ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಡೆಡ್​​ಲೈನ್; ಐಟಿಆರ್ ಸಬ್ಮಿಟ್ ಮಾಡುವ ಮುನ್ನ ಈ ಚೆಕ್​ಲಿಸ್ಟ್ ಪರಿಶೀಲಿಸಿ – Kannada News | ITR filing deadline nears, things to check before submitting

ನವದೆಹಲಿ, ಜುಲೈ 27: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಈ ಡೆಡ್​ಲೈನ್ ಹತ್ತಿರವಾಗುತ್ತಿದ್ದಂತೆ, ಧಾವಂತದಲ್ಲಿ ತೆರಿಗೆದಾರರು ಸಣ್ಣಪುಟ್ಟ ತಪ್ಪುಗಳನ್ನು ಮಾಡುವುದು ಸಾಮಾನ್ಯ. ಸಬ್ಮಿಟ್ (Submit) ಬಟನ್ ಒತ್ತುವ ಮುನ್ನ ಈ ಕೆಳಗಿನ ಪ್ರಮುಖ ವಿಷಯಗಳನ್ನು ಪರಿಶೀಲಿಸಿದರೆ, ತೆರಿಗೆ ಇಲಾಖೆಯಿಂದ ನೋಟಿಸ್ ಬರುವುದನ್ನು ತಪ್ಪಿಸಬಹುದು ಹಾಗೂ ರೀಫಂಡ್ (Refund) ಬೇಗನೆ ಸಿಗುವಂತೆ ನೋಡಿಕೊಳ್ಳಬಹುದು.

ದಾಖಲೆಗಳನ್ನು ಕೈಯಲ್ಲಿಟ್ಟುಕೊಳ್ಳಿ

ಫಾರ್ಮ್ 16, ಬ್ಯಾಂಕ್ ಸ್ಟೇಟ್‌ಮೆಂಟ್, ಬಡ್ಡಿ ಪ್ರಮಾಣಪತ್ರಗಳು (Interest Certificates), ಡಿಮ್ಯಾಟ್/ಮ್ಯೂಚುಯಲ್ ಫಂಡ್ ಕ್ಯಾಪಿಟಲ್ ಗೇನ್ಸ್‌ ವಿವರಗಳು ಹಾಗೂ ಹೂಡಿಕೆಯ ಆಧಾರಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

AIS ಮತ್ತು Form 26AS ಪರಿಶೀಲನೆ

ನಿಮ್ಮ ಬಳಿಯಿರುವ ದಾಖಲೆಗಳನ್ನು ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಲಭ್ಯವಿರುವ AIS (Annual Information Statement) ಮತ್ತು Form 26AS ನೊಂದಿಗೆ ಹೋಲಿಸಿ ಪರಿಶೀಲಿಸಿ.

ಸಂಬಳ, ಬ್ಯಾಂಕ್ ಡೆಪಾಸಿಟ್‌ಗಳ ಬಡ್ಡಿ, ಷೇರು ಮಾರುಕಟ್ಟೆಯ ಲಾಭ ಮತ್ತು ಕಡಿತಗೊಂಡ ತೆರಿಗೆ (TDS) ವಿವರಗಳು ಸರಿಯಾಗಿ ಹೊಂದಾಣಿಕೆಯಾಗಬೇಕು. Mismatch ಇದ್ದರೆ ನೋಟಿಸ್ ಬರುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ನೀವು ಐಟಿ ರಿಟರ್ನ್ಸ್ ಸಲ್ಲಿಸಿ 6 ವರ್ಷಗಳವರೆಗೆ ಈ ದಾಖಲೆಗಳು ಜೊತೆಯಲ್ಲಿರಲಿ: ತೆರಿಗೆ ತಜ್ಞರ ಸಲಹೆ

ಸರಿಯಾದ ITR ಫಾರ್ಮ್ ಆಯ್ಕೆಮಾಡಿ

  • ITR-1 (ಸಹಜ್): ₹50 ಲಕ್ಷದವರೆಗೆ ಆದಾಯವಿರುವ, ಒಂದೇ ಮನೆ ಆಸ್ತಿ ಹೊಂದಿರುವ ವೇತನದಾರರಿಗೆ.
  • ITR-2: ₹50 ಲಕ್ಷಕ್ಕಿಂತ ಹೆಚ್ಚು ಆದಾಯ, ಕ್ಯಾಪಿಟಲ್ ಗೇನ್ಸ್ ಅಥವಾ ಒಂದಕ್ಕಿಂತ ಹೆಚ್ಚು ಮನೆ ಆಸ್ತಿ ಹೊಂದಿರುವವರಿಗೆ.
  • ITR-3 / ITR-4: ವ್ಯಾಪಾರ, ವೃತ್ತಿಪರ ಆದಾಯ ಅಥವಾ ಫ್ರೀಲ್ಯಾನ್ಸಿಂಗ್ ಮಾಡುವವರಿಗೆ. (ತಪ್ಪು ಫಾರ್ಮ್ ಆಯ್ಕೆಮಾಡಿದರೆ ನಿಮ್ಮ ಐಟಿಆರ್ ಅಮಾನ್ಯಗೊಳ್ಳುತ್ತದೆ).

ಎಲ್ಲಾ ಆದಾಯದ ಮೂಲಗಳನ್ನು ನಮೂದಿಸಿ

ಸಂಬಳದ ಹೊರತಾಗಿ ಬ್ಯಾಂಕ್ ಉಳಿತಾಯ ಖಾತೆ ಬಡ್ಡಿ (Savings Interest), ಫಿಕ್ಸ್ಡ್ ಡೆಪಾಸಿಟ್ ಬಡ್ಡಿ, ಡಿವಿಡೆಂಡ್, ಮನೆ ಬಾಡಿಗೆ ಆದಾಯ ಮತ್ತು ಕ್ರಿಪ್ಟೋ/ಷೇರು ಲಾಭಗಳನ್ನು ತಪ್ಪದೇ ನಮೂದಿಸಿ.

ಬ್ಯಾಂಕ್ ಖಾತೆಯ ವಿವರಗಳು

ತೆರಿಗೆ ಮರುಪಾವತಿ (Tax Refund) ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಲು, ನಿಮ್ಮ ಬ್ಯಾಂಕ್ ಖಾತೆ ಐಟಿಆರ್ ಪೋರ್ಟಲ್‌ನಲ್ಲಿ Pre-Validated ಆಗಿದೆಯೇ ಹಾಗೂ IFSC ಕೋಡ್ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ

ತೆರಿಗೆ ವಿಧಾನದ (Tax Regime) ಆಯ್ಕೆ

ನೀವು ‘ಹಳೆಯ ತೆರಿಗೆ ಪದ್ಧತಿ’ (Old Tax Regime) ಅಥವಾ ‘ಹೊಸ ತೆರಿಗೆ ಪದ್ಧತಿ’ (New Tax Regime) ಪೈಕಿ ಯಾವುದರಲ್ಲಿ ಹೆಚ್ಚು ತೆರಿಗೆ ಉಳಿತಾಯವಾಗುತ್ತದೆ ಎಂಬುದನ್ನು ಲೆಕ್ಕಹಾಕಿ ಸರಿಯಾದ ವಿಭಾಗವನ್ನು ಆಯ್ಕೆಮಾಡಿ.

ಐಟಿಆರ್ ಸಬ್ಮಿಟ್ ಮಾಡಿದ ತಕ್ಷಣ ಪ್ರಕ್ರಿಯೆ ಮುಗಿಯುವುದಿಲ್ಲ. ರಿಟರ್ನ್ ಸಲ್ಲಿಸಿದ 30 ದಿನಗಳ ಒಳಗಾಗಿ E-Verification (ಆಧಾರ್ OTP, ನೆಟ್ ಬ್ಯಾಂಕಿಂಗ್ ಮೂಲಕ) ಪೂರ್ಣಗೊಳಿಸುವುದು ಕಡ್ಡಾಯ. ಇ-ವೆರಿಫೈ ಮಾಡದಿದ್ದರೆ ಸಲ್ಲಿಕೆಯಾದ ಐಟಿಆರ್ ರದ್ದಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪಶುವೈದ್ಯ ನೇಮಕಾತಿ ಹಗರಣ: ಕೆಪಿಎಸ್‌ಸಿ ಕಚೇರಿಗೆ ಆರ್​​. ಅಶೋಕ್​​ ಒಳಗೊಂಡ ಬಿಜೆಪಿ ನಿಯೋಗ ಭೇಟಿ – Kannada News | KPSC Veterinary Recruitment Scam: BJP Delegation Demands CBI Probe

ಬೆಂಗಳೂರು, ಜುಲೈ 27: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪಶುವೈದ್ಯರ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ತೀವ್ರ ಚರ್ಚೆ ಹಿನ್ನಲೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ಅವರನ್ನೊಳಗೊಂಡ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಿಯೋಗವು ಬೆಂಗಳೂರಿನ ಕೆಪಿಎಸ್‌ಸಿ ಕಚೇರಿಗೆ ಭೇಟಿ ನೀಡಿದೆ. ಕೆಪಿಎಸ್‌ಸಿ ಹಂಗಾಮಿ ಅಧ್ಯಕ್ಷ ಡಾ. ಬಿ. ಪ್ರಭುದೇವ್ ಅವರನ್ನು ಭೇಟಿಯಾಗಿರುವ ನಿಯೋಗ, ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಚರ್ಚೆ ನಡೆಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಮುಲ್ಲಾ ಅಂದ್ರೆ ಮುಸ್ಲಿಂ ಅಲ್ಲ ಅಂತಾ ಗೂಗಲ್​ನಲ್ಲಿ ನೋಡಿದ್ದೇನೆ’: ಬಂಧನಕ್ಕೆ ಹೆದರಲ್ಲ ಎಂದ ಸಿಟಿ ರವಿ – Kannada News | CT Ravi Says He Is Not Afraid of Arrest, Claims Google Confirms Mulla Does Not Mean Muslim

ಕೊಪ್ಫಳ, ಜುಲೈ 27: ನೀಟ್ ಅಕ್ರಮ ಖಂಡಿಸಿ ದೆಹಲಿಯಲ್ಲಿ ನಡೆದಿದ್ದ ಪ್ರತಿಭಟನೆ ವಿರುದ್ಧ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ (BJP MLC CT Ravi) ನೀಡಿದ್ದ ‘ಮುಲ್ಲಾಗಳ ಎದೆ ಸೀಳಿದ್ರೆ 3 ಅಕ್ಷರವಿಲ್ಲ’ ಎಂಬ ವಿವಾದಾತ್ಮಕ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ FIR ಕೂಡ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಎಂಎಲ್​ಸಿ ಸಿ.ಟಿ.ರವಿ, ‘ಮುಲ್ಲಾ ಅಂತಾ ಮಾತನಾಡಿದ್ದೇನೆ, ಮುಲ್ಲಾಗಳು ಅಂತಾ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೇಷ್ಟ್ರನ್ನೂ ಕಾಂಗ್ರೆಸ್ಸಿಗರು ಜೈಲಿಗೆ ಹಾಕ್ತಾರಾ? ಸಿ.ಟಿ.ರವಿ ಪ್ರಶ್ನೆ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಂಎಲ್​ಸಿ ಸಿ.ಟಿ.ರವಿ, ‘‘ಮುಲ್ಲಾ ಅಂದ್ರೆ ಮುಸ್ಲಿಂ ಸಮುದಾಯ ಅಲ್ಲ. ಮುಲ್ಲಾ ಅಂದ್ರೆ ಮುಸ್ಲಿಂ ಅಲ್ಲ ಅಂತಾ ಗೂಗಲ್​ನಲ್ಲಿ ನೋಡಿದ್ದೇನೆ. ಮುಲ್ಲಾನಿನೂ ನೀಟ್​ಗೂ ಏನ್ ಸಂಬಂಧ ಅಂತಾ ಮಾತನಾಡಿದ್ದೇನೆ.  ಶಾಲೆಯಲ್ಲಿ ಮೇಷ್ಟ್ರು ಕೂಡ ಎದೆ ಸೀಳಿದರೆ ಅಕ್ಷರ ಇಲ್ಲ ಎಂದಿದ್ದಾರೆ‌. ಹಾಗಾದರೆ ಮೇಷ್ಟ್ರನ್ನೂ ಕಾಂಗ್ರೆಸ್ಸಿಗರು ಜೈಲಿಗೆ ಹಾಕ್ತಾರಾ ಎಂದು ಪ್ರಶ್ನಿಸಿದರು.

ಜೈಲಿಗೆ ಹೋಗಲು ಸಿದ್ಧ: ಸುಳ್ಳು ದೂರಿಗೆ ಹೆದರಲ್ಲ

‘‘ನನ್ನ ವಿರುದ್ಧ ಸುಳ್ಳು ದೂರು ಆಧರಿಸಿ ಬಂಧನ ಮಾಡಲು ಹೊರಟರೆ ಅದಕ್ಕೆ ನಾನು ಸಿದ್ಧನಿದ್ದೇನೆ. ನಾನು ಟೆರರಿಸ್ಟ್ ಅಲ್ಲ, ಸಾರ್ವಜನಿಕ ಜೀವನದಲ್ಲಿ ಇರುವವನು. ಸತ್ಯ ಹೇಳುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ. ಹಿಂದುತ್ವದ ಪರ ಹಾಗೂ ಅನ್ಯಾಯದ ವಿರುದ್ಧ ಹೋರಾಡಿ ಜೈಲಿಗೆ ಹೋಗುವುದಕ್ಕೂ ಸಿದ್ಧ. ನಮಗೆ ಜನತಾ ನ್ಯಾಯಾಲಯ ಹಾಗೂ ಪ್ರಜಾಪ್ರಭುತ್ವದ ನ್ಯಾಯಾಲಯವೇ ಅಂತಿಮ. ಪೊಲೀಸರು ವಿಚಾರಣೆಗೆ ಕರೆದಿದ್ದು, ಪ್ರಸ್ತುತ ಬರಲು ಸಾಧ್ಯವಿಲ್ಲ ಎಂದು ವಕೀಲರ ಮೂಲಕ ತಿಳಿಸಿದ್ದೇನೆ. ನ್ಯಾಯಾಲಯದಲ್ಲೂ ಇದೇ ಮಾತನ್ನು ಹೇಳುತ್ತೇನೆ’’ ಎಂದರು.

ಜಾಮೀಯಾ ಮಸೀದಿ ಅಧ್ಯಕ್ಷನ ವಿರುದ್ಧ ದೂರು ನೀಡಿದ ಸಿಟಿ ರವಿ

ಜಾಮೀಯಾ ಮಸೀದಿ ಅಧ್ಯಕ್ಷ ಮುದಾಸೀರ್ ಪಾಷಾ ವಿರುದ್ಧ ದೂರು ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ‘‘ವಿಡಿಯೋಗಳಲ್ಲಿ ಒಬ್ಬ ಮುಲ್ಲಾ ನಡೆದುಕೊಂಡ ರೀತಿಯನ್ನು ನಾನು ಟೀಕಿಸಿದ್ದೆ. ಆದರೆ, ಅವರು ಇದನ್ನು ಇಡೀ ಮುಸ್ಲಿಂ ಸಮುದಾಯಕ್ಕೆ ಹೇಳಿದ್ದು ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು, ಮುಸ್ಲಿಮರನ್ನು ನನ್ನ ವಿರುದ್ಧ ಎತ್ತಿಕಟ್ಟುವ ಯತ್ನ ಮಾಡಿದ್ದಾರೆ. ಈ ಕುರಿತು ನಾನು ದೂರು ನೀಡಿದ್ದೇನೆ. ಸಿನಿಮಾಗಳಲ್ಲಿ ಪಂಡಿತರನ್ನು, ಅರ್ಚಕರನ್ನು ಅಪಮಾನಿಸಿದಾಗ ನಾವು ಇಡೀ ಹಿಂದೂ ಸಮಾಜಕ್ಕೆ ಅಪಮಾನ ಎಂದು ಭಾವಿಸಿಲ್ಲ. ಆದರೆ, ಇವರು ಒಬ್ಬ ಮುಲ್ಲಾನನ್ನು ಟೀಕಿಸಿದರೆ ತಮ್ಮ ಸಮುದಾಯಕ್ಕೆ ಅಂದುಕೊಳ್ಳುತ್ತಾರೆ’’ ಎಂದು ವಾಗ್ದಾಳಿ ಮಾಡಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ ಸಿಟಿ ರವಿ ‘‘ರಾಜ್ಯದಲ್ಲಿ ಕೆಪಿಎಸ್‌ಸಿ ಬಹುತೇಕ ಹುದ್ದೆಗಳಲ್ಲಿ ವ್ಯಾಪಾರ ನಡೆದಿದೆ. ಒಎಂಆರ್ ಶೀಟ್ ತಿದ್ದುವುದು ಮತ್ತು ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಕೆಲಸಗಳಾಗಿವೆ. ಕೇಂದ್ರದಲ್ಲಿ ತಮ್ಮದಲ್ಲದ ತಪ್ಪಿಗೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟರು. ಆದರೆ, ಇಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರೂ ಯಾರೂ ರಾಜೀನಾಮೆ ನೀಡುತ್ತಿಲ್ಲ. ಕಾಂಗ್ರೆಸ್‌ನವರು ಎರಡು ನಾಲಿಗೆಯಂತೆ ವರ್ತಿಸಬಾರದು’’ ಎಂದು ಕಿಡಿಕಾರಿದರು.

ಒಬ್ಬ ಮುಲ್ಲಾ ಬಗ್ಗೆ ಮಾತನಾಡಿದರೆ ತಕ್ಷಣ ಕೇಸ್ ಹಾಕುತ್ತಾರೆ ಎಂದ ರವಿ

ಇನ್ನು ನಿನ್ನೆ ಅರೆಸ್ಟ್ ಮಾಡುವ ರೀತಿ ಸ್ಥಿತಿ ಇತ್ತಾ ಎಂಬ ವಿಚಾರವಾಗಿ ಮಾತನಾಡಿದ ಅವರು, ‘‘ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ವಿರುದ್ಧ ಯೂಟ್ಯೂಬರ್ ಒಬ್ಬ ಅಪಪ್ರಚಾರ ಮಾಡಿದಾಗ ಯಾವುದೇ ಕೇಸ್ ದಾಖಲಾಗಲಿಲ್ಲ. ಭಗವದ್ಗೀತೆ, ರಾಮನ ಬಗ್ಗೆ ಮತ್ತು ಸನಾತನ ಧರ್ಮದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವವರ ಮೇಲೆ, ಹಿಂದೂ ಎಂದರೆ ಹಿಂಸೆ ಎಂದು ಲೋಕಸಭೆ ವಿಪಕ್ಷ ನಾಯಕರು ಹೇಳಿದಾಗ ಕೇಸ್ ಹಾಕುವ ಧೈರ್ಯ ಈ ಸರ್ಕಾರಕ್ಕಿದೆಯೇ? ಒಬ್ಬ ಮುಲ್ಲಾ ಬಗ್ಗೆ ಮಾತನಾಡಿದರೆ ತಕ್ಷಣ ಕೇಸ್ ಹಾಕುತ್ತಾರೆ. ತಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನನ್ನನ್ನು ಬಂಧಿಸಲು ಸಂಚು ರೂಪಿಸಿದ್ದಾರೆ. ಆದರೆ, ಬಡವರ, ರೈತರ ಮತ್ತು ಹಿಂದೂಗಳ ಧ್ವನಿಯಾಗಿ ಬಂದಿರುವ ನನ್ನ ಬಾಯನ್ನು ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ’’ ಎಂದು ಸಿಟಿ ರವಿ ಗುಡುಗಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:38 pm, Mon, 27 July 26

Source link

ಪೊಲೀಸರು ನನ್ನನ್ನು ಅಪಹರಿಸಿ ಮಸ್ಸೂರಿಯಲ್ಲಿ ಬಿಟ್ಟರು; ಜಂತರ್ ಮಂತರ್‌ನಲ್ಲಿ ಆಹಾರ ವಿತರಿಸುತ್ತಿದ್ದ ವ್ಯಕ್ತಿ ಆರೋಪ – Kannada News | Junaid distributing food to Jantar Mantar protesters alleges delhi Police picked him and left him at Mussoorie

ನವದೆಹಲಿ, ಜುಲೈ 27: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ (Delhi Protest) ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಉಚಿತವಾಗಿ ಆಹಾರ ವಿತರಿಸುತ್ತಿದ್ದ ಸ್ವಯಂಸೇವಕರೊಬ್ಬರನ್ನು ದೆಹಲಿ ಪೊಲೀಸರು ಕಾನೂನುಬಾಹಿರವಾಗಿ ವಶಕ್ಕೆ ಪಡೆದು, ದೆಹಲಿಯಿಂದ ಸುಮಾರು 300 ಕಿ.ಮೀ. ದೂರದಲ್ಲಿರುವ ಉತ್ತರಾಖಂಡದ ಮಸ್ಸೂರಿಯಲ್ಲಿ ತಂದು ಬಿಟ್ಟಿದ್ದಾರೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಭಟನಾಕಾರರ ತಂಡದವರು ಮಾಹಿತಿ ಕಲೆಹಾಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋ ಕೂಡ ಅಪ್​ಲೋಡ್ ಮಾಡಿದ್ದಾರೆ.

ಜುನೈದ್ ನೀಡಿದ ಮಾಹಿತಿಯ ಪ್ರಕಾರ, ಅವರನ್ನು ಇಡೀ ರಾತ್ರಿ ಕಣ್ಣಿಗೆ ಬಟ್ಟೆ ಕಟ್ಟಿ ಇರಿಸಲಾಗಿತ್ತು. ಮರುದಿನ ಬೆಳಿಗ್ಗೆ ಅಧಿಕಾರಿಯೊಬ್ಬರು, “ಆಹಾರ ವಿತರಣೆಗೆ ಹಣಕಾಸಿನ ನೆರವು (ಫಂಡಿಂಗ್) ಎಲ್ಲಿಂದ ಸಿಗುತ್ತಿದೆ ಮತ್ತು ಇಷ್ಟೊಂದು ಪ್ರಮಾಣದ ಆಹಾರವನ್ನು ಹೇಗೆ ನಿರ್ವಹಿಸುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ. ವಿಚಾರಣೆಯ ವೇಳೆ, ಪ್ರತಿಭಟನಾನಿರತರಿಗೆ ಸಿಗುವ ಆಹಾರ ಮತ್ತು ನೀರು ಬೆಂಬಲಿಗರಿಂದ ಬರುವ ದೇಣಿಗೆ ಮೂಲಕ ಸಿಗುತ್ತಿದೆ ಎಂದು ಜುನೈದ್ ತಿಳಿಸಿದ್ದಾರೆ. ನಂತರ ಪೊಲೀಸರು ಅವರನ್ನು ಮಸ್ಸೂರಿಯಲ್ಲಿ ಬಿಟ್ಟು ಬಂದಿದ್ದು, ಶನಿವಾರ ಜುನೈದ್ ಕ್ಯಾಬ್‌ ಮಾಡಿಕೊಂಡು ದೆಹಲಿಗೆ ಮರಳಿದ್ದಾರೆ.

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ಅಂತ್ಯ: ಜಂತರ್ ಮಂತರ್ ಸ್ವಚ್ಛತೆಗೆ 500ಕ್ಕೂ ಹೆಚ್ಚು ಎನ್‌ಡಿಎಂಸಿ ಸಿಬ್ಬಂದಿ ನಿಯೋಜನೆ

ನಾಯಿ ಕಚ್ಚಿದ್ದರಿಂದ ಜುನೈದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ ಹೋಗುತ್ತಿದ್ದಾಗ ದೆಹಲಿ ಪೊಲೀಸರು ಎಂದು ಹೇಳಿಕೊಂಡ ವ್ಯಕ್ತಿಗಳು ಅವರನ್ನು ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಅವರನ್ನು ನಗರದ ಯಾವುದೇ ಪೊಲೀಸ್ ಠಾಣೆಗೆ ಕರೆದೊಯ್ಯುವ ಬದಲು, ಬೇರೆಡೆ ವಿಚಾರಣೆ ನಡೆಸಿ, ಬಳಿಕ ಅವರನ್ನು ರಾತ್ರೋರಾತ್ರಿ ಉತ್ತರಾಖಂಡದ ಬೆಟ್ಟದ ಪ್ರದೇಶವಾದ ಮಸ್ಸೂರಿಯಲ್ಲಿ ನಿರ್ಜನ ಸ್ಥಳವೊಂದರಲ್ಲಿ ಬಿಟ್ಟು ಪೊಲೀಸರು ಹಿಂತಿರುಗಿದ್ದಾರೆ ಎಂದು ಆರೋಪಿಸಲಾಗಿದೆ.

ತಮ್ಮ ಬಳಿಯಿದ್ದ ಮೊಬೈಲ್ ಫೋನ್ ಮತ್ತು ಹಣವನ್ನು ಪೊಲೀಸರು ಕಸಿದುಕೊಂಡಿದ್ದರಿಂದ ತಮಗೆ ತಕ್ಷಣಕ್ಕೆ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಮತ್ತು ವಾಪಸ್ ಬರಲು ತೊಂದರೆಯಾಯಿತು ಎಂದು ಜುನೈದ್ ದೂರಿದ್ದಾರೆ.

ಪ್ರತಿಭಟನೆ ಹತೋಟಿಗೆ ಹುನ್ನಾರ:

ಪ್ರತಿಭಟನಾಕಾರರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯ ಅಥವಾ ಆಹಾರ-ನೀರು ಸಿಗದಂತೆ ತಡೆದು, ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಇಂತಹ ಹಾದಿ ತಪ್ಪಿಸುವ ಮತ್ತು ಬೆದರಿಸುವ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಪ್ರತಿಭಟನಾ ಸಂಘಟಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನೀಟ್ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಪೋಸ್ಟರ್ ಪ್ರದರ್ಶನ: ಯುವತಿ ವಿರುದ್ಧ FIR

ಆದರೆ, ದೆಹಲಿ ಪೊಲೀಸರು ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಮತ್ತು ಸ್ವಯಂಸೇವಕರನ್ನು ಬಲವಂತವಾಗಿ ಕರೆದೊಯ್ದು ಮಸ್ಸೂರಿಯಲ್ಲಿ ಬಿಡಲಾಗಿದೆ ಎಂಬುದು ಸಂಪೂರ್ಣ ಆಧಾರರಹಿತ ಎಂದು ಹೇಳಿದ್ದಾರೆ. ಈ ಘಟನೆಯ ಕುರಿತು ವಿದ್ಯಾರ್ಥಿ ಪ್ರತಿಭಟನಾಕಾರರ ಗುಂಪು ಪೊಲೀಸರನ್ನು ಸಂಪರ್ಕಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾನು ಬಾರ್ ಮುಂದೆ ನಿಂತು ಕುಡಿದು ತೂರಾಡೋದನ್ನ ನೋಡಿದ್ದಿರಾ? ಕುಡುಕ ಎಂದ ಕಾಂಗ್ರೆಸ್​​​​​ ವಿರುದ್ಧ ಸಿಟಿ ರವಿ ಕೆಂಡಾಮಂಡಲ – Kannada News | BJP MLC CT Ravi Hits Back at Congress For KPCC Called Drunker

ರಾಯಚೂರು, (ಜುಲೈ 27): ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ (CT Ravi) ಅವರನ್ನು ಕುಡುಕ ಎನ್ನುವ ರೀತಿ ಕೆಪಿಸಿಸಿ ಅಧಿಕೃತ ಖಾತೆಯಿಂದ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಸಿಟಿ ರವಿ ಅವರು ಕೆಂಡಾಮಂಡಲರಾಗಿದ್ದಾರೆ. ಈ ಬಗ್ಗೆ ರಾಯಚೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಟಿ ರವಿ, ಆ ಪಕ್ಷದ ಅಧಿಕೃತ ಸೋಶಿಯಲ್ ಮಿಡಿಯಾದಲ್ಲಿ ಕುಡುಕ ಅಂತ ಹಾಕ್ತಾರೆ ಅಂದ್ರೆ, ಆ ಪಕ್ಷ ಚರಂಡಿ ನೀರಿಗಿಂತ ಕಡೆಯಾಗಿದೆ ಅನ್ನೋದಕ್ಕೆ ಸಾಕ್ಷಿ. ನಾನು ಹೇಗೆ ಅಂತ ಎಲ್ಲರಿಗೂ ಗೊತ್ತು. ನಾನು ಕಾಫೀ ಟೀ ಕುಡಿಯೋದಕ್ಕೂ ಹಿಂದೆ ಮುಂದೆ ನೋಡ್ತಿನಿ. ಆದ್ರೆ ನಾನು ಕುಡುಕ ಅಂತ ತೋರಿಸ್ತಾರೆ. ಅವರಿಗೆ ನಾಚಿಕೆ ಆಗ್ಬೇಕು. ನಾನು ಬಾರ್ ಮುಂದೆ ನಿಂತು ಕುಡಿದು ತೂರಾಡೋದನ್ನ ನೋಡಿದ್ದಿರಾ? ಒಬ್ಬ ವ್ಯಕ್ತಿಯನ್ನ ವೈಚಾರಿಕವಾಗಿ ಎದುರಿಸೋದಕ್ಕೆ ಆಗಲ್ವೋ ಆಗ ಅಪಪ್ರಚಾರ, ಅಪನಂಬಿಕೆ ಹುಟ್ಟುಹಾಕೋದನ್ನ ಮಾಡುತ್ತಾರೆ. ಇದಕ್ಕೆ ಅವರ ಅದೋಗತಿಯೇ ಸಾಕ್ಷಿ ಎಂದು ಕಿಡಿಕಾರಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗೂಗಲ್ ಪೇನಿಂದ ಲಕ್ಷ ಲಕ್ಷ ಸಾಲ ಪಡೆಯಬಹುದು, ಹೀಗೆ ಅಪ್ಲೈ ಮಾಡಿ – Kannada News | Google Pay: How to get a loan on Google Pay

ಇತ್ತೀಚೆಗಿನ ದಿನಗಳಲ್ಲಿ ಗೂಗಲ್ ಪೇ, ಫೋನ್ ಪೇ ಮೂಲಕ ಆನ್ಲೈನ್ ಟ್ರಾನ್ಸಾಕ್ಷನ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಈ ಗೂಗಲ್ ಪೇ (Google Pay) ಮೂಲಕ ಹಣಕಾಸಿನ ವಹಿವಾಟಿನ ಜತೆಗೆ ಕರೆಂಟ್ ಬಿಲ್, ಗ್ಯಾಸ್ ಬಿಲ್, ಮೊಬೈಲ್ ಹಾಗೂ ಡಿಟಿಎಚ್ ರೀಚಾರ್ಜ್‌ಗಳನ್ನು ಕುಳಿತಲ್ಲಿಂದಲೇ ಮಾಡುತ್ತಿದ್ದಾರೆ. ಅದರ ಜತೆಗೆ ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲ (Personal loan) ಪಡೆಯಬಹುದು ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ. ಈ ಅಪ್ಲಿಕೇಶನ್ ನಲ್ಲಿ 30,000 ರೂ. 12,00,000 ರೂವರೆಗೆ ಸಾಲ ಸೌಲಭ್ಯ ಪಡೆಯಬಹುದು. ಆದರೆ ಈ ಅರ್ಹತೆ ಇದ್ದವರಿಗೆ ಮಾತ್ರ ಸಾಲ ದೊರೆಯುತ್ತದೆ. ಈ ಕುರಿತಾದ ಕಂಪ್ಲೀಟ್ ಮಾಹಿತಿ.

ಗೂಗಲ್ ಪೇನಲ್ಲಿ ಲೋನ್ ಪಡೆಯುವುದು ಹೇಗೆ?

ಹಂತ 1: ಮೊಬೈಲ್‌ನಲ್ಲಿ ಗೂಗಲ್ ಪೇ ಆ್ಯಪ್ ತೆರೆಯಿರಿ.

ಹಂತ 2: ಹಣ ಅಥವಾ ಬಿಸಿನೆಸ್ ವಿಭಾಗದಲ್ಲಿ ಲೋನ್ ಅಥವಾ ಪರ್ಸನಲ್ ಲೋನ್ ಮೇಲೆ ಟ್ಯಾಪ್ ಮಾಡಿ.

ಹಂತ 3: ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ, ಪಿನ್ ಕೋಡ್ ಮತ್ತು ಉದ್ಯೋಗದ ವಿವರಗಳನ್ನು ನಮೂದಿಸಿ.

ಹಂತ 4: ನಿಮ್ಮ ಅರ್ಹತೆಗೆ ತಕ್ಕಂತೆ ಲಭ್ಯವಿರುವ ಸಾಲದ ಮೊತ್ತ ಮತ್ತು ಇಎಂಐ ಯೋಜನೆಯನ್ನು ಆಯ್ಕೆಮಾಡಿ.

ಹಂತ 5: ನಿಮ್ಮ ವೈಯುಕ್ತಿಕ ವಿವರಗಳನ್ನು ಕೆವೈಸಿ ಮಾಡಿ ಹಾಗೂ ಸಾಲದ ಒಪ್ಪಂದಕ್ಕೆ ಸಹಿ ಹಾಕಿ.

ಹಂತ 6: ಇಎಂಐ ಪಾವತಿಗಾಗಿ e-Mandate (ಇ- ಮ್ಯಾಂಡೇಟ್) ಸೆಟ್ ಮಾಡಿ.

ಹಂತ 7: ಅನುಮೋದನೆಗೊಂಡ ಬಳಿಕ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ.

ಇದನ್ನೂ ಓದಿ: ಸಾಲವೆಂದರೆ ಮಾರುದೂರ ಹೋಗುತ್ತೀರಾ? ಕೆಟ್ಟಸಾಲ, ಒಳ್ಳೆಯ ಸಾಲದ ವ್ಯತ್ಯಾಸ ತಿಳಿದಿರಿ… ಇಲ್ಲಿವೆ ಕೆಲ ಟ್ರಿಕ್ಸ್

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಗೂಗಲ್ ಪೇನಲ್ಲಿ ಸಾಲ ಸೌಲಭ್ಯ ಹೇಗೆ ಸಿಗುತ್ತದೆ?

ಉತ್ತರ: ಗೂಗಲ್ ಪೇನಲ್ಲಿ ನೇರವಾಗಿ ಸಾಲ ಸೌಲಭ್ಯ ಸಿಗುವುದಿಲ್ಲ. ಡಿಎಂಐ ಫೈನಾನ್ಸ್, ಕ್ಯಾಶ್ ಅಥವಾ ಮನಿ ವ್ಯೂ ಮುಂತಾದ ಅಧಿಕೃತ ಬ್ಯಾಂಕ್ ಮತ್ತು ಹಣಕಾಸು ಪಾಲುದಾರರೊಂದಿಗೆ ನಿಮ್ಮನ್ನು ಕೈ ಜೋಡಿಸುತ್ತದೆ.

ಪ್ರಶ್ನೆ: ಗೂಗಲ್ ಪೇನಲ್ಲಿ ಎಷ್ಟು ಲಕ್ಷ ಸಾಲ ಸೌಲಭ್ಯ ದೊರೆಯುತ್ತದೆ?

ಉತ್ತರ: ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 30,000 ರೂ. 12,00,000 ರೂವರೆಗೆ ಸಾಲ ಸೌಲಭ್ಯ ಪಡೆಯಬಹುದು.

ಪ್ರಶ್ನೆ: ಗೂಗಲ್ ಪೇನಿಂದ ಸಾಲ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಗೂಗಲ್ ಪೇನಿಂದ ಸಾಲ ಪಡೆಯಲು ಪ್ಯಾನ್ ಕಾರ್ಡ್ , ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್ ವಿವರಗಳು ಬೇಕು

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:21 pm, Mon, 27 July 26

Source link

ಅಶ್ಲೀಲವಾಗಿ ಟ್ರೋಲ್ ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಧ್ರುವಂತ್ – Kannada News | BBK 12 fame Dhruvanth Charith Balappa files Police Complaint against Troll Pages for Vulgar posts

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋ ಖ್ಯಾತಿಯ ಕಿರುತೆರೆ ನಟ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ ಅವರು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ. ತಮ್ಮ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟಿದಾಗಿ ಟ್ರೋಲ್ ಮಾಡಿದವರ ವಿರುದ್ಧ ಅವರು ದೂರು ನೀಡಿದ್ದಾರೆ. ಇತ್ತೀಚೆಗೆ ಧ್ರುವಂತ್ (Dhruvanth) ಅವರು ನೀಡಿದ ಒಂದು ಸಂದರ್ಶನದ ತುಣುಕುಗಳನ್ನು ಇಟ್ಟುಕೊಂಡು ಅಶ್ಲೀಲವಾಗಿ ಟ್ರೋಲ್ ಮಾಡಲಾಗುತ್ತಿದೆ. ಅದರಿಂದ ಅಸಮಾಧಾನಗೊಂಡಿರುವ ಅವರು ಕೆಲವು ಟ್ರೋಲ್ (Troll) ಪೇಜ್​ಗಳ ವಿರುದ್ಧ ದೂರು ನೀಡಿದ್ದು, ದೂರಿನ ಪ್ರತಿ ಲಭ್ಯವಾಗಿದೆ.

‘ನಾನು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ನಟನಾಗಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋನ ಫೈನಲಿಸ್ಟ್ ಆಗಿ ಸಾರ್ವಜನಿಕ ವ್ಯಕ್ತಿಯಾಗಿ ಸಮಾಜದಲ್ಲಿ ಗೌರವ ಮತ್ತು ವಿಶ್ವಾಸವನ್ನು ಸಂಪಾದಿಸಿದ್ದೇನೆ. ಸಾಮಾಜಿಕ ಜಾಲತಾಣಗಳಾದ ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್ ಮೂಲಕ ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ನಿರಂತರವಾಗಿ ಅವಾಚ್ಯ, ಅಶ್ಲೀಲ, ಮಾನಹಾನಿಕಾರಕ ಹಾಗೂ ಬೆದರಿಕೆ ಹಾಕುವ ರೀತಿಯ ಪೋಸ್ಟ್​ಗಳು, ಕಾಮೆಂಟ್​ಗಳು ಮತ್ತು ಸಂದೇಶಗಳನ್ನು ಪ್ರಕಟಿಸುತ್ತಿದ್ದಾರೆ’ ಎಂದು ಧ್ರುವಂತ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಗಂಭೀರ ಪರಿಣಾಮ ಬೀರಿದೆ’

‘ಈ ಕೃತ್ಯಗಳು ನನ್ನ ಮಾನಸಿಕ ನೆಮ್ಮದಿಗೆ ಧಕ್ಕೆ ಉಂಟುಮಾಡುವುದಲ್ಲದೇ ನನ್ನ ವೃತ್ತಿಜೀವನ, ಸಾರ್ವಜನಿಕ ಚಿತ್ರಣ, ಖ್ಯಾತಿ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳ ಮೇಲೂ ಗಂಭೀರ ಪರಿಣಾಮ ಬೀರಿದೆ. ನಿರ್ಮಾಪಕರು, ನಿರ್ದೇಶಕರು, ಬ್ರಾಂಡ್​ಗಳು ಮತ್ತು ಇತರ ವೃತ್ತಿಪರರು ನನ್ನ ಬಗ್ಗೆ ತಪ್ಪು ಅಭಿಪ್ರಾಯ ಬೆಳೆಸುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿವೆ’ ಎಂದು ಧ್ರುವಂತ್ ದೂರು ನೀಡಿದ್ದಾರೆ.

‘ವೃತ್ತಿಪರ ಬದುಕಿಗೆ ಧಕ್ಕೆ ಉಂಟುಮಾಡಿದೆ’

‘ನನ್ನ ಗೌರವವನ್ನು ಉದ್ದೇಶಪೂರ್ವಕವಾಗಿ ಹಾಳುಮಾಡಲು ಹಾಗೂ ಸಾರ್ವಜನಿಕರಲ್ಲಿ ನನ್ನ ಬಗ್ಗೆ ದ್ವೇಷ ಹಾಗೂ ಅವಿಶ್ವಾಸ ಮೂಡಿಸುವ ಈ ಕೃತ್ಯಗಳು ಕಾಣಿಸುತ್ತವೆ. ಅವರು ನಿರಂತರವಾಗಿ ಅವಾಚ್ಯ ಪದಗಳಿಂದ ನಿಂದನೆ ಮಾಡುವುದು, ಸುಳ್ಳು ಮತ್ತು ಮಾನಹಾನಿಕಾರಕ ಆರೋಪಗಳನ್ನು ಹರಡುವುದು, ಬೆದರಿಕೆ ಹಾಕುವುದು, ನನ್ನ ಸಾಮಾಜಿಕ ಹಾಗೂ ವೃತ್ತಿಪರ ಬದುಕಿಗೆ ಧಕ್ಕೆ ಉಂಟುಮಾಡುವುದು ಹಾಗೂ ಸಾರ್ವಜನಿಕವಾಗಿ ಅವಮಾನಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ ಧ್ರುವಂತ್.

ಇದನ್ನೂ ಓದಿ: ‘ನಾನು ಕಪ್ ಗೆಲ್ಲದಿರಬಹುದು, ಶೋ ಗೆದ್ದಿದ್ದೇನೆ’; ಸೀಸನ್ ಚಪ್ಪಾಳೆ ಬದಲಿಸಿದ ಬಗ್ಗೆ ಧ್ರುವಂತ್ ಮಾತು

‘ಸೂಕ್ತ ಕ್ರಮ ಜರುಗಿಸಿ’

‘ಈ ಕೃತ್ಯಗಳಿಂದ ನನಗೆ ತೀವ್ರ ಮಾನಸಿಕ ಯಾತನೆ, ಸಾಮಾಜಿಕ ಅವಮಾನ ಉಂಟಾಗಿದೆ. ಆದ್ದರಿಂದ ಈ ರೀತಿ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನನ್ನ ತಂಟೆಗೆ ಬಾರದಂತೆ ಬಂದೋಬಸ್ತ್ ಮಾಡಿಕೊಡಬೇಕು’ ಎಂದು ಧ್ರುವಂತ್ ಅವರು ದೂರು ನೀಡಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಹಾಗೂ ಬಸವೇಶ್ವರ ನಗರ ಸೈಬರ್ ಸೆಲ್​ನಲ್ಲಿ ಧ್ರುವಂತ್ ಅವರು ದೂರು ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ: ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಕಾರ್ಯಕರ್ತರ ಗಲಾಟೆ! – Kannada News | High Drama in Belagavi Congress Office: Factional Feud & Clash During City President Election Meeting

ಬೆಳಗಾವಿ, ಜುಲೈ 27: ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಗರ ಅಧ್ಯಕ್ಷರ ಆಯ್ಕೆ ಸಂಬಂಧ ನಡೆದ ಅಭಿಪ್ರಾಯ ಸಂಗ್ರಹ ಸಭೆ ರಣರಂಗವಾಗಿ ಮಾರ್ಪಟ್ಟಿದೆ. ಎಐಸಿಸಿ ವೀಕ್ಷಕ ಮನೋಜ್ ಚವ್ಹಾಣ್ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದಾಗಲೇ ನಗರ ಅಧ್ಯಕ್ಷ ಸ್ಥಾನಕ್ಕಾಗಿ ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದಾರೆ. ವೀಕ್ಷಕರ ಎದುರಲ್ಲೇ ನಾಯಕರು ಹಾಗೂ ಕಾರ್ಯಕರ್ತರು ತೀವ್ರ ಗದ್ದಲ ಎಬ್ಬಿಸಿದ್ದು, ಮಾಜಿ ಶಾಸಕ ರಮೇಶ್ ಕುಡಚಿ ಆಪ್ತ ಹೇಮಂತ್ ಲಿಂಗಾಡೆ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹೈಡ್ರಾಮಾದಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಮಾರ್ಕೆಟ್ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೀಮಿತ ಓವರ್​ಗಳ ಸರಣಿಗಾಗಿ ಬಾಂಗ್ಲಾ ಪ್ರವಾಸ ಮಾಡಲಿದೆ ಟೀಂ ಇಂಡಿಯಾ – Kannada News | Team India’s Bangladesh Tour Likely in Sept; BCCI BCB mend ties

ಸರಿಸುಮಾರು ಒಂದು ವರ್ಷಗಳ ಬಳಿಕ ಬಿಸಿಸಿಐ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳ (BCCI BCB ) ನಡುವಿನ ಸಂಬಂಧಗಳು ಸುಧಾರಿಸುವ ಸುಳಿವು ಸಿಕ್ಕಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬಿಸಿಸಿಐ, ಬಾಂಗ್ಲಾದೇಶ ಆಟಗಾರರನ್ನು ಐಪಿಎಲ್​​ನಿಂದ ನಿಷೇಧಿಸಿತ್ತು. ಇದರಿಂದಾಗಿ ಬಾಂಗ್ಲಾದೇಶ ತಂಡ ಭಾರತಕ್ಕೆ ಬರಲು ನಿರಾಕರಿಸಿತ್ತು. ಹೀಗಾಗಿ ಉಭಯ ದೇಶಗಳ ತಂಡಗಳ ನಡುವೆ ಅಂದಿನಿಂದ ಯಾವುದೇ ಸರಣಿಗಳು ನಡೆದಿರಲಿಲ್ಲ. ಇದರ ಪರಿಣಾಮವಾಗಿ ಒಂದು ವರ್ಷದ ಹಿಂದೆಯೇ ಉಭಯ ತಂಡಗಳ ನಡುವೆ ನಡೆಯಬೇಕಿದ್ದ ಸರಣಿ ರದ್ದಾಗಿತ್ತು. ಇದೀಗ ಉಭಯ ಮಂಡಳಿಗಳ ನಡುವಿನ ಸಂಬಂಧದಲ್ಲಿ ಸುಧಾರಣೆ ಕಂಡುಬಂದಿದ್ದು, ಕೆಲವೇ ದಿನಗಳಲ್ಲಿ ಸೀಮಿತ ಓವರ್​​ಗಳ ಸರಣಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಸೆಪ್ಟೆಂಬರ್​ನಲ್ಲಿ ಸರಣಿ

ಟೈಮ್ಸ್ ಇಂಡಿಯಾ ವರದಿಯ ಪ್ರಕಾರ, ಸೆಪ್ಟೆಂಬರ್ ಮೊದಲ ವಾರದಲ್ಲಿ ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು ನಿಗದಿಪಡಿಸುವ ಬಗ್ಗೆ ಎರಡೂ ಮಂಡಳಿಗಳು ಕೆಲಸ ಮಾಡುತ್ತಿವೆ. ಅಲ್ಲದೆ ಬಾಂಗ್ಲಾದೇಶದಲ್ಲಿ ಸರಣಿ ಆಯೋಜಿಸುವ ಸಲುವಾಗಿ ದೆಹಲಿಯಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಮುಂದೂಡಲು ಬಿಸಿಸಿಐ ಚಿಂತಿಸುತ್ತಿದೆ ಎಂದು ವರದಿಯಾಗಿದೆ. ಆದಾಗ್ಯೂ ಈ ಸರಣಿಗೆ ಅಂತಿಮ ಅನುಮೋದನೆ ಭಾರತ ಸರ್ಕಾರದಿಂದ ಬರಬೇಕಾಗಿದ್ದು, ಸರ್ಕಾರ ಹಸಿರು ನಿಶಾನೆ ನೀಡಿದರೆ ಮಾತ್ರ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಮಾಡಲಿದೆ.

ಬಿಸಿಸಿಐ ಜೊತೆಗೆ ಸಂಬಂಧ ಸುಧಾರಣೆ

ಕಳೆದ ವರ್ಷ, ಭಾರತವು ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ಬಾಂಗ್ಲಾದೇಶ ಪ್ರವಾಸ ಮಾಡಲು ನಿರಾಕರಿಸಿತು. ತರುವಾಯ, ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಕೈಬಿಟ್ಟ ನಂತರ ಜನವರಿಯಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹಿಂದೆ ಸರಿದಿತ್ತು. ಇದೀಗ ಬಿಸಿಸಿಐ ಜೊತೆಗೆ ಸಂಬಂಧ ಸುಧಾರಿಸಿಕೊಳ್ಳಲು ಮುಂದಾಗಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಬಿಸಿಸಿಐಗೆ ಅನುಕೂಲಕರವಾಗುವಂತೆ ಸೆಪ್ಟೆಂಬರ್ 1 ರಿಂದ ತನ್ನ ತಂಡದ ಎಲ್ಲಾ ಸ್ಲಾಟ್​ಗಳನ್ನು ಖಾಲಿ ಇರಿಸಿದೆ. ಅಲ್ಲದೆ ಎಲ್ಲಾ ಪಂದ್ಯಗಳನ್ನು ಒಂದೇ ಸ್ಥಳದಲ್ಲಿ ನಡೆಸಲು ಸಹ ಬಿಸಿಬಿ ಸಿದ್ಧವಿದೆ ಎಂದು ಟೈಮ್ಸ್ ಇಂಡಿಯಾ ವರದಿ ಮಾಡಿದೆ.

2 ಸ್ಥಳಗಳಲ್ಲಿ ಸರಣಿ

ವರದಿ ಪ್ರಕಾರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಒಂದು ಸ್ಥಳದಲ್ಲಿ ಮೂರು ಪಂದ್ಯಗಳ ಟಿ20 ಸರಣಿ ಮತ್ತು ಇನ್ನೊಂದು ಸ್ಥಳದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ನಡೆಸಲು ಮುಂದಾಗಿದೆ. ಢಾಕಾ ಮತ್ತು ಚಟ್ಟೋಗ್ರಾಮ್​ ಮೈದಾನಗಳನ್ನು ಈ ಸರಣಿಗಳಿಗೆ ನಿಗದಿಪಡಿಸಿಲಾಗಿದೆ. ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಎರಡೂ ಮಂಡಳಿಗಳು ಈ ಬಗ್ಗೆ ಚರ್ಚಿಸಿವೆ ಎಂದು ಬಿಸಿಸಿಐ ಮೂಲವೊಂದು TOI ಗೆ ತಿಳಿಸಿದೆ.

‘ಆಗಲೇ ಈ ನಿರ್ಧಾರ ಮಾಡಬೇಕಿತ್ತು’; ಬಿಸಿಸಿಐ ವಿರುದ್ಧ ಭಾರತದ ಮಾಜಿ ಆಟಗಾರ ಗರಂ

ಭಾರತ-ಅಫ್ಘನ್ ಸರಣಿ ಮುಂದೂಡಿಕೆ

ಏತನ್ಮಧ್ಯೆ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಸೆಪ್ಟೆಂಬರ್ 1 ರಿಂದ 13 ರವರೆಗೆ ಭಾರತದ ವಿರುದ್ಧ ಸರಣಿ ಆಯೋಜಿಸಲು ಉದ್ದೇಶಿಸಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಪ್ರವಾಸ ಅಂತಿಮವಾದರೆ, ಭಾರತ ಹಾಗೂ ಅಫ್ಘಾನಿಸ್ತಾನ ನಡುವೆ ದೆಹಲಿಯಲ್ಲಿ ನಡೆಯಬೇಕಿದ್ದ ಟಿ20 ಸರಣಿಯನ್ನು ಮುಂದೂಡಲಾಗುತ್ತದೆ. ಅಲ್ಲದೆ ಏಷ್ಯನ್ ಕ್ರೀಡಾಕೂಟವು ಸೆಪ್ಟೆಂಬರ್ 24 ರಂದು ಪ್ರಾರಂಭವಾಗಲಿದ್ದು, ವೆಸ್ಟ್ ಇಂಡೀಸ್ ತಂಡವು ಸೆಪ್ಟೆಂಬರ್ 27 ರಂದು ಭಾರತ ಪ್ರವಾಸ ಕೈಗೊಳ್ಳಲಿದೆ. ಆದ್ದರಿಂದ, ಈ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ಸರಣಿ ಯಾವಾಗ ನಡೆಯುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:00 pm, Mon, 27 July 26

Source link

ಪ್ರವಾಸಿಗರ ಸ್ವರ್ಗ ಮಡಿಕೇರಿಯೀಗ ರಸ್ತೆ ಗುಂಡಿಗಳಿಂದ ತುಂಬಿರೋ ನರಕ!: ಆಡಳಿತದ ನಿರ್ಲಕ್ಷ್ಯಕ್ಕೆ ವಾಹನ ಸವಾರರ ಹಿಡಿಶಾಪ – Kannada News | From Paradise to Pothole Hell: Dilapidated Roads in Tourist Hub Madikeri Trigger Public Outrage

ಮಡಿಕೇರಿ, ಜುಲೈ 27: ಮಂಜಿನ ನಗರಿ, ಪ್ರವಾಸಿಗರ ಸ್ವರ್ಗ ಎಂದೆಲ್ಲ ಕರೆಸಿಕೊಳ್ಳುವ ಮಡಿಕೇರಿ ನಗರದ ರಸ್ತೆಗಳು ಶೋಚನೀಯ ಸ್ಥಿತಿಗೆ ತಲುಪಿದ್ದು, ನಗರಕ್ಕೆ ಭೇಟಿ ನೀಡುವವರು ಮತ್ತು ಸ್ಥಳೀಯ ನಿವಾಸಿಗಳಿಗೆ ನಿತ್ಯ ನರಕ ದರ್ಶನ ಮಾಡಿಸಯತ್ತಿವೆ. ರೋಡ್​​ ಸಂಪೂರ್ಣ ಹದಗೆಟ್ಟು ನೂರಾರು ಗುಂಡಿಗಳು ಬಿದ್ದಿರುವ ಕಾರಣ ಸಂಚಾರಕ್ಕೆ ವಾಹನ ಸವಾರರು ಸರ್ಕಸ್​​ ನಡೆಸಬೇಕಿದೆ. ಜನರಲ್ ತಿಮ್ಮಯ್ಯ ವೃತ್ತದಿಂದ ರಾಜಾಸೀಟ್ ತೆರಳುವ ರಸ್ತೆ, ಹೊಸ ಖಾಸಗಿ ಬಸ್ ನಿಲ್ದಾಣ ರಸ್ತೆ, ಅಬ್ಬಿಫಾಲ್ಸ್ ರಸ್ತೆ, ಸಂಪಿಗೆ ಕಟ್ಟೆ ರಸ್ತೆ ಸೇರಿ ಪ್ರಮುಖ ಮಾರ್ಗಗಳಲ್ಲಿಯೇ ಗುಂಡಿ ಬಿದ್ದಿದ್ದು, ಮಳೆ ವೇಳೆ ಇವುಗಳಲ್ಲಿ ನೀರು ನಿಲ್ಲುತ್ತಿವೆ. ಹೀಗಾಗಿ ಗುಂಡಿ ಯಾವುದು ಎಂದು ಗೊತ್ತಾಗದೆ ಪ್ರಾಣ ಕೈಯಲ್ಲಿ ಹಿಡಿದು ಜನ ಸಂಚರಿಸಬೇಕಿದೆ.

ರಸ್ತೆ ದುರಸ್ತಿ ಮಾಡದೆ ನಿರ್ಲಕ್ಷ್ಯ

ಮಳೆಗಾಲ ಆರಂಭಕ್ಕೂ ಮೊದಲು ಈ ರಸ್ತೆಗಳಿಗೆ ಕನಿಷ್ಠ ತೇಪೆ ಹಾಕುವ ಕೆಲಸ ಮಾಡಬೇಕಿತ್ತು. ಆದ್ರೆ ಜೂನ್ ತಿಂಗಳಾಂತ್ಯದವರೆಗೆ ಈ ಬಾರಿ ಬಿಸಿಲಿದ್ದರೂ ಮಡಿಕೇರಿ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಎಚ್ಚೆತ್ತುಕೊಳ್ಳಲಿಲ್ಲ. ಹಾಗಾಗಿ ಇದೀಗ ರಸ್ತೆಗಳೆಲ್ಲ ದುಸ್ಥಿತಿ ತಲುಪಿವೆ. ಪರಿಣಾಮ ಈ ರಸ್ತೆಯಲ್ಲಿ ನಿತ್ಯ ಓಡಾಡುವ ಸಾವಿರಾರು ಸ್ಥಳೀಯರು, ಪ್ರವಾಸಿಗರು ನಗರಸಭೆಗೆ ಶಾಪ ಹಾಕುತ್ತಲೇ ತೆರಳುತ್ತಿದ್ದಾರೆ. ಗುಂಡಿ ತಪ್ಪಿಸಲು ಹೋಗಿ ಅಪಘಾತಗಳು ನಗರದಲ್ಲಿ ಮಾಮೂಲು ಎಂಬಂತಾಗಿದ್ದು, ಮಡಿಕೇರಿಯ ಸೌಂದರ್ಯ ಸವಿಯಲು ಆಗಮಿಸುವ ಪ್ರವಾಸಿಗರು ಕೂಡ ಇಲ್ಲಿನ ರಸ್ತೆ ದುಸ್ಥಿತಿ ಕಂಡು ಕಂಗಾಲಾಗಿದ್ದಾರೆ.

ಇದನ್ನೂ ಓದಿ: “ಅಮ್ಮ ಏಳಮ್ಮ…” ತಾಯಿಯ ಶವದ ಬಳಿ ಮರಿ ಆನೆಯ ಮೂಕರೋಧನೆ; ಕಣ್ಣೀರಿಟ್ಟ ಜನತೆ

ರಸ್ತೆಗಳನ್ನ ಉನ್ನತ ದರ್ಜೆಗೇರಿಸುವಂತೆ ಮನವಿ

ಜೋರಾಗಿ ಮಳೆ ಸುರಿಯುವ ವೇಳೆ ರಸ್ತೆ ತುಂಬ ನೀರು ತುಂಬಿಕೊಂಡು ಬಹಳ ಸಮಸ್ಯೆ ಆಗುತ್ತಿದೆ. ಹೀಗಾಗಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಹೆಚ್ಚಿನ ಅನುದಾನ ತಂದು ನಗರದ ರಸ್ತೆಗಳನ್ನ ಉನ್ನತ ದರ್ಜೆಗೇರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಆ ಮೂಲಕ ನಗರ ಕುಖ್ಯಾತಿಗೆ ಪಾತ್ರವಾಗುತ್ತಿರೋದನ್ನು ತಪ್ಪಿಸಲು ಸಹಕರಿಸುವಂತೆ ಕೇಳಿಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:53 pm, Mon, 27 July 26

Source link

Exit mobile version