Headlines

Zimbabwe vs India 3rd T20, Live Score: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ – Kannada News | Zimbabwe vs India 3rd T20, Live Cricket Score IND vs ZIM Full Scorecard Match Updates from Harare in Kannada

LIVE Cricket Score & Updates 26 Jul 2026 04:07 PM (IST) IND vs ZIM 3rd T20 Live: ಟಾಸ್ ಗೆದ್ದ ಟೀಂ ಇಂಡಿಯಾ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ಇಂದು ಹರಾರೆಯಲ್ಲಿ ನಡೆಯುತ್ತಿದೆ. ಶನಿವಾರ ನಡೆದ ಎರಡನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಭಾರತ…

Read More

Swapna Shastra: ಹೊಸ ಮನೆಯ ಬಗ್ಗೆ ಪದೇ ಪದೇ ಕನಸು ಬೀಳುತ್ತಿದ್ದರೆ ಏನರ್ಥ? ಸ್ವಪ್ನ ಶಾಸ್ತ್ರ ಹೇಳುವ ಆಸಕ್ತಿದಾಯಕ ಸಂಗತಿಗಳಿವು – Kannada News | New House Dream Meaning: Unveiling Future Changes and Opportunities

ಕನಸುಗಳು ನಮ್ಮ ಜೀವನದ ಸಾಮಾನ್ಯ ಭಾಗವಾಗಿದ್ದು, ಕೆಲವೊಮ್ಮೆ ನಾವು ದಿನವಿಡೀ ಯೋಚಿಸದ ವಿಷಯಗಳ ಬಗ್ಗೆಯೂ ಕನಸು ಕಾಣುತ್ತೇವೆ. ಸ್ವಪ್ನ ಶಾಸ್ತ್ರ ಅಥವಾ ಕನಸಿನ ವಿಜ್ಞಾನವು ಕೆಲವು ನಿರ್ದಿಷ್ಟ ಕನಸುಗಳನ್ನು ವಿಶೇಷ ಚಿಹ್ನೆಗಳು ಮತ್ತು ನಮ್ಮ ಜೀವನದ ಬದಲಾವಣೆಗಳೊಂದಿಗೆ ಸಂಯೋಜಿಸುತ್ತದೆ. ಹೊಸ ಮನೆಯ ಬಗ್ಗೆ ಕನಸು ಕಾಣುವುದು ಹೆಚ್ಚಾಗಿ ಜೀವನದ ಬದಲಾವಣೆ, ಹೊಸ ಆರಂಭ ಮತ್ತು ಹೊಸ ಅವಕಾಶಗಳೊಂದಿಗೆ ಸಂಬಂಧಿಸಿದೆ. ಆದಾಗ್ಯೂ, ಕನಸಿನ ನಿಜವಾದ ಅರ್ಥವು ಮನೆಯ ನೋಟ ಮತ್ತು ಆ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಅವಲಂಬಿಸಿರುತ್ತದೆ. ಕನಸಿನಲ್ಲಿ…

Read More

ಸಿಇಒರಂಥ ಸಿಇಒರನ್ನೇ ದಾಸರನ್ನಾಗಿ ಮಾಡಿಕೊಳ್ಳುತ್ತೆ ರೀಲ್ಸ್… ಬೇಸ್ತುಬಿದ್ದ ಸ್ಯಾಮ್ ಟಿಕ್​ಟಾಕ್ ಆ್ಯಪನ್ನೇ ಡಿಲೀಟ್ ಮಾಡಿದ ಕಥೆ – Kannada News | OpenAI CEO Sam Altman deletes TikTok from his mobile, interesting reason behind this

ಯುವಕನೊಬ್ಬ ಸೋಷಿಯಲ್ ಮೀಡಿಯಾ ಬಳಸುತ್ತಿರುವ ಚಿತ್ರImage Credit source: Annette Riedl/picture alliance via Getty Images ಪ್ರಪಂಚದಲ್ಲಿ ಅತ್ಯಂತ ವ್ಯಸನಕಾರಕ (Addiction) ಯಾವುದು ಎಂದರೆ ಡ್ರಗ್ಸ್ ಹೌದು. ಆದರೆ, ಡ್ರಗ್ಸ್ ಅನ್ನೂ ಮೀರಿಸುವಂತಹ ಚಟಕಾರಕವಾಗಿದೆ ರೀಲ್ಸ್. ಬಸ್ಸಲ್ಲಿ, ರೈಲಲ್ಲಿ ಕೂತವರ ಕೈಯಲ್ಲಿ ಮೊಬೈಲು ಸ್ಕ್ರೋಲಿಂಗ್ ಕಾಣುತ್ತಿರುತ್ತದೆ. ಧಾರವಾಹಿಗಳಂತೆ ರೀಲ್ಸ್ ಅನ್ನು ಒಮ್ಮೆ ನೋಡಲು ಮೊದಲಿಟ್ಟರೆ ಅದಕ್ಕೆ ಅಂತ್ಯವೇ ಇರುವುದಿಲ್ಲ. ಕೆಲಸ ಮಾಡುವ ಸ್ಥಳದಲ್ಲೂ ಜನರು ರೀಲ್ಸ್ ನೋಡುವುದುಂಟು. ರೀಲ್ಸ್​ಗೆ ದಾಸರಾಗದವರು ಯಾರಾದರೂ ಉಂಟೆ? ಓಪನ್​ಎಐ ಸಿಇಒ…

Read More

ಬಸ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ: ವಿಡಿಯೋ ವೈರಲ್ ಆಗ್ತಿದ್ದಂತೆಯೇ ವ್ಯಕ್ತಿ ಪತ್ತೆಗೆ ಬಲೆ ಬೀಸಿದ ಪೊಲೀಸ್ರು – Kannada News | Inappropriate Behavior with Young Girl on BMTC Bus: Police Hunt for Man After Viral Video

ಬೆಂಗಳೂರು, ಜುಲೈ 26: ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೆ ಆತಂಕ ಮೂಡಿಸುವ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ (bangaluru) ನಡೆದಿದೆ. ಬಿಎಂಟಿಸಿ ಬಸ್‌ನಲ್ಲಿ (BMTC Bus) ಪ್ರಯಾಣಿಸುತ್ತಿದ್ದ ಯುವತಿಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ (Inappropriate Behavior) ವರ್ತಿಸಿದ್ದಾನೆ. ಕಿರುಕುಳ ನೀಡಿದ ಆಸಾಮಿಗೆ ಯುವತಿ ಮತ್ತು ಚಾಲಕ ಥಳಿಸಿದ್ದರು. ಸದ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ದೂರಿನಲ್ಲೇನಿದೆ? ಜುಲೈ 24ರ ಮಧ್ಯಾಹ್ನ ಸುಮಾರು 12:42ರ ಸಮಯದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ  ಅಪರಿಚಿತ…

Read More

50 ದಿನಗಳಲ್ಲಿ 8 ಆಟಗಾರರು ಟೀಂ ಇಂಡಿಯಾ ಪರ ಪಾದಾರ್ಪಣೆ; ಎಲ್ಲರ ಪ್ರದರ್ಶನ ಹೇಗಿದೆ? – Kannada News | India’s 8 Cricket Debutants: Performance Review of New Stars in 50 Days

ಕಳೆದ 50 ದಿನಗಳಲ್ಲಿ ಟೀಂ ಇಂಡಿಯಾ ಪರ ಮೂರು ಮಾದರಿಗಳಲ್ಲಿ ಒಟ್ಟು 8 ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಟೆಸ್ಟ್‌ನಲ್ಲಿ ಒಬ್ಬರು, ಏಕದಿನದಲ್ಲಿ ಮೂವರು ಮತ್ತು ಟಿ20ಕ್ರಿಕೆಟ್​ನಲ್ಲಿ ಐವರು ಆಟಗಾರರು ಪಾದಾರ್ಪಣೆ ಮಾಡಿದ್ದಾರೆ. ಪ್ರಸ್ತುತ, ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಇಬ್ಬರು ಆಟಗಾರರು ಪಾದಾರ್ಪಣೆ ಮಾಡಿದ್ದಾರೆ. ಹಾಗಿದ್ದರೆ ಈ 8 ಆಟಗಾರರ ಪ್ರದರ್ಶನ ಹೇಗಿದೆ ಎಂಬುದನ್ನು ನೋಡುವುದಾದರೆ(PC-BCCI).. Source link

Read More

ISRO VSSC Internship 2026: ಇಸ್ರೋದಿಂದ ಇಂಟರ್ನ್‌ಶಿಪ್‌ಗೆ ಅರ್ಜಿ ಆಹ್ವಾನ; ವಿಜ್ಞಾನಿಗಳೊಂದಿಗೆ ಕೆಲಸ ಮಾಡುವ ಸುವರ್ಣಾವಕಾಶ! – Kannada News | ISRO VSSC Internship 2026: Kickstart Your Space Science Career in India Now

ಬಾಹ್ಯಾಕಾಶ ವಿಜ್ಞಾನ ಮತ್ತು ಹೊಸ ತಂತ್ರಜ್ಞಾನದಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ಕನಸು ಕಾಣುವ ವಿದ್ಯಾರ್ಥಿಗಳಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್‌ಎಸ್‌ಸಿ) ಇಸ್ರೋ ಇಂಟರ್ನ್‌ಶಿಪ್ 2026 ಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಇಂಟರ್ನ್‌ಶಿಪ್ ವಿದ್ಯಾರ್ಥಿಗಳಿಗೆ ಇಸ್ರೋ ವಿಜ್ಞಾನಿಗಳೊಂದಿಗೆ ಕೆಲಸ ಮಾಡಲು ಮತ್ತು ನವೀಕೃತ ಬಾಹ್ಯಾಕಾಶ ಸಂಶೋಧನಾ ತಂತ್ರಗಳನ್ನು ಕಲಿಯಲು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. ಎಂಜಿನಿಯರಿಂಗ್, ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಇದು ಸಕಾಲವಾಗಿದೆ. ಯಾರು ಅರ್ಜಿ ಸಲ್ಲಿಸಬಹುದು?…

Read More

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಸ್ಫೋಟ: ಇಬ್ಬರು ಸಾವು, ಉಗ್ರರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಸ್ಥಳೀಯ ನಾಯಕ – Kannada News | Pakistan Explosion: 2 Dead in Khyber Pakhtunkhwa; Local Leader Escapes TTP Attack

ಇಸ್ಲಾಮಾಬಾದ್, ಜುಲೈ 26: ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಜೌರ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ಪ್ರಬಲ ಸ್ಫೋಟ(Blast)ದಲ್ಲಿ ಕನಿಷ್ಠ ಇಬ್ಬರು ಸ್ಥಳೀಯರು ಮೃತಪಟ್ಟಿದ್ದಾರೆ. ಇನ್ನು ಈ ದಾಳಿಯ ವೇಳೆ ಸ್ಥಳೀಯ ನಾಯಕರೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಜೌರ್ ಜಿಲ್ಲೆಯ ಸಲರ್ಜೈ ತಹಸಿಲ್‌ನಲ್ಲಿರುವ ‘ತಾಲಿ ಬ್ಯಾಂಡ್’ ಪ್ರದೇಶದ ಬಳಿ ಈ ಸ್ಫೋಟ ಸಂಭವಿಸಿದೆ. ಮೃತರನ್ನು ಸುಲೇಮಾನ್ ಖಾರಿ ಹಾಗೂ ಗುಲಾಮ್ ಎಂದು ಗುರುತಿಸಲಾಗಿದ್ದು, ಅವರ ಮೃತದೇಹಗಳನ್ನು ಹತ್ತಿರದ ಖಾರ್ ಆಸ್ಪತ್ರೆಗೆ ರವಾನಿಸಲಾಗಿದೆ….

Read More

ಮುಲ್ಲಾಗಳಿಗೆ ಎದೆ ಸೀಳಿದ್ರೆ 3 ಅಕ್ಷರ ಬರಲ್ಲ ಹೇಳಿಕೆ ಕೇಸ್: ಸಿಟಿ ರವಿ ನಿವಾಸಕ್ಕೆ ನೋಟಿಸ್​ ಅಂಟಿಸಿದ ಪೊಲೀಸ್ – Kannada News | Chikkamagakuru Police Notice to BJP MLC CT Ravi Over Derogatory remarks On Muslim

ಚಿಕ್ಕಮಗಳೂರು, (ಜುಲೈ 26): ಅವಹೇಳನಕಾರಿ ಹೇಳಿಕೆ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ (CT Ravi) ವಿರುದ್ಧ ಎಫ್ ಐಆರ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಜುಲೈ 26) ಭಾನುವಾರ ಪೊಲೀಸರು, ಚಿಕ್ಕಮಗಳೂರಿನ (Chikkamagaluru) ಸಿಟಿ ರವಿ ಅವರ ಮನೆಗೆ ನೋಟಿಸ್ ನೀಡಲು ಬಂದ ವೇಳೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಚಿಕ್ಕಮಗಳೂರು ನಗರ ಠಾಣೆಯ ಇನ್ಸ್​ಪೆಕ್ಟರ್​ ಅಭಯ್ ಪ್ರಕಾಶ್ ಅವರು ಸಿಟಿ ರವಿ ಅವರಿಗೆ ನೋಟಿಸ್ ನೀಡಲು​ ಮುಂದಾಗಿದ್ದಾರೆ. ಆದ್ರೆ, ಸಿಟಿ…

Read More

ಸಿನಿಮಾ ಆಗಲಿದೆ ರಜನೀಕಾಂತ್ ಅವರ ಜೀವನ ಕತೆ – Kannada News | Rajinikanth planning to make movie on his own life

ರಜನೀಕಾಂತ್ (Rajinikanth), ಭಾರತದ ಅತಿ ದೊಡ್ಡ ಸೂಪರ್ ಸ್ಟಾರ್. ಕಳೆದ 40 ವರ್ಷಗಳಿಂದಲೂ ಅವರು ಸೂಪರ್ ಸ್ಟಾರ್ ಪಟ್ಟದಲ್ಲಿದ್ದಾರೆ. ಅವರ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಬೆಂಗಳೂರಿನ ಗಲ್ಲಿಯೊಂದರಲ್ಲಿ ಹುಟ್ಟಿ ವಿಶ್ವವೇ ಗುರುತಿಸುವ ಸೂಪರ್ ಸ್ಟಾರ್ ಆಗಿ ಬೆಳೆದವರು ರಜನೀಕಾಂತ್. ನಟ ರಜನೀಕಾಂತ್ ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಜೊತೆಗೆ ತಮ್ಮ ಜೀವನದ ಕತೆಯನ್ನು ಪುಸ್ತಕ ರೂಪಕ್ಕೆ ಇಳಿಸುತ್ತಿದ್ದಾರೆ. ರಜನೀಕಾಂತ್ ಅವರು ಕಳೆದ ಕೆಲ ವರ್ಷಗಳಿಂದ ತಮ್ಮ ಆಟೋ ಬಯೋಗ್ರಫಿ ಬರೆಯುತ್ತಿದ್ದಾರೆ. ಇದೀಗ…

Read More

ಮೇಕೆದಾಟು ಯೋಜನೆಗೆ ವಿರೋಧ: ಅತ್ತಿಬೆಲೆ ಗಡಿಯಲ್ಲಿ ಖಾಲಿ ಕೊಡ ಚಳವಳಿ; ತಮಿಳುನಾಡು ವಾಹನಗಳಿಗೆ ನಿರ್ಬಂಧ – Kannada News | Opposition to Mekedatu Project: Empty Pot Protest at Attibele Border; Restrictions on Tamil Nadu Vehicles

ಆನೇಕಲ್​, ಜುಲೈ 26: ಮೇಕೆದಾಟು ಕುಡಿಯುವ ನೀರಿನ ಯೋಜನೆ (Mekedatu project) ಜಾರಿಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ, ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಹೆದ್ದಾರಿ ತಡೆ ಬೃಹತ್ ಖಾಲಿ ಕೊಡ ಚಳವಳಿ (Empty Pot protest) ಮಾಡಲಾಯಿತು. ರಾಜಕೀಯ ದುರುದ್ದೇಶದ ವಿರುದ್ಧ ಆಕ್ರೋಶ ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಮಹಿಳೆಯರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ರಾಜ್ಯದಲ್ಲಿ…

Read More