ಪ್ರಧಾನ್ ರಾಜೀನಾಮೆ ನೀಡಿದ್ರೂ ಸಿಜೆಪಿಗಿಲ್ಲ ಸಮಾಧಾನ: ಇನ್ನೂ 2 ಬೇಡಿಕೆ ಈಡೇರಿಕೆಗೆ ಪಟ್ಟು, ಏನವು? – Kannada News | NEET Scam: “We Have 2 More Demands”: CJP’s Tweets After Dharmendra Pradhan Resignation

ನವದೆಹಲಿ, (ಜುಲೈ 25): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ (Dharmendra Pradhan Resigns) ನೀಡಿದ್ದಾರೆ. ಈ ಮೂಲಕ ಕೆಲವು ದಿನಗಳಿಂದ ನಡೆಯುತ್ತಿರುವ ಜನತಾ ಕ್ರಾಕೋಚ್‌ ಜನತಾ ಪಾರ್ಟಿ, ವಿದ್ಯಾರ್ಥಿಗಳ ಹೋರಾಟಕ್ಕೆ ಕೊನೆಗೂ ಜಯ ಸಂದಿದೆ. ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನಂತರ ನಡೆದ ವಿದ್ಯಾರ್ಥಿಗಳ ಆತ್ಮಹತ್ಯೆಯ ಬಳಿಕ ಪ್ರಧಾನ್‌ ರಾಜೀನಾಮೆ ನೀಡಬೇಕೆಂಬ ಕೂಗು ಜೋರಾಗಿ ಕೇಳಿ ಬಂದಿತ್ತು. ಅಲ್ಲದೆ ಇದೇ ಕಾರಣ ಮುಂದಿಟ್ಟುಕೊಂಡು ಯುವಸಮೂಹ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇದೀಗ ಈ ಹೋರಾಟಕ್ಕೆ ಫಲ ಸಿಕ್ಕಿದ್ದು, ಶಿಕ್ಷಣ ಸಚಿವ ಸ್ಥಾನದಿಂದ ಪ್ರಧಾನ್‌ ಕೆಳಗಿಳಿದಿದ್ದಾರೆ. ಆದರೂ ಸಿಜೆಪಿಗೆ ಸಮಾಧಾನ ಇಲ್ಲ. ಒಂದು ಬೇಡಿಕೆ ಈಡೇರಿದೆ. ಇನ್ನೂ ಎರಡು ಬೇಡಿಕೆ ಈಡೇರಿಸಬೇಕೆಂದು ಬಿಗಿಪಟ್ಟು ಹಿಡಿದಿದೆ. ಹಾಗಾದ್ರೆ, ಇನ್ನೂ ಆ ಎರಡು ಬೇಡಿಕೆಗಳು ಯಾವುವು ಎನ್ನುವ ಡಿಟೇಲ್ಸ್ ವಿಡಿಯೋನಲ್ಲಿದೆ ನೋಡಿ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: ಜಿಂಬಾಬ್ವೆ ವಿರುದ್ಧ ಸತತ 2ನೇ ಪಂದ್ಯದಲ್ಲೂ ಮುಗ್ಗರಿಸಿದ ಅಭಿಷೇಕ್ – Kannada News | Abhishek Sharma’s Poor Form Continues in IND vs ZIM 2nd T20

ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಇಂದು ಜುಲೈ 25 ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡಕ್ಕೆ ಮತ್ತೊಮ್ಮೆ ಕಳಪೆ ಆರಂಭ ಸಿಕ್ಕಿದೆ(PC-PTI).

ಟೀಂ ಇಂಡಿಯಾ ಪರ ಎಂದಿನಂತೆ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭಿಸಿದರು. ಅದರಂತೆ ಮೊದಲ ಓವರ್​ನಲ್ಲಿ ಅಭಿಷೇಕ್ ಶರ್ಮಾ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಉತ್ತಮ ಆರಂಭವನ್ನು ಪಡೆದುಕೊಂಡರು. ಆದರೆ ಎರಡನೇ ಓವರ್​ನಲ್ಲೇ ಅಭಿಷೇಕ್ ಅವರ ಇನ್ನಿಂಗ್ಸ್ ಅಂತ್ಯವಾಯಿತು(PC-PTI).

ಬ್ಲೆಸ್ಸಿಂಗ್ ಮುಜರಬಾನಿ ಬೌಲ್ ಮಾಡಿದ ಎರಡನೇ ಓವರ್​ನ ಐದನೇ ಎಸೆತದಲ್ಲಿ ಅಭಿಷೇಕ್ ಪಾಯಿಂಟ್​ನಲ್ಲಿ ನಿಂತಿದ್ದ ಫಿಲ್ಡರ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರೊಂದಿಗೆ ಅಭಿಷೇಕ್ ಅವರ ಕಳಪೆ ಫಾರ್ಮ್ ಜಿಂಬಾಬ್ವೆ ವಿರುದ್ಧವೂ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಕೇವಲ 1 ರನ್​ಗೆ ಔಟಾಗಿದ್ದ ಅಭಿಷೇಕ್ 2ನೇ ಪಂದ್ಯದಲ್ಲಿ 8 ರನ್​ಗಳಿಗೆ ಸುಸ್ತಾದರು(PC-PTI).

ಕೊನೆಯ ಐದು ಇನ್ನಿಂಗ್ಸ್​ಗಳಲ್ಲಿ ಅಭಿಷೇಕ್ ಅವರ ಬ್ಯಾಟ್​ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿಲ್ಲ. ಜಿಂಬಾಬ್ವೆ ವಿರುದ್ಧದ ಸರಣಿಗೂ ಮುನ್ನ ಇಂಗ್ಲೆಂಡ್​ನಲ್ಲಿ ನಡೆದ ಸರಣಿಯ ಕೊನೆಯ ಮೂರು ಪಂದ್ಯಗಳಲ್ಲಿ ಅಭಿಷೇಕ್ ಅವರ ಪ್ರದರ್ಶನ ಕಳಪೆಯಾಗಿತ್ತು. ಅಭಿಷೇಕ್ ಅವರ ಕಳೆದ ಐದು ಇನ್ನಿಂಗ್ಸ್​ಗಳ ಪ್ರದರ್ಶನವನ್ನು ನೋಡುವುದಾದರೆ.. ಕ್ರಮವಾಗಿ 8,1,3,16,10 ರನ್​ಗಳನ್ನು ಕಲೆಹಾಕಿದ್ದಾರೆ(PC-PTI).

ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಅಭಿಷೇಕ್ 59 ರನ್​ಗಳ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ, ಅವರ ಬ್ಯಾಟ್​ ಮೌನಕ್ಕೆ ಶರಣಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಮುಗ್ಗರಿಸಿರುವ ಅಭಿಷೇಕ್​ ಅವರನ್ನು ಮೂರನೇ ಪಂದ್ಯದಿಂದ ಹೊರಗಿಡುವ ಸಾಧ್ಯತೆಗಳಿದ್ದು ಅವರ ಬದಲಿಗೆ ಪ್ರಭ್​ಸಿಮ್ರಾನ್​ಗೆ ಅವಕಾಶ ನೀಡಬಹುದು(PC-PTI).

Published On – 4:55 pm, Sat, 25 July 26

Source link

‘ಪ್ರಜಾಪ್ರಭುತ್ವದ ಗೆಲುವು’; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿರೋಧ ಪಕ್ಷಗಳ ಪ್ರತಿಕ್ರಿಯೆ – Kannada News | Big Win for Democrocy Opposition Leaders Reaction on Dharmendra Pradhan Resignation

ನವದೆಹಲಿ, ಜುಲೈ 25: ಸಿಜೆಪಿ, ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದು ಕೊನೆಗೂ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ (Dharmendra Pradhan Resign) ನೀಡಿದ್ದಾರೆ. ಈ ರಾಜೀನಾಮೆಯ ಬಗ್ಗೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷದ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ವಿರೋಧ ಪಕ್ಷಗಳ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್ ಏನೇನು ಹೇಳಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

ಇನ್ನೂ 2 ಬೇಡಿಕೆ ಉಳಿದಿದೆ- ರಾಹುಲ್ ಗಾಂಧಿ:

“ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮರುರೂಪಿಸುವ ನಿಟ್ಟಿನಲ್ಲಿ ಒಂದು ಬೃಹತ್ ಹೆಜ್ಜೆಯಾಗಿದೆ. ದೇಶಾದ್ಯಂತ ಇರುವ ವಿದ್ಯಾರ್ಥಿಗಳಿಗೆ ಅಭಿನಂದನೆಗಳು; ನಿಮ್ಮೆಲ್ಲರ ಬಗ್ಗೆ ನಮಗೆ ಹೆಮ್ಮೆಯಿದೆ. ಪ್ರಜಾಪ್ರಭುತ್ವ, ಸಂವಿಧಾನ ಮತ್ತು ತಮ್ಮ ಭವಿಷ್ಯವನ್ನು ರಕ್ಷಿಸಲು ರಸ್ತೆಗಿಳಿದು ಕಟ್ಟಿಬಿದ್ದು ನಿಂತ ಪ್ರತಿಯೊಬ್ಬ ಯುವಕನಿಗೆ, ಪ್ರತಿಯೊಬ್ಬ ವಿದ್ಯಾರ್ಥಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ 2 ಬೇಡಿಕೆಗಳು ಇನ್ನು ಉಳಿದಿವೆ. ಪ್ರಧಾನಮಂತ್ರಿಯವರು ವಿದ್ಯಾರ್ಥಿಗಳನ್ನು ಮತ್ತು ಭಾರತದ ಭವಿಷ್ಯವನ್ನು ಗೌರವಿಸಿ ಕ್ಷಮಾಪಣೆ ಕೇಳಬೇಕು, ಹಾಗೂ ವಿದ್ಯಾರ್ಥಿಗಳ ಮೇಲೆ ಹಿಂಸಾಚಾರ ನಡೆಸಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

“ಸಮಾಜದ ಇತರ ವರ್ಗಗಳಾದ—ರೈತರು, ಕಾರ್ಮಿಕರು, ಬಡವರು ಮತ್ತು ಈ ಸರ್ಕಾರದಿಂದ ತುಳಿತಕ್ಕೊಳಗಾದ ಹಾಗೂ ಹತ್ತಿಕ್ಕಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೆ—ತಮ್ಮ ಗೌರವಕ್ಕಾಗಿ ಸಂವಿಧಾನಾತ್ಮಕ ರೀತಿಯಲ್ಲಿ ಗಟ್ಟಿಯಾಗಿ ನಿಲ್ಲುವುದರಲ್ಲೇ ನಿಜವಾದ ಧೈರ್ಯವಿದೆ. ಈ ಸರ್ಕಾರವನ್ನು ಕಿತ್ತೊಗೆಯುವ ಸಮಯ ಬಂದಿದೆ. ಅಂಜಬೇಡಿ!” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕೊನೆಗೂ ಸರ್ಕಾರ ತಲೆಬಾಗಿದೆ ಎಂದ ಪ್ರಿಯಾಂಕಾ ಗಾಂಧಿ:

“ಇದು ಭಾರತದ ಯುವಜನತೆಗೆ ಸಿಕ್ಕ ಗೆಲುವು ಎಂದು ನಾನು ನಂಬುತ್ತೇನೆ, ಮತ್ತು ತಮ್ಮ ಹಕ್ಕುಗಳಿಗಾಗಿ ಹಠಕ್ಕೆ ಬಿದ್ದು ನಿಂತ ಪ್ರತಿಯೊಬ್ಬ ಯುವಕ-ಯುವತಿಯರ ಬಗ್ಗೆ ನನಗೆ ಹೆಮ್ಮೆಯಿದೆ. ಮಹಾತ್ಮ ಗಾಂಧೀಜಿಯವರು ನಮಗೆ ಕಲಿಸಿದ ಹಾದಿಯಲ್ಲೇ ಅವರು ಇದನ್ನು ಮಾಡಿದರು. ಅವರು ಇದನ್ನು ಸಂಪೂರ್ಣ ಅಹಿಂಸಾತ್ಮಕವಾಗಿಯೇ ಮಾಡಿದರು. ಅವರ ಮೇಲೆ ಪೆಲೆಟ್ ಗನ್‌ಗಳನ್ನು ಹಾರಿಸಲಾಯಿತು, ಅಶ್ರುವಾಯು ಬಳಸಲಾಯಿತು, ಲಾಠಿಗಳಿಂದ ಹೊಡೆಯಲಾಯಿತು. ಅವರಿಗೆ ಗಂಭೀರ ಗಾಯಗಳಾದವು. ಆದರೆ ಅವರು ಎಂದಿಗೂ ತಲೆಬಾಗಲಿಲ್ಲ. ಕೊನೆಗೆ ಮೋದಿ ಸರ್ಕಾರವೇ ಅವರ ಬೇಡಿಕೆಗೆ ತಲೆಬಾಗಬೇಕಾಯಿತು” ಎಂದು ಪ್ರಿಯಾಂಕಾ ಗಾಂಧಿ ಮೆಚ್ಚುಗೆ ಸೂಚಿಸಿದ್ದಾರೆ.

“ಈ ದೇಶದ ಪ್ರತಿಯೊಬ್ಬ ಆಡಳಿತಗಾರನಿಗೂ, ಈಗ ಮತ್ತು ಎಂದೆಂದಿಗೂ ಇದೊಂದು ದೊಡ್ಡ ಪಾಠ. ನೀವು ಜನರ ಇಚ್ಛೆಗೆ ಕಿವಿಗೊಡಲೇಬೇಕು. ಇದು ಪ್ರಜಾಪ್ರಭುತ್ವ, ಮತ್ತು ಜನರ ಇಚ್ಛೆಯೇ ಸರ್ವೋಚ್ಚ. ಅದಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಇಂದು ನಮ್ಮ ವಿದ್ಯಾರ್ಥಿಗಳು ಮತ್ತು ಯುವಜನತೆ ಅದನ್ನು ಸಾಬೀತುಪಡಿಸಿದ್ದಾರೆ. ಭಾರತದಾದ್ಯಂತ, ತಾವು ಸರಿಯೆಂದು ನಂಬಿದ್ದಕ್ಕಾಗಿ ಅವರು ನಿಂತರು, ಮತ್ತು ಇದು ಅವರದೇ ಗೆಲುವು. ನಾನು ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕಾಂಗ್ರೆಸ್ ಪಕ್ಷದಲ್ಲಿರುವ ನಾವು ಅವರಿಗೆ ಸಾಧ್ಯವಿರುವ ಅತ್ಯಂತ ಬಲವಾದ ರೀತಿಯಲ್ಲಿ ಬೆಂಬಲ ನೀಡಲು ಶ್ರಮಿಸಿದ್ದೇವೆ. ರಾಹುಲ್ ಗಾಂಧಿ ಕಳೆದ 2-3 ವರ್ಷಗಳಿಗೂ ಹೆಚ್ಚು ಕಾಲದಿಂದ ಪೇಪರ್ ಲೀಕ್ ಮತ್ತು ಪರೀಕ್ಷಾ ಬಿಕ್ಕಟ್ಟಿನ ವಿಷಯವನ್ನು ಎತ್ತುತ್ತಲೇ ಬಂದಿದ್ದಾರೆ. ನಾನು ಅವರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ, ಏಕೆಂದರೆ ಅವರು ಈ ವಿಷಯವನ್ನು ಸತತವಾಗಿ ಧ್ವನಿಸಿ, ಕಾಂಗ್ರೆಸ್ ಪಕ್ಷ, ಎನ್‌ಎಸ್‌ಯುಐ (NSUI) ಮತ್ತು ಯೂತ್ ಕಾಂಗ್ರೆಸ್‌ನಲ್ಲಿದ್ದ ನಮ್ಮೆಲ್ಲರಿಗೂ ವಿದ್ಯಾರ್ಥಿಗಳ ಪರವಾಗಿ ನಿಲ್ಲಲು ಮಾತ್ರವಲ್ಲದೆ, ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಮತ್ತು ಶಿಕ್ಷಣದಲ್ಲಿ ಅರ್ಥಪೂರ್ಣ ಸುಧಾರಣೆಗಳಿಗಾಗಿ ದೇಶಾದ್ಯಂತ ಚಳವಳಿಯನ್ನು ನಿರ್ಮಿಸಲು ಸ್ಪೂರ್ತಿಯಾಗಿದ್ದಾರೆ.” ಎಂದು ಪ್ರಿಯಾಂಕಾ ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿದ 2 ಪುಟಗಳ ರಾಜೀನಾಮೆ ಪತ್ರದಲ್ಲೇನಿದೆ?

ಪರೀಕ್ಷಾ ಅಕ್ರಮ ತಡೆಯಲು ಕಟ್ಟುನಿಟ್ಟಿನ ಕ್ರಮ ಅಗತ್ಯ- ಅಖಿಲೇಶ್ ಯಾದವ್:

“ಇದು ಹೊಸ ಪೀಳಿಗೆಗೆ ಸಿಕ್ಕ ಬೃಹತ್ ಜಯ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಸರ್ಕಾರ ಪ್ರತಿಯೊಂದರ ಕುರಿತೂ ಅತ್ಯಂತ ಗಂಭೀರವಾಗಿ ಆಲೋಚಿಸಬೇಕಾಗಿದೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಕಾಂಕ್ರೀಟ್ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.… ಇಂದಿನ ಕಾಲದಲ್ಲಿ ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು ಮತ್ತು ರಸ್ತೆಗಳ ಮೂಲಕ ಹರಡಿದ ಯುವಜನತೆಯ ಈ ಹೋರಾಟವು, ಅಸಂಖ್ಯಾತ ಮಿತ್ರಪಕ್ಷಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಪಕ್ಷವಾದ ಬಿಜೆಪಿಯನ್ನು ಅಂತಿಮವಾಗಿ ತಲೆಬಾಗುವಂತೆ ಮಾಡಿದೆ. ಇದು ಯುವಕರಿಗೆ ಸಿಕ್ಕ ದೊಡ್ಡ ಗೆಲುವು. ಆದರೆ, ಭವಿಷ್ಯದಲ್ಲಿ ಯಾವುದೇ ಪೇಪರ್ ಲೀಕ್ ಆಗದಂತೆ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಬೇಕು ಮತ್ತು ಯುವಕರಿಗೆ ಉದ್ಯೋಗ ಹಾಗೂ ಕೆಲಸದ ಅವಕಾಶಗಳನ್ನು ತೆರೆಯಬೇಕು ಎಂಬುದನ್ನು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಇದರಿಂದ ಕಲಿಯಬೇಕಾಗಿದೆ” ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.

ಪ್ರಜಾಪ್ರಭುತ್ವದ ಗೆಲುವು- ಅರವಿಂದ್ ಕೇಜ್ರಿವಾಲ್:

“ನಿಮ್ಮೆಲ್ಲರಿಗೂ ಅಭಿನಂದನೆಗಳು. ನಮ್ಮ ದೇಶದ ಯುವಜನತೆಗೆ ಅಭಿನಂದನೆಗಳು. ನಿಮ್ಮ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿರುವುದು ಅತ್ಯಂತ ಸಂತೋಷದ ವಿಷಯ. ಧರ್ಮೇಂದ್ರ ಪ್ರಧಾನ್ ಕೊನೆಗೂ ರಾಜೀನಾಮೆ ನೀಡಬೇಕಾಯಿತು. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಸಿಕ್ಕ ಬೃಹತ್ ಗೆಲುವು. ನಮ್ಮ ದೇಶದ ಜನರಿಗೆ ಪ್ರಜಾಪ್ರಭುತ್ವದ ಮೇಲಿದ್ದ ನಂಬಿಕೆಯೇ ಕುಸಿಯಲು ತೊಡಗಿತ್ತು. ಸರ್ಕಾರಗಳು ಜನರ ಧ್ವನಿಗೆ ಕಿವಿಗೊಡುವುದಿಲ್ಲ ಎಂದೇ ಅವರು ಭಾವಿಸಿದ್ದರು. ಜನರು ಸರ್ಕಾರದ ಮುಂದೆ ಕೈಮುಗಿದು ಮನವಿ ಮಾಡುತ್ತಿದ್ದರು, ಧ್ವನಿ ಎತ್ತುತ್ತಿದ್ದರು, ಆದರೂ ಸರ್ಕಾರ ಎಂದಿಗೂ ಆಲಿಸುತ್ತಿರಲಿಲ್ಲ. ಈಗ ಕೊನೆಗೂ ಸರ್ಕಾರ ಮಣಿಯಬೇಕಾಯಿತು” ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: Dharmendra Pradhan: ಸಿಜೆಪಿ ಬೇಡಿಕೆಗೆ ಮಣಿದ ಸರ್ಕಾರ; ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಹೇಳಿಕೆ:

“ಇದು ದೇಶದ ಯುವಶಕ್ತಿ ಮತ್ತು ವಿದ್ಯಾರ್ಥಿ ಚಳವಳಿಗೆ ಸಿಕ್ಕ ಮೊದಲ ಜಯ. ದೇಶದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಕೋಟಿ ಕೋಟಿ ಅಭಿನಂದನೆಗಳು. ಇದು ಮೊದಲ ಜಯ, ಮೊದಲ ಹೆಜ್ಜೆ. ಬಿಜೆಪಿ ಸರ್ಕಾರದ ಅಹಂಕಾರ ಖಂಡಿತವಾಗಿಯೂ ಮುರಿದುಬಿದ್ದಿದೆ. ಆದರೆ ಅದು ಸಂಪೂರ್ಣವಾಗಿ ಶಮನವಾಗುವವರೆಗೆ ಮತ್ತು ಶಿಕ್ಷಣ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಸಂಪೂರ್ಣ ಸುಧಾರಣೆಯಾಗುವವರೆಗೆ, ನಾವು ಈ ಹೋರಾಟವನ್ನು ಮುಂದುವರಿಸುತ್ತೇವೆ…” ಎಂದು ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಹೇಳಿದ್ದಾರೆ.

ಎಎಪಿ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದೇನು?:

“ಧರ್ಮೇಂದ್ರ ಪ್ರಧಾನ್ ಅವರು ಸ್ವಯಂಪ್ರೇರಿತವಾಗಿ ರಾಜೀನಾಮೆ ಸಲ್ಲಿಸಿಲ್ಲ. ದೇಶದ ಮಕ್ಕಳು, ದೇಶದ ವಿದ್ಯಾರ್ಥಿಗಳು ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆಯುವಂತೆ ಮಾಡಿದ್ದಾರೆ. ಇದು ನಿಜಕ್ಕೂ ಸ್ವಯಂಪ್ರೇರಿತ ರಾಜೀನಾಮೆಯಾಗಿದ್ದರೆ, ನೀಟ್ ಪೇಪರ್ ಲೀಕ್ ಸಂಭವಿಸಿದ ತಕ್ಷಣವೇ ನಡೆಯಬೇಕಿತ್ತು. ದೇಶಕ್ಕೆ ಈಗ ಬೃಹತ್ ಶಿಕ್ಷಣ ಕ್ರಾಂತಿಯ ಅಗತ್ಯವಿದೆ” ಎಂದು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Zimbabwe vs India 2nd T20, Live Score: ಭಾರತದ ಬ್ಯಾಟಿಂಗ್ ಆರಂಭ – Kannada News | Zimbabwe vs India 2nd T20, Live Cricket Score IND vs ZIM Full Scorecard Match Updates from Harare in Kannada

  • 25 Jul 2026 04:18 PM (IST)

    IND vs ZIM 2nd T20 Live: ಜಿಂಬಾಬ್ವೆ ತಂಡ

    ಬ್ರಿಯಾನ್ ಬೆನೆಟ್, ಬೆನ್ ಕರ್ರನ್ (ಚೊಚ್ಚಲ ಪಂದ್ಯ), ಡಿಯೋನ್ ಮೈಯರ್ಸ್, ಸಿಕಂದರ್ ರಝಾ (ನಾಯಕ), ರಿಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ (ವಿಕೆಟ್ ಕೀಪರ್), ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮ್ಹುರಿ (ಚೊಚ್ಚಲ ಪಂದ್ಯ), ರಿಚರ್ಡ್ ನಾಗರವಾ ಮತ್ತು ಬ್ಲೆಸ್ಸಿಂಗ್ ಮುಜರಬಾನಿ.

  • 25 Jul 2026 04:18 PM (IST)

    IND vs ZIM 2nd T20 Live: ಭಾರತ ತಂಡ

    ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್ ( ಚೊಚ್ಚಲ ಪಂದ್ಯ) ಮತ್ತು ಮಯಾಂಕ್ ಯಾದವ್.

  • 25 Jul 2026 04:05 PM (IST)

    IND vs ZIM 2nd T20 Live: ಟಾಸ್ ಗೆದ್ದ ಜಿಂಬಾಬ್ವೆ

    ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ.

  • Source link

    CJP Supporters Celebration: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ CJP ಬೆಂಬಲಿಗರ ಸಂಭ್ರಮಾಚರಣೆ – Kannada News | CJP Activists Celebrate Dharmendra Pradhans Resignation Amidst NEET Paper Leak Protests in Delhi

    ದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಜಂತರ್‌ಮಂತರ್‌ನಲ್ಲಿ ನಡೆಯುತ್ತಿದ್ದ ಸಿಜೆಪಿ ಪ್ರತಿಭಟನೆಯ ಸ್ಥಳದಲ್ಲಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಕಾರ್ಯಕರ್ತರ ಸಡಗರ ಇಮ್ಮಡಿಯಾಗಿದೆ. ಸಿಜೆಪಿ ಸಂಸ್ಥಾಪಕ  ಅಭೀಜಿತ್ ದೀಪ್ಕೆ  ಸೇರಿದಂತೆ ಹಲವು ಕಾರ್ಯಕರ್ತರು ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

    ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​​​ ಮಾಡಿ

     

    Source link

    IND vs ZIM: ಟಾಸ್ ಗೆದ್ದ ಜಿಂಬಾಬ್ವೆ; ಟೀಂ ಇಂಡಿಯಾದಲ್ಲಿ 1 ಬದಲಾವಣೆ – Kannada News | IND vs ZIM 2nd T20 Live: India Aims for Series Victory; Yash Thakur Debuts

    ಭಾರತ ಮತ್ತು ಜಿಂಬಾಬ್ವೆ (India vs Zimbabwe) ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಇಂದು ಜುಲೈ 25 ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯವನ್ನು ಗೆದ್ದಿರುವ ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಇದೀಗ ಈ ಪಂದ್ಯವನ್ನು ಗೆದ್ದರೆ ಸರಣಿ ಟೀಂ ಇಂಡಿಯಾದ ವಶವಾಗಲಿದೆ. ಅಲ್ಲದೆ ಶ್ರೇಯಸ್ ಅಯ್ಯರ್ ನಾಯಕನಾಗಿ ಮೊದಲ ಟಿ20 ಸರಣಿ ಗೆಲ್ಲುವ ಅವಕಾಶ ಹೊಂದಿದ್ದಾರೆ.ಇನ್ನು ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ.

    ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ

    ಟಾಸ್ ಜೊತೆಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಜಿಂಬಾಬ್ವೆ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಅಂದರೆ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಈ ಪಂದ್ಯದಲ್ಲೂ ಆಡಲಿದೆ. ಇತ್ತ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆಯನ್ನು ಮಾಡಲಾಗಿದ್ದು, ಕಳೆದ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅಶೋಕ್ ಶರ್ಮಾರನ್ನು ಈ ಪಂದ್ಯದಿಂದ ಕೈಬಿಡಲಾಗಿದೆ. ಅವರ ಬದಲಿಗೆ ಮತ್ತೊಬ್ಬ ಯುವ ವೇಗಿ ಯಶ್ ಠಾಕೂರ್​ಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಅವಕಾಶ ನೀಡಲಾಗಿದೆ.

    ಹರಾರೆಯಲ್ಲಿ ಎರಡೂ ತಂಡಗಳ ದಾಖಲೆ

    ಇಲ್ಲಿಯವರೆಗೆ, ಭಾರತ ಮತ್ತು ಜಿಂಬಾಬ್ವೆ ನಡುವೆ ಹರಾರೆ ಮೈದಾನದಲ್ಲಿ 13 ಪಂದ್ಯಗಳು ನಡೆದಿವೆ. ಭಾರತ ಈ ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದಿದ್ದರೆ, ಜಿಂಬಾಬ್ವೆ 3 ಪಂದ್ಯಗಳನ್ನು ಗೆದ್ದಿದೆ. ಭಾರತ ಕಳೆದ ಐದು ಪಂದ್ಯಗಳನ್ನು ಸುಲಭವಾಗಿ ಗೆದ್ದಿದೆ. ಭಾರತ ಈಗ ಎರಡನೇ ಟಿ20ಐ ಗೆದ್ದು ಸರಣಿಯನ್ನು ತನ್ನದಾಗಿಸಿಕೊಳ್ಳುವ ಇರಾದೆಯಲ್ಲಿದೆ.

    Zimbabwe vs India 2nd T20, Live Score: ಟಾಸ್ ಗೆದ್ದ ಜಿಂಬಾಬ್ವೆ ಬೌಲಿಂಗ್ ಆಯ್ಕೆ

    ಉಭಯ ತಂಡಗಳ ಪ್ಲೇಯಿಂಗ್ 11

    ಭಾರತ ತಂಡ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್ ( ಚೊಚ್ಚಲ ಪಂದ್ಯ) ಮತ್ತು ಮಯಾಂಕ್ ಯಾದವ್.

    ಜಿಂಬಾಬ್ವೆ ತಂಡ: ಬ್ರಿಯಾನ್ ಬೆನೆಟ್, ಬೆನ್ ಕರ್ರನ್ (ಚೊಚ್ಚಲ ಪಂದ್ಯ), ಡಿಯೋನ್ ಮೈಯರ್ಸ್, ಸಿಕಂದರ್ ರಝಾ (ನಾಯಕ), ರಿಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ (ವಿಕೆಟ್ ಕೀಪರ್), ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮ್ಹುರಿ (ಚೊಚ್ಚಲ ಪಂದ್ಯ), ರಿಚರ್ಡ್ ನಾಗರವಾ ಮತ್ತು ಬ್ಲೆಸ್ಸಿಂಗ್ ಮುಜರಬಾನಿ.

    ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Published On – 4:13 pm, Sat, 25 July 26

    Source link

    ಈ ಹಿಂದೆ ಪೇಪರ್ ಲೀಕ್ ವಿರುದ್ಧ ಹೋರಾಟ; ಈಗ ನೀಟ್​​​​​​ ಪ್ರಶ್ನೆ ಪತ್ರಿಕೆ ಸೋರಿಕೆಗೆ ರಾಜೀನಾಮೆ; ಯಾರೀ ಧರ್ಮೇಂದ್ರ ಪ್ರಧಾನ್? – Kannada News | Dharmendra Pradhan Resigns: NEET Scam Fallout and Union Education Minister’s Political Journey

    ಧರ್ಮೇಂದ್ರ ಪ್ರಧಾನ್​ Image Credit source: tv9 kannada

    ದೆಹಲಿ, ಜುಲೈ 25: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಸಾಕಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಹೀಗಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ ಕೆಲ ದಿನಗಳಿಂದ ಪ್ರತಿಭಟನೆ ತಾರಕಕ್ಕೇರಿತ್ತು. ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆಗೆ ‘ಕಾಕ್ರೋಚ್ ಜನತಾ ಪಾರ್ಟಿ’ ಪಟ್ಟು ಹಿಡಿದಿತ್ತು. ಇದೆಲ್ಲದರ ಬೆನ್ನಲ್ಲೇ ಶನಿವಾರ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್  ರಾಜೀನಾಮೆ ನೀಡಿದ್ದಾರೆ. ಹಾಗಾದರೆ ಈ ಧರ್ಮೇಂದ್ರ ಪ್ರಧಾನ್ ಯಾರು, ಅವರು ರಾಜಕೀಯಕ್ಕೆ ಆಗಮಿಸಿದ್ದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

    ಜನನ ಮತ್ತು ಶಿಕ್ಷಣ

    ಒಡಿಶಾದ ಅಂಗುಲ್ ಜಿಲ್ಲೆಯ ತಾಲ್ಚೇರ್​ ಎಂಬಲ್ಲಿ 26 ಜೂನ್ 1969 ಧರ್ಮೇಂದ್ರ ಪ್ರಧಾನ್ ಜನಿಸಿದರು. ಮಾಜಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ​​ ಡಾ. ದೇವೇಂದ್ರ ಪ್ರಧಾನ್ ಇವರ ತಂದೆ, ತಾಯಿ ಬಸಂತ ಮಂಜರಿ ಪ್ರಧಾನ್. ಒಡಿಶಾದ ತಾಲ್ಚೇರ್ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣ ಮುಗಿಸಿದ ಧರ್ಮೇಂದ್ರ, ಭುವನೇಶ್ವರದ ಪ್ರಸಿದ್ಧ ಉತ್ಕಲ್ ವಿಶ್ವವಿದ್ಯಾಲಯದಿಂದ ಮಾನವಶಾಸ್ತ್ರದಲ್ಲಿ (MA in Anthropology) ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    ರಾಜಕೀಯ ಪ್ರವೇಶ

    ಧರ್ಮೇಂದ್ರ ಪ್ರಧಾನ್ ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯ ಕ್ಷೇತ್ರಕ್ಕೆ ಧುಮುಕಿದರು. 1983ರಲ್ಲಿ ತಾಲ್ಚೇರ್ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಾಗಿ ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ನಂತರ ಕಾಲೇಜು ಯೂನಿಯನ್ ಅಧ್ಯಕ್ಷರಾಗಿ ಹಾಗೂ ಎಬಿವಿಪಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

    ಇದನ್ನೂ ಓದಿ: Dharmendra Pradhan: ಸಿಜೆಪಿ ಬೇಡಿಕೆಗೆ ಮಣಿದ ಸರ್ಕಾರ; ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    2000ರಲ್ಲಿ ಒಡಿಶಾದ ಪಲ್ಲಹರಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಸಕ್ರಿಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. 2002-03ರಲ್ಲಿ ‘ಉತ್ತಮ ಶಾಸಕ’ ಪ್ರಶಸ್ತಿಗೂ ಭಾಜನರಾಗಿದ್ದರು. ಇನ್ನು 2004ರಲ್ಲಿ ಒಡಿಶಾದ ದೇವರಾಜ್ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾದರು. ನಂತರ ಬಿಹಾರ ಹಾಗೂ ಮಧ್ಯಪ್ರದೇಶಗಳಿಂದ ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದರು. 2024ರಲ್ಲಿ ಒಡಿಶಾದ ಸಂಬಲ್‌ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು.

    ಧರ್ಮೇಂದ್ರ ಪ್ರಧಾನ್​​ ನಿರ್ವಹಿಸಿದ ಪ್ರಮುಖ ಖಾತೆಗಳು

    ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಧರ್ಮೇಂದ್ರ ಪ್ರಧಾನ್ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದ್ದಾರೆ. 2014 ರಿಂದ 2021ರವರಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾಗಿದ್ದರು. 2017ರಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ, 2019ರಿಂದ 2021 ಉಕ್ಕು ಸಚಿವ ಮತ್ತು 2021ರಿಂದ 2026 ಜುಲೈ 25ರವರೆಗೆ ಕೇಂದ್ರ ಶಿಕ್ಷಣ ಸಚಿವರಾಗಿದ್ದರು.

    1996ರಲ್ಲಿ ಪೇಪರ್ ಲೀಕ್ ವಿರುದ್ಧ ಹೋರಾಟ ಮಾಡಿದ್ದ ಧರ್ಮೇಂದ್ರ ಪ್ರಧಾನ್ 

    ಧರ್ಮೇಂದ್ರ ಪ್ರಧಾನ್ ಸುಮಾರು ಮೂರು ದಶಕಗಳ ಹಿಂದೆ​ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧವೇ ಭಾರೀ ಪ್ರತಿಭಟನೆ ಮಾಡಿದ್ದರು. 1996ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​ನ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ 27 ವರ್ಷದ ಧರ್ಮೇಂದ್ರ ಪ್ರಧಾನ್, ಒಡಿಶಾದ ಜೆ.ಬಿ. ಪಟ್ನಾಯಕ್ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಒಡಿಶಾ ಅಸೆಂಬ್ಲಿ ಮುಂದೆ ಬೃಹತ್ ಪ್ರತಿಭಟನೆ ಮಾಡಿದ್ದರು.

    ಇದನ್ನೂ ಓದಿ: Cockroach Janta Party: ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’? ಇಂಟರ್‌ನೆಟ್ ಮೀಮ್‌ನಿಂದ ಶಿಕ್ಷಣ ಸಚಿವರ ರಾಜೀನಾಮೆಯವರೆಗೆ ಯುವ ಕ್ರಾಂತಿಯ ಪೂರ್ಣ ವರದಿ

    ಈ ವೇಳೆ ಪೊಲೀಸರು ನಡೆಸಿದ ಭೀಕರ ಲಾಠಿಚಾರ್ಜ್‌ನಲ್ಲಿ ಧರ್ಮೇಂದ್ರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಐತಿಹಾಸಿಕ ಪ್ರತಿಭಟನೆಯ ನಂತರ ಒಡಿಶಾ ಸರ್ಕಾರವು ಮಹತ್ವದ ಪರೀಕ್ಷಾ ಸುಧಾರಣೆಗಳನ್ನು ತಂದಿತ್ತು.

    ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

    Source link

    ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿದ ಬಾಲಿವುಡ್​​ ಸೆಲೆಬ್ರಿಟಿಗಳಿವರು – Kannada News | Here is the list of Bollywood celebrities who supported CJP protest

    ನಟ ಇಮ್ರಾನ್ ಖಾನ್ ಸಹ ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಿದ ನಟರಲ್ಲಿ ಮೊದಲಿಗರುಗಳಲ್ಲಿ ಒಬ್ಬರು. ಅವರೂ ಸಹ ಖುದ್ದು ಜಂತರ್ ಮಂಥರ್​​ಗೆ ಹೋಗಿ ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಿದ್ದು ಮಾತ್ರವೇ ಅಲ್ಲದೆ, ಮೌನವಾಗಿರುವ ಬಾಲಿವುಡ್​ ನಟ-ನಟಿಯರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ‘ಧುರಂಧರ್’ ನಟಿ ಆಯೆಷಾ ಖಾನ್ ಸಹ ವಿದ್ಯಾರ್ಥಿಗಳ ಜೊತೆಗೂಡಿ ಪ್ರತಿಭಟನೆ ನಡೆಸಿದ್ದರು, ಅವರನ್ನು ಪೊಲೀಸರು ವಶಕ್ಕೆ ಸಹ ಪಡೆದುಕೊಂಡಿದ್ದರು.

    Source link

    ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿದ 2 ಪುಟಗಳ ರಾಜೀನಾಮೆ ಪತ್ರದಲ್ಲೇನಿದೆ? – Kannada News | Read full text of Dharmendra Pradhan Resignation Letter NEET Paper Leak CJP Protest

    ನವದೆಹಲಿ, ಜುಲೈ 25: ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿ (NEET UG Paper Leak) ತಿಂಗಳುಗಳೇ ಕಳೆದಿವೆ. ಮರುಪರೀಕ್ಷೆಯೂ ನಡೆದು ಫಲಿತಾಂಶ ಪ್ರಕಟವಾಗಿದೆ. ಆದರೆ, ಈ ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಕೇಂದ್ರ ಸರ್ಕಾರ ನೈತಿಕ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಕೊನೆಗೂ ಈ ಪ್ರತಿಭಟನೆಗೆ ಮಣಿದ ಸರ್ಕಾರ ಪ್ರತಿಭಟನಾಕಾರರ ಬೇಡಿಕೆಗಳ ಈಡೇರಿಕೆಗೆ ಒಪ್ಪಿಕೊಂಡಿದೆ. ಇಂದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ (Dharmendra Pradhan Resign) ನೀಡಿದ್ದಾರೆ. ಈ ಮೂಲಕ ಸಿಜೆಪಿಯ ಬೇಡಿಕೆಗಳೆಲ್ಲವೂ ಈಡೇರಿದಂತಾಗಿದೆ. 2 ಪುಟಗಳ ರಾಜೀನಾಮೆ ಪತ್ರವನ್ನು ಪ್ರಧಾನಮಂತ್ರಿಗಳಿಗೆ ಸಲ್ಲಿಸಿರುವ ಧರ್ಮೇಂದ್ರ ಪ್ರಧಾನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಸಂಗತಿಗಳ ಬಗ್ಗೆ ಪೂರ್ತಿ ವಿವರ ಇಲ್ಲಿದೆ.

    ರಾಜೀನಾಮೆ ಪತ್ರದಲ್ಲೇನಿದೆ?:

    “ನನ್ನ ಯುವ ಸ್ನೇಹಿತರೇ, 4 ದಶಕಗಳಿಗೂ ಹೆಚ್ಚು ಸಮಯದಿಂದ ನಾನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸುಧಾರಣೆಯ ಕಾರ್ಯಕ್ಕಾಗಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಬಲವಾದ, ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಯು ಒಂದು ಸದೃಢ ರಾಷ್ಟ್ರದ ಅಡಿಪಾಯವಾಗಿದೆ ಎಂದು ನಾನು ಯಾವಾಗಲೂ ನಂಬಿದ್ದೇನೆ. ದೇಶದ ಯುವ ಪೀಳಿಗೆಯ ಆಶೋತ್ತರಗಳು, ಭಾವನೆಗಳು ಮತ್ತು ನಿರೀಕ್ಷೆಗಳನ್ನು ನಾನು ಗೌರವಿಸುತ್ತೇನೆ. ಯುವಕರ ಕನಸುಗಳನ್ನು ನನಸು ಮಾಡುವುದು ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ತಮ್ಮ ಸರ್ಕಾರದ ನೈತಿಕ ಬದ್ಧತೆಯಾಗಿದೆ” ಎಂದು ರಾಜೀನಾಮೆ ಪತ್ರದಲ್ಲಿ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

    ಪ್ರಧಾನಿ ಮೋದಿಗೆ ಕೃತಜ್ಞತೆ:

    ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶ ಸೇವೆ ಮಾಡಲು ತಮಗೆ ಅವಕಾಶ ನೀಡಿದ್ದಕ್ಕಾಗಿ ಧರ್ಮೇಂದ್ರ ಪ್ರಧಾನ್ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ” ಪ್ರಧಾನಮಂತ್ರಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ರಾಷ್ಟ್ರ ಸೇವೆ ಮಾಡಲು ಅವಕಾಶ ನೀಡಿದಕ್ಕಾಗಿ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆದರೆ, ಮೇ 3, 2026ರಂದು ನಡೆದ ನೀಟ್-ಯುಜಿ (NEET-UG) ಪರೀಕ್ಷೆಗೆ ಸಂಬಂಧಿಸಿದಂತೆ ಅಕ್ರಮಗಳು ಬೆಳಕಿಗೆ ಬಂದವು. ಆ ವಿಷಯವನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರವು ತನಿಖೆಯನ್ನು ಸಿಬಿಐಗೆ (CBI) ಹಸ್ತಾಂತರಿಸಿತು, ಪರೀಕ್ಷೆಯನ್ನು ರದ್ದುಗೊಳಿಸಿತು ಮತ್ತು ಮರುಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿತು. ಇದರೊಂದಿಗೆ, ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಯಿತು” ಎಂದು ಹಳೆಯ ಘಟನೆಯನ್ನು ನೆನಪಿಸಿದ್ದಾರೆ.

    ಇದನ್ನೂ ಓದಿ: Dharmendra Pradhan: ಸಿಜೆಪಿ ಬೇಡಿಕೆಗೆ ಮಣಿದ ಸರ್ಕಾರ; ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    “ಈ ಅವಧಿಯುದ್ದಕ್ಕೂ, 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಗಮವಾಗಿ ಪರೀಕ್ಷೆಯನ್ನು ನಡೆಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ನಾವು ಇಡೀ ಸರ್ಕಾರದ ಸಮಗ್ರ ಸರ್ಕಾರಿ ಚೌಕಟ್ಟಿನ ಮೂಲಕ ಕೆಲಸ ಮಾಡಿದ್ದೇವೆ. ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರಗಳು ಅದರಲ್ಲೂ ವಿಶೇಷವಾಗಿ ಜಿಲ್ಲಾಡಳಿತಗಳು ಪ್ರಮುಖ ಪಾತ್ರ ವಹಿಸಿವೆ. ವಿದ್ಯಾರ್ಥಿಗಳು ಮತ್ತು ಪೋಷಕರ ಸಹಕಾರದಿಂದ ಜೂನ್ 21ರಂದು ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಮೊದಲ ದಿನದಿಂದಲೂ, ನಾನು ಈ ವಿಷಯದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ ಮತ್ತು ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಎಂದಿಗೂ ಬೆನ್ನು ಹಾಕಿ ಹೋಗಿಲ್ಲ. ಪರೀಕ್ಷಾ ಮಾಫಿಯಾದಿಂದಾಗಿ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯವು ಹಾಳಾಗಬಾರದು ಮತ್ತು ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗಬಾರದು ಎಂಬುದು ನನ್ನ ಸಂಕಲ್ಪವಾಗಿತ್ತು” ಎಂದಿದ್ದಾರೆ.

    “ಜುಲೈ 16ರಂದು ಪ್ರಕಟವಾದ ನೀಟ್-ಯುಜಿ ಫಲಿತಾಂಶಗಳು ತೃಪ್ತಿಕರವಾಗಿದ್ದು, ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದ್ದಾರೆ. ಆದರೆ, ಈ ಸಮಯದಲ್ಲಿಯೂ ಸಹ, ಜವಾಬ್ದಾರಿಯುತ ಸ್ಥಾನಗಳಲ್ಲಿರುವ ವ್ಯಕ್ತಿಗಳು ಅಡೆತಡೆಗಳನ್ನು ಸೃಷ್ಟಿಸಲು ಮತ್ತು ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸಲು ಯತ್ನಿಸಿದ್ದು ನನಗೆ ತೀವ್ರ ನೋವನ್ನುಂಟುಮಾಡಿದೆ. ನಮ್ಮ ಪ್ರಜಾಪ್ರಭುತ್ವದ ಶಕ್ತಿಯ ಮೇಲೆ ನಾನು ಯಾವಾಗಲೂ ಅಚಲವಾದ ನಂಬಿಕೆಯನ್ನು ಹೊಂದಿದ್ದೇನೆ. ಯುವಜನತೆಯ ಆಶೋತ್ತರಗಳು, ಕನಸುಗಳು ಹಾಗೂ ನಿರೀಕ್ಷೆಗಳನ್ನು ಗೌರವಿಸಿದ್ದೇನೆ. ಅವರು ಭಾರತದ ಭವಿಷ್ಯ ಮಾತ್ರವಲ್ಲ; ಹೊಸ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಮಾರ್ಗದರ್ಶಕರು, ನಿರ್ಮಾತೃಗಳು ಮತ್ತು ಶಿಲ್ಪಿಗಳು” ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

    ನೋವಿನ ದಿನಗಳವು:

    “ಕಳೆದ 10 ದಿನಗಳಿಂದ ನಡೆಯುತ್ತಿರುವ ಘಟನೆಗಳಿಂದ ನನಗೆ ತೀವ್ರ ನೋವಾಗಿದೆ. ಇದು ನನಗೆ ವೈಯಕ್ತಿಕ ಪ್ರತಿಷ್ಠೆಯ ವಿಷಯವಲ್ಲ. ಭಾರತದ ಯುವಶಕ್ತಿಯೇ ಈ ರಾಷ್ಟ್ರದ ನಿಜವಾದ ಶಕ್ತಿ. ದೇಶದ ಯುವಜನತೆಯನ್ನು ಗೊಂದಲದ ಬಲೆಯಲ್ಲಿ ಸಿಲುಕಿಸಲು ಬಿಡದಿರುವುದು ನನ್ನ ಸಂಕಲ್ಪವಾಗಿದೆ. ಜಂತರ್ ಮಂತರ್‌ನಲ್ಲಿ ಹಾಗೂ ದೇಶಾದ್ಯಂತ ಇರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೇಶವಿರೋಧಿ ಶಕ್ತಿಗಳು ಇದರ ಲಾಭ ಪಡೆಯುವುದನ್ನು ತಡೆಯುವ, ರಾಷ್ಟ್ರೀಯ ಏಕತೆಯನ್ನು ಕಾಯ್ದುಕೊಳ್ಳುವ, ಯಾವುದೇ ಭಾರತೀಯ ವಿದ್ಯಾರ್ಥಿಯ ಭವಿಷ್ಯವು ಕಾನೂನು ಸಂಕೀರ್ಣತೆಗಳಲ್ಲಿ ಸಿಲುಕಿಕೊಳ್ಳದಂತೆ ನೋಡಿಕೊಳ್ಳುವ ಮತ್ತು ನಮ್ಮ ಮಕ್ಕಳು ತಮ್ಮ ಸಮಯವನ್ನು ಅಧ್ಯಯನಕ್ಕೆ ಮೀಸಲಿಟ್ಟು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳುವುದರ ಮೇಲೆ ಗಮನ ಹರಿಸಲು ಅವಕಾಶ ನೀಡುವ ಉದ್ದೇಶದಿಂದ ನಾನು ಪ್ರಧಾನಮಂತ್ರಿಯವರಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ” ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿದ್ಯಾರ್ಥಿಗಳ ಹಿತಕ್ಕಿಂತ ರಾಜಕೀಯವೇ ಮುಖ್ಯ, ನೀಟ್ ವಿವಾದಕ್ಕೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿರುಗೇಟು

    “ಆತ್ಮೀಯ ಪ್ರಧಾನಮಂತ್ರಿಯವರಿಗೆ ಅವರ ಮಾರ್ಗದರ್ಶನ, ನಂಬಿಕೆ ಮತ್ತು ನಿರಂತರ ಬೆಂಬಲಕ್ಕಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ನನ್ನ ಸಂಪುಟ ಸಹೋದ್ಯೋಗಿಗಳಿಗೆ, ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಾಗೂ ಯಾರೊಂದಿಗೆ ಕೆಲಸ ಮಾಡುವ ಭಾಗ್ಯ ನನಗೆ ಸಿಕ್ಕಿತೋ ಆ ಎಲ್ಲಾ ವ್ಯಕ್ತಿಗಳಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ. ರಾಷ್ಟ್ರ ಸೇವೆಯೇ ನನ್ನ ಜೀವನದ ಅತ್ಯುನ್ನತ ಆದ್ಯತೆಯಾಗಿದೆ. ಈ ಕಾರ್ಯಕ್ಕೆ ನಾನು ಯಾವಾಗಲೂ ಮುಡಿಪಾಗಿರುತ್ತೇನೆ. ಭಗವಾನ್ ಜಗನ್ನಾಥನ ಆಶೀರ್ವಾದದೊಂದಿಗೆ, ಭವಿಷ್ಯದಲ್ಲೂ ಭಾರತಾಂಬೆಯ, ಒಡಿಶಾದ ಜನರ ಮತ್ತು ದೇಶದ ಯುವಜನತೆಯ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಿರುವ ಎಲ್ಲಾ ರೀತಿಯಲ್ಲೂ ನನ್ನನ್ನು ಅರ್ಪಿಸಿಕೊಳ್ಳುವುದನ್ನು ಮುಂದುವರಿಸುತ್ತೇನೆ” ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಧರ್ಮೇಂದ್ರ ಪ್ರಧಾನ್ ಘೋಷಿಸಿದ್ದಾರೆ.

    ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    ಧರ್ಮೇಂದ್ರ ಪ್ರಧಾನ್ ರಾಜೀನಾಮೆ ತನಕ ಹೋರಾಡಿ ಸಿಜೆಪಿಯ ಮುಂದಿನ ನಡೆ ಏನು? – Kannada News | Dharmendra Pradhan resignation: If you accept our three demands in writing, we will go home says CJP Spokesperson Ashutosh Ranka

    ನವದೆಹಲಿ, (ಜುಲೈ 25): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ರೆ, ಸಿಜೆಪಿ ತನ್ನ ಪ್ರತಿಭಟನೆ ಇಲ್ಲಿಗೆ ನಿಲ್ಲಿಸುತ್ತಾ ಅಥವಾ ಮುಂದುವರೆಸುತ್ತಾ ಎನ್ನುವ ಬಗ್ಗೆ ಇನ್ನೂ ಗೊಂದಲದಲ್ಲಿದೆ.  ಈ ಬಗ್ಗೆ ಕಾಕ್ರೋಚ್ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಮಾತನಾಡಿ, “ನಮ್ಮ ಮೂರು ಬೇಡಿಕೆಗಳನ್ನು ನೀವು (ಕೇಂದ್ರ ಸರ್ಕಾರ) ಲಿಖಿತವಾಗಿ ಬರೆದುಕೊಟ್ಟರೆ ಪ್ರತಿಭಟನೆ ನಿಲ್ಲಿಸಿ ನಾವು ಮನೆಗೆ ಹೋಗುತ್ತೇವೆ. ದೇಶಾದ್ಯಂತ ಶಾಂತಿಯುತವಾಗಿ ಮೇಣದಬತ್ತಿ ಮೆರವಣಿಗೆ ನಡೆಸಲು ನಾವು ಅನುಮತಿ ಕೋರಿದ್ದೇವೆ. ಸಂಜೆ 6:00 ಗಂಟೆಗೆ ದೇಶಾದ್ಯಂತ ಮೇಣದಬತ್ತಿ ಮೆರವಣಿಗೆ ನಡೆಸಬೇಕು” ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

    ಇನ್ನೊಂದೆಡೆ  ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುತ್ತಿದ್ದಂತೆಯೇ ಸಿಜೆಪಿ ಕಾರ್ಯಕರ್ಯಕರ್ತರು, ಮುಖಂಡರು ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಧರ್ಮೇಂದ್ರ ಪ್ರಧಾನ್ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಇದು ನಮ್ಮ ಧೈರ್ಯಕ್ಕೆ ಹೋರಾಟಕ್ಕೆ ಸಿಕ್ಕ ಜಯ, ನಾವು ನಿರ್ಭಯದಿಂದ ಹೋರಾಡಿದರೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರಿಗೂ ಭಯಪಡಬೇಕಿಲ್ಲ. ನಿರ್ಭೀತ ಹೋರಾಟದಿಂದ ನಾವು ಯಾರ ರಾಜೀನಾಮೆಯನ್ನು ಬೇಕಾದರೂ ಪಡೆಯಬಹುದು ಎನ್ನುವುದಕ್ಕೆ ಇದು ಪುರಾವೆ ಎಂದಿದ್ದಾರೆ.

    ಇದನ್ನೂ ನೋಡಿ: ಧರ್ಮೇಂದ್ರ ಪ್ರಧಾನ್ ಖಾತೆಯನ್ನು ನುಂಗಿದ ‘ಜಿರಲೆ’, ಕೊನೆಗೂ ರಾಜೀನಾಮೆ ಸಲ್ಲಿಕೆ

    Source link

    Exit mobile version