“ನಿಮ್ಮ ಈ ಪರೀಕ್ಷೆಗಿಂತ ಸಾಯುವುದೇ ಉತ್ತಮ”: ಪೊಲೀಸರ ಮುಂದೆ ಬೈಕ್​​​ಗೆ ಬೆಂಕಿ ಹಚ್ಚಿ, ಪರಾರಿಯಾದ ಯುವಕ – Kannada News | Mysore Road: Drunk Driver Burns Bike, Threatens Police, Flees

ಬೆಂಗಳೂರು, ಜ.1: ಬೆಂಗಳೂರಿನ (Bengaluru drunk driving) ಮೈಸೂರು ರಸ್ತೆಯಲ್ಲಿ ತಡರಾತ್ರಿ ಕುಡಿದು ವಾಹನ ಚಲಾಯಿಸುವವರ ತಪಾಸಣೆ ನಡೆಸುತ್ತಿದ್ದ ವೇಳೆ ಒಂದು ಅಹಿತಕರ ಘಟನೆಯೊಂದು ನಡೆದಿದೆ. ಶನಿವಾರದಂದು (ಡಿ.27) ಕುಡಿದು ವಾಹನ ಚಲಾಯಿಸುತ್ತಿದ್ದ ಬೈಕ್ ಸವಾರನೊಬ್ಬ ಸಂಚಾರ ಪೊಲೀಸರಿಗೆ ಬೆದರಿಕೆ ಹಾಕಿ, ಬ್ರೀತ್ ಅನಲೈಜರ್ ಪರೀಕ್ಷೆಗೆ ನಿರಾಕರಿಸಿ, ತನ್ನ ಸ್ವಂತ ಬೈಕ್​​​ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ ಕವಿಕಾ ಜಂಕ್ಷನ್ ಬಳಿ ರಾತ್ರಿ 10:35 ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸ್​​ ಅಧಿಕಾರಿಗಳು ಕುಡಿದು ವಾಹನ ಚಲಾಯಿಸುವವರನ್ನು ಹಿಡಿದು ದಂಡ ಹಾಕುವ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. ತಪಾಸಣೆಯ ಸಮಯದಲ್ಲಿ, ಪೊಲೀಸರು ಕುಡಿದು ವಾಹನ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಸವಾರನನ್ನು ತಡೆದು ಬ್ರೀತ್ ಅನಲೈಸರ್​​ ಊದುವಂತೆ ಹೇಳಿದ್ದಾರೆ. ಇದಕ್ಕೆ ನಿರಾಕರಿಸಿ, ಪೊಲೀಸರ ಜತೆಗೆ ಕಿರಿಕ್​​ ಮಾಡಿಕೊಂಡಿದ್ದಾನೆ.

ವ್ಯಕ್ತಿಯನ್ನು ಬಿಟಿಎಂ ಲೇಔಟ್ 1ನೇ ಹಂತದ ನಿವಾಸಿ ವೆಂಕಟೇಶ್ ಎಂದು ಹೇಳಲಾಗಿದೆ. ಪೊಲೀಸರ ಪ್ರಕಾರ, ಸವಾರ ಡ್ರಿಂಕ್​​ ಆಂಡ್​​​ ಡ್ರೈವ್​​​ ಮಾಡುತ್ತಿದ್ದ, ಈ ಕಾರಣಕ್ಕೆ ಬ್ರೀತ್ ಅನಲೈಸರ್ ಊದಲು ಹೇಳಿದ್ದೇವೆ. ಆದರೆ, ಅದಕ್ಕೆ ಒಪ್ಪುವ ಬದಲು, ನಮ್ಮ ಮೇಲೆಯೇ ದಾಳಿ ಮಾಡಲು ಮುಂದಾಗಿದ್ದಾನೆ. ಜತೆಗೆ ನಮಗೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದಾರೆ. ಇನ್ನು ವರದಿಯಗಳ ಪ್ರಕಾರ, ಪೊಲೀಸರ ಜತೆಗೆ ಗಲಾಟೆ ಮಾಡುವಾಗ ನಿಮ್ಮ ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದಕ್ಕಿಂತ ಸಾಯುವುದು ಅಥವಾ ತನ್ನ ಬೈಕನ್ನು ಸುಡುವುದು ಉತ್ತಮ ಎಂದು ಹೇಳಿದ್ದೇನೆ. ನಂತರ ಅವನನ್ನು ಮತ್ತು ಆತನ ಬೈಕ್​ನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಇದನ್ನೂ ಓದಿ: ಹೊಸ ವರ್ಷಕ್ಕೆ ರಾಜ್ಯದ ಜನರಿಗೆ ಶಾಕ್​​​ ಕೊಟ್ಟ ಗಾಳಿ ಗುಣಮಟ್ಟ, ಈ ಜಿಲ್ಲೆಗಳಲ್ಲಿ ಎಚ್ಚರವಹಿಸಲು ಸೂಚನೆ

ಪೊಲೀಸರು ನಡೆಸಿದ ಬ್ರೀತ್ ಅನಲೈಸರ್ ಪರೀಕ್ಷೆ ಮಾಡಿದಾಗ ವೆಂಕಟೇಶ್​ನ ಆಲ್ಕೋಹಾಲ್ ಮಟ್ಟವು 100 ಮಿಲಿಗೆ 367 ಮಿಗ್ರಾಂ ಇತ್ತು ಎಂದು ಹೇಳಲಾಗಿದೆ. ಇದು ಆತ ವಿಪರೀತವಾಗಿ ಮದ್ಯಸೇವನೆ ಮಾಡಿದ್ದಾನೆ ಎಂಬುದನ್ನು ತಿಳಿಸುತ್ತದೆ. ಇನ್ನು ಈ ಬಗ್ಗೆ ಅಧಿಕಾರಿಗಳು ಸವಾರನಿಗೆ ನೋಟಿಸ್​​ ನೀಡಿದ್ದಾರೆ. ಇದಕ್ಕೂ ನಿರಾಕರಿಸಿ, ಅಧಿಕಾರಿಗಳ ಮೇಲೆ ಕೂಗಾಡಿದ್ದಾನೆ. ನಂತರ ಪೊಲೀಸ್​​ ಠಾಣೆಯಿಂದ ಹೊರ ಬಂದು, ಬೈಕ್​​ಗೆ ಇಂಧನ ತುಂಬಿಸಿ, ಬೆಂಕಿ ಕೊಟ್ಟಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಇದು ವೆಂಕಟೇಶ್​​ಗೆ ಎರಡನೇ ಬಾರಿ ದಂಡ ಹಾಕುತ್ತಿರುವುದು. ಈ ಹಿಂದೆಯೂ ಕೂಡ ಇವನ ಮೇಲೆ ಇದೇ ಕಾರಣಕ್ಕೆ ದಂಡ ಹಾಕಲಾಗಿತ್ತು. ಇದೀಗ ಮತ್ತೆ ದಂಡ ಹಾಕಿರುವುದು, ಆತನ ಮನಸ್ಸಿಗೆ ಬೇಜಾರಾಗಿದೆ. ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷ: ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ – Kannada News | New Year 2026: Special Puja and Abhisheka Performed in PM Modi’s Name at Dodda Ganapathi Temple, Bengaluru

ಬೆಂಗಳೂರು, ಜನವರಿ 1: ಹೊಸ ವರ್ಷದ ಹಿನ್ನೆಲೆ ಬೆಂಗಳೂರು ನಗರಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪೂಜೆ ನೆರವೇರಿಸಲಾಗುತ್ತಿದೆ. ವರ್ಷದ ಮೊದಲ ದಿನವನ್ನು ಭಕ್ತಿಭಾವದಿಂದ ಆರಂಭಿಸಲು ಸಾವಿರಾರು ಭಕ್ತರು ಬೆಳಗ್ಗೆಯೇ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಹೊಸ ವರ್ಷದ ಪ್ರಯುಕ್ತ ವಿಶೇಷ ಅಭಿಷೇಕ, ಅಲಂಕಾರ ಮತ್ತು ಮಹಾ ಪೂಜೆಗಳನ್ನು ನೆರವೇರಿಸಲಾಗುತ್ತಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಭಕ್ತರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಿಶೇಷ ಅರ್ಚನೆ ಹಾಗೂ ಅಭಿಷೇಕವನ್ನು ನೆರವೇರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಸಾಮಾನ್ಯ ಜನರು ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಬಾರದು ಯಾಕೆ? – Kannada News | Temple Sanctum Sanctorum Entry: Rules and Spiritual Significance

ದೇವಾಲಯವು ವಿದ್ಯುತ್ ಶಕ್ತಿಯ ಕೇಂದ್ರವಿದ್ದಂತೆ, ಭಗವಂತನ ಶಕ್ತಿಯ ಮೂಲವಾಗಿದೆ. ಪಂಚಭೂತಗಳಿಂದ ಉಂಟಾಗುವ ದೋಷಗಳು, ಶುಭಫಲಗಳು, ಕರ್ಮಫಲಗಳನ್ನು ನಿವೇದಿಸಿಕೊಳ್ಳುವ ಕೇಂದ್ರವೇ ದೇವಾಲಯ. ಗರ್ಭಗುಡಿ ಪ್ರವೇಶವನ್ನು ಎಲ್ಲರೂ ಮಾಡಬಹುದೇ? ಅದು ಶುಭವೇ ಅಥವಾ ಅಶುಭವೇ? ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದಾರೆ.

ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಲ್ಲಿ ಸಾಮಾನ್ಯವಾಗಿ ಅರ್ಥ, ಅರ್ಥಾರ್ಥಿ, ಜ್ಞಾನಿ, ಜಿಜ್ಞಾಸು ಎಂಬ ನಾಲ್ಕು ವಿಧಗಳಿರುತ್ತವೆ. ಆದರೆ, ಗರ್ಭಗುಡಿಗೆ ಪ್ರವೇಶವು ಸಾಮಾನ್ಯವಾಗಿ ಕೆಲವೇ ವರ್ಗದ ಜನರಿಗೆ ಮೀಸಲಾಗಿದೆ. ಅತಿಯಾದ ಶ್ರೀಮಂತಿಕೆ ಇರುವವರಿಗೆ, ಅಧಿಕಾರ ಸ್ಥಾನದಲ್ಲಿರುವವರಿಗೆ – ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು, ಸಚಿವರು – ಹಾಗೂ ಅತಿಯಾದ ವಿದ್ಯಾವಂತರು ಮತ್ತು ಪಂಡಿತರಿಗೆ ಗರ್ಭಗುಡಿ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ.

ಆದರೆ, ಯಾವುದೇ ದೇವಸ್ಥಾನದಲ್ಲಿ ದೇವರನ್ನು ನೇರವಾಗಿ ಮುಟ್ಟುವ ಹಕ್ಕು ಅಥವಾ ಶಕ್ತಿ ಸಾಮಾನ್ಯ ಭಕ್ತರಿಗೆ ಇರುವುದಿಲ್ಲ. ಜ್ಯೋತಿರ್ಲಿಂಗಗಳು ಮಾತ್ರ ಇದಕ್ಕೆ ಹೊರತಾಗಿವೆ. ಜ್ಯೋತಿರ್ಲಿಂಗಗಳಲ್ಲಿ ಪ್ರಾಚೀನ ಕಾಲದಿಂದಲೂ ಭಕ್ತರಿಗೆ ತಮ್ಮ ಕೈಯಾರೆ ದೇವರಿಗೆ ಅಭಿಷೇಕ ಮಾಡಲು ಅವಕಾಶವಿದೆ. ಇದಕ್ಕೆ ಯಾವುದೇ ಪ್ರಾಕಾರ, ಕಿರುದಾದ ಗುಡಿ ಅಥವಾ ಗರ್ಭಗುಡಿಯ ಕಟ್ಟುನಿಟ್ಟಾದ ನಿಯಮಗಳು ಅನ್ವಯಿಸುವುದಿಲ್ಲ.

ಆದರೆ, ಸಾಮಾನ್ಯ ದೇವಾಲಯಗಳಲ್ಲಿ ಗರ್ಭಗುಡಿಯು ತನ್ನದೇ ಆದ ಪ್ರಾಕಾರ, ಆಲಯ ದೇವತೆಗಳು ಮತ್ತು ಪರಿವಾರ ದೇವತೆಗಳನ್ನು ಹೊಂದಿರುತ್ತದೆ. ಶ್ರೀಮಂತಿಕೆ, ಅಧಿಕಾರ ಅಥವಾ ವಿವಿಐಪಿ ಸ್ಥಾನಮಾನ ಇದ್ದರೂ ಸಹ, ಅರ್ಚಕರು ಕರೆದರೆ ಗರ್ಭಗುಡಿಯ ಹೊಸ್ತಿಲಿನವರೆಗೂ ಹೋಗುವುದು ಶುಭಕರ. ಇದರಿಂದ ಇಷ್ಟಾರ್ಥಗಳು ಈಡೇರಬಹುದು. ಆದರೆ, ಗರ್ಭಗುಡಿಯ ಒಳಗಡೆ ಪ್ರವೇಶಿಸುವುದು ಅರ್ಚಕರಿಗೆ ಮಾತ್ರ ಸೀಮಿತವಾಗಿದೆ. ಇದಕ್ಕೆ ಕಾರಣವೆಂದರೆ, ಅರ್ಚಕರು ಅಥವಾ ಪುರೋಹಿತರು ಪ್ರತಿದಿನ ಶುಚಿತ್ವದಿಂದ, ಸಂಕಲ್ಪಗಳನ್ನು ಮಾಡಿ, ಮಂತ್ರಗಳ ಮೂಲಕ ಭಗವಂತನನ್ನು ಅಲ್ಲಿ ಆವಾಹಿಸಿರುತ್ತಾರೆ. ಅಲ್ಲಿ ದೈವಿಕ ಶಕ್ತಿ ಮತ್ತು ಲಹರಿಗಳು ಇರುತ್ತವೆ.

ಇದನ್ನೂ ಓದಿ: ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದು ಕರೆಯುವುದೇಕೆ? ಮಾಹಿತಿ ಇಲ್ಲಿದೆ

ಅಲ್ಲದೆ, ಉಗ್ರ ದೇವತೆಗಳು, ಶಿವಲಿಂಗಗಳು, ನಾಗ ಕಲ್ಲುಗಳು, ನಾಗ ಬನಗಳು, ಶ್ರೀ ಚಕ್ರಗಳು, ಭೂಗರ್ಭ ಚಕ್ರಗಳು ಮುಂತಾದವನ್ನು ಸಾಮಾನ್ಯರು ಸ್ಪರ್ಶಿಸಬಾರದು. ಮಾನವ ದೇಹವು ಪಂಚಭೂತಗಳಿಂದ ಕೂಡಿದೆ ಮತ್ತು ಮಲಮೂತ್ರಗಳ ದೇಹವಾಗಿದೆ. ಶುದ್ಧ ಮನಸ್ಸಿನಿಂದ ಮನೆಯ ದೇವರ ಮನೆಯಲ್ಲಿ ದೇವರನ್ನು ಮುಟ್ಟಬಹುದೇ ಹೊರತು, ದೇವಾಲಯದ ಗರ್ಭಗುಡಿ ಪ್ರವೇಶಿಸುವುದು ಅಷ್ಟು ಶುಭಕರವಲ್ಲ. ಮೂರ್ತಿ ಸೃಷ್ಟಿ, ಪ್ರತಿಷ್ಠಾಪನೆ, ಮತ್ತು ಪ್ರಭಾವಳಿಗೆ ತನ್ನದೇ ಆದ ನಿಯಮ ಮತ್ತು ವಿಧಿ ವಿಧಾನಗಳಿರುತ್ತವೆ.

ಇದಕ್ಕೆ ಉದಾಹರಣೆಯಾಗಿ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಮತ್ತು ರೋಗಿ ಮಾತ್ರ ಇರುತ್ತಾರೆ, ಮೂರನೆಯವರಿಗೆ ಪ್ರವೇಶವಿರುವುದಿಲ್ಲ. ಅದೇ ರೀತಿ, ಗರ್ಭಗುಡಿಯೊಳಗೆ ಅರ್ಚಕರು ಮತ್ತು ದೇವರು ಮಾತ್ರ ಇರಬೇಕು. ಭಕ್ತರು ದೂರದಿಂದಲೇ ದೇವರನ್ನು ನೋಡಿ ಪ್ರಾರ್ಥಿಸುವುದು ಹೆಚ್ಚು ಒಳ್ಳೆಯದು. ಭಗವಂತನು ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವಶಕ್ತನಾಗಿರುವುದರಿಂದ, ಅಧಿಕಾರದ ಅಥವಾ ಹಣದ ಬಲದಿಂದ ಗರ್ಭಗುಡಿ ಪ್ರವೇಶಿಸುವುದು ಅಷ್ಟು ಶುಭಕರವಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಂದೆಯ ಶವ, ಪ್ರಜ್ಞೆ ತಪ್ಪಿದ ತಾಯಿ ಜತೆ ಕತ್ತಲೆಯ ಕಾಡಿನಲ್ಲಿ ರಾತ್ರಿ ಕಳೆದ ಐದು ವರ್ಷದ ಬಾಲಕ – Kannada News | Tragic Night in the Forest: Child Found Beside Dead Father and Injured Mother in Odisha

ಕಾಡು-ಸಾಂದರ್ಭಿಕ ಚಿತ್ರImage Credit source: Stockcake

ಒಡಿಶಾ, ಜನವರಿ 01: ಅಂದು ಆ ಕತ್ತಲೆಯ ಕಾಡಿನಲ್ಲಿದ್ದಿದ್ದು ಮೂವರಷ್ಟೇ. ತಂದೆ ಶವವಾಗಿ ಬಿದ್ದಿದ್ದರೆ, ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಯಾವುದೂ ಸಹಜವಾಗಿರಲಿಲ್ಲ. ಮಗನ ಎದುರೇ ಇಬ್ಬರೂ ವಿಷ ಸೇವಿಸಿದ್ದರು. ಈ ಘಟನೆ ಒಡಿಶಾದಲ್ಲಿ ನಡೆದಿದೆ. ಸತ್ತ ತಂದೆ ಮತ್ತು ವಿಷ ಸೇವಿಸಿ ಪ್ರಜ್ಞಾಹೀನಳಾಗಿ ಬಿದ್ದಿದ್ದ ತಾಯಿಯ ಪಕ್ಕದಲ್ಲಿ  ಐದು ವರ್ಷದ ಬಾಲಕ ಕುಳಿತು ಇಡೀ ರಾತ್ರಿ ಕಳೆದಿದ್ದ. ಇರಲು ಮನೆ ಇರಲಿಲ್ಲ, ಏನು ನಡೆಯುತ್ತಿದೆ ಎನ್ನುವ ಅರಿವು ಇರಲಿಲ್ಲ.

ಪೊಲೀಸರ ವರದಿ ಪ್ರಕಾರ, ಬಾಲಕನ ಪೋಷಕರು ದುಷ್ಮಂತ್ ಮಾಝಿ ಮತ್ತು ಅವರ ಪತ್ನಿ ರಿಂಕಿ ಮಾಝಿ ಎಂದು ಗುರುತಿಸಲಾಗಿದೆ. ರಿಂಕಿಯ ಪೋಷಕರ ಮನೆಗೆ ಹೋಗಿ ತಮ್ಮ ಬೈಕ್​ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಅವರ ನಡುವೆ ಜಗಳ ನಡೆದಿತ್ತು.

ಪ್ರಯಾಣದ ಸಮಯದಲ್ಲಿ, ಅವರು ಮೋಟಾರ್ ಸೈಕಲ್ ಅನ್ನು ರಸ್ತೆಬದಿಯ ಬಳಿ ನಿಲ್ಲಿಸಿ ಸುಮಾರು ಒಂದು ಕಿಲೋಮೀಟರ್ ನಡೆದು ಹತ್ತಿರದ ಕಾಡಿಗೆ ಹೋದರು. ಅಲ್ಲಿ ದಂಪತಿ ಕೀಟನಾಶಕ ಎಂದು ನಂಬಲಾದ ವಿಷಕಾರಿ ವಸ್ತುವನ್ನು ಸೇವಿಸಿದರು.

ಸುಮಾರು ಒಂದು ಗಂಟೆಯೊಳಗೆ, ದುಷ್ಮಂತ್ ವಿಷ ಸೇವಿಸಿ ಸಾವನ್ನಪ್ಪಿದರೆ, ಅವರ ಪತ್ನಿ ರಿಂಕಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಪೋಷಕರು ತಮ್ಮ ಚಿಕ್ಕ ಮಗನಿಗೂ ವಿಷ ನೀಡಿದ್ದರೂ, ಅವನು ಹೇಗೋ ಬದುಕುಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಡಿನಲ್ಲಿ ತನ್ನ ಹೆತ್ತವರ ಪಕ್ಕದಲ್ಲಿ ಒಂಟಿಯಾಗಿ ಕುಳಿತು ಬಾಲಕ ಇಡೀ ರಾತ್ರಿ ಕಳೆದಿದ್ದ. ಕತ್ತಲೆ ಮತ್ತು ಚಳಿಯಲ್ಲಿ, ಅವನು ತನ್ನ ತಂದೆಯ ದೇಹ ಮತ್ತು ಪ್ರಜ್ಞಾಹೀನ ತಾಯಿಯ ಹತ್ತಿರವೇ ಇದ್ದ, ಅವರನ್ನು ಅಲುಗಾಡಿಸಲು ಅಥವಾ ಸಹಾಯಕ್ಕಾಗಿ ಕರೆಯಲು ಸಾಧ್ಯವಾಗಲಿಲ್ಲ. ಬೆಳಗ್ಗೆ, ಧೈರ್ಯಶಾಲಿ ಪುಟ್ಟ ಬಾಲಕ ಕಾಡಿನಿಂದ ಹೊರಬಂದು ಹತ್ತಿರದ ರಸ್ತೆಗೆ ನಡೆದು ಹೋಗಿ ಸಹಾಯ ಪಡೆಯಲು ಮುಂದಾಗಿದ್ದ, ಸ್ಥಳೀಯರಿಗೆ ಭಯಾನಕ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಿದ್ದಾನೆ.

ಮತ್ತಷ್ಟು ಓದಿ: ರೈಲ್ವೆಯ ನಿವೃತ್ತ ಉದ್ಯೋಗಿ ಸಾವು, ಮಗಳ ದೇಹದಲ್ಲಿ ಮಾಂಸವೇ ಇಲ್ಲ, ಕೇರ್​ ಟೇಕರ್ ಆಗಿ ನೇಮಕಗೊಂಡಿದ್ದವರು ಮಾಡಿದ್ದೇನು?

ಸ್ಥಳೀಯರು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿದರು ಮತ್ತು ಪೊಲೀಸರು ಸ್ಥಳಕ್ಕೆ ತಲುಪಿದರು. ಮಗು, ಅವನ ತಾಯಿ ಮತ್ತು ಅವನ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ದುಃಖಕರವೆಂದರೆ, ರಿಂಕಿ ಮಾಝಿ ಅಂಗುಲ್ ಜಿಲ್ಲೆಯ ಛೇಂಡಿಪಾಡ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು. ವಿಷ ನೀಡಲಾಗಿದ್ದರೂ, ಮಗು ಬದುಕುಳಿದಿದ್ದು, ವೈದ್ಯಕೀಯ ಆರೈಕೆಯ ನಂತರ ಸ್ಥಿರವಾಗಿದೆ ಎಂದು ವರದಿಯಾಗಿದೆ.

ನಂತರ ಹೆಚ್ಚಿನ ಆರೈಕೆಗಾಗಿ ಅವನನ್ನು ಅವನ ಅಜ್ಜಿಯರಿಗೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐದು ವರ್ಷದ ಮಕ್ಕಳು ಕತ್ತಲೆಗೆ ಹೆದರುತ್ತಾರೆಂದು ಭಾವಿಸಲಾಗುತ್ತದೆ ಮತ್ತು ಈ ಮುಗ್ಧ ಹುಡುಗ ಇಡೀ ರಾತ್ರಿ ಕತ್ತಲ ಕಾಡಿನಲ್ಲಿಯೇ ಇದ್ದು ಜಯಿಸಿ ಬಂದಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೀವನದಲ್ಲಿ ಸುದೀಪ್ ಅವರಂತಹ ವ್ಯಕ್ತಿ ಸಿಕ್ಕಿದ್ದು ನನ್ನ ಪುಣ್ಯ; ನವೀನ್ ಚಂದ್ರ – Kannada News | Naveen Chandra on Sudeep: ‘Mark’ Actor Reveals Angel Like Mind

ನವೀನ್ ಚಂದ್ರ ಬಗ್ಗೆ ಅನೇಕರಿಗೆ ತಿಳಿದಿದೆ. ಅವರು ತಮಿಳು ನಟ. ಅವರು ಕನ್ನಡ ಚಿತ್ರರಂಗಕ್ಕೂ ಪರಿಚಯ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ‘ಮಾರ್ಕ್’ ಸಿನಿಮಾ. ಈ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿ ಅವರು ಜನಪ್ರಿಯತೆ ಪಡೆದರು. ಅವರು ಸ್ಪಷ್ಟ ಕನ್ನಡ ಮಾತನಾಡುತ್ತಾರೆ. ಅವರು ಈಗ ಒಂದು ವಿಷಯ ರಿವೀಲ್ ಮಾಡಿದ್ದಾರೆ. ಸುದೀಪ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

‘ಮಾರ್ಕ್’ ಚಿತ್ರದ ಹುಬ್ಬಳ್ಳಿ ಈವೆಂಟ್​​ನಲ್ಲಿ ನವೀನ್ ಚಂದ್ರ ಮಾತನಾಡಿದ್ದರು. ಈ ವೇಳೆ ಅವರು ಒಂದು ವಿಷಯ ಹಂಚಿಕೊಂಡರು. ಅದು ಈಗ ವೈರಲ್ ಆಗಿದೆ ‘ಮಧ್ಯಾಹ್ನ 2 ಗಂಟೆವರೆಗೆ ಚೆನ್ನೈನಲ್ಲಿದ್ದೆ. ಹುಬ್ಬಳ್ಳಿಗೆ ಬರಬೇಕು, ಹೇಗೆ ಬರಬೇಕು ಗೊತ್ತಾಗಲಿಲ್ಲ. ರಸ್ತೆ ಮೂಲಕವಂತೂ ಬರೋಕೆ ಸಾಧ್ಯವೇ ಇರಲಿಲ್ಲ. ಒಂದು ಕಾಲ್ ಬಂತು. ನೀವು ಇಲ್ಲಿ ಬರಬೇಕು ಎಂದರು ಸುದೀಪ್. ಸುದೀಪ್ ಸರ್ ನಿಮ್ಮ ಮನಸ್ಸು ದೊಡ್ಡದು. ನಾಲ್ಕೂವರೆಗೆ ಚೆನ್ನೈ ಬಿಟ್ಟೆ. 8 ಗಂಟೆಗೆ ಇಲ್ಲಿದ್ದೇನೆ. ಇದಕ್ಕೆ ಸುದೀಪ್ ಕಾರಣ’ ಎಂದರು ನವೀನ್ ಚಂದ್ರ.

‘ನಮ್ಮ ಇಡೀ ಕುಟುಂಬ ಅವರಿಗೆ ದೊಡ್ಡ ಅಭಿಮಾನಿ. ಅವರಿಗೆ ಯಾರು ತಾನೇ ಅಭಿಮಾನಿ ಅಲ್ಲ ಹೇಳಿ. ಅವರದ್ದು ಏಂಜಲ್ ರೀತಿಯ ಮನಸ್ಸು. ಅವರು ನಮಗೆ ಸಿಕ್ಕಿದ್ದು, ಪರಿಚಯ ಆಗಿದ್ದಕ್ಕೆ ನಾನು ಲಕ್ಕಿ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ? ಉತ್ತರಿಸಿದ ಹೀರೋ

ನವೀನ್ ಚಂದ್ರ ಅವರು ಸ್ವಚ್ಛವಾಗಿ ಕನ್ನಡ ಮಾತನಾಡ ಬಲ್ಲರು. ಅವರು ಹುಟ್ಟಿ ಬೆಳೆದಿದ್ದು ಬಳ್ಳಾರಿಯಲ್ಲಿ. ಹೀಗಾಗಿ, ಕನ್ನಡದಲ್ಲೇ ಅವರು ಓದಿದ್ದು. ಆ ಬಳಿಕ ತೆಲುಗು, ತಮಿಳು ಸಿನಿಮಾಗಳಿಂದ ಆಫರ್ ಬಂದು ಆ ಕಡೆ ಹೆಚ್ಚು ಸೆಟಲ್ ಆದರು. ಇದರಿಂದ ಅವರಿಗೆ ಕನ್ನಡದ ಟಚ್​ ಸ್ವಲ್ಪ ತಪ್ಪಿದೆ. ಆದರೂ ಅವರು ಭಾಷೆಯನ್ನು ಮರೆತಿಲ್ಲ. ‘ಮಾರ್ಕ್’ ಸಿನಿಮಾದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:33 am, Thu, 1 January 26

Source link

ಕೀ ಕೊಡೋದ್ರಲ್ಲಿ ಮಾಸ್ಟರ್​; ಗಿಲ್ಲಿ ಮಾತಿಗೆ ಉರಿದುರಿದು ಬಿದ್ದ ಧ್ರುವಂತ್-ಅಶ್ವಿನಿ – Kannada News | Big Boss Kannada 12: Gilli vs Ashwini Gowda Dhruvanth Fight, Controversy

ಗಿಲ್ಲಿ ನಟ (Gilli Nata) ಅವರು ಯಾರನ್ನಾದರೂ ಉರಿಸಬೇಕು, ಯಾರನ್ನಾದರೂ ಅಳಿಸಬೇಕು ಎಂದು ನಿರ್ಧರಿಸಿದರೆ ಅವರ ಮಾತೇ ಸಾಕು. ಅವರು ಕೀ ಕೊಡೋದ್ರಲ್ಲಿ ಮಾಸ್ಟರ್. ಈಗ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ-ಧ್ರುವಂತ್ ಹಾಗೂ ಗಿಲ್ಲಿ ನಟ ಮಧ್ಯೆ ಕಿರಿಕ್ ಆಗಿದೆ. ಗಿಲ್ಲಿ ಅದೆಷ್ಟು ಟ್ರಿಗರ್ ಮಾಡಿದರು ಎಂದರೆ, ಅಶ್ವಿನಿ ಅವರಿಗೆ ಕಂಟ್ರೋಲ್ ಸಿಗಲೇ ಇಲ್ಲ. ಅವರ ಮಾತು ಮಿತಿಮೀರಿದೆ. ತಾವು ಏಕವಚನ ಬಳಸಿ ಬೇರೆಯವರಿಂದ ಗೌರವ ನಿರೀಕ್ಷೆ ಮಾಡಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಮಧ್ಯೆ ಮೊದಲಿನಿಂದಲೂ ಕಿರಿಕ್​​ಗಳು ಆದ ಉದಾಹರಣೆ ಇದೆ. ಇತ್ತೀಚೆಗೆ ಅಶ್ವಿನಿ ಗೌಡ ಅವರು ಬದಲಾಗಿದ್ದರು. ಯಾವುದೇ ವಿಷಯ ಬಂದರೂ ಮೌನ ತಾಳುತ್ತಿದ್ದರು. ಅವರು ಯಾರ ಮೇಲೂ ಕೋಪ ಮಾಡಿಕೊಳ್ಳುತ್ತಾ ಇರಲಿಲ್ಲ. ಆದರೆ, ಈಗ ಅವರು ಮತ್ತೆ ಬದಲಾಗಿದ್ದಾರೆ. ಅವರು ನಿಯಂತ್ರಣ ಕಳೆದುಕೊಂಡಿದ್ದಾರೆ.

ಗಿಲ್ಲಿ ಮಾಡಿದ ಉಸ್ತುವಾರಿ ವಿಷಯಕ್ಕೆ ಚರ್ಚೆಗಳು ಆರಂಭ ಆದವು. ಗಿಲ್ಲಿ ನಟ ಅವರು ಉಸ್ತುವಾರಿಗೆ ತುಂಬಾನೇ ಟೈಮ್ ತೆಗೆದುಕೊಂಡರು ಎಂದು ಅಶ್ವಿನಿ ಗೌಡ ಹಾಗೂ ಧ್ರುವಂತ್ ಹೇಳಿದರು. ಇದು ಗಿಲ್ಲಿಗೆ ಕೋಪ ತರಿಸಿದೆ. ಇಬ್ಬರನ್ನೂ ಗಿಲ್ಲಿ ಟ್ರಿಗರ್ ಮಾಡುವ ನಿರ್ಧಾರಕ್ಕೆ ಬಂದರು. ಗಿಲ್ಲಿ ಮಾತಿನ ಮೂಲಕವೇ ಕಿಡಿ ಹೊತ್ತಿಸಿದರು. ಅದು ನಂತರ ಕಾಡ್ಗಿಚ್ಚಾಯಿತು.

ಇದನ್ನೂ ಓದಿ: ಗಿಲ್ಲಿಗೆ ‘ಲೋ*ರ್’, ಥರ್ಡ್​​ಕ್ಲಾಸ್ ಪದ ಬಳಕೆ ಮಾಡಿದ ಅಶ್ವಿನಿ; ಮತ್ತೆ ಬಂತು ಹಳೇ ವರ್ಷನ್

ಧ್ರುವಂತ್ ಹಾಗೂ ಅಶ್ವಿನಿ ಗೌಡ ಅವರು ಉರಿದುರಿದು ಬೀಳೋಕೆ ಆರಂಭಿಸಿದರು. ಆದರೆ, ಗಿಲ್ಲಿ ಮಾತ್ರ ಇದನ್ನು ಕೂಲ್ ಆಗೇ ತೆಗೆದುಕೊಳ್ಳುತ್ತಿದ್ದರು. ಇಬ್ಬರ ನಡುವೆ ನಡೆದ ವಾಗ್ವಾದದಲ್ಲಿ ಅಶ್ವಿನಿ ಗೌಡ ಅವರು ಕೆಟ್ಟ ಪದಗಳನ್ನು ಬಳಕೆ ಮಾಡಿದ್ದಾರೆ. ಈ ವಿಷಯ ವೀಕೆಂಡ್​​ನಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ಇವರ ಜಗಳ ಮನೆಯವರ ಅಸಮಾಧಾನಕ್ಕೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

New Year 2026: ಹೊಸ ವರ್ಷದ ಶುಭಾಶಯ ತಿಳಿಸಿ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದ ಪ್ರಧಾನಿ ಮೋದಿ – Kannada News | PM Modi Welcomes the New Year With Message of Peace and Collective Well Being

ನವದೆಹಲಿ, ಜನವರಿ 01: 2026ಕ್ಕೆ ಕಾಲಿಡುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ(Narendra Modi) ದೇಶ ಹಾಗೂ ವಿಶ್ವದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೆ ದೇಶದಲ್ಲಿ ಶಾಂತಿ ನೆಲೆಸಲು, ಪ್ರಜೆಗಳಿಗೆ ಉತ್ತಮ ಆರೋಗ್ಯ, ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಎಕ್ಸ್​​ನಲ್ಲಿ ಸಂದೇಶವನ್ನು ಹಂಚಿಕೊಂಡಿದ್ದು, ಜನರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸು ಪಡೆಯಲಿ ಎಂದು ಹಾರೈಸಿದ್ದಾರೆ.ಹೊಸ ವರ್ಷವು ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಮತ್ತು ನೀವು ಮಾಡುವ ಎಲ್ಲದರಲ್ಲೂ ಸಾಧನೆಯೊಂದಿಗೆ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದಿದ್ದಾರೆ.

ದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ಮಹಾನಗರಗಳಲ್ಲಿ, ಹೊಸ ವರ್ಷವನ್ನು ಸ್ವಾಗತಿಸಲು ಇಂಡಿಯಾ ಗೇಟ್, ಕನ್ನಾಟ್ ಪ್ಲೇಸ್ ಮತ್ತು ಮೆರೈನ್ ಡ್ರೈವ್‌ನಂತಹ ಪ್ರಸಿದ್ಧ ಸ್ಥಳಗಳ ಬಳಿ ದೊಡ್ಡ ಜನಸಮೂಹ ಜಮಾಯಿಸಿ, ಹಬ್ಬದ ವಾತಾವರಣವನ್ನು ಸೃಷ್ಟಿಸಿತು.

ಏತನ್ಮಧ್ಯೆ, ದೇಶಾದ್ಯಂತ ಅಧಿಕಾರಿಗಳು ಸಂಚಾರ ಸಲಹೆಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದರು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭಾರಿ ಜನದಟ್ಟಣೆಯ ನಿರೀಕ್ಷೆಯಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದರು. ದೇಶಾದ್ಯಂತ ರಾಜ್ಯ ಸರ್ಕಾರಗಳು ಹೊಸ ವರ್ಷವನ್ನು ಭವ್ಯ ಆಚರಣೆಗಳು, ಕೌಂಟ್‌ಡೌನ್ ಪಾರ್ಟಿಗಳು ಸ್ವಾಗತಿಸಿದವು.

ಪ್ರಧಾನಿ ಮೋದಿ ಪೋಸ್ಟ್​

ಏಕೆಂದರೆ ಆಚರಣೆಗಳು ಸುಗಮವಾಗಿ ಮತ್ತು ಯಾವುದೇ ಅಹಿತಕರ ಘಟನೆಗಳಿಲ್ಲದೆ ನಡೆಯುವಂತೆ ನೋಡಿಕೊಳ್ಳಲು ದೇಶಾದ್ಯಂತ ರಾಜ್ಯ ಸರ್ಕಾರಗಳು ಭದ್ರತಾ ಕ್ರಮಗಳನ್ನು ಹೆಚ್ಚಿಸಿವೆ.

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿದ್ದು, ಅದರಲ್ಲಿ  ನಿಮ್ಮೆಲ್ಲರಿಗೂ ಹೊಸ ವರ್ಷದ ಹೃತ್ಪೂರ್ವಕ  ಶುಭಾಶಯ. ಹೊಸ ವರ್ಷದ ಈ ಶುಭ ಸಂದರ್ಭವು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಹೊಸ ಭರವಸೆ, ಸಕಾರಾತ್ಮಕ ಶಕ್ತಿ ಮತ್ತು ನಿರಂತರ ಪ್ರಗತಿಯ ತರಲಿ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್

ಕ್ಯಾಪ್ಟನ್ಸಿ ಟಾಸ್ಕ್ ಈ ವಾರ ತುಂಬಾನೇ ಮುಖ್ಯ. ಈ ಬಾರಿ ಗೆದ್ದವರು ನೇರವಾಗಿ ಫಿನಾಲೆ ವಾರಕ್ಕೆ ಆಯ್ಕೆ ಆಗುತ್ತಾರೆ. ಇದಕ್ಕಾಗಿ ಭಾರೀ ಫೈಟ್ ನಡೆಯುತ್ತಿದೆ. ಈ ಟಾಸ್ಕ್​​ಗೆ ಧ್ರುವಂತ್ ಹಾಗೂ ಕಾವ್ಯಾ ಅವರನ್ನು ಉಸ್ತುವಾರಿ ಆಗಿ ನೇಮಕ ಮಾಡಲಾಗಿತ್ತು. ಇಬ್ಬರ ಮಧ್ಯೆ ಕಿರಿಕ್ ಆಗಿದೆ. ‘ಬಾಯಿ ಮುಚ್ಕೊಂಡು ಕೂತ್ಗೊ’ ಎಂದು ಕಾವ್ಯಾಗೆ ಧ್ರುವಂತ್ ಅವಾಜ್ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಪ್ಪಳ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ಟ್ವಿಸ್ಟ್: ತಾಲೂಕು ವೈದ್ಯಾಧಿಕಾರಿ ವಿರುದ್ಧವೇ ದಾಖಲಾಯ್ತು ಎಫ್​ಐಆರ್! – Kannada News | Koppal women harassment Case Takes Twist: FIR Filed Against Taluk Medical Officer for Alleged Evidence Tampering

ಕೊಪ್ಪಳ, ಜನವರಿ 1: ಕೊಪ್ಪಳ (Koppal) ಜಿಲ್ಲೆ ಯಲಬುರ್ಗಾದ ಮದ್ಲೂರಿನಲ್ಲಿ ನವೆಂಬರ್​​ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರೂ, ತಾಲೂಕು ವೈದ್ಯಾಧಿಕಾರಿಯು ಅತ್ಯಾಚಾರಿಗಳನ್ನು ರಕ್ಷಿಸಲು ಯತ್ನಿಸಿರುವುದು ಗೊತ್ತಾಗಿದೆ. ಸದ್ಯ ತಾಲೂಕು ವೈದ್ಯಾಧಿಕಾರಿ ವಿರುದ್ಧವೂ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಯಲಬುರ್ಗಾ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶಿವಕುಮಾರ್ ಸಾಕ್ಷಿ ನಾಶಪಡಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಶಿವಕುಮಾರ್ ವಿರುದ್ಧ ಯಲಬುರ್ಗಾ ಸಿಪಿಐ ಮೌನೇಶ್ವರ್‌ ಮಾಲಿಪಾಟೀಲ್ ಬಿಎನ್​ಎಸ್ 238 (ಬಿ)ಅಡಿ ಪ್ರಕರಣ ದಾಖಲಿಸಿದ್ದಾರೆ.

ಗ್ಯಾಂಗ್‌ ರೇಪ್‌ ಕೇಸ್‌ನಲ್ಲಿ ವೈದ್ಯಾಧಿಕಾರಿ ನಿರ್ಲಕ್ಷ್ಯತೆ ಮೇಲುನೋಟಕ್ಕೆ ಕಾಣಿಸಿದೆ. ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಸಂಗ್ರಹಿಸಿದ್ದ ವಸ್ತುಗಳ ಮೇಲೆ ಡಾಕ್ಟರ್‌ ನೆರವಿನಿಂದಲೇ ಸಿಬ್ಬಂದಿ ಸಹಿ ಮಾಡಿದ್ದಾರೆ. ಅಲ್ಲದೇ, ಆರೋಪಿಗಳಿಂದ ಸಂಗ್ರಹಿಸಿದ 16 ವಸ್ತುಗಳು ಹಾಗೂ ಡಿಎನ್‌ಎ ಸಾಕ್ಷಿಗಳನ್ನು ಸಿಗದಂತೆ ಮಾಡಿದ್ದಾರೆ. ಆ ಮೂಲಕ ಆರೋಪಿಗಳಿಗೆ ನೆರವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಕೇಳಿದರೆ, ಉದ್ಧಟತನದಿಂದ ವರ್ತಿಸಿದ್ದಾರೆ ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೊಪ್ಪಳ ಗ್ಯಾಂಗ್​ರೇಪ್ ಪ್ರಕರಣದ ಹಿನ್ನೆಲೆ

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮದ್ಲೂರ ಗ್ರಾಮದ ಬಳಿ 39 ವರ್ಷದ ಮಹಿಳೆ ಮೇಲೆ ನವೆಂಬರ್ 17 ರ ಸಂಜೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಹೊಸಪೇಟೆಯಿಂದ ಕುಷ್ಟಗಿಗೆ ತಮ್ಮ ಪರಿಚದವರ ಬಳಿ ಹಣ ತಗೆದುಕೊಂಡು ಹೋಗಲು ಮಹಿಳೆ ಬಂದಿದ್ದರು. ಆದರೆ ಅಲ್ಲಿಂದ ಆ ಮಹಿಳೆಯನ್ನು ಕರೆದುಕೊಂಡ ಹೋದ ನಾಲ್ವರು ಕಿರಾತಕರು, ಮತ್ತು ಬರಿಸುವ ಜ್ಯೂಸ್ ಕುಡಿಸಿ ಅತ್ಯಾಚಾರ ಎಸಗಿದ್ದರು. ಕೃತ್ಯದ ಸಂಬಂಧ ಮಹಿಳೆಯು ಪರಿಚಯಸ್ಥ ಲಕ್ಷ್ಮಣ ಎಂಬಾತ ಸೇರಿ ನಾಲ್ವರ ವಿರುದ್ದ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕುಷ್ಟಗಿ ಹಾಗೂ ಮದ್ಲೂರ ಸೀಮಾದ ಪಾಳು ಬಿದ್ದ ಮನೆಯಲ್ಲಿ ಯಾವುದೋ ಜ್ಯೂಸ್ ಕುಡಿಸಿ ಅತ್ಯಾಚಾರ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ದೂರು ದಾಖಲಾದ ಬಳಿಕ ಕೊಪ್ಪಳ ಎಸ್​​ಪಿ ಮೂರು ತಂಡಗಳನ್ನು ರಚನೆ ಮಾಡಿ, ಕೆಲವೇ ಗಂಟೆಗಳಲ್ಲಿ ಆರೋಪಿಗಳಾದ ಲಕ್ಷ್ಮಣ, ಬಸವರಾಜ್, ಶಿವಕುಮಾರ್ ಹಾಗೂ ಭೀಮಪ್ಪರನ್ನು ಬಂಧಿಸಿದ್ದರು. ಲಕ್ಷ್ಮಣ ಹಾಗೂ ಬಸವರಾಜ್ ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದವರು. ಭೀಮಪ್ಪ ಹಾಗೂ ಶಶಿಕುಮಾರ್ ಯಲಬುರ್ಗಾ ತಾಲೂಕಿನ ಹನುಮಾಪೂರ ಗ್ರಾಮದವರು. ನಂತರ ಬಂಧಿತರು ಜೈಲುಪಾಲಾಗಿದ್ದರು.

ಇದನ್ನೂ ಓದಿ: ಕೊಪ್ಪಳ: ಯಲಬುರ್ಗಾದಲ್ಲಿ ಮಹಿಳೆಗೆ ಮದ್ಯ ಸೇವನೆ ಮಾಡಿಸಿ ನಾಲ್ವರಿಂದ ಅತ್ಯಾಚಾರ

ಸದ್ಯ, ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ಸಾಕ್ಷ್ಯ ನಾಶಕ್ಕೆ ಮುಂದಾಗಿರುವುದರಿಂದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಹೊಸ ವರ್ಷಕ್ಕೆ ರಾಜ್ಯದ ಜನರಿಗೆ ಶಾಕ್​​​ ಕೊಟ್ಟ ಗಾಳಿ ಗುಣಮಟ್ಟ, ಈ ಜಿಲ್ಲೆಗಳಲ್ಲಿ ಎಚ್ಚರವಹಿಸಲು ಸೂಚನೆ – Kannada News | Poor Air Quality in Karnataka: Bengaluru AQI 168, Health Risks and Precautions

ಬೆಂಗಳೂರು, ಜ.1: ಹೊಸ ವರ್ಷದ ಮೊದಲು ದಿನವೇ ರಾಜ್ಯದಲ್ಲಿ ಗಾಳಿ ಗುಣಮಟ್ಟ (Karnataka air quality) ತುಂಬಾ ಹದಗೆಟ್ಟಿದೆ. ರಾಜ್ಯದಲ್ಲಿ ವಾಯು ಗುಣಮಟ್ಟ ಮಧ್ಯಮದಿಂದ ಕಳಪೆಯವರೆಗೆ ಇರಲಿದೆ ಎಂದು ಹೇಳಲಾಗಿದೆ. , ಹಲವಾರು ಪ್ರಮುಖ ನಗರಗಳು ಹೆಚ್ಚಿನ ಮಾಲಿನ್ಯ ಮಟ್ಟವನ್ನು ಅನುಭವಿಸುತ್ತಿವೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಗಾಳಿಯ ಗುಣಮಟ್ಟ ಕಳಪೆಯಾಗಿದ್ದು, AQI ಸರಿಸುಮಾರು 150–168 ರಷ್ಟಿದೆ . ಹಿರಿಯರು ಹಾಗೂ ಮಕ್ಕಳ ಮೇಲೆ ಇದರ ಪರಿಣಾಮ ಹೆಚ್ಚಾಗಲಿದೆ. ಅವರು ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಎಂದು ಸಲಹೆ ನೀಡಲಾಗಿದೆ. ಗಂಟಲಿನ ಕಿರಿಕಿರಿ ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸಬಹುದು. ಯಾದಗಿರಿಯಲ್ಲಿ ಇಂದಿನ ಗಾಳಿಯ ಗುಣಮಟ್ಟ 168 ಇರಲಿದೆ. ತುಮಕೂರಿನಲ್ಲಿ ಗಾಳಿಯ ಗುಣಮಟ್ಟ 167 ಇರಲಿದೆ. ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ 165 ಇದೆ. ಬೀದರ್​​​ನಲ್ಲಿ 189 ಗಾಳಿಯ ಗುಣಮಟ್ಟ ಇದೆ ಎಂದು ಹೇಳಲಾಗಿದೆ. ಇದು ರಾಜ್ಯದಲ್ಲಿರುವ ಕಳಪೆ ಗಾಳಿಯ ಗುಣಮಟ್ಟ ಎಂದು ಹೇಳಲಾಗಿದೆ.

ಇನ್ನು ವಿಜಯಪುರದಲ್ಲಿ ಗಾಳಿಯ ಗುಣಮಟ್ಟ 68 ಇದೆ. ಬಾಗಲಕೋಟೆಯಲ್ಲಿ ಗಾಳಿಯ ಗುಣಮಟ್ಟ 73 ಇದೆ. ಶಿವಮೊಗ್ಗದಲ್ಲೂ ಕೂಡ ಗಾಳಿಯ ಮಟ್ಟ ಮಧ್ಯಮವಾಗಿದು, ಸೂಚಂಕ್ಯ 74 ಇದೆ. ಚಾಮರಾಜನಗರದಲ್ಲಿ 76 ಗಾಳಿ ಗುಣಮಟ್ಟ ಇದೆ. ಇದು ಅತ್ಯಂತ ಮಧ್ಯಮ ಗಾಳಿಮಟ್ಟದ ಸೂಚಂಕ್ಯವಾಗಿದೆ. ಇಂದು PM2.5: 73 µg/m³ ಇರಲಿದೆ. ಹಾಗೂ PM10: 99 µg/m³ ಇರಲಿದೆ. ಎಲ್ಲ ಜಿಲ್ಲೆಗಳು WHO ಶಿಫಾರಸು ಮಾಡಿದ ಮಾನದಂಡಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ. ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆ ಇರುವವರು ಹೊರಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. N95 ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ

ಇಂದಿನ ರಾಜ್ಯದ ಗಾಳಿಯ ಗುಣಮಟ್ಟ:

ಬೆಂಗಳೂರು: 168

ಮಂಗಳೂರು: 165

ಮೈಸೂರು: 146

ಬೆಳಗಾವಿ:157

ಕಲಬುರ್ಗಿ: 155

ಶಿವಮೊಗ್ಗ: 182

ಬಳ್ಳಾರಿ: 199

ಹುಬ್ಬಳ್ಳಿ: 106

ಉಡುಪಿ: 160

ವಿಜಯಪುರ: 90

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version