Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 16ರ ದಿನಭವಿಷ್ಯ

ದಂಪತಿಗೆ ವೀಳ್ಯದೆಲೆ, ಅಡಿಕೆ, ತೆಂಗಿನಕಾಯಿ, ಬಾಳೇಹಣ್ಣು ಸಮೇತ ನೀಡಿ. ಸಂಜೆಯ ವೇಳೆಗೆ ಹೀಗೆ ನೀಡುವುದರಿಂದ ಆರ್ಥಿಕ ಒತ್ತಡ ನಿವಾರಣೆ ಮಾಡಿಕೊಳ್ಳುವ ಮಾರ್ಗೋಪಾಯ ಗೋಚರ ಆಗಲಿದೆ. ಸೈಟು ಖರೀದಿ- ಮನೆ ಖರೀದಿಗೆ ಪ್ರಯತ್ನಿಸುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4) ಕುಟುಂಬದಲ್ಲಿ ಸಣ್ಣಮಟ್ಟದ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಆದರೆ ನಿಮ್ಮ ಸಮಯೋಚಿತ ಮಾತಿನ ಮೂಲಕವೇ ಸಮಸ್ಯೆಗೆ ಪರಿಹಾರ ನೀಡುತ್ತೀರಿ. ಹಣಕಾಸಿನ ವಿಷಯದಲ್ಲಿ ಆಮೇಲೆ ಮಾಡಿದರಾಯಿತು ಎಂಬ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 16ರ ದಿನಭವಿಷ್ಯ

ಕೆಂಪು ಬಣ್ಣದ ಕಮಲದ ಹೂವನ್ನು ಲಕ್ಷ್ಮೀ ದೇವಿಯ ವಿಗ್ರಹ ಅಥವಾ ಚಿತ್ರಪಟ ಅಥವಾ ದೇವಸ್ಥಾನದಲ್ಲಿನ ವಿಗ್ರಹಕ್ಕೆ ಅರ್ಪಣೆ ಮಾಡಿ. ಇದರಿಂದಾಗಿ ಕಾರ್ಯ ವಿಳಂಬ ದೂರವಾಗಲಿದೆ. ಅದೇ ವೇಳೆ ನಿಮಗೆ ಬರಬೇಕಾದ ಆದಾಯಕ್ಕೆ ತಡೆ ಆಗುತ್ತಿದ್ದಲ್ಲಿ ಅದರ ನಿವಾರಣೆ ಆಗಲಿದೆ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ನೀವು ಮಾಡುತ್ತಿರುವ ಪ್ರಯತ್ನ ಹಾಗೂ ಹಾಕುತ್ತಿರುವ ಶ್ರಮಕ್ಕೆ ಪ್ರತಿಫಲವು ಮೇಲ್ನೋಟಕ್ಕೆ ಕಂಡು ಬರುವುದಿಲ್ಲ. ಆದರೆ ದೀರ್ಘಾವಧಿಗೆ ಇದು ನಿಮ್ಮ ಕೈ…

Read More

Horoscope Today 16 February: ಇಂದು ಈ ರಾಶಿಯವರು ಯಾರನ್ನೋ ನಂಬಿ ಕುಳಿತುಕೊಳ್ಳಬಾರದು – Kannada News | Horoscope for Today, 16 February: People of This Zodiac Sign Should Be Cautious and Not Trust Anyone

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಧನಿಷ್ಠಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಸಿದ್ಧಿ, ಕರಣ : ವಣಿಜ, ಸೂರ್ಯೋದಯ – 06 – 48 am, ಸೂರ್ಯಾಸ್ತ – 06 – 28 pm, ಇಂದಿನ ಶುಭಾಶುಭ ಕಾಲ : ರಾಹು 08:16…

Read More

ಶಿವರಾತ್ರಿಗೆ ಬಿಡುಗಡೆ ಆಯ್ತು ‘ನಾಗಬಂಧಂ’ ಸಿನಿಮಾ ಟೀಸರ್ – Kannada News | Nagabandam Telugu pan India movie teaser released by Mahesh Babu

ಚಿತ್ರರಂಗದಲ್ಲಿ ಇತ್ತೀಚೆಗೆ ಪೌರಾಣಿಕ ಕತೆಗಳನ್ನು ಆಧರಿಸಿದ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇತ್ತೀಚೆಗಿನ ವರ್ಷಗಳಲ್ಲಿ ಬಿಡುಗಡೆ ಆಗಿರುವ ಪೌರಾಣಿಕ ಕತೆಯುಳ್ಳ ಸಿನಿಮಾಗಳು, ಫ್ಯಾಂಟೆಸಿ ಬೆರೆತ ಪೌರಾಣಿಕ ಕತೆಯ ಸಿನಿಮಾಗಳು ಹಿಟ್-ಸೂಪರ್ ಹಿಟ್ ಆಗಿದ್ದೇ ಇದಕ್ಕೆ ಮೂಲ ಕಾರಣ. ಇದೇ ಸಿನಿಮಾ ಸರಣಿಗೆ ಸೇರಿದ ಹೊಸ ಸಿನಿಮಾ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ನಾಗಬಂಧಂ’. ಶಿವರಾತ್ರಿ ಪ್ರಯುಕ್ತ ‘ನಾಗಬಂಧಂ’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಟಾಲಿವುಡ್ ಸೂಪರ್​​ಸ್ಟಾರ್ ಮಹೇಶ್ ಬಾಬು ಅವರು ಟೀಸರ್ ಬಿಡುಗಡೆ ಮಾಡಿದ್ದಾರೆ. ಸಿನಿಮಾದ ಟೀಸರ್ ಕುತೂಹಲ…

Read More

ಬೆಂಗಳೂರು: ಹುಟ್ಟಿಸಿದ ತಂದೆ-ತಾಯಿಯನ್ನೇ ಕೊಂದವನ ಕೈಯಲ್ಲೇ ಅಂತ್ಯಸಂಸ್ಕಾರ! – Kannada News | Court Gives permissions Killer Son to performed Mother And Father last rights at bengaluru

ಬೆಂಗಳೂರು, (ಫೆಬ್ರವರಿ 15): ಪುತ್ರನೇ ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು (Father And Mother) ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿತ್ತು. ನೌಕಾಪಡೆಯ ನಿವೃತ್ತ ಕ್ಯಾಪ್ಟನ್‌ ನವೀನ್ ಚಂದ್ರ ಭಟ್ ಹಾಗೂ ಪತ್ನಿ ದಂತ ವೈದ್ಯೆಯಾಗಿದ್ದ ಡಾ.ಶ್ಯಾಮಲಾ ಭಟ್​​​ ನನ್ನು ಪುತ್ರ ರೋಹನ್ ಭಟ್ ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಜೋಡಿ ಕೊಲೆಗೆ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಆದ್ರೆ, ಇದೀಗ ಅದೇ ಪುತ್ರ…

Read More

IND vs PAK: ಕೊಲಂಬೊದಲ್ಲಿ ಕಕ್ಕಾಬಿಕ್ಕಿಯಾದ ಪಾಕಿಸ್ತಾನ; ಭಾರತಕ್ಕೆ 61 ರನ್ ಜಯ – Kannada News | T20 World Cup 2026: India Crushes Pakistan in Colombo; Ishan Kishan Shines with 175 Runs

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ವಿಶ್ವಕಪ್​ನಲ್ಲಿ (T20 World Cup 2026) ಭಾರತ ಹಾಗೂ ಪಾಕಿಸ್ತಾನ (India vs Pakistan) ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಇಶಾನ್ ಕಿಶನ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 175 ರನ್ ಕಲೆಹಾಕಿ, ಪಾಕಿಸ್ತಾನಕ್ಕೆ 176 ರನ್​ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ, ಭಾರತದ ಕರಾರುವಕ್ಕಾದ ದಾಳಿಗೆ ಕಕ್ಕಾಬಿಕ್ಕಿಯಾಗಿ ಪೂರ್ಣ 20 ಓವರ್​ಗಳನ್ನು ಆಡಲಾಗದೆ…

Read More

ನಮಾಜ್ ವೇಳೆ ಶಾಂತಿ ಇರಬೇಕಾದ ಮಸೀದಿಯೊಳಗೇ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ – Kannada News | Assault On Boy In Mosque at Mysuru, captured on CCTV

ಮೈಸೂರು, (ಫೆಬ್ರವರಿ 15): ನಮಾಜ್ ಸಮಯದಲ್ಲಿ ಮಸೀದಿಯಲ್ಲಿ (Mosque) ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆದಿರುವ ಘಟನೆ ಮೈಸೂರಿನ (Mysuru) ಎನ್ ಆರ್ ಮೊಹಲ್ಲಾದ ಮಸೀದಿಯಲ್ಲಿ ನಡೆದಿದೆ. ಫೆಬ್ರವರಿ 13 ಶುಕ್ರವಾರ ನಮಾಜ್ ವೇಳೆ ಮೊದಲು ಮಾತಿನ ಜಗಳ ನಡೆದಿದ್ದು, ಬಳಿಕ ಬಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಇದಕ್ಕಿಂತಲೂ ಕ್ರೂರವಾಗಿ ಕಾಲಿನಿಂದ ಒದ್ದು ಕ್ರೌರ್ಯ ಮೆರೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋದಲ್ಲಿ ಬಾಲಕನನ್ನು ಅಟ್ಟಾಡಿಸಿ ಹಲ್ಲೆ ಮಾಡುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣುತ್ತಿವೆ. ಘಟನೆ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ…

Read More

ಗಣೇಶ್ ಸಿನಿಮಾ ಜರ್ನಿಗೆ 20 ವರ್ಷ, ಸಿನಿಮಾ ಮೂಲಕ ವಿಶಿಷ್ಟ ಗೌರವ – Kannada News | Golden star Ganesh new movie Sukagamana Bayasuva starts shooting

‘ಗೋಲ್ಡನ್ ಸ್ಟಾರ್’ ಎನಿಸಿಕೊಂಡಿರುವ ಗಣೇಶ್ (Ganesh), ಕನ್ನಡ ಚಿತ್ರರಂಗದ ಸ್ಟಾರ್ ನಟರುಗಳಲ್ಲಿ ಒಬ್ಬರು. ಹೊಡಿ-ಬಡಿ ಹೀರೋಗಳ ನಡುವೆ ಅಪ್ಪಟ ಕೌಟುಂಬಿಕ ನಾಯಕನಾಗಿ ಮಿಂಚುತ್ತಿರುವ ಗಣೇಶ್ ಅವರಿಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಅದರಲ್ಲೂ ಗಣೇಶ್​​ಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ದೊಡ್ಡದಾಗಿದೆ. ಟಿವಿ ಆಂಕರ್ ಆಗಿದ್ದ ಗಣೇಶ್ ಅವರು ಅವರು ಬೆಳ್ಳಿತೆರೆಯಲ್ಲಿ ಮಿಂಚಲು ಆರಂಭಿಸಿ ಈಗ ಯಶಸ್ವಿ 20 ವರ್ಷಗಳು ಸಂದಿವೆ. ಗಣೇಶ್ ಅವರ ಜರ್ನಿ ಅದ್ಭುತವಾದುದು, ಹಲವು ಏರಿಳಿತಗಳಿಂದ ಕೂಡಿದ್ದು ಮತ್ತು ಹಲವಾರು ಮಂದಿಗೆ ಸ್ಪೂರ್ತಿ ಆಗಬಹುದಾದಂಥಹ…

Read More

ಗ್ಯಾಸ್ ಸೋರಿಕೆ: ಬೆಂಕಿಯ ಫೋರ್ಸ್‌ಗೆ ಇಡೀ ಮನೆಯೇ ಛಿದ್ರ ಛಿದ್ರ

ಬೆಂಗಳೂರು, (ಫೆಬ್ರವರಿ 15): ಗ್ಯಾಸ್​ ಸಿಲಿಂಡರ್​ ಸೋರಿಕೆಯಾಗಿ ಸ್ಫೋಟವಾಗಿರುವ ಘಟನೆ ಬೆಂಗಳೂರಿನ ಯಲಹಂಕದ ಚೌಡೇಶ್ವರಿ ಲೇಔಟ್​​ನ ಮನೆಯೊಂದರಲ್ಲಿ ನಡೆದಿದೆ. ಸ್ಫೋಟದ ತೀವ್ರತೆಗೆ ಮನೆ ಗೋಡೆ ಛಿದ್ರವಾಗಿದ್ದು, ಘಟನೆಯಲ್ಲಿ ಬಾಗೇಪಲ್ಲಿ ಮೂಲದ ದಂಪತಿ ರಾಜು, ಕೃಷ್ಣಮ್ಮಗೆ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಈ ವಿಚಾರ ತಿಳಿದು ಸ್ಥಳಕ್ಕೆ ಯಲಹಂಕ ಠಾಣೆಯ ಪೊಲೀಸರ ಭೇಟಿ ನೀಡಿದ ಪರಿಶೀಲಿಸಿದರು. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. Source link

Read More

ರಾಯಚೂರು: ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಸನ್ನದ್ಧ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ – Kannada News | Raichur Fights Illegal Sand Mining: District Administration Alerts After MLA Complaint

ರಾಯಚೂರು, ಫೆಬ್ರವರಿ 15: ಗಡಿ ಜಿಲ್ಲೆ ರಾಯಚೂರಿನಲ್ಲಿ ಅಕ್ರಮ ಮರಳು ದಂಧೆಗೆ (Illegal Sand Mining) ಜನ ರೋಸಿ ಹೋಗಿದ್ದು, ಸರಣಿ ಅಕ್ರಮಗಳು ಬಿಚ್ಚಿಕೊಳ್ಳುತ್ತಿವೆ. ಈ ಬಗ್ಗೆ ಇತ್ತೀಚೆಗೆ ಖುದ್ದು ಶಾಸಕಿ ಕರೆಮ್ಮಾ ಜಿ ನಾಯಕ್ ಜಿಲ್ಲಾಧಿಕಾರಿ ಮತ್ತು ಎಸ್​​ಪಿಗೆ ದೂರು ನೀಡಿದ್ದರು. ಇದೇ ಕಾರಣಕ್ಕೆ ಇದೀಗ ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಅಲರ್ಟ್ ಆಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೇ ಶಿಸ್ತುಕ್ರಮಕ್ಕೆ ಸಜ್ಜಾಗಿದೆ. ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ಹಾಗೂ ಕೃಷ್ಣಾ ನದಿ ಹರಿಯುತ್ತವೆ. ಎರಡು ನದಿಗಳ ಒಡಲನ್ನ…

Read More