Headlines

ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ: ಮಾಹಿತಿ ಇಲ್ಲಿದೆ – Kannada News | BDAs Ambitious 1.5 Million Tree Plantation Drive to Green Bengaluru

ಬೆಂಗಳೂರು, ಜೂನ್​​ 26: ಒಂದು ಕಾಲದಲ್ಲಿ ಕೂಲ್ ಸಿಟಿ ಎಂದೇ ಖ್ಯಾತವಾಗಿದ್ದ ಬೆಂಗಳೂರು ಈಗ ಹಾಟ್ ಸಿಟಿಯಾಗುತ್ತಿದೆ. ಈ ವಾತಾವರಣದ ಬದಲಾವಣೆಯನ್ನು ಗಮನಿಸಿರುವ ಬಿಡಿಎ, ನಗರವನ್ನು ಮತ್ತೆ ಹಸಿರಾಗಿಸಲು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕೆಂಪೇಗೌಡ ಜಯಂತಿ ದಿನದಂದು ಒಂದೇ ದಿನ 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿದೆ. ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್​​ ಮತ್ತು ಆಯುಕ್ತ ಮಣಿವಣ್ಣನ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಸಹ ಇದಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ….

Read More

ಕೆ.ಆರ್. ಮಾರುಕಟ್ಟೆಗೆ ಸಿಗಲಿದೆ ಹೈಟೆಕ್ ಸ್ಪರ್ಶ: ಒಂದು ವಾರದೊಳಗೆ ಅಭಿವೃದ್ಧಿ ರಿಪೋರ್ಟ್ ನೀಡಲು ಮಹೇಶ್ವರ ರಾವ್ ಸೂಚನೆ

ಬೆಂಗಳೂರು, ಏ.3: ಬೆಂಗಳೂರಿನ ಕೆ.ಆರ್​​ ಮಾರುಕಟ್ಟೆಗೆ (K.R. Market) ಬೇರೆ ಬೇರೆ ಕಡೆಯಿಂದ ಜನ ಬರುತ್ತಾರೆ. ಇಲ್ಲಿ ಎಲ್ಲವೂ ಸಿಗುತ್ತದೆ. ಹಾಗೂ ಅತೀ ಕಡಿಮೆ ದರದಲ್ಲಿ ದೊರೆಯುತ್ತದೆ. ಈ ಕಾರಣಕ್ಕೆ ಇಲ್ಲಿ ಜನ ತುಂಬಿರುತ್ತಾರೆ. ಆದರೆ ಇಲ್ಲಿನ ಮೂಲಸೌಕರ್ಯದ ಬಗ್ಗೆ ಆಗ್ಗಾಗೆ ದೂರುಗಳು ಬರುತ್ತಿರುತ್ತದೆ. ಇದೀಗ ಈ ಬಗ್ಗೆ ಎಚ್ಚೆತ್ತುಕೊಂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಲವು ಬದಲಾವಣೆಗಳನ್ನು ತರಲಿದೆ. ಬೆಂಗಳೂರು ಕೇಂದ್ರ ನಗರ ನಿಗಮದ ವ್ಯಾಪ್ತಿಯಲ್ಲಿರುವ ಕೆ.ಆರ್. ಮಾರುಕಟ್ಟೆಗೆ ಭೇಟಿ ನೀಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ…

Read More

ಈ ಜನ್ಮದಲ್ಲಿ ಚುನಾವಣೆ ನಿಲ್ಲಬಾರದು ಹಾಗೇ ಮಾಡ್ತೀವಿ: ಅಡ್ಡಮತದಾನ ಮಾಡಿದವರಿಗೆ ಶಾಸ್ತಿ ಫಿಕ್ಸ್ ಎಂದ ಅಶೋಕ್ – Kannada News | Will Take Strict Action On MLAs Who cast Cross Voting In MLC Poll Says R Ashok

ಬೆಂಗಳೂರು, (ಜೂನ್ 21): ಕರ್ನಾಟಕ ವಿಧಾನಪರಿಷತ್​​​ ಚುನಾವಣೆಯಲ್ಲಿ ಮೈತ್ರಿಪಕ್ಷಗಳಾದ ಜೆಡಿಎಸ್ ಹಾಗೂ ಜೆಡಿಎಸ್ ಶಾಸಕರು ಅಡ್ಡಮತದಾನ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಅಡ್ಡಮತದಾನದಿಂದಾಗಿ ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅಡ್ಡಮತದಾನ ಮಾಡಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಚರ್ಚೆಗಳು ನಡೆದಿವೆ. ಆದ್ರೆ, ಅಡ್ಡಮತದಾನ ಮಾಡಿದವರು ಯಾರು ಎಂದು ಪತ್ತೆ ಮಾಡುವುದೇ ಒಂದು ಸವಾಲ್ ಆಗಿದೆ. ಇದರ ಮಧ್ಯೆ ಬಿಜೆಪಿ ಇದೀಗ ಅಂತಿಮವಾಗಿ ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಪ್ರಮಾಣ ಮಾಡಿಸಲು…

Read More

IPL 2027: ಹಾರ್ದಿಕ್ or ರಿಂಕು; ಯಾರಿಗೆ ಸಿಗಲಿದೆ ಕೆಕೆಆರ್ ನಾಯಕತ್ವ?

ಟೀಂ ಇಂಡಿಯಾ ಆಟಗಾರ ಅಜಿಂಕ್ಯ ರಹಾನೆ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ರಹಾನೆ, ಅಂತರರಾಷ್ಟ್ರೀಯ, ದೇಶೀಯ ಮತ್ತು ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್​ಗೂ ನಿವೃತ್ತಿ ಘೋಷಿಸಿದ್ದಾರೆ. ಅಜಿಂಕ್ಯ ರಹಾನೆ ಅವರ ಈ ನಿವೃತ್ತಿ ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮತ್ತೊಂದು ಚಾಲೆಂಜ್ ತಂಡದಿದೆ(PC-PTI). ಏಕೆಂದರೆ ಅಜಿಂಕ್ಯ ರಹಾನೆ ಕಳೆದ ಎರಡು ಆವೃತ್ತಿಗಳಲ್ಲಿ ಈ ತಂಡವನ್ನು ಮುನ್ನಡೆಸಿದ್ದರು. ಇದೀಗ ರಹಾನೆ ನಿವೃತ್ತಿ ಘೋಷಿಸಿರುವ ಕಾರಣ ಕೆಕೆಆರ್ ಐಪಿಎಲ್ 2027 ರ ಸೀಸನ್​ಗೂ ಮೊದಲು ತಂಡಕ್ಕೆ…

Read More

Viral Video: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್

ಚಿತ್ರಕೂಟ (ಉತ್ತರ ಪ್ರದೇಶ): ಶಾಲೆ ಕೇವಲ ಅಕ್ಷರ ಕಲಿಸುವ ಜಾಗವಲ್ಲ, ಬದಲಾಗಿ ಜ್ಞಾನ ಮತ್ತು ಸಂಸ್ಕಾರವನ್ನು ನೀಡುವ ಪವಿತ್ರ ಸ್ಥಳ. ಇದು ವಿದ್ಯಾರ್ಥಿಗಳಲ್ಲಿ ಶಿಸ್ತು, ಮೌಲ್ಯಗಳು ಮತ್ತು ಒಳ್ಳೆಯ ನಡತೆಯನ್ನು ಬೆಳೆಸುವ ಭವಿಷ್ಯದ ಬುನಾದಿ. ಆದರೆ ಇಂತಹ ಜ್ಞಾನದ ದೇಗುಲದಲ್ಲೇ ಶಿಕ್ಷಕಿಯೊಬ್ಬಳು ತನ್ನ ಅಧಿಕಾರವನ್ನೇ ದುರ್ಬಳಕೆ ಮಾಡಿಕೊಂಡು ಪುಟ್ಟ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮಿಡಿಯಾಗಳಲ್ಲಿ ವೈರಲ್​ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಏನಿದು ಘಟನೆ?…

Read More

ಟೀಂ ಇಂಡಿಯಾ ಸೋಲನ್ನು ಸಂಭ್ರಮಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ ಹೀನಾಯ ಸೋಲು ಅನುಭವಿಸಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಟಿ20 ವಿಶ್ವಕಪ್ ವಿಜೇತ ತಂಡವು ಐರ್ಲೆಂಡ್‌ನಂತಹ ದುರ್ಬಲ ತಂಡದ ವಿರುದ್ಧ ಟಿ20 ಸರಣಿಯನ್ನು ಸೋತಿರುವುದನ್ನು ಯಾರಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ಟೀಂ ಇಂಡಿಯಾದ ಈ ಸೋಲು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬಿದ್ ಅಲಿಗೆ ತುಂಬಾ ಸಂತೋಷವನ್ನು ತಂದಿದೆಯಂತೆ. ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲಿನ ನಂತರ, ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಪಾಕ್ ಮಾಜಿ ಕ್ರಿಕೆಟಿಗ ಅಬಿದ್…

Read More

Video: ಅಂಗಡಿಯಲ್ಲಿ ಒಳ ಉಡುಪುಗಳನ್ನು ಕದ್ರಾ ಮಹಿಳಾ ವ್ಯಾಪಾರ ಮಂಡಳಿಯ ಅಧ್ಯಕ್ಷೆ? – Kannada News | Shop CCTV Captures Alleged Undergarment Theft in Varanasi

ವಾರಾಣಸಿ, ಫೆಬ್ರವರಿ 27: ವಾರಾಣಸಿಯ ಲಾಹುರಾಬಿರ್ ಅಂಗಡಿಯಿಂದ 10 ಸಾವಿರ ರೂ. ಮೌಲ್ಯದ ಒಳಉಡುಪುಗಳು ಕಳ್ಳತನವಾಗಿವೆ. ವಾರಾಣಸಿಯ ಮಹಿಳಾ ವ್ಯಾಪಾರ ಮಂಡಳಿಯ ಅಧ್ಯಕ್ಷೆ ಸುನೀತಾ ಸೋನಿ ಸೇರಿದಂತೆ ಮೂವರು ಮಹಿಳೆಯರ ವಿರುದ್ಧ ಆರೋಪ ಕೇಳಿಬಂದಿದೆ. ಅಂಗಡಿಯೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಘಟನೆ ಸೆರೆಯಾಗಿದೆ. ಅಂಗಡಿಯ ಮಾಲೀಕ ಸುದೀಪ್ ಸಿಂಗ್ ಅವರು ಫೆಬ್ರವರಿ 24 ರ ಸಂಜೆ ಈ ಘಟನೆ ನಡೆದಿದೆ ಎಂದು ಹೇಳಿ ದೂರು ದಾಖಲಿಸಿದ್ದಾರೆ. ಗಮನ ಬೇರೆಡೆ ಸೆಳೆಯಲು ಒಬ್ಬ ಮಹಿಳೆ ಅಂಗಡಿಯವನ ಬಳಿ…

Read More

ಆಂತರಿಕ ಜಗಳಗಳು ಅಲ್ಲೂ ಇದ್ವು, ಆದ್ರೆ ಇಸ್ರೇಲ್​​ನ ವಿಪಕ್ಷ ನಾಯಕರು ಪ್ರಧಾನಿ ಮೋದಿ ಭಾಷಣವನ್ನು ಭಹಿಷ್ಕರಿಸಲಿಲ್ಲ – Kannada News | PM Modi’s Historic Israel Visit: Knesset Speech and Unprecedented Honors Strengthen India Israel

ಇಸ್ರೇಲ್, ಫೆಬ್ರವರಿ 26: ಪ್ರಧಾನಿ ನರೇಂದ್ರ ಮೋದಿ(Narendra Modi) ಇಸ್ರೇಲ್ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಮೋದಿ ಸಂಸತ್ತಿನಲ್ಲಿ ಭಾಷಣವನ್ನು ಕೂಡ ಮಾಡಿದ್ದಾರೆ.  ಅಲ್ಲೂ ಕೂಡ ಒಳಜಗಳಗಳಿದ್ದರೂ ಎಷ್ಟೇ ರಾಜಕೀಯವಿದ್ದರೂ ಇಸ್ರೇಲ್ ವಿಪಕ್ಷ ನಾಯಕರು ಪ್ರಧಾನಿ ಮೋದಿ ಭಾಷಣವನ್ನು ಬಹಿಷ್ಕರಿಸಲಿಲ್ಲ. ಭಾಷಣಕ್ಕಾಗಿ ಸಂಸತ್ತಿನಲ್ಲೇ ಉಳಿಯಲು ನಿರ್ಧರಿಸಿದರು. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಆಮ್ ಇಸ್ರಾಯಿಲ್ ಚಾಯ್ ಅಂದರೆ ಇಸ್ರೇಲ್ ಜನರು ಜೀವಂತವಾಗಿದ್ದಾರೆ ಎಂದು ಹೇಳುವ ಮೂಲಕ ತಮ್ಮ ಭಾಷಣ ಸಮಾಪ್ತಿಗೊಳಿಸಿದರು, ಆಗ ಸಂಸತ್ತಿನಲ್ಲಿದ್ದ ಎಲ್ಲಾ ನಾಯಕರು ಎದ್ದು ಚಪ್ಪಾಳೆ ತಟ್ಟಿದ್ದರು….

Read More

ಅಂತ್ಯಕಂಡ ‘ಲವ್ ಮಾಕ್ಟೇಲ್ 3’ ವಿವಾದ; ಕ್ಷಮೆ ಕೇಳಿ ಪ್ರಕರಣ ಸುಖಾಂತ್ಯ

‘ಲವ್ ಮಾಕ್ಟೇಲ್ 3’ (Love Mocktail 3) ಚಿತ್ರದ ಕಥೆ ನಮ್ಮದು ಎಂದು ಗುರು ದೇಶಪಾಂಡೆ ಆರೋಪ ಮಾಡಿದ್ದರು. ಗುರು ದೇಶಪಾಂಡೆ ಆರೋಪ ಸುಳ್ಳು ಎಂದು ಹೇಳಿದ್ದ ಕೃಷ್ಣ, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡೋದಾಗಿಯೂ ಎಚ್ಚರಿಸಿದ್ದು. ಅಲ್ಲದೆ ಸುದ್ದಿಗೋಷ್ಠಿ ವೇಳೆ ಗುರು ಅವರ ವೈಯಕ್ತಿಕ ವಿಷಯಗಳನ್ನು ಎಳೆದು ತಂದಿದ್ದರು. ಈಗ ಈ ವಿವಾದ ಸುಖಾಂತ್ಯವಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭಯೆಲ್ಲಿ ಪ್ರಕರಣ ಇತ್ಯರ್ಥವಾಗಿದೆ. ‘ಲವ್ ಮಾಕ್ಟೇಲ್ 3’ ಸಿನಿಮಾದ ದ್ವಿತೀಯಾರ್ಧದಲ್ಲಿ ಕೋರ್ಟ್ ರೂಂ…

Read More

ಸದ್ದಿಲ್ಲದೆ ಬಿಡುಗಡೆ ಆಯ್ತು ‘ಬಾಹುಬಲಿ: ದಿ ಎಟರ್ನಲ್’ ಟೀಸರ್, ಹೊಸದೆನೂ ಇಲ್ಲ – Kannada News

ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಬರೆದ ಸಿನಿಮಾ ‘ಬಾಹುಬಲಿ’ (Bahubali) ಮತ್ತು ‘ಬಾಹುಬಲಿ 2’ ಸಿನಿಮಾ. ಭಾರತೀಯ ಚಿತ್ರರಂಗವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಸಿನಿಮಾಗಳು ಇವು. ‘ಬಾಹುಬಲಿ’ ಸಿನಿಮಾದ ಎಲ್ಲ ಪಾತ್ರಗಳು ನೆನಪುಳಿಯುವಂಥಹವು. ಇದೀಗ ‘ಬಾಹುಬಲಿ’ ಕತೆಯನ್ನು ಕೇವಲ ಎರಡು ಸಿನಿಮಾಗಳಿಗೆ ಸೀಮಿತವಾಗಲು ಬಿಡದೆ, ನಿರ್ಮಾಣ ಸಂಸ್ಥೆಯು ಇನ್ನಷ್ಟು ಹಿಗ್ಗಿಸಲು ಮುಂದಾಗಿದ್ದು ‘ಬಾಹುಬಲಿ: ದಿ ಎಟರ್ನಲ್’ ಹೆಸರಿನ ಮತ್ತೊಂದು ಸಿನಿಮಾ ನಿರ್ಮಿಸಿದೆ. ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ‘ಬಾಹುಬಲಿ: ದಿ ಎಟರ್ನಲ್’ ಅನಿಮೇಷನ್ ಸಿನಿಮಾ ಆಗಿದ್ದು,…

Read More