Headlines

ರಾಜ್ಯದ CSR ನಿಧಿಯ ಪ್ರತಿ ಪೈಸೆಯೂ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗ: ಡಿಕೆ ಶಿವಕುಮಾರ್ – Kannada News | CSR fund Use primary education Says CM DK Shivakumar And He calls Adoption Governmnet Schools

ಬೆಂಗಳೂರು, (ಜು.23): “ರಾಜ್ಯದಲ್ಲಿ ಸುಮಾರು 10 ಸಾವಿರ ಕೋಟಿಯಷ್ಟು ಸಿಎಸ್ಆರ್ ನಿಧಿ ಇದ್ದು, ಇದರ ಪ್ರತಿಯೊಂದು ಪೈಸೆ ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ(Education) ವಿನಿಯೋಗವಾಗಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಅವರು ಕರೆ ನೀಡಿದ್ದಾರೆ. ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆಸಿಸಿಐ)ಯ ಎಂ.ವಿ ಸಭಾಂಗಣದಲ್ಲಿ ಎಫ್ ಕೆಸಿಸಿಐ ಜಾಗತಿಕ ಸಿಎಸ್ಆರ್ ಮತ್ತು ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನು ಶಿವಕುಮಾರ್ ಅವರು ಗುರುವಾರ ಉದ್ಘಾಟಿಸಿ ಮಾತನಾಡಿದ ಸಿಎಂ, “ನಾವು…

Read More

WTC Final 2026-27: 4ನೇ ಆವೃತ್ತಿಯ ಡಬ್ಲ್ಯೂಟಿಸಿ ಫೈನಲ್ ವೇಳಾಪಟ್ಟಿ ಪ್ರಕಟ – Kannada News | WTC Final 2027 Schedule Announced: Oval to Host Key Clash and Ashes Dates Revealed

2025-27 ರ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ (WTC Final 2027) ಪಂದ್ಯದ ವೇಳಾಪಟ್ಟಿಯನ್ನು ಐಸಿಸಿ (ICC) ಇಂದು ಪ್ರಕಟಿಸಿದೆ. ಅದರಂತೆ ಈ ಆವೃತ್ತಿಯ ಫೈನಲ್ ಪಂದ್ಯ 2027 ರ ಜೂನ್ 9 ರಂದು ಆರಂಭವಾಗಲಿದ್ದು, ಜೂನ್ 13 ರವರೆಗೆ ನಡೆಯಲಿದೆ. ಐಸಿಸಿ ಈಗಾಗಲೇ 2027, 2029 ಮತ್ತು 2031 ರ ಡಬ್ಲ್ಯೂಟಿಸಿ ಫೈನಲ್‌ಗಳ ಆತಿಥ್ಯದ ಹಕ್ಕುಗಳನ್ನು ಇಂಗ್ಲೆಂಡ್‌ಗೆ ನೀಡಿದೆ. 2027ರ ಆವೃತ್ತಿಯ ಫೈನಲ್ ಪಂದ್ಯಕ್ಕೆ ಲಂಡನ್‌ನ ಐಕಾನಿಕ್ ದಿ ಓವಲ್ ಮೈದಾನ ಆತಿಥ್ಯವಹಿಸುತ್ತಿದೆ….

Read More

IND vs ZIM: ಸತತ 8ನೇ ಪಂದ್ಯದಲ್ಲಿ ಟಾಸ್ ಗೆದ್ದ ಅಯ್ಯರ್; ತಂಡದ ಪರ ಯುವ ವೇಗಿ ಪಾದಾರ್ಪಣೆ – Kannada News | Shreyas Iyer’s Team India Seeks First Win in Zimbabwe T20 Series Opener

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸತತ ಎರಡು ಟಿ20 ಸರಣಿಗಳನ್ನು ಸೋತ ಟೀಂ ಇಂಡಯಾ ಇದೀಗ ಮತ್ತೊಮ್ಮೆ ಮೈದಾನಕ್ಕಿಳಿದಿದೆ. ಈ ಬಾರಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಜಿಂಬಾಬ್ವೆ (India vs Zimbabwe ) ತಂಡವನ್ನು ಎದುರಿಸುತ್ತಿರುವ ಶ್ರೇಯಸ್ ಅಯ್ಯರ್ ಪಡೆ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಶ್ರೇಯಸ್ ಅಯ್ಯರ್ (Shreyas Iyer) ತಂಡದ ನಾಯಕನಾದ ಬಳಿಕ ಇದುವರೆಗೆ 7 ಪಂದ್ಯಗಳನ್ನು ಆಡಲಾಗಿದೆ. ಆದರೆ ಈ 7 ಪಂದ್ಯಗಳಲ್ಲಿ ಒಂದರಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಇದೀಗ ಕಳೆದ ಸರಣಿಗಳಲ್ಲಿ…

Read More

‘ಜನ ನಾಯಗನ್’ ಸಿನಿಮಾನಲ್ಲಿ ಮ್ಯೂಟ್ ಆಗಿವೆ ಹಲವು ಸಂಭಾಷಣೆ – Kannada News | Jana Nayagan movie any scenes have been muted and edited out

ವಿಜಯ್ (Vijay) ನಟಿಸಿರುವ ‘ಜನ ನಾಯಗನ್’ ಸಿನಿಮಾ ಇಂದು (ಜುಲೈ 23) ಬಿಡುಗಡೆ ಆಗಿದೆ. ಜನವರಿಯಲ್ಲೇ ಬಿಡುಗಡೆ ಆಗಬೇಕಿದ್ದ ಸಿನಿಮಾ ಈಗ ಏಳು ತಿಂಗಳ ಬಿಡುಗಡೆ ಆಗಿದೆ. ಸಿಬಿಎಫ್​​ಸಿಯಲ್ಲಿ ಸುಮಾರು ಏಳು ತಿಂಗಳುಗಳ ಕಾಲ ಈ ಸಿನಿಮಾ ಸಿಕ್ಕಿಕೊಂಡಿತ್ತು. ಸಿಬಿಎಫ್​​ಸಿಯು ಈ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿತ್ತು. ಕೌಟುಂಬಿಕ ಸಿನಿಮಾ ಪ್ರೇಮಿಗಳ ಮೆಚ್ಚಿನ ನಾಯಕ ಆಗಿರುವ ವಿಜಯ್ ಅವರ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಿದ್ದು ಹಲವರಿಗೆ ಅಚ್ಚರಿ ತಂದಿತ್ತು. ಅಲ್ಲದೆ, ಸಿಬಿಎಫ್​​ಸಿ ಪ್ರಮಾಣ ಪತ್ರ…

Read More

ಕಾವೇರಿ ನದಿ ನೀರು ವಿವಾದ: ತಮಿಳುನಾಡಿನ ಜೊತೆ ಸಂಧಾನಕ್ಕೆ ಮುಂದಾದ ಕರ್ನಾಟಕ; ಆ. 3ರಂದು ಮಾತುಕತೆಗೆ ಬರುವಂತೆ ವಿಜಯ್​​ಗೆ ಆಹ್ವಾನ – Kannada News | Cauvery Dispute: Karnataka Initiates Talks, Invites Tamil Nadu CM Vijay for High Level Meeting on August 3

ಕಾವೇರಿ ನದಿ ನೀರು ವಿವಾದ: ತಮಿಳುನಾಡಿನ ಜೊತೆ ಸಂಧಾನಕ್ಕೆ ಮುಂದಾದ ಕರ್ನಾಟಕImage Credit source: PTI ಬೆಂಗಳೂರು, ಜುಲೈ 23: ಕಾವೇರಿ ನೀರು ಹಂಚಿಕೆ ಸಮಸ್ಯೆ ಮತ್ತು ಮೇಕೆದಾಟು ಯೋಜನೆ ವಿಚಾರ ಸಂಬಂಧ ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಿರುವ ನೆರೆ ರಾಜ್ಯ ತಮಿಳುನಾಡಿನೊಂದಿಗೆ ಸಂಧಾನಕ್ಕೆ ಕರ್ನಾಟಕ ಮುಂದಾಗಿದೆ. ಈ ವಿಚಾರವಾಗಿ ಆಗಸ್ಟ್ 3ರಂದು ಮಾತುಕತೆಗೆ ಬರುವಂತೆ ತಮಿಳುನಾಡು ಸಿಎಂ ವಿಜಯ್​ಗೆ ಕರ್ನಾಟಕ ಆಹ್ವಾನ ನೀಡಿದೆ. ಕರ್ನಾಟಕ ಮತ್ತು ತಮಿಳುನಾಡು ನಡುವೆ ಪತ್ರ ವ್ಯವಹಾರ ನಡೆದಿದ್ದರೂ ಮಾತುಕತೆಗೆ ಬರುವ…

Read More

ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ.. – Kannada News | Thalapathy Vijay fans reaction after watching Jana Nayagan movie in Bengaluru

ದಳಪತಿ ವಿಜಯ್ ನಟನೆಯ ಕೊನೇ ಸಿನಿಮಾ ‘ಜನ ನಾಯಗನ್’ (Jana Nayagan) ಇಂದು (ಜುಲೈ 23) ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಇರುವ ಅಭಿಮಾನಿಗಳು ಸಿನಿಮಾವನ್ನು ನೋಡಲು ಚಿತ್ರಮಂದಿರಕ್ಕೆ ಬಂದಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ‘ಅಂಜನ್’ ಚಿತ್ರಮಂದಿರದಲ್ಲಿ ಸಂಭ್ರಮ ಜೋರಾಗಿದೆ. ವಿಜಯ್ ಅವರ ಕಟೌಟ್​​ಗಳು ರಾರಾಜಿಸುತ್ತಿವೆ. ‘ಸಿನಿಮಾದಲ್ಲಿ ಒಳ್ಳೆಯ ಮೆಸೇಜ್ ಇದೆ. ಬೆಳಗ್ಗೆ 6 ಗಂಟೆಯ ಶೋ ನೋಡಿದ್ದೇನೆ. ಈಗ ಎರಡನೇ ಬಾರಿ ಸಿನಿಮಾ ನೋಡುತ್ತಿದ್ದೇವೆ. ಎಲ್ಲರೂ ಬಂದು ಸಿನಿಮಾ ನೋಡಿ. ಯಾರೂ ಮಿಸ್ ಮಾಡಿಕೊಳ್ಳಬೇಡಿ’ ಎಂದು ಚಿತ್ರಮಂದಿರದ ಮುಂದೆ…

Read More

ನೀವು ಐಟಿ ರಿಟರ್ನ್ಸ್ ಸಲ್ಲಿಸಿ 6 ವರ್ಷಗಳವರೆಗೆ ಈ ದಾಖಲೆಗಳು ಜೊತೆಯಲ್ಲಿರಲಿ: ತೆರಿಗೆ ತಜ್ಞರ ಸಲಹೆ – Kannada News | Income Tax Return, experts suggests to keep these ITR documents for 6 years after filing

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ (IT Returns) ಒಂದಷ್ಟು ತಪ್ಪು ತಿಳಿವಳಿಕೆ ಬಹಳ ಜನರಲ್ಲಿ ಇದೆ. ಐಟಿಆರ್ ಸಲ್ಲಿಕೆ ಯಶಸ್ವಿಯಾಗಿಬಿಟ್ಟರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸುವುದು ತಪ್ಪು. ತಜ್ಞರ ಪ್ರಕಾರ, ಐಟಿಆರ್ ಸಲ್ಲಿಸಿದ ನಂತರವೂ ಪರಿಶೀಲನೆಗಳು ನಡೆಯುತ್ತಿರುತ್ತವೆ. ನಿಮ್ಮ ಹಿಂದಿನ ವರ್ಷಗಳಲ್ಲಿ ಗಮನಾರ್ಹವಾದ ಯಾವುದಾದರೂ ವ್ಯತ್ಯಾಸಗಳು ಕಂಡುಬಂದಲ್ಲಿ ಇಲಾಖೆಯು ನಿಮ್ಮ ಐಟಿಆರ್​ಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ಹೀಗಾಗಿ, ಐಟಿಆರ್ ಸಲ್ಲಿಕೆಯಾಗಿ 6 ವರ್ಷಗಳವರೆಗೆ ಕೆಲ ದಾಖಲೆಗಳನ್ನು ಇಟ್ಟುಕೊಂಡಿರಬೇಕು ಎಂದು ತಜ್ಞರು ಹೇಳುತ್ತಾರೆ. ಐಟಿಆರ್ ಪ್ರತಿ: ನೀವು ಅಸೆಸ್ಮೆಂಟ್…

Read More

ಉಸಿರಾಟ ಸಂಬಂಧಿ ಕಾಯಿಲೆಗಳು: ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ; ಮಾರ್ಗಸೂಚಿ ಪ್ರಕಟ – Kannada News | Feeding Pigeons in Public Places Prohibited: Health Department Issues Public Safety Guidelines

ಬೆಂಗಳೂರು, ಜುಲೈ 23: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪಾರಿವಾಳಗಳಿಗೆ ಆಹಾರ (pigeon feeding) ಹಾಕುವುದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ನಿಯಂತ್ರಣವಿಲ್ಲದೆ ಆಹಾರ ಹಾಕುವುದರಿಂದ ಪಾರಿವಾಳಗಳ ಸಂಖ್ಯೆ ಹೆಚ್ಚಳವಾಗಿ ಅವುಗಳ ಮಲ ಮತ್ತು ಗರಿಗಳಿಂದ ಉಸಿರಾಟ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಆರೋಗ್ಯಕ್ಕೆ ಅಪಾಯ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಮಕ್ಕಳು, ವೃದ್ಧರ ಆರೋಗ್ಯದ…

Read More

‘ಯಾವುದೇ ಸ್ಥಳದಲ್ಲಿ ಯಾವ ಸಮಯದಲ್ಲಾದರೂ ಚರ್ಚೆಗೆ ಸಿದ್ಧ’; 4ನೇ ಬಾರಿಗೆ ಸಿಜೆಪಿಗೆ ಆಹ್ವಾನ ನೀಡಿದ ಕೇಂದ್ರ ಸರ್ಕಾರ – Kannada News | ‘Your Convenience, Any Place, Any Time’; Modi Government invites CJP Protesters For Talks For Fourth Time

ನವದೆಹಲಿ, ಜುಲೈ 23: ಕಾಕ್ರೋಚ್ ಜನತಾ ಪಾರ್ಟಿಯ (CJP) ಪ್ರತಿನಿಧಿಗಳನ್ನು ಚರ್ಚೆಗೆ ಬರುವಂತೆ ಕೇಂದ್ರ ಸರ್ಕಾರ 4ನೇ ಬಾರಿಗೆ ಆಹ್ವಾನಿಸುತ್ತಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ (Jitendra Singh) ಇಂದು ತಿಳಿಸಿದ್ದಾರೆ. ಚರ್ಚೆಗಾಗಿ ಸರ್ಕಾರ ಈಗಾಗಲೇ 4 ಅಧಿಕೃತ ಪ್ರಸ್ತಾವನೆಗಳನ್ನು ಕಳುಹಿಸಿಕೊಟ್ಟಿದ್ದು, ಯಾವುದೇ ಸಮಯದಲ್ಲಿಯಾದರೂ ಮಾತುಕತೆ ನಡೆಸಲು ಮುಕ್ತವಾಗಿದೆ ಎಂದು ಅವರು ಹೇಳಿದ್ದಾರೆ. ಈ ಪರಿಷ್ಕೃತ ಪ್ರಸ್ತಾವನೆಯ ಕುರಿತು ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ನಿನ್ನೆ ಮಧ್ಯಾಹ್ನದಿಂದಲೇ ಸಿಜೆಪಿ ಪ್ರತಿನಿಧಿಗಳಿಗೆ ಆಹ್ವಾನ ಕಳುಹಿಸಲಾಗಿದೆ….

Read More

ಜಮ್ಮು ಕಾಶ್ಮೀರದಲ್ಲಿ ಪ್ರವಾಹ, ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು – Kannada News | Raging Floods in Budgam: Over 12 Shops Swept Away in Jammu and Kashmir Deluge

ಶ್ರೀನಗರ, ಜುಲೈ 23: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯ ರುದ್ರತಾಂಡವ ಮುಂದುವರೆದಿದೆ. ಪ್ರವಾಹ ಸೃಷ್ಟಿಸಿರುವ ಈ ಮಳೆಯ ಅಬ್ಬರಕ್ಕೆ ಬುಡ್ಗಾಮ್ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದೆ. ಬುಡ್ಗಾಮ್​ನಲ್ಲಿ 12ಕ್ಕೂ ಹೆಚ್ಚು ಅಂಗಡಿಗಳು ರಭಸವಾಗಿ ಹರಿಯುವ ನೀರಿನಲ್ಲಿ ಕೊಚ್ಚಿಹೋಗಿವೆ. ನದಿಗಳಂತೆ ಭೋರ್ಗರೆಯುವ ನೀರಿನ ಪ್ರವಾಹಕ್ಕೆ ಸಿಲುಕಿ, ಅಂಗಡಿಗಳು ಸಂಪೂರ್ಣವಾಗಿ ಕುಸಿದು ನದಿಪಾಲಾಗಿವೆ. ಮಾಲೀಕರು ನೋಡ ನೋಡುತ್ತಿದ್ದಂತೆಯೇ ತಮ್ಮ ವ್ಯಾಪಾರದ ತಾಣಗಳು ಪ್ರವಾಹಕ್ಕೆ ಸಿಲುಕಿ ನಾಶವಾಗುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಅಂಗಡಿಗಳು ಕೊಚ್ಚಿ ಹೋಗುತ್ತಿರುವ ಹೃದಯವಿದ್ರಾವಕ ಮತ್ತು ಭೀಕರ ದೃಶ್ಯಗಳು…

Read More