Headlines

U19 World Cup: ದಾಖಲೆಯ ಗುರಿ ಬೆನ್ನಟ್ಟಿ ಸತತ 6ನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿದ ಭಾರತ – Kannada News | 19 World Cup 2026: India Dominates Afghanistan, Enters Final for 6th Time

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ (India U19 vs Afghanistan U19) ನಡುವಿನ 2026 ರ ಅಂಡರ್-19 ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ನಾಯಕತ್ವದ ಭಾರತ ಯುವ ಪಡೆ ಅಫ್ಘಾನಿಸ್ತಾನ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಸತತ 6ನೇ ಬಾರಿಗೆ ಅಂಡರ್ 19 ವಿಶ್ವಕಪ್ ಫೈನಲ್​ಗೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ ಇಬ್ಬರ ಶತಕದ ನೆರವಿನಿಂದ 310 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ…

Read More

ಜ್ಯೋತಿಷಿ ಹೇಳ್ತಿದ್ದವನ ಭವಿಷ್ಯವೇ ತಲೆಕೆಳಗಾಯ್ತು: ಕಮಲಾಕರ್ ಭಟ್‌-ಸುಚಿತ್ರಾಳ ಮತ್ತಷ್ಟು ಶೋಕಿ ಪುರಾಣ ಬಯಲು – Kannada News | Kamalakar bhat guruji And Suchitra And others judicial custody In Siddapur murder over affair dispute

ಶಿವಮೊಗ್ಗ/ಕಾರವಾರ, (ಫೆಬ್ರವರಿ 04): ನಿಮಗೆ ಸಾಡೇಸಾಥ್ ಆರಂಭವಾಗಿದೆ. ನಿಮಗೆ ಶನಿ ವಕ್ಕರಿಸಿದ್ದಾನೆ ಎಂದು ಜನರಿಗೆ ಜ್ಯೋತಿಷಿ ಹೇಳ್ತಿದ್ದ ಕಮಲಾಕರ್ ಭಟ್‌ನ ಭವಿಷ್ಯವೇ ತಲೆಕೆಳಗಾಗಿದೆ. ಕೊಲೆ ಕೇಸ್‌ನಲ್ಲಿ A3 ಕಮಲಾಕರ್ ಭಟ್ ಜೈಲುಪಾಲಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜೆಎಂಎಫ್‌ಸಿ ಕೋರ್ಟ್‌, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಇನ್ನು ಕಮಲಾಕರ್ ಭಟ್‌ ಹಾಗೂ ಸುಚಿತ್ರಾಳ ಅಕ್ರಮ ಸಂಬಂಧ ಬಗೆದಷ್ಟು ಬಯಲಾಗುತ್ತಿದೆ. ಜ್ಯೋತಿಷಿ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದ ಸುಚಿತ್ರಾ, ಬಳಿಕ ಪರ್ಮನೆಂಟ್ ಆಗಿ ಆತನ ಮನೆಯವಳಾಗಿಬಿಟ್ಟಿದ್ದಳು….

Read More

ಫೆಬ್ರವರಿ 7-8ರಂದು ಮಲೇಷ್ಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ – Kannada News | PM Modi To Visit Malaysia On February 7 for bilateral talks and strategic Ties

ನವದೆಹಲಿ, ಫೆಬ್ರವರಿ 4: ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ವಾರದ ಕೊನೆಯಲ್ಲಿ ಮಲೇಷ್ಯಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಫೆಬ್ರವರಿ 7 ಹಾಗೂ 8ರಂದು ನಡೆಯಲಿರುವ ಈ ಭೇಟಿ ಪ್ರಧಾನಿ ಮೋದಿ ಅವರ ಮಲೇಷ್ಯಾಕ್ಕೆ ಮೂರನೇ ಭೇಟಿಯಾಗಿದೆ. ಈ ಮೊದಲು ಆಗಸ್ಟ್ 2024ರಲ್ಲಿ ಭಾರತ-ಮಲೇಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ‘ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ’ಗೆ ಏರಿಸಿದ ನಂತರ ಮಲೇಷ್ಯಾಕ್ಕೆ ಇದು…

Read More

ನಾನು ಜೀವನದ ಕೊನೆಕಾಲದಲ್ಲಿದ್ದೇನೆ, ಈ ವೃದ್ಧನ ಮನವಿಗೆ ಸ್ಪಂದಿಸಿ: ರಾಜ್ಯಸಭೆಯಲ್ಲಿ ಗದ್ಗದಿತರಾದ ದೇವೇಗೌಡ – Kannada News | Save Karnataka Farmers from Water Crisis: HD Deve Gowda Emotional spech in Rajya Sabha

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡImage Credit source: tv9 kannada ಬೆಂಗಳೂರು, ಫೆಬ್ರವರಿ 04: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​​ಡಿ ದೇವೇಗೌಡರು (H. D. Deve Gowda) ಇಂದು ರಾಜ್ಯಸಭೆಯಲ್ಲಿ ಕರ್ನಾಟಕದ ಪರ ಧ್ವನಿ ಎತ್ತಿದರು. ರಾಜ್ಯದ ನೀರಾವರಿ ಬಗ್ಗೆ ಪ್ರಸ್ತಾಪಿಸಿದ ಅವರು, ಕರ್ನಾಟಕವನ್ನು ರಕ್ಷಿಸಿ. ನನ್ನ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ, ಅವರ ಹಿತ ಕಾಯಿರಿ. ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ ಎಂದು ಗದ್ಗದಿತರಾದರು. ಹೆಚ್​​ಡಿ ದೇವೇಗೌಡರ ಮಾತಿಗೆ ಇಡೀ…

Read More

Chanakya Niti: ಯಶಸ್ಸು, ಶ್ರೀಮಂತಿಕೆ ಬಯಸುವವರು ರಾತ್ರಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಲೇಬೇಕು – Kannada News | Chanakya Niti: Those who want success should do these things before going to bed at night

ಪ್ರತಿಯೊಬ್ಬರೂ ಸಹ ಜೀವನದಲ್ಲಿ ಯಶಸ್ಸನ್ನು (success) ಸಾಧಿಸಲು ಬಯಸುತ್ತಾರೆ. ಇದಕ್ಕಾಗಿ ಸಾಕಷ್ಟು ಕಠಿಣ ಪರಿಶ್ರಮ ಪಡುತ್ತಾರೆ. ಹೀಗಿದ್ರೂ ಕೂಡ ಕೆಲವರಿಗೆ ಯಶಸ್ಸು, ಶ್ರೀಮಂತಿಕೆ ಎನ್ನುವಂತಹದ್ದು ಲಭಿಸುವುದೇ ಇಲ್ಲ. ಯಶಸ್ಸಿಗೆ ಕಠಿಣ ಪರಿಶ್ರಮ ಮಾತ್ರವಲ್ಲ ಸರಿಯಾದ ಯೋಜನೆಯೂ ಅತ್ಯಗತ್ಯ ಎನ್ನುತ್ತಾರೆ ಚಾಣಕ್ಯರು.ಅಷ್ಟೇ ಅಲ್ಲದೆ ಸಕ್ಸಸ್‌ ಬಯಸುವವರು ರಾತ್ರಿ ಮಲಗುವ ಮುನ್ನ ಈ ಒಂದಷ್ಟು ಕೆಲಸಗಳನ್ನು ತಪ್ಪದೇ ಮಾಡಲೇಬೇಕು ಎಂದಿದ್ದಾರೆ. ಇವರು ಹೇಳಿಕೊಟ್ಟಿರುವ ಯಶಸ್ಸಿನ ಸೂತ್ರಗಳನ್ನು ಪಾಲಿಸಿದರೆ ನೀವು ಯಶಸ್ಸು ಮತ್ತು ಸಂಪತ್ತು ಎರಡನ್ನೂ ಪಡೆಯಬಹುದು. ಹಾಗಿದ್ರೆ ಯಶಸ್ಸನ್ನು ಗಳಿಸಲು…

Read More

ನನ್ನ ಪ್ರಕಾರ.. ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ – Kannada News | Dhoni Backs Kohli, Rohit for 2027 ODI World Cup: Experience Key for Team India

ಪ್ರಸ್ತುತ 2026 ರ ಟಿ20 ವಿಶ್ವಕಪ್ ಆಡುತ್ತಿರುವ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ಇರಾದೆಯಲ್ಲಿದೆ. ಈ ವರ್ಷ ಟಿ20 ವಿಶ್ವಕಪ್ ನಡೆದರೆ, ಮುಂದಿನ ವರ್ಷ ಅಂದರೆ 2027 ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. 2023 ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಭಾರತ ಎಡವಿತ್ತು. ಆದರೆ 2027 ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿ ಬರವನ್ನು ನೀಗಿಸಿಕೊಳ್ಳುವ ಗುರಿಯಲ್ಲಿ ಟೀಂ ಇಂಡಿಯಾವಿದೆ. ಆದರೆ ಈ ಟೂರ್ನಿಗೆ ಭಾರತ ತಂಡ ಹೇಗಿರಲಿದೆ ಎಂಬುದು ಪ್ರಮುಖ…

Read More

ಆಟವಾಡುತ್ತಾ ಆಟಿಕೆ ನುಂಗಿದ ಮಗು; ಎಂಡೋಸ್ಕೋಪಿ ಮೂಲಕ ಹೊರತೆಗೆದ ವೈದ್ಯರು – Kannada News | Baby boy swallows Hulk toy doctors remove it via endoscopy

ಅಹಮದಾಬಾದ್, ಫೆಬ್ರವರಿ 4: ಮಕ್ಕಳು ಸಾಮಾನ್ಯವಾಗಿ ಆಗಾಗ ತಮ್ಮ ಬಾಯಿಯಲ್ಲಿ ವಸ್ತುಗಳನ್ನು ಹಾಕುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಈ ಬಗ್ಗೆ ಪೋಷಕರು ನಿರ್ಲಕ್ಷ್ಯ ಮಾಡಬಾರದು. ಇತ್ತೀಚಿನ ಒಂದು ಪ್ರಕರಣದಲ್ಲಿ ಗುಜರಾತ್‌ನ (Gujarat)  ಅಹಮದಾಬಾದ್‌ನ ಒಂದೂವರೆ ವರ್ಷದ ಬಾಲಕ ಆಕಸ್ಮಿಕವಾಗಿ ತನ್ನ ಪ್ಲಾಸ್ಟಿಕ್ ಆಟಿಕೆಯನ್ನು ನುಂಗಿದ್ದ. ವೈದ್ಯಕೀಯ ಚಿಕಿತ್ಸೆಗಾಗಿ ಅವನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಟಿಕೆ ಮಗುವಿನ ಹೊಟ್ಟೆಯಲ್ಲಿ ಸಿಲುಕಿಕೊಂಡಿದ್ದು, ಅವನ ಒಳ ಅಂಗಗಳಿಗೆ ಹಾನಿಯನ್ನುಂಟುಮಾಡುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದರು. ವೈದ್ಯರು ಮೊದಲು ಎಕ್ಸ್-ರೇ ನಡೆಸಿದರು. ಇದಾದ ನಂತರ…

Read More

‘ಟಾಕ್ಸಿಕ್’ ಬಗ್ಗೆ ಭಯವಿಲ್ಲ ಎಂದಿದ್ದ ಹೀರೋ ಈಗ ಹೆಜ್ಜೆ ಹಿಂದಿಟ್ಟಿದ್ದೇಕೆ? – Kannada News | Adavi Shesh avoid clash with Toxic and Dhurandhar 2

ಮಾರ್ಚ್ ತಿಂಗಳಲ್ಲಿ ಕೆಲವು ಬಲು ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅದರಲ್ಲೂ ಯಶ್ ನಟನೆಯ ‘ಟಾಕ್ಸಿಕ್’ (Toxic) ಮತ್ತು ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಎರಡೂ ಮಾರ್ಚ್ 19ರಂದು ಒಂದೇ ದಿನ ಬಿಡುಗಡೆ ಆಗಲಿದ್ದು ಬೇರೆ ಸಿನಿಮಾಗಳೆಲ್ಲ ದೊಡ್ಡ ಸಿನಿಮಾಗಳಿಗೆ ದಾರಿ ಮಾಡಿ ಕೊಡುತ್ತಿವೆ. ಆದರೆ ಅದೇ ದಿನ ಅಂದರೆ ಮಾರ್ಚ್ 19ರಂದೇ ತೆಲುಗಿನ ನಟ ಅಡವಿ ಶೇಷ್ ನಟನೆಯ ‘ಡಕಾಯಿತ್’ ಸಿನಿಮಾ ಬಿಡುಗಡೆಗೆ ಅಣಿಯಾಗಿತ್ತು. ಆದರೆ ಇದೀಗ ಸಿನಿಮಾದ ಬಿಡುಗಡೆಯನ್ನು ಅಚಾನಕ್ಕಾಗಿ ಮುಂದೂಡಲಾಗಿದೆ. ಮಾರ್ಚ್…

Read More

IND vs SA: ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತ; ಅಭಿಷೇಕ್- ಕಿಶನ್​ಗೆ ಓಪನಿಂಗ್ ಜವಾಬ್ದಾರಿ – Kannada News | India vs South Africa T20 WC 2026 Warm up: Ishan Kishan Opens, Sanju Samson’s Fate Hangs

2026 ರ ಟಿ20 ವಿಶ್ವಕಪ್‌ಗೆ ( T20 World Cup 2026) ಮುಂಚಿತವಾಗಿ ಎಲ್ಲಾ ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡುತ್ತಿವೆ. ಅದರಂತೆ ಆತಿಥೇಯ ಟೀಂ ಇಂಡಿಯಾ ಕೂಡ ತನ್ನ ಮೊದಲ ಮತ್ತು ಏಕೈಕ ಅಭ್ಯಾಸ ಪಂದ್ಯವನ್ನು ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಆಡುತ್ತಿದೆ. ಈ ಪಂದ್ಯವು ನವಿ ಮುಂಬೈನ ಡಿವೈ ಸ್ಟೇಡಿಯಂ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಆಯ್ಕೆ…

Read More

‘ಧುರಂಧರ್’ ಸಿನಿಮಾದ 4 ಕೋಟಿ ಟಿಕೆಟ್ ಮಾರಾಟ; ಶಾರುಖ್, ಆಮಿರ್ ದಾಖಲೆ ಉಡೀಸ್ – Kannada News | Ranveer Singh starrer Dhurandhar movie sells total 4 Cr Tickets in India

ರಣವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar) ಸಿನಿಮಾ ಹಲವು ದಾಖಲೆಗಳನ್ನು ಮುರಿದಿದೆ. ಬಾಕ್ಸ್ ಆಫೀಸ್​​ನಲ್ಲಿ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಚಿತ್ರದ ಒಟ್ಟು 4 ಕೋಟಿ ಟಿಕೆಟ್​​ಗಳು ಮಾರಾಟ ಆಗಿವೆ! ಈ ಮೂಲಕ ಆಮಿರ್ ಖಾನ್, ಶಾರುಖ್ ಖಾನ್ ಮುಂತಾದ ಸ್ಟಾರ್ ನಟರ ಸಿನಿಮಾಗಳು ಈ ಮೊದಲು ಮಾಡಿದ್ದ ದಾಖಲೆಯನ್ನು ‘ಧುರಂಧರ್’ ಮುರಿದು ಹಾಕಿದೆ. ಪ್ರೇಕ್ಷಕರಿಂದ ಈ ಸಿನಿಮಾಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಕಳೆದ…

Read More