Headlines

ಊಟ ಮಾಡುವಾಗ ಬೆವರು ಬರುವುದಕ್ಕೆ ಕಾರಣವೇನು? ಇದು ಯಾವ ಕಾಯಿಲೆಯ ಲಕ್ಷಣ? – Kannada News | Eating & Sweating: Is It a Disease?

ಊಟ ಮಾಡುವಾಗ ಕೆಲವರಿಗೆ ಬೆವರು (Sweating) ಬರುವುದನ್ನು ನೀವು ಗಮನಿಸಿರಬಹುದು. ಕೆಲವರಿಗೆ ಇದು ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿದರೆ ಇನ್ನು ಕೆಲವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲಿಯೂ ಹಣೆಯ ಮೇಲೆ ಬೆವರುವ ಪ್ರಮಾಣ ಅಧಿಕವಾಗಿರುತ್ತದೆ. ಬಿಸಿ ಆಹಾರ ಸೇವನೆ ಮಾಡುವುದರಿಂದ ಈ ರೀತಿಯ ಸಮಸ್ಯೆಯಾಗುತ್ತದೆ. ಆದರೆ ಪ್ರತಿ ಬಾರಿ ಒಟ್ಟ ಮಾಡುವಾಗ ಅಥವಾ ತಣಿದ ಆಹಾರ ಸೇವನೆ ಮಾಡುವಾಗಲೂ ಈ ರೀತಿ ಆಗುತ್ತಿದ್ದರೆ ಅಥವಾ ಚಳಿಯ ವಾತಾವರಣದಲ್ಲಿಯೂ ಈ ರೀತಿ ಬೆವರುತ್ತಿದ್ದರೆ ಅದು ಸಾಮಾನ್ಯವಲ್ಲ. ಹಾಗಾದರೆ ಈ ರೀತಿ ಆಗುವುದಕ್ಕೆ…

Read More

ಮೂರು ತಿಂಗಳಲ್ಲಿ 250 ಕೋಟಿ ಕಳೆದುಕೊಂಡಿದ್ದಾರೆ ನಿರ್ಮಾಪಕರು: ಕೆ ಮಂಜು – Kannada News | K Manju said Producers lost 250 crore rs in three months

ಪ್ರತಿ ಶುಕ್ರವಾರ ಕನ್ನಡದ ಹಲವು ಸಿನಿಮಾಗಳು (Cinema) ಬಿಡುಗಡೆ ಆಗುತ್ತಲೇ ಇದೆ. ಆದರೆ ಗೆಲುವು ಕಾಣುತ್ತಿರುವುದು ಮಾತ್ರ ವರ್ಷಕ್ಕೆ ಬೆರಳೆಣಿಕೆಯಷ್ಟು ಸಿನಿಮಾಗಳು. ಸಿನಿಮಾ ಸೋತಾಗ ತೀವ್ರ ಬಾಧೆಗೆ ಗುರಿ ಆಗುವುದು ನಿರ್ಮಾಪಕರು. ಚಕ್ರವರ್ತಿ ಚಂದ್ರಚೂಡ್ ನೀಡಿರುವ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಿರ್ಮಾಪಕ ಕೆ ಮಂಜು, ಮಾಧ್ಯಮಗಳ ಜೊತೆಗೆ ಈ ಬಗ್ಗೆ ಮಾತನಾಡಿದ್ದು, ಕಳೆದ ನವೆಂಬರ್​​ನಿಂದ ಜನವರಿ ವರೆಗೆ ಕೇವಲ ಮೂರೇ ತಿಂಗಳಲ್ಲಿ ಕನ್ನಡ ಚಿತ್ರರಂಗದ ನಿರ್ಮಾಪಕರು 250 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ’ ಎಂದಿದ್ದಾರೆ. ನಿರ್ಮಾಪಕರ…

Read More

ಪ್ರಧಾನಿ ಮೋದಿ ಜೊತೆ ಟ್ರಂಪ್ ಮಾಡಿಕೊಂಡ ವ್ಯಾಪಾರ ಒಪ್ಪಂದದ 7 ಹೈಲೈಟ್ಸ್ ಇಲ್ಲಿವೆ – Kannada News | PM Modi and Donald Trump announce India US trade deal Key Highlights

ನವದೆಹಲಿ, ಫೆಬ್ರವರಿ 3: ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಭಾರತೀಯ ಸರಕುಗಳ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸಿದ ನಂತರ ನಿನ್ನೆ (ಸೋಮವಾರ) ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ. ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್‌ನಲ್ಲಿ ಘೋಷಿಸಿದ ಈ ವ್ಯಾಪಾರ ಒಪ್ಪಂದವು ಹಲವಾರು ಅಂಶಗಳನ್ನು ಒಳಗೊಂಡಿದೆ. ಆದರೆ, ಟ್ರಂಪ್ ಘೋಷಿಸಿದ ಈ ಅಂಶಗಳ ಬಗ್ಗೆ ಭಾರತ ಸರ್ಕಾರ ಇನ್ನೂ ಸರಿಯಾದ ಸ್ಪಷ್ಟನೆ ನೀಡಿಲ್ಲ. ಕೇವಲ ವ್ಯಾಪಾರ…

Read More

ಹೊಸೂರು ಗ್ರಾಮದಲ್ಲಿ ಅಚ್ಚರಿಯ ಘಟನೆ: ಕಹಿ ಬೇವಿನ ಮರದಲ್ಲಿ ಸಿಹಿ ದ್ರಾವಣ – Kannada News | Karnataka’s Sweet Neem Tree Mystery: Villagers Astonished by Miraculous Sap in Hanur

ಸಿಹಿ ಬೇವಿನ ಮರ ಹನೂರುImage Credit source: Tv9 kannada ಚಾಮರಾಜನಗರ, ಫೆ.3: ಬೇವಿನ ಮರ ಕಹಿಯಾಗಿರುವುದನ್ನು ಕೇಳಿರಬಹುದು, ಆದರೆ ಯಾವತ್ತಾದರೂ ಸಿಹಿಯಾಗಿರುವುದನ್ನು ಕೇಳಿದ್ದೀರಾ? ಆದರೆ ಈ ಗ್ರಾಮದಲ್ಲಿ ಒಂದು ಅಚ್ಚರಿಯೇ ನಡೆದಿದೆ. ಇದೀಗ ಈ ಘಟನೆಗೆ ಇಡೀ ಗ್ರಾಮವೇ ದಿಗ್ಭ್ರಮೆಗೊಂಡಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಬೇವಿನ ಮರವೊಂದು ಸಿಹಿ ದ್ರಾವಣವನ್ನು ಹರಿಸುವ ಮೂಲಕ ಭಾರಿ ಅಚ್ಚರಿ ಮೂಡಿಸಿದೆ. ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಮುನಿ ಸಿದ್ದ ಎಂಬುವವರ ಜಮೀನಿನಲ್ಲಿ…

Read More

Cricket Rules 2026: ಟೆಸ್ಟ್ ಹಾಗೂ ಮಹಿಳಾ ಕ್ರಿಕೆಟ್​ನಲ್ಲಿ ನೂತನ ನಿಯಮಗಳು ಜಾರಿಗೆ – Kannada News | MCC New Cricket Rules 2026: Major Changes for Test, Women’s and Junior Game

ಕ್ರಿಕೆಟ್ ನಿಯಮಗಳನ್ನು ರೂಪಿಸುವ ಸರ್ವೋಚ್ಚ ಸಂಸ್ಥೆಯಾದ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (MCC), 2026 ಕ್ಕೆ ಆಟದಲ್ಲಿ ಪಾರದರ್ಶಕತೆ ಮತ್ತು ಉತ್ಸಾಹವನ್ನು ಹೆಚ್ಚಿಸಲು ಟೆಸ್ಟ್ ಕ್ರಿಕೆಟ್ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ ಹೊಸ ಕಾನೂನುಗಳನ್ನು ಘೋಷಿಸಿದೆ. ಈ ಪ್ರಕಾರ ಟೆಸ್ಟ್ ಕ್ರಿಕೆಟ್​ನಲ್ಲಿ (Test cricket) ಎಂಸಿಸಿ ತಂದಿರುವ ನೂತನ ನಿಯಮ ಬ್ಯಾಟಿಂಗ್ ತಂಡಕ್ಕೆ ಆಘಾತ ನೀಡಿದ್ದರೆ, ಬೌಲಿಂಗ್ ತಂಡಕ್ಕೆ ಮತ್ತೊಂದು ವಿಕೆಟ್ ಪಡೆಯುವ ಅವಕಾಶ ಕಲ್ಪಿಸಿಕೊಟ್ಟಿದೆ. ಇನ್ನು ಮಹಿಳಾ ಕ್ರಿಕೆಟ್ ಹಾಗೂ ಜೂನಿಯರ್ ಕ್ರಿಕೆಟ್‌ನಲ್ಲಿ (13…

Read More

ಹೃದಯ ಸಮುದ್ರ ಕಲಕಿದ್ದ ಸಂಗೀತ ಮಾಂತ್ರಿಕ ಎಸ್​​ಪಿ ವೆಂಕಟೇಶ್ ಇನ್ನಿಲ್ಲ – Kannada News | Famous music director SP Venkatesh passed away in Chennai

‘ಅಶ್ವಮೇಧ’ ಸಿನಿಮಾದ (Cinema) ‘ಹೃದಯ ಸಮುದ್ರ ಕಲಕಿ’ ಸೇರಿದಂತೆ ಹಲವು ಅತ್ಯುತ್ತಮ ಹಾಡುಗಳನ್ನು ಕನ್ನಡಕ್ಕೆ ನೀಡಿದ್ದ ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಎಸ್​​ಪಿ ವೆಂಕಟೇಶ್ ಅವರು ಇಂದು (ಫೆಬ್ರವರಿ 03) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವೆಂಕಟೇಶ್ ಅವರು ಚೆನ್ನೈನ ತಮ್ಮ ಸ್ವಗೃಹದಲ್ಲಿ ಕೊನೆ ಉಸಿರೆಳೆದಿದ್ದಾರೆ ಅವರಿಗೆ 71 ವರ್ಷ ವಯಸ್ಸಾಗಿತ್ತು. ವೆಂಕಟೇಶ್ ನಿಧನಕ್ಕೆ ತಮಿಳು, ಮಲಯಾಳಂನ ಹಲವಾರು ಸಿನಿಮಾ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಗಿಟಾರಿಸ್ಟ್ ಆಗಿ ಚಿತ್ರರಂಗದಲ್ಲಿ ವೃತ್ತಿ ಆರಂಭಿಸಿದ ಎಸ್​​​ಪಿ ವೆಂಕಟೇಶ್ ಅವರು ನೂರಾರು…

Read More

ಆರ್​​ಟಿಓ ಅಧಿಕಾರಿಗಳ ಮತ್ತೊಂದು ಕಳ್ಳಾಟ ಬಯಲು, – Kannada News | Karnataka RTO Officers Exposed Again, Without Inspection Officer Issues CC To Buses With Tampered Chassis

ಬೆಂಗಳೂರು, (ಫೆಬ್ರವರಿ 03): ಕರ್ನಾಟಕ ಸಾರಿಗೆ ಇಲಾಖೆಯ ಅಧಿಕಾರಿಗಳ ಮತ್ತೊಂದು ಕಳ್ಳಾಟ ಬಯಲಾಗಿದೆ. ಸಾಕಷ್ಟು ಬ್ರೋಕರ್ ಗಳು ಬೇರೆ ಬೇರೆ ರಾಜ್ಯಗಳಲ್ಲಿ ನಕಲಿ ದಾಖಲೆಗಳನ್ನು ನೀಡಿ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಮತ್ತೆ ಎಲೆಕ್ಟ್ರಾನಿಕ್ ಸಿಟಿ ಮತ್ತು ಚಂದಾಪುರ ಆರ್ಟಿಓದಲ್ಲಿ ಕ್ಲಿಯರೆನ್ಸ್ ಮಾಡಿಸಿಕೊಂಡು ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಆದ್ರೆ, ಅಧಿಕಾರಿಗಳು ಮಾತ್ರ ‌ಬಸ್ಸುಗಳನ್ನು ತಪಾಸಣೆ ಮಾಡದೆಯೇ  ಬಸ್ಸುಗಳಿಗೆ ಸಿಸಿ ನೀಡುತ್ತಿರುವುದು ಬಯಲಾಗಿದೆ. ಈ ಬಗ್ಗೆ ದೂರುದಾರ ಪ್ರವೀಣ್ ಎಂಬುವರು ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿ…

Read More

‘ಜನ ನಾಯಗನ್’ ಸಿನಿಮಾದ 20 ನಿಮಿಷ ದೃಶ್ಯಕ್ಕೆ ಕತ್ತರಿ? ವಿಜಯ್​​​ಗೆ ನಿರಾಸೆ – Kannada News | Producer agrees to cut 20 minutes scene from Jana Nayagan movie

ದಳಪತಿ ವಿಜಯ್ (Thalapathy Vijay) ನಟನೆಯ ಕೊನೆಯ ಸಿನಿಮಾ ಎನ್ನಲಾಗಿರುವ ‘ಜನ ನಾಯಗನ್’ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ರೀಮೇಕ್ ಸಿನಿಮಾ ಆಗಿದ್ದರೂ ಸಹ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರವನ್ನು ಸಿಬಿಎಫ್​​ಸಿ ನಿರಾಕರಿಸಿದ್ದು, ಚಿತ್ರತಂಡ ನ್ಯಾಯಾಲಯದ ಮೆಟ್ಟಿಲೇರಿದೆ. ಆದರೆ ನ್ಯಾಯಾಲಯದಲ್ಲಿ ಸಹ ಚಿತ್ರತಂಡಕ್ಕೆ ನ್ಯಾಯ ವಿಳಂಬ ಆಗುತ್ತಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ಸಹ ಸನಿಹದಲ್ಲೇ ಇದ್ದು, ಒಂದೊಮ್ಮೆ ಚುನಾವಣೆ ಘೋಷಣೆ ಆಗಿಬಿಟ್ಟರೆ ಸಿನಿಮಾ ಬಿಡುಗಡೆ ಎರಡು ತಿಂಗಳು ಮುಂದೂಡಲೇ ಬೇಕಾಗುತ್ತದೆ. ಇದೇ ಕಾರಣಕ್ಕೆ ಇದೀಗ ಚಿತ್ರತಂಡವು, ಆಗಿದ್ದು ಆಗಲೆಂದು…

Read More

ಪೊಲೀಸರ ಸಮಯಪ್ರಜ್ಞೆಯಿಂದ ಬೆಂಗಳೂರಿನಲ್ಲಿ ತಪ್ಪಿದ ಭಾರೀ ದೊಡ್ಡ ದುರಂತ – Kannada News | Akshayanagar Explosives: Bengaluru Police Action Foils Illegal Blasting Operation

ಹುಳಿಮಾವು ಪ್ರದೇಶದಲ್ಲಿ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟ ಬೆಂಗಳೂರು, ಫೆ.3: ಬೆಂಗಳೂರಿನಲ್ಲಿ ಅನುಮಾನಸ್ಪದ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ. ಈ ಬಗ್ಗೆ ನಗರದಲ್ಲಿ ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಷಯನಗರದಲ್ಲಿ ಈ ಘಟನೆ ನಡೆದಿದೆ. ಚಂದ್ರು ಎಂಬುವವರ ಮಾಲೀಕತ್ವದ 100×100 ಅಳತೆಯ ಸೈಟ್‌ನಲ್ಲಿ ಬಂಡೆ ಒಡೆಯಲು ಅನುಮತಿ ಇಲ್ಲದೆ ಜಿಲೆಟಿನ್ ಕಡ್ಡಿಗಳನ್ನು (Bengaluru explosives seizure) ಬಳಸಲಾಗುತ್ತಿತ್ತು. ಮಧ್ಯಾಹ್ನ 10:30 ರಿಂದ 2 ಗಂಟೆಯ ಅವಧಿಯಲ್ಲಿ ಜನನಿಬಿಡ ಪ್ರದೇಶದಲ್ಲೇ ಈ ಸ್ಫೋಟ ನಡೆಸಲಾಗುತ್ತಿತ್ತು….

Read More

T20 World Cup 2026: ಶ್ರೀಲಂಕಾ ವಿರುದ್ಧ ಗೆದ್ದ ಓಮನ್ – Kannada News | Oman Delivers Shock Upset in 2026 T20 World Cup Warm up vs Sri Lanka A

2026 ರ ಟಿ20 ವಿಶ್ವಕಪ್ (T20 World Cup 2026) ಆರಂಭಕ್ಕೆ ನಾಲ್ಕೈದು ದಿನ ಬಾಕಿ ಇದೆ. ಇದೇ ಫೆಬ್ರವರಿ 7 ರಿಂದ ಈ ಮಿನಿ ವಿಶ್ವಸಮರಕ್ಕೆ ಚಾಲನೆ ಸಿಗಲಿದೆ. ಆದರೆ ಅದಕ್ಕೂ ಮುನ್ನ ಎಲ್ಲಾ ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡುತ್ತಿವೆ. ಅದರಂತೆ ಇಂದು ನಡೆದ ಶ್ರೀಲಂಕಾ (Oman vs Sri Lanka) ಹಾಗೂ ಓಮನ್ ನಡುವಿನ ಅಭ್ಯಾಸ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಕ್ರಿಕೆಟ್ ಲೋಕದ ಶಿಶು ಎನಿಸಿಕೊಂಡಿರುವ ಓಮನ್, ಅನುಭವಿ ಶ್ರೀಲಂಕಾ ತಂಡವನ್ನು ಮಣಿಸಿ…

Read More