Headlines

ಬಳ್ಳಾರಿ: ಜಿಂದಾಲ್‌ನಿಂದ ಕೋಟಿ ಕೋಟಿ ತೆರಿಗೆ ಬಾಕಿ; ವಸೂಲಿಗೆ ಸ್ಥಳೀಯ ಆಡಳಿತ ಸರ್ಕಸ್ – Kannada News | JSW Jindal’s 20 Cr Unpaid Tax Row: Ballari Gram Panchayats Demand Pending Dues Since 2018

ಬಳ್ಳಾರಿ, ಮೇ 12: ಸಂಡೂರು ತಾಲೂಕಿನ ತೋರಣಗಲ್ ಬಳಿ ಸ್ಥಾಪನೆಯಾಗಿರುವ ದೇಶದ ಎರಡನೇ ಅತೀ ದೊಡ್ಡ ಖಾಸಗಿ ಉಕ್ಕು ಉತ್ಪಾದಕ ಕಂಪನಿ JSW ಜಿಂದಾಲ್ (JSW Jindal), 2018ರಿಂದಲೂ ಕೋಟ್ಯಂತರ ರೂಪಾಯಿ ಆಸ್ತಿ ಮತ್ತು ಅಭಿವೃದ್ಧಿ ತೆರಿಗೆಯನ್ನು (Tax) ಬಾಕಿ ಉಳಿಸಿಕೊಂಡಿದೆ. ತೋರಣಗಲ್ಲು, ವಡ್ಡು, ಬನ್ನಿಹಟ್ಟಿ ಗ್ರಾಮ ಪಂಚಾಯಿತಿಗಳಿಗೆ ಸರಿಸುಮಾರು 20 ಕೋಟಿ ರೂ.ಗೂ ಅಧಿಕ ತೆರಿಗೆ ಪಾವತಿಸದೆ ಜಿಂದಾಲ್ ಕಂಪನಿ ಗಪ್‌ಚುಪ್ ಕುಳಿತಿದೆ. ಹಲವು ಬಾರಿ ನೋಟಿಸ್ ನೀಡಿದರೂ ಕಂಪನಿ ಡೋಂಟ್ ಕೇರ್ ಧೋರಣೆ ತಾಳಿರುವುದು…

Read More

31 ವರ್ಷ ಜೈಲಿನಲ್ಲಿದ್ದ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಈಗ ಹೈಕೋರ್ಟ್ ವಕೀಲ! – Kannada News | After 31 years in jail Rajiv Gandhi assassination convict becomes High Court advocate

ಚೆನ್ನೈ, ಏಪ್ರಿಲ್ 28: ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಎ.ಜಿ. ಪೆರಾರಿವಾಲನ್ ಇದೀಗ ಹೈಕೋರ್ಟ್​ ವಕೀಲರಾಗಿದ್ದಾರೆ. 2022ರಲ್ಲಿ ಶಿಕ್ಷೆಯಿಂದ ವಿನಾಯಿತಿ ಪಡೆದು ಬಿಡುಗಡೆಯಾದ ಪೆರಾರಿವಾಲನ್ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡಿದರು. 2025ರಲ್ಲಿ ಅಖಿಲ ಭಾರತ ವಕೀಲರ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರು ಈಗ ವಕೀಲರಾಗಿದ್ದಾರೆ. ರಾಜೀವ್ ಗಾಂಧಿ ಹತ್ಯೆಯ ಆರೋಪಿಯಾಗಿದ್ದ ಪೆರಾರಿವಾಲನ್ ಅವರನ್ನು 2022ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬಿಡುಗಡೆ…

Read More

Video: ದೂರ ಕುಳಿತು ಮಾತನಾಡಿ, ಮುಖದ ಹತ್ತಿರ ಬಂದು ಮಾತನಾಡಿದ ವ್ಯಕ್ತಿಗೆ ಸಂಸದೆ ಪ್ರಿಯಾ ಖಡಕ್ ರಿಯಾಕ್ಷನ್ – Kannada News | Awkward Moment on Stage: MP Priya Saroj Steps Back as Supporter Breaches Personal Space

ಲಕ್ನೋ, ಜನವರಿ 22: ಸಮಾಜವಾದಿ ಪಕ್ಷದ ಸಂಸದೆ ಹಾಗೂ ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಅವರ ಮದುವೆಯಾಗಲಿರುವ ಪ್ರಿಯಾ ಸರೋಜ್ ವೇದಿಕೆ ಕಾರ್ಯಕ್ರಮವೊಂದರಲ್ಲಿ ಇರಿಸುಮುರಿಸು ಅನುಭವಿಸಿರುವ ವಿಡಿಯೋ ವೈರಲ್ ಆಗಿದೆ. ವೇದಿಕೆಯಲ್ಲಿ ಖಾಲಿ ಇದ್ದ ಖುರ್ಚಿಯಲ್ಲಿ ವ್ಯಕ್ತಿಯೊಬ್ಬರು ಬಂದು ಕುಳಿತು ಪ್ರಿಯಾ ಅವರ ಮುಖದ ಹತ್ತಿರ ತಮ್ಮ ಮುಖ ತಂದು ಮಾತನಾಡಿದ್ದು, ಪ್ರಿಯಾ ಅವರ ಕೋಪಕ್ಕೆ ಕಾರಣವಾಗಿದೆ. ಕೂಡಲೇ ಪ್ರಿಯಾ ಸ್ವಲ್ಪ ಪಕ್ಕಕ್ಕೆ ಸರಿದು ದೂರದಿಂದ ಮಾತನಾಡಿ ಎಂದು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಈ ಘಟನೆ…

Read More

ಹರೀಶ್ ರಾಣಾ ಪ್ರಕರಣದ ಬೆನ್ನಲ್ಲೇ ಹೊಸ ಚರ್ಚೆ: ಕೋಮಾ ಮತ್ತು ಬ್ರೈನ್ ಡೆಡ್ಗೂ ಏನೆಲ್ಲಾ ವ್ಯತ್ಯಾಸ?

ಬಹು ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಹಾಸಿಗೆಯಲ್ಲೇ ಅಚೇತನವಾಗಿ ಮಲಗಿದ್ದ ಹರೀಶ್ ರಾಣಾಗೆ (Harish Rana) ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಕೋಮಾ ಮತ್ತು ಬ್ರೈನ್ ಡೆಡ್ ಎಂಬ ಎರಡು ವೈದ್ಯಕೀಯ ಸ್ಥಿತಿಗಳ ಬಗ್ಗೆ ಚರ್ಚೆ ಹೆಚ್ಚಾಗಿದೆ. ಇವು ಎರಡೂ ಗಂಭೀರ ಸ್ಥಿತಿಗಳಾಗಿದ್ದರೂ, ವೈದ್ಯಕೀಯ ಹಾಗೂ ಕಾನೂನು ದೃಷ್ಟಿಯಿಂದ ದೊಡ್ಡ ವ್ಯತ್ಯಾಸಗಳಿವೆ. ಈ ಪ್ರಕರಣದಿಂದ ಒಂದು ಪ್ರಮುಖ ಪ್ರಶ್ನೆ ಎದುರಾಗಿದೆ. ಹರೀಶ್ ರಾಣಾ ಸುಮಾರು 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಹಾಸಿಗೆಯಲ್ಲೇ ಇದ್ದು, ಎಐಐಎಂಎಸ್…

Read More

ನಿಲ್ಲದ ಮಾನವ-ಆನೆ ಸಂಘರ್ಷ: ಕಾಡಾನೆ ದಾಳಿಗೆ ಪಿಯು ವಿದ್ಯಾರ್ಥಿನಿ ಬಲಿ, ಭುಗಿಲೆದ್ದ ಆಕ್ರೋಶ – Kannada News | Kodagu Tragedy: Wild Elephant Kills PUC Student; Human Elephant Conflict Escalates

ಕೊಡಗು, ಮಾರ್ಚ್​​ 01: ಆ ವಿದ್ಯಾರ್ಥಿನಿ ಈಗಷ್ಟೇ ಪಿಯುಸಿ ಪರೀಕ್ಷೆ ಬರೆದಿದ್ದಳು. ಇನ್ನೆರಡು ತಿಂಗಳು ರಜೆಯನ್ನ ಆರಾಮವಾಗಿ ಕಳೆಯುವ ಆಸೆಯಲ್ಲಿದ್ದಳು. ನಿನ್ನೆ ಕೂಡ ಅಪ್ಪ-ಅಮ್ಮನ ಜೊತೆಗೆ ಬೇಗ ಮನೆ ಸೇರುವ ಆಸೆಯಲ್ಲಿದ್ದಳು. ಆದರೆ ಕಾಡಾನೆ (Elephant) ರೂಪದಲ್ಲಿ ಬಂದ ಯಮರಾಯ ಆ ಮುಗ್ಧ ಯುವತಿಯನ್ನ ಬಲಿ (death) ಪಡೆದಿದೆ. ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಘಟನೆ ನಡೆದಿದೆ. ಕ್ಷಣಾರ್ಧದಲ್ಲಿ ವಿದ್ಯಾರ್ಥಿನಿಯ ಜೀವ ತೆಗೆದ ಕಾಡಾನೆ ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ತಾರಕಕ್ಕೇರಿದೆ. ಕಾಡಾನೆ ದಾಳಿಗೆ…

Read More

ಕೊನೆಗೂ ಲ್ಯಾಂಡ್​ ಆದ ವಿಮಾನ: ಕಠ್ಮಂಡು ತಲುಪಿ ನಿಟ್ಟುಸಿರು ಬಿಟ್ಟ 180 ಪ್ರಯಾಣಿಕರು – Kannada News | Air India Express Kathmandu Flight Ordeal: 180 Passengers Stranded 3 Days Finally Reach Destination

ದೇವನಹಳ್ಳಿ, ಫೆಬ್ರವರಿ 28: ಮೂರು ಗಂಟೆಗಳಲ್ಲಿ ಮುಗಿಯುವ ಪ್ರವಾಸಕ್ಕೆ ಮೂರು ರಾಜ್ಯಗಳನ್ನು ಸುತ್ತಾಡಿಸಿದ್ದರು. ಮೂರು ನಿಮಿಷದ ಲ್ಯಾಂಡಿಂಗ್​ಗೆ ಮೂರು ದಿನಗಳ ಕಾಲ ವಿಮಾನದಲ್ಲೇ ಕೂರಿಸಿ ಸಿಬ್ಬಂದಿ ಸೂಕ್ತ ಮಾಹಿತಿ ನೀಡದೆ ಪರದಾಡಿಸಿದರು. ಆದರೆ ಇದೀಗ ಎಲ್ಲದಕ್ಕೂ ಬ್ರೇಕ್ ಬಿದ್ದಿದ್ದು, ಮೂರು ದಿನಗಳ ಬಳಿಕ ನೂರಾರಕ್ಕೂ ಹೆಚ್ಚು ಪ್ರಯಾಣಿಕರು (passenger) ಸುರಕ್ಷಿತವಾಗಿ ಕಠ್ಮಂಡು ತಲುಪಿ ನಿಟ್ಟುಸಿರು ಬಿಟ್ಟಿದ್ದಾರೆ. ಸುರಕ್ಷಿತವಾಗಿ ಗುರಿ ತಲುಪಿದ ಪ್ರಯಾಣಿಕರು ಇತ್ತೀಚೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್​ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ ಭುಗಿಲೆದ್ದಿತ್ತು. ಒಂದಲ್ಲ, ಎರಡಲ್ಲ ಮೂರು…

Read More

ಬೆಂಗಳೂರಿನಲ್ಲಿ 1.85 ಕೆಜಿ ಚಿನ್ನ ಕಳ್ಳತನ: ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ ನೋಡಿ

ಬೆಂಗಳೂರು, (ಮೇ 20): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಪಕ್ಕಾ ಸಿನಿಮೀಯ ಶೈಲಿಯಲ್ಲಿ ಖದೀಮರು ಬರೋಬ್ಬರಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು  ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ. ಹೋಲ್‌ಸೇಲ್ ದರದಲ್ಲಿ ಚಿನ್ನ ಖರೀದಿಸುವುದಾಗಿ ನಂಬಿಸಿ, ಮಲ್ಲೇಶ್ವರಂನ ನಗರತ್ ಪೇಟೆಯ ಪ್ರಸಿದ್ಧ ಮೆಹ್ತಾ ಜ್ಯುವೆಲ್ಲರಿಯಿಂದ 1.85 ಕೆಜಿ ಚಿನ್ನಾಭರಣಗಳನ್ನು ದೋಚಿ ಮೂವರು ಖದೀಮರು ಪರಾರಿಯಾಗಿದ್ದಾರೆ. ಇನ್ನು ಖದೀಮರು ಬ್ಯಾಗ್ ನಲ್ಲಿ ಚಿನ್ನ ತುಂಬಿಕೊಂಡು ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಮೆಹ್ತಾ ಜುವೆಲ್ಲರಿ ಮಾಲೀಕ…

Read More

‘ಪೂರ್ತಿ ಶೋ ಬಂದರೆ ಏನಾಗಬಹುದು?‘; ಕಿರುತೆರೆ ಲೋಕಕ್ಕೆ ಎಂಟ್ರಿಕೊಡಲು ರೋಹಿತ್ ರೆಡಿ – Kannada News | Rohit Sharma’s Entertainment Debut: From Cricket Pitch to Sony TV Show

ಕ್ರಿಕಟ್ ಲೋಕಕ್ಕೂ ಬಣ್ಣದ ಲೋಕಕ್ಕೂ ಎಲ್ಲಿಲ್ಲದ ನಂಟು. ಕ್ರಿಕೆಟ್ ಲೋಕದ ಅನೇಕರು ಸಿನಿಮಾದಲ್ಲಿ ನಟಿಸಿದ ಉದಾಹರಣೆ ಇದೆ. ಶೋನಲ್ಲಿ ಮಿಂಚಿದ್ದೂ ಇದೆ. ಈಗ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಸರದಿ. ಅವರು ಮೈದಾನದ ಹೊರಗೂ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ಬಿಡುಗಡೆ ಮಾಡಿರುವ ಹೊಸ ಟೀಸರ್, ರೋಹಿತ್ ಶರ್ಮಾ ಅವರ (Rohit Sharma) ಮನರಂಜನಾ ಲೋಕದ ಪದಾರ್ಪಣೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಸೋನಿ ಪಿಕ್ಚರ್ಸ್ ಹಂಚಿಕೊಂಡಿರುವ ಟೀಸರ್ ಗಮನ…

Read More

Bengaluru: ಸೊಸೆ ಮೇಲೆ ಮಾವನಿಂದಲೇ ಲೈಂಗಿಕ ದೌರ್ಜನ್ಯ; ಆಸೆ ಈಡೇರಿಸು ಎಂದು ಪೀಡನೆ – Kannada News | Married woman physically harassed by father in law police complaint lodged

ಬೆಂಗಳೂರು, ಫೆಬ್ರವರಿ 11: ನನ್ನ ಆಸೆ ಈಡೇರಿಸು ಎಂದು ಸೊಸೆಗೆ ಮಾವನೇ ಲೈಂಗಿಕ ಕಿರುಕುಳ ನೀಡಿರುವ ಆರೋಪ ಬೆಂಗಳೂರಲ್ಲಿ ಕೇಳಿಬಂದಿದೆ. ಥಣಿಸಂಧ್ರದ ಪ್ರತಿಷ್ಟಿತ ಸ್ಕೂಲ್ ಪ್ರಿನ್ಸಿಪಾಲ್ ಆಗಿರುವ ಮಹಿಳೆಗೆ ಆಕೆಯ ಗಂಡನ ತಂದೆ, ಕಾವಲ್ ಬೈರಸಂಧ್ರದ ಶಾಲೆಯೊಂದರ ಫೌಂಡರ್ ಆಗಿರುವ ವ್ಯಕ್ತಿ ಕಿರುಕುಳ ನೀಡಿರುವ ಬಗ್ಗೆ ಆರ್. ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಷಯವನ್ನು ಮಗನಿಗೆ ತಿಳಿಸಿದರೆ ಕೊಲ್ಲೋದಾಗಿ ಆರೋಪಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ ಎಂಬ ಬಗ್ಗೆಯೂ ದೂರಲ್ಲಿ ಉಲ್ಲೇಖಿಸಲಾಗಿದೆ. ಎಲ್ಲೆಂದರಲ್ಲಿ ಲೈಂಗಿಕ ಕಿರುಕುಳ…

Read More

ಆ ನಿಮ್ಮ ದೇವರಿಗಿಂತ ಮೋದಿಯೇ ಉತ್ತಮ: ಮುಫ್ತಿ ಷಮಾಯಿಲ್ ನದ್ವಿಗೆ ಕುಟುಕಿದ ಜಾವೇದ್ ಅಖ್ತರ್ – Kannada News | Javed Akhtar and Mufti Shamail Nadwi debate on existence of The God

ನವದೆಹಲಿ, ಡಿಸೆಂಬರ್ 21: ಜಗತ್ತಿನ ಎಲ್ಲಾ ಧರ್ಮಗಳನ್ನು ಯಾವುದೇ ಭೇದವಿಲ್ಲದೇ ಕುಟುಕುವ ಬಾಲಿವುಡ್ ಚಿತ್ರ ಸಾಹಿತಿ, ಕವಿ ಹಾಗೂ ವಿಚಾರವಂತರಾದ ಜಾವೇದ್ ಅಖ್ತರ್ (Javed Akhtar), ಮತ್ತೊಮ್ಮೆ ದೇವರ ಅಸ್ತಿತ್ವವನ್ನು ಪ್ರಶ್ನೆ ಮಾಡಿದ್ದಾರೆ. ದಿ ಲಲ್ಲನ್​ಟಾಪ್ ಎನ್ನುವ ಯೂಟ್ಯೂಬ್ ಪೋಡ್​ಕ್ಯಾಸ್ಟ್​ನಲ್ಲಿ ಇಸ್ಲಾಮೀ ವಿದ್ವಾಂಸ ಮುಫ್ತಿ ಷಮಾಯಿಲ್ ನದ್ವಿ (Mufti Shamail Nadwi) ಮತ್ತು ಜಾವೇದ್ ಅಖ್ತರ್ ನಡುವೆ ದೇವರ ಅಸ್ತಿತ್ವ ವಿಚಾರ ಕುರಿತು ನಡೆದ ಚರ್ಚೆ ಸಾಕಷ್ಟು ಪ್ರತಿಕ್ರಿಯೆ ಪಡೆಯುತ್ತಿದೆ. ಈ ವೇಳೆ, ಅಖ್ತರ್ ಅವರು ಪ್ಯಾಲೆಸ್ಟೀನ್…

Read More