Headlines

ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!

ಹೈದರಾಬಾದ್, ಮಾರ್ಚ್ 4: ಆಂಧ್ರಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ನಡೆದ ಆಘಾತಕಾರಿ ಘಟನೆಯ ವಿಡಿಯೋ (Viral Video) ಎಲ್ಲೆಡೆ ಹರಿದಾಡುತ್ತಿದೆ. ಆಂಧ್ರದ ಎನ್‌ಟಿಆರ್ ಜಿಲ್ಲೆಯ ಬಾಪುಲಪಾಡು ಮಂಡಲದ ವೀರವಳ್ಳಿಯಲ್ಲಿರುವ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ. ಒಂದು ಸಣ್ಣ ಕಾರಣ ಜಗಳಕ್ಕೆ ಕಾರಣವಾಯಿತು. ಆ ಬಾಲಕನನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣ ಅಲ್ಲಿದ್ದ ಇತರೆ ಬಾಲಕರು ಆತನನ್ನು ತಡೆಯಲು ಹೋಗಿದ್ದಾರೆ. ಆದರೂ ಆತ ಸುಮ್ಮನಾಗಿಲ್ಲ. ಇನ್ನಷ್ಟು…

Read More

ಗ್ರಹಗತಿಗಳ ಬದಲಾವಣೆ: ಇಂದು ಮಧ್ಯಾಹ್ನ ಮೀನ ರಾಶಿಗೆ ಕುಜ ಸಂಚಾರ; 12 ರಾಶಿಗಳ ಮೇಲೆ ಇದರ ಪ್ರಭಾವವೇನು?

ಬೆಂಗಳೂರು, ಏ.2: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಮಾರ್ಚ್ 2ರಂದು ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವನಾ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಪೂರ್ಣಿಮಾ ತಿಥಿ, ಹಸ್ತ ನಕ್ಷತ್ರವನ್ನು ಒಳಗೊಂಡಿರುವ ವಿಶೇಷ ದಿನವಾಗಿದೆ. ಇದು ಚಿತ್ರ ಪೌರ್ಣಮಿ, ದವನದ ಹುಣ್ಣಿಮೆ ಹಾಗೂ ಯುಗಾದಿಯ ನಂತರದ ಮೊದಲ ಹುಣ್ಣಿಮೆಯಾಗಿರುವುದರಿಂದ ಪವಿತ್ರ ದಿನವಾಗಿದೆ. ಅಕ್ಕಮಹಾದೇವಿ ಜಯಂತಿ ಮತ್ತು ಕೆಲವು ಕಡೆ ಹನುಮ ಜಯಂತಿಯನ್ನೂ…

Read More

Dharma and Adharma: ಧರ್ಮದ ಹಾದಿಯಲ್ಲಿದ್ದವರಿಗೆ ಕಷ್ಟಗಳು ಎದುರಾಗುವುದೇಕೆ? ಸನಾತನ ತತ್ವಗಳು ಹೇಳುವುದೇನು?

ಇಂದಿನ ಜಗತ್ತಿನಲ್ಲಿ ಧರ್ಮ ಮತ್ತು ಅಧರ್ಮದ ನಡುವೆ ಯಾವುದು ಮೇಲುಗೈ ಸಾಧಿಸುತ್ತದೆ ಎಂಬ ಪ್ರಶ್ನೆ ಅನೇಕರಲ್ಲಿ ಗೊಂದಲ ಮೂಡಿಸಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಧರ್ಮದ ಹಾದಿ ಕಷ್ಟಗಳಿಂದ ಕೂಡಿರುತ್ತದೆ ಎಂಬುದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳಿವೆ. ಸತ್ಯ ಹರಿಶ್ಚಂದ್ರರು ತಮ್ಮ ಸತ್ಯನಿಷ್ಠೆಗಾಗಿ ಎದುರಿಸಿದ ಅಸಂಖ್ಯಾತ ಕಷ್ಟಗಳು, ಶ್ರೀರಾಮಚಂದ್ರರು ತಮ್ಮ ಜೀವನದುದ್ದಕ್ಕೂ ಅನುಭವಿಸಿದ ಸವಾಲುಗಳು, ಮತ್ತು ಧರ್ಮರಾಯರು ತಮ್ಮ…

Read More

ನಿರ್ದೇಶಕ ರೋಹಿತ್ ಶೆಟ್ಟಿ ಖಾಸಗಿ ಕಾರಿನ ಮೇಲೆ ಪೊಲೀಸ್ ಸ್ಟಿಕ್ಕರ್: ವಿವಾದಕ್ಕೆ ಸ್ಪಷ್ಟನೆ

ಆ್ಯಕ್ಷನ್ ಸಿನಿಮಾಗಳ ಮೂಲಕ ಫೇಮಸ್ ಆದ ಬಾಲಿವುಡ್‌ನ ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಅವರು ಇದೀಗ ಹೊಸ ವಿವಾದವೊಂದಕ್ಕೆ ಸಿಲುಕಿದ್ದಾರೆ. ತಮ್ಮ ಖಾಸಗಿ ಕಾರುಗಳಲ್ಲಿ ಪೊಲೀಸ್ ಸ್ಟಿಕ್ಕರ್ ಮತ್ತು ಲೈಟ್‌ಗಳನ್ನು ಬಳಸಿದ ಆರೋಪ ಅವರ ಮೇಲೆ ಕೇಳಿಬಂದಿದೆ. ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ರೋಹಿತ್ ಶೆಟ್ಟಿ ಅವರ ತಂಡವು ಸ್ಪಷ್ಟನೆಯನ್ನು ನೀಡಿದೆ. ಅಷ್ಟಕ್ಕೂ ರೋಹಿತ್ ಶೆಟ್ಟಿ ಅವರು ತಮ್ಮ ಸ್ವಂತ ಕಾರಿನ ಮೇಲೆ ಪೊಲೀಸ್ (Police) ಸ್ಟಿಕ್ಕರ್ ಮತ್ತು ಲೈಟ್…

Read More

ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್ – Kannada News | BJP leader harasses visually challenged woman in Madhya Pradesh jabalpur

ಜಬಲ್ಪುರ, ಡಿಸೆಂಬರ್ 23: ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿಯೊಬ್ಬರು ದೃಷ್ಟಿಹೀನ ಮಹಿಳೆಗೆ ಕಿರುಕುಳ ನೀಡಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ವೇಳೆ ಮಹಿಳಾ ನಾಯಕಿ ದೃಷ್ಟಿಹೀನ ಮಹಿಳೆಯ ಬಗ್ಗೆ ಕೆಲವು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ವೈರಲ್ (Viral Video) ಆಗಿರುವ ವಿಡಿಯೋದಲ್ಲಿ ಬಿಜೆಪಿ ನಾಯಕಿ ಆ ದೃಷ್ಟಿಹೀನ ಮಹಿಳೆಗೆ ನೀನು ಮುಂದಿನ ಜನ್ಮದಲ್ಲೂ ಕುರುಡಿಯಾಗೇ ಹುಟ್ಟುತ್ತೀಯ ಎಂದು ಹೇಳುವುದನ್ನು ಕೇಳಬಹುದು. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source…

Read More

‘ಕೆಲಸ ಮುಗಿಸಿ ರಾತ್ರಿ 11 ಗಂಟೆಗೆ ಮನೆಗೆ ಹೋದ್ರೆ ಅದು ಜೀವನವೇ ಅಲ್ಲ’: ಸೈಫ್ ಅಲಿ ಖಾನ್ – Kannada News | Saif Ali Khan shares thoughts on work life balance and his new movie Kartavya

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ತಮ್ಮ ಹೊಸ ಸಿನಿಮಾ ‘ಕರ್ತವ್ಯ’ (Kartavya) ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರು ‘ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯ ಮೂಲಕ ನಿರ್ಮಿಸಿದ್ದಾರೆ. 2022ರಿಂದ ವರ್ಷಕ್ಕೆ ಒಂದೇ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಸೈಫ್, ಇತ್ತೀಚಿನ ಸಂದರ್ಶನವೊಂದರಲ್ಲಿ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಕ್ಕಳಾದ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್…

Read More

ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯಲಿರುವ ಭಾರತೀಯ..! – Kannada News | Indian Born Pacer To Play For Ireland Vs India In T20I Series

ಭಾರತ ಮತ್ತು ಐರ್ಲೆಂಡ್ ನಡುವಣ ಟಿ20 ಸರಣಿಗೆ ದಿನಗಣನೆ ಶುರುವಾಗಿದೆ. ಜೂನ್ 26 ರಿಂದ ಆರಂಭವಾಗಲಿರುವ ಈ ಸರಣಿಯ ಮೂಲಕ ಭಾರತೀಯ ಮೂಲದ ಆಟಗಾರನೊಬ್ಬ ಇಂಟರ್​ನ್ಯಾಷನಲ್ ಕೆರಿಯರ್ ಆರಂಭಿಸಲು ಸಜ್ಜಾಗಿದ್ದಾರೆ. ಅದು ಕೂಡ ಟೀಮ್ ಇಂಡಿಯಾ ವಿರುದ್ಧ ಎಂಬುದು ವಿಶೇಷ. ಹೌದು, ಭಾರತದ ವಿರುದ್ಧದ ಸರಣಿಗೆ ಪ್ರಕಟಿಸಲಾದ ಐರ್ಲೆಂಡ್ ತಂಡದಲ್ಲಿ ರಾಜಸ್ಥಾನ್ ಮೂಲದ ಜೈ ಮುಂಧ್ರಾ ಕಾಣಿಸಿಕೊಂಡಿದ್ದಾರೆ. ಜನವರಿ 10, 1997 ರಂದು, ರಾಜಸ್ಥಾನದ ಜೈಪುರದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಟೋಂಕ್ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದ…

Read More

ಇಂದಿನಿಂದ ಫಿಫಾ ವಿಶ್ವಕಪ್​ ಟೂರ್ನಿ ಆರಂಭ! – Kannada News

ವಿಶ್ವದ ಅತ್ಯಂತ ದೊಡ್ಡ ಫುಟ್‌ಬಾಲ್ ಟೂರ್ನಮೆಂಟ್ ಫಿಫಾ ವಿಶ್ವಕಪ್ 2026 ಆರಂಭಕ್ಕೆ ದಿನಗಣನೆ ಮುಗಿದಿದೆ. ಅದರಂತೆ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋ ಜಂಟಿಯಾಗಿ ಆಯೋಜಿಸಲಿರುವ ಫಿಫಾ ವಿಶ್ವಕಪ್​ಗೆ ಇಂದು ಚಾಲನೆ ದೊರೆಯಲಿದೆ. ಆದರೆ ಕ್ರೀಡಾಭಿಮಾನಿಗಳಲ್ಲಿ ಈ ಬಾರಿಯ ವಿಶ್ವಕಪ್ ಜೂನ್ 11 ಕ್ಕೆ ಶುರುವಾಗುತ್ತದೆಯೇ ಅಥವಾ ಜೂನ್ 12 ಕ್ಕೆ ಎಂಬ ಸಣ್ಣ ಗೊಂದಲವಿದೆ. ಇದಕ್ಕೆ ಮುಖ್ಯ ಕಾರಣ ಉತ್ತರ ಅಮೆರಿಕ ಮತ್ತು ಭಾರತದ ನಡುವಿನ ಭೌಗೋಳಿಕ ಸಮಯದ ವ್ಯತ್ಯಾಸ. ಆತಿಥೇಯ ದೇಶವಾದ ಮೆಕ್ಸಿಕೋದಲ್ಲಿ ಪಂದ್ಯಾವಳಿಯು ಗುರುವಾರ,…

Read More

ಮಾವನ ಜೊತೆ ಸೇರಿ ಧ್ರುವ್ ರಾಠಿಗೆ ಟಾಂಗ್ ಕೊಟ್ಟ ರಣ್ವೀರ್ ಸಿಂಗ್ – Kannada News | Ranveer Singh’s new advertisement with Prakash Padukone took dig at Dhruv Rathee

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಭರ್ಜರಿ ಹಿಟ್ ಆಗಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹಲವು ದಾಖಲೆಗಳನ್ನು ಬರೆಯುತ್ತಿದೆ. ಆದರೆ ಕೆಲವರು ಈ ಸಿನಿಮಾವನ್ನು ಪ್ರಪೊಗಾಂಡ ಸಿನಿಮಾ ಎಂದು. ಒಂದು ರಾಜಕೀಯ ಪಕ್ಷಕ್ಕೆ ಸಹಾಯ ಮಾಡಲೆಂದು ನಿರ್ಮಿಸಲಾದ ಸಿನಿಮಾ ಎಂದು ಆರೋಪಿಸಿದ್ದಾರೆ. ಸಿನಿಮಾದಲ್ಲಿರುವ ಕೆಲ ತಪ್ಪುಗಳನ್ನು ಎತ್ತಿ ತೋರಿಸಿ ಟೀಕಿಸಿದ್ದಾರೆ. ವಿಶೇಷವಾಗಿ ಪ್ರಮುಖ ಯೂಟ್ಯೂಬರ್ ಧ್ರುವ್ ರಾಠಿ ಈ ಸಿನಿಮಾವನ್ನು ಟೀಕೆ ಮಾಡಿದ್ದು, ಇದೀಗ ಪರೋಕ್ಷವಾಗಿ ನಟ ರಣ್ವೀರ್ ಸಿಂಗ್, ‘ಧ್ರುವ್ ರಾಠಿ’ಗೆ ಟಾಂಗ್…

Read More

ಮಧ್ಯಪ್ರಾಚ್ಯ ಯುದ್ಧದ ಬಿಸಿ: ಹೋಟೆಲ್, ಆಟೋ ಗ್ಯಾಸ್ ಅಷ್ಟೇ ಅಲ್ಲ ಈಗ ಮದುವೆ ಕೂಡ ದುಬಾರಿ! – Kannada News | Middle East Crisis Impact: Wedding Costs Surge by 30 Peercent in Karnataka; Imported Decor and Food Become Expensive

ಬೆಂಗಳೂರು, ಮೇ 10: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯು ಕೇವಲ ಪೆಟ್ರೋಲ್, ಡೀಸೆಲ್ ಅಥವಾ ಗ್ಯಾಸ್ ಬೆಲೆಗಳ ಮೇಲೆ ಮಾತ್ರವಲ್ಲದೆ, ಸಾಮಾನ್ಯ ಜನರ ಜೀವನದ ಅವಿಭಾಜ್ಯ ಅಂಗವಾದ ಮದುವೆ (Marriages) ಸಮಾರಂಭಗಳಿಗೂ ಭಾರಿ ಹೊಡೆತ ನೀಡಿದೆ. ಯುದ್ಧದ ಹಿನ್ನೆಲೆಯಲ್ಲಿ ಅಲಂಕಾರಿಕ ವಸ್ತುಗಳು ಮತ್ತು ಕಚ್ಚಾ ಪದಾರ್ಥಗಳ ಆಮದು ಕುಂಠಿತಗೊಂಡಿದ್ದು, ಬೆಂಗಳೂರಿನಲ್ಲಿ ಈ ಬಾರಿ ಮದುವೆಯ ಸೀಸನ್ ಅಧ್ವಾನಗೊಂಡಿದೆ. ಮದುವೆ ಸಂಘಟಕರ ವ್ಯವಹಾರದಲ್ಲಿ ಭಾರಿ ಏರಿಳಿತಗಳು ಕಂಡುಬರುತ್ತಿದ್ದು, ಬೆಲೆ ಏರಿಕೆಯ ಕಾರಣದಿಂದಾಗಿ ‘ಅದ್ದೂರಿ ಮದುವೆ’ಗಳು ಈಗ ಸರಳವಾಗುತ್ತಿವೆ ಎಂದು ವರದಿಯಾಗಿದೆ….

Read More