ವಿದ್ಯಾರ್ಥಿಗಳ ಪ್ರತಿಭಟನೆ ಕುರಿತಾದ ಸಿನಿಮಾಗಳು: ಪಟ್ಟಿ ಇಲ್ಲಿದೆ – Kannada News | Here is the list of Movies which is about student protest

ದಕ್ಷಿಣದಲ್ಲಿ ಸಂಪೂರ್ಣವಾಗಿ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆಯೇ ಆಧಾರವಾದ ಸಿನಿಮಾಗಳ ಸಂಖ್ಯೆ ಕಡಿಮೆ. ಆದರೆ ತೆಲುಗಿನ ‘ಶಿವ’, ಮಲಯಾಳಂನ ‘ಪೂಮರಂ’, ‘ಜನ ಗಣ ಮನ’, ಇತ್ತೀಚೆಗೆ ಬಿಡುಗಡೆ ಆದ ‘ಪರಾಶಕ್ತಿ’, ಕನ್ನಡದ ‘ಕಂಠಿ’ ಇನ್ನೂ ಕೆಲ ಸಿನಿಮಾಗಳನ್ನು ಹೆಸರಿಸಬಹುದು.

Source link

ಜುಲೈ 27ರಂದು ಸಂಸತ್​​ನಲ್ಲಿ ಮಹತ್ವದ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ವಿಧೇಯಕ ಮಂಡನೆ – Kannada News | Modi Government to introduce Public Examinations Amendment Bill 2026 in Lok Sabha on July 27 after NEET row

ನವದೆಹಲಿ, ಜುಲೈ 25: ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮಗಳನ್ನು ಖಂಡಿಸಿ ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ನೀಡಿದ್ದು, ಸಿಜೆಪಿ ನೇತೃತ್ವದ ಪ್ರತಿಭಟನಾಕಾರರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಇದರ ಬೆನ್ನಲ್ಲೇ, ಜುಲೈ 27ರ ಸೋಮವಾರದಂದು ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ (Public Examinations Amendment Bill 2026) ಮಂಡಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ.

ಲೋಕಸಭೆಯ ಶಾಸನಸಭಾ ಕಲಾಪಗಳ ಕಾರ್ಯಸೂಚಿಯಂತೆ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು 2024ರ ಕಾಯ್ದೆಗೆ ತಿದ್ದುಪಡಿ ತರುವ ಈ ಮಸೂದೆಯನ್ನು ಮಂಡಿಸಲಿದ್ದಾರೆ. ಮಸೂದೆ ಮಂಡನೆಯಾದ ತಕ್ಷಣವೇ, ಅದನ್ನು ಪರಿಶೀಲನೆಗೆ ತೆಗೆದುಕೊಂಡು ಸದನದಲ್ಲಿ ಅಂಗೀಕರಿಸಲು ಪ್ರಸ್ತಾವನೆ ಸಲ್ಲಿಸಲಿದ್ದಾರೆ.

‘ನೀಟ್’ (NEET-UG 2026) ಪೇಪರ್ ಲೀಕ್ ವಿವಾದವು ರಾಷ್ಟ್ರವ್ಯಾಪಿ ವಿದ್ಯಾರ್ಥಿ ಪ್ರತಿಭಟನೆಗೆ ಕಾರಣವಾಗಿತ್ತು. ಪರೀಕ್ಷಾ ಅಕ್ರಮಗಳನ್ನು ತಡೆಯಲು ಮತ್ತು ಇಡೀ ಪರೀಕ್ಷಾ ವ್ಯವಸ್ಥೆಯಲ್ಲಿ ಜವಾಬ್ದಾರಿಯನ್ನು ತರಲು ಈ ಕಠಿಣ ತಿದ್ದುಪಡಿಗಳನ್ನು ತರಲಾಗುತ್ತಿದೆ.

ಇದನ್ನೂ ಓದಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿದ 2 ಪುಟಗಳ ರಾಜೀನಾಮೆ ಪತ್ರದಲ್ಲೇನಿದೆ?

ಹೊಸ ವಿಧೇಯಕದಲ್ಲಿ ಏನಿದೆ?

ಪರೀಕ್ಷಾ ಪೇಪರ್ ಲೀಕ್ ಮತ್ತು ಅಕ್ರಮಗಳನ್ನು ತಡೆಯಲು ಈ ಮಸೂದೆಯು ಅತ್ಯಂತ ಕಠಿಣ ಕಾನೂನು ಚೌಕಟ್ಟು, ಕಾಲಮಿತಿಯ ತನಿಖೆ ಮತ್ತು ಫಾಸ್ಟ್-ಟ್ರ್ಯಾಕ್ ವಿಚಾರಣೆಯನ್ನು ಪ್ರಸ್ತಾಪಿಸುತ್ತದೆ.

ಕಾಲಮಿತಿಯ ತನಿಖೆ: ಪೇಪರ್ ಲೀಕ್ ಪ್ರಕರಣಗಳ ತನಿಖೆಯನ್ನು 2 ತಿಂಗಳ ಒಳಗೆ ಪೂರ್ಣಗೊಳಿಸಬೇಕು.

ಅಕ್ರಮಗಳಿಗೆ ಶಿಕ್ಷೆ: ಪೇಪರ್ ಲೀಕ್ ಅಥವಾ ಅಕ್ರಮ ಎಸಗಿದ ತಪ್ಪಿತಸ್ಥರಿಗೆ ಕನಿಷ್ಠ 5 ವರ್ಷದಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.

ಸಂಘಟಿತ ಅಪರಾಧಗಳಿಗೆ ಶಿಕ್ಷೆ: ಸಂಘಟಿತ ಪರೀಕ್ಷಾ ವಂಚನೆ/ಮಾಫಿಯಾಗಳಿಗೆ ಕನಿಷ್ಠ 7 ವರ್ಷ ಜೈಲು ಶಿಕ್ಷೆ ಮತ್ತು 10 ಕೋಟಿಯವರೆಗೆ ದಂಡ ಪ್ರಸ್ತಾಪಿಸಲಾಗಿದೆ.

ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳು: ಇಂತಹ ಪ್ರಕರಣಗಳ ವಿಚಾರಣೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ. ಇವು ಚಾರ್ಜ್‌ಶೀಟ್ ಸಲ್ಲಿಸಿದ 3 ತಿಂಗಳ ಒಳಗೆ ವಿಚಾರಣೆ ನಡೆಸಿ ತೀರ್ಪು ನೀಡಬೇಕು.

ವಿಶೇಷ ಟಾಸ್ಕ್ ಫೋರ್ಸ್: ಅಗತ್ಯ ಬಿದ್ದಾಗ ಪೇಪರ್ ಲೀಕ್ ಪ್ರಕರಣಗಳ ತನಿಖೆಗೆ ಕೇಂದ್ರ ಸರ್ಕಾರವು ವಿಶೇಷ ಕಾರ್ಯಪಡೆಯನ್ನು ರಚಿಸಲು ಈ ಕಾನೂನು ಅಧಿಕಾರ ನೀಡುತ್ತದೆ.

ಇದನ್ನೂ ಓದಿ: Dharmendra Pradhan: ಸಿಜೆಪಿ ಬೇಡಿಕೆಗೆ ಮಣಿದ ಸರ್ಕಾರ; ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಶುಕ್ರವಾರವೇ ಕೇಂದ್ರ ಸಂಪುಟವು ಈ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲು ಅನುಮೋದನೆ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಪರೀಕ್ಷಾ ಅಕ್ರಮ ಎಸಗುವವರ ವಿರುದ್ಧ ಕಠಿಣ ಕಾನೂನು ತರುವುದಾಗಿ ಹಾಗೂ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿದ್ದರು.

ವಿದ್ಯಾರ್ಥಿಗಳಿಗೆ ಸರ್ಕಾರದ ಭರವಸೆಗಳು:

ಕೇಂದ್ರ ಸರ್ಕಾರವು ಪ್ರಮುಖ ಬೇಡಿಕೆಗಳನ್ನು ಒಪ್ಪಿಕೊಂಡು ಭರವಸೆ ನೀಡಿದ ಬೆನ್ನಲ್ಲೇ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇಂದು ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆಯಿತು. ಸಿಜೆಪಿ ವಕ್ತಾರರ ಜೊತೆ 3ನೇ ಸುತ್ತಿನ ಮಾತುಕತೆಯ ನಂತರ ಕೇಂದ್ರ ಸಚಿವ ಜೆ.ಪಿ. ನಡ್ಡಾ ಮಾತನಾಡಿ, ಪ್ರತಿಭಟನಾಕಾರರು ಪರೀಕ್ಷಾ ವ್ಯವಸ್ಥೆಯ ಸುಧಾರಣೆಗಳನ್ನು ಒಳಗೊಂಡ 5 ಅಂಶಗಳ ಬೇಡಿಕೆಗಳ ಚಾರ್ಟರ್ ಅನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಪ್ರತಿಭಟನಾಕಾರರು ಅಥವಾ ಸಂಘಟಕರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳುವುದಿಲ್ಲ ಮತ್ತು ಈ ಚಳವಳಿಗೆ ಸಂಬಂಧಿಸಿದಂತೆ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸುವುದಿಲ್ಲ. ನೀಟ್ ಬಿಕ್ಕಟ್ಟಿನಿಂದಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸರ್ಕಾರ ತೀವ್ರ ಸಂತಾಪ ಸೂಚಿಸಿದ್ದು, ನಿಯಮಾವಳಿಗಳ ಪ್ರಕಾರ ನೀಡಬಹುದಾದ ಗರಿಷ್ಠ ಪರಿಹಾರವನ್ನು ಒದಗಿಸುವ ಭರವಸೆ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಆರೋಗ್ಯ ಸಮಸ್ಯೆಗಳಿರುವವರು ಪಪ್ಪಾಯಿ ಸೇವಿಸುವಾಗ ಎಚ್ಚರ ವಹಿಸಬೇಕು! – Kannada News | Papaya Benefits and Risks: People Who Should Limit This Fruit

ಪಪ್ಪಾಯಿ (Papaya) ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಫೋಲೇಟ್, ಫೈಬರ್, ಪೊಟ್ಯಾಸಿಯಂ ಮತ್ತು ಪಪೈನ್ (Papain) ಎಂಬ ಜೀರ್ಣಕ್ರಿಯೆಗೆ ಸಹಾಯ ಮಾಡುವ ಎನ್ಜೈಮ್‌ಗಳು ಸಮೃದ್ಧವಾಗಿವೆ. ಸಾಮಾನ್ಯವಾಗಿ ಪಪ್ಪಾಯಿ ಜೀರ್ಣಕ್ರಿಯೆ ಸುಧಾರಿಸಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ಚರ್ಮದ ಆರೋಗ್ಯ ಕಾಪಾಡಲು ಸಹಾಯಕ ಎಂದು ಪರಿಗಣಿಸಲಾಗುತ್ತದೆ. ಆದರೆ ಪ್ರತಿಯೊಬ್ಬರಿಗೂ ಪಪ್ಪಾಯಿ ಒಂದೇ ರೀತಿಯಲ್ಲಿ ಪ್ರಯೋಜನಕಾರಿಯಲ್ಲ. ಕೆಲವು ಆರೋಗ್ಯ ಸಮಸ್ಯೆಗಳು, ಅಲರ್ಜಿ ಅಥವಾ ವಿಶೇಷ ದೈಹಿಕ ಸ್ಥಿತಿಗಳಿರುವವರು ಪಪ್ಪಾಯಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಈ ಆರೋಗ್ಯ ಸಮಸ್ಯೆಗಳಿರುವವರು ಪಪ್ಪಾಯಿ ಸೇವಿಸುವಾಗ ಎಚ್ಚರ ವಹಿಸಿ

ಗರ್ಭಿಣಿಯರು: ಗರ್ಭಧಾರಣೆಯ ಆರಂಭಿಕ ತಿಂಗಳುಗಳಲ್ಲಿ ಹಸಿ ಅಥವಾ ಅರ್ಧ ಮಾಗಿದ ಪಪ್ಪಾಯಿ ಸೇವಿಸುವುದನ್ನು ತಪ್ಪಿಸಬೇಕು. ಹಸಿ ಪಪ್ಪಾಯಿಯಲ್ಲಿ ಇರುವ ಲ್ಯಾಟೆಕ್ಸ್ (Latex) ಮತ್ತು ಪಪೈನ್ (Papain) ಗರ್ಭಾಶಯದ ಸಂಕೋಚನವನ್ನು ಉತ್ತೇಜಿಸುವ ಸಾಧ್ಯತೆ ಇದೆ. ಇದರಿಂದ ಗರ್ಭಪಾತ ಅಥವಾ ಅಕಾಲಿಕ ಹೆರಿಗೆಯ ಅಪಾಯ ಹೆಚ್ಚಾಗಬಹುದು. ಆದರೆ ಸಂಪೂರ್ಣವಾಗಿ ಹಣ್ಣಾದ ಪಪ್ಪಾಯಿಯನ್ನು ಮಿತ ಪ್ರಮಾಣದಲ್ಲಿ ಸೇವಿಸುವ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಕಿಡ್ನಿ ಕಲ್ಲಿನ ಸಮಸ್ಯೆ ಇರುವವರು: ಪಪ್ಪಾಯಿಯಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ. ಆದರೆ ವಿಟಮಿನ್ ಸಿ ಅನ್ನು ಅತಿಯಾಗಿ ಸೇವಿಸಿದರೆ ಅದು ದೇಹದಲ್ಲಿ ಆಕ್ಸಲೇಟ್ ಆಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಆಕ್ಸಲೇಟ್ ಕಲ್ಲುಗಳಿಗೆ ಒಳಗಾಗುವವರಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಮರುಕಳಿಸುವ ಸಾಧ್ಯತೆ ಇರುವುದರಿಂದ ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಸೂಕ್ತ.

ಹೈಪೋಥೈರಾಯಿಡಿಸಂ ಇರುವವರು: ಕೆಲವು ಅಧ್ಯಯನಗಳ ಪ್ರಕಾರ ಪಪ್ಪಾಯಿಯಲ್ಲಿರುವ ಕೆಲವು ಸಸ್ಯ ಮೂಲದ ಸಂಯುಕ್ತಗಳು (Goitrogenic compounds) ಐಯೋಡಿನ್ ಬಳಕೆಯ ಮೇಲೆ ಅಲ್ಪ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಹೈಪೋಥೈರಾಯಿಡಿಸಂ ಇರುವವರು ವೈದ್ಯರ ಸಲಹೆಯಂತೆ ಆಹಾರ ಕ್ರಮ ಪಾಲಿಸುವುದು ಉತ್ತಮ.

ಹೃದಯ ಬಡಿತ ಅಸಮರ್ಪಕವಾಗಿರುವವರು: ಕೆಲವು ಸಂಶೋಧನೆಗಳಲ್ಲಿ ಪಪೈನ್ ಎನ್ಜೈಮ್ ಹೃದಯದ ಕಾರ್ಯವೈಖರಿಯ ಮೇಲೆ ಅಲ್ಪ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಕುರಿತು ಉಲ್ಲೇಖಿಸಲಾಗಿದೆ. ಹೃದಯದ ರಿದಮ್ ಸಮಸ್ಯೆ (Arrhythmia) ಅಥವಾ ನಿಧಾನ ಹೃದಯ ಬಡಿತದ ಸಮಸ್ಯೆ ಇರುವವರು ಪಪ್ಪಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: ಪೋಷಕರೇ ಎಚ್ಚರ! ಮಕ್ಕಳಲ್ಲಿ ಜಂಕ್ ಫುಡ್ ಅಭ್ಯಾಸ ಹೆಚ್ಚಿದರೆ ಈ ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು!

ಲ್ಯಾಟೆಕ್ಸ್ ಅಲರ್ಜಿ ಅಥವಾ ಆಸ್ತಮಾ ಇರುವವರು: ಲ್ಯಾಟೆಕ್ಸ್ ಅಲರ್ಜಿ ಇರುವವರಿಗೆ ಪಪ್ಪಾಯಿ ಕೆಲವೊಮ್ಮೆ ಅಲರ್ಜಿಕ್ ಪ್ರತಿಕ್ರಿಯೆ ಉಂಟುಮಾಡಬಹುದು. ಅಂತವರಿಗೆ ಚರ್ಮದಲ್ಲಿ ಕೆಂಪು ದದ್ದು, ತುರಿಕೆ, ಉಸಿರಾಟದ ತೊಂದರೆ, ಮೂಗಲ್ಲಿ ನೀರು ಸುರಿಯುವುದು ಸೇರಿದಂತೆ ನಾನಾ ರೀತಿಯ ಲಕ್ಷಣಗಳು ಕಂಡುಬರುತ್ತದೆ. ತೀವ್ರ ಆಸ್ತಮಾ ಇರುವವರು ಸಹ ವೈದ್ಯರ ಸಲಹೆಯಂತೆ ಸೇವಿಸುವುದು ಉತ್ತಮ.

ಮಧುಮೇಹದ ಔಷಧಿ ಸೇವಿಸುವವರು: ಪಪ್ಪಾಯಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಗುಣಗಳಿವೆ. ಈಗಾಗಲೇ ಇನ್ಸುಲಿನ್ ಅಥವಾ ಶುಗರ್ ಔಷಧಿಗಳನ್ನು ತೆಗೆದುಕೊಳ್ಳುವವರು ಹೆಚ್ಚು ಪ್ರಮಾಣದಲ್ಲಿ ಪಪ್ಪಾಯಿ ಸೇವಿಸಿದರೆ ಕೆಲವರಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅತಿಯಾಗಿ ಕಡಿಮೆಯಾಗುವ (Hypoglycemia) ಸಾಧ್ಯತೆ ಇರಬಹುದು. ಆದ್ದರಿಂದ ಮಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ಪಪ್ಪಾಯಿ ಸೇವಿಸುವುದರಿಂದ ದೊರೆಯುವ ಆರೋಗ್ಯ ಪ್ರಯೋಜನಗಳು:

  • ಜೀರ್ಣಕ್ರಿಯೆ ಸುಧಾರಿಸುತ್ತದೆ
  • ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ
  • ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
  • ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಸಹಕಾರಿ
  • ಕಣ್ಣಿನ ಆರೋಗ್ಯಕ್ಕೆ ಉತ್ತಮ
  • ದೇಹದ ಉರಿಯೂತ ಕಡಿಮೆ ಮಾಡಲು ನೆರವಾಗಬಹುದು
  • ಹೃದಯದ ಆರೋಗ್ಯ ಕಾಪಾಡಲು ಸಹಾಯ ಮಾಡಬಹುದು
  • ತೂಕ ನಿಯಂತ್ರಣಕ್ಕೆ ಸಹಕಾರಿ

ಪಪ್ಪಾಯಿಯನ್ನು ಸೇವಿಸುವಾಗ ಅನುಸರಿಸಬೇಕಾದ ಸಲಹೆಗಳು:

  • ದಿನಕ್ಕೆ ಸುಮಾರು 100–150 ಗ್ರಾಂ ಪ್ರಮಾಣದಲ್ಲಿ ಸೇವಿಸಿ.
  • ಹಣ್ಣಾದ ಪಪ್ಪಾಯಿಯನ್ನೇ ಆಯ್ಕೆ ಮಾಡಿ.
  • ಹಸಿ ಪಪ್ಪಾಯಿ ಗರ್ಭಿಣಿಯರು ಸೇವಿಸಬಾರದು.
  • ಯಾವುದೇ ದೀರ್ಘಕಾಲದ ಕಾಯಿಲೆ ಇದ್ದರೆ ವೈದ್ಯರ ಸಲಹೆ ಪಡೆಯಿರಿ.
  • ಸಮತೋಲಿತ ಆಹಾರದ ಭಾಗವಾಗಿ ಮಾತ್ರ ಪಪ್ಪಾಯಿಯನ್ನು ಸೇವಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: ಶತಕ ವಂಚಿತರಾದರೂ ಕಿಂಗ್ ಕೊಹ್ಲಿಯ ದಾಖಲೆ ಮುರಿದ ಇಶಾನ್ ಕಿಶನ್

Source link

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಗೀಕಾರ, ಕನ್ನಡಿಗನಿಗೆ ಶಿಕ್ಷಣ ಖಾತೆಯ ಹೊಣೆ – Kannada News | Minister Pralhad Joshi given additional charge of Education Ministry For Dharmendra Pradhan resignation

ನವದೆಹಲಿ, (ಜುಲೈ 25): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ (NEET Case) ಧರ್ಮೇಂದ್ರ ಪ್ರಧಾನ್ (dharmendra pradhan) ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ ಖಾತೆಯನ್ನು ಹೆಚ್ಚುವರಿಯಾಗಿ ಸಚಿವ ಪ್ರಹ್ಲಾದ್ ಜೋಶಿ (pralhad joshi) ಅವರಿಗೆ ವಹಿಸಿದ್ದಾರೆ. ಕೇಂದ್ರ ಆಹಾರ ಮತ್ತು ನಾಗರೀಕ ಸಚಿವರಾಗಿರೂ ಆಗಿರುವ ಪ್ರಹ್ಲಾದ್ ಜೋಶಿ, ತಮ್ಮ ಖಾತೆ ಜೊತೆಗೆ ಇದೀಗ ಹೆಚ್ಚುವಾರಿಯಾಗಿ ನೀಡಲಾಗಿರುವ ಮಹತ್ವದ ಶಿಕ್ಷಣ ಸಚಿವಾಲಯದ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ.

ಇದನ್ನೂ ಓದಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿದ 2 ಪುಟಗಳ ರಾಜೀನಾಮೆ ಪತ್ರದಲ್ಲೇನಿದೆ?

ಪ್ರಹ್ಲಾದ್ ಜೋಶಿಗೆ ಹೆಚ್ಚುವರಿ ಹೊಣೆ

ಕೇಂದ್ರ ಆಹಾರ ಮತ್ತು ನಾಗರೀಕ ಸಚಿವರಾಗಿರೂ ಆಗಿರುವ ಪ್ರಹ್ಲಾದ್ ಜೋಶಿ ಅವರಿಗೆ ಇದೀಗ ಶಿಕ್ಷಣ ಖಾತೆ ಹೆಚ್ಚುವರಿಯಾಗಿ ನೀಡಲಾಗಿದೆ. ಶಿಕ್ಷಣ ಇಲಾಖೆಯ ಜವಾಬ್ದಾರಿ ವಹಿಸಿಕಳ್ಳುವಂತೆ ಪ್ರಹ್ಲಾದ್ ಜೋಶಿ ಅವರಿಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ನಿರ್ದೇಶನ ನೀಡಿದ್ದಾರೆ. ಕರ್ನಾಟಕದ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಪ್ರಹ್ಲಾದ್ ಜೋಶಿ ಅವರು, ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ (MNRE) ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ, ಅವರು ‘ಅಂತರರಾಷ್ಟ್ರೀಯ ಸೌರ ಒಕ್ಕೂಟದ’ (International Solar Alliance) ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೀಗ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಹಲವು ಪ್ರಮುಖ ಸುಧಾರಣೆಗಳು ಹಾಗೂ ಸವಾಲುಗಳು ಎದುರಾಗಿರುವ ಈ ನಿರ್ಣಾಯಕ ಸಮಯದಲ್ಲಿ ಪ್ರಹ್ಲಾದ್ ಜೋಶಿ ಅವರಿಗೆ ಈ ಮಹತ್ವದ ಶಿಕ್ಷಣ ಖಾತೆಯ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ನರೇಂದ್ರ ಮೋದಿ ಸರ್ಕಾರದಲ್ಲಿ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವ ಪ್ರಹ್ಲಾದ್ ಜೋಶಿ, ಕಳೆದ ಅವಧಿಯಲ್ಲಿ ಕಲ್ಲಿದಲ್ಲು, ಗಣಿ ಹಾಗೂ ಸಂಸದೀಯ ವ್ಯವಹಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಅವರಿಗಿರುವ ಅನುಭವದ ಗುರುತಿಸಿ ಹೆಚ್ಚುವರಿಯಾಗಿ ಶಿಕ್ಷಣ ಖಾತೆಯ ಜವಾಬ್ದಾರಿ ವಹಿಸಲಾಗಿದೆ.

ಕೆಲ ದಿನಗಳಿಂದ ಕೇಂದ್ರ ಸಂಪುಟದಲ್ಲಿ ಕೆಲ ಬದಲಾವಣೆಯಾಗಲಿವೆ ಎನ್ನುವ ಚರ್ಚೆಗಳು ನಡೆದಿದ್ದವು. ಕೆಲವು ಸಚಿವರನ್ನು ಕೈಬಿಟ್ಟು ಬೇರೆ ಮುಖಗಳಿಗೆ ಮಣೆಹಾಕಲಾಗುತ್ತದೆ ಎನ್ನುವ ಸುದ್ದಿ ಹರಿದಾಡಿದ್ದವು. ಒಂದು ವೇಳೆ ಅಂತಹ ಬದಲಾವಣೆಗಳು ಆದರೆ ಹೆಚ್ಚುವರಿ ಖಾತೆಯನ್ನು ಹೊಸಬರಿಗೆ ಹಸ್ತಾಂತರಿಸಬಹುದು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಾರ ಭವಿಷ್ಯ: ಯಾವ ರಾಶಿಗೆ ಧನಲಾಭ, ಯಾರಿಗೆ ಶನಿಯ ವಕ್ರದೃಷ್ಟಿ? – Kannada News | Weekly Horoscope, July 26–August 1: Career, Finance and Health Predictions for All Zodiac Signs

ಮೇಷ ರಾಶಿ: ​ಉದ್ಯೋಗ ಹಾಗೂ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುತ್ತದೆ. ಹೊಸ ಹೂಡಿಕೆಗಳಿಗೆ ಸೂಕ್ತ ಸಮಯ ಹಾಗೂ ಆರ್ಥಿಕವಾಗಿ ಶುಭ ಫಲಗಳು ದೊರೆಯಲಿವೆ. ಕೋಪ ಮತ್ತು ಅವಸರದ ನಿರ್ಧಾರಗಳಿಂದ ಕುಟುಂಬದಲ್ಲಿ ಮನಸ್ತಾಪಗಳು ಉಂಟಾಗಬಹುದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ.

ವೃಷಭ ರಾಶಿ: ​ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯುತ್ತದೆ. ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದ್ದು, ಆಸ್ತಿ ಖರೀದಿಗೆ ಯೋಗವಿದೆ. ಅನಗತ್ಯ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಪ್ರಯಾಣದ ಸಮಯದಲ್ಲಿ ಎಚ್ಚರಿಕೆ ವಹಿಸಿ.

ಮಿಥುನ ರಾಶಿ: ಬುದ್ಧಿವಂತಿಕೆಯಿಂದ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಾ. ವ್ಯಾಪಾರ-ವಹಿವಾಟಿನಲ್ಲಿ ಉತ್ತಮ ಲಾಭ ಮತ್ತು ಹೊಸ ಸವಾಲುಗಳನ್ನು ಎದುರಿಸುವ ಧೈರ್ಯ ಬರುತ್ತದೆ. ಕೆಲಸದಲ್ಲಿ ಗೊಂದಲ ಹಾಗೂ ಅನಗತ್ಯ ಚಿಂತೆಗಳು ಮನಸ್ಸನ್ನು ಕಾಡಬಹುದು. ಮಾನಸಿಕ ಶಾಂತಿಗಾಗಿ ಧ್ಯಾನ ಮಾಡುವುದು ಒಳಿತು.

ಕರ್ಕಾಟಕ ರಾಶಿ: ​ಸೂರ್ಯ ಮತ್ತು ಗುರು ಗ್ರಹಗಳ ಅನುಕೂಲದಿಂದಾಗಿ ಕಾರ್ಯಸಿದ್ದಿ ಉಂಟಾಗಲಿದೆ. ಸಮಾಜದಲ್ಲಿ ಗೌರವ-ಆದರಗಳು ವೃದ್ಧಿಯಾಗುತ್ತವೆ. ​ನಿಕಟ ಸಂಬಂಧಿಕರೊಂದಿಗೆ ಮಾತನಾಡುವಾಗ ತಾಳ್ಮೆ ವಹಿಸಿ, ಇಲ್ಲದಿದ್ದರೆ ಸಣ್ಣ ವಿಷಯಕ್ಕೆ ಜಗಳವಾಗಬಹುದು.

ಸಿಂಹ ರಾಶಿ: ​ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಸೃಜನಶೀಲ ರಂಗದಲ್ಲಿದ್ದವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಆರೋಗ್ಯ ಸಮಸ್ಯೆಗಳು ಅದಲ್ಲಿಯೂ ವಿಶೇಷವಾಗಿ ಉದರ ಸಂಬಂಧಿ ರೋಗಗಳು ಬಾಧಿಸಬಹುದು. ಖರ್ಚುಗಳ ಮೇಲೆ ನಿಯಂತ್ರಣವಿರಲಿ.

ಕನ್ಯಾ ರಾಶಿ: ​ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅವಕಾಶವಿದೆ. ಸಾಲದ ಬಾಕಿ ಹಣ ಮರಳಿ ಬರುವ ಸಾಧ್ಯತೆ ಇದೆ. ಸಣ್ಣಪುಟ್ಟ ನಿರ್ಲಕ್ಷ್ಯವೂ ಕೆಲಸದಲ್ಲಿ ವಿಳಂಬ ತರಬಹುದು. ಸಹೋದ್ಯೋಗಿಗಳೊಂದಿಗೆ ನಯವಾಗಿ ವರ್ತಿಸಿ.

ತುಲಾ ರಾಶಿ: ​ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಪ್ರೇಮಿಗಳಿಗೆ ಮತ್ತು ಹೊಸ ಸಂಬಂಧಗಳನ್ನು ಪ್ರಾರಂಭಿಸುವವರಿಗೆ ಶುಭ ದಿನಗಳು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅಂಧವಾಗಿ ನಂಬಬೇಡಿ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಏರಿಳಿತವಾಗಬಹುದು.

ವೃಶ್ಚಿಕ ರಾಶಿ: ​ವೃತ್ತಿಬದುಕಿನಲ್ಲಿ ಹಠಾತ್ ಧನಲಾಭ ಅಥವಾ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಆಲೋಚನೆಗಳಿಗೆ ಸಮಾಜದಲ್ಲಿ ಬೆಂಬಲ ಸಿಗುತ್ತದೆ. ಕೆಲಸದ ಒತ್ತಡ ಹೆಚ್ಚಾಗುವುದರಿಂದ ಆಯಾಸ ಕಾಡಬಹುದು. ವಾದ-ವಿವಾದಗಳಿಂದ ದೂರವಿರಿ.

ಧನು ರಾಶಿ: ​ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಗಳು ಹಾಗೂ ವಿದೇಶಿ ಪ್ರಯಾಣದ ಯೋಗವಿದೆ. ಯೋಜಿತ ಕೆಲಸಗಳಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ಹೂಡಿಕೆ ಮಾಡುವ ಮುನ್ನ ಅನುಭವಿಗಳ ಸಲಹೆ ಪಡೆಯಿರಿ.

ಮಕರ ರಾಶಿ: ​ಕಠಿಣ ಸವಾಲುಗಳನ್ನು ಎದುರಿಸಿ ಗೆಲ್ಲುವ ಸಾಮರ್ಥ್ಯ ನಿಮಗಿರುತ್ತದೆ. ವ್ಯಾಪಾರಿಗಳಿಗೆ ಹೊಸ ಪಾಲುದಾರಿಕೆಗಳಿಂದ ಲಾಭ. ಶನಿಯ ಪ್ರಭಾವದಿಂದ ಕೆಲಸಗಳಲ್ಲಿ ನಿಧಾನಗತಿ ಇರಬಹುದು. ವಾಹನ ಚಾಲನೆ ಮಾಡುವಾಗ ಜಾಗ್ರತೆ ಅಗತ್ಯ.

ಕುಂಭ ರಾಶಿ: ​ಸಕಾರಾತ್ಮಕ ಅಂಶ: ಸಮಾಜಸೇವೆ ಮತ್ತು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಒಳ್ಳೆಯ ಸಮಯ. ಆರ್ಥಿಕ ಚೇತರಿಕೆ ಕಂಡುಬರಲಿದೆ. ಶರೀರದಲ್ಲಿ ಆಲಸ್ಯ ಮತ್ತು ನಿರಾಸಕ್ತಿ ಉಂಟಾಗಬಹುದು. ಸಂಗಾತಿಯೊಂದಿಗೆ ಸಣ್ಣಪುಟ್ಟ ವೈಮನಸ್ಸು ಬರಬಹುದು.

ಮೀನ ರಾಶಿ: ​ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತೀರಾ. ಶನಿ ವಕ್ರ ದೃಷ್ಟಿಯಿಂದ ಹಣಕಾಸಿನ ವೆಚ್ಚ ಹೆಚ್ಚಬಹುದು ಮತ್ತು ಮಾನಸಿಕ ತಂಟೆ-ತಕರಾರುಗಳು ಉಂಟಾಗಬಹುದು.

ಲೋಹಿತ್ ಹೆಬ್ಬಾರ್

Source link

ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ಪ್ರತಿಭಟನೆ ಅಂತ್ಯ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯೆ – Kannada News | Warning from the students and opposition Rahul Gandhi reaction after CJP Protest Ends

ನವದೆಹಲಿ, ಜುಲೈ 25: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಿದ್ಯಾರ್ಥಿ ಚಳವಳಿಯು ಸರ್ಕಾರಕ್ಕೆ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ನೀಡಿದ ಬಲವಾದ ಎಚ್ಚರಿಕೆ ಎಂದಿರುವ ರಾಹುಲ್ ಗಾಂಧಿ, “ಇದು ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳಿಂದ ಸರ್ಕಾರಕ್ಕೆ ನೀಡಲಾದ ಎಚ್ಚರಿಕೆ. ನೀವು ಇಲ್ಲಿಯವರೆಗೆ ನಡೆಸಿಕೊಂಡು ಬಂದ ರೀತಿಯಲ್ಲಿ ದೇಶವನ್ನು ನಡೆಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಮೇಲೆ ನಡೆದ ಹಿಂಸಾಚಾರಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರೇ ನೇರ ಹೊಣೆ” ಎಂದು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

44,000 ಕೆಜಿ ತುಪ್ಪದಿಂದ ನಿರ್ಮಾಣವಾಗಿದೆ 550 ವರ್ಷ ಹಳೆಯ ಈ ದೇವಸ್ಥಾನ! – Kannada News | This 550 Year Old Jain Temple Built Using 40,000 Kg Of Ghee know interesting Facts

ಜೈಪುರ, ಜುಲೈ 25: ರಾಜಸ್ಥಾನದ ಬಿಕಾನೇರ್‌ನಲ್ಲಿರುವ 550 ವರ್ಷ ಹಳೆಯ ಜೈನ ದೇವಾಲಯವೊಂದು (Temple) ತನ್ನ ಅಸಾಧಾರಣ ಇತಿಹಾಸ ಮತ್ತು ವಾಸ್ತುಶಿಲ್ಪದಿಂದ ಪ್ರವಾಸಿಗರನ್ನು ಬೆರಗುಗೊಳಿಸುತ್ತಿದೆ. ಇಲ್ಲಿನ ಭಂಡಾಸರ ಜೈನ ದೇವಾಲಯದ ನಿರ್ಮಾಣದ ಸಮಯದಲ್ಲಿ ಸಿಮೆಂಟ್ ಅಥವಾ ಗಾರೆ ಮಿಶ್ರಣಕ್ಕೆ ನೀರಿನ ಬದಲಾಗಿ ಸುಮಾರು 40,000 ಕೆಜಿ ಶುದ್ಧ ತುಪ್ಪವನ್ನು ಬಳಸಲಾಗಿದೆ ಎಂದು ನಂಬಲಾಗಿದ್ದು, ಇದು ಭಾರತದ ಅತ್ಯಂತ ಕುತೂಹಲಕಾರಿ ವಾಸ್ತುಶಿಲ್ಪದ ಪವಾಡಗಳಲ್ಲಿ ಒಂದಾಗಿದೆ.

ಗೋಡೆಯಲ್ಲಿ ತುಪ್ಪ ಒಸರುತ್ತದೆ:

ಈ ದೇವಾಲಯ ನಿರ್ಮಾಣದ ಗಾರೆ ಮಿಶ್ರಣಕ್ಕೆ ನೀರಿನ ಬದಲಾಗಿ ಸುಮಾರು 40,000 ಕೆಜಿ ಶುದ್ಧ ತುಪ್ಪವನ್ನು ಬಳಸಲಾಗಿದೆ ಎಂಬುದು ಇಲ್ಲಿನ ಪ್ರಸಿದ್ಧ ನಂಬಿಕೆ. ಕಡು ಬೇಸಿಗೆಯಲ್ಲಿ ಇಲ್ಲಿನ ಕಲ್ಲಿನ ನೆಲ ಹಾಗೂ ಗೋಡೆಗಳಿಂದ ಬೆಣ್ಣೆ ಅಥವಾ ತುಪ್ಪದ ಅಂಶ ಒಸರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಇದನ್ನೂ ಓದಿ: Puri Jagannath Temple: ಪುರಿ ಜಗನ್ನಾಥ ದೇವಾಲಯಕ್ಕೆ ಅವಿವಾಹಿತ ಜೋಡಿ ಒಟ್ಟಿಗೆ ಭೇಟಿ ನೀಡಬಾರದು ಯಾಕೆ? ಇಲ್ಲಿದೆ ನಿಗೂಢ ರಹಸ್ಯ!

ವಾಸ್ತುಶಿಲ್ಪ ಮತ್ತು ವರ್ಣಚಿತ್ರಗಳು:

ಮೂರು ಅಂತಸ್ತುಗಳ ಈ ಬೃಹತ್ ದೇವಾಲಯವು ಕೆಂಪು ಮರಳುಕಲ್ಲು ಮತ್ತು ಅಮೃತಶಿಲೆಯಿಂದ ನಿರ್ಮಿತವಾಗಿದೆ. ಇದರ ಗೋಡೆಗಳು ಮತ್ತು ಮೇಲ್ಛಾವಣಿಗಳಲ್ಲಿ ಅತ್ಯಂತ ಸೂಕ್ಷ್ಮವಾದ ಕಲ್ಲಿನ ಕೆತ್ತನೆಗಳು, ವರ್ಣರಂಜಿತ ಜಾನಪದ ಚಿತ್ರಗಳು, ಗಾಜಿನ ಕುಸುರಿ ಹಾಗೂ 24 ತೀರ್ಥಂಕರರ ಜೀವನವನ್ನು ಬಿಂಬಿಸುವ ಚಿನ್ನದ ಎಲೆಯ ಚಿತ್ರಕಲೆಗಳಿವೆ. ಈ ದೇವಾಲಯದ ಮೇಲ್ಭಾಗಕ್ಕೆ ತೆರಳಿದರೆ ಇಡೀ ಬಿಕಾನೇರ್ ನಗರದ ಸುಂದರ ನೋಟ ಹಾಗೂ ಹತ್ತಿರದ ಜೂನಾಗಢ್ ಕೋಟೆಯ ದೃಶ್ಯಾವಳಿ ಕಾಣುತ್ತದೆ. ಪ್ರಸ್ತುತ ಈ ಐತಿಹಾಸಿಕ ತಾಣವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಸಂರಕ್ಷಿತ ಸ್ಮಾರಕವಾಗಿ ನಿರ್ವಹಿಸುತ್ತಿದೆ.

ಇದನ್ನೂ ಓದಿ: Unique Frog Temple: ಭಾರತದ ಏಕೈಕ ‘ಕಪ್ಪೆ ದೇವಾಲಯ’; ಇಲ್ಲಿದೆ ಬಣ್ಣ ಬದಲಾಯಿಸುವ ಶಿವಲಿಂಗ!

ದೇವಾಲಯದ ಇತಿಹಾಸ:

ಕ್ರಿ.ಶ. 1468ರಲ್ಲಿ ಭಂಡಾಸಾ ಓಸ್ವಾಲ್ ಎಂಬ ಶ್ರೀಮಂತ ಜೈನ ವರ್ತಕನ ನೇತೃತ್ವದಲ್ಲಿ ಈ ದೇವಾಲಯದ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಈ ಕಾರಣದಿಂದಲೇ ಇದಕ್ಕೆ ‘ಭಂಡಾಸರ’ ಅಥವಾ ‘ಭಂಡಾಶಾ’ ಜೈನ ದೇವಾಲಯ ಎಂದು ಹೆಸರು ಬಂದಿತು. ಆ ಸಮಯದಲ್ಲಿ ಬಿಕಾನೇರ್ ತೀವ್ರ ನೀರಿನ ಅಭಾವ ಎದುರಿಸುತ್ತಿದ್ದರಿಂದ, ಗಾರೆಯ ಮಿಶ್ರಣಕ್ಕೆ ನೀರಿನ ಬದಲಾಗಿ ತುಪ್ಪವನ್ನು ಬಳಸಲಾಯಿತು ಎಂಬುದು ಸ್ಥಳೀಯ ನಂಬಿಕೆ.

ಜಾನಪದ ಕಥೆಯೊಂದರ ಪ್ರಕಾರ, ಕೆಳಗೆ ಚೆಲ್ಲಿದ ಒಂದು ಹನಿ ತುಪ್ಪವನ್ನು ಭಂಡಾಸಾ ಉಳಿಸಿದ್ದನ್ನು ನೋಡಿ ಶಿಲ್ಪಕಾರರೊಬ್ಬರು ಅವರನ್ನು ಗೇಲಿ ಮಾಡಿದ್ದರಂತೆ. ಈ ಮಾತು ಮನಸ್ಸಿಗೆ ತಗಲಿ, ಭಂಡಾಸಾ ಇಡೀ ದೇವಾಲಯವನ್ನೇ ತುಪ್ಪದಲ್ಲಿ ನಿರ್ಮಿಸುವುದಾಗಿ ಶಪಥ ಮಾಡಿ, ಈ ಅದ್ಭುತವನ್ನು ಸಾಕಾರಗೊಳಿಸಿದರು ಎನ್ನಲಾಗುತ್ತದೆ. ವರ್ತಕ ಭಂಡಾಸಾ ಅವರು 1518ರಲ್ಲಿ ದೇವಾಲಯ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ನಿಧನರಾದರು. ಆದರೆ, ನಿರ್ಮಾಣ ಕಾರ್ಯವು ನಿಲ್ಲದೆ ಸುಮಾರು 86 ವರ್ಷಗಳ ಕಾಲ ದಶಕಗಳ ಕಾಲ ಮುಂದುವರಿದು, ಅಂತಿಮವಾಗಿ ಕ್ರಿ.ಶ. 1554ರ ವೇಳೆಗೆ ಪೂರ್ಣಗೊಂಡಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಮರುಪರೀಕ್ಷೆಯಲ್ಲಿ ಹಾವೇರಿ ವಿದ್ಯಾರ್ಥಿಗೆ ಅನ್ಯಾಯ: ಕಾನೂನು ಹೋರಾಟಕ್ಕಿಳಿದ ಪೋಷಕರು, ಆಗಿದ್ದೇನು? – Kannada News | Injustice to Haveri Student in NEET Re Exam: Parents Launch Legal Battle, What Happened

ವಿದ್ಯಾರ್ಥಿನಿ ಬಿಂದುಶ್ರೀ ಪವಾರImage Credit source: tv9 kannada

ಹಾವೇರಿ, ಜುಲೈ 25: ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ, ಮಾರಾಟ ಮತ್ತು ವಿದ್ಯಾರ್ಥಿಗಳ ಸಾಲು ಸಾಲು ಆತ್ಮಹತ್ಯೆ ವಿಚಾರ ಇಡೀ ದೇಶದಲ್ಲಿ ಕಿಚ್ಚು ಹೊತ್ತಿಸಿತ್ತು. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಭುಗಿಲೆದ್ದಿತ್ತು. ಈ ಹೋರಾಟದ ಕಿಚ್ಚಿಗೆ, ಪ್ರತಿಭಟನೆಯ ಒತ್ತಡದ ಬಳಿಕ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಚಿವ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಇದೆಲ್ಲದರ ಮಧ್ಯೆ ನೀಟ್​ ಮರುಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಕೆಲ ಲೋಪದೋಷ ಆಗಿರುವುದು ಬೆಳಕಿಗೆ ಬಂದಿದೆ. ತನಗಾದ ಅನ್ಯಾಯದ ಬಗ್ಗೆ ನೆನೆದು ವಿದ್ಯಾರ್ಥಿನಿ (student) ಕಣ್ಣೀರು ಹಾಕಿದ್ದಾರೆ.

ಕೇವಲ 11 ಅಂಕ

ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ವಿದ್ಯಾರ್ಥಿ ಬಿಂದುಶ್ರೀ ಪವಾರ ತಮಗಾದ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರೆ. ಹಾವೇರಿಯ ಗಾಂಧಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಂದುಶ್ರೀ ಇತ್ತೀಚೆಗೆ ನೀಟ್ ಮರುಪರೀಕ್ಷೆ ಬರೆದಿದ್ದರು. ಆದರೆ ಬಳಿಕ ಬಂದ ಫಲಿತಾಂಶ ನೋಡಿ ಆಘಾತ ಉಂಟಾಗಿದೆ. 720 ಅಂಕಗಳಿಗೆ ಕನಿಷ್ಠ ಅಂದರೂ 668 ಅಂಕಗಳು ಬರಬೇಕಿದ್ದ ಜಾಗದಲ್ಲಿ ಕೇವಲ 11 ಅಂಕಗಳು ಬಂದಿವೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ ದೂರು ನೀಡಿರುವ ವಿದ್ಯಾರ್ಥಿನಿ

ತಾವು ಪರೀಕ್ಷೆಯಲ್ಲಿ ಮಾರ್ಕ್ ಮಾಡಿ ಬಂದ ಓಎಮ್‌ಆರ್ ಶೀಟ್‌ಗೂ, ಈಗ ಬಂದಿರುವ ಓಎಮ್‌ಆರ್ ಶೀಟ್‌ಗೂ ಯಾವುದೇ ಸಾಮ್ಯತೆಯಿಲ್ಲ. ಉತ್ತರ ಪತ್ರಿಕೆಯೇ ಅದಲು ಬದಲು ಆಗಿದೆ ಎಂದು ಆರೋಪಿಸಿರುವ ವಿದ್ಯಾರ್ಥಿನಿ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ ಜುಲೈ 22 ರಂದು ದೂರು ನೀಡಿದ್ದಾರೆ. ಅಲ್ಲದೆ ಸಹಾಯವಾಣಿ ಸಂಖ್ಯೆಗೆ ಸಾಕಷ್ಟು ಬಾರಿ ಕರೆ ಮಾಡಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಸದ್ಯ ವಿದ್ಯಾರ್ಥಿನಿ ಹಾಗೂ ಕುಟುಂಬಸ್ಥರು ನ್ಯಾಯಕ್ಕಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಕೇಂದ್ರ ಸರ್ಕಾರ ನನಗಾಗಿರುವ ಅನ್ಯಾಯ ಸರಿಪಡಿಸಬೇಕು: ಬಿಂದುಶ್ರೀ 

ಇನ್ನು ಈ ಬಗ್ಗೆ ಟಿವಿ9 ಜೊತೆಗೆ ವಿದ್ಯಾರ್ಥಿ ಬಿಂದುಶ್ರೀ ಪವಾರ ಮಾತನಾಡಿದ್ದು, ‘‘ನಾನು ಡಾಕ್ಟರ್ ಆಗಬೇಕೆಂಬ ಒಂದೇ ಕನಸಿನಿಂದ ಕಳೆದ ಮೂರು ವರ್ಷಗಳಿಂದ ಕಷ್ಟಪಟ್ಟು ವ್ಯಾಸಂಗ ಮಾಡಿದ್ದೆ. ಪರೀಕ್ಷೆ ಮುಗಿದ ಮೇಲೆ ಪ್ರಶ್ನೆಪತ್ರಿಕೆ ತಾಳೆ ಹಾಕಿ ನೋಡಿದಾಗ ನನಗೆ 720ಕ್ಕೆ ಕನಿಷ್ಠ 668 ಅಂಕಗಳು ಬರುವುದು ಖಚಿತವಾಗಿತ್ತು. ಆದರೆ ಈಗ ರಿಸಲ್ಟ್‌ನಲ್ಲಿ 11 ಅಂಕ ಬಂದಿದೆ. ನಾನು ತುಂಬಿದ ಓಎಮ್‌ಆರ್ ಶೀಟ್ ಇದಲ್ಲವೇ ಅಲ್ಲ, ನನಗೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರ ಅನ್ಯಾಯ ಸರಿಪಡಿಸಬೇಕು’’ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಈ ಹಿಂದೆ ಪೇಪರ್ ಲೀಕ್ ವಿರುದ್ಧ ಹೋರಾಟ; ಈಗ ನೀಟ್​​​​​​ ಪ್ರಶ್ನೆ ಪತ್ರಿಕೆ ಸೋರಿಕೆಗೆ ರಾಜೀನಾಮೆ; ಯಾರೀ ಧರ್ಮೇಂದ್ರ ಪ್ರಧಾನ್?

‘‘ಕೇಂದ್ರ ಸರ್ಕಾರ ನಮಗೆ ನೀಟ್ ಪರೀಕ್ಷೆಯ ಮೂಲಪ್ರತಿ ನೀಡಬೇಕು. ಮುಂದೆ ಕೇಂದ್ರ ಸರ್ಕಾರ ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವುದು ಮಾತ್ರವಲ್ಲದೆ, ಹೀಗೆ ಉತ್ತರ ಪತ್ರಿಕೆಯಲ್ಲೂ ಮೋಸವಾಗದಂತೆ ನೋಡಿಕೊಳ್ಳಬೇಕು’’ ಎಂದು ಅವರು ಮನವಿ ಮಾಡಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:29 pm, Sat, 25 July 26

Source link

ಅತ್ತ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ – Kannada News | Countdown Begins For Karnataka Cabinet Expansion, Likely DK Shivakumar And Siddaramaiah Again Visit Delhi

ಬೆಂಗಳೂರು, (ಜುಲೈ 25):  ಕರ್ನಾಟಕ ಸಂಪುಟ ವಿಸ್ತರಣೆಗೆ ಹಿಡಿದ ಗ್ರಹಣ ಬಿಡುವ ಲಕ್ಷಣಗಳು ಕಾಣುತ್ತಿವೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ಧರ್ಮೇಂದ್ರ ಪ್ರಧಾನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಹುಲ್ ಗಾಂಧಿ ಹೋರಾಟ ಅಂತ್ಯವಾದಂತಾಗಿದೆ. ಹೀಗಾಗಿ ಇದೀಗ ಕರ್ನಾಟಕದ ಬೆಳವಣಿಗೆ ಕಡೆ ಗಮನ ಕೊಡಲಿದ್ದು, ಮುಂದಿನ ವಾರ ಸಂಪುಟ ವಿಸ್ತರಣೆ ಸಾಧ್ಯತೆ ದಟ್ಟವಾಗಿದೆ. ಹೌದು…. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟಿದ್ದರಿಂದ ರಾಹುಲ್ ಗಾಂಧಿ ಮತ್ತೆ ರಾಜ್ಯದ ಸಂಪುಟ ವಿಸ್ತರಣೆ ಕಡೆ ಗಮನ ಕೊಡಲಿದ್ದಾರೆ ಎನ್ನಲಾಗಿದೆ. ಇನ್ನು ನಿನ್ನೆ (ಜುಲೈ 24) ಕರ್ನಾಟಕದಲ್ಲೇ ಇದ್ದ ಕೆ.ಸಿ. ವೇಣುಗೋಪಾಲ್, ಯಾವುದೇ ಸಮಯದಲ್ಲಿ ಆಗಬಹುದು ಎಂದಿದ್ದರು.

ಇನ್ನು ಮೂಲಗಳ ಪ್ರಕಾರ, ರಾಜ್ಯದ ಕಾಂಗ್ರೆಸ್ ನಾಯಕರು ನಾಳೆ ಸಂಜೆಯೇ, ಮತ್ತೊಮ್ಮೆ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್
ವಿಶೇಷ ವಿಮಾನದಲ್ಲಿ ಹೊರಡಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version