ಮಗಳಿಗೆ ಗಾಳ, ಅಮ್ಮನಿಗೆ ಬೆಂಕಿ: ತಲೆಮರೆಸಿಕೊಂಡಿದ್ದ ಆಸಾಮಿ ಅಂದರ್ – Kannada News | Bengaluru: Man Arrested for Setting Mother on Fire After She Refused to Let Him Marry His Daughter
ಬೆಂಗಳೂರು, ಡಿಸೆಂಬರ್ 29: ಪುತ್ರಿಯನ್ನು ಮದುವೆ ಮಾಡಿಕೊಡಲಿಲ್ಲವೆಂಬ ಕಾರಣಕ್ಕೆ ಆಕೆಯ ತಾಯಿಗೆ ವ್ಯಕ್ತಿಯೋರ್ವ ಬೆಂಕಿ (fire) ಹಚ್ಚಿರುವಂತಹ ಘಟನೆ ಬೆಂಗಳೂರಿನ ಬಸವೇಶ್ವರ ನಗರದ ಭೋವಿ ಕಾಲೋನಿಯಲ್ಲಿ ನಡೆದಿದೆ. ಗೀತಾ ಮೃತ ಮಹಿಳೆ. ಮುತ್ತು ಅಭಿಮನ್ಯು ಬೆಂಕಿ ಹಚ್ಚಿದ ವ್ಯಕ್ತಿ. ಸದ್ಯ ಆರೋಪಿ ಮುತ್ತು ಅಭಿಮನ್ಯುವನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ (Arrested). ಇನ್ನು ಗೀತಾ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮಗಳನ್ನ ಮದುವೆ ಮಾಡಿಕೊಡು ಅಂತ ತಾಯಿಗೆ ಬೆಂಕಿ ಹಾಕಿದ್ದ ಕಿರಾತಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಕಳೆದ ಮಂಗಳವಾರ…