ಜುಲೈ 31ಕ್ಕೆ ಬಿಡುಗಡೆ ಆಗಿರುವ ‘ಜಾಲಿ’ ಸಿನಿಮಾಗೆ ಉಮಾಪತಿ ಶ್ರೀನಿವಾಸ್ ಗೌಡ ಬೆಂಬಲ – Kannada News | Umapathy Srinivasa Gowda released Jolly Kannada movie Trailer ft Tarush

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivasa Gowda) ಅವರು ಯಶಸ್ಸು ಕಂಡಿದ್ದಾರೆ. ಹೊಸಬರಿಗೆ ಅವರು ಬೆಂಬಲ ನೀಡುತ್ತಾರೆ. ಈಗ ಹೊಸ ಪ್ರತಿಭೆಗಳ ‘ಜಾಲಿ’ (Jolly) ಸಿನಿಮಾಗೆ ಅವರು ಸಾಥ್ ನೀಡಿದ್ದಾರೆ. ಇತ್ತೀಚೆಗೆ ‘ಜಾಲಿ’ ಸಿನಿಮಾದ ಟ್ರೇಲರ್ ಬಿಡುಗಡೆ ಆಯಿತು. ಟ್ರೇಲರ್ ಮೂಲಕ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಲಾಗಿದೆ. ಈ ಸಿನಿಮಾ ಜುಲೈ 31ರಂದು ರಿಲೀಸ್ ಆಗಲಿದೆ. ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ‘ಜಾಲಿ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು. ಇದೇ ವೇದಿಕೆಯಲ್ಲಿ ಮಾತನಾಡಿದ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಜಾಲಿ’ ಚಿತ್ರತಂಡಕ್ಕೆ ಯಶಸ್ಸು ಸಿಗಲಿ ಎಂದರು. ‘ಸಿನಿಮಾಗೆ ಕೋಟಿಗಟ್ಟಲೆ ಹಣ ಹೂಡುವ ನಿರ್ಮಾಪಕರೇ ನಿಜವಾದ ಹೀರೋ. ಆದ್ದರಿಂದ ಅವರಿಗೆ ಮೊದಲು ಗೌರವ ಸಿಗಬೇಕು’ ಎಂದು ಉಮಾಪತಿ ಹೇಳಿದರು.

ಹೊಸ ತಂಡಕ್ಕೆ ಉಮಾಪತಿ ಸಲಹೆ:

‘ವರ್ಷಕ್ಕೆ 300ರಿಂದ 400 ಸಿನಿಮಾಗಳು ಬರುತ್ತವೆ. ಆದರೆ ಶೋಕಿಗಾಗಿ ಸಿನಿಮಾ ಮಾಡಬಾರದು. ಕಥೆ ಮತ್ತು ಬಜೆಟ್ ಸ್ಪಷ್ಟತೆಯೊಂದಿಗೆ ಜವಾಬ್ದಾರಿಯಿಂದ ಸಿನಿಮಾ ಮಾಡಬೇಕು. ಮೊಬೈಲ್, ಬಿಗ್ ‍ಬಾಸ್‍ಗಳ ಕಾರಣದಿಂದ ಜನರಿಗೆ ಬೆರಳ ತುದಿಯಲ್ಲೇ ಮನರಂಜನೆ ಸಿಗುತ್ತಿದೆ. ಹೀಗಾಗಿ ಜನರನ್ನು ಚಿತ್ರಮಂದಿರಕ್ಕೆ ಕರೆತರುವುದು ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಚಿತ್ರತಂಡಗಳು ಆಲೋಚನೆ ಮಾಡಬೇಕು’ ಎಂದು ಉಮಾಪತಿ ಶ್ರೀನಿವಾಸ್ ಗೌಡ ಅವರು ಹೇಳಿದರು.

ಇದನ್ನೂ ಓದಿ: ನಿರ್ಮಾಪಕ-ನಿರ್ದೇಶಕ ಇದ್ರೆ ಮಾತ್ರ ಸ್ಟಾರ್ ಹುಟ್ಟುತ್ತಾನೆ; ಉಮಾಪತಿ ಶ್ರೀನಿವಾಸ್

ಸಿನಿಮಾ ಬಗ್ಗೆ ಮಾತನಾಡಿದ ಹೀರೋ ತಾರುಷ್:

‘ಜಾಲಿ’ ಸಿನಿಮಾದಲ್ಲಿ ಹೊಸ ನಟ ತಾರುಷ್ ಅವರು ಹೀರೋ ಆಗಿ ನಟಿಸಿದ್ದಾರೆ. ಅಲ್ಲದೇ, ಅವರೇ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಕಥೆ ಏನು ಎಂಬುದರ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು. ‘ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಮತ್ತು ಸಂಬಂಧಗಳಲ್ಲಿನ ತಪ್ಪು ತಿಳುವಳಿಕೆ ಕುರಿತು ಚಿತ್ರದಲ್ಲಿ ಕಥೆ ಹೆಣೆಯಲಾಗಿದೆ. ಕೊನೆಯಲ್ಲಿ ಉತ್ತಮ ಪರಿಹಾರ ಮತ್ತು ಸಂದೇಶವಿದೆ. ಕಾಮಿಡಿ, ಆ್ಯಕ್ಷನ್, ಅಪ್ಪ-ಮಗಳ ಎಮೋಷನ್ ಕೂಡ ಇದೆ’ ಎಂದು ಅವರು ಹೇಳಿದರು.

‘ಜಾಲಿ’ ಸಿನಿಮಾದ ಟ್ರೇಲರ್:

ತಾರುಷ್ ಅವರು ಸುಮಾರು 12 ವರ್ಷಗಳ ಕಾಲ ರಂಗಭೂಮಿ ಮತ್ತು ಕಿರುಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ‘ಜಾಲಿ’ ಚಿತ್ರಕ್ಕೆ ನಿತಿನ್ ರಾಜ್ ಅವರು ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು ಯೋಗರಾಜ್ ಭಟ್, ಕಿನ್ನಲ್ ರಾಜ್ ಸಾಹಿತ್ಯ ಬರೆದಿದ್ದಾರೆ. ರೇಖಾ ದಾಸ್, ಶೋಭರಾಜ್ ಮುಂತಾದ ಹಿರಿಯ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆ: ಇತ್ಯರ್ಥವಾಗುವವರೆಗೂ ಮಹದಾಯಿಗೆ ಅನುಮತಿ ಇಲ್ಲ ಎಂದ ಕೇಂದ್ರ – Kannada News | Centre Denies Permission for Mahadayi Project Until Dispute Is Resolved

ಹುಬ್ಬಳ್ಳಿ, ಜುಲೈ 23: ಮಹದಾಯಿ ಯೋಜನೆ (Mahadayi Project) ಜಾರಿಯಾದರೆ ಅನೇಕ ನಗರ ಮತ್ತು ಗ್ರಾಮಗಳಿಗೆ ಕುಡಿಯುವ ನೀರು ಸಿಗುತ್ತದೆ. ಮಹದಾಯಿ ಯೋಜನೆ ಇಂದು ಜಾರಿಯಾಗುತ್ತೆ, ನಾಳೆ ಜಾರಿಯಾಗುತ್ತೆ ಅಂತ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕಿತ್ತೂರು ಕರ್ನಾಟಕ ಭಾಗದ ಜನರು ದಶಕಗಳಿಂದ ಕಾಯುತ್ತಿದ್ದಾರೆ. ಆದರೆ ಯೋಜನೆಗೆ ಒಂದಾದ ಮೇಲೆ ಒಂದು ಅಡ್ಡಿಗಳು ಬರುತ್ತಲೆ ಇವೆ. ಆಳುವ ವರ್ಗದ ನಿರ್ಲಕ್ಷ್ಯದಿಂದ ಇನ್ನುವರೆಗೆ ಯೋಜನೆ ಜಾರಿಯಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸುಪ್ರೀಂ ಕೋರ್ಟ್​ನಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕವೇ ಯೋಜನೆಗೆ ಅನುಮತಿ ನೀಡೋದಾಗಿ ಕೇಂದ್ರ ಸರ್ಕಾರ ಹೇಳಿದ್ದು, ಯೋಜನೆಗೆ ಮತ್ತೆ ಹಿನ್ನಡೆ ತಂದಿದೆ.

ಕರ್ನಾಟಕ ಮತ್ತು ಗೋವಾ ನಡುವೆ ಬಿಕ್ಕಟ್ಟು

ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕಿತ್ತೂರು ಕರ್ನಾಟಕ ಭಾಗದ 13 ಪಟ್ಟಣಗಳು ಮತ್ತು ನೂರಾರು ಗ್ರಾಮಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಉದ್ದೇಶಕ್ಕಾಗಿ ಮಹದಾಯಿ ಯೋಜನೆ ಜಾರಿಗೊಳಿಸಬೇಕು ಅಂತ ದಶಕಗಳಿಂದ ಜನರು ಆಗ್ರಹಿಸುತ್ತಲೇ ಇದ್ದಾರೆ. ಆದರೆ ಇದೇ ಯೋಜನೆ ವಿಚಾರವಾಗಿ ಕರ್ನಾಟಕ ಮತ್ತು ಗೋವಾ ನಡುವೆ ಬಿಕ್ಕಟ್ಟಿಗೆ ಕಾರಣವಾಗಿದೆ. 2010 ರಲ್ಲಿ ಕೇಂದ್ರ ಸರ್ಕಾರ ಮಹದಾಯಿ ಜಲವಿವಾದ ಮಂಡಳಿ ರಚನೆ ಮಾಡಿತ್ತು. ಈ ಮಂಡಳಿ 2018 ರಲ್ಲಿ ಅಂತಿಮ ತೀರ್ಪು ನೀಡಿತ್ತು.

ಇದನ್ನೂ ಓದಿ: ಗುಡ್​ ನ್ಯೂಸ್: ಕೊನೆಗೂ ಮಹದಾಯಿ ಯೋಜನೆ ಜಾರಿಗೆಗೆ ದಿಟ್ಟ ಹೆಜ್ಜೆ ಇಟ್ಟ ಸರ್ಕಾರ

ಮಂಡಳಿ, ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶ ಮಾಡಿತ್ತು. ಮಹದಾಯಿ ಯೋಜನೆಯ ಡಿಪಿಆರ್​ಗೆ ಅನುಮತಿ ಸಿಕ್ಕರು ಕೂಡ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ಸಿಕ್ಕಿಲ್ಲ. ಮಹದಾಯಿ ಯೋಜನೆಗೆ ಅನುಮತಿ ನೀಡದಂತೆ ಗೋವಾ ಸರ್ಕಾರ ಮೇಲಿಂದ ಮೇಲೆ ಕೇಂದ್ರದ ಮೇಲೆ ಒತ್ತಡ ಹೇರುತ್ತಲೆ ಇದೆ. ಜೊತೆಗೆ ಕೋರ್ಟ್​ನಲ್ಲಿ ಕೂಡ ಯೋಜನೆಗೆ ಅನುಮತಿ ನೀಡದಂತೆ ಅರ್ಜಿ ಹಾಕಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕೂಡ ಮೇಲ್ಮನವಿ ಸಲ್ಲಿಸಿದೆ. ಇದೀಗ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿರುವ ಪ್ರಕರಣ ಇತ್ಯರ್ಥವಾಗುವವರಗೆ ಮಹದಾಯಿ ಯೋಜನೆಗೆ ಅನುಮತಿ ನೀಡೋದಿಲ್ಲ ಅಂತ ಹೇಳಿದ್ದು, ಯೋಜನೆಗೆ ಮತ್ತೊಮ್ಮೆ ಹಿನ್ನಡೆ ಉಂಟಾಗಿದೆ.

ಕೇಂದ್ರ ಸರ್ಕಾರ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಕರ್ನಾಟಕ ನೀರಾವರಿ ನಿಗಮಕ್ಕೆ ಉತ್ತರ ನೀಡಿರುವ ಕೇಂದ್ರ ಸರ್ಕಾರ, ‘ಕರ್ನಾಟಕ ಮತ್ತು ಗೋವಾ ನಡುವಿನ ಈ ಪ್ರಕರಣ ಕೋರ್ಟ್​ನಲ್ಲಿದ್ದು, ವಿಚಾರಣಾ ಹಂತದಲ್ಲಿದೆ. ಈ ಸಮಯದಲ್ಲಿ ಮಧ್ಯಪ್ರವೇಶ ಮಾಡುವುದು ಸರಿಯಲ್ಲ. ಹೀಗಾಗಿ ಅರಣ್ಯ ತೀರುವಳಿಯ ಪ್ರಸ್ತಾಪವನ್ನು ವಾಪಸ್​ ಕಳುಹಿಸಲಾಗಿದೆ. ಕೋರ್ಟ್ ನಿರ್ದೇಶನ ಆಧಾರದಲ್ಲಿ ಪ್ರಸ್ತಾವವನ್ನು ಮರುಪರಿಶೀಲನೆ ಮಾಡಲಾಗುವುದು’ ಅಂತ ಹೇಳಿದೆ. ಇದು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಯೋಜನೆ ಲಾಭ ಪಡೆಯುವ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸಮರ್ಪಕ ನೀರು ಸಿಗದೇ ಪರದಾಟ

ಮಹದಾಯಿ ಯೋಜನೆಗೆ ಈ ಹಿಂದೆ ಕೇಂದ್ರ ಸರ್ಕಾರ ಪರವಾನಗಿ ನೀಡಿದಾಗ ಬಿಜೆಪಿ ನಾಯಕರು ರಾಜ್ಯದಲ್ಲಿ ಅದ್ಧೂರಿ ವಿಜಯೋತ್ಸವ ಆಚರಿಸಿದ್ದರು. ಅಂದು ಸಿಎಂ ಆಗಿದ್ದ ಯಡಿಯೂರಪ್ಪ ಎರಡು ಸಾವಿರ ಕೋಟಿ ರೂ ವೆಚ್ಚದ ಕಾಮಗಾರಿ ಕೈಗೊಳ್ಳಲು ಡಿಪಿಆರ್ ಕೂಡ ಸಿದ್ದಮಾಡಿಸಿದ್ದರು. ಕಾಮಗಾರಿ ಕೂಡ ಆರಂಭವಾಗಿತ್ತು. ಆದರೆ ಗೋವಾ ಕೋರ್ಟ್ ಮೆಟ್ಟಿಲೇರಿದ್ದರಿಂದ ಯೋಜನೆ ನೆನೆಗುದಿಗೆ ಬಿದ್ದಿದೆ. ಇಂದಿಗೂ ಕೂಡಾ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಯೋಜನೆ ವ್ಯಾಪ್ತಿಯ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಹೀಗಾಗಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಇನ್ನು ಒತ್ತಡ ಹಾಕಬೇಕು ಅನ್ನೋದು ಈ ಭಾಗದ ಜನರ ಆಗ್ರಹವಾಗಿದೆ.

ಮತ್ತೆ ಹೋರಾಟದ ಎಚ್ಚರಿಕೆ 

ಕೇಂದ್ರದಲ್ಲಿ ರಾಜ್ಯದ ನಾಲ್ವರು ಮಂತ್ರಿಗಳಿದ್ದಾರೆ. ಬಿಜೆಪಿ, ಜೆಡಿಎಸ್​ನಿಂದ ಗೆದ್ದಿರುವ 20 ಸಂಸದರು ಇದ್ದಾರೆ. ಆದರೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಯೋಜನೆ ಜಾರಿಗೆ ಅಡ್ಡಿ ನಿವಾರಣೆ ಮಾಡ್ತಿಲ್ಲಾ. ಗೋವಾದವರ ಆಕ್ಷೇಪಣೆ ಹಿಂಪಡೆಯುವಂತೆ ಮಾಡುತ್ತಿಲ್ಲ. ಇದೇ ರೀತಿಯಾದ್ರೆ ಮತ್ತೆ ಹೋರಾಟ ಮಾಡಬೇಕಾಗುತ್ತದೆ ಎಂದು ಮಹದಾಯಿ ಹೋರಾಟಗಾರ ಬಾಬಾಜಾನ್ ಮುಧೋಳ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಮಹದಾಯಿ ಯೋಜನೆಗೆ ಗೋವಾ ಸರ್ಕಾರದಿಂದ ಮತ್ತೆ ಕ್ಯಾತೆ; ಜಲನಯನ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ

ದಶಕಗಳಿಂದ ಕುಡಿಯಲು ಮತ್ತು ಕೃಷಿಗೆ ನೀರು ಇಲ್ಲದೇ ಪರದಾಡುತ್ತಿರುವ ಧಾರವಾಡ, ಬೆಳಗಾವಿ, ಗದಗ ಬಾಗದ ಜನರು ಯೋಜನೆ ಜಾರಿಗೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಮನ್ವಯತೆಯನ್ನು ಸಾಧಿಸಿ, ಯೋಜನೆ ಜಾರಿಗೊಳಿಸಲು ಮುಂದಾಗಬೇಕಿದೆ. ಆರೋಪ ಪ್ರತ್ಯಾರೋಪ ಮಾಡದೆ ಜನಪ್ರತಿನಿಧಿಗಳು ಯೋಜನೆ ಜಾರಿಗೆ ತಮ್ಮ ಬದ್ದತೆಯನ್ನು ತೋರಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪದೇ ಪದೇ ಹಸಿವಾಗುವುದು ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು! – Kannada News | Constant hunger when it could be more than just an appetite

ಹಸಿವಾಗುವುದು ಸಹಜ. ದೇಹಕ್ಕೆ ಶಕ್ತಿ (ಎನರ್ಜಿ) ಬೇಕಾದಾಗ ಆಹಾರ ಸೇವಿಸಬೇಕಾಗುತ್ತದೆ. ಆದರೆ ಊಟ ಮಾಡಿದ ಕೆಲವೇ ನಿಮಿಷದಕ್ಕೆ ಮತ್ತೆ ಹಸಿವಾಗುವುದು, ಅಥವಾ ದಿನವಿಡೀ ಏನಾದರೂ ತಿನ್ನಬೇಕು ಎಂಬ ಭಾವನೆಯನ್ನು ನಿರ್ಲಕ್ಷಿಸಬಾರದು. ಕೆಲವೊಮ್ಮೆ ಹೆಚ್ಚು ದೈಹಿಕ ಶ್ರಮ, ಕಡಿಮೆ ಆಹಾರ ಸೇವನೆ ಅಥವಾ ಜೀವನಶೈಲಿಯಲ್ಲಿ ಮಾಡಿಕೊಂಡ ಬದಲಾವಣೆಯಿಂದ ಈ ರೀತಿ ಆಗಬಹುದು. ಆದರೆ ಈ ಸಮಸ್ಯೆ ನಿರಂತರವಾಗಿ ಮುಂದುವರಿದರೆ, ಅದರ ಹಿಂದೆ ಆರೋಗ್ಯ ಸಮಸ್ಯೆ ಇರಬಹುದೆಂದು ತಜ್ಞರು ಎಚ್ಚರಿಸುತ್ತಾರೆ. ಅದರಲ್ಲಿಯೂ ಪದೇ ಪದೇ ಹಸಿವಾಗುವುದರ ಜೊತೆಗೆ ತೂಕ ಕಡಿಮೆಯಾಗುವುದು, ಅತಿಯಾದ ಬಾಯಾರಿಕೆ, ಆಗಾಗ ಮೂತ್ರ ವಿಸರ್ಜನೆ, ಆಯಾಸ ಅಥವಾ ಇತರ ದೈಹಿಕ ಬದಲಾವಣೆಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ.

ಯಾವಾಗಲೂ ಹಸಿವಾಗಲು ಕಾರಣವಾಗುವ ಆರೋಗ್ಯ ಸಮಸ್ಯೆಗಳು:

ಮಧುಮೇಹ (Diabetes): ಸಾಮಾನ್ಯವಾಗಿ ಮಧುಮೇಹ ಇದ್ದಾಗ ದೇಹವು ಗ್ಲೂಕೋಸ್ ಅನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ದೇಹಕ್ಕೆ ಸಾಕಷ್ಟು ಶಕ್ತಿ ಸಿಗದೇ ಮತ್ತೆ ಮತ್ತೆ ಹಸಿವಾಗಬಹುದು. ಇದನ್ನು Polyphagia ಎಂದು ಕರೆಯಲಾಗುತ್ತದೆ.

ಥೈರಾಯ್ಡ್ ಗ್ರಂಥಿಯ ಅತಿಯಾದ ಕಾರ್ಯ (Hyperthyroidism): ಥೈರಾಯ್ಡ್ ಹಾರ್ಮೋನ್ ಹೆಚ್ಚಾದರೆ ದೇಹದ ಚಯಾಪಚಯ ಕ್ರಿಯೆ (Metabolism) ವೇಗವಾಗುತ್ತದೆ. ಇದರಿಂದ ದೇಹ ಹೆಚ್ಚು ಶಕ್ತಿಯನ್ನು ಬಳಸಿಕೊಂಡು ಹಸಿವು ಹೆಚ್ಚಾಗಬಹುದು.

ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುವುದು (Hypoglycemia): ರಕ್ತದಲ್ಲಿನ ಸಕ್ಕರೆಯ ಮಟ್ಟ ಹಠಾತ್ ಕಡಿಮೆಯಾದಾಗ ತೀವ್ರ ಹಸಿವು, ನಡುಕ, ಬೆವರು ಮತ್ತು ತಲೆಸುತ್ತು ಕಾಣಿಸಬಹುದು.

ಮಾನಸಿಕ ಒತ್ತಡ ಮತ್ತು ಆತಂಕ: ಒತ್ತಡ (Stress), ಆತಂಕ (Anxiety) ಅಥವಾ ಭಾವನಾತ್ಮಕ ಸಮಸ್ಯೆಗಳ ಕಾರಣ ಕೆಲವರು ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುತ್ತಾರೆ. ಇದನ್ನು Emotional Eating ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ತೂಕ ಇಳಿಕೆ, ಜೀರ್ಣಕ್ರಿಯೆ, ಹೃದಯ ಆರೋಗ್ಯ ಕಾಪಾಡಲು ಒಂದು ಮುಷ್ಟಿ ಮೊಳಕೆ ಬಂದ ಮೆಂತ್ಯೆ ಸಾಕು..!

ಮಾಸಿಕ ಋತುಚಕ್ರ: ಮಹಿಳೆಯರಲ್ಲಿ ಮಾಸಿಕ ಋತುಚಕ್ರ ಆರಂಭವಾಗುವ ಮುನ್ನ ಹಾರ್ಮೋನ್ ಬದಲಾವಣೆಗಳಿಂದ ಹಸಿವು ಹೆಚ್ಚಾಗುವುದು ಸಾಮಾನ್ಯ.

ಕೆಲವು ಔಷಧಿಗಳ ಪರಿಣಾಮ: ಸ್ಟಿರಾಯ್ಡ್‌ಗಳು, ಕೆಲವು ಖಿನ್ನತೆ ನಿವಾರಕ ಔಷಧಿಗಳು (Antidepressants) ಮತ್ತು ಇತರ ಕೆಲವು ಔಷಧಿಗಳು ಹಸಿವನ್ನು ಹೆಚ್ಚಿಸಬಹುದು.

ಯಾವ ಪರೀಕ್ಷೆಗಳನ್ನು ವೈದ್ಯರು ಸೂಚಿಸಬಹುದು?

  • ರಕ್ತದಲ್ಲಿನ ಸಕ್ಕರೆ ಪರೀಕ್ಷೆ (Fasting Blood Sugar, HbA1c)
  • ಥೈರಾಯ್ಡ್ ಕಾರ್ಯಪರೀಕ್ಷೆ (TSH, T3, T4)
  • ಸಂಪೂರ್ಣ ರಕ್ತ ಪರೀಕ್ಷೆ (CBC)
  • ಅಗತ್ಯವಿದ್ದರೆ ಹಾರ್ಮೋನ್ ಪರೀಕ್ಷೆಗಳು
  • ವೈದ್ಯಕೀಯ ಇತಿಹಾಸ ಮತ್ತು ಆಹಾರ ಪದ್ಧತಿಯ ಮೌಲ್ಯಮಾಪನ

ಪದೇ ಪದೇ ಹಸಿವಾಗುತ್ತಿದ್ದರೆ ಏನು ಮಾಡಬೇಕು?

  • ಪ್ರೋಟೀನ್ ಸಮೃದ್ಧ ಆಹಾರವನ್ನು ಸೇವಿಸಿ (ಮೊಟ್ಟೆ, ಹಾಲು, ಬೇಳೆ, ಪನೀರ್).
  • ಸಂಪೂರ್ಣ ಧಾನ್ಯಗಳು ಮತ್ತು ಫೈಬರ್ ಅಧಿಕವಾಗಿರುವ ಆಹಾರ ಸೇರಿಸಿ.
  • ಜಂಕ್ ಫುಡ್ ಮತ್ತು ಸಕ್ಕರೆ ಹೆಚ್ಚಿರುವ ಆಹಾರವನ್ನು ಕಡಿಮೆ ಮಾಡಿ.
  • ಸಾಕಷ್ಟು ನೀರು ಕುಡಿಯಿರಿ.
  • ಸಮಯಕ್ಕೆ ಸರಿಯಾಗಿ ಊಟ ಮಾಡಿ.
  • ಪ್ರತಿದಿನ ನಿಯಮಿತ ವ್ಯಾಯಾಮ ಮಾಡಿ.
  • 7–8 ಗಂಟೆ ಸರಿಯಾಗಿ ನಿದ್ರೆ ಮಾಡಿ.

ಯಾವ ಆಹಾರಗಳು ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತವೆ?

  • ಓಟ್ಸ್
  • ಮೊಟ್ಟೆ
  • ಬೇಳೆಕಾಳುಗಳು
  • ಹಸಿರು ತರಕಾರಿಗಳು
  • ಸೇಬು
  • ಬಾದಾಮಿ
  • ಅಕ್ರೋಟ್
  • ಗ್ರೀಕ್ ಯೋಗರ್ಟ್
  • ಚಿಯಾ ಬೀಜಗಳು

ಯಾವಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು?

  • ಹಸಿವಿನ ಜೊತೆಗೆ ವೇಗವಾಗಿ ತೂಕ ಕಡಿಮೆಯಾಗುವುದು.
  • ಅತಿಯಾದ ಬಾಯಾರಿಕೆ.
  • ಆಗಾಗ ಮೂತ್ರ ವಿಸರ್ಜನೆ.
  • ದೃಷ್ಟಿ ಮಸುಕಾಗುವುದು.
  • ತೀವ್ರ ಆಯಾಸ.
  • ಕೈಕಾಲು ನಡುಕ ಅಥವಾ ಬೆವರು.

ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆ ಪಡೆದು ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಈ ರೀತಿಯ ಜನರು ಮೋಸ ಹೋಗ್ತಾರೆ ಎನ್ನುತ್ತಾರೆ ಚಾಣಕ್ಯ – Kannada News | Chanakya Niti: Chanakya says that such people get cheated easily

ಪ್ರಪಂಚದಲ್ಲಿ ಮೋಸ (cheat) ಹೋಗುವವರು  ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂದು ಹೇಳುವ ಮಾತನ್ನು ನೀವು ಕೇಳಿರಬಹುದಲ್ವಾ. ಆದರೆ ಎಂತಹ ಜನರು ಸುಲಭವಾಗಿ ಮೋಸ ಹೋಗ್ತಾರೆ ಗೊತ್ತಾ? ಈ ಬಗ್ಗೆ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿದ್ದು, ಕೆಲವೊಂದು ಗುಣ, ಅಭ್ಯಾಸಗಳನ್ನು ಹೊಂದಿರುವ ಜನರು ಕುತಂತ್ರ ಮತ್ತು ಸ್ವಾರ್ಥಿ ಜನರ ದುರಾಸೆಗೆ ಸುಲಭವಾಗಿ ಬಲಿಯಾಗುತ್ತಾರೆ ಎಂದು ಹೇಳಿದ್ದಾರೆ. ನಿಮ್ಮಲ್ಲೂ ಆ ಗುಣಗಳಿದ್ದರೆ ಅದನ್ನು ತಕ್ಷಣವೇ ಬದಲಾಯಿಸಿ, ಬುದ್ಧಿವಂತಿಕೆಯಿಂದ ಮೋಸ ಹೋಗುವುದನ್ನು ತಪ್ಪಿಸಿ.

ಈ ರೀತಿಯ ಜನರು ಮೋಸ ಹೋಗುವ ಸಾಧ್ಯತೆ ಹೆಚ್ಚು:

ಮುಗ್ಧ ಜನರು: ಮುಗ್ಧ ಮನಸ್ಸಿನವರನ್ನು ಮೋಸ ಗೊಳಿಸುವುದು ತುಂಬಾನೇ ಸುಲಭ ಎಂದು ಹೇಳಿದ್ದಾರೆ ಆಚಾರ್ಯ ಚಾಣಕ್ಯ. ಕುತಂತ್ರಿಗಳು ಯಾವಾಗಲೂ ಮುಗ್ಧ ಜನರನ್ನು ಟಾರ್ಗೆಟ್‌ ಮಾಡಿ ಅವರ ನಂಬಿಕೆಯನ್ನು ಗಳಿಸಿ ಕೊನೆಗೆ ಅವರ ಬೆನ್ನಿಗೆ ಚೂರಿ ಹಾಕುತ್ತಾರೆ. ಮುಗ್ಧ ಜನರು ತಮ್ಮಂತೆಯೇ ಎಲ್ಲರೂ ಪ್ರಾಮಾಣಿಕರು ಎಂದು ಭಾವಿಸಿ ಎಲ್ಲರನ್ನೂ ನಂಬುತ್ತಾರೆ. ಹಾಗಾಗಿ ಸುಲಭವಾಗಿ ಮೋಸ ಹೋಗ್ತಾರೆ. ಆದ್ದರಿಂದ ಒಳ್ಳೆಯವರಾಗಿರುವುದು ಒಳ್ಳೆಯದು, ಆದರೆ ಅತಿಯಾದ ಒಳ್ಳೆಯತನ ತೋರುವುದು ತರವಲ್ಲ ಎಂದಿದ್ದಾರೆ ಚಾಣಕ್ಯ.

ಎಲ್ಲರನ್ನೂ ಕುರುಡಾಗಿ ನಂಬುವ ಜನರು: ನೀವು ಕೂಡ ಹಿಂದೂಮುಂದು ನೋಡದೆ ಎಲ್ಲರನ್ನೂ ಕುರುಡಾಗಿ ನಂಬುತ್ತೀರಾ? ಹಾಗಿದ್ರೆ ನೀವು ಬೇಗನೇ ಮೋಸ ಹೋಗ್ತೀರಿ. ಆಚಾರ್ಯ ಚಾಣಕ್ಯರ ಪ್ರಕಾರ ಜನರ ಸಿಹಿ ಮಾತುಗಳನ್ನು ಕೇಳಿ ಅವರನ್ನು ಕುರುಡಾಗಿ ನಂಬುತ್ತಾರೋ, ಅವರನ್ನು ಸುಲಭವಾಗಿ ಮೋಸಗೊಳಿಸಬಹುದು. ಆದ್ದರಿಂದ ಯಾರನ್ನೂ ನಂಬಲು ಹೋಗಬೇಡಿ. ಅತಿಯಾದ ನಂಬಿಕೆಯೂ ಒಳ್ಳೆಯದಲ್ಲ, ಇದರಿಂದ ಕೊನೆಗೆ ನೀವು ನೋವು ಅನುಭವಿಸಬೇಕಾಗುತ್ತದೆ.

ಭಾವನಾತ್ಮಕವಾಗಿ ವರ್ತಿಸುವ ಜನ: ಬುದ್ಧಿವಂತಿಕೆಯಿಂದ ಯೋಚಿಸದೆ ಭಾವನಾತ್ಮಕವಾಗಿ ವರ್ತಿಸುವ ಜನರು ಬಹುಬೇಗನೇ ಮೋಸ ಹೋಗ್ತಾರೆ. ಮೋಸಗಾಗರು ಎಮೋಷನಲ್‌ ಬ್ಲ್ಯಾಕ್‌ಮೇಲ್‌ ಮಾಡುವ ಮೂಲಕ ಇಂತಹ ಜನರನ್ನು ಸುಲಭವಾಗಿ ಮೋಸಗೊಳಿಸುತ್ತಾರೆ. ಹಾಗಾಗಿ ಪ್ರತಿಯೊಂದು ಸಂದರ್ಭದಲ್ಲೂ ಭಾವನಾತ್ಮಕ ಜೀವಿಯಾಗಿರುವುದು ಒಳ್ಳೆಯದಲ್ಲ, ಪ್ರಾಕ್ಟಿಕಲ್‌ ಅಗಿ ಯೋಚಿಸಿ ಬುದ್ಧಿವಂತಿಕೆಯಿಂದ ವರ್ತಿಸಬೇಕು ಆಗ ಮಾತ್ರ ಮೋಸ ಹೋಗುವದನ್ನು ತಪ್ಪಿಸಬಹುದು ಎಂದಿದ್ದಾರೆ ಚಾಣಕ್ಯ.

ಇದನ್ನೂ ಓದಿ: ಹೊಸದಾಗಿ ಬಿಸಿನೆಸ್‌ ಆರಂಭಿಸುವ ಪ್ರತಿಯೊಬ್ಬರೂ ಚಾಣಕ್ಯರ ಸಲಹೆಗಳನ್ನು ಪಾಲಿಸಲೇಬೇಕು

ಸುಳ್ಳು ಹೊಗಳಿಕೆಗೆ ಸಂತೋಷಪಡುವ ಜನರು: ಮೋಸಗಾರರು ಹಾಗೂ ಕುತಂತ್ರಿಗಳು ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ. ಅವರು ತಮ್ಮ ಕಪಟ ಮಾತುಗಳಿಂದ ಹೊಗಳಿದಾಗ, ಈ ಸುಳ್ಳು ಹೊಗಳಿಕೆಯ ಮಾತನ್ನು ಕೇಳಿ ಸಂತೋಷಪಡುತ್ತಾರೋ ಅವರು ಬೇಗನೇ ಮೋಸಗಾರರ ಬಲೆಗೆ ಬೀಳುತ್ತಾರೆ ಎನ್ನುತ್ತಾರೆ ಚಾಣಕ್ಯ.

ಇತರರನ್ನು ಅವಲಂಬಿಸಿರುವ ಜನರು: ಕೆಲವು ಜನರ ಎಲ್ಲದಕ್ಕೂ ಇತರರನ್ನು ಅವಲಂಬಿಸಿರುತ್ತಾರೆ. ಇಂತಹ  ಜನರು ಬೇಗನೇ ಮೋಸ ಹೋಗುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ ನೀವು ನಿಮ್ಮ ಜೀವನದ ನಿಯಂತ್ರಣವನ್ನು ಬೇರೆಯವರ ಕೈಯಲ್ಲಿ ಇಟ್ಟಾಗ, ಆ ವ್ಯಕ್ತಿಯು  ಸ್ವಂತ ಲಾಭಕ್ಕಾಗಿ ನಿಮ್ಮನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತಾನೆ ಮತ್ತು ಆ ವ್ಯಕ್ತಿಯನ್ನು ಕುಡುಡಾಗಿ ನಂಬಿ ನೂವು ಮೋಸ ಹೋಗ್ತೀರಿ. ಆದ್ದರಿಂದ ಯಾರ ಮೇಲೂ ಅವಲಂಬಿತರಾಗಬೇಡಿ, ನಿಮ್ಮ ಜೀವನದ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಿ, ನಿಮಗಾಗಿ ನೀವು ಬುದ್ಧಿವಂತಿಕೆಯಿಂದ ಯೋಚಿಸುವುದನ್ನು ಕಲಿಯಿರಿ. ಮುಖ್ಯವಾಗಿ ನೀವು ನಿಮಗಾಗಿ ಬದುಕುವುದನ್ನು ಕಲಿಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ವರ್ಷದಲ್ಲಿ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ 2ನೇ ಬಾರಿ ಏರಿಕೆ, ವಾಹನ ಸವಾರರು ಆಕ್ರೋಶ – Kannada News | Bengaluru Mysuru Expressway toll hiked again: 2nd increase this year

ಬೆಂಗಳೂರು, (ಜುಲೈ 23): ಮೂರು ತಿಂಗಳೊಳಗೆ ಎರಡನೇ ಬಾರಿಗೆ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯ ಟೋಲ್​​ ದರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪರಿಷ್ಕರಿಸಿದ್ದು, ಕನಿಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಳ ಮಾಡಲಾಗಿದೆ. ಆ ಮೂಲಕ ವಾಹನ ಸವಾರರಿಗೆ ಮತ್ತೆ ದರ ಏರಿಕೆಯ ಬಿಸಿ ತಟ್ಟಿದೆ. ಹೊಸ ದರಗಳು ಜುಲೈ 21ರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದ್ದು, ಎನ್‌ಎಚ್-275ರ ಆರು ಪಥದ ಬೆಂಗಳೂರು–ನಿಡಘಟ್ಟ ಮಾರ್ಗಕ್ಕೆ ಅನ್ವಯವಾಗಲಿವೆ. ಇನ್ನು ಈ ಬಗ್ಗೆ ವಾಹನ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಮತ್ತೆ ಏರಿಕೆ: ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ

Source link

ಪಿಒಕೆ ಪ್ರಧಾನಿಯಾಗಬೇಕೆಂಬ ನವಾಜ್ ಶರೀಫ್ ಆಸೆಗೆ ಅಲ್ಲಿನ ಕಾನೂನೇ ಅವರಿಗೆ ತೊಡಕು! – Kannada News | Nawaz Sharif wants to become PoK prime minister but what law Bars him

ಇಸ್ಲಮಾಬಾದ್, ಜುಲೈ 23: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಪಾಕ್ ಆಕ್ರಮಿತ ಕಾಶ್ಮೀರದ (PoK) ಪ್ರಧಾನಿಯಾಗಬೇಕೆಂಬುದು ನನ್ನಾಸೆ ಎಂದು ಹೇಳಿಕೊಂಡಿದ್ದಾರೆ. ಪಿಒಕೆ ನನ್ನ ಎರಡನೇ ಮನೆಯಿದ್ದಂತೆ. ಆ ಪ್ರದೇಶವನ್ನು ಆಳಲು ಬಯಸುವುದಾಗಿ ತಿಳಿಸಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ಪಕ್ಷದ ಮುಖ್ಯಸ್ಥರಾಗಿರುವ ನವಾಜ್ ಶರೀಫ್, ಈ ವಾರದ ಆರಂಭದಲ್ಲಿ ಪಿಒಕೆಯ ಅತಿ ದೊಡ್ಡ ನಗರವಾದ ಮುಜಫರಾಬಾದ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ತಮ್ಮ ಈ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಸ್ವಂತ ಪ್ರಾಂತ್ಯವಾದ ಪಂಜಾಬ್ ಎಷ್ಟು ಮುಖ್ಯವೋ, ತಮಗೆ ಪಿಒಕೆ ಕೂಡ ಅಷ್ಟೇ ಮುಖ್ಯ ಎಂದು ನವಾಜ್ ಶರೀಫ್ ಪ್ರತಿಪಾದಿಸಿದ್ದಾರೆ. “ಇದು ನನ್ನ ಎರಡನೇ ಮನೆ. ನನ್ನ ಪೂರ್ವಜರು ಕಾಶ್ಮೀರದಿಂದ ವಲಸೆ ಬಂದವರು” ಎಂದು ಅವರು ಹೇಳಿದ್ದಾರೆ.

“ನನ್ನ ಪಕ್ಷ ಗೆದ್ದರೆ, ಪಾಕ್ ಆಕ್ರಮಿತ ಕಾಶ್ಮೀರದ (PoK) ಅಭಿವೃದ್ಧಿಯನ್ನು ನಾನು ಖುದ್ದಾಗಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುವಂತೆ ನನ್ನನ್ನು ಇಲ್ಲಿನ ಪ್ರಧಾನಿಯನ್ನಾಗಿ ಮಾಡಲು ಪ್ರಧಾನಿ ಶೆಹಬಾಜ್ ಶರೀಫ್ ಅವರಲ್ಲಿ ನಾನು ಮನವಿ ಮಾಡುತ್ತೇನೆ” ಎಂದು ಪಾಕಿಸ್ತಾನದ ಹಾಲಿ ಪ್ರಧಾನಿಯ ಅಣ್ಣನೂ ಆಗಿರುವ ನವಾಜ್ ಶರೀಫ್ ಹೇಳಿದ್ದಾರೆ.

ಇದನ್ನೂ ಓದಿ: ಪಿಒಕೆಯಲ್ಲಿ ತೀವ್ರಗೊಂಡ ಹಿಂಸಾಚಾರ; ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿಗೆ 6 ಜನ ಬಲಿ

ಪಿಒಕೆಯಲ್ಲಿ ಚುನಾವಣೆ:

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜುಲೈ 27 ಮತ್ತು ಆಗಸ್ಟ್ 10ರ ನಡುವೆ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳಲ್ಲಿ ನವಾಜ್ ಶರೀಫ್ ಅವರ PML-N ಪಕ್ಷವು ಕೇಂದ್ರ ಒಕ್ಕೂಟ ಸರ್ಕಾರದಲ್ಲಿ ತನ್ನ ಮೈತ್ರಿಕೂಟದ ಭಾಗವಾಗಿರುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ವಿರುದ್ಧವೇ ಸ್ಪರ್ಧಿಸುತ್ತಿದೆ. ಪಾಕಿಸ್ತಾನದ ಆಡಳಿತದ ವಿರುದ್ಧ ಈ ಪ್ರದೇಶದಲ್ಲಿ ಭಾರಿ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ನಿಯಂತ್ರಣವಿಲ್ಲದ ಹಣದುಬ್ಬರ, ಹೆಚ್ಚಿದ ವಿದ್ಯುತ್ ದರಗಳು ಮತ್ತು ಗಣ್ಯರ ವಿಶೇಷ ಹಕ್ಕುಗಳನ್ನು ಖಂಡಿಸಿ ‘ಜಮ್ಮು ಕಾಶ್ಮೀರ ಜಂಟಿ ಅವಾಮಿ ಆಕ್ಷನ್ ಕಮಿಟಿ’ (JKJAAC) ನೇತೃತ್ವದಲ್ಲಿ ಭಾರಿ ಚಳವಳಿ ನಡೆಯುತ್ತಿವೆ.

ಪಿಒಕೆಯಲ್ಲಿ ನಡೆದ ಹಿಂಸಾಚಾರದಲ್ಲಿ ಇದುವರೆಗೆ 30ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ಪಾಕಿಸ್ತಾನ ಸರ್ಕಾರಕ್ಕೆ ಕೊನೆಯ ಒಂದು ಅವಕಾಶ ನೀಡುತ್ತಿರುವುದಾಗಿ ತಿಳಿಸಿದ್ದ ಜೆಎಎಸಿ (JAAC), ಕಳೆದ ವಾರ ತನ್ನ ಬೃಹತ್ ಮೆರವಣಿಗೆಯನ್ನು ಮುಂದೂಡಿತ್ತು. ಪಾಕಿಸ್ತಾನಿ ಅಧಿಕಾರಿಗಳಿಂದ ನಿಷೇಧಕ್ಕೊಳಗಾಗಿರುವ ಈ ಸಂಘಟನೆಯು ಇದೀಗ ಮತ್ತೊಮ್ಮೆ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಮುಜಫರಾಬಾದ್ ಕಡೆಗೆ ಕೈಗೊಳ್ಳುವ ‘ಲಾಂಗ್ ಮಾರ್ಚ್’ ಈ ವಾರ ಪುನರಾರಂಭಗೊಳ್ಳಲಿದೆ ಎಂದು ಎಚ್ಚರಿಸಿದ್ದು, ಪಿಒಕೆಯಾದ್ಯಂತ ನಡೆಯುತ್ತಿರುವ ಧರಣಿ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ.

ನವಾಜ್ ಶರೀಫ್‌ಗಿದೆ ಕಾನೂನಿನ ತಡೆ:

ನವಾಜ್ ಶರೀಫ್ ತಾವು ಪಿಒಕೆ ಪ್ರಧಾನಿಯಾಗಬೇಕೆಂದು ಬಯಸಿದರೂ ಅದು ಸುಲಭವಲ್ಲ. ಏಕೆಂದರೆ, ಪಿಒಕೆಯ ಸಂವಿಧಾನದ ಪ್ರಕಾರ ಅವರು ಅಲ್ಲಿನ ಪ್ರಧಾನಿಯಾಗಲು ಸಂಪೂರ್ಣವಾಗಿ ಅನರ್ಹರಾಗಿದ್ದಾರೆ. ಪಿಒಕೆ ಸಂವಿಧಾನದ ಪ್ರಕಾರ, ಆ ಪ್ರದೇಶದ ಮೂಲ ನಿವಾಸಿಯಾಗಿರುವ ಮತ್ತು ಅಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿರುವ ವ್ಯಕ್ತಿ ಮಾತ್ರ ಪ್ರಧಾನಿಯಾಗಲು ಅರ್ಹರು.

ಇದನ್ನೂ ಓದಿ: ಜಮ್ಮು-ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಉಗ್ರರ ಗುಂಡಿನ ದಾಳಿ; ಪೋಲೀಸ್ ಕಾನ್​ಸ್ಟೆಬಲ್ ಹುತಾತ್ಮ

ಆದರೆ, ನವಾಜ್ ಶರೀಫ್ ಅವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವರಾಗಿದ್ದು, ಪಿಒಕೆಯ ಮತದಾರರಲ್ಲ. ಹೀಗಾಗಿ, ಕಾನೂನಾತ್ಮಕವಾಗಿ ಅವರು ಅಲ್ಲಿ ಪ್ರಧಾನಿಯಾಗಲು ಸಾಧ್ಯವೇ ಇಲ್ಲ. ಆದ್ದರಿಂದ ಅವರ ಈ ಹೇಳಿಕೆ ಕೇವಲ್ ಚುನಾವಣಾ ಗಿಮಿಕ್ ಎಂದು ವಿಶ್ಲೇಷಿಸಲಾಗುತ್ತಿದೆ.

ಪಿಒಕೆ ಕುರಿತು ಭಾರತದ ನಿಲುವು:

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗಗಳಾಗಿವೆ ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ. ಪಾಕಿಸ್ತಾನವು ಈ ಪ್ರದೇಶಗಳ ಭಾಗಗಳನ್ನು ಅಕ್ರಮವಾಗಿ ಮತ್ತು ಬಲವಂತವಾಗಿ ಕಬಳಿಸಿಕೊಂಡಿದೆ ಎಂದು ಭಾರತ ಪದೇ ಪದೇ ಪ್ರತಿಪಾದಿಸುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

20ಕ್ಕೂ ಹೆಚ್ಚು ಕಟ್‌ಗಳ ನಂತರ ‘ದಿ ಇಂಡಿಯಾ ಸ್ಟೋರಿ’ ಚಿತ್ರಕ್ಕೆ ಸಿಕ್ತು ಸೆನ್ಸಾರ್ ಸರ್ಟಿಫಿಕೇಟ್ – Kannada News | The India Story Movie CBFC UA 16 Plus Certificate with 20 Cuts Kajal Aggarwal Shreyas Talpade

ಕಾಜಲ್ ಅಗರ್ವಾಲ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ದಿ ಇಂಡಿಯಾ ಸ್ಟೋರಿ’ (The India Story) ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ‘U/A 16+’ ಪ್ರಮಾಣಪತ್ರವನ್ನು ನೀಡಿದೆ. ಬಿಡುಗಡೆಗೂ ಮುನ್ನ ಸೆನ್ಸಾರ್ ಮಂಡಳಿಯು ಸೂಚಿಸಿದ 20ಕ್ಕೂ ಹೆಚ್ಚು ಬದಲಾವಣೆಗಳನ್ನು ಮತ್ತು ಸಂಭಾಷಣೆಯ ತಿದ್ದುಪಡಿಗಳನ್ನು ಚಿತ್ರತಂಡ ಪೂರ್ಣಗೊಳಿಸಿದ ನಂತರ ಈ ಸರ್ಟಿಫಿಕೇಟ್ ಸಿಕ್ಕಿದೆ. ರೈತ ಸಮುದಾಯಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹವೆನಿಸಿದ ಕೆಲವು ಪದಗಳನ್ನು ಮಂಡಳಿ ಬದಲಾಯಿಸಿದೆ. ಕೇರಳದ ‘ಎಂಡೋಸಲ್ಫಾನ್’ ದುರಂತಕ್ಕೆ ಸಂಬಂಧಿಸಿದ ತಪ್ಪಾದ ಉಲ್ಲೇಖವನ್ನೂ ಸರಿಪಡಿಸಲು ನಿರ್ದೇಶಿಸಲಾಗಿತ್ತು.

ಮಂಡಳಿ ಸೂಚಿಸಿದ ಪ್ರಮುಖ ಬದಲಾವಣೆಗಳಲ್ಲಿ, ಸಿನಿಮಾದ ಆರಂಭ ಮತ್ತು ಅಂತ್ಯದಲ್ಲಿ ಸುದೀರ್ಘವಾದ ಡಿಸ್ಕ್ಲೈಮರ್ ಸಂದೇಶವನ್ನು ಸೇರಿಸಲು ತಿಳಿಸಲಾಗಿತ್ತು. ಇದರಿಂದ ಚಿತ್ರದ ಅವಧಿ ಸುಮಾರು 50 ಸೆಕೆಂಡುಗಳಷ್ಟು ಹೆಚ್ಚಾಗಿದೆ. ಜೊತೆಗೆ, ರೈತರ ಶೇಕಡಾವಾರು ಪ್ರಮಾಣವನ್ನು ಉಲ್ಲೇಖಿಸುವ ಸಂಭಾಷಣೆಯಲ್ಲಿ ‘65’ ಬದಲಿಗೆ ‘25’ ಎಂದು ತಿದ್ದುಪಡಿ ಮಾಡಲು ಸೂಚಿಸಲಾಗಿದೆ.

ಅಷ್ಟೇ ಅಲ್ಲದೆ, ಚಿತ್ರದ ದ್ವಿತೀಯಾರ್ಧದಲ್ಲಿದ್ದ ಕೆಲವು ನಿಂದನಾತ್ಮಕ ಪದಗಳನ್ನು ತೆಗೆದುಹಾಕಲಾಗಿದ್ದು, ಕೋರ್ಟ್‌ರೂಮ್ ದೃಶ್ಯಗಳಲ್ಲಿದ್ದ ಕೆಲವು ಸಂಭಾಷಣೆಗಳನ್ನು ಬದಲಾಯಿಸಿದ ಬಳಿಕವೇ ಪ್ರಮಾಣಪತ್ರ ನೀಡಲಾಗಿದೆ. ಜುಲೈ 24ರಂದು ‘ದಿ ಇಂಡಿಯಾ ಸ್ಟೋರಿ’ ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಸಿನಿಮಾ ನೋಡುವಂತೆ ಮನವಿ:

ಈ ಬಗ್ಗೆ ಮಾತನಾಡಿದ ನಟ ಶ್ರೇಯಸ್ ತಲ್ಪಾಡೆ ಮತ್ತು ನಟಿ ಕಾಜಲ್ ಅಗರ್ವಾಲ್, ‘ಕೀಟನಾಶಕಗಳ ಬಳಕೆಯಿಂದ ಕೃಷಿ ಮತ್ತು ಸಾರ್ವಜನಿಕ ಆರೋಗ್ಯದ ಮೇಲಾಗುತ್ತಿರುವ ಗಂಭೀರ ಪರಿಣಾಮಗಳನ್ನು ಈ ಕೋರ್ಟ್‌ರೂಮ್ ಡ್ರಾಮಾ ಸಿನಿಮಾ ಎತ್ತಿಹಿಡಿದಿದೆ. ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ’ ಎಂದು ಮನವಿ ಮಾಡಿದ್ದಾರೆ.

ಸಾಮಾಜಿಕ ಕಳಕಳಿ ಇರುವ ಸಿನಿಮಾ:

‘ಝೀ ಸ್ಟುಡಿಯೋಸ್’ (Zee Studios) ಸಂಸ್ಥೆಯು ‘MIG ಪ್ರೊಡಕ್ಷನ್ & ಸ್ಟುಡಿಯೋಸ್’ ಜೊತೆಗೂಡಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಚೇತನ್ ಡಿ.ಕೆ. ನಿರ್ದೇಶನದ ಈ ಚಿತ್ರಕ್ಕೆ ಸಾಗರ್ ಬಿ. ಶಿಂಧೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ಕೀಟನಾಶಕಗಳ ಅತಿಯಾದ ಬಳಕೆ ಮತ್ತು ಅದರ ಭೀಕರ ಪರಿಣಾಮಗಳ ಕಥಾಹಂದರ ಹೊಂದಿರುವ ‘ದಿ ಇಂಡಿಯಾ ಸ್ಟೋರಿ’ ಚಿತ್ರವು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ.

ಇದನ್ನೂ ಓದಿ: ಆಹಾರ ಕಲಬೆರಕೆ ಕುರಿತ ‘ದಿ ಇಂಡಿಯಾ ಸ್ಟೋರಿ’ ಸಿನಿಮಾಗೆ ಲೀಗಲ್ ನೋಟಿಸ್; ಕಾರಣ ಏನು?

ಸ್ವಾತಿ ವಿನಾಯಕ್ ಸೈಂದಾಣೆ, ಅನಿತಾ ಜಾಧವ್, ವಿನಾಯಕ್ ಸೈಂದಾಣೆ, ಕಲ್ಪೇಶ್ ಶಾ, ದೇವಯಾನಿ ಖೋರಾಟೆ ಮತ್ತು ಪ್ರೇಮ್ ಜೋಶಿ ಚಿತ್ರಕ್ಕೆ ಸಹ-ನಿರ್ಮಾಪಕರಾಗಿದ್ದಾರೆ. ನಿಶಾಂತ್ ಭಾಗವತ್ ಛಾಯಾಗ್ರಹಣ, ಮಂಗೇಶ್ ಧಾಕ್ಡೆ ಸಂಗೀತ, ಆಶಿಶ್ ಮಾತ್ರೆ ಸಂಕಲನ, ಶಕೀಲ್ ಅಜಾಮಿ ಸಾಹಿತ್ಯ ಹಾಗೂ ಅನ್ಮೋಲ್ ಭಾವೆ ಶಬ್ದ ಗ್ರಹಣ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Kitchen Tips: ಒಲೆಯಲ್ಲಿಟ್ಟ ಹಾಲು ಉಕ್ಕಿ ಚೆಲ್ಲದಂತೆ ತಡೆಯಲು ಈ ಸರಳ ಸಲಹೆಯನ್ನು ಪಾಲಿಸಿ – Kannada News | Tricks and tips to prevent milk from spilling on the stove

ಅನೇಕರಿಗೆ ಅಡುಗೆ ಮಾಡುವುದಕ್ಕಿಂತ ಹೆಚ್ಚು ಹಾಲು (milk) ಕುದಿಸುವುದೇ ಬಹು ದೊಡ್ಡ ಟಾಸ್ಕ್‌ ಆಗಿರುತ್ತದೆ. ಹೌದು ಹೆಚ್ಚಿನ ಸಂದರ್ಭಗಳಲ್ಲಿ ಕಣ್ಣು ಮಿಟುಕಿಸುವುದರೊಳಗೆ ಒಲೆಯ ಮೇಲಿಟ್ಟ ಹಾಲು ಉಕ್ಕಿ ಚೆಲ್ಲಿ ಬಿಡುತ್ತದೆ. ಇದರಿಂದ ಹಾಲು ವ್ಯರ್ಥವಾಗುವದಲ್ಲದೆ ಕ್ಲೀನಿಂಗ್‌ ಕೆಲಸ ಕೂಡ ಹೆಚ್ಚಾಗುತ್ತದೆ. ಚೆಲ್ಲಿದ ಹಾಲನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಗ್ಯಾಸ್‌ ಸ್ಟೌವ್‌ಗೂ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಕೆಲವೊಂದು ಸಿಂಪಲ್‌ ಟ್ರಿಕ್ಸ್‌ಗಳನ್ನು ಅನುಸರಿಸಿಕೊಂಡು ಹೋದರೆ ಹಾಲು ಉಕ್ಕಿ ಚೆಲ್ಲುವುದನ್ನು ನಿಲ್ಲಿಸಬಹುದು. ಈ ಸಿಂಪಲ್‌ ಟ್ರಿಕ್ಸ್‌ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಲೆಯ ಮೇಲಿಟ್ಟ ಹಾಲು ಉಕ್ಕಿ ಚೆಲ್ಲಬಾರದೆಂದರೆ ಈ ಸಿಂಪಲ್‌ ಟ್ರಿಕ್ಸ್‌ ಪಾಲಿಸಿ:

ಪಾತ್ರೆಯ ಬದಿಗಳಿಗೆ ತುಪ್ಪ ಅಥವಾ ಬೆಣ್ಣೆಯನ್ನು ಹಚ್ಚಿ: ನೀವು ಹಾಲನ್ನು ಕುದಿಸುವಂತಹ ಪಾತ್ರೆಯ ಅಂಚುಗಳಿಗೆ ಲಘುವಾಗಿ ಬೆಣ್ಣೆ ಅಥವಾ ತುಪ್ಪನ್ನು ಲೇಪಿಸಿ. ಹೀಗೆ ಮಾಡುವುದರಿಂದ ಹಾಲು ಕುದಿಯಲು ಪ್ರಾರಂಭಿಸಿ ನೊರೆ ಏರಿದಾಗ, ಅದು ತುಪ್ಪವನ್ನು ಸ್ಪರ್ಶಿಸುತ್ತದೆ. ಇದರಿಂದ ಹಾಲು ಉಕ್ಕಿ ಕೆಳಗೆ ಚೆಲ್ಲುವುದಿಲ್ಲ. ಈ ಸರಳ ಕ್ರಮವು ಹಾಲು ಒಲೆಯ ಮೇಲೆ ಉಕ್ಕಿ ಹರಿಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಚಮಚವನ್ನು ಪಾತ್ರೆಯ ಮೇಲೆ ಅಡ್ಡಲಾಗಿ ಇರಿಸಿ:  ಹಾಲು ಕುದಿಸುವಾಗ, ಚಮಚವನ್ನು ಪಾತ್ರೆಯ ಮೇಲೆ ಅಡ್ಡಲಾಗಿ ಇಡುವುದರಿಂದಲೂ ಹಾಲು ಉಕ್ಕಿ ಚೆಲ್ಲುವುದನ್ನು ತಡೆಯಬಹುದು. ಹಾಲು ಕುದಿಯುತ್ತಿದ್ದಂತೆ ರೂಪುಗೊಳ್ಳುವ ನೊರೆ ಚಮಚಕ್ಕೆ ತಾಗುವುದರಿಂದ, ಹಾಲು ತಕ್ಷಣವೇ ಚೆಲ್ಲುವ ಸಾಧ್ಯತೆ ಕಡಿಮೆಯಾಗುತ್ತದೆ.

ಹಾಲನ್ನು ಹೆಚ್ಚಿನ ಉರಿಯಲ್ಲಿ ಕುದಿಸಬೇಡಿ: ಹಾಲು ಕಾಯಿಸುವಾಗ ಗ್ಯಾಸ್‌ ಒಲೆಯ ಉರಿಯನ್ನು ಹೆಚ್ಚಿಟ್ಟರೆ, ಈ ಶಾಖವು ಹಾಲು ವೇಗವಾಗಿ ಕುದಿಯಲು ಕಾರಣವಾಗುತ್ತದೆ. ಇದು ನೊರೆಯ ರಚನೆಯನ್ನು ವೇಗಗೊಳಿಸುತ್ತದೆ. ಹಾಗಾಗಿ ಯಾವಾಗಲೂ ಹಾಲನ್ನು ಕಡಿಮೆ ಉರಿಯಲ್ಲಿ ಕುದಿಸಿ. ಇದು ಹಾಲು ಇದ್ದಕ್ಕಿದ್ದಂತೆ ಉಕ್ಕಿ ಚೆಲ್ಲುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಫ್ರಿಜ್‌ನಲ್ಲಿಟ್ಟರೂ ಹಸಿ ಮೆಣಸಿನಕಾಯಿ ಬೇಗ ಹಾಳಾಗುತ್ತಿದೆಯೇ? ಸುಲಭ ಟ್ರಿಕ್ ಅನುಸರಿಸಿ

ಅಗಲವಾದ ಬಾಯಿಯ ಪಾತ್ರೆಯನ್ನು ಬಳಸಿ: ಅಗಲ ಬಾಯಿಯನ್ನು ಹೊಂದಿರುವ ಪಾತ್ರೆಯಲ್ಲಿಯೇ ಹಾಲನ್ನು ಕುದಿಸುವುದು ಸೂಕ್ತ.  ಅಗಲವಾದ ಬಾಯಿಯ ಹಾಗೂ ದೊಡ್ಡ ಪಾತ್ರೆಯು ಹೆಚ್ಚಿನ ಸ್ಥಳವನ್ನು ಹೊಂದಿದ್ದು, ಇದು ಹಾಲು ಕುದಿಯುವ ಸಮಯದಲ್ಲಿ ಇದು ಹಾಲಿನ ನೊರೆ ವಿಸ್ತರಿಸಲು ಹೆಚ್ಚಿನ ಅವಕಾಶವನ್ನು ನೀಡುತ್ತದೆ. ಇದು ಹಾಲು ಪಾತ್ರೆಯಿಂದ ತಕ್ಷಣವೇ ಚೆಲ್ಲಿ ಹೋಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಹಾಲು ಕುದಿಸುವಾಗ ಪಾತ್ರೆಯನ್ನು ಮುಚ್ಚಬೇಡಿ: ಅನೇಕ ಜನರು ಪಾತ್ರೆಯನ್ನು ಮುಚ್ಚುತ್ತಾರೆ. ಹೀಗೆ ಮಾಡುವುದರಿಂದ ಇದು ಶಾಖವನ್ನು ಒಳಗೆಯೇ ಹಿಡಿದಿಟ್ಟುಕೊಳ್ಳುತ್ತದೆ ಮತ್ತು ತ್ವರಿತವಾಗಿ ನೊರೆ ರೂಪುಗೊಳ್ಳಲು ಅನುವುಮಾಡಿಕೊಡುತ್ತದೆ. ಇದರಿಂದ ಹಾಲು ತಕ್ಷಣವೇ ಉಕ್ಕಿ ಚೆಲ್ಲಿ ಹೋಗುತ್ತದೆ. ಆದ್ದರಿಂದ ಪಾತ್ರೆಯನ್ನು ಸಂಪೂರ್ಣವಾಗಿ ಮುಚ್ಚುವ ಬದಲು ಪಾತ್ರೆಗೆ ಅಡ್ಡಲಾಗಿ ಚಮಚವನ್ನಿಟ್ಟು ಹಾಲು ಕಾಯಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾ

Source link

ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ದಿಟ್ಟ ಕ್ರಮ: 70,000 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ರಾಜ್ಯ ಸರ್ಕಾರ ಹೈ-ಅಲರ್ಟ್ – Kannada News | State Government Tightens Security to Prevent Question Paper Leaks for 70,000 Recruitment Posts

ಬೆಂಗಳೂರು, ಜುಲೈ 23: ಇತ್ತೀಚಿನ ದಿನಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು (government) ಮುನ್ನೆಚ್ಚರಿಕಾ ಕ್ರಮವಾಗಿ ನೇಮಕಾತಿ ಪರೀಕ್ಷೆಗಳ ಸಿದ್ಧತೆ ಕುರಿತು ಉನ್ನತ ಮಟ್ಟದ ಸಭೆ ಮಾಡಿದೆ. ಗೃಹ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 70,000ಕ್ಕೂ ಹೆಚ್ಚು ಹುದ್ದೆಗಳ (recruitment) ಭರ್ತಿಗೆ ಸರ್ಕಾರ ಮುಂದಾಗಿದ್ದು, ಪರೀಕ್ಷೆಗಳನ್ನು ಅತ್ಯಂತ ಪಾರದರ್ಶಕ ಹಾಗೂ ಸುರಕ್ಷಿತವಾಗಿ ನಡೆಸಲು ಮಾಸ್ಟರ್ ಪ್ಲಾನ್ ರೂಪಿಸಿದೆ.

ರಾಜೇಂದ್ರ ಕಟಾರಿಯಾ ನೇತೃತ್ವದಲ್ಲಿ ಸಭೆ

ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ನೇತೃತ್ವದಲ್ಲಿ ಇಂದು ಪ್ರಮುಖ ಸಭೆ ಜರುಗಿತು. ಸಭೆಯಲ್ಲಿ ಮಾತನಾಡಿದ ಅವರು, ‘ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ, ಅತ್ಯಂತ ನ್ಯಾಯಸಮ್ಮತವಾಗಿ ಮತ್ತು ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಬೇಕು. ಪ್ರತಿಯೊಂದು ಇಲಾಖೆಯೂ ತಮ್ಮ ನಡುವೆ ಉತ್ತಮ ಸಮನ್ವಯತೆ ಕಾಯ್ದುಕೊಳ್ಳುವಂತೆ’ ರಾಜ್ಯದ ಎಲ್ಲ ಜಿಲ್ಲೆಗಳ ಡಿಸಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದನ್ನೂ ಓದಿ: ಕೆಪಿಎಸ್ಸಿ ಕರ್ಮಕಾಂಡ ಬಗ್ಗೆ ರಾಹುಲ್ ಗಾಂಧಿ ಮೌನ ಯಾಕೆ?: ಕಾಂಗ್ರೆಸಿಗರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ

  • ಭದ್ರತೆ ಮತ್ತು ಸಾರಿಗೆ: ಪರೀಕ್ಷಾ ಕೇಂದ್ರಗಳಿಗೆ ಭಾರೀ ಪೊಲೀಸ್ ಬಂದೋಬಸ್ತ್, ಪ್ರಶ್ನೆಪತ್ರಿಕೆಗಳ ಸುರಕ್ಷಿತ ಸಾಗಣೆ, ವಾಹನ ಸಂಚಾರ ನಿರ್ವಹಣೆ ಹಾಗೂ ತುರ್ತು ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಿಕೊಳ್ಳಬೇಕು.
  • ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣು: ಪ್ರಶ್ನೆಪತ್ರಿಕೆ ಲೀಕ್ ಮಾಡುವ ವದಂತಿ ಹಾಗೂ ಅಕ್ರಮ ತಡೆಯಲು ಸೈಬರ್ ಕ್ರೈಂ ಮತ್ತು ಗುಪ್ತಚರ ಇಲಾಖೆಗಳು ಡಿಜಿಟಲ್ ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾ ಮೇಲೆ ತೀವ್ರ ನಿಗಾ ವಹಿಸಬೇಕು. ಈ ಸಂಬಂಧ ಸೈಬರ್ ಕ್ರೈಂ ಮತ್ತು ಗುಪ್ತಚರ ಇಲಾಖೆಗೂ ಸೂಚಿಸಲಾಗಿದೆ.

ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ

ಪ್ರಶ್ನೆಪತ್ರಿಕೆ ಸೋರಿಕೆ, ಬೇರೆಯವರ ಬದಲಿಗೆ ಪರೀಕ್ಷೆ ಬರೆಯುವುದು, ನಕಲು ಮಾಡುವುದು ಸೇರಿದಂತೆ ಯಾವುದೇ ರೀತಿಯ ಅಕ್ರಮ ಎಸಗಿದರೆ ಸರ್ಕಾರ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ‘ಕರ್ನಾಟಕ ಸಾರ್ವಜನಿಕ ಪರೀಕ್ಷೆಗಳ ಕಾಯ್ದೆ, 2023’ ರ ಅಡಿಯಲ್ಲಿ ಜೈಲು ಶಿಕ್ಷೆ ಸೇರಿದಂತೆ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಉಳಿತಾಯ ಖಾತೆಯ ಹಣ ನೀಡದ ಸೊಸೈಟಿಗೆ ದಂಡ: ಹುಬ್ಬಳ್ಳಿ ಮಹಿಳೆಗೆ ಸಿಕ್ತು ನ್ಯಾಯ! – Kannada News | Dharwad Consumer Commission Penalizes Cooperative Society for Withholding Savings

ಪ್ರಾತಿನಿಧಿಕ ಚಿತ್ರImage Credit source: Getty images

ಧಾರವಾಡ, ಜುಲೈ 23: ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು ಹೋದಾಗ ಹಣ ನೀಡದೆ ನಿರಾಕರಿಸಿದ ಧಾರವಾಡದ ವಿ.ಎಸ್. ಸಾಧುನವರ್ ಸೊಸೈಟಿಗೆ ಜಿಲ್ಲಾ ಗ್ರಾಹಕರ ಆಯೋಗವು (Dharwad Consumer Commission) ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಜೊತೆಗೆ ದಂಡ (fine) ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ. ಪರಿಹಾರವಾಗಿ 50 ಸಾವಿರ ರೂ ಮತ್ತು ಪ್ರಕರಣದ ವೆಚ್ಚ 10 ಸಾವಿರ ರೂ ಸೇರಿ ಒಟ್ಟು 60 ಸಾವಿರ ರೂ ನೀಡುವಂತೆ ಖಡಕ್​ ಸೂಚನೆ ನೀಡಿದೆ.

ಏನಿದು ಪ್ರಕರಣ?

ಹುಬ್ಬಳ್ಳಿಯ ನಿವಾಸಿ ಕೋಮಲಾ ಜಾರತರಗರ್ ಎಂಬುವವರು ಧಾರವಾಡದ ವಿ.ಎಸ್. ಸಾಧುನವರ್ ಸೊಸೈಟಿಯ ತಮ್ಮ ಉಳಿತಾಯ ಖಾತೆಯಲ್ಲಿ 2.40 ಲಕ್ಷ ರೂ ಹಣ ಇಟ್ಟಿದ್ದರು. ಅಗತ್ಯವಿದ್ದಾಗ ತಮ್ಮ ಖಾತೆಯಲ್ಲಿದ್ದ ಹಣವನ್ನು ನೀಡುವಂತೆ ಕೋಮಲಾ ಸೊಸೈಟಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ, ಹಣ ನೀಡಲು ಆಡಳಿತ ಮಂಡಳಿ ನಿರಾಕರಿಸಿತ್ತು. ಇದರಿಂದ ಬೇಸತ್ತ ಕೋಮಲಾ 2026ರ ಫೆಬ್ರವರಿ 2ರಂದು ಸೊಸೈಟಿ ಮತ್ತು ಅದರ ಅಧ್ಯಕ್ಷ ವಿ.ಎಸ್. ಸಾಧುನವರ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಕಲಬುರಗಿಯಲ್ಲಿ 300ಕ್ಕೂ ಅಧಿಕ ಮನೆಗಳ ತೆರವಿಗೆ ಕೋರ್ಟ್ ಆದೇಶ: ಆತಂಕದಲ್ಲಿ ನಿವಾಸಿಗಳು; ಆಗಿದ್ದೇನು?

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಅವರನ್ನೊಳಗೊಂಡ ಪೀಠವು ಗ್ರಾಹಕರ ಪರ ತೀರ್ಪು ನೀಡಿದೆ. ಕೋಮಲಾ ಖಾತೆಯಲ್ಲಿದ್ದ 2.40 ಲಕ್ಷ ರೂ ಹಣವನ್ನು ಬಡ್ಡಿ ಸಮೇತ ತಕ್ಷಣವೇ ಮರಳಿಸುವಂತೆ ಸೂಚಿಸಿದ್ದಾರೆ.

60 ಸಾವಿರ ರೂ ಪರಿಹಾರ ನೀಡುವಂತೆ ಗ್ರಾಹಕರ ಆಯೋಗ ಆದೇಶ

ಅಷ್ಟೇ ಅಲ್ಲದೆ ಗ್ರಾಹಕರಿಗೆ 50 ಸಾವಿರ ರೂ ಪರಿಹಾರ ಹಾಗೂ ಪ್ರಕರಣದ ಕಾನೂನು ವೆಚ್ಚವಾಗಿ 10 ಸಾವಿರ ರೂ ಸೇರಿದಂತೆ ಒಟ್ಟು 60 ಸಾವಿರ ರೂ ಹೆಚ್ಚುವರಿಯಾಗಿ ಪಾವತಿಸುವಂತೆ ವಿ.ಎಸ್.ಸಾಧುನವರ್ ಸೊಸೈಟಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:28 pm, Thu, 23 July 26

Source link

Exit mobile version