ಪಿಒಕೆ ಚುನಾವಣೆ ವೇಳೆ ಹಿಂಸಾಚಾರ: ಮತಪೆಟ್ಟಿಗೆಗೆ ಬೆಂಕಿ, ಪಿಪಿಪಿ ಕಾರ್ಯಕರ್ತನ ಹತ್ಯೆ – Kannada News | POK Election Violence: Ballot Box Burned, PPP Worker Killed Amid Widespread Protests
ಮುಜಫರಾಬಾದ್,ಜುಲೈ 28: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಸೋಮವಾರ ನಡೆದ ಶಾಸಕಾಂಗ ಸಭೆಯ ಮೊದಲ ಹಂತದ ಚುನಾವಣೆ(Election)ಯು ತೀವ್ರ ಹಿಂಸಾಚಾರ, ಅಕ್ರಮಗಳ ಆರೋಪ ಹಾಗೂ ಭದ್ರತಾ ಪಡೆಗಳ ಬಲಪ್ರಯೋಗದ ನಡುವೆ ಮುಕ್ತಾಯಗೊಂಡಿದೆ. ಸುಮಾರು 38 ಲಕ್ಷ ಮತದಾರರನ್ನು ಹೊಂದಿರುವ ಈ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹದಗೆಟ್ಟ ವಾತಾವರಣದಿಂದಾಗಿ ಆಡಳಿತವು ಇತಿಹಾಸದಲ್ಲೇ ಮೊದಲ ಬಾರಿಗೆ ಮತದಾನವನ್ನು ಮೂರು ಹಂತಗಳಾಗಿ ವಿಂಗಡಿಸಿದೆ. ಭಿಂಬರ್‌ನಲ್ಲಿರುವ ಮತದಾನ ಕೇಂದ್ರವೊಂದರಲ್ಲಿ ರಾಜಕೀಯ ಗುಂಪುಗಳ ನಡುವೆ ಭೀಕರ ಘರ್ಷಣೆ ಸಂಭವಿಸಿದ್ದು, ಶಸ್ತ್ರಸಜ್ಜಿತ ಕಿಡಿಗೇಡಿಗಳು ಮತಪೆಟ್ಟಿಗೆಯನ್ನು…