‘ಜನ ನಾಯಗನ್’ ಸಿನಿಮಾನಲ್ಲಿವೆ ಹಲವು ವಿಶೇಷ ದೃಶ್ಯ, ಟೈಟಲ್ ಕಾರ್ಡ್​​ ನೋಡಿ ಫ್ಯಾನ್ಸ್ ಹ್ಯಾಪಿ – Kannada News | Jana Nayagan movie has many moments to celebrate for Vijay’s fans

ವಿಜಯ್ (Vijay) ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗಿದ್ದು, ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಕಳೆದ ಏಳು ತಿಂಗಳುಗಳಿಂದಲೂ ವಿಜಯ್ ಅಭಿಮಾನಿಗಳು ಈ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ನಿಗದಿ ಆಗಿದ್ದ ದಿನಕ್ಕೂ ಈಗ ಬಿಡುಗಡೆ ಆಗುತ್ತಿರುವ ದಿನದ ಮಧ್ಯೆ ಹಲವಾರು ಘಟನೆಗಳು ನಡೆದು ಹೋಗಿವೆ. ವಿಜಯ್ ಸಿಎಂ ಆಗಿದ್ದಾರೆ. ಸಾಕಷ್ಟು ಜನ ಪರ ಕೆಲಸಗಳನ್ನು ಈಗಾಗಲೇ ಘೋಷಿಸಿದ್ದಾರೆ. ವಿಜಯ್ ಜನಪ್ರಿಯತೆ ತುತ್ತ ತುದಿಯಲ್ಲಿದೆ. ಇದರ ಮಧ್ಯೆ ಸಿನಿಮಾ ರಿಲೀಸ್ ಆಗಿದೆ. ಸಿನಿಮಾನಲ್ಲಿ ಅಭಿಮಾನಿಗಳಿಗೆ ಇಷ್ಟವಾಗುವ ಹಲವು ಸಂಗತಿಗಳಿವೆ.

‘ಜನ ನಾಯಗನ್’ ಸಿನಿಮಾದ ಟೈಟಲ್​ ಕಾರ್ಡಿನಿಂದಲೇ ಅಭಿಮಾನಿಗಳಿಗೆ ಥ್ರಿಲ್ ನೀಡುವುದನ್ನು ಆರಂಭಿಸಿದ್ದಾರೆ ನಿರ್ದೇಶಕ. ಸಿನಿಮಾದ ಟೈಟಲ್​​ ಕಾರ್ಡ್​​ನಲ್ಲಿ ‘ಹಾನರೆಬಲ್ ಸಿಎಂ’ ಎಂದಿದೆ. ಈ ಹಿಂದೆಲ್ಲ ‘ದಳಪತಿ ವಿಜಯ್’ ಎಂದಷ್ಟೆ ಇರುತ್ತಿತ್ತು ಆದರೆ ಈ ಬಾರಿ ‘ಹಾನರೆಬಲ್ ಸಿಎಂ’ ವಿಜಯ್ ಎಂದು ಬದಲಾಯಿಸಲಾಗಿದೆ. ಟೈಟಲ್ ಕಾರ್ಡ್ ನೋಡಿ ಫ್ಯಾನ್ಸ್ ಖುಷ್ ಆಗಿದ್ದಾರೆ.

ಇನ್ನು ಸಿನಿಮಾನಲ್ಲಿ ಸಹ ಅಭಿಮಾನಿಗಳಿಗಾಗಿ ಕೆಲವು ವಿಶೇಷ ಸನ್ನಿವೇಷಗಳನ್ನು ಸೃಷ್ಟಿಸಲಾಗಿದೆ. ವಿಜಯ್ ಅವರ ಹಳೆಯ ಸಿನಿಮಾದ ಡೈಲಾಗ್​​ಗಳು, ಕೆಲವು ರಾಜಕೀಯದ ರೆಫೆರೆನ್ಸ್​​ಗಳು, ಹಾಡುಗಳನ್ನು ಸಹ ಸಿನಿಮಾನಲ್ಲಿ ಸೇರಿಸಲಾಗಿದೆ. ವಿಜಯ್ ತಮ್ಮ ಭಾಷಣದಲ್ಲಿ ಹೇಳಿದ್ದ ಡೈಲಾಗ್, ‘ವಾಟ್ ಬ್ರೋ, ವೆರಿ ಬ್ಯಾಡ್ ಬ್ರೋ’ ಡೈಲಾಗ್ ಸಿನಿಮಾನಲ್ಲಿದೆ. ಡೈಲಾಗ್ ಬಂದ ಕೂಡಲೇ ಅಭಿಮಾನಿಗಳು ಶಿಳ್ಳೆಗಳು ಮುಗಿಲು ಮುಟ್ಟುತ್ತವೆ.

ಇದನ್ನೂ ಓದಿ:ಎಂಜಿಆರ್​​ To ದಳಪತಿ ವಿಜಯ್: ಸಿಎಂ ಕುರ್ಚಿಯಲ್ಲಿ ಕುಳಿತ ಬಳಿಕ ಪ್ರೇಕ್ಷಕರ ಮುಂದೆ ಬಂದ ನಾಯಕರು

‘ದಳಪತಿ ಕಚೇರಿ’ ಹಾಡಿನಲ್ಲಿ ವಿಜಯ್ ಜೊತೆಗೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್, ಡ್ಯಾನ್ಸ್ ಮಾಸ್ಟರ್ ಶೇಖರ್ ಸಹ ಎಂಟ್ರಿ ಕೊಟ್ಟು ಸಖತ್ ಸ್ಟೆಪ್ಪು ಹಾಕಿದ್ದಾರೆ. ಮತ್ತೂ ವಿಶೇಷವೆಂದರೆ ಸಿನಿಮಾದ ನಿರ್ಮಾಪಕ ಕೆವಿನ್ ವೆಂಟಕ್ ಸಹ ವಿಜಯ್ ಜೊತೆಗೆ ಅದೇ ಹಾಡಿನಲ್ಲಿ ಸ್ಟೆಪ್ಪು ಹಾಕಿದ್ದಾರೆ. ಆ ಹಾಡಿನ ಕೊನೆಯಲ್ಲಿ ಅಭಿಮಾನಿಗಳಿಗಾಗಿ ವಿಜಯ್ ವಿಶೇಷವಾಗಿ ಡ್ಯಾನ್ಸ್ ಮಾಡಿದ್ದಾರೆ. ಆ ಡ್ಯಾನ್ಸ್​​​ನಲ್ಲಿ ಅವರ ಕೆಲವು ಹಳೆಯ ಸಿನಿಮಾಗಳ ಸ್ಟೆಪ್ಪುಗಳು ಸಹ ಇವೆ.

ಸಿನಿಮಾನಲ್ಲಿ ಎಂಜಿಆರ್ ಅವರ ಕ್ಯಾಮಿಯೋ ಅನ್ನು ಸಹ ಬಳಸಿಕೊಳ್ಳಲಾಗಿದೆ. ಎಂಜಿಆರ್ ಸಹ, ಸ್ಟಾರ್ ನಟನಾಗಿ ಬಳಿಕ ಸಿಎಂ ಆದವರು. ವಿಜಯ್ ಅವರ ಪಾತ್ರ, ವಿಲನ್ ಮನೆಗೆ ಹೋದಾಗ ಅಲ್ಲಿ ಎಂಜಿಆರ್ ಚಿತ್ರ ಇರುತ್ತದೆ. ವಿಜಯ್ ಅವರು ಚಿತ್ರದ ಮುಂದೆ ನಡೆದು ಬರುವಾಗ ಫೋಟೊ ಮೂಲಕವೇ ಎಂಜಿಆರ್, ವಿಜಯ್ ಜೊತೆ ಮಾತನಾಡುವಂತೆ ಹಾಗೂ ಅವರೇ ವಿಜಯ್​​ ಕೈಗೆ ದುಷ್ಟರನ್ನು ಶಿಕ್ಷಿಸಲು ಹಂಟರ್ ಕೊಡುವ ದೃಶ್ಯವಿದೆ. ಅದು ಮಾತ್ರವೇ ಅಲ್ಲದೆ, ಸಿನಿಮಾದ ದೃಶ್ಯವೊಂದರಲ್ಲಿ ವಿಜಯ್, ಎಂಜಿಆರ್ ಅವರ ಹಳೆಯ ಸಿನಿಮಾದ ಜನಪ್ರಿಯ ಹಾಡೊಂದನ್ನು ಸಹ ಹಾಡುತ್ತಾರೆ.

ಸಿನಿಮಾದ ಕೊನೆಯಲ್ಲಿ ನಿರ್ದೇಶಕರುಗಳಾದ ಲೋಕೇಶ್ ಕನಗರಾಜ್, ಅಟ್ಲಿ ಮತ್ತು ದಿಲೀಪ್ ನೆಲ್ಸನ್ ಅವರುಗಳು ಪತ್ರಕರ್ತರ ಪಾತ್ರದಲ್ಲಿ ಎಂಟ್ರಿ ಕೊಡುತ್ತಾರೆ. ಆ ದೃಶ್ಯವೂ ಸಹ ಮಜವಾಗಿದೆ. ಇಂಟರ್ವೆಲ್ ದೃಶ್ಯದಲ್ಲಿ, ‘ನೀವು ಎಷ್ಟೇ ಹೀಗಳೆದರು, ಬೆದರಿಸಿದರು ನಾನು ಮರಳಿ ಹೋಗುವುದಿಲ್ಲ’ ಎಂಬ ಸಂಭಾಷಣೆ ಹೇಳುತ್ತಾರೆ, ಅದು ರಾಜಕೀಯ ವಿರೋಧಿಗಳಿಗೆ ಹೇಳಿದ ಸಂಭಾಷಣೆಯಂತಿದೆ. ಜೊತೆಗೆ ಅದೇ ದೃಶ್ಯದಲ್ಲಿ ವಿಜಯ್ ಅವರು ಸೆಲ್ಫಿ ತೆಗೆದು ಕೊಳ್ಳುವ ದೃಶ್ಯವೂ ಇದೆ. ವಿಜಯ್ ಅವರು ಅಭಿಮಾನಿಗಳೊಟ್ಟಿಗೆ ತೆಗೆದುಕೊಂಡಿದ್ದ ಸೆಲ್ಫಿ ರೆಕಾರ್ಡ್​​ಗಳನ್ನು ಸೃಷ್ಟಿಸಿತ್ತು. ಅದಕ್ಕೆ ಆ ದೃಶ್ಯವನ್ನು ಲಿಂಕ್ ಮಾಡಲಾಗಿದೆ.

ಇನ್ನು ಸಿನಿಮಾ ಮುಗಿಯುವ ಸಮಯದಲ್ಲಿ ವಿಜಯ್, ಓಟು ಹಾಕಿ ಮತಗಟ್ಟೆಯಿಂದ ಹೊರಗೆ ಬರುವ ದೃಶ್ಯವಿದೆ. ಆಗ ತನ್ನ ಮತ ಹಾಕಿದ ಬೆರಳು ತೋರಿಸಿ, ‘ಎಲ್ಲವೂ ಇಲ್ಲಿಂದಲೇ ಶುರು’ ಎನ್ನುತ್ತಾರೆ. ಆ ಮೂಲಕ ಮತದಾನದ ದಿನವನ್ನು ನೆನಪಿಸಿದ್ದಾರೆ. ಸಿನಿಮಾ ಎಲ್ಲ ಮುಗಿದ ಬಳಿಕ ವಿಜಯ್ ಅವರ ಹಳೆಯ ಸಿನಿಮಾಗಳ ದೃಶ್ಯಗಳನ್ನು ಸಹ ಪ್ರದರ್ಶಿಸಲಾಗಿದೆ. ಇದು ವಿಜಯ್ ಅವರ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಒಂದು ಭಾವುಕ ವಿದಾಯವನ್ನು ವಿಜಯ್ ಅವರಿಗೆ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಯಚೂರು: ಸರ್ಕಾರಿ ಶಾಲಾ ಮಕ್ಕಳಿಗೆ ತಟ್ಟಿದ ಮೊಟ್ಟೆ ದರ ಏರಿಕೆ ಬಿಸಿ; ಸ್ವಂತ ಹಣದಲ್ಲಿ ಮೊಟ್ಟೆ ನೀಡುತ್ತಿರುವ ಶಿಕ್ಷಕರು – Kannada News | Karnataka Egg Price Hike Hits Midday Meals: Teachers Face Financial Burden

ರಾಯಚೂರು, ಜುಲೈ 23: ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ (Govt School) ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಅಂತ ಮೊಟ್ಟೆ (Egg) ಕೊಡುತ್ತಿದೆ. ಒಂದು ಮೊಟ್ಟೆಗೆ ಸರ್ಕಾರ ನೀಡುತ್ತಿರುವುದು ಕೇವಲ 6 ರೂ. ಆದರೆ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ 8,9,10 ರೂ ಇದೆ. ಹೀಗಾಗಿ ಮೊಟ್ಟೆ ತಗುಲುವ ಹೆಚ್ಚಿನ ದರವನ್ನು ಮುಖ್ಯ ಶಿಕ್ಷಕರೇ ತಮ್ಮ ಕೈಯಿಂದ ಕೊಡುವ ದುಸ್ಥಿತಿ ಎದುರಾಗಿದ್ದು, ಪ್ರತಿ ತಿಂಗಳು 10 ಸಾವಿರಕ್ಕೂ ಅಧಿಕ ಹಣ ನೀಡಬೇಕಾದ ಸಮಸ್ಯೆ ಎದುರಾಗಿದೆ.

ಒಂದು ಮೊಟ್ಟೆಯ ಬೆಲೆ 8 ರಿಂದ 10 ರೂ ಏರಿಕೆ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮೊಟ್ಟೆ ದರ ಏರಿಕೆಯಾಗುತ್ತಿದ್ದು, ಅದರ ಬಿಸಿ ಈಗ ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಗೂ ತಟ್ಟಿದೆ. ರಾಜ್ಯ ಸರ್ಕಾರ ಪ್ರತಿ ಮೊಟ್ಟೆಗೆ ಕೇವಲ 6 ರೂ ನೀಡುತ್ತಿದ್ದರೆ, ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ 8 ರಿಂದ 10 ರೂ. ವರೆಗೆ ಏರಿಕೆ ಆಗಿದೆ. ಈ ಕಾರಣದಿಂದ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಸ್ವಂತ ಹಣ ಖರ್ಚು ಮಾಡಿ ಮಕ್ಕಳಿಗೆ ಮೊಟ್ಟೆ ವಿತರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ವಂತ ಹಣದಲ್ಲಿ ಮೊಟ್ಟೆ ನೀಡುತ್ತಿರುವ ಶಿಕ್ಷಕರು

ಸರ್ಕಾರದ ಆದೇಶದಂತೆ ವಾರದಲ್ಲಿ ಆರು ದಿನ ಮಕ್ಕಳಿಗೆ ಮೊಟ್ಟೆ ವಿತರಿಸಬೇಕಿದ್ದು, ಹೆಚ್ಚಿದ ದರದಿಂದ ಶಿಕ್ಷಕರಿಗೆ ಪ್ರತಿ ತಿಂಗಳು 8ರಿಂದ 10 ಸಾವಿರ ರೂ. ವರೆಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ಪರಿಣಾಮವಾಗಿ ಕೆಲವು ಶಾಲೆಗಳು ಮೊಟ್ಟೆ ವಿತರಣೆಯನ್ನು ಸ್ಥಗಿತಗೊಳಿಸಿ ಬದಲಾಗಿ ಬಾಳೆಹಣ್ಣು ನೀಡುತ್ತಿವೆ.

ಇದನ್ನೂ ಓದಿ: ಗ್ರಾಹಕರಿಗೆ ಚಿಕನ್ ಮತ್ತು ಮೊಟ್ಟೆ ಬೆಲೆ ಏರಿಕೆ ಬಿಸಿ: ದಾಖಲೆ ಬರೆದ ದರ

ಇನ್ನೂ ಕೆಲವು ಶಾಲೆಗಳಲ್ಲಿ ಕೆಲ ಮಕ್ಕಳಿಗೆ ಮೊಟ್ಟೆ, ಉಳಿದವರಿಗೆ ಬಾಳೆಹಣ್ಣು ನೀಡುವ ಅನಿವಾರ್ಯ ಸ್ಥಿತಿ ಎದುರಾಗಿದೆ. ಹೀಗಾಗಿ ಸರ್ಕಾರ ಮೊಟ್ಟೆ ದರ ಹೆಚ್ಚಿಸಿ ಮುಖ್ಯ ಶಿಕ್ಷಕರಿಗೆ ಸಮಸ್ಯೆ ಪರಿಹರಿಸಿ ಅಂತ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಸರ್ಕಾರ ತಕ್ಷಣವೇ ಮೊಟ್ಟೆ ದರ ಹೆಚ್ಚಿಸಬೇಕು: ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಮನವಿ

ಇತ್ತ ಮೊಟ್ಟೆಯ ದರಕ್ಕೆ ಅನುಗುಣವಾಗಿ ಸರ್ಕಾರ ನೀಡುವ ಅನುದಾನವನ್ನು ಹೆಚ್ಚಿಸಬೇಕೆಂದು ಶಿಕ್ಷಕರ ಸಂಘವು ರಾಯಚೂರು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿದ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ, ‘ಸರ್ಕಾರ ಒಂದು ಮೊಟ್ಟೆಗೆ 6 ರೂ ನೀಡುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಮೊಟ್ಟೆ 8ರಿಂದ 9 ರೂ.ಗೆ ಸಿಗುತ್ತಿದೆ. ಇದರಿಂದ ಶಾಲೆಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದ್ದು, ಸರ್ಕಾರ ತಕ್ಷಣವೇ ಮೊಟ್ಟೆ ದರವನ್ನು ಹೆಚ್ಚಿಸಿ ಅನುದಾನ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮತದಾರರ ಪಟ್ಟಿ ಪರಿಷ್ಕರಣೆ: 2002ರ ವಿವರ ಕಡ್ಡಾಯವಲ್ಲ ಎಂದ ರಾಜ್ಯ ಮುಖ್ಯ ಚುನಾವಣಾಧಿಕಾರಿ – Kannada News | Voter List Revision: 2002 Details Not Mandatory, Submit Forms by August 8, Clarifies Karnataka CEO V Anbukumar

ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್

ಬೆಂಗಳೂರು, ಜುಲೈ 23: ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ಮತದಾರರ ಪಟ್ಟಿ ಸಮೀಕ್ಷೆಯ ಎಣಿಕೆ ನಮೂನೆಗಳಲ್ಲಿ 2002ರ ಸ್ವಯಂ ಹಾಗೂ ಪೋಷಕರ ವಿವರಗಳನ್ನು ಕಡ್ಡಾಯವಾಗಿ ಭರ್ತಿ ಮಾಡುವ ಅಗತ್ಯವಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ. ಆದರೆ, ಆಗಸ್ಟ್ 8, 2026ರೊಳಗೆ ನಾಗರಿಕರು ತಮ್ಮ ನಮೂನೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಆನ್‌ಲೈನ್‌ನಲ್ಲೂ ಸಲ್ಲಿಕೆ ಸಾಧ್ಯ’

ಭೌತಿಕ ನಮೂನೆ ಪಡೆದಿದ್ದರೂ, ಅದನ್ನು ಆನ್‌ಲೈನ್ ಮೂಲಕವೂ ಭರ್ತಿ ಮಾಡಿ ಸಲ್ಲಿಸಬಹುದು. 2002ರ ದಾಖಲೆಗಳು ಲಭ್ಯವಿಲ್ಲದಿದ್ದರೂ ನಮೂನೆ ಸಲ್ಲಿಸಲು ಅವಕಾಶವಿದೆ. ಬಳಿಕ ಅಗತ್ಯವಿದ್ದರೆ ನಮೂನೆಯಲ್ಲಿ ಉಲ್ಲೇಖಿಸಿರುವ 12 ದಾಖಲೆಗಳಲ್ಲಿ ಒಂದನ್ನು ಸಲ್ಲಿಸುವಂತೆ ನೋಟಿಸ್ ನೀಡಲಾಗುತ್ತದೆ. ಯಾವ ದಾಖಲೆ ಬೇಕು ಎಂಬುದನ್ನು ಸಂಬಂಧಿತ ಚುನಾವಣಾ ನೋಂದಣಿ ಅಧಿಕಾರಿ (ERO) ಅಂತಿಮವಾಗಿ ನಿರ್ಧರಿಸಲಿದ್ದಾರೆ ಎಂದು ಅನ್ಬುಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ:  ಆ. 8ರೊಳಗೆ ಫಾರ್ಮ್ ಸಲ್ಲಿಸದಿದ್ದರೆ ವೋಟರ್ ಐಡಿಯಿಂದ ಹೆಸರು ಔಟ್; 17.19 ಲಕ್ಷ ಫಾರ್ಮ್‌ಗಳಲ್ಲಿ ಸರಿಯಾದ ಮಾಹಿತಿ ಇಲ್ಲ

ಈ ವರೆಗಿನ ಸಮೀಕ್ಷೆಯ ವಿವರ

ಜುಲೈ 22ರವರೆಗಿನ ಮಾಹಿತಿಯಂತೆ ಸಮೀಕ್ಷೆಯಲ್ಲಿ 5,87,457 (1.06%) ಮತದಾರರು ಪತ್ತೆಯಾಗಿಲ್ಲ/ ಸ್ಥಳಾಂತರಗೊಂಡಿರೋದು ಗೊತ್ತಾಗಿದೆ. 26,32,229 (4.75%) ಶಾಶ್ವತವಾಗಿ ಸ್ಥಳಾಂತರಗೊಂಡಿದ್ದರೆ, 9,81,642 (1.77%) ಮಂದಿ ಮೃತಪಟ್ಟಿದ್ದಾರೆ.2,70,659 (0.49%) ಜನರು ಈಗಾಗಲೇ ಬೇರೆಡೆ ನೋಂದಾಯಿತರಾಗಿದ್ದಾರೆ. 12,344 (0.02%) ಇತರ ವರ್ಗಕ್ಕೆ ಸೇರಿದ್ದಾರೆ. ಒಟ್ಟು 44,84,331 (8.09%) ಮತದಾರರನ್ನು ASDDO (Absent, Shifted, Dead, Duplicate & Others) ವರ್ಗದಲ್ಲಿ ಗುರುತಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಸ್ಥಳ ಪರಿಶೀಲನೆ (Spot Mahazar) ನಡೆಸುತ್ತಿದ್ದು, ಬೂತ್ ಮಟ್ಟದ ಏಜೆಂಟ್‌ಗಳ (BLA), ನೆರೆಹೊರೆಯವರು ಹಾಗೂ ಚುನಾವಣಾ ಸಿಬ್ಬಂದಿಯ ಸಹಿಗಳನ್ನು ಪಡೆಯಲಾಗುತ್ತಿದೆ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ.

ಮತದಾರರ ವಿವರಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲದಂತೆ ಪರಿಶೀಲಿಸಲು ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಲಾಗಿದೆ. BLAಗಳು ಕೂಡ ನಮೂನೆಗಳನ್ನು ಸಂಗ್ರಹಿಸಿ BLOಗಳಿಗೆ ಹಸ್ತಾಂತರಿಸಬಹುದು. ಉತ್ತರಹಳ್ಳಿ ಹಾಗೂ ಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ಮ್ಯಾಪಿಂಗ್ ದೋಷ ಮತ್ತು ಮಾಹಿತಿ ನಾಪತ್ತೆ ಕುರಿತು ಜುಲೈ 15ರಂದು ದೂರು ಬಂದಿತ್ತು. ಜುಲೈ 18ರಂದು ಸಮಸ್ಯೆ ಬಗೆಹರಿಸಲಾಗಿದೆ. PDF ಕಡತಗಳನ್ನು Excelಗೆ ಪರಿವರ್ತಿಸುವ ವೇಳೆ ತಾಂತ್ರಿಕ ಸಮಸ್ಯೆಯಿಂದ ಈ ದೋಷ ಉಂಟಾಗಿತ್ತು ಎಂದು ಸಿಇಒ ತಿಳಿಸಿದ್ದಾರೆ. ವರ್ತೂರು ಹಾಗೂ ಮಹದೇವಪುರ ಕ್ಷೇತ್ರಗಳಲ್ಲೂ ಇದೇ ರೀತಿಯ ದೂರುಗಳು ಬಂದಿದ್ದು, ಸಂಬಂಧಿತ ERO ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಂದ ವರದಿ ಕೇಳಲಾಗಿದೆ ಎಂದವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇನ್ಫೋಸಿಸ್ ಸಿಇಒ ಸಲೀಲ್ ಪಾರೇಕ್ ರಾಜೀನಾಮೆ ನಿರ್ಧಾರ; ಆಶಿಶ್ ಕುಮಾರ್ ದಾಶ್​ಗೆ ಚುಕ್ಕಾಣಿ – Kannada News | Infosys board to replace CEO Salil Parekh with Ashiss Kumar Dash

ಬೆಂಗಳೂರು, ಜುಲೈ 23: ಭಾರತದ ಪ್ರಮುಖ ಐಟಿ ದೈತ್ಯ ಸಂಸ್ಥೆ ಇನ್ಫೋಸಿಸ್ (Infosys) ತನ್ನ ಮುಖಂಡತ್ವದಲ್ಲಿ ಪ್ರಮುಖ ಬದಲಾವಣೆಯನ್ನು ಘೋಷಿಸಿದೆ. ಪ್ರಸ್ತುತ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆಗಿರುವ ಸಲಿಲ್ ಪಾರೇಕ್ ಅವರು 2027ರ ಮಾರ್ಚ್ 31 ರಂದು ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದು, ಸಂಸ್ಥೆಯ ಹಿರಿಯ ನಾಯಕ ಆಶಿಶ್ ಕುಮಾರ್ ದಾಶ್ (Ashiss Kumar Dash) ಅವರನ್ನು ನೂತನ ಸಿಇಒ (CEO Designate) ಆಗಿ ಆಡಳಿತ ಮಂಡಳಿ ನೇಮಕ ಮಾಡಿದೆ. ಆಶಿಶ್ ಕುಮಾರ್ ದಾಶ್ ಅವರು 2027ರ ಏಪ್ರಿಲ್ 1 ರಿಂದ 5 ವರ್ಷಗಳ ಅವಧಿಗೆ ಇನ್ಫೋಸಿಸ್‌ನ ನೂತನ ಸಿಇಒ ಮತ್ತು ಎಂಡಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಸುದೀರ್ಘ ಸೇವೆ ಸಲ್ಲಿಸಿದ ಸಲಿಲ್ ಪಾರೇಕ್

2018 ರಲ್ಲಿ ಇನ್ಫೋಸಿಸ್​​ಗೆ ನೇರವಾಗಿ ಸಿಇಒ ಆಗಿ ಸೇರಿದ ಸಲಿಲ್ ಪಾರೇಕ್ ಅವರು 9 ವರ್ಷ ಆ ಹುದ್ದೆಯಲ್ಲಿದ್ದಂತಾಗುತ್ತದೆ. ಸಂಸ್ಥಾಪಕರು ಬಿಟ್ಟರೆ ಸಿಇಒ ಸ್ಥಾನದಲ್ಲಿ ಅತಿಹೆಚ್ಚು ಅವಧಿ ಇದ್ದ ಗೌರವ ಸಲೀಲ್ ಪಾರೇಕ್ ಅವರದ್ದಾಗಿದೆ.

ಸಲೀಲ್ ಪಾರೇಕ್ ಅವರು ತಮ್ಮ ಆಡಳಿತಾವಧಿಯಲ್ಲಿ ಇನ್ಫೋಸಿಸ್‌ನ ವಾರ್ಷಿಕ ಆದಾಯವನ್ನು $10 ಬಿಲಿಯನ್‌ನಿಂದ $20 ಬಿಲಿಯನ್‌ಗಿಂತಲೂ (ಸುಮಾರು ₹1.90 ಲಕ್ಷ ಕೋಟಿ) ಹೆಚ್ಚಿಸಿದ ಸಾಧನೆಯೊಂದಿಗೆ ನಿರ್ಗಮಿಸುತ್ತಿದ್ದಾರೆ.

ಇದನ್ನೂ ಓದಿ: ಹೊಸ ಏರ್ಲೈನ್ಸ್ ಕಟ್ಟಲಿರುವ ಅದಾನಿ; ಎರಡೇ ಕಂಪನಿಗಳ ಪ್ರಾಬಲ್ಯದ ವೈಮಾನಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಸಾಧ್ಯತೆ

“ಇನ್ಫೋಸಿಸ್‌ನಂತಹ ಪ್ರತಿಷ್ಠಿತ ಸಂಸ್ಥೆಯನ್ನು ಮುನ್ನಡೆಸಿದ್ದು ನನಗೆ ಸಿಕ್ಕ ಗೌರವ. ಮುಂಬರುವ ತಿಂಗಳುಗಳಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಆಶಿಶ್ ದಾಶ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇನೆ” ಎಂದು ಪಾರೇಕ್ ಹೇಳಿದ್ದಾರೆ.

ಇನ್ಫೋಸಿಸ್​ನ ಹಳೆಯ ಹುಲಿ ಆಶಿಶ್

ಐಐಟಿ ಖರಗ್‌ಪುರ ಹಳೆಯ ವಿದ್ಯಾರ್ಥಿಯಾಗಿರುವ ಆಶಿಶ್ ಕುಮಾರ್ ದಾಶ್ ಅವರು ಇನ್ಫೋಸಿಸ್‌ನಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಅವರು ಗ್ಲೋಬಲ್ ಹೆಡ್ (ಎನರ್ಜಿ, ಯುಟಿಲಿಟೀಸ್ ಅಂಡ್ ಸಸ್ಟೇನಬಿಲಿಟಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಂದನ್ ನಿಲೇಕಣಿ ಪ್ರತಿಕ್ರಿಯೆ

ಇನ್ಫೋಸಿಸ್ ಸಂಸ್ಥಾಪಕ ಹಾಗೂ ಅಧ್ಯಕ್ಷ ನಂದನ್ ನಿಲೇಕಣಿ ಅವರು ಮಾತನಾಡಿ, “ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಯುಗದಲ್ಲಿ ಇನ್ಫೋಸಿಸ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಕಂಪನಿಯ ಮೌಲ್ಯಗಳನ್ನು ಎತ್ತಿಹಿಡಿಯಲು ಆಂತರಿಕ ನಾಯಕರಾದ ಆಶಿಶ್ ದಾಶ್ ಸೂಕ್ತ ಅಭ್ಯರ್ಥಿ. ಸಲಿಲ್ ಪಾರೇಕ್ ಅವರ ಆಡಳಿತಾವಧಿಯಲ್ಲಿ ಇನ್ಫೋಸಿಸ್ ಡಿಜಿಟಲ್ ಮತ್ತು AI ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಬಲವಾದ ಅಡಿಪಾಯ ನಿರ್ಮಿಸಿದೆ” ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ನೀವು ಐಟಿ ರಿಟರ್ನ್ಸ್ ಸಲ್ಲಿಸಿ 6 ವರ್ಷಗಳವರೆಗೆ ಈ ದಾಖಲೆಗಳು ಜೊತೆಯಲ್ಲಿರಲಿ: ತೆರಿಗೆ ತಜ್ಞರ ಸಲಹೆ

ಐಟಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಳವಡಿಕೆ ವೇಗವಾಗಿ ನಡೆಯುತ್ತಿದ್ದು, ಆಶಿಶ್ ದಾಶ್ ಅವರ ನೇತೃತ್ವದಲ್ಲಿ ಇನ್ಫೋಸಿಸ್ ತನ್ನ ‘AI-ಫಸ್ಟ್ Strategy’ ಮತ್ತು ಜಾಗತಿಕ ಉದ್ಯಮ ವಿಸ್ತರಣೆಯನ್ನು ಮತ್ತಷ್ಟು ವೇಗಗೊಳಿಸಲಿದೆ. ಸಲಿಲ್ ಪಾರೇಕ್ ಅವರು 2027ರ ಮಾರ್ಚ್‌ವರೆಗೆ ತಮ್ಮ ಹುದ್ದೆಯಲ್ಲಿದ್ದು, ಸುಲಭ ಅಧಿಕಾರ ಹಸ್ತಾಂತರಕ್ಕೆ ನೆರವಾಗಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಪ್ಪಿಯೂ ಇಂತಹ ಫೋಟೋಗಳನ್ನು ನಿಮ್ಮ ಮೊಬೈಲ್‌ ವಾಲ್‌ಪೇಪರ್‌ನಲ್ಲಿ ಹಾಕ್ಬೇಡಿ; ಯಾಕೆ ಗೊತ್ತಾ? – Kannada News | Putting these kind of wallpaper on your mobile phone will ruin your peace of mind

ಈ ಡಿಜಿಟಲ್‌ ಯುಗದಲ್ಲಿ ಸ್ಮಾರ್ಟ್‌ಫೋನ್‌ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಜೀವನದ ಅವಿಭಾಜ್ಯ ಅಂಗದಂತಿರುವ ಈ ಫೋನ್‌ಗಳನ್ನು ಪ್ರತಿಯೊಬ್ಬರೂ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಅದಕ್ಕೆ ಸ್ಕ್ರೀನ್‌ ಗಾರ್ಡ್‌, ಚೆಂದ ಚೆಂದದ ಕವರ್‌ಗಳನ್ನು ಹಾಕುತ್ತಾರೆ. ಅದೇ ರೀತಿ ಪ್ರತಿಯೊಬ್ಬರೂ ತಮ್ಮ ಮೊಬೈಲ್‌ ವಾಲ್‌ಪೇಪರ್‌ಗೆ (mobile wallpaper) ತಮ್ಮಿಷ್ಟದ ಫೋಟೋವನ್ನು ಹಾಕಿಕೊಳ್ಳುತ್ತಾರೆ. ಆದರೆ ಹೀಗೆ ಎಲ್ಲಾ ರೀತಿಯ ಫೋಟೋಗಳನ್ನು ವಾಲ್‌ಪೇಪರ್‌ ಹಾಕುವುದು ತರವಲ್ಲ ಎನ್ನುತ್ತಾರೆ ತಜ್ಞರು. ಹೌದು ನಾವು ದಿನದ ಹೆಚ್ಚಿನ ಸಮಯವನ್ನು ಮೊಬೈಲ್‌ನಲ್ಲಿ ಕಳೆಯುವ ಕಾರಣ ಪದೇ ಪದೇ ಮೊಬೈಲ್‌ ವಾಲ್‌ಪೇಪರ್‌ ನೋಡುತ್ತೇವೆ. ಈ ಫೋಟೋಗಳು  ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಅದರಲ್ಲೂ ಕೆಲವು ವಾಲ್‌ಪೇಪರ್‌ಗಳು ನಕಾರಾತ್ಮಕ ಭಾವನೆಗಳು, ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಆದ್ದರಿಂದ ಮಾನಸಿಕ ನೆಮ್ಮದಿಗಾಗಿ ಈ ಕೆಲವೊಂದು ಫೋಟೋಗಳನ್ನು ಮೊಬೈಲ್‌ ವಾಲ್‌ಪೇಪರ್‌ಗೆ ಹಾಕುವುದನ್ನು ತಪ್ಪಿಸಿ.

ಮೊಬೈಲ್‌ ವಾಲ್‌ಪೇಪರ್‌ನಲ್ಲಿ ಈ ಫೋಟೋಗಳನ್ನು ಹಾಕುವುದು ಸೂಕ್ತವಲ್ಲ:

ಗಾಢ ಬಣ್ಣ ಮತ್ತು ಋಣಾತ್ಮಕ ಚಿತ್ರಗಳು: ಗಾಢ ಬಣ್ಣದ ಮತ್ತು ಭಯಾನಕತೆಯನ್ನು ಉಂಟು ಮಾಡುವ ಖಾಲಿ ರಸ್ತೆ, ದೆವ್ವವನ್ನು ಹೋಲುವ ಚಿತ್ರಗಳನ್ನು ಮೊಬೈಲ್‌ ವಾಲ್‌ಪೇಪರ್‌ಗೆ ಹಾಕಬಾರದು. ಈ ನಕಾರಾತ್ಮಕ ವಾಲ್‌ಪೇಪರ್‌ಗಳು ಮೆದುಳಿನಲ್ಲಿ ನಕಾರಾತ್ಮಕ ಹಾರ್ಮೋನುಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದು ಆಯಾಸ, ಆತಂಕ ಮತ್ತು ಕಿರಿಕಿರಿಯನ್ನು ಉಂಟು ಮಾಡುತ್ತದೆ. ಹಾಗಾಗಿ ಯಾವಾಗಲೂ ಶಾಂತವಾಗಿರುವ ವಾಲ್‌ಪೇಪರ್‌ಗಳನ್ನು ಹಾಕುವುದು ಉತ್ತಮ.

ಹಾರ್ಟ್‌ಬ್ರೇಕ್‌ ಫೋಟೋಗಳು: ಕೆಲವರು ಯುವಕನೊಬ್ಬ ಒಬ್ಬಂಟಿಯಅಗಿ ನೋವಿನಲ್ಲಿ ನಿಂತಿರುವ, ಬ್ರೇಕಪ್‌ಗೆ ಸಂಬಂಧಿಸಿದ ಉಲ್ಲೇಖಗಳಿರುವ, ಒಬ್ಬಂಟಿ ಭಾವನೆಯನ್ನು ಉಂಟುಮಾಡುವ ನಕಾರಾತ್ಮಕ ಫೋಟೋಗಳನ್ನು ವಾಲ್‌ಪೇಪರ್‌ಗೆ ಹಾಕಿಕೊಳ್ಳುತ್ತಾರೆ. ಮನಸ್ಸಿಗೆ ನೋವನ್ನು ಉಂಟು ಮಾಡುವ ಇಂತಹ ಫೋಟೋಗಳನ್ನು ಪದೇ ಪದೇ ನೋಡಿದಾಗ, ಅದು ಮಾನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಮನಸ್ಸಿನ ದುಃಖವನ್ನು ಹೆಚ್ಚು ಮಾಡುತ್ತದೆ.

ಆಕ್ರಮಣಕಾರಿ ಮತ್ತು ಹಿಂಸಾತ್ಮಕ ಫೋಟೋಗಳು:‌ ಆಯುಧಗಳು, ಕೋಪಗೊಂಡ ಮುಖದ ಚಿತ್ರ, ಫೈಟಿಂಗ್‌ ಸೀನ್‌ ಇಂತಹ ಹಿಂಸಾತ್ಮಕ ಅಂಶಗಳನ್ನು ಬಿಂಬಿಸುವ ಫೋಟೋಗಳನ್ನು ವಾಲ್‌ಪೇಪರ್‌ನಲ್ಲಿ ಹಾಕಬಾರದು. ಇದು ನಮ್ಮ ನರ ಮಂಡಲದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಿ ಒತ್ತಡವನ್ನು ಮತ್ತು ಆಯಾಸವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಸುಖ ನಿದ್ರೆಗಾಗಿ ಗಿಡಮೂಲಿಕೆಗಳು ಸಹಕಾರಿ ಎನ್ನುತ್ತಾರೆ ಡೈಸಿ ಬೋಪಣ್ಣ

ಹಲವು ಬಣ್ಣಗಳು ಮತ್ತು ಬರವಣಿಗೆಗಳಿರುವ ಫೋಟೋ: ಕೆಲವರು ಅನೇಕಾರು ಬಣ್ಣಗಳನ್ನು ಹೊಂದಿರುವ ಹಾಗೂ ಅನೇಕ ಬರವಣಿಗೆಗಳಿರುವ ಪೋಟೋಗಳನ್ನು ಮೊಬೈಲ್‌ ವಾಲ್‌ಪೇಪರ್‌ನಲ್ಲಿ ಹಾಕುತ್ತಾರೆ. ಇಂತಹ ಓವರ್‌ ಕ್ರೌಡ್‌ ಪೋಟೋಗಳು ಕಣ್ಣಿಗೆ ಒತ್ತಡವನ್ನು ಉಂಟುಮಾಡುತ್ತವೆ.

ಹಾಗಾಗಿ ಯಾವಾಗಲೂ ಸಕಾರಾತ್ಮಕ ಅಂಶಗಳನ್ನು ಒಳಗೊಂಡ ಫೋಟೋಗಳನ್ನು ವಾಲ್‌ಪೇಪರ್‌ ಹಾಕುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತು? – Kannada News | BJP And Congress Workers Protest Turns To violence In Karnataka, here Is Full details

ಬೆಂಗಳೂರು, (ಜುಲೈ 23): ಕರ್ನಾಟಕದ ಹಲವೆಡೆ ಕಾಂಗ್ರೆಸ್-ಬಿಜೆಪಿ ನಡುವೆ ಸಂಘರ್ಷ ಏರ್ಪಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ನಿವಾಸದ ಮುಂದೆ ಕಾಂಗ್ರೆಸ್ ಪ್ರತಿಭಟನೆ ಹಾಗೂ ಬಿಜೆಪಿ ಶಾಸಕ ಬಿಪಿ ಹರೀಶ್ ಮೇಲೆ ಮೊಟ್ಟೆ ಎಸೆತವನ್ನು ಖಂಡಿಸಿ ರಾಜ್ಯದೆಲ್ಲಡೆ ಪ್ರತಿಭಟನೆ ನಡೆಸಿದೆ. ಇನ್ನೊಂದೆಡೆ ಕಾಂಗ್ರೆಸ್ ಸಹ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹಲವೆಡೆ ಭಾರೀ ಪ್ರತಿಭಟನೆ ನಡೆಸಿದ್ದು, ಬಿಜೆಪಿ ಕಚೇರಿಗಳಿಗೆ ಘೇರಾವ್ ಹಾಕಲಾಗಿದೆ. ಹೀಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಪ್ರತಿಭಟನೆಯಿಂದಾಗಿ ಶಿವಮೊಗ್ಗ, ಬೀದರ್, ಕೊಪ್ಪಳ, ಧಾರವಾಡದಲ್ಲಿ ಎರಡೂ ಪಕ್ಷಗಳ ನಡುವೆ ಗಲಾಟೆಗೆ ತಿರುಗಿದೆ. ಅಷ್ಟಕ್ಕೂ ಎಲ್ಲೆಲ್ಲಿ ಏನೇನಾಯ್ತು ಎನ್ನುವ ಡಿಟೇಲ್ಸ್​ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ… – Kannada News | Jana Nayagan movie release, here is audience reaction after watching

ವಿಜಯ್ (Vijay) ನಟನೆಯ ‘ಜನ ನಾಯಗನ್’ ಸಿನಿಮಾ ಇಂದು (ಜುಲೈ 23) ದೇಶದಾದ್ಯಂತ ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಸಹ ‘ಜನ ನಾಯಗನ್’ ಸಿನಿಮಾ ಬಲು ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಇಲ್ಲಿಯೂ ಸಹ ವಿಜಯ್ ಅಭಿಮಾನಿಗಳು ಸಾಕಷ್ಟು ಜನ ಇದ್ದಾರೆ. ಹಲವಾರು ಮಂದಿ ಮೊದಲ ದಿನವೇ ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಸಿನಿಮಾ ನೋಡಿದ ಬಳಿಕ, ಸಿನಿಮಾದ ಬಗ್ಗೆ ಅಭಿಪ್ರಾಯವನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೆಪಿಎಸ್ಸಿ ಕರ್ಮಕಾಂಡ ಬಗ್ಗೆ ರಾಹುಲ್ ಗಾಂಧಿ ಮೌನ ಯಾಕೆ?: ಕಾಂಗ್ರೆಸಿಗರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ – Kannada News | Pralhad Joshi Questions Rahul Gandhi’s Silence on KPSC Scam Amid Congress’s NEET Protests

ಕಾಂಗ್ರೆಸಿಗರ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಕಿಡಿImage Credit source: PTI

ನವದೆಹಲಿ/ಬೆಂಗಳೂರು, ಜುಲೈ 23: ನೀಟ್ ಬಗ್ಗೆ ಧ್ವನಿ ಎತ್ತುತ್ತಿರುವ ರಾಹುಲ್ ಗಾಂಧಿ ಕರ್ನಾಟಕದ ಕೆಪಿಎಸ್ಸಿ ಕರ್ಮಕಾಂಡ ಬಗ್ಗೆ ಏಕೆ ಧ್ವನಿ ಅಡಗಿಸಿದ್ದಾರೆ? ಇದೆಂಥ ದ್ವಿಮುಖ ನೀತಿ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಿಪಕ್ಷಗಳು ರಾಷ್ಟ್ರೀಯ ಪರೀಕ್ಷೆ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ನೀಟ್ ವಿವಾದ ಕುರಿತು ಸಂಸತ್ತಿನಲ್ಲಿ ಮುಕ್ತ ಹಾಗೂ ಸತ್ಯಾಧಾರಿತ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಇದಕ್ಕೆ ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿಪಕ್ಷ ನಾಯಕರೂ ಸಮ್ಮತಿಸಿದ್ದಾರೆ. ವಿಪಕ್ಷಗಳು ರಾಜಕೀಯ ಬದಿಗೊತ್ತಿ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಎಲ್ಲರೂ ಒಟ್ಟಾಗಿ ಚರ್ಚೆಯಲ್ಲಿ ಭಾಗವಹಿಸಬೇಕೆಂದು ಪ್ರಲ್ಹಾದ ಜೋಶಿ ಕೋರಿದ್ದಾರೆ.

‘ಕೆಪಿಎಸ್ಸಿ ಹಗರಣದ ಬಗ್ಗೆ ಯಾಕೆ ಚಕಾರವಿಲ್ಲ?’

ಕೇಂದ್ರದಲ್ಲಿ ಇಷ್ಟೊಂದು ರಾದ್ಧಾಂತ ಮಾಡುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ತಮ್ಮದೇ ಆಡಳಿತವಿರುವ ಕರ್ನಾಟಕದಲ್ಲಿ ಕೆಪಿಎಸ್ಸಿ ಕರ್ಮಕಾಂಡ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ? ಎಂದು ಜೋಶಿ ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ 2.7 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿವೆ. ಕೆಪಿಎಸ್‌ಸಿ ಅಧ್ಯಕ್ಷರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಅಲ್ಲಿಯೂ ಪ್ರತಿಭಟನೆಗಿಳಿದ ಪರೀಕ್ಷಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಹಾಗಿದ್ದರೂ ರಾಹುಲ್ ಅದೇಕೆ ಮೌನ ವಹಿಸಿದ್ದಾರೆ. ಅಲ್ಲೇಕೆ ವಿದ್ಯಾರ್ಥಿಗಳ ಹೋರಾಟಕ್ಕೆ ಸಾಥ್ ಕೊಡಲಿಲ್ಲ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿರುವ ಅವರು, ಇದು ಇವರ ದ್ವಿಮುಖ ನೀತಿಯನ್ನು ಅನಾವರಣಗೊಳಿಸಿದೆ ಎಂದು ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತು?

‘ಪರೀಕ್ಷಾ ಮಾಫಿಯಾ ವಿರುದ್ಧ ಕಠಿಣ ಕ್ರಮ’

ನೀಟ್ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವತ್ತೂ ನೆಪ ಹೇಳಿ ಜಾರಿಕೊಂಡಿಲ್ಲ. ವ್ಯವಸ್ಥೆ ಸುಧಾರಿಸಲು ಪ್ರಥಮಾದ್ಯತೆ ನೀಡಿದೆ. ನೀಟ್ ಪ್ರಕರಣದಲ್ಲಿ ಈಗಾಗಲೇ 14 ಜನರನ್ನು ಬಂಧಿಸಲಾಗಿದೆ. ಪರೀಕ್ಷಾ ಮಾಫಿಯಾಗೆ 10 ವರ್ಷ ಜೈಲು ಮತ್ತು ಭಾರೀ ದಂಡ ವಿಧಿಸುವ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೆ ತಂದಿದೆ ಎಂದು ಕೇಂದ್ರದ ಕ್ರಮವನ್ನು ಪ್ರಲ್ಹಾದ ಜೋಶಿ ಸಮರ್ಥಿಸಿಕೊಂಡಿದ್ದಾರೆ. ರಾಜಸ್ಥಾನದಲ್ಲಿ ಮಾತ್ರ ಗೆಹ್ಲೋಟ್ ಅವರ ಅಧಿಕಾರಾವಧಿಯಲ್ಲಿ 19 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪ್ರಿಯಾಂಕಾ ವಾದ್ರಾ ಅವರು ಅಂದು ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಸಾಧ್ಯವಾಗಲಿಲ್ಲ ಎಂಬುದನ್ನು ಸ್ವತಃ ಒಪ್ಪಿಕೊಂಡಿದ್ದರು ಎಂಬುದನ್ನೂ ಕೇಂದ್ರ ಸಚಿವರು ನೆನಪಿಸಿದ್ದಾರೆ.

‘ವೈದ್ಯಕೀಯ ಸೀಟು ಮೂರುಪಟ್ಟು ಹೆಚ್ಚಳ’

2014ರಿಂದ ನರೇಂದ್ರ ಮೋದಿ ಸರ್ಕಾರ, ಭಾರತದ ಯುವಕರು ಅರ್ಹತೆ ಆಧಾರದ ಮೇಲೆ ಮಾತ್ರ ಅವಕಾಶ ಪಡೆಯುವುದನ್ನು ಖಚಿತಪಡಿಸಿದೆ. ವೈದ್ಯಕೀಯ ಶಿಕ್ಷಣದಲ್ಲಿ ನಿರ್ವಹಣಾ ಕೋಟಾ ಸೀಟುಗಳ ವ್ಯವಸ್ಥೆ ರದ್ದುಗೊಳಿಸಿತು. ಆದರೆ, ವೈದ್ಯಕೀಯ ಸೀಟುಗಳ ಸಂಖ್ಯೆ 2014ರಲ್ಲಿ ಇದ್ದುದರ (51,000) ಮೂರು ಪಟ್ಟು ಇಂದು ಹೆಚ್ಚಾಗಿದೆ. AIIMS ಸಂಖ್ಯೆಯನ್ನು ಗಮನಾರ್ಹವಾಗಿ ವಿಸ್ತರಿಸಲಾಗಿದೆ ಎಂದು ಉದಾಹರಣೆ ಸಮೇತ ಸಚಿವರು ತಿಳಿಸಿದ್ದಾರೆ.

‘ರಚನಾತ್ಮಕ ವ್ಯವಸ್ಥೆಗೆ ಕೇಂದ್ರ ಬದ್ಧ’

ಪ್ರಸ್ತುತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಭವಿಸಿದೆ ಎಂದು ಗೊತ್ತಾಗುತ್ತಲೇ ಸರ್ಕಾರ ಪರೀಕ್ಷೆಯನ್ನೇ ರದ್ದುಗೊಳಿಸಿತು. ತದನಂತರ ಅತ್ಯಂತ ಪಾರದರ್ಶಕ ರೀತಿಯಲ್ಲಿ ಮರು-ನೀಟ್ ಪರೀಕ್ಷೆ ನಡೆಸಿತು ಮತ್ತು ಫಲಿತಾಂಶ ಸಹ ತಕ್ಷಣವೇ ಘೋಷಿಸಲಾಯಿತು. ದೇಶದಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು, ರಚನಾತ್ಮಕ ಸಲಹೆ ಕಾರ್ಯಗತಗೊಳಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಪುನರುಚ್ಚರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:15 pm, Thu, 23 July 26

Source link

IND vs ZIM: ಸತತ ಗೆಲುವು; ಧೋನಿಯ ಸಾರ್ವಕಾಲಿಕ ದಾಖಲೆ ಮುರಿದ ಶ್ರೇಯಸ್ – Kannada News | Shreyas Iyer Breaks MS Dhoni’s Toss Record in India vs Zimbabwe T20

ಹರಾರೆಯಲ್ಲಿ ಜಿಂಬಾಬ್ವೆ ಹಾಗೂ ಭಾರತ (India vs Zimbabwe ) ನಡುವಿನ ಮೊದಲ ಟಿ20 ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ (Shreyas Iyer) ಮೊದಲು ಬೌಲಿಂಗ್‌ ಮಾಡಲು ನಿರ್ಧರಿಸಿದರು. ವಾಸ್ತವವಾಗಿ ಭಾರತದ ಟಿ20 ನಾಯಕನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಶ್ರೇಯಸ್ ಅಯ್ಯರ್​ಗೆ ನಿರೀಕ್ಷಿಸಿದ ಯಶಸ್ಸು ಸಿಗದಿರಬಹುದು, ಆದರೆ ಟಾಸ್‌ನಲ್ಲಿ ಅವರ ಅದೃಷ್ಟ ಅದ್ಭುತವಾಗಿದೆ. ನಾಯಕನಾಗಿ ಶ್ರೇಯಸ್ ಅಯ್ಯರ್​ಗೆ ಇದು 8ನೇ ಅಂತರರಾಷ್ಟ್ರೀಯ ಟಿ20 ಪಂದ್ಯವಾಗಿದ್ದು, ಈ 8 ಪಂದ್ಯಗಳಲ್ಲೂ ಶ್ರೇಯಸ್ ಟಾಸ್ ಗೆದ್ದಿದ್ದಾರೆ. ಇದರೊಂದಿಗೆ, ಶ್ರೇಯಸ್, ಎಂಎಸ್ ಧೋನಿ ಅವರ ಸತತ 7 ಟಾಸ್ ಗೆದ್ದ ದಾಖಲೆಯನ್ನು ಮುರಿದಿದ್ದಾರೆ.

ಟಾಸ್ ಗೆಲ್ಲುವುದರಲ್ಲಿ ಶ್ರೇಯಸ್ ನಿಸ್ಸೀಮಾ

ಮೇಲೆ ಹೇಳಿದಂತೆ ಶ್ರೇಯಸ್ ಅಯ್ಯರ್ ಪೂರ್ಣಾವಧಿ ಟಿ20 ನಾಯಕನಾಗಿ ಅಧಿಕಾರ ವಹಿಸಿಕೊಂಡ ನಂತರ ಸತತ ಎಂಟು ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದಾರೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಯೊಂದಿಗೆ ಪ್ರಾರಂಭವಾದ ಈ ‘ಟಾಸ್ ಮ್ಯಾಜಿಕ್’ ಜಿಂಬಾಬ್ವೆ ಪಂದ್ಯದವರೆಗೂ ಮುಂದುವರೆದಿದೆ. ಆದಾಗ್ಯೂ, ಟಾಸ್ ಎಷ್ಟೇ ಅದೃಷ್ಟಶಾಲಿಯಾಗಿದ್ದರೂ, ಆ ಅದೃಷ್ಟ ಪಂದ್ಯದ ಫಲಿತಾಂಶಗಳಾಗಿ ರೂಪಾಂತರಗೊಳ್ಳುವುದಿಲ್ಲ. ಸತತವಾಗಿ ಟಾಸ್ ಗೆದ್ದರೂ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂಬುದು ಅಯ್ಯರ್​ಗೆ ದುಃಸ್ವಪ್ನವಾಗಿ ಕಾಡುತ್ತಿದೆ.

ಸತತ ಟಾಸ್ ಗೆದ್ದವರ ಪಟ್ಟಿ

  • ಶ್ರೇಯಸ್ ಅಯ್ಯರ್: 8 ಗೆಲುವುಗಳು (2026)
  • ಎಂಎಸ್ ಧೋನಿ: 7 ಗೆಲುವುಗಳು (2010-2012)
  • ವಿರಾಟ್ ಕೊಹ್ಲಿ: 6 ಗೆಲುವುಗಳು (2019)
  • ರೋಹಿತ್ ಶರ್ಮಾ: 5 ಗೆಲುವುಗಳು (2020-2022)

IND vs ZIM: ಸತತ 8ನೇ ಪಂದ್ಯದಲ್ಲಿ ಟಾಸ್ ಗೆದ್ದ ಅಯ್ಯರ್; ತಂಡದ ಪರ ಯುವ ವೇಗಿ ಪಾದಾರ್ಪಣೆ

ಅಶೋಕ್ ಶರ್ಮಾ ಪಾದಾರ್ಪಣೆ

ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದ ಮೂಲಕ ವೇಗದ ಬೌಲರ್ ಅಶೋಕ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಐಪಿಎಲ್‌ನಲ್ಲಿ ತಮ್ಮ ವೇಗದಿಂದ ಎಲ್ಲರನ್ನು ಬೆರಗುಗೊಳಿಸಿದ್ದ ಅಶೋಕ್ ಶರ್ಮಾ ಗಂಟೆಗೆ 154 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಆಡಿದ ಆರು ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಸಹ ಕಬಳಿಸಿದ್ದರು. ಅಶೋಕ್ ಶರ್ಮಾ ಜೊತೆಗೆ, ಮಯಾಂಕ್ ಯಾದವ್ ಕೂಡ ತಂಡಕ್ಕೆ ಮರಳಿದ್ದಾರೆ. ಮಯಾಂಕ್ 2024 ರ ನಂತರ ಮೊದಲ ಬಾರಿಗೆ ಟೀಂ ಇಂಡಿಯಾ ಪರ ಆಡುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ – Kannada News | Kannada actor Dhanush Manjunath talks about Jana Nayagan Movie and Thalapathy Vijay

ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ (Jana Nayagan) ಸಿನಿಮಾದಲ್ಲಿ ಕನ್ನಡದ ನಟ ಧನುಷ್ ಮಂಜುನಾಥ್ ಅವರು ಅಭಿನಯಿಸಿದ್ದಾರೆ. ಇಂದು (ಜುಲೈ 23) ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಗಿದೆ. ವಿಜಯ್ ಅಭಿಮಾನಿಯೂ ಆಗಿರುವ ಧನುಷ್ ಮಂಜುನಾಥ್ ಅವರು ತಮ್ಮ ನೆಚ್ಚಿನ ಹೀರೋ ಜೊತೆ ಅಭಿನಯಿಸಿದ ಅನುಭವವನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ. ‘ಚಿಕ್ಕ ವಯಸ್ಸಿನಿಂದಲೂ ನಾನು ವಿಜಯ್ ಅವರ ಫ್ಯಾನ್. ಅವರನ್ನು ನೋಡಿ ನಾನು ಸ್ಫೂರ್ತಿ ಪಡೆದುಕೊಂಡೆ. ಅವರ ಜೊತೆ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಇದು ಅವರ ಕೊನೆಯ ಸಿನಿಮಾ ಎಂಬುದು ಗೊತ್ತಾದಾಗ ನಾನು ಹೋಗಿ ಆಡಿಷನ್ ನೀಡಿದೆ. ಆಡಿಷನ್ ಮೂಲಕ ನಾನು ಸೆಲೆಕ್ಟ್ ಆದೆ. ಅವರ ಜೊತೆ ಒಂದು ದೃಶ್ಯದಲ್ಲಿ ನಟಿಸಿದ್ದೇನೆ ಎಂದರೆ ನನಗೆ ಹೆಮ್ಮೆ ಆಗುತ್ತದೆ’ ಎಂದು ಕನ್ನಡದ ನಟ ಧನುಷ್ ಮಂಜುನಾಥ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version