ನೆಲಮಂಗಲ: ತಿರುವಿನಲ್ಲಿ ನಿಯಂತ್ರಣ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು, ತಂದೆ-ಮಗ ಸ್ಥಳದಲ್ಲೇ ಸಾವು – Kannada News | Bengaluru Family Car Crash: Software Engineer, Father Dead; 4 Injured
ನೆಲಮಂಗಲ, ಡಿಸೆಂಬರ್ 26: ಗೌರಿಬಿದನೂರಿನಿಂದ ದಾಸರಹಳ್ಳಿಗೆ ಮರಳುತ್ತಿದ್ದ ಒಂದೇ ಕುಟುಂಬದವರು ತೋಟಗೆರೆ ಬಳಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಕ್ರಿಸ್‌ಮಸ್ ಹಬ್ಬದ ನಂತರ ಸಂಜೆ 7:30 ಕ್ಕೆ ಕುಟುಂಬ ಸಮೇತವಾಗಿ ವಾಪಸ್ ಆಗುತ್ತಿದ್ದ ವೇಳೆ ತೋಟಗೆರೆ ಟರ್ನಿಂಗ್ ನಲ್ಲಿ ಕಂಟ್ರೋಲ್ ಸಿಗದೆ ಕಾರು ಮರಕ್ಕೆ ಡಿಕ್ಕಿಯಾಗಿದ್ದು ಸಾಪ್ಟ್ ವೇರ್ ಇಂಜಿನೀಯರ್ ಹರೀಶ್ (39) ಮತ್ತು ಅವರ ತಂದೆ ವೀರಭದ್ರ (80) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಯಿ ಗೌರಮ್ಮ (62), ಹರೀಶ್ ಪತ್ನಿ ಮೈತ್ರಿ (32), ಮಗಳು ಸಿರಿ (10),…