‘ಜನ ನಾಯಗನ್’ ಲೀಕ್​​ಗೆ ಅವರಿಬ್ಬರೇ ಕಾರಣ: ವಿಜಯ್ ಫ್ಯಾನ್ಸ್ ಆಕ್ರೋಶ

‘ಜನ ನಾಯಗನ್’ ಲೀಕ್​​ಗೆ ಅವರಿಬ್ಬರೇ ಕಾರಣ: ವಿಜಯ್ ಫ್ಯಾನ್ಸ್ ಆಕ್ರೋಶ

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡದೆ ಸಿನಿಮಾ ಬಿಡುಗಡೆ ಆಗುವುದನ್ನೇ ತಡೆದಿದೆ. ಸಿನಿಮಾ ಬಿಡುಗಡೆ ಮಾಡಲು ಸಿನಿಮಾದ ನಿರ್ಮಾಪಕರು ಮಾಡಿರುವ ಪ್ರಯತ್ನಗಳು ಫಲ ನೀಡಿಲ್ಲ. ವಿಜಯ್ ಅವರ ರಾಜಕೀಯ ಎದುರಾಳಿಗಳು ಕುತಂತ್ರದಿಂದ ರಾಜಕೀಯ ಪ್ರಭಾವ ಬಳಸಿ ಸಿನಿಮಾ ಬಿಡುಗಡೆಯನ್ನು ತಡೆದಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ಇದೀಗ ಹಠಾತ್ತನೆ ‘ಜನ ನಾಯಗನ್’ ಸಿನಿಮಾ ಪೂರ್ತಿಯಾಗಿ ಎಚ್​​ಡಿ ಫಾರ್ಮ್ಯಾಟ್​​ನಲ್ಲಿ ಲೀಕ್ ಆಗಿದೆ. ಇದು ಚಿತ್ರತಂಡಕ್ಕೆ ಆಘಾತ ತಂದಿದೆ. ತಮಿಳು ಮಾತ್ರವೇ ಅಲ್ಲದೆ ಹಲವು ರಾಜ್ಯಗಳ ಸಿನಿಮಾ ಪ್ರಮುಖರು ಇದನ್ನು ಖಂಡಿಸಿದ್ದಾರೆ. ಈ ಸಿನಿಮಾ ಲೀಕ್​​ಗೆ ಇಬ್ಬರು ರಾಜಕೀಯ ಪ್ರಮುಖರು ಕಾರಣವೆಂದು ವಿಜಯ್ ಅಭಿಮಾನಿಗಳು ಮತ್ತು ವಿಜಯ್ ಅವರ ಟಿವಿಕೆ ರಾಜಕೀಯ ಪಕ್ಷದ ಮುಖಂಡರು ಆರೋಪಿಸುತ್ತಿದ್ದಾರೆ.

‘ಜನ ನಾಯಗನ್’ ಸಿನಿಮಾದ ಬಿಡುಗಡೆ ತಡೆ ಮತ್ತು ಈಗ ಸಿನಿಮಾದ ಲೀಕ್ ಹಿಂದೆ ಇಬ್ಬರು ರಾಜಕೀಯ ಪ್ರಮುಖರಿದ್ದಾರೆ ಎಂದು ಟಿವಿಕೆ ಹಾಗೂ ವಿಜಯ್ ಅಭಿಮಾನಿಗಳು ಆರೋಪಿಸಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ, ತಮಿಳುನಾಡು ಬಿಜೆಪಿ ಮುಖಂಡ ಎಲ್ ಮುರುಗನ್ ಮತ್ತು ತಮಿಳುನಾಡಿನ ಆಡಳಿತರೂಢ ಪಕ್ಷವಾದ ಡಿಎಂಕೆಯ ಯುವ ಮುಖಂಡ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಅವರುಗಳೇ ‘ಜನ ನಾಯಗನ್’ ಸಿನಿಮಾ ಲೀಕ್​​ನ ಹಿಂದಿದ್ದಾರೆ ಎಂಬ ಆರೋಪ ವಿಜಯ್ ಅಭಿಮಾನಿಗಳಿಂದ ಕೇಳಿ ಬಂದಿದೆ.

‘ಮೊದಲಿಗೆ ‘ಜನ ನಾಯಗನ್’ ಸಿನಿಮಾ ಜನರಿಗೆ ತಲುಪದಂತೆ ತಡೆಯಲಾಯ್ತು. ಈಗ ವಿಜಯ್ ಅವರ ಸಿನಿಮಾ ಆರ್ಥಿಕವಾಗಿ ನಷ್ಟ ಹೊಂದುವಂತೆ ಮಾಡಲಾಗಿದೆ. ಕೇಂದ್ರ ಸಚಿವ ಎಲ್ ಮುರುಗನ್ ಮತ್ತು ಉದಯನಿಧಿ ಸ್ಟಾಲಿನ್ ಅವರು ಒಟ್ಟಾಗಿ ವಿಜಯ್ ಅವರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ. ‘ಜನ ನಾಯಗನ್’ ಲೀಕ್ ಹಿಂದೆ ಇವರೇ ಇದ್ದಾರೆ ಎಂದು ಟಿವಿಕೆಯ ಆದವ್ ಅರ್ಜುನ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಅಭಿಮಾನಿಗಳು ಸಹ ಇದೇ ಆರೋಪಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ:‘ಜನ ನಾಯಗನ್’ ಲೀಕ್ ಬಗ್ಗೆ ಪ್ರಶ್ನೆ ಮಾಡಿದರೆ ಉತ್ತರಿಸದೆ ಹೋದ ದಳಪತಿ ವಿಜಯ್

ಆರೋಪಗಳ ಬಗ್ಗೆ ಮಾತನಾಡಿರುವ ತಮಿಳುನಾಡು ಬಿಜೆಪಿ ಮುಖಂಡ ಅಣ್ಣಾಮಲೈ, ‘ಜನ ನಾಯಗನ್’ ಸಿನಿಮಾ ಲೀಕ್ ಆಗಿರುವುದು ಅನ್ಯಾಯ, ಕಾನೂನಿಗೆ ಬಾಹಿರ ಆದರೆ ಆ ಕೃತ್ಯವನ್ನು ಸಚಿವ ಎಲ್ ಮುರುಗನ್ ಅವರಿಗೆ ಲಿಂಕ್ ಮಾಡಲು ಯತ್ನಿಸುತ್ತಿರುವುದು ರಾಜಕೀಯ ದುರುದ್ದೇಶ’ ಎಂದಿದ್ದಾರೆ. ‘ಇದರಲ್ಲಿ ಬಿಜೆಪಿಯನ್ನು ಏಕೆ ಎಳೆಯಬೇಕು? ಚಿತ್ರ ಬಿಡುಗಡೆಯಾಗುವುದರಲ್ಲಿ ಅಥವಾ ಸೋರಿಕೆಯಾಗುವುದರಲ್ಲಿ ಬಿಜೆಪಿ ಪಕ್ಷದ ಪಾತ್ರ ಇಲ್ಲ? ಸೋರಿಕೆಯ ಬಗ್ಗೆ ತನಿಖೆ ನಡೆಸಿ, ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದು ಪೊಲೀಸರ ಜವಾಬ್ದಾರಿ. ಸೂಕ್ತ ತನಿಖೆ ನಡೆಸಿ ಈ ಕೃತ್ಯದ ಹಿಂದೆ ಯಾರಿದ್ದಾರೋ ಅವರನ್ನು ಬೆಳಕಿಗೆ ತರಲಿ ಅದು ಬಿಟ್ಟು ಸುಖಾ ಸುಮ್ಮನೆ ಬಿಜೆಪಿಯನ್ನು ಎಳೆದು ತಂದ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡುವುದು ಬೇಡ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟೋಲ್ ಗೇಟ್ ದಾಟುವಾಗ ಕಾರಿನ ಮೇಲೆ ಬಿದ್ದ ಸಿಮೆಂಟ್ ಟ್ಯಾಂಕರ್; ವಿಡಿಯೋ ಇಲ್ಲಿದೆ

ಹೈದರಾಬಾದ್, ಏಪ್ರಿಲ್ 11: ಎನ್‌ಟಿಆರ್ ಜಿಲ್ಲೆಯ ಕೀಸರ ಟೋಲ್‌ಗೇಟ್ ಬಳಿ ಗಂಭೀರ ಅಪಘಾತ ಸಂಭವಿಸಿದೆ. ಟೋಲ್ ಗೇಟ್ ದಾಟುತ್ತಿದ್ದಾಗ, ಸಿಮೆಂಟ್ ಟ್ಯಾಂಕರ್ ನಿಯಂತ್ರಣ ತಪ್ಪಿ ಪಕ್ಕದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿತು. ಭಾರೀ ಟ್ಯಾಂಕರ್ ಮೇಲೆ ಬಿದ್ದ ಹಿನ್ನೆಲೆಯಲ್ಲಿ ಕಾರು (Car Accident) ನಜ್ಜುಗುಜ್ಜಾಯಿತು. ತಕ್ಷಣ ಎಚ್ಚೆತ್ತ ಟೋಲ್ ಸಿಬ್ಬಂದಿ ಟ್ಯಾಂಕರ್ ಅನ್ನು ತೆಗೆದುಹಾಕಲು ಪ್ರಯತ್ನಿಸಿದರು. ಎನ್‌ಟಿಆರ್ ಜಿಲ್ಲೆಯ ಕೀಸರಾ ಟೋಲ್ ಗೇಟ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಸಮೀಪದಲ್ಲಿ ಚಲಿಸುತ್ತಿದ್ದ ಸಿಮೆಂಟ್ ಟ್ಯಾಂಕರ್ ಟೋಲ್ ಗೇಟ್ ದಾಟುವಾಗ ನಿಯಂತ್ರಣ ತಪ್ಪಿ ಸಮೀಪದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿತು. ಭಾರೀ ಲಾರಿ ಕಾರಿಗೆ ಡಿಕ್ಕಿ ಹೊಡೆದು ಸಂಪೂರ್ಣವಾಗಿ ನಜ್ಜುಗುಜ್ಜಾಯಿತು. ಟೋಲ್ ಗೇಟ್ ಬಳಿಯೇ ಅಪಘಾತ ಸಂಭವಿಸಿದ್ದು, ಟೋಲ್ ಪ್ಲಾಜಾ ಬಳಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ಯಾಂಕರ್ ಲೋಡ್ ಆಗುತ್ತಿದ್ದಂತೆ ಟ್ಯಾಂಕರ್ ಅನ್ನು ತೆಗೆದುಹಾಕುವಲ್ಲಿ ತೊಂದರೆ ಎದುರಿಸುತ್ತಿದೆ. ಕಾರಿನಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PBKS vs SRH: ಅಭಿಷೇಕ್- ಹೆಡ್ ಆರಂಭಿಕ ಸುನಾಮಿಗೆ ಮತ್ತೊಂದು ದಾಖಲೆ ಸೃಷ್ಟಿ

Source link

Chanakya Niti: ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಾರದೆಂದರೆ ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ

ಆಚಾರ್ಯ ಚಾಣಕ್ಯರು (Acharya Chanakya) ನಮ್ಮ ಜೀವನ ಸರಿಯಾದ ದಿಕ್ಕಿನಲ್ಲಿ ಸಾಗಲು ಹಲವು ಮಾರ್ಗದರ್ಶನಗಳನ್ನು ನೀಡಿದ್ದಾರೆ. ಅವರು ಕೇವಲ  ಯಶಸ್ಸಿಗೆ ಮಾತ್ರವಲ್ಲದೆ ಆರ್ಥಿಕ ಬಲಕ್ಕೆ, ಶ್ರೀಮಂತಿಕೆ ಗಳಿಸಲು, ಬಡತನದಿಂದ ಪಾರಾಗಲು ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದರಲ್ಲೂ ಇಂದಿನ ದುಬಾರಿ ದುನಿಯಾದಲ್ಲಿ ನಮಗೆ ಆರ್ಥಿಕ ಸಂಕಷ್ಟಗಳು ಎದುರಾಗುತ್ತಲೇ ಇರುತ್ತವೆ. ಈ ಆರ್ಥಿಕ ಸಂಕಷ್ಟಗಳಿಂದ ಪಾರಾಗುವುದು ಹೇಗೆ, ಆರ್ಥಿಕ ಸಂಕಷ್ಟಗಳು ಬಾರದಂತೆ ನೋಡಿಕೊಳ್ಳಲು ಯಾವ ಅಭ್ಯಾಸಗಳನ್ನು ಬೆಸೆಸಿಕೊಳ್ಳಬೇಕು ಎಂಬುದನ್ನು ಸಹ ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ವಿವರಿಸಿದ್ದಾರೆ. ನಿಮಗೂ ಕೂಡ ಪದೇ ಪದೇ ಆರ್ಥಿಕ ಸಂಕಷ್ಟ ಎದುರಾಗುತ್ತಿದೆಯೇ? ಈ ಒಂದು ಸಮಸ್ಯೆಯಿಂದ ಮುಕ್ತಿ ಪಡೆಯಲು ಯಾವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಆರ್ಥಿಕ ಸಂಕಷ್ಟದಿಂದ ಪಾರಾಗಲು ನೀವು ಬೆಳೆಸಿಕೊಳ್ಳಬೇಕಾದ ಅಭ್ಯಾಸಗಳು:

ಉಳಿತಾಯದ ಅಭ್ಯಾಸ ಬೆಳೆಸಿಕೊಳ್ಳಿ:  ಪ್ರತಿಯೊಬ್ಬರೂ ತಮ್ಮ ಆದಾಯದ ಒಂದು ಭಾಗವನ್ನು ಉಳಿಸಬೇಕು. ಉಳಿತಾಯವು ಭವಿಷ್ಯದ ತೊಂದರೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅಲ್ಲದೆ ಉಳಿತಾಯ ಮಾಡುವುದರಿಂದ ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಸಂಕಷ್ಟದಿಂದಲೂ ಪಾರಾಗಬಹುದು.

ಹಣವನ್ನು ಗೌರವಿಸುವ ಅಭ್ಯಾಸ ಬೆಳೆಸಿಕೊಳ್ಳಿ: ಚಾಣಕ್ಯರ ಪ್ರಕಾರ, ಸಂಪತ್ತನ್ನು ಯಾರು ಗೌರವಿಸುತ್ತಾರೆಯೋ ಅವರ ಬಳಿ ಸದಾ ಸಂಪತ್ತು ನೆಲೆಸುತ್ತದೆ. ಯಾವ ಕಾರಣಕ್ಕೂ ದುಂದು ವೆಚ್ಚ ಮಾಡಬಾರದು. ಹಣವನ್ನು ಗೌರವದಿಂದ ಬಳಸಬೇಕು.  ದುಂದುಗಾರಿಕೆ, ಆಡಂಬರ ಮತ್ತು ಅಜಾಗರೂಕತೆಯನ್ನು ತಪ್ಪಿಸಿ, ವಿವೇಕಯುತವಾಗಿ ಖರ್ಚು ಮಾಡಿದರೆ ಮಾತ್ರ ನೀವು ಆರ್ಥಿಕವಾಗಿ ಸದೃಢವಾಗಲು ಸಾಧ್ಯ.

ನಿಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಿ: ಕೇವಲ ಒಂದು ಆದಾಯವನ್ನು ಅವಲಂಬಿಸಬೇಡಿ. ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಿ. ಹೊಸ ಕೌಶಲ್ಯಗಳನ್ನು ಕಲಿಯುವ ಮೂಲಕ ಅಥವಾ ಹೆಚ್ಚುವರಿ ಕೆಲಸವನ್ನು ತೆಗೆದುಕೊಳ್ಳುವ ಮೂಲಕ ಹೆಚ್ಚುವರಿ ಆದಾಯದ ಮೂಲಗಳನ್ನು ಅಭಿವೃದ್ಧಿಪಡಿಸುವುದರಿಂದ ನೀವು ಆರ್ಥಿಕವಾಗಿ ಸಬಲರಾಗಬಹುದು ಎನ್ನುತ್ತಾರೆ ಚಾಣಕ್ಯ.

ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಿ: ಆರ್ಥಿಕ ಸಮಸ್ಯೆಗಳನ್ನು ತಪ್ಪಿಸಲು ಸಕಾರಾತ್ಮಕ ಚಿಂತನೆಯು ನಿರ್ಣಾಯಕವಾಗಿದೆ ಎನ್ನುತ್ತಾರೆ ಚಾಣಕ್ಯ. ನಕಾರಾತ್ಮಕ ಆಲೋಚನೆಗಳು ವ್ಯಕ್ತಿಯ ಪ್ರಗತಿಗೆ ಅಡ್ಡಿಯಾಗುತ್ತವೆ, ಅದೇ ಸಕಾರಾತ್ಮಕ ಮನೋಭಾವವು ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಸವಾಲುಗಳನ್ನು ಅವಕಾಶಗಳಾಗಿ ನೋಡಿ.

ಸಮಯದ ಸರಿಯಾದ ಬಳಕೆ: ಚಾಣಕ್ಯನ ಪ್ರಕಾರ ಸಮಯ ಮತ್ತು ಹಣ ಎರಡೂ ಅಮೂಲ್ಯ. ನಿಷ್ಪ್ರಯೋಜಕ ವಿಷಯಗಳಿಗೆ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಬೇಕು. ಸಮಯವನ್ನು ಗೌರವಿಸುವವರು ಮಾತ್ರ ಜೀವನದಲ್ಲಿ ಪ್ರಗತಿ ಹೊಂದುತ್ತಾರೆ. ಅಲ್ಲದೆ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿದರೆ ಮಾತ್ರ ಯಶಸ್ಸು ನಿಮ್ಮದಾಗುತ್ತದೆ.

ಇದನ್ನೂ ಓದಿ: ಕೆಲಸಗಳ ಮಾಡೋ ಮುನ್ನ ನೂರು ಬಾರಿ ಯೋಚಿಸಿ, ಇಲ್ಲಾಂದ್ರೆ ಪಶ್ಚಾತಾಪ ಪಡಬೇಕಾಗುತ್ತದೆ

ಕೆಟ್ಟ ಸಹವಾಸದಿಂದ ದೂರವಿರಿ: ಕೆಟ್ಟ ಸಹವಾಸವು ವ್ಯಕ್ತಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಾನಿಯನ್ನುಂಟುಮಾಡಬಹುದು. ಆದ್ದರಿಂದ, ಯಾವಾಗಲೂ ಕಠಿಣ ಪರಿಶ್ರಮಿ, ಸಕಾರಾತ್ಮಕ ಮತ್ತು ಗುರಿ-ಆಧಾರಿತ ಜನರಿಂದ ನಿಮ್ಮನ್ನು ಸುತ್ತುವರೆದಿರಿ ಎನ್ನುತ್ತಾರೆ ಚಾಣಕ್ಯ.

ಸಣ್ಣ ಖರ್ಚುಗಳ ಬಗ್ಗೆ ನಿಗಾ ಇರಿಸಿ: ಸಣ್ಣ ಖರ್ಚುಗಳು ಕ್ರಮೇಣ ಗಣನೀಯ ಖರ್ಚುಗಳಾಗಿ ಬದಲಾಗಬಹುದು. ಪ್ರತಿಯೊಂದು ಖರ್ಚಿನ ಬಗ್ಗೆ ನಿಗಾ ಇಡುವುದು ಮತ್ತು ಅನಗತ್ಯ ಖರ್ಚುಗಳನ್ನು ತಪ್ಪಿಸುವುದು ಆರ್ಥಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ.

ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ: ಹೂಡಿಕೆ ಮಾಡುವ ಮೊದಲು ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವುದು ಮುಖ್ಯ. ಆತುರದ ನಿರ್ಧಾರಗಳು ನಷ್ಟಕ್ಕೆ, ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು, ಆದ್ದರಿಂದ ಸುರಕ್ಷಿತವಾಗಿ ಮತ್ತು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PBKS vs SRH: ಯಾನ್ಸನ್ ಹಿಡಿದ ಕ್ಯಾಚ್​ಗೆ ಬೆಚ್ಚಿ ಬೆರಗಾದ ಅರ್ಷದೀಪ್; ವಿಡಿಯೋ

ಭಾರತ ಟಿ20 ತಂಡದ ಬೌಲಿಂಗ್ ವಿಭಾಗದ ಪ್ರಮುಖ ಬೌಲರ್ ಎನಿಸಿಕೊಂಡಿರುವ ಅರ್ಷದೀಪ್ ಸಿಂಗ್​ಗೆ ಈ ಬಾರಿಯ ಐಪಿಎಲ್ ದುಃಸ್ವಪ್ನದಂತೆ ಕಾಡುತ್ತಿದೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವ ಅರ್ಷದೀಪ್​ಗೆ ಮೊದಲ ಮೂರು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಸಿಕ್ಕಿರಲಿಲ್ಲ. ಇತ್ತ ಅರ್ಷದೀಪ್​ ರನ್​ಗೂ ಕಡಿವಾಣ ಹಾಕುತ್ತಿರಲಿಲ್ಲ. ಇದು ಪಂಜಾಬ್​ಗೆ ದೊಡ್ಡ ತಲೆನೋವಾಗಿತ್ತು. ಇಂದು ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಅರ್ಷದೀಪ್ ತುಂಬಾ ದುಬಾರಿಯಾದರು. ಆದರೆ ಕೊನೆಗೂ ತಮ್ಮ ವಿಕೆಟ್​ಗಳ ಖಾತೆ ತೆರೆಯುವಲ್ಲಿ ಯಶಸ್ವಿಯಾದರು.

ಈ ಪಂದ್ಯದಲ್ಲಿ 4 ಓವರ್​ಗಳನ್ನು ಬೌಲ್ ಮಾಡಿದ ಅರ್ಷದೀಪ್ ಬರೋಬ್ಬರಿ 50 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು. ಅಂದರೆ ಅರ್ಷದೀಪ್ ವಿಕೆಟ್ ಪಡೆದರೂ ರನ್​ಗೆ ಕಡಿವಾಣ ಹಾಕುವಲ್ಲಿ ವಿಫಲರಾದರು. ಈ ಆವೃತ್ತಿಯಲ್ಲಿ ಅರ್ಷದೀಪ್ ಅವರ ಮೊದಲ ವಿಕೆಟ್ ಇಶಾನ್ ಕಿಶನ್ ಅವರ ರೂಪದಲ್ಲಿ ಬಂತು. ಅರ್ಷದೀಪ್ ಅವರ ಎಸೆತವನ್ನು ಕಿಶನ್ ಸಿಕ್ಸರ್​ಗಟ್ಟಲು ಯತ್ನಿಸಿದರು. ಆದರೆ ಬೌಂಡರಿ ಗೆರೆ ಬಳಿ ನಿಂತಿದ್ದ ಮಾರ್ಕೋ ಯಾನ್ಸನ್ 15 ಮೀಟರ್ ಓಡಿ ಬಂದು ಕೇವಲ ಒಂದೇ ಒಂದು ಕೈನಲ್ಲಿ ಅದ್ಭುತ ಕ್ಯಾಚ್ ತೆಗೆದುಕೊಂಡರು.

ಯಾನ್ಸನ್ ಹಿಡಿದ ಈ ಕ್ಯಾಚ್ ಅರ್ಷದೀಪ್ ಅವರಿಗೂ ಅಚ್ಚರಿಯನ್ನುಂಟು ಮಾಡಿತು. ಅರ್ಷದೀಪ್ ತಮ್ಮ ಎರಡನೇ ವಿಕೆಟ್ ರೂಪದಲ್ಲಿ ಸಲೀಲ್ ಅರೋರಾ ಅವರ ಭೇಟೆಯಾಡಿದರು. ಆದಾಗ್ಯೂ ಇದೇ ಪಂದ್ಯದಲ್ಲಿ ಅರ್ಷದೀಪ್ ಒಂದೇ ಓವರ್​ನಲ್ಲಿ ಬರೋಬ್ಬರಿ 24 ರನ್​ಗಳನ್ನು ಬಿಟ್ಟುಕೊಟ್ಟರು. ಇದರಲ್ಲಿ ಅಭಿಷೇಕ್ ಶರ್ಮಾ ಬೌಂಡರಿ ಸಿಕ್ಸರ್​ಗಳಿಂದ 20ರನ್ ಕಲೆಹಾಕಿದರೆ, ಮಿಕ್ಕ 4 ರನ್​ಗಳು ವೈಡ್​ನಿಂದ ಬಂದವು.

Source link

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ಗೆ ಪಾಕಿಸ್ತಾನದ ಯುದ್ಧವಿಮಾನಗಳ ಬೆಂಗಾವಲು

ಇಸ್ಲಮಾಬಾದ್, ಏಪ್ರಿಲ್ 11: ಇರಾನ್ ಜೊತೆಗಿನ ಮಾತುಕತೆಗಾಗಿ ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಆಗಮಿಸಿದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ (JD Vance) ಅವರ ವಿಮಾನಕ್ಕೆ ಪಾಕಿಸ್ತಾನದ F-16 ಯುದ್ಧವಿಮಾನಗಳು ಬೆಂಗಾವಲು ಮಾಡಿವೆ. ಮಧ್ಯಪ್ರಾಚ್ಯದಲ್ಲಿ ತೀವ್ರ ಸಂಘರ್ಷದ ನಡುವೆ ಇರಾನ್‌ನೊಂದಿಗೆ ಮಾತುಕತೆ ನಡೆಸಲು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಪಾಕಿಸ್ತಾನದ F-16 ಯುದ್ಧವಿಮಾನಗಳು ಇಸ್ಲಾಮಾಬಾದ್‌ಗೆ ಬೆಂಗಾವಲು ಮಾಡಿದವು. ಇಸ್ಲಾಮಾಬಾದ್ ಬಳಿಯ ನೂರ್ ಖಾನ್ ವಾಯುನೆಲೆಯಲ್ಲಿ ಇಳಿಯುವ ಮೊದಲು ಪಾಕಿಸ್ತಾನ ವಾಯುಪ್ರದೇಶದಲ್ಲಿ 5 PAF F-16ಗಳು ಯುಎಸ್ ವಾಯುಪಡೆಯ ಬೋಯಿಂಗ್ C-32A ವಿಮಾನವನ್ನು ಬೆಂಗಾವಲು ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Video: ಏಕಾಏಕಿ ಮಾಲಕಿಯ ಮೇಲೆ ಸಾಕು ಬೆಕ್ಕು ದಾಳಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮನೆಯಲ್ಲೇ ಮುದ್ದಾಗಿ ಬೆಳೆದ ಸಾಕು ಬೆಕ್ಕೊಂದು ತನ್ನ ಮಾಲೀಕಿಯ ಮೇಲೆ ಅನಿರೀಕ್ಷಿತವಾಗಿ ಭೀಕರ ದಾಳಿ ನಡೆಸಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಬೆಕ್ಕು ಮಹಿಳೆಯ ಕೈಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಬಲವಾಗಿ ಕಚ್ಚಿ ಗಾಯಗೊಳಿಸಿದ್ದು, ದಾಳಿಯ ತೀವ್ರತೆಗೆ ಕೊಠಡಿಯ ನೆಲದ ಮೇಲೆ ರಕ್ತ ಚೆಲ್ಲಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲ ನಿಮಿಷಗಳ ಕಾಲ ಬೆಕ್ಕಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟ ಮಹಿಳೆ, ಕೊನೆಯಲ್ಲಿ ಹೇಗೋ ಕೊಠಡಿಯಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಕ್ಷಾಂತರ ವೀಕ್ಷಣೆ ಪಡೆದಿರುವ ಈ ವಿಡಿಯೋ ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದು, ಅತ್ಯಂತ ಶಾಂತ ಸ್ವಭಾವದ ಪ್ರಾಣಿಗಳೂ ಕೂಡ ಕೆಲವು ಸಂದರ್ಭಗಳಲ್ಲಿ ಹೀಗೆ ವಿಪರೀತ ಆಕ್ರಮಣಕಾರಿಯಾಗಿ ವರ್ತಿಸಬಹುದು ಎಂಬ ಸತ್ಯ ಈಗ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಅಮ್ಮನ ಮಡಿಲು ಸೇರಲು ಒದ್ದಾಡಿದ ಕಂದಮ್ಮ: ಕಾಫಿ ತೋಟದಲ್ಲಿ ನವಜಾತ ಶಿಶು ಪತ್ತೆ!

ಮಡಿಕೇರಿ, ಏ.11: ಜನ್ಮ ನೀಡಿದ ಹೆತ್ತವರೇ ಮಗುವನ್ನು ಅನಾಥವಾಗಿ ಬಿಟ್ಟು ಹೋಗಿರುವ ಕರುಣಾಜನಕ ಘಟನೆಯೊಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟವೊಂದರಲ್ಲಿ ಅಡಿಕೆ ಹಾಳೆಯಲ್ಲಿ ಸುತ್ತಿ ಮಲಗಿಸಲಾಗಿದ್ದ ನವಜಾತ ಹೆಣ್ಣು ಶಿಶುವನ್ನು ಸ್ಥಳೀಯರು ಮತ್ತು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿದ್ದಾರೆ.

ಇಂದು (ಏಪ್ರಿಲ್ 11) ಬೇತ್ರಿ ಗ್ರಾಮದ ಕಾಫಿ ತೋಟದಲ್ಲಿ ಮಗುವಿನ ಅಳುವಿನ ಶಬ್ದ ಕೇಳಿದ ಸ್ಥಳೀಯರು ಹೋಗಿ ನೋಡಿದಾಗ, ಅಡಿಕೆ ಹಾಳೆಯಲ್ಲಿ ಸುತ್ತಿ ಮಲಗಿಸಲಾಗಿದ್ದ ನವಜಾತ ಶಿಶು ಕಂಡುಬಂದಿದೆ. ತಕ್ಷಣವೇ ಎಚ್ಚೆತ್ತ ಗ್ರಾಮಸ್ಥರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಘಟಕದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಮಗುವು ಸ್ವಲ್ಪ ಅಸ್ವಸ್ಥಗೊಂಡಿದ್ದರಿಂದ ತಕ್ಷಣವೇ ಮಡಿಕೇರಿಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗುವಿಗೆ ವೈದ್ಯರಿಂದ ಚಿಕಿತ್ಸೆ ಮತ್ತು ಆರೈಕೆ ನೀಡಲಾಗುತ್ತಿದ್ದು, ಶಿಶುವು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೊಪ್ಪಳದಲ್ಲೂ ಲವ್ ಜಿಹಾದ್: ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ; ಸಿಡಿದೆದ್ದ ಹಿಂದೂ ಯುವಕರು

ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವಜಾತ ಶಿಶುವನ್ನು ಕಾಫಿ ತೋಟದಲ್ಲಿ ಬಿಟ್ಟು ಹೋದ ಪಾಪಿ ಪೋಷಕರು ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ಹೆರಿಗೆಯಾದವರ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳಿಗಳನ್ನು ಅಲ್ಪಸಂಖ್ಯಾತರಾಗಲು ಬಿಡುವುದಿಲ್ಲ; ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಭರವಸೆ

ಕೊಲ್ಕತ್ತಾ, ಏಪ್ರಿಲ್ 11: ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ದಕ್ಷಿಣ ದಿನಾಜ್‌ಪುರ ಜಿಲ್ಲೆಯಲ್ಲಿ ಇಂದು ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಟಿಎಂಸಿಯ ಲೂಟಿ ಮತ್ತು ಸುಳ್ಳಿನ ರಾಜಕೀಯ, ಭಯದ ಆಳ್ವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಹೇಳಿದ್ದಾರೆ. ಹಾಗೇ, ಬಂಗಾಳಿಗಳು ಅಲ್ಪಸಂಖ್ಯಾತರಾಗಲು ಬಿಜೆಪಿ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಟಿಎಂಸಿಗೆ ಯಾವುದೇ ಉದ್ದೇಶ ಅಥವಾ ನೀತಿ ಇಲ್ಲದ ಕಾರಣದಿಂದಾಗಿ ಇತರ ರಾಜ್ಯಗಳಲ್ಲಿ ಚುನಾವಣೆಗಳನ್ನು ಗೆಲ್ಲಲು ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ. ಟಿಎಂಸಿ ಬಿಜೆಪಿಯನ್ನು ನಿರಂತರವಾಗಿ ನಿಂದಿಸುತ್ತಿದೆ, ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಆದರೆ, ಕಳೆದ 15 ವರ್ಷಗಳಲ್ಲಿ ಬಂಗಾಳದ ಅಭಿವೃದ್ಧಿಗಾಗಿ ಏನು ಮಾಡಿದೆ ಎಂದು ಹೇಳಲು ವಿಫಲವಾಗಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

ಇದನ್ನೂ ಓದಿ: ನಮಸ್ತೆ, ಮುಗುಳ್ನಗು, ಉಭಯಕುಶಲೋಪರಿ; ರಾಹುಲ್ ಗಾಂಧಿ ಜೊತೆ ಪ್ರಧಾನಿ ಮೋದಿಯ ಅಪರೂಪದ ಕ್ಷಣ

“ಇದು ಭಯವನ್ನು ಸೋಲಿಸುವ ಯುದ್ಧ, ಇದು ನಂಬಿಕೆಯ ಮೇಲೆ ಬಂಗಾಳವನ್ನು ಮುನ್ನಡೆಸುವ ಯುದ್ಧ. ಟಿಎಂಸಿಯ ಭಯದ ಆಳ್ವಿಕೆಯು ಇನ್ನೇನು ಸ್ವಲ್ಪ ದಿನಗಳಲ್ಲಿ ಕೊನೆಗೊಳ್ಳುತ್ತಿದೆ. ಟಿಎಂಸಿಯ ಸುಳ್ಳುಗಳು ಮತ್ತು ಲೂಟಿಯ ಅಂಗಡಿ ಮುಚ್ಚಲಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳ ಚುನಾವಣೆಗೆ ಬಿಜೆಪಿ ‘ಮಹಾ’ ಪ್ರಣಾಳಿಕೆ: ಮಹಿಳೆಯರಿಗೆ 3,000 ರೂ. ಮಾಸಾಶನ, 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ

“ಪಶ್ಚಿಮ ಬಂಗಾಳದಲ್ಲಿ ಓಲೈಕೆ ರಾಜಕೀಯವನ್ನು ಶಾಶ್ವತವಾಗಿ ಕೊನೆಗೊಳಿಸಲು ಬಿಜೆಪಿ ಯುಸಿಸಿಯನ್ನು ಜಾರಿಗೆ ತರಲು ಸಂಕಲ್ಪಿಸಿದೆ. ಬಂಗಾಳದಲ್ಲಿ ಬಂಗಾಳಿಗಳು ಅಲ್ಪಸಂಖ್ಯಾತರಾಗಲು ನಾವು ಅವಕಾಶ ನೀಡುವುದಿಲ್ಲ” ಎಂದು ಮೋದಿ ಹೇಳಿದ್ದಾರೆ. ರಾಜ್ಯ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ 6 ತಿಂಗಳೊಳಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ ಒಂದು ದಿನದ ನಂತರ ಮೋದಿಯ ಈ ಹೇಳಿಕೆಗಳು ಬಂದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನ್ನಿಂದ ಅಂತಾ ತಪ್ಪು‌ ಏನಾಗಿದೆ? ರಾಜೀನಾಮೆ ಬೆನ್ನಲ್ಲೇ ಗುಡುಗಿದ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್

ಬೆಂಗಳೂರು, ಏಪ್ರಿಲ್ 11: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ದಾವಣಗೆರೆ ಕಾಂಗ್ರೆಸ್ (congress) ಅಭ್ಯರ್ಥಿ ಸಮರ್ಥ್​​ ವಿರುದ್ಧ ಷಡ್ಯಂತ್ರ ಆರೋಪ ಸಂಬಂಧ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿದೆ. ಪಕ್ಷ ವಿರೋಧ ಚಟುವಟಿಕೆಯಲ್ಲಿ ಭಾಗಿ ಆರೋಪ ಸಂಬಂಧ ಹೈಕಮಾಂಡ್​ ಕೈಗೆ ವರದಿ ತಲುಪುತ್ತಿದ್ದಂತೆ ಖಡಕ್ ಆಗಿ ರಾಜೀನಾಮೆ ಕೊಡಿ ಅಂತಾ ಎಐಸಿಸಿ ಸೂಚನೆ ಕೊಟ್ಟಿದೆ. ಅದರಂತೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್ (Abdul Jabbar) ರಾಜೀನಾಮೆ ಕೊಟ್ಟಿದ್ದಾರೆ.

ನನ್ನಿಂದ ಅಂತಾ ತಪ್ಪು‌ ಏನಾಗಿದೆ: ಅಬ್ದುಲ್‌ ಜಬ್ಬಾರ್

ಬೆಂಗಳೂರಿನಲ್ಲಿ ಟಿವಿ9ಗೆ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್​​ ಪ್ರತಿಕ್ರಿಯಿಸಿದ್ದು, ಏಪ್ರಿಲ್‌ 3ರಂದೇ KPCC ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ. ಪಕ್ಷದ ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧ. ನನ್ನಿಂದ ಅಂತಾ ತಪ್ಪು‌ ಏನಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಈ ತಕ್ಷಣವೇ ರಾಜೀನಾಮೆ ನೀಡಿ: ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್‌ಗೆ ಸೂಚನೆ! ಮುಂದಿನ ತಲೆದಂಡ ಸಚಿವ ಜಮೀರ್?

ಅತಿ ಬುದ್ಧಿವಂತಿಕೆ ಒಳ್ಳೆಯದಲ್ಲ. ಬೀಳಿಸಿ ಕಾಲು ಎಳೆಯುವ ಕೆಲಸ ಬೇಡ. ಹೈಕಮಾಂಡ್ ಹುದ್ದೆ ಕೊಟ್ಟಿತ್ತು, ಅರ್ಹತೆ ಇಲ್ಲದೆ ಏಕೆ ಕೊಡುತ್ತಾರೆಂದು ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಬಿಟ್ಟು ನಾನು ಬೇರೆ ಪಕ್ಷದ ಕಡೆ ಯೋಚನೆ ಮಾಡಲ್ಲ. ಪಕ್ಷದಲ್ಲಿ ನ್ಯಾಯ ನೀತಿ‌ ಇತ್ತು, ಅದನ್ನ ಮುಂದುವರಿಸಿ ಹೋಗಬೇಕು. ಸಮುದಾಯಕ್ಕಾಗಿ ಕಾಂಗ್ರೆಸ್‌ ಪಕ್ಷವನ್ನ ವಿರೋಧ ಮಾಡುವುದಕ್ಕೆ ಆಗಲ್ಲ. ಇನ್ನು ಅವರು ಸಚಿವ ಸ್ಥಾನಕ್ಕಾಗಿಯೇ ಒಡಕು ಮೂಡಿಸುತ್ತಿದ್ದಾರೆ. ನನಗೆ ಸಚಿವ ಸ್ಥಾನ ಕೊಡಿ ಅಂತಾ ಕೇಳಿಲ್ಲ. ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಕೊಡಿ ಅಂತಾ ಪತ್ರದಲ್ಲಿ ಬರೆದಿದ್ದೇವೆ ಎಂದು ಹೇಳಿದ್ದಾರೆ.

ಅದನ್ನ ಪ್ರಶ್ನಿಸಿದ್ದೇ ತಪ್ಪಾ?

ಇನ್ನು ಬೈಎಲೆಕ್ಷನ್ ಸಂಬಂಧ ಯಾವೊಬ್ಬ ನಾಯಕರೂ ನನ್ನ ಜತೆ ಚರ್ಚಿಸಿಲ್ಲ. ನನ್ನ ಬಿಟ್ಟು ಚುನಾವಣೆಗೆ ಹೋಗಿದ್ದಾರೆ, ಆದರೂ ಗೆಲ್ಲಲಿ ಅಂತಾ ಹಾರೈಸುವೆ. ಕುರುಬ ಸಮುದಾಯ ಸೇರಿ ಬೇರೆಯವರಿಗೆ ಟಿಕೆಟ್ ಕೊಡಿ ಅಂದಿದ್ದೆ. ಒಂದೇ ಮನೆಯಲ್ಲಿ ನಾಲ್ವರಿಗೆ ಟಿಕೆಟ್ ಕೊಟ್ಟರೆ ಹೇಗೆ? ಅದನ್ನ ಪ್ರಶ್ನಿಸಿದ್ದೇ ತಪ್ಪಾ? ಸಚಿವ ಜಮೀರ್ ಬಂದ್ಮೇಲೆ ಶೇ.50ರಷ್ಟು ವಿರೋಧ ಕಡಿಮೆಯಾಗಿತ್ತು. ಯಾವ ನಾಯಕರೂ ಸ್ಪಷ್ಟೀಕರಣ ಕೇಳಿಲ್ಲ ಎಂದು ಅಬ್ದುಲ್‌ ಜಬ್ಬಾರ್ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

Exit mobile version