ತಿರುಮಲ ಜಪಾಲಿ ತೀರ್ಥದ ನಲ್ಲಿಯಲ್ಲಿ ‘ಹಾಲು’ ಬರ್ತಿದೆ ಎಂಬ ವದಂತಿ: ಸತ್ಯ ಬಿಚ್ಚಿಟ್ಟ ಟಿಟಿಡಿ – Kannada News | Tirumala Japali Theertham: TTD Debunks ‘Milk from Taps’ Myth, Explains Science

ತಿರುಪತಿ, ಜುಲೈ 27: ಸಪ್ತಗಿರಿಧಾಮ ತಿರುಮಲದ ಪ್ರಸಿದ್ಧ ‘ಜಪಾಲಿ ಆಂಜನೇಯ ಸ್ವಾಮಿ ತೀರ್ಥ’ದ ಬಳಿ ಕುಡಿಯುವ ನೀರಿನ ನಲ್ಲಿಗಳಿಂದ ಬಿಳಿ ಬಣ್ಣದ ನೀರು ಹೊರಬರುತ್ತಿದ್ದು, “ನಲ್ಲಿಯಲ್ಲಿ ನೀರಲ್ಲ, ಹಾಲೇ ಹರಿಯುತ್ತಿದೆ” ಎಂಬ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಚಮತ್ಕಾರದ ಕುರಿತು ಭಕ್ತರಲ್ಲಿ ಭಾರಿ ಕುತೂಹಲ ಹಾಗೂ ಚರ್ಚೆಗಳು ಶುರುವಾಗಿದ್ದ ಬೆನ್ನಲ್ಲೇ, ತಿರುಮಲ ತಿರುಪತಿ ದೇವಸ್ಥಾನ (TTD) ಮಂಡಳಿಯು ವೈಜ್ಞಾನಿಕ ಪರೀಕ್ಷೆ ನಡೆಸಿ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿದೆ.

ಸತ್ಯವೇನು?
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುಳ್ಳು ಮಾಹಿತಿಯನ್ನು ನಂಬಬೇಡಿ ಎಂದು ಭಕ್ತರಲ್ಲಿ ಮನವಿ ಮಾಡಿರುವ ಟಿಟಿಡಿ ಆರೋಗ್ಯ ಇಲಾಖೆ ಹಾಗೂ ಆಹಾರ ವಿಶ್ಲೇಷಣಾ ಪ್ರಯೋಗಾಲಯವು ಈ ಕೆಳಗಿನ ಸತ್ಯಗಳನ್ನು ಬಹಿರಂಗಪಡಿಸಿದೆ.

ಅಧಿಕ ನೀರಿನ ಒತ್ತಡ: ಜಪಾಲಿ ತೀರ್ಥದಲ್ಲಿ ನಲ್ಲಿಗಳಿಂದ ನೀರು ಪೈಪ್ ಮುಖಾಂತರ ಅತ್ಯಂತ ವೇಗವಾಗಿ ಹೊರಬರುವಾಗ ನೀರಿನಲ್ಲಿ ‘ಸೂಕ್ಷ್ಮ ಗಾಳಿಯ ಗುಳ್ಳೆಗಳು’ ಸೃಷ್ಟಿಯಾಗುತ್ತವೆ. ಇದರಿಂದಾಗಿ ನೀರು ತಾತ್ಕಾಲಿಕವಾಗಿ ಹಾಲಿನಂತೆ ಬಿಳಿಯಾಗಿ ಕಾಣಿಸುತ್ತದೆ. ನಲ್ಲಿಯಿಂದ ನೀರನ್ನು ಲೋಟಕ್ಕೋ ಅಥವಾ ಪಾತ್ರೆಗೋ ಹಿಡಿದಾಗ ಕೆಲವೇ ಸೆಕೆಂಡುಗಳಲ್ಲಿ ಆ ಗಾಳಿಯ ಗುಳ್ಳೆಗಳು ಒಡೆದುಹೋಗಿ, ನೀರು ತನ್ನ ಸಹಜ ಪಾರದರ್ಶಕ ರೂಪಕ್ಕೆ ಮರಳುತ್ತದೆ.

ಪರೀಕ್ಷಾಲಯದಲ್ಲಿ ನೀರಿನ ಮಾದರಿಯನ್ನು ತಪಾಸಣೆ ನಡೆಸಲಾಗಿದ್ದು, ನೀರು ಸಂಪೂರ್ಣವಾಗಿ ಶುದ್ಧವಾಗಿದೆ. ಇದರಲ್ಲಿ ಯಾವುದೇ ದುರ್ವಾಸನೆ, ಕೆಸರು ಅಥವಾ ಕಲ್ಮಶಗಳಿಲ್ಲ ಎಂದು ತಜ್ಞರು ದೃಢಪಡಿಸಿದ್ದಾರೆ.

ಮತ್ತಷ್ಟು ಓದಿ:

TTD News: ತಿರುಪತಿಯಲ್ಲಿ ಭಕ್ತರಿಗೆ ಹೈಟೆಕ್ ‘ಕನ್ವೇಯರ್’ ಪ್ರಸಾದ ವಿತರಣೆ; TTDಯಿಂದ ಹೊಸ ಪ್ರಯೋಗ!

ಜಪಾಲಿ ತೀರ್ಥದ ಮಹತ್ವ: ತಿರುಮಲದ ದಟ್ಟವಾದ ಅರಣ್ಯ ಪ್ರದೇಶದಲ್ಲಿರುವ ಜಪಾಲಿ ಆಂಜನೇಯ ಸ್ವಾಮಿ ದೇವಾಲಯವು ಭಕ್ತರ ಪಾಲಿಗೆ ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಜಪಾಲಿ ಮಹರ್ಷಿಗಳು ಇಲ್ಲಿ ತಪಸ್ಸು ಮಾಡಿದ್ದರೆಂಬ ನಂಬಿಕೆಯಿದ್ದು, ಶ್ರೀರಾಮನನ್ನು ಪ್ರಸನ್ನಗೊಳಿಸಲು ಆಂಜನೇಯ ಸ್ವಾಮಿ ನೆಲೆಸಿದ ಸ್ಥಳ ಇದಾಗಿದೆ ಎಂಬ ಐತಿಹಾಸಿಕ ನಂಬಿಕೆಯಿದೆ.

ನೀರಿನಲ್ಲಿ ಗಾಳಿ ಹೆಚ್ಚಿನ ಪ್ರಮಾಣದಲ್ಲಿ ಬೆರೆತಾಗ ನೀರು ಬಿಳಿಯಾಗಿ ಕಾಣಿಸುವುದು ಒಂದು ಸಾಮಾನ್ಯ ಭೌತಿಕ ಪ್ರಕ್ರಿಯೆಯಾಗಿದೆ. ಇದನ್ನು ಪೈಪ್‌ಲೈನ್ ವ್ಯವಸ್ಥೆಗಳಲ್ಲಿ ‘ಮೈಕ್ರೋ ಬಬಲ್ ಏರೇಶನ್’ ಎಂದು ಕರೆಯಲಾಗುತ್ತದೆ. ಮನೆಯಲ್ಲಿ ಫೋಮ್-ಎರೇಟರ್ ಹೊಂದಿರುವ ನಲ್ಲಿಗಳನ್ನು ಬಳಸುವಾಗಲೂ ನೀರು ಬಿಳಿಯಾಗಿ ಬರುವುದು ಇದೇ ಕಾರಣಕ್ಕೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿದ್ದರಾಮಯ್ಯ ನಿವೃತ್ತಿಯಾದರೆ ನಮಗೆ ಕಷ್ಟ: ಆತಂಕ ವ್ಯಕ್ತಪಡಿಸಿದ ಡಿಕೆಶಿ ಆಪ್ತ ಶಾಸಕ! – Kannada News | Siddaramaiah Retirement Loss To Congress Party Says MLA HC Balakrishna

ಬೆಂಗಳೂರು, (ಜುಲೈ 27): ಮಾಜಿ ಸಿಎಂ ಸಿದ್ದರಾಮಯ್ಯನವರು (Siddaramaiah) ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮಂಡ್ಯದ (Mandya) ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ್ದ ಸಿದ್ದರಾಮಯ್ಯ, ಮುಂದಿನ ಅಂದರೆ 2028ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯನವರ ಈ ನಿರ್ಧಾರದಿಂದ ಅವರ ಅಭಿಮಾನಿಗಳು ಹಾಗೂ ಆಪ್ತ ನಾಯಕರು ಆತಂಕಗೊಂಡಿದ್ದು, ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರು ಈ ನಿರ್ಧಾರ ಕೈಗೊಳ್ಳಬಾರದು ಎಂದು ಮನವಿ ಮಾಡಿದ್ದಾರೆ. ಇನ್ನು ಈ ಬಗ್ಗೆ ಡಿಕೆ ಶಿವಕುಮಾರ್ ಆಪ್ತ ಶಾಸಕ ಹೆಚ್​​​ಸಿ ಬಾಲಕೃಷ್ಣ (HC Balakrishna) ಸಹ ಮಾತನಾಡಿ, ಕಾಂಗ್ರೆಸ್ ಗಟ್ಟಿಯಾಗಿರಬೇಕು ಅಂದ್ರೆ ಸಿದ್ದರಾಮಯ್ಯ ಬೇಕೇ ಬೇಕು ಎಂದಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ,ಕಾಂಗ್ರೆಸ್ ಗಟ್ಟಿಯಾಗಿರಬೇಕು ಅಂದ್ರೆ ಸಿದ್ದರಾಮಯ್ಯ ಬೇಕೇ ಬೇಕು. ಸಿದ್ದರಾಮಯ್ಯ ಇಲ್ಲದಿದ್ದರೆ ನಮ್ಮ ಪಕ್ಷಕ್ಕೆ ಕಷ್ಟ ಆಗುತ್ತದೆ. ರಾಜ್ಯದ ಚುನಾವಣೆಯಿಂದ ಅವರು ಹಿಂದೆ ಸರಿಯಬಹುದು. ಕೇಂದ್ರದಲ್ಲಿ ಸಿದ್ದರಾಮಯ್ಯಗೆ ಉತ್ತಮ ಸ್ಥಾನಮಾನ‌ ಸಿಗಬಹುದು. ರಾಜ್ಯಸಭೆ ಸ್ಥಾನ ಸಿಕ್ಕಿ ರಾಜಕೀಯದಲ್ಲಿ ಸಕ್ರಿಯವಾಗಿ ಇರಬಹುದು. ಸಿದ್ದರಾಮಯ್ಯ ನಿವೃತ್ತಿಯಾದರೆ ನಮಗೆ ಕಷ್ಟ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾಗೆ ಇಬ್ಬರು ರಿಟರ್ನ್​, ಮೂವರು ಅಲಭ್ಯ!

Source link

ಜೀವ ಜಲಕ್ಕಾಗಿ ಹಾಹಾಕಾರ: ಮಾಜಿ ಸಿಎಂ ಪುತ್ರ ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಜನರ ಪರದಾಟ! – Kannada News | Monsoon Irony: Severe Water Scarcity Grips Former CM’s Son’s Constituency in Kalaburagi

ಮಳೆಗಾಲದಲ್ಲೂ ಜೀವ ಜಲಕ್ಕಾಗಿ ಹಾಹಾಕಾರImage Credit source: Tv9 Kannada

ಕಲಬುರಗಿ, ಜುಲೈ 27: ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದಲ್ಲಿ ಜನರು ಮಳೆಗಾಲದಲ್ಲಿಯೂ ಹನಿ ನೀರಿಗೆ ಪರದಾಡಬೇಕಾದ ಸ್ಥಿತಿ ತಲೆದೋರಿದೆ. ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟ ಬೆನ್ನಲ್ಲೇ ಗ್ರಾಮದಲ್ಲಿ ಜಲ ಕ್ಷಾಮ ತಲೆದೋರಿದ್ದು, ಈ ನಡುವೆ ನೀರಿನ ಸರಬರಾಜು ಕೂಡ 20 ದಿನಗಳಿಂದ ತಿಂಗಳಿಗೆ ಒಮ್ಮೆ ಆಗುತ್ತಿರೋದು ಸಮಸ್ಯೆ ಉಲ್ಬಣಗೊಳಿಸಿದೆ. ಗ್ರಾಮದಲ್ಲಿರುವ ಏಕೈಕ ಬಾವಿಯೇ ಈಗ ನೀರಿಗೆ ಆಧಾರವಾಗಿದ್ದು, ವಯೋವೃದ್ಧರಿಗೆ ಬಾವಿಯಿಂದ ನೀರು ಸೇದೋದು ಬಹಳ ಸಮಸ್ಯೆಯಾಗುತ್ತಿದೆ. ಹೀಗಾಗಿ ಆಡಳಿತ ವ್ಯವಸ್ಥೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ನೀರನ್ನೇ ಕಾಣದ ನಲ್ಲಿಗಳು!

ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಪ್ರತಿನಿಧಿಸುವ ಜಿಲ್ಲೆ ಮತ್ತು ಮಾಜಿ ಸಿಎಂ ಧರ್ಮಸಿಂಗ್‌ಅವರ ಪುತ್ರ ಅಜಯ್ ಸಿಂಗ್ ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಈ ರೀತಿ ಸಮಸ್ಯೆ ತಲೆದೋರಿದ್ದು, ಗ್ರಾಮದಲ್ಲಿ ಜಲ ಜೀವನ್ ಯೋಜನೆ ಅಡಿಯಲ್ಲಿ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದ್ದಾರೆಯಾದರೂ ಅದು ತೋರ್ಪಡಿಕೆಗೆ ಮಾತ್ರವಾಗಿದೆ. ಆ ನಲ್ಲಿಗಳಲ್ಲಿ ಈವರೆಗೂ ಒಂದು ಹನಿ ನೀರು ಕೂಡ ಬಂದಿಲ್ಲ. ಪಂಚಾಯತಿ ವತಿಯಿಂದ ಊರ ಹೊರಗಿನ‌ ಬಾವಿಯಿಂದ ಟ್ಯಾಂಕ್​​ಗೆ ನೀರು ಡಂಪ್ ಮಾಡಿ ಅಲ್ಲಿಂದ ತಿಂಗಳಿಗೊಮ್ಮೆ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆಯಾದರೂ, ಅದು ಕಾಟಚಾರಕ್ಕೆ ಎಂಬಂತೆ ನಡೆಯುತ್ತಿದೆ. ಅವರು ಬಿಡುವ ನೀರು ಯಾವುದಕ್ಕೂ ಸಾಲಲ್ಲ ಎಂಬುದು ಗ್ರಾಮಸ್ಥರ ಆರೋಪ.

ಇದನ್ನೂ ಓದಿ: ಕಲಬುರಗಿಯಲ್ಲಿ 300ಕ್ಕೂ ಅಧಿಕ ಮನೆಗಳ ತೆರವಿಗೆ ಕೋರ್ಟ್ ಆದೇಶ; ಆತಂಕದಲ್ಲಿ ನಿವಾಸಿಗಳು; ಆಗಿದ್ದೇನು?

ಗ್ರಾಮಸ್ಥರು ಹೇಳೋದೇನು?

ವಾಹನಗಳ ಸೌಕರ್ಯ ಹೊಂದಿರುವ ಗ್ರಾಮದ ಕೆಲ ನಿವಾಸಿಗಳು ದೂರ ದೂರಕ್ಕೆ ಹೋಗಿ ಒಳ್ಳೆಯ ನೀರನ್ನ ತೆಗೆದುಕೊಂಡು ಬಂದು ಕುಡಿಯೋದಕ್ಕೆ ಸೇರಿದಂತೆ ಗೃಹ ಬಳಕೆಗೆ ಉಪಯೋಗ ಮಾಡಿಕೊಳ್ಳತ್ತಿದ್ದಾರೆ. ಆದರೆ ಉಳಿದವರಿಗೆ ಊರಲ್ಲಿರುವ ಒಂದೇ ಒಂದು ಬಾಯಿಯ ನೀರೇ ಗತಿಯಾಗಿದೆ. ಗ್ರಾಮದಲ್ಲಿನ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆಯಾದರೂ ಯಾವುದೇ ಪ್ರಯೋನವಾಗಿಲ್ಲ. ಜನ ಪ್ರತಿನಿಧಿಗಳು ಕೂಡ ಇತ್ತ ಮುಖ ಮಾಡಿಲ್ಲ ಎಂಬುದು ಗ್ರಾಮಸ್ಥರ ಅಳಲು. ಆಡಳಿತ ಇಚ್ಛಾಶಕ್ತಿ ತೋರಿ ಗ್ರಾಮಕ್ಕೊಂದು ಶಾಶ್ವತ ಕುಡಿಯಿವ ನೀರಿನ ಯೋಜನೆ ಕಲ್ಪಿಸಬೇಕು ಎಂಬುದು ಇಲ್ಲಿನವರ ಪ್ರಮುಖ ಆಗ್ರಹವಾಗಿದ್ದು, ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಜಲಕ್ಷಾಮ ಬಗೆಹರಿಸುವತ್ತ ಕ್ರಮ ಕೈಗೊಳ್ಳಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2027: ಇಬ್ಬರು ಆಟಗಾರರು+10 ಕೋಟಿ: ಕುತೂಹಲ ಕೆರಳಿಸಿದ ಬಿಗ್ ಟ್ರೇಡ್ ಪ್ರಕ್ರಿಯೆ – Kannada News | IPL 2027 Mega Trade: CSK vs MI Tug of War Over Ayush Mhatre Intensifies

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಬಿಗ್ ಟ್ರೇಡಿಂಗ್ ಪ್ರಕ್ರಿಯೆಗೆ ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಮುಂಬೈ ಇಂಡಿಯನ್ಸ್ (MI) ನಡುವೆ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ವಿನಿಮಯಕ್ಕೆ ಮಾತುಕತೆ ನಡೆಯುತ್ತಿದ್ದು, ಉಭಯ ಫ್ರಾಂಚೈಸಿಗಳ ಬೇಡಿಕೆಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂಬೈ ಬೇಡಿಕೆ ಏನು?

ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಬಿಟ್ಟುಕೊಡಲು ಎಂಐ ಮ್ಯಾನೇಜ್‌ಮೆಂಟ್ ಒಪ್ಪಿಗೆ ಸೂಚಿಸಿದೆ. ಆದರೆ, ಇದಕ್ಕೆ ಪ್ರತಿಯಾಗಿ ಅವರು ಸಿಎಸ್‌ಕೆಯಿಂದ ಕೇಳಿರುವುದು ಇಬ್ಬರು ಪ್ರಮುಖ ಆಟಗಾರರನ್ನು. ಅವರೆಂದರೆ…

  • ಶಿವಂ ದುಬೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯಂತ ನಂಬಿಕಸ್ಥ ಮತ್ತು ಸ್ಪಿನ್ ದಾಳಿಯನ್ನು ಧೂಳೀಪಟು ಮಾಡುವ ಬ್ಯಾಟರ್ ಶಿವಂ ದುಬೆಗಾಗಿ ಎಂಐ ಬೇಡಿಕೆಯಿಟ್ಟಿದೆ.
  • ಆಯುಷ್ ಮ್ಹಾತ್ರೆ: ಸಿಎಸ್‌ಕೆ ತಂಡದ ಯುವ ಸ್ಫೋಟಕ ಆಟಗಾರ ಆಯುಷ್ ಮ್ಹಾತ್ರೆಯನ್ನು ಕೂಡ ನೀಡುವಂತೆ ಎಂಐ ಫ್ರಾಂಚೈಸಿ ಬೇಡಿಕೆ ಮುಂದಿಟ್ಟಿದೆ.

ಅಂದರೆ ಇಲ್ಲಿ ಶಿವಂ ದುಬೆ ಹಾಗೂ ಆಯುಷ್ ಮ್ಹಾತ್ರೆಯನ್ನು ನೀಡಿದರೆ, ಹಾರ್ದಿಕ್ ಪಾಂಡ್ಯರನ್ನು ನಿಮಗೆ (ಸಿಎಸ್​ಕೆ) ನೀಡುವುದಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಿಳಿಸಿದೆ.

ಸಿಎಸ್‌ಕೆ ನಿರಾಕರಣೆ ಏಕೆ?

ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಭವಿಷ್ಯದ ತಾರೆ ಆಯುಷ್ ಮ್ಹಾತ್ರೆ ಅವರನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿದೆ. ಮ್ಹಾತ್ರೆ ಅವರನ್ನು ತಂಡದ ಭವಿಷ್ಯದ ಪ್ರಮುಖ ಆಸ್ತಿ ಎಂದು ಸಿಎಸ್‌ಕೆ ಭಾವಿಸಿರುವುದೇ ಇದಕ್ಕೆ ಮುಖ್ಯ ಕಾರಣ.

ಸಿಎಸ್‌ಕೆಯ ಕೌಂಟರ್-ಆಫರ್!

ಆಯುಷ್ ಮ್ಹಾತ್ರೆ ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ಸಿಎಸ್‌ಕೆ ಬಯಸಿದ್ದು, ಬದಲಾಗಿ ಮುಂಬೈ ಇಂಡಿಯನ್ಸ್‌ಗೆ ಬರೋಬ್ಬರಿ ₹20 ಕೋಟಿ ಮೌಲ್ಯದ ಬೃಹತ್ ಕೌಂಟರ್-ಆಫರ್ ನೀಡಿದೆ. ಈ ಆಫರ್‌ನಲ್ಲಿ ಏನೇನಿದೆ?

  • ಶಿವಂ ದುಬೆ (ಸ್ಟಾರ್ ಆಲ್-ರೌಂಡರ್)
  • ಡೆವಾಲ್ಡ್ ಬ್ರೆವಿಸ್ (ಸೌತ್ ಆಫ್ರಿಕಾದ ಯುವ ಬ್ಯಾಟರ್)
  • ₹10 ಕೋಟಿ ನಗದು ಹಣ (ಕ್ಯಾಶ್ ಡೀಲ್)

ಅಂದರೆ ಹಾರ್ದಿಕ್ ಪಾಂಡ್ಯರನ್ನು ನೀಡಿದರೆ, ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್ ಅವರನ್ನು ನೀಡುವುದಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್​ಗೆ ತಿಳಿಸಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 10 ಕೋಟಿ ರೂ. ನಗದು ಮೊತ್ತ ನೀಡುವುದಾಗಿಯೂ ಹೇಳಿಕೊಂಡಿದೆ.

ಮುಂಬೈ ಇಂಡಿಯನ್ಸ್ ಡಿಮ್ಯಾಂಡ್!

ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಇಬ್ಬರು ಆಟಗಾರರು + 10 ಕೋಟಿ ರೂ. ಮೌಲ್ಯದ ಕೌಂಟರ್ ಆಫರ್‌ಗೆ ಮುಂಬೈ ಇಂಡಿಯನ್ಸ್ ಸದ್ಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.  ಬದಲಾಗಿ ಆಯುಷ್ ಮ್ಹಾತ್ರೆ ಅವರಿಗಾಗಿ ಪಟ್ಟು ಹಿಡಿದಿದೆ. ಅಂದರೆ ಇಲ್ಲಿ ಮುಂಬೈ ಇಂಡಿಯನ್ಸ್ ಭವಿಷ್ಯದ ದೃಷ್ಟಿಯಿಂದ ಮ್ಹಾತ್ರೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಯಸಿದೆ.

ಇದಕ್ಕೆ ಮುಖ್ಯ ಕಾರಣ ಆಯುಷ್ ಮ್ಹಾತ್ರೆಯ ಸ್ಫೋಟಕ ಬ್ಯಾಟಿಂಗ್ ಶೈಲಿ. ಅದರಲ್ಲೂ ರೋಹಿತ್ ಶರ್ಮಾ ರೀತಿಯಲ್ಲಿ ಬ್ಯಾಟ್ ಬೀಸುತ್ತಿರುವ ಯುವ ದಾಂಡಿಗ ಮುಂಬರುವ ದಿನಗಳಲ್ಲಿ ಹಿಟ್​ಮ್ಯಾನ್ ಅವರ ಸ್ಥಾನ ತುಂಬಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ಕಾರಣದಿಂದಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಆಯುಷ್ ಮ್ಹಾತ್ರೆಗಾಗಿ ಪಟ್ಟು ಹಿಡಿದಿದೆ.

ಇದನ್ನೂ ಓದಿ: IND vs SL: ಟೀಮ್ ಇಂಡಿಯಾದಿಂದ ಮೂವರು ಔಟ್!

ಒಟ್ಟಾರೆಯಾಗಿ ಹೇಳುವುದಾರೆ, ಐಪಿಎಲ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಈ ಮೆಗಾ ಟ್ರೇಡ್ ಸದ್ಯ ಆಯುಷ್ ಮ್ಹಾತ್ರೆ ಅವರ ಭವಿಷ್ಯದ ಮೇಲೆಯೇ ನಿಂತಿದೆ. ಸಿಎಸ್‌ಕೆಯ ಬಂಪರ್ ಆಫರ್ ಅನ್ನು ಮುಂಬೈ ನಿರಾಕರಿಸಿರುವುದರಿಂದ ಈ ಹಗ್ಗಜಗ್ಗಾಟ ಮತ್ತಷ್ಟು ರೋಚಕವಾಗಿದೆ. ಮುಂಬರುವ ದಿನಗಳಲ್ಲಿ ಉಭಯ ಫ್ರಾಂಚೈಸಿಗಳು ಒಮ್ಮತಕ್ಕೆ ಬಂದು ಈ ಇತಿಹಾಸ ಪ್ರಸಿದ್ಧ ಡೀಲ್ ಅನ್ನು ಅಂತಿಮಗೊಳಿಸುತ್ತವಾ ಅಥವಾ ಈ ಮಾತುಕತೆ ಇಲ್ಲಿಗೇ ಮುಕ್ತಾಯವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Source link

ಬ್ಯಾಡ್ಮಿಂಟನ್ ಫೈನಲ್ಸ್​ನಲ್ಲಿ ಸೋಲು: ಗಾಳಿಯಲ್ಲಿ ಗುಂಡು ಹಾರಿಸಿದ ಉದ್ಯಮಿ ಬಂಧನ – Kannada News | Kurnool Badminton Loss: Businessman Fires Gun, Arrested for Public Firing

ಕರ್ನೂಲ್,ಜುಲೈ 27: ‘ಕರ್ನೂಲ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್’ ಪಂದ್ಯಾವಳಿಯ ಫೈನಲ್‌ನಲ್ಲಿ ತಮ್ಮ ತಂಡ ಸೋಲನ್ನನುಭವಿಸಿದ ಆಕ್ರೋಶದಲ್ಲಿ, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು(Firing) ಹಾರಿಸಿ ತೀವ್ರ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ. ಕರ್ನೂಲ್‌ನಲ್ಲಿ ನಡೆದ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೌಶಿಕ್ ಅವರ ತಂಡವು ಸೋಲನುಭವಿಸಿತು. ಮಾಜಿ ಸಂಸದ ಟಿ.ಜಿ. ವೆಂಕಟೇಶ್ ಸೇರಿದಂತೆ ನೂರಾರು ಪ್ರೇಕ್ಷಕರು ಪಂದ್ಯ ವೀಕ್ಷಿಸುತ್ತಿದ್ದರು. ಪಂದ್ಯದ ಸೋಲನ್ನು ಸಹಿಸಲಾಗದ ಕೌಶಿಕ್, ತೀವ್ರ ನಿರಾಶೆ ಹಾಗೂ ಅವಮಾನದಿಂದ ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು.

ಏಕಾಏಕಿ ಗುಂಡಿನ ಶಬ್ದ ಕೇಳಿಬರುತ್ತಿದ್ದಂತೆ ಮೈದಾನದಲ್ಲಿದ್ದ ಪ್ರೇಕ್ಷಕರು ಹಾಗೂ ಸಂಘಟಕರು ಪ್ರಾಣಭಯದಿಂದ ಓಡಲಾರಂಭಿಸಿದರು. ಈ ವೇಳೆ ಉಂಟಾದ ಗೊಂದಲದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುಖ್ಯ ಅತಿಥಿಯಾಗಿದ್ದ ಮಾಜಿ ಸಂಸದರ ಮೇಲೆ ದಾಳಿ ನಡೆದಿದೆಯೇ ಎಂದು ಆರಂಭದಲ್ಲಿ ಜನ ಆತಂಕಗೊಂಡಿದ್ದರು. ಆದರೆ, ಕೌಶಿಕ್ ಸೋಲಿನ ನಿರಾಶೆಯಿಂದ ಮಾತ್ರ ಗಾಳಿಯಲ್ಲಿ ಗುಂಡು ಹಾರಿಸಿದ್ದು ಎಂದು ತಿಳಿದುಬಂದ ನಂತರ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಕೌಶಿಕ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಸೋಲಿನ ಆಕ್ರೋಶದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಡಿಎಸ್‌ಪಿ ರಾಘವೇಂದ್ರ ತಿಳಿಸಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಭೀತಿ ಹುಟ್ಟಿಸಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಆರೋಪಿ ಕೌಶಿಕ್ ಅವರ ಶಸ್ತ್ರಾಸ್ತ್ರ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸಲು ಪೊಲೀಸರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತಿದ್ದಾರೆ.

ಮತ್ತಷ್ಟು ಓದಿ: ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಪರ-ವಿರೋಧ ಚರ್ಚೆಗೆ ಕಾರಣವಾದ ಸಚಿವ ಯು.ಟಿ. ಖಾದರ್ ಹೇಳಿಕೆ

ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಪ್ರಕಾರ, ಆತ್ಮರಕ್ಷಣೆಗಾಗಿ ನೀಡಲಾಗುವ ಪರವಾನಗಿ ಶಸ್ತ್ರಾಸ್ತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವುದು, ಆಕ್ರೋಶ ಅಥವಾ ಆಚರಣೆಯ ಭಾಗವಾಗಿ ಗಾಳಿಯಲ್ಲಿ ಗುಂಡು ಹಾರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಕೃತ್ಯಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮುಲ್ಲಾ ಹೇಳಿಕೆ ವಿವಾದ: ಸಿಟಿ ರವಿ ವಿರುದ್ಧದ ಕೇಸ್ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ – Kannada News | CT Ravi FIR Case Shifted to Bengaluru Representatives Court; BJP MLC Moves Karnataka High Court for Stay

ಚಿಕ್ಕಮಗಳೂರಿನ ಬಸವನಹಳ್ಳಿ ರಸ್ತೆಯಲ್ಲಿರುವ ಸಿ.ಟಿ. ರವಿ ಅವರ ನಿವಾಸಕ್ಕೆ ಪೊಲೀಸ್ ಭದ್ರತೆImage Credit source: tv9

ಚಿಕ್ಕಮಗಳೂರು, ಜುಲೈ 27: ನೀಟ್ ಪರೀಕ್ಷೆ ಕುರಿತ ಪ್ರತಿಭಟನೆಗಳ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ವಿಧಾನ ಪರಿಷತ್ ಸದಸ್ಯ ಸಿಟಿ ರವಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಕರಣವು ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ. ಈ ಮಧ್ಯೆ ಎಫ್‌ಐಆರ್‌ಗೆ ತಡೆ ಕೋರಿ ಸಿಟಿ ರವಿ (CT Ravi) ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಪ್ರಕರಣದ ಪ್ರತಿಯೊಂದಿಗೆ, ಎಫ್‌ಐಆರ್ ನಂತರ ನಡೆದ ಎಲ್ಲ ಬೆಳವಣಿಗೆಗಳ ಸಮಗ್ರ ವರದಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತಿದೆ. ಈ ಸಂಬಂಧ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಬೆಂಗಳೂರಿಗೆ ತೆರಳಿದ್ದಾರೆ.

ಇತ್ತ, ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಸಂಖ್ಯೆ 149ಕ್ಕೆ ತಡೆ ನೀಡುವಂತೆ ಕೋರಿ ಸಿಟಿ ರವಿ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(2) ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡುವಂತೆ ಮನವಿ ಮಾಡಲಾಗಿದೆ.

ಜಾಮಿಯಾ ಮಸೀದಿ ಸಮಿತಿಯ ಅರ್ಧಯಕ್ಷರ ದೂರಿನ ಮೇರೆಗೆ ಕ್ರಮ

ಜಾಮಿಯಾ ಮಸೀದಿ ಸಮಿತಿಯ ಅಧ್ಯಕ್ಷ ಮುದಾಸಿರ್ ನೀಡಿದ ದೂರಿನ ಆಧಾರದ ಮೇಲೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಈಗಾಗಲೇ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದಾರೆ. ಬಳಿಕ ಸಿ.ಟಿ. ರವಿ ಅವರ ನಿವಾಸಕ್ಕೂ ತನಿಖಾಧಿಕಾರಿ ಹಾಗೂ ನಗರ ಠಾಣೆ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ನೋಟಿಸ್ ಅಂಟಿಸಿದ್ದರು.

ಸಿಟಿ ರವಿ ನಿವಾಸಕ್ಕೆ ಹೆಚ್ಚಿನ ಭದ್ರತೆ


ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವುದರಿಂದ ಚಿಕ್ಕಮಗಳೂರಿನ ಬಸವನಹಳ್ಳಿ ರಸ್ತೆಯಲ್ಲಿರುವ ಸಿ.ಟಿ. ರವಿ ಅವರ ನಿವಾಸಕ್ಕೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸ್ಥಳೀಯ ಪೊಲೀಸ್ ಸಿಬ್ಬಂದಿ ಹಾಗೂ ಡಿಎಆರ್ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ: ಎದೆ ಸೀಳಿದರೆ ಮೂರು ಅಕ್ಷರ ಇಲ್ಲದ ಮುಲ್ಲಾಗಳಿಗೂ, ನೀಟ್ ಪರೀಕ್ಷೆಗೂ ಏನು ಸಂಬಂಧ?: ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆ

ಸಿಟಿ ರವಿ ಹೇಳಿದ್ದೇನು?

ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ನಡೆದ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ್ದ ಸಿಟಿ ರವಿ, ‘ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ? ಮುಲ್ಲಾಗಳ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ. ಅವರು ಬಂದು ನೀಟ್ ವಿರುದ್ಧ ಹೋರಾಟ ಮಾಡುತ್ತಿದ್ದರೆ ಅದರ ಅರ್ಥವೇನು? ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವರು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಮೋದಿ ಹಠಾವೋ ಎಂದು ಘೋಷಣೆ ಕೂಗಿದ್ದಾರೆ. ಸಿಎಎ, ಎನ್‌ಆರ್‌ಸಿ ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರಗಳಿಗೆ ಯಾವುದೇ ಸಂಬಂಧವಿಲ್ಲ. ಭಾರತವನ್ನು ತುಂಡರಿಸಬೇಕು ಎಂದು ಹೇಳಿದ ತುಕಡೆ ಗ್ಯಾಂಗ್‌ಗಳು ಕೂಡ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು’ ಎಂದು ಹೇಳಿದ್ದರು. ಈ ಹೇಳಿಕೆ ವ್ಯಾಪಕ ವಿವಾದಕ್ಕೆ ಕಾರಣವಾಗಿ, ಅವರ ವಿರುದ್ಧ ದೂರು ದಾಖಲಾಗಿ ಎಫ್‌ಐಆರ್ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿ ಹಂಡ್ರೆಡ್​ನಲ್ಲಿ ಸಹೋದರರ ಸವಾಲ್: ಕೊನೆಗೂ ಗೆದ್ದಿದ್ದು ಯಾರು ಗೊತ್ತಾ? – Kannada News | Craig Smashes Twin Brother Jamie For Dramatic Match Winning Six

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ರೋಮಾಂಚಕ ಸಹೋದರರ ಪೈಪೋಟಿಗೆ ‘ದಿ ಹಂಡ್ರೆಡ್’ ಟೂರ್ನಿ ಸಾಕ್ಷಿಯಾಗಿದೆ. ಪಂದ್ಯದ ಕೊನೆಯ ಹಂತದಲ್ಲಿ ಗೆಲ್ಲಲು 10 ರನ್‌ಗಳ ಅಗತ್ಯವಿದ್ದಾಗ, ತನ್ನದೇ ಅವಳಿ ಸೋದರ ಜೇಮಿ ಓವರ್ಟನ್ ಬೌಲಿಂಗ್‌ನಲ್ಲಿ ಅಬ್ಬರಿಸುವ ಮೂಲಕ ಕ್ರೇಗ್ ಓವರ್ಟನ್, ಟ್ರೆಂಟ್ ರಾಕೆಟ್ಸ್ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದಾರೆ.

ಸಹೋದರರ ಸವಾಲ್:

ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬಿಡ್ಜ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ಹಾಗೂ ಟ್ರೆಂಟ್ ರಾಕೆಟ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ ತಂಡವು 100 ಎಸೆತಗಳಲ್ಲಿ 9 ವಿಕೆಟ್ ಕಳೆದುಕೊಂಡು 159 ರನ್​ ಕಲೆಹಾಕಿತು.

160 ರನ್‌ಗಳ ಗುರಿ ಬೆನ್ನಟ್ಟಿದ ಟ್ರೆಂಟ್ ರಾಕೆಟ್ಸ್ ತಂಡಕ್ಕೆ ಕೊನೆಯ 5 ಎಸೆತಗಳಲ್ಲಿ 10 ರನ್‌ಗಳು ಬೇಕಾಗಿದ್ದವು. ಕ್ರೀಸ್‌ನಲ್ಲಿದ್ದದ್ದು ಟ್ರೆಂಟ್ ರಾಕೆಟ್ಸ್‌ನ ಕ್ರೇಗ್ ಓವರ್ಟನ್. ಲಂಡನ್ ಸ್ಪಿರಿಟ್ ಪರ ಕೊನೆಯ ಓವರ್ ಎಸೆಯಲು ಬಂದದ್ದು ಅವರದ್ದೇ ಸಹೋದರ ಜೇಮಿ ಓವರ್ಟನ್. ಇಡೀ ಕ್ರೀಡಾಂಗಣದಲ್ಲಿ ಉಸಿರು ಬಿಗಿಹಿಡಿದು ನೋಡುವಂತಹ ವಾತಾವರಣ ನಿರ್ಮಾಣವಾಗಿತ್ತು.

      • ಮೊದಲ ಎಸೆತ (ಸಿಕ್ಸರ್): ಜೇಮಿ ಎಸೆದ ಶಾರ್ಟ್ ಪಿಚ್ ಚೆಂಡನ್ನು ಕ್ರೇಗ್ ಮನಮೋಹಕವಾಗಿ ಫೈನ್ ಲೆಗ್ ಮೇಲೆ ಸಿಕ್ಸರ್‌ಗೆ ಅಟ್ಟಿದರು. ಈ ಒಂದೇ ಹೊಡೆತ ಪಂದ್ಯವನ್ನು ಟ್ರೆಂಟ್ ರಾಕೆಟ್ಸ್ ಕಡೆಗೆ ತಿರುಗಿಸಿತು.
      • ಎರಡನೇ ಎಸೆತ (2 ರನ್): ಜೇಮಿ ಎಸೆದ ಎರಡನೇ ಎಸೆತದಲ್ಲಿ 2 ರನ್​ ಕಲೆಹಾಕುವಲ್ಲಿ ಕ್ರೇಗ್ ಯಶಸ್ವಿಯಾದರು.
      • ಮೂರನೇ ಎಸೆತ (2 ರನ್ – ಗೆಲುವು): ಮತ್ತೊಮ್ಮೆ ಇನ್‌ಫೀಲ್ಡ್ ದಾಟಿಸಿ ಬೌಂಡರಿ ಗೆರೆಯತ್ತ ಚೆಂಡು ತಳ್ಳಿ, ಇನ್ನೆರಡು ರನ್ ಕದಿಯುವ ಮೂಲಕ ಇನ್ನು 2 ಎಸೆತಗಳು ಬಾಕಿ ಇರುವಂತೆಯೇ ಕ್ರೇಗ್ ರಾಕೆಟ್ಸ್ ತಂಡಕ್ಕೆ ಗೆಲುವು ತಂದಿತ್ತರು.

ಟ್ರೆಂಟ್ ರಾಕೆಟ್ಸ್ ಪ್ಲೇಯಿಂಗ್ 11: ಬೆನ್ ಡಕೆಟ್ , ಫಿನ್ ಅಲೆನ್ , ಟಾಮ್ ಬ್ಯಾಂಟನ್ , ಟಿಮ್ ಡೇವಿಡ್ , ಸ್ಯಾಮ್ ಬಿಲ್ಲಿಂಗ್ಸ್ (ನಾಯಕ),  ಮಿಚೆಲ್ ಸ್ಯಾಂಟ್ನರ್ , ಲೂಯಿಸ್ ಗ್ರೆಗೊರಿ , ಕ್ರೇಗ್ ಓವರ್ಟನ್ , ಕ್ಯಾಲ್ವಿನ್ ಹ್ಯಾರಿಸನ್ , ಮ್ಯಾಟ್ ಹೆನ್ರಿ , ಮೊಹಮ್ಮದ್ ಅಮೀರ್.

ಇದನ್ನೂ ಓದಿ: ಅವಕಾಶ​ ಕೈ ತಪ್ಪಿದಾಗ ಬೇಸರವಾಗುತ್ತೆ… ಕಂಬ್ಯಾಕ್​ಗೆ ಅಭಿಷೇಕ್ ಶರ್ಮಾ ಪಣ!

ಲಂಡನ್ ಸ್ಪಿರಿಟ್ ಪ್ಲೇಯಿಂಗ್ 11:  ಲುವಾನ್-ಡ್ರೆ ಪ್ರಿಟೋರಿಯಸ್ , ಲಿಯಾಮ್ ಲಿವಿಂಗ್‌ಸ್ಟೋನ್ (ನಾಯಕ) , ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಡೆವಾಲ್ಡ್ ಬ್ರೆವಿಸ್ , ಜೇಮ್ಸ್ ಕೋಲ್ಸ್ , ಜೇಮ್ಸ್ ರೆವ್ , ಜೇಮೀ ಓವರ್ಟನ್ , ಡೇವಿಡ್ ವಿಲ್ಲಿ , ಆಂಡ್ರ್ಯೂ ಟೈ , ಆ್ಯಡಂ ಮಿಲ್ನ್​, ಆ್ಯಡಂ ಝಂಪಾ.

ಕಳೆದ ವರ್ಷದ ರಿವೆಂಜ್ ತೀರಿಸಿಕೊಂಡೆ!

ಪಂದ್ಯ ಮುಗಿದ ಬಳಿಕ ಬಿಸಿಸಿ ಸ್ಪೋರ್ಟ್ಸ್ ಜೊತೆ ಮಾತನಾಡಿದ ಕ್ರೇಗ್ ಓವರ್ಟನ್, “ಕಳೆದ ವರ್ಷದ ಪಂದ್ಯದಲ್ಲಿ ಜೇಮಿ ನನ್ನನ್ನು ಔಟ್ ಮಾಡಿದ್ದ. ಹಾಗಾಗಿ ಈ ಬಾರಿ ಅದಕ್ಕೆ ಸರಿಯಾಗಿ ಸೇಡು ತೀರಿಸಿಕೊಳ್ಳಬೇಕಿತ್ತು, ಆ ಕೆಲಸ ಮಾಡಿದ್ದೇನೆ!” ಎಂದು ನಗುತ್ತಾ ಹೇಳಿದರು.

Source link

ಕರ್ನಾಟಕದಲ್ಲಿ ಮತ್ತಷ್ಟು ಡಿಸಿಎಂ ಹುದ್ದೆ ಸೃಷ್ಟಿ?: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್​​ ಕೊಟ್ರು ಸ್ಪಷ್ಟನೆ – Kannada News | BK Hariprasad on Karnataka Cabinet Expansion: Delhi Visit for Personal Reasons, Denies DyCM Speculation

ಬೆಂಗಳೂರು, ಜುಲೈ 27: ಕರ್ನಾಟಕದಲ್ಲಿ ಮತ್ತಷ್ಟು ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿ ಊಹಾಪೋಹವಾಗಿದ್ದು, ಶೀಘ್ರವೇ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್​​ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್​​ ತಿಳಿಸಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ತಾವು ಪ್ರವಾಸದಲ್ಲಿರಲಿದ್ದು, ದೆಹಲಿಗೆ ತೆರಳುತ್ತಿರುವುದು ಕೂಡ ಖಾಸಗಿ ವಿಚಾರಕ್ಕೆ. ಕ್ಯಾಬಿನೆಟ್​​ ಸಂಬಂಧ ಮುಂದಿನ ಬೆಳವಣಿಗೆಗಳ ಬಳಿಕ ಮಾಹಿತಿ ನೀಡುತ್ತೇನೆ ಎಂದವರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ವಿಜಯ್​​ಗೆ ತ್ರಿಷಾ ಮಧ್ಯರಾತ್ರಿ ಸಿಗ್ತಾರೆ, ಮುಂದೆ ಡಿಸಿಎಂ ಆದರೂ ಅಚ್ಚರಿ ಇಲ್ಲ; ಮಾಜಿ ಸಚಿವನ ಟೀಕೆ – Kannada News | If Trisha Becomes Deputy CM Won’t Be Surprising AIADMK Leader RB Udhayakumar

ದಳಪತಿ ವಿಜಯ್ ಚುನಾವಣೆಗೆ ಸ್ಪರ್ಧೆ ಮಾಡಿದಾಗಿನಿಂದಲೂ ತ್ರಿಷಾ ಹೆಸರು ಸದಾ ಚರ್ಚೆಯಲ್ಲಿ ಇದೆ. ವಿಜಯ್ ಹಾಗೂ ತ್ರಿಷಾ ಅವರ ಆಪ್ತತೆ ಚರ್ಚೆಗೆ ಮೂಲ ಕಾರಣ. ಇಬ್ಬರೂ ವಿವಾಹ ಆಗಬಹುದು ಎಂಬ ಮಾತುಗಳು ಆಗಾಗ ಕೇಳಿ ಬರುತ್ತಲೇ ಇದೆ. ಅದೇ ರೀತಿ ತ್ರಿಷಾ ಅವರನ್ನು ವಿಜಯ್ ರಾಜಕೀಯಕ್ಕೆ ಕರೆತರಬಹುದು ಎಂಬ ಮಾತು ಕೂಡ ಕೇಳಿ ಬಂದಿದೆ. ಈ ಮಧ್ಯೆ ಎಐಎಡಿಎಂಕೆ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆರ್.ಬಿ. ಉದಯಕುಮಾರ್ ಮುಖ್ಯಮಂತ್ರಿ ವಿಜಯ್ ಹಾಗೂ ತ್ರಿಷಾ ಸಂಬಂಧವನ್ನು ಉಲ್ಲೇಖಿಸಿ ಅತ್ಯಂತ ಕಟುವಾಗಿ ವ್ಯಂಗ್ಯವಾಡಿದ್ದಾರೆ.

ವೇದಿಕೆಯಲ್ಲಿ ಮಾತನಾಡಿದ ಉದಯಕುಮಾರ್, ‘ಮುಖ್ಯಮಂತ್ರಿ ವಿಜಯ್ ಅವರನ್ನು ಮಧ್ಯರಾತ್ರಿ ಭೇಟಿ ಮಾಡಲು ಮತ್ತು ಅವರ ಜೊತೆ ಕೇಕ್ ಕತ್ತರಿಸಲು ನಟಿ ತ್ರಿಷಾ ಹೊರತುಪಡಿಸಿ ಬೇರೆ ಯಾರಿಗೂ ಅವಕಾಶವಿಲ್ಲ. ಪರಿಸ್ಥಿತಿ ಹೀಗಿರುವಾಗ, ಶೀಘ್ರದಲ್ಲೇ ವಿಜಯ್ ಅವರು ವ ಅವರನ್ನು ತಮಿಳುನಾಡಿನ ಉಪಮುಖ್ಯಮಂತ್ರಿ ಮಾಡಿದರೂ ಯಾರೂ ಆಶ್ಚರ್ಯಪಡಬೇಕಾಗಿಲ್ಲ’ ಎಂದು ಲೇವಡಿ ಮಾಡಿದ್ದಾರೆ. ಮಾಜಿ ಸಚಿವರ ಈ ಹೇಳಿಕೆ ತಮಿಳುನಾಡು ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣ ಆಗಿದೆ.

ವಿಜಯ್ ಸಿನಿಮಾ ರಿಲೀಸ್‌ಗೆ ಅಪ್ರಕಟಿತ ರಜೆ

ಇದೇ ವೇಳೆ ಮುಖ್ಯಮಂತ್ರಿ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅಪ್ರಕಟಿತ ರಜೆ ಘೋಷಿಸಿದ್ದನ್ನು ಉದಯಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. ‘ಮುಖ್ಯಮಂತ್ರಿಯಿಂದ ಹಿಡಿದು ಸಚಿವರು, ಶಾಸಕರವರೆಗೆ ಇಡೀ ಆಡಳಿತ ಯಂತ್ರವೇ ತಮ್ಮ ಕೆಲಸವನ್ನು ಬದಿಗಿಟ್ಟು ಸಿನಿಮಾ ನೋಡಲು ಹೋಗಿದೆ’ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ವದಂತಿಗಳಿಗೆ ಸಿಕ್ಕ ಹೊಸ ರೆಕ್ಕೆ

ವಿಜಯ್ ಅವರ ಪತ್ನಿ ಸಂಗೀತಾ ಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪತಿಯ ವಿರುದ್ಧ ಪರಸ್ತ್ರೀ ಸಂಬಂಧದ ಆರೋಪ ಮಾಡಿದಾಗಿನಿಂದಲೇ ವಿಜಯ್ ಮತ್ತು ತ್ರಿಷಾ ಸಂಬಂಧದ ಚರ್ಚೆ ಜೋರಾಯಿತು.

2004ರ ಸೂಪರ್ ಹಿಟ್ ‘ಗಿಲ್ಲಿ’ ಚಿತ್ರದಿಂದ ಹಿಡಿದು ಇತ್ತೀಚಿನ ‘ಲಿಯೋ’ ಚಿತ್ರದವರೆಗೆ ವಿಜಯ್ ಹಾಗೂ ತ್ರಿಷಾ ಜೋಡಿ ತಮಿಳು ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ. ಇದೀಗ ರಾಜಕೀಯ ವೇದಿಕೆಯಲ್ಲೂ ಇವರ ಹೆಸರು ಮುಂಚೂಣಿಗೆ ಬಂದಿರುವುದು ತಮಿಳುನಾಡಿನಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:05 pm, Mon, 27 July 26

Source link

Exit mobile version