ಹೆಪಟೈಟಿಸ್‌ನಿಂದ ಲಿವರ್ ರಕ್ಷಿಸಿಕೊಳ್ಳಲು ಡಾ. ಸಂಹಿತಾ ಉಲ್ಲೋಡ್ ನೀಡಿರುವ ಟಿಪ್ಸ್! – Kannada News | Hepatitis Symptoms, Risk Factors and Liver Protection Tips
ಯಕೃತ್ತು (ಲಿವರ್) ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ಆಹಾರದ ಜೀರ್ಣಕ್ರಿಯೆ, ವಿಷಕಾರಿ ಪದಾರ್ಥಗಳ ನಿವಾರಣೆ, ಶಕ್ತಿಯ ಸಂಗ್ರಹಣೆ ಹಾಗೂ ಅನೇಕ ಜೀವಸತ್ವಗಳ ಚಯಾಪಚಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಮುಖ ವ್ಯಾಧಿ ಎಂದರೆ ಅದು ಹೆಪಟೈಟಿಸ್; ಯಕೃತ್ತಿನ ಉರಿಯೂತ (inflammation of the Liver). ಇದು ಹೆಪಟೈಟಿಸ್ ವೈರಸ್(hepatitis A,B,CD and E) ಮೂಲಕ ಹರಡುತ್ತದೆ. ಜೊತೆಗೆಅತಿಯಾದ ಮಧ್ಯಪಾನ, ಕೆಲವು ಔಷಧಗಳ ದುಷ್ಪರಿಣಾಮ, ಯಕೃತ್ತಿನಲ್ಲಿ ಸೇರುವ ಕೊಬ್ಬು (fatty liver) ಅಥವಾ…