ಬಿಹಾರ, ಯುಪಿಗಿಂತ ಕರ್ನಾಟಕದಲ್ಲೇ ಹೆಚ್ಚು ಶಾಲೆ ತೊರೆಯುತ್ತಿರುವ ಹೆಣ್ಣುಮಕ್ಕಳು! – Kannada News | Karnataka Girls Dropout Rate Higher Than Bihar, UP: UDISE Report
ಬೆಂಗಳೂರು, ಜುಲೈ 28: ಪ್ರೌಢಶಾಲೆ (9 ಮತ್ತು 10ನೇ ತರಗತಿ) ಹಂತದಲ್ಲಿ ಶಾಲೆ ತೊರೆಯುವ (Dropout) ಹೆಣ್ಣುಮಕ್ಕಳ ಪ್ರಮಾಣದಲ್ಲಿ ಕರ್ನಾಟಕವು ದೇಶದ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬಿಹಾರ ಮತ್ತು ಉತ್ತರ ಪ್ರದೇಶದಂತಹ ಹಿಂದುಳಿದ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲೇ ಹೆಚ್ಚು ಹೆಣ್ಣುಮಕ್ಕಳು ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಷಯ ಲೋಕಸಭೆಯಲ್ಲಿ ಮಂಡಿಸಲಾದ ಕೇಂದ್ರ ಸರ್ಕಾರದ ಯುಡೈಸ್ ಪ್ಲಸ್ (UDISE+) ವರದಿಯಿಂದ ತಿಳಿದುಬಂದಿದೆ. ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಡ್ರಾಪ್‌ಔಟ್ ದರ ಹೆಚ್ಚು 2025-26ರ ಇತ್ತೀಚಿನ ವರದಿಯ ಪ್ರಕಾರ,…