Video: ಎರಡನೇ ಆಷಾಢ ಶುಕ್ರವಾರ ಚಾಮುಂಡೇಶ್ವರಿ ತಾಯಿಯ ಅಲಂಕಾರ ಹೇಗಿದೆ ನೋಡಿ – Kannada News | Festive Fervour at Mysurus Chamundeshwari Temple on Second Ashada Friday

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದಂದು ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ವಿಜೃಂಭಣೆಯ ಪೂಜಾ ಕೈಂಕರ್ಯಗಳು ನೆರವೇರುತ್ತಿದೆ. ದೇವಾಲಯವು ಫಲ-ಪುಷ್ಪಗಳಿಂದ ಕಂಗೊಳಿಸುತ್ತಿದ್ದು, ವಿಶೇಷವಾಗಿ ತೋತಾಪುರಿ ಮಾವು, ಡ್ರ್ಯಾಗನ್ ಫ್ರೂಟ್‌ಗಳು ಹಾಗೂ ವೈವಿಧ್ಯಮಯ ಹೂವುಗಳಿಂದ ಅಲಂಕರಿಸಲಾಗಿದೆ.

ಆಷಾಢ ಮಾಸದಲ್ಲಿ ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಪ್ರತಿದಿನ ಸಾವಿರಾರು ಭಕ್ತರು ತಾಯಿಯ ದರ್ಶನಕ್ಕೆ ಆಗಮಿಸುತ್ತಿದ್ದು, ಎರಡನೇ ಶುಕ್ರವಾರದ ಇಂದು ಸರತಿ ಸಾಲಿನಲ್ಲಿ ನಿಂತು ಭಕ್ತರು ಭಕ್ತಿಯಿಂದ ಪ್ರಾರ್ಥಿಸಿರುವುದನ್ನು ಕಾಣಬಹುದು. ಈ ದಿನ ದೇವಾಲಯದಲ್ಲಿ ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಉತ್ಸವ ಮೂರ್ತಿಯು ಭಕ್ತರ ಗಮನ ಸೆಳೆಯಿತ್ತಿದೆ. ಗುಲಾಬಿ ಬಣ್ಣದ ರೇಷ್ಮೆ ಸೀರೆಯುಟ್ಟು, ಸಕಲ ಆಭರಣಗಳನ್ನು ಧರಿಸಿದ್ದ ತಾಯಿಯ ರೂಪ ಕಣ್ತುಂಬಿಸಿಕೊಳ್ಳುವುದೇ ಕಣ್ಣಿಗೊಂದು ಹಬ್ಬ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

 

Source link

ಕಾವೇರಿ ವಿವಾದ: ಶೀಘ್ರದಲ್ಲೇ ಡಿಕೆ ಶಿವಕುಮಾರ್, ತಮಿಳುನಾಡು ಸಿಎಂ ವಿಜಯ್ ಮಾತುಕತೆ ಸಾಧ್ಯತೆ – Kannada News | DK Shivakumar Invites Tamil Nadu CM Vijay for Cauvery Talks in Bengaluru, Mekedatu Project Likely on Agenda

ಶೀಘ್ರದಲ್ಲೇ ಡಿಕೆ ಶಿವಕುಮಾರ್, ತಮಿಳುನಾಡು ಸಿಎಂ ವಿಜಯ್ ಮಾತುಕತೆ ಸಾಧ್ಯತೆImage Credit source: tv9

ಬೆಂಗಳೂರು, ಜುಲೈ 24: ಕಾವೇರಿ ನದಿ ನೀರು ಹಂಚಿಕೆ ವಿವಾದದ (Cauvery River Water Dispute) ನಡುವೆಯೇ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಂಬಂಧಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಕಾಣಿಸಿಕೊಂಡಿದೆ. ಕಾವೇರಿ ನೀರು ವಿವಾದ ವಿಚಾರವಾಗಿ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹಾಗೂ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನಡುವಿನ ಮಾತುಕತೆಗೆ ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಸಭೆ ನಡೆದರೆ, ಹಲವು ದಶಕಗಳ ಬಳಿಕ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕಾವೇರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಒಂದೆಡೆ ಸೇರಿ ಮಾತುಕತೆ ನಡೆಸಿದಂತಾಗಲಿದೆ.

ಮೂಲಗಳ ಪ್ರಕಾರ, ತಮಿಳುನಾಡು ಸರ್ಕಾರದಿಂದ ಸಭೆಗೆ ಮನವಿ ಬಂದಿದ್ದು, ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಗಸ್ಟ್ 3ರಂದು ಬೆಂಗಳೂರಿನಲ್ಲಿ ಮಾತುಕತೆ ನಡೆಸಲು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಆಹ್ವಾನವನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಒಪ್ಪಿಕೊಂಡಿದ್ದಾರೆಯೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಸಿಎಂಗಳ ಸಭೆಯಲ್ಲಿ ಏನೇನು ಚರ್ಚೆಯಾಗಬಹುದು?

ಸಂಭಾವ್ಯ ಸಭೆಯಲ್ಲಿ ಮೇಕೆದಾಟು ಜಲಾಶಯ ಯೋಜನೆ, ಮಳೆ ಕೊರತೆಯ ವರ್ಷಗಳಲ್ಲಿ ಕಾವೇರಿ ನೀರು ಹಂಚಿಕೆ ಕುರಿತ ಪರಸ್ಪರ ಒಪ್ಪಿಗೆಯ ವ್ಯವಸ್ಥೆ ಹಾಗೂ ಬೆಂಗಳೂರು–ಹೊಸೂರು ಮೆಟ್ರೋ ರೈಲು ಸಂಪರ್ಕ ಯೋಜನೆ ಸೇರಿದಂತೆ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.

ಮೇಕೆದಾಟು ಯೋಜನೆಗೆ ತಮಿಳುನಾಡಿನ ಪ್ರಬಲ ವಿರೋಧ

ಕರ್ನಾಟಕ ಸರ್ಕಾರ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಒತ್ತು ನೀಡುತ್ತಿರುವುದು ತಮಿಳುನಾಡಿನ ವಿರೋಧಕ್ಕೆ ಕಾರಣವಾಗಿದೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಎರಡೂ ರಾಜ್ಯಗಳ ನಡುವೆ ಹಲವು ವರ್ಷಗಳಿಂದ ಭಿನ್ನಾಭಿಪ್ರಾಯ ಮುಂದುವರಿದಿದೆ. ಇದೀಗ ಮೇಕೆದಾಟು ಯೋಜನೆಗೆ ತಮಿಳುನಾಡು ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದೆ.

ವಿಫಲವಾಗಿದ್ದ ಯಡಿಯೂರಪ್ಪ ಯತ್ನ

2021ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆಸುವಂತೆ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದರು. ಆದರೆ ಸ್ಟಾಲಿನ್ ಆ ಆಹ್ವಾನವನ್ನು ತಿರಸ್ಕರಿಸಿದ್ದರು.

ವಿಜಯ್ ನಿರ್ಧಾರದ ಬಗ್ಗೆ ಭಾರೀ ಕುತೂಹಲ

ಇಲ್ಲಿಯವರೆಗೆ ತಮಿಳುನಾಡಿನ ಡಿಎಂಕೆ ಮತ್ತು ಎಐಎಡಿಎಂಕೆ ಸರ್ಕಾರಗಳು ಕಾವೇರಿ ನೀರು ಹಂಚಿಕೆ ಕುರಿತು ಕರ್ನಾಟಕದೊಂದಿಗೆ ನೇರ ಮಾತುಕತೆಗೆ ನಿರಾಕರಿಸುತ್ತಲೇ ಬಂದಿವೆ. ಕಾವೇರಿ ವಿವಾದವನ್ನು ಕಾವೇರಿ ಜಲ ವಿವಾದ ನ್ಯಾಯಮಂಡಳಿ ಹಾಗೂ ಸುಪ್ರೀಂ ಕೋರ್ಟ್ ಈಗಾಗಲೇ ಇತ್ಯರ್ಥಪಡಿಸಿವೆ ಎಂಬುದು ತಮಿಳುನಾಡಿನ ಅಧಿಕೃತ ನಿಲುವಾಗಿದೆ.

ಇದನ್ನೂ ಓದಿ: ಕಾವೇರಿ ವಿವಾದ: ನೀರು ಹರಿಸಲು ಒಪ್ಪದ ಕರ್ನಾಟಕ, ಸರ್ವಪಕ್ಷಗಳ ಸಭೆ ಕರೆದ ತಮಿಳುನಾಡು

ಹೀಗಾಗಿ ಮುಖ್ಯಮಂತ್ರಿ ವಿಜಯ್ ಈ ಆಹ್ವಾನವನ್ನು ಸ್ವೀಕರಿಸಿದರೆ, ಅದು ತಮಿಳುನಾಡಿನ ಹಿಂದಿನ ನಿಲುವಿನಿಂದ ಭಿನ್ನವಾದ ಮಹತ್ವದ ಬೆಳವಣಿಗೆಯಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನ ಸೇನಾ ಮುಖ್ಯಸ್ಥ ಶಾಂತಿ ರಾಯಭಾರಿಯಲ್ಲ,’ತೈಲ ರಾಯಭಾರಿ’: ಅಸಿಮ್ ಮುನೀರ್ ವಿರುದ್ಧ ಸ್ಫೋಟಕ ವರದಿ ಬಯಲು – Kannada News | Asim Munir Exposed: Pakistan Army Chief’s Secret Oil Deal Behind Iran Saudi Peace

ಟೆಹ್ರಾನ್, ಜುಲೈ 24: ಸೌದಿ ಅರೇಬಿಯಾ ಮತ್ತು ಇರಾನ್(Iran) ನಡುವೆ ಸೌಹಾರ್ದತೆ ತರಲು ‘ಶಾಂತಿ ರಾಯಭಾರಿ’ಯಂತೆ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ನಿಜಬಣ್ಣ ಬಯಲಾಗಿದೆ. ಇರಾನ್ ಮತ್ತು ಸೌದಿ ಅರೇಬಿಯಾ ನಡುವಿನ ರಾಜತಾಂತ್ರಿಕ ಒಪ್ಪಂದದ ಹಿಂದೆ ಯಾವುದೇ ಶಾಂತಿಯ ಉದ್ದೇಶವಿರಲಿಲ್ಲ, ಬದಲಿಗೆ ಅಸಿಮ್ ಮುನೀರ್ ಮತ್ತು ಇರಾನ್ ಮಿಲಿಟರಿ ಅಧಿಕಾರಿಯ ‘ಖಾಸಗಿ ತೈಲ ವ್ಯವಹಾರದ’ ಹಿತಾಸಕ್ತಿ ಅಡಗಿತ್ತು ಎಂದು ‘ಟೈಮ್ಸ್ ಆಫ್ ಇಸ್ರೇಲ್’ ಪ್ರಕಟಿಸಿದ ಸ್ಫೋಟಕ ವರದಿಯೊಂದು ಜಗಜ್ಜಾಹೀರುಗೊಳಿಸಿದೆ.

ಇರಾನ್ ಅಧಿಕಾರಿಯೊಂದಿಗೆ ಜಂಟಿ ತೈಲ ಕಂಪನಿ

ವರದಿಯ ಪ್ರಕಾರ, ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮುಖ್ಯಸ್ಥ ಅಹ್ಮದ್ ವಹಿದಿ ಸೇರಿ ಜಂಟಿ ತೈಲ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ಈ ಕಂಪನಿಯು ಕಳೆದ ಒಂದು ವರ್ಷದಿಂದ ಪಾಕಿಸ್ತಾನಕ್ಕೆ ಇರಾನಿನ ತೈಲವನ್ನು ಪೂರೈಸುತ್ತಿದೆ.

ಸೌದಿ ಅರೇಬಿಯಾ ಮೇಲಿನ ಕ್ಷಿಪಣಿ ದಾಳಿಯನ್ನು ನಿಲ್ಲಿಸುವಂತೆ ಇರಾನ್ ಮನವೊಲಿಸಲು ಮುನೀರ್ ಈ ತೈಲ ವ್ಯವಹಾರದ ಪ್ರಭಾವವನ್ನು ಬಳಸಿಕೊಂಡಿದ್ದಾರೆ. ಇರಾನ್‌ಗೆ ಆರ್ಥಿಕ ಲಾಭ ನೀಡಿ, ಬದಲಿಗೆ ಸೌದಿ ಮೇಲಿನ ದಾಳಿಯನ್ನು ತಡೆಯುವ ‘ಆರ್ಥಿಕ ಸುಲಿಗೆ’ ತಂತ್ರವನ್ನು ಇಲ್ಲಿ ಬಳಸಲಾಗಿದೆ ಎಂದು ಮಧ್ಯಪ್ರಾಚ್ಯ ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ಮತ್ತಷ್ಟು ಓದಿ: ಇರಾನ್ ಜತೆ ಮಾತುಕತೆ ನಡೆಸಲು ನಮಗೆ ಆಸಕ್ತಿ ಇಲ್ಲ, ತೆರೆಮರೆಯ ಸಂಭಾಷಣೆ ತಿರಸ್ಕರಿಸಿದ ಟ್ರಂಪ್

ಕ್ಷಿಪಣಿ ಹಾರಿದಾಗ ಕಂಪನಿಯ ಚಿಂತೆ

ಇತ್ತೀಚೆಗೆ ಇರಾನ್ ಮತ್ತೆ ಕ್ಷಿಪಣಿ ದಾಳಿ ನಡೆಸಿದ ತಕ್ಷಣವೇ ಅಸಿಮ್ ಮುನೀರ್ ಇರಾನ್ ಅಧಿಕಾರಿಗೆ ಸಂದೇಶ ಕಳುಹಿಸಿ, “ದಾಳಿ ಮುಂದುವರೆದರೆ ನಮ್ಮ ಜಂಟಿ ತೈಲ ಕಂಪನಿ ತೊಂದರೆಗೆ ಸಿಲುಕುತ್ತದೆ ಎಂದು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಸೌದಿ ಮೇಲಿನ ದಾಳಿಗಳು ಸಂಪೂರ್ಣ ನಿಂತಿದ್ದವು. ಅಂದರೆ ಮುನೀರ್ ಅವರಿಗೆ ಸೌದಿಯ ಭದ್ರತೆಗಿಂತ ತಮ್ಮ ಖಾಸಗಿ ಬಿಸಿನೆಸ್ ಮುಖ್ಯವಾಗಿತ್ತು ಎಂಬುದು ಇದರಿಂದ ಸ್ಪಷ್ಟವಾಗಿದೆ.

ಅಮೆರಿಕ ನಿರ್ಬಂಧಗಳಿಗೂ ಕ್ಯಾರೇ ಎನ್ನದ ಮುನೀರ್

ಅಮೆರಿಕವು ಇರಾನಿನ ತೈಲ ಬಂದರುಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದಾಗ್ಯೂ, ಪಾಕಿಸ್ತಾನ ಮತ್ತು ಇರಾನ್ ಗಡಿಗಳ ಮೂಲಕ ಈ ಅಕ್ರಮ ತೈಲ ವಹಿವಾಟು ಅವ್ಯಾಹತವಾಗಿ ಸಾಗಿತ್ತು. ಈ ಕಂಪನಿಯು ಇಬ್ಬರೂ ಸೇನಾಧಿಕಾರಿಗಳಿಗೆ ಭಾರಿ ಮೊತ್ತದ ಆದಾಯ ತಂದುಕೊಡುತ್ತಿದೆ.

ಪಾಕಿಸ್ತಾನದ ರಾಜಕೀಯ ಮೇಲಿನ ಪ್ರಭಾವ

ಈ ಸ್ಫೋಟಕ ವರದಿ ಹೊರಬಿದ್ದಿದ್ದರೂ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಂಪೂರ್ಣ ಮೌನ ವಹಿಸಿದ್ದಾರೆ. ಸೌದಿ ಅರೇಬಿಯಾ ತನ್ನ ಭದ್ರತೆಗಾಗಿ ಪಾಕಿಸ್ತಾನದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗುವಂತೆ ಮಾಡುವುದು ಮತ್ತು ಶಾಂತಿಯ ನೆಪದಲ್ಲಿ ತಮಗೇ ಸರಿಹೊಂದುವ ‘ಅಕ್ರಮ ತೈಲ ದಂಧೆ’ ನಡೆಸುವುದು ಪಾಕ್ ಸೇನಾ ಮುಖ್ಯಸ್ಥರ ಮುಖ್ಯ ಉದ್ದೇಶವಾಗಿತ್ತು ಎಂಬುದು ಈಗ ಜಾಗತಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Navagraha Puja: ನವಗ್ರಹ ಮಂಟಪಕ್ಕೆ ಎಷ್ಟು ಬಾರಿ ಪ್ರದಕ್ಷಿಣೆ ಹಾಕುವುದು ಶುಭ? ಶಾಸ್ತ್ರೋಕ್ತ ನಿಯಮ ಇಲ್ಲಿದೆ – Kannada News | Navagraha Puja: Unlock Planetary Blessings with Proper Rituals and Pradakshina Guide

ಹಿಂದೂ ಸನಾತನ ಧರ್ಮದಲ್ಲಿ ನವಗ್ರಹಗಳಿಗೆ ಅತ್ಯಂತ ವಿಶೇಷ ಮತ್ತು ಪವಿತ್ರವಾದ ಸ್ಥಾನವಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಎಂಬ ಈ ಒಂಬತ್ತು ಗ್ರಹಗಳು ಮಾನವ ಜೀವನದ ಪ್ರತಿಯೊಂದು ಘಟ್ಟದ ಮೇಲೆಯೂ ಅಪಾರ ಪ್ರಭಾವ ಬೀರುತ್ತವೆ. ವ್ಯಕ್ತಿಯ ಆರೋಗ್ಯ, ಉದ್ಯೋಗ, ವಿವಾಹ, ಸಂತಾನ ಭಾಗ್ಯ, ಆರ್ಥಿಕ ಸ್ಥಿತಿ, ಮಾನಸಿಕ ಶಾಂತಿ ಹಾಗೂ ಯಶಸ್ಸು-ವೈಫಲ್ಯಗಳು ಗ್ರಹಗಳ ಸ್ಥಾನಗಳನ್ನು ಅವಲಂಬಿಸಿರುತ್ತವೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಅನೇಕ ಭಕ್ತರು ನವಗ್ರಹಗಳನ್ನು ಭಕ್ತಿಯಿಂದ ಪೂಜಿಸುತ್ತಾರೆ. ಆದರೆ, ನವಗ್ರಹ ಪೂಜೆ ಮತ್ತು ಪ್ರದಕ್ಷಿಣೆಯನ್ನು ನಮಗೆ ಇಷ್ಟ ಬಂದಂತೆ ಮಾಡಬಾರದು. ಆಗಮ ಶಾಸ್ತ್ರಗಳು ಮತ್ತು ದೇವಾಲಯ ಸಂಪ್ರದಾಯಗಳ ಪ್ರಕಾರ ಕೆಲವು ನಿಯಮಗಳನ್ನು ಪಾಲಿಸಿದರೆ ಮಾತ್ರ ಪೂಜೆಯ ಪೂರ್ಣ ಫಲ ಸಿಗುತ್ತದೆ.

ಪೂಜೆಗೆ ಮುನ್ನ ಮಾಡಬೇಕಾದ ಪೂರ್ವಾಪರ ಸಿದ್ಧತೆಗಳು:

ನವಗ್ರಹಗಳ ದರ್ಶನ ಹಾಗೂ ಪೂಜೆಗೆ ತೆರಳುವ ಮುನ್ನ ದೇಹ ಮತ್ತು ಮನಸ್ಸು ಸಂಪೂರ್ಣವಾಗಿ ಶುದ್ಧವಾಗಿರುವುದು ಅವಶ್ಯಕ. ಬೆಳಿಗ್ಗೆ ಶುಚಿರ್ಭೂತರಾಗಿ ಸ್ನಾನ ಮಾಡಿ, ಸ್ವಚ್ಛವಾದ ವಸ್ತ್ರಗಳನ್ನು ಧರಿಸಬೇಕು. ದೇವಸ್ಥಾನಕ್ಕೆ ತಲುಪಿದ ತಕ್ಷಣವೇ ನೇರವಾಗಿ ನವಗ್ರಹ ಮಂಟಪಕ್ಕೆ ಹೋಗಬಾರದು. ಮೊದಲು ದೇವಾಲಯದ ಮೂಲವಿಗ್ರಹಕ್ಕೆ (ಮುಖ್ಯ ದೇವತೆ) ನಮಸ್ಕರಿಸಿ, ಆಶೀರ್ವಾದ ಪಡೆಯಬೇಕು. ಮುಖ್ಯ ದೇವರ ಆಶೀರ್ವಾದ ಪಡೆದ ನಂತರವೇ ನವಗ್ರಹ ಮಂಟಪವನ್ನು ಪ್ರವೇಶಿಸಬೇಕು. ನವಗ್ರಹಗಳ ಪೂಜೆಯು ಮುಖ್ಯ ದೇವರ ದರ್ಶನಕ್ಕೆ ಪರ್ಯಾಯವಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.

ನವಗ್ರಹ ಮಂಟಪ ಪ್ರವೇಶ ಮತ್ತು ವಿಗ್ರಹ ಸ್ಪರ್ಶದ ನಿಯಮ:

ಸೂರ್ಯ ದೇವನನ್ನು ಎದುರಿಸುತ್ತಾ ನವಗ್ರಹ ಮಂಟಪಕ್ಕೆ ಹೆಜ್ಜೆ ಹಾಕುವುದು ಅತ್ಯಂತ ಶುಭ. ಏಕೆಂದರೆ ಸೂರ್ಯನು ನವಗ್ರಹಗಳ ಅಧಿಪತಿಯಾಗಿದ್ದು, ಸಂಪ್ರದಾಯದ ಪ್ರಕಾರ ಇತರ ಎಲ್ಲಾ ಗ್ರಹಗಳು ಆತನ ಸುತ್ತ ತಮ್ಮದೇ ಆದ ನಿರ್ದಿಷ್ಟ ಸ್ಥಾನಗಳಲ್ಲಿ ನೆಲೆಸಿರುತ್ತವೆ. ಇನ್ನು ಹಲವರು ಭಕ್ತಿಯಿಂದ ಅಥವಾ ತಿಳಿವಳಿಕೆಯಿಲ್ಲದೆ ನವಗ್ರಹ ಮೂರ್ತಿಗಳನ್ನು ಸ್ಪರ್ಶಿಸುತ್ತಾರೆ. ಆದರೆ ದೇವಸ್ಥಾನದ ಆಚರಣೆಗಳ ಪ್ರಕಾರ ಮೂರ್ತಿಗಳನ್ನು ಕೈಗಳಿಂದ ಮುಟ್ಟುವುದು ಸರಿಯಲ್ಲ. ಕೇವಲ ಭಕ್ತಿಯಿಂದ ನಮಸ್ಕರಿಸುವುದು, ಕೈ ಮುಗಿದು ಪ್ರಾರ್ಥಿಸುವುದು ಮತ್ತು ಮಂತ್ರಗಳನ್ನು ಪಠಿಸುವುದೇ ಅತ್ಯುತ್ತಮ ವಿಧಾನವಾಗಿದೆ.

ಪ್ರದಕ್ಷಿಣೆ ಹಾಕುವ ಸರಿಯಾದ ಕ್ರಮ ಮತ್ತು ವಿಧಾನ:

ದೇವಾಲಯದ ಸಂಪ್ರದಾಯಕ್ಕೆ ಅನುಗುಣವಾಗಿ ಪ್ರದಕ್ಷಿಣೆಯ ಸಂಖ್ಯೆಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದಾದರೂ, ಸಾಮಾನ್ಯವಾಗಿ ಕೆಳಗಿನ ಕ್ರಮವನ್ನು ಅನುಸರಿಸಲಾಗುತ್ತದೆ:

  • ಸಾಮಾನ್ಯ ಪ್ರದಕ್ಷಿಣೆ: ನವಗ್ರಹಗಳನ್ನು ಎಡಭಾಗದಿಂದ ಬಲಕ್ಕೆ (ಅಪ್ರದಕ್ಷಿಣವಾಗಿ ಅಲ್ಲ, ಪ್ರದಕ್ಷಿಣಾಕಾರವಾಗಿ) ಚಂದ್ರನ ಬದಿಯಿಂದ ಆರಂಭಿಸಿ 3 ಅಥವಾ 9 ಬಾರಿ ಪ್ರದಕ್ಷಿಣೆ ಹಾಕಬೇಕು.
  • ರಾಹು-ಕೇತುಗಳಿಗೆ ವಿಶೇಷ ಪ್ರದಕ್ಷಿಣೆ: ಕೆಲವು ಸಂಪ್ರದಾಯಗಳ ಪ್ರಕಾರ, ರಾಹು ಮತ್ತು ಕೇತು ಗ್ರಹಗಳನ್ನು ಸ್ಮರಿಸುತ್ತಾ ಬಲದಿಂದ ಎಡಕ್ಕೆ (ಅಪ್ರದಕ್ಷಿಣವಾಗಿ) ಎರಡು ಪ್ರದಕ್ಷಿಣೆಗಳನ್ನು ಹಾಕಲಾಗುತ್ತದೆ.
  • ಅಂತಿಮ ಕೃತಜ್ಞತಾ ಪ್ರದಕ್ಷಿಣೆ: ಕೊನೆಯಲ್ಲಿ ಎಲ್ಲಾ ಗ್ರಹಗಳಿಗೆ ಕೃತಜ್ಞತೆ ಸಲ್ಲಿಸುತ್ತಾ, ಪ್ರತಿಯೊಂದು ಗ್ರಹದ ಹೆಸರನ್ನು ಜಪಿಸುತ್ತಾ ಒಂದು ಅಂತಿಮ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಬೇಕು.

ಪ್ರದಕ್ಷಿಣೆ ಮುಗಿದ ನಂತರ ಪಾಲಿಸಬೇಕಾದ ನಿಯಮಗಳಿವು:

ಪ್ರದಕ್ಷಿಣೆ ಮುಗಿದ ತಕ್ಷಣ ನವಗ್ರಹಗಳಿಗೆ ಕೈಮುಗಿದು ನಮಸ್ಕರಿಸಬೇಕು. ತದನಂತರ, ವಿಗ್ರಹಗಳಿಗೆ ಬೆನ್ನು ತೋರಿಸದೆ, ನಮ್ರತೆಯಿಂದ ಕೆಲವು ಹೆಜ್ಜೆಗಳನ್ನು ಹಿಂಭಾಗಕ್ಕೆ (ಹಿಮ್ಮುಖವಾಗಿ) ನಡೆದು ಬಂದು, ಆ ನಂತರವೇ ಪೂರ್ಣವಾಗಿ ತಿರುಗಿ ಹೊರನಡೆಯಬೇಕು. ಇದನ್ನು ನವಗ್ರಹಗಳಿಗೆ ನೀಡುವ ಗೌರವ ಮತ್ತು ಭಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೇವಸ್ಥಾನದ ಆವರಣದಲ್ಲಿ ಮೊಬೈಲ್ ಫೋನ್ ಬಳಸುವುದು, ಜೋರಾಗಿ ಮಾತನಾಡುವುದು ಅಥವಾ ಗೊಂದಲ ಉಂಟುಮಾಡುವುದನ್ನು ಸಂಪೂರ್ಣವಾಗಿ ತಡೆಯಬೇಕು.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ನವಗ್ರಹ ಪೂಜೆಯ ಆಧ್ಯಾತ್ಮಿಕ ಫಲಗಳು:

ಶಾಸ್ತ್ರಗಳ ಪ್ರಕಾರ ನವಗ್ರಹಗಳನ್ನು ನಿಯಮಬದ್ಧವಾಗಿ ಪೂಜಿಸುವುದರಿಂದ ಗ್ರಹ ದೋಷಗಳ ತೀವ್ರತೆ ಕಡಿಮೆಯಾಗುತ್ತದೆ. ವಿಶೇಷವಾಗಿ ಶನಿ, ರಾಹು ಮತ್ತು ಕೇತು ದೋಷದಿಂದ ಬಳಲುತ್ತಿರುವವರು ಅರ್ಚಕರ ಮಾರ್ಗದರ್ಶನದಂತೆ ಪೂಜೆ ಸಲ್ಲಿಸಿದಾಗ ಆಧ್ಯಾತ್ಮಿಕ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಒಟ್ಟಾರೆಯಾಗಿ, ಈ ಪೂಜೆಯು ಭಕ್ತರಿಗೆ ಮಾನಸಿಕ ಶಾಂತಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಸಂತಾನ ಭಾಗ್ಯ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಕರುಣಿಸುತ್ತದೆ. ನವಗ್ರಹ ಪೂಜೆ ಎಂದರೆ ಕೇವಲ ಯಾಂತ್ರಿಕವಾಗಿ ದೇವಸ್ಥಾನದ ಸುತ್ತ ಸುತ್ತುವುದಲ್ಲ, ಅದು ಭಕ್ತಿ, ಶ್ರದ್ಧೆ ಮತ್ತು ಶಾಸ್ತ್ರೋಕ್ತ ಆಚರಣೆಗಳ ಸುಂದರ ಸಂಗಮವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karavali Movie Review: ಕಂಬಳದ ಓಟದ ಮಧ್ಯೆ ಸೇಡಿನ ಸುಳಿ; ಹೀಗಿದೆ ‘ಕರಾವಳಿ’ – Kannada News | Prajwal Devraj Raj B Shetty Starrer Karavali Movie Review Mithra Performance Steal the Show

ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ, ಮಿತ್ರ ಮೊದಲಾದವರು ನಟಿಸಿರೋ ‘ಕರಾವಳಿ’ ಸಿನಿಮಾ ಇಂದು (ಜುಲೈ 24) ರಿಲೀಸ್ ಆಗಿದೆ. ಈ ಚಿತ್ರ ರಿಲೀಸ್​​ಗೂ ಮೊದಲೇ ವಿವಾದ ಸೃಷ್ಟಿ ಮಾಡಿತ್ತು. ಹೆಸರೇ ಹೇಳುವಂತೆ ಇದು ಕರಾವಳಿಯ ಕಥೆ. ಅಲ್ಲಿನ ಜನರ ಸಂಸ್ಕೃತಿಯೊಂದಿಗೆ ಕಂಬಳ ಆಚರಣೆ ಹಾಸು ಹೊಕ್ಕಾಗಿದೆ. ಕೆಲವರಿಗೆ ಇದು ಪ್ರತಿಷ್ಠೆ, ಇನ್ನೂ ಕೆಲವರಿಗೆ ಇದು ಆಸಕ್ತಿ. ಪ್ರತಿಷ್ಠೆ ಹಾಗೂ ಆಸಕ್ತಿ ಹೊಂದಿರುವ ಇಬ್ಬರು ವ್ಯಕ್ತಿಯ ನಡುವೆ ಘರ್ಷಣೆ ಆದರೆ ಏನಾಗುತ್ತದೆ? ಪ್ಲಸ್ ಏನು? ನೆಗೆಟಿವ್ ಏನು? ಆ ಬಗ್ಗೆ ಇಲ್ಲಿದೆ ವಿವರ.

ಕರಾವಳಿ ಸಿನಿಮಾದ ಕಥೆ ಏನು?

ಅದು ಸುಂದರ ಕರಾವಳಿ ತೀರ. ಅಲ್ಲಿ ಕೋಣದ ಕಂಬಳ ಪ್ರತಿಷ್ಠೆಯ ಪ್ರತೀಕವಾಗಿ ನೋಡುವ ಆದಿಶೇಷನಿದ್ದಾನೆ (ರಮೇಶ್ ಇಂದಿರ). ಕೋಣಗಳು ಎಂದರೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸೋ ವ್ಯಕ್ತಿ ಮಹಾಬಲ (ಮಿತ್ರ) ಹಾಗೂ ಮಹಾವೀರ (ರಾಜ್ ಬಿ ಶೆಟ್ಟಿ) ಇದ್ದಾರೆ. ಕರಾವಳಿಯ ಸಹಾವಸವೇ ಬೇಡ ಎಂದು ದೂರ ಹೋಗಿ ವಾಸ ಮಾಡುತ್ತಿರುವ ಧನಂಜಯ್ (ಪ್ರಜ್ವಲ್ ದೇವರಾಜ್) ಕುಟುಂಬ ಇದೆ. ಈ ಪಾತ್ರಗಳ ಮೇಲೆ ‘ಕರಾವಳಿ’ಯ ಕಥೆ ಸಾಗುತ್ತದೆ. ಈ ಎಲ್ಲಾ ಪಾತ್ರಗಳ ನಡುವೆ ಒಂದು ಕನೆಕ್ಷನ್ ಇದೆ. ಇದರ ಜೊತೆ ದ್ವೇಷ, ಸೇಡು, ಕುರ್ಚಿಗಾಗಿ ನಡೆಯುವ ಒಣ ಪ್ರತಿಷ್ಠೆ ಇದೆ. ಇಲ್ಲಿ ಕಥೆ ಏನು ಎಂದು ಹೇಳುವುದಕ್ಕಿಂತ ಅದನ್ನು ಥಿಯೇಟರ್​​ನಲ್ಲಿ ಎಂಜಾಯ್​ ಮಾಡೋದು ಉತ್ತಮ.

ಕರಾವಳಿ ಕಥೆ ತಂದ ಗುರುದತ್

ಈ ಮೊದಲು ‘ಅಂಬಿ ನಿಂಗ್ ವಯಸ್ಸಾಯ್ತೋ’ ಹೆಸರಿನ ಸಿನಿಮಾ ಮಾಡಿದ್ದ ಯುವ ನಿರ್ದೇಶಕ ಗುರುದತ್ ಗಾಣಿಗ ಅವರು ಈ ಬಾರಿ, ಕರಾವಳಿಯ ಕಂಬಳದ ಕಥೆಯೊಂದಿಗೆ ಬಂದಿದ್ದಾರೆ. ಸಿನಿಮಾ ಉದ್ದಕ್ಕೂ ಅವರು ಕೋಣ ಹಾಗೂ ಕಂಬಳದ ಘಮ ಕಥೆಯಲ್ಲಿ ಇರುವಂತೆ ನೋಡಿಕೊಂಡಿದ್ದಾರೆ. ಸಿನಿಮಾನ ತುಂಬಾನೇ ಕ್ರಿಸ್ಪಿಯಾಗಿ ಕಟ್ಟಿಕೊಡೋ ಪ್ರಯತ್ನ ಮಾಡಿದ್ದಾರೆ. ಸಿನಿಮಾ ವೇಗವಾಗಿ ಸಾಗುವುದರಿಂದ ಎಲ್ಲಿಯೂ ಬೋರ್ ಹೊಡಿಸೋದಿಲ್ಲ. ಅವರ ಕಲ್ಪನೆಗೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಸಾತ್ ಕೊಟ್ಟಿದೆ.

ಕರಾವಳಿ ಪಾತ್ರಗಳ ನಟನೆ

ಈ ಚಿತ್ರದಲ್ಲಿ ಹೀರೋ ಪ್ರಜ್ವಲ್ ಇರಬಹುದೇ ಅಥವಾ ರಾಜ್ ಬಿ ಶೆಟ್ಟಿ ಇರಬಹುದೇ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಾ ಇತ್ತು. ಆದರೆ, ಈ ಚಿತ್ರದಲ್ಲಿ ನಿಜವಾದ ಹೀರೋ ಮಿತ್ರ. ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ‘ಜಾಣೇಶ್’ ಹೆಸರಿನ ಪಾತ್ರ ಮಾಡಿ, ‘ಏನ್ ಬೇಕಿದ್ರು ಕೇಳಿ ಲೆಕ್ಕ ಮಾತ್ರ ಕೇಳಬೇಡಿ’ ಎಂದು ನಗಿಸುತ್ತಿದ್ದ ಅವರು, ಈ ಚಿತ್ರದಲ್ಲಿ ಭಾವನಾತ್ಮಕವಾಗಿ ಸೆಳೆದುಕೊಳ್ಳುತ್ತಾರೆ. ಕೋಣಗಳ ಮೇಲಿನ ಅವರ ಪ್ರೀತಿನೋಡಿ ಪ್ರೇಕ್ಷಕನ ಮನಸ್ಸು ತುಂಬಿ ಬರುತ್ತದೆ. ಅವರ ಅಸಹಾಯಕ ಪರಿಸ್ಥಿತಿಗಳು ಪ್ರೇಕ್ಷಕನನ್ನು ಮರುಗುವಂತೆ ಮಾಡುತ್ತವೆ. ಗೆಳೆಯನಿದ್ದರೆ ಹೀಗಿರಬೇಕು ಎಂದನಿಸುವಂತೆ ಮಾಡುತ್ತಾರೆ. ಅವರು ಪಾತ್ರವನ್ನು ಜೀವಿಸಿದ್ದಾರೆ ಎಂಬುದೇ ಇದಕ್ಕೆ ಸಾಕ್ಷಿ. ಈ ಚಿತ್ರದ ಬಳಿಕ ಅವರ ವೃತ್ತಿ ಬದುಕು ಮತ್ತೊಂದು ಹಂತಕ್ಕೆ ಹೋಗಬಹುದು.

ಈ ಚಿತ್ರದಲ್ಲಿ ಪ್ರಜ್ವಲ್​ಗೆ ಪ್ರಮುಖ ಪಾತ್ರ ಸಿಕ್ಕಿದೆ ಎಂಬುದು ನಿಜ, ಆದರೆ, ಅವರ ಧ್ವನಿ ಇಲ್ಲದಿರುವುದು ಪಾತ್ರದ ಫೀಲ್ ಕಡಿಮೆ ಮಾಡುತ್ತದೆ. ಅವರಿಗೆ ಸಂಭಾಷಣೆಯೂ ಕಡಿಮೆ ಎಂಬುದು ಮತ್ತೊಂದು ಬೇಸರದ ವಿಷಯ. ದ್ವಿತೀಯಾರ್ಧದಲ್ಲಿ ಅವರಿಗೆ ಸಿಕ್ಕಿರೋದು ಒಂದೇ ಒಂದು ಸಣ್ಣ ಡೈಲಾಗ್ ಎಂದರೆ ನೀವು ನಂಬಲೇಬೇಕು. ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ, ಅವರನ್ನು ಇನ್ನೂ ಉತ್ತಮವಾಗಿ ಬಳಸಿಕೊಳ್ಳುವ ಅವಕಾಶ ಇತ್ತು. ಈ ಚಿತ್ರದ ಕಥೆಯ ಜೀವಾಳ ಕಂಬಳ. ಹೀಗಾಗಿ, ಅವರು ಕೂಡ ಕೋಣ ಓಡಿಸೋ ದೃಶ್ಯಗಳು ಇದ್ದಿದ್ದರೆ ಅವರ ಪಾತ್ರ ಮತ್ತಷ್ಟು ಸುಂದರ ಆಗುತ್ತಿತ್ತು.

ರಾಜ್​ ಬಿ ಶೆಟ್ಟಿ ನಟನೆ ಹೇಗಿದೆ?

ರಾಜ್ ಬಿ ಶೆಟ್ಟಿ ಅವರು ಈ ಮೊದಲೇ ಹೇಳಿದಂತೆ ಅವರದ್ದು ಅತಿಥಿ ಪಾತ್ರ. ಆದರೆ, ಇಡೀ ಸಿನಿಮಾದ ಜೀವಾಳವಾಗಿ ಈ ಪಾತ್ರ ನಿಲ್ಲುತ್ತದೆ. ಅವರು ಕಾಣಿಸಿಕೊಳ್ಳದೆ ಇದ್ದರೂ ಅವರ ಪಾತ್ರದ ಹೆಸರು ಆಗಾಗ ಮೊಳಗಿ, ಮುಂದೆ ಬರಬಹುದಾದ ಪಾತ್ರ ಎಷ್ಟು ತೂಕದ್ದಾಗಿರಬಹುದು ಎಂಬ ಸೂಚನೆಯನ್ನು ನಿರ್ದೇಶಕರು ನೀಡುತ್ತಾರೆ. ಇನ್ನು, ವಿಲನ್ ಪಾತ್ರದಲ್ಲಿ ರಮೇಶ್ ಇಂದಿರಾ ಅವರು ಹೆಚ್ಚು ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ಸಂಪದಾ, ಸುಷ್ಮಿತಾ ಭಟ್, ಗೋವಿಂದೇ ಗೌಡ ಹಾಗೂ ಇತರ ಪಾತ್ರಧಾರಿಗಳು ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಚಿನ್ ಬಸ್ರೂರು ಸಂಗೀತ ಇಷ್ಟ ಆಗುತ್ತದೆ. ಸುಮೇಧ್ ಕೆ ಅವರ ಕಂಪೋಸ್ ಅಲ್ಲಿ ಮೂಡಿ ಬಂದ ‘ಕರ್ಮ’ ಹಾಡು ಸರಿಯಾದ ಸಮಯದಲ್ಲಿ ಬಳಕೆ ಆಗಿದೆ.

ಒಂದು ಪರ್ಫೆಕ್ಟ್ ಸಿನಿಮಾ ತೆಗೆಯೋದು ಕಷ್ಟ. ಹೀಗಾಗಿ, ಈ ಚಿತ್ರದಲ್ಲಿಯೂ ಅಲ್ಲಲ್ಲಿ ಸಣ್ಣ ಪುಟ್ಟ ಮೈನಸ್​​ಗಳಿವೆ. ಉದಾಹರಣೆಗೆ, ಕೆಲವು ದೃಶ್ಯಗಳು ಅರ್ಥವಿಲ್ಲದೆ ಬಂದು ಹೋಗುತ್ತವೆ. ಆ ದೃಶ್ಯಗಳಿಂದ ಕಥೆಯಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಈ ರೀತಿಯ ಸಣ್ಣ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಂಡರೆ ಸಿನಿಮಾ ಇಷ್ಟ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:11 am, Fri, 24 July 26

Source link

TV9 Kannada News Live: ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಕಠಿಣ ಕಾನೂನು ರೂಪಿಸ್ತೇವೆ ಎಂದು ಮೋದಿ ಭರವಸೆ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 24 July 2026 Parliament Monsoon Session, Karnataka Weather, Rain Latest Updates Online

ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಕಠಿಣ ಕಾನೂನು ರೂಪಿಸ್ತೇವೆ ಎಂದು ಮೋದಿ ಭರವಸೆ!

Breaking News Today Live Updates in Kannada: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET) ಪರೀಕ್ಷಾ ಅಕ್ರಮದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂದೇಶ ನೀಡಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರ ವೇದನೆಗೆ ಧ್ವನಿಯಾಗಿದ್ದಾರೆ. ಇನ್ನೊಂದೆಡೆ, ನೀಟ್ ಅಕ್ರಮ ಖಂಡಿಸಿ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಲಡಾಖ್‌ನ ಸೋನಂ ವಾಂಗ್ಚುಕ್, ಕೇಂದ್ರ ಸಚಿವರ ಸಮ್ಮುಖದಲ್ಲಿ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ. ಇತ್ತ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಶಿರಸಿ ಮತ್ತು ಸಿದ್ದಾಪುರ ತಾಲೂಕುಗಳ ಶಾಲೆ-ಅಂಗನವಾಡಿಗಳಿಗೆ ಜಿಲ್ಲಾಧಿಕಾರಿ ರಜೆ ಪ್ರಕಟಿಸಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

ನೀಟ್ ವಿವಾದದ ಬೆನ್ನಲ್ಲೇ ಬಿಗ್ ಆ್ಯಕ್ಷನ್: ಉನ್ನತ ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವಜಾ, ನರೇಶ್ ಗಂಗ್ವಾರ್ ನೂತನ ಕಾರ್ಯದರ್ಶಿಯಾಗಿ ನೇಮಕ – Kannada News | NEET Controversy: Modi Govt Sacks Higher Education Secretary Vineet Joshi, Appoints Naresh Gangwar

ನವದೆಹಲಿ, ಜುಲೈ 24: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET UG) ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP)ಯ ಸುದೀರ್ಘ ಪ್ರತಿಭಟನೆಯ ಬೆನ್ನಲ್ಲೇ, ಕೇಂದ್ರ ಸರ್ಕಾರವು ಐಎಎಸ್ ಅಧಿಕಾರಿಗಳ ಮಟ್ಟದಲ್ಲಿ ಭಾರಿ ಬದಲಾವಣೆ ಮಾಡಿದೆ. ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ವಿನೀತ್ ಜೋಶಿ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲಾಗಿದ್ದು, ಅವರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ನರೇಶ್ ಪಾಲ್ ಗಂಗ್ವಾರ್ ಅವರನ್ನು ನೂತನ ಉನ್ನತ ಶಿಕ್ಷಣ ಕಾರ್ಯದರ್ಶಿಯಾಗಿ ನೇಮಿಸಿ ತಡರಾತ್ರಿ ಆದೇಶ ಹೊರಡಿಸಲಾಗಿದೆ.

ನೂತನ ಕಾರ್ಯದರ್ಶಿ ನರೇಶ್ ಗಂಗ್ವಾರ್ ಯಾರು?

ನರೇಶ್ ಪಾಲ್ ಗಂಗ್ವಾರ್ ಅವರು 1994 ರ ರಾಜಸ್ಥಾನ ಕೇಡರ್‌ನ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿಯಾಗಿದ್ದಾರೆ. ಈ ಹಿಂದೆ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಕಾರ್ಯದರ್ಶಿಯಾಗಿ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ರಾಜಸ್ಥಾನ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿಯೂ ಅವರು ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 1992 ರ ಮಣಿಪುರ ಕೇಡರ್ ಅಧಿಕಾರಿಯಾದ ವಿನೀತ್ ಜೋಶಿ ಅವರನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.

‘ಇದು ಮೋದಿ ಗ್ಯಾರಂಟಿ’: ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಸರ್ಕಾರದ ಈ ನಿರ್ಣಾಯಕ ನಿರ್ಧಾರವನ್ನು ಸ್ವಾಗತಿಸಿರುವ ಬಿಜೆಪಿ ಸಂಸದ ಡಾ. ನಿಶಿಕಾಂತ್ ದುಬೆ, “ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ನಿರ್ಲಕ್ಷ್ಯ ವಹಿಸಿದ ಹಿರಿಯ ಅಧಿಕಾರಿಯನ್ನೇ ಪ್ರಧಾನಿ ಮೋದಿ ಹುದ್ದೆಯಿಂದ ತೆಗೆದುಹಾಕಿದ್ದಾರೆ. ಇದು ‘ಮೋದಿ ಗ್ಯಾರಂಟಿ’. ಪರೀಕ್ಷಾ ಅಕ್ರಮದಲ್ಲಿ ಯಾವುದೇ ಹಂತದ ಅಧಿಕಾರಿಯ ನಿರ್ಲಕ್ಷ್ಯವಿದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ:
ಪ್ರಶ್ನೆಪತ್ರಿಕೆ ಸೋರಿಕೆ ಸಣ್ಣ ವಿಷಯವಲ್ಲ, ಕಠಿಣ ಕಾನೂನು ರೂಪಿಸ್ತೇವೆ: ತಡರಾತ್ರಿ ಸೆಲ್ಫಿ ವಿಡಿಯೋ ಮಾಡಿ ಮೋದಿ ಭರವಸೆ

ಹಿನ್ನೆಲೆ: ಒಂದು ತಿಂಗಳ ಸುದೀರ್ಘ ಪ್ರತಿಭಟನೆ

ನೀಟ್ ಅಕ್ರಮ ಖಂಡಿಸಿ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಜೂನ್ 20 ರಿಂದ ಜಂತರ್ ಮಂತರ್‌ನಲ್ಲಿ ಧರಣಿ ಆರಂಭಿಸಿತು. ಪ್ರಸಿದ್ಧ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಜೂನ್ 28 ರಂದು ಪ್ರತಿಭಟನೆಗೆ ಬೆಂಬಲ ಸೂಚಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಸಿಜೆಪಿ ಹಮ್ಮಿಕೊಂಡಿದ್ದ ಸಂಸತ್ ಭವನದ ಕಡೆಗಿನ ಮೆರವಣಿಗೆಯ ವೇಳೆ ಪೋಲಿಸರು ಮತ್ತು ಪ್ರತಿಭಟನಾಕಾರರ ನಡುವೆ ಭಾರಿ ಘರ್ಷಣೆ ನಡೆದಿತ್ತು.

ದುಬೆ ಪೋಸ್ಟ್​

ಈ ಸುದೀರ್ಘ ಹೋರಾಟ ಹಾಗೂ ಕೇಂದ್ರ ಸರ್ಕಾರದ ಭರವಸೆಗಳ ಬೆನ್ನಲ್ಲೇ ಹಿರಿಯ ಅಧಿಕಾರಿಗಳನ್ನು ಬದಲಾಯಿಸುವ ಮೂಲಕ ಸರ್ಕಾರ ವಿದ್ಯಾರ್ಥಿ ಸಮುದಾಯಕ್ಕೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:06 am, Fri, 24 July 26

Source link

ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತವಲ್ಲ ಎಂದವರಿಗೆ ಹಳೆಯ ಸೀತಾ ಪಾತ್ರಧಾರಿ ತಿರುಗೇಟು – Kannada News | Deepika Chikhalia Reacts to Sai Pallavi Casting as Sita in Nitesh Tiwari Ramayana

ನಿತೇಶ್ ತಿವಾರಿ ನಿರ್ದೇಶನದ ಹೊಸ ‘ರಾಮಾಯಣ’ ಸಿನಿಮಾ ಬರುತ್ತಿದೆ. ಇದರಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಈ ಕಾಸ್ಟಿಂಗ್ ಬಗ್ಗೆ ದೀಪಿಕಾ ಚಿಖಾಲಿಯಾ ಮಾತನಾಡಿದ್ದಾರೆ. ವಿದೇಶಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ರಾಮನಂದ್ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ಸೀತೆಯ ಪಾತ್ರದಲ್ಲಿ ದೀಪಿಕಾ ಚಿಖಾಲಿಯಾ ನಟಿಸಿದ್ದರು.

ಸಾಯಿ ಪಲ್ಲವಿ ಅದ್ಭುತ ನಟಿ

ದೀಪಿಕಾ ಅವರು ಸಾಯಿ ಪಲ್ಲವಿ ನಟನೆಯನ್ನು ಹೊಗಳಿದ್ದಾರೆ. ‘ನಾನು ಸಾಯಿ ಪಲ್ಲವಿ ಅವರ ಸಿನಿಮಾಗಳನ್ನು ನೋಡಿದ್ದೇನೆ. ಅವರು ತುಂಬಾ ಅದ್ಭುತವಾದ ನಟಿ. ಆದರೆ ಅವರು ಸೀತೆಯ ಪಾತ್ರದಲ್ಲಿ ಹೇಗೆ ಕಾಣಿಸುತ್ತಾರೆ ಎಂದು ನನಗೆ ಗೊತ್ತಿಲ್ಲ. ಸಿನಿಮಾದ ಝಲಕ್ ನೋಡಿದ ಮೇಲಷ್ಟೇ ನಮಗೆ ಒಂದು ಕಲ್ಪನೆ ಸಿಗುತ್ತದೆ. ಸದ್ಯಕ್ಕೆ ನನಗೆ ಈ ಬಗ್ಗೆ ಯಾವುದೇ ಕಲ್ಪನೆ ಇಲ್ಲ’ ಎಂದು ದೀಪಿಕಾ ಹೇಳಿದ್ದಾರೆ. ಹೊಸ ಸಿನಿಮಾದ ನಟರೆಲ್ಲರೂ ಪ್ರತಿಭಾವಂತರು. ಅವರು ಪಾತ್ರಕ್ಕೆ ಸೂಕ್ತವಾಗಿ ಹೊಂದಿಕೊಂಡರೆ ಚಿತ್ರ ಚೆನ್ನಾಗಿರಲಿದೆ ಎಂದಿದ್ದಾರೆ.

ರಾಮನಂದ್ ಸಾಗರ್ ಸೀತೆಯನ್ನು ಹುಡುಕಿದ ನೆನಪು

ತುಳಸಿದಾಸರ ರಾಮಾಯಣದಲ್ಲಿ ಸೀತೆಯ ರೂಪದ ಬಗ್ಗೆ ಕೆಲವು ವಿವರಣೆಗಳಿವೆ. ಬಾದಾಮಿ ಆಕಾರದ ಕಣ್ಣುಗಳು ಇರಬೇಕು. ನಿರ್ದಿಷ್ಟ ಎತ್ತರ ಹಾಗೂ ಕೇಶರಾಶಿ ಇರಬೇಕು. ಇಂತಹ ದೈಹಿಕ ಲಕ್ಷಣಗಳುಳ್ಳ ನಟಿಯನ್ನು ರಾಮನಂದ್ ಸಾಗರ್ ಹುಡುಕುತ್ತಿದ್ದರು. ಆ ಲಕ್ಷಣಗಳು ನನ್ನಲ್ಲಿದ್ದವು. ಅದಕ್ಕಾಗಿಯೇ ನನಗೆ ಸೀತೆಯ ಪಾತ್ರ ಸಿಕ್ಕಿತ್ತು ಎಂದು ದೀಪಿಕಾ ನೆನಪಿಸಿಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಪಾತ್ರಗಳ ಕಾಸ್ಟಿಂಗ್ ವಿಭಿನ್ನವಾಗಿರುತ್ತಿದೆ ಎಂದಿದ್ದಾರೆ.

ನಿತೇಶ್ ತಿವಾರಿ ‘ರಾಮಾಯಣ’

ಈ ಹೊಸ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರ ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಳೆಯ ರಾಮಾಯಣದ ‘ರಾಮ’ ಅರುಣ್ ಗೋವಿಲ್ ಅವರು ಈ ಚಿತ್ರದಲ್ಲಿ ದಶರಥ ಮಹಾರಾಜನ ಪಾತ್ರ ಮಾಡುತ್ತಿದ್ದಾರೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿದ್ದಾರೆ. ಈ ಚಿತ್ರದ ಝಲಕ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Source link

‘ರಾಮಾಯಣ’ ಚಿತ್ರಕ್ಕೆ ಎದುರಾಗಿದೆ ದೊಡ್ಡ ಸವಾಲು; ವಿವರಿಸಿದ ಯಶ್ – Kannada News | Yash at San Diego Comic Con: Playing Ravana in Ramayana is a Joy Reveals Key Challenges of the Movie

ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ನಟ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕಾಮಿಕ್ ಕಾನ್‌ ಈವೆಂಟ್​ನಲ್ಲಿ ಯಶ್ ಭಾಗಿ ಆಗಿದ್ದಾರೆ. ಈ ವೇಳೆ ವಿದೇಶದ ಮಾಧ್ಯಮದ ಜೊತೆ ಮಾತನಾಡಿರುವ ಅವರು, ರಾವಣನ ಪಾತ್ರವನ್ನು ಬೆಳ್ಳಿತೆರೆಯ ಮೇಲೆ ತರುವುದು ತಮಗೆ ದೊರೆತ ದೊಡ್ಡ ಸಂತೋಷ ಎಂದು ಹೇಳಿದ್ದಾರೆ.

ಇದರೊಂದಿಗೆ ಚಿತ್ರದ ಸವಾಲುಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ರಾಮಾಯಣ ಪ್ರತಿಯೊಬ್ಬರಿಗೂ ತಿಳಿದಿರುವ ಕಥೆ. ಈ ಕಥೆಯನ್ನು ಈಗಾಗಲೇ ಹಳ್ಳಿಗಳ ಪುಟ್ಟ ನಾಟಕಗಳಿಂದ ಹಿಡಿದು ಟೆಲಿವಿಷನ್, ವಿವಿಧ ಭಾಷೆಗಳ ಸಿನಿಮಾಗಳವರೆಗೆ ಹಲವು ರೀತಿಯಲ್ಲಿ ಹೇಳಲಾಗಿದೆ. ಎಷ್ಟೋ ಜನರು ಈ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹೀಗಿರುವಾಗ, ಈ ಚಿತ್ರದಲ್ಲಿ ಅದನ್ನು ಒಂದು ವಿಭಿನ್ನ ಹಾಗೂ ವಿಶಿಷ್ಟ ಶೈಲಿಯಲ್ಲಿ ಪ್ರಸ್ತುತಪಡಿಸುವುದು ಮತ್ತು ಅದು ಅಷ್ಟೇ ನೈಜವಾಗಿ ಕಾಣಿಸುವಂತೆ ಮಾಡುವುದು ನಮಗೆ ಇದ್ದ ದೊಡ್ಡ ಸವಾಲಾಗಿತ್ತು’ ಎಂದು ಯಶ್ ವಿವರಿಸಿದ್ದಾರೆ. ಪ್ರೇಕ್ಷಕರಿಗೆ ತುಂಬಾ ರೋಮಾಂಚನ ನೀಡುವಂತಹ ವಿಭಿನ್ನ ಪ್ರಯತ್ನವನ್ನು ತಾವು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ಚಿತ್ರದ ಸಹ-ನಿರ್ಮಾಪಕರೂ ಹೌದು

ಯಶ್ ಈ ಚಿತ್ರಕ್ಕೆ ಕೇವಲ ನಟರಷ್ಟೇ ಅಲ್ಲದೆ, ನಮಿತ್ ಮಲ್ಹೋತ್ರಾ ಅವರೊಂದಿಗೆ ಸಹ-ನಿರ್ಮಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವುದು ತಮ್ಮ ಮತ್ತು ನಮಿತ್ ಅವರ ಕನಸಾಗಿದ್ದು, ಈ ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗ ಹೆಮ್ಮೆ ಪಡುವಂತಹ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ರಾಮಾಯಣದ ಮಹತ್ವ

ರಾಮಾಯಣ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾ ಹಾಗೂ ವಿಶ್ವದ ಹಲವು ದೇಶಗಳಲ್ಲಿ ಸಾಂಸ್ಕೃತಿಕವಾಗಿ ಆಳವಾಗಿ ಬೇರೂರಿದೆ. ಮಾನವ ಜೀವನದ ದೈನಂದಿನ ಗೊಂದಲಗಳು, ತಪ್ಪು-ಒಪ್ಪುಗಳ ನಡುವಿನ ಸಂಘರ್ಷ ಹಾಗೂ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸುತ್ತವೆ ಎಂಬ ಆಳವಾದ ಜೀವನದ ಸತ್ಯವನ್ನು ರಾಮಾಯಣವು ಅತ್ಯಂತ ಸರಳವಾಗಿ ಮತ್ತು ಭವ್ಯವಾಗಿ ಹೇಳುತ್ತದೆ ಎಂದು ಯಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೊನೆಯ ಕ್ಷಣದಲ್ಲಿ ‘ರಾಮಾಯಣ’ ಟ್ರೇಲರ್ ರಿಲೀಸ್ ರದ್ದು; ಕಾರಣ ಕೊಟ್ಟ ನಮಿತ್ ಮಲ್ಹೋತ್ರಾ

ನಮಿತ್ ಮಲ್ಹೋತ್ರಾ ನಿರ್ಮಾಣದ ಈ ‘ರಾಮಾಯಣ’ ಚಿತ್ರವು ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಮೂಡಿಬರಲಿದೆ. ಈ ಚಿತ್ರ ದೀಪಾವಳಿಗೆ ರಿಲೀಸ್ ಆಗಲಿದೆ.

ಪ್ರಶ್ನೆ: ರಾಮಾಯಣ ರಿಲೀಸ್ ಯಾವಾಗ?
ಉತ್ತರ: 
ದೀಪಾವಳಿ

ಪ್ರಶ್ನೆ: ರಾಮಾಯಣ ಟ್ರೇಲರ್ ಯಾವಾಗ ರಿಲೀಸ್ ಆಗಬೇಕಿತ್ತು?
ಉತ್ತರ:
ಜುಲೈ 24

ಪ್ರಶ್ನೆ: ರಾಮಾಯಣ ಟ್ರೇಲರ್ ರದ್ದಿಗೆ ಕಾರಣ ಏನು?
ಉತ್ತರ:
ಹೊಸ ಒಪ್ಪಂದವೇ ಕಾರಣ

Source link

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸಿ: ಸಿಜೆಪಿ ಒತ್ತಾಯ, ಪ್ರತಿಭಟನೆ ಮುಂದುವರಿಕೆ – Kannada News | NEET Scam: CJP Demands Education Minister Pradhan’s Sacking; Wangchuk Ends Fast

ನವದೆಹಲಿ, ಜುಲೈ 24: ನೀಟ್ ಪರೀಕ್ಷಾ ಅಕ್ರಮ ಮತ್ತು ಪೇಪರ್ ಸೋರಿಕೆ ತಡೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮಸೂದೆ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ(Narendra Modi) ನೀಡಿರುವ ಹೇಳಿಕೆಗೆ ಕಾಕ್ರೋಚ್ ಜನತಾ ಪಾರ್ಟಿ (CJP) ತೀವ್ರ ತಿರುಗೇಟು ನೀಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನೀವು ತೆಗೆದುಕೊಳ್ಳಬಹುದಾದ ಅತ್ಯಂತ ಕಠಿಣ ಹಾಗೂ ಪ್ರಮುಖ ಕ್ರಮ ಎಂದರೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಂಪುಟದಿಂದ ತಕ್ಷಣವೇ ತೆಗೆದುಹಾಕುವುದು ಎಂದು ಸಿಜೆಪಿ ರಾಷ್ಟ್ರೀಯ ವಕ್ತಾರ ಅಶುತೋಷ್ ರಾಂಕಾ ಸವಾಲೆಸೆದಿದ್ದಾರೆ.

ಇನ್ನೊಂದೆಡೆ, ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಪ್ರಧಾನಿಯವರ ಘೋಷಣೆಯನ್ನು ವ್ಯಂಗ್ಯವಾಡಿದ್ದು, ಕಾಂಪೌಂಡ್ ಇಲ್ಲದೆ ದ್ವಾರಕ್ಕೆ ಬಾಗಿಲು ಹಾಕಿ ಬೀಗ ಜಡಿಯುತ್ತಿರುವ” ಚಿತ್ರವನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಳ್ಳುವ ಮೂಲಕ ಪ್ರಸ್ತಾವಿತ ಮಸೂದೆಯನ್ನು ಟೀಕಿಸಿದ್ದಾರೆ.

26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಸೋನಮ್ ವಾಂಗ್ಚುಕ್
ಮತ್ತೊಂದೆಡೆ, ರಾಷ್ಟ್ರ ರಾಜಧಾನಿಯಲ್ಲಿ ಕಳೆದ 26 ದಿನಗಳಿಂದ ನಡೆಯುತ್ತಿದ್ದ ಬಿಗುವಿನ ವಾತಾವರಣ ಶಮನಗೊಳ್ಳುವ ಮುನ್ಸೂಚನೆ ಸಿಕ್ಕಿದೆ. ಕೇಂದ್ರ ಸರ್ಕಾರವು ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಬೆನ್ನಲ್ಲೇ, ಖ್ಯಾತ ಪರಿಸರ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಮ್  ಅವರು ಗುರುವಾರ ಮಧ್ಯರಾತ್ರಿ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.

ಮತ್ತಷ್ಟು ಓದಿ: ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಕಾನೂನು: ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಅಂತ್ಯ

ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಂಗ್‌ಚುಕ್ ಅವರನ್ನು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಡಾ. ಜಿತೇಂದ್ರ ಸಿಂಗ್ ಹಾಗೂ ಲೇಹ್-ಲಡಾಖ್ ಅಪೆಕ್ಸ್ ಬಾಡಿಯ ಹಿರಿಯ ನಾಯಕರು ಭೇಟಿ ಮಾಡಿ ಸರ್ಕಾರದ ಭರವಸೆಯ ಪತ್ರವನ್ನು ಹಸ್ತಾಂತರಿಸಿದರು.

ಪ್ರತಿಭಟನಾಕಾರರಿಗೆ ಸರ್ಕಾರ ನೀಡಿದ ಪ್ರಮುಖ ಭರವಸೆಗಳು

ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹಾಗೂ ಜುಲೈ 20 ರಂದು ನಡೆದ ‘ಸಂಸತ್ ಚಲೋ’ ಮೆರವಣಿಗೆಯ ವೇಳೆ ಪೊಲೀಸರು ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಸಕಾರಾತ್ಮಕವಾಗಿದೆ ಎಂದು ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ನಡೆಯುತ್ತಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪರೀಕ್ಷಾ ಸುಧಾರಣೆಗಳು ಹಾಗೂ ಪೇಪರ್ ಸೋರಿಕೆ ಕುರಿತು ಸಮಗ್ರ ಚರ್ಚೆಗೆ ಅವಕಾಶ ನೀಡಲಾಗುವುದು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಆಘಾತದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಆರ್ಥಿಕ ಪರಿಹಾರ ನೀಡುವುದನ್ನು ಸರ್ಕಾರ ಪರಿಗಣಿಸಲಿದೆ.

ವಾಂಗ್‌ಚುಕ್ ಆರೋಗ್ಯಕ್ಕೆ ಪ್ರಧಾನಿ ಮೋದಿ ಹಾರೈಕೆ

ಸೋನಮ್  ಅವರು ಉಪವಾಸ ಹಿಂಪಡೆದ ತಕ್ಷಣವೇ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ವೈದ್ಯರ ಸಲಹೆಯಂತೆ ಸೋನಮ್‌ ಜಿ ಅವರು ತಮ್ಮ ದೈನಂದಿನ ಆಹಾರ ಕ್ರಮವನ್ನು ಅನುಸರಿಸಿ, ಶೀಘ್ರವೇ ತಮ್ಮ ದೇಹದ ತೂಕ ಮತ್ತು ಆರೋಗ್ಯವನ್ನು ಮರಳಿ ಪಡೆಯಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹಾರೈಸಿದ್ದಾರೆ.

ತಮ್ಮ ಹೋರಾಟಕ್ಕೆ ದೇಶಾದ್ಯಂತ 65 ಕ್ಕೂ ಹೆಚ್ಚು ಸಂಸದರು ಹಾಗೂ ಸಾರ್ವಜನಿಕರು ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿರುವ ಸೋನಮ್ , “ಯಾರೂ ಕೂಡ ಯಾವುದೇ ರೀತಿಯ ಹಿಂಸಾಚಾರಕ್ಕೆ ಅವಕಾಶ ನೀಡಬಾರದು” ಎಂದು ವಿದ್ಯಾರ್ಥಿ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version