IND vs ZIM: 18 ಎಸೆತಗಳಲ್ಲಿ ಅರ್ಧಶತಕ; ಹೊಸ ಇತಿಹಾಸ ನಿರ್ಮಿಸಿದ ವೈಭವ್ – Kannada News | Vaibhav Sooryavanshi: Youngest Batsman to Score T20I Fifty, India vs Zimbabwe Thriller

ವೈಭವ್ ಸೂರ್ಯವಂಶಿ ಕೇವಲ 18 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೈಭವ್ ಅವರ ಮೊದಲ ಅರ್ಧಶತಕವಾಗಿದ್ದು, ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೈಭವ್ ಕೇವಲ 15 ವರ್ಷ ಮತ್ತು 118 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದರು(PC-BCCI).

Source link

IND vs ZIM: ವೈಭವ್ ಆರ್ಭಟ; ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ

ಹರಾರೆಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆತಿಥೇಯ ಜಿಂಬಾಬ್ವೆ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 125 ರನ್ ಗಳಿಸಿತು. ತಂಡದ ಪರ ವೆಸ್ಲಿ ಮಾಧೇವೆರೆ 39 ಮತ್ತು ಮರುಮಾನಿ 27 ರನ್​ಗಳ ಇನ್ನಿಂಗ್ಸ್ ಆಡಿದರು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 3 ವಿಕೆಟ್‌ಗಳನ್ನು ಕಳೆದುಕೊಂಡು 14ನೇ ಓವರ್​ನಲ್ಲಿ ಗೆಲುವಿನ ದಡ ಮುಟ್ಟಿತು. ತಂಡದ ಪರ ವೈಭವ್ ಸೂರ್ಯವಂಶಿ ಕೇವಲ 18 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದರು. ಈ ಗೆಲುವಿನೊಂದಿಗೆ ಶ್ರೇಯಸ್ ಅಯ್ಯರ್ ನಾಯಕನಾಗಿ ತಮ್ಮ ಗೆಲುವಿನ ಖಾತೆಯನ್ನು ತೆರೆದರು.

Source link

ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ, 2 ಲಕ್ಷ ಮನೆಗಳಿಗೆ ವಿದ್ಯುತ್ ಸ್ಥಗಿತ – Kannada News | Maharashtra Rains Schools shut, 891 rescued in Palghar

ಪಾಲ್ಘರ್, ಜುಲೈ 23: ಮಹಾರಾಷ್ಟ್ರದ ಕರಾವಳಿ ಜಿಲ್ಲೆಯಾದ ಪಾಲ್ಘರ್‌ನಲ್ಲಿ ಮಳೆಯಿಂದಾಗಿ ಭಾರಿ ಪ್ರವಾಹ (Maharashtra Flood) ಪರಿಸ್ಥಿತಿ ಉಂಟಾಗಿದೆ. ದಹನು ಮತ್ತು ತಲಸರಿ ತಾಲೂಕುಗಳ ಹಲವಾರು ಹಳ್ಳಿಗಳು ಜಲಾವೃತಗೊಂಡು ದ್ವೀಪದಂತಾಗಿದ್ದು, ಸಾರಿಗೆ ಹಾಗೂ ಸಂಪರ್ಕ ವ್ಯವಸ್ಥೆ ಸಂಪೂರ್ಣವಾಗಿ ಕಡಿತಗೊಂಡಿದೆ. ಪ್ರವಾಹದ ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆ NDRF, VVMC ತಂಡಗಳು ಮತ್ತು ಸ್ಥಳೀಯ ರಕ್ಷಣಾ ಪಡೆಗಳು ಜಂಟಿಯಾಗಿ ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ. ತಗ್ಗು ಪ್ರದೇಶಗಳಲ್ಲಿ ಸಿಲುಕಿದ್ದ 218 ಕುಟುಂಬಗಳ ಒಟ್ಟು 891 ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದಾಗಿ ಹಲವಾರು ನಗರಗಳು ಮತ್ತು ಹಳ್ಳಿಗಳು ಜಲಾವೃತಗೊಂಡಿದ್ದು, ನೂರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಈ ನಡುವೆ ನಾಲೆಯೊಂದರಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾರ್ವಜನಿಕರಿಗೆ ಮತ್ತೊಂದು ದರ ಏರಿಕೆಯ ಬಿಸಿ: KMF ನಂದಿನಿ ತುಪ್ಪ, ಬೆಣ್ಣೆ ದರ ಹೆಚ್ಚಳ – Kannada News | Nandini prices hiked: Ghee to cost Rs 15 per litre And butter up by Rs 22 per kg, effect from July 24

ಬೆಂಗಳೂರು, (ಜುಲೈ 23): ಸ್ವಲ್ಪ ದಿನದ ಹಿಂದಷ್ಟೇ ತುಪ್ಪ ಸೇರಿದಂತೆ ನಂದಿನಿ (Nandini) ಉತ್ಪನ್ನಗಳ ದರ ಇಳಿಕೆ ಮಾಡಿದ್ದ ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್​​) , ಇದೀಗ ದಿಢೀರ್ ಅಂತ ತುಪ್ಪ, ಬೆಣ್ಣೆ ದರ ಏರಿಕೆ ಮಾಡಿದೆ. ಒಂದು ಕೆ.ಜಿ ತುಪ್ಪಕ್ಕೆ (Nandni Ghee) 15 ರೂಪಾಯಿ ಹೆಚ್ಚಳವಾಗಿದ್ದರೆ, ಬೆಣ್ಣೆ (butter) ದರ ಕೆಜಿಗೆ ಬರೋಬ್ಬರಿ 22 ರೂ. ಏರಿಕೆ ಮಾಡಲಾಗಿದೆ. ಹೊಸ ದರ ನಾಳೆಯಿಂದ (ಜುಲೈ 24) ಜಾರಿ ಬರಲಿದ್ದು, ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಪರಿಷ್ಕೃತ ದರ ಹೀಗಿದೆ

1 kg ತುಪ್ಪ 700 ರಿಂದ 715ಕ್ಕೆ ಹೆಚ್ಚಳವಾಗಲಿದೆ. ಇನ್ನು 610 ರೂಪಾಯಿ ಇದ್ದ 1 KG ಬೆಣ್ಣೆ ದರ ಈಗ 660ಕ್ಕೆ ಏರಿಕೆಯಾಗಲಿದೆ. ಇನ್ನು ಪರಿಷ್ಕೃತ ದರ ಜುಲೈ 24 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಇನ್ನು ತುಪ್ಪ ಹಾಗೂ ಬೆಣ್ಣೆ ದರ ಏರಿಕೆ ಹಿನ್ನೆಲೆಯಲ್ಲಿ ಗೃಹ ಬಳಕೆ ಹಾಗೂ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಲಿದ್ದು, ತುಪ್ಪ, ಬೆಣ್ಣೆಯಿಂದ ಮಾಡುವ ಆಹಾರ ಪದಾರ್ಥಗಳ ದರ ಏರಿಕೆಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಸರ್ಕಾರಿ ಶಾಲಾ ಶಿಕ್ಷಕರಿಗೆ ತಟ್ಟಿದ ಮೊಟ್ಟೆ ದರ ಏರಿಕೆ ಬಿಸಿ: ಸರ್ಕಾರ ನೀಡುವ ಹಣ ಹೆಚ್ಚಳಕ್ಕೆ ಮನವಿ

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ(ಜಿಎಸ್​​ಟಿ) ಕಡಿತ ಮಾಡಿದ್ದರಿಂದ ಈ ಹಿಂದೆ ತುಪ್ಪ ಹಾಗೂ ನಂದಿನಿ ಉತ್ಪನ್ನಗಳ ದರವನ್ನು ಶೇ.7ರಷ್ಟು ಇಳಿಕೆ ಮಾಡಲಾಗಿತ್ತು. ಬಳಿಕ ಕಳೆದ ವರ್ಷ ನವೆಂಬರ್​​ನಲ್ಲಿ ಸಹ ಶೇ.15ರಷ್ಟು ತುಪ್ಪ,  ಶೆ.6ರಷ್ಟು ಬೆಣ್ಣೆ ದರ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಹೆಚ್ಚಳ ಮಾಡಲಾಗಿದ್ದು, ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:41 pm, Thu, 23 July 26

Source link

ಮುಂಗಾರು ಕಾಲದಲ್ಲಿ ಎಸಿಯಿಂದ ಮೈ ಜಿಗುಟು ಅನಿಸುತ್ತಾ? ವಿದ್ಯುತ್ ಉಳಿಸಲು, ಕೂಲಿಂಗ್ ಪಡೆಯಲು ಡ್ರೈ ಮೋಡ್ ಟ್ರಿಕ್ಸ್ ಬಳಸಿ – Kannada News | AC tricks during monsoon, switch to Dry mode to improve cooling and save electricity

ಮಳೆಗಾಲ ಅಥವಾ ಮುಂಗಾರು (Monsoon) ಸಮಯದಲ್ಲಿ ವಾತಾವರಣದಲ್ಲಿ ತಾಪಮಾನ ಕಡಿಮೆಯಿದ್ದರೂ, ತೇವಾಂಶ (Humidity) ಹೆಚ್ಚಿರುವುದರಿಂದ ಮನೆಯೊಳಗೆ ವಿಪರೀತ ಧಗೆ, ಉರಿ ಹಾಗೂ ಚರ್ಮದಲ್ಲಿ ಜಿಗುಟುತನ (Sticky feeling) ಅನುಭವಕ್ಕೆ ಬರುತ್ತದೆ. ಇಂತಹ ಸಮಯದಲ್ಲಿ ಹೆಚ್ಚಿನವರು ಎಸಿಯನ್ನು ‘Cool Mode’ನಲ್ಲೇ ಚಾಲನೆ ಮಾಡಿ ತಾಪಮಾನವನ್ನು ಮತ್ತಷ್ಟು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ಕೊಠಡಿ ತಣ್ಣಗಾಗಬಹುದೇ ಹೊರತು ಗಾಳಿಯಲ್ಲಿನ ತೇವಾಂಶ ಕಡಿಮೆಯಾಗುವುದಿಲ್ಲ. ಮೈಗೆ ಕಿರಿಕಿರಿ ತಪ್ಪುವುದಿಲ್ಲ.

ಇದಕ್ಕೆ ಸರಳ ಹಾಗೂ ಪರಿಣಾಮಕಾರಿ ಪರಿಹಾರ ಎಂದರೆ ನಿಮ್ಮ ಎಸಿಯನ್ನು ‘ಡ್ರೈ ಮೋಡ್’ (Dry Mode) ಗೆ ಬದಲಾಯಿಸುವುದು. ಇದು ಮನೆಯಲ್ಲಿ ತಂಪಾದ ವಾತಾವರಣ ನೀಡುವುದರ ಜೊತೆಗೆ ವಿದ್ಯುತ್ ಬಿಲ್ ಅನ್ನು ಸಹ ಗಣನೀಯವಾಗಿ ಕಡಿಮೆ ಮಾಡುತ್ತದೆ. ಮುಂಗಾರು ಸಂದರ್ಭದಲ್ಲಿ ಇದು ಉತ್ತಮ ಆಯ್ಕೆ ಎನಿಸುತ್ತದೆ.

‘ಡ್ರೈ ಮೋಡ್’ ಹೇಗೆ ಕೆಲಸ ಮಾಡುತ್ತದೆ?

ಎಸಿ ರಿಮೋಟ್‌ನಲ್ಲಿ ಹನಿಯ (Water Drop) ಚಿಹ್ನೆ ಹೊಂದಿರುವ ‘ಡ್ರೈ ಮೋಡ್’ ಮುಖ್ಯವಾಗಿ ಡಿಹ್ಯೂಮಿಡಿಫೈಯರ್ (Dehumidifier) ಆಗಿ ಕಾರ್ಯನಿರ್ವಹಿಸುತ್ತದೆ.

  • ತೇವಾಂಶ ಹೀರಿಕೆ: ಈ ಮೋಡ್ ಕೊಠಡಿಯಲ್ಲಿರುವ ಹೆಚ್ಚುವರಿ ಆವಿ ಅಥವಾ ತೇವಾಂಶವನ್ನು ಹೊರತೆಗೆಯಲು ಆದ್ಯತೆ ನೀಡುತ್ತದೆ.
  • ಕಂಪ್ರೆಸ್ಸರ್ ನಿಯಂತ್ರಣ: ಕೂಲ್ ಮೋಡ್‌ನಲ್ಲಿ ಕಂಪ್ರೆಸರ್ ನಿರಂತರವಾಗಿ ಚಾಲನೆಯಲ್ಲಿದ್ದರೆ, ಡ್ರೈ ಮೋಡ್‌ನಲ್ಲಿ ಕಂಪ್ರೆಸರ್ ನಿಯಮಿತವಾಗಿ (Intermittently) ಆನ್ ಮತ್ತು ಆಫ್ ಆಗುತ್ತದೆ.
  • ಗಾಳಿಯ ಹರಿವು: ಫ್ಯಾನ್ ಕಡಿಮೆ ವೇಗದಲ್ಲಿ ಚಲಿಸಿ ಗಾಳಿಯಲ್ಲಿನ ತೇವಾಂಶವನ್ನು ಎಸಿ ಯೂನಿಟ್ ಮೂಲಕ ಹೊರಹಾಕುತ್ತದೆ.

ಇದನ್ನೂ ಓದಿ: ಇನ್ಫೋಸಿಸ್ ಸಿಇಒ ಸಲೀಲ್ ಪಾರೇಕ್ ರಾಜೀನಾಮೆ ನಿರ್ಧಾರ; ಆಶಿಶ್ ಕುಮಾರ್ ದಾಶ್​ಗೆ ಚುಕ್ಕಾಣಿ

ಮುಂಗಾರಿನಲ್ಲಿ ಡ್ರೈ ಮೋಡ್ ಬಳಸುವುದರ ಪ್ರಮುಖ ಲಾಭಗಳು

  • ಜಿಗುಟುತನದಿಂದ ಮುಕ್ತಿ: ಗಾಳಿಯಲ್ಲಿನ ತೇವಾಂಶ ಕಡಿಮೆಯಾಗುತ್ತಿದ್ದಂತೆ ದೇಹದ ಬೆವರು ಸುಲಭವಾಗಿ ಆವಿಯಾಗಿ, ಜಿಗುಟುತನ ಮಾಯವಾಗಿ ತಂಪಾದ ಅನುಭವವಾಗುತ್ತದೆ.
  • ವಿದ್ಯುತ್ ಬಿಲ್ ಉಳಿತಾಯ: ಕಂಪ್ರೆಸರ್ ನಿರಂತರವಾಗಿ ಕೆಲಸ ಮಾಡದಿರುವುದರಿಂದ ಕೂಲ್ ಮೋಡ್‌ಗೆ ಹೋಲಿಸಿದರೆ ಡ್ರೈ ಮೋಡ್‌ನಲ್ಲಿ ಕಡಿಮೆ ವಿದ್ಯುತ್ ಬಳಕೆಯಾಗುತ್ತದೆ.
  • ವಾಸನೆ ಮತ್ತು ಫಂಗಸ್ ತಡೆ: ತೇವಾಂಶದಿಂದ ಕೊಠಡಿಯಲ್ಲಿ ಉಂಟಾಗುವ ದುರ್ವಾಸನೆ, ಬಟ್ಟೆಗಳ ತೇವ ಹಾಗೂ ಗೋಡೆ/ಪೀಠೋಪಕರಣಗಳಲ್ಲಿ ಬೂಷ್ಟು (Mold/Mildew) ಹಿಡಿಯುವುದನ್ನು ತಡೆಯುತ್ತದೆ.
  • ಉತ್ತಮ ನಿದ್ರೆ: ರಾತ್ರಿ ವೇಳೆ ಕೊಠಡಿ ಅತಿಯಾಗಿ ತಣ್ಣಗಾಗದೆ, ಹಿತಕರವಾದ ತಾಪಮಾನ ಹಾಗೂ ಒಣ ಗಾಳಿ ಕಾಯ್ದುಕೊಳ್ಳುವುದರಿಂದ ಉತ್ತಮ ನಿದ್ರೆ ಪಡೆಯಬಹುದು.
  • ಎಸಿ ಜೀವಿತಾವಧಿ ಹೆಚ್ಚಳ: ಕಂಪ್ರೆಸರ್‌ ಮೇಲಿನ ಒತ್ತಡ ಕಡಿಮೆಯಾಗುವುದರಿಂದ ಎಸಿಯ ಕಾರ್ಯಕ್ಷಮತೆ ಹಾಗೂ ಬಾಳಿಕೆ ಹೆಚ್ಚುತ್ತದೆ.

ಇದನ್ನೂ ಓದಿ: ಹೊಸ ಏರ್ಲೈನ್ಸ್ ಕಟ್ಟಲಿರುವ ಅದಾನಿ; ಎರಡೇ ಕಂಪನಿಗಳ ಪ್ರಾಬಲ್ಯದ ವೈಮಾನಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಸಾಧ್ಯತೆ

ಸಾಮಾನ್ಯವಾಗಿ 24°C ನಿಂದ 26°C ತಾಪಮಾನದೊಂದಿಗೆ ಡ್ರೈ ಮೋಡ್ ಬಳಸುವುದು ಸೂಕ್ತ. ಆದರೆ, ಹೊರಗಿನ ತಾಪಮಾನ 35°C ಗಿಂತ ಹೆಚ್ಚಿರುವ ವಿಪರೀತ ಬಿಸಿಲಿನ ದಿನಗಳಲ್ಲಿ ‘ಕೂಲ್ ಮೋಡ್’ ಬಳಸುವುದೇ ಸೂಕ್ತ; ಏಕೆಂದರೆ ಡ್ರೈ ಮೋಡ್ ಕೇವಲ ತೇವಾಂಶ ಹೆಚ್ಚಿರುವ (ಮಳೆಗಾಲದ) ದಿನಗಳಲ್ಲಿ ಮಾತ್ರ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು? – Kannada News | Karavali movie premier show organized in Shimoga here is people opinion

ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಮಿತ್ರ, ರಮೇಶ್ ಇಂದಿರಾ ಇನ್ನೂ ಹಲವು ಪ್ರತಿಭಾವಂತ ನಟ-ನಟಿಯರು ನಟಿಸಿ, ಗುರುದತ್ ಗಾಣಿಗಾ ನಿರ್ದೇಶನ ಮಾಡಿರುವ ‘ಕರಾವಳಿ’ (Karavali) ಸಿನಿಮಾ ನಾಳೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಅದಕ್ಕೆ ಮುಂಚಿತವಾಗಿ ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್​​ಗಳನ್ನು ಚಿತ್ರತಂಡ ಆಯೋಜಿಸಿತ್ತು. ಈಗಾಗಲೇ ಮಂಗಳೂರು, ಮೈಸೂರು ಇನ್ನೂ ಕೆಲವು ನಗರಗಳಲ್ಲಿ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಇತ್ತೀಚೆಗೆ ಶಿವಮೊಗ್ಗದಲ್ಲಿ ‘ಕರಾವಳಿ’ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಸಿನಿಮಾ ನೋಡಿದ ಜನ ಸಿನಿಮಾದ ಬಗ್ಗೆ ಹೇಳಿದ್ದು ಹೀಗೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಬಂದೇ ಬಿಟ್ಟಿದೆ ಆಷಾಢ; ಈ ಮಾಸದಲ್ಲಿ ನವ ವಧುವನ್ನು ತವರು ಮನೆಗೆ ಕಳುಹಿಸುವುದೇಕೆ ಗೊತ್ತಾ? – Kannada News | Scientific reason for newlyweds stay apart during the month of Ashada?

ಈಗಾಗ್ಲೇ ಆಷಾಢ ಮಾಸ (Ashada) ಆರಂಭವಾಗಿದೆ. ಇದು ಶೂನ್ಯ ಮಾಸ, ಅಮಂಗಳಕರ ಮಾಸವೆಂದು ಆಷಾಢದಲ್ಲಿ ಮದುವೆ, ಗೃಹಪ್ರವೇಶ, ನಿಶ್ಚಿತಾರ್ಥ ಸೇರಿದಂತೆ ಯಾವುದೇ ರೀತಿಯ ಶುಭ ಕಾರ್ಯಗಳನ್ನು ನಡೆಸಲಾಗುವುದಿಲ್ಲ. ಆದರೆ ಈ ಮಾಸದಲ್ಲಿ ಹೆಣ್ಣು ಮಕ್ಕಳನ್ನು ಅತ್ತೆ ಮನೆಯಿಂದ ತವರು ಮನೆಗೆ ಕಳುಹಿಸಲಾಗುವ ವಿಶೇಷ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಹೊಸದಾದ ಮದುವೆಯಾದ ಜೋಡಿ ಈ ಮಾಸದಲ್ಲಿ ಜೊತೆಯಾಗಿರುವುದು ಅಮಂಗಳಕರವೆಂದು ನವ ವಧುವನ್ನು ತವರು ಮನೆಗೆ ಕಳುಹಿಸಲಾಗುತ್ತದೆ. ನಾವೆಲ್ಲರೂ ಇದು ಕೇವಲ ಸಂಪ್ರದಾಯ ಎಂದು ಭಾವಿಸುತ್ತೇವೆ. ಆದರೆ ಇದು ಕೇವಲ ಸಂಪ್ರದಾಯವಲ್ಲ, ಇದರ ಹಿಂದೆ ನಿರ್ಧಿಷ್ಟ ವೈಜ್ಞಾನಿಕ ಕಾರಣವೂ ಇದೆಯಂತೆ. ಈ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ.

ಆಷಾಢದಲ್ಲಿ ಹೆಣ್ಣು ಮಕ್ಕಳು ತವರು ಮನೆಗೆ ಹೋಗೋದ್ಯಾಕೆ?

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹೆಚ್ಚಿನ ಕಡೆಗಳಲ್ಲಿ ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದ ಜೋಡಿಯನ್ನು ದೂರವಿರಿಸುತ್ತಾರೆ.  ನವವಧುವನ್ನು ತವರುಮನೆಗೆ ಕಳುಹಿಸುತ್ತಾರೆ. ಪ್ರತೀ ಆಷಾಢದಲ್ಲೂ ಈ ಸಂಪ್ರದಾಯ ನಡೆಯುತ್ತದೆ.  ಈ ಸಂಪ್ರದಾಯದ ಹಿಂದೆ ಹಲವು ಕಾರಣಗಳಿವೆ, ಅವುಗಳೆಂದರೆ;

ವೈದ್ಯಕೀಯ ಕಾರಣ: ಆಷಾಢ ಮಾಸವು ಸಾಮಾನ್ಯವಾಗಿ ಜೂನ್‌-ಜುಲೈ ತಿಂಗಳಿನಲ್ಲಿ ಬರುತ್ತದೆ. ಇದು ಮಳೆಗಾಲದ ಸಮಯವಾದ್ದರಿಂದ ಆಷಾಢ ಮಾಸದಲ್ಲಿ ಹವಾಮಾನದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ವಾತಾವರಣ ತಣ್ಣಗಾಗುತ್ತಿದ್ದಂತೆ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಬೆಳೆದು ಸೋಂಕುಗಳು ಹೆಚ್ಚಾಗುತ್ತವೆ. ಈ ಸಮಯದಲ್ಲಿ ಗರ್ಭ ಧರಿಸಿದರೆ, ಹುಟ್ಟಲಿರುವ ಮಗುವಿನ ಮೇಲೆಯೂ ಇದು ಪರಿಣಾಮ ಬೀರುತ್ತದೆ. ಹೌದು, ಮೊದಲ ಮೂರು ತಿಂಗಳು ಭ್ರೂಣಕ್ಕೆ ಬಹಳ ನಿರ್ಣಾಯಕ ಸಮಯ. ಈ ಸಮಯದಲ್ಲಿ ಅಂಗಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಈ ಸಮಯದಲ್ಲಿ ತಾಯಿ ಸೋಂಕಿಗೆ ತುತ್ತಾದರೆ, ಗರ್ಭದಲ್ಲಿರುವ ಮಗುವೂ ಸಹ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ಒಂದು ಕಾರಣಕ್ಕೆ ಆಷಾಢದಲ್ಲಿ ಗಂಡ ಹೆಂಡತಿಯನ್ನು ದೂರವಿಡಲಾಗುತ್ತಿತ್ತು. ಈ ಸಂಪ್ರಾಯದ ಇಂದಿಗೂ ಚಾಲ್ತಿಯಲ್ಲಿದೆ.

ಇದಲ್ಲದೆ, ಆಷಾಢ ಸಮಯದಲ್ಲಿ ಗರ್ಭ ಧರಿಸಿದರೆ, ಸುಮಾರು ಒಂಭತ್ತು ತಿಂಗಳ ನಂತರ ಮಾರ್ಚ್‌ ಕೊನೆ, ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಹೆರಿಗೆಯಾಗುವ ಸಾಧ್ಯತೆ ಇರುತ್ತದೆ. ಆ ತಿಂಗಳುಗಳು ಬೇಸಿಗೆಯ ಸಮಯವಾದ್ದರಿಂದ ತೀವ್ರ ಶಾಖವವು ತಾಯಿ ಮತ್ತು ಮಗುವಿಗೆ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಈಗ ಸೂಕ್ತ ವೈದ್ಯಕೀಯ ಸೌಲಭ್ಯಗಳಿದ್ದರೂ ಹಿಂದೆಲ್ಲಾ ಇಂತಹ ಯಾವುದೇ ಸೌಲಭ್ಯಗಳಿರಲಿಲ್ಲ. ಹಾಗಾಗಿ ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಆಷಾಢದಲ್ಲಿ ಗಂಡ ಹೆಂಡತಿ ಜೊತೆ ಸೇರಬಾರದು ಎಂಬ ನಿಯಮವನ್ನು ಹಾಕಲಾಗುತ್ತಿತ್ತು ಮತ್ತು ವಿವಾಹಿತ ಹೆಣ್ಣು ಮಕ್ಕಳನ್ನು ತವರು ಮನೆಗೆ ಕಳುಹಿಸಲಾಗುತ್ತಿತ್ತು.

ದಾಂಪತ್ಯವನ್ನು ಗಟ್ಟಿಗೊಳಿಸುವುದು: ಮದುವೆಯಾದ ಹೊಸದರಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಅಪಾರ ಪ್ರೀತಿ, ಆಕರ್ಷಣೆ ಎಲ್ಲವೂ ಇರುತ್ತದೆ. ಇಂತಹ ಅವಧಿಯಲ್ಲಿ ಗಂಡ ಹೆಂಡತಿಯನ್ನು ದೂರ ಇಟ್ಟಾಗ ಅವರು ಸಂಗಾತಿ ದೂರವಾಗಿರುವುದರಿಂದ ಉಂಟಾಗುವ ನೋವು ಏನೆಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ, ಇದು ಅವರ ಪ್ರೀತಿಯನ್ನು ಹೆಚ್ಚಿಸುತ್ತದೆ, ಭಾವನಾತ್ಮಕ ಬಂಧವನ್ನು ಬಲಪಡಿಸುತ್ತದೆ. ಈ ಕಾರಣಕ್ಕಾಗಿಯೂ ನವ ವಧುವನ್ನು ಆಷಾಢ ಮಾಸದಲ್ಲಿ ತಾಯಿ ಮನೆಗೆ ಕಳುಹಿಸಲಾಗುತ್ತದೆ.

ಆರೋಗ್ಯ ಕಾಳಜಿ: ಆಷಾಢ ತಿಂಗಳಲ್ಲಿ ಹೆಚ್ಚಿನ ಮಳೆ ಇರುತ್ತದೆ. ಈ ಸಮಯದಲ್ಲಿ ಜೀರ್ಣಕಾರಿ ಶಕ್ತಿ ದುರ್ಬಲಗೊಳ್ಳುತ್ತದೆ. ವೈರಲ್‌ ಮತ್ತು ಬ್ಯಾಕ್ಟೀರಿಯಾ ಕಾಯಿಲೆಗಳು ಬಾಧಿಸುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ದೇಹದ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ಹಾಗಾಗಿ ದೇಹಕ್ಕೆ ವಿಶ್ರಾಂತಿ ನೀಡುವುದು ಮತ್ತು ಆರೋಗ್ಯ ಕಾಳಜಿಯ ದೃಷ್ಟಿಯಿಂದ ಪೂರ್ವಜರು ನವ ವಧುವನ್ನು ಆಷಾಢ ಮಾಸದಲ್ಲಿ ತವರು ಮನೆಗೆ ಕಳುಹಿಸುವ ಸಂಪ್ರಾದಾಯವನ್ನು ಜಾರಿಗೆ ತಂದರು.

ಇದನ್ನೂ ಓದಿ: ಟಿಶ್ಯೂ ಪೇಪರ್‌ಗಳು ಬಿಳಿ ಬಣ್ಣದಲ್ಲಿ ಮಾತ್ರ ಲಭ್ಯವಿರಲು ಇದುವೇ ಕಾರಣವಂತೆ

ಒತ್ತಡ ನಿವಾರಣೆ: ನವ ವಧು ಹೊಸ ಮನೆಗೆ ಬಂದ ತಕ್ಷಣ ಆಕೆಯ ಜೀವನಶೈಲಿ ಬದಲಾಗುತ್ತದೆ, ಜವಾಬ್ದಾರಿ ಹೆಚ್ಚಾಗುತ್ತದೆ. ಇದು ನವ ವಧುವಿಗೆ ಒತ್ತಡವನ್ನು ಉಂಟು ಮಾಡುತ್ತದೆ ಮತ್ತು ಆಕೆ ಭಾವನಾತ್ಮಕ ಬೆಂಬಲಕ್ಕಾಗಿ ಹಂಬಲಿಸುತ್ತಾಳೆ. ಈ ಒತ್ತಡದಿಂದ ಮುಕ್ತ ಪಡೆದು ಹೆತ್ತವರೊಂದಿಗೆ ಖುಷಿ ಖುಷಿಯಾಗಿ ಸಮಯ ಕಳೆಯಲು ನವ ವಧುವನ್ನು ಆಷಾಢ ಮಾಸದಲ್ಲಿ ತವರು ಮನೆಗೆ ಕಳುಹಿಸಲಾಗುತ್ತದೆ.

ಕೃಷಿ ಕಾರ್ಯದ ಕಾರಣ: ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಹಿಂದೆಲ್ಲಾ ಪ್ರತಿಯೊಬ್ಬರೂ ಕೃಷಿಯನ್ನೇ ಅವಲಂಬಿಸಿದ್ದರು. ಮಳೆಗಾಲದ ಆರಂಭವಾದ ಆಷಾಢದಲ್ಲಿ ಬೀಜಗಳನ್ನು ಬಿತ್ತಲಾಗುತ್ತಿತ್ತು. ಈ ಸಮಯದಲ್ಲಿ ಹೆಚ್ಚಿನ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದವು. ಹೀಗಿರುವಾಗ ಪ್ರೀತಿಯಲ್ಲಿ ಮುಳುಗಿ ಕೃಷಿ ಕೆಲಸವನ್ನು ನಿರ್ಲಕ್ಷಿಸಬಾರದು ಎಂಬ ಕಾರಣಕ್ಕೆ ಹಿರಿಯರು ಹೊಸದಾಗಿ ಮದುವೆಯಾದ ಜೋಡಿಯನ್ನು ಸ್ವಲ್ಪ ದಿನಗಳ ಕಾಲ ಅಂದರೆ ಆಷಾಢದಲ್ಲಿ ದೂರವಿಡುವ ಸಂಪ್ರದಾಯನ್ನು ಮಾಡಿದರು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: 21 ತಿಂಗಳ ನಂತರ ಕಮ್‌ಬ್ಯಾಕ್; ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮಯಾಂಕ್ – Kannada News | India vs Zimbabwe T20: Mayank Yadav’s Historic Double First Ball Wicket Feat

ಇದರೊಂದಿಗೆ, ಪಂದ್ಯದ ಮೊದಲ ಎಸೆತದಲ್ಲೇ ಎರಡು ಬಾರಿ ವಿಕೆಟ್ ಪಡೆದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರಿಗಿಂತ ಮೊದಲು ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಈ ಸಾಧನೆ ಮಾಡಿದ್ದರು(PC-BCCI).

Source link

ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ ವಶಕ್ಕೆ ಒಳಗಾಗಿದ್ದ ನಟಿ ಆಯೆಷಾ ಖಾನ್ ಮೊದಲ ಪ್ರತಿಕ್ರಿಯೆ – Kannada News | Reaction of Dhurandhar Actress Ayesha Khan after Detained by Mumbai Police Neet Student Protest

ಎನ್‌ಇಇಟಿ (NEET) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಕ್ಕೆ ಮುಂಬೈ ಪೊಲೀಸರು ತಮ್ಮನ್ನು ವಶಕ್ಕೆ ಪಡೆದಿದ್ದರು ಎಂದು ‘ಧುರಂಧರ್’ ಚಿತ್ರದ ನಟಿ ಆಯೆಷಾ ಖಾನ್ (Ayesha Khan) ತಿಳಿಸಿದ್ದಾರೆ. ಇದರ ಬೆನ್ನಲ್ಲೇ, ‘ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ನಿಮಗಿನ್ನು ಬಾಲಿವುಡ್‌ನಲ್ಲಿ ಕೆಲಸವೇ ಸಿಗುವುದಿಲ್ಲ’ ಎಂದು ಹೇಳಿದ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರಿಗೆ ನಟಿ ಖಡಕ್ ತಿರುಗೇಟು ನೀಡಿದ್ದಾರೆ.

ಆಯೆಷಾ ಖಾನ್ ಅವರು ಮುಂಬೈನ ದಾದರ್‌ನಲ್ಲಿ ನಡೆದ ಪ್ರತಿಭಟನಾ ಸ್ಥಳದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಾವು ತಮ್ಮ ಸಹೋದರ ಮತ್ತು ಸ್ನೇಹಿತರೊಂದಿಗೆ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು ತೆರಳಿದ್ದಾಗಿ ಅವರು ಹೇಳಿದ್ದಾರೆ. ಅಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ ಎಂದು ಪೊಲೀಸರು ತಮ್ಮ ತಂಡಕ್ಕೆ ತಿಳಿಸಿದರು. ಆ ಬಳಿಕ ತಮ್ಮ ಸಹೋದರ ಮತ್ತು ಸ್ನೇಹಿತರನ್ನು ಪೊಲೀಸರು ಮೊದಲು ವಶಕ್ಕೆ ಪಡೆದರು. ಅವರನ್ನು ಹುಡುಕುತ್ತಾ ಸಮೀಪದಲ್ಲೇ ನಿಂತಿದ್ದ ತಮ್ಮ ಬಳಿ ಮಹಿಳಾ ಪೊಲೀಸರು ಸೇರಿದಂತೆ ಸುಮಾರು 15 ಪೊಲೀಸ್ ಸಿಬ್ಬಂದಿ ಬಂದು, ವ್ಯಾನ್ ಹತ್ತುವಂತೆ ಹೇಳಿದರು ಎಂದು ಆಯೆಷಾ ಆರೋಪಿಸಿದ್ದಾರೆ.

ತಮ್ಮನ್ನು ಎಲ್ಲಿಗೆ ಕರೆದೊಯ್ಯಲಾಗುತ್ತಿದೆ ಎಂದು ಆಯೆಷಾ ಅವರು ಅಧಿಕಾರಿಗಳನ್ನು ಪ್ರಶ್ನಿಸುವುದು ವೀಡಿಯೋದಲ್ಲಿ ಕಂಡುಬಂದಿದೆ. ಮತ್ತೊಂದು ವೀಡಿಯೋದಲ್ಲಿ, ನಾಲ್ವರು ಮಹಿಳಾ ಪೊಲೀಸ್ ಸಿಬ್ಬಂದಿ ಅವರನ್ನು ವ್ಯಾನ್‌ ಒಳಗೆ ತಳ್ಳುತ್ತಿರುವ ದೃಶ್ಯ ಸೆರೆಯಾಗಿದೆ. ತಮ್ಮನ್ನು ಮತ್ತು ಇತರರನ್ನು ವರ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು ಎಂದು ನಂತರ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಸಮಂಜಸ ಬಂಧನವನ್ನು ಅವರು ಪ್ರಶ್ನಿಸಿದರೂ, ಠಾಣೆಯಲ್ಲಿದ್ದ ಅಧಿಕಾರಿಗಳು ತಮ್ಮೊಂದಿಗೆ ಮಾತಾಡಿದ ರೀತಿಯು ಆತ್ಮೀಯವಾಗಿತ್ತು ಎಂದು ಬಣ್ಣಿಸಿದ್ದಾರೆ.

ನಟಿ ಆಯೆಷಾ ಖಾನ್ ಹೇಳಿದ್ದೇನು?

‘ನನ್ನನ್ನು ಒಳಗೆ ಎಳೆಯಲು ನಾಲ್ಕೈದು ಮಹಿಳಾ ಪೊಲೀಸರು ಬೇಕಾಯಿತು. ಆದರೆ ನಾನು ಅದೇ ಪ್ರಶ್ನೆಯನ್ನು ಮತ್ತೆ ಕೇಳುತ್ತೇನೆ: ಯಾಕೆ? ನಾನು ಯಾವುದೇ ಶಬ್ದ ಮಾಡಿದ್ದೇನಾ? ಕನಿಷ್ಠ ಪಕ್ಷ ಯಾರೊಂದಿಗಾದರೂ ಮಾತುಕತೆ ಅಥವಾ ಚರ್ಚೆಯನ್ನಾದರೂ ಶುರು ಮಾಡಿದ್ದೇನಾ? ನನ್ನನ್ನು ಯಾವ ಕಾರಣಕ್ಕಾಗಿ ವಶಕ್ಕೆ ಪಡೆದಿದ್ದೀರಿ? ವಾಹನ ಸಂಚಾರ ತಡೆದಿದ್ದಕ್ಕೇ’ ಎಂದು ಅವರು ಪ್ರಶ್ನೆ ಕೇಳಿದ್ದಾರೆ.

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆಗೆ ಬಂದ ‘ಧುರಂಧರ್’ ನಟಿ ಆಯಿಷಾ ಖಾನ್; ವಶಕ್ಕೆ ಪಡೆದ ಮುಂಬೈ ಪೋಲಿಸರು

‘ಧೈರ್ಯ ಕಳೆದುಕೊಳ್ಳುವುದಕ್ಕಿಂತ ಕೆರಿಯರ್ ಹೋದರೂ ಸರಿ’:

ಪ್ರತಿಭಟನೆಯ ಕುರಿತು ಪೋಸ್ಟ್ ಮಾಡಿದ ನಂತರ, ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಆಯೆಷಾ ಖಾನ್ ಅವರಿಗೆ ಸಂದೇಶ ಕಳುಹಿಸಿ ‘ನಿಮಗೆ ಇನ್ಮುಂದೆ ಬಾಲಿವುಡ್‌ನಲ್ಲಿ ಕೆಲಸ ಸಿಗುವುದಿಲ್ಲ’ ಎಂದು ಹೇಳಿದ್ದರು. ಇದಕ್ಕೆ ಬಹಿರಂಗವಾಗಿ ಪ್ರತ್ಯುತ್ತರ ನೀಡಿದ ಆಯಿಷಾ ಖಾನ್, ‘ಬೆನ್ನೆಲುಬನ್ನು ಕಳೆದುಕೊಳ್ಳುವುದಕ್ಕಿಂತ ನನ್ನ ವೃತ್ತಿಜೀವನವನ್ನು ಕಳೆದುಕೊಳ್ಳಲು ನಾನು ಇಷ್ಟಪಡುತ್ತೇನೆ. ಧನ್ಯವಾದಗಳು, ಬೇರೆಯವರನ್ನು ಹೆದರಿಸಿ… ಬೈ’ ಎಂದು ಸಡ್ಡು ಹೊಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರತಿಭಟನಾಕಾರರು ಮಾತುಕತೆಗೆ ನನ್ನ ಮನೆ, ಕಚೇರಿಗೆ ಬರಬಹುದು; ಕೇಂದ್ರ ಸಚಿವ ಜೆ.ಪಿ. ನಡ್ಡಾ – Kannada News | Come To Our Residence Or Office Union Minister JP Nadda invites Student Protesters to Talk

ನವದೆಹಲಿ, ಜುಲೈ 23: ಕೇಂದ್ರ ಸರ್ಕಾರವು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಸಿದ್ಧವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ (JP Nadda) ತಿಳಿಸಿದ್ದು, ತಮ್ಮ ನಿವಾಸಕ್ಕೆ ಅಥವಾ ಅಧಿಕೃತ ಕಚೇರಿಗೆ ಬಂದು ಭೇಟಿಯಾಗುವಂತೆ ಆಹ್ವಾನಿಸಿದ್ದಾರೆ. “ಚರ್ಚೆಗೆ ನಾವು ಸಿದ್ಧರಿದ್ದೇವೆ. ನಮ್ಮ ನಿವಾಸಕ್ಕಾಗಲಿ ಅಥವಾ ನಮ್ಮ ಅಧಿಕೃತ ಕಚೇರಿಗಾಗಲಿ ಬನ್ನಿ” ಎಂದು ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರವು ನಿನ್ನೆ ಮಧ್ಯಾಹ್ನದಿಂದ ಸಿಜೆಪಿ (CJP) ಪ್ರತಿನಿಧಿಗಳಿಗೆ ಈಗಾಗಲೇ 4 ಅಧಿಕೃತ ಆಹ್ವಾನಗಳನ್ನು ಕಳುಹಿಸಿಕೊಟ್ಟಿದ್ದು, ಯಾವುದೇ ಸಮಯದಲ್ಲಿಯಾದರೂ ಮಾತುಕತೆಗೆ ಮುಕ್ತವಾಗಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ ಕೇವಲ ಒಂದು ಗಂಟೆಯ ನಂತರ ಜೆಪಿ ನಡ್ಡಾ ಅವರಿಂದ ಈ ಹೇಳಿಕೆ ಬಂದಿದೆ.

ವಿದ್ಯಾರ್ಥಿಗಳ ಬೇಡಿಕೆಗಳನ್ನು ಆಲಿಸಲು ಮತ್ತು ಪ್ರಸ್ತುತ ಎದುರಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಸರ್ಕಾರ ಮುಕ್ತ ಮನಸ್ಸಿನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವ ಜೆಪಿ ನಡ್ಡಾ ಸ್ಪಷ್ಟಪಡಿಸಿದ್ದಾರೆ. ಅರ್ಥಪೂರ್ಣ ಹಾಗೂ ರಚನಾತ್ಮಕ ಚರ್ಚೆಯ ಮೂಲಕವೇ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅವರು ವಿದ್ಯಾರ್ಥಿ ಸಂಘಟನೆಗಳಲ್ಲಿ ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ‘ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಂಸತ್​ನಲ್ಲಿ ವಿವರವಾದ ಚರ್ಚೆಗೆ ಸರ್ಕಾರ ಸಿದ್ಧ’; ಜೆ.ಪಿ ನಡ್ಡಾ ಭರವಸೆ

ವಿಷಯವನ್ನು ರಾಜಕೀಯಗೊಳಿಸದಂತೆ ಮನವಿ:

ಪೇಪರ್ ಸೋರಿಕೆ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬೇಡಿ ಎಂದು ವಿಪಕ್ಷಗಳಿಗೆ ನಡ್ಡಾ ಮನವಿ ಮಾಡಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವು ಈ ಪರೀಕ್ಷೆಗಳ ಮೇಲೆ ಅವಲಂಬಿತವಾಗಿದ್ದು, ಈ ವಿಷಯದಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡುವುದಕ್ಕಿಂತ ಸಮಸ್ಯೆಯ ಮೂಲ ಪರಿಹಾರಕ್ಕೆ ಆದ್ಯತೆ ನೀಡಬೇಕಾಗಿದೆ. ಸಂಸತ್ತಿನಲ್ಲಿ ಈ ವಿಷಯದ ಕುರಿತು ವಿಸ್ತೃತ ಚರ್ಚೆ ನಡೆಸಲು ಸರ್ಕಾರ ತಯಾರಾಗಿದ್ದು, ವಿಪಕ್ಷಗಳು ಎಷ್ಟು ಸಮಯ ಬಯಸಿದರೂ ಚರ್ಚೆಗೆ ನೀಡಲು ಸರ್ಕಾರ ಸಿದ್ಧವಿದೆ ಎಂದಿದ್ದಾರೆ.

ಕಠಿಣ ಕ್ರಮದ ಭರವಸೆ:

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾದ ಯಾವುದೇ ಅಪರಾಧಿಯನ್ನು ಸರ್ಕಾರ ಬಿಡುವುದಿಲ್ಲ ಎಂದು ಜೆಪಿ ನಡ್ಡಾ ಭರವಸೆ ನೀಡಿದ್ದಾರೆ. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಯಾವುದೇ ಸ್ಥಳದಲ್ಲಿ, ಯಾವ ಸಮಯದಲ್ಲಾದರೂ ಚರ್ಚೆಗೆ ಸಿದ್ಧ’; 4ನೇ ಬಾರಿ ಸಿಜೆಪಿಗೆ ಕೇಂದ್ರ ಸರ್ಕಾರ ಆಹ್ವಾನ

ಜುಲೈ 20ರಂದು ಜೆ.ಪಿ. ನಡ್ಡಾ ತಮ್ಮ ನಿವಾಸದಲ್ಲಿ ಸಿಜೆಪಿ ಪ್ರತಿನಿಧಿಗಳಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರೊಂದಿಗೆ ಮೊದಲ ಸುತ್ತಿನ ಮಾತುಕತೆ ನಡೆಸಿದ ಕೆಲವೇ ದಿನಗಳ ನಂತರ ಈ ಹೊಸ ಆಹ್ವಾನ ನೀಡಲಾಗಿದೆ. ಆ ಸಭೆಯ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ಪೇಪರ್ ಲೀಕ್‌ನಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಬಿಡುಗಡೆ ಸೇರಿದಂತೆ ತಮ್ಮ ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿದ್ದರು. ಜೆಪಿ ನಡ್ಡಾ ಅವರು ಆ ಬೇಡಿಕೆಗಳನ್ನು ಹಿರಿಯ ನಾಯಕರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದರೂ, ನಂತರ ಯಾವುದೇ ಬೆಳವಣಿಗೆಗಳು ನಡೆದಿರಲಿಲ್ಲ. ಹೀಗಾಗಿ ಪ್ರತಿಭಟನೆ ಮುಂದುವರಿದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:00 pm, Thu, 23 July 26

Source link

Exit mobile version