ಫ್ಲಿಪ್ಕಾರ್ಟ್ನಲ್ಲಿ ಬುಕ್ ಮಾಡಿದ್ದು ಐಫೋನ್, ಬಂದಿದ್ದು ಗಡ್ಡಕ್ಕೆ ಹಚ್ಚುವ ಎಣ್ಣೆ, 1.8 ಲಕ್ಷ ರೂ. ಪರಿಹಾರಕ್ಕೆ ಗ್ರಾಹಕ ನ್ಯಾಯಾಲಯ ಆದೇಶ – Kannada News | Flipkart fined Rs 1.8 Lakh by Consumer Court for delivering beard oil instead of iPhone
ಮುಂಬೈ,ಜುಲೈ 24: ಆನ್‌ಲೈನ್‌ನಲ್ಲಿ ಲಕ್ಷಾಂತರ ರೂಪಾಯಿ ಕೊಟ್ಟು ಪ್ರೀಮಿಯಂ ಐಫೋನ್ ಆರ್ಡರ್ ಮಾಡಿದ ಗ್ರಾಹಕನಿಗೆ ಫೋನ್ ಬದಲಿಗೆ ‘ಗಡ್ಡಕ್ಕೆ ಬೆಳೆಸುವ ಎಣ್ಣೆ’ ತಲುಪಿಸಿದ್ದ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್(Flipkart)ಗೆ ಮುಂಬೈನ ಗ್ರಾಹಕ ನ್ಯಾಯಾಲಯ ಭಾರಿ ದಂಡ ವಿಧಿಸಿದೆ. ಗ್ರಾಹಕನಿಗೆ ಫೋನ್‌ನ ಪೂರ್ಣ ಮೊತ್ತ 1.11 ಲಕ್ಷ ರೂ. ವನ್ನು ಬಡ್ಡಿ ಸಮೇತ ಮರುಪಾವತಿಸುವುದರ ಜೊತೆಗೆ, ಅನುಭವಿಸಿದ ಮಾನಸಿಕ ಯಾತನೆ ಹಾಗೂ ಕಾನೂನು ವೆಚ್ಚವಾಗಿ 70,000 ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ಹಿನ್ನೆಲೆ ಏನು? ಏಪ್ರಿಲ್ 2023ರಲ್ಲಿ…