Headlines

ಇನ್ಷೂರೆನ್ಸ್ ಪಾಲಿಸಿಗೆ ಕಡ್ಡಾಯ ‘ಏಜೆಂಟ್ ಟ್ಯಾಗಿಂಗ್’; ಯಾರು ಯಾರಿಗೆ ವಿಮೆ ಮಾರಿದರು, ಮಾಹಿತಿ ಇರಬೇಕು: ಐಆರ್​ಡಿಎಐ ಮುಖ್ಯಸ್ಥರ ಪ್ರಸ್ತಾಪ – Kannada News | IRDAI chief suggests agent tagging for every insurance policy to curb mis selling

ನವದೆಹಲಿ, ಜುಲೈ 26: ಇನ್ಷೂರೆನ್ಸ್ ಸೆಕ್ಟರ್​ನಲ್ಲಿ ಸಾಕಷ್ಟು ಮಿಸ್​ಸೆಲ್ಲಿಂಗ್ (Mis-selling) ನಡೆಯುತ್ತಿದೆ ಎನ್ನುವ ಆರೋಪ ಇದೆ. ಅಂದರೆ, ಒಬ್ಬ ವ್ಯಕ್ತಿಯ ಅಗತ್ಯಗಳನ್ನು ಪರಿಗಣಿಸದೆಯೇ ತಪ್ಪಾದ ವಿಮಾ ಪಾಲಿಸಿಗಳನ್ನು (Insurance Policies) ಮಾರಾಟ ಮಾಡಲಾಗುತ್ತಿರುವ ಪ್ರಕರಣಗಳು ಬಹಳ ಇವೆ. ಇದಕ್ಕೆ ಕಡಿವಾಣ ಹಾಕಲು ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ ಐಆರ್​ಡಿಎಐ (IRDAI) ಮುಂದಾಗಿದೆ. ಪ್ರಾಧಿಕಾರ ಮುಖ್ಯಸ್ಥ ಅಜಯ್ ಸೇಠ್ ಅವರು ಪ್ರತಿಯೊಂದು ವಿಮಾ ಪಾಲಿಸಿಗೂ ಏಜೆಂಟ್ ಟ್ಯಾಗ್ ಕಡ್ಡಾಯಗೊಳಿಸುವ ಪ್ರಸ್ತಾಪ ಮಾಡಿದ್ದಾರೆ. ಅವರ ಪ್ರಕಾರ, ವಿಮಾ ಕಂಪನಿಗಳು ಪ್ರತಿಯೊಂದು…

Read More

National Testing Agency: ನೀಟ್ ಪರೀಕ್ಷೆ ವಿವಾದ; ದೇಶದ ಅತಿದೊಡ್ಡ ಪರೀಕ್ಷಾ ಸಂಸ್ಥೆ ‘NTA’ ಕುರಿತು ನೀವು ತಿಳಿಯಬೇಕಾದ ಪ್ರಮುಖ ವಿಷಯಗಳಿವು – Kannada News | Beyond NEET: Understanding NTA – India’s National Testing Agency and Its Exams

ಇತ್ತೀಚೆಗೆ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ವಿದ್ಯಾರ್ಥಿಗಳಿಂದ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪ್ರಲ್ಹಾದ್ ಜೋಶಿ ಅವರನ್ನು ನಿಯೋಜಿಸಲಾಗಿದೆ. ಆದ್ದರಿಂದ ದೇಶಾದ್ಯಂತ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗಳಿಗೆ ಅಗತ್ಯವಿರುವ ಪ್ರವೇಶ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA)ಯ ಜವಾಬ್ದಾರಿ ಹಾಗೂ ನೀಟ್ ಹೊರತಾಗಿ ಇದು ನಡೆಸುವ…

Read More

NEET ವಿಚಾರವಾಗಿ ಕೇಂದ್ರ ಸಚಿವರ ರಾಜೀನಾಮೆ ಬೆನ್ನಲ್ಲೇ ಕರ್ನಾಟಕದಲ್ಲಿ ನಡೆದ ಗಂಭೀರ ಘಟನೆಗಳಿಗೆ ಹೊಣೆ ಯಾರೆಂದು ಕಾಂಗ್ರೆಸ್​​ಗೆ ಅಶೋಕ್​​ ಪ್ರಶ್ನೆ – Kannada News | Ashoka Questions Congress Over Accountability for Karnataka’s Major Incidents

ಆರ್. ಅಶೋಕ್Image Credit source: PTI ಬೆಂಗಳೂರು, ಜುಲೈ 26: ಕರ್ನಾಟಕದ ಕಾಂಗ್ರೆಸ್ ವಿರುದ್ಧ ದ್ವಂದ್ವ ನೀತಿ ಆರೋಪ ಮಾಡಿ ಎಕ್ಸ್ ಪೋಸ್ಟ್ ಮೂಲಕ ಸರ್ಕಾರದ ವಿರುದ್ಧ ವಿಧಾನ ಸಭೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ. ಕೇಂದ್ರದಲ್ಲಿ NEET ಪರೀಕ್ಷೆಗೆ ಸಂಬಂಧಿಸಿದ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಆಡಳಿತಾತ್ಮಕ ಹೊಣೆ ಹೊತ್ತು ಕೇಂದ್ರ ಸಚಿವರು ರಾಜೀನಾಮೆ ನೀಡಿದ್ದಾರೆ. ಹಾಗಾದರೆ ಕರ್ನಾಟಕದಲ್ಲಿ ನಡೆದ ಗಂಭೀರ ಘಟನೆಗಳಿಗೆ ನೈತಿಕ ಮತ್ತು ಆಡಳಿತಾತ್ಮಕ ಹೊಣೆ ಯಾರು ಹೊರುತ್ತಾರೆ? ಎಂದವರು ಖಾರವಾಗಿ…

Read More

ಡೋಪಿಂಗ್​ನಲ್ಲಿ ಸಿಕ್ಕಿಬಿದ್ದ ಭಾರತದ ರೋವರ್: ಚಿನ್ನದ ಪದಕ ವಾಪಸ್! – Kannada News | India to Lose Historic World Cup Gold Due to Doping

ಭಾರತೀಯ ಕ್ರೀಡಾಲೋಕಕ್ಕೆ ಭಾರಿ ಆಘಾತ ಎದುರಾಗಿದ್ದು, ರೋಯಿಂಗ್ ಇತಿಹಾಸದಲ್ಲೇ ದೇಶಕ್ಕೆ ಲಭಿಸಿದ್ದ ಮೊದಲ ಐತಿಹಾಸಿಕ ವಿಶ್ವಕಪ್ ಚಿನ್ನದ ಪದಕ ಈಗ ಡೋಪಿಂಗ್‌ ಗ್ರಹಣಕ್ಕೆ ಸಿಲುಕಿ ಕೈತಪ್ಪುವುದು ಬಹುತೇಕ ಖಚಿತವಾಗಿದೆ. ಕಳೆದ ಜೂನ್ ತಿಂಗಳಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ವಿಶ್ವ ರೋಯಿಂಗ್ ಕಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ರೋವರ್ ಲಕ್ಷಯ್, ಉದ್ದೀಪನ ಮದ್ದು (ಡೋಪಿಂಗ್) ಪರೀಕ್ಷೆಯಲ್ಲಿ ನಿಷೇಧಿತ ಸ್ಟೆರಾಯ್ಡ್ ಬಳಸಿ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ವಿಶ್ವ ರೋಯಿಂಗ್ ಕಪ್‌ನಲ್ಲಿ ಗೆದ್ದಿದ್ದ ಚಿನ್ನದ ಪದಕವನ್ನು ವಾಪಸ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಐತಿಹಾಸಿಕ ಚಿನ್ನದ…

Read More

ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ಅಧಿಕಾರ ಸ್ವೀಕಾರ: ನವದೆಹಲಿಯ ಕರ್ತವ್ಯ ಭವನದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ – Kannada News | Pralhad Joshi Assumes Charge as Union Education Minister, Holds First High Level Review Meeting

ನವದೆಹಲಿ, ಜುಲೈ 26: ನೂತನ ಕೇಂದ್ರ ಶಿಕ್ಷಣ ಸಚಿವರಾಗಿ ಧಾರವಾಡ ಕ್ಷೇತ್ರದ ಸಂಸದ ಪ್ರಲ್ಹಾದ್ ಜೋಶಿ ಅವರು ಭಾನುವಾರ ದೆಹಲಿಯ ‘ಕರ್ತವ್ಯ ಭವನ’ದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರ ಸ್ವೀಕರಿಸಿದ ತಕ್ಷಣವೇ ಅವರು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಇಲಾಖೆಯ ಕಾರ್ಯವೈಖರಿ ಹಾಗೂ ಮುಂದಿನ ಆದ್ಯತೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಅಧಿಕಾರ ಸ್ವೀಕಾರದ ನಂತರ ಸಾಮಾಜಿಕ ಜಾಲತಾಣ ಎಕ್ಸ್​​ ಪೋಸ್ಟ್​ನಲ್ಲಿ ಧನ್ಯವಾದ ತಿಳಿಸಿರುವ ಪ್ರಲ್ಹಾದ ಜೋಶಿ, ‘‘ಇಂದು ನಾನು ಕೇಂದ್ರ ಶಿಕ್ಷಣ…

Read More

ಶಾಸಕ, ಸಂಸದರಾಗಲು ವಯೋಮಿತಿ 21ಕ್ಕೆ ಇಳಿಕೆ: ಆಗಸ್ಟ್ ಮೊದಲ ವಾರದಲ್ಲೇ ವಿಧೇಯಕ ತರಲು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನಿರ್ಧಾರ – Kannada News | Telangana CM Proposes Lowering MLA, MP Age to 21: A Major Electoral Reform

ಹೈದರಾಬಾದ್, ಜುಲೈ 26: ಭಾರತದಲ್ಲಿ ಶಾಸಕ(MLA) ಅಥವಾ ಸಂಸದ ಆಗಲು ಸ್ಪರ್ಧಿಸಲು ಪ್ರಸ್ತುತ ಇರುವ ಕನಿಷ್ಠ ವಯೋಮಿತಿಯನ್ನು 25 ರಿಂದ 21 ವರ್ಷಕ್ಕೆ ಇಳಿಸಲು ತೆಲಂಗಾಣ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೈದರಾಬಾದ್‌ನಲ್ಲಿ ನಡೆದ ವಿದ್ಯಾರ್ಥಿಗಳ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ(Revant Reddy), ಆಗಸ್ಟ್ ಮೊದಲ ವಾರದಲ್ಲಿ ರಾಜ್ಯ ಶಾಸನಸಭೆ ಹಾಗೂ ವಿಧಾನ ಪರಿಷತ್ತಿನ ವಿಶೇಷ ಅಧಿವೇಶನ ಕರೆದು ಈ ಕುರಿತು ನಿರ್ಣಯ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ವಿಧಾನಸಭೆ ಮತ್ತು ಲೋಕಸಭೆ…

Read More

Kargil Vijay Divas: ಕಾರ್ಗಿಲ್ ವಿಜಯ್ ದಿವಸ ಹಿನ್ನೆಲೆಯಲ್ಲಿ ಹುತಾತ್ಮ ವೀರ ಸೈನಿಕರಿಗೆ ಡಿಕೆ ಪುಷ್ಪನಮನ! – Kannada News | Kargil Vijay Divas: CM D.K. Shivakumar Honours Martyred Soldiers in Bengaluru

ಬೆಂಗಳೂರು, ಜುಲೈ 26: ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯು ಸಾಧಿಸಿದ ವಿಜಯವನ್ನು ಮತ್ತು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರ ಬಲಿದಾನವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಸಮಾರಂಭದಲ್ಲಿ ಮಿಲಿಟರಿ ಸಿಬ್ಬಂದಿಯು ಹುತಾತ್ಮ ಸೈನಿಕರಿಗೆ ಗೌರವ ವಂದನೆ ಸಲ್ಲಿಸಿದರು. ಸಲಾಮಿ ಶಸ್ತ್ರ ಮತ್ತು ಶೋಕ ಶಸ್ತ್ರದೊಂದಿಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ…

Read More

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಿದ್ದರಾಮಯ್ಯ: 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದ ಮಾಜಿ ಸಿಎಂ – Kannada News | ‘Will Not Contest 2028 Polls’: Former CM Siddaramaiah Announces Retirement From Electoral Politics

ಮಂಡ್ಯ, ಜುಲೈ 26: ಇತ್ತೀಚೆಗಷ್ಟೇ ಕರ್ನಾಟಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಹಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, 2028ರ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ ಎಂದು ಹೇಳುವ ಮೂಲಕ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ‌.ಆರ್.ಪೇಟೆಯಲ್ಲಿ‌ ನಡೆದಿದ್ದ K.R.ಪೇಟೆ ಕೃಷ್ಣ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಅಡಿರುವ ಅವರು, ಈ ರೀತಿ ಹೇಳಿಕೆ ನೀಡಿದ್ದಾರೆ. ಆದರೆ ಅದೇ ವೇಳೆ ನೀವಿನ್ನೂ 10 ವರ್ಷ ರಾಜಕೀಯದಲ್ಲಿ ಇರಬೇಕೆಂದು ಬೆಂಬಲಿಗರು ಒತ್ತಾಯಿಸಿರುವ ಘಟನೆಯೂ ನಡೆದಿದೆ….

Read More

ಬಾಕ್ಸ್ ಆಫೀಸ್‌ನಲ್ಲಿ ಎಡವಿದ ‘ದಿ ಇಂಡಿಯಾ ಸ್ಟೋರಿ’: ಕಾಜಲ್ ಅಗರ್‌ವಾಲ್ ಸಿನಿಮಾಗೆ ನೀರಸ ಪ್ರತಿಕ್ರಿಯೆ – Kannada News | Kajal Aggarwal starrer The India Story movie 2026 Box Office Collection Day 2 Hit or Flop

ಜನಪ್ರಿಯ ನಟಿ ಕಾಜಲ್ ಅಗರ್‌ವಾಲ್ (Kajal Aggarwal) ಹಾಗೂ ಶ್ರೇಯಸ್ ತಲ್ಪಾಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ದಿ ಇಂಡಿಯಾ ಸ್ಟೋರಿ: ಸ್ಲೋ ಪಾಯ್ಸನ್ ಇನ್ ಪ್ರೋಗ್ರೆಸ್’ (The India Story: Slow Poison in Progress) ಸಿನಿಮಾ ಜುಲೈ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ರೈತರು ಬಳಸುವ ಕ್ರಿಮಿನಾಶಕಗಳ (Pesticides) ದುಷ್ಪರಿಣಾಮ ಹಾಗೂ ಜನರ ಆರೋಗ್ಯದ ಮೇಲಾಗುವ ಕಠೋರ ಪರಿಣಾಮಗಳನ್ನು ಆಧರಿಸಿ ನಿರ್ಮಿಸಲಾದ ಈ ಸಾಮಾಜಿಕ ಕಥಾವಸ್ತುವಿನ ಸಿನಿಮಾ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ತೀವ್ರ ಹೆಣಗಾಡುತ್ತಿದೆ. ಬಾಕ್ಸ್ ಆಫೀಸ್…

Read More

ಸಾಲವೆಂದರೆ ಮಾರುದೂರ ಹೋಗುತ್ತೀರಾ? ಕೆಟ್ಟಸಾಲ, ಒಳ್ಳೆಯ ಸಾಲದ ವ್ಯತ್ಯಾಸ ತಿಳಿದಿರಿ… ಇಲ್ಲಿವೆ ಕೆಲ ಟ್ರಿಕ್ಸ್ – Kannada News | Know the difference of good debt, bad debt, learn the smart ways for wealth creation

ಪ್ರತಿಯೊಬ್ಬರೂ ಸಂಪೂರ್ಣ ಸಾಲಮುಕ್ತರಾಗಲು (Debt-free) ಬಯಸುತ್ತಾರೆ. ಆದರೆ ಶತಾಯಗತಾಯ ಯಾವುದೇ ಸಾಲವಿಲ್ಲದೆ ಬದುಕುತ್ತೇನೆ ಎಂದು ಹಠ ಹಿಡಿಯುವುದು ಸರಿಯಾದ ನಿರ್ಧಾರವಾಗದು ಎಂದು ಹಲವು ಪರಿಣಿತರು ಹೇಳುವುದುಂಟು. ಯಾವಾಗ ಸಾಲ ಮಾಡಬೇಕು, ಯಾಕೆ ಸಾಲ ಮಾಡಬೇಕು ಎನ್ನುವ ವಿವೇಚನೆ ಇರಬೇಕು. ಸಂಪೂರ್ಣ ಸಾಲ ರಹಿತರಾಗುವುದು ಕೆಲವು ಸಂದರ್ಭಗಳಲ್ಲಿ ನಿಮ್ಮ ಆಸ್ತಿ ಹಾಗೂ ಸಂಪತ್ತು ವೃದ್ಧಿಗೆ ಅಡ್ಡಿಯಾಗಬಹುದು. ಸಾಲರಹಿತವಾಗಿ ಬದುಕುತ್ತೇನೆ ಎನ್ನುವ ಬದಲು ಸಾಲವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವ ಪ್ರಮುಖ ಹಣಕಾಸು ತಂತ್ರಗಳನ್ನು ತಿಳಿದಿರುವುದು ಉತ್ತಮ. ‘ಒಳ್ಳೆಯ ಸಾಲ’ ಮತ್ತು ‘ಕೆಟ್ಟ…

Read More