ಪೊಲೀಸರು ನನ್ನನ್ನು ಅಪಹರಿಸಿ ಮಸ್ಸೂರಿಯಲ್ಲಿ ಬಿಟ್ಟರು; ಜಂತರ್ ಮಂತರ್ನಲ್ಲಿ ಆಹಾರ ವಿತರಿಸುತ್ತಿದ್ದ ವ್ಯಕ್ತಿ ಆರೋಪ – Kannada News | Junaid distributing food to Jantar Mantar protesters alleges delhi Police picked him and left him at Mussoorie
ನವದೆಹಲಿ, ಜುಲೈ 27: ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ (Delhi Protest) ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಉಚಿತವಾಗಿ ಆಹಾರ ವಿತರಿಸುತ್ತಿದ್ದ ಸ್ವಯಂಸೇವಕರೊಬ್ಬರನ್ನು ದೆಹಲಿ ಪೊಲೀಸರು ಕಾನೂನುಬಾಹಿರವಾಗಿ ವಶಕ್ಕೆ ಪಡೆದು, ದೆಹಲಿಯಿಂದ ಸುಮಾರು 300 ಕಿ.ಮೀ. ದೂರದಲ್ಲಿರುವ ಉತ್ತರಾಖಂಡದ ಮಸ್ಸೂರಿಯಲ್ಲಿ ತಂದು ಬಿಟ್ಟಿದ್ದಾರೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಭಟನಾಕಾರರ ತಂಡದವರು ಮಾಹಿತಿ ಕಲೆಹಾಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ. ಜುನೈದ್ ನೀಡಿದ ಮಾಹಿತಿಯ ಪ್ರಕಾರ, ಅವರನ್ನು ಇಡೀ…