ಒಂದು ಸಿನಿಮಾಕ್ಕೆ 50 ವ್ಯಾನಿಟಿ ವ್ಯಾನ್, ಅನಗತ್ಯ ದುಂದು ವೆಚ್ಚ ಎಂದ ತುಷಾರ್ – Kannada News | Tusshar Kapoor questioned 50 vanity vans on Welcome to the Jungle movie set

ಸಿನಿಮಾ (Cinema) ನಟ-ನಟಿಯರು ಅನಗತ್ಯ ಖರ್ಚುಗಳನ್ನು ಮಾಡುತ್ತಿರುವ ಬಗ್ಗೆ ಕಳೆದ ಕೆಲ ವರ್ಷಗಳಿಂದ ನಿರ್ಮಾಪಕರು ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ. ವಿಶೇಷವಾಗಿ ಬಾಲಿವುಡ್ ನಟ-ನಟಿಯರು ತಮಗಾಗಿ ಹೆಚ್ಚುವರಿ ವ್ಯಾನಿಟಿ ವ್ಯಾನ್ ತರಿಸಿಕೊಳ್ಳುತ್ತಾರೆ. ತಮ್ಮೊಟ್ಟಿಗೆ 20-30 ಜನರ ತಂಡವನ್ನು ಕರೆದುಕೊಂಡು ಬರುತ್ತಾರೆ. ಅನಗತ್ಯ ಡಿಮ್ಯಾಂಡುಗಳನ್ನು ಮಾಡುತ್ತಾರೆ ಎಂದೆಲ್ಲ ನಿರ್ಮಾಪಕರು ಆರೋಪಗಳನ್ನು ಮಾಡಿದ್ದರು. ಇದೀಗ ಬಾಲಿವುಡ್ ನಟ ಮತ್ತು ನಿರ್ಮಾಪಕ ಆಗಿರುವ ತುಷಾರ್ ಕಪೂರ್ ಇದೇ ವಿಷಯವಾಗಿ ಮಾತನಾಡಿದ್ದು, ಸಿನಿಮಾದ ಹೆಸರು ಹೇಳಿ, ದುಂದು ವೆಚ್ಚವನ್ನು ಟೀಕೆ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಸೇರಿ ಬಾಲಿವುಡ್​​ನ ಹಲವು ಸ್ಟಾರ್ ನಟಿಯರು ಒಟ್ಟಿಗೆ ನಟಿಸಿರುವ ಹಾಸ್ಯ ಪ್ರಧಾನ ಸಿನಿಮಾ ‘ವೆಲ್​​ಕಮ್ ಟು ದಿ ಜಂಗಲ್’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಸಿನಿಮಾ, ಬಾಕ್ಸ್ ಆಫೀಸ್​​ನಲ್ಲಿ 100 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಈ ಸಿನಿಮಾದ ಶೂಟಿಂಗ್ ಸಮಯದಲ್ಲಿ ಒಟ್ಟೊಟ್ಟಿಗೆ 50 ವ್ಯಾನಿಟಿ ವ್ಯಾನುಗಳನ್ನು ನಟ-ನಟಿಯರಿಗಾಗಿ ತರಿಸಲಾಗುತ್ತಂತೆ. ಇದರ ಬಗ್ಗೆ ನಟ ತುಷಾರ್ ಕಪೂರ್ ಮಾತನಾಡಿದ್ದು, ಇದು ಅನಗತ್ಯ ದುಂದು ವೆಚ್ಚ ಎಂದು ಟೀಕೆ ಮಾಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ತುಷಾರ್, ‘ವೆಲ್ಕಮ್ ಟು ದಿ ಜಂಗಲ್’ ಚಿತ್ರದ ಸೆಟ್‌ಗಳಲ್ಲಿ ಪ್ರತಿದಿನ ತಗಲುತ್ತಿದ್ದ ವೆಚ್ಚದ ಬಗ್ಗೆ ತಮಗೆನಿಸಿದ್ದನ್ನು ಹಂಚಿಕೊಂಡಿದ್ದಾರೆ. ‘ನಾನು ಸೆಟ್‌ಗೆ ತಲುಪಿದಾಗ, ನಮ್ಮ ವ್ಯಾನಿಟಿ ವ್ಯಾನ್ ಪಾರ್ಕ್ ಮಾಡಲು ಐದು ನಿಮಿಷ ಹಿಡಿಯುತ್ತಿತ್ತು, ಏಕೆಂದರೆ ನಾವು ವ್ಯಾನ್‌ಗಳ ದೊಡ್ಡ ಸಾಲಿನ ಮೂಲಕ ಹೋಗಬೇಕಾಗುತ್ತಿತ್ತು. ಇಷ್ಟು ವ್ಯಾನ್‌ಗಳು ಮತ್ತು ಎಲ್ಲರ ಸಿಬ್ಬಂದಿಗೆ ಪ್ರತಿದಿನದ ವೆಚ್ಚ ಎಷ್ಟು ಎಂದು ನಾನು ನೋಡುತ್ತಾ ಆಶ್ಚರ್ಯಪಡುತ್ತಿದ್ದೆ. ಇಷ್ಟು ಜನ ನಟರನ್ನು ಕರೆದುಕೊಂಡು ಬರುವುದು ನಿಜಕ್ಕೂ ಅಗತ್ಯವೇ?’ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾಕ್ಕೆ ಎರಡು ವರ್ಷ ತಯಾರಿ, ರಣ್​​ಬೀರ್ ಕಪೂರ್ ಮಾಹಿತಿ

ನಿರ್ದೇಶಕ ಅಹ್ಮದ್ ಅವರ ದೃಷ್ಟಿಕೋನವು ಉತ್ತಮವಾಗಿದೆ, ಅವರು ಭಾರತದಲ್ಲಿ ಹಿಂದೆಂದೂ ಪ್ರಯತ್ನಿಸದ ಹೊಸ ಪ್ರಕಾರವನ್ನು ತರುತ್ತಿದ್ದಾರೆ, ಆದರೆ ಇಷ್ಟು ಜನ ನಟರನ್ನು ಕರೆದುಕೊಂಡು ಬಂದು ಇಷ್ಟು ಖರ್ಚು ಮಾಡುವುದು ನಿಜಕ್ಕೂ ಸಮರ್ಥನೀಯವೇ ಎಂದು ನಾನು ಯೋಚಿಸುತ್ತಿದ್ದೆ. ಎಲ್ಲ ಶಾಟ್ ಗೂ ಎಲ್ಲ ನಟರೂ ಬೇಕು ಎಂದು ಅಹ್ಮದ್ ಪಟ್ಟುಹಿಡಿದಿದ್ದರು. ‘ವೆಲ್ಕಮ್’ ಚಿತ್ರದ ಚಿತ್ರೀಕರಣದಲ್ಲಿ ಒಂದು ವರ್ಷದ ಅಂತರವಿತ್ತು. ಚಿತ್ರವು ಪುನರಾರಂಭಗೊಂಡಾಗ, ಸೆಟ್‌ನಲ್ಲಿ ಲಭ್ಯವಿರುವ ನಟರೊಂದಿಗೆ ಮಾತ್ರ ಚಿತ್ರೀಕರಣ ನಡೆಸಲು ಅವರು ಎಂದಿಗೂ ಯೋಚಿಸಲಿಲ್ಲ. ಅವರು ತಮ್ಮ ಮಾತಿಗೆ ಕಟ್ಟುಬಿದ್ದು ಚಿತ್ರವನ್ನು ಮುಗಿಸಿದರು” ಎಂದು ಅವರು ಹೇಳಿದರು.

ನಟರ ಹೆಚ್ಚುತ್ತಿರುವ ಸಿಬ್ಬಂದಿ ವೆಚ್ಚದ ನಡುವೆ ಸಮತೋಲನವಿರಬೇಕು ಎಂದು ತುಷಾರ್ ಹೇಳಿದ್ದು, ‘ಖರ್ಚಿನಲ್ಲಿ ಸಮತೋಲನ ಇರಬೇಕು. ಹೇರ್ ಸ್ಟೈಲಿಸ್ಟ್, ಮೇಕಪ್ ಮ್ಯಾನ್ ಬೇಕು. ನಿಮಗೆ ಕೆಲವು ಸೌಲಭ್ಯಗಳು ಬೇಕಾಗುತ್ತವೆ. ಒಬ್ಬ ಪ್ರಮುಖ ನಟ ಅಥವಾ ನಟಿ ಅನುಭವಿಸುವ ಒತ್ತಡವನ್ನು ಗಮನಿಸಿದರೆ, ನಿಮ್ಮ ಅತ್ಯುತ್ತಮವಾದದನ್ನು ಹೊರತರಲು ನಿಮಗೆ ಸ್ವಲ್ಪ ಸೌಕರ್ಯ, ಸ್ಥಳ ಮತ್ತು ಐಷಾರಾಮಿ ಅನುಭವ ಬೇಕಾಗುತ್ತದೆ. ಇದು ದೃಶ್ಯ ಮಾಧ್ಯಮವಾಗಿದೆ, ಆದ್ದರಿಂದ ಆ ಸೌಂದರ್ಯವನ್ನು ಹೊರತರಲು ನಿಮಗೆ ಸ್ವಲ್ಪ ಖರ್ಚು ಬೇಕು. ಅದು ಪರವಾಗಿಲ್ಲ. ಆದರೆ ಅದಕ್ಕೊಂದು ಮಿತಿಯಿದೆ. ಅದು ಅಹಂಕಾರ ಅಥವಾ ನಾರ್ಸಿಸಿಸಂ ಆಗಿ ಬದಲಾಗುವ ಹಂತಕ್ಕೆ ವ್ಯಾನಿಟಿಯ ಮೂಲಭೂತ ಅವಶ್ಯಕತೆಯನ್ನು ಮೀರಿ ಹೋಗಬಾರದು. ನಿಮ್ಮ ಅಹಂ ತೃಪ್ತಿಪಡಿಸಲು ಇದನ್ನು ಮಾಡಬಾರದು. ಅದು ಒಳ್ಳೆಯದಲ್ಲ’ ಎಂದು ಕಟುವಾಗಿ ಟೀಕೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ನಾವು ಯಂತ್ರಗಳಾಗುತ್ತಿದ್ದೇವೆ’; ಭಾರತದಲ್ಲಿ ನಶಿಸುತ್ತಿರುವ ಅವಿಭಕ್ತ ಕುಟುಂಬಗಳ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ – Kannada News | We Are Becoming Machines; Supreme Court expressed concern About Vanishing Joint Families in India

ನವದೆಹಲಿ, ಜುಲೈ 24: ಭಾರತದ ಪಾರಂಪರಿಕ ಕುಟುಂಬ ವ್ಯವಸ್ಥೆಯು ಕ್ರಮೇಣ ಕ್ಷೀಣಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಕಳವಳ ವ್ಯಕ್ತಪಡಿಸಿದೆ. ಅವಿಭಕ್ತ ಕುಟುಂಬಗಳ ಕಣ್ಮರೆ ಮತ್ತು ಮಕ್ಕಳ ಪಾಲನೆಗಾಗಿ ಪೋಷಕರು ಗ್ಯಾಜೆಟ್‌ಗಳ (ಮೊಬೈಲ್, ಟ್ಯಾಬ್ ಇತ್ಯಾದಿ) ಮೇಲೆ ಹೆಚ್ಚೆಚ್ಚು ಅವಲಂಬಿತರಾಗುತ್ತಿರುವುದು ಭವಿಷ್ಯದಲ್ಲಿ ತೀವ್ರ ಸಾಮಾಜಿಕ ಪರಿಣಾಮಗಳನ್ನು ಬೀರುತ್ತದೆ ಎಂದು ಕೋರ್ಟ್ ಎಚ್ಚರಿಸಿದೆ.

ತಮ್ಮ ಹನಿಮೂನ್ ಸಮಯದಲ್ಲಿ ಪತಿ ರಾಜಾ ರಘುವಂಶಿಯ ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಸೋನಮ್ ರಘುವಂಶಿಯ ಪ್ರಕರಣದ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಅವಿಭಕ್ತ ಕುಟುಂಬ ವ್ಯವಸ್ಥೆ ನಶಿಸುತ್ತಿರುವುದು ಮತ್ತು ಪೋಷಕರು-ಮಕ್ಕಳ ನಡುವಿನ ಬಾಂಧವ್ಯ ಬದಲಾಗುತ್ತಿರುವ ಸ್ವರೂಪದ ಬಗ್ಗೆ ನ್ಯಾಯಪೀಠವು ಬೇಸರ ವ್ಯಕ್ತಪಡಿಸಿತು. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಳೆ ಅವರನ್ನೊಳಗೊಂಡ ಪೀಠವು, ಈ ಪ್ರಕರಣವು ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ಪ್ರತಿಬಿಂಬವಾಗಿದೆ ಎಂದು ಹೇಳಿತು.

ಯುವಕರು ವಾಟ್ಸಾಪ್​ ಜ್ಞಾನಿಗಳಾಗುತ್ತಿದ್ದಾರೆ:

ಇಂದಿನ ಯುವಪೀಳಿಗೆಯು ಹೆಚ್ಚು ಬುದ್ಧಿವಂತ ಮತ್ತು ಅತಿಯಾದ ಮಾಹಿತಿ ಹೊಂದಿರುವ ಪೀಳಿಗೆಯಾಗಿದೆ. ಆದರೆ, ಮಾನಸಿಕ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದು ಅವರಿಗೆ ತಿಳಿದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಇತ್ತೀಚಿನ ದಿನಗಳಲ್ಲಿ ಜನರು ವಾಟ್ಸಾಪ್‌ನಲ್ಲಿ ಹರಿದಾಡುವ ಸಂದೇಶಗಳನ್ನೇ ಸಂಪೂರ್ಣ ಜ್ಞಾನವೆಂದು ಭಾವಿಸುತ್ತಿರುವುದು ದುರದೃಷ್ಟಕರ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ‘ಡಾಕ್ಟರ್ ಆಗಲು ನಾಲಾಯಕ್’; 4 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆಸ್ಪತ್ರೆಗೆ ಸುಪ್ರೀಂ ಕೋರ್ಟ್ ಛೀಮಾರಿ

ಸುಪ್ರೀಂ ಕೋರ್ಟ್‌ನ ಈ ಕಳವಳವನ್ನು ಒಪ್ಪಿಕೊಂಡ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇದು ಸಮಾಜದ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಮನುಷ್ಯನ ಸಂಬಂಧಗಳಲ್ಲಿನ ನಂಬಿಕೆ ಕ್ಷೀಣಿಸುತ್ತಿದ್ದು, ಸಹನೆ ಮತ್ತು ಸಹಿಷ್ಣುತೆಯ ಕೊರತೆ ಎದ್ದು ಕಾಣುತ್ತಿದೆ ಎಂದರು.

ಕುಟುಂಬದ ಮೌಲ್ಯವೇ ಕಣ್ಮರೆ:

ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳು ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ ಮತ್ತು ಭಾವ-ಮೈದುನರ ನಡುವೆ ಬೆಳೆಯುತ್ತಿದ್ದರು. ಇದರಿಂದಾಗಿ ಅವರಿಗೆ ಕುಟುಂಬದ ಬಾಂಧವ್ಯ, ಪ್ರೀತಿ-ವಾತ್ಸಲ್ಯ ಹಾಗೂ ಜವಾಬ್ದಾರಿಗಳ ಅರಿವು ಸಹಜವಾಗಿಯೇ ಉಂಟಾಗುತ್ತಿತ್ತು. ಆದರೆ ಇಂದಿನ ಆಧುನಿಕ ವಿಭಕ್ತ ಕುಟುಂಬಗಳಲ್ಲಿ, ಉದ್ಯೋಗಸ್ಥ ಪೋಷಕರು ತಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಕಷ್ಟಪಡುತ್ತಿದ್ದಾರೆ. ಮಕ್ಕಳು ತೊಂದರೆ ಕೊಡುತ್ತಾರೆಂದು ಪೋಷಕರು ಮೊಬೈಲ್ ಫೋನ್‌ಗಳು ಹಾಗೂ ಇತರ ಡಿಜಿಟಲ್ ಸಾಧನಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ ಎಂದು ಪೀಠವು ಬೇಸರ ವ್ಯಕ್ತಪಡಿಸಿತು.

ಇದನ್ನೂ ಓದಿ: ವಿಚ್ಛೇದನ ಪ್ರಕರಣದಲ್ಲಿ ಪತಿಯ ಕಂಪನಿ ಮಾಲೀಕರಿಗೆ ಹೆಂಡತಿ ಪತ್ರ ಬರೆಯುವುದೇಕೆ? ಸುಪ್ರೀಂ ಕೋರ್ಟ್ ತರಾಟೆ

ಪೋಷಕರ ಜಾಗಕ್ಕೆ ಮೊಬೈಲ್ ಬರುತ್ತಿದೆ:

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸುಂದರೇಶ್ ಮಾತನಾಡುತ್ತಾ, “ನಾನು ಇತ್ತೀಚೆಗೆ ಹೋಟೆಲ್‌ ಒಂದಕ್ಕೆ ಹೋಗಿದ್ದಾಗ, ಕುಟುಂಬವೊಂದು ತಾವೂ ಊಟ ಮಾಡುವಾಗ ಮಗು ಊಟ ಮಾಡಲು ಬಿಡುವುದಿಲ್ಲವೆಂದು ಅದರ ಕೈಗೆ ಮೊಬೈಲ್ ಕೊಟ್ಟಿರುವುದನ್ನು ನೋಡಿದೆ. ಪೋಷಕರ ಜಾಗವನ್ನು ಗ್ಯಾಜೆಟ್‌ಗಳು ಆಕ್ರಮಿಸಿಕೊಂಡರೆ, ಅದು ದೊಡ್ಡ ವಿನಾಶಕ್ಕೆ ಕಾರಣವಾಗುತ್ತದೆ. ಭವಿಷ್ಯದಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ. ಅವಿಭಕ್ತ ಕುಟುಂಬ ಎಂಬುದು ದೊಡ್ಡ ಆಸ್ತಿ. ಆದರೆ, ಜನರಿಗೆ ಅದರ ಅರಿವಿಲ್ಲ. ಸಂತೋಷ ಎಂಬುದು ಭೌತಿಕ ವಸ್ತುಗಳಿಂದ ಬರುವುದಿಲ್ಲ, ಅದು ಮಾನವೀಯ ಬಾಂಧವ್ಯ ಮತ್ತು ಸಂಬಂಧಗಳಿಂದ ಸಿಗುತ್ತದೆ. ನಾವು ಯಂತ್ರಗಳಂತೆ ಬದಲಾಗುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ – Kannada News | Minister KH Muniyappa Good News For BPL Card Holders for indira kit

ಬೆಂಗಳೂರು, (ಜುಲೈ 24): 10ರಲ್ಲಿ ಐದು ಕಿಲೋ ಅಕ್ಕಿಯ ಬದಲಿಗೆ ಬಿಪಿಎಲ್ ಪಡಿತರ ಚೀಟಿದಾರರಿಗೆ ‘ಇಂದಿರಾ’ ಆಹಾರ ಕಿಟ್ ನೀಡಲು ರಾಜ್ಯ ಸರ್ಕಾರ ಈಗಾಗಲೇ ಆದೇಶಿಸಿದೆ. ಇನ್ನು ಈ ಬಗ್ಗೆ ಇಂದು (ಜುಲೈ 24) ಆಹಾರ ಸಚಿವ ಕೆಎಚ್​​​ ಮುನಿಯಪ್ಪ ಪ್ರತಿಕ್ರಿಯಿಸಿದ್ದು, ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿ ನೀಡಲು ನಿರ್ಧಾರ ಮಾಡಿದ್ವಿ. ಆದ್ರೆ, 5 ಕೆಜಿ ಅಕ್ಕಿ ಬದಲು ಹಣವನ್ನು ನೀಡುತ್ತಿದ್ವಿ ಕೇಂದ್ರ ಸರ್ಕಾರ ಅಕ್ಕಿ ಪೂರೈಕೆ ಮಾಡಿದಾಗ ಅಕ್ಕಿ ನೀಡಿದ್ದೇವೆ. ಅಕ್ಕಿ ಜೊತೆಗೆ ರಾಗಿ ನೀಡಲು 4 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಿದ್ದೇವೆ. 10 ಕೆಜಿಯಲ್ಲಿ 7 ಕೆಜಿ ಅಕ್ಕಿ, 3 ಕೆಜಿ ರಾಗಿ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಗುಜರಾತ್​ನಲ್ಲಿ ಕೇವಲ 16 ಗಂಟೆಗಳಲ್ಲಿ 1100 ಮಿ.ಮೀ ಮಳೆ, ಗೊಂಬೆಗಳಂತೆ ನೀರಿನಲ್ಲಿ ತೇಲಿದ ಕಾರುಗಳು – Kannada News | Gujarat Deluge: 1,100 mm Rain in 16 Hours Leaves Valsad Under Water

ವಲ್ಸಾದ್, ಜುಲೈ 24: ದಕ್ಷಿಣ ಗುಜರಾತ್‌ನಲ್ಲಿ ವರುಣನ  ಆರ್ಭಟ ಮುಂದುವರೆದಿದ್ದು, ಜಲಪ್ರಳಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ವಲ್ಸಾದ್ ಜಿಲ್ಲೆಯ ಉಂಬರ್‌ಗಮ್ ಪ್ರದೇಶದಲ್ಲಿ ಗುರುವಾರ ಬೆಳಗ್ಗೆಯವರೆಗೆ ಕೇವಲ 16 ಗಂಟೆಗಳಲ್ಲಿ ಭಾರಿ 1100 ಮಿ.ಮೀ ಮಳೆ(Rain) ಸುರಿದಿದ್ದು, ಇಡೀ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮಳೆಯ ಭೀಕರತೆಗೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.

ಪಾರ್ಕಿಂಗ್‌ನಲ್ಲಿದ್ದ ಕಾರುಗಳು ಮುಳುಗಡೆ
ವಲ್ಸಾದ್ ಜಿಲ್ಲೆಯ ವಾಪಿ ಪ್ರದೇಶದ ಬಹುಮಹಡಿ ಕಟ್ಟಡ ಒಂದರ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ, ಕಿಟಕಿಗಳ ಮಟ್ಟಕ್ಕೆ ನೀರು ತಲುಪಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಕಟ್ಟಡಗಳ ಸುತ್ತಮುತ್ತಲಿನ ಪ್ರದೇಶಗಳು ಕೆರೆಯಂತಾಗಿದ್ದು, ವಾಹನಗಳು ನೀರಿನಲ್ಲಿ ತೇಲುತ್ತಿರುವುದು ವರದಿಯಾಗಿದೆ. ನಿರಂತರ ಮಳೆಯಿಂದಾಗಿ ಔರಂಗ, ಪರ್ ಮತ್ತು ದಮನ್‌ಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ವಲ್ಸಾದ್ ಹಾಗೂ ಸೂರತ್ ನಗರಗಳ ತಗ್ಗು ಪ್ರದೇಶಗಳಿಂದ 2,200 ಕ್ಕೂ ಹೆಚ್ಚು ಜನರನ್ನು ರಕ್ಷಣಾ ಪಡೆಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿವೆ. ಸಂತ್ರಸ್ತರಿಗಾಗಿ ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, ಆಹಾರ, ಕುಡಿಯುವ ನೀರು ಹಾಗೂ ವೈದ್ಯಕೀಯ ನೆರವು ನೀಡಲಾಗುತ್ತಿದೆ.

ವಿಡಿಯೋ

5 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಎಚ್ಚರಿಕೆ
ದಕ್ಷಿಣ ಗುಜರಾತ್‌ನ ವಲ್ಸಾದ್, ನವಸಾರಿ, ಡಾಂಗ್ಸ್, ಸೂರತ್ ಮತ್ತು ತಾಪಿ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (IMD) ಭಾರಿ ಮಳೆಯ ‘ರೆಡ್ ಅಲರ್ಟ್’ ಘೋಷಿಸಿದೆ. ತುರ್ತು ಕೆಲಸಗಳಿದ್ದರೆ ಮಾತ್ರ ಹೊರಬರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದು, ಪರಿಹಾರ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಸಚಿವರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳಿಗೆ ನಿರ್ದೇಶನ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Join Indian Army: ಭಾರತೀಯ ಸೇನೆಯಲ್ಲಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ; B.Tech ಪದವೀಧರರಿಗೆ ಸುವರ್ಣಾವಕಾಶ – Kannada News | Indian Army SSC Tech 2026: Technical Officer Jobs for B.E and B.Tech Engineers

ಎಂಜಿನಿಯರಿಂಗ್ (B.E/B.Tech) ಪದವಿ ಪಡೆದಿರುವ ಅಥವಾ ಅಂತಿಮ ವರ್ಷದ ವ್ಯಾಸಂಗದಲ್ಲಿರುವ ಯುವಕರಿಗೆ ಭಾರತೀಯ ಸೇನೆ (Indian Army) ಉತ್ತಮ ಉದ್ಯೋಗಾವಕಾಶವನ್ನು ಘೋಷಿಸಿದೆ. ಶಾರ್ಟ್ ಸರ್ವಿಸ್ ಕಮಿಷನ್ (SSC-Tech) ಮೂಲಕ ತಾಂತ್ರಿಕ ಅಧಿಕಾರಿಗಳ (Technical Officers) ಹುದ್ದೆಗಳ ನೇಮಕಾತಿಗೆ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದೇಶಸೇವೆಯೊಂದಿಗೆ ಗೌರವಯುತ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಪ್ರಮುಖ ದಿನಾಂಕಗಳು ಇಲ್ಲಿವೆ:

ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ joinindianarmy.nic.in ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 6 ಮತ್ತು ಪುರುಷ ಅಭ್ಯರ್ಥಿಗಳಿಗೆ ಆಗಸ್ಟ್ 7 ಎಂದು ನಿಗದಿಪಡಿಸಲಾಗಿದೆ. ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಭಾರತೀಯ ಸೇನೆ ಸೂಚಿಸಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಈ ನೇಮಕಾತಿಗೆ ಅಧಿಸೂಚಿತ ಎಂಜಿನಿಯರಿಂಗ್ ವಿಭಾಗಗಳಲ್ಲಿ B.E ಮತ್ತು B.Tech ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೊತೆಗೆ, ಪ್ರಸ್ತುತ ಅಂತಿಮ ವರ್ಷದ ವ್ಯಾಸಂಗದಲ್ಲಿರುವ ವಿದ್ಯಾರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳ ವಯೋಮಿತಿ 20 ರಿಂದ 27 ವರ್ಷಗಳ ನಡುವೆ ಇರಬೇಕು. ವಯಸ್ಸಿನ ಲೆಕ್ಕಾಚಾರವನ್ನು 2027ರ ಏಪ್ರಿಲ್ 1ರ ಆಧಾರದ ಮೇಲೆ ಮಾಡಲಾಗುತ್ತದೆ. ಈ ನೇಮಕಾತಿ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಲಿಖಿತ ಪರೀಕ್ಷೆ ಇಲ್ಲ, ಅಂಕಗಳ ಆಧಾರದ ಮೇಲೆ ಆಯ್ಕೆ:

ಈ ನೇಮಕಾತಿಯ ಪ್ರಮುಖ ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳು ಎಂಜಿನಿಯರಿಂಗ್ ಪದವಿಯಲ್ಲಿ ಪಡೆದಿರುವ ಒಟ್ಟು ಶೇಕಡಾವಾರು ಅಂಕಗಳ (Cumulative Percentage) ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ನೇರವಾಗಿ ಸೇವಾ ಆಯ್ಕೆ ಮಂಡಳಿ (SSB) ಸಂದರ್ಶನಕ್ಕೆ ಕರೆಯಲಾಗುತ್ತದೆ.

5 ದಿನಗಳ SSB ಸಂದರ್ಶನದಲ್ಲಿ ಏನೆಲ್ಲಾ ಪರೀಕ್ಷೆಗಳು?

SSB ಸಂದರ್ಶನವು ಒಟ್ಟು ಐದು ದಿನಗಳ ಕಾಲ ನಡೆಯಲಿದ್ದು, ಎರಡು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

  • ಮೊದಲ ಹಂತದಲ್ಲಿ, ಸ್ಕ್ರೀನಿಂಗ್ ಪರೀಕ್ಷೆ, ಮೌಖಿಕ ಹಾಗೂ ಮೌಖಿಕವಲ್ಲದ ಸಾಮರ್ಥ್ಯ ಪರೀಕ್ಷೆಗಳು ಮತ್ತು ಚಿತ್ರ ಆಧಾರಿತ ಚರ್ಚೆ (PPDT) ನಡೆಸಲಾಗುತ್ತದೆ.
  • ಎರಡನೇ ಹಂತದಲ್ಲಿ, ಮೊದಲ ಹಂತದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮನೋವಿಜ್ಞಾನ ಪರೀಕ್ಷೆಗಳು, ವಿವಿಧ ಗುಂಪು ಚಟುವಟಿಕೆಗಳು ಹಾಗೂ ವೈಯಕ್ತಿಕ ಸಂದರ್ಶನವನ್ನು ನಡೆಸಲಾಗುತ್ತದೆ.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ಆಯ್ಕೆಯಾದವರಿಗೆ 49 ವಾರಗಳ ತರಬೇತಿ:

SSB ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಬಿಹಾರದ ಗಯಾದಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA Gaya) ಯಲ್ಲಿ 49 ವಾರಗಳ ಮಿಲಿಟರಿ ತರಬೇತಿ ನೀಡಲಾಗುತ್ತದೆ.

ಯಾವ ಹುದ್ದೆಗಳಿಗೆ ನೇಮಕಾತಿ?

ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ಭಾರತೀಯ ಸೇನೆಯಲ್ಲಿ ತಾಂತ್ರಿಕ ಅಧಿಕಾರಿಗಳಾಗಿ (Technical Officers) ನೇಮಕ ಮಾಡಲಾಗುತ್ತದೆ. ಅವರು ಸೇನೆಯ ಕಾರ್ಯಾಚರಣೆಯ ನಾಯಕತ್ವ, ಕೋರ್ ಎಂಜಿನಿಯರಿಂಗ್, ಲಾಜಿಸ್ಟಿಕ್ಸ್ ಹಾಗೂ ಸಂಪನ್ಮೂಲ ನಿರ್ವಹಣೆ ಸೇರಿದಂತೆ ವಿವಿಧ ತಾಂತ್ರಿಕ ವಿಭಾಗಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ.

ಅಧಿಕೃತ ವೆಬ್‌ಸೈಟ್:

ಹೆಚ್ಚಿನ ಮಾಹಿತಿ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ joinindianarmy.nic.inಗೆ ಭೇಟಿ ನೀಡಬಹುದು. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಸೂಕ್ತ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 3:12 pm, Fri, 24 July 26

Source link

ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬಿದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ – Kannada News | Bengaluru: Richmond Town Abandoned Vehicle Towing Drive Begins Following Official Notices

ಬೆಂಗಳೂರು, ಜುಲೈ 24: ಫುಟ್‌ಪಾತ್‌ ಒತ್ತುವರಿ ವಿರುದ್ಧ ಸಚಿವ ಕೃಷ್ಣಬೈರೇಗೌಡ ದೊಡ್ಡ ಸಮರವೇ ಸಾರಿದ್ದರು. ಆ ಬಳಿಕ ರಸ್ತೆ ಬದಿ ವರ್ಷಗಳಿಂದ ನಿಂತಲ್ಲೇ ನಿಂತ ವಾಹನಗಳ ತೆರವಿಗೂ ಕೈ ಹಾಕಿದ್ದಾರೆ. ಈಗಾಗಲೇ ರಸ್ತೆ ಬದಿ ಅನಾಥವಾಗಿ ನಿಂತಿರುವ ವಾಹನಗಳಿಗೆ 15 ದಿನಗಳ ಮುಂಚಿತವಾಗಿಯೇ ನೋಟಿಸ್ ಕೂಡ ಅಂಟಿಸಲಾಗಿದೆ. ಸದ್ಯ ರಿಚ್ಮಂಡ್ ಟೌನ್ ಸುತ್ತಮುತ್ತಲೂ 30ಕ್ಕೂ ಹೆಚ್ಚು ಬಿಡಾಡಿ ವಾಹನಗಳನ್ನ ಗುರುತಿಸಿ ಜಿಬಿಎ ಅಧಿಕಾರಿಗಳು ಖುದ್ದು ಸ್ಟಿಕರ್ ಅಂಟಿಸಿದ್ದರು. ಆದರೆ ವಾಹನಗಳ ಮಾಲೀಕರು ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಜಿಬಿಎ ಮತ್ತು ಸಂಚಾರ ಪೊಲೀಸ್​ ಇಲಾಖೆ ಸಿಬ್ಬಂದಿ ನೇರವಾಗಿ ವಾಹನಗಳನ್ನ ಟಾಯಿಂಗ್ ಮುಖಾಂತರ ಜಾಪ್ತಿ ಮಾಡುತ್ತಿದ್ದಾರೆ.

ವರದಿ: ಅರುಣ್​​ ಕುಮಾರ್​

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಚಿಕ್ಕಬಳ್ಳಾಪುರದಲ್ಲಿ ನಕಲಿ ಕೀಟನಾಶಕ ಜಾಲ ಪತ್ತೆ: ರೈತರಿಗೆ ವಂಚಿಸುತ್ತಿದ್ದ ‘ಬೆಳೆ ತಜ್ಞ’ ಕೃಷಿ ಇಲಾಖೆ ಬಲೆಗೆ! – Kannada News | Fake Pesticide Racket Busted in Chikkaballapur: ‘Crop Expert’ Arrested

ಚಿಕ್ಕಬಳ್ಳಾಪುರದಲ್ಲಿ ನಕಲಿ ಕೀಟನಾಶಕ ಜಾಲ ಪತ್ತೆ

ಚಿಕ್ಕಬಳ್ಳಾಪುರ, ಜುಲೈ 24: ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಕೀಟನಾಶಕ ತಯಾರಿಸಿ ಮಾರಾಟ ಮಾಡುತ್ತಿದ್ದ ಭಾರಿ ಜಾಲವೊಂದನ್ನು ಚಿಕ್ಕಬಳ್ಳಾಪುರದಲ್ಲಿ ಕೃಷಿ ಇಲಾಖೆಯ ಜಾಗೃತ ದಳ ಬಯಲಿಗೆಳೆದಿದೆ. ನಗರದ ವಸತಿ ಮನೆಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಅಪಾರ ಪ್ರಮಾಣದ ನಕಲಿ ಕೀಟನಾಶಕ ಹಾಗೂ ಪ್ಯಾಕಿಂಗ್ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.

ನಡೆದಿದ್ದೇನು?

ಅವಧಿ ಮೀರಿದ ಕೃಷಿ ರಾಸಾಯನಿಕಗಳನ್ನು ಅಪಾಯಕಾರಿಯಾಗಿ ಮಿಶ್ರಣ ಮಾಡಿ, ಸುಮಾರು 11 ರಿಂದ 12 ಪ್ರಮುಖ ಕಂಪನಿಗಳ ನಕಲಿ ಲೇಬಲ್ ಹಾಗೂ ಹುಸಿ ಜಿಎಸ್‌ಟಿ (GST) ಸಂಖ್ಯೆ ಬಳಸಿ ರೈತರಿಗೆ ಮಾರಾಟ ಮಾಡಲಾಗುತ್ತಿತ್ತು. ದಾಳಿಯ ವೇಳೆ 200 ಲೀಟರ್‌ಗೂ ಹೆಚ್ಚು ನಕಲಿ ರಾಸಾಯನಿಕಗಳು, ಬಾಟಲಿಗಳು ಮತ್ತು ಲೇಬಲ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ರೈತರೇ ಇವನ ಟಾರ್ಗೆಟ್!

ಆರೋಪಿ ಸೋಮಸುಂದರ್ ತಾನೊಬ್ಬ ‘ಬೆಳೆ ತಜ್ಞ’ ಎಂದು ಹೇಳಿಕೊಂಡು ದ್ರಾಕ್ಷಿ, ಮಾವು, ದಾಳಿಂಬೆ ಬೆಳೆಯುವ ತೋಟಗಾರಿಕಾ ರೈತರ ವಿಶ್ವಾಸ ಗಳಿಸುತ್ತಿದ್ದ. ಪ್ರತಿದಿನ 50 ಲೀಟರ್‌ಗೂ ಹೆಚ್ಚು ನಕಲಿ ಉತ್ಪನ್ನ ತಯಾರಿಸಿ, ನೇರವಾಗಿ ರೈತರ ಜಮೀನುಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದ. ವಿಚಾರಣೆ ವೇಳೆ ತಾನು ನಕಲಿ ಕೀಟನಾಶಕ ತಯಾರಿಸುತ್ತಿದ್ದುದನ್ನು ಒಪ್ಪಿಕೊಂಡಿರುವ ಆರೋಪಿ, ಕಳೆದ ಮೂರು ದಿನಗಳಿಂದಷ್ಟೇ ಇದನ್ನು ಮಾಡುತ್ತಿದ್ದಾಗಿ ಸಮಜಾಯಿಷಿ ನೀಡಿದ್ದಾನೆ.

ಕೃಷಿ ಇಲಾಖೆ ಎಚ್ಚರಿಕೆ

ಇಂತಹ ನಕಲಿ ರಾಸಾಯನಿಕ ಬಳಕೆಯಿಂದ ಬೆಳೆ ನಾಶವಾಗುವುದಲ್ಲದೆ, ಮಣ್ಣಿನ ಫಲವತ್ತತೆ ಹಾಗೂ ಪರಿಸರಕ್ಕೂ ತೀವ್ರ ಹಾನಿಯಾಗುತ್ತದೆ. ಆದ್ದರಿಂದ ರೈತರು ಅಧಿಕೃತ ರಸೀದಿಯೊಂದಿಗೆ ಮಾನ್ಯತೆ ಪಡೆದ ಅಂಗಡಿಗಳಿಂದಷ್ಟೇ ಕೀಟನಾಶಕ ಖರೀದಿಸಬೇಕೆಂದು ಕೃಷಿ ಜಾಗೃತ ದಳದ ಅಧಿಕಾರಿ ಮೋಹನ್ ಮನವಿ ಮಾಡಿದ್ದಾರೆ. ಈ ಕುರಿತು ಚಿಕ್ಕಬಳ್ಳಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಒದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ದಾಖಲೆ ಮುರಿದ ವೈಭವ್ ಸೂರ್ಯವಂಶಿ – Kannada News | India vs Zimbabwe T20: Vaibhav Sooryavanshi shatters Sachin Tendulkar’s youngest fifty record

ವಾಸ್ತವವಾಗಿ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ವೈಭವ್, ಆ ಸರಣಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಆದಾಗ್ಯೂ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಅತಿ ಕಿರಿಯ ಆಟಗಾರನೆಂಬ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದರು. ವೈಭವ್​ಗೂ ಮೊದಲು ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು(PC-PTI).

Source link

ಕಾರಂಜಾ ಜಲಾಶಯದಲ್ಲಿ ಮೀನು ಉತ್ಪಾದನೆ ಕುಸಿತ, ಬೀದರ್​ನಲ್ಲಿ ಬರಿದಾಗುತ್ತಿದೆ ಮೀನುಗಾರರ ಬದುಕು – Kannada News | Bidar Karanja Reservoir Fishermen Crisis: Fish Seed Shortage, Illegal Fishing Allegations Hit Livelihoods

ಬೀದರ್, ಜುಲೈ 24: ಬೀದರ್ (Bidar) ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಳ್ಳಿ (ಕೆ) ಗ್ರಾಮದ ಸಮೀಪದ ಕಾರಂಜಾ ಜಲಾಶಯವನ್ನು ಅವಲಂಬಿಸಿರುವ ನೂರಾರು ಮೀನುಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಲಾಶಯದಲ್ಲಿ ಸಮರ್ಪಕ ಪ್ರಮಾಣದಲ್ಲಿ ಮೀನು ಮರಿಗಳನ್ನು ಬಿಡದಿರುವುದರಿಂದ ಮೀನು ಉತ್ಪಾದನೆ ಗಣನೀಯವಾಗಿ ಕುಸಿದಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಇದೇ ವೇಳೆ ತೆಲಂಗಾಣದಿಂದ ಬರುವ ಕೆಲವರು ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

200ಕ್ಕೂ ಹೆಚ್ಚು ಮೀನುಗಾರರು ಸಂಕಷ್ಟದಲ್ಲಿ

ಜಲಾಶಯವನ್ನೇ ನಂಬಿಕೊಂಡು ಸುಮಾರು 200ಕ್ಕೂ ಹೆಚ್ಚು ಪರವಾನಗಿ ಪಡೆದ ಮೀನುಗಾರರು ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದ ಕೆಲವು ತಿಂಗಳಿಂದ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ಬಲೆ ಹಾಕಿದರೂ ಸಮರ್ಪಕ ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಮೀನು ಮರಿಗಳನ್ನು ಬಿಡದೇ ಇರುವುದೇ ಸಮಸ್ಯೆ!

ಮೀನುಗಾರರ ಪ್ರಕಾರ, ಪ್ರತಿವರ್ಷ ಜಲಾಶಯದಲ್ಲಿ ನಿಯಮಿತವಾಗಿ ಮೀನು ಮರಿಗಳನ್ನು ಬಿಡಬೇಕಾದ ಮೀನುಗಾರಿಕೆ ಇಲಾಖೆ ಈ ಬಾರಿ ಆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಇದರ ಪರಿಣಾಮವಾಗಿ ಮೀನುಗಳ ಸಂಖ್ಯೆ ಕಡಿಮೆಯಾಗಿದ್ದು, ಮೀನುಗಾರಿಕೆ ವೃತ್ತಿಯನ್ನೇ ನಂಬಿಕೊಂಡಿರುವ ಕುಟುಂಬಗಳ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಸಾವಿರಾರು ರೂಪಾಯಿ ವೆಚ್ಚ ಮಾಡಿ ಸರ್ಕಾರದಿಂದ ಅಧಿಕೃತ ಪರವಾನಗಿ ಪಡೆದಿರುವ ಮೀನುಗಾರರು ಬಲೆ, ದೋಣಿ, ಡೀಸೆಲ್ ಸೇರಿದಂತೆ ದಿನನಿತ್ಯದ ವೆಚ್ಚವನ್ನು ಭರಿಸುತ್ತಿದ್ದರೂ, ಆದಾಯ ಮಾತ್ರ ಶೂನ್ಯಕ್ಕೆ ಸಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೀನುಗಾರರ ಹೇಳಿಕೆಯಂತೆ, ಹಿಂದೆ ಪ್ರತಿದಿನ ಉತ್ತಮ ಪ್ರಮಾಣದಲ್ಲಿ ಮೀನು ದೊರೆಯುತ್ತಿತ್ತು. ಅದರಿಂದ ಕುಟುಂಬ ನಿರ್ವಹಣೆ ಸುಗಮವಾಗಿತ್ತು. ಆದರೆ ಈಗ ಹಲವು ದಿನಗಳಿಂದ ಬಲೆಗೆ ಕೆಲವೇ ಮೀನುಗಳು ಬೀಳುತ್ತಿದ್ದು, ಕೆಲ ದಿನಗಳಲ್ಲಿ ಒಂದೂ ಮೀನು ಸಿಗದೇ ಖಾಲಿ ಕೈಯಲ್ಲಿ ಮನೆಗೆ ಮರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ತೆಲಂಗಾಣದಿಂದ ಬಂದು ಅಕ್ರಮ ಮೀನುಗಾರಿಕೆ

ಇದರ ಜೊತೆಗೆ ತೆಲಂಗಾಣದಿಂದ ಬರುವ ಕೆಲ ಮೀನುಗಾರರು ರಾತ್ರಿ ವೇಳೆ ನಿಯಮ ಉಲ್ಲಂಘಿಸಿ ಜಲಾಶಯದಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಸ್ಥಳೀಯ ಪರವಾನಗಿ ಪಡೆದ ಮೀನುಗಾರರಿಗೆ ಇನ್ನಷ್ಟು ನಷ್ಟ ಉಂಟಾಗುತ್ತಿದೆ ಎಂದು ಅವರು ದೂರಿದ್ದಾರೆ.

ಮೀನುಗಾರರ ಒತ್ತಾಯವೇನು?

ಈ ಕುರಿತು ಹಲವು ಬಾರಿ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ. ಕಾರಂಜಾ ಜಲಾಶಯದಲ್ಲಿ ಗುಣಮಟ್ಟದ ಮೀನು ಮರಿಗಳನ್ನು ನಿಯಮಿತವಾಗಿ ಬಿಡಬೇಕು. ಜೊತೆಗೆ ಅಕ್ರಮ ಮೀನುಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೀದರ್​: ಕಾರಂಜಾ ಕಾಲುವೆ ದುರಸ್ತಿಗೆ 181 ಕೋಟಿ ರೂ ಬಿಡುಗಡೆಗೆ ಸಂಪುಟ ಅಸ್ತು; ಈಗಲಾದ್ರೂ ಸಿಗುತ್ತಾ ರೈತರಿಗೆ ನೀರು?

ಮೀನುಗಾರಿಕೆ ಇಲಾಖೆಯ ನಿರ್ಲಕ್ಷ್ಯದಿಂದ ಸರ್ಕಾರಕ್ಕೂ ಆದಾಯ ತರುವ ಮೀನುಗಾರಿಕೆ ಕ್ಷೇತ್ರವೇ ಹಿನ್ನಡೆ ಅನುಭವಿಸುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಕಾರಂಜಾ ಜಲಾಶಯದಲ್ಲಿ ಮೀನು ಮರಿಗಳನ್ನು ಬಿಡುವುದು, ಅಕ್ರಮ ಮೀನುಗಾರಿಕೆಗೆ ಕಡಿವಾಣ ಹಾಕುವುದು ಹಾಗೂ ಪರವಾನಗಿ ಪಡೆದ ಸ್ಥಳೀಯ ಮೀನುಗಾರರ ಹಿತಾಸಕ್ತಿಯನ್ನು ರಕ್ಷಿಸುವುದು ಈಗ ಅತ್ಯಗತ್ಯವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಮೀನುಗಾರಿಕೆ ಇಲಾಖೆ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Friday Donations: ಲಕ್ಷ್ಮಿ ಅನುಗ್ರಹಕ್ಕಾಗಿ ಶುಕ್ರವಾರ ಈ ವಸ್ತು ದಾನ ಮಾಡಿ; ಶಾಸ್ತ್ರೋಕ್ತ ನಿಯಮ ಇಲ್ಲಿದೆ – Kannada News | Friday Donations for Wealth: Mahalakshmi’s Blessings and Financial Prosperity Tips

ಹಿಂದೂ ಸನಾತನ ಧರ್ಮದಲ್ಲಿ ವಾರದ ಪ್ರತಿಯೊಂದು ದಿನಕ್ಕೂ ತನ್ನದೇ ಆದ ಆಧ್ಯಾತ್ಮಿಕ ಮಹತ್ವವಿದೆ. ಅವುಗಳಲ್ಲಿ ಶುಕ್ರವಾರವು ಸಂಪತ್ತು, ಸಮೃದ್ಧಿ ಮತ್ತು ಐಶ್ವರ್ಯದ ಅಧಿದೇವತೆಯಾದ ಶ್ರೀ ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾದ ದಿನ. ಈ ದಿನದಂದು ಭಕ್ತರು ದೇವಿಯ ಅನುಗ್ರಹಕ್ಕಾಗಿ ಉಪವಾಸ, ಪೂಜೆ-ಪುನಸ್ಕಾರಗಳನ್ನು ನೆರವೇರಿಸುತ್ತಾರೆ. ಪೂಜೆಯ ಜೊತೆಗೆ ಶುಕ್ರವಾರ ಮಾಡುವ ‘ದಾನ’ಕ್ಕೆ ಶಾಸ್ತ್ರಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ನೀಡಲಾಗಿದೆ. ಈ ದಿನ ನಿರ್ಗತಿಕರಿಗೆ ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ತೊಲಗಿ, ಆರ್ಥಿಕ ಕಷ್ಟಗಳು ನಿವಾರಣೆಯಾಗುತ್ತವೆ. ಜೊತೆಗೆ, ಶುಕ್ರವಾರವು ಶುಕ್ರ ಗ್ರಹಕ್ಕೆ ಸಂಬಂಧಿಸಿರುವುದರಿಂದ ಈ ದಿನದ ದಾನವು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶುಕ್ರ ದೋಷಗಳನ್ನು ನಿವಾರಿಸಿ ಶುಭ ಫಲಗಳನ್ನು ನೀಡುತ್ತದೆ.

ಅಕ್ಕಿ ಮತ್ತು ಸಕ್ಕರೆ ದಾನ:

ಶುಕ್ರವಾರದಂದು ಬಡವರಿಗೆ ಅಥವಾ ಅಗತ್ಯವಿರುವವರಿಗೆ ಅಕ್ಕಿ ಮತ್ತು ಸಕ್ಕರೆಯನ್ನು ದಾನ ಮಾಡುವುದು ಅತ್ಯಂತ ಶ್ರೇಷ್ಠ. ಹೀಗೆ ಮಾಡುವುದರಿಂದ ಅನ್ನಪೂರ್ಣೇಶ್ವರಿ ದೇವಿಯ ಸಂಪೂರ್ಣ ಆಶೀರ್ವಾದ ದೊರೆಯುತ್ತದೆ ಹಾಗೂ ಮನೆಯಲ್ಲಿ ಎಂದಿಗೂ ಆಹಾರ ಧಾನ್ಯಗಳ ಕೊರತೆ ಎದುರಾಗುವುದಿಲ್ಲ. ಇದು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿ, ಕುಟುಂಬದ ನೆಮ್ಮದಿಯನ್ನು ಹೆಚ್ಚಿಸುತ್ತದೆ.

ಮುತ್ತೈದೆಯರಿಗೆ ಮಂಗಳದ್ರವ್ಯಗಳ ದಾನ:

ಶುಕ್ರವಾರದಂದು ಸುಮಂಗಲಿಯರಿಗೆ (ವಿವಾಹಿತ ಮಹಿಳೆಯರಿಗೆ) ಅರಿಶಿನ, ಕುಂಕುಮ, ಗಾಜಿನ ಬಳೆಗಳು, ಸೀರೆ ಅಥವಾ ಇತರ ಮಂಗಲ ದ್ರವ್ಯಗಳನ್ನು ದಾನವಾಗಿ ನೀಡುವುದು ಸೌಭಾಗ್ಯದ ಸಂಕೇತ. ಇದರಿಂದ ದಾಂಪತ್ಯ ಜೀವನದಲ್ಲಿ ಸಂತೋಷ, ಸಾಮರಸ್ಯ ನೆಲೆಸುತ್ತದೆ ಹಾಗೂ ಕುಟುಂಬದ ಅದೃಷ್ಟ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ಬಿಳಿ ವಸ್ತುಗಳು ಹಾಗೂ ಕ್ಷೀರಾನ್ನ ದಾನ:

ಶುಕ್ರವಾರದಂದು ಹಾಲು, ಮೊಸರು, ಬಿಳಿ ವಸ್ತ್ರಗಳು, ಅಥವಾ ಹಾಲಿನಿಂದ ಮಾಡಿದ ಪಾಯಸ/ಖೀರ್‌ ನಂತಹ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಶುಭ. ಬಿಳಿ ಬಣ್ಣವು ಶುಕ್ರ ಗ್ರಹದ ಸಂಕೇತವಾಗಿರುವುದರಿಂದ, ಈ ವಸ್ತುಗಳ ದಾನವು ಮಾನಸಿಕ ಪ್ರಶಾಂತತೆಯನ್ನು ತರುತ್ತದೆ ಹಾಗೂ ಆರ್ಥಿಕ ಸ್ಥಿರತೆಯನ್ನು ಒದಗಿಸುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಉಪ್ಪು ಹಾಗೂ ಪೂಜಾ ದ್ರವ್ಯಗಳ ದಾನ:

ಉಪ್ಪನ್ನು ಮಹಾಲಕ್ಷ್ಮಿಯ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಉಪ್ಪು ಸಮುದ್ರದಿಂದ ಸಿಗುತ್ತದೆ (ಸಮುದ್ರ ಮಂಥನ). ಶುಕ್ರವಾರದಂದು ಉಪ್ಪನ್ನು ದಾನ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಸಂಪೂರ್ಣವಾಗಿ ದೂರವಾಗುತ್ತವೆ. ಇದರೊಂದಿಗೆ ಕಮಲದ ಹೂವು, ಶಂಖ, ಗೋಮತಿ ಚಕ್ರ ಹಾಗೂ ಕವಡೆಗಳಂತಹ ಪವಿತ್ರ ವಸ್ತುಗಳನ್ನು ದಾನ ಮಾಡುವುದು ಸಹ ಶುಭ ಫಲಗಳನ್ನು ನೀಡುತ್ತದೆ.

ತುಪ್ಪದ ದೀಪ ಸೇವನೆ:

ಶುಕ್ರವಾರದ ಸಂಜೆ ಲಕ್ಷ್ಮಿ ಪೂಜೆಯ ವೇಳೆಯಲ್ಲಿ ಮನೆಯ ಮುಖ್ಯ ದ್ವಾರದ (ಸಿಂಹದ್ವಾರ) ಬಳಿ ಶುದ್ಧ ಹಸುವಿನ ತುಪ್ಪದಿಂದ ದೀಪ ಬೆಳಗಿಸುವುದು ಅಥವಾ ದೇವಸ್ಥಾನಗಳಿಗೆ ದೀಪದ ಎಣ್ಣೆ ಅಥವಾ ತುಪ್ಪವನ್ನು ದಾನವಾಗಿ ನೀಡುವುದು ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹಕ್ಕೆ ಪಾತ್ರವಾಗಿಸುತ್ತದೆ. ಇದು ಮನೆಯಲ್ಲಿ ಬಡತನವನ್ನು ನಿವಾರಿಸಿ, ಅಷ್ಟೈಶ್ವರ್ಯಗಳನ್ನು ತರುತ್ತದೆ ಎಂಬುದು ಭಕ್ತರ ನಂಬಿಕೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version