ಗರ್ಭಿಣಿಯಾಗಿದ್ದಾಗ ಪತ್ನಿ ಮೋಸ ಮಾಡಿದಳು; ಸಾಕ್ಷಿ ತೋರಿಸಿ ಆರೋಪ ಮಾಡಿದ ಅನುರಾಗ್ ದೊಬಾಲ್ – Kannada News | Anurag Dobhal accuses Wife Ritika Chauhan of Cheating during Pregnancy with proof in new video

‘UK07 ರೈಡರ್’ (UK07 Rider) ಎಂದೇ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ ಯುಟ್ಯೂಬರ್, ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೊಬಾಲ್, ತಮ್ಮ ಪತ್ನಿ ರಿತಿಕಾ ಚೌಹಾಣ್ (Ritika Chauhan) ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಕುಟುಂಬದವರು ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಈ ಹಿಂದೆ ಅನುರಾಗ್ ಆರೋಪಿಸಿದ್ದರು. ಪತ್ನಿ ಗರ್ಭಿಣಿಯಾಗಿದ್ದ ಸಮಯದಲ್ಲಿ ಆಕೆಯ ಬೆಸ್ಟ್ ಫ್ರೆಂಡ್ ಜೊತೆ ಅಫೇರ್ ಹೊಂದಿದ್ದರು ಎಂದು ಈಗ ಅನುರಾಗ್ (Anurag Dobhal) ಹೇಳಿದ್ದು, ಅದಕ್ಕೆ ಸಂಬಂಧಿಸಿದ ವೀಡಿಯೋ ಸಾಕ್ಷ್ಯಗಳನ್ನು ಹಂಚಿಕೊಂಡಿದ್ದಾರೆ.

ವೀಡಿಯೋ ಮತ್ತು ಚಾಟ್ ಸಾಕ್ಷಿ:

ತಮ್ಮ ಇತ್ತೀಚಿನ ಯೂಟ್ಯೂಬ್ ವ್ಲಾಗ್‌ನಲ್ಲಿ ಅನುರಾಗ್ ‘ಅನಾಥ್’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಇದು ತಮ್ಮ ಜೀವನದ ನೈಜ ಕಥೆಯನ್ನು ಬಿಂಬಿಸುತ್ತದೆ ಎಂದಿದ್ದಾರೆ. ಇದೇ ವೀಡಿಯೋದಲ್ಲಿ, ರಿತಿಕಾ ಜೊತೆ ಸಂಬಂಧ ಹೊಂದಿದ್ದಾರೆ ಎನ್ನಲಾದ ವ್ಯಕ್ತಿಯ ಪಕ್ಕದಲ್ಲೇ ಕುಳಿತು ಅನುರಾಗ್ ಪತ್ನಿಗೆ ಕರೆ ಮಾಡಿದ್ದಾರೆ. ಅಲ್ಲದೆ, ಆ ವ್ಯಕ್ತಿ ರಿತಿಕಾ ಅವರನ್ನು ‘ಗರ್ಲ್‌ಫ್ರೆಂಡ್’ ಎಂದು ಕರೆದಿರುವ ಸ್ಕ್ರೀನ್‌ಶಾಟ್ ಒಂದನ್ನೂ ಪ್ರಕಟಿಸಿದ್ದಾರೆ. ಆದರೆ ರಿತಿಕಾ ಅವರು ‘ನಾವು ಕೇವಲ ಬೆಸ್ಟ್ ಫ್ರೆಂಡ್ಸ್ ಅಷ್ಟೇ’ ಎಂದು ಸ್ಪಷ್ಟನೆ ನೀಡಿದ್ದಾರೆ.

ವೀಡಿಯೋದಲ್ಲಿ ಮುಂದುವರಿದು ಮಾತನಾಡಿದ ಆ ವ್ಯಕ್ತಿ, ರಿತಿಕಾ ಗರ್ಭಿಣಿಯಾಗಿದ್ದಾಗ ತಮ್ಮ ಸಹೋದರರಾದ ಎರಿಕ್ ಮತ್ತು ರೋಹಿತ್ ಜೊತೆ ತನ್ನ ಮನೆಗೆ ಬಂದಿದ್ದರು ಹಾಗೂ 15 ದಿನಗಳ ಕಾಲ ತನ್ನ ಮನೆಯಲ್ಲೇ ಉಳಿದುಕೊಂಡಿದ್ದರು ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ಅನುರಾಗ್‌ನಿಂದ ದೂರವಾಗುವಂತೆ ರಿತಿಕಾ ತಾಯಿಯೇ ಆಕೆಗೆ ಪ್ರಚೋದನೆ ನೀಡಿದ್ದರು ಎಂದೂ ಆರೋಪಿಸಿದ್ದಾನೆ.

‘ಮಗನನ್ನು ನೋಡಲು 37 ಲಕ್ಷ ರೂ. ಪಡೆದಿದ್ದಾರೆ’

ತಮ್ಮ ಮಗ ಅನುರಿತ್ ಹುಟ್ಟಿದ ನಂತರವೂ ತನಗೆ ಮಗನನ್ನು ಭೇಟಿಯಾಗಲು ರಿತಿಕಾ ಮತ್ತು ಆಕೆಯ ತಾಯಿ ಬಿಡುತ್ತಿಲ್ಲ ಎಂದು ಅನುರಾಗ್ ಅಳಲು ತೋಡಿಕೊಂಡಿದ್ದಾರೆ. ಮಗನನ್ನು ಭೇಟಿಯಾಗಲು ಈಗಾಗಲೇ ರಿತಿಕಾಗೆ 37 ಲಕ್ಷ ರೂಪಾಯಿ ನೀಡಲಾಗಿದೆ. ಅವರು ಇಷ್ಟಕ್ಕೇ ನಿಲ್ಲಿಸದೇ ಭಾರಿ ಮೊತ್ತದ ಜೀವನಾಂಶಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ದೂರಿದ್ದಾರೆ.

‘ನನ್ನ ಮಗನಿಗಾಗಿ ನಾನು ಎಲ್ಲವನ್ನೂ ಮುಚ್ಚಿಡಲು ಹಾಗೂ ಎಲ್ಲರನ್ನೂ ಕ್ಷಮಿಸಲು ಪ್ರಯತ್ನಿಸಿದೆ. ಆದರೆ ನನ್ನ ಬಳಿ ಪೋಷಕರು ಅಥವಾ ಕುಟುಂಬದ ಬೆಂಬಲವಿಲ್ಲದ ಕಾರಣವನ್ನು ಬಳಸಿಕೊಂಡು ಅವರು ನನಗೆ ಹಣಕಾಸಿನ ತೊಂದರೆ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನನ್ನ ಬೈಕ್‌ಗಳು, ಕಾರು ಸೇರಿದಂತೆ ನಾನು ಗಳಿಸಿದ್ದನ್ನೆಲ್ಲಾ ಮಾರಾಟ ಮಾಡಿದ್ದಾರೆ. ಆದರೂ ಮಗನಿಗಾಗಿ ಮತ್ತೆ ಶ್ರಮಿಸಿ ಹೊಸ ಜೀವನ ಕಟ್ಟಿಕೊಳ್ಳುತ್ತೇನೆ’ ಎಂದು ಅನುರಾಗ್ ಭಾವುಕವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅನುರಾಗ್ ದೊಭಾಲ್ ಆರೋಗ್ಯದಲ್ಲಿ ಚೇತರಿಕೆ: ಐಸಿಯುನಿಂದ ಹೊರಬಂದ ಯೂಟ್ಯೂಬರ್

ಮಾರ್ಚ್ ತಿಂಗಳಲ್ಲಿ, ತಮ್ಮ ಅಂತರ್ಜಾತಿ ವಿವಾಹವನ್ನು ಕುಟುಂಬದವರು ಒಪ್ಪಿಕೊಳ್ಳಲಿಲ್ಲ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಅನುರಾಗ್ ಇನ್‌ಸ್ಟಾಗ್ರಾಮ್ ಲೈವ್‌ನಲ್ಲೇ ತಮ್ಮ ಕಾರನ್ನು ಅಪಘಾತಕ್ಕೀಡುಮಾಡಿಕೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದ ಅವರಿಗೆ ಇದೀಗ ಗಂಡು ಮಗು ಜನಿಸಿದ್ದು, ಮಗನಿಗಾಗಿ ಮತ್ತೆ ಜೀವನ ಕಟ್ಟಿಕೊಳ್ಳುವುದಾಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿಕೆ ಶಿವಕುಮಾರ್ ಗೆ ಹೈ ಸೆಕ್ಯೂರಿಟಿ: ದೆಹಲಿಯಲ್ಲಿ ಸಿಎಂಗೆ ವಿಶೇಷ ಭದ್ರತೆ ನೀಡಿರುವುದು ಇದೇ ಮೊದಲು – Kannada News | Extra Security For Karnataka CM DK Shivakumar At Delhi

ನವದೆಹಲಿ, (ಜುಲೈ 27): ದೆಹಲಿಯಲ್ಲೂ ಸಹ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​​​​ಗೆ ಭದ್ರತೆ ಒದಗಿಸಲಾಗಿದೆ. ಬೆಂಗಳೂರಿನ ಭದ್ರತೆ ವ್ಯವಸ್ಥೆ ಮಾದರಿಯಲ್ಲೇ ದೆಹಲಿಯಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ. ಸಚಿವ ಸಂಪುಟ ಹಾಗೂ ಕೇಂದ್ರ ಸಚಿವರ ಭೇಟಿಗೆಂದು ದೆಹಲಿಗೆ ತೆರಳಿರುವ ಡಿಕೆ ಶಿವಕುಮಾರ್ ಅವರಿಗೆ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಭದ್ರತೆ ಒದಗಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿಯೊಬ್ಬರಿಗೆ ದೆಹಲಿಯಲ್ಲಿ ಇಷ್ಟೊಂದು ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಿರುವುದು ಇದೇ ಮೊದಲು ಎನ್ನಲಾಗಿದೆ. ಬೆಂಗಳೂರಿನಿಂದ ಆಗಮಿಸಿದ 7 ಮಂದಿ ಪೊಲೀಸರ ವಿಶೇಷ ತಂಡವು ಸಿಎಂ ಡಿ.ಕೆ.ಶಿವಕುಮಾರ್ ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಎಸ್‌ಪಿ, ಇನ್ಸ್‌ಪೆಕ್ಟರ್‌ ಸೇರಿದಂತೆ ಹಲವು ಹಂತದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಯಸ್ಸಿಗೆ ತಕ್ಕ ವ್ಯಾಯಾಮ; 20ರಿಂದ 60+ ವಯಸ್ಸಿನವರಿಗಾಗಿ ಸಂಪೂರ್ಣ ಫಿಟ್ನೆಸ್ ಗೈಡ್ – Kannada News | Age Wise Exercise Plan: Best Workouts for Every Stage of Life

ಆರೋಗ್ಯಕರ ಜೀವನಶೈಲಿಗೆ ನಿಯಮಿತ ವ್ಯಾಯಾಮ ಅತ್ಯಗತ್ಯ. ಆದರೆ ಎಲ್ಲ ವಯಸ್ಸಿನವರಿಗೂ ಒಂದೇ ರೀತಿಯ ವ್ಯಾಯಾಮ ಸೂಕ್ತವಲ್ಲ. ವಯಸ್ಸು, ದೈಹಿಕ ಸಾಮರ್ಥ್ಯ, ಆರೋಗ್ಯ ಸ್ಥಿತಿ ಮತ್ತು ಜೀವನಶೈಲಿಗೆ ಅನುಗುಣವಾಗಿ ವ್ಯಾಯಾಮದ ಪ್ರಮಾಣ ಮತ್ತು ತೀವ್ರತೆ ಬದಲಾಗಬೇಕು. ತಜ್ಞರ ಪ್ರಕಾರ, ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ವಿಧಾನದಲ್ಲಿ ವ್ಯಾಯಾಮ ಮಾಡಿದರೆ ಹೃದಯ, ಮೆದುಳು, ಮೂಳೆ, ಸ್ನಾಯುಗಳು ಹಾಗೂ ರೋಗನಿರೋಧಕ ಶಕ್ತಿ ಉತ್ತಮವಾಗಿರುತ್ತದೆ. ಹಾಗಾದರೆ ಯಾವ ವಯಸ್ಸಿನವರು ಎಷ್ಟು ವ್ಯಾಯಾಮ ಮಾಡಬೇಕು ಮತ್ತು ಯಾವ ರೀತಿಯ ವ್ಯಾಯಾಮ ಹೆಚ್ಚು ಸೂಕ್ತ ಎಂಬುದನ್ನು ತಿಳಿದುಕೊಳ್ಳಿ.

5 ರಿಂದ 17 ವರ್ಷದ ಮಕ್ಕಳಿಗೆ ಎಷ್ಟು ವ್ಯಾಯಾಮ ಬೇಕು?

ಈ ವಯಸ್ಸಿನಲ್ಲಿ ಮಕ್ಕಳು ಪ್ರತಿದಿನ ಕನಿಷ್ಠ 60 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಅವರು ಮಾಡಬಹುದಾದ ವ್ಯಾಯಾಮಗಳು, ರನ್ನಿಂಗ್, ಸೈಕಲ್ ಸವಾರಿ, ಹಗ್ಗ ಜಿಗಿತ, ಫುಟ್ಬಾಲ್, ಕ್ರಿಕೆಟ್, ಬ್ಯಾಡ್ಮಿಂಟನ್, ಈಜು ಮೊದಲಾದವು. ಜೊತೆಗೆ ವಾರದಲ್ಲಿ ಕನಿಷ್ಠ 3 ದಿನ ಮೂಳೆ ಮತ್ತು ಸ್ನಾಯುಗಳನ್ನು ಬಲಪಡಿಸುವ ಚಟುವಟಿಕೆಗಳು ಸೇರಿಸಿದರೆ ಉತ್ತಮ.

18 ರಿಂದ 64 ವರ್ಷದವರಿಗೆ ಎಷ್ಟು ವ್ಯಾಯಾಮ ಅಗತ್ಯ?

ಈ ವಯಸ್ಸಿನವರು ವಾರಕ್ಕೆ 150–300 ನಿಮಿಷ ವ್ಯಾಯಾಮ ಅಥವಾ 75–150 ನಿಮಿಷಗಳ ಹೆಚ್ಚಿನ ತೀವ್ರತೆಯ ವ್ಯಾಯಾಮ ಮಾಡುವುದು ಉತ್ತಮ. ಜೊತೆಗೆ ವಾರಕ್ಕೆ ಕನಿಷ್ಠ 2 ದಿನ ತೂಕ ಎತ್ತುವ ವ್ಯಾಯಾಮ, ಪುಷ್‌ಅಪ್ಸ್, ಸ್ಕ್ವಾಟ್ಸ್, ರೆಸಿಸ್ಟೆನ್ಸ್ ಬ್ಯಾಂಡ್ ವ್ಯಾಯಾಮ, ಕೋರ್ ಸ್ಟ್ರೆಂಗ್ತ್ ವ್ಯಾಯಾಮ ಇವು ಸ್ನಾಯುಗಳನ್ನು ಬಲಪಡಿಸಿ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

65 ವರ್ಷ ಮೇಲ್ಪಟ್ಟವರಿಗೆ ಯಾವ ವ್ಯಾಯಾಮ ಉತ್ತಮ?

ಹಿರಿಯರು ತಮ್ಮ ಆರೋಗ್ಯ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮ ಮಾಡಬೇಕು. ಉತ್ತಮ ಆಯ್ಕೆಗಳು ಎಂದರೆ ವೇಗದ ನಡಿಗೆ, ಯೋಗ, ಲಘು ಸ್ಟ್ರೆಚಿಂಗ್, ಬ್ಯಾಲೆನ್ಸ್ ವ್ಯಾಯಾಮ. ಇವುಗಳನ್ನು ವಾರಕ್ಕೆ ಕನಿಷ್ಠ 2 ದಿನ ಸ್ನಾಯು ಬಲವರ್ಧಕ ವ್ಯಾಯಾಮ ಹಾಗೂ ಪ್ರತಿದಿನ ಸಮತೋಲನ ಹೆಚ್ಚಿಸುವ ಚಟುವಟಿಕೆಗಳನ್ನು ಮಾಡುವುದರಿಂದ ಪದೇ ಪದೇ ಬೀಳುವ ಅಪಾಯವನ್ನು ಕಡಿಮೆ ಮಾಡುತ್ತದೆ.

ನಿಯಮಿತ ವ್ಯಾಯಾಮ ಮಾಡುವುದರಿಂದ ಸಿಗುವ ಪ್ರಯೋಜನಗಳು:

  • ಹೃದಯದ ಆರೋಗ್ಯ ಚೆನ್ನಾಗಿರುತ್ತದೆರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ
  • ಮಧುಮೇಹದ ಅಪಾಯ ಕಡಿಮೆಯಾಗಬಹುದು
  • ದೇಹದ ತೂಕ ನಿಯಂತ್ರಣದಲ್ಲಿರುತ್ತದೆ
  • ಸ್ನಾಯು ಮತ್ತು ಮೂಳೆಗಳು ಬಲವಾಗುತ್ತವೆ
  • ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
  • ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ
  • ಚೆನ್ನಾಗಿ ನಿದ್ರೆ ಬರುತ್ತದೆ
  • ಮೆದುಳಿನ ಕಾರ್ಯಕ್ಷಮತೆ ಹಾಗೂ ನೆನಪಿನ ಶಕ್ತಿ ಸುಧಾರಿಸುತ್ತದೆ
  • ದೀರ್ಘಕಾಲದ ಜೀವನಶೈಲಿ ಸಂಬಂಧಿತ ಕಾಯಿಲೆಗಳ ಅಪಾಯ ಕಡಿಮೆಯಾಗಬಹುದು

ಅತಿಯಾದ ವ್ಯಾಯಾಮ ಮಾಡಿದರೆ ಕಾಣಿಸಿಕೊಳ್ಳುವ ಲಕ್ಷಣಗಳು

  • ನಿರಂತರ ಆಯಾಸ
  • ಸ್ನಾಯು ನೋವು ಕಡಿಮೆಯಾಗದಿರುವುದು
  • ಪದೇಪದೇ ಗಾಯವಾಗುವುದು
  • ನಿದ್ರಾಹೀನತೆ
  • ಹಸಿವು ಕಡಿಮೆಯಾಗುವುದು
  • ಕೆಲಸ ಮಾಡುವ ಉತ್ಸಾಹ ಕಡಿಮೆಯಾಗುವುದು
  • ಹೃದಯ ಬಡಿತ ಹೆಚ್ಚಿರುವ ಅನುಭವ
  • ಕಾರಣವಿಲ್ಲದೆ ತೂಕ ಕಡಿಮೆಯಾಗುವುದು
  • ಈ ಲಕ್ಷಣಗಳು ಕಂಡುಬಂದರೆ ವ್ಯಾಯಾಮದ ತೀವ್ರತೆಯನ್ನು ಕಡಿಮೆ ಮಾಡಿ ವಿಶ್ರಾಂತಿ ಪಡೆಯಬೇಕು.

ವ್ಯಾಯಾಮಕ್ಕೂ ಮೊದಲು 5–10 ನಿಮಿಷ ವಾರ್ಮ್‌ಅಪ್ ಮಾಡಿ, ಸರಿಯಾಗಿ ನೀರು ಕುಡಿಯಿರಿ, ಖಾಲಿ ಹೊಟ್ಟೆಯಲ್ಲಿ ತೀವ್ರ ವ್ಯಾಯಾಮ ಮಾಡಬೇಡಿ, ವ್ಯಾಯಾಮದ ನಂತರ ದೇಹವನ್ನು ಕೂಲ್‌ಡೌನ್ ಮಾಡಿ, ಪ್ರೋಟೀನ್ ಮತ್ತು ಪೌಷ್ಟಿಕ ಆಹಾರ ಸೇವಿಸಿ, ದೇಹಕ್ಕೆ ವಿಶ್ರಾಂತಿ ನೀಡುವುದನ್ನು ಮರೆಯಬೇಡಿ.

ವಾರದಲ್ಲಿ ಯಾವ ರೀತಿಯ ವ್ಯಾಯಾಮ ಮಾಡಬೇಕು?

  • 3–5 ದಿನ ಕಾರ್ಡಿಯೋ
  • 2–3 ದಿನ ಸ್ಟ್ರೆಂಗ್ತ್ ಟ್ರೈನಿಂಗ್
  • ಪ್ರತಿದಿನ ಸ್ಟ್ರೆಚಿಂಗ್
  • ವಾರದಲ್ಲಿ 1–2 ದಿನ ಸಂಪೂರ್ಣ ವಿಶ್ರಾಂತಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ವಿಜಯ್​ಗೆ ಮುಖಭಂಗ; ಕರೂರ್ ಕಾಲ್ತುಳಿತದ ಸಂತ್ರಸ್ತರಿಗೆ ಉದ್ಯೋಗ ನೀಡುವ ಆದೇಶ ರದ್ದುಗೊಳಿಸಿದ ಹೈಕೋರ್ಟ್​ – Kannada News | Madras High Court cancelled Tamil Nadu CM Joseph Vijays order on jobs for Karur Stampede victims

ಚೆನ್ನೈ, ಜುಲೈ 27: ತಮಿಳುನಾಡು ವಿಕ್ಟರಿ ಪಕ್ಷದ ನಾಯಕ ಜೋಸೆಫ್ ವಿಜಯ್ ಕರೂರಿನಲ್ಲಿ ಪ್ರಚಾರ ಚುನಾವಣಾ ಮಾಡುವಾಗ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಪ್ರಾಣ ಕಳೆದುಕೊಂಡಿದ್ದರು. ಈ ದುರಂತ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳ ಒಟ್ಟು 31 ಜನರಿಗೆ ಮುಖ್ಯಮಂತ್ರಿ ಜೋಸೆಫ್ ವಿಜಯ್ ಕೆಲವು ದಿನಗಳ ಹಿಂದೆ ಸರ್ಕಾರಿ ಉದ್ಯೋಗದ ಆದೇಶಗಳನ್ನು ನೀಡಿದ್ದರು. ಈ ಎಲ್ಲಾ ಉದ್ಯೋಗಗಳು TNPSC ಗ್ರೂಪ್ 4 ಮಟ್ಟದ ಉದ್ಯೋಗಗಳಾಗಿದ್ದವು. ಇದರ ವಿರುದ್ಧ, ನಾಮ್ ತಮಿಳರ್ ಪಕ್ಷ ಮತ್ತು ಮಜಲಗವ ಸದಸ್ಯರು ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಕರೂರ್ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳ 31 ಜನರಿಗೆ ನೀಡಲಾದ ಸರ್ಕಾರಿ ಉದ್ಯೋಗ ಆದೇಶಗಳನ್ನು ರದ್ದುಗೊಳಿಸಿದ್ದಾರೆ. ಇದರಿಂದಾಗಿ ಸಿಎಂ ವಿಜಯ್ ಅವರಿಗೆ ಭಾರೀ ಮುಖಭಂಗವಾದಂತಾಗಿದೆ.

Source link

ಬೈ ಒನ್​​ ಗೇಟ್​ ಒನ್​ ಆಫರ್​​​​: 703 ರೂ ವಸ್ತುಗೆ ಬರೋಬ್ಬರಿ 35 ಸಾವಿರ ರೂ ದಂಡ ತೆತ್ತ ಬ್ಲಿಂಕಿಟ್! – Kannada News | Blinkit Fined 35,000 in Dharwad Over ‘Buy One Get One’ Dog Food Offer Scam

ಧಾರವಾಡ ಜಿಲ್ಲಾ ಗ್ರಾಹಕ ಆಯೋಗImage Credit source: google

ಧಾರವಾಡ, ಜುಲೈ 27: ಬೈ ಒನ್​​ ಗೇಟ್​ ಒನ್​ ಆಫರ್ ನೀಡಿ ಗ್ರಾಹಕರಿಗೆ ಮೋಸ ಆರೋಪ ಹಿನ್ನೆಲೆ  ಬ್ಲಿಂಕಿಟ್​​ಗೆ (Blinkit) ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕೇವಲ 703 ರೂ ಬೆಲೆಯ ವಸ್ತುಗೆ ಬರೋಬ್ಬರಿ 35 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ. ಧಾರವಾಡದ (Dharwad)  ಸಾರಸ್ವತಪುರ ಬಡಾವಣೆಯ ನಿವಾಸಿ, ವಕೀಲೆ ಲಕ್ಷ್ಮಿ ಬಸವರಾಜ ನೇಗಿನಾಳ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಈಶಪ್ಪ ಭೂತೆ ಅವರಿಂದ ಪೀಠ ಈ ಪ್ರಮುಖ ತೀರ್ಪು ನೀಡಿದೆ.

ನಡೆದಿದ್ದೇನು?

ವಕೀಲೆ ಲಕ್ಷ್ಮಿ ಅವರು 2025ರ ಮೇ 20ರಂದು ತಮ್ಮ ಸಾಕುನಾಯಿಗಾಗಿ ಬ್ಲಿಂಕಿಟ್ ಆ್ಯಪ್ ಮೂಲಕ 703 ಬೆಲೆಯ ‘ವಿಲ್ಡರ್‌ನೆಸ್-ಚಿಕನ್ ಮತ್ತು ವೆಜಿಟೇಬಲ್’ ನಾಯಿ ಆಹಾರವನ್ನು ಆರ್ಡರ್ ಮಾಡಿದ್ದರು. ಆ ವೇಳೆ ಆ ಉತ್ಪನ್ನಕ್ಕೆ ‘ಒಂದಕ್ಕೆ ಇನ್ನೊಂದು ಉಚಿತ’ ಆಫರ್ ಚಾಲ್ತಿಯಲ್ಲಿತ್ತು. ಆದರೆ ಡೆಲಿವರಿ ಬಾಯ್ ಕೇವಲ ಒಂದು ಪ್ಯಾಕೆಟ್ ಆಹಾರವನ್ನು ಮಾತ್ರ ನೀಡಿದ್ದ.

ಇದನ್ನೂ ಓದಿ: ಉಳಿತಾಯ ಖಾತೆಯ ಹಣ ನೀಡದ ಸೊಸೈಟಿಗೆ ದಂಡ: ಹುಬ್ಬಳ್ಳಿ ಮಹಿಳೆಗೆ ಸಿಕ್ತು ನ್ಯಾಯ!

ಈ ಕುರಿತು ಲಕ್ಷ್ಮಿ ಅವರು ಬ್ಲಿಂಕಿಟ್ ಸಂಸ್ಥೆಯ ಕಸ್ಟಮರ್ ಕೇರ್‌ಗೆ ಹಲವಾರು ಬಾರಿ ಕರೆ ಮಾಡಿ ದೂರು ನೀಡಿದರೂ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಕಂಪನಿಯ ಸೇವಾ ಲೋಪ ಹಾಗೂ ಬೇಜವಾಬ್ದಾರಿಗೆ ಬೇಸತ್ತ ಅವರು ನ್ಯಾಯಕ್ಕಾಗಿ ಧಾರವಾಡದ ಜಿಲ್ಲಾ ಗ್ರಾಹಕರ ಆಯೋಗದ ಬಾಗಿಲು ತಟ್ಟಿದ್ದರು.

ಬಡ್ಡಿ ಸಮೇತ ಹಣ ಹಿಂತಿರುಗಿಸುವಂತೆ ಆಯೋಗ ಆದೇಶ

ಸೋಮವಾರ ಪ್ರಕರಣದ ವಿಚಾರಣೆ ಮಾಡಿದ ಗ್ರಾಹಕರ ಆಯೋಗವು ಬ್ಲಿಂಕಿಟ್ ಸಂಸ್ಥೆಯ ಲೋಪವನ್ನು ಎತ್ತಿಹಿಡಿದಿದ್ದು, ಗ್ರಾಹಕರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ. ದೂರುದಾರರು ಪಾವತಿಸಿದ್ದ 703 ರೂ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸಬೇಕು.

ಇದನ್ನೂ ಓದಿ: Gruha Jyothi Scheme: ಸರ್ವರ್ ಸಮಸ್ಯೆ, ಮೀಟರ್ ರೀಡರ್‌ಗಳ ಕೊರತೆ: ಗಡುವಿನೊಳಗೆ ಸಿಗಲ್ವಾ ಉಚಿತ ವಿದ್ಯುತ್ ಭಾಗ್ಯ?

ಜೊತೆಗೆ 25 ಸಾವಿರ ರೂ ಪರಿಹಾರ ಹಾಗೂ ಪ್ರಕರಣದ ಕಾನೂನು ವೆಚ್ಚವಾಗಿ 10 ಸಾವಿರ ರೂ ಸೇರಿದಂತೆ ಒಟ್ಟು 35 ಸಾವಿರ ರೂ ಮೊತ್ತವನ್ನು ದೂರುದಾರರಿಗೆ ಪಾವತಿಸುವಂತೆ ಬ್ಲಿಂಕಿಟ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

194 ಪ್ರಯಾಣಿಕರಿದ್ದ ರಾಜ್‌ಕೋಟ್‌ನಲ್ಲಿ ಮುಂಬೈ-ದುಬೈ ವಿಮಾನ ತುರ್ತು ಭೂಸ್ಪರ್ಶ – Kannada News | Dubai Mumbai IndiGo Flight Makes Emergency Landing In Rajkot after smoke detected

ಮುಂಬೈ, ಜುಲೈ 27: ಮುಂಬೈನಿಂದ ದುಬೈಗೆ ಪ್ರಯಾಣಿಸುತ್ತಿದ್ದ ಇಂಡಿಗೋ (IndiGo) ವಿಮಾನದ ಕಾರ್ಗೋ ಹೋಲ್ಡ್‌ನಲ್ಲಿ (ಸರಕು ಇಡುವ ಜಾಗ) ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿವೆ. ‘ಇಂಡಿಗೋ 6E 1452’ ವಿಮಾನದಲ್ಲಿ ಒಟ್ಟು 194 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ವಿಮಾನ ಸುರಕ್ಷಿತವಾಗಿ ಇಳಿದ ನಂತರ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ವಿಮಾನದ ಕಾರ್ಗೋ ಭಾಗದಲ್ಲಿ ಹೊಗೆಯಿರುವುದನ್ನು ಪತ್ತೆಹಚ್ಚಿದ ಪೈಲಟ್‌ಗಳು ತಕ್ಷಣವೇ ರಾಜ್‌ಕೋಟ್ ವಿಮಾನ ನಿಲ್ದಾಣವನ್ನು ಸಂಪರ್ಕಿಸಿದರು. ತಕ್ಷಣವೇ ವಿಮಾನ ನಿಲ್ದಾಣದಲ್ಲಿ ಪೂರ್ಣಪ್ರಮಾಣದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.

ಪ್ರಯಾಣಿಕರು ಸುರಕ್ಷಿತ:

ಎಟಿಸಿ ಅನುಮತಿ ನೀಡಿದ ತಕ್ಷಣವೇ ವಿಮಾನವನ್ನು ರಾಜ್‌ಕೋಟ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಾಪಾಯ ಅಥವಾ ಗಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಇದನ್ನೂ ಓದಿ: Akasa Air: ಬೆಂಗಳೂರಿನಿಂದ ಭುವನೇಶ್ವರಕ್ಕೆ ಹೊರಟಿದ್ದ ಆಕಾಶ ಏರ್ ವಿಮಾನದಲ್ಲಿ ಇಂಧನ ಕೊರತೆ, ಲಕ್ನೋದಲ್ಲಿ ತುರ್ತು ಭೂಸ್ಪರ್ಶ

ಪರ್ಯಾಯ ವ್ಯವಸ್ಥೆ ಮತ್ತು ತನಿಖೆ:

ತುರ್ತು ಭೂಸ್ಪರ್ಶದ ನಂತರ ವಿಮಾನ ನಿಲ್ದಾಣದ ಸುರಕ್ಷತಾ ತಂಡ ಹಾಗೂ ಎಂಜಿನಿಯರ್‌ಗಳು ತಕ್ಷಣವೇ ವಿಮಾನವನ್ನು ಪರಿಶೀಲನೆಗೆ ಒಳಪಡಿಸಿದರು. ಹೊಗೆ ಕಾಣಿಸಿಕೊಳ್ಳಲು ಕಾರಣವೇನು ಎಂಬುದರ ಕುರಿತು ತಾಂತ್ರಿಕ ತನಿಖೆ ನಡೆಸಲಾಗುತ್ತಿದ್ದು, ಪ್ರಯಾಣಿಕರನ್ನು ದುಬೈಗೆ ತಲುಪಿಸಲು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ.

ಖಾಸಗಿ ವಿಮಾನಯಾನ ಸಂಸ್ಥೆಯಾದ ಇಂಡಿಗೋ ದೇಶೀಯವಾಗಿ 80ಕ್ಕೂ ಹೆಚ್ಚು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ 30ಕ್ಕೂ ಹೆಚ್ಚು ತಾಣಗಳಿಗೆ ವಿಮಾನ ಸೇವೆ ಒದಗಿಸುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಣ ಬೇಡ, ಹೆಬ್ಬಾವು ಕೊಡಿ, ಉಚಿತ ಪಿಜ್ಜಾ ಪಡೆಯಿರಿ! ಈ ರೆಸ್ಟೋರೆಂಟ್‌ನ ವಿಚಿತ್ರ ಆಫರ್ – Kannada News | Get Free Pizza in Florida: Trade Pythons to Fight Invasive Burmese Snakes and Protect Nature

ಅಮೆರಿಕ, ಜು.27: ಫ್ಲೋರಿಡಾದಲ್ಲಿರುವ ಒಂದು ಪ್ರಸಿದ್ಧ ರೆಸ್ಟೋರೆಂಟ್ ಗ್ರಾಹಕರಿಂದ ‘ಹೆಬ್ಬಾವು’ (Python) ಪಡೆದು ಅವರಿಗೆ ಉಚಿತವಾಗಿ ಬಿಸಿಬಿಸಿ ಪಿಜ್ಜಾ ನೀಡುವ ವಿಚಿತ್ರ ಹಾಗೂ ಆಕರ್ಷಕ ಆಫರ್ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿದೆ. ಫ್ಲೋರಿಡಾದ ಎವರ್‌ಗ್ಲೇಡ್ಸ್ ಸಿಟಿಯಲ್ಲಿರುವ ‘ವೈಲ್ಡ್‌ಮ್ಯಾನ್ಸ್ ಪಿಜ್ಜಾ, ಪಾಸ್ಟಾ ಆಂಡ್ ಪೈಥಾನ್’ ಎಂಬ ರೆಸ್ಟೋರೆಂಟ್, 2026ರ ‘ಫ್ಲೋರಿಡಾ ಪೈಥಾನ್ ಚಾಲೆಂಜ್’ ಪ್ರಚಾರದ ಭಾಗವಾಗಿ ಈ ಕೊಡುಗೆಯನ್ನು ಆರಂಭಿಸಿದೆ. ಜುಲೈ 10 ರಿಂದ ಜುಲೈ 19 ರವರೆಗೆ 10 ದಿನಗಳ ಕಾಲ ನಡೆಯುವ ಈ ಪರಿಸರ ಸ್ನೇಹಿ ಅಭಿಯಾನದಲ್ಲಿ, ಹವ್ಯಾಸಿ ಮತ್ತು ವೃತ್ತಿಪರ ಬೇಟೆಗಾರರು ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಅತಿಕ್ರಮಣಕಾರಿಯಾಗಿ ಬೆಳೆದಿರುವ ಹೆಬ್ಬಾವುಗಳನ್ನು ಹಿಡಿಯುತ್ತಾರೆ. ಬೇಟೆಗಾರರು ದೊಡ್ಡ ಮೊತ್ತದ ನಗದು ಬಹುಮಾನಗಳಿಗೆ ಸ್ಪರ್ಧಿಸುವುದರ ಜೊತೆಗೆ, ತಾವು ಹಿಡಿದ ಹಾವನ್ನು ರೆಸ್ಟೋರೆಂಟ್‌ಗೆ ನೀಡಿ ಉಚಿತ ಪಿಜ್ಜಾ ಸವಿಯುತ್ತಿದ್ದಾರೆ.

ರೆಸ್ಟೋರೆಂಟ್ ಮಾಲೀಕ ಡಸ್ಟಿನ್ ಕ್ರಮ್ NBC ಮಿಯಾಮಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ. “ಹೆಬ್ಬಾವನ್ನು ಹಣದ ರೀತಿಯಲ್ಲಿ ಸ್ವೀಕರಿಸುತ್ತಿರುವ ವಿಶ್ವದ ಮೊದಲ ಸ್ಥಳ ನಮ್ಮದು. ನೀವು ಇಲ್ಲಿಗೆ ಒಂದು ಹೆಬ್ಬಾವು ತಂದುಕೊಟ್ಟು ಉಚಿತವಾಗಿ ಪಿಜ್ಜಾ ಪಡೆದುಕೊಳ್ಳಬಹುದು. ನಾವು ಪಿಜ್ಜಾ ಮೇಲೆ ಹೆಬ್ಬಾವಿನ ಮಾಂಸದ ಟಾಪಿಂಗ್ಸ್, ಪೈಥಾನ್ ಪಿಜ್ಜಾ ಮತ್ತು ಇಗುವಾನಾ ಪಿಜ್ಜಾಗಳನ್ನು ತಯಾರಿಸುತ್ತೇವೆ.” ಎಂದು ಹೇಳಿದರು.

ರೆಸ್ಟೋರೆಂಟ್‌ಗೆ ತರುವ ಹಾವಿನ ಯಾವುದೇ ಭಾಗ ವ್ಯರ್ಥವಾಗುವುದಿಲ್ಲ. ಗ್ರಾಹಕರಿಗೆ ಹೆಬ್ಬಾವುಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಚರ್ಮದಿಂದ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಚರ್ಮದ ರಕ್ಷಣೆ, ಕ್ರೀಮ್ ಮತ್ತು ಸಾಬೂನುಗಳಿಗೆ ಬಳಸುವ ‘ಸ್ನೇಕ್ ಆಯಿಲ್’ ತಯಾರಿಸಲು ಬಳಕೆ. ಸುಂದರವಾದ ಆಭರಣಗಳನ್ನು ತಯಾರಿಸಲು ಬಳಕೆ.

ಆರೋಗ್ಯ ಮತ್ತು ಆಹಾರ ನಿಯಮಾವಳಿಗಳ ಪ್ರಕಾರ ಹೆಬ್ಬಾವಿನ ಮಾಂಸದಿಂದ ಮಾಡಿದ ಪಿಜ್ಜಾವನ್ನು ಮಾರಾಟ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಡಸ್ಟಿನ್ ಕ್ರಮ್, “ನನಗೆ ಈ ಪಿಜ್ಜಾವನ್ನು ಮಾರಾಟ ಮಾಡಲು ಸಾಧ್ಯವಿಲ್ಲ, ಹಾಗಾಗಿ ಉಚಿತವಾಗಿ ನೀಡುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ವಾರ್ಷಿಕ ಚಾಲೆಂಜ್ ಅನ್ನು ಫ್ಲೋರಿಡಾ ಫಿಶ್ ಅಂಡ್ ವೈಲ್ಡ್‌ಲೈಫ್ ಕನ್ಸರ್ವೇಶನ್ ಕಮಿಷನ್ ಮತ್ತು ಸೌತ್ ಫ್ಲೋರಿಡಾ ವಾಟರ್ ಮ್ಯಾನೇಜ್‌ಮೆಂಟ್ ಡಿಸ್ಟ್ರಿಕ್ಟ್ ಜಂಟಿಯಾಗಿ ಆಯೋಜಿಸುತ್ತವೆ. ಫ್ಲೋರಿಡಾದಲ್ಲಿ ಬರ್ಮೀಸ್ ಹೆಬ್ಬಾವುಗಳು ಅಪಾಯಕಾರಿ ವಿದೇಶಿ ತಳಿಯಾಗಿದ್ದು, ಸ್ಥಳೀಯ ಜೀವವೈವಿಧ್ಯತೆಗೆ ದೊಡ್ಡ ಮಾರಕವಾಗಿವೆ.

ಇದನ್ನೂ ಓದಿ: ಮುಟ್ಟಿನ ನೋವಿನ ನಡುವೆಯೂ 42 ಕಿ.ಮೀ. ಮ್ಯಾರಥಾನ್ ಪೂರ್ಣಗೊಳಿಸಿ ಇತಿಹಾಸ ಬರೆದ ಅಥ್ಲೀಟ್ ಲೀ ಮೇಝೆನ್

ಈ ಬೃಹತ್ ಹೆಬ್ಬಾವುಗಳು ಅಪಾಯದಂಚಿನಲ್ಲಿರುವ ವುಡ್ ಸ್ಟಾರ್ಕ್ (ಹಕ್ಕಿ) ಮತ್ತು ಕೀ ಲಾರ್ಗೋ ವುಡ್ ರಾಟ್ (ಇಲಿ) ನಂತಹ ಸಂರಕ್ಷಿತ ಜೀವಿಗಳನ್ನು ಭಕ್ಷಿಸುತ್ತಿವೆ.ಫ್ಲೋರಿಡಾದ ಕಾನೂನಿನಡಿ ರಕ್ಷಣೆ ಪಡೆದಿರುವ ಮೊಸಳೆಗಳನ್ನು ಸಹ ಈ ಹಾವುಗಳು ನುಂಗಿರುವ ಉದಾಹರಣೆಗಳಿವೆ. ಇವು ಮಾನವರ ಭದ್ರತೆಗೆ ಬೆದರಿಕೆಯಾಗಿದ್ದು, ನಾಯಿ-ಬೆಕ್ಕುಗಳಂತಹ ಸಾಕುಪ್ರಾಣಿಗಳನ್ನು ಬೇಟೆಯಾಡುತ್ತವೆ.2000 ರಿಂದ ಏಪ್ರಿಲ್ 2025 ರ ನಡುವೆ ಫ್ಲೋರಿಡಾದ ಪ್ರಕೃತಿ ವಲಯಗಳಿಂದ 23,500ಕ್ಕೂ ಹೆಚ್ಚು ಹೆಬ್ಬಾವುಗಳನ್ನು ತೆರವುಗೊಳಿಸಲಾಗಿದೆ. 2017 ರಿಂದ ಈ ಕಾರ್ಯಕ್ಕೆ ಹಣ ಪಾವತಿಸುವ ಯೋಜನೆ ಜಾರಿಗೆ ಬಂದ ನಂತರ ಹೆಬ್ಬಾವುಗಳನ್ನು ಹಿಡಿಯುವ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎ ಸರ್ಟಿಫಿಕೇಟ್ ಸಿನಿಮಾಗೆ ಮಕ್ಕಳನ್ನು ಕರೆತಂದ ಪೋಷಕರು; ‘ಜನ ನಾಯಗನ್’ ಪ್ರದರ್ಶನ ಬಂದ್ – Kannada News | Vijay Jana Nayagan screenings halted in Chennai over A Rating minors Entry issue

ದಳಪತಿ ವಿಜಯ್ ಅಭಿನಯದ, ಹೆಚ್. ವಿನೋದ್ ನಿರ್ದೇಶನದ ‘ಜನ ನಾಯಗನ್’ (Jana Nayagan) ಸಿನಿಮಾ ಜುಲೈ 23ರಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಸುಮಾರು 7 ತಿಂಗಳ ಸುದೀರ್ಘ ವಿಳಂಬದ ನಂತರ ಬೆಳ್ಳಿಪರದೆಗೆ ಬಂದಿರುವ ವಿಜಯ್ ಅವರ ಈ ಕೊನೆಯ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಆದರೆ, ಚೆನ್ನೈನ ಹಲವು ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಪ್ರದರ್ಶನಗಳು ವಿಳಂಬವಾಗುತ್ತಿದ್ದು, ಕೆಲವು ಕಡೆ ಶೋಗಳನ್ನೇ ರದ್ದುಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೆನ್ಸಾರ್ ಮಂಡಳಿ (CBFC) ಈ ಚಿತ್ರಕ್ಕೆ ‘A’ ಪ್ರಮಾಣಪತ್ರ ನೀಡಿದೆ. ನಿಯಮದಂತೆ 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಈ ಸಿನಿಮಾ ವೀಕ್ಷಣೆಗೆ ಅವಕಾಶವಿಲ್ಲ. ಆದರೂ ಹಲವು ಪೋಷಕರು ಸಣ್ಣ ಮಕ್ಕಳನ್ನು ಕರೆದುಕೊಂಡು ಥಿಯೇಟರ್‌ಗೆ ಬಂದಿರುವುದೇ ಈ ಎಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.

ಥಿಯೇಟರ್‌ ಸಿಬ್ಬಂದಿ ಜೊತೆ ಪ್ರೇಕ್ಷಕರ ಜಟಾಪಟಿ:

ಚೆನ್ನೈನ ಪಿವಿಆರ್ ಆಂಪಾ ಮಾಲ್​ನಲ್ಲಿ ‘ಜನ ನಾಯಗನ್’ ಸಿನಿಮಾ ಪ್ರದರ್ಶನವನ್ನು ಸುಮಾರು ಒಂದು ಗಂಟೆ ಕಾಲ ತಡೆಹಿಡಿಯಲಾಗಿತ್ತು. ಪೋಷಕರು ತಮ್ಮ ಮಕ್ಕಳನ್ನು ಕರೆತಂದಿದ್ದರಿಂದ ಥಿಯೇಟರ್ ಸಿಬ್ಬಂದಿ ಹಾಗೂ ಪೋಷಕರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೊನೆಗೆ ಟಿಕೆಟ್ ಹಣವನ್ನು ವಾಪಸ್ ನೀಡಲು ಥಿಯೇಟರ್​ನವರು ಒಪ್ಪಿಕೊಂಡ ನಂತರ ಪರಿಸ್ಥಿತಿ ತಿಳಿಯಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮಕ್ಕಳೊಂದಿಗೆ ಬಂದಿದ್ದ ಪೋಷಕರನ್ನು ಹೊರಗೆ ಕಳುಹಿಸಿದರು.

ಗಲಾಟೆ ವೇಳೆ ಪೊಲೀಸರ ಮಧ್ಯಪ್ರವೇಶ:

ಅದೇ ರೀತಿ, ಪಲ್ಲಾವರಂನ ಪಿವಿಆರ್ ಗ್ರ್ಯಾಂಡ್‌ನಲ್ಲೂ ಪ್ರದರ್ಶನವನ್ನು ಅರ್ಧದಲ್ಲೇ ನಿಲ್ಲಿಸಲಾಗಿತ್ತು. ಥಿಯೇಟರ್ ಪ್ರವೇಶಿಸಲು ಯತ್ನಿಸಿದವರನ್ನು ಸಿಬ್ಬಂದಿ ತಡೆದಾಗ ಗಲಾಟೆ ಆರಂಭವಾಗಿ, ಪೊಲೀಸರು ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಹಣ ಮರುಪಾವತಿಗಾಗಿ ಟಿಕೆಟ್ ಕೌಂಟರ್ ಮುಂದೆ ಸಣ್ಣ ಮಕ್ಕಳನ್ನು ಹಿಡಿದುಕೊಂಡು ನೂರಾರು ಜನರು ಸಾಲಿನಲ್ಲಿ ನಿಂತಿರುವುದು ಕಂಡುಬಂತು.

ಸೋಶಿಯಲ್ ಮೀಡಿಯಾದಲ್ಲಿ ಪೋಷಕರ ವಿರುದ್ಧ ಆಕ್ರೋಶ:

ಈ ಘಟನೆಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪೋಷಕರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಇದು A ಪ್ರಮಾಣಪತ್ರ ಪಡೆದ ಸಿನಿಮಾ ಎಂದು ಪೋಷಕರಿಗೆ ಗೊತ್ತಿದ್ದರೂ ಮಕ್ಕಳನ್ನು ಕರೆತಂದಿರುವುದು ತಪ್ಪು. ಥಿಯೇಟರ್‌ನವರು ನಿಯಮ ಪಾಲಿಸದಿದ್ದರೆ ಅವರ ಲೈಸೆನ್ಸ್ ರದ್ದಾಗುತ್ತದೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ನೋಡಿ ಸಂಭ್ರಮಿಸಿದ ನಟ ರವಿ ಮೋಹನ್: ತಮಿಳುನಾಡು ಸಚಿವರ ಕಣ್ಣೀರು

ಹೆಚ್. ವಿನೋದ್ ನಿರ್ದೇಶನದ ‘ಜನ ನಾಯಗನ್’ ಚಿತ್ರವು 2023ರ ತೆಲುಗು ಹಿಟ್ ಸಿನಿಮಾ ‘ಭಗವಂತ್ ಕೇಸರಿ’ಯ ಅಧಿಕೃತ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ವಿಜಯ್, ಮಮಿತಾ ಬೈಜು, ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾರ್ದಿಕ್ ಪಾಂಡ್ಯ ಕಂಬ್ಯಾಕ್ ಯಾವಾಗ? ಹೊರಬಿತ್ತು ಬಿಗ್ ಅಪ್​ಡೇಟ್

Source link

ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ: ಅತಿಯಾದ ಶುಲ್ಕಗಳಿಂದ ನಷ್ಟದ ಆರೋಪ – Kannada News | Hotel Owners Fume Against Online Food Delivery Apps Over Exorbitant Charges, Allege Significant Losses

ಬೆಂಗಳೂರು, ಜುಲೈ 27: ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳಾದ ಸ್ವಿಗ್ಗಿ ಸೇರಿದಂತೆ ಕೆಲವು ಆಪ್‌ಗಳ ವಿರುದ್ಧ ರಾಜ್ಯದ ಹೋಟೆಲ್ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆಪ್‌ಗಳು ವಿಧಿಸುವ ಅತಿಯಾದ ಶುಲ್ಕಗಳಿಂದ ಹೋಟೆಲ್‌ಗಳಿಗೆ ಭಾರಿ ನಷ್ಟವಾಗುತ್ತಿದೆ ಎಂದು ಆರೋಪಿಸಲಾಗಿದ್ದು, ಇವುಗಳಿಗೆ ಕಡಿವಾಣ ವಿಧಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. ವಿಶೇಷವಾಗಿ ಸ್ವಿಗ್ಗಿ ಆ್ಯಪ್​​ ವಿರುದ್ಧ ಆರೋಪ ಕೇಳಿಬಂದಿದ್ದು, ಪೇಔಟ್ ಕಲೆಕ್ಷನ್ ಚಾರ್ಜ್, ಲಾಂಗ್ ಡಿಸ್ಟೇನ್ಸ್ ಫೀಸ್, ಕ್ಲಿಕ್ಸ್ ಅಡ್ವಟೈಸ್ ಚಾರ್ಜ್, ಪ್ರಮೋಷನ್ ಚಾರ್ಜ್ ಅಂತ ಬೇಕಾಬಿಟ್ಟಿ ದರ ವಿಧಿಸ್ತಿದ್ದಾರೆ. ಇದರಿಂದಾಗಿ, 1,000 ರೂ. ಮೌಲ್ಯದ ಉತ್ಪನ್ನವನ್ನು ಮಾರಾಟ ಮಾಡಿದಾಗ ಹೋಟೆಲ್ ಮಾಲೀಕರಿಗೆ ಕೇವಲ 400 ರಿಂದ 500 ರೂ. ಮಾತ್ರ ವಾಪಸ್ ಬರುತ್ತಿದೆ. ಉಳಿದ ಮೊತ್ತ ಅವರ ಪಾಲಾಗುತ್ತಿದೆ. ಇದು ಹೋಟೆಲ್ ಮಾಲೀಕರು ಮತ್ತು ಗ್ರಾಹಕರಿಬ್ಬರಿಗೂ ದೊಡ್ಡ ಹೊರೆಯಾಗಿದ್ದು, ಮಧ್ಯಮ ವರ್ಗದ ಹೋಟೆಲ್‌ಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಗೌರವ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version