ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕ್ಯಾಪ್ಟನ್ ಕೊಟ್ಟ ಶಿಕ್ಷೆ ಘನಘೋರ – Kannada News | Gilli Nata And Ashwini Gowda Fights erupted in Bigg Boss Kannada

ಅಶ್ವಿನಿ ಹಾಗೂ ಗಿಲ್ಲಿ ನಡುವಿನ ಸಂಬಂಧ ಆಗಾಗ ಹಳಸುತ್ತದೆ, ಮತ್ತೆ ಸರಿ ಆಗುತ್ತದೆ. ಇತ್ತೀಚೆಗೆ ಇಬ್ಬರೂ ಒಂದಾಗಿದ್ದರು. ಈಗ ಕೆಲಸದ ವಿಷಯಕ್ಕೆ ಫೈಟ್ ನಡೆದಿದೆ. ಅಶ್ವಿನಿ ಅವರು ಅಡುಗೆ ಮನೆ ಕ್ಲೀನ್ ಮಾಡೋ ಕೆಲಸ ಮಾಡಿಲ್ಲ. ಇದನ್ನು ಪ್ರಸ್ತಾಪಿಸಿದಾಗ ‘ನಾನು ಮಾಡಲ್ಲ’ ಎಂದು ನೇರವಾಗಿ ಹೇಳಿದರು. ಈ ವೇಳೆ ಜಗಳ ನಡೆದಿದೆ. ಆ ಬಳಿಕ ಗಿಲ್ಲಿ ಅವರು ‘ರಾತ್ರಿ ನಿದ್ರಿಸೋಕೆ ಕೊಡಲ್ಲ’ ಎಂದು ಹೇಳಿದರು. ಅದರಂತೆಯೇ ಅವರು ನಡೆದುಕೊಂಡಿದ್ದಾರೆ. ರಾತ್ರಿ ಪಾತ್ರೆ ಶಬ್ದ ಮಾಡಿ ಅಶ್ವಿನಿಗೆ ನಿದ್ದೆ ಮಾಡೋಕೆ ಬಿಟ್ಟಿಲ್ಲ. ಈ ಘನಘೋರ ಶಿಕ್ಷೆಗೆ ಅಶ್ವಿನಿ ನಲುಗಿ ಹೋಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಕುಸಿತ, ಸಿಲ್ಕ್ ಬೋರ್ಡ್–ವೈಟ್‌ಫೀಲ್ಡ್‌ನಲ್ಲಿ ಉಸಿರಾಡಲೂ ಕಷ್ಟ – Kannada News | Bangalore Air Pollution Crisis: Bengaluru, Other district of karnataka face severe Air pollution

ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್‌ನಲ್ಲಿ ಅತೀ ಕಳಪೆ ಏರ್

ಬೆಂಗಳೂರು, ಡಿಸೆಂಬರ್ 29: ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಗಾಳಿಯ ಗುಣಮಟ್ಟ ಕುಸಿಯುತ್ತಿದೆ. ವಾಯು ಗುಣಮಟ್ಟ (Bengaluru Air Quality) ಸೂಚ್ಯಂಕದ ಪ್ರಕಾರ (AQI) ಇಂದಿನ ಗಾಳಿಯ ಗುಣಮಟ್ಟ 173 ಇದ್ದು, ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಕಳೆದ 4 ವರ್ಷಗಳಲ್ಲಿ ಈ ವರ್ಷವೇ ಗಾಳಿಯ PM (Particulate Matter) ಪ್ರಮಾಣ ಸಹ ಮಿತಿ ಮೀರಿದೆ. ಇಂದೂ ಸಹ PM2.5 86 ಇದ್ದರೆ, PM10 119 ಇದೆ. ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಇಂದಿನ ಏರ್ ಕ್ವಾಲಿಟಿ ಸುಧಾರಿಸಿದೆ ಎನಿಸಿದರೂ WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ.

ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್‌ನಲ್ಲಿ ಅತೀ ಕಳಪೆ ಏರ್

ಬೆಂಗಳೂರಿನ ಏರ್ ಕ್ವಾಲಿಟಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಾಳಿಯ ಗುಣಮಟ್ಟ 150 ದಾಟಿದರೆ ಶ್ವಾಸಕೋಶ ಕಾಯಿಲೆಯ ಜೊತೆಗೆ ಹೃದಯ ಸಂಬಂಧಿ ರೋಗಗಳೂ ಬರಬಹುದೆಂದು ತಜ್ಞರು ಹೇಳುತ್ತಾರೆ. ಬೆಂಗಳೂರಿನಲ್ಲಿ 1.2 ಕೋಟಿ ದಾಟಿರುವ ವಾಹನಗಳಿಂದ ಹೊರಸೂಸುವ ಹೊಗೆ ನಗರದ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿದೆ. ಸಂಚಾರ ದಟ್ಟಣೆ ಹೆಚ್ಚಿರುವ ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವು ನಗರದ ಸರಾಸರಿಗಿಂತ 30% ಹೆಚ್ಚು ದಾಖಲಾಗುತ್ತಿದೆ.

PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –173
  • ಮಂಗಳೂರು-136
  • ಮೈಸೂರು – 174
  • ಬೆಳಗಾವಿ – 142
  • ಕಲಬುರ್ಗಿ – 107
  • ಶಿವಮೊಗ್ಗ – 73
  • ಬಳ್ಳಾರಿ – 185
  • ಹುಬ್ಬಳ್ಳಿ- 96
  • ಉಡುಪಿ –110
  • ವಿಜಯಪುರ –117

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿವಾದಗಳ ಮಧ್ಯೆ ಅಕ್ಷಯ್ ಖನ್ನಾ ಪರ ಬ್ಯಾಟ್ ಬೀಸಿದ ಬಾಲಿವುಡ್ ಹೀರೋ – Kannada News | Akshaye Khanna Drishyam 3 Controversy: Arshad Warsi Reveals Truth About His Nature

‘ಧುರಂಧರ್’ ನಟ ಅಕ್ಷಯ್ ಖನ್ನಾ (Akshaye Khanna) ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ರೆಹಮಾನ್ ದಕೈತ್ ಪಾತ್ರದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದರು. ಹಲವು ವರ್ಷಗಳ ನಂತರ ಅಕ್ಷಯ್ ಅವರ ಯಶಸ್ಸನ್ನು ನೋಡಿ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ. ಅಕ್ಷಯ್ ಅವರಿಗೆ ಹೆಚ್ಚಿನ ಚಿತ್ರಗಳು ಸಿಕ್ಕರೆ ಮತ್ತೆ ಅವರನ್ನು ದೊಡ್ಡ ಪರದೆಯ ಮೇಲೆ ನೋಡಬಹುದು ಎಂಬ ಬಯಕೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಅವರು ಮಾಡಿಕೊಂಡ ವಿವಾದದ ಬಗ್ಗೆ ಚರ್ಚೆ ಶುರುವಾಗಿದೆ.

‘ದೃಶ್ಯಂ 3′ ಚಿತ್ರದಿಂದಾಗಿ ಅಕ್ಷಯ್ ಖನ್ನಾ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಸಂಭಾವನೆಯಿಂದಾಗಿ ಅವರು ಈ ಚಿತ್ರದಿಂದ ಇದ್ದಕ್ಕಿದ್ದಂತೆ ಹಿಂದೆ ಸರಿದರು. ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಅವರು ಅಕ್ಷಯ್ ವಿರುದ್ಧ ನೇರ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಯಶಸ್ಸಿನ ಅಮಲು ಅವರ ತಲೆಗೆ ಏರಿದೆ ಎಂದು ಅವರು ಟೀಕಿಸಿದ್ದಾರೆ. ಈ ವಿವಾದದ ನಡುವೆ, ನಟ ಅರ್ಷದ್ ವಾರ್ಸಿ ಈಗ ಅಕ್ಷಯ್ ಅವರ ಸ್ವಭಾವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

‘ದಿ ಲಲ್ಲಂಟಾಪ್’ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ, ಅಕ್ಷಯ್ ಜೊತೆ ಕೆಲಸ ಮಾಡಿದ ಅನುಭವದ ಬಗ್ಗೆ ಅರ್ಷದ್ ಅವರನ್ನು ಕೇಳಲಾಯಿತು . ಇದಕ್ಕೆ ಅವರು, ‘ಅಕ್ಷಯ್ ತುಂಬಾ ಹಿರಿಯರು. ಅವರು ಮೊದಲಿನಿಂದಲೂ ನಟನಾಗಿ ತುಂಬಾ ಒಳ್ಳೆಯವರು. ಅದರಲ್ಲಿ ಯಾರಿಗೂ ಸಂದೇಹವಿಲ್ಲ. ಆದರೆ ಅವರು ತಮ್ಮದೇ ಆದ ಜಗತ್ತಿನಲ್ಲಿ ಮುಳುಗಿದ್ದಾರೆ. ಅವರು ಬೇರೆಯವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವರಿಗೆ ಬೇರೆಯದೇ ಜೀವನವಿದೆ. ನೀವು ನನ್ನ ಬಗ್ಗೆ ಏನು ಯೋಚಿಸುತ್ತೀರಿ, ಏನು ಯೋಚಿಸುವುದಿಲ್ಲ ಎಂಬುದು ನಿಮ್ಮ ಸಮಸ್ಯೆ, ನನ್ನದಲ್ಲ. ಇದು ಅವರ ಅಭಿಪ್ರಾಯ. ಅವರು ತಮ್ಮದೇ ಆದ ಲೆಕ್ಕಾಚಾರದ ಪ್ರಕಾರ ತಮ್ಮ ಜೀವನವನ್ನು ನಡೆಸುತ್ತಾರೆ’ ಎಂದು ಹೇಳಿದರು.

‘ಅವರಿಗೆ ಯಾವುದೇ ಪಿಆರ್ ಅಗತ್ಯವಿಲ್ಲ. ಅವರು ಮೊದಲಿನಿಂದಲೂ ಹೀಗೆಯೇ ಇದ್ದಾರೆ. ಅಕ್ಷಯ್ ಅವರ ಜೀವನದಲ್ಲಿ ಯಾವಾಗಲೂ ಹೀಗೆಯೇ ಇದೆ’ ಎಂದು ಅರ್ಷದ್ ವಿವರಿಸಿದರು. ಅಕ್ಷಯ್ ಮತ್ತು ಅರ್ಷದ್ ‘ಹಲ್ಚಲ್’ ಮತ್ತು ‘ಶಾರ್ಟ್‌ಕಟ್’ ನಂತಹ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಅಕ್ಷಯ್ ಖನ್ನಾ ಬದಲಿಗೆ ‘ಪಾತಾಳ್ ಲೋಕ್’ ನಟನಿಗೆ ‘ದೃಶ್ಯಂ 3’ ಅವಕಾಶ

ಏತನ್ಮಧ್ಯೆ, ನಟ ಜೈದೀಪ್ ಅಹ್ಲಾವತ್ ‘ದೃಶ್ಯಂ 3’ ನಲ್ಲಿ ಅಕ್ಷಯ್ ಖನ್ನಾ ಬದಲಿಗೆ ನಟಿಸಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಂದಿನ ವರ್ಷದಿಂದ ಪ್ರಾರಂಭವಾಗಲಿದೆ. ಅಕ್ಷಯ್‌ಗೆ ಕಾನೂನು ನೋಟಿಸ್ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಗ್ಲೆನ್ ಮ್ಯಾಕ್ಸ್​ವೆಲ್ – Kannada News | Glenn Maxwell has completed 150 Sixes in BBL with 104 Meter Six

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್​ ಲೀಗ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಅಬ್ಬರಿಸಿದ್ದಾರೆ. ಮನುಕಾ ಓವಲ್ ಮೈದಾನದಲ್ಲಿ ನಡೆದ ಸಿಡ್ನಿ ಥಂಡರ್ ವಿರುದ್ಧದ ಪಂದ್ಯದಲ್ಲಿ ಮೆಲ್ಬೋರ್ನ್​ ಸ್ಟಾರ್ಸ್​ ಪರ ಕಣಕ್ಕಿಳಿದ ಮ್ಯಾಕ್ಸಿ 20 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 39 ರನ್ ಬಾರಿಸಿದ್ದಾರೆ.

ಅದರಲ್ಲೂ ಡೇನಿಯಲ್ ಸ್ಯಾಮ್ಸ್ ಎಸೆತದಲ್ಲಿ 104 ಮೀಟರ್ ಸಿಕ್ಸ್ ಸಿಡಿಸುವ ಮೂಲಕ ಮ್ಯಾಕ್ಸ್​ವೆಲ್ ವಿಶೇಷ ಮೈಲುಗಲ್ಲು ದಾಟಿದ್ದಾರೆ. ಅದು ಕೂಡ ಸಿಕ್ಸರ್​ ಸರದಾರನಾಗಿ ಎಂಬುದು ವಿಶೇಷ. ಅಂದರೆ ಈ ಪಂದ್ಯದಲ್ಲಿ 2 ಸಿಕ್ಸ್​ ಸಿಡಿಸುವುದರೊಂದಿಗೆ ಮ್ಯಾಕ್ಸಿ ಬಿಗ್ ಬ್ಯಾಷ್ ಲೀಗ್​ನಲ್ಲಿ 150 ಸಿಕ್ಸರ್ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ 220 ಸಿಕ್ಸ್ ಸಿಡಿಸಿರುವ ಕ್ರಿಸ್ ಲಿನ್ ಅಗ್ರಸ್ಥಾನದಲ್ಲಿದ್ದಾರೆ. ಇದೀಗ 151 ಸಿಕ್ಸರ್​ಗಳೊಂದಿಗೆ ಗ್ಲೆನ್ ಮ್ಯಾಕ್ಸ್​ವೆಲ್ ದ್ವಿತೀಯ ಸ್ಥಾನಕ್ಕೇರಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಥಂಡರ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 128 ರನ್​ಗಳು ಮಾತ್ರ. ಈ ಗುರಿಯನ್ನು ಮೆಲ್ಬೋರ್ನ್​ ಸ್ಟಾರ್ಸ್ ತಂಡವು 14 ಓವರ್​ಗಳಲ್ಲಿ ಚೇಸ್ ಮಾಡಿ 9 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ.

 

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಇನ್ನೂ ಮೂರು ದಿನ ಒಣ ಹವೆ, ಬೆಂಗಳೂರಿನಲ್ಲಿ ಶೀತದಬ್ಬರ – Kannada News | Bengaluru temperature: misty weather in bengaluru, Dry weather all over karnataka,

ರಾಜ್ಯದಲ್ಲಿ ಇನ್ನೂ ಮೂರು ದಿನ ಒಣ ಹವೆ, ಬೆಂಗಳೂರಿನಲ್ಲಿ ಶೀತದಬ್ಬರ

ಬೆಂಗಳೂರು, ಡಿಸೆಂಬರ್ 29: ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ (Weather Forecast) ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ವರ್ಷಾಂತ್ಯದ ವರೆಗೂ ರಾಜ್ಯದಲ್ಲಿ ಒಣ ಹವೆಯೇ ಇರಲಿದ್ದು, ಹೊಸ ವರ್ಷಕ್ಕೆ ವರುಣಾರ್ಭಟವಿರಬಹುದೆಂದು ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣಹವೆ?

ಇಂದಿನಿಂದ ಮೂರು ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಮಂಜು

ಇಂದು ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 28°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸ್ಮೃತಿ ಮಂಧಾನ ವೇಗಕ್ಕೆ ವಿಶ್ವ ದಾಖಲೆಯೇ ಉಡೀಸ್ – Kannada News | Smriti Mandhana breaks Mithali Raj’s world record

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಅತೀ ವೇಗವಾಗಿ ರನ್​ಗಳಿಸುವ ಮೂಲಕ. ಈ ವೇಗದೊಂದಿಗೆ ಸ್ಮೃತಿ ಮುರಿದಿರುವುದು ಟೀಮ್ ಇಂಡಿಯಾ ಲೆಜೆಂಡ್ ಮಿಥಾಲಿ ರಾಜ್ ಅವರ ದಾಖಲೆಯನ್ನು ಎಂಬುದು ವಿಶೇಷ.

Source link

ಉತ್ತರ ಕನ್ನಡಕ್ಕೆ ಸಿಹಿ ಸುದ್ದಿ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್: ಮೆಗಾ ಟೂರಿಸಂ ಪ್ಲಾನ್, ನದಿ ಜೋಡಣೆಗೆ ಗ್ರೀನ್ ಸಿಗ್ನಲ್ – Kannada News | Karavali Utsav in Karwar: DCM DK Shivakumar Announces Tourism Hub, Hospital and River Link Projects to Uttara Kannada

ಕಾರವಾರ, ಡಿಸೆಂಬರ್ 29: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಭಾನುವಾರ ಭಾಗವಹಿಸಿದರು. ಇದೇ ಸಮಾರಂಭದಲ್ಲಿ ಉತ್ತರ ಕನ್ನಡಕ್ಕೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಮಂಗಳೂರು, ಉಡುಪಿ ಮತ್ತು ಕಾರವಾರದ ಸುಮಾರು 300 ಕಿಮೀ ಉದ್ದದ ಕರಾವಳಿ ತೀರವನ್ನು ಪ್ರವಾಸೋದ್ಯಮದ ಹಬ್ ಆಗಿ ಪರಿವರ್ತಿಸಲು ಸರ್ಕಾರ ಹೊಸ ಟೂರಿಸಂ ಪಾಲಿಸಿ ಜಾರಿಗೆ ತರಲಿದೆ ಎಂದು ತಿಳಿಸಿದ್ದಾರೆ.

ಅರಣ್ಯ ಅತಿಕ್ರಮಣ ವಿಚಾರದಲ್ಲಿ, 3 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡವರು ಮತ್ತು ರೈತರನ್ನು ಒಕ್ಕಲೆಬ್ಬಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ಇನ್ನು ಉತ್ತರ ಕನ್ನಡ ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 210 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಿದ್ದು, ಆಧುನಿಕ ಸೌಲಭ್ಯವುಳ್ಳ ಹೊಸ ಕಟ್ಟಡ ನಿರ್ಮಿಸುವುದಾಗಿ ಘೋಷಿಸಿದರು. ಇದೆ ವೇಳೆ ಶರಾವತಿ ಯೋಜನೆ ಮತ್ತು ವರದಾ ಹಾಗೂ ಬೇಡ್ತಿ ನದಿ ಜೋಡಣೆಗೆ ಡಿಪಿಆರ್ ಸಿದ್ಧಪಡಿಸಲು ಚೀಫ್ ಇಂಜಿನಿಯರ್‌ಗೆ ನೀಡಿರುವುದಾಗಿ ನೀಡಿರುವುದಾಗಿ ತಿಳಿಸಿದರು.

ಉಳಿಪೆಟ್ಟು ಬೀಳದೆ ಯಾವುದೇ ಶಿಲೆ ಮುೂರ್ತಿಯಾಗಲ್ಲ ಎಂದ ಉಪಮುಖ್ಯಮಂತ್ರಿಗಳು, ಇಂದು ನಾಯಕರಾಗಲು ಬಹಳಷ್ಟು ಕಷ್ಟ ಪಡಬೇಕಿದೆ ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

16 ಲಕ್ಷ ರೂ. ಮೌಲ್ಯದ ಶ್ರೀಗಂಧದಿಂದ ಮಾಡಿದ ವಿಗ್ರಹ ಉಡುಗೊರೆ!

ಕರಾವಳಿ ಉತ್ಸವದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ, ಜಿಲ್ಲಾಡಳಿತ ವತಿಯಿಂದ ಶಾಸಕ ಸತೀಶ್ ಸೈಲ್, ವಿಷ್ಣುವಿನ ವಿಶ್ವರೂಪ ದರ್ಶನ ಬಿಂಬಿಸುವ 16 ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧದ ವಿಗ್ರಹ ಉಡುಗೊರೆಯಾಗಿ ನೀಡಿದರು. ಡಿಸಿಎಂ ಅವರ ಮನಸ್ಸಿನಲ್ಲಿರುವ ಎಲ್ಲಾ ಬಯಕೆ ಈಡೇರಲೆಂದು ಆಶಿಸುವುದಾಗಿ ತಿಳಿಸಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಬತ್ತಳಿಕೆಯಲ್ಲಿ ಸಿಎಂ ಕುರ್ಚಿ ತೀರ್ಮಾನ: ಸಂಕ್ರಾಂತಿ ಬಳಿಕ ರಾಜಕೀಯ ಕ್ರಾಂತಿ?

ಕರಾವಳಿ ಉತ್ಸವದಲ್ಲಿ ಖ್ಯಾತ ಗಾಯ ದಲೇರ್ ಮೆಹಂದಿ ಅವರ ಕಾರ್ಯಕ್ರಮ ಮನಸೂರೆಗೊಂಡಿತು. ಡಿಸಿಎಂ ಡಿಕೆಶಿ ಕೂಡ ರಿಲ್ಯಾಕ್ಸ್‌ ಆಗಿ ಕಾರ್ಯಕ್ರಮ ವೀಕ್ಷಿಸಿದರು. ಒಟ್ಟಿನಲ್ಲಿ, ಕರಾವಳಿಗೆ ಉಪಮುಖ್ಯಮಂತ್ರಿ 3 ಮಹತ್ವದ ಘೋಷಣೆಗಳನ್ನು ಮಾಡಿದ್ದು, ಜಿಲ್ಲೆಯ ಜನರಿಗೆ ಹೊಸ ಆಶಾಭಾವನೆ ಮೂಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:59 am, Mon, 29 December 25

Source link

ಯಾವುದೇ ನಿರ್ದಿಷ್ಟ ಗಡುವಿಲ್ಲ, ಉಕ್ರೇನ್ ಯುದ್ಧ ಕೊನೆಗೊಳಿಸುವತ್ತ ಅಷ್ಟೇ ಗಮನ: ಟ್ರಂಪ್ – Kannada News | Trump Says No Fixed Timeline, Emphasises Ending Ukraine Conflict

ವಾಷಿಂಗ್ಟನ್, ಡಿಸೆಂಬರ್ 29: ಉಕ್ರೇನ್(Ukraine) ಯುದ್ಧ ಕೊನೆಗೊಳಿಸುವ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಜತೆ ಭಾನುವಾರ ಮಾತುಕತೆ ನಡೆಸಿದರು. ಈ ಮಾತುಕತೆ ಬಳಿಕ ಡೊನಾಲ್ಡ್​ ಟ್ರಂಪ್ ಮಾತನಾಡಿ, ಯುದ್ಧ ನಿಲ್ಲಿಸಲು ಯಾವುದೇ ನಿರ್ದಿಷ್ಟ ಗಡುವಿಲ್ಲ, ಉಕ್ರೇನ್ ಯುದ್ಧ ಕೊನೆಗೊಳಿಸುವತ್ತ ಗಮನ ಎಂದು ಹೇಳಿದ್ದಾರೆ.

ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸುವ ಕುರಿತು ನಿರ್ಣಾಯಕ ಮಾತುಕತೆಗಾಗಿ ಅಮೆರಿಕದ ಡೊನಾಲ್ಡ್ ಟ್ರಂಪ್ ಭಾನುವಾರ ತಮ್ಮ ಫ್ಲೋರಿಡಾ ಎಸ್ಟೇಟ್‌ಗೆ ಉಕ್ರೇನ್‌ನ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಬರಮಾಡಿಕೊಂಡಿದ್ದರು.

ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ರಾಜತಾಂತ್ರಿಕ ಪ್ರಯತ್ನಗಳು ಅಂತಿಮ ಹಂತಗಳಲ್ಲಿವೆ ಎಂದು ಟ್ರಂಪ್ ಹೇಳಿದ್ದಾರೆ. ಇಲ್ಲದಿದ್ದರೆ, ಇದು ದೀರ್ಘಕಾಲದವರೆಗೆ ಮುಂದುವರಿಯುತ್ತದೆ ಎಂದು ಟ್ರಂಪ್ ಹೇಳಿದರು, ಈ ಪ್ರಕ್ರಿಯೆಗೆ ಅವರು ಯಾವುದೇ ಗಡುವನ್ನು ಹೊಂದಿಲ್ಲ ಎಂದರು.

ಮತ್ತಷ್ಟು ಓದಿ: ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿ ಹುಬ್ಬೇರಿಸಿದ ಡೊನಾಲ್ಡ್ ಟ್ರಂಪ್; ಚೀನಾ ಜೊತೆ ಅಮೆರಿಕ ಸೂಪರ್ ಡೀಲ್

ಝೆಲೆನ್ಸ್ಕಿಯೊಂದಿಗಿನ ಭೇಟಿಗೆ ಕೆಲವೇ ಗಂಟೆಗಳ ಮೊದಲು ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಫಲದಾಯಕ ಮಾತುಕತೆ ನಡೆಸಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಉಕ್ರೇನ್‌ನಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಪೂರ್ವ ಡಾನ್‌ಬಾಸ್ ಪ್ರದೇಶದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ರಷ್ಯಾ ಕೈವ್‌ಗೆ ಒತ್ತಾಯಿಸಿತು.

ಉಕ್ರೇನ್‌ನ ಭದ್ರತೆಯನ್ನು ಖಾತರಿಪಡಿಸಲು ಬಲವಾದ ಒಪ್ಪಂದವಿರುತ್ತದೆ ಮತ್ತು ಇದು ಯುರೋಪಿಯನ್ ದೇಶಗಳನ್ನು ಒಳಗೊಳ್ಳುತ್ತದೆ ಎಂದು ಅವರು ಟ್ರಂಪ್ ಹೇಳಿದರು. 20 ಅಂಶಗಳ ಶಾಂತಿ ಯೋಜನೆಯ ಕುರಿತು ಶೇ. 90 ರಷ್ಟು ಒಪ್ಪಂದವಿದೆ.

ಅಮೆರಿಕ-ಉಕ್ರೇನ್ ಭದ್ರತಾ ಖಾತರಿಗಳ ಕುರಿತು ಶೇ. 100 ರಷ್ಟು ಒಪ್ಪಂದವಿದೆ ಮತ್ತು ಅಮೆರಿಕ-ಯುರೋಪ್-ಉಕ್ರೇನ್ ಭದ್ರತಾ ಖಾತರಿಗಳ ಕುರಿತು ಬಹುತೇಕ ಶೇ. 100 ರಷ್ಟು ಒಪ್ಪಂದವಿದೆ ಎಂದು ಝೆಲೆನ್ಸಕಿ ಹೇಳಿದ್ದಾರೆ.

ಸಮೃದ್ಧಿ ಯೋಜನೆಯನ್ನು ಅಂತಿಮಗೊಳಿಸಲಾಗುತ್ತಿದೆ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ಶಾಶ್ವತ ಶಾಂತಿಯನ್ನು ಸಾಧಿಸುವಲ್ಲಿ ಭದ್ರತಾ ಖಾತರಿಗಳು ಮುಖ್ಯವಾಗಿರುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಸಾಮಾನ್ಯ ಜನ ಗರ್ಭಗುಡಿ ಪ್ರವೇಶಿಸಿದರೆ ಏನಾಗುತ್ತೆ? – Kannada News | Daily Devotional: Understanding Garbhagudi Access

ಬೆಂಗಳೂರು, ಡಿಸೆಂಬರ್ 29: ದೇವಾಲಯವು ದೈವಿಕ ಶಕ್ತಿಯ ಆಧಾರ ಕೇಂದ್ರವಾಗಿದೆ. ಭಕ್ತರು ತಮ್ಮ ಆಶಯಗಳು, ದೋಷಗಳು ಮತ್ತು ಕರ್ಮಫಲಗಳನ್ನು ಭಗವಂತನಿಗೆ ನಿವೇದಿಸಿಕೊಳ್ಳುವ ಪವಿತ್ರ ಸ್ಥಳವಾಗಿದೆ. ಸಾಮಾನ್ಯ ಜನರು ಗರ್ಭಗುಡಿಯನ್ನು ಪ್ರವೇಶಿಸಬಹುದೇ? ಅದು ಶುಭಕರವೇ ಅಥವಾ ಅಶುಭಕರವೇ? ಎಂಬುದು ಅನೇಕರಿಗೆ ಕಾಡುವ ಪ್ರಶ್ನೆ. ಸಾಮಾನ್ಯವಾಗಿ ಶ್ರೀಮಂತರು, ಅಧಿಕಾರದಲ್ಲಿರುವ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಮತ್ತು ಜ್ಞಾನಿಗಳಿಗೆ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಧಾರ್ಮಿಕ ನಿಯಮಗಳ ಪ್ರಕಾರ, ಯಾವುದೇ ದೇವಸ್ಥಾನದಲ್ಲಿ ದೇವರನ್ನು ನೇರವಾಗಿ ಸ್ಪರ್ಶಿಸುವ ಹಕ್ಕು ಎಲ್ಲರಿಗೂ ಇರುವುದಿಲ್ಲ. ಜ್ಯೋತಿರ್ಲಿಂಗಗಳು ಇದಕ್ಕೆ ಅಪವಾದವಾಗಿದ್ದು, ಅಲ್ಲಿ ಭಕ್ತರಿಗೆ ದೈವವನ್ನು ಸ್ಪರ್ಶಿಸಿ ಅಭಿಷೇಕ ಮಾಡಲು ಪ್ರಾಚೀನ ಕಾಲದಿಂದಲೂ ಅನುಮತಿ ಇದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

Horoscope Today 29 December: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ! – Kannada News | Daily Horoscope for 29 December 2025: Dr. Basavaraj Gurujis Predictions for Zodiac Signs

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2025ರ ಡಿಸೆಂಬರ್ 29, ಸೋಮವಾರದ ದೈನಿಕ ರಾಶಿಫಲವನ್ನು ನೀಡಿದ್ದಾರೆ. ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಪುಷ್ಯಮಾಸ, ಹೇಮಂತ ಋತು, ಶುಕ್ಲ ಪಕ್ಷದ ನವಮಿ ತಿಥಿ ಮತ್ತು ರೇವತಿ ನಕ್ಷತ್ರದ ಈ ದಿನದ ವಿಶೇಷಗಳನ್ನು ಗುರೂಜಿ ವಿವರಿಸಿದ್ದಾರೆ. ರಾಹುಕಾಲವು ಬೆಳಗ್ಗೆ 8:04 ರಿಂದ 9:31 ರವರೆಗೆ ಇದ್ದರೆ, ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲವು ಮಧ್ಯಾಹ್ನ 3:12 ರಿಂದ 4:37 ರವರೆಗೆ ಇರಲಿದೆ.

ಸೋಮವಾರವಾಗಿರುವುದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗಲು ಓಂ ನಮಃ ಶಿವಾಯ ಮಂತ್ರ ಜಪಿಸಲು ಸಲಹೆ ನೀಡಲಾಗಿದೆ. ಈ ದಿನ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಮತ್ತು ಬಂಗಾಡಿ, ಭೂಕನಕಟ್ಟೆಯಲ್ಲಿ ರಥೋತ್ಸವಗಳು ನಡೆಯಲಿವೆ. ಸೂರ್ಯ ಧನುಸ್ಸು ರಾಶಿಯಲ್ಲಿ ಮತ್ತು ಚಂದ್ರ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಮೇಷ, ವೃಷಭ, ಮಿಥುನ, ಕರ್ಕಾಟಕ ರಾಶಿಗಳಿಗೆ ಆರ್ಥಿಕ, ಕೌಟುಂಬಿಕ, ವೈವಾಹಿಕ ಮತ್ತು ವೃತ್ತಿ ಕ್ಷೇತ್ರದಲ್ಲಿನ ಫಲಿತಾಂಶಗಳನ್ನು ವಿವರವಾಗಿ ತಿಳಿಸಲಾಗಿದ್ದು, ಹಲವು ರಾಶಿಗಳಿಗೆ ಶುಭಫಲಗಳು ಕಂಡುಬರುತ್ತವೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

Source link

Exit mobile version