ಪಾಲ್ಘರ್‌ನ ಧಾಮಣಿ ಡ್ಯಾಂನ 5 ಗೇಟ್ ಓಪನ್; ಧುಮ್ಮುಕ್ಕುವ ನೀರಿನ ರೌದ್ರಾವತಾರ ನೋಡಿ – Kannada News | Heavy rainfall continues in Palghar Dhamni Dam 5 gates opened Watch Video

ಪಾಲ್ಘರ್‌, ಜುಲೈ 23: ಮಹಾರಾಷ್ಟ್ರದ ಪಾಲ್ಘರ್‌ (Palghar Dam) ಜಿಲ್ಲೆಯಾದ್ಯಂತ ಭಾರಿ ಮಳೆ ಮುಂದುವರಿದಿದ್ದು, ಜಲಾಶಯಗಳು ಸಂಪೂರ್ಣ ಭರ್ತಿಯಾಗಿ ಹರಿಯುತ್ತಿವೆ. ಸೂರ್ಯ ಯೋಜನೆಯಡಿ ಬರುವ ಧಾಮಣಿ ಅಣೆಕಟ್ಟಿನ 5 ಗೇಟ್‌ಗಳನ್ನು 75 ಸೆಂಟಿಮೀಟರ್‌ಗಳಷ್ಟು ತೆರೆಯಲಾಗಿದ್ದು, ಅಪಾರ ಪ್ರಮಾಣದ ನೀರನ್ನು ಸೂರ್ಯ ನದಿಗೆ ಹರಿಸಲಾಗುತ್ತಿದೆ. ಧಾಮಣಿ ಅಣೆಕಟ್ಟು ಹಾಗೂ ಕವಡಾಸ್ ಪಿಕಪ್ ವೆಯರ್ ಜಲಾಶಯಗಳಿಂದ ಒಟ್ಟಾರೆಯಾಗಿ 37,303 ಕ್ಯೂಸೆಕ್ ನೀರನ್ನು ಸೂರ್ಯ ನದಿಗೆ ಬಿಡಲಾಗುತ್ತಿದೆ. ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸೂರ್ಯ ನದಿ ಪಾತ್ರದ ದಂಡೆಯ ಮೇಲಿರುವ ಹಳ್ಳಿಗಳಿಗೆ ಜಿಲ್ಲಾಡಳಿತ ಹಾಗೂ ವಿಪತ್ತು ನಿರ್ವಹಣಾ ತಂಡವು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಿದೆ. ನದಿ ತೀರಕ್ಕೆ ಜನರು ತೆರಳದಂತೆ ಸೂಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿಭಟನೆ ಬಗ್ಗೆ ಸುಳ್ಳು ಸುದ್ದಿ ಪ್ರಸಾರ; ಪಾಕಿಸ್ತಾನ ಮೂಲದ 480 ಖಾತೆಗಳಿಗೆ ದೆಹಲಿ ಪೊಲೀಸ್ ನಿರ್ಬಂಧ – Kannada News | Delhi Police blocked 480 Pakistan based Social Media handles for spreading Fake News on student protests

ನವದೆಹಲಿ, ಜುಲೈ 23: ಭಾರತದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ನಡುವೆಯೇ ದೆಹಲಿ ಪೊಲೀಸರು (Delhi Police) ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಪ್ರತಿಭಟನೆಗೆ ಸಂಬಂಧಿಸಿದಂತೆ ಸುಳ್ಳು ಮತ್ತು ದಾರಿ ತಪ್ಪಿಸುವ ಮಾಹಿತಿಯನ್ನು ಹರಡುತ್ತಿದ್ದ ಪಾಕಿಸ್ತಾನ ಮೂಲದ ಸುಮಾರು 480 ಸಾಮಾಜಿಕ ಜಾಲತಾಣದ ಖಾತೆಗಳನ್ನು ಗುರುತಿಸಿ ನಿರ್ಬಂಧ ಹೇರಿದ್ದಾರೆ.

ಭಾರತದ ಪ್ರಸ್ತುತ ಸ್ಥಿತಿಗತಿಯ ಲಾಭ ಪಡೆಯಲು ಈ ಖಾತೆಗಳು ವದಂತಿಗಳನ್ನು ಹರಡುತ್ತಿವೆ ಎಂದು ಪೊಲೀಸರು ತಿಳಿಸಿದ್ದು, ಪರಿಶೀಲಿಸದೆ ಯಾವುದೇ ಮಾಹಿತಿಯನ್ನು ನಂಬಬೇಡಿ ಎಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ದೆಹಲಿ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದ್ದು, ಇದರಲ್ಲಿ ಪಾಕಿಸ್ತಾನ ಮೂಲದ ಹಲವು ಖಾತೆಗಳು ಭಾಗಿಯಾಗಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ; ಗಾಂಧಿ ಸ್ಮೃತಿಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸದರ ಮೆರವಣಿಗೆ

“ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಪರಿಸ್ಥಿತಿಯ ದುರ್ಲಾಭ ಪಡೆದು ಸುಳ್ಳು ವಿಷಯಗಳು ಹಾಗೂ ವದಂತಿಗಳನ್ನು ಹರಡುತ್ತಿದ್ದ 400ಕ್ಕೂ ಹೆಚ್ಚು ಪಾಕಿಸ್ತಾನಿ ಜಾಲತಾಣದ ಖಾತೆಗಳನ್ನು ಇದುವರೆಗೆ ಗುರುತಿಸಲಾಗಿದೆ. ಅವುಗಳನ್ನು ನಿರ್ಬಂಧಿಸಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ನಡೆದ ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಸಕ್ರಿಯವಾಗಿದ್ದ ಅದೇ ಖಾತೆಗಳೇ ಈಗಲೂ ಸುಳ್ಳು ಸುದ್ದಿ ಹರಡಲು ಮುಂದಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಜನರನ್ನು ಪ್ರಚೋದಿಸುವುದು ಮತ್ತು ಪ್ರತಿಭಟನೆಯ ನಡುವೆ ವಿದ್ಯಾರ್ಥಿಗಳ ಗಮನವನ್ನು ಬೇರೆಡೆಗೆ ಸೆಳೆಯುವುದೇ ಈ ಖಾತೆಗಳ ಮುಖ್ಯ ಉದ್ದೇಶವಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಭರವಸೆಗೂ ಒಪ್ಪದ ಸಿಜೆಪಿ; ನಾಳೆ ದೇಶಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ

“ಜನರನ್ನು ಪ್ರಚೋದಿಸುವುದು ಮತ್ತು ಮುಖ್ಯವಾಗಿ ವಿದ್ಯಾರ್ಥಿಗಳನ್ನು ಹಾದಿತಪ್ಪಿಸುವುದು ಒಂದೇ ಇವರ ಮುಖ್ಯ ಉದ್ದೇಶವಾಗಿದೆ. ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ, ಅನಾಮಧೇಯ ಖಾತೆಗಳು ಹಂಚಿಕೊಳ್ಳುವ ಯಾವುದೇ ನಕಲಿ ಪೋಸ್ಟ್‌ಗಳು, ಎಡಿಟ್ ಮಾಡಿದ ವೀಡಿಯೊಗಳು ಅಥವಾ ಸುಳ್ಳು ಸುದ್ದಿಗಳಿಗೆ ಪ್ರಚೋದಿತರಾಗಬೇಡಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ” ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ವಿನಂತಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಲುಗಳಲ್ಲಿ ಮತ್ತೆ ಮತ್ತೆ ಊತ ಕಾಣಿಸುತ್ತಿದೆಯೇ? ಇದು ಕೆಲವು ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು! – Kannada News | Leg Swelling Explained: Heart, Kidney and Liver Diseases You Shouldn’t Ignore

ದಿನವಿಡೀ ನಿಂತು ಕೆಲಸ ಮಾಡುವುದು, ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಅಥವಾ ಹೆಚ್ಚು ನಡೆಯುವುದು ಮುಂತಾದ ಕಾರಣಗಳಿಂದ ಕೆಲವರಿಗೆ ಕಾಲುಗಳಲ್ಲಿ ಊತ (Leg Swelling) ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಈ ಊತ ಆಗಾಗ ಕಾಣಿಸಿಕೊಳ್ಳುತ್ತಿದ್ದರೆ ಅಥವಾ ಹಲವು ದಿನಗಳವರೆಗೆ ಕಡಿಮೆಯಾಗದಿದ್ದರೆ ಅದನ್ನು ನಿರ್ಲಕ್ಷಿಸುವುದು ಅಪಾಯಕಾರಿ. ಕೆಲವೊಮ್ಮೆ ಇದು ಕೇವಲ ಜೀವನಶೈಲಿಯ ಪರಿಣಾಮವಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ಹೃದಯ, ಕಿಡ್ನಿ, ಲಿವರ್ ಅಥವಾ ರಕ್ತನಾಳಗಳ ಸಮಸ್ಯೆಯ ಲಕ್ಷಣವೂ ಆಗಿರಬಹುದು. ಅದರಲ್ಲಿಯೂ ಒಂದು ಕಾಲಿನಲ್ಲಿ ಮಾತ್ರ ಊತ, ತೀವ್ರ ನೋವು, ಕೆಂಪಾಗುವುದು, ಉಸಿರಾಟದ ತೊಂದರೆ ಅಥವಾ ಎದೆನೋವು ಜೊತೆಯಾಗಿ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಕಾಲುಗಳಲ್ಲಿ ಪದೇ ಪದೇ ಊತಕ್ಕೆ ಕಾರಣವಾಗುವ ಆರೋಗ್ಯ ಸಮಸ್ಯೆಗಳು;

ಹೃದಯ ವೈಫಲ್ಯ (Heart Failure): ಹೃದಯವು ರಕ್ತವನ್ನು ಸಮರ್ಪಕವಾಗಿ ಪಂಪ್ ಮಾಡಲು ವಿಫಲವಾದಾಗ ಕಾಲು ಮತ್ತು ಕಣಕಾಲುಗಳಲ್ಲಿ ದ್ರವ (Fluid) ಸಂಗ್ರಹವಾಗಿ ಊತ ಉಂಟಾಗಬಹುದು. ಇದು ಸಾಮಾನ್ಯವಾಗಿ ಎರಡೂ ಕಾಲುಗಳಲ್ಲಿ ಕಂಡುಬರುತ್ತದೆ.

ಕಿಡ್ನಿ ಕಾಯಿಲೆ (Kidney Disease): ಮೂತ್ರಪಿಂಡಗಳು ದೇಹದಲ್ಲಿನ ಹೆಚ್ಚುವರಿ ನೀರು ಮತ್ತು ಉಪ್ಪನ್ನು ಸರಿಯಾಗಿ ಹೊರಹಾಕಲು ಸಾಧ್ಯವಾಗದಿದ್ದರೆ ದೇಹದಲ್ಲಿ ದ್ರವ ಸಂಗ್ರಹವಾಗಿ ಕಾಲುಗಳಲ್ಲಿ ಊತ ಉಂಟಾಗುತ್ತದೆ.

ಲಿವರ್ ಕಾಯಿಲೆ (Liver Disease): ಸಾಮಾನ್ಯವಾಗಿ ಲಿವರ್ ಸಮಸ್ಯೆಯಿಂದ ದೇಹದಲ್ಲಿ ಆಲ್ಬ್ಯುಮಿನ್ (Albumin) ಎಂಬ ಪ್ರೋಟೀನ್ ಪ್ರಮಾಣ ಕಡಿಮೆಯಾಗಬಹುದು. ಇದರಿಂದ ದ್ರವ ಸಮತೋಲನ ಹದಗೆಟ್ಟು ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ.

ರಕ್ತನಾಳಗಳ ಸಮಸ್ಯೆ (Venous Insufficiency): ಕಾಲಿನ ರಕ್ತನಾಳಗಳು ರಕ್ತವನ್ನು ಹೃದಯದತ್ತ ಸರಿಯಾಗಿ ಸಾಗಿಸಲು ವಿಫಲವಾದರೆ ರಕ್ತ ಕಾಲುಗಳಲ್ಲಿ ಸಂಗ್ರಹವಾಗಿ ಊತ, ಭಾರವಾದ ಅನುಭವ ಮತ್ತು ನೋವು ಉಂಟಾಗಬಹುದು.

ರಕ್ತ ಹೆಪ್ಪುಗಟ್ಟುವಿಕೆ (Deep Vein Thrombosis – DVT): ಒಂದು ಕಾಲಿನಲ್ಲಿ ಹಠಾತ್ ಊತ, ತೀವ್ರ ನೋವು, ಕೆಂಪಾಗುವುದು ಮತ್ತು ಬಿಸಿಯಾಗಿರುವ ಅನುಭವ ಕಂಡುಬಂದರೆ ಅದು DVT ಆಗಿರಬಹುದು. ಇದು ತುರ್ತು ವೈದ್ಯಕೀಯ ಪರಿಸ್ಥಿತಿಯಾಗಿದ್ದು ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಗರ್ಭಾವಸ್ಥೆ (Pregnancy): ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ದೇಹದಲ್ಲಿ ದ್ರವ ಪ್ರಮಾಣ ಹೆಚ್ಚಾಗುವುದರಿಂದ ಕಾಲುಗಳಲ್ಲಿ ಊತ ಕಾಣಿಸಬಹುದು. ಆದರೆ ತೀವ್ರ ಊತ, ತಲೆನೋವು ಅಥವಾ ರಕ್ತದೊತ್ತಡ ಹೆಚ್ಚಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

ಕಾಲಿನಲ್ಲಿ ಊತ ಇದ್ದರೆ ವೈದ್ಯರು ಯಾವ ಪರೀಕ್ಷೆಗಳನ್ನು ಸೂಚಿಸಬಹುದು?

  • Complete Blood Count (CBC)
  • ಮೂತ್ರ ಪರೀಕ್ಷೆ (Urine Test)
  • ಕಿಡ್ನಿ ಕಾರ್ಯಪರೀಕ್ಷೆ (Kidney Function Test)
  • ಲಿವರ್ ಕಾರ್ಯಪರೀಕ್ಷೆ (Liver Function Test)
  • ECG
  • Echocardiography
  • ಕಾಲಿನ ರಕ್ತನಾಳಗಳ ಡಾಪ್ಲರ್ ಅಲ್ಟ್ರಾಸೌಂಡ್ (Venous Doppler Ultrasound)
  • ರಕ್ತದೊತ್ತಡ ಪರೀಕ್ಷೆ
  • ಥೈರಾಯ್ಡ್ ಪರೀಕ್ಷೆ (ಅಗತ್ಯವಿದ್ದರೆ)

ಕಾಲುಗಳ ಊತ ಕಡಿಮೆ ಮಾಡಲು ಏನು ಮಾಡಬೇಕು?

  • ಕಾಲುಗಳನ್ನು ಹೃದಯದ ಮಟ್ಟಕ್ಕಿಂತ ಸ್ವಲ್ಪ ಎತ್ತರದಲ್ಲಿ ಇಟ್ಟು ವಿಶ್ರಾಂತಿ ಪಡೆಯಿರಿ.
  • ಹೆಚ್ಚು ಹೊತ್ತು ನಿಲ್ಲುವುದು ಅಥವಾ ಕುಳಿತುಕೊಳ್ಳುವುದನ್ನು ತಪ್ಪಿಸಿ.
  • ಪ್ರತೀ ಒಂದು ಗಂಟೆಗೆ ಸ್ವಲ್ಪ ನಡೆಯಿರಿ.
  • ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ.
  • ಸಾಕಷ್ಟು ನೀರು ಕುಡಿಯಿರಿ.
  • ಆರಾಮದಾಯಕ ಪಾದರಕ್ಷೆ ಧರಿಸಿ.
  • ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ Compression Stockings ಬಳಸಿ.
  • ಸ್ವಯಂ ಔಷಧಿ ಸೇವನೆ ಮಾಡಬೇಡಿ.

ಯಾವಾಗ ತಕ್ಷಣ ಆಸ್ಪತ್ರೆಗೆ ಹೋಗಬೇಕು?

  • ಕಾಲಿನಲ್ಲಿ ಹಠಾತ್ ಊತ
  • ತೀವ್ರ ನೋವು
  • ಚರ್ಮ ಕೆಂಪಾಗುವುದು
  • ಉಸಿರಾಟದ ತೊಂದರೆ
  • ಎದೆನೋವು
  • ಜ್ವರದೊಂದಿಗೆ ಊತ
  • ಊತದ ಜೊತೆಗೆ ತೂಕ ವೇಗವಾಗಿ ಹೆಚ್ಚಾಗುವುದು

ಯಾವ ಆಹಾರಗಳು ಸಹಕಾರಿ?

  • ಬಾಳೆಹಣ್ಣು
  • ಸೌತೆಕಾಯಿ
  • ಕಲ್ಲಂಗಡಿ
  • ಕಿತ್ತಳೆ
  • ಪಾಲಕ್
  • ಕಡಿಮೆ ಉಪ್ಪಿನ ಆಹಾರ
  • ಸಾಕಷ್ಟು ನೀರು
  • ಪೊಟ್ಯಾಸಿಯಂ ಇರುವ ಆಹಾರಗಳು

ಯಾವ ಅಭ್ಯಾಸಗಳು ಕಾಲು ಊತದ ಅಪಾಯ ಕಡಿಮೆ ಮಾಡುತ್ತವೆ?

  • ಪ್ರತಿದಿನ 30 ನಿಮಿಷ ನಡೆದು ಬನ್ನಿ.
  • ತೂಕ ನಿಯಂತ್ರಣದಲ್ಲಿ ಇಡಿ.
  • ಧೂಮಪಾನ ಮತ್ತು ಮದ್ಯಪಾನ ತಪ್ಪಿಸಿ.
  • ದೀರ್ಘ ಪ್ರಯಾಣದ ವೇಳೆ ಮಧ್ಯೆ ಮಧ್ಯೆ ಎದ್ದು ನಡೆಯಿರಿ.
  • ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡಿ.

ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಡ್ಡದಾರಿ ಹುಡುಕುವ ಮನೋಭಾವ ಬೇಡ’; ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಸಚಿನ್ ತೆಂಡಲ್ಕೂರ್ ಹೇಳಿಕೆ – Kannada News | NEET Paper Leak: Sachin Tendulkar Breaks Silence, Urges Integrity and Protects Student Futures

ನೀಟ್ ಪರೀಕ್ಷೆಯ (NEET exam) ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಪ್ರಸ್ತುತ ದೇಶಾದ್ಯಂತ ಕೋಲಾಹಲ ಸೃಷ್ಟಿಯಾಗಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಳೆದ ಹಲವು ದಿನಗಳಿಂದ ರಾಜಧಾನಿ ನವದೆಹಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಈ ಪ್ರತಿಭಟನೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಹಿಂಸಾಚಾರವಾಗಿ ಮಾರ್ಪಟ್ಟಿದೆ, ಇದು ಈಗ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ದೇಶದಾದ್ಯಂತ ಪರ ವಿರೋಧದ ಹೇಳಿಕೆಗಳು ಹೊರಬರುತ್ತಿವೆ. ಈ ನಡುವೆ ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಈಗ ಈ ವಿಷಯದ ಬಗ್ಗೆ ಮೌನ ಮುರಿದಿದ್ದು, ತಮ್ಮ ತಂದೆಯಿಂದ ಕಲಿತ ಪಾಠಗಳನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದ್ದಾರೆ.

ಮೋಸ ಮಾಡುವುದು ತಪ್ಪು

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿನ್ ತೆಂಡಲ್ಕೂರ್, ‘ನನ್ನ ತಂದೆ ಪ್ರಾಧ್ಯಾಪಕರು, ಅನೇಕರಿಗೆ ಮಾರ್ಗದರ್ಶಕರಾಗಿದ್ರು. ಬಾಲ್ಯದಲ್ಲೇ ನನ್ನ ತಂದೆ ಅಮೂಲ್ಯ ಜೀವನ ಪಾಠ ಕಲಿಸಿದ್ದಾರೆ. ವಿಫಲತೆ ತಪ್ಪಲ್ಲ ಆದರೆ, ಮೋಸ ಮಾಡುವುದು ತಪ್ಪು. ಎಂದೂ ಅಡ್ಡದಾರಿ ಹಿಡಿಯಬೇಡ ಎಂದು ನನ್ನ ತಂದೆ ಹೇಳಿದ್ರು. ಸಮಾಜದ ಸಂಸ್ಕೃತಿ ರೂಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಫಲಕ್ಕಿಂತ ಶ್ರಮಕ್ಕೆ ಗೌರವ ನೀಡುವ ಸಮಾಜ ನಮಗೆ ಬೇಕು. ಅರ್ಹತೆಗಿಂತ ಅಡ್ಡದಾರಿ ಹುಡುಕುವ ಮನೋಭಾವ ಬೇಡ.

ಬಂಧುಗಳ ಬೆಂಬಲ ಕೂಡ ಅಗತ್ಯ

ವಿದ್ಯಾರ್ಥಿಗಳ ನಿರಾಶೆ ಸಹಜ. ಶ್ರಮಕ್ಕೆ ಫಲ ಸಿಗದಿದ್ದಾಗ ಆಗುವ ನೋವು ಅರ್ಥವಾಗುತ್ತೆ. ಈ ನಿರಾಶೆ ಮತ್ತೆ ಬರದಂತೆ ನೋಡಿಕೊಳ್ಳಬೇಕು.​​ ಇದಕ್ಕಾಗಿ ಎಲ್ಲರೂ ಕೂಡಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಯುವ ಭಾರತ ಕನಸು ಮತ್ತು ಉತ್ಸಾಹದಿಂದ ತುಂಬಿದೆ ಯುವಕರೇ ದೇಶದ ಯಶಸ್ಸಿನ ನಿಜವಾದ ಶಕ್ತಿ. ​​ಯುವಕರಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಜವಾಬ್ದಾರಿ. ಪೋಷಕರದ್ದು ಹಾಗೂ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಸ್ನೇಹಿತರು, ಬಂಧುಗಳ ಬೆಂಬಲ ಕೂಡ ಅಗತ್ಯ.

ನೀಟ್​ ಅಕ್ರಮ; ಮಹತ್ವದ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ

ಯುವಕರು ಸದಾ ಉತ್ಸಾಹದಿಂದಿರಲು ಪ್ರೋತ್ಸಾಹಿಸಬೇಕು. ಕಠಿಣ ಪರಿಶ್ರಮಕ್ಕೆ ಯೋಗ್ಯ ಗೌರವ ಸಿಗಬೇಕು. ​ಪ್ರಾಮಾಣಿಕತೆ ಪ್ರೋತ್ಸಾಹಿಸುವ ಸಮಾಜ ನಿರ್ಮಿಸಬೇಕು. ಅಂತಿಮವಾಗಿ ಅರ್ಹತೆಯೇ ಗೆಲ್ಲುವಂತಹ ವ್ಯವಸ್ಥೆ ಬೇಕು. ಮಕ್ಕಳ ಭವಿಷ್ಯವನ್ನು ಇನ್ನಷ್ಟು ಬಲಪಡಿಸಬೇಕು, ಮಕ್ಕಳ ಕನಸುಗಳು ಮತ್ತು ಆಶಯಗಳನ್ನು ರಕ್ಷಿಸಬೇಕಿದೆ. ಎಲ್ಲರೂ ಸೇರಿ ಶಾಶ್ವತವಾದ ಪರಿಹಾರ ಕಂಡುಕೊಳ್ಳೋಣ ಜೈ ಹಿಂದ್ ಎಂದು ಪೋಸ್ಟ್​ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:24 pm, Thu, 23 July 26

Source link

2024ರ ನೀಟ್ -ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ಸಂಜೀವ್ ಮುಖಿಯಾಗೆ ಸಿಬಿಐನಿಂದ ಕ್ಲೀನ್​ಚಿಟ್ – Kannada News | No evidence CBI Gives Clean Chit To Sanjeev Mukhiya In NEET UG 2024 Paper Theft and Leak Case

ನವದೆಹಲಿ, ಜುಲೈ 23: ನೀಟ್-ಯುಜಿ (NEET-UG) 2024ರ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಂಜೀವ್ ಕುಮಾರ್ ಅಲಿಯಾಸ್ ಸಂಜೀವ್ ಮುಖಿಯಾ ಅವರ ಪಾತ್ರಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಸ್ಪಷ್ಟನೆ ನೀಡಿದೆ. ಸುದೀರ್ಘ ಹಾಗೂ ಸಮಗ್ರ ತನಿಖೆಯ ನಂತರ ಈ ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಸಿಬಿಐ ಖಚಿತಪಡಿಸಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಸಂಜೀವ್ ಮುಖಿಯಾಗೆ ಕ್ಲೀನ್​ಚಿಟ್ ನೀಡಲಾಗಿದೆ.

2024ರ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಂಜೀವ್ ಮುಖಿಯಾ ಅವರ ಹೆಸರನ್ನು ಚಾರ್ಜ್​ಶೀಟ್​​ನಿಂದ ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಿಬಿಐ, ಈ ವದಂತಿಗಳು ಸತ್ಯಕ್ಕೆ ದೂರವಾದವು ಎಂದು ತಿಳಿಸಿದೆ. ಅಲ್ಲದೆ, ಪೇಪರ್ ಲೀಕ್ ಪ್ರಕರಣದಲ್ಲಿದ್ದ ಸಂಪೂರ್ಣ ಜಾಲವನ್ನು ಈಗಾಗಲೇ ಗುರುತಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಯಾವುದೇ ಸಾಕ್ಷ್ಯಾಧಾರವಿಲ್ಲ:

ದೇಶಾದ್ಯಂತ ನಡೆಸಿದ ತನಿಖೆಯಲ್ಲಿ ನೀಟ್-ಯುಜಿ 2024ರ ಪೇಪರ್ ಲೀಕ್ ಅಥವಾ ವಿತರಣೆಯಲ್ಲಿ ಸಂಜೀವ್ ಮುಖಿಯಾ ಭಾಗಿಯಾಗಿರುವುದನ್ನು ಸಾಬೀತುಪಡಿಸಲು ಯಾವುದೇ ಆಧಾರಗಳು ದೊರೆತಿಲ್ಲ. ಪ್ರಶ್ನೆಪತ್ರಿಕೆ ಕಳವು, ವಿತರಣೆ ಮತ್ತು ಅದರ ಲಾಭ ಪಡೆದ ಪ್ರತಿಯೊಬ್ಬರನ್ನೂ ಒಳಗೊಂಡಂತೆ ಒಟ್ಟು 45 ವ್ಯಕ್ತಿಗಳ ವಿರುದ್ಧ ಪಾಟ್ನಾದ ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ಹಲವು ದೋಷಾರೋಪಣೆ ಪಟ್ಟಿಗಳನ್ನು ಸಲ್ಲಿಸಿದೆ.

ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿದ್ಯಾರ್ಥಿಗಳ ಹಿತಕ್ಕಿಂತ ರಾಜಕೀಯವೇ ಮುಖ್ಯ, ನೀಟ್ ವಿವಾದಕ್ಕೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿರುಗೇಟು

ಎಫ್​ಐಆರ್​​ನಲ್ಲಿ ಸಂಜೀವ್ ಹೆಸರು:

ಬಿಹಾರದ ಪೊಲೀಸರು ದಾಖಲಿಸಿದ ಆರಂಭಿಕ ಎಫ್‌ಐಆರ್‌ನಲ್ಲಿ ಸಂಜೀವ್ ಮುಖಿಯಾ ಹೆಸರು ಇತ್ತಾದರೂ, ಅವರು ತಲೆಮರೆಸಿಕೊಂಡಿದ್ದರು. ನಂತರ ಇತರ ಪರೀಕ್ಷಾ ಅಕ್ರಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ನೀಟ್-ಯುಜಿ ಪ್ರಕರಣದ ವಿಚಾರಣೆಗಾಗಿ ಸಿಬಿಐ ಅವರನ್ನು ವಶಕ್ಕೆ ಪಡೆದುಕೊಂಡಿತ್ತು.

ಆದರೆ, ಈ ನಿರ್ದಿಷ್ಟ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಗಳು ಸಿಗದ ಕಾರಣ, ಸಿಬಿಐ ತನ್ನ ದೋಷಾರೋಪಣೆ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಿಲ್ಲ. ಇದರ ಪರಿಣಾಮವಾಗಿ ಅವರು ನೀಟ್ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ಆದರೆ, ಬಿಹಾರ ಪೊಲೀಸರು ತನಿಖೆ ನಡೆಸುತ್ತಿರುವ ಇತರ ಪ್ರಕರಣಗಳಲ್ಲಿ ಆರೋಪಿಯಾಗಿರುವುದರಿಂದ ಅವರು ನ್ಯಾಯಾಂಗ ಬಂಧನದಲ್ಲೇ ಉಳಿದಿದ್ದಾರೆ.

ಇದನ್ನೂ ಓದಿ: ನೀಟ್ ಪೇಪರ್ ಸೋರಿಕೆ: ಮೌನ ಮುರಿದ ಪ್ರಧಾನಿ, ಫಾಸ್ಟ್​ ಟ್ರ್ಯಾಕ್ ಕೋರ್ಟ್​ ಮಾಡಿ ಅಪರಾಧಿಗಳಿಗೆ ಶಿಕ್ಷೆ ಕೊಡ್ತೀವಿ ಎಂದ ಮೋದಿ

ಏನಿದು ಪ್ರಕರಣ?:

ನೀಟ್-ಯುಜಿ 2024ರ ಪರೀಕ್ಷೆ ಮುಗಿದ ತಕ್ಷಣ ಬಿಹಾರ ಪೊಲೀಸರ ಆರ್ಥಿಕ ಅಪರಾಧಗಳ ಘಟಕ (EOU) ಪಾಟ್ನಾದಲ್ಲಿ ಪೇಪರ್ ಲೀಕ್ ಜಾಲವನ್ನು ಬಯಲಿಗೆಳೆಯಿತು. ಈ ಹಿಂದೆ ಹಲವು ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಪೇಪರ್ ಲೀಕ್‌ನಲ್ಲಿ ಆರೋಪಿಯಾಗಿದ್ದ ಸಂಜೀವ್ ಮುಖಿಯಾ ಅವರನ್ನು ಪ್ರಾಥಮಿಕ ಶಂಕಿತ ಆರೋಪಿಯನ್ನಾಗಿ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿತ್ತು. ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಕೇಂದ್ರ ಶಿಕ್ಷಣ ಸಚಿವಾಲಯವು ಜೂನ್ 2024ರ ಕೊನೆಯಲ್ಲಿ ಇದರ ತನಿಖೆಯನ್ನು ಸಿಬಿಐಗೆ ವಹಿಸಿತು. ಕೇಂದ್ರ ಶಿಕ್ಷಣ ಸಚಿವಾಲಯದ ಸೂಚನೆಯಂತೆ ಸಿಬಿಐ ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ವಹಿಸಿಕೊಂಡು ಬಿಹಾರ, ಜಾರ್ಖಂಡ್, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಕಾರ್ಯಾಚರಣೆ ನಡೆಸಿತು.

ಸಿಬಿಐ ತನ್ನ ವಿಧಿವಿಜ್ಞಾನ ಮತ್ತು ತಾಂತ್ರಿಕ ತನಿಖೆಯ ಮೂಲಕ ಪೇಪರ್ ಲೀಕ್‌ನ ಮೂಲವನ್ನು ಪತ್ತೆಹಚ್ಚಿತು. ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ಎನ್‌ಟಿಎ (NTA) ಗೊತ್ತುಪಡಿಸಿದ ಶಾಲೆಯ ಟ್ರಂಕ್‌ನಿಂದ ಪ್ರಶ್ನೆಪತ್ರಿಕೆಗಳನ್ನು ಕಳವು ಮಾಡಲಾಗಿತ್ತು. ಇದರ ಪ್ರಮುಖ ರೂವಾರಿ ಪಂಕಜ್ ಕುಮಾರ್ (ಅಲಿಯಾಸ್ ಆದಿತ್ಯ) ಮತ್ತು ಆತನ ಸಹಚರರು ಪ್ರಶ್ನೆಪತ್ರಿಕೆ ಕದ್ದು, ಎಂಬಿಬಿಎಸ್ (MBBS) ವಿದ್ಯಾರ್ಥಿಗಳ ಮೂಲಕ ಉತ್ತರಗಳನ್ನು ಸಿದ್ಧಪಡಿಸಿದ್ದರು. ನಂತರ ಪಾಟ್ನಾದ ರೆಸಾರ್ಟ್‌ ಒಂದರಲ್ಲಿ ನೀಟ್ ಅಭ್ಯರ್ಥಿಗಳಿಗೆ ಈ ಉತ್ತರಗಳನ್ನು ವಿತರಿಸಲಾಗಿತ್ತು.

ಸಿಬಿಐ ಹೇಳಿದ್ದೇನು?:

“ಆ ಘಟನೆ ನಡೆದಾಗ ಸಂಜೀವ್ ಕುಮಾರ್ ಅಲಿಯಾಸ್ ಸಂಜೀವ್ ಮುಖಿಯಾ ಇತರ ಕೆಲವು ಪರೀಕ್ಷಾ ಪೇಪರ್ ಕಳವು ಹಾಗೂ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ, ಈ ಕಳವಿನಲ್ಲೂ ಅವರು ಭಾಗಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಅದರಂತೆ ಬಿಹಾರ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ (FIR) ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿತ್ತು” ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

“ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ತನ್ನ ತನಿಖೆಯ ಅವಧಿಯಲ್ಲಿ, 2024ರ ನೀಟ್-ಯುಜಿ ಪ್ರಶ್ನೆಪತ್ರಿಕೆ ಕಳವು ಅಥವಾ ವಿತರಣೆಯಲ್ಲಿ ಸಂಜೀವ್ ಕುಮಾರ್ ಅಲಿಯಾಸ್ ಸಂಜೀವ್ ಮುಖಿಯಾ ಭಾಗವಹಿಸಿರುವುದನ್ನು ಸಾಬೀತುಪಡಿಸಲು ಸಿಬಿಐಗೆ ಯಾವುದೇ ಸಾಕ್ಷ್ಯಾಧಾರಗಳು ಸಿಗಲಿಲ್ಲ” ಎಂದು ಸಿಬಿಐ ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮನೆಗೆ ವಾಪಸ್ ಹೋಗಿ’: ಮೋದಿ ಟ್ವೀಟ್ ಬಳಿಕ ವಿದ್ಯಾರ್ಥಿಗಳಿಗೆ ಸಲ್ಮಾನ್ ಖಾನ್ ಮನವಿ – Kannada News | Salman Khan urges Sonam Wangchuk to End Hunger Strike and NEET Student Protest

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರ ಸೋನಮ್ ವಾಂಗ್ಚುಕ್ (Sonam Wangchuk) ಅವರ ಆರೋಗ್ಯ ಹದಗೆಡುತ್ತಿದ್ದು, ಆಸ್ಪತ್ರೆಯಲ್ಲಿ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ. ಈ ನಡುವೆ, ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ವಾಂಗ್ಚುಕ್ ಅವರಿಗೆ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ವಿನಂತಿಸಿದ್ದು, ‘ನಿಮಗೆ ಬೇಕಿದ್ದರೆ ಮನೆಯಿಂದ ಊಟ ತರಿಸಿಕೊಡುತ್ತೇನೆ’ ಎಂದು ಹೇಳಿದ್ದಾರೆ. ದೇಶದ ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟವನ್ನು ಶ್ಲಾಘಿಸಿದ್ದ ಸಲ್ಮಾನ್ ಖಾನ್, ಇದೀಗ ಪ್ರತಿಭಟನೆ ನಿಲ್ಲಿಸಿ ತಮ್ಮ ಮನೆಗಳಿಗೆ ಹಿಂತಿರುಗುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.

ಗುರುವಾರ (ಜುಲೈ 23) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಸಲ್ಮಾನ್ ಖಾನ್, ‘ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭದ್ರತೆ ನಮಗೆ ಮೊದಲ ಆದ್ಯತೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಮಾನ್ಯ ಪ್ರಧಾನ ಮಂತ್ರಿಯವರೇ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಅವರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ನನಗಿದೆ. ಹಾಗಾಗಿ ವಿದ್ಯಾರ್ಥಿಗಳು ದಯವಿಟ್ಟು ನಿಮ್ಮ ಮನೆಗಳಿಗೆ ಹಾಗೂ ಪೋಷಕರ ಬಳಿಗೆ ಹಿಂತಿರುಗಿ’ ಎಂದು ಕೋರಿದ್ದಾರೆ.

ಉಪವಾಸ ಮುಂದುವರಿಸಬೇಡಿ: ಸಲ್ಮಾನ್ ಖಾನ್

ಇದೇ ವೇಳೆ ಸೋನಮ್ ವಾಂಗ್ಚುಕ್ ಅವರ ಸತ್ಯಾಗ್ರಹದ ಬಗ್ಗೆ ಪ್ರಸ್ತಾಪಿಸಿದ ಸಲ್ಮಾನ್, ‘ಸೋನಮ್, ಇದು ಸಾಕು ಸಹೋದರ. ಇದನ್ನು ಇನ್ನಷ್ಟು ಮುಂದುವರಿಸಬೇಡಿ. ಮುಂದೆಂದಾದರೂ ಅಗತ್ಯ ಬಿದ್ದರೆ (ಅಗತ್ಯ ಬರಲಾರದು ಎಂಬ ನಂಬಿಕೆ ನನಗಿದೆ) ಹೋರಾಟಕ್ಕೆ ಈ ಶಕ್ತಿಯನ್ನು ಕಾಯ್ದಿರಿಸಿಕೊಳ್ಳಿ. ಮೊದಲು ಏನನ್ನಾದರೂ ಸೇವಿಸಿ. ನಿಮಗೆ ಬೇಕಿದ್ದರೆ ನನ್ನ ಮನೆಯಿಂದಲೇ ಊಟ ಕಳುಹಿಸಿಕೊಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಜುಲೈ 18ರಂದು ದೆಹಲಿ ಪೊಲೀಸರು ಅವರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ತದನಂತರ ದೆಹಲಿ ಹೈಕೋರ್ಟ್ ಆದೇಶದಂತೆ ಗುರುಗ್ರಾಮದ ಮೆದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಸ್ಪತ್ರೆಯಲ್ಲೂ ಅವರು ಸತ್ಯಾಗ್ರಹ ಮುಂದುವರಿಸಿದ್ದಾರೆ.

ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿದ್ದ ಸಲ್ಮಾನ್:

ಈ ಮೊದಲು ದೀರ್ಘ ಪೋಸ್ಟ್ ಬರೆದಿದ್ದ ಸಲ್ಮಾನ್ ಖಾನ್, ‘ಇಷ್ಟೊಂದು ಶಾಂತಿಯುತವಾಗಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡದ್ದು ಬೇಸರ ತಂದಿದೆ. ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಪರ ನಾನಿದ್ದೇನೆ. ಪ್ರಶ್ನೆಪತ್ರಿಕೆ ಸೋರಿಕೆ ಅತ್ಯಂತ ಗಂಭೀರ ವಿಚಾರ. ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ದೇಶದ ಮಕ್ಕಳು ಒಂದಾಗಿರುವುದು ಹಾಗೂ ಪೋಷಕರು ಬೆಂಬಲ ನೀಡುತ್ತಿರುವುದು ಸಂತಸ ತಂದಿದೆ’ ಎಂದಿದ್ದರು.

ಇದನ್ನೂ ಓದಿ: ನೀಟ್ ಪೇಪರ್ ಲೀಕ್ ಪ್ರತಿಭಟನೆಗೆ ಸಲ್ಮಾನ್ ಖಾನ್ ಬೆಂಬಲ; ಹಿಂಸಾಚಾರಕ್ಕೆ ಸಲ್ಲು ಬೇಸರ

‘ಸಮರ್ಪಣಾ ಭಾವ ಮತ್ತು ದೃಢಸಂಕಲ್ಪದಿಂದ ವಿದ್ಯಾಭ್ಯಾಸ ಮಾಡಿ, ದೇಶಕ್ಕೆ ಉತ್ತಮ ಭವಿಷ್ಯ ರೂಪಿಸಲು ಹೋರಾಡುತ್ತಿರುವ ವಿದ್ಯಾರ್ಥಿಗಳ ನಿಲುವನ್ನು ನಾನು ಹೃತ್ಪೂರ್ವಕವಾಗಿ ಮೆಚ್ಚುತ್ತೇನೆ. ಈ ಆಂದೋಲನವನ್ನು ವಿದ್ಯಾರ್ಥಿಗಳು ಶಾಂತಿಯುತವಾಗಿ ನಡೆಸಿದ್ದಾರೆ. ಈ ಪೀಳಿಗೆಯ ಧೈರ್ಯ ಮತ್ತು ಶ್ರದ್ಧೆ ಭಾರತಕ್ಕೆ ಹೆಮ್ಮೆ ತರಲಿದೆ. ಇದೊಂದು ಶಿಕ್ಷಣ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ನಡುವಿನ ವಿಷಯ. ಇದನ್ನು ಯಾರೂ ರಾಜಕೀಯವಾಗಿ ಬಳಸಿಕೊಳ್ಳಬಾರದು. ಸರ್ಕಾರದ ಬೆಂಬಲದೊಂದಿಗೆ ಇದೊಂದು ಗೆಲುವಿನ ಹಾದಿಯಾಗಲಿ’ ಎಂದು ಸಲ್ಮಾನ್ ಹಾರೈಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮತ್ತೆ ಮುನ್ನೆಲೆಗೆ: 3 ವರ್ಷಕ್ಕೊಮ್ಮೆ ದರ ಏರಿಕೆಗೆ ಪ್ಲ್ಯಾನ್! – Kannada News | Namma Metro Fare Hike: BMRCL Plans 12% Fare Increase Every Three Years

ಬೆಂಗಳೂರು, ಜುಲೈ 23: ದೇಶದಲ್ಲೇ ಅತ್ಯಂತ ದುಬಾರಿ ಸಾರಿಗೆ ಎನಿಸಿಕೊಂಡಿರುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಈ ವರ್ಷ ಫೆಬ್ರವರಿಯಲ್ಲಿ ಜಾರಿಯಾಗಬೇಕಿದ್ದ ಶೇಕಡಾ 5ರಷ್ಟು ದರ ಏರಿಕೆಯನ್ನು ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿತ್ತಾದರೂ, ಇದೀಗ ಹೊಸ ಸೂತ್ರದಡಿ ದರ ಹೆಚ್ಚಿಸಲು ಶಿಫಾರಸ್ಸು ಮಾಡಿರುವುದು ಪ್ರಯಾಣಿಕರು ಕಂಗಾಲಾಗುವಂತೆ ಮಾಡಿದೆ.

2025ರ ಫೆಬ್ರವರಿ 9 ರಂದು ಬಿಎಂಆರ್‌ಸಿಎಲ್ ಮೆಟ್ರೋ ಟಿಕೆಟ್ ದರವನ್ನು ಶೇಕಡಾ 71 ರಷ್ಟು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿತ್ತು. ಸಾರ್ವಜನಿಕರಿಂದ ವ್ಯಕ್ತವಾದ ತೀವ್ರ ಆಕ್ರೋಶದ ಬಳಿಕ ದರವನ್ನು ಶೇಕಡಾ 5ರಷ್ಟು ಕಡಿಮೆ ಮಾಡಲಾಗಿತ್ತು. ದರ ನಿಗದಿ ಸಮಿತಿಯು (FFC) ಪ್ರತಿವರ್ಷ ಫೆಬ್ರವರಿ 9ರಂದು ಶೇ 5ರಷ್ಟು ವಾರ್ಷಿಕ ದರ ಏರಿಕೆ ಮಾಡಬಹುದು ಎಂದು ಶಿಫಾರಸ್ಸು ಮಾಡಿತ್ತು. ಆದರೆ, 2026ರ ಫೆಬ್ರವರಿಯಲ್ಲಿ ನಡೆಯಬೇಕಿದ್ದ ಈ 5% ಏರಿಕೆಯನ್ನು ಸಾರ್ವಜನಿಕರ ವಿರೋಧದಿಂದಾಗಿ ತಡೆಹಿಡಿಯಲಾಗಿತ್ತು. ಇದೀಗ ಪ್ರತಿವರ್ಷ 5% ಏರಿಕೆ ಮಾಡುವ ಬದಲು, ಪ್ರತಿ 3 ವರ್ಷಕ್ಕೊಮ್ಮೆ ದರ ಏರಿಕೆ ಮಾಡಲು ಸಮಿತಿ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ.

ಮೆಟ್ರೋ ಪ್ರಯಾಣಿಕರು ಅಸಮಾಧಾನ 

ಇನ್ನು ಈ ಬಗ್ಗೆ ಮಾತಾನಾಡಿದ ಮೆಟ್ರೋ ಪ್ರಯಾಣಿಕ ಪ್ರಫುಲ್​​, ‘ನಾನು ಬೊಮ್ಮಸಂದ್ರದಿಂದ ಲಾಲ್ ಬಾಗ್​ಗೆ ಕಾಲೇಜಿಗೆ ಬರುತ್ತೇನೆ. ಒಂದೂ ವಾರಕ್ಕೆ ಒಂದುವರೆ ಸಾವಿರ ರೂ ಬೇಕು. ದರ ಏರಿಕೆ ಆದರೆ ಒಂದು ವಾರಕ್ಕೆ 2 ಸಾವಿರ ರೂ ಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

12% ರಷ್ಟು ಟಿಕೆಟ್ ದರ ಏರಿಕೆ?

ದರ ನಿಗದಿ ಸಮಿತಿಯು ಪ್ರತಿವರ್ಷ 5% ರಷ್ಟು ಟಿಕೆಟ್ ದರ ಏರಿಕೆ ಮಾಡುವ ಬದಲು, ಪ್ರತಿ ಮೂರು ವರ್ಷಕ್ಕೊಮ್ಮೆ 12% ರಷ್ಟು ದರ ಏರಿಕೆ ಮಾಡಲು ಸೂಚನೆ ನೀಡಿದೆ. 2026 ಫೆಬ್ರುವರಿ 5% ರಷ್ಟು ದರ ಏರಿಕೆ ಮಾಡಬೇಕಿತ್ತು, ಆದರೆ ಬಿಎಂಆರ್​ಸಿಎಲ್​ ಟಿಕೆಟ್ ದರ ಏರಿಕೆ ಮಾಡಿಲ್ಲ. 2028 ಫೆಬ್ರವರಿ 12% ರಷ್ಟು ಟಿಕೆಟ್ ದರ ಏರಿಕೆ ಆಗಬಹುದು ಎನ್ನಲಾಗುತ್ತಿದೆ.

ಮತ್ತೆ ದರ ಏರಿಕೆ ಬೇಡ ಎಂದ ಪ್ರಯಾಣಿಕರು

‘ಸದ್ಯ ಮೆಟ್ರೋದಲ್ಲಿ ಕನಿಷ್ಠ 10 ರೂ, ಗರಿಷ್ಟ 90 ರೂ ದರ ಇದೆ. 12% ರಷ್ಟು ಟಿಕೆಟ್ ದರ ಏರಿಕೆ ಆದರೆ ಕನಿಷ್ಠ 13ರೂ, ಗರಿಷ್ಠ 105 ರೂ ದರ ಆಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮತ್ತೆ ದರ ಏರಿಕೆ ಮಾಡುವುದನ್ನು ನಾನು ಒಪ್ಪುವುದಿಲ್ಲ’ ಎಂದು ಮೆಟ್ರೋ ಪ್ರಯಾಣಿಕರಾದ ಸುರೇಖಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಹುಚ್ಚಾಟಕ್ಕೆ ಬೀಳಲಿದೆ ಬ್ರೇಕ್: ದಂಡದ ಮೊತ್ತ 25,000 ರೂ.ವರೆಗೆ ಏರಿಕೆ

ಒಟ್ಟಿನಲ್ಲಿ ಈಗಾಗಲೇ ದೇಶದಲ್ಲೇ ದುಬಾರಿ ಮೆಟ್ರೋ ಅನ್ನಿಸಿಕೊಂಡಿರುವ ನಮ್ಮ ಮೆಟ್ರೋ, ಮತ್ತೆ ದರ ಏರಿಕೆ ಮಾಡುವ ಮೂಲಕ ಪ್ರಯಾಣಿಕರ ಆಕ್ರೋಶಕ್ಕೆ ತುತ್ತಾಗುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚಿಕನ್, ಮಟನ್ ತ್ಯಾಜ್ಯ ವಿಲೇವಾರಿಗೆ ಹೊಸ ರೂಲ್ಸ್​​, ಶುಲ್ಕವೂ ನಿಗದಿ – Kannada News | Bengaluru Solid Waste Management Limited New Rules for chicken, mutton wastage

ಬೆಂಗಳೂರು, (ಜುಲೈ 23): ಬೆಂಗಳೂರು  ನಗರದಲ್ಲಿ ಮಾಂಸದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಬೆಂಗಳೂರು (bengaluru) ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ಹೊಸ ನಿಯಮ ಜಾರಿಗೆ ತಂದಿದೆ. ಪ್ರತಿ ಕಿಲೋಗ್ರಾಂ ಚಿಕನ್ ಹಾಗೂ ಮಟನ್ (chicken and mutton) ತ್ಯಾಜ್ಯ ಸಂಗ್ರಹಕ್ಕೆ 5 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದ್ದು, ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಮಾರತಹಳ್ಳಿ ಹಾಗೂ ದೊಡ್ಡ ನೆಕ್ಕುಂದಿ ವಾರ್ಡ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಶುಲ್ಕ ಸಂಗ್ರಹ ಆರಂಭವಾಗಿದೆ. ಆದರೆ ಹೊಸ ನಿಯಮದಿಂದ ಸಣ್ಣ ಮತ್ತು ಮಧ್ಯಮ ಮಾಂಸ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ದೊಡ್ಡಬೆಕ್ಕುಂದಿ ಚಿಕನ್ ಅಂಗಡಿ ಮಾಲೀಕ, ಮಾಂಸವನ್ನು ಸ್ವಚ್ಛಗೊಳಿಸಲು ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಸುವುದು ಅನಿವಾರ್ಯ. ಆದರೆ ತ್ಯಾಜ್ಯದ ಜೊತೆಗೆ ನೀರಿನ ತೂಕವನ್ನೂ ಸೇರಿಸಿ ಶುಲ್ಕ ಲೆಕ್ಕ ಹಾಕಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಇದರಿಂದ ನೈಜ ತ್ಯಾಜ್ಯಕ್ಕಿಂತ ಹಲವು ಪಟ್ಟು ಹೆಚ್ಚು ತೂಕ ದಾಖಲಾಗುತ್ತಿದ್ದು, ಒಂದು ಅಂಗಡಿಗೆ ತಿಂಗಳಿಗೆ ಕನಿಷ್ಠ 10 ಸಾವಿರ ರೂಪಾಯಿ ಶುಲ್ಕ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತ್ಯಾಜ್ಯ ವಿಲೇವಾರಿಗೆ ಶುಲ್ಕ ಕಟ್ಟಲು ಯಾವುದೇ ವಿರೋಧ ಇಲ್ಲ, ಆದರೆ ನೀರಿನ ತೂಕದ ಆಧಾರದ ಮೇಲೆ ಹಣ ವಸೂಲಿ ಮಾಡುವುದು ಅನ್ಯಾಯ ಎಂದು ಅವರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕರಿಗೆ ಮತ್ತೊಂದು ದರ ಏರಿಕೆಯ ಬಿಸಿ: KMF ನಂದಿನಿ ತುಪ್ಪ, ಬೆಣ್ಣೆ ದರ ಹೆಚ್ಚಳ

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ಈ ಶುಲ್ಕ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು ಎಂದು ಚಿಲ್ಲರೆ ಮಾಂಸ ಮಾರಾಟಗಾರರು ಒತ್ತಾಯಿಸಿದ್ದಾರೆ. ಕೇವಲ ನೈಜ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಶುಲ್ಕ ನಿಗದಿಪಡಿಸಬೇಕು ಅಥವಾ ಈಗಿನ ದರವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದರೆ ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆಯೇ ಹೊರಿಸಬೇಕಾಗುತ್ತದೆ ಎಂದು ವ್ಯಾಪಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ವ್ಯಾಪಾರಿಗಳ ಆಕ್ಷೇಪಣೆ ಕುರಿತು ಬಿಎಸ್‌ಡಬ್ಲ್ಯುಎಂಎಲ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ; ಗಾಂಧಿ ಸ್ಮೃತಿಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸದರ ಮೆರವಣಿಗೆ – Kannada News | Rahul Gandhi leads INDIA bloc MPs march to Gandhi Smriti to Support Students Protest

ನವದೆಹಲಿ, (ಜುಲೈ 23): ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ‘ಇಂಡಿಯ’ ಒಕ್ಕೂಟದ ಸಂಸದರು ದೆಹಲಿಯ ‘ತೀಸ್ ಜನವರಿ ಮಾರ್ಗ’ದಲ್ಲಿರುವ ಗಾಂಧಿ ಸ್ಮೃತಿಗೆ ಬಸ್‌ಗಳಲ್ಲಿ ತೆರಳಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲು ಮತ್ತು ಪೋಲಿಸರ ಲಾಠಿಚಾರ್ಜ್‌ನಿಂದ ಗಾಯಗೊಂಡ ವಿದ್ಯಾರ್ಥಿಗಳಿಗೆ ಬೆಂಬಲ ಪ್ರದರ್ಶಿಸಲು ಈ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಎನ್‌ಸಿಪಿ ಹಾಗೂ ಶಿವಸೇನೆ (ಯುಬಿಟಿ) ಪ್ರಮುಖ ನಾಯಕರು ಬಸ್‌ಗಳಲ್ಲಿ ಗಾಂಧಿ ಸ್ಮೃತಿಗೆ ತಲುಪಿದರು.

“ಮಹಾತ್ಮ ಗಾಂಧಿಯವರನ್ನು ಇದೇ ಸ್ಥಳದಲ್ಲಿ ಹತ್ಯೆ ಮಾಡಲಾಯಿತು. ಇಂದು ಮೋದಿ ಸರ್ಕಾರವು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡುತ್ತಿದೆ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿದೆ ಮತ್ತು ಅವರ ಮೇಲೆ ಹಲ್ಲೆ ನಡೆಸುತ್ತಿದೆ. ವಿರೋಧ ಪಕ್ಷಗಳು ಇದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ನಾವು ವಿದ್ಯಾರ್ಥಿಗಳ ಪರವಾಗಿದ್ದೇವೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ತಕ್ಷಣವೇ ಶಿಕ್ಷಣ ಸಚಿವರನ್ನು ವಜಾಗೊಳಿಸಬೇಕು ಹಾಗೂ ದೇಶದ ವಿದ್ಯಾರ್ಥಿಗಳಲ್ಲಿ ಕ್ಷಮೆ ಯಾಚಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಠಾಣೆಗೆ ಸೋನಿಯಾ ಗಾಂಧಿ ಭೇಟಿ; ಕೊನೆಗೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಿಡುಗಡೆ

ದೆಹಲಿ ಪೊಲೀಸರಿಂದ ತಡೆ:

ವಿರೋಧ ಪಕ್ಷಗಳ ಮಾರ್ಚ್ ತಡೆಯಲು ದೆಹಲಿ ಪೊಲೀಸರು ಭಾರಿ ಭದ್ರತೆ ಹಾಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಆರಂಭದಲ್ಲಿ ‘ಇಂಡಿಯಾ ಗೇಟ್’ ಕಡೆಗೆ ಮೆರವಣಿಗೆ ನಡೆಸಲು ವಿಪಕ್ಷ ನಾಯಕರು ಅನುಮತಿ ಕೋರಿದ್ದರು. ಆದರೆ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ತೀಸ್ ಜನವರಿ ಮಾರ್ಗದಲ್ಲಿರುವ ಗಾಂಧಿ ಸ್ಮೃತಿಗೆ ತೆರಳಲು ನಿರ್ಧರಿಸಲಾಯಿತು.

ಬಿಳಿ ಟಿ-ಶರ್ಟ್ ಧರಿಸಿದ್ದ ರಾಹುಲ್ ಗಾಂಧಿ, ಕೈಯಲ್ಲಿ ರಾಷ್ಟ್ರಧ್ವಜ ಹಾಗೂ ಸಂವಿಧಾನದ ಪ್ರತಿಯನ್ನು ಹಿಡಿದು ಗಾಂಧಿ ಸ್ಮೃತಿಯಲ್ಲಿ ಜಾಗರಣೆ ನಡೆಸಿದರು. ಈ ವೇಳೆ ಅವರಿಗೆ ಸಾಥ್ ನೀಡಿದ ಇತರ ಸಂಸದರು, ತಮ್ಮ ಮೊಬೈಲ್‌ಗಳ ಫ್ಲ್ಯಾಶ್‌ಲೈಟ್ ಬೆಳಗಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಇದನ್ನೂ ಓದಿ: 10 ವರ್ಷಗಳಲ್ಲಿ 152 ಪ್ರಶ್ನೆಪತ್ರಿಕೆ ಸೋರಿಕೆ, ಒಬ್ಬರಿಗೂ ಶಿಕ್ಷೆಯಾಗಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಇದಕ್ಕೂ ಮುನ್ನ ಮಧ್ಯಾಹ್ನ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ವಿಪಕ್ಷ ನಾಯಕರ ಸಭೆ ನಡೆಯುತ್ತಿದ್ದಂತೆ, ದೆಹಲಿ ಪೊಲೀಸರು ಅವರ ನಿವಾಸದ ಹೊರಗೆ ಭಾರಿ ಬ್ಯಾರಿಕೇಡ್‌ಗಳನ್ನು ಹಾಕಿ ದಿಗ್ಬಂಧನ ವಿಧಿಸಿದ್ದರು. ಸಭೆ ಮುಗಿದ ತಕ್ಷಣ, ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಗಾಂಧಿ ಸ್ಮೃತಿಗೆ ತೆರಳುವುದಾಗಿ ರಾಹುಲ್ ಗಾಂಧಿ ಘೋಷಿಸಿದರು. ಅದರಂತೆ ರಾಹುಲ್ ಗಾಂಧಿ ಹಾಗೂ ಇತರ ಸಂಸದರನ್ನು ಹೊತ್ತ 3 ಬಸ್‌ಗಳು ಗಾಂಧಿ ಸ್ಮೃತಿಯನ್ನು ತಲುಪಿದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಭಾರತದಲ್ಲಿ ಟೀಂ ಇಂಡಿಯಾಕ್ಕೆ ಆತಿಥ್ಯವಹಿಸಲಿದೆ ಅಫ್ಘಾನಿಸ್ತಾನ – Kannada News | India vs Afghanistan T20 Series: September clashes in India, hosted by AFG Cricket

ಭಾರತ ಹಾಗೂ ಜಿಂಬಾಬ್ವೆ ನಡುವೆ ಇಂದಿನಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಿದೆ. ಇದಾದ ಬಳಿಕ ಟೀಂ ಇಂಡಿಯಾ 2026 ರ ಏಷ್ಯನ್ ಕ್ರೀಡಾಕೂಟದಲ್ಲಿಯೂ ಭಾಗವಹಿಸಲಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ತನ್ನ ತಾಯ್ನಾಡಿನಲ್ಲೇ ಪ್ರವಾಸಿ ತಂಡವಾಗಿ ಟಿ20 ಸರಣಿಯನ್ನು ಆಡಲಿದೆ. ಹೌದು, ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವೆ ಮೂರು ಪಂದ್ಯಗಳ ಟಿ20 ಸರಣಿ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಈ ಸರಣಿಗೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ( Arun Jaitley Stadium) ಆತಿಥ್ಯವಹಿಸುತ್ತಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಅಫ್ಘಾನಿಸ್ತಾನ ಈ ಸರಣಿಯನ್ನು ಆಯೋಜಿಸುತ್ತಿದ್ದು, ಟೀಂ ಇಂಡಿಯಾ ಪ್ರವಾಸಿ ತಂಡವಾಗಿ ಆಡಲಿದೆ.

ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿ

ವರದಿಯ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಟಿ20 ಸರಣಿ ನಡೆಯಲಿದೆ. ಮೇಲೆ ಹೇಳಿದಂತೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಈ ಸರಣಿಯನ್ನು ಆಯೋಜಿಸುತ್ತಿದೆ. ಭದ್ರತಾ ಕಾಳಜಿಯಿಂದಾಗಿ ಅಫ್ಘಾನಿಸ್ತಾನವು ಭಾರತದಲ್ಲಿ ತನ್ನ ತವರು ಅಂತರರಾಷ್ಟ್ರೀಯ ಪಂದ್ಯಗಳನ್ನು ದೀರ್ಘಕಾಲದಿಂದ ಆಡುತ್ತಿದೆ. ಈ ಹಿಂದೆ, ತಂಡವು ಲಕ್ನೋ, ಡೆಹ್ರಾಡೂನ್ ಮತ್ತು ಗ್ರೇಟರ್ ನೋಯ್ಡಾವನ್ನು ತನ್ನ ತವರು ಸ್ಥಳಗಳನ್ನಾಗಿ ಮಾಡಿಕೊಂಡಿತ್ತು. ಈ ಮೈದಾನಗಳಲ್ಲಿ ವೆಸ್ಟ್ ಇಂಡೀಸ್, ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್‌ನಂತಹ ತಂಡಗಳ ವಿರುದ್ಧ ಅಫ್ಘಾನಿಸ್ತಾನ ಪಂದ್ಯಗಳನ್ನಾಡಿತ್ತು. ಆದರೆ ಭಾರತದ ವಿರುದ್ಧ ಯಾವುದೇ ತವರು ಸರಣಿಯನ್ನು ಭಾರತದಲ್ಲಿ ಆಡಿರಲಿಲ್ಲ. ಆದರೀಗ ಭಾರತದ ವಿರುದ್ಧ ಭಾರತದಲ್ಲೇ ಅಫ್ಘಾನಿಸ್ತಾನ ಟಿ20 ಸರಣಿಯನ್ನು ಆಯೋಜಿಸುತ್ತಿದೆ.

ಸೆಪ್ಟೆಂಬರ್​ನಲ್ಲಿ ಟಿ20 ಸರಣಿ

ಕ್ರಿಕ್ಇನ್ಫೋ ವರದಿ ಪ್ರಕಾರ, ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯಗಳು ಸೆಪ್ಟೆಂಬರ್ 13, 15 ಮತ್ತು 17 ರಂದು ನಡೆಯಬಹುದು. ಎರಡೂ ಮಂಡಳಿಗಳು ಇನ್ನೂ ಸ್ಥಳ ಮತ್ತು ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸದಿದ್ದರೂ, ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಮತ್ತು ದೆಹಲಿ ಮೂರು ಪಂದ್ಯಗಳನ್ನು ಆಯೋಜಿಸಬಹುದು ಎಂದು ವರದಿಯಾಗಿದೆ. ಈ ಸರಣಿಯು 2026 ರ ಏಷ್ಯನ್ ಕ್ರೀಡಾಕೂಟಕ್ಕೆ ಸ್ವಲ್ಪ ಮೊದಲು ನಡೆಯಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಈ ಪ್ರಸ್ತಾವಿತ ಸರಣಿಯು ಭಾರತೀಯ ತಂಡದ ಬಿಡುವಿಲ್ಲದ ಅಂತರರಾಷ್ಟ್ರೀಯ ವೇಳಾಪಟ್ಟಿಯ ನಡುವೆ ನಡೆಯಲಿದೆ. ಶ್ರೀಲಂಕಾ ಪ್ರವಾಸದ ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 27 ರಂದು ಕೊನೆಗೊಳ್ಳಲಿದ್ದು, 2026 ರ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 24 ರಂದು ಜಪಾನ್‌ನಲ್ಲಿ ಪ್ರಾರಂಭವಾಗಲಿದೆ. ಪರಿಣಾಮವಾಗಿ, ಈ ಟಿ20 ಸರಣಿಯನ್ನು ಸೆಪ್ಟೆಂಬರ್ ಮಧ್ಯದಲ್ಲಿ ನಿಗದಿಪಡಿಸಲಾಗಿದೆ.

IND vs ZIM: ವೈಭವ್ ಆರ್ಭಟ; ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ

ಉಭಯ ತಂಡಗಳು ಕೊನೆಯದಾಗಿ 2026 ರ ಜೂನ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪ್ರವಾಸದ ಸಮಯದಲ್ಲಿ, ಭಾರತವು ನ್ಯೂ ಚಂಡೀಗಢದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಸೋಲಿಸಿತು. ನಂತರ ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version