ಜೀ ಪವರ್ನಲ್ಲಿ ಪ್ರಸಾರ ಕಾಣುತ್ತಾ ಇದ್ದ, ‘ಹಳ್ಳಿ ಪವರ್’ ಶೋ (Halli Power) ಈಗ ಪೂರ್ಣಗೊಂಡಿದೆ. ಡಿಸೆಂಬರ್ 28ರಂದು ಶೋನ ಫಿನಾಲೆ ಪ್ರಸಾರ ಆಗಿದೆ. ಈ ವೇಳೆ ಅಕುಲ್ ಬಾಲಾಜಿ ಅವರು ವಿನ್ನರ್ನ ಘೋಷಣೆ ಮಾಡಿದರು. ಬೆಂಗಳೂರಿನ ರಗಡ್ ರಶ್ಮಿ ಅವರು ವಿನ್ನರ್ ಎಂದು ಘೋಷಿಸಲಾಯಿತು. ಟಾಸ್ಕ್ನಲ್ಲಿ ಮೊದಲಿನಿಂದಲೂ ಟಫ್ ಫೈಟ್ ಕೊಡುತ್ತಾ ಬರುತ್ತಿದ್ದ ಅವರು ಈಗ ಗೆಲುವು ಕಂಡಿದ್ದಾರೆ. ಆಕರ್ಷಕ ಟ್ರೋಫಿ, ಹಣ ಹಾಗೂ ಅಪಾರ ಜನಪ್ರಿಯತೆ ಮೂಲಕ ಅವರು ‘ಹಳ್ಳಿ ಪವರ್’ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ.
‘ಹಳ್ಳಿ ಪವರ್’ ಶೋ ಆಗಸ್ಟ್ ಕೊನೆಯಲ್ಲಿ ಪ್ರಸಾರ ಆರಂಭಿಸಿತು. ನಗರದಿಂದ ಹಳ್ಳಿಗೆ ಬಂದು ಅಲ್ಲಿಯ ಜೀವನ ಅನುಭವಿಸುವ ಥೀಮ್ನಲ್ಲಿ ರಿಯಾಲಿಟಿ ಶೋ ಮೂಡಿಬಂದಿತ್ತು. ಬೆಳಗಾವಿಯ ಕಿತ್ತೂರಿನಲ್ಲಿ ಈ ಶೋ ನಡೆಯಿತು. ಈ ಶೋ ಸಾಕಷ್ಟು ಜನಪ್ರಿಯತೆ ಪಡೆಯಿತು. ಒಳ್ಳೆಯ ಟಿಆರ್ಪಿ ಕೂಡ ಪಡೆಯಿತು. ಸಾಕಷ್ಟು ಮಂದಿ ಶೋನಲ್ಲಿ ಭಾಗವಹಿಸಿದ್ದರು. ಕೊನೆಗೆ ರಶ್ಮಿ ವಿನ್ನರ್ ಆದರೆ, ಘಾಟಿ ಗಾನವಿ ಅವರು ಮೊದಲ ರನ್ನರ್ ಅಪ್ ಆದರು.
ಈ ಶೋನಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿ ಸೋನಿಯಾ ಹೊರಹೊಮ್ಮಿದ್ದಾರೆ. ಅವರಿಗೆ 5 ಲಕ್ಷ ರೂಪಾಯಿ ಬಹುಮಾನ ಮೊತ್ತ ಸಿಕ್ಕಿದೆ. ಸೆಕೆಂಡ್ ರನ್ನರ್ ಅಪ್ ಘಾಟಿ ಗಾನವಿ ಅವರಿಗೆ 7 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಇನ್ನು, ವಿನ್ನರ್ ರಗಡ್ ರಶ್ಮಿ ಅವರಿಗೆ ಆಕರ್ಷಕ ಟ್ರೋಫಿ ಜೊತೆ 10 ಲಕ್ಷ ರೂಪಾಯಿ ಬಹುಮಾನ ಮೊತ್ತ ಸಿಕ್ಕಿದೆ. ಇದನ್ನು ಅವರು ಖುಷಿಯಿಂದ ಸ್ವೀಕರಿಸಿದರು.
ಆ ಬಳಿಕ ಮಾತನಾಡಿದ ರಶ್ಮಿ, ‘ನಿಮ್ಮ ಪ್ರೀತಿ ಇಲ್ಲಿಗೆ ತಂದು ನಿಲ್ಲಿಸಿದೆ. ನಾನು ಹರಿಸಿದ ಬೆವರು, ರಕ್ತಕ್ಕೆ ಎಲ್ಲದಕ್ಕೂ ಪ್ರತಿಫಲ ಸಿಕ್ಕಿದೆ. ಅನ್ನ ಹಾಕಿದೀರಿ, ಆಶ್ರಯ ಕೊಟ್ಟಿದೀರಿ. ವೋಟ್ ಹಾಕಿ ಗೆಲ್ಲಿಸಿದ್ದಕ್ಕೆ ಧನ್ಯವಾದ. ಅಕುಲ್ ಅವರೇ ನೀವು ಸಾಕಷ್ಟು ಮೋಟಿವೇಷನ್ ಕೊಟ್ಟಿದೀರಾ. ಈ ಕಲ್ಲು ಶಿಲೆ ಆಗಿದೆ’ ಎಂದರು. ರಶ್ಮಿ ಅವರು ತುಂಬಾನೇ ಟಫ್ ಕಾಂಪಿಟೇಟರ್ ಆಗಿದ್ದರು. ಅವರು ಬಿಗ್ ಬಾಸ್ಗೆ ಬರಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು.
ನೈತಿಕತೆಯ ರಕ್ಷಣೆ ಅಸಾಧ್ಯ ಎನಿಸಬಹದು. ಮಾನಸಿಕ ಶಾಂತಿಯನ್ನು ಬಲವಾಗಿ ತಂದುಕೊಳ್ಳಬೇಕು. ಶತ್ರುವಿನ ಸಂಚು ವಿಫಲ. ಭೂಮಿ ವ್ಯವಹಾರದಲ್ಲಿ ಲಾಭ. ಯಾರ ಮೇಲೂ ಸುಮ್ಮನೇ ಸಂಶಯಪಟ್ಟು ಸಂಬಂಧವನ್ನು ದೂರ ಮಾಡಿಕೊಳ್ಳುವಿರಿ. ದಾಂಪತ್ಯದಲ್ಲಿ ನೆಮ್ಮದಿ ಇಲ್ಲದೇ ಪರಸ್ಪರ ಕಲಹವಾಗಬಹುದು. ಸಾಮಾಜಿಕ ಕಾರ್ಯದಿಂದ ಸಮ್ಮಾನವನ್ನು ನಿರೀಕ್ಷಿಸುವಿರಿ. ಎಲ್ಲರನ್ನೂ ತೃಪ್ತಿಪಡಿಸುವ ಸಂಕಲ್ಪವು ಸುಮ್ಮನೇ ವ್ಯರ್ಥವಾಗಬಹುದು. ನಿಮ್ಮ ಗುರಿಯ ಬಗ್ಗೆ ವಿಶ್ವಾಸವು ನಿಮಗಿರಲಿ. ನಿಮ್ಮಿಂದ ಸಹಾಯ ಪಡೆಯಲು ನಿಮ್ಮನ್ನು ಹೊಗಳುವರು. ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧೆಯು ಇಲ್ಲವಾಗುವುದು. ನಿಮ್ಮ ಮೇಲೆ ಹಿತಶತ್ರುಗಳು ಬೇಕಂತಲೇ ಆರೋಪವನ್ನು ಮಾಡಬಹುದು. ಹೊಸ ಉದ್ಯೋಗ ಶುಭಾರಂಭ. ದೈಹಿಕ ಆರೋಗ್ಯ ಸುಧಾರಣೆ, ಹೊಣೆಗಾರಿಕೆ ಸಮತೋಲನ ತಾನಾಗಿಯೇ ಅನುಭವಕ್ಕೆ ಬರುವುದು. ನಿಮ್ಮ ತಿಳಿವಳಿಕೆಯನ್ನು ಇನ್ನೊಬ್ಬರ ಮುಂದೆ ತೋರಿಸಿಕೊಳ್ಳುವುದಿಲ್ಲ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಅನಿರೀಕ್ಷಿತ ಸಂದರ್ಭವನ್ನು ಜಾಣ್ಮೆಯಿಂದ ಎದುರಿಸುವಿರಿ.
ವೃಷಭ ರಾಶಿ:
ಉದ್ವೇಗದಿಂದ ನಿರ್ಧಾರ ತಪ್ಪುವ ಸಾಧ್ಯತೆ. ಮಾನಸಿಕ ಪೀಡೆಗೆ ವಿಶ್ರಾಂತಿ ಅಗತ್ಯ. ಶತ್ರುಕಾಟದಲ್ಲಿ ಸ್ನೇಹಿತರ ಸಹಾಯದ ಅನುಮಾನ ಬರಲಿದೆ. ಮಕ್ಕಳ ವಿದ್ಯಾಭ್ಯಾಸದ ಚಿಂತೆಯು ದೂರಾಗುವುದು. ಉತ್ತಮ ಸ್ಥಳವು ಸಿಕ್ಕಿದ್ದು ನಿಮಗೆ ಖುಷಿಯೂ ಆಗುವುದು. ಮನೆಯಿಂದ ಹೊರಗೆ ಹೋಗಿ ಇಡೀ ದಿನವನ್ನು ಕಳೆದುಬರುವಿರಿ. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ. ಪ್ರೀತಿಗೆ ಯೋಗ್ಯರನ್ನು ಹುಡುಕುವಿರಿ. ವಿದ್ಯಾಭ್ಯಾಸದ ಪ್ರಗತಿಯಿಂದ ಮನೆಯಲ್ಲಿ ಖುಷಿ ಇರಲಿದೆ. ನಿಮ್ಮ ಒರಟಾದ ಮಾತು ನೌಕರರು ಸಿಟ್ಟಾಗುವಂತೆ ಮಾಡುವುದಹ. ನಿಯಮದ ತಪ್ಪಿಗೆ ದಂಡವನ್ನು ಕೊಡಬೇಕಾದೀತು. ಭೂಮಿ ವ್ಯವಹಾರದಲ್ಲಿ ಹೊಸ ಅವಕಾಶ. ಉದ್ಯೋಗ ಬದಲಾವಣೆ ಸಾಧ್ಯ. ವಂಚನೆಗೆ ಎಚ್ಚರ ವಹಿಸಿದಷ್ಟು ಸಾಲದು. ಅತಿಯಾದ ಉತ್ಸಾಹದಲ್ಲಿರುವ ನಿಮಗೆ ಸಂಗಾತಿಯ ಮಾತು ಉತ್ಸಾಹವನ್ನು ಕೊಟ್ಟಿತು. ಹಳೆಯ ಸ್ನೇಹಿತರು ಉಪಕಾರ ಸ್ಮರಣೆಯಿಂದ ಸಹಾಯ ಮಾಡುವರು. ನಿಮ್ಮ ಹೆಜ್ಜೆಗಳೆಲ್ಲ ಗುರುತಾಗಬೇಕು ಎಂದರೆ ಸಾಧ್ಯವಾಗದು.
ಮಿಥುನ ರಾಶಿ:
ಹೊಣೆಗಾರಿಕೆಯಿಂದ ಕೆಲಸದ ಒತ್ತಡ. ದೈಹಿಕ ದಣಿವೂ ಕಂಡುಬರುವುದು. ಶತ್ರುಗಳ ಮಾತುಗಳಿಗೆ ಸ್ಪಂದಿಸಬೇಡಿ. ಯೋಚನೆಯ ದಿಕ್ಕನ್ನು ಬದಲಿಸದರೆ ತೊಂದರೆಗಳಿಗೆ ಉತ್ತರವೂ ಸಿಗಲಿದೆ. ಅಪರಿಚಿತರ ಸಹಾಯದಿಂದ ಪೂರ್ಣ ನಂಬಿಕೆ ಬರದು. ಹೊಸಬರನ್ನು ಸಾಮಾಜಿಕ ತಾಣದಲ್ಲಿ ಪರಿಚಯ ಮಾಡಿಕೊಳ್ಳುವಿರಿ. ತಂದೆಯ ಮಾತು ನಿಮಗೆ ಬೇಸರ ತರಿಸಬಹುದು. ಕಲಾವಿದರು ಉತ್ತಮ ಅವಕಾಶದ ನಿರೀಕ್ಷೆಯಲ್ಲಿ ಇರುವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಬಗೆ ಹರಿಯಬಹುದು. ಕುಟುಂಬದ ನೆಮ್ಮದಿಯು ನಿಮ್ಮ ಮಾತಿನಿಂದ ವಿಚಲಿತವಾಗುವುದು. ಸ್ವಂತ ಶ್ರಮದಿಂದ ಗಳಿಸಿದ್ದು ನಿಮಗೆ ಆಪ್ತವೆನಿಸಲಿದೆ. ಭೂಮಿ ವ್ಯವಹಾರದಲ್ಲಿ ವಿಳಂಬ. ಉದ್ಯೋಗದಲ್ಲಿ ಸ್ಥಿರತೆಯನ್ನು ಕಾಪಿಟ್ಟುಕೊಳ್ಳಿ. ನೈತಿಕ ನಡೆ ಮುಂದಿನ ಲಾಭಕ್ಕೆ ಕಾರಣ. ಮಾಡಬೇಕೆಂದುಕೊಂಡ ಕಾರ್ಯಕ್ಕೆ ತೊಂದರೆ ಬಂದರೂ ಬಿಡದೇ ಮುಂದುವರಿಸುವಿರಿ. ಆದಾಯದ ಹೆಚ್ಚಿಸಿಕೊಳ್ಳು ವಿಚಾರದಲ್ಲಿ ನೀವು ಬಹಳ ಹಿಂದೆ.
ಕರ್ಕಾಟಕ ರಾಶಿ:
ಮಾನಸಿಕ ಉತ್ಸಾಹ ಹೆಚ್ಚಾದರೂ ಉದ್ವೇಗ ನಿಯಂತ್ರಿಸಿ. ಶತ್ರುಕಾಟ ತಾನಾಗಿಯೇ ದೂರವಾಗುತ್ತದೆ. ಭೂಮಿ ವ್ಯವಹಾರದಲ್ಲಿ ಪ್ರಯಾಣ ಸಾಧ್ಯ. ನಿರೀಕ್ಷಿತ ಸಂದರ್ಭವು ಇಂದು ಬರಲಿದ್ದು ಅದನ್ನು ಬಳಸಿಕೊಳ್ಳುವಿರಿ. ಆಕಸ್ಮಿಕವಾಗಿ ಧನಲಾಭದಿಂದ ನಿಮಗೆ ಆಶ್ಚರ್ಯವಾಗಬಹುದು. ಮನಸ್ಸಿನ ಸ್ಥಿರತೆಯಲ್ಲಿ ಅಭಾವವಿದ್ದು ನಿಮ್ಮ ಗುರಿಯೂ ಬದಲಾಗುವುದು. ಜಾಣ್ಮಯಿಂದ ನಿಮ್ಮ ಕಾರ್ಯವನ್ನು ಸಾಧಿಸಿ. ನಿಮ್ಮವರನ್ನು ಕಳೆದುಕೊಳ್ಳುವ ಸಂದರ್ಭ ಬರುವುದು. ಪ್ರೇಮವು ಕೊನೆಗೂ ಅಂದುಕೊಂಡಂತೆ ಆಗಲಿದೆ. ಇಂದು ಖುಷಿಯಿಂದ ಹಣವನ್ನು ಖರ್ಚು ಮಾಡುವಿರಿ. ವಂಚನೆ ಪರರ ಕಾರಣದಿಂದ ತಪ್ಪುತ್ತದೆ. ಹೊಣೆಗಾರಿಕೆ ಸಮರ್ಪಕವಾಗಿ ನಿಭಾಯಿಸಿದರೆ ನೈತಿಕ ಗೌರವ. ನಿಮ್ಮ ಕೆಲಸಗಳನ್ನು ಮೇಲಧಿಕಾರಿಗಳು ಪರಿಶೀಲಿಸುವರು. ವ್ಯಾಪಾರದಲ್ಲಿ ನೀವು ತಜ್ಞರಾಗಿದ್ದು ಅಧಿಕ ಲಾಭವನ್ನು ಗಳಿಸುವಿರಿ. ಸಂತೋಷದ ವಿಚಾರವನ್ನು ಹೇಳಲು ಸಂಕೋಚವಾಗುವುದು. ಯಾವುದನ್ನೇ ಆದರೂ ಮಿತಿಯಲ್ಲಿ ಬಳಸಿದರೆ ಉತ್ತಮ.
ಸಿಂಹ ರಾಶಿ:
ಈ ದಿನ ನಿಮಗೆ ವಂಚನೆಯ ಸೂಚನೆ ಗಟ್ಟಿಯಾಗಿ ಕಾಣುತ್ತದೆ, ಎಚ್ಚರಿಕೆ ಅಗತ್ಯ. ದೈಹಿಕ ಶಕ್ತಿ ಉತ್ತಮವಾಗುತ್ತ ಹೋಗುವುದು. ಶತ್ರು ಸಂಹಾರಕ್ಕೆ ಸಮಾನವಾದ ಫಲ ಸಿಗುವ ದಿನ. ಪರರ ಕಷ್ಟಕ್ಕೆ ಸುಮ್ಮನೆ ಕಿವಿಯಾಗಿ ಸಾಕು. ಆಪ್ತರ ಭೇಟಿಯು ನಿಮಗೆ ಸಂತೋಷವನ್ನು ಕೊಡುವುದು. ವ್ಯವಹಾರವು ಅಧಿಕ ಲಾಭವನ್ನು ತಂದುಕೊಡದು. ಪ್ರವಾಸ ಹೋಗುವ ಮನಸ್ಸಾದೀತು. ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು. ನಿಮಗೆ ಬೇಡ ಎನಿಸಿದ ವಿಚಾರವೇ ಮತ್ತೆ ಮತ್ತೆ ಕೇಳಿ ಬಂದು ಮಾನಸಿಕ ಹಿಂಸೆಯಾದೀತು. ಮನೆಯಲ್ಲಿ ಜಗಳವಾಡಿ ನೀವು ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಭೂಮಿಯ ವ್ಯವಹಾರದಲ್ಲಿ ಲಾಭ. ಹೊಸ ಉದ್ಯೋಗದಲ್ಲಿ ಹೊಣೆಗಾರಿಕೆ ಹೆಚ್ಚುತ್ತದೆ. ನೈತಿಕತೆ ಕಾಯ್ದುಕೊಳ್ಳಲು ಅತಿಯಾದ ಪರೀಕ್ಷೆ. ಮಕ್ಕಳ ತಪ್ಪನ್ನು ನೀವು ಸಮರ್ಥಿಸಿಕೊಳ್ಳಬೇಕಾದೀತು. ನಿಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಇಂದು ಸಾಧ್ಯವಾಗದು. ಕೊಟ್ಟ ಹಣವನ್ನು ವಾಪಾಸು ಪಡೆಯಲು ಓಡಾಟ ಮಾಡುವಿರಿ.
ಕನ್ಯಾ ರಾಶಿ:
ಉದ್ವೇಗ ಮತ್ತು ಕುಟುಂಬದ ನಿರ್ಧಾರದಲ್ಲಿ ದ್ವಂದ್ವ. ನೈತಿಕತೆಯನ್ನು ಕೈ ಬಿಡದಿರಿ. ಶತ್ರುಕಾಟದಲ್ಲಿ ಮಾತುಗಳಿಂದಲೇ ಜಯ. ಇಂದು ಮಾಡುವ ಕಾರ್ಯವು ನಿಮ್ಮ ಕುಟುಂಬಕ್ಕೆ ಯೋಗ್ಯವಾದ ಹೆಸರನ್ನು ತಂದುಕೊಡುವುದು. ಬಂಧುಗಳ ಒಡನಾಟವು ಹೆಚ್ಚಿರಲಿದೆ. ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತಾಗಬಹುದು. ನೇರ ನುಡಿಯಿಂದ ಆಪ್ತರು ದೂರ ಸರಿಯಬಹುದು. ಇಂದು ನೀವು ಅಂದುಕೊಂಡ ವಿಚಾರದಲ್ಲಿ ಜಯವು ಸಿಗುವುದು. ಕೆಟ್ಟವರ ಸಹವಾಸದಿಂದ ಅಪಕೀರ್ತಿ ಬರಬಹುದು. ಕೆಲವು ವಿಚಾರಗಳಿಗೆ ಸುಮ್ಮನೇ ಪ್ರತಿಕ್ರಿಯೆ ನೀಡಬೇಕಿಲ್ಲ. ಕೃಷಿಯ ಉತ್ಪನ್ನಗಳನ್ನು ಮಾರಾಟ ಮಾಡುವಿರಿ. ಭೂಮಿ ವ್ಯವಹಾರದಲ್ಲಿ ಮಧ್ಯಮ ಫಲ. ಉದ್ಯೋಗ ಬದಲಾವಣೆ ಯೋಚನೆ. ಮಾನಸಿಕ ಪೀಡೆಗೆ ಧ್ಯಾನ ಸಹಾಯಕ. ಕೋಪವನ್ನು ತಾನಾಗಿಯೇ ಕಡಿಮೆ ಆಗಿದ್ದು ನಿಮಗೆ ಆಶ್ಚರ್ಯವಾಗಬಹುದು. ನಿಮ್ಮ ಮನಸ್ಸಿಗೆ ಬಾರದೇ ಯಾರಿಗೂ ಏನನ್ನೂ ಕೊಡುವುದು ಬೇಡ. ನಿಮ್ಮ ಹೊಸ ವಸ್ತುಗಳನ್ನು ಬಳಸಲು ಮನಸ್ಸು ಹಿಂಜರಿಯಲಿದೆ.
ತುಲಾ ರಾಶಿ:
ದೈಹಿಕ ಪೀಡೆ ತಾತ್ಕಾಲಿಕವಾಗಿ ಉಪಶಮನವಾಗಲಿದೆ. ಮಾನಸಿಕ ಸ್ಪಷ್ಟತೆ ಹೆಚ್ಚಲಿದೆ. ಶತ್ರುಗಳ ಸಂಚು ಬಹಿರಂಗ. ಇಂದು ನಿಮಗೆ ಒಳ್ಳೆಯತನಕ್ಕೆ ಯಾವ ಫಲವಿಲ್ಲ ಎಂಬ ಬೇಸರವಾಗಬಹುದು. ಸಾಮಾಜಿಕ ಕೆಲಸಗಳು ನಿಮಗೆ ಇನ್ನಷ್ಟೂ ಉತ್ಸಾಹವನ್ನು ಕೊಡುವುದು. ವೈದ್ಯರು ಇಂದು ಒತ್ತಡದಿಂದ ಇರುವರು. ದೇಹ ಪೀಡೆಯು ಅಧಿಕವಾಗಿ ಕಾಣಿಸಿಕೊಳ್ಳುವುದು. ಅನಿವಾರ್ಯ ನೀವು ಪ್ರಯಾಣವನ್ನು ಮಾಡಬೇಕಾಗಬಹುದು. ನೀವು ಕಷ್ಟವನ್ನು ಆನಂದದಿಂದ ಕಳೆಯುವಿರಿ, ಅದಕ್ಕೆ ಕಾರಣ ಸುಖವಿದೆ ಎಂಬುಸ. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಪಡೆದುಕೊಂಡರೂ ಉಳಿಸಿಕೊಳ್ಳುವುದು ಕಷ್ಟವಾದೀತು. ಭೂಮಿ ದಾಖಲೆಗಳು ಸರಿಯಾಗುತ್ತವೆ. ಹೊಸ ಉದ್ಯೋಗದ ಆಹ್ವಾನ ಸಾಧ್ಯ. ಹೊಣೆಗಾರಿಕೆ ಸ್ವೀಕಾರದಿಂದ ಗೌರವ. ಯಾರ ಜೊತೆಯೂ ನಿಮ್ಮ ಮಾತು ಸರಿಯಾಗಿ ಇರದು. ಇಂದು ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ. ಕೆಲವು ವಿಚಾರಗಳಿಗೆ ಸುಮ್ಮನೇ ಪ್ರತಿಕ್ರಿಯೆ ನೀಡಬೇಕಿಲ್ಲ. ನಿಮ್ಮ ನಿರ್ಧಾರಗಳಿಂದ ನಿಮಗೇ ಅಸಮಾಧಾನ.
ವೃಶ್ಚಿಕ ರಾಶಿ:
ಹೊಣೆಗಾರಿಕೆ ಹೆಚ್ಚಾಗಿ ಉದ್ವೇಗ ಉಂಟಾಗಬಹುದು. ವಂಚನೆಗೆ ಒಳಗಾಗದಂತೆ ಎಚ್ಚರ. ಶತ್ರುಕಾಟದಲ್ಲಿ ಧೈರ್ಯದಿಂದ ಗೆಲುವು. ಭವ್ಯ ಗೃಹದ ಕನಸನ್ನು ಯಾರ ಬಳಿಯಾದರೂ ಹೇಳಿಕೊಳ್ಳುವಿರಿ. ಉನ್ನತ ವಿದ್ಯಾಭ್ಯಾಸದ ಕನಸು ಬಂಧುಗಳ ಸಹಕಾರದಿಂದ ಆಗಲಿದೆ. ಧಾರ್ಮಿಕ ಸ್ಥಳಗಳ ಭೇಟಿಯೂ ಆಗಲಿದೆ. ಸಾಲದ ಮೊತ್ತವನ್ನು ಕಡಿಮೆ ಮಾಡಿಕೊಂಡು ಸಮಾಧಾನವಾಗುವುದು. ಪ್ರೇಮವು ನಿಮಗೆ ಬಂಧನದಂತೆ ಕಾಣಿಸುವುದು. ಸಹೋದರರ ನಡುವೆ ವಿನಾಕಾರಣ ಆರಂಭವಾದ ವಾಗ್ವಾದವು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುವುದು. ನಿಮ್ಮ ಸೋಲನ್ನು ನೀವು ಒಪ್ಪಿಕೊಳ್ಳಲಾರಿರಿ. ನಿಮ್ಮ ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳಲು ಆಗದು. ಯಾರದೋ ಒತ್ತಾಯಕ್ಕೆ ಹೂಡಿಕೆಯನ್ನು ಮಾಡುವಿರಿ. ಭೂಮಿ ವ್ಯವಹಾರದಲ್ಲಿ ಲಾಭದ ಸೂಚನೆ. ಉದ್ಯೋಗದಲ್ಲಿ ಹೊಸ ಪಾತ್ರ. ನೈತಿಕತೆ ನಿಮ್ಮ ಶಕ್ತಿ. ಪಕ್ಷಪಾತ ಮಕ್ಕಳ ವಿಚಾರದಲ್ಲಿ ಮಾಡುವುದು ಬೇಡ. ನಿಮ್ಮನ್ನು ನೋಡುವ ದೃಷ್ಟಿಯು ಬದಲಾದೀತು. ಪ್ರವಾಸ ಹೋಗುವ ಮನಸ್ಸಾದೀತು. ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು.
ಧನು ರಾಶಿ:
ಮಾನಸಿಕ ಒತ್ತಡ ಹೆಚ್ಚಾದರೂ ಕುಟುಂಬ ಬೆಂಬಲ ಸಿಗುತ್ತದೆ. ನೈತಿಕತೆಯಿಂದ ನಡೆದುಕೊಳ್ಳುವುದರಿಂದ ಶತ್ರುಸಂಹಾರ. ಇಂದು ನಿಮ್ಮ ನಡತೆಯು ಸಾಮಾನ್ಯರಂತೆ ಕಂಡರೂ ಪ್ರಭಾವವು ಅಧಿಕವಾಗಿರುತ್ತದೆ. ಆತ್ಮೀಯರನ್ನು ನೀವು ಕಳೆದುಕೊಳ್ಳಬೇಕಾಗುವುದು. ಪ್ರಯತ್ನಕ್ಕೆ ಸರಿಯಾಗಿ ಫಲವು ಸಿಗದು. ವಸ್ತುಗಳ ಖರೀದಿಯು ಖರ್ಚನ್ನು ಹೆಚ್ಚು ಮಾಡುವುದು. ನಿಮ್ಮವರ ಬಗ್ಗೆ ಯಾರಾದರೂ ಕಿವಿ ಚುಚ್ಚಬಹುದು. ಹೊಂದಾಣಿಕೆಯ ಮನೋಭಾವವು ನಿಮ್ಮಲ್ಲಿ ಇರದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತವಾಗಿ ಇರದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು. ಸಂಗಾತಿಯ ಮಾತಿನಿಂದ ಕೆಲವು ಮಾರ್ಪಾಡು ಮಾಡಿಕೊಳ್ಳುವಿರಿ. ಭೂಮಿ ಖರೀದಿ ಯೋಚನೆ ಮುಂದೂಡಿ. ಹೊಸ ಉದ್ಯೋಗದ ಪ್ರಯತ್ನ ಶುಭ. ದೈಹಿಕ ವಿಶ್ರಾಂತಿ ಅಗತ್ಯ. ನಾಲ್ಕಾರು ಕಾರ್ಯಗಳನ್ನು ಒಟ್ಟಿಗೇ ವಹಿಸಿಕೊಂಡು ಯಾವುದನ್ನೂ ಮಾಡಲಾರಿರಿ. ಪ್ರಯಾಣದಲ್ಲಿ ನಿಮಗೆ ಜಾಗರೂಕತೆ ಇರಲಿ.
ಮಕರ ರಾಶಿ:
ವಂಚನೆಯ ಪ್ರಯತ್ನಗಳು ಗೋಚರಿಸಬಹುದು, ದಾಖಲೆಗಳ ಪರಿಶೀಲನೆ ಅಗತ್ಯ. ಉದ್ವೇಗದಿಂದ ದೈಹಿಕ ಸಮಸ್ಯೆ. ಶತ್ರುಕಾಟದಿಂದ ದೂರವಿರಿ. ನಿಮ್ಮ ಕಾರ್ಯದ ದಕ್ಷತೆಯಿಂದ ಉನ್ನತ ಸ್ಥಾನವು ಸಿಗುವುದು. ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ಮಕ್ಕಳ ಬಗ್ಗೆ ಕನಿಕರ ಬರಬಹುದು. ಹೊರಗಿನ ಆಹಾರದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಮನೆಯ ವಾತಾವರಣವು ಸಂತೋಷವನ್ನು ಕೊಟ್ಟೀತು. ಎಲ್ಲ ವಿಚಾರಕ್ಕೂ ಸಿಟ್ಟು ಉಪಯೋಗಕ್ಕೆ ಬಾರದು. ಪ್ರಾಪಂಚಿಕ ಸುಖದಲ್ಲಿ ಆಸಕ್ತಿಯು ಕಡಿಮೆಯಾಗುವುದು. ಅಧ್ಯಾತ್ಮದ ವಿಚಾರವು ಹೆಚ್ಚು ಇಷ್ಟವಾಗುವುದು. ಇನ್ನೊಬ್ಬರ ದುಃಖಕ್ಕೆ ಸ್ಪಂದಿಸುವಿರಿ. ಎಲ್ಲರ ಜೊತೆ ಉತ್ಸಾಹದಿಂದ ಮಾತನಾಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡಬೇಕು ಎಂದುಕೊಳ್ಳುವಿರಿ. ಹೊಸ ಉದ್ಯೋಗದ ಮಾತುಕತೆ ನಡೆಯಲಿದೆ. ಭೂಮಿ ವ್ಯವಹಾರದಲ್ಲಿ ತಾಳ್ಮೆ. ಹೊಣೆಗಾರಿಕೆಯನ್ನು ಹಂಚಿಕೊಳ್ಳುವುದು ಉತ್ತಮ.
ಕುಂಭ ರಾಶಿ:
ಹೊಣೆಗಾರಿಕೆ ಭಾರವಾಗುತ್ತದೆ, ಆದರೆ ಅದನ್ನು ನಿಭಾಯಿಸುವ ಶಕ್ತಿ ನಿಮ್ಮಲ್ಲಿದೆ. ಮಾನಸಿಕ ಪೀಡೆ ಕಡಿಮೆಯಾಗಲಿದೆ. ಶತ್ರುಗಳ ಯುಕ್ತಿ ವಿಫಲ. ಇಷ್ಟವಾಗದವರ ಜೊತೆ ವೃಥಾ ಕಾಲಹರಣ ಮಾಡುವುದು ಬೇಡ. ನಿಮ್ಮಷ್ಟಕ್ಕೆ ನೀವು ಇದ್ದುಬಿಡಿ. ಅಹಿತಕರ ಆಹಾರದಿಂದ ಆರೋಗ್ಯವು ಕೆಡಬಹುದು. ನೀರಿನ ಭೀತಿಯು ಇರಲಿದೆ. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟವಾಗುವುದು. ಯಾರಾದರೂ ನಿಮಗೆ ಬೇಜಾರು ಮಾಡಿಸುವರು. ನೀವು ಇಂದು ಮೌನವನ್ನೇ ಹೆಚ್ಚು ಇಷ್ಟಪಡುವಿರಿ. ಇಬ್ಬಗೆಯ ಮಾನಸಿಕತೆಯು ಬೇಡ. ಭೂಮಿ ಸಂಬಂಧಿತ ಲಾಭ ಸಾಧ್ಯ. ಉದ್ಯೋಗ ಬದಲಾವಣೆಯ ಅವಕಾಶ. ನೈತಿಕ ನಿರ್ಧಾರಗಳು ಗೌರವ ತರುತ್ತವೆ. ವೈದ್ಯ ವೃತ್ತಿಯವರಿಗೆ ಅಪವಾದವು ಬರಬಹುದು. ಮಾನಸಿಕ ಕಿರಿಕಿರಿಯಿಂದ ಸ್ವಲ್ಪ ನೆಮ್ಮದಿ ಸಿಗಲಿದೆ. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ.
ಮೀನ ರಾಶಿ:
ಉದ್ವೇಗ ಹೆಚ್ಚಾಗಿ ಮನಸ್ಸು ಅಶಾಂತಿಯಾಗಬಹುದು. ಶತ್ರುಕಾಟಕ್ಕೆ ಪ್ರತಿಕ್ರಿಯೆ ನೀಡುವಲ್ಲಿ ನೈತಿಕತೆ ಕಾಪಾಡಿ. ಭೂಮಿ ವ್ಯವಹಾರದಲ್ಲಿ ವಿಳಂಬ. ದೈಹಿಕ ದೌರ್ಬಲ್ಯ ಕಂಡುಬರುವುದು. ಇಂದು ನೀವು ಭೂಮಿಯ ವಿಚಾರವಾಗಿ ಕಲಹವನ್ನು ಮಾಡುವಿರಿ. ಅವಿವಾಹಿತರಿಗೆ ವಿವಾಹದ ಸಂತೋಷವು ಇರಲಿದೆ. ಕೃಷಿಯ ಕುರಿತು ಕುತೂಹಲ ಹಾಗೂ ಆಸೆಯು ಬರಬಹುದು. ಕಳೆದುಕೊಂಡಿದ್ದು ನಿಮ್ಮ ಕೈಸೇರಬಹುದು. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಸ್ಥಾನಮಾನವನ್ನು ಪಡೆಯಲು ಏನಾದರೂ ಮಾಡುವಿರಿ. ಹೊಸ ಉದ್ಯೋಗದ ಸೂಚನೆ ಇದ್ದರೂ ಹೊಣೆಗಾರಿಕೆಯೂ ಹೆಚ್ಚಲಿದೆ. ವಂಚನೆಯಿಂದ ಎಚ್ಚರ ವಹಿಸುವಿರಿ. ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ನೆನಪಿಸಿ ಜಗಳವಾಡಬಹುದು. ಹೂಡಿಕೆ ಯಾರಾದರೂ ಒತ್ತಾಯ ಮಾಡಬಹುದು. ಇಂದು ನಿಮಗೆ ಇಷ್ಟವಾದ ಕೆಲಸವನ್ನು ಮಾತ್ರ ಮಾಡಿ. ಬೇರೆಯವರ ಬಗ್ಗೆ ಚಿಂತೆ ಬೇಡ. ಮನೆಯ ಸಮಸ್ಯೆಗೆ ಪರಿಹಾರ ಕಾಣುವಲ್ಲಿ ಸಂಗಾತಿಯು ಸಂಪೂರ್ಣ ಬೆಂಬಲ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ನವಮೀ ನಿತ್ಯನಕ್ಷತ್ರ : ರೇವತೀ, ಯೋಗ : ಶುಕ್ಲ, ಕರಣ : ಕೌಲವ, ಸೂರ್ಯೋದಯ – 06 – 48 am, ಸೂರ್ಯಾಸ್ತ – 06 – 04 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 08:13 – 09:38, ಯಮಗಂಡ ಕಾಲ 11:02 – 12:27, ಗುಳಿಕ ಕಾಲ 13:51 – 15:15
ನಿಮ್ಮ ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕಾದ ಸಮಯ ಇದು ಎಂದು ನಿಮಗೇ ಅನಿಸಲಿದೆ. ಯಾವ ರೀತಿಯ ನಡವಳಿಕೆ ನಿಮ್ಮ ಸಿಟ್ಟು- ಆಕ್ರೋಶಕ್ಕೆ ಕಾರಣ ಆಗುತ್ತಿತ್ತೋ ಅಂಥವುಗಳನ್ನು ಹೊಂದಾಣಿಕೆ ಮಾಡಿಕೊಳ್ಳಲು ಆರಂಭಿಸುತ್ತೀರಿ. ಉದ್ಯೋಗ ಸ್ಥಳದಲ್ಲಿ ನೀವಾಗಿಯೇ ವಹಿಸಿಕೊಳ್ಳುವ ಜವಾಬ್ದಾರಿಗಳು ಸ್ವಲ್ಪ ಮಟ್ಟಿಗೆ ಒತ್ತಡ ತರಲಿವೆ. ನಿಮ್ಮ ಸ್ನೇಹಿತರು- ಸಂಬಂಧಿಗಳು ತಮಾಷೆ ಮಾಡಿದಲ್ಲಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಸಣ್ಣ ಪ್ರಮಾಣದ ಹೂಡಿಕೆ ಮಾಡಿ, ವ್ಯವಹಾರ ಮಾಡುವ ಬಗ್ಗೆ ಆಲೋಚಿಸಲಿದ್ದೀರಿ. ಸರ್ಕಾರಿ ನೌಕರರಿಗೆ ಉದ್ಯೋಗ ನಿಮಿತ್ತ ಪ್ರಯಾಣ ತೆರಳಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅಥವಾ ತೀರ್ಥಕ್ಷೇತ್ರದ ದರ್ಶನ ಮಾಡುವ ಯೋಗ ಇದೆ. ಮನೆ- ಆಸ್ತಿಗೆ ಸಂಬಂಧಿಸಿದ ದಾಖಲೆ- ಪತ್ರಗಳನ್ನು ಕ್ರಮಬದ್ಧವಾಗಿ ಇಟ್ಟುಕೊಳ್ಳುವುದಕ್ಕೆ ಆದ್ಯತೆ ನೀಡಲಿದ್ದು, ಕೆಲವು ದಾಖಲೆಗಳಿಗೆ ಅಪ್ಲೈ ಮಾಡುವ ಆಲೋಚನೆ ಬರಲಿದೆ.
ಸಂಬಂಧದಲ್ಲಿ ಕೆಲವು ಕಠಿಣ ಸನ್ನಿವೇಶಗಳನ್ನು ಎದುರಿಸುತ್ತೀರಿ. ಖರ್ಚು- ವೆಚ್ಚದ ಬಗ್ಗೆ ನಿಮ್ಮ ತೀರ್ಮಾನಗಳ ಬಗ್ಗೆ ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಲಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಆದಾಯ ಹೆಚ್ಚು ಮಾಡಿಕೊಳ್ಳಲು ಬೇಕಾದ ಅವಕಾಶಗಳು ದೊರೆಯಲಿವೆ. ಆಹಾರ ಪಥ್ಯದ ಬಗ್ಗೆ ಲಕ್ಷ್ಯವನ್ನು ನೀಡಬೇಕಾಗುತ್ತದೆ. ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಆತ್ಮವಿಶ್ವಾಸ ಕುಗ್ಗುವಂಥ ಬೆಳವಣಿಗೆ ಆಗಲಿದೆ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರು ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮುಂಚೆ ಕೆಲವು ಸಾಧಕ- ಬಾಧಕಗಳ ಬಗ್ಗೆ ಆಲೋಚಿಸಿ, ಮುಂದಕ್ಕೆ ಹೆಜ್ಜೆ ಇಡಿ. ಮನೆಗೆ ನಿಮ್ಮಲ್ಲಿ ಕೆಲವರು ಬೆಳ್ಳಿ ಪೂಜಾ ಸಾಮಗ್ರಿ ಖರೀದಿಸುವ ಯೋಗ ಇದೆ. ದೀರ್ಘ ಕಾಲದ ಅನಾರೋಗ್ಯದಿಂದ ಇರುವವರು ಔಷಧದಲ್ಲಿ ಬದಲಾವಣೆ ಮಾಡಿಕೊಳ್ಳಲು ವೈದ್ಯರನ್ನು ಭೇಟಿ ಮಾಡಲು ಆಲೋಚಿಸುತ್ತೀರಿ.
ದೇಹದ ತೂಕ ಇಳಿಸಿಕೊಳ್ಳಲು ಆದ್ಯತೆಯನ್ನು ನೀಡುವಿರಿ. ಮುಂಜಾಗ್ರತೆ ವಹಿಸಿ, ನೀವು ತೆಗೆದುಕೊಂಡ ನಿರ್ಧಾರಗಳು ಭಾರೀ ಲಾಭವನ್ನು ತಂದುಕೊಡಲಿವೆ. ದೇವಸ್ಥಾನ- ಗುಡಿಗಳ ಜೀರ್ಣೋದ್ಧಾರಕ್ಕೆ ದೇಣಿಗೆಯನ್ನು ನೀಡುವ ಯೋಗ ಇದೆ.ರಹಸ್ಯ ಎಂದು ನಿಮ್ಮ ಬಳಿ ಹೇಳಿರುವಂಥದ್ದನ್ನು ನೀವಾಗಿಯೇ ಇತರರಿಗೆ ತಿಳಿಸುವುದಕ್ಕೆ ಹೋಗಬೇಡಿ. ಹೋಲ್ ಸೇಲ್ ದವಸ- ಧಾನ್ಯಗಳ ಮಾರಾಟ ವ್ಯವಹಾರ ಮಾಡುವಂಥವರಿಗೆ ವಿಸ್ತರಣೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ಲೇವಾದೇವಿ ವ್ಯವಹಾರದಲ್ಲಿ ತೊಡಗಿರುವವರಿಗೆ ಕೆಲವರ ಬಳ ಕೂಡಲೇ ಹಣ ವಸೂಲಿ ಮಾಡಿಕೊಂಡು ಬಿಡೋಣ ಎಂದೇನಾದರೂ ಅನಿಸಿದಲ್ಲಿ ಅದರಂತೆಯೇ ನಡೆದುಕೊಳ್ಳಿ. ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಹಣವನ್ನು ವೆಚ್ಚ ಮಾಡಲಿದ್ದೀರಿ. ಗಡುವಿನಲ್ಲಿ ಮುಗಿಸಬೇಕಾದ ಕೆಲಸಗಳನ್ನು ಕೊನೆ ತನಕ ಮುಂದಕ್ಕೆ ಹಾಕದೆ, ಅವಧಿಗೂ ಮುನ್ನವೇ ಪೂರ್ಣಗೊಳಿಸಿ.
ನಿಮ್ಮ ಸ್ವಂತ ಸಮಸ್ಯೆಯನ್ನು ಎಲ್ಲರ ತೊಂದರೆ ಎಂಬಂತೆ ಮಾತನಾಡುವುದಕ್ಕೆ ಹೋಗಬೇಡಿ. ನಿಮ್ಮ ಬಳಿ ಏನಿದೆ ಅದಕ್ಕೆ ತಕ್ಕಂತೆ ಆಲೋಚನೆ ಮಾಡಿ. ಅಂದರೆ ಹಣ, ಸಮಯ, ಯೋಜನೆ ಹೀಗೆ ಯಾವ ಸಂಪನ್ಮೂಲ ಇದೆಯೋ ಅದಕ್ಕೆ ತಕ್ಕಂತೆ ಆಲೋಚನೆಯನ್ನು ಮಾಡಿಕೊಳ್ಳಿ. ಆರ್ಥಿಕವಾಗಿ ನಾನಾ ಕಡೆಯಿಂದ ಒತ್ತಡದ ಸನ್ನಿವೇಶ ಎದುರಾಗಲಿದೆ. ಕೆಲವು ವ್ಯಾಪಾರ- ವ್ಯವಹಾರದ ಅವಕಾಶ ತೆರೆದುಕೊಳ್ಳಲಿವೆ. ಅದರ ಕಾರಣಕ್ಕೆ ಓಡಾಟ ನಡೆಸಲಿದ್ದೀರಿ. ಯಾವ ವಿಚಾರಕ್ಕೆ ರಾಜೀ- ಸಂಧಾನ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಹೇಳಿದ್ದಿರೋ ಅದಕ್ಕೆ ಸಂಬಂಧಿಸಿದಂತೆ ನಿಮ್ಮ ನಿಲವು ಬದಲಾವಣೆ ಮಾಡಿಕೊಳ್ಳಲೇ ಬೇಕಾಗುತ್ತದೆ. ನೀವು ರಹಸ್ಯ ಎಂದು ಸ್ನೇಹಿತರ ಬಳಿ ಹೇಳಿಕೊಂಡಿದ್ದ ಕೆಲವು ಸಂಗತಿಗಳನ್ನು ಎಲ್ಲ ಕಡೆ ತಿಳಿಯುವಂತೆ ಮಾಡಿದ್ದಾರೆ ಎಂಬುದು ತಿಳಿದು ಬರಲಿದ್ದು, ಡ್ಯಾಮೇಜ್ ಕಂಟ್ರೋಲ್ ಗೆ ಏನು ಮಾಡಬೇಕು ಎಂಬ ಬಗ್ಗೆ ಯೋಜನೆ ರೂಪಿಸಲಿದ್ದೀರಿ.
ಬಹಳ ಸಮಯದಿಂದ ಒಂದೇ ವಿಷಯಕ್ಕೆ ಜಗ್ಗಾಡುತ್ತಲೇ ಇದ್ದಲ್ಲಿ ಅದರ ತೀರ್ಮಾನ ಮಾಡಿಕೊಂಡು ಬಿಡಬೇಕು ಎಂದು ನಿರ್ಧಾರ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಪ್ರಕೃತಿ ಚಿಕಿತ್ಸೆ ಪಡೆಯಲು ಮುಂದಾಗಲಿದ್ದೀರಿ. ವಿವಾಹಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಸ್ನೇಹಿತರು- ಸಂಬಂಧಿಗಳ ಮೂಲಕ ಒಳ್ಳೆ ರೆಫರೆನ್ಸ್ ದೊರೆಯಲಿದೆ. ಈ ಹಿಂದೆ ಒಮ್ಮೆ ವಿಚಾರಿಸಿಕೊಂಡು ಬಂದಂಥ ಸಂಬಂಧವೇ ಇದಾಗಿರುವ ಸಾಧ್ಯತೆ ಹೆಚ್ಚಿದೆ. ಆ ಕಾರಣಕ್ಕೆ ಇನ್ನೊಮ್ಮೆ ಯಾಕೆ ನೋಡಬೇಕು ಎಂಬ ಆಲೋಚನೆ ಬೇಡ. ನಿಮ್ಮಲ್ಲಿ ಯಾರು ವಾಸ್ತು, ಜ್ಯೋತಿಷ್ಯ ಇಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಾ ಇದ್ದೀರಿ ಅಂಥವರಿಗೆ ಕಿರಿಕಿರಿ ಆಗುವಂತಹ ಕೆಲವು ಬೆಳವಣಿಗೆಗಳು ಆಗಬಹುದು. ಅದರಲ್ಲೂ ಇಷ್ಟು ಸಮಯ ನಿಮ್ಮ ಜೊತೆಗೆ ಕೆಲಸ ಮಾಡುತ್ತಿದ್ದವರು ತಾವೇ ಸ್ವಂತ ಕಚೇರಿ ಆರಂಭಿಸಬಹುದು, ಅಥವಾ ನಿಮ್ಮ ಪ್ರತಿಸ್ಪರ್ಧಿ ಆಗಿರುವವರು ಬಳಿ ಉದ್ಯೋಗಿಯಾಗಿ ಹೋಗಬಹುದು.
ನಿಮ್ಮ ಮಾತಿನ ಮೂಲಕ ಪ್ರಭಾವ ಬೀರಿ, ಯಾವ ಕೆಲಸ- ಹೇಗೆ ಆಗಬೇಕೋ ಆ ರೀತಿಯಾಗಿ ಮಾಡಿಸಿಕೊಳ್ಳಲು ಯಶಸ್ವಿ ಆಗಲಿದ್ದೀರಿ. ವಿದೇಶಕ್ಕೆ ತೆರಳಬೇಕು ಎಂದು ಪ್ರಯತ್ನ ಮಾಡುತ್ತಿದ್ದು, ಅದರಲ್ಲಿ ನಾನಾ ಬಗೆಯ ಅಡೆತಡೆಗಳನ್ನು ಎದುರಿಸುತ್ತಾ ಇದ್ದಲ್ಲಿ ಅದನ್ನು ನಿವಾರಿಸಿಕೊಳ್ಳಲು ಬೇಕಾದ ಮಾರ್ಗೋಪಾಯಗಳು ಹೊಳೆಯಲಿವೆ. ಅಥವಾ ನಿಮ್ಮ ಸ್ನೇಹಿತರೋ- ಸಂಬಂಧಿಗಳೋ ಈ ಬಗ್ಗೆ ಕೆಲವು ಟಿಪ್ಸ್ ಗಳನ್ನು ನೀಡಲಿದ್ದಾರೆ. ಊಟ- ತಿಂಡಿ ವಿಚಾರಕ್ಕೆ ಜೋರು ಧ್ವನಿಯ ಮಾತುಕತೆ ಆಗುವಂಥ ಯೋಗ ಇದೆ. ನಿಮ್ಮ ಎದುರಿನಲ್ಲಿ ಇರುವವರು ಏನು ಹೇಳುತ್ತಾರೋ ಅದನ್ನು ಸಹ ಕೇಳಿಸಿಕೊಳ್ಳಿ. ನೀವು ಈ ಹಿಂದೆ ಬೇಡ ಅಂದುಕೊಂಡಿದ್ದ ಪ್ರಾಜೆಕ್ಟ್ ವೊಂದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮತ್ತೆ ಹುಡುಕಿಕೊಂಡು ಬರಬಹುದು. ಈ ಬಾರಿ ಹಿಂದೆ ಯಾವ ವಿಚಾರಕ್ಕೆ ಅಭಿಪ್ರಾಯ ಭೇದ ಮೂಡಿತ್ತೋ ಅದನ್ನು ಬಗೆಹರಿಸಿಕೊಂಡು ಮುಂದುವರಿಸಿಕೊಂಡು ಹೋಗುವ ಅವಕಾಶ ಇರುತ್ತದೆ, ಗಮನದಲ್ಲಿ ಇರಲಿ.
ದಂಪತಿ ಮಧ್ಯೆ ಮಕ್ಕಳ ವಿಚಾರಕ್ಕೆ ಬೇಸರ- ಕಲಹಗಳು ಆಗುವ ಸಾಧ್ಯತೆ ಇರುತ್ತದೆ. ನಾನು ಹೇಳಿದ್ದೇ ಆಗಬೇಕು ಎಂಬ ಹಠ ಯಾವ ಕಾರಣಕ್ಕೂ ಬೇಡ. ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುವಂಥ ಯೋಗ ಇದೆ. ನಿಮ್ಮ ಆಲೋಚನೆಗೆ ಹೊಂದಾಣಿಕೆ ಆಗುವ ವ್ಯಕ್ತಿಗಳಿಗೆ ಮಾತ್ರ ಸಲಹೆ- ಸೂಚನೆ, ಮಾರ್ಗದರ್ಶನ ಮಾಡಿ. ಈ ದಿನ ಸಾಧ್ಯವಾದಲ್ಲಿ ದುರ್ಗಾದೇವಿಯ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಿರಿ. ಇದು ಸಾಧ್ಯವಿಲ್ಲ ಅಂತಾದಲ್ಲಿ ಮೊಬೈಲ್ ಫೋನ್ ನಲ್ಲಿ ದೇವಿಯ ಚಿತ್ರವನ್ನು ಸ್ಕ್ರೀನ್ ಸೇವರ್ ಆಗಿ ಹಾಕಿಕೊಳ್ಳಿ. ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರಿಗೆ ಈ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಬೇಕು ಎಂದೆನಿಸಲಿದೆ. ಹೊಸದಾಗಿ ಪರಿಚಯ ಆಗುವಂಥ ವ್ಯಕ್ತಿಗಳಿಂದ ಕೆಲವು ಅನುಕೂಲಗಳು ಒದಗಿ ಬರಲಿವೆ.
ನಿಮ್ಮಲ್ಲಿ ಕೆಲವರಿಗೆ ಹಳೇ ಗೆಳೆಯ ಅಥವಾ ಗೆಳತಿಯ ನೆನಪು ವಿಪರೀತ ಕಾಡುವಂಥ ದಿನ ಇದಾಗಿರಲಿದೆ. ಅಥವಾ ಅಚಾನಕ್ ಆಗಿ ಭೇಟಿ ಆಗುವುದೋ ಅಥವಾ ಕಾಲ್ ಮಾಡುವುದೋ ಇಂಥದ್ದು ಕೂಡ ಆಗಬಹುದು. ಹೀಗೆ ಆಗುವುದರಿಂದ ನಿಮ್ಮ ಏಕಾಗ್ರತೆ ಕಳೆದುಕೊಳ್ಳುವಂತೆ ಆಗಲಿದೆ. ಹೊಸ ವಾಹನ ಖರೀದಿ ಮಾಡಿದ್ದೀರಿ ಅಂತಾದಲ್ಲಿ ಚಾಲನೆ ವೇಳೆ ಮುಂಜಾಗ್ರತೆ ವಹಿಸಿ. ಏಕೆಂದರೆ ಸಣ್ಣ ಪುಟ್ಟದಾದರೂ ಡೆಂಟ್ ಅಥವಾ ಪೇಂಟ್ ಹೋಗುವಂತಾಗುವುದು ಈ ರೀತಿಯಾದದ್ದು ಆಗಬಹುದು. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ದಿನಾಂಕವನ್ನು ಒಮ್ಮೆ ಪರಿಶೀಲನೆ ಮಾಡಿಟ್ಟುಕೊಳ್ಳಿ. ಏಕೆಂದರೆ ಇದು ಕೂಡ ಮರೆತು, ಆ ನಂತರ ದಂಡದ ರೂಪದಲ್ಲಿ ಹೆಚ್ಚುವರಿಯಾಗಿ ಹಣ ಕಟ್ಟುವ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಇದರಿಂದ ಸಮಸ್ಯೆಯಾಗುವ ಸಾಧ್ಯತೆ ಇದೆ. ಮುಖ್ಯವಾದ ವ್ಯಕ್ತಿಗಳ ಭೇಟಿಗೆ ತೆರಳುತ್ತೀರಿ ಅಂತಾದಲ್ಲಿ ಮುಂಚಿತವಾಗಿ ಅಲ್ಲಿರುವಂತೆ ಹೊರಡಿ.
ನೀವು ಯಾವುದನ್ನು ಕನಿಷ್ಠ ಪ್ರಮಾಣದ ಶಿಸ್ತು ಎಂದು ಭಾವಿಸಿರುತ್ತೀರೋ ಇತರರಿಗೆ ಅದು ಕಿರಿಕಿರಿಯಾಗಿ ಪರಿಣಮಿಸಲಿದೆ. ಅದರಲ್ಲೂ ನೀವು ಸ್ವಂತ ವ್ಯವಹಾರ- ವ್ಯಾಪಾರ ಮಾಡುವಂಥವರು ಆಗಿದ್ದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು. ನಿಮಗೆ ಹಿರಿಯರಿಂದ ಬಂದಂಥ ಒಡವೆ, ಆಸ್ತಿ ಇಂಥವುಗಳನ್ನು ಮಾರಾಟ ಮಾಡುವ ಆಲೋಚನೆ ಮಾಡಲಿದ್ದೀರಿ. ಹೀಗೆ ಮಾಡುವ ಮುಂಚೆ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ, ಮುಂದಕ್ಕೆ ಹೆಜ್ಜೆಯನ್ನು ಇಡಿ. ಕ್ರೀಡಾಪಟುಗಳಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಹೆಚ್ಚಿನ ತರಬೇತಿಗಾಗಿ ವಿದೇಶಗಳಿಗೆ ಅಥವಾ ನೀವು ಇರುವ ಸ್ಥಳದಲ್ಲಿಯೇ ಅತ್ಯುತ್ತಮ ತರಬೇತಿ ಸಂಸ್ಥೆಗಳಿಗೆ ತೆರಳುವ ಅವಕಾಶ ಸೃಷ್ಟಿ ಆಗಲಿದೆ. ನಿಮ್ಮಲ್ಲಿ ಯಾರಿಗೆ ಸೋದರ- ಸೋದರಿಯರು ಇದ್ದಾರೋ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಮಾಡುವುದು ಒಳ್ಳೆಯದು. ಈ ದಿನ ಅವರಿಗೆ ನಿಮ್ಮ ನೆರವಿನ ಅಗತ್ಯ ಕಂಡುಬರಲಿದೆ.
ಬಳ್ಳಾರಿ, ಡಿಸೆಂಬರ್ 28: ಅಕ್ರಮ ಗಣಿಗಾರಿಯ (Mining) ಭೂತ ಮತ್ತೆ ಗಣಿನಾಡು ಬಳ್ಳಾರಿಯಲ್ಲಿ ಸದ್ದು ಮಾಡುತ್ತಿದೆ. ಪಕ್ಕದ ರಾಜ್ಯ ಆಂಧ್ರದ ಗಣಿಗಾರಿಕೆ ಪರ್ಮಿಟ್ ಹೆಸರಲ್ಲಿ, ಕರ್ನಾಟಕದ ಭೂಮಿಯನ್ನೇ ಒತ್ತುವರಿ ಮಾಡಿಕೊಂಡಿರುವುದು ಇದೀಗ ಸಾಬೀತಾಗಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ನಡೆಸಿದ ಹೈಟೆಕ್ ಸರ್ವೇಯಲ್ಲಿ ಈ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಸ್ಪೋಟಕ ಮಾಹಿತಿಯಿಂದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ (Janardhana Reddy) ಮತ್ತೆ ಸಂಕಷ್ಟ ಎದುರಾಗಿದೆ.
ಅಕ್ರಮ ಗಣಿಗಾರಿಯ ಭೂತ ಮತ್ತೆ ಗಣಿನಾಡು ಬಳ್ಳಾರಿಯಲ್ಲಿ ಸದ್ದು ಮಾಡುತ್ತಿದೆ. ಪಕ್ಕದ ರಾಜ್ಯ ಆಂಧ್ರದ ಗಣಿಗಾರಿಕೆ ಪರ್ಮಿಟ್ ಹೆಸರಲ್ಲಿ, ಕರ್ನಾಟಕದ ಭೂಮಿಯನ್ನೇ ಒತ್ತುವರಿ ಮಾಡಿಕೊಂಡಿರುವುದು ಇದೀಗ ಸಾಬೀತಾಗಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ನಡೆಸಿದ ಹೈಟೆಕ್ ಸರ್ವೇಯಲ್ಲಿ ಈ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಕಳೆದ ತಿಂಗಳು ನಿವೃತ್ತ ನ್ಯಾಯಾಧೀಶ ಸುಧಾಂಶ ಧುಲಿಯಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿ ಗ್ರಾಮಕ್ಕೆ ಭೇಟಿ ನೀಡಿ ಡ್ರೋನ್ ಮೂಲಕ ಸರ್ವೇ ನಡೆಸಿತ್ತು. ಇದರಲ್ಲಿ ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್, ಸಿದ್ದಾಪುರದಲ್ಲಿನ ಬಿಐಒಸಿ ಕಂಪನಿಯ 27.12 ಹೆಕ್ಟೇರ್, ವೈ. ಮಹಾಬಲೇಶ್ವರಪ್ಪ ಸನ್ಸ್ ಹೆಸರಿನ 20.24 ಹೆಕ್ಟೇರ್, ಒಬಳಾಪುರಂ ಗ್ರಾಮದಲ್ಲಿನ ಒಎಂಸಿ ಹೆಸರಿನ 25.98 ಹೆಕ್ಟೇರ್, ಒಎಂಪಿ2 ಹೆಸರಿನ 39.50 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿ ಗುತ್ತಿಗೆ ಸಂಬಂಧ ಎರಡು ಹಂತಗಳಲ್ಲಿ ಸರ್ವೇ ಮಾಡಿತ್ತು. ಈ ಸರ್ವೇಯಲ್ಲಿ ಜನಾರ್ದನ್ ರೆಡ್ಡಿ ಒಡೆತನದ ಓಎಂಸಿ 2 ಹೆಸರಿನಲ್ಲಿ 39.50 ಹೆಕ್ಟೇರ್, ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿಗುತ್ತಿಗೆ ಪ್ರದೇಶ ಮತ್ತು ಗಡಿಗಳ ಹೊಂದಾಣಿಕೆ ಆಗಿಲ್ಲ. ಈ ಕಂಪನಿಗಳು ಕರ್ನಾಟಕ ರಾಜ್ಯದಲ್ಲಿ ಅತಿಕ್ರಮಣ ಮಾಡಿವೆ ಎಂದು ವರದಿ ಸಲ್ಲಿಕೆ ಮಾಡಿದೆ.
ಜನಾರ್ದನ ರೆಡ್ಡಿ ಒಡೆತನದ ಒಎಂಸಿ ಕಂಪನಿ ಕರ್ನಾಟಕ ಮತ್ತು ಆಂಧ್ರದ ನಡುವಿನ ಅಂತಾರಾಜ್ಯ ಗಡಿ ನಾಶಪಡಿಸಿದೆ ಎಂಬ ಆರೋಪ ಮೊದಲಿನಿಂದಲೂ ಇದೆ. ಇದೀಗ ನ್ಯಾಯಮೂರ್ತಿ ಧುಲಿಯಾ ಸಮಿತಿ ಸರ್ವೇಯಲ್ಲಿ ಬಯಲಾಗಿದೆ. ಮೀಸಲು ಅರಣ್ಯ ಪ್ರದೇಶಗಳಾದ ವಿಠಲಾಪುರ, ತುಮಟಿ ಸೇರಿ ವಿವಿಧೆಡೆ ಅಕ್ರಮವಾಗಿ 28.90 ಲಕ್ಷ ಟನ್ ಅದಿರನ್ನು ಹೊರತೆಗೆದು ಅಕ್ರಮವಾಗಿ ಸಾಗಣೆ ಮಾಡಲಾಗಿದೆ ಎಂಬುದು ಸಾಬೀತಾಗಿ, ಸಿಬಿಐ ವಿಚಾರಣಾಧೀನ ನ್ಯಾಯಾಲಯ ರೆಡ್ಡಿಗೆ ಶಿಕ್ಷೆ ಪ್ರಕಟಿಸಿತ್ತು. ಅಮಿಕಸ್ ಕ್ಯೂರಿ ಹಾಗೂ ಆಂಧ್ರ ಪ್ರದೇಶದ ಸಮ್ಮಿರೆಡ್ಡಿ ಸಮಿತಿ ನೀಡಿದ ವರದಿ ಅನ್ವಯ ಸುಪ್ರೀಂಕೋರ್ಟ್ ಈ ಹೊಸ ಸಮಿತಿ ರಚಿಸಿತ್ತು.
ಸದ್ಯ ಈ ವರದಿಯಲ್ಲೂ ಅತಿಕ್ರಮಣ ನಡೆದಿದೆ ಎಂಬುದು ದೃಢಪಟ್ಟಿದ್ದು, ಇದೀಗ ಜನಾರ್ದನ್ ರೆಡ್ಡಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಇನ್ನು ನಿವೃತ್ತಿ ನ್ಯಾ. ದುಲಿಯಾ ವರದಿಗೆ ಗಣಿಗುತ್ತೆಗೆ ಮಾಲೀಕರಿಂದ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. 2026 ಜನವರಿ 05 ರಂದು ದೆಹಲಿಯಲ್ಲಿ ಸಭೆ ನಡೆಯಲಿದೆ. ದಾಖಲೆ ಸಲ್ಲಿಸದಿದ್ದರೆ ದುಲಿಯಾ ಸಮಿತಿ ವರದಿಯನ್ನ ಮೂರು ತಿಂಗಳ ಒಳಗೆ ಅಂತಿಮ ವರದಿ ಆಧಾರವಾಗಿ ಶಿಕ್ಷೆ ಪ್ರಕಟಿಸುವ ಸಾಧ್ಯತೆ ಇದೆ. ಇನ್ನು 29 ಲಕ್ಷ ಟನ್ ಅದಿರು ಮಾರಾಟ ಸಂಬಂಧ ಹಣ ವಸೂಲಿಗೆ ಆಗ್ರಹಿಸಿ ಗಣಿ ಉದ್ಯಮಿ ಟಪಾಲ್ ಗಣೇಶ್ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಈವರೆಗೆ ಕ್ರಮವಾಗಿಲ್ಲ ಅಂತಾರೆ ದೂರುದಾರ ಟಪಾಲ್ ಗಣೇಶ.
ಒಟ್ಟಿನಲ್ಲಿ ರಾಜ್ಯದ ಗಡಿ ಭಾಗವನ್ನ ಅಕ್ರಮವಾಗಿ ಒತ್ತುವರಿ ಮಾಡಿ ಅಲ್ಲಿ ಗಣಿ ಲೂಟಿ ಮಾಡಲಾಗಿದೆ ಎನ್ನುವುದು ನಿವೃತ್ತ ನ್ಯಾಯಾಧೀಶ ದುಲಿಯಾ ವರದಿಯಲ್ಲಿ ಸಾಬೀತಾಗಿದೆ. ಮುಂದಾಗುವ ಬೆಳವಣಿಗೆ ಬಗ್ಗೆ ಕಾದು ನೋಡಬೇಕಿದೆ.
ಮನೆಯಲ್ಲಿ ಎಲ್ಲವೂ ಪ್ರೇಕ್ಷಕ ಅಂದುಕೊಂಡಂತೆ ನಡೆಯುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಬಿಗ್ಬಾಸ್ (BiggBoss) ಹೊಸದೊಂದು ಟ್ವಿಸ್ಟ್ ಕೊಡುತ್ತಾರೆ. ಈ ವಾರ ಡಬಲ್ ಎಲಿಮಿನೇಷನ್ ಎಂಬ ಸುಳಿವನ್ನು ಬಿಗ್ಬಾಸ್ ಮೊದಲೇ ಕೊಟ್ಟಿದ್ದರು. ಅದರಂತೆ ಶನಿವಾರದ ಎಪಿಸೋಡ್ನಲ್ಲಿ ಎಲ್ಲರಿಗೂ ಅಚ್ಚರಿ ಆಗುವಂತೆ ಸೂರಜ್ ಅವರು ಮನೆಯಿಂದ ಹೊರಗೆ ಹೋಗಿದ್ದರು. ಸಹ ಸ್ಪರ್ಧಿಗಳು ವಿದಾಯ ಸಹ ಹೇಳಲಾಗದೆ ಸೂರಜ್ ಅವರನ್ನು ಹೊರಗೆ ಕಳಿಸಲಾಗಿತ್ತು. ಇದೀಗ ಭಾನುವಾರವೂ ಸಹ ಒಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಈ ಬಾರಿಯೂ ಅಚ್ಚರಿಯ ಸ್ಪರ್ಧಿಯನ್ನು ಹೊರಗೆ ಕಳಿಸಲಾಗಿದೆ.
ಈ ವಾರ ಸುದೀಪ್ ಬಂದಿರಲಿಲ್ಲ ಬದಲಿಗೆ ಮಾಜಿ ಸ್ಪರ್ಧಿ, ನಟಿ ಅನುಪಮಾ ಅವರು ಬಿಗ್ಬಾಸ್ ಮನೆಗೆ ಬಂದು ಸ್ಪರ್ಧಿಗಳೊಟ್ಟಿಗೆ ಕೆಲವು ಫನ್ ಆಕ್ಟಿವಿಟಿಗಳನ್ನು ಮಾಡಿಸಿದರು. ಜೊತೆಗೆ ಈ ಬಾರಿ ನಾಮಿನೇಷನ್ನಲ್ಲಿದ್ದ ಸ್ಪರ್ಧಿಗಳಲ್ಲಿ ಕೆಲವರನ್ನು ನಾಮಿನೇಷನ್ನಿಂದ ಕಾಪಾಡಲು ಆಕ್ಟಿವಿಟಿ ಮಾಡಿಸಲಾಯ್ತು. ಕಾಫಿ ಕಪ್ ಆಕ್ಟಿವಿಟಿ, ಕೈಗೆ ಬಣ್ಣ ಮೆತ್ತುವ ಆಕ್ಟಿವಿಟಿಗಳನ್ನು ಆಡಿಸುವ ಮೂಲಕ ಈ ವಾರ ಬಚಾವಾದವರನ್ನು ಘೋಷಿಸಲಾಯ್ತು. ಅವುಗಳಲ್ಲಿ ರಾಶಿಕಾ, ಧ್ರುವಂತ್, ರಕ್ಷಿತಾ ಇನ್ನೂ ಕೆಲವರು ಬಚಾವಾದರು.
ಅಂತಿಮವಾಗಿ ಸ್ಪಂದನಾ ಮತ್ತು ಮಾಳು ಅವರುಗಳು ಉಳಿದುಕೊಂಡರು. ಈ ವೇಳೆ ಸ್ಪರ್ಧಿಗಳು ಕೆಲವರು ಮಾಳು ಉಳಿಯಬೇಕು ಎಂದರೆ ಕೆಲವರು ಸ್ಪಂದನಾ ಉಳಿಯಬೇಕು ಎಂದರು. ಬಳಿಕ ಬಿಗ್ಬಾಸ್ ಎರಡು ಕಾರುಗಳನ್ನು ಕರೆಸಿ, ಮಾಳು ಮತ್ತು ಸ್ಪಂದನಾ ತಲಾ ಒಂದು ಕಾರಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಅಂತೆಯೇ ಮಾಳು ಮತ್ತು ಸ್ಪಂದನಾ ಕಾರುಗಳಲ್ಲಿ ಕುಳಿತರು. ಎರಡೂ ಕಾರುಗಳು ಬಿಗ್ಬಾಸ್ ಮನೆಯಿಂದ ಹೊರಗೆ ಹೋದವು. ಆದರೆ ವಾಪಸ್ಸಾಗಿದ್ದು ಕೇವಲ ಒಂದು ಕಾರು. ಆ ಕಾರಿನಿಂದ ಸ್ಪಂದನಾ ಕೆಳಗೆ ಇಳಿದರು. ಆ ಮೂಲಕ ಮಾಳು ಬಿಗ್ಬಾಸ್ ಮನೆಯಿಂದ ಹೊರಗೆ ಹೋದಂತಾಯ್ತು.
ಈ ವಾರ ಸೂರಜ್ ಮತ್ತು ಮಾಳು ಅವರುಗಳು ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಈ ಬಾರಿ ಹೊರಗೆ ಹೋದವರ ದುರಾದೃಷ್ಟವೆಂದರೆ ಸುದೀಪ್ ಅವರನ್ನು ವೇದಿಕೆ ಮೇಲೆ ಭೇಟಿ ಆಗುವ ಅವಕಾಶವೂ ಕೈತಪ್ಪಿದೆ. ಆದರೆ ಮುಂದಿನ ವಾರ ಇವರುಗಳನ್ನು ಮತ್ತೆ ವೇದಿಕೆಗೆ ಕರೆಸುವ ಸಾಧ್ಯತೆ ಇದೆ. ಪ್ರಸ್ತುತ ಬಿಗ್ಬಾಸ್ ಮನೆಯಲ್ಲಿ ಅಶ್ವಿನಿ, ರಘು, ಗಿಲ್ಲಿ, ಕಾವ್ಯಾ, ಸ್ಪಂದನಾ, ರಕ್ಷಿತಾ, ಧ್ರುವಂತ್, ಧನುಶ್, ರಾಶಿಕಾ ಅವರುಗಳು ಮಾತ್ರ ಉಳಿದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸ್ಪರ್ಧೆ ಇನ್ನಷ್ಟು ಕಠಿಣ ಆಗಲಿದೆ.
ನವದೆಹಲಿ, ಡಿಸೆಂಬರ್ 28: ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರವಾರದ ನೌಕಾನೆಲೆಯಿಂದ ತಮ್ಮ ಮೊದಲ ಜಲಾಂತರ್ಗಾಮಿ ಪ್ರಯಾಣವನ್ನು ನಡೆಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಐಎನ್ಎಸ್ ವಾಗ್ಶೀರ್ನಲ್ಲಿ ಸಮುದ್ರ ತೀರದಲ್ಲಿ ಹಾರಾಟ ನಡೆಸಿದರು. ಹಾರಾಟದ ಸಮಯದಲ್ಲಿ ಭಾರತದ ಕಡಲ ಕಾರ್ಯತಂತ್ರದಲ್ಲಿ ಜಲಾಂತರ್ಗಾಮಿ ಪಡೆಯ ಪಾತ್ರ ಮತ್ತು ರಾಷ್ಟ್ರೀಯ ಕಡಲ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಕಾರ್ಯಾಚರಣೆಯ ಸಾಮರ್ಥ್ಯಗಳು ಮತ್ತು ಕೊಡುಗೆಗಳ ಬಗ್ಗೆ ರಾಷ್ಟ್ರಪತಿಗಳಿಗೆ ವಿವರಿಸಲಾಯಿತು.
ಈ ಮೂಲಕ ಇಂತಹ ಕಾರ್ಯಾಚರಣೆಯನ್ನು ಕೈಗೊಂಡ ಭಾರತದ ಎರಡನೇ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು 2006ರಲ್ಲಿ ಜಲಾಂತರ್ಗಾಮಿ ಹಾರಾಟವನ್ನು ಕೈಗೊಂಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಗಿಲ್ಲಿ ಬಿಗ್ಬಾಸ್ (Bigg Boss) ಕನ್ನಡದ ಪಕ್ಕಾ ಎಂಟರ್ಟೈನರ್ ಆಗಿದ್ದಾರೆ. ಯಾರೇ ಬರಲಿ, ಸನ್ನಿವೇಶ ಎಂಥಹುದ್ದೇ ಇರಲಿ ನಗಿಸುತ್ತಲೇ ಇರುತ್ತಾರೆ. ಕೆಲವೊಮ್ಮೆ ಅವರ ಕಾಮಿಡಿ ಎದುರಿಗಿದ್ದವರಿಗೆ ಅಪಹಾಸ್ಯ, ವ್ಯಂಗ್ಯ ಎನಿಸಿ ಸಿಟ್ಟು ಬರುವುದೂ ಉಂಟು ಆದರೆ ಅದನ್ನೆಲ್ಲ ಗಮನಕ್ಕೆ ತೆಗೆದುಕೊಳ್ಳದೆ ನಗಿಸುತ್ತಲೇ ಇರುತ್ತಾರೆ. ಗಿಲ್ಲಿ, ಬಿಗ್ಬಾಸ್ ಮನೆಗೆ ಬಂದಾಗಿನಿಂದಲೂ ಕಾವ್ಯಾ ಜೊತೆಗೆ ಒಳ್ಳೆಯ ಗೆಳೆತನ ಇರಿಸಿಕೊಂಡಿದ್ದಾರೆ. ಕಾವ್ಯಾರನ್ನು ಗೋಳು ಹೊಯ್ದುಕೊಳ್ಳುತ್ತಿರುತ್ತಾರೆ. ಕಾವ್ಯಾ ಹಿಂದೆ ಬಿದ್ದಿದ್ದಾರೆ. ಆದರೆ ಇದೀಗ ಒಮ್ಮೆಲೆ ಕಾವ್ಯಾ ಅನ್ನು ಬಿಟ್ಟು ಮೋನಿಕಾಗೆ ‘ಲವ್ ಯು’ ಎಂದಿದ್ದಾರೆ. ವಿಶೇಷವೆಂದರೆ ಮೋನಿಕಾ ಸಹ ಓಕೆ ಹೇಳಿಬಿಟ್ಟಿದ್ದಾರೆ!
ಸುದೀಪ್ ಅವರು ಈ ವೀಕೆಂಡ್ನಲ್ಲಿ ಬಿಗ್ಬಾಸ್ ಶೋಗೆ ಗೈರು ಹಾಜರಾಗಿದ್ದಾರೆ. ‘ಮಾರ್ಕ್’ ಸಿನಿಮಾದ ಪ್ರಚಾರದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಹಾಗಾಗಿ ಬಿಗ್ಬಾಸ್ ಮನೆಗೆ ಬೇರೆ ಅತಿಥಿಗಳು ಕೆಲವರು ಬಂದಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿರುವ ‘ಗೌರಿ ಕಲ್ಯಾಣ’ ಧಾರಾವಾಹಿ ಪಾತ್ರಧಾರಿಗಳು ಈ ವಾರ ಬಿಗ್ಬಾಸ್ ಮನೆಗೆ ಬಂದಿದ್ದರು. ಧಾರಾವಾಹಿಯ ಮುಖ್ಯ ಪಾತ್ರಗಳಾದ ತಾಯಿ, ಮೂವರು ಹೆಣ್ಣು ಮಕ್ಕಳು ಸಹ ಬಂದಿದ್ದರು.
ತಾಯಿ ಪಾತ್ರಧಾರಿಗೆ ತಮ್ಮ ಹೆಣ್ಣು ಮಕ್ಕಳನ್ನು ಶ್ರೀಮಂತ ಮನೆಗೆ ಸೊಸೆಯಾಗಿ ಕಳಿಸಬೇಕು ಎಂಬುದು ಆಸೆ, ಅದರಂತೆ ಬಿಗ್ಬಾಸ್ಗೆ ಬಂದಾಗಲೂ ಸಹ ‘ಗೌರಿ ಕಲ್ಯಾಣ’ ತಾಯಿ ಪಾತ್ರಧಾರಿ ದೀಪಿಕಾ ಅವರು ತಮ್ಮ ಹೆಣ್ಣು ಮಕ್ಕಳಿಗೆ ಗಂಡು ಹುಡುಕುವ ಪ್ರಯತ್ನ ಮಾಡಿದರು. ಈ ವೇಳೆ ಗಿಲ್ಲಿ, ತಾನು ಮಹಾನ್ ಶ್ರೀಮಂತ ಎಂದು ಫೋಸು ಕೊಡುತ್ತಾ, ತನಗೆ ಸಾಕಷ್ಟು ಆಸ್ತಿ ಇದೆ, ತನಗೆ ಮಲ್ಲೇಶ್ವರದಲ್ಲಿ ಎರಡು ಮನೆ ಇದೆ ನಿಮ್ಮ ಮಗಳನ್ನು ನನಗೆ ಕೊಡಿ ಎಂದರು. ಆದರೆ ತಾಯಿ ಪಾತ್ರಧಾರಿ ದೀಪಿಕಾ ಶರಣ್, ‘ನಿಮ್ಮಲ್ಲಿ ಎಲ್ಲ ಇದೆ ಆದರೆ ಬಾಚಣಿಗೆಯೇ ಇಲ್ಲ’ ಎಂದು, ಗಿಲ್ಲಿ ತಲೆ ಬಾಚಿಲ್ಲವೆಂದು ಪರೋಕ್ಷವಾಗಿ ಹೇಳಿದರು. ಆಗ ಗಿಲ್ಲಿ, ‘ಕೆಜಿಎಫ್’ ಸಿನಿಮಾ ನೆನಪಿಸಿ ಮೋನಿಕಾ ಪಾತ್ರಧಾರಿಯ ಕೈ ಹಿಡಿದು ತಲೆ ಬಾಚಿಸಿಕೊಂಡಿದ್ದು ನಗು ತರಿಸಿತು.
ಹಣದಿಂದ ಅಲ್ಲದಿದ್ದರೂ ತಮ್ಮ ಮಾತುಗಳಿಂದ ಮೋನಿಕಾ ಅನ್ನು ಇಂಪ್ರೆಸ್ ಮಾಡಲು ಮುಂದಾದ ಗಿಲ್ಲಿ, ‘ಮೋನಿಕಾ, ನಿನಗೆ ಬೇಡ ಆತಂಕ’ ಎಂದು ಕವನವನ್ನೇ ಕಟ್ಟಿ ಹೇಳಿದರು. ಗಿಲ್ಲಿಯ ಕವನಕ್ಕೆ ಮೋನಿಕಾ ಫಿದಾ ಸಹ ಆಗಿ ಬಿಟ್ಟರು. ಗಿಲ್ಲಿ ಸಹ ‘ಮೋನಿಕಾ ಐ ಲವ್ ಯೂ’ ಎಂದು ಹೇಳಿಬಿಟ್ಟಿರು, ಮೋನಿಕಾ ಸಹ ಒಪ್ಪಿ ಬಿಟ್ಟಿದ್ದರು, ಆದರೆ ತಾಯಿ ಅಡ್ಡ ಬಂದು ಬಿಟ್ಟರು. ಇದನ್ನೆಲ್ಲ ನೋಡುತ್ತಿದ್ದ ಮನೆ ಮಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕರು.
ನವದೆಹಲಿ, ಡಿಸೆಂಬರ್ 28: ಸ್ವಾಭಾವಿಕವಾಗಿ ನಾಯಿಗಳು ಮತ್ತು ಮಂಗಗಳು (Monkeys) ಬದ್ಧ ವೈರಿಗಳು. ಆದರೆ ಅದಕ್ಕಿಂತ ಭಿನ್ನವಾಗಿ ಕೋತಿಯೊಂದು ಎರಡು ನಾಯಿಗಳೊಂದಿಗೆ ಸ್ನೇಹ ಬೆಳೆಸಿದೆ. ತೆಲಂಗಾಣದ ಖಮ್ಮಂ ಜಿಲ್ಲೆಯ ಸಟ್ಟುಪಲ್ಲಿ ಪಟ್ಟಣದಲ್ಲಿ ಈ ವಿಚಿತ್ರವಾದ ಅಪರೂಪದ ದೃಶ್ಯ ಕಂಡುಬಂದಿದೆ. ಮನೆಮಾಲೀಕರೊಬ್ಬರು ಕೋತಿಯನ್ನು ತಂದು ಪಟ್ಟಣದಲ್ಲಿ ಮಂಗಗಳ ಕಾಟದಿಂದ ರಕ್ಷಣೆಗಾಗಿ ಅದನ್ನು ಸಾಕುತ್ತಿದ್ದಾರೆ. ಆದರೆ, ಅದೇ ಮನೆಯಲ್ಲಿರುವ ಎರಡು ನಾಯಿಮರಿಗಳು ಆ ಕೋತಿಯ ಜೊತೆ ಫ್ರೆಂಡ್ಸ್ ಆಗಿವೆ. ಕೋತಿ ನಾಯಿಮರಿಗಳ ಜೊತೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಡಿಸೆಂಬರ್ 28: ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಹೊಗಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ (Digvijay Singh) ವಿವಾದ ಸೃಷ್ಟಿಸಿದ್ದರು. ದಿಗ್ವಿಜಯ ಸಿಂಗ್ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಹಳೆಯ, ದಿನಾಂಕವಿಲ್ಲದ ಫೋಟೋವನ್ನು ಹಂಚಿಕೊಂಡಿದ್ದರು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಹಿರಿಯ ಎಲ್‌ಕೆ ಅಡ್ವಾಣಿ ಅವರೊಂದಿಗೆ ಇದ್ದಾರೆ. ಈ ಪೋಸ್ಟ್ನಲ್ಲಿ ದಿಗ್ವಿಜಯ್ ಸಿಂಗ್ ಆರ್‌ಎಸ್‌ಎಸ್‌ನ ಸಾಂಸ್ಥಿಕ ಬಲವನ್ನು ಶ್ಲಾಘಿಸಿದ್ದರು. ಇದು ಸಾಮಾನ್ಯ ಕಾರ್ಯಕರ್ತರನ್ನು ರಾಜಕೀಯ ನಾಯಕರನ್ನಾಗಿ ಪರಿವರ್ತಿಸಲು ಸಹಾಯ ಮಾಡಿದೆ ಎಂದು ಹೇಳಿದ್ದರು.
ಇದಕ್ಕೆ ಕಾಂಗ್ರೆಸ್ ನಾಯಕ ಮಾಣಿಕ್ಕಮ್ ಟ್ಯಾಗೋರ್ ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಿಕೊಂಡು, ಅದನ್ನು ಅಲ್-ಖೈದಾಗೆ ಹೋಲಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ದಿಗ್ವಿಜಯ ಸಿಂಗ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಮಾಣಿಕ್ಕಂ ಟ್ಯಾಗೋರ್, ಆರ್‌ಎಸ್‌ಎಸ್ ಅನ್ನು ದ್ವೇಷದ ಮೇಲೆ ನಿರ್ಮಿಸಲಾದ ಸಂಘಟನೆ ಎಂದು ಲೇವಡಿ ಮಾಡಿದ್ದಾರೆ. ಆರ್‌ಎಸ್‌ಎಸ್ ಅನ್ನು ಭಯೋತ್ಪಾದಕ ಗುಂಪು ಅಲ್-ಖೈದಾಗೆ ಹೋಲಿಕೆ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಾರವಾರ, (ಡಿಸೆಂಬರ್ 28): ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು (ಡಿಸೆಂಬರ್ 28) ಕರಾವಳಿ ಉತ್ಸವದಲ್ಲಿ ಭಾಗಿಯಾಗಿದ್ದು, ಈ ವೇಳೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸಿಹಿ ಸುದ್ದಿ ನೀಡಿದ್ದಾರೆ. ಕಾರವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ತೀರ್ಮಾನ ಮಾಡಲಾಗಿದ್ದು, ಇದಕ್ಕೆ ಹೊಸ ಪ್ರವಾಸೋದ್ಯಮ ನೀತಿರೂಪಿಸಲು ನಿರ್ಧರಿಸಲಾಗಿದೆ. ಗೋವಾ, ಮುಂಬೈ, ಸೌದಿಗೆ ನಮ್ಮವರು ಹೋಗುತ್ತಾರೆ. ಹೀಗಾಗಿ ಕರಾವಳಿಯಲ್ಲಿ ಅಭಿವೃದ್ಧಿಗೆ ನಿರ್ಧರಿಸಿದ್ದು, ಯುವಕರ ಶಕ್ತಿ, ನೈಸರ್ಗಿಕ ಸಂಪತ್ತು ಬಳಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಚರ್ಚಿಸಲು ಜನವರಿ 10ರಂದು ಕರಾವಳಿಯ ಮೂರು ಜಿಲ್ಲೆಗಳ ಡಿಸಿಗಳ ಸಭೆ ಕರೆಯಲಾಗಿದ್ದು, ದೇಶ ವಿದೇಶದ ಬಂಡವಾಳ ಹೂಡಿಕೆದಾರರಿಗೆ ಆಹ್ವಾನ ನೀಡಲಾಗಿದೆ. ಅವರ ಸಲಹೆ, ಮಾರ್ಗದರ್ಶನ ಪರಿಗಣಿಸಲಾಗುವುದು. ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ನೀತಿ ರೂಪಿಸುವ ಜವಾಬ್ದಾರಿ ನಾನೇ ಹೊತ್ತಿದ್ದೇನೆ, ನಾನೆ ಈ ಸಭೆ ಮಾಡ್ತೇನೆ ಎಂದರು. ಈ ಮೂಲಕ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಡಿಕೆಶಿ ಪಣತೊಟ್ಟಿದ್ದಾರೆ.