Headlines

ರಾಜಮೌಳಿ ಸಿನಿಮಾದಲ್ಲಿದ್ದರೂ ಬಿಡುವಿಲ್ಲದ ಪೃಥ್ವಿರಾಜ್; ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ದಾಖಲೆ – Kannada News | Even Rajamouli Varanasi Cannot Stop Prithviraj Sukumaran Non Stop Movie Releases

ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ (Prithviraj) ತಮ್ಮ ಬಹುಮುಖ ಪ್ರತಿಭೆಯಿಂದ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಅವರು ಮತ್ತೊಂದು ಅಪರೂಪದ ಸಾಧನೆಗೆ ಕಾರಣವಾಗಿದ್ದಾರೆ. ಎಸ್‌ಎಸ್‌ ರಾಜಮೌಳಿ ಅವರ ಬಿಗ್ ಬಜೆಟ್ ಸಿನಿಮಾ ‘ವಾರಣಾಸಿ’ ಚಿತ್ರದಲ್ಲಿ ನಟಿಸುತ್ತಿದ್ದರೂ ಪೃಥ್ವಿರಾಜ್ ಸಾಲು ಸಾಲು ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದಾರೆ. ರಾಜಮೌಳಿ ಜೊತೆ ಕೆಲಸ ಮಾಡುತ್ತಾ ಬೇರೆ ಚಿತ್ರಗಳಲ್ಲಿ ಸಕ್ರಿಯರಾಗಿರುವ ಏಕೈಕ ನಟ ಇವರಾಗಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡಿತ್ತು ‘ಐ, ನೋಬಡಿ’ ಸಿನಿಮಾ ಇತ್ತೀಚೆಗಷ್ಟೇ ಅಂದರೆ ಜುಲೈ 9 ರಂದು…

Read More

ಗೌತಮ್ ಗಂಭೀರ್ ‘ಬಲಗೈ ಬಂಟ’ ರಾಜೀನಾಮೆ! – Kannada News | Ryan Ten Doechate steps down as India’s assistant coach

ಭಾರತ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೊಶ್ಚೆಟ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜೊತೆಗಿನ ತಮ್ಮ ಎರಡು ವರ್ಷಗಳ ಒಪ್ಪಂದವನ್ನು ನವೀಕರಿಸದಿರಲು ನಿರ್ಧರಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಕಡೆಯಿಂದ ಸಿಕ್ಕ ಭರ್ಜರಿ ಆಫರ್ ಎನ್ನಲಾಗಿದೆ. ಟೀಮ್ ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿರುವ ರಯಾನ್ ಟೆನ್ ಡೊಶ್ಚೆಟ್ ಮುಂಬರುವ IPL 2027…

Read More

Karnataka Weather Forecast: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಶಿವಮೊಗ್ಗ-ಚಿಕ್ಕಮಗಳೂರಲ್ಲೂ ಭಾರೀ ಮಳೆ ಮುನ್ಸೂಚನೆ – Kannada News | Karnataka Weather Forecast July 29: Orange Alert for Coastal Districts, Heavy Rain Forecast for Shivamogga and Chikkamagaluru

ಮಂಗಳೂರಿನಲ್ಲಿ ಬುಧವಾರ ಮುಂಜಾನೆಯೇ ಭಾರಿ ಮಳೆಯಾಗಿದ್ದು, ಯೆಯ್ಯಾಡಿ ಬಳಿ ದಟ್ಟ ಮೋಡ ಕವಿದ ವಾತಾವರಣImage Credit source: tv9 ಬೆಂಗಳೂರು, ಜುಲೈ 29: ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಕರಾವಳಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯ (Weather Forecast) ಪ್ರಕಾರ, ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ…

Read More

ಗುರು ಪೂರ್ಣಿಮಾ ವಿಶೇಷ: ಅಜ್ಞಾನದಿಂದ ಜ್ಞಾನದತ್ತ, ಪ್ರತಿಯೊಬ್ಬರ ಜೀವನದಲ್ಲಿ ಗುರು ಏಕೆ ಮುಖ್ಯ? – Kannada News | Guru Purnima: From Ignorance to Knowledge Why a Guru is Essential for Life’s Journey

ಕತ್ತಲೆ ಎಂಬುದು ಕೇವಲ ಬೆಳಕಿನ ಗೈರುಹಾಜರಿಯಲ್ಲ, ಅದು ದಿಕ್ಕು ತೋಚದ ಸ್ಥಿತಿ. ಆದರೆ ಒಂದು ಸಣ್ಣ ಹಣತೆಯು ಎಂಥಾ ಭೀಕರ ಕತ್ತಲೆಯನ್ನು ಓಡಿಸುವಂತೆ ಗುರುವಿನ ಕೃಪೆಯು ಮಾನವನ ಜೀವನದಲ್ಲಿದ್ದ ಅಜ್ಞಾನವೆಂಬ ಅಂಧಕಾರವನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡುತ್ತದೆ. ‘ಗು’ ಎಂದರೆ ಅಂಧಕಾರ, ‘ರು’ ಎಂದರೆ ಅದನ್ನು ನಿವಾರಿಸುವವನು ಎಂದರ್ಥ. ಒಮ್ಮೆ ಒಬ್ಬ ಶಿಷ್ಯ ತನ್ನ ಗುರುವಿನಲ್ಲಿ ಕೇಳಿದನಂತೆ ‘ಗುರುದೇವ, ಈ ಸಂಸಾರ ಸಾಗರದಲ್ಲಿ ನಾನು ಮುಕ್ತಿ, ಶಾಂತಿಯನ್ನು ಪಡೆಯುವುದು ಹೇಗೆ ಎಂದು’ ಅದನ್ನು ಕೇಳಿದ ಗುರುಗಳು ಮುಗುಳ್ನಕ್ಕು,…

Read More

ನಟಿ ಶಿಲ್ಪಾ ಶೆಟ್ಟಿ ಏಕಾಏಕಿ ಸಿಟ್ಟಾಗಿದ್ದೇಕೆ? ಇಲ್ಲಿದೆ ವಿವರ – Kannada News | Fake Statement on Reservation Goes Viral: Actress Shilpa Shetty Furious Over Fake Posts

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರಿನಲ್ಲಿ ಹರಡಲಾಗುತ್ತಿರುವ ಜಾತಿ ಮೀಸಲಾತಿ ಕುರಿತಾದ ವಿವಾದಾತ್ಮಕ ಪೋಸ್ಟ್‌ಗಳ ವಿರುದ್ಧ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಪೋಸ್ಟ್‌ಗಳಲ್ಲಿ ಉಲ್ಲೇಖಿಸಲಾಗಿರುವ ಮಾತುಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ. ಅದೆಲ್ಲವೂ ಸಂಪೂರ್ಣ ಸುಳ್ಳು ಮತ್ತು ಕಟ್ಟುಕಥೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದಾರಿತಪ್ಪಿಸುವ ಇಂತಹ ವದಂತಿಗಳನ್ನು ಯಾರೂ ನಂಬಬಾರದು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವೈದ್ಯರ ಚಿಕಿತ್ಸೆ ಹೆಸರಲ್ಲಿ ಹರಡಲಾಗಿತ್ತು ಸುಳ್ಳು ಸುದ್ದಿ ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್…

Read More

ಬಾಣಂತಿಯರ ಸರಣಿ ಸಾವಿನ ಘಟನೆಯಿಂದಲೂ ಕಲಿಯದ ಪಾಠ: ಆರೋಗ್ಯ ಇಲಾಖೆ ಮತ್ತೆ ಎಡವಟ್ಟು! – Kannada News | KSMSCL MD Appointment Sparks Row as Government Appoints Non IAS Officer

ಸಾಂದರ್ಭಿಕ ಚಿತ್ರImage Credit source: Karnataka Health Department ಬೆಂಗಳೂರು, ಜುಲೈ 29: ಬಳ್ಳಾರಿಯಲ್ಲಿ (Ballari) ಬಾಣಂತಿಯರ ಸರಣಿ ಸಾವಿನ ಘಟನೆ ಬಳಿಕ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (KSMSCL) ಕಾರ್ಯವೈಖರಿಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದ ಸರ್ಕಾರ, ಇದೀಗ ಅದೇ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಐಎಎಸ್ (IAS) ಅಥವಾ ಕೆಎಎಸ್ ತತ್ಸಮಾನವಲ್ಲದ ಅಧಿಕಾರಿಯನ್ನು ನೇಮಕ ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಈ ಕ್ರಮದ ವಿರುದ್ಧ ವಿವಿಧ ವಲಯಗಳಿಂದ ಆಕ್ಷೇಪ ವ್ಯಕ್ತವಾಗಿದ್ದು, ನೇಮಕಾತಿಯ ಸೂಕ್ತತೆ…

Read More

CWG 2026: ಐದನೇ ದಿನ ಭಾರತಕ್ಕೆ ಮತ್ತೆರಡು ಬೆಳ್ಳಿ ಪದಕ! – Kannada News | CWG 2026: India Bags Two More Silver Medals on Day 5

ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಅದ್ಭುತ ಪ್ರದರ್ಶನ ಮುಂದುವರೆದಿದೆ. ಟ್ರ್ಯಾಕ್ ಅ್ಯಂಡ್ ಫೀಲ್ಡ್ ಹಾಗೂ ವೇಟ್‌ಲಿಫ್ಟಿಂಗ್ ಅಖಾಡದಲ್ಲಿ ಭಾರತಕ್ಕೆ ನಿನ್ನೆ ಎರಡು ಐತಿಹಾಸಿಕ ಬೆಳ್ಳಿ ಪದಕಗಳು ಲಭಿಸಿವೆ. ತಡರಾತ್ರಿ ನಡೆದ ರೋಚಕ ಸ್ಪರ್ಧೆಗಳಲ್ಲಿ ಭಾರತದ ಗುಲ್ವೀರ್ ಸಿಂಗ್ ಮತ್ತು ಹರ್ಜಿಂದರ್ ಕೌರ್ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಈ ಇಬ್ಬರ ಅಮೋಘ ಸಾಧನೆಯಿಂದಾಗಿ ಭಾರತದ ಒಟ್ಟು ಪದಕಗಳ ಸಂಖ್ಯೆ ಇದೀಗ 12ಕ್ಕೆ ತಲುಪಿದೆ. ಟ್ರ್ಯಾಕ್‌ನಲ್ಲಿ ಇತಿಹಾಸ ಬರೆದ ಗುಲ್ವೀರ್ ಸಿಂಗ್ ಮಂಗಳವಾರ…

Read More

Vastu Remedies: ಮನೆಯಲ್ಲಿ ಪದೇ ಪದೇ ಜಗಳ, ಅಶಾಂತಿಯೇ? ಇಲ್ಲಿದೆ ಸರಳ ವಾಸ್ತು ಪರಿಹಾರಗಳು! – Kannada News | Simple Vastu Remedies to Attract Positive Energy and Love in Your Family

ಒತ್ತಡದ ಮತ್ತು ದಣಿದ ದಿನದ ನಂತರ ಪ್ರತಿಯೊಬ್ಬರೂ ಮನೆಗೆ ಮರಳಿ ಪ್ರಶಾಂತತೆಯನ್ನು ಅನುಭವಿಸಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ಎಲ್ಲವೂ ಸರಿಯಾಗಿದ್ದರೂ ಸಹ, ಮನೆಯಲ್ಲಿ ಉದ್ವಿಗ್ನತೆ, ಅನಗತ್ಯ ಜಗಳಗಳು ಮತ್ತು ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಮನೆಯಲ್ಲಿರುವ ವಾಸ್ತು ದೋಷಗಳೂ ಇದಕ್ಕೆ ಕಾರಣವಾಗಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಸಂತೋಷ ಮತ್ತು ಪ್ರೀತಿಯನ್ನು ಮರಳಿ ತರಲು ಸಹಾಯ ಮಾಡುವ ಕೆಲವು ಸರಳ ಮತ್ತು ಪರಿಣಾಮಕಾರಿ ವಾಸ್ತು ಪರಿಹಾರಗಳು ಇಲ್ಲಿವೆ. ಮನೆಯ ಮುಖ್ಯ ದ್ವಾರದ…

Read More

Bengaluru Air Quality: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಗಾಳಿಯ ವಾಯುಗುಣಮಟ್ಟದಲ್ಲಿ ಸುಧಾರಣೆ – Kannada News | Karnataka and Bengaluru AQI Today : Live Air Quality Index Report

ರಾಜ್ಯದ ವಾಯು ಮಾಲಿನ್ಯದಲ್ಲಿ ಭಾರಿ ಸುಧಾರಣೆ! ಬೆಂಗಳೂರು, ಜುಲೈ 29: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಆಶಾದಾಯಕವಾಗಿದೆ. ಮಳೆಗಾಲದ ಪರಿಣಾಮವಾಗಿ ಗಾಳಿಯಲ್ಲಿನ ಧೂಳು ಮತ್ತು ಮಾಲಿನ್ಯಕಾರಕ ಕಣಗಳು ಕಡಿಮೆಯಾಗಿದ್ದು, ಸಿಲಿಕಾನ್ ಸಿಟಿಯ ಜನತೆಗೆ ಸ್ವಚ್ಛ ಗಾಳಿ ಲಭ್ಯವಾಗಿದೆ. ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 40 ರಿಂದ 55ರ ಆಜುಪಾಜಿನಲ್ಲಿದ್ದು,‘ಸಾಧಾರಣ’ (Moderate)ಮಟ್ಟದಲ್ಲಿದೆ. ನಗರದ ಪ್ರಮುಖ ಭಾಗಗಳಾದ ಬನಶಂಕರಿ, ಬನಸವಾಡಿ, ಜಯನಗರ ಹಾಗೂ ಹೆಬ್ಬಾಳ ಪ್ರದೇಶಗಳಲ್ಲಿ ಎಕ್ಯೂಐ 50ಕ್ಕಿಂತ…

Read More

ಮೆಲಾನಿಯಾರನ್ನು ಎಲ್ಲಿ ಕೊಲ್ಲಬೇಕು?: ಟ್ರಂಪ್ ಪತ್ನಿ, ಮಗನಿಗೆ ಕೊಲೆ ಬೆದರಿಕೆ ಹಾಕಿದ ಇರಾನ್, ಭದ್ರತೆ ತೀವ್ರ ಹೆಚ್ಚಳ – Kannada News | Iran Threatens Melania, Barron Trump with Death Video, Security Heightened

ವಾಷಿಂಗ್ಟನ್, ಜುಲೈ 29: ಅಮೆರಿಕ ಮತ್ತು ಇರಾನ್(Iran) ನಡುವೆ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ಟೆಹ್ರಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಹಾಗೂ ಪುತ್ರ ಬ್ಯಾರನ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಆಘಾತಕಾರಿ ಬೆದರಿಕೆ ವೀಡಿಯೊ ಒಂದನ್ನು ಬಿಡುಗಡೆ ಮಾಡಿದೆ. “ವೇರ್ ಟು ಕಿಲ್ ಮೆಲಾನಿಯಾ” ಮತ್ತು “ಹೌ ಟು ಕಿಲ್ ಮೆಲಾನಿಯಾ ಟ್ರಂಪ್” ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಈ ವಿಡಿಯೋದಲ್ಲಿ, ಟ್ರಂಪ್ ಕುಟುಂಬದ ವಿರುದ್ಧ ಇರಾನ್ ನಡೆಸುತ್ತಿರುವ ಮಾನಸಿಕ ಹಾಗೂ ಡಿಜಿಟಲ್ ದಾಳಿಯ ತೀವ್ರತೆಯನ್ನು…

Read More