ಸ್ಪೀಕರ್​ಗೆ ಪತ್ರ ಬರೆದ ಬಿಜೆಪಿಯ ಮಹಿಳಾ ಸಂಸದರು – Kannada News | BJP Women MPs Seek Speaker’s Intervention Over House Disruption

ನವದೆಹಲಿ, ಫೆಬ್ರವರಿ 10: ಲೋಕಸಭೆ(LokSabha)ಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟು ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿಪಕ್ಷಗಳ ಮಹಿಳಾ ಸಂಸದರ ನಂತರ ಬಿಜೆಪಿ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್​ಗೆ ಪತ್ರ ಬರೆದಿದ್ದಾರೆ. ಫೆಬ್ರವರಿ 4ರಂದು ಸದನದೊಳಗೆ ಪ್ರಧಾನಿ ಮೋದಿ ಕುರ್ಚಿಯನ್ನು ಸುತ್ತುವರೆದು ಅವರು ಭಾಷಣ ಮಾಡದಂತೆ ತಡೆದ ಮಹಿಳಾ ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿಯ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಫೆಬ್ರವರಿ 4ರಂದು ಲೋಕಸಭೆಯಲ್ಲಿ ವಿರೋಧ…

Read More

ಬಸವಣ್ಣನವರೇ ಮಹಿಳಾ ಮೀಸಲಾತಿಯ ಆದ್ಯ ಪ್ರವರ್ತಕ, ಮಹಿಳಾ ಮೀಸಲಾತಿಗೆ ಎಲ್ಲಾ ಪಕ್ಷಗಳು ಕೈಜೋಡಿಸಬೇಕು: ಜಯಮೃತ್ಯುಂಜಯ ಶ್ರೀ – Kannada News | Jayamrutyunjaya Swamiji Backs Women’s Reservation Bill; Claims Harassment Charges are a Conspiracy gainst him

ನವದೆಹಲಿ, ಏಪ್ರಿಲ್ 20: 12ನೇ ಶತಮಾನದಲ್ಲೇ ಬಸವಣ್ಣನವರು ಅನುಭವ ಮಂಟಪದ ಮೂಲಕ ಮಹಿಳೆಯರಿಗೆ ಮೀಸಲಾತಿ ಮತ್ತು ಸಮಾನ ಅವಕಾಶ ನೀಡಿದ ಮೊದಲಿಗರು. ಅವರ ಆಶಯದಂತೆ ಕೇಂದ್ರ ಸರ್ಕಾರದ ಮಹಿಳಾ ಮೀಸಲಾತಿ ಮಸೂದೆಗೆ ಎಲ್ಲಾ ರಾಜಕೀಯ ಪಕ್ಷಗಳು ಒಮ್ಮತದ ಬೆಂಬಲ ನೀಡಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ. ಬಸವ ಜಯಂತಿಯ ಸಂದರ್ಭದಲ್ಲಿ ದೆಹಲಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ರಾಜಕೀಯ ಮತ್ತು ಸಾಮಾಜಿಕ ಮೀಸಲಾತಿ ಕಲ್ಪಿಸುವ ಭಾರತ ಸರ್ಕಾರದ ಪ್ರಯತ್ನಕ್ಕೆ ಕನ್ನಡಿಗರ ಸಂಪೂರ್ಣ ಬೆಂಬಲವಿದೆ. ಬಸವಣ್ಣನವರ ಹೋರಾಟಕ್ಕೆ ಗೌರವ…

Read More

ಮೋದಿ ಕರೆಗೆ ಏರ್​ಟೆಲ್ ಮುಖ್ಯಸ್ಥರ ಬೆಂಬಲ; ಭಾರತದಲ್ಲಿ ಹೂಡಿಕೆ ಹೆಚ್ಚಿಸುವಂತೆ ಭಾರತೀಯ ಉದ್ಯಮಗಳಿಗೆ ಸುನೀಲ್ ಮಿತ್ತಲ್ ಕರೆ – Kannada News | Sunil Bharti Mittal urges India companies to double down on investments

ಸುನಿಲ್ ಭಾರ್ತಿ ಮಿತ್ತಲ್Image Credit source: PTI ನವದೆಹಲಿ, ಮೇ 11: ಜಾಗತಿಕವಾಗಿ ಪಶ್ಚಿಮ ಏಷ್ಯಾದಲ್ಲಿ (Middle East) ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದರೂ, ಭಾರತೀಯ ಉದ್ಯಮಿಗಳು ಹಿಂಜರಿಯದೆ ದೇಶದ ಒಳಗಿನ ಹೂಡಿಕೆಯನ್ನು ದುಪ್ಪಟ್ಟುಗೊಳಿಸಬೇಕು ಎಂದು ಭಾರ್ತಿ ಎಂಟರ್‌ಪ್ರೈಸಸ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ (Sunil Bharti Mittal) ಅವರು ಕರೆ ನೀಡಿದ್ದಾರೆ. ಜಾಗತಿಕ ಹೊಯ್ದಾಟಗಳ ನಡುವೆ ಭಾರತೀಯ ಆರ್ಥಿಕ ಬೆಳವಣಿಗೆ ಸರಾಗವಾಗಿ ಮುಂದುವರಿಯುವಂತಾಗಲು ಉದ್ಯಮಗಳು ದೊಡ್ಡ ಪಾತ್ರ ವಹಿಸಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯನ್ನು…

Read More

Video: ಪುಟ್ಟ ಮಗುವಿನಂತೆ ಮನೆಮಾಲೀಕನನ್ನು ಹಿಂಬಾಲಿಸಿದ ಬಾತುಕೋಳಿ – Kannada News | The duck followed the homeowner, video goes viral

ಸ್ವಾರ್ಥ(selfishness) ತುಂಬಿದ ಪ್ರಪಂಚದಲ್ಲಿ ಮನುಷ್ಯ ಮನುಷ್ಯನನ್ನು ನಂಬುವುದೇ ಕಷ್ಟ. ಹೀಗಾಗಿ ಮೂಕ ಜೀವಿಗಳೇ ಎಷ್ಟೋ ವಾಸಿ. ಒಮ್ಮೆ ಪ್ರೀತಿ, ಕಾಳಜಿ ತೋರಿಸಿದ್ರೆ ಆ ವ್ಯಕ್ತಿಯನ್ನು ಜೀವನ ಪರ್ಯಂತ ಮರೆಯಲ್ಲ. ಮಕ್ಕಳಂತೆ ಮನೆ ಮಾಲೀಕನ ಬರುವಿಕೆಗಾಗಿ ಕಾಯುತ್ತದೆ. ಈ ದೃಶ್ಯ ನೋಡಿದ ಮೇಲೆ ನಿಮಗೂ ಹಾಗೆಯೇ ಅನಿಸಬಹುದು. ತನ್ನ ಹಸಿವು ನೀಗಿಸಿದ ಮನೆ ಮಾಲೀಕನ ಮೇಲೆ ಈ ಬಾತುಕೋಳಿಗೆ ಎಷ್ಟು ಪ್ರೀತಿಯಿದೆ ಎನ್ನುವುದಕ್ಕೆ ಇದುವೇ ಸಾಕ್ಷಿ. ಇದೀಗ ಪುಟ್ಟ ಮಗುವಿನಂತೆ ಬಾತುಕೋಳಿಯೊಂದು (duck) ಮನೆ ಮಾಲೀಕನನ್ನು ಹಿಂಬಾಲಿಸಿಕೊಂಡು ಹೋಗುವ…

Read More

ಹಿರಿಯ ನಟನ ‘ವಾರಣಾಸಿ’ ಸಿನಿಮಾದಿಂದ ಹೊರಗಟ್ಟಿದರೇ ರಾಜಮೌಳಿ – Kannada News | SS Rajamouli replaces Bollywood actor Rajath Kapoor from Varanasi movie

ರಾಜಮೌಳಿ (Rajamouli) ಈಗ ಪ್ಯಾನ್ ವರ್ಲ್ಡ್ ನಿರ್ದೇಶಕ. ಅವರ ಸಿನಿಮಾನಲ್ಲಿ ಸಣ್ಣ ಪಾತ್ರದಲ್ಲಾಗಲೂ ನಟಿಸಲು ದೊಡ್ಡ ದೊಡ್ಡ ನಟರೇ ಸಾಲುಗಟ್ಟಿ ನಿಂತಿದ್ದಾರೆ. ರಾಜಮೌಳಿ ಸಿನಿಮಾನಲ್ಲಿ ಸಣ್ಣ ಪಾತ್ರದಲ್ಲಿ ನಟಿಸಲು ಸಹ ದೊಡ್ಡ ಸಿನಿಮಾಗಳನ್ನೇ ಕೈಬಿಡಲು ರೆಡಿ ಇದ್ದಾರೆ. ಅವರ ಸಿನಿಮಾನಲ್ಲಿ ನಟಿಸಲು ಅವಕಾಶ ಸಿಗುವುದೇ ಅದೃಷ್ಟವೆಂದು ಭಾವಿಸಲಾಗುತ್ತಿದೆ. ಹೀಗಿರುವಾಗ ಹಿಂದಿಯ ಜನಪ್ರಿಯ ಹಿರಿಯ ನಟರೊಬ್ಬರಿಗೆ ರಾಜಮೌಳಿ ತಮ್ಮ ಸಿನಿಮಾನಲ್ಲಿ ಅವಕಾಶ ನೀಡಿದ್ದರು. ಆದರೆ ಈಗ ಸಿನಿಮಾದಿಂದ ತೆಗೆದು ಹಾಕಿದ್ದಾರೆ. ಹಿಂದಿ ಸಿನಿಮಾ ಮತ್ತು ಟಿವಿ ಎರಡೂ ಕ್ಷೇತ್ರದಲ್ಲಿ…

Read More

ರಾಜ್ಯದಲ್ಲಿ ಮತ್ತೊಂದು ದುರಂತ: ನಡುರಸ್ತೆಯಲ್ಲೇ ಹೊತ್ತಿ ಉರಿದ ಖಾಸಗಿ ಸ್ಲೀಪರ್​​ ಬಸ್​​ – Kannada News | Running Sleeper Bus Catches Fire in Hosanagara, 36 Passengers Safe

ಶಿವಮೊಗ್ಗ, ಜನವರಿ 28: ಚಿತ್ರದುರ್ಗದ ಬಳಿ ನಡೆದ ಬಸ್​​ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ ನಡೆದಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದ ಬೆಂಕಿಯಿಂದ ಖಾಸಗಿ ಸ್ಲೀಪರ್​​ ಬಸ್ಸೊಂದು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸೂಡುರು ಬಳಿ ನಡೆದಿದೆ. ನಿಟ್ಟೂರಿಂದ ಬೆಂಗಳೂರಿಗೆ ಹೊರಟಿದ್ದ ಅನ್ನಪೂರ್ಣೇಶ್ವೇರಿ ಟ್ರಾವಲ್ಸ್​​ಗೆ ಸೇರಿದ ಖಾಸಗಿ ಬಸ್​​​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಬಸ್​​ ನಿಲ್ಲಿಸಲು ಚಾಲಕ ಮುಂದಾದಾಗ ಮರಕ್ಕೆ ಡಿಕ್ಕಿಯಾಗಿದೆ. ಬಸ್​​ನಲ್ಲಿದ್ದ 36 ಪ್ರಯಾಣಿಕರು ಕೂಡಲೇ ಕೆಳಗಿಳಿದ ಪರಿಣಾಮ ಭಾರೀ…

Read More

ವಿವಾಹಕ್ಕೂ ಮೊದಲು ನಯನತಾರಾ-ವಿಘ್ನೇಶ್ ಮಧ್ಯೆ ಆಗಿತ್ತು ಒಪ್ಪಂದ; ಇನ್ನೂ ಇದೆ ಆ ಡೀಲ್ – Kannada News | Vignesh Shivan and Nayanthara: Their Work Life Balance Secret for a Happy Marriage

ವಿಘ್ನೇಶ್ ಶಿವನ್ ಹಾಗೂ ನಯನತಾರಾ ಅವರು (Nayanthara) ವಿವಾಹ ಆಗಿ ನಾಲ್ಕು ವರ್ಷ ಕಳೆಯುತ್ತಾ ಬಂದಿದೆ. 2022ರಲ್ಲಿ ಇವರು ಮದುವೆ ಆದರು. ಈಗ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ನಯನತಾರಾ ಅವರು ವಿವಿಧ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ವಿಘ್ನೇಶ್ ಅವರು ಅಲ್ಲೊಂದು, ಇಲ್ಲೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ವಿಘ್ನೇಶ್ ಅವರು ದಾಂಪತ್ಯದ ಬಗ್ಗೆ ಒಂದು ಅಚ್ಚರಿಯ ವಿಷಯ ಬಿಟ್ಟುಕೊಟ್ಟಿದ್ದಾರೆ. ವಿಘ್ನೇಶ್ ನಿರ್ದೇಶನದ ‘ಲವ್ ಇನ್ಶೂರೆನ್ಸ್ ಕಂಪನಿ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾಗೆ ಪ್ರದೀಪ್…

Read More

ಸಾವಿನ ಕದ ತಟ್ಟಿ ಮರಳಿ ಬಂದ ರಾಣಾ ದಗ್ಗುಬಾಟಿ: ಆಗಿದ್ದೇನು? – Kannada News | Rana Daggubati said he returned movie advances due to his health issue

‘ಬಾಹುಬಲಿ’ (Bahubali) ಸಿನಿಮಾದ ವಿಲನ್ ಬಲ್ಲಾಳದೇವ ಯಾರಿಗೆ ನೆನಪಿಲ್ಲ. ಪಾತ್ರದಲ್ಲಿ ನಟಿಸಿದ್ದ ರಾಣಾ ದಗ್ಗುಬಾಟಿ, ಆ ಪಾತ್ರಕ್ಕಾಗಿ ಭಾರಿ ರಿಸ್ಕ್ ತೆಗೆದುಕೊಂಡಿದ್ದರು. ಪ್ರಭಾಸ್​​ಗಿಂತಲೂ ಹುರಿಗಟ್ಟಿದ ದೇಹವನ್ನು ‘ಬಾಹುಬಲಿ’ ಸಿನಿಮಾಕ್ಕಾಗಿ ತಯಾರು ಮಾಡಿಕೊಂಡಿದ್ದರು ರಾಣಾ ದಗ್ಗುಬಾಟಿ. ‘ಬಾಹುಬಲಿ’ ಬಳಿಕ ಹಲವು ಮಾಸ್ ಸಿನಿಮಾ ಆಫರ್​​ಗಳು ರಾಣಾ ದಗ್ಗುಬಾಟಿಗೆ ಬಂದಿದ್ದವು. ಆದರೆ ರಾಣಾ ಯಾವ ಸಿನಿಮಾನಲ್ಲಿಯೂ ನಟಿಸಲಿಲ್ಲ, ಬದಲಿಗೆ ತೆಗೆದುಕೊಂಡಿದ್ದ ಅಡ್ವಾನ್ಸ್ ಹಣವನ್ನು ಸಹ ವಾಪಸ್ ಮಾಡಿಬಿಟ್ಟರು. ಅದೇಕೆ ಎಂಬುದನ್ನು ಇದೀಗ ಅವರು ಬಾಯ್ಬಿಟ್ಟಿದ್ದಾರೆ. ರಾಣಾ ದಗ್​ಗುಬಾಟಿ ಅವರಿಗೆ ‘ಬಾಹುಬಲಿ’…

Read More

MI vs RCB: ಸಾವಿರ ರನ್​​ಗಳ ಸರದಾರ ಕಿಂಗ್ ಕೊಹ್ಲಿ

ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದಾಗ್ಯೂ ಕೊಹ್ಲಿ ಅವರ ಇನ್ನಿಂಗ್ಸ್​ನಲ್ಲಿ ಪವರ್ ಇರಲಿಲ್ಲ. ಅಂದರೆ ಈ ಅರ್ಧಶತಕ ಪೂರೈಸಲು ಕೊಹ್ಲಿ 38 ಎಸೆತಗಳಲ್ಲಿ 50 ರನ್ ಬಾರಿಸಿದರು. ಈ ನಿಧಾನಗತಿಯ ಅರ್ಧಶತಕದ ಹೊರತಾಗಿಯೂ ಕೊಹ್ಲಿ, ಸಾಲ್ಟ್ ಹಾಗೂ ಪಾಟಿದರ್ ಅವರೊಂದಿಗೆ ಶತಕ ಮತ್ತು ಅರ್ಧಶತಕದ ಜೊತೆಯಾಟವನ್ನಾಡುವ ಮೂಲಕ ತಂಡಕ್ಕೆ ನೆರವಾದರು. ಮಾತ್ರವಲ್ಲದೆ ತಮ್ಮ ಅರ್ಧಶತಕದ ಇನ್ನಿಂಗ್ಸ್ ಮೂಲಕ ಮುಂಬೈ…

Read More

ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದಿಂದ ಭಾರತದ ರೈತರು, ಎಂಎಸ್‌ಎಂಇಗಳಿಗೆ ತೊಂದರೆಯಾಗುವುದಿಲ್ಲ; ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ – Kannada News | India US Trade Deal will not Hurt Farmers and MSMEs Piyush Goyal clarifies

ನವದೆಹಲಿ, ಫೆಬ್ರವರಿ 7: ಭಾರತ ಮತ್ತು ಅಮೆರಿಕದ ನಡುವೆ ನಡೆದ ವ್ಯಾಪಾರ ಒಪ್ಪಂದದ (Trade Deal) ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ, ವಿಪಕ್ಷಗಳಿಂದ ಆಕ್ಷೇಪವೂ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದವನ್ನು ಶ್ಲಾಘಿಸಿದ್ದಾರೆ. ಈ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಿದ ಪಿಯೂಷ್ ಗೋಯಲ್, “ಅಮೆರಿಕ ಈಗ ರಫ್ತಿಗೆ ಹೆಚ್ಚು ಆದ್ಯತೆಯ ದೇಶವಾಗಿದೆ. ಭಾರತೀಯ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ವಿಶ್ವದ ಅತಿದೊಡ್ಡ…

Read More