ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ! ಯಾಕೆ ಗೊತ್ತಾ? – Kannada News | Kogilu Layout Housing Row: BJP Workers Stage Unique Protest in Mandya, Letter to Kerala CM Goes Viral

ಕೇರಳ ಸಿಎಂಗೆ ಮಂಡ್ಯ ಬಿಜೆಪಿ ಕಾರ್ಯಕರ್ತರ ಪತ್ರ

ಮಂಡ್ಯ, ಜನವರಿ 1: ‘ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಅವರೇ, ನಮ್ಮ ಜಿಲ್ಲೆ ಹಾಗೂ ರಾಜ್ಯದಲ್ಲಿ ಸಾಕಷ್ಟು ಬಡವರು ಇದ್ದಾರೆ. ದಯವಿಟ್ಟು ಒಂದು ಟ್ವೀಟ್ ಮಾಡಿಬಿಡಿ. ನೀವು ಟ್ವೀಟ್ ಮಾಡಿದರೆ ನಮ್ಮ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮನೆ ಕೊಡುತ್ತಾರೆ’. ಇದು ಮಂಡ್ಯ ಬಿಜೆಪಿ (BJP) ಕಾರ್ಯಕರ್ತರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಪತ್ರ ಬರೆದು ಮಾಡಿದ ಮನವಿ! ಕೇರಳ ಸಿಎಂ ಎಕ್ಸ್ ಸಂದೇಶದ ಬೆನ್ನಲ್ಲೇ ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ವಾಸವಿದ್ದ ಅಕ್ರಮ ವಲಸಿಗರಿಗೆ ಮನೆ ನೀಡಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಂದಾದ ಬೆನ್ನಲ್ಲೇ ಮಂಡ್ಯದ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ.

ನಮ್ಮ ಜಿಲ್ಲೆ ಹಾಗೂ ರಾಜ್ಯದಲ್ಲಿ ಸಾಕಷ್ಟು ಬಡವರು ಇದ್ದರೂ ಅವರಿಗೆ ಇನ್ನೂ ಸೂರಿನ ಸೌಲಭ್ಯ ದೊರಕಿಲ್ಲ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನೆ ನೀಡುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಬಡವರ ಪರ ಕಾಳಜಿ ಇಟ್ಟುಕೊಂಡು ಒಂದು ಟ್ವೀಟ್ ಮಾಡಿಕೊಡಬೇಕು ಎಂದು ಕೇರಳ ಸಿಎಂಗೆ ಬರೆದ ಪತ್ರದಲ್ಲಿ ಮಂಡ್ಯ ಬಿಜೆಪಿ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಆ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಮಂಡ್ಯ ಬಿಜೆಪಿ ಕಾರ್ಯಕರ್ತರು ಹೇಳಿದ್ದೇನು? ವಿಡಿಯೋ ನೋಡಿ

ನೀವು ಟ್ವೀಟ್ ಮಾಡಿದ ತಕ್ಷಣ ಅಕ್ರಮ ವಲಸಿಗರಿಗೆ ಮನೆ ನೀಡಲಾಗುತ್ತಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ವಲಸಿಗರಿಗೆ ಮನೆ ನೀಡಲಾಗುತ್ತಿದೆ ಎಂದು ಹೇಳಿ, ಅದೇ ರೀತಿಯಲ್ಲಿ ರಾಜ್ಯದ ಬಡವರಿಗೆ ಸೂರಿನ ವ್ಯವಸ್ಥೆ ಮಾಡಬೇಕೆಂದು ಟ್ವೀಟ್ ಮಾಡಿಕೊಡಿ ಎಂದು ಕೇರಳ ಸಿಎಂಗೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಪಿಣರಾಯಿ ವಿಜಯನ್​ಗೆ ಬರೆದ ಪತ್ರದಲ್ಲೇನಿದೆ?

ಕರ್ನಾಟಕದ ನಿಜವಾದ ವಸತಿ ಹೀನರಿಗೆ ಬಡವರಿಗೆ ಸೂರು ನೀಡಲು ಕರ್ನಾಟಕ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಹಾಗೂ ಡಿ.ಕೆ ಶಿವಕುಮಾರ್ ರವರಿಗೆ ಟ್ವಿಟ್ ಮೂಲಕ ಆದೇಶ ನೀಡುವ ಬಗ್ಗೆ ಮನವಿ ಎಂದಿ ಮೊದಲಿಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮುಂದುವರಿದು, ‘ಮಾನ್ಯರೆ, ತಾವು ಒಂದು ಟ್ವಿಟ್ ಮಾಡಿ ಬೆಂಗಳೂರಿನ ಕೋಗಿಲು ಅಕ್ರಮ ಬಡಾವಣೆಯ ಜನರ ಬಗ್ಗೆ ಮಾನವೀಯತೆಯಿಂದ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಹೇಳಿದ ತಕ್ಷಣ ನಮ್ಮ ಕರ್ನಾಟಕ ಸರ್ಕಾರ ಬೆಚ್ಚಿಬಿದ್ದು ಬಯ್ಯಪ್ಪನ ಹಳ್ಳಿಯಲ್ಲಿ ಹೊಸ ಮನೆ ಕೊಡುತ್ತದೆ ಎಂದರೆ ನಿಮ್ಮ ಶಕ್ತಿ ಏನು ಎಂಬುದು ಕನ್ನಡಿಗರಿಗೆ ಅರ್ಥವಾಗಿದೆ. ನಮ್ಮ ಕರ್ನಾಟಕದಲ್ಲಿ ಪ್ರವಾಹ, ಮಳೆಹಾನಿ, ಭೂಕುಸಿತ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಕ್ಕೆ 14000 ಜನ ಮನೆ ಕಳೆದುಕೊಂಡಿದ್ದಾರೆ. ಸೂರಿಲ್ಲದೆ ಪ್ಲಾಸ್ಟಿಕ್ ಶೆಡ್​​​ಗಳಲ್ಲಿ ವಾಸ ಮಾಡುತ್ತಿದ್ದಾರೆ. ವಿವಿಧ ವಸತಿ ಯೋಜನೆ, ಸೇರಿದಂತೆ ನಿವೇಶನಕ್ಕಾಗಿ ಹಲವಾರು ವರ್ಷದಿಂದ ಸಾವಿರಾರು ಜನರು ಚಾತಕ ಪಕ್ಷಿಯ ರೀತಿ ಕಾಯುತ್ತಿದ್ದಾರೆ. ದಯವಿಟ್ಟು ನಮ್ಮ ರಾಜ್ಯದ ಬಡವರ ಬಗ್ಗೆ ನೀವು ಒಂದು ಟ್ವಿಟ್ ಮಾಡಿ ಹೇಳಿದರೆ ಖಂಡಿತ ನಮ್ಮ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ತಮ್ಮ ಆದೇಶವನ್ನು ಪಾಲಿಸುತ್ತಾರೆ ಅನ್ನೋ ನಂಬಿಕೆ ಇದೆ . ಸಂಪೂರ್ಣ ಕರ್ನಾಟಕದ ಆಡಳಿತ ಚುಕ್ಕಾಣಿಯನ್ನು ನಿಮಗೆ General Power of Attorney ಮಾಡಿಕೊಟ್ಟಿದ್ದಾರೆ ಎಂದು ನಮ್ಮ ರಾಜ್ಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ರಾಮ, ಕೃಷ್ಣ, ಶಿವ, ಪಾರ್ವತಿ, ಪೂಜಿಸುವ ನಮ್ಮ ಬಗ್ಗೆಯೂ ದಯವಿಟ್ಟು ಕರುಣೆಯಿರಲಿ ಎಂದು ತಮ್ಮಲ್ಲಿ ಬೇಡಿಕೊಳ್ಳುತ್ತೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಹೊಸ ವರ್ಷದ ಮರುದಿನವೇ ಕೋಗಿಲು ನಿರಾಶ್ರಿತರಿಗೆ ಮನೆ ಭಾಗ್ಯ: 187 ಮನೆಗಳ ಸರ್ವೆ ಮುಕ್ತಾಯ, ಯಾರಿಗೆ ಸಿಗಲಿದೆ ಸೂರು?

ಈ ಹಿಂದೆ ಬಂಡೀಪುರ ಮಾರ್ಗವಾಗಿ ರಾತ್ರಿ ಸಂಚಾರ ನಿರ್ಬಂಧ ತೆರವುಗೊಳಿಸಿದಾಗ, ನಿಮ್ಮ ರಾಜ್ಯದಲ್ಲಿಆನೆ ಕಾಲ್ತುಳಿತಕ್ಕೆ ನಮ್ಮ ಸರ್ಕಾರ ಪರಿಹಾರ ಕೊಟ್ಟಾಗ, ನಿಮ್ಮ ರಾಜ್ಯದಲ್ಲಿ ಮನೆಕಟ್ಟಿಕೊಡಲು ನಮ್ಮ ಸರ್ಕಾರ ಸರ್ಕಾರ ಹಣಕೊಟ್ಟಗ ಗೊತ್ತಾಯಿತು ನಿಮ್ಮ ಶಕ್ತಿ ಏನೆಂದು. ಹಾಗಾಗಿ ಈ ಕೊಡಲೇ ನಮ ಪರವಾಗಿಯೂ ದನಿ ಎತ್ತಬೇಕೆಂದು ನಿಮ್ಮಲ್ಲಿ ಕಳಕಳಿಯ ಮನವಿ, ಸಾಧ್ಯವಾದರೆ ನಿಮ್ಮ ರಾಜ್ಯದ ಸಂಸದ ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವೇಣುಗೋಪಾಲ್ ರವರಿಗೂ ಟ್ವಿಟ್ ಮಾಡಲು ಹೇಳಿ ಎಂದು ಪತ್ರದಲ್ಲಿ ಬಿಜೆಪಿ ಕಾರ್ಯಕರ್ತರು ವ್ಯಂಗ್ಯವಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ, ಹಲವು ಮಂದಿ ಸಾವು – Kannada News | Deadly Explosion Hits Bar in Upscale Swiss Ski Resort

ಸ್ವಿಟ್ಜರ್​ಲ್ಯಾಂಡ್, ಜನವರಿ 01: ಹೊಸ ವರ್ಷದ ಸಂಭ್ರಮದಲ್ಲಿ ಸೂತಕದ ಛಾಯೆ ಮೂಡಿದೆ. ಸ್ವಿಟ್ಜರ್ಲೆಂಡ್‌ನ ಬಾರೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಹಲವು ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಸ್ವಿಸ್ ಪೊಲೀಸರು ಸ್ವಿಸ್ ನಗರದ ಕ್ರಾನ್ಸ್-ಮೊಂಟಾನಾದಲ್ಲಿ ಸಂಭವಿಸಿದೆ ಎಂದು ಹೇಳಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ.

ಸ್ಫೋಟದ ನಂತರ, ಬಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿಯಲ್ಲಿ ಹಲವಾರು ಜನರು ಸಿಲುಕಿಕೊಂಡಿದ್ದಾರೆ. ಸ್ವಿಸ್ ಪೊಲೀಸ್ ರಕ್ಷಣಾ ತಂಡಗಳು ಅವರನ್ನು ಬಾರ್‌ನಿಂದ ಸ್ಥಳಾಂತರಿಸಿ ಆಸ್ಪತ್ರೆಗೆ ಕಳುಹಿಸುವ ಕೆಲಸ ಮಾಡುತ್ತಿದೆ. ಬಾರ್‌ನಲ್ಲಿ ಹೊಸ ವರ್ಷದ ಮುನ್ನಾದಿನದ ಪಾರ್ಟಿ ನಡೆಯುತ್ತಿತ್ತು ಮತ್ತು ಅಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಆ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕೀಮ್​ಗಳ ಬಡ್ಡಿದರದಲ್ಲಿ ಇಳಿಕೆ ಇಲ್ಲ; ಇಲ್ಲಿದೆ ಜನವರಿ-ಮಾರ್ಚ್ ಕ್ವಾರ್ಟರ್​ನ ಬಡ್ಡಿದರಗಳ ಪಟ್ಟಿ – Kannada News | Govt announces interest rates for various small savings schemes for Q4, 2026fy

ನವದೆಹಲಿ, ಜನವರಿ 1: ಸಾಮಾನ್ಯ ಜನರು ಅತಿಹೆಚ್ಚಾಗಿ ಬಳಸುವ ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯ ಯೋಜನೆಗಳ (Small Savings Schemes) ಬಡ್ಡಿದರ ಪರಿಷ್ಕರಣೆ ಮಾಡಲಾಗಿದೆ. ಈ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ ಆಗಿರುವ 2026ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಗೆ ಪರಿಷ್ಕೃತ ಬಡ್ಡಿದರ ಪ್ರಕಟಿಸಲಾಗಿದೆ. ಹಣಕಾಸು ಸಚಿವಾಲಯದ ಅಡಿಗೆ ಬರುವ ಆರ್ಥಿಕ ವ್ಯವಹಾರಗಳ ಇಲಾಖೆ ಹೊರಡಿಸಿದ ಪ್ರಕಟಣೆ ಪ್ರಕಾರ, ಈ ಕ್ವಾರ್ಟರ್​ನಲ್ಲಿ ಯಾವುದೇ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿಗೆ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿಲ್ಲ. ಹಿಂದೆ ಇದ್ದ ದರಗಳೇ ಮುಂದುವರಿಯಲಿವೆ.

ಆರ್​ಬಿಐನ ರಿಪೋ ದರಗಳು ಇಳಿಕೆಯಾದ ಬಳಿಕ ಅನೇಕ ಬ್ಯಾಂಕುಗಳು ತಮ್ಮ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳಿಗೆ ಬಡ್ಡಿದರ ತಗ್ಗಿಸಿವೆ. ಆದರೆ, ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ತಗ್ಗಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿ: LPG Price: ಕಮರ್ಷಿಯಲ್ ಗ್ಯಾಸ್ ಬೆಲೆ ಭರ್ಜರಿ ಹೆಚ್ಚಳ; 19 ಕಿಲೋ ಸಿಲಿಂಡರ್ ದರ 110.50 ರೂ ಏರಿಕೆ

2026ರ ಜನವರಿಯಿಂದ ಮಾರ್ಚ್​ನ ಕ್ವಾರ್ಟರ್​ನಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ

  1. ಸುಕನ್ಯ ಸಮೃದ್ಧಿ ಸ್ಕೀಮ್: ಬಡ್ಡಿದರ ಶೇ. 8.2
  2. ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಬಡ್ಡಿದರ ಶೇ. 7.1
  3. ಕಿಸಾನ್ ವಿಕಾಸ್ ಪತ್ರ: ಬಡ್ಡಿದರ ಶೇ. 7.5
  4. ರಾಷ್ಟ್ರೀಯ ಉಳಿತಾಯ ಪತ್ರ (ಎನ್​ಎಸ್​ಸಿ): ಶೇ. 7.7 ಬಡ್ಡಿ
  5. ಮಾಸಿಕ ಆದಾಯ ಯೋಜನೆ (ಎಂಐಎಸ್): ಶೇ. 7.4 ಬಡ್ಡಿ
  6. ಪೋಸ್ಟ್ ಆಫೀಸ್ ಆವರ್ತನ ಠೇವಣಿ (ಆರ್​ಡಿ): ಬಡ್ಡಿದರ ಶೇ. 6.7
  7. ಟೈಮ್ ಡೆಪಾಸಿಟ್: ಬಡ್ಡಿದರ ಶೇ. 6.9ರಿಂದ ಶೇ. 7.5
  8. ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್: ಬಡ್ಡಿದರ ಶೇ. 4
  9. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್​ಸಿಎಸ್​ಎಸ್): ಶೇ. 8.2 ಬಡ್ಡಿ
  10. ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್: ಶೇ. 7.5 ಬಡ್ಡಿ

ಸರ್ಕಾರವು ಪ್ರತೀ ಕ್ವಾರ್ಟರ್​ಗೂ ಬಡ್ಡಿದರ ಪರಿಷ್ಕರಿಸುತ್ತದೆ. 2023-24ರ ಕೊನೆಯ ಕ್ವಾರ್ಟರ್​ನಲ್ಲಿ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿತ್ತು. ಅದಾದ ಬಳಿಕ ಎರಡು ವರ್ಷದಿಂದ ಬದಲಾವಣೆ ಆಗಿಲ್ಲ.

ಇದನ್ನೂ ಓದಿ: ಸಿಮ್ ವೆರಿಫಿಕೇಶನ್​ನಿಂದ ಹಿಡಿದು ಕ್ರೆಡಿಟ್ ಸ್ಕೋರ್​ವರೆಗೆ ಜನವರಿ 1ರಿಂದ ಆಗಲಿರುವ ಪ್ರಮುಖ ಹಣಕಾಸು ನಿಯಮ ಬದಲಾವಣೆಗಳು

ಬಡ್ಡಿದರ ಪರಿಷ್ಕರಣೆಗೆಂದೇ ಒಂದು ಸಮಿತಿ

ಪೋಸ್ಟ್ ಆಫೀಸ್ ಸ್ಕೀಮ್ ಅಥವಾ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಎಷ್ಟು ನಿಗದಿ ಮಾಡಬೇಕೆಂದು ನಿರ್ಧರಿಸಲು ಸರ್ಕಾರ ಒಂದು ಸಮಿತಿಯನ್ನೇ ರಚಿಸಿದೆ. ಶ್ಯಾಮಲಾ ಗೋಪಿನಾಥ್ ನೇತೃತ್ವದ ಸಮಿತಿ ಸಲಹೆ ನೀಡಿರುವ ವಿಧಾನದ ಆಧಾರದ ಮೇಲೆ ಬಡ್ಡಿದರ ಪರಿಷ್ಕರಣೆ ಮಾಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ರಾಜಕೀಯ ಪದೋನ್ನತಿ ಆಸೆ ನನಗೂ ಇದೆ’: ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್ – Kannada News | Karnataka Home Minister G Parameshwar on Political Aspirations, Central Funds for Police, and Jail Security

ಬೆಂಗಳೂರು, ಜ.1: ಡಿಸಿಎಂ ಡಿಕೆ ಶಿವಕುಮಾರ್​ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಸಿಎಂ ಕುರ್ಚಿಗಾಗಿ ಗುದ್ದಾಟ ನಡೆಸುತ್ತಿರುವ ವೇಳೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಇದೀಗ ತಾವು ಮುಖ್ಯಮಂತ್ರಿಯಾಗಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ಅವರು ಮಾಧ್ಯಮದ ಮುಂದೆ ವ್ಯಕ್ತಪಡಿಸಿದ್ದಾರೆ. “ರಾಜಕೀಯ ಪದೋನ್ನತಿ ಆಸೆ ನನಗೂ ಇದೆ” ಎಂದು ಹೇಳುವ ಮೂಲಕ ತಮ್ಮ ಹೈಕಮಾಂಡ್‌ನ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಆಂಬಿಷನ್ ಇರಬೇಕು ಎಂದು ತಮ್ಮ ಭಾವನೆಯನ್ನು ಅವರು ಹಂಚಿಕೊಂಡಿದ್ದಾರೆ. ತಾನು ಯಾವಾಗಲೂ ಆಶಾವಾದಿಯಾಗಿರಬೇಕು. ರಾಜಕೀಯಕ್ಕೆ ಸೇರುವಾಗ ಎಂಎಲ್‌ಎ ಆಗಿ, ನಂತರ ಮಂತ್ರಿಯಾಗಿ ಮುಂದುವರಿಯುವ ಆಸೆ ಇರುವುದು ಸಹಜ. ಪ್ರತಿಯೊಂದು ಹಂತದಲ್ಲೂ ಎತ್ತರದ ಸ್ಥಾನಕ್ಕೆ ಹೋಗುವ ಆಲೋಚನೆ ಇರುತ್ತದೆ ಎಂದು ಹೇಳಿದ್ದಾರೆ. ಇದರ ಜತೆಗೆ ತಮ್ಮ ಇಲಾಖೆಯ ಬಗ್ಗೆಯೂ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ 30ಕ್ಕೂ ಹೆಚ್ಚು ಡಿಐಜಿಗಳು ಮತ್ತು ಐಜಿಗಳಿಗೆ ಮುಂಬಡ್ತಿ ನೀಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು. ಅವರೆಲ್ಲರೂ ಉತ್ತಮವಾಗಿ ತರಬೇತಿ ಪಡೆದ ಐಪಿಎಸ್ ಅಧಿಕಾರಿಗಳಾಗಿದ್ದು, ರಾಜ್ಯಕ್ಕೆ ಉತ್ತಮ ಸೇವೆ ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು. ಇಲಾಖೆಯ ಆಧುನೀಕರಣಕ್ಕೆ ಕೇಂದ್ರ ಸರ್ಕಾರದಿಂದ 350 ಕೋಟಿ ರೂಪಾಯಿ ಅನುದಾನ ಮೊದಲ ಬಾರಿಗೆ ಬಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಎಡಿಜಿಪಿ ಮುರುಗನ್ ಅವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಬೆಳಗಾವಿ ಜೈಲಿನಲ್ಲಿ ಗಾಂಜಾ ಎಸೆಯುವಂತಹ ಘಟನೆಗಳ ಬಗ್ಗೆ ಡಿಜಿ ಅಲೋಕ್ ಕುಮಾರ್ ಸ್ಥಳ ಪರಿಶೀಲನೆಗೆ ಭೇಟಿ ನೀಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಆದ ಕಲೆಕ್ಷನ್​ ಎಷ್ಟು? – Kannada News | Namma Metro Records Rupees 3 Crore New Year Earnings

ಬೆಂಗಳೂರು, ಜನವರಿ 01: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ನಮ್ಮ ಮೆಟ್ರೋ ಭಾರಿ ಆದಾಯ ಗಳಿಸಿದೆ. ನಿನ್ನೆ ಒಂದೇ ದಿನದಲ್ಲಿ ಮೆಟ್ರೋಗೆ 3 ಕೋಟಿ 8 ಲಕ್ಷ ರೂ. ಆದಾಯ ಹರಿದುಬಂದಿದೆ ಎಂದು ಮೆಟ್ರೋ ಅಂಕಿಅಂಶಗಳು ತಿಳಿಸಿವೆ. ಸುಮಾರು 8,93,903 ಮಂದಿ ಪ್ರಯಾಣಿಕರು ಮೆಟ್ರೋ ಸೇವೆಗಳನ್ನು ಬಳಸಿಕೊಂಡಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಗೆ ಅನುಕೂಲವಾಗುವಂತೆ ಮೆಟ್ರೋ ಸಂಚಾರ ಸಮಯವನ್ನು ವಿಸ್ತರಿಸಲಾಗಿತ್ತು. ನಿನ್ನೆ ಬೆಳಗ್ಗೆ 5 ಗಂಟೆಯಿಂದ ಇಂದು ಬೆಳಗ್ಗಿನ ಜಾವ 3:10ರವರೆಗೆ ಮೆಟ್ರೋ ಸಂಚಾರ ಸಮಯ ವಿಸ್ತರಿಸಲಾಗಿತ್ತು. ಎಂ.ಜಿ. ರಸ್ತೆ ನಿಲ್ದಾಣ ಹೊರತುಪಡಿಸಿ, ಹಳದಿ, ನೇರಳೆ ಮತ್ತು ಹಸಿರು ಮಾರ್ಗಗಳ ಎಲ್ಲಾ ನಿಲ್ದಾಣಗಳು ಕಾರ್ಯನಿರ್ವಹಿಸಿದ್ದವು. ಪ್ರಮುಖವಾಗಿ ಕೋರಮಂಗಲ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರದಂತಹ ಪ್ರದೇಶಗಳಲ್ಲಿ ಜನರು ಹೊಸ ವರ್ಷಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಮೆಟ್ರೋಗೆ ಅಧಿಕ ಆದಾಯ ಬಂದಿದೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಮೊಲವನ್ನು ಕಂಡುಹಿಡಿಯಬಲ್ಲಿರಾ – Kannada News | Optical Illusion: Find the hidden rabbit in this picture

ಆಪ್ಟಿಕಲ್‌ ಇಲ್ಯೂಷನ್‌Image Credit source: Social Media

ಮೋಜಿನ ಆಟಗಳ ಎಲ್ಲರಿಗೂ ಇಷ್ಟನೇ. ಆದರೆ ಈ ಆಪ್ಟಿಕಲ್‌ ಇಲ್ಯೂಷನ್ (optical illusion) ಸಂಬಂಧಿತ ಚಿತ್ರಗಳನ್ನು ಬಿಡಿಸುವುದು ಕಷ್ಟಕರ. ಹೀಗಾಗಿ ಇಂತಹ ಚಿತ್ರಗಳತ್ತ ಕಣ್ಣಾಯಿಸಿದರೂ ಮೊದಲ ಪ್ರಯತ್ನದಲ್ಲೇ ವಿಫಲರಾಗುವವರೇ ಹೆಚ್ಚು. ಅದಲ್ಲದೇ, ಒಗಟಿನ ಚಿತ್ರಗಳನ್ನು ಬಿಡಿಸುವಾಗ ಹತ್ತು ಜನರಲ್ಲಿ ಒಬ್ಬರಿಗೆ ಮಾತ್ರ ಕ್ಷಣಾರ್ಧದಲ್ಲಿ ಉತ್ತರ ಹೇಳಲು ಸಾಧ್ಯ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಜಾಣತನದಿಂದ ಮರೆ ಮಾಡಲಾಗಿರುವ ಮೊಲವನ್ನು 15 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದರೆ, ಈ ಚಿತ್ರದತ್ತ ಕಣ್ಣಾಯಿಸಿ.

ಈ ಚಿತ್ರದಲ್ಲಿ ಏನು ಕಾಣಿಸುತ್ತದೆ?

ಇಲ್ಯೂಷನ್ ಚಿತ್ರವು  ನಿಮ್ಮ ಮೆದುಳಿಗೆ ವ್ಯಾಯಾಮ ನೀಡುವುದಲ್ಲದೇ, ನಿಮ್ಮ ದೃಷ್ಟಿ ಸಾಮರ್ಥ್ಯ, ಯೋಚನಾ ಸಾಮರ್ಥ್ಯ ಎಷ್ಟಿದೆ ಪರೀಕ್ಷಿಸುತ್ತದೆ. ಇದೇ ತರಹದ ಚಿತ್ರ ಇದಾಗಿದ್ದು, ಇಲ್ಲಿ ಯುವಕ ಯುವತಿಯರು ಹಾಗೂ ಪುಟಾಣಿಗಳು ಸ್ವಚ್ಛತಾ ಕೆಲಸದಲ್ಲಿ ತೊಡಗಿ ಕೊಂಡಿರುವುದನ್ನು ಕಾಣಬಹುದು. ಕೆಲವರು ಕಸವನ್ನು ಗೋಣಿ ಚೀಲಕ್ಕೆ ತುಂಬಿಸುತ್ತಿದ್ದರೆ,  ಇನ್ನು ಕೆಲವರು ಗುಡಿಸಿ ಸ್ವಚ್ಛಗೊಳಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಇಲ್ಲಿ ಮನೆಯ ಮುದ್ದಿನ ಶ್ವಾನವಿರುವುದನ್ನು ಕಾಣಬಹುದು. ಇದೆಲ್ಲದರ ನಡುವೆ ಮೊಲವೊಂದು ಅಡಗಿ ಕುಳಿತಿದ್ದು, ಈ ಪ್ರಾಣಿ ಎಲ್ಲಿದೆ ಎಂದು ಹುಡುಕುವ ಸವಾಲು ಇಲ್ಲಿದೆ.

ಇದನ್ನೂ ಓದಿ: ಒಣಗಿದ ಎಲೆಗಳ ನಡುವೆ ಅಡಗಿ ಕುಳಿತಿರುವ ಹಾವನ್ನು ಗುರುತಿಸಬಲ್ಲಿರಾ

ಮೊಲವನ್ನು ಗುರುತಿಸಲು ಸಾಧ್ಯವಾಯಿತೇ?

ಕೇವಲ ಹದಿನೈದು ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಮೊಲವನ್ನು ಗುರುತಿಸುವುದು ಅಸಾಧ್ಯ. ಆದರೆ ವೀಕ್ಷಣಾ ಸಾಮರ್ಥ್ಯ ಹೊಂದಿದವರು ಮಾತ್ರ ಈ ಒಗಟನ್ನು ಸಲೀಸಾಗಿ ಈಗಾಗಲೇ ಬಿಡಿಸಲು ಸಾಧ್ಯವಾಗಿದೆ. ನಿಮ್ಮ ಕಣ್ಣಿಗೆ ಮೊಲ ಕಾಣಿಸಿಲ್ಲ ಎಂದಾದರೆ ಟೆನ್ಶನ್ ಮಾಡಿಕೊಳ್ಳಬೇಡಿ, ನಾವೇ ಈ ಮುದ್ದಾದ ಪ್ರಾಣಿ ಎಲ್ಲಿದೆ ಎಂದು ಹೇಳುತ್ತೇವೆ. ಈ ಕೆಳಗಿನ ಫೋಟೋವನ್ನು ನೋಡಿ. ಇಲ್ಲಿ ಮೊಲವನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಹಿ ಸುದ್ದಿ ಹಂಚಿಕೊಂಡ ‘ಸು ಫ್ರಮ್ ಸೋ’ ಭಾನು

Source link

Kala Sarpa Dosha: ಜಾತಕದಲ್ಲಿ ಕಾಳ ಸರ್ಪ ದೋಷ ಇದ್ರೆ, ತಪ್ಪದೇ ಈ 5 ದೇವಾಲಯಗಳಿಗೆ ಭೇಟಿ ನೀಡಿ – Kannada News | Kala Sarpa Dosha Remedies: 5 Sacred Temples for Spiritual Relief

ನಿಮ್ಮ ಜಾತಕದಲ್ಲಿ ಕಾಲ ಸರ್ಪ ದೋಷವಿದ್ದರೆ ಚಿಂತಿಸಬೇಕಾಗಿಲ್ಲ. ಕಾಲ ಸರ್ಪ ದೋಷವನ್ನು ತಡೆಗಟ್ಟಲು ಅನೇಕ ಅದ್ಭುತ ದೇವಾಲಯಗಳಿವೆ. ನೀವು ಆ ದೇವಾಲಯಗಳಿಗೆ ಭೇಟಿ ನೀಡಿ ಪೂಜಿಸಿದರೆ, ನೀವು ಕಾಲ ಸರ್ಪ ದೋಷದ ಪರಿಣಾಮಗಳಿಂದ ಮುಕ್ತರಾಗುತ್ತೀರಿ. ಅವುಗಳಲ್ಲಿ, ವಿಶೇಷವಾಗಿ ಐದು ದೇವಾಲಯಗಳಿವೆ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಮತ್ತು ಶ್ರೀ ಕಾಳಹಸ್ತಿಯಂತಹ ಸ್ಥಳಗಳಲ್ಲಿ ವಿಶೇಷ ಪೂಜೆಗಳನ್ನು ಮಾಡುವ ಮೂಲಕ ಮತ್ತು ನವಗ್ರಹ ಪೂಜೆಗಳನ್ನು ಮಾಡುವ ಮೂಲಕ, ನೀವು ದೋಷದ ಪರಿಣಾಮವನ್ನು ಕಡಿಮೆ ಮಾಡಬಹುದು. ಈ ಪ್ರಮುಖ ದೇವಾಲಯಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸರ್ಪದೋಷದಿಂದಾಗಿ, ವೈಯಕ್ತಿಕ ಮತ್ತು ಕೌಟುಂಬಿಕ ಜೀವನದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಮದುವೆಯಲ್ಲಿ ವಿಳಂಬ, ವೈವಾಹಿಕ ಜೀವನದಲ್ಲಿ ಅಡೆತಡೆಗಳು, ಗಂಡ ಮತ್ತು ಹೆಂಡತಿಯ ನಡುವೆ ಅನಗತ್ಯ ತಪ್ಪುಗ್ರಹಿಕೆಗಳು ಮತ್ತು ಜಗಳಗಳು ಹೆಚ್ಚಾಗಿ ಸಂಭವಿಸುತ್ತವೆ. ಕೆಲವರಿಗೆ ಮಕ್ಕಳ ಸಮಸ್ಯೆ ಇರುತ್ತದೆ. ಇನ್ನು ಕೆಲವರು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವು ರೀತಿಯ ಅಸಮಾಧಾನ, ಅಶಾಂತಿ, ವಂಚನೆ ಮತ್ತು ಕೌಟುಂಬಿಕ ತೊಂದರೆಗಳು ಇರುತ್ತವೆ. ಅವರು ಆರೋಗ್ಯ ಸಮಸ್ಯೆಗಳನ್ನು ಸಹ ಎದುರಿಸುತ್ತಾರೆ. ಶಿವ, ಸುಬ್ರಹ್ಮಣ್ಯ ಮತ್ತು ನಾಗ ದೇವತೆಗಳಿಗೆ ವಿಶೇಷ ಪೂಜೆಗಳನ್ನು ಮಾಡುವ ಮೂಲಕ ಕಾಲಸರ್ಪದೋಷವನ್ನು ತಪ್ಪಿಸಬಹುದು.

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ:

ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವು ಕಾಲಸರ್ಪ ದೋಷ ನಿವಾರಣೆಗೂ ಹೆಸರುವಾಸಿಯಾಗಿದೆ. ಈ ದೇವಸ್ಥಾನವು ಕಾರ್ತಿಕೇಯನ ಅವತಾರವಾದ ಸುಬ್ರಹ್ಮಣ್ಯ ಸ್ವಾಮಿಗೆ ಸಮರ್ಪಿತವಾಗಿದೆ. ಸುಬ್ರಹ್ಮಣ್ಯ ಸ್ವಾಮಿಯು ಹಾವು ಅಥವಾ ನಾಗ ದೇವತೆಯ ರೂಪದಲ್ಲಿ ಪೂಜಿಸಲ್ಪಡುತ್ತಾರೆ, ಏಕೆಂದರೆ ಪುರಾಣಗಳ ಪ್ರಕಾರ ವಾಸುಕಿ ಮತ್ತು ಇತರ ಹಾವುಗಳು ಗರುಡನಿಂದ ರಕ್ಷಣೆ ಪಡೆದು ಸುಬ್ರಹ್ಮಣ್ಯ ಸ್ವಾಮಿಯ ಆಶ್ರಯ ಪಡೆದಿದ್ದವು. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರನ್ನು ಹಾವಿನ ರೂಪದಲ್ಲಿ ಪೂಜಿಸಲಾಗುತ್ತದೆ, ಮತ್ತು ಇದು ಕಾಲಸರ್ಪ ದೋಷ ನಿವಾರಣೆಗೆ ಜನಪ್ರಿಯ ತಾಣವಾಗಿದೆ, ಇದರಲ್ಲಿ ಸರ್ಪ ಸಂಸ್ಕಾರವೂ ಸೇರಿದೆ. ಭಕ್ತರು ಸರ್ಪ ದೋಷದ ದುಷ್ಪರಿಣಾಮಗಳಿಂದ ರಕ್ಷಣೆ ಪಡೆಯಲು ವಿಶೇಷ ಪೂಜೆಗಳು ಮತ್ತು ಗುಣಪಡಿಸುವ ಆಚರಣೆಗಳನ್ನು ಮಾಡುತ್ತಾರೆ.

ಶ್ರೀ ಕಾಳಹಸ್ತೀಶ್ವರ ಸ್ವಾಮಿ ದೇವಸ್ಥಾನ:

ಆಂಧ್ರಪ್ರದೇಶ ರಾಜ್ಯದಲ್ಲಿರುವ ಶ್ರೀ ಕಾಳಹಸ್ತಿ ಸ್ವರ ಸ್ವಾಮಿ ದೇವಾಲಯವು ಶಿವನಿಗೆ ಅರ್ಪಿತವಾಗಿದೆ. ಇದು ನಿರ್ಣಾಯಕ ರಾಹು ಮತ್ತು ಕೇತು ಗ್ರಹಗಳೊಂದಿಗಿನ ಸಂಪರ್ಕಕ್ಕೆ ಹೆಸರುವಾಸಿಯಾಗಿದೆ. ಕಾಲ ಸರ್ಪ ದೋಷದ ಪರಿಣಾಮಗಳನ್ನು ಕಡಿಮೆ ಮಾಡಲು ಈ ದೇವಾಲಯದಲ್ಲಿ ರಾಹು-ಕೇತು ಸರ್ಪ ದೋಷ ಪೂಜೆಗಳನ್ನು ನಡೆಸಲಾಗುತ್ತದೆ.

ಮಹಾ ಕಾಲೇಶ್ವರ ದೇವಸ್ಥಾನ:

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾ ಕಾಲೇಶ್ವರ ದೇವಾಲಯವು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಈ ದೇವಾಲಯವು ಕೃಷ್ಣ ಸರ್ಪದ ದುಷ್ಟಶಕ್ತಿಗಳನ್ನು ಕಡಿಮೆ ಮಾಡುವ ಶಕ್ತಿಶಾಲಿ ಸ್ಥಳವೆಂದು ಪರಿಗಣಿಸಲಾಗಿದೆ. ಕೃಷ್ಣ ಸರ್ಪದ ದುಷ್ಟಶಕ್ತಿಗಳನ್ನು ತಪ್ಪಿಸಲು ದೇಶಾದ್ಯಂತದ ಭಕ್ತರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಹಬ್ಬಗಳ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.

ಇದನ್ನೂ ಓದಿ: ಸಾಮಾನ್ಯ ಜನರು ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಬಾರದು ಯಾಕೆ?

ಓಂಕಾರೇಶ್ವರ ದೇವಸ್ಥಾನ:

ಮಧ್ಯಪ್ರದೇಶ ರಾಜ್ಯದ ನರ್ಮದಾ ನದಿಯ ದಡದಲ್ಲಿರುವ ಮತ್ತೊಂದು ಮಹಾನ್ ಯಾತ್ರಾ ಸ್ಥಳವೆಂದರೆ ಓಂಕಾರೇಶ್ವರ ದೇವಾಲಯ. ಇಲ್ಲಿನ ಪ್ರಮುಖ ದೇವರು ಶಿವ. ಈ ದೇವಾಲಯವು ಹಾವಿನ ದುಷ್ಟಶಕ್ತಿಗಳನ್ನು ಗುಣಪಡಿಸಲು ಪೂಜೆಗಳನ್ನು ಮಾಡಲು ಸಹ ಪ್ರಸಿದ್ಧವಾಗಿದೆ. ಹಾವಿನ ದುಷ್ಟಶಕ್ತಿಗಳನ್ನು ಗುಣಪಡಿಸಲು ಪೂಜೆಗಳನ್ನು ಮಾಡಲು ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿಗೆ ಬರುತ್ತಾರೆ.

ತ್ರ್ಯಂಬಕೇಶ್ವರ ದೇವಸ್ಥಾನ:

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಪ್ರಸಿದ್ಧ ಶಿವ ದೇವಾಲಯ ತ್ರ್ಯಂಬಕೇಶ್ವರವು ಕಾಲ ಸರ್ಪ ದೋಷವನ್ನು ಗುಣಪಡಿಸುವಲ್ಲಿಯೂ ಹೆಸರುವಾಸಿಯಾಗಿದೆ. ಸರ್ಪ ದೋಷ ಪೂಜೆಗಳನ್ನು ವೇದ ವಿದ್ವಾಂಸರ ಸಹಾಯದಿಂದ ಇಲ್ಲಿ ನಡೆಸಲಾಗುತ್ತದೆ. ಕಾಲ ಸರ್ಪ ದೋಷದಿಂದ ಬಳಲುತ್ತಿರುವವರು ಈ ಐದು ದೇವಾಲಯಗಳಿಗೆ ಭೇಟಿ ನೀಡಿ ಪರಿಹಾರ ಪೂಜೆಗಳು ಮತ್ತು ಆಚರಣೆಗಳನ್ನು ಮಾಡುವ ಮೂಲಕ ಅದರಿಂದ ಮುಕ್ತಿ ಪಡೆಯಬಹುದು ಎಂದು ವಿದ್ವಾಂಸರು ಹೇಳುತ್ತಾರೆ. ನಾಗ ದೋಷ ಮತ್ತು ಜಾತಕದ ಪರಿಣಾಮವನ್ನು ಪರೀಕ್ಷಿಸುವ ಮೂಲಕ ಮತ್ತು ವಿದ್ವಾಂಸರು ಸೂಚಿಸಿದ ಸೂಕ್ತ ಪರಿಹಾರಗಳನ್ನು ತೆಗೆದುಕೊಳ್ಳುವ ಮೂಲಕ ಜೀವನದಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಬಹುದು ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೂ, ಎಲೆಗಳ ಸಿಂಗಾರ: ಹೊಸ ವರ್ಷದ ಮೊದಲ ದಿನ ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ – Kannada News | Devotees Flock to Mysurus Chamundi Hills for New Years Day Darshan of Goddess Chamundeshwari

ಮೈಸೂರು, ಜನವರಿ 01: ಹೊಸ ವರ್ಷ 2026ರ ಮೊದಲ ದಿನದಂದು ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಸಡಗರ ಸಂಭ್ರಮ ಮನೆಮಾಡಿತ್ತು. ಚಾಮುಂಡಿ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬಂದಿದ್ದು, ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದರು. ದೇವಿಗೆ ವಿಶೇಷ ಅಲಂಕಾರ, ಅಭಿಷೇಕ ಮತ್ತು ಮಂಗಳಾರತಿ ಸೇವೆಗಳನ್ನು ನೆರವೇರಿಸಲಾಯಿತು. ಹೊಸ ವರ್ಷದಂದು ದೇವಿಯನ್ನು ಪೂಜಿಸಿದರೆ ಶುಭವಾಗುತ್ತದೆ ಎಂಬ ನಂಬಿಕೆಯಿಂದಾಗಿ ರಾಜ್ಯದ ಮೂಲೆ ಮೂಲೆಗಳಿಂದ, ಹೊರ ರಾಜ್ಯಗಳಿಂದ ಹಾಗೂ ವಿದೇಶಗಳಿಂದಲೂ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಚಾಮುಂಡಿ ದೇವಿ ಅಲಂಕಾರ ಪ್ರಿಯೆಯಾಗಿರುವ ಕಾರಣ, ಹೂ ಮತ್ತು ಎಲೆಗಳಿಂದ ಅಲಂಕರಿಸಲಾಗಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಮಾರ್ಕ್’ ಹಾಗೂ ‘45’ ಸಿನಿಮಾಗಳು ಒಂದು ವಾರಕ್ಕೆ ಗಳಿಸಿದ್ದು ಎಷ್ಟು? – Kannada News | Mark and 45 Box Office Collection Day 7: Kannada Movies Cross 55 Cr in 1st Week

45-ಮಾರ್ಕ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್

‘ಮಾರ್ಕ್’ ಸಿನಿಮಾ ಹಾಗೂ ‘45’ ಚಿತ್ರಗಳು ತೆರೆಗೆ ಬಂದು ಒಂದು ವಾರ ಕಳೆದಿವೆ. ಏಳು ದಿನಗಳಲ್ಲಿ ಸಿನಿಮಾಗಳು ಉತ್ತಮ ಕಲೆಕ್ಷನ್ ಮಾಡಿವೆ. ಎರಡೂ ಸಿನಿಮಾಗಳಲ್ಲಿ ಸ್ಟಾರ್ ಹೀರೋಗಳು ನಟಿಸಿದ್ದಾರೆ. ಎರಡೂ ಚಿತ್ರಗಳು ಬಿಗ್ ಬಜೆಟ್​​​ನವು. ಈ ಕಾರಣದಿಂದ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಗಳಿಕೆ ಮಾಡುತ್ತಿವೆ. ಈ ಚಿತ್ರಗಳ ಒಟ್ಟಾರೆ ಕಲೆಕ್ಷನ್ ವಿವರ ಇಲ್ಲಿದೆ.

‘ಮಾರ್ಕ್’ ಚಿತ್ರಕ್ಕೆ ಕಿಚ್ಚ ಸುದೀಪ್ ಹೀರೋ. ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಗಿ ಸರಿಯಾಗಿ ಒಂದು ವರ್ಷಕ್ಕೆ ಈ ಚಿತ್ರ ಬಿಡುಗಡೆ ಕಂಡಿದೆ. ಈಗ ‘ಮಾರ್ಕ್’ ಸಿನಿಮಾ ಅಬ್ಬರದ ಗಳಿಕೆ ಮಾಡಿದೆ. ನಾಲ್ಕು ದಿನಕ್ಕೆ ಚಿತ್ರ 35 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ತಂಡ ಮಾಹಿತಿ ನೀಡಿತ್ತು. ಇದಾದ ಬಳಿಕ ಸಿನಿಮಾ ನಿತ್ಯವೂ ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ. ‘ಮಾರ್ಕ್’ ಸಿನಿಮಾದ ಗಳಿಕೆ 40 ಕೊಟಿ ರೂಪಾಯಿ ದಾಟಿದೆ ಎನ್ನಲಾಗುತ್ತಿದೆ. ಸಿನಿಮಾ ರಿಲೀಸ್ ಆಗಿ ವಾರ ಕಳೆದ ಹಿನ್ನೆಲೆಯಲ್ಲಿ ಚಿತ್ರತಂಡ ಗಳಿಕೆ ಬಗ್ಗೆ ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ.

ಇನ್ನು, ‘45’ ಚಿತ್ರದ ಲೆಕ್ಕಾಚಾರದ ಬಗ್ಗೆ ತಂಡದ ಕಡೆಯಿದ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ, sacnilk ಈ ಬಗ್ಗೆ ವರದಿ ಮಾಡಿದೆ. ಈ ವರದಿ ಪ್ರಕಾರ ಸಿನಿಮಾದ ಗ್ರಾಸ್ ಕಲೆಕ್ಷನ್ 15 ಕೋಟಿ ರೂಪಾಯಿ ದಾಟಿದೆ ಎನ್ನಾಗಿದೆ. ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಸಿಕ್ಕರೆ ಅಭಿಮಾನಿಗಳಿಗೂ ಸ್ಪಷ್ಟತೆ ಸಿಕ್ಕಂತಾಗುತ್ತದೆ.

ಇದನ್ನೂ ಓದಿ: ‘ಮಾರ್ಕ್’ ವೀಕ್ಷಿಸುವಾಗ ಕಿಚ್ಚನ ಎದುರೇ ಗಿಲ್ಲಿ ಗೆಲ್ಲಬೇಕು ಎಂದ ಫ್ಯಾನ್ಸ್; ಸುದೀಪ್ ರಿಯಾಕ್ಷನ್ ಏನು?

ಮೂಲಗಳ ಪ್ರಕಾರ ‘45’ ಚಿತ್ರದ ಒಟಿಟಿ ಹಕ್ಕು, ಸ್ಯಾಟಲೈಟ್ ಹಕ್ಕು ಒಳ್ಳೆಯ ಬೆಲೆಗೆ ಮಾರಾಟ ಆಗಿದೆಯಂತೆ. ಹೀಗಾಗಿ, ನಿರ್ಮಾಪಕರಿಗೆ ಸಾಕಷ್ಟು ಹಣ ಹರಿದು ಬಂದಿದೆ. ಇದರಿಂದ ಅವರು ಸೇಫ್ ಆಗಿದ್ದಾರೆ ಎಂದು ಹೇಳಲಾಗುತ್ತಾ ಇದೆ.  ಇಂದು ಹೊಸ ವರ್ಷದ ಪ್ರಯುಕ್ತ ರಜೆ ಇದೆ. ಹೀಗಾಗಿ, ಚಿತ್ರದ ಕಲೆಕ್ಷನ್ ಹೆಚ್ಚುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version