ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಸ್ಫೋಟ: ಇಬ್ಬರು ಸಾವು, ಉಗ್ರರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಸ್ಥಳೀಯ ನಾಯಕ – Kannada News | Pakistan Explosion: 2 Dead in Khyber Pakhtunkhwa; Local Leader Escapes TTP Attack
ಇಸ್ಲಾಮಾಬಾದ್, ಜುಲೈ 26: ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಜೌರ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ಪ್ರಬಲ ಸ್ಫೋಟ(Blast)ದಲ್ಲಿ ಕನಿಷ್ಠ ಇಬ್ಬರು ಸ್ಥಳೀಯರು ಮೃತಪಟ್ಟಿದ್ದಾರೆ. ಇನ್ನು ಈ ದಾಳಿಯ ವೇಳೆ ಸ್ಥಳೀಯ ನಾಯಕರೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಜೌರ್ ಜಿಲ್ಲೆಯ ಸಲರ್ಜೈ ತಹಸಿಲ್‌ನಲ್ಲಿರುವ ‘ತಾಲಿ ಬ್ಯಾಂಡ್’ ಪ್ರದೇಶದ ಬಳಿ ಈ ಸ್ಫೋಟ ಸಂಭವಿಸಿದೆ. ಮೃತರನ್ನು ಸುಲೇಮಾನ್ ಖಾರಿ ಹಾಗೂ ಗುಲಾಮ್ ಎಂದು ಗುರುತಿಸಲಾಗಿದ್ದು, ಅವರ ಮೃತದೇಹಗಳನ್ನು ಹತ್ತಿರದ ಖಾರ್ ಆಸ್ಪತ್ರೆಗೆ ರವಾನಿಸಲಾಗಿದೆ….