ಬೆಂಗಳೂರಲ್ಲಿ ರಾತ್ರೋರಾತ್ರಿ ಮೆಟ್ರೋ ಕ್ರೇನ್ ಏರಿ ಕೆಳಗಿಳಿಯಲಾಗದೆ ಒದ್ದಾಡಿದ ವ್ಯಕ್ತಿ – Kannada News | Bengaluru: Man Stuck on Namma Metro Crane in Marathahalli, Police Probe Reason
ಬೆಂಗಳೂರು, ಜು.27: ರಾಜಧಾನಿಯ ಮಾರತಹಳ್ಳಿ ಸಮೀಪ ರಾತ್ರೋರಾತ್ರಿ ಭಾರಿ ಹೈಡ್ರಾಮಾವೊಂದು ನಡೆದಿದೆ. ನಮ್ಮ ಮೆಟ್ರೋ ಕಾಮಗಾರಿ ಸ್ಥಳದಲ್ಲಿದ್ದ ಬೃಹತ್ ಕ್ರೇನ್ ಏರಿದ ವ್ಯಕ್ತಿಯೊಬ್ಬ, ಬಳಿಕ ಕೆಳಗೆ ಇಳಿಯಲಾಗದೆ ಪರದಾಡಿದ ವಿಚಿತ್ರ ಘಟನೆ ಮಧ್ಯರಾತ್ರಿ ಸಂಭವಿಸಿದೆ. ಸುಮಾರು ಬೆಳಗಿನ ಜಾವ 1:30ರ ವೇಳೆಗೆ ಮಾರತಹಳ್ಳಿ ಬಳಿಯ ಮೆಟ್ರೋ ಕಾಮಗಾರಿ ಪ್ರದೇಶದಲ್ಲಿದ್ದ ಬೃಹತ್ ಕ್ರೇನ್ ಮೇಲೆ ವ್ಯಕ್ತಿಯೊಬ್ಬ ಏರಿದ್ದಾನೆ. ಆದರೆ, ಮೇಲೇರಿದ ಕೆಲವೇ ಕ್ಷಣಗಳಲ್ಲಿ ಆತನಿಗೆ ಕೆಳಗೆ ಇಳಿಯಲು ಸಾಧ್ಯವಾಗದೆ ಮೇಲೆಯೇ ಒದ್ದಾಡಲು ಪ್ರಾರಂಭಿಸಿದ್ದಾನೆ. ಇದನ್ನು ಕಂಡ ಸ್ಥಳೀಯರು ಹಾಗೂ…