ಭಾರತದಲ್ಲಿ ನೂರು ಕೋಟಿ ರೂ ಕುಬೇರರ ಸಂಖ್ಯೆ 4 ವರ್ಷದಲ್ಲಿ 4 ಪಟ್ಟು ಹೆಚ್ಚಳ: ಸರ್ಕಾರದಿಂದ ಮಾಹಿತಿ – Kannada News | Number of Indians with wealth of over Rs 100 crore has risen 4 times since 22fy, govt report
ನವದೆಹಲಿ, ಜುಲೈ 27: ಭಾರತದಲ್ಲಿ ಕೋಟ್ಯಾಧೀಶರರ ಸಂಖ್ಯೆ ಸಿಕ್ಕಾಪಟ್ಟೆ ಏರುತ್ತಿದೆ. ನೂರು ಕೋಟಿ ರೂಗೂ ಹೆಚ್ಚಿನ ಹಣವಂತರ ಸಂಖ್ಯೆ ಕಳೆದ ಐದು ವರ್ಷದಲ್ಲಿ ನಾಲ್ಕು ಪಟ್ಟು ಹೆಚ್ಚಿದೆಯಂತೆ. ಅದೂ ನೂರು ಕೋಟಿ ರೂ ಎನ್ನುವುದು ಘೋಷಿತ ಆದಾಯ. ಅಂದರೆ, ಐಟಿಆರ್ನಲ್ಲಿ (ITR) ತಮ್ಮ ಆದಾಯವನ್ನು ತೋರ್ಪಡಿಸಿರುವ ವ್ಯಕ್ತಿಗಳು ಇವರು. ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ. ಅಸೆಸ್‌ಮೆಂಟ್ ವರ್ಷ (AY) 2021-22 ರಲ್ಲಿ ₹100…