ಇನ್ನೂ ಮುಗಿದಿಲ್ಲ ಖಾತೆ ಕ್ಯಾತೆ: ಹೈಕಮಾಂಡ್​ನಿಂದ ಸ್ಪಷ್ಟತೆ ಸಿಗುವ ವರೆಗೆ ಅಧಿಕಾರ ಸ್ವೀಕರಿಸಲ್ಲವೆಂದ ಕೃಷ್ಣಭೈರೇಗೌಡ! – Kannada News

ಬೆಂಗಳೂರು ನಗರಾಭಿವೃದ್ಧಿ ಖಾತೆಯಲ್ಲಿ ಬಿಡಿಎ, ಬಿಎಂಆರ್‌ಡಿಎ ಸೇರಿಸಲು ಕೃಷ್ಣಭೈರೇಗೌಡ ಪಟ್ಟುImage Credit source: tv9

ಬೆಂಗಳೂರು, ಜೂನ್ 8: ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾಗಿ ಮೂರ್ನಾಲ್ಕು ದಿನಗಳೇ ಕಳೆದರೂ ಖಾತೆ ಹಂಚಿಕೆ ಕುರಿತಂತೆ ಗೊಂದಲಗಳು ಮುಂದುವರಿದಿವೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಪಡೆದಿರುವ ಸಚಿವ ಕೃಷ್ಣಭೈರೇಗೌಡರು (Krishna Byre Gowda), ಖಾತೆಯಲ್ಲಿ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಮತ್ತು ಬಿಎಂಆರ್‌ಡಿಎ (ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ) ಇಲಾಖೆಗಳನ್ನು ಸೇರಿಸುವಂತೆ ಹೈಕಮಾಂಡ್ ಜತೆ ಪಟ್ಟು ಹಿಡಿದಿದ್ದಾರೆ. ಈ ಬೇಡಿಕೆ ಈಡೇರುವವರೆಗೂ ಖಾತೆಯ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಎಂದು ಅವರು ತೀರ್ಮಾನಿಸಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರು ನಗರಾಭಿವೃದ್ಧಿ ಖಾತೆಯಲ್ಲಿ ಬಿಡಿಎ, ಬಿಎಂಆರ್‌ಡಿಎ ಸೇರಿಸಲು ಕೃಷ್ಣಭೈರೇಗೌಡ ಪಟ್ಟು.
  • ಬೇಡಿಕೆ ಈಡೇರುವವರೆಗೂ ಅಧಿಕಾರ ಸ್ವೀಕರಿಸಲ್ಲವೆಂದು ನಿರ್ಧಾರ.
  • ಸುರ್ಜೇವಾಲ ಸಮ್ಮುಖದಲ್ಲೇ ತಾರತಮ್ಯದ ಪ್ರಶ್ನೆ ಎತ್ತಿದ ಸಚಿವ.

ಶನಿವಾರ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯು ಬಿಡಿಎ ಮತ್ತು ಬಿಎಂಆರ್‌ಡಿಎ ಇಲ್ಲದೆ ಪರಿಪೂರ್ಣವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯು ಪ್ರಮುಖವಾಗಿ ಈ ಎರಡು ಪ್ರಾಧಿಕಾರಗಳಿಂದಲೇ ಪ್ರಬಲವಾಗಿದೆ. ಈ ಎರಡನ್ನೂ ಹೊರತುಪಡಿಸಿದರೆ, ಖಾತೆಯು ಕೇವಲ ಕಾರ್ಪೊರೇಷನ್ ವಿಷಯಗಳಿಗೆ ಸೀಮಿತವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದೆ. ಆದರೂ ಈ ರೀತಿಯ ಅಪೂರ್ಣ ಖಾತೆ ನೀಡುವ ಮೂಲಕ ತಾರತಮ್ಯ ಮಾಡುತ್ತಿರುವುದು ಏಕೆ ಎಂದು ಅವರು ಸುರ್ಜೇವಾಲ ಬಳಿ ಪ್ರಶ್ನಿಸಿದ್ದಾರೆ ಎಂಬುದು ತಿಳಿದುಬಂದಿದೆ. ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದವರಿಗೆ ಬಿಡಿಎ ಮತ್ತು ಬಿಎಂಆರ್‌ಡಿಎ ಎರಡನ್ನೂ ಜವಾಬ್ದಾರಿಯನ್ನಾಗಿ ನೀಡಲಾಗುತ್ತಿತ್ತು. ಈಗ ಈ ಪದ್ಧತಿಯನ್ನು ಏಕೆ ಬದಲಾಯಿಸಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ತನಗೂ ಈ ಎರಡೂ ಪ್ರಾಧಿಕಾರಗಳ ಜವಾಬ್ದಾರಿಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸ್ಪಷ್ಟತೆ ಸಿಗುವ ವರೆಗೂ ಅಧಿಕಾರ ವಹಿಸಲ್ಲ: ಕೃಷ್ಣಭೈರೇಗೌಡ

ಈ ವಿಷಯದ ಬಗ್ಗೆ ಹೈಕಮಾಂಡ್, ವಿಶೇಷವಾಗಿ ಸುರ್ಜೇವಾಲ ಅಥವಾ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಂದ ಸ್ಪಷ್ಟ ಸಂದೇಶ ಬರುವವರೆಗೂ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳದಿರಲು ಕೃಷ್ಣಭೈರೇಗೌಡ ನಿರ್ಧರಿಸಿದ್ದಾರೆ. ಈ ಹಿಂದೆ ಇದೇ ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕು ಎಂಬುದಾಗಿ ರಾಮಲಿಂಗಾ ರೆಡ್ಡಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಅಸಲಿ ವಿಷಯವೆಂದರೆ ಕೃಷ್ಣಭೈರೇಗೌಡರು ಸಹ ಈ ಖಾತೆಯ ಬಗ್ಗೆ ಪೂರ್ಣ ಪ್ರಮಾಣದ ಸಮಾಧಾನ ಹೊಂದಿಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜೋರಾಯ್ತು ಸಚಿವ ಸ್ಥಾನಕ್ಕಾಗಿ ಸರ್ಕಸ್: 20 ಸ್ಥಾನಗಳಿಗಾಗಿ 60ಕ್ಕೂ ಹೆಚ್ಚು ಶಾಸಕರಿಂದ ಮಹಾ ಲಾಬಿ

ಹೈಕಮಾಂಡ್ ಈ ಖಾತೆ ಖ್ಯಾತೆಯನ್ನು ಹೇಗೆ ಬಗೆಹರಿಸುತ್ತದೆ ಮತ್ತು ಕೃಷ್ಣಭೈರೇಗೌಡರ ಬೇಡಿಕೆಯನ್ನು ಈಡೇರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ, ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕರುಪ್ಪು’ ಒಟಿಟಿ ಎಂಟ್ರಿಗೆ ಸಿಕ್ತು ದಿನಾಂಕ; ಡೇಟ್ ರಿವೀಲ್ – Kannada News

ಕಾಲಿವುಡ್ ಸ್ಟಾರ್ ನಟ ಸೂರ್ಯ ಅವರ ಬಹುನಿರೀಕ್ಷಿತ ‘ಕರುಪ್ಪು’ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ದೀರ್ಘ ದಿನಗಳ ನಂತರ ಅವರಿಗೆ ಒಂದು ಅದ್ಭುತ ಸೂಪರ್ ಹಿಟ್ ತಂದುಕೊಟ್ಟಿದೆ. ಕಳೆದ ಮೇ 15 ರಂದು ತಮಿಳಿನಲ್ಲಿ ‘ಕರುಪ್ಪು’ ಹಾಗೂ ತೆಲುಗಿನಲ್ಲಿ ‘ವೀರಭದ್ರಡು’ ಹೆಸರಿನಲ್ಲಿ ಬಿಡುಗಡೆಯಾದ ಈ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ. ಇದು ನಟ ಸೂರ್ಯ ಅವರ ಇಡೀ ಚಿತ್ರಜೀವನದಲ್ಲೇ ಅತಿ ದೊಡ್ಡ ಹಿಟ್ ಸಿನಿಮಾವಾಗಿ ಹೊರಹೊಮ್ಮಿದ್ದು, ಬರೋಬ್ಬರಿ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಬಿಡುಗಡೆಯಾಗಿ ಮೂರು ವಾರಗಳು ಕಳೆದಿದ್ದರೂ ಸಹ ತಮಿಳುನಾಡಿನ ಪ್ರಮುಖ ಚಿತ್ರಮಂದಿರಗಳಲ್ಲಿ ಇಂದಿಗೂ ಉತ್ತಮ ಕಲೆಕ್ಷನ್‌ನೊಂದಿಗೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಈ ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಿಸಲು ಡಿಜಿಟಲ್ ಪ್ರೇಕ್ಷಕರು ಮತ್ತು ಸೂರ್ಯ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇದೀಗ ಅವರ ಕಾಯುವಿಕೆಗೆ ತೆರೆ ಬಿದ್ದಿದ್ದು, ‘ಕರುಪ್ಪು’ ಚಿತ್ರದ ಒಟಿಟಿ ಸ್ಟ್ರೀಮಿಂಗ್ ದಿನಾಂಕ ಅಧಿಕೃತವಾಗಿ ಹೊರಬಿದ್ದಿದೆ. ವಿಶ್ವದ ಜನಪ್ರಿಯ ಒಟಿಟಿ ಸಂಸ್ಥೆಯಾದ ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video) ಈ ಚಿತ್ರದ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ. ಇತ್ತೀಚೆಗೆ ತನ್ನ ಆ್ಯಪ್‌ನಲ್ಲಿ ಈ ಬಗ್ಗೆ ಅಪ್ಡೇಟ್ ನೀಡಿರುವ ಅಮೆಜಾನ್ ಪ್ರೈಮ್, ಜೂನ್ 12 ರಿಂದ ಚಿತ್ರವನ್ನು ಪ್ರಸಾರ ಮಾಡುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.

ಚಿತ್ರಮಂದಿರಗಳಲ್ಲಿ ಕೇವಲ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರ ಬಿಡುಗಡೆಯಾಗಿದ್ದ ಈ ಚಿತ್ರ, ಒಟಿಟಿ ವೀಕ್ಷಕರಿಗೆ ಮತ್ತೊಂದು ದೊಡ್ಡ ಬಿಗ್ ಸರ್ಪ್ರೈಸ್ ನೀಡುತ್ತಿದೆ. ಚಿತ್ರಮಂದಿರಕ್ಕೆ ಬರಲು ಸಾಧ್ಯವಾಗದ ಬೇರೆ ಭಾಷೆಯ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ, ಒಟಿಟಿಯಲ್ಲಿ ತಮಿಳು ಮತ್ತು ತೆಲುಗು ಭಾಷೆಗಳ ಜೊತೆಗೆ ಹಿಂದಿಯಲ್ಲೂ ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ ಎಂದು ವರದಿಯಾಗಿದೆ. ಹೀಗಾಗಿ ಜೂನ್ 12 ರಿಂದ ಮೂರೂ ಭಾಷೆಗಳ ಪ್ರೇಕ್ಷಕರು ಒಟ್ಟಿಗೆ ಮನೆಯಲ್ಲೇ ಕುಳಿತು ಈ ಅದ್ಭುತ ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಕಣ್ಣುಂಬಿಕೊಳ್ಳಬಹುದಾಗಿದೆ.

ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅತ್ಯಂತ ಯಶಸ್ವಿ ನಿರ್ದೇಶಕ ಆರ್.ಜೆ. ಬಾಲಾಜಿ ಈ ‘ಕರುಪ್ಪು’ ಚಿತ್ರವನ್ನು ಅದ್ಧೂರಿಯಾಗಿ ನಿರ್ದೇಶಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಈ ಚಿತ್ರದಲ್ಲಿ ಸೂರ್ಯ ಅವರಿಗೆ ನಾಯಕಿಯಾಗಿ ಜೋಡಿಯಾಗಿದ್ದು, ಸ್ವತಃ ನಿರ್ದೇಶಕ ಆರ್.ಜೆ. ಬಾಲಾಜಿ ಅವರೇ ಚಿತ್ರದಲ್ಲಿ ಮುಖ್ಯ ಖಳನಾಯಕನ ಪಾತ್ರದಲ್ಲಿ ಅಬ್ಬರಿಸಿದ್ದಾರೆ.

ಇದನ್ನೂ ಓದಿ: 300 ಕೋಟಿ ಗಳಿಸಿದ ಮೇಲೆ ‘ಕರುಪ್ಪು’ ವಿವಾದ; ಸೂರ್ಯಗೆ ಅವಮಾನ

ಇವರ ಜೊತೆಗೆ ಇಂದ್ರನ್ಸ್, ಅನಘಾ, ಮನ್ಸೂರ್ ಅಲಿ ಖಾನ್, ಜಾರ್ಜ್ ಮರಿಯನ್ ಹಾಗೂ ಆಡುಕಲಂ ನರೇನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಅವರ ಹಿನ್ನೆಲೆ ಸಂಗೀತ ಚಿತ್ರದ ತೂಕವನ್ನು ಹೆಚ್ಚಿಸಿದೆ. ಒಂದು ವೇಳೆ ನೀವು ಈ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡಿದ್ದರೆ ಅಥವಾ ಮತ್ತೊಮ್ಮೆ ನೋಡಲು ಬಯಸಿದ್ದರೆ, ಇನ್ನು ಕೇವಲ ಮೂರೇ ದಿನ ಕಾಯಬೇಕಾಗಿದ್ದು, ಅಮೆಜಾನ್ ಪ್ರೈಮ್‌ನಲ್ಲಿ ನೋಡಿ ಆನಂದಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಭೋಪಾಲ್: ಮಹಾಮಾನ ರೈಲಿನಲ್ಲಿ ಸುಳ್ಳು ಅಪವಾದ ಹೊರಿಸಿ ಪ್ರಯಾಣಿಕನನ್ನು ರೈಲಿನಿಂದ ಹಾರುವಂತೆ ಮಾಡಿದ ಜನ – Kannada News

ರೈಲಿನಿಂದ ಹಾರಲು ಹೊರಟಿದ್ದ ವ್ಯಕ್ತಿ Image Credit source: Free Press Journal

ಭೋಪಾಲ್, ಜೂನ್ 08: ಮಹಾಮಾನ ಎಕ್ಸ್​ಪ್ರೆಸ್​ ರೈಲಿ(Train)ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಸುಳ್ಳು ಅಪವಾದ ಹೊರಿಸಿ ಮಾನ ಕಳೆದು ರೈಲಿನಿಂದ ಹಾರುವಂತೆ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ. ರೈಲಿನ ಫುಟ್‌ಬೋರ್ಡ್‌ಗೆ ವ್ಯಕ್ತಿಯೊಬ್ಬ ನೇತಾಡಿಕೊಂಡು ಕಣ್ಣೀರಿಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ತನಿಖಾ ಸಂಸ್ಥೆಗಳು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ರೈಲ್ವೆ ರಕ್ಷಣಾ ಪಡೆ (RPF) ಮತ್ತು ಸ್ಥಳೀಯ ರೈಲ್ವೆ ಪೊಲೀಸರು ಜಂಟಿಯಾಗಿ ಸತ್ಯಾಸತ್ಯತೆ ತಿಳಿಯಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಈ ತ್ವರಿತ ಕಾನೂನು ಕ್ರಮವು ರೈಲ್ವೆ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಆಡಳಿತ ಮಂಡಳಿಯ ಬದ್ಧತೆಯನ್ನು ತೋರಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ರಘುವಂಶಿ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಚಲಿಸುವ ರೈಲಿನ ಬಾಗಿಲನ್ನು ಹಿಡಿದು ನೇತಾಡುತ್ತಿರುವುದು ಕಂಡುಬಂದಿದೆ. ರೈಲಿನ ಒಳಗಿದ್ದ ಪ್ರಯಾಣಿಕರು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ, ಆತ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅತ್ಯಂತ ಭಾವುಕನಾಗಿ ಕಣ್ಣೀರು ಹಾಕಿದ್ದಾರೆ.

ನನ್ನ ಮಗಳ ಮೇಲೆ ಆಣೆ ಇಡುತ್ತೇನೆ, ನಾನು ಏನೂ ತಪ್ಪು ಮಾಡಿಲ್ಲ. ನನ್ನ ತಂದೆಯ ಮೇಲೂ ಆಣೆ ಇಡುತ್ತೇನೆ. ನನ್ನ ಪಕ್ಕದಲ್ಲೇ ಕುಳಿತಿದ್ದ ಕೆಲವರು ನನ್ನ ವಿರುದ್ಧ ಸಂಪೂರ್ಣ ಸುಳ್ಳು ಆರೋಪ ಹೊರಿಸಿದ್ದಾರೆ. ತಪ್ಪಿತಸ್ಥನಾದವನು ಮಾತ್ರ ಹೆದರುತ್ತಾನೆ, ನಾನು ಯಾವುದೇ ತಪ್ಪು ಮಾಡದಿದ್ದರಿಂದ ನನಗೆ ಭಯವಿಲ್ಲ.

ಮತ್ತಷ್ಟು ಓದಿ: ರೈಲಿನ ಬೋರ್ಡ್​ ಬರೆಸಲು ಕೂಡ ಪಾಕಿಸ್ತಾನದ ಬಳಿ ಹಣವಿಲ್ಲ, ಸೀಮೆ ಸುಣ್ಣದಲ್ಲಿ ಮಾರ್ಗದ ಹೆಸರು ಬರೆದ ರೈಲ್ವೆ ಇಲಾಖೆ

ಸುರಕ್ಷಿತವಾಗಿ ಬದುಕುಳಿದ ಪ್ರಯಾಣಿಕ
ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಬಳಕೆದಾರರು ರೈಲಿನೊಳಗೆ ಪ್ರಯಾಣಿಕರ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಕೆಳಗೆ ಜಿಗಿಯುವಂತೆ ಒತ್ತಾಯಿಸಿತು ಎಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಪ್ರಾಥಮಿಕ ವರದಿಗಳ ಪ್ರಕಾರ, ಬಲಿಪಶು ಈ ಭೀಕರ ಘಟನೆಯಿಂದ ಸುರಕ್ಷಿತವಾಗಿ ಬದುಕುಳಿದಿದ್ದಾನೆ ಎಂಬುದು ಅತ್ಯಂತ ಸಮಾಧಾನಕರ ಸಂಗತಿಯಾಗಿದೆ. ರೈಲಿನೊಳಗೆ ನಡೆದ ನಿಖರವಾದ ಘರ್ಷಣೆ ಮತ್ತು ಜಗಳಕ್ಕೆ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವಿಡಿಯೋ

ಆರ್‌ಪಿಎಫ್‌ನಿಂದ ಸಮಗ್ರ ತನಿಖೆ ಮುಂದುವರಿಕೆ
ಘಟನೆಯ ವೀಡಿಯೊ ಮುನ್ನೆಲೆಗೆ ಬರುತ್ತಿದ್ದಂತೆ ಅಲರ್ಟ್ ಆಗಿರುವ ರೈಲ್ವೆ ಇಲಾಖೆಯು ಇಡೀ ಪ್ರಕರಣದ ಆಳವಾದ ತನಿಖೆಗೆ ಆದೇಶಿಸಿದೆ.

ಆರೋಪಿಗಳ ಪತ್ತೆಗೆ ಬಲೆ: ರೈಲಿನ ಬೋಗಿಯಲ್ಲಿದ್ದ ಇತರ ಪ್ರಯಾಣಿಕರನ್ನು ಸಂಪರ್ಕಿಸಲಾಗುತ್ತಿದ್ದು, ಆ ಸಮಯದಲ್ಲಿ ನಡೆದ ಸಂಭಾಷಣೆ ಹಾಗೂ ಗಲಾಟೆಯ ಹಿಂದಿನ ವ್ಯಕ್ತಿಗಳನ್ನು ಗುರುತಿಸಲು ಪೊಲೀಸರು ಮುಂದಾಗಿದ್ದಾರೆ.

ಭದ್ರತೆ ಹೆಚ್ಚಳ: ರೈಲ್ವೆ ಆಡಳಿತ ಮಂಡಳಿಯು ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮುಂಬರುವ ದಿನಗಳಲ್ಲಿ ದೂರದ ಪ್ರಯಾಣದ ರೈಲುಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ಜಾಗೃತಿಯನ್ನು ಮತ್ತಷ್ಟು ಹೆಚ್ಚಿಸುವುದಾಗಿ ಭರವಸೆ ನೀಡಿದೆ. ಪೊಲೀಸರ ತನಿಖೆ ಪೂರ್ಣಗೊಂಡ ತಕ್ಷಣ ಅಧಿಕೃತ ವರದಿ ಬಿಡುಗಡೆಯಾಗಲಿದ್ದು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Viral: ಸಂಬಳ 1.7 ಲಕ್ಷ ರೂ ಇದ್ರೂ, ಉಳಿತಾಯ 2,520 ರೂ; ನೆಟ್ಟಿಗರಲ್ಲಿ ಸಲಹೆ ಕೋರಿದ ದಂಪತಿ – Kannada News

ಈಗಿನ ದುಬಾರಿ ದುನಿಯಾದಲ್ಲಿ ನಗರದಲ್ಲಿ ಬದುಕು ಕಷ್ಟಕರ. ದುಡಿದ ಹಣವನ್ನೆಲ್ಲವೂ ಮನೆ ಖರ್ಚಿಗೆ ಸಾಕಾಗುತ್ತದೆ. ದಂಪತಿಯಿಬ್ಬರೂ ಹೊರಗೆ ಹೋಗಿ ದುಡಿಯುತ್ತಿದ್ದರೂ ಹಣಕಾಸಿನ ನಿರ್ವಹಣೆ (Financial management) ಕಷ್ಟಕರವಾಗಿರುತ್ತದೆ. ಈ ದಂಪತಿಯದ್ದು ಅದೇ ಪರಿಸ್ಥಿತಿ. 30ರ ಹರೆಯದ ದಂಪತಿಯ ಒಟ್ಟು ಮಾಸಿಕ ಆದಾಯ 1.7 ಲಕ್ಷ ರೂ ಆಗಿದ್ರೂ, ಪ್ರತಿ ತಿಂಗಳ ಕೊನೆಯಲ್ಲಿ ಕೇವಲ 2,520ರೂ ಉಳಿತಾಯ ಮಾಡುತ್ತಾರಂತೆ. ಆರ್ಥಿಕ ಸಲಹೆ ಕೋರಿ ಮಾಡಿದ ಪೋಸ್ಟ್ ರೆಡ್ಡಿಟ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

personalfinanceindia ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. 1.7 ಲಕ್ಷ ರೂಪಾಯಿ ಗಳಿಕೆ, ಜೀವನ ವೆಚ್ಚದಿಂದ  ಮಾನಸಿಕವಾಗಿ ದಣಿದಿದ್ದೇವೆ, ಸಲಹೆಗಳು ಬೇಕು” ಎಂಬ ಶೀರ್ಷಿಕೆಯ ಪೋಸ್ಟ್‌ನಲ್ಲಿ ದಂಪತಿ ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

Posts from the personalfinanceindia
community on Reddit

ನಮಗೆ 30 ವರ್ಷ ವಯಸ್ಸು, 2 ವರ್ಷಗಳ ಹಿಂದೆ ವಿವಾಹವಾದೆವು, ನಮ್ಮ ಹಣಕಾಸಿನ ಬಗ್ಗೆ ನಿಗಾ ಇಡಲು ಪ್ರಾರಂಭಿಸಿದೆವು. ಶೀಘ್ರದಲ್ಲೇ ನಮಗೆ ರಿಯಾಲಿಟಿ ಚೆಕ್ ಸಿಕ್ಕಿತು. ಇದನ್ನು ಸರಿಪಡಿಸಲು ನಾನು ಎಲ್ಲಿಂದ ಪ್ರಾರಂಭಿಸಬೇಕು? ಮನೆಯನ್ನು ಹೇಗೆ ಯೋಜಿಸುವುದು? ಮಕ್ಕಳಿಗಾಗಿ ಯಾವಾಗ ಯೋಜಿಸಬೇಕು? ತುರ್ತು ಪರಿಸ್ಥಿತಿಗಳಿಗೆ ಹೇಗೆ ಉಳಿಸುವುದು? ನಿವೃತ್ತಿಗಾಗಿ ಯಾವಾಗ ಉಳಿಸುವುದು? 2 ವರ್ಷಗಳ ನಂತರ ನಮ್ಮ ಹಣಕಾಸು ಉತ್ತಮವಾಗಿರುತ್ತದೆ ಎಂದುಕೊಂಡೆವು ಆದರೆ ಸಮಯ ಮೀರುತ್ತಿದೆ ಎಂದೆನಿಸುತ್ತಿದೆ ಎಂದಿದ್ದಾರೆ.

ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ನಾನು ತಿಂಗಳಿಗೆ 1.02 ಲಕ್ಷ ಗಳಿಸಿದರೆ ನನ್ನ ಪತ್ನಿ ಮಾಸಿಕ 68,000 ರೂ ಗಳಿಸುತ್ತಾಳೆ. ನಮ್ಮಿಬ್ಬರ ಒಟ್ಟು ಆದಾಯ 1.7 ಲಕ್ಷ ರೂ. ನಮ್ಮ ಈ ಆದಾಯದ ಬಹುಪಾಲು ಭಾಗ ಸಾಲ ಮರುಪಾವತಿಗೆ ಹೋಗುತ್ತದೆ. ಮಾಸಿಕ ಇಎಂಐ ಮೊತ್ತ 85,980 ರೂ, ಇದರಲ್ಲಿ 70,154 ರೂ ವೈಯಕ್ತಿಕ ಸಾಲ ಮರುಪಾವತಿ, 3,000 ರೂ ಶಿಕ್ಷಣ ಸಾಲ, 12,000 ರೂ ಬೈಕ್ ಸಾಲ ಮತ್ತು 826 ರೂ ಫೋನ್ ಇಎಂಐ ಸೇರಿವೆ ಎಂದು ಹೇಳಿದ್ದಾರೆ.

ಬಾಡಿಗೆ, ನಿರ್ವಹಣೆ, ದಿನಸಿ, ಪ್ರಯಾಣ, ವೈದ್ಯಕೀಯ ವೆಚ್ಚಗಳು ಮತ್ತು ಯುಟಿಲಿಟಿ ಬಿಲ್‌ಗಳನ್ನು ಒಳಗೊಂಡಂತೆ ಅವರ ಸ್ಥಿರ ಮಾಸಿಕ ವೆಚ್ಚವು 53,500 ರೂ ಇರುತ್ತದೆ. ವೈಯಕ್ತಿಕ ಖರ್ಚು, ಔಟಿಂಗ್ ಗೆ ಹಾಗೂ ಕುಟುಂಬ ಸಂಬಂಧಿತ ತುರ್ತು ಪರಿಸ್ಥಿತಿಗಳು ಸೇರಿದಂತೆ ವೇರಿಯಬಲ್ ವೆಚ್ಚಗಳಿಗಾಗಿ 28,000 ರೂ ಆಗುತ್ತದೆ. ಎಲ್ಲಾ ಖರ್ಚುಗಳನ್ನು ಕಳೆದು ಪ್ರತಿ ತಿಂಗಳು ಕೇವಲ 2,520 ರೂ ಮಾತ್ರ ಉಳಿಯುತ್ತದೆ ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಸಂಬಳ ಪಡೆಯುತ್ತಿದ್ದ ಕೈಗಳಿಗಿಂತ ಖಾಲಿ ಕೈಗಳು ಕಲಿಸಿದ್ದೇ ಹೆಚ್ಚು; ಜಾಬ್ ರಿಸೈನ್ ಮಾಡಿದ ವ್ಯಕ್ತಿ ಹೀಗೆಂದಿದ್ದೇಕೆ?

ಈ ರೆಡ್ಡಿಟ್ ಪೋಸ್ಟ್ ಅಧಿಕ ವೀಕ್ಷಣೆ ಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಕಾಮೆಂಟ್ ಮಾಡಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, ದುಬಾರಿ ಖರ್ಚು ಮಾಡುವುದು ಸಮಸ್ಯೆಯಲ್ಲ. ನಿಮ್ಮ ಸಾಲಗಳು ಇಲ್ಲಿ ನಿಜವಾದ ಖಳನಾಯಕರು. ನೀವು ಕನಿಷ್ಠ ವೈಯಕ್ತಿಕ ಸಾಲವನ್ನು ತೀರಿಸುವವರೆಗೆ ನೀವು ಹೆಚ್ಚು ಉಳಿಸಲು ಸಾಧ್ಯವಿಲ್ಲ. ನಿಮ್ಮ ಬೈಕ್ ಸಾಲ ಮುಗಿಯುತ್ತದೆ. 4 ತಿಂಗಳು ಕಾಯಲು ನಾನು ಸೂಚಿಸುತ್ತೇನೆ. ತದನಂತರ 12 ಸಾವಿರ ರೂ. ನಿಮ್ಮ ವೈಯಕ್ತಿಕ ಸಾಲವನ್ನು ಬೇಗನೆ ಪೂರ್ವಪಾವತಿ ಮಾಡಿ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ದುಡಿಮೆ ಹೆಚ್ಚಾದ್ದಂತೆ ಕಮಿಟ್ ಮೆಂಟ್ ಹೆಚ್ಚು. ಹೀಗಾಗಿ ಅನಗತ್ಯಕ್ಕಿಂತ ಹೆಚ್ಚು ಖರ್ಚುಗಳು ಹಾಗೂ ಕಮಿಟ್ ಮೆಂಟ್ ಗಳು ಬೇಡ ಎಂದಿದ್ದಾರೆ. ಮತ್ತೊಬ್ಬರು, ಬೆಲೆಗಳು ಏರಿಕೆ, ಲಾಗಾಮು ಇಲ್ಲದ ಆಸೆಗಳೇ ಉಳಿತಾಯಕ್ಕೆ ತಡೆಯಾಗಿವೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:44 am, Mon, 8 June 26

Source link

‘ಅಧಿಕಾರವೊಂದೇ ಜೆಡಿಎಸ್ ಮಂತ್ರ’: ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ತಪ್ಪಿದ ಬೆನ್ನಲ್ಲೇ ಹೆಚ್​ಡಿಕೆ ವಿರುದ್ಧ ಸುರ್ಜೇವಾಲ ವ್ಯಂಗ್ಯ – Kannada News

ಹೆಚ್​ಡಿ ಕುಮಾರಸ್ವಾಮಿ, ಹೆಚ್​ಡಿ ದೇವೇಗೌಡ ಹಾಗೂ ರಣದೀಪ್ ಸುರ್ಜೇವಾಲ (ಪಿಟಿಐ ಚಿತ್ರ)Image Credit source: PTI

ಬೆಂಗಳೂರು, ಜೂನ್ 8: ರಾಜ್ಯಸಭೆ ಚುನಾವಣೆಗೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರಿಗೆ (HD Deve Goda) ಎನ್​ಡಿಎ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ (Congress) ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಕೇವಲ ಮಂತ್ರಿ ಕುರ್ಚಿಗೆ ಅಂಟಿಕೊಳ್ಳಲು ಕುಮಾರಸ್ವಾಮಿ ಅವರು ತಮ್ಮ ತಂದೆ, ಮಾಜಿ ಪ್ರಧಾನಿಗಳಿಗೆ ಆಗುತ್ತಿರುವ ನಿರಂತರ ಅಪಮಾನಗಳನ್ನು ಸಹಿಸಿಕೊಳ್ಳುತ್ತಿದ್ದಾರೆ’ಎಂದು ಸುರ್ಜೇವಾಲ ಲೇವಡಿ ಮಾಡಿದ್ದಾರೆ.

ಮುಖ್ಯಾಂಶಗಳು

  • ದೇವೇಗೌಡರಿಗೆ ಟಿಕೆಟ್ ನಿರಾಕರಣೆಗೆ ಕಾಂಗ್ರೆಸ್ ಕಿಡಿ
  • ಕುರ್ಚಿ ಉಳಿಸಿಕೊಳ್ಳಲು ಹೆಚ್‌ಡಿಕೆ ಪರದಾಟ: ವ್ಯಂಗ್ಯ.
  • ಸೋನಿಯಾ ಗಾಂಧಿ ತೋರಿದ್ದ ಗೌರವ ನೆನೆದ ಸುರ್ಜೇವಾಲ.

ಮಾಜಿ ಪ್ರಧಾನಿಗಿಂತ ‘ಕಟ್ಟಡ ನಿರ್ಮಾಣ’ ಉಸ್ತುವಾರಿಯೇ ಬಿಜೆಪಿಗೆ ದೊಡ್ಡವರಾದರೇ: ಸುರ್ಜೇವಾಲ ಪ್ರಶ್ನೆ

ಎಕ್ಸ್ ಪೋಸ್ಟ್‌ನಲ್ಲಿ ತೀಕ್ಷ್ಣ ಪದಗಳನ್ನು ಬಳಸಿರುವ ರಣದೀಪ್ ಸಿಂಗ್ ಸುರ್ಜೇವಾಲ, ‘ಭಾನುವಾರ ಮಧ್ಯರಾತ್ರಿ ಬಿಜೆಪಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರಿಗೆ ರಾಜ್ಯಸಭಾ ನಾಮನಿರ್ದೇಶನವನ್ನು ನಿರಾಕರಿಸಿದೆ. ಮಾಜಿ ಪ್ರಧಾನಿಗಿಂತ ಬಿಜೆಪಿಯ ಜಿಲ್ಲಾ ಮಟ್ಟದ ಕಟ್ಟಡ ನಿರ್ಮಾಣ ಉಸ್ತುವಾರಿಯಾಗಿದ್ದ ರಾಜ್ಯ ಉಪಾಧ್ಯಕ್ಷ ಎಂ. ನಾಗರಾಜ ಅವರಿಗೆ ಮಣೆ ಹಾಕಲಾಗಿದೆ. ಯಾವುದೇ ಬೆಲೆ ತೆತ್ತಾದರೂ ಸಚಿವ ಸ್ಥಾನ ಉಳಿಸಿಕೊಳ್ಳಬೇಕು ಎಂಬ ಒಂದೇ ಕಾರಣಕ್ಕೆ ಬಿಜೆಪಿ ನಾಯಕರು ಜೆಡಿಎಸ್‌ಗೆ ಮಾಡುತ್ತಿರುವ ನಿರಂತರ ಅವಮಾನಗಳನ್ನು ಕುಮಾರಸ್ವಾಮಿ ಸಹಿಸಿಕೊಳ್ಳುತ್ತಿರುವುದು ಅತ್ಯಂತ ಆಶ್ಚರ್ಯಕರ’ ಎಂದು ಟೀಕಿಸಿದ್ದಾರೆ.

ಇತಿಹಾಸ ನೆನಪಿಸಿದ ಕಾಂಗ್ರೆಸ್ ಸುರ್ಜೇವಾಲ

ಜೆಡಿಎಸ್‌ನ ಹಳೆಯ ನಿಲುವುಗಳು ಹಾಗೂ ಇತಿಹಾಸವನ್ನು ನೆನಪಿಸಿರುವ ಸುರ್ಜೇವಾಲ ಐದು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜು ಅವರು ದೇವೇಗೌಡರನ್ನು ಸೋಲಿಸಿದ್ದರು. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಕರ್ನಾಟಕದ ಮಾಜಿ ಪ್ರಧಾನಿ ಎಂಬ ಗೌರವ ನೀಡಿ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ದೇವೇಗೌಡರನ್ನು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಲು ಬೆಂಬಲ ನೀಡಿತ್ತು ಎಂದು ಸುರ್ಜೇವಾಲ ನೆನಪಿಸಿದ್ದಾರೆ.

ಸುರ್ಜೇವಾಲ ಎಕ್ಸ್ ಸಂದೇಶ

ಕುಮಾರಸ್ವಾಮಿ ಏನಾದರೂ ಬಿಜೆಪಿಯೊಂದಿಗೆ ಕೈಜೋಡಿಸಿದರೆ ನಾನು ಅವರನ್ನು ನನ್ನ ಮಗನೆಂದು ಒಪ್ಪುವುದಿಲ್ಲ, ತ್ಯಜಿಸುತ್ತೇನೆ ಎಂದು ಸ್ವತಃ ದೇವೇಗೌಡರೇ ಈ ಹಿಂದೆ ಸಾರ್ವಜನಿಕವಾಗಿ ಹೇಳಿದ್ದರು. ಈ ಎಲ್ಲಾ ಹೇಳಿಕೆಗಳನ್ನು ಗಾಳಿಗೆ ತೂರಿ ಅಕ್ಟೋಬರ್ 2023ರಲ್ಲಿ ಜೆಡಿಎಸ್ ಮತ್ತು ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮೋದಿ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಸಚಿವರಾದರು ಎಂಬುದನ್ನು ಸುರ್ಜೇವಾಲ ನೆನಪಿಸಿದ್ದಾರೆ.

ಇದನ್ನೂ ಓದಿ: ಹೆಚ್​ಡಿ ದೇವೇಗೌಡಗೆ ತಪ್ಪಿದ ಎನ್​ಡಿಎ ರಾಜ್ಯಸಭೆ ಟಿಕೆಟ್: ಪ್ರೊ ಎಂ ನಾಗರಾಜಗೆ ಬಿಜೆಪಿ ಮಣೆ

ಇದೀಗ 2026 ರ ಜೂನ್ 7 ರಂದು ಅದೇ ಬಿಜೆಪಿ ಮಾಜಿ ಪ್ರಧಾನಿಗೆ ರಾಜ್ಯಸಭಾ ಟಿಕೆಟ್ ನಿರಾಕರಿಸಿ ಪಕ್ಷದ ಸಾಮಾನ್ಯ ನಾಯಕನಿಗೆ ಮಣೆ ಹಾಕಿದೆ. ಯಾವ ಬೆಲೆ ತೆತ್ತಾದರೂ ಸರಿ, ಯಾವುದೇ ಪರಿಸ್ಥಿತಿಯಲ್ಲಾದರೂ ಸರಿ, ಅಧಿಕಾರ ಹಿಡಿಯುವುದು ಮತ್ತು ಕುರ್ಚಿ ಉಳಿಸಿಕೊಳ್ಳುವುದು ಮಾತ್ರವೇ ಸದ್ಯ ಕರ್ನಾಟಕದಲ್ಲಿ ಜೆಡಿಎಸ್‌ನ ಏಕೈಕ ಮೂಲಮಂತ್ರ ಮತ್ತು ಸಿದ್ಧಾಂತವಾಗಿದೆ ಎಂಬುದು ಈ ಬೆಳವಣಿಗೆಯಿಂದ ಸಾಬೀತಾಗಿದೆ ಎಂದು ಸುರ್ಜೇವಾಲ ಕುಟುಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ಮುಂಭಾಗ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ – Kannada News

ದೇವನಹಳ್ಳಿ, ಜೂನ್ 8: ಕೋಲಾರ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಅತ್ತಿವಟ್ಟ ಗೇಟ್ ಬಳಿ ರಸ್ತೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಭಾರಿ ಪ್ರಮಾಣದ ಅನಾಹುತವೊಂದು ತಪ್ಪಿದೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಟ್ರಕ್ ಚಾಲಕನ ಬೇಜವಾಬ್ದಾರಿತನದಿಂದಾಗಿ ಈ ಅಪಘಾತ ಸಂಭವಿಸಿದೆ. ಕೋಲಾರ ಕಡೆಯಿಂದ ಬೆಂಗಳೂರು ಕಡೆಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ ಅತ್ತಿವಟ್ಟ ಗೇಟ್ ಬಳಿ ಬರುತ್ತಿದ್ದಂತೆಯೇ, ಹೆದ್ದಾರಿಯ ಎಡಬದಿಯಲ್ಲಿ ಚಲಿಸುತ್ತಿದ್ದ ಟ್ರಕ್ ಚಾಲಕನೊಬ್ಬ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬಲಬದಿಗೆ ಯೂಟರ್ನ್ (U-Turn) ತೆಗೆದುಕೊಳ್ಳಲು ಮುಂದಾಗಿದ್ದಾನೆ. ಟ್ರಕ್‌ನ ಈ ದಿಢೀರ್ ನಡೆಯಿಂದಾಗಿ ನಿಯಂತ್ರಣ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಬಸ್ ನೇರವಾಗಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಸಾರಿಗೆ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತದ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹೊಸಕೋಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಸೆಟ್‌ನಿಂದ ಬಿಗ್ ಅಪ್ಡೇಟ್: ಗೀತು ಮೋಹನ್‌ದಾಸ್ ಹುಟ್ಟುಹಬ್ಬಕ್ಕೆ ಮೇಕಿಂಗ್ ಝಲಕ್ ರಿಲೀಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಪಂಚದಾದ್ಯಂತ ಭಾರಿ ಕುತೂಹಲ ಮೂಡಿಸಿದೆ. ಚಿತ್ರತಂಡದಿಂದ ಇಂದು ಪ್ರೇಕ್ಷಕರಿಗೆ ಬಿಗ್ ಸರ್ಪ್ರೈಸ್ ಸಿಕ್ಕಿದೆ. ಚಿತ್ರದ ನಿರ್ದೇಶಕಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಗೀತು ಮೋಹನ್‌ದಾಸ್ ಅವರ ಜನ್ಮದಿನದ ಅಂಗವಾಗಿ, ಚಿತ್ರದ ಮೇಕಿಂಗ್ ಝಲಕ್ ಒಳಗೊಂಡಿರುವ ವಿಶೇಷ ಬಿಟಿಎಸ್ ವಿಡಿಯೋ ಒಂದನ್ನು ಚಿತ್ರತಂಡ ಹಂಚಿಕೊಂಡಿದೆ.

ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಸಿನಿಮಾದ ಶೂಟಿಂಗ್ ಸೆಟ್‌ ಹಾಗೂ ಶೂಟಿಂಗ್ ಯಾವ ರೀತಿ ಇತ್ತು ಎಂಬುದನ್ನು ತೋರಿಸಲಾಗಿದೆ. ಈ ದೃಶ್ಯಾವಳಿಗಳು ಜನರಲ್ಲಿ ರೋಮಾಂಚನ ಉಂಟುಮಾಡಿದೆ.

ಸುಮಾರು ಒಂದು ನಿಮಿಷದ ಈ ಬಿಟಿಎಸ್ ವಿಡಿಯೋದಲ್ಲಿ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಇಡೀ ಚಿತ್ರತಂಡವನ್ನು ಮುನ್ನಡೆಸುತ್ತಿರುವುದು ಹೈಲೈಟ್ ಆಗಿದೆ. ಮೈಕ್ರೋಫೋನ್ ಹಿಡಿದು ಸೆಟ್‌ನಲ್ಲಿ ಕಲಾವಿದರಿಗೆ ಆ್ಯಕ್ಷನ್ ಕಟ್‌ ಹೇಳುತ್ತಾ, ಪ್ರತಿಯೊಂದು ದೃಶ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಸೂಪರ್‌ವೈಸ್ ಮಾಡುತ್ತಿರುವ ಅವರ ಶೈಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸೆಟ್‌ನಲ್ಲಿ ಅವರ ಅದ್ಭುತ ಮೇಕಿಂಗ್ ಕೌಶಲ್ಯ ಹಾಗೂ ವಿಷನ್ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ. ವಿಡಿಯೋದ ಕೊನೆಯಲ್ಲಿ ‘ಹ್ಯಾಪಿ ಬರ್ತ್‌ಡೇ ಗೀತು ಮೋಹನ್‌ದಾಸ್’ಎಂದು ಚಿತ್ರತಂಡ ಶುಭ ಕೋರಿದೆ.

ಬಿಟಿಎಸ್ ವಿಡಿಯೋದಲ್ಲಿ ಕಂಡುಬಂದಿರುವ ಬೃಹತ್ ಸೆಟ್‌ಗಳು, ಅದ್ದೂರಿ ಆ್ಯಕ್ಷನ್ ಸೀಕ್ವೆನ್ಸ್‌ಗಳು, ಸ್ಫೋಟದ ದೃಶ್ಯಗಳು ಹಾಗೂ ಚಿತ್ರೀಕರಣದ ಲೊಕೇಷನ್‌ಗಳು ‘ಟಾಕ್ಸಿಕ್’ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಮೂಡಿಬರುತ್ತಿದೆ ಎಂಬುದಕ್ಕೆ ಸಾಕ್ಷಿ ನುಡಿಯುತ್ತಿವೆ. ಹಾಲಿವುಡ್ ಶೈಲಿಯ ಮೇಕಿಂಗ್ ಹೊಂದಿರುವ ಈ ಚಿತ್ರದ ಹಿಂದಿನ ಶ್ರಮ ಇಡೀ ವಿಡಿಯೋದಲ್ಲಿ ಎದ್ದು ಕಾಣುತ್ತಿದೆ.

ಇದನ್ನೂ ಓದಿ: ‘ನಿಮ್ಮ ಲೈಫ್ ನೋಡಿಕೊಳ್ಳಿ’; ಕ್ಯಾನ್ಸರ್ ಪೀಡಿತ ಅಭಿಮಾನಿ ಜೊತೆ ಮಾತನಾಡಿದ ಯಶ್

ರಾಕಿಂಗ್ ಸ್ಟಾರ್ ಯಶ್ ಅವರ ಈ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ‘ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಎಂಬ ಅಡಿಬರಹ ಹೊಂದಿದೆ. ಗೀತು ಮೋಹನ್‌ದಾಸ್ ಅವರ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ ಆ್ಯಕ್ಷನ್ ಡ್ರಾಮಾ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟು ಮಾಡಿದೆ. ಸದ್ಯ ಈ ವಿಡಿಯೋ ಸಖತ್ ಟ್ರೆಂಡಿಂಗ್‌ನಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

Plane Crash: ಡೊಮಿನಿಕನ್ ಗಣರಾಜ್ಯದಲ್ಲಿ ತುರ್ತು ಲ್ಯಾಂಡಿಂಗ್ ವೇಳೆ ಖಾಸಗಿ ಜೆಟ್ ಅಪಘಾತ, ಬೆಂಕಿಗಾಹುತಿ, ಇಬ್ಬರು ಸಾವು – Kannada News

ಸ್ಯಾಂಟೊ ಡೊಮಿಂಗೊ, ಜೂನ್ 08: ಕೆರೆಬಿಯನ್ ದ್ವೀಪ ರಾಷ್ಟ್ರವಾದ ಡೊಮಿನಿಕನ್ ಗಣರಾಜ್ಯದ ಲಾ ರೊಮಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತ( Plane Accident)ವೊಂದು ಸಂಭವಿಸಿದೆ. ತಾಂತ್ರಿಕ ದೋಷದ ಕಾರಣದಿಂದಾಗಿ ತುರ್ತು ಭೂಸ್ಪರ್ಶಕ್ಕೆ ಯತ್ನಿಸುತ್ತಿದ್ದ ಖಾಸಗಿ ವಿಮಾನ ರನ್​ ವೇ ಮೇಲೆ ಬೆಂಕಿಗಾಹುತಿಯಾಗಿದೆ. ಘಟನೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಅದೃಷ್ಟವಶಾತ್, ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಬೇರೆ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿ ಇರಲಿಲ್ಲ ಎಂದು ವಿಮಾನಯಾನ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಅಮೆರಿಕದ ಮಾಧ್ಯಮಗಳ ವರದಿಗಳ ಪ್ರಕಾರ, ಗಲ್ಫ್‌ಸ್ಟ್ರೀಮ್ ಜಿ200 (Gulfstream G200) ಮಾದರಿಯ ಈ ಖಾಸಗಿ ಜೆಟ್ ವಿಮಾನವು ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರಕ್ಕೆ ಪ್ರಯಾಣ ಬೆಳೆಸಿತ್ತು. ಆದರೆ, ಹಾರಾಟದ ಮಧ್ಯೆ ವಿಮಾನದಲ್ಲಿ ತೀವ್ರ ಯಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಸಿಬ್ಬಂದಿಯು ಲಾ ರೊಮಾನಾದ ನೈಋತ್ಯಕ್ಕೆ ಸುಮಾರು 16 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದಾಗ ತುರ್ತು ಪರಿಸ್ಥಿತಿಯನ್ನು (Emergency) ಘೋಷಿಸಿದರು.

ಅಪಾಯವನ್ನು ಅರಿತ ಪೈಲಟ್‌ಗಳು ತಕ್ಷಣವೇ ವಿಮಾನವನ್ನು ಹತ್ತಿರದ ಲಾ ರೊಮಾನಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಿ ಸುರಕ್ಷಿತವಾಗಿ ಇಳಿಸಲು ಪ್ರಯತ್ನಿಸಿದರು. ಆದರೆ, ವಿಮಾನವು ಅತ್ಯಂತ ವೇಗವಾಗಿ ಬಂದು ರನ್‌ವೇ ನೆಲವನ್ನು ಮುಟ್ಟಿದ ತಕ್ಷಣ (Rough Landing) ನಿಯಂತ್ರಣ ತಪ್ಪಿ ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿತು. ಕ್ಷಣಾರ್ಧದಲ್ಲೇ ಜೆಟ್ ಸಂಪೂರ್ಣವಾಗಿ ಬೆಂಕಿಯ ಉಂಡೆಯಂತೆ ಸ್ಫೋಟಗೊಂಡಿತು.

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್
ಅಪಘಾತದ ಭೀಕರತೆಯನ್ನು ತೋರಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿವೆ. ವಿಮಾನ ನಿಲ್ದಾಣದ ರನ್‌ವೇ ಮೇಲೆ ಜೆಟ್ ಸಂಪೂರ್ಣವಾಗಿ ಬೆಂಕಿಯ ಜ್ವಾಲೆಯಲ್ಲಿ ಆವೃತವಾಗಿರುವುದು ಮತ್ತು ಆಕಾಶಕ್ಕೆ ದಟ್ಟವಾದ ಕಪ್ಪು ಹೊಗೆಯ ಕಾರಂಜಿ ಚಿಮ್ಮುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಘಟನೆ ನಡೆದ ತಕ್ಷಣವೇ ವಿಮಾನ ನಿಲ್ದಾಣದ ಅಗ್ನಿಶಾಮಕ ವಾಹನಗಳು ಧಾವಿಸಿ ಬಂದು ನೀರನ್ನು ಸಿಂಪಡಿಸುವ ಮೂಲಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ.

ಮತ್ತಷ್ಟು ಓದಿ: Colombia Plane Crash: ಕೊಲಂಬಿಯಾದಲ್ಲಿ ಸೇನಾ ವಿಮಾನ ಪತನ, 30ಕ್ಕೂ ಅಧಿಕ ಮಂದಿ ಸಾವು

ಉನ್ನತ ಮಟ್ಟದ ತನಿಖೆಗೆ ಆದೇಶ
ಗಲ್ಫ್‌ಸ್ಟ್ರೀಮ್ ಜಿ200 ಜೆಟ್ ಅಪಘಾತಕ್ಕೆ ಕಾರಣವಾದ ನಿಖರವಾದ ತಾಂತ್ರಿಕ ದೋಷಗಳನ್ನು ಪತ್ತೆಹಚ್ಚಲು ಡೊಮಿನಿಕನ್ ಗಣರಾಜ್ಯದ ವಿಮಾನಯಾನ ಸಂಸ್ಥೆಗಳು ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಿವೆ.

ವಿಮಾನಯಾನ ಇಲಾಖೆಯು ಸಂಬಂಧಿತ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಸಕ್ರಿಯಗೊಳಿಸಿದೆ. ಡೊಮಿನಿಕನ್ ಇನ್‌ಸ್ಟಿಟ್ಯೂಟ್ ಆಫ್ ಸಿವಿಲ್ ಏವಿಯೇಷನ್ (IDAC) ಮತ್ತು ಸಿವಿಲ್ ಏವಿಯೇಷನ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಕಮಿಷನ್ (CIAA) ಜಂಟಿಯಾಗಿ ಈ ದುರಂತದ ತನಿಖೆ ನಡೆಸುತ್ತಿದ್ದು, ವರದಿ ಸಿದ್ಧವಾದ ತಕ್ಷಣ ಹೆಚ್ಚುವರಿ ಮಾಹಿತಿಯನ್ನು ಒದಗಿಸಲಾಗುವುದು.

ವಿಡಿಯೋ

ಲಾ ರೊಮಾನಾ ವಿಮಾನ ನಿಲ್ದಾಣವು ಡೊಮಿನಿಕನ್ ಗಣರಾಜ್ಯದ ಪ್ರಮುಖ ಪ್ರವಾಸಿ ನಗರಕ್ಕೆ ಸೇವೆ ಸಲ್ಲಿಸುತ್ತದೆ. ಪ್ರವಾಸೋದ್ಯಮವನ್ನೇ ಪ್ರಮುಖ ಆರ್ಥಿಕ ಮೂಲವಾಗಿ ನಂಬಿರುವ ಈ ದೇಶದಲ್ಲಿ ವಿಮಾನಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಿಂದೆ 2021 ರಲ್ಲಿ ರಾಜಧಾನಿ ಸ್ಯಾಂಟೊ ಡೊಮಿಂಗೊದ ಲಾಸ್ ಅಮೆರಿಕಾಸ್ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆದ ನಂತರ ನಡೆದ ಇಂತಹುದೇ ಮತ್ತೊಂದು ಖಾಸಗಿ ವಿಮಾನ ಅಪಘಾತದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದರು ಎಂಬುದು ಇಲ್ಲಿ ಗಮನಾರ್ಹ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:14 am, Mon, 8 June 26

Source link

ಫಾಲೋಆನ್​ ಹೇರಿದ ಟೀಮ್ ಇಂಡಿಯಾ: ಭಾರತದ ಗೆಲುವು ಖಚಿತ..! – Kannada News

ಮುಲ್ಲನ್​ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ಅಫ್ಘಾನಿಸ್ತಾನ್ ತಂಡ ಕೇವಲ 152 ರನ್​ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (100), ಶುಭ್​ಮನ್ ಗಿಲ್ (126) ಶತಕ ಬಾರಿಸಿದರೆ, ಸಾಯಿ ಸುದರ್ಶನ್, ವಾಷಿಂಗ್ಟನ್ ಸುಂದರ್ ಹಾಗೂ ರಿಷಭ್ ಪಂತ್ ಅರ್ಧಶತಕ ಸಿಡಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ 8 ವಿಕೆಟ್ ನಷ್ಟಕ್ಕೆ 564 ರನ್​ಗಳಿಸಿ ಡಿಕ್ಲೇರ್ ಘೋಷಿಸಿತ್ತು.

ಇದಕ್ಕುತ್ತರವಾಇಗ ಮೊದಲ ಇನಿಂಗ್ಸ್ ಆಡಿದ ಅಫ್ಘಾನಿಸ್ತಾನ್ ತಂಡವು ಯುವ ಸ್ಪಿನ್ನರ್ ಮಾನವ್ ಸುತಾರ್ ಸ್ಪಿನ್ ದಾಳಿಗೆ ನಲುಗಿ ಹೋಗಿದೆ. ಪರಿಣಾಮ ಕೇವಲ 152 ರನ್​ಗಳಿಗೆ ಆಲೌಟ್ ಆಗಿ ಮೊದಲ ಇನಿಂಗ್ಸ್​ನಲ್ಲಿ 412 ರನ್​ಗಳ ಹಿನ್ನಡೆ ಅನುಭವಿಸಿದೆ.

ಟೀಮ್ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವಾಡಿರುವ ಮಾನವ್ ಸುತಾರ್ 26 ಓವರ್​ಗಳಲ್ಲಿ ಕೇವಲ 33 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಫಾಲೋಆನ್​ ಹೇರಿದ ಟೀಮ್ ಇಂಡಿಯಾ:

ಅಫ್ಘಾನಿಸ್ತಾನ್ ತಂಡವು 412 ರನ್​ಗಳ ಹಿನ್ನಡೆ ಅನುಭವಿಸಿರುವ ಕಾರಣ ಟೀಮ್ ಇಂಡಿಯಾ ಫಾಲೋಆನ್ ಹೇರಿದೆ. ಅದರಂತೆ ಇದೀಗ ಅಫ್ಘಾನ್ ತಂಡ ಮತ್ತೆ ಬ್ಯಾಟ್ ಮಾಡಲಿದೆ. ಅಂದರೆ ಅಫ್ಘಾನಿಸ್ತಾನ್ ತಂಡವು ದ್ವಿತೀಯ ಇನಿಂಗ್ಸ್​ ಆರಂಭಿಸಲಿದೆ.

ದ್ವಿತೀಯ ಇನಿಂಗ್ಸ್​ನಲ್ಲಿ 412 ರನ್​ಗಳಿಸಿದ ಬಳಿಕವಷ್ಟೇ  ರನ್​ ಲೆಕ್ಕಾಚಾರ ಶುರುವಾಗಲಿದೆ. ಅಂದರೆ ಫಾಲೋಆನ್ ಹೇರಿದ ಬಳಿಕ ಹಿನ್ನಡೆ ರನ್​ಗಳನ್ನು ಪೂರೈಸಿದ ಬಳಿಕವಷ್ಟೇ ಎದುರಾಳಿ ತಂಡಕ್ಕೆ ಗುರಿ ನೀಡಬಹುದು.

ಅದಕ್ಕೂ ಮುನ್ನ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ತಂಡವನ್ನು ಆಲೌಟ್ ಮಾಡಿದರೆ ಇನಿಂಗ್ಸ್ ಹಾಗೂ ರನ್​ಗಳ ಅಂತರದಿಂದ ಭರ್ಜರಿ ಜಯ ಸಾಧಿಸಬಹುದು.

ಟೀಮ್ ಇಂಡಿಯಾ ಗೆಲುವು ಖಚಿತ:

ಮೊದಲ ಇನಿಂಗ್ಸ್​ನಲ್ಲಿ ಕೇವಲ 152 ರನ್​ಗಳಿಗೆ ಆಲೌಟ್ ಆಗಿರುವ ಕಾರಣ ಅಫ್ಘಾನಿಸ್ತಾನ್ ತಂಡವು 412 ರನ್​ಗಳನ್ನು ಪೂರೈಸಿ ಟೀಮ್ ಇಂಡಿಯಾಗೆ ಗುರಿ ನೀಡುವ ಸಾಧ್ಯತೆಯಿಲ್ಲ. ಅದರೊಳಗೆ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ತಂಡವನ್ನು ಆಲೌಟ್ ಆಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಈ ಮ್ಯಾಚ್​ನಲ್ಲಿ ಭಾರತ ತಂಡದ ಗೆಲ್ಲುವುದು ಖಚಿತ ಎಂದೇ ಹೇಳಬಹುದು.

ಇದನ್ನೂ ಓದಿ: WTC ಫೈನಲ್​ಗೇರಲು ಭಾರತ ತಂಡ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಭಾರತ (ಪ್ಲೇಯಿಂಗ್ XI): ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಮಾನವ್ ಸುತಾರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

Published On – 11:16 am, Mon, 8 June 26

Source link

ಕೇವಲ 60 ಸೆಕೆಂಡುಗಳಲ್ಲಿ 1.273 ಕೆಜಿ ಜೇನುತುಪ್ಪ ತಿಂದು ಗಿನ್ನಿಸ್ ವಿಶ್ವದಾಖಲೆ ಬರೆದ ವ್ಯಕ್ತಿ – Kannada News

ಬರ್ಲಿನ್, ಜೂನ್ 08: ಜಗತ್ತಿನಾದ್ಯಂತ ವಿಚಿತ್ರ ಹಾಗೂ ಅಸಾಧಾರಣ ತಿನಿಸುಗಳನ್ನು ತಿನ್ನುವ ಸ್ಪರ್ಧೆಗಳಲ್ಲಿ ಸದಾ ಹೊಸ  ಇತಿಹಾಸ ಸೃಷ್ಟಿಸುತ್ತಿರುವ ಜರ್ಮನಿಯ ಪ್ರಸಿದ್ಧ ಸಾಹಸಿ ಆಂಡ್ರೆ ಓರ್ಟೋಲ್ಫ್ (Andre Ortolf), ಕೇವಲ ಒಂದು ನಿಮಿಷದಲ್ಲಿ ಬರೋಬ್ಬರಿ 1,273 ಗ್ರಾಂ (1.273 ಕಿಲೋಗ್ರಾಂ) ಜೇನುತುಪ್ಪ(Honey)ವನ್ನು ಪೂರ್ಣಗೊಳಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯ (Guinness World Record) ಹೊಸ ಇತಿಹಾಸ ಬರೆದಿದ್ದಾರೆ. ಜರ್ಮನಿಯ ಆಗ್ಸ್‌ಬರ್ಗ್‌ನಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಈ ದಾಖಲೆಯನ್ನು ಸೃಷ್ಟಿಸಿದ್ದು, ಇಲಾಖೆಯ ವತಿಯಿಂದ ಅವರನ್ನು ಜಗತ್ತಿನ ಅತ್ಯಂತ ವೇಗದ ಜೇನುತುಪ್ಪ ಸೇವಿಸುವ ವ್ಯಕ್ತಿ ಎಂದು ಘೋಷಿಸಲಾಗಿದೆ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಒಂದು ಚಮಚ ಜೇನುತುಪ್ಪ ಸವಿಯುವುದೇ ಕಷ್ಟ. ಆದರೆ, ಇಷ್ಟೊಂದು ಬೃಹತ್ ಪ್ರಮಾಣದ ಸಕ್ಕರೆ ಹಾಗೂ ಕ್ಯಾಲೊರಿಗಳನ್ನು ಒಳಗೊಂಡಿರುವ 1.2 ಕಿಲೋಗ್ರಾಂ ಜೇನುತುಪ್ಪವನ್ನು ಕೇವಲ 60 ಸೆಕೆಂಡುಗಳಲ್ಲಿ ಖಾಲಿ ಮಾಡುವುದು ಸಾಮಾನ್ಯ ಮನುಷ್ಯನ ಊಹೆಗೂ ನಿಲುಕದ ಸಾಹಸವಾಗಿದೆ.

ಆಂಡ್ರೆ ಅವರು ಅತ್ಯಂತ ಸರಳವಾಗಿ ಈ ಸವಾಲನ್ನು ಪೂರ್ಣಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಈ ಸಾಹಸವನ್ನು ಕಂಡು ಆಶ್ಚರ್ಯಚಕಿತರಾದ ಇಂಟರ್ನೆಟ್ ಬಳಕೆದಾರರು ಆಂಡ್ರೆ ಅವರಿಗೆ ಮಾನವ ಜೇನುನೊಣ (Human Bee), “ಜೇನು ರಾಜ” (Honey King) ಮತ್ತು ಬೀ ಮ್ಯಾನ್ ಎಂಬ ಅಡ್ಡಹೆಸರುಗಳನ್ನು ಇಟ್ಟು ಪ್ರಶಂಸಿಸುತ್ತಿದ್ದಾರೆ.

ಮತ್ತಷ್ಟು ಓದಿ: ಮಗುವಿಗೆ ಜೇನುತುಪ್ಪ ಏಕೆ ಕೊಡಬಾರದು? ಬೊಟುಲಿಸಂ ರೋಗ ಎಷ್ಟು ಅಪಾಯಕಾರಿ ಗೊತ್ತಾ?

ಸ್ಪೀಡ್ ಈಟಿಂಗ್ ಮತ್ತು ಸ್ಪೀಡ್ ಡ್ರಿಂಕಿಂಗ್ ಲೋಕದಲ್ಲಿ ಆಂಡ್ರೆ ಓರ್ಟೋಲ್ಫ್ ಅತ್ಯಂತ ಚಿರಪರಿಚಿತ ಹೆಸರು. ಅವರು ಕೇವಲ ಜೇನುತುಪ್ಪ ಮಾತ್ರವಲ್ಲದೆ, ಈ ಹಿಂದೆ ಅತ್ಯಂತ ವೇಗವಾಗಿ ‘ಹಾಟ್ ಸಾಸ್’ (ಖಾರದ ಸಾಸ್) ಕುಡಿಯುವುದು, ಅತಿ ಹೆಚ್ಚಿನ ಪ್ರಮಾಣದಲ್ಲಿ ಮೊಸರು ತಿನ್ನುವುದು ಸೇರಿದಂತೆ ಹಲವು ವಿಭಿನ್ನ ಆಹಾರ ಸವಾಲುಗಳಲ್ಲಿ ವಿಶ್ವ ದಾಖಲೆಗಳನ್ನು ಬರೆದಿದ್ದಾರೆ. ಸದಾ ಹೊಸ ಮತ್ತು ಕಠಿಣ ಗುರಿಗಳನ್ನು ತಾವೇ ನಿಗದಿಪಡಿಸಿಕೊಂಡು ಅದನ್ನು ಯಶಸ್ವಿಯಾಗಿ ಮುರಿಯುವುದು ಅವರ ಹವ್ಯಾಸವಾಗಿದೆ.

ತಿಂಗಳುಗಳ ಕಠಿಣ ತರಬೇತಿ ಮತ್ತು ಶಿಸ್ತು
ಯಾವುದೇ ಜಾಗತಿಕ ದಾಖಲೆಗಳು ಆಕಸ್ಮಿಕವಾಗಿ ಸಂಭವಿಸುವುದಿಲ್ಲ ಮತ್ತು ಇವುಗಳ ಹಿಂದೆ ತಿಂಗಳುಗಳ ಕಾಲದ ನಿರಂತರ ಶ್ರಮ ಇರುತ್ತದೆ ಎಂದು ಆಂಡ್ರೆ ಹೇಳಿದ್ದಾರೆ.

ಇಂತಹ ಸವಾಲುಗಳನ್ನು ಎದುರಿಸಲು ದೇಹ ಮತ್ತು ಮನಸ್ಸನ್ನು ಮೊದಲೇ ಸಿದ್ಧಪಡಿಸಬೇಕಾಗುತ್ತದೆ. ಹೊಟ್ಟೆಯ ಆಹಾರ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ವಿಶೇಷ ವ್ಯಾಯಾಮಗಳು, ಸರಿಯಾದ ಉಸಿರಾಟದ ತಂತ್ರಗಳು ಹಾಗೂ ಅತ್ಯಂತ ವೇಗವಾಗಿ ಆಹಾರವನ್ನು ಅಗಿದು ನುಂಗುವ ಪ್ರಕ್ರಿಯೆಗಳನ್ನು ನಾನು ನಿರಂತರವಾಗಿ ಅಭ್ಯಾಸ ಮಾಡುತ್ತೇನೆ. ಯಾವುದೇ ಮೈಲಿಗಲ್ಲು ತಲುಪಲು ಕೇವಲ ಇಚ್ಛಾಶಕ್ತಿ ಮಾತ್ರ ಸಾಲದು, ಅದರ ಜೊತೆಗೆ ಶಿಸ್ತಿನ ತರಬೇತಿಯೂ ಅತಿ ಮುಖ್ಯ.

ಅಪಾಯಕಾರಿ ಪ್ರಮಾಣದ ಸಕ್ಕರೆಯನ್ನು ಕೇವಲ 60 ಸೆಕೆಂಡುಗಳಲ್ಲಿ ಜೀರ್ಣಿಸಿಕೊಂಡ ಆಂಡ್ರೆ ಅವರ ಈ ಅಸಾಧಾರಣ ದೈಹಿಕ ಸಾಮರ್ಥ್ಯ ಮತ್ತು ಮಾನವ ಸಹಿಷ್ಣುತೆಯು ಇಡೀ ಜಗತ್ತನ್ನು ಬೆರಗುಗೊಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version