎಂಬ ಆರೋಪ ಕೇಳಿಬರುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:10 am, Fri, 2 January 26

Source link

ಮಗಳಿಗೆ ಟಾರ್ಚರ್ ಕೊಡ್ತಿದ್ದ ಅಳಿಯನಿಗೆ ಚಟ್ಟ ಕಟ್ಟಿದ ಮಾವ: ರಾಡ್​​ನಿಂದ ಹೊಡೆದು ಕೊಲೆ – Kannada News | Shivamogga: Father in Law Kills Son in Law with Iron Rod Over Alleged Harassment of Daughter

ಕೊಲೆಯಾದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ

ಶಿವಮೊಗ್ಗ, ಜನವರಿ 2: ಶಿವಮೊಗ್ಗದ (Shivamogga) ವಿನೋಬ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಇರುವ ಶ್ರೀನಿಧಿ ವೈನ್ ಶಾಪ್ ಮುಂದೆ ಒಂದು ಭೀಕರ ಕೊಲೆ ನಡೆದಿದೆ. ಅರುಣ ಎನ್ನುವ ವ್ಯಕ್ತಿಯು ವೈನ್ ಶಾಪ್ ಮುಂದೆ ನಿಂತಿದ್ದಾಗ ಹಠಾತ್ ಆಗಿ ಅಲ್ಲಿಗೆ ಎಂಟ್ರಿ ಕೊಟ್ಟ ಇಬ್ಬರು ವ್ಯಕ್ತಿಗಳು ಕೆಲವೇ ಕ್ಷಣದಲ್ಲಿ ಅರುಣ ಮೇಲೆ ರಾಡ್​​ನಿಂದ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಅರುಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅರುಣನನ್ನು ಕೊಲೆ ಮಾಡಿದ್ದು ಮತ್ಯಾರೂ ಅಲ್ಲ, ಆತನಿಗೆ ಹೆಣ್ಣು ಕೊಟ್ಟ ಮಾವ ತಿಪ್ಪೇಶ್ ಮತ್ತು ಹೆಂಡತಿಯ ಸೋದರ ಮಾವ ಲೋಕೇಶ್! ತಲೆಗೆ ಬಿದ್ದ ರಾಡ್ ಹೊಡೆತದಿಂದ ಅರುಣ ಮೃತಪಟ್ಟಿದ್ದಾನೆ. ಎಲ್ಲಿಯೂ ಕೂಡಾ ರಕ್ತ ಸೇರಿದಂತೆ ಯಾವುದೇ ಸಾಕ್ಷಿಗಳು ಘಟನಾ ಸ್ಥಳದಲ್ಲಿ ಸಿಗಲಿಲ್ಲ.

ಅರುಣ್​ಗೆ ಯಶಸ್ವಿನಿ ಜೊತೆ ಮದುವೆಯಾಗಿ ಎರಡು ವರ್ಷವಾಗಿತ್ತು. ಪತಿ ಪತ್ನಿ ನಡುವೆ ಇತ್ತೀಚೆಗೆ ಪದೇ ಪದೇ ಗಲಾಟೆ ಆಗಿತ್ತು. ಈ ನಡುವೆ ಕೆಲವು ತಿಂಗಳನಿಂದ ಪತ್ನಿ ತವರು ಮನೆಯಲ್ಲಿ ಇದ್ದಳು. ಮಗಳಿಗೆ ಅಳಿಯ ಹಿಂಸೆ ಕೊಡುತ್ತಿದ್ದಾನೆ ಎಂದುಕೊಂಡು ಹೆಣ್ಣು ಕೊಟ್ಟ ಮಾವ ಮತ್ತು ಯಶಸ್ವಿನಿ ಸೋದರ ಮಾವ ಇಬ್ಬರು ಸೇರಿ ಅರುಣನನ್ನು ಹತ್ಯೆ ಮಾಡಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಪ್ರೀತಿಸಿ ಮದುವೆಯಾಗಿದ್ದ ಅರುಣ್, ಯಶಸ್ವಿನಿ!

ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ಎರಡು ವರ್ಷ ಆಗಿದ್ದು, ಒಂದು ಮಗು ಕೂಡಾ ಇದೆ. ಅರುಣ್ ಕೂಲಿ ಕೆಲಸ ಮಾಡಿಕೊಂಡು ಮಾಡಿಕೊಂಡಿದ್ದ. ಅದರ ಜೊತೆಗೆ ಗಾಂಜಾ ಸೇವನೆಯ ಚಟ ಕೂಡ ಇತ್ತು. ಪದೇ ಪದೇ ಪತ್ನಿಗೆ ಹಿಂಸೆ ಕೊಡುತ್ತಿದ್ದ ಎನ್ನಲಾಗಿದೆ. ಕುಡಿದು ಬಂದು ಪತ್ನಿಯ ಜೊತೆ ಗಲಾಟೆ ಮಾಡುವುದು, ಹೆಂಡತಿಯನ್ನು ಹೊಡೆಯುವುದು ಮಾಡುತ್ತಿದ್ದ. ಆತನ ದೌರ್ಜನ್ಯ ತಾಳಲಾರದೇ ಪತ್ನಿ ತವರು ಮನೆಗೆ ಹೋಗಿದ್ದಳು. ಮೂರು ತಿಂಗಳಿನಿಂದ ತವರು ಮನೆಯಲ್ಲಿದ್ದ ಪತ್ನಿಗೆ, ‘ನಿಮ್ಮ ಇಡೀ ಕುಟುಂಬವನ್ನೇ ಟಾರ್ಗೆಟ್ ಮಾಡುವೆ’ ಎಂದು ಅರುಣ್ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಪ್ರತ್ಯೇಕ ರಸ್ತೆ ಅಪಘಾತ: ತಮ್ಮದಲ್ಲದ ತಪ್ಪಿಗೆ ಮಗು ಸೇರಿ ನಾಲ್ವರು ದಾರುಣವಾಗಿ ಸಾವು

ಅಳಿಯ ಮಗಳಿಗೆ ಕೊಡುತ್ತಿದ್ದ ಟಾರ್ಚರ್ ನೋಡಿ ತಂದೆ ರೋಸಿ ಹೋಗಿದ್ದ. ಈ ಹಿನ್ನಲೆಯಲ್ಲಿ ಪತ್ನಿಯ ತಮ್ಮ ಮಂಜುನಾಥ್​ನನ್ನು ಕರೆದುಕೊಂಡು ಹೋಗಿ ಅಳಿಯನ ಕಥೆಯನ್ನೇ ಮುಗಿಸಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version