mAadhaar ಆ್ಯಪ್​ನಲ್ಲಿ ಐವರ ಪ್ರೊಫೈಲ್ ಸೇರಿಸಲು ಅವಕಾಶ; ಷರತ್ತುಗಳು, ಅನುಕೂಲಗಳು ಇತ್ಯಾದಿ ವಿವರ – Kannada News | MAadhaar App, how to add family members’ profile, step by step guide and benefits

mAadhaar ಅಪ್ಲಿಕೇಶನ್‌ನಲ್ಲಿ ನಿಮ್ಮ ಸ್ವಂತ ಆಧಾರ್ ವಿವರಗಳ ಜೊತೆಗೆ ನಿಮ್ಮ ಕುಟುಂಬದ ಸದಸ್ಯರ ಆಧಾರ್ ಪ್ರೊಫೈಲ್‌ಗಳನ್ನು (Aadhaar profiles) ಸಹ ಒಂದೇ ಕಡೆ ನಿರ್ವಹಿಸಬಹುದು. ಒಂದು ಆ್ಯಪ್‌ನಲ್ಲಿ ಗರಿಷ್ಠ 5 ಆಧಾರ್ ಪ್ರೊಫೈಲ್‌ಗಳನ್ನು ಸೇರಿಸಲು ಅವಕಾಶವಿದೆ. ಸೇರ್ಪಡೆ ಮಾಡಬೇಕಿರುವ ಸದಸ್ಯರ ಬಯೋಮೆಟ್ರಿಕ್ ದೃಢೀಕರಣ (Biometric authentication) ಬೇಕಾಗುತ್ತದೆ. ಆ ವ್ಯಕ್ತಿಯೇ ಖುದ್ದಾಗಿ ಮುಖ ಚಹರೆ ನೀಡಿ ದೃಢೀಕರಿಸಬೇಕಾಗುತ್ತದೆ. ಎಂ ಆಧಾರ್ ಆ್ಯಪ್​ನಲ್ಲಿರುವ ಈ ಫೀಚರ್ ಹೇಗೆ ಕೆಲಸ ಮಾಡುತ್ತದೆ, ವಿವರ ಈ ಕೆಳಗಿದೆ.

mAadhaar ನಲ್ಲಿ ಕುಟುಂಬ ಸದಸ್ಯರನ್ನು ಸೇರಿಸಲು ಕ್ರಮ (Step-by-Step Process)

  1. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ mAadhaar ಆ್ಯಪ್ ಅನ್ನು ತೆರೆಯಿರಿ ಮತ್ತು ನಿಮ್ಮ 4-ಅಂಕಿಯ PIN/Password ನಮೂದಿಸಿ ಲಾಗಿನ್ ಆಗಿ.
  2. ಆ್ಯಪ್‌ನ ಮುಖಪುಟದಲ್ಲಿ (Dashboard) ಮೇಲ್ಭಾಗದಲ್ಲಿರುವ “Add Profile” ಅಥವಾ “Register Aadhaar” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  3. ನೀವು ಸೇರಿಸಲು ಬಯಸುವ ಕುಟುಂಬದ ಸದಸ್ಯರ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.
  4. ಈಗ ಸದಸ್ಯರ ಮುಖಚಹರೆಯನ್ನು ಕ್ಯಾಮೆರಾಗೆ ತೋರಿಸಿ ದೃಢೀಕರಣ ಪಡೆಯಬೇಕಾಗುತ್ತದೆ.
  5. ಆಧಾರ್ ಸಂಖ್ಯೆ ಮತ್ತು ಸದಸ್ಯರ ಮುಖ ಚಹರೆ ಸರಿಹೊಂದಿಕೆಯಾದಾಗ ಅವರ ಪ್ರೊಫೈಲ್ ಸೇರ್ಪಡೆಯಾಗುತ್ತದೆ.

ಈ ರೀತಿ, ಐದು ಪ್ರೊಫೈಲ್​ಗಳನ್ನು ಒಂದೇ ಎಂಆಧಾರ್ ಆ್ಯಪ್​ನಲ್ಲಿ ಸೇರಿಸಲು ಅವಕಾಶ ಇರುತ್ತದೆ. ಆದರೆ, ಈ ಫೀಚರ್ ಮೈ ಆಧಾರ್ ವೆಬ್​ಸೈಟ್​ನಲ್ಲಿ ಲಭ್ಯ ಇರುವುದಿಲ್ಲ. ಎಂಆಧಾರ್ ಆ್ಯಪ್​ನಲ್ಲಿ ಮಾತ್ರವೇ ಈ ಸೌಲಭ್ಯ ಇದೆ.

ಇದನ್ನೂ ಓದಿ: ಜಿಎಸ್​ಟಿ ಕಾಂಪೆನ್ಸೇಶನ್ ಸೆಸ್ ಅಂತ್ಯವಾದರೂ ರಾಜ್ಯಗಳಿಗೆ ತಗ್ಗಲ್ಲ ತೆರಿಗೆ ಸುಗ್ಗಿ; ಸಿಗಲಿದೆ 1.43 ಲಕ್ಷ ಕೋಟಿ ರೂ ಹೆಚ್ಚುವರಿ ಆದಾಯ

mAadhaar ಆ್ಯಪ್​ನ ಈ ಫೀಚರ್​ನಿಂದ ಅನುಕೂಲಗಳೇನು?

  • ಭೌತಿಕ ಕಾರ್ಡ್ ಒಯ್ಯುವ ಅಗತ್ಯವಿಲ್ಲ: ಕುಟುಂಬದ ಪ್ರತಿಯೊಬ್ಬರ ಆಧಾರ್ ಕಾರ್ಡ್ ಅಥವಾ ಅದರ ಪ್ರತಿಯನ್ನು (Xerox) ಯಾವಾಗಲೂ ಜೊತೆಯಲ್ಲಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ. ಪ್ರಯಾಣಿಸುವಾಗ ಅಥವಾ ಯಾವುದೇ ತುರ್ತು ಸಂದರ್ಭದಲ್ಲಿ ಮೊಬೈಲ್‌ನಲ್ಲೇ ಆಧಾರ್ ತೋರಿಸಬಹುದು.
  • ಪ್ರಯಾಣದ ವೇಳೆ ಗುರುತಿನ ಚೀಟಿಯಾಗಿ ಬಳಕೆ: ರೈಲ್ವೆ ಪ್ರಯಾಣ (IRCTC), ವಿಮಾನ ನಿಲ್ದಾಣ ಪ್ರವೇಶ (Airport Entry) ಅಥವಾ ಹೋಟೆಲ್ ಚೆಕ್-ಇನ್ ಮಾಡುವಾಗ ಕುಟುಂಬದ ಎಲ್ಲಾ ಸದಸ್ಯರ ಗುರುತಿನ ಚೀಟಿಯಾಗಿ (ID Proof) mAadhaar ನಲ್ಲಿರುವ ಡಿಜಿಟಲ್ ಆಧಾರ್‌ ಅನ್ನು ತೋರಿಸಬಹುದು.
  • ಒಂದೇ ಆ್ಯಪ್‌ನಲ್ಲಿ ನಿರ್ವಹಣೆ: ಮಕ್ಕಳು ಅಥವಾ ಹಿರಿಯರ ಆಧಾರ್ ಪ್ರೊಫೈಲ್ ಅನ್ನು ಒಂದೇ ಸ್ಮಾರ್ಟ್‌ಫೋನ್‌ನಲ್ಲಿ ನಿರ್ವಹಿಸಬಹುದು. ಹೀಗಾಗಿ ಅವರ ಆಧಾರ್ ವಿವರಗಳಿಗಾಗಿ ಬೇರೆ ಬೇರೆ ಕಡೆ ಹುಡುಕಾಡುವ ಶ್ರಮ ತಪ್ಪುತ್ತದೆ.
  • ಇ-ಆಧಾರ್ ಡೌನ್‌ಲೋಡ್ ಮತ್ತು ಶೇರಿಂಗ್ ಸುಲಭ: ಅಗತ್ಯ ಬಿದ್ದಾಗ ಕುಟುಂಬದ ಯಾವುದೇ ಸದಸ್ಯರ e-Aadhaar ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ PDF ರೂಪದಲ್ಲಿ ಅಧಿಕೃತವಾಗಿ ಶೇರ್ (Share) ಮಾಡಬಹುದು.
  • ಆಫ್‌ಲೈನ್ ಪರಿಶೀಲನೆಗೆ QR ಕೋಡ್: ಆ್ಯಪ್‌ನಲ್ಲಿ ಸಿಗುವ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಯಾವುದೇ ಇಂಟರ್ನೆಟ್ ಇಲ್ಲದಿದ್ದರೂ ಕುಟುಂಬದ ಸದಸ್ಯರ ಆಧಾರ್ ವಿವರಗಳನ್ನು ಸುರಕ್ಷಿತವಾಗಿ ಪರಿಶೀಲಿಸಬಹುದು (Offline Verification).
  • ವರ್ಚುವಲ್ ಐಡಿ ರಚನೆ: ಸುರಕ್ಷತೆಯ ದೃಷ್ಟಿಯಿಂದ ಆಧಾರ್ ಸಂಖ್ಯೆಯನ್ನು ನೇರವಾಗಿ ನೀಡಲು ಇಷ್ಟವಿಲ್ಲದಿದ್ದಾಗ, ಕುಟುಂಬದ ಸದಸ್ಯರಿಗೆ VID (Virtual ID) ಅನ್ನು ಕ್ಷಣಾರ್ಧದಲ್ಲಿ ಆ್ಯಪ್ ಮೂಲಕವೇ ಜನರೇಟ್ ಮಾಡಿಕೊಳ್ಳಬಹುದು.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQs)

1. ಮೈ ಆಧಾರ್ ವೆಬ್​ಸೈಟ್​ಗೂ ಎಂಆಧಾರ್ ಆ್ಯಪ್​ಗೂ ಸಂಬಂಧ ಇದೆಯಾ?

My Aadhaar website ಮತ್ತು mAadhaar App ಎರಡೂ ಕೂಡ ಆಧಾರ್​ನ ಕೆಲ ಮಾಹಿತಿ ಪಡೆಯಲು ಮತ್ತು ಹಂಚಿಕೊಳ್ಳಲು ರಚನೆಯಾಗಿವೆ. ಆದರೆ, ಒಂದಷ್ಟು ಭಿನ್ನ ಫೀಚರ್​ಗಳನ್ನು ಹೊಂದಿವೆ.

2. mAadhaar ಆ್ಯಪ್​ನಲ್ಲಿ ವಿಶೇಷ ಫೀಚರ್ ಏನು?

mAadhaar ಆ್ಯಪ್​ನಲ್ಲಿ ಹಲವು ಫೀಚರ್ಸ್ ಇವೆ. ಅದರಲ್ಲಿ ಕುಟುಂಬ ಸದಸ್ಯರ ಪ್ರೊಫೈಲ್ ಸೇರಿಸುವುದು ಒಂದು. ಒಟ್ಟು ಐದು ಪ್ರೊಫೈಲ್ ಸೇರಿಸಬಹುದು.

3. ಒಟಿಪಿ ಮೂಲಕ ಪ್ರೊಫೈಲ್ ಸೇರಿಸಬಹುದಾ?

ಇಲ್ಲ, mAadhaar ಆ್ಯಪ್​ನಲ್ಲಿ ಪ್ರೊಫೈಲ್ ಸೇರ್ಪಡೆ ಮಾಡಬೇಕಿರುವ ವ್ಯಕ್ತಿಯ ಮುಖಚಹರೆ ಮೂಲಕ ಆಧಾರ್ ದೃಢೀಕರಣ ಪಡೆಯಬೇಕಾಗುತ್ತದೆ.

Source link

Modi Mann Ki Baat: ‘ಮನ್ ಕಿ ಬಾತ್’: ಕಾರ್ಗಿಲ್ ವೀರರಿಗೆ ಪ್ರಧಾನಿ ಮೋದಿ ನಮನ, ಕ್ಯಾಚ್ ದ ರೇನ್ ಆಂದೋಲನಕ್ಕೆ ಕರೆ – Kannada News | Modi Mann Ki Baat: Tributes to Kargil Heroes and Call for ‘Catch the Rain’ Water Conservation

ನವದೆಹಲಿ, ಜುಲೈ 26:  ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಿದ ಪ್ರಧಾನಿ, ಕಾರ್ಗಿಲ್ ದಿನವು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಕೇತವಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ(Narendra Modi) ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್‌’ನ 136ನೇ ಸಂಚಿಕೆಯ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.

“ಕಾರ್ಗಿಲ್ ವಿಜಯ್ ದಿವಸ್ ಎಂಬುದು ಕೇವಲ ಒಂದು ದಿನಾಂಕವಲ್ಲ, ಅದು ನಮ್ಮ ರಾಷ್ಟ್ರದ ಶೌರ್ಯ ಮತ್ತು ತ್ಯಾಗದ ಅಮರ ಕಥೆಯಾಗಿದೆ. ದೇಶದ ಗಡಿಯನ್ನು ರಕ್ಷಿಸಲು ನಮ್ಮ ವೀರ ಸೈನಿಕರು ತೋರಿದ ಅಪ್ರತಿಮ ಧೈರ್ಯವನ್ನು ಈ ದಿನ ನಮಗೆ ನೆನಪಿಸುತ್ತದೆ” ಎಂದು ಪ್ರಧಾನಿ ಬಣ್ಣಿಸಿದರು.

ಇದೇ ವೇಳೆ, ಜಲಸಂರಕ್ಷಣೆಯ ಮಹತ್ವವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮಳೆಗಾಲದ ಈ ಸಮಯದಲ್ಲಿ ‘ಕ್ಯಾಚ್ ದಿ ರೇನ್’ಅಭಿಯಾನದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಜುಲೈ 4 ರಿಂದ ದೇಶಾದ್ಯಂತ ಚುರುಕುಗೊಂಡಿರುವ ಈ ವಿಶೇಷ ಆಂದೋಲನದಡಿ, ಪ್ರತಿಯೊಬ್ಬರೂ ಬಿದ್ದ ಪ್ರತಿಯೊಂದು ಹನಿ ಮಳೆನೀರನ್ನು ವ್ಯರ್ಥ ಮಾಡದೆ ಇಂಗುಗುಂಡಿಗಳು ಹಾಗೂ ಜಲಮೂಲಗಳ ಮೂಲಕ ಭೂಮಿಯ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಮತ್ತಷ್ಟು ಓದಿ: “ಥ್ಯಾಂಕ್ಯೂ ಫ್ರೆಂಡ್ಸ್”: ಮತ್ತೊಂದು ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ

ಪ್ರಸಾರ ಭಾರತಿ ಮತ್ತು ಐಐಎಂ ರೋಹ್ಟಕ್ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಕನಿಷ್ಠ ಒಮ್ಮೆಯಾದರೂ ಕೇಳಿದವರ ಸಂಖ್ಯೆ 100 ಕೋಟಿ (1 ಬಿಲಿಯನ್) ತಲುಪಿದ್ದು, ದೇಶದ ಶೇಕಡಾ 96 ರಷ್ಟು ಜನರಿಗೆ ಈ ಕಾರ್ಯಕ್ರಮದ ಅರಿವಿದೆ. ಸಮಾಜ, ಶಿಕ್ಷಣ, ಸಂಸ್ಕೃತಿ ಮತ್ತು ನಾವೀನ್ಯತೆಯ ಯಶೋಗಾಥೆಗಳನ್ನು ಪ್ರಚುರಪಡಿಸುವ ಈ ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೋ, ದೂರದರ್ಶನ ಮತ್ತು ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಹಿಂದಿ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲಾಯಿತು.

ಮಾಹಿತಿ ಅಪ್​ಡೇಟ್​ ಆಗಲಿದೆ

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:21 am, Sun, 26 July 26

Source link

ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ: ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್​​ – Kannada News | Ambulance Driver Jalil Baba Absconds Amidst Drug Trafficking Probe

ಮಂಗಳೂರು, ಜುಲೈ 26: ಮಂಗಳೂರಿನಲ್ಲಿ ಸಮಾಜ ಸೇವೆ ಮಾಡುವುದಾಗಿ ಬಿಂಬಿಸಿಕೊಂಡಿದ್ದ ವ್ಯಕ್ತಿಯೋವರ್ವ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ವಿಚಾರ ಬಹಿರಂಗಗೊಂಡಿದೆ. ಜಲೀಲ್ ಬಾಬಾ ಎಂಬಾತ ಆರೋಪಿಯಾಗಿದ್ದು, ಈತ ತನ್ನ ಆ್ಯಂಬುಲೆನ್ಸ್ ಅನ್ನೇ ಡ್ರಗ್ ಪೂರೈಕೆಯ ಅಡ್ಡೆ ಮಾಡಿಕೊಂಡಿದ್ದ ಎಂಬುದು ಗೊತ್ತಾಗಿದೆ. ಜೂನ್ 25ರಂದು ಮಂಗಳೂರಿನಲ್ಲಿ ಅಣ್ಣಪ್ಪ ಸ್ವಾಮಿ ಆಲಿಯಾಸ್ ಮನು ಎಂಬಾತನನ್ನು ಎಂಡಿಎಂಎ ಸಹಿತ ಬಂಧಿಸಲಾಗಿತ್ತು. ಈ ವೇಳೆ ಪೊಲೀಸರಿಗೆ ಬಾಗಲಕೋಟೆಯ ಡ್ರಗ್​​ ಲಿಂಕ್​​ ಬಗ್ಗೆ ಮಾಹಿತಿ ದೊರೆತಿತ್ತು. ಹೀಗಾಗಿ ಜುಲೈ 15ರಂದು ಬಾಗಲಕೋಟೆಯ ಲಾಡ್ಜ್ ಮೇಲೆ ದಾಳಿ ನಡೆಸಿದ್ದ ಮಂಗಳೂರು ಸಿಸಿಬಿ ಪೊಲೀಸರು, ಅಲ್ಲಿ ಮೂವರನ್ನು ಬಂಧಿಸಿ ಐದು ಕೋಟಿ ಮೌಲ್ಯದ ಐದು ಕೆಜಿ ಡ್ರಗ್ಸ್ ವಶ ಪಡಿಸಿಕೊಂಡಿದ್ದರು. ಈ ವೇಳೆ ಬೆಳ್ತಂಗಡಿಯ ಮಹಮ್ಮದ್ ಅಲ್ಫಾಜ್, ಮಹಮ್ಮದ್ ಮುಸ್ತಾಫಾ ಅರೆಸ್ಟ್​​ ಆಗಿದ್ದರು. ಬಂಧಿತ ಮೂವರು ಲೋಕಲ್ ಪೆಡ್ಲರ್ ಜಲೀಲ್ ಬಾಬಾಗೆ ಡ್ರಗ್ಸ್ ಒದಗಿಸುತ್ತಿದ್ದ ಬಗ್ಗೆ ಸ್ಪೋಟಕ ಮಾಹಿತಿ ತನಿಖೆ ವೇಳೆ ಲಭ್ಯವಾಗಿದ್ದು, ಸದ್ಯ ಬಂಧಿತರ ಬಗ್ಗೆ ಮಂಗಳೂರು ಕೋರ್ಟ್​​ಗೆ ಪೊಲೀಸರು ವರದಿ ನೀಡಿದ್ದಾರೆ. ಕಳೆದ ಎಂಟು ದಿನಗಳಿಂದ ಮೊಬೈಲ್ ಸ್ವಿಚ್ಚ್ ಆಫ್ ಮಾಡಿಕೊಂಡು ಆ್ಯಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಎಸ್ಕೇಪ್ ಆಗಿರೋ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಸೋನಾಕ್ಷಿ ಸಿನ್ಹಾ ಸಂಭ್ರಮ: ವಿದ್ಯಾರ್ಥಿಗಳ ಬಳಿ ಕ್ಷಮೆ ಕೇಳಿದ ನಟಿ – Kannada News | Sonakshi Sinha reacts to Dharmendra Pradhan Resignation after Gen Z Protest

ನೀಟ್ ಪರೀಕ್ಷೆಗಳ ಅಕ್ರಮ ಖಂಡಿಸಿ ದೇಶಾದ್ಯಂತ ವಿದ್ಯಾರ್ಥಿಗಳು ನಡೆಸಿದ ತೀವ್ರ ಪ್ರತಿಭಟನೆಯ (Student Protest) ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ನಿರ್ಧಾರವು ವಿದ್ಯಾರ್ಥಿಗಳು ಹಾಗೂ ಹೋರಾಟಗಾರರಲ್ಲಿ ಸಂತಸ ತಂದಿದ್ದು, ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ‘ಜೆನ್ ಜಿ’ (Gen Z) ಯುವಜನತೆಯ ಹೋರಾಟದ ಗೆಲುವನ್ನು ಕೊಂಡಾಡಿದ್ದಾರೆ. ಅಲ್ಲದೇ ಅವರ ಬಳಿ ಕ್ಷಮೆ ಕೂಡ ಹೇಳಿದ್ದಾರೆ.

ಕಳೆದ ಕೆಲವು ವಾರಗಳಿಂದ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹಕ್ಕೆ ಬಹಿರಂಗ ಬೆಂಬಲ ಸೂಚಿಸುತ್ತಿದ್ದ ಸೋನಾಕ್ಷಿ, ಜುಲೈ 20ರ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗವನ್ನು ತೀವ್ರವಾಗಿ ಖಂಡಿಸಿದ್ದರು. ಸಚಿವರ ರಾಜೀನಾಮೆ ಸುದ್ದಿ ಹೊರಬಿದ್ದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಹಂಚಿಕೊಂಡ ಸೋನಾಕ್ಷಿ ಅವರು ಯುವಜನತೆಗೆ ತಮಾಷೆಯಾಗಿ ಕ್ಷಮೆಯಾಚಿಸಿದ್ದಾರೆ.

‘ತುಂಬಾ ಹಗುರವಾಗಿ ಪರಿಗಣಿಸಿದ್ದೆ’

ವೀಡಿಯೊದಲ್ಲಿ ತೀವ್ರ ಸಂತಸ ವ್ಯಕ್ತಪಡಿಸಿದ ಸೋನಾಕ್ಷಿ, ‘ಸ್ನೇಹಿತರೇ, ನೀವು ಇಂದು ಏನು ಸಾಧಿಸಿದ್ದೀರಿ ಎಂಬುದು ನಿಮಗೆ ಗೊತ್ತಿಲ್ಲ. ನಾನು ಕೇವಲ ಒಬ್ಬ ಕಲಾವಿದೆ, ಆದರೆ ಈ ‘ಜೆನ್ ಜಿ’ ಯುವಜನತೆಯೇ ನಿಜವಾದ ಕಲೆ. ನಾನು ಮೊದಲು ಈ ಯುವಸಮುದಾಯವನ್ನು ತುಂಬಾ ಹಗುರವಾಗಿ ಪರಿಗಣಿಸಿದ್ದೆ. ನಾಲ್ಕು ಗಂಟೆ ಕೆಲಸ ಮಾಡಿ ಸುಸ್ತಾಗುತ್ತಾರೆ, ಇವರಿಂದೇನೂ ಆಗುವುದಿಲ್ಲ ಎಂದುಕೊಂಡಿದ್ದೆ. ಅದಕ್ಕಾಗಿ ಕ್ಷಮೆ ಇರಲಿ. ಆದರೆ ನಿಮ್ಮ ಈ ಸಾಧನೆಗೆ ನನ್ನದೊಂದು ಬಿಗ್ ಸಲ್ಯೂಟ್. ನನ್ನನ್ನು ನೋಡಿ, ನಾನೂ ಈಗ ನಿಮ್ಮಂತೆ ‘ಜೆನ್ ಜಿ’ ಆಗಲು ಬಯಸುತ್ತೇನೆ. ನೀವೆಲ್ಲರೂ ಮಾಡಿದ್ದು ನಿಜಕ್ಕೂ ನಂಬಲಾಗದ ಸಂಗತಿ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ:

ಪರೀಕ್ಷಾ ಅಕ್ರಮಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ಸುದೀರ್ಘ ವಿದ್ಯಾರ್ಥಿ ಹೋರಾಟ ಹಾಗೂ ಒತ್ತಡಕ್ಕೆ ಮಣಿದು ಧರ್ಮೇಂದ್ರ ಪ್ರಧಾನ್ ಶನಿವಾರ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಧರ್ಮೇಂದ್ರ ಪ್ರಧಾನ್, ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದು ಹಾಗೂ ದೇಶದ ಯುವಜನತೆಯ ಸೇವೆ ಮಾಡುವುದು ತಮ್ಮ ನೈತಿಕ ಜವಾಬ್ದಾರಿಯಾಗಿತ್ತು ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಜಹೀರ್ ಇಕ್ಬಾಲ್ನ ಪ್ರೀತಿಸಿ ಸಲ್ಮಾನ್ ಖಾನ್ ಎದುರು ರೆಡ್​ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ ಸೋನಾಕ್ಷಿ ಸಿನ್ಹಾ

ಕೇವಲ ಸೋನಾಕ್ಷಿ ಸಿನ್ಹಾ ಮಾತ್ರವಲ್ಲದೆ, ಚಿತ್ರರಂಗದ ಇನ್ನು ಕೆಲವು ಪ್ರಮುಖ ಸೆಲೆಬ್ರಿಟಿಗಳು ಸಹ ಈ ವಿದ್ಯಾರ್ಥಿ ಹೋರಾಟಕ್ಕೆ ಬಹಿರಂಗ ಬೆಂಬಲ ಸೂಚಿಸಿದ್ದರು. ಜ್ಯೋತಿಕಾ, ಪ್ರಕಾಶ್ ರಾಜ್, ಶಬಾನಾ ಆಜ್ಮಿ, ನಸೀರುದ್ದೀನ್ ಶಾ, ಸಲ್ಮಾನ್ ಖಾನ್, ಟ್ವಿಂಕಲ್ ಖನ್ನಾ, ಅತುಲ್ ಕುಲಕರ್ಣಿ, ಕಿಶೋರ್ ಸೇರಿದಂತೆ ಹಲವರು ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ಕ್ವಾಷ್ ಚಾಂಪಿಯನ್‌ಶಿಪ್​ನಲ್ಲಿ ಹೊಸ ಇತಿಹಾಸ ಬರೆದ ಅನಾಹತ್ ಸಿಂಗ್ – Kannada News | Anahat Singh Scripts History as First Indian to Win World Junior Squash Title

ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಶಿಪ್​ನಲ್ಲಿ ಭಾರತದ ಅನಾಹತ್ ಸಿಂಗ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಜುಲೈ 25, 2026 ರಂದು ಕೆನಡಾದ ಒಂಟಾರಿಯೊದಲ್ಲಿ ನಡೆದ ಬಾಲಕಿಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 18 ವರ್ಷದ ಅನಾಹತ್ ಸಿಂಗ್ ಈಜಿಪ್ಟ್‌ನ ರುಕಾಯಾ ಸಲೇಮ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಶಿಪ್ ಇತಿಹಾಸದಲ್ಲೇ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಿದ್ದಾಜಿದ್ದಿನ ಪೈಪೋಟಿ:

ಅನಾಹತ್ ಸಿಂಗ್ ಮತ್ತು ರುಕಾಯಾ ಸಲೇಮ್ ನಡುವಣ ಪಂದ್ಯವು ಆರಂಭದಲ್ಲಿ ಏಕಪಕ್ಷೀಯವಾಗಿದ್ದರೂ, ಆ ಬಳಿಕ ನಡೆದ ಎರಡು ಸೆಟ್​ಗಳು ಜಿದ್ದಾಜಿದ್ದಿನಿಂದ ಕೂಡಿತ್ತು. ಮೊದಲ ಸೆಟ್​ನಲ್ಲಿ ಸುಲಭ ಗೆಲುವು ದಾಖಲಿಸಿದ್ದ ಅನಾಹತ್, ಉಳಿದ ಎರಡು ಸೆಟ್​ ಗೆಲ್ಲಲು ತುಸು ಹೆಚ್ಚೇ ಬೆವರಿಳಿಸಿದ್ದರು.  ಈ ಮೂಲಕ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಶಿಪ್ ಇತಿಹಾಸದಲ್ಲೇ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.

  • ನೇರ ಸೆಟ್‌ಗಳ ಜಯ: ಫೈನಲ್ ಪಂದ್ಯದಲ್ಲಿ ಆರಂಭದಿಂದಲೇ ಪಾರಮ್ಯ ಮೆರೆದ ಅನಾಹತ್, 11-3, 11-7, 11-9 ರ ನೇರ ಸೆಟ್‌ಗಳಿಂದ ಎದುರಾಳಿಯನ್ನು ಮಣಿಸಿದರು.
  • ಈಜಿಪ್ಟ್ ಪ್ರಾಬಲ್ಯಕ್ಕೆ ಬ್ರೇಕ್: ಕಳೆದ 13 ವರ್ಷಗಳಿಂದ ಈ ಚಾಂಪಿಯನ್‌ಶಿಪ್‌ನಲ್ಲಿ ಮುಂದುವರಿದಿದ್ದ ಈಜಿಪ್ಟ್ ಆಟಗಾರ್ತಿಯರ ಏಕಸ್ವಾಮ್ಯವನ್ನು ಮುರಿಯುವಲ್ಲಿ ಅನಾಹತ್ ಯಶಸ್ವಿಯಾಗಿದ್ದಾರೆ.
  • ಹಳೆಯ ದಾಖಲೆ ಉಡೀಸ್: 2005 ರಲ್ಲಿ ಜೋಶ್ನಾ ಚಿನ್ನಪ್ಪ ರನ್ನರ್-ಅಪ್ ಆಗಿದ್ದೇ ಇದುವರೆಗೆ ಭಾರತದ ಅತ್ಯುತ್ತಮ ಸಾಧನೆಯಾಗಿತ್ತು. ಈಗ ಅನಾಹತ್ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದಾರೆ.

ಚಾಂಪಿಯನ್‌ಶಿಪ್‌ನ ಅದ್ಭುತ ಜರ್ನಿ:

ಈ ಟೂರ್ನಿಯುದ್ದಕ್ಕೂ ಕೇವಲ ಎರಡೇ ಸೆಟ್‌ಗಳನ್ನು ಬಿಟ್ಟುಕೊಟ್ಟು ಅನಾಹತ್ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ವಿಶೇಷ. ಕ್ವಾರ್ಟರ್ ಫೈನಲ್‌ನಿಂದ ಫೈನಲ್‌ವರೆಗೂ ಅವರು ಸತತವಾಗಿ ಮೂವರು ಈಜಿಪ್ಟ್ ಮೂಲದ ಪ್ರಬಲ ಆಟಗಾರ್ತಿಯರನ್ನೇ ಸೋಲಿಸಿ ಈ ಸಾಧನೆ ಮಾಡಿರುವುದು ಮತ್ತೊಂದು ವಿಶೇಷ.

ಹಂತ ಎದುರಾಳಿ ದೇಶ ಫಲಿತಾಂಶ
ಕ್ವಾರ್ಟರ್ ಫೈನಲ್ ಹಬೀಬಾ ರಿಜ್ಕ್ ಈಜಿಪ್ಟ್ 3-1 ಜಯ
ಸೆಮಿಫೈನಲ್ ಬಾರ್ಬ್ ಸಮೇಹ್ ಈಜಿಪ್ಟ್ 3-1 ಜಯ
ಫೈನಲ್ ರುಕಾಯಾ ಸಲೇಮ್ ಈಜಿಪ್ಟ್ 3-0 ಜಯ

ಒಲಿಂಪಿಕ್ಸ್ ಮೇಲೆ ಕಣ್ಣು:

ಇದು ಅನಾಹತ್ ಸಿಂಗ್ ಅವರ ಕೊನೆಯ ಜೂನಿಯರ್ ಟೂರ್ನಮೆಂಟ್ ಆಗಿದ್ದು, ಈಗಾಗಲೇ ಸೀನಿಯರ್ ಪಿಎಸ್‌ಎ (PSA) ಜಾಗತಿಕ ಶ್ರೇಯಾಂಕದಲ್ಲಿ ಟಾಪ್ 20 ರೊಳಗೆ ಸ್ಥಾನ ಪಡೆದ ಅತ್ಯಂತ ಕಿರಿಯ ಏಷ್ಯನ್ ಆಟಗಾರ್ತಿಯಾಗಿದ್ದಾರೆ.

ಇದನ್ನೂ ಓದಿ: ಅಗ್ರಸ್ಥಾನ ಮರಳಿ ಪಡೆದ ಟೀಮ್ ಇಂಡಿಯಾ

2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸ್ಕ್ವಾಷ್ ಅಧಿಕೃತವಾಗಿ ಸೇರ್ಪಡೆಯಾಗುತ್ತಿರುವುದರಿಂದ, ಭಾರತಕ್ಕೆ ಒಲಿಂಪಿಕ್ ಪದಕ ತಂದುಕೊಡುವ ದೊಡ್ಡ ಭರವಸೆಯಾಗಿ ಅನಾಹತ್ ಸಿಂಗ್ ಹೊರಹೊಮ್ಮಿದ್ದಾರೆ.

Published On – 11:05 am, Sun, 26 July 26

Source link

Feng Shui for Wealth: ಆರ್ಥಿಕ ಸಮಸ್ಯೆ ನಿವಾರಣೆಗೆ ಫೆಂಗ್ ಶೂಯಿಯ 4 ಸರಳ ಹಾಗೂ ಪ್ರಭಾವಶಾಲಿ ಸಲಹೆಗಳು! – Kannada News | Feng shui for wealth 4 tips to attract money and positive energy at home

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಂತೆ ‘ಫೆಂಗ್ ಶೂಯಿ’ (Feng Shui) ತತ್ವಗಳು ಸಹ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಅನೇಕರು ಎಷ್ಟೇ ಕಷ್ಟಪಟ್ಟು ಸಂಪಾದಿಸಿದರೂ ಹಣ ಕೈಯಲ್ಲಿ ನಿಲ್ಲದೆ ನೀರಿನಂತೆ ಖರ್ಚಾಗುವುದು, ಸಾಲದ ಬಾಧೆ ಅಥವಾ ನಿರಂತರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುತ್ತಾರೆ. ಇಂತಹ ಸಮಸ್ಯೆಗಳನ್ನು ನಿವಾರಿಸಿ, ಮನೆಯಲ್ಲಿ ಸಮೃದ್ಧಿ ನೆಲೆಸಲು ಸಹಾಯ ಮಾಡುವ 4 ಪ್ರಮುಖ ಫೆಂಗ್ ಶೂಯಿ ಸಲಹೆಗಳು ಇಲ್ಲಿವೆ.

ನಗುವ ಬುದ್ಧನ ಮೂರ್ತಿ (Laughing Buddha):

ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ನಗುವ ಬುದ್ಧನ ಪ್ರತಿಮೆಯನ್ನು ಇಡುವುದು ಅತ್ಯಂತ ಮಂಗಳಕರ. ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಿ, ಸಂಪತ್ತು ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. ಆರ್ಥಿಕ ಮುಗ್ಗಟ್ಟು ಮತ್ತು ಸಾಲದ ತೊಂದರೆಗಳು ನಿಧಾನವಾಗಿ ಶಮನಗೊಂಡು ಮನೆಯಲ್ಲಿ ಆರ್ಥಿಕ ಸ್ಥಿರತೆ ಲಭಿಸುತ್ತದೆ.

ಫೆಂಗ್ ಶೂಯಿ ಲೋಹದ/ಸ್ಫಟಿಕದ ಆಮೆ (Feng Shui Turtle):

ನಿರಂತರ ಧನನಷ್ಟ ಅಥವಾ ಹಣಕಾಸಿನ ತೊಂದರೆಯಿಂದ ಬಳಲುತ್ತಿರುವವರಿಗೆ ಫೆಂಗ್ ಶೂಯಿ ಆಮೆ ಅತ್ಯುತ್ತಮ ಪರಿಹಾರ. ನೀರಿನಿಂದ ತುಂಬಿದ ಸಣ್ಣ ಗಾಜಿನ ಬಟ್ಟಲಿನಲ್ಲಿ ಈ ಆಮೆಯನ್ನಿಟ್ಟು, ಮನೆಯ ಉತ್ತರ ದಿಕ್ಕಿನಲ್ಲಿ ಸ್ಥಾಪಿಸಬೇಕು. ಇದು ಮನೆಯಲ್ಲಿ ಆರ್ಥಿಕ ಪ್ರಗತಿ, ಶಾಂತಿ ಮತ್ತು ಸುಖ-ಸಮೃದ್ಧಿಯನ್ನು ಆಕರ್ಷಿಸುತ್ತದೆ.

ಇದನ್ನೂ ಓದಿ: ನವಗ್ರಹ ಮಂಟಪಕ್ಕೆ ಎಷ್ಟು ಬಾರಿ ಪ್ರದಕ್ಷಿಣೆ ಹಾಕುವುದು ಶುಭ? ಶಾಸ್ತ್ರೋಕ್ತ ನಿಯಮ ಇಲ್ಲಿದೆ

ಗಾಳಿ ಗಂಟೆಗಳು (Wind Chimes):

ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಅದೃಷ್ಟವನ್ನು ತರಲು ಗಾಳಿ ಗಂಟೆಗಳು ಬಹಳ ಉಪಯುಕ್ತ. ಗಾಳಿಗೆ ಈ ಗಂಟೆಗಳು ಅಲ್ಲಾಡಿದಾಗ ಬರುವ ನಾದವು ಮನೆಯಲ್ಲೆಲ್ಲಾ ಧನಾತ್ಮಕ ಶಕ್ತಿಯನ್ನು ಹರಡುತ್ತದೆ. ದುಷ್ಟ ಶಕ್ತಿಗಳನ್ನು ದೂರವಿಟ್ಟು, ಅದೃಷ್ಟ, ಹಣ ಹಾಗೂ ನೆಮ್ಮದಿಯನ್ನು ಹೆಚ್ಚಿಸುತ್ತದೆ.

ಚೀನೀ ನಾಣ್ಯಗಳು (Chinese Coins):

ಕೆಂಪು ದಾರ ಅಥವಾ ರಿಬ್ಬನ್‌ನಿಂದ ಕಟ್ಟಲಾದ ಚೀನೀ ನಾಣ್ಯಗಳನ್ನು ಮನೆಯಲ್ಲಿ ಇಡುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಇವುಗಳನ್ನು ಮುಖ್ಯ ಬಾಗಿಲಿನ ಒಳಭಾಗದಲ್ಲಿ ಅಥವಾ ಲಾಕರ್‌ನಲ್ಲಿ ಇಡುವುದರಿಂದ ಹಣದ ಹರಿವು ಹೆಚ್ಚಾಗುತ್ತದೆ. ಸಾಲದ ಸುಳಿಯಿಂದ ಶೀಘ್ರ ವಿಮೋಚನೆ ಸಿಗಲು ಮತ್ತು ಆರ್ಥಿಕ ಸುಧಾರಣೆಗೆ ಇದು ನೆರವಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಜೆಪಿ ಪ್ರತಿಭಟನೆ ಅಂತ್ಯ: ಜಂತರ್ ಮಂತರ್ ಸ್ವಚ್ಛತೆಗೆ 500ಕ್ಕೂ ಹೆಚ್ಚು ಎನ್‌ಡಿಎಂಸಿ ಸಿಬ್ಬಂದಿ ನಿಯೋಜನೆ – Kannada News | CJP Protest Ends: Jantar Mantar Clean Up Underway with 500 plus NDMC Workers

ನವದೆಹಲಿ, ಜುಲೈ 26: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಅವರ ರಾಜೀನಾಮೆ ಹಾಗೂ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಕ್ಷ (CJP) ನಡೆಸುತ್ತಿದ್ದ ವಾರಗಳ ಕಾಲದ ಆಂದೋಲನ ಮುಕ್ತಾಯಗೊಂಡಿದೆ. ಪ್ರತಿಭಟನೆ ಹಿಂತೆಗೆದುಕೊಂಡ ಬೆನ್ನಲ್ಲೇ, ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಜಂತರ್ ಮಂತರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಬೃಹತ್ ನೈರ್ಮಲ್ಯ ಅಭಿಯಾನವನ್ನು ಕೈಗೆತ್ತಿಕೊಂಡಿದೆ.

ಪ್ರತಿಭಟನಾ ಸ್ಥಳದಲ್ಲಿ ಹರಿದು ಬಿದ್ದಿರುವ ತ್ಯಾಜ್ಯ, ಬ್ಯಾನರ್‌ಗಳು, ತಾತ್ಕಾಲಿಕ ಟೆಂಟ್‌ಗಳು ಹಾಗೂ ನಿರ್ಮಾಣ ಭಗ್ನಾವಶೇಷಗಳನ್ನು ತೆರವುಗೊಳಿಸಲು ಎನ್​ಡಿಎಂಸಿ 500ಕ್ಕೂ ಹೆಚ್ಚು ನೈರ್ಮಲ್ಯ ಕಾರ್ಮಿಕರನ್ನು ನಿಯೋಜಿಸಿದೆ. ಪ್ರದೇಶವನ್ನು ಶೀಘ್ರವೇ ಯಥಾಸ್ಥಿತಿಗೆ ತರಲು ಸಿಬ್ಬಂದಿ ದಿನದ 24 ಗಂಟೆಯೂ ಬಹು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸ್ವಚ್ಛತಾ ಕಾರ್ಯವನ್ನು ವೇಗಗೊಳಿಸಲು ಟ್ರಕ್‌ಗಳು, ಆಟೋ-ಟಿಪ್ಪರ್‌ಗಳು ಹಾಗೂ ಯಾಂತ್ರಿಕೃತ ಗಾಬ್ಲರ್ ಯಂತ್ರಗಳನ್ನು ಬಳಸಲಾಗುತ್ತಿದೆ. ಕೇವಲ ಜಂತರ್ ಮಂತರ್ ಅಷ್ಟೇ ಅಲ್ಲದೆ, ಪ್ರತಿಭಟನೆಯಿಂದಾಗಿ ಭಾರೀ ಜನದಟ್ಟಣೆ ಕಂಡಿದ್ದ ಟಾಲ್‌ಸ್ಟಾಯ್ ಮಾರ್ಗ, ಜೈ ಸಿಂಗ್ ರಸ್ತೆ, ಸಂಸದ್ ಮಾರ್ಗ ಮತ್ತು ಕನ್ನಾಟ್ ಪ್ಲೇಸ್‌ನ ಪ್ರಮುಖ ಭಾಗಗಳಲ್ಲೂ ನೈರ್ಮಲ್ಯ ಅಭಿಯಾನ ಬಿರುಸಿನಿಂದ ಸಾಗಿದೆ.

ಮತ್ತಷ್ಟು ಓದಿ: ಈ ಹಿಂದೆ ಪೇಪರ್ ಲೀಕ್ ವಿರುದ್ಧ ಹೋರಾಟ; ಈಗ ನೀಟ್​​​​​​ ಪ್ರಶ್ನೆ ಪತ್ರಿಕೆ ಸೋರಿಕೆಗೆ ರಾಜೀನಾಮೆ; ಯಾರೀ ಧರ್ಮೇಂದ್ರ ಪ್ರಧಾನ್?

ಕಳೆದ ಎರಡು ದಿನಗಳಲ್ಲಿ ಹತ್ತಾರು ಟನ್ ಮಿಶ್ರ ತ್ಯಾಜ್ಯವನ್ನು ಈಗಾಗಲೇ ತೆರವುಗೊಳಿಸಲಾಗಿದ್ದು, ಇಡೀ ಪ್ರದೇಶವು ಸಂಪೂರ್ಣವಾಗಿ ಸ್ವಚ್ಛಗೊಳ್ಳುವವರೆಗೆ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಎನ್‌ಡಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ನಿವಾಸಿಗಳಿಗೆ ಮತ್ತು ವಾಹನ ಸಂಚಾರಕ್ಕೆ ಉಂಟಾಗಿದ್ದ ಅಡಚಣೆಯನ್ನು ನಿವಾರಿಸಲು ಹೆದ್ದಾರಿ ಸಾರಿಗೆ ಮತ್ತು ಸಂಚಾರ ಪೊಲೀಸರು ಸ್ಥಳದಲ್ಲಿದ್ದು ಸಹಕರಿಸುತ್ತಿದ್ದಾರೆ. ಇಡೀ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಸಾರ್ವಜನಿಕರ ಬಳಕೆಗೆ ಯಥಾಸ್ಥಿತಿಯಲ್ಲಿ ಮುಕ್ತಗೊಳಿಸುವವರೆಗೆ ಈ ಅಭಿಯಾನ ಮುಂದುವರೆಯಲಿದೆ ಎಂದು ಎನ್‌ಡಿಎಂಸಿ ಸ್ಪಷ್ಟಪಡಿಸಿದೆ.

ವಿಡಿಯೋ

ಎನ್‌ಡಿಎಂಸಿ ಅಧಿಕಾರಿಗಳ ಪ್ರಕಾರ, ಕಾರ್ಯಾಚರಣೆಯನ್ನು ವೇಗಗೊಳಿಸಲು ಟ್ರಕ್‌ಗಳು, ಆಟೋ-ಟಿಪ್ಪರ್‌ಗಳು ಹಾಗೂ ಯಾಂತ್ರಿಕೃತ ಗಾಬ್ಲರ್ ಯಂತ್ರಗಳು ಬಂದಿವೆ . ಸಿವಿಲ್ ಎಂಜಿನಿಯರಿಂಗ್ ವಿಭಾಗದ ಹೆಚ್ಚುವರಿ ಸಿಬ್ಬಂದಿ ಸಹ ಶ್ರಮಿಸುತ್ತಿದ್ದು, ದಿನದ 24 ಗಂಟೆಯೂ ಮೂರು ಪಾಳಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಜಂತರ್ ಮಂತರ್ ರಸ್ತೆ ಸೇರಿದಂತೆ ಟಾಲ್‌ಸ್ಟಾಯ್ ಮಾರ್ಗ, ಜೈ ಸಿಂಗ್ ರಸ್ತೆ, ಸಂಸದ್ ಮಾರ್ಗ ಮತ್ತು ಕನ್ನಾಟ್ ಪ್ಲೇಸ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲೂ ನೈರ್ಮಲ್ಯ ಕಾರ್ಯ ಬಿರುಸಿನಿಂದ ಸಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ: ಏಷ್ಯಾದ ಮೊದಲ ಜಲ ವಿದ್ಯುತ್ ಸ್ಥಾವರ ಶಿವನಸಮುದ್ರದಲ್ಲಿ ಕರೆಂಟ್​ ಉತ್ಪಾದನೆ ಸ್ಥಗಿತ – Kannada News | Monsoon Failure: Power Generation Halting at Asia’s First Hydroelectric Station in Shivanasamudra Due to Water Scarcity

ಮಂಡ್ಯ, ಜುಲೈ 26: ಕರ್ನಾಟಕದಲ್ಲಿ ಮುಂಗಾರು ಮಳೆಯ ಅಭಾವ ಜಲ ವಿದ್ಯುತ್ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಹಿನ್ನೆಲೆ ಮಂಡ್ಯ ‌ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿರುವ ಏಷ್ಯಾದ ಮೊದಲ ಜಲ ವಿದ್ಯುತ್ ಸ್ಥಾವರ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಒಂದೂವರೆ ತಿಂಗಳಿಂದ ಜಲ‌ ವಿದ್ಯುತ್ ಉತ್ಪಾದನೆ ಬಂದ್ ಆಗಿದ್ದು, ಕೆಆರ್​​ಎಸ್ ಅಥವಾ ಕಬಿನಿ ಡ್ಯಾಂನಿಂದ ನೀರು ಬಿಟ್ಟರೆ ಮಾತ್ರ ಮತ್ತೆ ವಿದ್ಯುತ್ ಉತ್ಪಾದನೆ ಪುನಾರಂಭ ಆಗಲಿದೆ. ಈ ಕೇಂದ್ರದಲ್ಲಿ ನಿತ್ಯ 10 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು‌. ಅದಕ್ಕಾಗಿ ನಿತ್ಯ 1,450 ಕ್ಯೂಸೆಕ್ ನೀರು ಅಗತ್ಯ ಇತ್ತು‌.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಗ್ರಸ್ಥಾನ ಮರಳಿ ಪಡೆದ ಟೀಮ್ ಇಂಡಿಯಾ – Kannada News | Team India Back at the Top of ICC T20I Rankings

ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ತೋರಿದ ಅದ್ಭುತ ಪ್ರದರ್ಶನದ ಫಲವಾಗಿ, ಭಾರತ ಕ್ರಿಕೆಟ್ ತಂಡವು ಐಸಿಸಿ ಪುರುಷರ ಟಿ20 ತಂಡದ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನವನ್ನು ಮರಳಿ ಪಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ವಿರುದ್ಧ ಅಗ್ರಸ್ಥಾನವನ್ನು ಕಳೆದುಕೊಂಡಿದ್ದ ಟೀಮ್ ಇಂಡಿಯಾ, ಕೇವಲ 13 ದಿನಗಳಲ್ಲೇ ಭರ್ಜರಿ ಕಮ್‌ಬ್ಯಾಕ್ ಮಾಡುವ ಮೂಲಕ ಜಾಗತಿಕ ಕ್ರಿಕೆಟ್‌ನಲ್ಲಿ ತನ್ನ ಸರ್ವೋಚ್ಚ ಪ್ರಭುತ್ವವನ್ನು ಸಾಬೀತುಪಡಿಸಿದೆ.

ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 4-0 ಅಂತರದಿಂದ ಆಘಾತಕಾರಿ ಸೋಲು ಕಂಡಿದ್ದ ಟೀಮ್ ಇಂಡಿಯಾ ತನ್ನ ಮೊದಲ ಸ್ಥಾನವನ್ನು ಕಳೆದುಕೊಂಡಿತ್ತು. ಭಾರತವನ್ನು ವೈಟ್‌ವಾಶ್ ಮಾಡಿದ್ದ ಇಂಗ್ಲೆಂಡ್ ತಂಡವು ಐಸಿಸಿ ಟಿ20 ಶ್ರೇಯಾಂಕದ ಜಾಗತಿಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು.

ಆದರೆ, ಇದೀಗ ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತ ತಂಡ, ಇಂಗ್ಲೆಂಡ್ ಅನ್ನು ಹಿಂದಿಕ್ಕಿ ಮತ್ತೆ ಮೊದಲ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಟಿ20 ಕ್ರಿಕೆಟ್​ನ ನಂಬರ್ 1 ತಂಡ ಎನಿಸಿಕೊಂಡಿದೆ.

ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಪ್ರಾಬಲ್ಯ:

ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡವಾಗಿರುವ ಟೀಮ್ ಇಂಡಿಯಾ, ಸದ್ಯ ಮೂರೂ ಸ್ವರೂಪಗಳ ಶ್ರೇಯಾಂಕದಲ್ಲೂ ಅದ್ಭುತ ಪ್ರಾಬಲ್ಯ ಮೆರೆದಿದೆ. ಬಿಳಿ ಚೆಂಡಿನ ಕ್ರಿಕೆಟ್‌ನ ಎರಡು ಪ್ರಮುಖ ಮಾದರಿಗಳಾದ ಟಿ20 ಹಾಗೂ ಏಕದಿನ ಶ್ರೇಯಾಂಕದಲ್ಲಿ ವಿಶ್ವದ ನಂಬರ್ 1 ತಂಡವಾಗಿ ಹೊರಹೊಮ್ಮಿದೆ.  ಇನ್ನು ಸುದೀರ್ಘ ಸ್ವರೂಪದ ಟೆಸ್ಟ್ ಕ್ರಿಕೆಟ್‌ನಲ್ಲೂ ಅಗ್ರ ನಾಲ್ಕರ ಪಟ್ಟಿಯಲ್ಲಿ ಭದ್ರವಾಗಿ ನೆಲೆಯೂರಿದೆ.

  • ಏಕದಿನ ಕ್ರಿಕೆಟ್‌ನಲ್ಲೂ ನಂ.1: ಭಾರತ ತಂಡವು ಕೇವಲ ಟಿ20 ಮಾದರಿಯಲ್ಲಿ ಮಾತ್ರವಲ್ಲದೆ, ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲೂ ವಿಶ್ವದ ನಂಬರ್ 1 ತಂಡವಾಗಿ ಮುಂದುವರಿದಿದೆ.
  • ಟೆಸ್ಟ್‌ನಲ್ಲಿ ಸವಾಲು: ಸುದೀರ್ಘ ಮಾದರಿಯಾದ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಸದ್ಯ 4ನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ತಂಡವು 131 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
  • ಟಿ20 ಯಲ್ಲಿ ಕಮ್‌ಬ್ಯಾಕ್: ಝಿಂಬಾಬ್ವೆ ವಿರುದ್ಧದ ಭರ್ಜರಿ ಗೆಲುವಿನ ನಂತರ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ಮತ್ತೆ ಟಿ20 ಮಾದರಿಯಲ್ಲಿ ಜಗತ್ತಿನ ನಂಬರ್ 1 ಪಟ್ಟಕ್ಕೇರಿದೆ.

ಇದನ್ನೂ ಓದಿ: ಬ್ಯಾಟಿಂಗ್​ನಲ್ಲಿ ಅಲ್ಲ, ಬೌಲಿಂಗ್​ನಲ್ಲಿ ಭರ್ಜರಿ ದಾಖಲೆ ಬರೆದ ಅಭಿಷೇಕ್ ಶರ್ಮಾ

ಟಿ20 ತಂಡಗಳ ನೂತನ ಶ್ರೇಯಾಂಕ ಪಟ್ಟಿ:

ಸ್ಥಾನ ತಂಡ ರೇಟಿಂಗ್
1 ಭಾರತ 268.13
2 ಇಂಗ್ಲೆಂಡ್ 268.05
3 ಆಸ್ಟ್ರೇಲಿಯಾ 260
4 ವೆಸ್ಟ್ ಇಂಡೀಸ್ 254
5 ಸೌತ್ ಆಫ್ರಿಕಾ 249
6 ನ್ಯೂಝಿಲೆಂಡ್ 247
7 ಪಾಕಿಸ್ತಾನ್ 241
8 ಶ್ರೀಲಂಕಾ 233
9 ಬಾಂಗ್ಲಾದೇಶ್ 225
10 ಆಫ್ಘಾನಿಸ್ತಾನ್ 222

Source link

ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಕಸರತ್ತು: ನವದೆಹಲಿಯತ್ತ ನಾಯಕರ ಪಯಣ! – Kannada News | Karnataka Cabinet Expansion: Congress MLAs Head to Delhi, CM Visit Rescheduled

ಬೆಂಗಳೂರು, ಜುಲೈ 26: ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಚುರುಕುಗೊಂಡಿದ್ದು, ಸಚಿವಾಕಾಂಕ್ಷಿ ಶಾಸಕರು ನವದೆಹಲಿಯತ್ತ ಮುಖ ಮಾಡಿದ್ದಾರೆ. ಅಶೋಕ್ ಪಟ್ಟಣ್, ಬಸವರಾಜ ರಾಯರೆಡ್ಡಿ, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಸುಧಾಮ್ ದಾಸ್, ಮಂಜುನಾಥ ಭಂಡಾರಿ, ಶರಣಗೌಡ ಬಯ್ಯಾಪುರ, ವಿಜಯಾನಂದ ಕಾಶಪ್ಪನವರ್, ಬ್ಯಾಡಗಿ ಶಿವಣ್ಣನವರ್, ಗುಬ್ಬಿ ವಾಸು, ಪುಟ್ಟಣ್ಣ, ಎಂ.ಆರ್.ಸೀತಾರಾಮ್ ಹಾಗೂ ಬಿ.ಆರ್.ಪಾಟೀಲ್ ಸೇರಿದಂತೆ ಹಲವು ನಾಯಕರು ಹೈಕಮಾಂಡ್ ಭೇಟಿಗೆ ಸಜ್ಜಾಗಿದ್ದಾರೆ.

ಇನ್ನೊಂದೆಡೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ದೆಹಲಿಗೆ ತೆರಳಿ ಅಂತಿಮ ಪಟ್ಟಿ ಕುರಿತು ಚರ್ಚಿಸಲಿದ್ದಾರೆ. ಚಿತ್ರದುರ್ಗ ಪ್ರವಾಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಇಂದಿನ ದೆಹಲಿ ಪ್ರಯಾಣ ರದ್ದಾಗಿದ್ದು, ನಾಳೆ ಅವರು ದೆಹಲಿಗೆ ತೆರಳಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version