Headlines

ಸೋಮನಾಥ ದೇಗುಲ: ಸರ್ದಾರ್ ಪಟೇಲರ ಕನಸು, ಭಾರತದ ಹೆಮ್ಮೆ, ಅಖಂಡತೆಯ ಸಂಕೇತ – ಪಿಎಂ ಮೋದಿ ಲೇಖನ – Kannada News | Somnath Temple, Sardar Patel’s Dream, India’s Pride, Symbol of Integrity, PM Modi blog

ಸೋಮನಾಥನ ಸನ್ನಿಧಿಯಲ್ಲಿ ನರೇಂದ್ರ ಮೋದಿImage Credit source: Narendra Modi’s X account ಈ ವರ್ಷದ ಆರಂಭದಲ್ಲಿ ಸೋಮನಾಥ್ ಸ್ವಾಭಿಮಾನಪರ್ವ (Somnath Swabiman Parv) ಕಾರ್ಯಕ್ರಮಕ್ಕಾಗಿ ಸೋಮನಾಥ್​ಗೆ ಹೋಗಿದ್ದೆ. ಸೋಮನಾಥ ಮಂದಿರದ ಮೇಲೆ ಆದ ದಾಳಿಗೆ ಒಂದು ಸಾವಿರ ವರ್ಷ ಗತಿಸಿದ ಸಂದರ್ಭವದು. ಈಗ ಮತ್ತೊಮ್ಮೆ ಮೇ 11ಕ್ಕೆ ಅಲ್ಲಿಗೆ ಹೋಗುತ್ತಿದ್ದೇನೆ. 75 ವರ್ಷದ ಹಿಂದೆ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಈ ಮಂದಿರದ ಪುನರ್ನಿರ್ಮಾಣ ಮಾಡಿದ ಪುಣ್ಯ ಸಂದರ್ಭವದು. ಸೋಮನಾಥದ ಧ್ವಂಸ ಮತ್ತು…

Read More

Women’s T20 World Cup: ಭಾರತ- ಪಾಕ್ ನಡುವೆ ಫೈಟ್; ಪಂದ್ಯ ಎಷ್ಟು ಗಂಟೆಗೆ ಆರಂಭ? – Kannada News | India vs Pakistan Women’s T20 World Cup 2026: Match Preview, Date, Time and Live Stream

10ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್‌ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌, ಶ್ರೀಲಂಕಾ ತಂಡವನ್ನು 87 ರನ್​​ಗಳಿಂದ ಮಣಿಸಿ ಗೆಲುವಿನ ಶುಭಾರಂಭ ಮಾಡಿದೆ. ಇದೀಗ ಈ ಪಂದ್ಯಾವಳಿಯ ಹೈವೋಲ್ಟೇಜ್ ಕದನ ಭಾರತ ಹಾಗೂ ಪಾಕಿಸ್ತಾನದ ನಡುವೆ ಭಾನುವಾರದಂದು ಅಂದರೆ ಜೂನ್ 14 ರಂದು ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಸಕಲ ತಯಾರಿ ಮಾಡಿಕೊಂಡಿವೆ. ಈ ಲೀಗ್​ನಲ್ಲಿ ಉಭಯ ತಂಡಗಳಿಗೆ ಇದು ಮೊದಲ ಪಂದ್ಯವಾಗಿದೆ. ಹೀಗಾಗಿ ಎರಡೂ ತಂಡಗಳು ಗೆಲುವಿನೊಂದಿಗೆ ಪಂದ್ಯಾವಳಿಯನ್ನು…

Read More

ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ – Kannada News | Darshan and Pavithra Gowda take part in International Day of Yoga in Parappana Agrahara Jail

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಂದು (ಜೂನ್ 21) ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗಿದೆ. ಜೈಲಿನಲ್ಲಿ ಎಲ್ಲಾ ಕೈದಿಗಳಿಂದ ಯೋಗಭ್ಯಾಸ ಮಾಡಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಮುಂತಾದವರು ಕೂಡ ಯೋಗ ದಿನಾಚರಣೆಯಲ್ಲಿ ಭಾಗಿ ಆಗಿದ್ದಾರೆ. ತಮಗೆ ಬೆನ್ನು ನೋವಿನ ಸಮಸ್ಯೆ ಇರುವ ಕಾರಣದಿಂದ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲ್ಲ ಎಂದು ಈ ಮೊದಲು ದರ್ಶನ್ (Darshan) ಹೇಳಿದ್ದರು. ಆದರೆ ಅವರನ್ನು ಕಚೇರಿಗೆ ಕರೆಸಿಕೊಂಡು ಯೋಗ ಮಾಡಲು ಅಲೋಕ್ ಕುಮಾರ್ ಸಲಹೆ ನೀಡಿದರು. ‘ಬೆನ್ನು…

Read More

ಬೆಂಗಳೂರಿನಲ್ಲಿ ಒಂದೇ ಮಳೆಗೆ ಸಂಕಷ್ಟಗಳ ಪ್ರವಾಹ: ಅಧ್ವಾನಗಳ ಅಸಲಿ ರಹಸ್ಯ ಜಿಬಿಎ ವರದಿಯಲ್ಲಿ ಬಯಲು – Kannada News | Bengaluru Rain Fury: GBA Report Reveals Shocking Details of 10 Deaths and Massive Infrastructure Damage

ಬೆಂಗಳೂರಿನಲ್ಲಿ ಏಪ್ರಿಲ್ 29ರ ಸಂಜೆ ಸುರಿದ ಮಳೆImage Credit source: tv9 ಬೆಂಗಳೂರು, ಮೇ 1: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಏಪ್ರಿಲ್ 29 ರಂದು ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಮೃತ್ಯು ರೂಪಿಯಾಗಿ ಪರಿಣಮಿಸಿದೆ. ಒಂದೇ ಒಂದು ಮಳೆಗೆ ರಾಜಧಾನಿ ತತ್ತರಿಸಿ ಹೋಗಿದ್ದು, ಈ ಭೀಕರ ಮಳೆ ಒಟ್ಟು 10 ಜನರ ಪ್ರಾಣವನ್ನು ಬಲಿ ಪಡೆದಿದೆ. ನಗರದಲ್ಲಿ ಸಂಭವಿಸಿದ ಅಧ್ವಾನಗಳ ಕುರಿತು ಇದೀಗ ಜಿಬಿಎ (GBA) ವರದಿ ಸಲ್ಲಿಸಿದ್ದು, ಮಳೆ ಸೃಷ್ಟಿಸಿದ ಅವಾಂತರಗಳ ಸತ್ಯಾಂಶಗಳು…

Read More

ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

ದೇವನಹಳ್ಳಿ, ಮಾರ್ಚ್​ 10: ಇತರರ ಮೇಲಿನ ದ್ವೇಷಕ್ಕೆ ಮನೆಯಲ್ಲಿ ಅಷ್ಟೇ ಅಲ್ಲದೆ ರಸ್ತೆಗಳಲ್ಲಿ, ಹೋಟೆಲ್​ಗಳಲ್ಲಿ ಸಹ ವಾಮಾಚಾರ ಮಾಡಿದ ಸಾಕ್ಷಿಗಳು ಸಿಗುತ್ತಿದ್ದವು. ಆದರೆ ಲಕ್ಷಾಂತರ ಜನರು ಓಡಾಡುವ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ (Airport) ಇಂತಹ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ. ವಿಮಾನ ನಿಲ್ದಾಣದ ಅಂಚೆ ಕಚೇರಿಗೆ ವಾಮಾಚಾರದ ಪಾರ್ಸೆಲ್ ಒಂದು ಬಂದಿದ್ದು, ಅದರಲ್ಲಿದ್ದ ವಸ್ತುಗಳು ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿವೆ. ಬಾಕ್ಸ್​ನಲ್ಲಿ ಸಿಕ್ಕಿದ್ದೇನೇನು ಗೊತ್ತಾ? ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದ್ದು,…

Read More

ಟರ್ಕಿ ದೇಶದಿಂದ 9,300 ಕೋಟಿ ರೂ, ಅತ್ಯಂತ ಸುಂದರ ಮಹಿಳೆ ಬೇಕು: ಉಗಾಂಡ ಸೇನಾ ಮುಖ್ಯಸ್ಥನ ವಿಚಿತ್ರ ಡಿಮ್ಯಾಂಡ್

ನವದೆಹಲಿ, ಏಪ್ರಿಲ್ 12: ಆಫ್ರಿಕಾದ ಉಗಾಂಡ ಮಿಲಿಟರಿ ಮುಖ್ಯಸ್ಥ ಮುಹೂಝಿ ಕೈನೇರುಗಬ (Muhoozi Kainerugaba) ಅವರು ಟರ್ಕಿ ದೇಶದಿಂದ 1 ಬಿಲಿಯನ್ ಡಾಲರ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಂದರೆ, 9,300 ಕೋಟಿ ರೂ ಅನ್ನು ಉಗಾಂಡಕ್ಕೆ ಟರ್ಕಿ ಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ, ಟರ್ಕಿ ದೇಶದ ಅತ್ಯಂತ ಸುಂದರ ಮಹಿಳೆಯನ್ನು ತನಗೆ ಮದುವೆಯಾಗಲು ಒಪ್ಪಿಸಬೇಕು ಎಂದೂ ಕೇಳಿದ್ದಾರೆ. ಟರ್ಕಿಯಿಂದ ಮುಹೂಝಿ ಹಣ ಕೇಳುತ್ತಿರುವುದು ಯಾಕೆ? ಟರ್ಕಿ ದೇಶವು ಸೊಮಾಲಿಯಾದಲ್ಲಿ ಸಮುದ್ರ ಬಂದರುಗಳು, ವಿಮಾನ ನಿಲ್ದಾಣಗಳು,…

Read More

ವೇತನ ಹಿಂಬಾಕಿಗೆ ಡಿಮ್ಯಾಂಡ್​​: ಜ.29ರಂದು ಸಾರಿಗೆ ನೌಕರರ ಪ್ರತಿಭಟನೆ – Kannada News | Karnataka KSRTC Workers to Protest on Jan 29 Over 38 Months Salary Arrears

ಬೆಂಗಳೂರು, ಜನವರಿ 18: ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮತ್ತೆ ಸಿಡಿದೆದ್ದಿದ್ದು, ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಬೆಂಗಳೂರು ಚಲೋಗೆ ಕರೆನೀಡಿದ್ದಾರೆ. ಜನವರಿ 29ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಫ್ರೀಡಂಪಾರ್ಕ್​​ನಲ್ಲಿ ಪ್ರತಿಭಟನೆ ನಡೆಯಲಿದ್ದು, ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಜಂಟಿಕ್ರಿಯಾ ಸಮಿತಿ ಪತ್ರ ಬರೆದಿದೆ. 38 ತಿಂಗಳ ವೇತನ ಹಿಂಬಾಕಿ ನೀಡುವಂತೆ ಹಾಗೂ 01.01.2024ರಿಂದ 4 ವರ್ಷಗಳ ವೇತನಕ್ಕೆ ಬೇಡಿಕೆ ಇಡಲಾಗಿದ್ದು, ಪ್ರತಿಭಟನೆಯಲ್ಲಿ 4 ಸಾರಿಗೆ ನಿಗಮಗಳ ಸಿಬ್ಬಂದಿ ಭಾಗಿಯಾಗಲಿದ್ದಾರೆ ಎಂದು ತಿಳಿಸಲಾಗಿದೆ.ನೌಕರರ ಈ…

Read More

ಕಮಲ್-ರಜನಿ ಕಾಂಬಿನೇಷನ್ ಸಿನಿಮಾ: ಯುವ ನಿರ್ದೇಶಕನಿಗೆ ಅದೃಷ್ಟ – Kannada News | Cibi Chakravarthy to direct Rajinikanth’s 173rd movie produced by Kamal Haasan

ಕಮಲ್ ಹಾಸನ್ (Kamal Haasan) ಮತ್ತು ರಜನೀಕಾಂತ್ ತಮಿಳುನಾಡಿನ ಮಾತ್ರವಲ್ಲ ಭಾರತೀಯ ಚಿತ್ರರಂಗದ ಇಬ್ಬರು ಮೇರು ಸೂಪರ್ ಸ್ಟಾರ್​​ಗಳು. ಇಬ್ಬರ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾಗಳು ಆಗ ಸೂಪರ್ ಹಿಟ್ ಆಗಿದ್ದವು. ಆದರೆ ಇಬ್ಬರಿಗೂ ಸ್ಟಾರ್​​ಡಮ್ ಬಂದ ಬಳಿಕ ಒಟ್ಟಿಗೆ ನಟಿಸಿದ್ದೇ ಇಲ್ಲ. ಪರಸ್ಪರ ಒಳ್ಳೆಯ ಗೆಳೆಯರೂ ಆಗಿರುವ ಕಮಲ್ ಹಾಸನ್ ಮತ್ತು ರಜನೀಕಾಂತ್ ಅವರನ್ನು ಒಟ್ಟಿಗೆ ತರಲು ಹಲವು ನಿರ್ಮಾಪಕರು, ನಿರ್ದೇಶಕರು ಪ್ರಯತ್ನಿಸಿದರಾದರೂ ಸಾಧ್ಯ ಆಗಿರಲಿಲ್ಲ. ಆದರೆ ಇದೀಗ ಸ್ವತಃ…

Read More

Sarvartha Siddhi Yoga: ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಮೋದಿ ವಿಶೇಷ ಪೂಜೆ; ಸರ್ವಾರ್ಥ ಸಿದ್ಧಿ ಯೋಗದ ಮಹತ್ವವೇನು ಗೊತ್ತಾ? – Kannada News | What is Sarvartha Siddhi Yoga and Why Its Auspicious to Perform on Trayodashi Tithi

ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಧಾನಿ ಮೋದಿImage Credit source: Twitter ಪ್ರಧಾನಿ ನರೇಂದ್ರ ಮೋದಿ  ಕಾಶಿಗೆ ಭೇಟಿ ನೀಡಿ ವಿಶ್ವನಾಥನ ಆಶೀರ್ವಾದ ಪಡೆದಿದ್ದಾರೆ. ಇಂದು (ಏಪ್ರಿಲ್ 29)  ರೂಪುಗೊಂಡ ಸರ್ವಾರ್ಥ ಸಿದ್ಧಿ ಯೋಗ ಮತ್ತು ತ್ರಯೋದಶಿ ತಿಥಿಯ ಅತ್ಯಂತ ಶುಭ ಸಂದರ್ಭದಲ್ಲಿ ಅವರು ವಿಶ್ವನಾಥನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದ್ದಾರೆ. ಈ ದಿನದ ಜ್ಯೋತಿಷ್ಯ ಶಾಸ್ತ್ರದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಸುಮಾರು 30 ನಿಮಿಷಗಳ ಕಾಲ ಶಾಸ್ತ್ರೋಕ್ತವಾಗಿ ಶೋಡಶೋಪಚಾರ ವಿಧಾನದ ಮೂಲಕ ಪ್ರಧಾನಿಯವರು ಪ್ರಾರ್ಥನೆ ಸಲ್ಲಿಸಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?…

Read More

ಚಿತ್ರದುರ್ಗ: ಮರಕ್ಕೆ ಬೊಲೆರೊ ವಾಹನ ಡಿಕ್ಕಿ; ಒಂದೇ ಗ್ರಾಮದ ನಾಲ್ವರು ಕಾರ್ಮಿಕರು ಸಾವು – Kannada News | Chitradurga Bolero Accident: 4 Workers Dead Near Andanur

ಚಿತ್ರದುರ್ಗ, ಜನವರಿ 06: ಮರಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಬಳಿ ನಡೆದಿದೆ. ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ಅಡಕೆ ಲೋಡ್​​ ಇಳಿಸಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಕಿರಣ್(25), ಅರುಣ್(32), ಹನುಮಂತ(32) ಮತ್ತು ಗಿರಿರಾಜ್(46) ಮೃತರು. ನಾಲ್ವರು ಕಾರ್ಮಿಕರಿಗೆ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತಷ್ಟು ಮಾಹಿತಿ ಅಪ್​​ಡೇಟ್ ಆಗಲಿದೆ. Source link

Read More